ಆನ್‌ಲೈನ್ ನಲ್ಲಿ ಕಾರ್ ಇನ್ಶೂರೆನ್ಸ್

digit car insurance
usp icon

6000+ Cashless

Network Garages

usp icon

Zero Paperwork

Required

usp icon

24*7 Claims

Support

Get Instant Policy in Minutes*

I agree to the  Terms & Conditions

Don’t have Reg num?
It's a brand new Car

ಡಿಜಿಟ್ ಕಾರ್ ಇನ್ಶೂರೆನ್ಸ್ ನೊಂದಿಗೆ, ನೀವು ಲೆಸ್ ಡ್ರೈವ್ ಮಾಡಿದರೆ, ಪೇ ಲೆಸ್ ಮಾಡಿ!

digit-play video

ಕಾರ್ ಇನ್ಶೂರೆನ್ಸ್: ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ತಕ್ಷಣ ಖರೀದಿಸಿ/ರಿನ್ಯೂ ಮಾಡಿ

ಡಿಜಿಟ್ ನ ಕಾರ್ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ?

Hatchback Damaged Driving

ಅಪಘಾತಗಳು

ಅಪಘಾತಗಳು ಮತ್ತು ಘರ್ಷಣೆಗಳಿಂದ ಉಂಟಾಗಬಹುದಾದ ಹಾನಿಗಳು ಮತ್ತು ನಷ್ಟಗಳು

theft

ಕಳ್ಳತನ

ದುರದೃಷ್ಟವಶಾತ್ ನಿಮ್ಮ ಕಾರ್‌ನ ಕಳ್ಳತನವಾಗಿ ಅದರಿಂದ ಉಂಟಾದ ನಷ್ಟಗಳನ್ನು ಕವರ್ ಮಾಡುತ್ತದೆ.

Car Got Fire

ಬೆಂಕಿ

ಆಕಸ್ಮಿಕ ಬೆಂಕಿಯಿಂದಾಗಿ ನಿಮ್ಮ ಕಾರ್‌ಗೆ ಉಂಟಾದ ಹಾನಿಗಳು ಮತ್ತು ನಷ್ಟಗಳು

Natural Disaster

ಪ್ರಕೃತಿ ವಿಕೋಪಗಳು

ಪ್ರವಾಹಗಳು, ಚಂಡಮಾರುತಗಳು ಮುಂತಾದ ನೈಸರ್ಗಿಕ ವಿಪತ್ತುಗಳಲ್ಲಿ ನಿಮ್ಮ ಕಾರ್‌ಗೆ ಸಂಭವಿಸುವ ಹಾನಿ ಮತ್ತು ನಷ್ಟಗಳು.

Personal Accident

ವೈಯಕ್ತಿಕ ಅಪಘಾತ

ಕಾರ್ ಅಪಘಾತ ಸಂಭವಿಸಿದಲ್ಲಿ ಮತ್ತು ದುರದೃಷ್ಟವಶಾತ್, ಇದು ಮಾಲೀಕರ ಸಾವು ಅಥವಾ ಅಂಗವೈಕಲ್ಯಕ್ಕೆ ಕಾರಣವಾಗುವುದು.

Third Party Losses

ಥರ್ಡ್ ಪಾರ್ಟಿ ನಷ್ಟಗಳು

ನಿಮ್ಮ ಕಾರ್ ಬೇರೆಯವರಿಗಾಗಲಿ ಅಥವಾ ಅವರ ಕಾರ್‌ಗಾಗಲಿ ಅಥವಾ ಅವರ ಆಸ್ತಿಗೆ ಮಾಡುವ ಹಾನಿ ಮತ್ತು ನಷ್ಟಗಳು.

ಡಿಜಿಟ್ ಕಾರ್ ಇನ್ಶೂರೆನ್ಸ್ ನೊಂದಿಗೆ ಆಡ್-ಆನ್ ಕವರ್‌ಗಳು

ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನೀವು ಖರೀದಿಸಬಹುದಾದ ಕಾರ್ ಇನ್ಶೂರೆನ್ಸ್ ಆಡ್-ಆನ್‌ಗಳು

ಝೀರೊ ಡೆಪ್ರಿಸಿಯೇಷನ್ ಕವರ್

5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್‌ಗಳಿಗೆ ಸೂಕ್ತವಾಗಿದೆ. ಝೀರೊ  ಡೆಪ್ರಿಸಿಯೇಷನ್ ಕವರ್ ಇದು ನಿಮ್ಮ ಕಾರ್ ಮತ್ತದರ ಭಾಗಗಳ ಮೇಲೆ ವಿಧಿಸಲಾದ ಡೆಪ್ರಿಸಿಯೇಷನ್ಅನ್ನು ರದ್ದುಗೊಳಿಸಲು ನಿಮಗೆ ಅನುಮತಿಸುತ್ತದೆ. ಹಾಗೂ ಕ್ಲೈಮ್ ಸಮಯದಲ್ಲಿ ರಿಪೇರಿ, ವೆಚ್ಚಗಳು ಮತ್ತು ರೀಪ್ಲೇಸಮೆಂಟ್'ನ ಸಂಪೂರ್ಣ ಮೌಲ್ಯವನ್ನು ನಿಮಗೆ ನೀಡುತ್ತದೆ.

ರಿಟರ್ನ್ ಟು ಇನ್‌ವಾಯ್ಸ್ ಕವರ್‌

ಕಳ್ಳತನ ಅಥವಾ ದುರಸ್ತಿಗೆ ಮೀರಿದ ಹಾನಿಗಳಾದಾಗ, ರಿಟರ್ನ್ ಟು ಇನ್‌ವಾಯ್ಸ್ ಆಡ್-ಆನ್‌ ಕವರ್ ನಿಮ್ಮ ಕಾರಿಗೆ, ಇನ್‌ವಾಯ್ಸ್ ಮೌಲ್ಯದ ಸಂಪೂರ್ಣ ಮೊತ್ತವನ್ನು ಮರಳಿ ಪಡೆಯುವ ಪ್ರಯೋಜನವನ್ನು ನೀಡುತ್ತದೆ. ಇದರಲ್ಲಿ ಹೊಸ ವಾಹನವನ್ನು ನೋಂದಾಯಿಸುವ ವೆಚ್ಚ ಮತ್ತು ಅದರ ರೋಡ್ ಟ್ಯಾಕ್ಸ್ ಕೂಡ ಇದರಲ್ಲಿ ಸೇರಿರುತ್ತದೆ.

ಟೈರ್ ರಕ್ಷಣೆಯ ಕವರ್

ಸಾಮಾನ್ಯವಾಗಿ, ಅಪಘಾತದ ಸಮಯದಲ್ಲಿ ಹಾನಿ ಸಂಭವಿಸದ ಹೊರತು  ಸ್ಟ್ಯಾಂಡರ್ಡ್ ಇನ್ಶೂರೆನ್ಸಿನಲ್ಲಿ ಟೈರ್ ಹಾನಿಯು ಕವರ್ ಆಗುವುದಿಲ್ಲ. ಅದಕ್ಕಾಗಿಯೇ ಈ ಟೈರ್ ಪ್ರೊಟೆಕ್ಟ್ ಆಡ್-ಆನ್ ಕವರ್, ನಿಮಗೆ ಇತರ ಎಲ್ಲಾ ಸಂದರ್ಭಗಳಲ್ಲಿ ಆಗುವ ಟೈರ್ ಸ್ಫೋಟಗಳು, ಉಬ್ಬುಗಳು ಅಥವಾ ಟೈರ್ ಕಟ್ ಆಗುವಿಕೆ ಮುಂತಾದವುಗಳಂತಹ ಟೈರ್ ಹಾನಿಗಳನ್ನು ರಕ್ಷಿಸುವ ಪ್ರಯೋಜನವನ್ನು ನೀಡುತ್ತದೆ.

ಬ್ರೇಕ್‌ಡೌನ್ ಅಸಿಸ್ಟೆನ್ಸ್

ನಮಗೆಲ್ಲರಿಗೂ ಕೆಲವೊಮ್ಮೆ ಸ್ವಲ್ಪ ಸಹಾಯ ಬೇಕಾಗುತ್ತದೆ! ನಮ್ಮ ಬ್ರೇಕ್‌ಡೌನ್ ಅಸಿಸ್ಟೆನ್ಸ್ ಆಡ್-ಆನ್, ನಿಮಗೆ ಅಗತ್ಯವಿರುವಾಗ ಸಹಾಯವನ್ನು ಮಾಡುವ ಪ್ರಯೋಜನವನ್ನು ನೀಡುತ್ತದೆ. ಅಂದರೆ ನೀವು ಬಯಸಿದ ಯಾವುದೇ ಸಮಯದಲ್ಲಿ ಕಾರ್ ಸ್ಥಗಿತಕ್ಕಾಗಿ ಸಹಾಯ ನೀಡುತ್ತದೆ. ಬೆಸ್ಟ್ ಪಾರ್ಟ್ ಏನು ಗೊತ್ತೇ? ಇದು ಕ್ಲೈಮ್ ಎಂದು ಪರಿಗಣಿಸಲ್ಪಡುವುದಿಲ್ಲ!

ಕನ್ಸ್ಯುಮೇಬಲ್ ಕವರ್

ಕನ್ಸ್ಯುಮೇಬಲ್ ಕವರ್ ನಿಮ್ಮ ಕಾರಿಗೆ ಹೆಚ್ಚುವರಿ ರಕ್ಷಣೆಯನ್ನು ನೀಡುತ್ತದೆ. ಅಪಘಾತದ ಸಂದರ್ಭದಲ್ಲಿ ಎಂಜಿನ್ ಆಯಿಲ್, ಸ್ಕ್ರೂಗಳು, ನಟ್ಸ್ ಮತ್ತು ಬೋಲ್ಟ್‌ಗಳು, ಗ್ರೀಸ್, ಇತ್ಯಾದಿಗಳಂತಹ ನಿಮ್ಮ ಕಾರಿನ ಎಲ್ಲಾ ನಿಟ್ಟಿ-ಸಮೃದ್ಧಿಗಳ ವೆಚ್ಚವನ್ನು ಇದು ಒಳಗೊಳ್ಳುತ್ತದೆ.

ಎಂಜಿನ್ ಮತ್ತು ಗೇರ್ ಬಾಕ್ಸ್ ರಕ್ಷಣೆಯ ಕವರ್

ನಿಮ್ಮ ಎಂಜಿನ್ ಅನ್ನು ಬದಲಿಸುವ ವೆಚ್ಚವು, ಎಂಜಿನ್ ವೆಚ್ಚದ ಸರಿಸುಮಾರು 40% ಆಗಬಹುದೆಂದು ನಿಮಗೆ ತಿಳಿದಿದೆಯೇ? ಸ್ಟ್ಯಾಂಡರ್ಡ್ ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ, ಅಪಘಾತದ ಸಮಯದಲ್ಲಿ ಉಂಟಾಗುವ ಹಾನಿಗಳನ್ನು ಮಾತ್ರ ಕವರ್ ಮಾಡಲಾಗುತ್ತದೆ. ಆದಾಗ್ಯೂ, ಈ ಆಡ್-ಆನ್‌ನೊಂದಿಗೆ, ಅಪಘಾತದ ನಂತರ ಉಂಟಾದ ಯಾವುದೇ ಪರಿಣಾಮದ ಹಾನಿಗಳಿಗೆ ನೀವು ನಿರ್ದಿಷ್ಟವಾಗಿ ನಿಮ್ಮ ಕಾರಿನ ಜೀವಿತಾವಧಿಯನ್ನು (ಇಂಜಿನ್ ಮತ್ತು ಗೇರ್‌ಬಾಕ್ಸ್!) ಕವರ್ ಮಾಡಬಹುದು. ವಾಟರ್ ರಿಗ್ರೇಶನ್, ಲೂಬ್ರಿಕೇಟಿಂಗ್ ಆಯಿಲ್ ಲೀಕೇಜ್ ಮತ್ತು ಅಂಡರ್‌ಕ್ಯಾರೇಜ್ ಹಾನಿಗಳಿಂದ ಇದು ಸಂಭವಿಸಬಹುದು.

ದೈನಂದಿನ ಸ೦ಚಾರ ಪ್ರಯೋಜನ

ದೈನಂದಿನ ಸ೦ಚಾರ ಪ್ರಯೋಜನ ಈ ಆಡ್-ಆನ್, ಇನ್ಶೂರ್ಡ್ ವ್ಯಕ್ತಿಯ ವಾಹನವು ದುರಸ್ತಿಗಾಗಿ ಗ್ಯಾರೇಜ್‌ನಲ್ಲಿರುವ ಸಮಯಕ್ಕೆ ನಿಗದಿತ ದೈನಂದಿನ ಭತ್ಯೆ ಅಥವಾ ಸ್ಟ್ಯಾಂಡ್‌ಬೈ ವಾಹನದ ರೂಪದಲ್ಲಿ ದೈನಂದಿನ ಸಾರಿಗೆಗೆ ಪರಿಹಾರವನ್ನು ನೀಡಲಾಗುತ್ತದೆ ಎಂದು ಖಚಿತಪಡಿಸುತ್ತದೆ.

ಕೀ ಮತ್ತು ಲಾಕ್ ರಕ್ಷಣೆ

ಕಳ್ಳತನ, ನಷ್ಟ ಅಥವಾ ಹಾನಿಯ ಸಂದರ್ಭದಲ್ಲಿ ಕಾರಿನಲ್ಲಿರುವ ಲಾಕ್‌ಸೆಟ್ ಅನ್ನು ಸರಿಪಡಿಸಲು ಅಥವಾ ಬದಲಾಯಿಸಲು ಪಾಲಿಸಿದಾರರು ಮಾಡಿದ ವೆಚ್ಚವನ್ನು ಕೀ ಮತ್ತು ಲಾಕ್ ಪ್ರೊಟೆಕ್ಟ್  ಆಡ್-ಆನ್ ಕವರ್‌ನ ಭಾಗವಾಗಿ ಇನ್ಶೂರರ್ ಭರಿಸುತ್ತಾರೆ.

ವೈಯಕ್ತಿಕ ವಸ್ತುಗಳ ನಷ್ಟ

ಪಾಲಿಸಿದಾರ ಅಥವಾ ಯಾವುದೇ ಕುಟುಂಬದ ಸದಸ್ಯರು ಇನ್ಶೂರ್ಡ್ ವಾಹನದಲ್ಲಿ ಇರಿಸಿದ ಪಾಲಿಸಿಯ ಪ್ರಕಾರ ನಿರ್ದಿಷ್ಟಪಡಿಸಿದ ಯಾವುದೇ ವೈಯಕ್ತಿಕ ವಸ್ತುಗಳ ನಷ್ಟದಿಂದ ಬಳಲುತ್ತಿದ್ದರೆ, ಅದಕ್ಕೆ ಇನ್ಶೂರರ್ ಪರಿಹಾರ ನೀಡುತ್ತಾರೆ.

ನೀವು ಡ್ರೈವ್ ಮಾಡಿದಷ್ಟು ಪಾವತಿಸಿ ಕವರ್

ನೀವು ಡ್ರೈವ್ ಮಾಡಿದಷ್ಟು ಪಾವತಿಸಿ ಕವರ್ , ಪಾಲಿಸಿದಾರರು ಆಯ್ಕೆಮಾಡಿದ ಯೋಜನೆಯ ಆಧಾರದ ಮೇಲೆ ಬೇಸ್ ಪಾಲಿಸಿಯ ಓನ್ ಡ್ಯಾಮೇಜ್ ಕವರ್‌ನ ಪ್ರೀಮಿಯಂನಲ್ಲಿ ರಿಯಾಯಿತಿಯನ್ನು ಪಡೆಯಲು ಅರ್ಹರಾಗುತ್ತಾರೆ. ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಬೇಸ್ ಪಾಲಿಸಿಯ ಅಡಿಯಲ್ಲಿ ಕಿಲೋಮೀಟರ್‌ಗಳನ್ನು ಟಾಪ್ ಅಪ್ ಮಾಡುವ ಆಯ್ಕೆಯನ್ನು ಸಹ ನೀಡಲಾಗುತ್ತದೆ. 

ಏನನ್ನು ಕವರ್ ಮಾಡುವುದಿಲ್ಲ?

ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಒಳಗೊಂಡಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ಆದ್ದರಿಂದ ಮುಂದೆ ನೀವು ಕ್ಲೈಮ್ ಮಾಡುವಾಗ ಯಾವುದೇ ಅಚ್ಚರಿ ಪಡುವುದಿಲ್ಲ. ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ.

ಥರ್ಡ್-ಪಾರ್ಟಿ ಪಾಲಿಸಿ ಹೊಂದಿರುವವರಿಗೆ ಸ್ವಂತ ಹಾನಿ

ಥರ್ಡ್ ಪಾರ್ಟಿ ಲೈಬಿಲಿಟಿ ಓನ್ಲಿ ಪಾಲಿಸಿಯಲ್ಲಿ, ನಿಮ್ಮ ಸ್ವಂತ ವಾಹನಕ್ಕೆ ಉಂಟಾಗುವ ಹಾನಿಗಳು ಕವರ್ ಆಗುವುದಿಲ್ಲ.

ಕುಡಿದು ವಾಹನ ಚಾಲನೆ ಅಥವಾ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುವುದು.

ನೀವು ಕುಡಿದು ಅಥವಾ  ವ್ಯಾಲಿಡ್ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುವುದು ಕಂಡು ಬಂದಿದ್ದರೆ, ಅದನ್ನು ಕವರ್ ಮಾಡಲಾಗುವುದಿಲ್ಲ.

ವ್ಯಾಲಿಡ್ ಡ್ರೈವಿಂಗ್ ಲೈಸೆನ್ಸ್ ಹೋಲ್ಡರ್ ಇಲ್ಲದೆ ವಾಹನ ಚಾಲನೆ

ನೀವು ಡ್ರೈವಿಂಗ್ ಲೈಸನ್ಸ್ ಅನ್ನು ಹೊಂದಿದ್ದು ಮತ್ತು ಮುಂಭಾಗದ ಪ್ಯಾಸೆಂಜರ್ ಸೀಟಿನಲ್ಲಿ ವ್ಯಾಲಿಡ್ ಡ್ರೈವಿಂಗ್ ಲೈಸೆನ್ಸ್  ಹೊಂದಿರುವವರಿಲ್ಲದೆ ಚಾಲನೆ ಮಾಡುತ್ತಿದ್ದರೆ ಅದನ್ನು ಕವರ್  ಮಾಡಲಾಗುವುದಿಲ್ಲ.

ಪರಿಣಾಮದ ಹಾನಿಗಳು

ಅಪಘಾತದ ನೇರ ಪರಿಣಾಮವಲ್ಲದ ಯಾವುದೇ ಹಾನಿ. (ಉದಾ. ಅಪಘಾತದ ನಂತರ ಹಾನಿಗೊಳಗಾದ ಕಾರನ್ನು ತಪ್ಪಾಗಿ ಚಲಾಯಿಸಿದರೆ ಮತ್ತು ಎಂಜಿನ್ ಹಾನಿಗೊಳಗಾದರೆ, ಅದನ್ನು ಕವರ್ ಮಾಡಲಾಗುವುದಿಲ್ಲ)

ಆಡ್-ಆನ್‌ಗಳನ್ನು ಖರೀದಿಸಲಾಗಿಲ್ಲ

ಕೆಲವು ಸನ್ನಿವೇಶಗಳನ್ನು ಆಡ್-ಆನ್‌ಗಳಲ್ಲಿ ಕವರ್ ಮಾಡಲಾಗಿದೆ. ನೀವು ಆ ಆಡ್-ಆನ್‌ಗಳನ್ನು ಖರೀದಿಸದಿದ್ದರೆ, ಅಂತಹ ಸನ್ನಿವೇಶಗಳನ್ನು ಕವರ್ ಮಾಡಲಾಗುವುದಿಲ್ಲ.

ಕೊಡುಗೆ ನಿರ್ಲಕ್ಷ್ಯ (ಕಾಂಟ್ರಿಬ್ಯುಟರಿ ನೆಗ್ಲಿಜೆನ್ಸ್)

ಯಾವುದೇ ಕೊಡುಗೆ ನಿರ್ಲಕ್ಷ್ಯ (ಉದಾಹರಣೆಗೆ, ತಯಾರಕರ ಡ್ರೈವಿಂಗ್ ಕೈಪಿಡಿಯ ಪ್ರಕಾರ ಶಿಫಾರಸು ಮಾಡದ ಅಂದರೆ ಪ್ರವಾಹದ ಸಮಯದಲ್ಲಿ ಕಾರ್ ಡ್ರೈವಿಂಗ್ ಮಾಡುವುದರಿಂದ ಉಂಟಾಗುವ ಡ್ಯಾಮೇಜ್ ಅನ್ನು ಕವರ್ ಮಾಡಲಾಗುವುದಿಲ್ಲ)

ನೀವು ಡಿಜಿಟ್ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ನಿಮ್ಮ ಹೊಸ ಕಾರ್ ಇನ್ಶೂರೆನ್ಸ್ ಪಾಲಿಸಿಗಾಗಿ ಈ ಬಾರಿ ಡಿಜಿಟ್ ಅನ್ನು ಪ್ರಯತ್ನಿಸಲು ಪರಿಗಣಿಸುತ್ತಿರುವಿರಾ? ನಮ್ಮನ್ನು ವಿಭಿನ್ನವಾಗಿಸುವದನ್ನು ಕಲಿಯಿರಿ...

ಕ್ಯಾಶ್‌ಲೆಸ್ ರಿಪೇರಿ

ಭಾರತದಾದ್ಯಂತ ಆಯ್ಕೆ ಮಾಡಲು 6000+ ಕ್ಯಾಶ್‌ಲೆಸ್ ನೆಟ್‌ವರ್ಕ್ ಗ್ಯಾರೇಜ್‌ಗಳು

Customize your Vehicle IDV

ನಿಮ್ಮ ವಾಹನ ಐಡಿವಿ(IDV) ಅನ್ನು ಕಸ್ಟಮೈಸ್ ಮಾಡಿ

ನಮ್ಮೊಂದಿಗೆ, ನಿಮ್ಮ ಆಯ್ಕೆಯ ಪ್ರಕಾರ ನಿಮ್ಮ ವಾಹನ ಐಡಿವಿ(IDV)ಅನ್ನು ಅನ್ನು ನೀವು ಕಸ್ಟಮೈಸ್ ಮಾಡಬಹುದು!

self inspection

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಯಂ ತಪಾಸಣೆ

ನಿಮ್ಮ ಫೋನ್‌ನಲ್ಲಿ ಹಾನಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಕೆಲಸ ಮುಗಿಸಿ

ಸೂಪರ್-ಫಾಸ್ಟ್ ಕ್ಲೈಮ್‌ಗಳು

ಸೂಪರ್-ಫಾಸ್ಟ್ ಕ್ಲೈಮ್‌ಗಳು

ನಾವು 96% ಖಾಸಗಿ ಕಾರ್ ಕ್ಲೈಮ್‌ಗಳನ್ನು ಪರಿಹರಿಸಿದ್ದೇವೆ!

customer care

24*7 ಬೆಂಬಲ

ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24*7 ಕರೆ ಸೌಲಭ್ಯ

ಡಿಜಿಟ್ ನ ಕಾರ್ ಇನ್ಶೂರೆನ್ಸಿನ ಪ್ರಮುಖ ವೈಶಿಷ್ಟ್ಯಗಳು

ಪ್ರಮುಖ ವೈಶಿಷ್ಟ್ಯಗಳು

ಡಿಜಿಟ್ ಪ್ರಯೋಜನಗಳು

ಪ್ರೀಮಿಯಂ

₹2094 ರಿಂದ ಪ್ರಾರಂಭವಾಗುತ್ತದೆ

ನೋ ಕ್ಲೈಮ್ ಬೋನಸ್

50% ವರೆಗೆ ರಿಯಾಯಿತಿ

ಕಸ್ಟಮೈಸ್ ಮಾಡಬಹುದಾದ ಆಡ್ ಆನ್

10 ಆಡ್-ಆನ್‌ಗಳು ಲಭ್ಯವಿದೆ

ಕ್ಯಾಶ್‌ಲೆಸ್ ರಿಪೇರಿಗಳು

ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್‌ನೊಂದಿಗೆ 6000+ ಗ್ಯಾರೇಜ್‌ಗಳಲ್ಲಿ ಲಭ್ಯವಿದೆ

ಕ್ಲೈಮ್ ಪ್ರಕ್ರಿಯೆ

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಕ್ಲೈಮ್ ಪ್ರಕ್ರಿಯೆ. ಕೇವಲ 7 ನಿಮಿಷಗಳಲ್ಲಿ ಆನ್‌ಲೈನ್‌ನಲ್ಲಿ ಮಾಡಬಹುದು!

ಓನ್ ಡ್ಯಾಮೇಜ್ ಕವರ್

ಲಭ್ಯವಿದೆ

ಥರ್ಡ್ ಪಾರ್ಟಿಗೆ ಆಗುವ ಹಾನಿಗಳು

ವೈಯುಕ್ತಿಕ ಹಾನಿಗಳಿಗೆ ಅನ್ ಲಿಮಿಟೆಡ್ ಹೊಣೆಗಾರಿಕೆ, ಆಸ್ತಿ/ವಾಹನ ಹಾನಿಗಳಿಗೆ 7.5 ಲಕ್ಷದವರೆಗೆ

ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಕಾರ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು

car-quarter-circle-chart

ಥರ್ಡ್ ಪಾರ್ಟಿ

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಎನ್ನುವುದು ಕಾರ್ ಇನ್ಶೂರೆನ್ಸಿನ ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ; ಇದರಲ್ಲಿ ಥರ್ಡ್ ಪಾರ್ಟಿಯ ವ್ಯಕ್ತಿ, ವಾಹನ ಅಥವಾ ಆಸ್ತಿಗೆ ಉಂಟಾದ ಹಾನಿ ಮತ್ತು ನಷ್ಟಗಳನ್ನು ಮಾತ್ರ ಕವರ್ ಮಾಡಲಾಗುತ್ತದೆ.

car-full-circle-chart

ಕಾಂಪ್ರೆಹೆನ್ಸಿವ್

ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಎನ್ನುವುದು ನಿಮ್ಮ ಸ್ವಂತ ಕಾರಿಗೆ ಥರ್ಡ್ ಪಾರ್ಟಿ ಹೊಣೆಗಾರಿಕೆಗಳು ಮತ್ತು ಹಾನಿಗಳು, ಎರಡನ್ನೂ ಕವರ್ ಮಾಡುವ ಕಾರ್ ಇನ್ಶೂರೆನ್ಸಿನ ಅತ್ಯಮೂಲ್ಯ ವಿಧಗಳಲ್ಲಿ ಒಂದಾಗಿದೆ.

ಥರ್ಡ್ ಪಾರ್ಟಿ

ಕಾಂಪ್ರೆಹೆನ್ಸಿವ್

×
×
×
×
×
×

ಫೋರ್-ವೀಲರ್ ವೆಹಿಕಲ್‌ಗಳಿಗಾಗಿ ಥರ್ಡ್ ಪಾರ್ಟಿ ಇನ್ಶೂರೆನ್ಸ್‌ನ ಬೆಲೆಗಳು

ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ನಿಮ್ಮ ಕಾರಿನ ಇಂಜಿನ್ ಸಿಸಿಯ ಮೇಲೆ ಅವಲಂಬಿತವಾಗಿದೆ ಮತ್ತು ಆಯಾ ಪ್ರೀಮಿಯಂ ದರಗಳು ಸಹ ಐಆರ್‌ಡಿಎಐ ನಿಂದ ಪೂರ್ವನಿರ್ಧರಿತವಾಗಿವೆ. ಅವುಗಳು ಈ ಕೆಳಗಿನಂತಿವೆ:

ಎಂಜಿನ್ ಕೆಪ್ಯಾಸಿಟಿಯೊಂದಿಗೆ ಪ್ರೈವೇಟ್ ಕಾರುಗಳು

2019-20 ರ ಪ್ರೀಮಿಯಂ INR ನಲ್ಲಿ

ಪ್ರೀಮಿಯಂ ದರ (1ನೇ ಜೂನ್ 2022 ರಿಂದ ಜಾರಿಯಲ್ಲಿದೆ)

1000ಸಿಸಿ ಅನ್ನು ಮೀರದ

₹2072

₹2094

1000ಸಿಸಿ ಮೀರುವ ಆದರೆ 1500ಸಿಸಿ ಅನ್ನು ಮೀರದ

₹3221

₹3416

1500ಸಿಸಿ ಮೀರುವ

₹7890

₹7897

2015 ರಿಂದ 2025 ರವರೆಗಿನ ಮೌಲ್ಯದ ಪ್ರಕಾರ, ಪ್ರದೇಶವಾರು, ಭಾರತದಲ್ಲಿ ಕಾರ್ ಇನ್ಶೂರೆನ್ಸ್ ಮಾರ್ಕೆಟ್ ಗಾತ್ರ

ಕಾರ್ ಇನ್ಶೂರೆನ್ಸ್ ಕ್ಲೈಮ್ ಅನ್ನು ಸಲ್ಲಿಸುವುದು ಹೇಗೆ?

ನಮ್ಮ ಕಾರ್ ಇನ್ಶೂರೆನ್ಸ್ ಯೋಜನೆಯನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ (self inspection) ಲಿಂಕ್ ಪಡೆಯಿರಿ. ಹಂತ ಹಂತವಾಗಿ ನೀಡುವ ಮಾರ್ಗದರ್ಶನದಂತೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ಮರುಪಾವತಿ ಅಥವಾ ನಗದುರಹಿತದ ಆಯ್ಕೆಗಾಗಿ, ರಿಪೇರಿ ವಿಧಾನವನ್ನು ಆರಿಸಿ.

ಡಿಜಿಟ್‌ನ ಕಾರ್ ಇನ್ಶೂರೆನ್ಸ್‌ನೊಂದಿಗೆ ಕ್ಲೈಮ್‌ಗಳನ್ನು ಸರಳಗೊಳಿಸಲಾಗಿದೆ

Cashless Garages by Digit

ಡಿಜಿಟ್ ನ ಕ್ಯಾಶ್‌ಲೆಸ್ ಗ್ಯಾರೇಜ್‌ಗಳು

ಭಾರತದಾದ್ಯಂತ 6000+ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ರಿಪೇರಿ ಪಡೆಯಿರಿ

Report Card

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ?

ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು ನೀವೀಗ ಅದನ್ನೇ ಮಾಡುತ್ತಿರುವಿರಿ!

ಡಿಜಿಟ್‌ನ ಹಕ್ಕುಗಳ ವರದಿ ಕಾರ್ಡ್ ಅನ್ನು ಓದಿ

ನಮ್ಮ ಗ್ರಾಹಕರು ನಮ್ಮ ಬಗ್ಗೆ ಏನು ಹೇಳುತ್ತಾರೆ

ವಿಶಾಲ್ ಮೋದಿ

ನಾನು ನೋಡಿದ ಅತ್ಯುತ್ತಮ ಮತ್ತು ಸುಲಭವಾದ ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆ. ಸಹಾಯ ಮನೋಭಾವದ ಕಸ್ಟಮರ್ ಕೇರ್ ಮತ್ತು ಸಮರ್ಥ ಸರ್ವೇಯರ್‌ಗಳು (ನನ್ನ ವಿಷಯದಲ್ಲಿ ಶ್ರೀ ಸತೀಶ್ ಕುಮಾರ್). ಫೋಟೋಗಳನ್ನು ಅಪ್‌ಲೋಡ್ ಮಾಡಿ ಮತ್ತು ನಿಮ್ಮ ಕ್ಲೈಮ್ ಅನ್ನು ಪ್ರಕ್ರಿಯೆಗೊಳಿಸಿ. ಮರುಪಾವತಿಯನ್ನು ಸಹ ಬಹಳ ವೇಗವಾಗಿ ಮಾಡಲಾಗುತ್ತದೆ. ಗ್ರೇಟ್ ಗೋ ಡಿಜಿಟ್!!!!

ಸುಲಭ್ ಸಿನ್ಹಾ

ನನ್ನ ಇತ್ತೀಚಿನ ಅನುಭವವನ್ನು ಡಿಜಿಟ್‌ನೊಂದಿಗೆ ಹಂಚಿಕೊಳ್ಳಲು ನನಗೆ ಅಪಾರ ಸಂತೋಷವಾಗುತ್ತದೆ. ಈಗ, ಕ್ಲೈಮ್ ಇತ್ಯರ್ಥ ಮತ್ತು ಗ್ರಾಹಕರ ಬೆಂಬಲದ ವಿಷಯದಲ್ಲಿ, ಇದು ಮಾರುಕಟ್ಟೆಯಲ್ಲಿ ಅತ್ಯುತ್ತಮ ಇನ್ಶೂರೆನ್ಸ್ ಸೇವಾ ಪೂರೈಕೆದಾರ ಸಂಸ್ಥೆ ಎಂದು ನಾನು ಹೇಳಬಲ್ಲೆ. ನನ್ನ ಕೇಸನ್ನು ಅತ್ಯಂತ ವೃತ್ತಿಪರ ರೀತಿಯಲ್ಲಿ ನಿರ್ವಹಿಸಿದ ಶ್ರೀ ರತ್ನ (ಸರ್ವೇಯರ್) ಅವರಿಗೆ ನನ್ನ ಪ್ರಾಮಾಣಿಕ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ. ಅವರು ನನಗೆ ಸರಿಯಾದ ಸಮಯದಲ್ಲಿ ಸರಿಯಾದ ವಿಷಯದ ಬಗ್ಗೆ ಉತ್ತಮ ಸಲಹೆ ನೀಡಿದರು ಮತ್ತು ಇದನ್ನೇ ಅಲ್ಲವೇ ನೀವು  ಇನ್ಶೂರೆನ್ಸ್ ಪೂರೈಕೆದಾರರಿಂದ ನಿರೀಕ್ಷಿಸುವುದು. ಭವಿಷ್ಯದಲ್ಲಿಯೂ, ಡಿಜಿಟ್ ಇದೇ ಗುಣಮಟ್ಟದ ಸೇವೆಯನ್ನು ಮುಂದುವರೆಸಲು ನಿರೀಕ್ಷಿಸುತ್ತೇನೆ.

ಸಿದ್ಧಾಂತ್ ಗಾಂಧಿ

ಡಿಜಿಟ್ ಇನ್ಶೂರೆನ್ಸಿನೊಂದಿಗೆ ಸಂಬಂಧ ಹೊಂದಿರುವುದು ಉತ್ತಮ ಅನುಭವದ ಜೊತೆ ಸಂತೋಷವೂ ಎನಿಸುತ್ತದೆ. ಸಂಪೂರ್ಣ ಪ್ರಕ್ರಿಯೆಯು ತುಂಬಾ ಸುಲಭ ಮತ್ತು ಗ್ರಾಹಕ ಸ್ನೇಹಿಯಾಗಿದೆ ಎಂದು ತೋರುತ್ತದೆ. ನನ್ನ ಕಾರ್ ವರ್ಕ್‌ಶಾಪ್‌ನಲ್ಲಿ ರಿಪೇರಿಯಾಗುವುದರ ಬಗ್ಗೆ ನಾನು ಒತ್ತಡ ಹೇರಲಿಲ್ಲ. ನೀವು ಲಿಂಕ್ ಅನ್ನು ಪಡೆಯುತ್ತೀರಿ ಮತ್ತು ನಿಮ್ಮ ಹಾನಿಗೊಳಗಾದ ಕಾರಿನ ಫೋಟೋಗಳನ್ನು ಕ್ಲಿಕ್ ಮಾಡಿ ಮತ್ತು ಅದಕ್ಕೆ ಕ್ಲೈಮ್ ಸಂಖ್ಯೆಯನ್ನು ರಚಿಸಿ. ಹೆಚ್ಚಿನ ಸಂಪೂರ್ಣ ಕಾಳಜಿಯನ್ನು ನಿಮ್ಮ ಸರ್ವೇಯರ್ ತೆಗೆದುಕೊಳ್ಳುತ್ತಾರೆ. ನನ್ನ ವಿಷಯದಲ್ಲಿ ಶ್ರೀ ಮ್ಹಾತ್ರೆ ಅವರು ಅತ್ಯಂತ ಸಹಾಯಕರಾಗಿದ್ದರು ಮತ್ತು ಎಲ್ಲಾ ವಿಷಯಗಳಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸಿದರು. ನನ್ನ ಹಿಂದಿನ ಇನ್ಶೂರೆನ್ಸ್ ಕಂಪನಿಗಿಂತ ಖಂಡಿತವಾಗಿಯೂ ಡಿಜಿಟ್ ಉತ್ತಮವಾಗಿದೆ. ಗೋ ಗೋ ಡಿಜಿಟ್!!

Show more

ಕಾರ್ ಇನ್ಶೂರೆನ್ಸ್ ಪಾಲಿಸಿಯ ಪ್ರಯೋಜನಗಳು

ಹಣಕಾಸಿನ ನಷ್ಟದಿಂದ ನಿಮ್ಮ ಪಾಕೆಟ್ ಅನ್ನು ರಕ್ಷಿಸಿ

ನೀವು ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಅಥವಾ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಯಾವುದೇ ಆಗಿರಲಿ ನೀವು ಇನ್ಶೂರೆನ್ಸ್ ಹೊಂದಿದ್ದರೆ, ಅದು ಅನಿರೀಕ್ಷಿತ ಸಂದರ್ಭಗಳಾದ ಅಪಘಾತ, ನೈಸರ್ಗಿಕ ವಿಪತ್ತು, ಬೆಂಕಿ, ಕಳ್ಳತನ ಮತ್ತು ಇತರ ಸಂದರ್ಭಗಳಲ್ಲಿ ಉಂಟಾಗುವ ಹಾನಿ ಮತ್ತು ನಷ್ಟಗಳಿಗೆ ದೊಡ್ಡ ಮೊತ್ತವನ್ನು ಪಾವತಿಸುವುದರಿಂದ ನಿಮಗೆ ಲಾಭವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ನೀವು ಭಾರೀ ಟ್ರಾಫಿಕ್ ದಂಡಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು!

ಥರ್ಡ್ ಪಾರ್ಟಿ ಹಾನಿಗಳಿಂದ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸಿ

ಅಪಘಾತಗಳು ಎಲ್ಲರಿಗೂ ಸಂಭವಿಸುತ್ತವೆ. ನೀವು ಆಕಸ್ಮಿಕವಾಗಿ ಬೇರೆಯವರಿಗೆ ಅಥವಾ ಅವರ ಕಾರ್ ಅಥವಾ ಅವರ ಆಸ್ತಿಗೆ ಹಾನಿ ಮಾಡಿದರೆ, ಆ ಥರ್ಡ್ ಪಾರ್ಟಿಗೆ ಉಂಟಾದ ಹಾನಿ ಮತ್ತು ನಷ್ಟಗಳಿಂದ ನಿಮ್ಮ ಕಾರ್ ಇನ್ಶೂರೆನ್ಸ್ ನಿಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ ನೀವು ಗಂಟೆಗಟ್ಟಲೆ ವಾದ ಮಾಡುತ್ತಾ ಅಥವಾ ಜಗಳವಾಡುವ ಅಗತ್ಯವಿಲ್ಲ!

ಆಡ್-ಆನ್‌ಗಳೊಂದಿಗೆ ಉತ್ತಮ ಕವರೇಜ್ ಮತ್ತು ಪ್ರಯೋಜನಗಳನ್ನು ಪಡೆಯಿರಿ

ನೀವು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ದುಕೊಂಡರೆ, ಅದರೊಂದಿಗೆ ಝೀರೋ-ಡೆಪ್ರಿಸಿಯೇಷನ್ ಕವರ್, ರಿಟರ್ನ್ ಟು ಇನ್‌ವಾಯ್ಸ್ ಕವರ್‌, ಕನ್ಸ್ಯುಮೇಬಲ್ ಕವರ್ ಮತ್ತು ಬ್ರೇಕ್‌ಡೌನ್ ಅಸಿಸ್ಟೆನ್ಸ್ ಅಂತಹ ಆಡ್-ಆನ್‌ಗಳನ್ನು ಬಳಸಿಕೊಂಡು ನಿಮ್ಮ ಕಾರಿಗೆ ಉತ್ತಮ ಕವರೇಜ್ ಪಡೆಯುವ ಮೂಲಕ ನೀವು ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.

ಕಾನೂನಿನ ದೃಷ್ಟಿಯಲ್ಲಿ ಉತ್ತಮ ವ್ಯಕ್ತಿಯಾಗಿರಿ

ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ, ಎಲ್ಲಾ ಕಾರ್‌ಗಳು ಕನಿಷ್ಠ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಅನ್ನು ಹೊಂದಿರಬೇಕು. ಇದಿಲ್ಲದಿದ್ದರೆ, ನೀವು ಮೊದಲ ಅಪರಾಧಕ್ಕೆ ರೂ 2,000 ಮತ್ತು ಎರಡನೇ ಬಾರಿಗೆ ರೂ 4,000 ದಂಡವನ್ನು ಪಾವತಿಸಲು ಹೊಣೆಗಾರರಾಗಿರುತ್ತೀರಿ.

ಡೋರ್‌ಸ್ಟೆಪ್ ಪಿಕ್-ಅಪ್ ಮತ್ತು ಡ್ರಾಪ್ ಪಡೆಯಿರಿ

ನೀವು ಡಿಜಿಟ್‌ನ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ದುಕೊಂಡರೆ, ನಿಮ್ಮ ಕಾರನ್ನು ಕೆಲವು ಹಾನಿಗಳಿಂದ ರಿಪೇರಿ ಮಾಡಬೇಕಾಗಿ ಬಂದರೆ,  ಆಗ ನೀವು ಉಚಿತ ಡೋರ್‌ಸ್ಟೆಪ್ ಪಿಕ್ ಅಪ್ ಮತ್ತು ಡ್ರಾಪ್ ಪಡೆಯುವ ಮೂಲಕ ನೀವು ಸ್ವಲ್ಪ ಹೆಚ್ಚು ಪ್ರಯೋಜನ ಪಡೆಯುತ್ತೀರಿ.

ಸಮಯವನ್ನು ಉಳಿಸಿ!

ತಂತ್ರಜ್ಞಾನಕ್ಕೆ ಧನ್ಯವಾದಗಳು, ಡಿಜಿಟ್‌ನೊಂದಿಗೆ- ಕಾರ್ ಇನ್ಶೂರೆನ್ಸ್ ಖರೀದಿಸುವುದರಿಂದ ಹಿಡಿದು ಕ್ಲೈಮ್ ಮಾಡುವವರೆಗೆ ಎಲ್ಲವನ್ನೂ ಕೆಲವೇ ನಿಮಿಷಗಳಲ್ಲಿ ಆನ್‌ಲೈನ್‌ನಲ್ಲಿ ಮಾಡಬಹುದು. ಇದರರ್ಥ ನೀವು ಹಣವನ್ನು ಉಳಿಸುವುದು ಮಾತ್ರವಲ್ಲದೇ ಅದರೊಂದಿಗೆ ನಿಮ್ಮ ಅಮೂಲ್ಯ ಸಮಯವನ್ನು ಸಹ ಉಳಿಸುತ್ತೀರಿ!

ಯಾವ ಕಾರ್ ಇನ್ಶೂರೆನ್ಸ್ ಪಾಲಿಸಿ ನಿಮಗೆ ಉತ್ತಮವಾಗಿದೆ?

ಸರಿಯಾದ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದು ಹೇಗೆ?

ನಿಮ್ಮ ಕಾರಿಗೆ ಸರಿಯಾದ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ನೀವು ಗಮನಿಸಬೇಕಾದ ಅಂಶಗಳು ಇಲ್ಲಿವೆ.

ಖರೀದಿ ಪ್ರಕ್ರಿಯೆ

ಎಲ್ಲರೂ ಸಮಯಕ್ಕೆ ಕುಗ್ಗಿದ್ದಾರೆ. ಆದ್ದರಿಂದ, ಯಾವಾಗಲೂ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವುದರಲ್ಲಿ ದೀರ್ಘ, ತೊಡಕಿನ ಪ್ರಕ್ರಿಯೆಗಳು ಇರದಂತಹ ಕಾರ್ ಇನ್ಶೂರೆನ್ಸ್ ಅನ್ನು ನೋಡಿ. ಡಿಜಿಟ್ ನೊಂದಿಗೆ , ನೀವು ಆನ್‌ಲೈನ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ನಿಮ್ಮ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದು.

ಸರಿಯಾದ ಐಡಿವಿ

ನಿಮ್ಮ ಐಡಿವಿ, ಅಂದರೆ ನಿಮ್ಮ ಕಾರಿನ ಮಾರುಕಟ್ಟೆ ಮೌಲ್ಯವು ನಿಮ್ಮ ಕಾರ್ ಇನ್ಶೂರೆನ್ಸಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಏಕೆಂದರೆ ಇದು ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮತ್ತು ಕ್ಲೈಮ್‌ಗಳ ಸಮಯದಲ್ಲಿ ನಿಮ್ಮ ಕ್ಲೈಮ್ ಮೊತ್ತದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಡಿಜಿಟ್ ನೊಂದಿಗೆ , ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡುವ ಅವಕಾಶವನ್ನು ನಾವು ನಿಮಗೇ ನೀಡುತ್ತೇವೆ.

ಸೇವಾ ಪ್ರಯೋಜನಗಳು

ನಾವೆಲ್ಲರೂ ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಪ್ರೀತಿಸುತ್ತೇವೆ, ಅಲ್ಲವೇ? ಆದ್ದರಿಂದ, ನಿಮ್ಮ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆಮಾಡುವಲ್ಲಿ ನೀವು ನೋಡಬೇಕಾದ ವಿಷಯವೆಂದರೆ ಅದು ನೀಡುವ ಸೇವಾ ಪ್ರಯೋಜನಗಳನ್ನು. ಉದಾಹರಣೆಗೆ, ಡಿಜಿಟ್‌ನಲ್ಲಿ ನಮ್ಮ ಸ್ಟಾರ್ ಸೇವಾ ಪ್ರಯೋಜನಗಳಲ್ಲಿ ಒಂದಾದ ಡೋರ್‌ಸ್ಟೆಪ್ ಪಿಕ್-ಅಪ್ ಮತ್ತು ಡ್ರಾಪ್ ಪ್ರಯೋಜನ!

ಕ್ಲೈಮ್ ಪ್ರಕ್ರಿಯೆ

ನಾವು ಮೊದಲ ಸ್ಥಾನದಲ್ಲಿ ಕಾರ್ ಇನ್ಶೂರೆನ್ಸ್ ಅನ್ನು ಪಡೆಯಲು ಕ್ಲೈಮ್‌ಗಳೇ ಮುಖ್ಯ ಕಾರಣ! ಆದ್ದರಿಂದ, ನೀವು ಬಯಸಿದ ಕಾರ್ ಇನ್ಶೂರೆನ್ಸಿನ ಕ್ಲೈಮ್ ಪ್ರಕ್ರಿಯೆಯು, ಸರಳವಾದದ್ದು ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನೀವು ತೊಂದರೆಯಲ್ಲಿರುವಾಗ, ನೀವು ಬಯಸುವ  ಕೊನೆಯ ವಿಷಯವೆಂದರೆ, ನಿಮ್ಮ ಎಲ್ಲಾ ಸಮಯ ಮತ್ತು ಶಕ್ತಿಯನ್ನು, ಕೇವಲ ಕ್ಲೈಮ್ ಮಾಡಲು ಖರ್ಚು ಮಾಡುವುದು!

ಕ್ಲೈಮ್ ಸೆಟಲ್‌ಮೆಂಟ್‌ಗಳು

ಕ್ಲೈಮ್ ಸೆಟಲ್‌ಮೆಂಟ್‌ಗಳು ಮೂಲಭೂತವಾಗಿ ನಿಮ್ಮ ಪರಿಹಾರಗಳನ್ನು ಸರಿಯಾಗಿ ಪಡೆಯುವಂತೆ ಮಾಡುತ್ತವೆ. ಕಾರ್ ಇನ್ಶೂರೆನ್ಸಿನ ಪ್ರಮುಖ ಭಾಗವಾಗಿರುವ ಕ್ಲೈಮ್‌ಗಳಿಗಾಗಿ , ನಿಮ್ಮ ಅಪೇಕ್ಷಿತ ಇನ್ಶೂರೆನ್ಸ್ ಕಂಪನಿಯ ಕ್ಲೈಮ್ ಸೆಟಲ್‌ಮೆಂಟ್ ಅನುಪಾತವನ್ನು ಪರಿಶೀಲಿಸಿ.  ಇದರಿಂದ ಏನೇ ಆದರೂ , ನಿಮ್ಮ ಕ್ಲೈಮ್‌ಗಳು ಇತ್ಯರ್ಥವಾಗುತ್ತವೆ ಎಂಬ  ಭರವಸೆ ನಿಮಗಿರುತ್ತದೆ!

ಗ್ರಾಹಕ ಬೆಂಬಲ

ಬಹುಶಃ  ಇದನ್ನು ಅಂಡರ್‌ರೇಟ್ ಮಾಡಿರಬಹುದು, ಆದರೆ ಕಾರ್ ಇನ್ಶೂರೆನ್ಸ್ ವಿಷಯಕ್ಕೆ ಬಂದಾಗ ಗ್ರಾಹಕರ ಬೆಂಬಲವು ತುಂಬಾ ಮುಖ್ಯವಾದ ಅಂಶವಾಗಿದೆ. ಅದರ ಬಗ್ಗೆ ಯೋಚಿಸಿ. ಕಷ್ಟದ ಸಮಯದಲ್ಲಿ ನೀವು ಯಾರಿಗೆ ಕರೆ ಮಾಡುವಿರಿ? ಆದ್ದರಿಂದ, ನಿಮಗೆ 24x7 ಬೆಂಬಲವನ್ನು ನೀಡುವ ಕಾರ್ ಇನ್ಶೂರೆನ್ಸ್ ಪೂರೈಕೆದಾರರನ್ನು ನೋಡಿ. ಆದ್ದರಿಂದ ನೀವು ಯಾವಾಗಲೂ ಯಾರನ್ನಾದರೂ ಅವಲಂಬಿಸಬಹುದು!

ನೀವು ತಿಳಿದುಕೊಳ್ಳಬೇಕಾದ ಕಾರ್ ಇನ್ಶೂರೆನ್ಸಿನ ಪರಿಭಾಷೆಗಳು

ಸರಿಯಾದ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೇಗೆ ಆಯ್ಕೆ ಮಾಡುವುದು?

ಕಾರ್ ಪಾಲಿಸಿಯನ್ನು ಡಿಜಿಟ್ ನೊಂದಿಗೆ ಏಕೆ ರಿನೀವ್ ಮಾಡಿಸಬೇಕು?

ಕಾರ್ ಇನ್ಶೂರೆನ್ಸ್ ಪಾಲಿಸಿಯ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು

ಆನ್‌ಲೈನ್‌ನಲ್ಲಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಗೆ ಸಂಬಂಧಿಸಿದಂತೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಸಹಜವಾಗಿ, ಕಾರ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಲು ಅಥವಾ ಖರೀದಿಸಲು ಮಾತ್ರ ನೀವು ಹೆಚ್ಚಿನ ಪ್ರಶ್ನೆಗಳನ್ನು ಹೊಂದಿರಬಹುದು. ಆದ್ದರಿಂದ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ನಿಮ್ಮ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಿ!