ಕಾರ್ ಇನ್ಶೂರೆನ್ಸ್ ನಲ್ಲಿ ಎನ್ ಸಿ ಬಿ
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಭಾರತದಲ್ಲಿ, ನಾಲ್ಕು-ಚಕ್ರ ವಾಹನಗಳ ಸಂಖ್ಯೆ ಬಿರುಸಿನ ದರದಲ್ಲಿ ಹೆಚ್ಚುತ್ತಿದೆ. ಆದರೆ ಭಾರತದಲ್ಲಿ ಕಾರ್ ಖರೀದಿಸುವ ಮುಂಚೆ, ಮೋಟರ್ ವೆಹಿಕಲ್ ಇನ್ಶೂರೆನ್ಸ್ ಭಾರತದಲ್ಲಿ ಕಡ್ಡಾಯವಾಗಿದೆ ಹಾಗೂ ಗಾಡಿ ಖರೀದಿಸುವ ಸಮಯದಲ್ಲಿ ನೀವು ಅದನ್ನು ಪಡೆಯಬೇಕು. ಆದರೆ ಸಿಹಿ ಸುದ್ದಿಯೇನೆಂದರೆ, ಹೆಚ್ಚಿನ ಇನ್ಶೂರೆನ್ಸ್ ಪ್ರೊವೈಡರ್ಸ್ ಪಾಲಿಸಿ ಹೋಲ್ಡರ್ಸ್ ಗೆ ಎನ್ ಸಿ ಬಿ ಲಾಭಗಳನ್ನು ನೀಡುತ್ತಾರೆ.
ಈಗ, ಆರಂಭಿಸಲು ಹೋದರೆ ಎನ್ ಸಿ ಬಿ ಎಂದರೆ ಏನು ಎಂದೇ ಹೆಚ್ಚಿನ ಭಾರತೀಯರಿಗೆ ತಿಳಿದಿಲ್ಲ! ಅದಕ್ಕಾಗಿ, ನಾವು ಕೆಲವು ಹೆಚ್ಚಾಗಿ ಕೇಳಲ್ಪಡುವ ಒಂದು ಪ್ರಶ್ನೆಯನ್ನು ಉತ್ತರಿಸಲು ನಾವಿದ್ದೇವೆ,
ಎನ್ ಸಿ ಬಿ ಎಂದರೆ ವಾಸ್ತವವಾಗಿ ‘ನೋ ಕ್ಲೈಮ್ ಬೋನಸ್’ ಎಂದು. ಇದು, ಗ್ರಾಹಕರು ಒಂದು ಪಾಲಿಸಿ ವರ್ಷದಲ್ಲಿ ಯಾವುದೇ ಕ್ಲೈಮ್ ಫೈಲ್ ಮಾಡದೇ ಇದ್ದಾಗ ಕಾರ್ ಇನ್ಶುರೆನ್ಸ್ ಪ್ರೊವೈಡರ್ಸ್ ಅವರಿಗೆ ನೀಡುವ ಒಂದು ರೀತಿಯ ಪುರಸ್ಕಾರವಾಗಿದೆ. ಈ ಪುರಸ್ಕಾರದಲ್ಲಿ, ಒಬ್ಬ ಇನ್ಶೂರ್ಡ್ ವ್ಯಕ್ತಿಗೆ ಅವರು ಮುಂದಿನ ಪಾಲಿಸಿ ವರ್ಷದಲ್ಲಿ ಇನ್ಶೂರೆನ್ಸ್ ಅನ್ನು ರಿನ್ಯೂ ಮಾಡಿದಾಗ ಅವರಿಗೆ ಅವರ ಪ್ರೀಮಿಯಮ್ ಮೇಲೆ ರಿಯಾಯಿತಿ ದೊರೆಯುತ್ತದೆ.
ನಿಮ್ಮ ಸುತ್ತಲೂ ಎಲ್ಲಾ ವಸ್ತುಗಳ ದರ ಹೆಚ್ಚುತ್ತಿರುವ ಸಮಯದಲ್ಲಿ, ನಿಮ್ಮ ಕಾರ್ ಇನ್ಶೂರೆನ್ಸ್ ನಿಮಗೆ ನಿಮ್ಮ ಇನ್ಶೂರೆನ್ಸ್ ಪ್ರೀಮಿಯಮ್ ಅನ್ನು ಕಡಿತಗೊಳಿಸುವ ಒಂದು ಆಯ್ಕೆಯನ್ನು ನೀಡಿ ನಿಮಗೆ ನಿಜವಾಗಿ ವಿಶೇಷ ಲಾಭ ತರುತ್ತದೆ. ಇದು ಹೇಗಾಗುತ್ತದೆ, ಎಂದು ಕೇಳಿದ್ದೀರಾ?
ಸರಿ, ಇದು ಬಹುತೇಕ ಒಂದು ಪುರಸ್ಕಾರ ಕಾರ್ಯಕ್ರಮದಂತೆ ಕಾರ್ಯನಿರ್ವಹಿಸುತ್ತದೆ. ನೀವು ನಿಮ್ಮ ಮೊದಲನೇ ಪಾಲಿಸಿ ವರ್ಷದಲ್ಲಿ ಯಾವುದೇ ಕ್ಲೈಮ್ಸ್ ಫೈಲ್ ಮಾಡದೇ ಇದ್ದಲ್ಲಿ ನಿಮಗೆ ಪ್ರಾರಂಭದಲ್ಲಿ 20% ಎನ್ ಸಿ ಬಿ ರಿಯಾಯಿತಿ ದೊರೆಯುತ್ತದೆ. ಫಲವಾಗಿ, ನೀವು ಎರಡನೇ ವರ್ಷದಿಂದ ಯಾವುದೇ ಕ್ಲೈಮ್ ಅನ್ನು ಫೈಲ್ ಮಾಡದಿದ್ದರೆ ಹೆಚ್ಚುವರಿ 5% ಗಳಿಸುತ್ತಿರುತ್ತೀರಿ. ಈ ರಿಯಾಯಿತಿ ನಿಮ್ಮ ನಿರಂತರ ಆರನೇ ವರ್ಷದಲ್ಲಿ 50% ವರಗೂ ಹೋಗಬಹುದು, ಚೊಕ್ಕದಾಗಿ ಹೇಳುವುದಾದರೆ, ನೀವು ಎಷ್ಟು ಒಳ್ಳೆ ಡ್ರೈವರ್ ಆಗಿರುತ್ತೀರೋ, ಕಾರನ್ನು ಎಷ್ಟು ಸಂರಕ್ಷಿಸುತ್ತೀರೋ - ಭವಿಷ್ಯದಲ್ಲಿ ನಿಮಗೆ ಅಷ್ಟೇ ಉತ್ತಮವಾಗಿರುತ್ತದೆ.
ಇಲ್ಲ! ಒಂದು ವೇಳೆ ನೀವು ಒಂದು ಸಣ್ಣ ಅಪಘಾತಕ್ಕೆ ಈಡಾಗಿದ್ದರೆ ಅಥವಾ ನಿಮ್ಮ ಕಾರ್ ಇನ್ಶೂರೆನ್ಸ್ ಅನ್ನು ಒಂದು ಚಿಕ್ಕ ಟೈರ್ ಬರ್ಸ್ಟ್ ಗೆ ಬಳಸಲು ಯೋಚಿಸಿದ್ದರೆ, ಕ್ಲೈಮ್ಸ್ ಅನ್ನು ಬಿಟ್ಟು ತಾವೇ ದುರಸ್ತಿಗೆ ಪಾವತಿ ಮಾಡಬಹುದು (ಅದು ಸೂಕ್ತ ಎಂದು ಎನಿಸಿದರೆ!) ಒಂದು ವರ್ಷವಿಡೀ ನೀವು ಕ್ಲೈಮ್ಸ್ ಕಡೆ ಹೋಗದೆ ನಿಮ್ಮ ಕಾರ್ ಇನ್ಶೂರೆನ್ಸ್ ರಿನೀವಲ್ ಸಮಯದಲ್ಲಿ ನೋ ಕ್ಲೈಮ್ ಬೋನಸ್ ಗಳಿಸಬಹುದು.
ಇನ್ಶೂರೆನ್ಸ್ ಪದಗಳಲ್ಲಿ ಎನ್ ಸಿ ಬಿ ಪಾಲಿಸಿ ಏನು ಎಂದು ತಿಳಿದ ಮೇಲೆ, ಮುಂದಿನ ದೊಡ್ಡ ಪ್ರಶ್ನೆ ಇದಾಗುತ್ತದೆ - ಕಾರ್ ಇನ್ಶೂರೆನ್ಸ್ ನಲ್ಲಿ ನೋ ಕ್ಲೈಮ್ ಬೋನಸ್ ಎಷ್ಟು?
ನಿಮ್ಮ ಕಾರಿನ ನೋ ಕ್ಲೈಮ್ ಬೋನಸ್ ಅನ್ನು ಕ್ಯಾಲ್ಕುಲೇಟ್ ಮಾಡುವುದು ಅಷ್ಟೇನೂ ಕಷ್ಟದ ಕೆಲಸವಲ್ಲ. ವಾಸ್ತವವಾಗಿ, ಹೆಚ್ಚಿನ ಇನ್ಶೂರೆನ್ಸ್ ಕಂಪನಿಗಳು ನಿಮಗೆ ನಿಮ್ಮ ನೋ ಕ್ಲೈಮ್ ಬೋನಸ್ ಅನ್ನು ಸೂಕ್ತವಾಗಿ ಕ್ಯಾಲ್ಕುಲೇಟ್ ಮಾಡಲು ತಮ್ಮ ವೆಬ್ ಸೈಟಿನ ನೋ ಕ್ಲೈಮ್ ಬೋನಸ್ ಕ್ಯಾಲ್ಕುಲೇಟರ್ ಗೆ ಪ್ರವೇಶವನ್ನು ನೀಡುತ್ತವೆ. ಇದು ನಿಮ್ಮ ಪಾಲಿಸಿಯ ಎರಡನೇ ವರ್ಷದಿಂದ ಆರಂಭವಾಗುತ್ತದೆ.
ಪ್ರಸ್ತುತ ನಿಯಮಗಳ ಪ್ರಕಾರ, ಭಾರತದಲ್ಲಿ ಎನ್ ಸಿ ಬಿ 20% ಇಂದ ಪ್ರಾರಂಭವಾಗಿ ಆರನೇ ವರ್ಷದಲ್ಲಿ 50% ವರೆಗೂ ಹೋಗುತ್ತದೆ. ಯಾವುದೇ ನಾಲ್ಕು - ಚಕ್ರ ವಾಹನಗಳ ನೋ ಕ್ಲೈಮ್ ಬೋನಸ್ ಅನ್ನು ಸಾಮಾನ್ಯವಾಗಿ ಹೀಗೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ.
ಕ್ಲೈಮ್ ಫ಼್ರೀ ವರ್ಷಗಳು |
ನೋ ಕ್ಲೈಮ್ ಬೋನಸ್ |
1 ವರ್ಷದ ಬಳಿಕ |
20% |
2 ವರ್ಷದ ಬಳಿಕ |
25% |
3 ವರ್ಷದ ಬಳಿಕ |
35% |
4 ವರ್ಷದ ಬಳಿಕ |
45% |
5 ವರ್ಷದ ಬಳಿಕ |
50% |
1. ನಿಮಗೆ ಸಕಾರಾತ್ಮಕ ರಿವಾರ್ಡ್ಸ್ ನೀಡುತ್ತದೆ(Gives you positive rewards) : ಎನ್ ಸಿ ಬಿ ಎಂದರೆ ಬೇರೇನೂ ಅಲ್ಲ, ನೀವು ಒಳ್ಳೆಯ ಮತ್ತು ಜವಾಬ್ದಾರಿಯುತ ಚಾಲಕ ಹಾಗೂ ಕಾರು ಮಾಲಕನಾಗಿದ್ದಕ್ಕೆ ನಿಮಗೆ ಸಿಗುವ ರಿವಾರ್ಡ್ ಆಗಿದೆ.
2. ನಿಮ್ಮೊಂದಿಗೆ ಸಂಪರ್ಕ ನಿಮ್ಮ ಕಾರಿನೊಂದಿಗೆ ಅಲ್ಲ(Connected to you and not your car) : ಎನ್ ಸಿ ಬಿ ಯ ಸಂಪರ್ಕ ವೈಯಕ್ತಿಕವಾಗಿ ನಿಮ್ಮೊಂದಿಗೆ ಇದೆ, ನಿಮ್ಮ ಗಾಡಿಯೊಂದಿಗೆ ಅಲ್ಲ. ಅಂದರೆ, ನಿಮ್ಮ ಬಳಿ ಯವುದೇ ಕಾರ್ ಇರಲಿ, ನೀವು ಪ್ರತೀ ವರ್ಷ ಅವಧಿಗೆ ಮುನ್ನ ನಿಮ್ಮ ಕಾರ್ ಪಾಲಿಸಿಗಳನ್ನು ರಿನ್ಯೂ ಮಾಡುತ್ತಿದ್ದರೆ, ನೀವು ನಿಮ್ಮ ಕಾರ್ ಇನ್ಶೂರೆನ್ಸ್ ನ ನೋ ಕ್ಲೈಮ್ ಬೋನಸ್ ಇಂದ ಲಾಭಗಳನ್ನು ಪಡೆಯುತ್ತಾ ಇರುತ್ತೀರಿ.
3. ಕಾರ್ ಇನ್ಶೂರೆನ್ಸ್ ಪ್ರೀಮಿಯಮ್ ಮೇಲೆ ಉಳಿತಾಯ ಮಾಡಿರಿ(Save on car insurance premium) : ಎಲ್ಲರೂ ಇಷ್ಟಪಡುವ ಲಾಭ!ರಿಯಾಯಿತಿಗಳು! ನೋ ಕ್ಲೈಮ್ ಬೋನಸ್ ನಿಂದ ವಾರ್ಷಿಕವಾಗಿ ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಮ್ ಮೇಲೆ ಕನಿಷ್ಟ 20% ಉಳಿತಾಯವನ್ನು ಮಾಡುತ್ತೀರಿ.
4. ಸುಲಭ ವರ್ಗಾವಣೆ(Easily Transferable) : ನೀವು ನಿಮ್ಮ ಇನ್ಶೂರರ್ ಅಥವಾ ಕಾರನ್ನು ಬದಲಿಸುತ್ತಿರುವ ಸಂದರ್ಭದಲ್ಲಿ, ನಿಮ್ಮ ಎನ್ ಸಿ ಬಿ ಯ ವರ್ಗಾವಣೆಯ ಕ್ರಿಯೆ ಸರಳ ಮತ್ತು ಸಮಸ್ಯೆ ರಹಿತವಾಗಿದೆ. ನೀವು ಖಚಿತ ಮಾಡಬೇಕಾದದ್ದು ಇಷ್ಟೇ, ನಿಮ್ಮ ಪ್ರಸ್ತುತ ಪಾಲಿಸಿಯನ್ನು ಅದರ ಅವಧಿ ಪೂರ್ಣವಾಗುವ ಮೊದಲೇ ವರ್ಗಾಯಿಸುವುದು.
ಎನ್ ಸಿ ಬಿ ಲಾಭದಾಯಕ ಎಂದು ಈಗ ನಾವು ತಿಳಿದಾಗಿದೆ. ಕ್ಲೈಮ್ ಮಾಡದೇ ಇದ್ದಷ್ಟು ಸಮಯ, ನೀವು ಎನ್ ಸಿ ಬಿ ರಕ್ಷಣೆಯ ಲಾಭವನ್ನು ಪಡೆಯುತ್ತಿರುತ್ತೀರಿ. ಆದರೆ ಕಾರಣಾಂತರಗಳಿಂದ ನೀವು ಈ ಪಾಲಿಸಿ ವರ್ಷದಲ್ಲಿ ಕ್ಲೈಮ್ ಫೈಲ್ ಮಾಡಿದರೆ ಮುಂದಿನ ಪಾಲಿಸಿ ವರ್ಷದಲ್ಲಿ ನಿಮಗೆ ಎನ್ ಸಿ ಬಿ ಯ ಲಾಭ ಸಿಗುವುದಿಲ್ಲ. ಇಲ್ಲಿ ಮುಖ್ಯವಾಗಿ ತಿಳಿಯಬೇಕಾದದ್ದು ಏನೆಂದರೆ ನಿಮ್ಮ ಅವಧಿಪೂರ್ಣಕ್ಕೆ 90 ದಿನಗಳ ಮೊದಲು ನಿಮ್ಮ ಪ್ರಸ್ತುತ ಇನ್ಶೂರೆನ್ಸ್ ಪಾಲಿಸಿಯನ್ನು ರಿನ್ಯೂ ಮಾಡದಿದ್ದರೆ ನಿಮ್ಮ ಎನ್ ಸಿ ಬಿ ಯನ್ನು ಕೊನೆಗೊಳಿಸಲಾಗುವುದು, ಮತ್ತು ಮುಂದೆ ನಿಮಗೆ ನೋ ಕ್ಲೈಮ್ ಬೋನಸ್ ನ ಯಾವುದೇ ಲಾಭಗಳನ್ನು ಪಡೆಯಲ್ಲು ಸಾಧ್ಯವಿಲ್ಲ. ಆದ್ದರಿಂದ ಯಾವಾಗಲೂ ಸರಿಯಾದ ಸಮಯಕ್ಕೆ ನಿಮ್ಮ ಪಾಲಿಸಿಯನ್ನು ರಿನ್ಯೂ ಮಾಡಬೇಕು.
ಎನ್ ಸಿ ಬಿ ಬಗೆಗಿನ ಮುಂದಿನ ಪ್ರಶ್ನೆ ಏನೆಂದರೆ ಎನ್ ಸಿ ಬಿ ಸರ್ಟಿಫಿಕೇಟ್ ಪಡೆಯುವುದು ಹೇಗೆ? ಇನ್ಶೂರೆನ್ಸ್ ಪಾಲಿಸಿ ಖರೀದಿಸುವ ಸಮಯದಲ್ಲಿ,ಪಾಲಿಸಿ ಹೋಲ್ಡರ್ ಗೆ ಎನ್ ಸಿಬಿ ಸರ್ಟಿಫಿಕೇಟ್ ಅನ್ನು ನೀಡಲಾಗುತ್ತದೆ ಮತ್ತು ಅದರ ನಂತರ ಅವರು ಆ ಪಾಲಿಸಿ ವರ್ಷದಲ್ಲಿ ಕ್ಲೈಮ್ ಫೈಲ್ ಮಾಡುತ್ತಾರೋ ಇಲ್ಲವೋ ಎನ್ನುವುದು ಅವರ ಮೇಲೆ ಅಧರಿಸುತ್ತದೆ. ಅವರು ಕ್ಲೈಮ್ ಮಾಡಿದರೆ, ಅವರು ಮುಂದಿನ ವರ್ಷದ ಎನ್ ಸಿ ಬಿ ಲಾಭಗಳಿಗೆ ಅಹ್ರರಾಗಿರುವುದಿಲ್ಲ, ಆದರೆ ಪೂರ್ತಿ ವರ್ಷ ಅವರು ಕ್ಲೈಮ್ ಮಾಡದೇ ಇದ್ದರೆ, ಅವರು ಎನ್ ಸಿ ಬಿ ಲಾಭಕ್ಕೆ ಅರ್ಹರಾಗಿರುತ್ತಾರೆ.
ನೀವೂ ಇನ್ನೂ ಏನೂ ಕ್ಲೈಮ್ಸ್ ಮಾಡದೇ ಇದ್ದು, ವರ್ಷದ ಮಧ್ಯದಲ್ಲೇ ಕಾರನ್ನು ಮಾರಾಟ ಮಾಡಲು ನಿರ್ಧರಿಸಿದರೆ ಅಥವಾ ಇನ್ನೊಂದು ಪಕ್ಷದಲ್ಲಿ ಇನ್ನೊಂದು ಕಾರ್ ಖರೀದಿಸಲು ನಿರ್ಧರಿಸಿದರೆ ಏನಾಗುತ್ತದೆ ಎಂದು ಯೋಚಿಸಿದ್ದೀರಾ?
ನೀವು ಒಂದು ಡೀಲರ್ ಅಥವಾ ಥರ್ಡ್ ಪಾರ್ಟಿಯಿಂದ ಹಳೆ ಕಾರ್ ಖರೀದಿಸಿದರೆ ಹಾಗೂ ಕಾರ್ ಎನ್ ಸಿ ಬಿ ಗೆ ಅರ್ಹವಾಗಿದ್ದರೆ ನೀವು ನೋ ಕ್ಲೈಮ್ ಬೋನಸ್ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು. ಈ ಸಂದರ್ಭದಲ್ಲಿ, ನೀವು ಮಾಡಬೇಕಾದದ್ದು ಇಷ್ಟೇ, ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೊವೈಡರ್ ಗೆ ನಿಮ್ಮ ಹಳೆ ಕಾರ್ ಮಾರಾಟದ ಬಗ್ಗೆ ತಿಳಿಸಿ ಎನ್ ಸಿ ಬಿ ಅನ್ನು ನಿಮ್ಮ ಹೊಸ ಕಾರ್ ಗೆ ವರ್ಗಾಯಿಸುವಂತೆ ವಿನಂತಿಸಬೇಕು.
ಒಂದು ವೇಳೆ ನೀವು ಈಗ ಗೊಡಿಜಿಟ್ ನಿಂದ ಕಾರ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುತ್ತಿದ್ದರೆ, ನೀವು ಮಾಡಾಬೇಕಾದದ್ದು ಇಷ್ಟೇ, ನಿಮ್ಮ ಪ್ರಸ್ತುತ ಎನ್ ಸಿ ಬಿ ಅನ್ನು ಹೆಸರಿಸಿ ಮತ್ತು ನಿಮ್ಮ ಹಳೆ ಪಾಲಿಸಿ ಇನ್ಶೂರರ್ ನ ಹೆಸರು ಮತ್ತು ಪಾಲಿಸಿ ನಂಬರ್ ಅನ್ನು ತಿಳಿಸಬೇಕು(ನೀವು ಮೊದಲ ಬಾರಿ ನಮ್ಮೊಂದಿಗೆ ಹೊಸ ಕಾರ್ ಪಾಲಿಸಿ ಖರೀದಿಸುತ್ತಿರುವುದಾದರೆ) ಮುಂದೆ ಎಲ್ಲವನ್ನೂ ನಾವು ನೋಡಿಕೊಳ್ಳುತ್ತೇವೆ.
ಇದು ನೀವು ನಿಮ್ಮ ಹೊಸ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್ ಅಥವಾ ಏಜಂಟ್ ನಿಂದ ಅಥವಾ ಆಫ್ಲೈನ್ ಖರೀದಿಸುತ್ತಿದ್ದೀರಾ, ಎನ್ನುವುದನ್ನು ಅವಲಂಬಿಸುತ್ತದೆ. ಒಂದು ವೇಳೆ ನೀವು, ನಿಮ್ಮ ಹೊಸ ಕಾರ್ ಇನ್ಶೂರೆನ್ಸ್ ಅನ್ನು ಆಫ್ಲೈನ್ ಅಥವಾ ಏಜಂಟ್ ಮೂಲಕ ಖರೀದಿಸಿದ್ದರೆ, ನೀವು ನಿಮ್ಮ ನೋ ಕ್ಲೈಮ್ ಬೋನಸ್ ಅನ್ನು, ನಿಮ್ಮ ಬಯರ್ - ಸೆಲ್ಲರ್ ಎಗ್ರೀಮೆಂಟ್ ಫಾರ್ಮ್ 29 ಮತ್ತು 30 ಇದರ ಜೊತೆ ನಿಮ್ಮ ಪ್ರಸ್ತುತ ಇನ್ಶೂರೆನ್ಸ್ ಕಂಪನಿಯಿಂದ ಒಂದು ಎನ್ ಸಿ ಬಿ ವರ್ಗಾವಣಾ ವಿನಾಂತಿ ಪತ್ರವನ್ನು ಸಲ್ಲಿಸಿ ಪಡೆಯಬಹುದು.
ನಂತರ ನಿಮ್ಮ ಇನ್ಶೂರರ್ ನೀಡಿದ ಎನ್ ಸಿ ಬಿ ಸರ್ಟಿಫಿಕೇಟ್ ಅನ್ನು ನಿಮ್ಮ ಹೊಸ ಕಾರ್ ಇನ್ಶೂರೆನ್ಸ್ ಕಂಪನಿಗೆ ಸಲ್ಲಿಸಬೇಕು. ಆದರೆ, ನೀವು ನಿಮ್ಮ ಹೊಸ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನ್ ಖರೀದಿಸುವುದಾದರೆ, ನೀವು ಇದನೆಲ್ಲಾ ಮಾಡಬೇಕಾಗಿಲ್ಲ. ನೀವು ಕೇವಲ ನಿಮ್ಮ ಸರಿಯಾದ ಎನ್ ಸಿ ಬಿ ಮತ್ತು ಹಳೆ ಪಾಲಿಸಿ ನಂಬರ್ ಮತ್ತು ನಿಮ್ಮ ಇನ್ಶೂರರ್ ನ ಹೆಸರು ನಿಮ್ಮ ಹೊಸ ಇನ್ಶೂರೆನ್ಸ್ ಕಂಪನಿಗೆ ನೀಡಬೇಕು ಹಾಗೂ ಅವರು ಮುಂದಿನ ಕಾರ್ಯಗಳನ್ನು ನೋಡಿಕೊಳ್ಳುತ್ತಾರೆ.
ದಾಖಲೆಗಳಿಗೆ ಸಂಬಂಧಪಟ್ಟಂತೆ ನೀವು ಅರ್ಜಿಯ ಜೊತೆ ಈ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ:
ನಿಮ್ಮ ಹಳೆಯ ಕಾರ್ ಮಾರಟದ ವೇಳೆ ನಿಮಗೆ ನೀಡಲಾದ ಡೆಲಿವರಿ ನೋಟ್
ಹಳೆ ಕಾರಿನ ಇನ್ಶೂರೆನ್ಸ್ ಪಾಲಿಸಿಯ ಪ್ರತಿ
ಕಾರ್ ಖರೀದಿ ವೇಳೆಗೆ ನಿಮಗೆ ನೀಡಾಲದ ಬುಕಿಂಗ್ ಫಾರ್ಮ್
ಮೇಲೆ ನೀಡಿರುವ ದಾಖಲೆಗಳನ್ನು ಸಲ್ಲಿಸಿದ ಮೇಲೆ, ನೋ ಕ್ಲೈಮ್ ಬೋನಸ್ ಹೊಸ ಕಾರಿಗೆ ವರ್ಗಾವಣೆಯಾಗುತ್ತದೆ. ಇರುವ ಎನ್ ಸಿ ಬಿ ಸರ್ಟಿಫಿಕೇಟ್ ಅನ್ನು ಆಧರಿಸಿ ಗ್ರಾಹಕರು ಹೊಸ ಕಾರಿನ ಇನ್ಶೂರೆನ್ಸ್ ಪ್ರೀಮಿಯಮ್ ಮೇಲೆ ರಿಯಾಯಿತಿ ಲಾಭವನ್ನು ಪಡೆಯಬಹುದು.