ಫೋರ್ಡ್ ಆಸ್ಪೈರ್ ಇನ್ಶೂರೆನ್ಸ್

Get Instant Policy in Minutes*

Third-party premium has changed from 1st June. Renew now

ಫೋರ್ಡ್ ಆಸ್ಪೈರ್ ಕಾರ್ ಇನ್ಶೂರೆನ್ಸ್ ಬೆಲೆ ಮತ್ತು ತ್ವರಿತವಾಗಿ ಆನ್‌ಲೈನ್‌ ರಿನೀವಲ್

2018ರಲ್ಲಿ, ಫೋರ್ಡ್ ಇಂಡಿಯಾ ತನ್ನ ಸಬ್-4 ಮೀಟರ್ ಸೆಡಾನ್ ಆಸ್ಪೈರ್ ಅನ್ನು 2 ಪವರ್‌ಟ್ರೇನ್‌ಗಳು ಮತ್ತು 5 ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಿತು. ನಂತರ, ಫೋರ್ಡ್ ಕೆಲವು ಇತರ ಆಕರ್ಷಕ ಬಣ್ಣಗಳನ್ನು ಸೇರಿಸಿತು.

1.2-ಲೀಟರ್ ಪೆಟ್ರೋಲ್, 95 ಬಿಎಚ್‌ಪಿ ಗರಿಷ್ಠ ಪವರ್ ಮತ್ತು 119 ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದಕ್ಕೆ ವಿರುದ್ಧವಾಗಿ, 1.5-ಲೀಟರ್ ಆಸ್ಪೈರ್ ವೇರಿಯಂಟ್ 99 ಬಿಎಚ್‌ಪಿ ಪವರ್ ಅನ್ನು ಮತ್ತು 215 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡೂ ವರ್ಷನ್ ಗಳು ಐದು-ವೇಗದ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ನೊಂದಿಗೆ ಜೋಡಿಸಲ್ಪಟ್ಟಿವೆ.

ಎಕ್ಸ್ ಟೀರಿಯರ್ ಗೆ ಬಂದರೆ, ಆಸ್ಪೈರ್‌ ವಿಶಿಷ್ಟವಾದ ಹ್ಯಾಲೊಜೆನ್ ಲೈಟ್, ಸಿ-ಆಕಾರದ ಫಾಗ್ ಲ್ಯಾಂಪ್‌ಗಳು ಮತ್ತು 15-ಇಂಚಿನ ಮಲ್ಟಿ-ಸ್ಪೋಕ್ ಅಲಾಯ್ ಚಕ್ರಗಳೊಂದಿಗೆ ಬರುತ್ತದೆ. ಕಾರಿನೊಳಗೆ ನೀವು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಫೋರ್ಡ್‌ಪಾಸ್, ಅಟೋಮೇಟೆಡ್ ಕ್ಲೈಮೇಟ್ ಕಂಟ್ರೋಲ್, ಪುಶ್ ಸ್ಟಾರ್ಟ್ ಬಟನ್, ಡ್ಯುಯಲ್-ಟೋನ್ ಅಪ್ ಹೋಲ್ಸ್ಟರಿ ಇತ್ಯಾದಿಗಳನ್ನು ಕಾಣಬಹುದು.

ಮಾಡೆಲ್ ಗಳು 6 ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ರೇರ್ ಪಾರ್ಕಿಂಗ್ ಸೆನ್ಸರ್ ಗಳು, ಸ್ಪೀಡ್ ಅಲರ್ಟ್ ಸಿಸ್ಟಮ್ ಮತ್ತು ಸುರಕ್ಷತೆಗಾಗಿ ಸೀಟ್-ಬೆಲ್ಟ್ ರಿಮೈಂಡರ್‌ಗಳನ್ನು ಹೊಂದಿವೆ.

ಆದಾಗ್ಯೂ, ಅಂತಹ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು ಆಕಸ್ಮಿಕ ಡ್ಯಾಮೇಜ್ ಗಳಿಂದ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಲು ವಿಫಲವಾಗಿವೆ. ಆದ್ದರಿಂದ, ರಿಪೇರಿ/ಬದಲಿ ವೆಚ್ಚಗಳಿಂದ ದೂರವಿರಲು ಫೋರ್ಡ್ ಆಸ್ಪೈರ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಬುದ್ಧಿವಂತ ಆಯ್ಕೆಯಾಗಿದೆ.

ಈಗ, ಆನ್‌ಲೈನ್‌ನಲ್ಲಿ ಇನ್ಶೂರೆನ್ಸ್ ಆಯ್ಕೆಗಳನ್ನು ಹೋಲಿಸುವಾಗ, ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಕೆಲವು ಅಂಶಗಳನ್ನು ನಿರ್ಧರಿಸಬೇಕು. ನೀವು ಫೋರ್ಡ್ ಆಸ್ಪೈರ್ ಕಾರ್ ಇನ್ಶೂರೆನ್ಸ್ ಬೆಲೆಯನ್ನು ಪರಿಗಣಿಸಬೇಕು, ಲಭ್ಯವಿರುವ ಆ್ಯಡ್-ಆನ್ ಕವರ್‌ಗಳಿಗಾಗಿ ನೋಡಿ, ಇನ್ಶೂರೆನ್ಸ್ ಐಡಿವಿ ಮಾರ್ಪಾಡು ಮತ್ತು ಹೆಚ್ಚಿನದನ್ನು ಅನುಮತಿಸುತ್ತಾರೆಯೇ ಎಂದು ಖಚಿತಪಡಿಸಿ.

ಡಿಜಿಟ್ ಇನ್ಶೂರೆನ್ಸ್ ಇವೆಲ್ಲವನ್ನೂ ಒದಗಿಸುತ್ತದೆ.

ಫೋರ್ಡ್ ಆಸ್ಪೈರ್ ಇನ್ಶೂರೆನ್ಸ್ ಬೆಲೆ

ರಿಜಿಸ್ಟ್ರೇಷನ್ ದಿನಾಂಕ ಪ್ರೀಮಿಯಂ (ಓನ್ ಡ್ಯಾಮೇಜ್ ಪಾಲಿಸಿಗೆ)
ಜೂನ್-2021 8,987
ಜೂನ್-2020 6,158
ಜೂನ್-2019 5,872

** ಡಿಸ್‌ಕ್ಲೈಮರ್‌ - ಫೋರ್ಡ್ ಆಸ್ಪೈರ್ 1.5 ಟಿಡಿಸಿಐ ಟೈಟಾನಿಯಂ (ಎಂಟಿ) ಡೀಸೆಲ್ ಗೆ ಮಾಡಲಾದ ಪ್ರೀಮಿಯಂ ಕ್ಯಾಲ್ಕುಲೇಷನ್ 1498.0 ಜಿಎಸ್‌ಟಿ ಹೊರತುಪಡಿಸಲಾಗಿದೆ.

ನಗರ - ಬೆಂಗಳೂರು, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಜೂನ್, ಎನ್‌ಸಿಬಿ- 0%, ಯಾವುದೇ ಆ್ಯಡ್‌-ಆನ್‌ಗಳಿಲ್ಲ, ಪಾಲಿಸಿ ಎಕ್ಸ್ಪೈರ್ ಆಗಿಲ್ಲ & ಕಡಿಮೆ ಐಡಿವಿ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕುಲೇಷನ್ ಅನ್ನು ಮಾರ್ಚ್-2022ರಲ್ಲಿ ಮಾಡಲಾಗಿದೆ. ದಯವಿಟ್ಟು ನಿಮ್ಮ ವಾಹನದ ವಿವರಗಳನ್ನು ಮೇಲೆ ನಮೂದಿಸುವ ಮೂಲಕ ಅಂತಿಮ ಪ್ರೀಮಿಯಂ ಅನ್ನು ಚೆಕ್ ಮಾಡಿ.

ಫೋರ್ಡ್ ಆಸ್ಪೈರ್ ಕಾರ್ ಇನ್ಶೂರೆನ್ಸ್‌ ನಲ್ಲಿ ಏನೆಲ್ಲಾ ಕವರ್‌ ಆಗುತ್ತದೆ

ಡಿಜಿಟ್‌ನ ಫೋರ್ಡ್ ಆಸ್ಪೈರ್ ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?

ಫೋರ್ಡ್ ಆಸ್ಪೈರ್ ಗೆ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು

×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್‌ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವಾಹನದ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

ಎಷ್ಟು ವೇಗವಾಗಿ ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಸೆಟಲ್ ಆಗುತ್ತವೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಫೋರ್ಡ್ ಆಸ್ಪೈರ್‌ಗಾಗಿ ಕಾರು ಇನ್ಶೂರೆನ್ಸ್ ಕುರಿತು ಮತ್ತಷ್ಟು

ಭಾರತದಲ್ಲಿನ ಕಾಂಪ್ಯಾಕ್ಟ್ ಸೆಡಾನ್ ಸೆಗ್ಮೆಂಟ್ ಹಲವಾರು ಕಾರು ಮಾಡೆಲ್ ಗಳಿಂದ ಹೆಚ್ಚಿನ ಸಂಖ್ಯೆಗಳನ್ನು ಪಡೆಯುತ್ತಿದೆ, ಏಕೆಂದರೆ ಭಾರತೀಯರು ಈ ಸೆಗ್ಮೆಂಟ್ ಮೇಲೆ ಅಭಿರುಚಿಯನ್ನು ಹೊಂದಿದ್ದಾರೆ. ಬೇಡಿಕೆಯೂ ದೊಡ್ಡದಾಗಿದೆ. ಆದ್ದರಿಂದ, ಆ ನಿಟ್ಟಿನಲ್ಲಿ ಹೆಚ್ಚು ಗಮನ ಸೆಳೆಯುವ ಪ್ರಯತ್ನದಲ್ಲಿ ಫೋರ್ಡ್, ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್‌ ನೊಂದಿಗೆ ಸ್ಪರ್ಧಿಸಲು ಆಸ್ಪೈರ್ ಅನ್ನು ಅತ್ಯಂತ ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ 5 ಸೀಟರ್ ಕಾರು ಮಾನದಂಡಗಳನ್ನು ಸ್ಥಾಪಿಸಲೆಂದೇ ಮಾರುಕಟ್ಟೆಗೆ ಪ್ರವೇಶಿಸಿದೆ. ಇದು ಫೋರ್ಡ್ ಫಿಗೋ ಚಾಸಿಸ್ ಆಧಾರಿತ ಸೆಡಾನ್ ಆಗಿದೆ.

ಈ ಕಾರು ಫ್ಯಾಮಿಲಿ ಕಾರಿನ ಎಲ್ಲಾ ಗುಣಗಳನ್ನು ಪೂರೈಸುತ್ತದೆ ಮತ್ತು ಬೆಲೆ ₹.5.89 ಲಕ್ಷಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

ನೀವು ಫೋರ್ಡ್ ಆಸ್ಪೈರ್ ಅನ್ನು ಏಕೆ ಖರೀದಿಸಬೇಕು?

  • ತೀಕ್ಷ್ಣವಾದ ಹೊಳಪಾದ ಎಕ್ಸ್ ಟೀರಿಯರ್: ಕಾರಿನ ಮೂಗಿನಂಥ ಭಾಗ ಡೈಮಂಡ್ ಮೆಸ್ಡ್ ಗ್ರಿಲ್ ಅನ್ನು ಹೊಂದಿದೆ ಮತ್ತು ಫಾಗ್ ಲ್ಯಾಂಪ್ ಗಳು ದೊಡ್ಡ ಕ್ರೋಮ್ ಬ್ರಾಕೆಟ್‌ಗಳಿಂದ ಆವೃತವಾಗಿವೆ. ಹೆಡ್‌ಲ್ಯಾಂಪ್ ಸುತ್ತಾ ಕಪ್ಪು-ಹಿನ್ನೆಲೆಯ ಛಾಯೆಯನ್ನು ಹೊಂದಿದೆ. ಚೂಪಾದ ಶೋಲ್ಡರ್ ರೇಖೆಗಳು ಹಿಂಭಾಗದವರೆಗೆ ಮುಂದುವರಿಯುತ್ತವೆ ಮತ್ತು ಹಿಂದಿನ ಭಾಗದ ದೀಪಗಳ ನಡುವೆ ಕ್ರೋಮ್ ಪಟ್ಟಿಯನ್ನು ಹೊಂದಿದೆ. 15-ಇಂಚಿನ ಅಲಾಯ್ ಚಕ್ರಗಳು ಕಾರಿಗೆ ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಉತ್ತಮ ಸವಾರಿ ಸೌಕರ್ಯವನ್ನು ಒದಗಿಸುತ್ತದೆ.
  • ಇಂಟೀರಿಯರ್ ಮತ್ತು ಆಧುನಿಕ ವೈಶಿಷ್ಟ್ಯಗಳು: ಡ್ಯಾಶ್‌ಬೋರ್ಡ್ ಕೆಲವು ಕಾಸ್ಮೆಟಿಕ್ ಅಪ್ಡೇಟ್ ಗಳೊಂದಿಗೆ ಫೋರ್ಡ್‌ನ ಫ್ರೀಸ್ಟೈಲ್‌ ಅನ್ನು ಹೋಲುತ್ತದೆ. ಸಾಕಷ್ಟು ಶೇಖರಣಾ ಸ್ಥಳ ಮತ್ತು ಗ್ಲವ್ ಬಾಕ್ಸ್ ಗಳು, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು ಅದನ್ನು ಪ್ರಾಯೋಗಿಕವಾಗಿ ಕಾಣಿಸುತ್ತವೆ. ಅಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ರೈನ್-ಸೆನ್ಸಿಂಗ್ ವೈಪರ್‌ಗಳು ಸ್ಟಾಂಡರ್ಡ್ ಆಗಿ ಬರುತ್ತವೆ. ಹೆಚ್ಚಿನ ಟ್ರಿಮ್‌ಗಳು ಸೂಪರ್ ರೆಸ್ಪಾನ್ಸಿವ್ 6.5 ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಇತ್ತೀಚಿನ ಸಿಂಕ್ 3 ಸಿಸ್ಟಮ್‌ನಿಂದ ಬೆಂಬಲಿಸುವ ರಿಯರ್‌ವ್ಯೂ ಕ್ಯಾಮೆರಾದೊಂದಿಗೆ ಪಡೆಯುತ್ತವೆ. ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸ್ಟ್ಯಾಂಡರ್ಡ್ ಆಗಿ ಬರುತ್ತವೆ. ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಆರಾಮವನ್ನು ನೀಡುತ್ತದೆ.
  • ಶಕ್ತಿಯುತ ಎಂಜಿನ್‌ಗಳು ಮತ್ತು ಫ್ಯುಯಲ್ ಎಕಾನಮಿ: ಈ ಕಾರಿನಲ್ಲಿ ಮೂರು ಎಂಜಿನ್ ಆಯ್ಕೆಗಳು ಲಭ್ಯವಿದ್ದು, ಒಂದು 1.2 ಲೀಟರ್ 3 ಸಿಲಿಂಡರ್ ಡ್ರ್ಯಾಗನ್ ಸರಣಿಯ ಪೆಟ್ರೋಲ್ ಎಂಜಿನ್ 1194ಸಿಸಿ ಯೊಂದಿಗೆ 20.4 ಕೆಎಂಪಿಎಲ್ ಇಂಧನ ದಕ್ಷತೆಯನ್ನು ಹೊಂದಿದೆ. ಎರಡನೆಯದು ಹೆಚ್ಚು ಶಕ್ತಿಶಾಲಿ ಡ್ರ್ಯಾಗನ್ 1.5 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಗಿದ್ದು, ಇದು 19.4 ಕೆಎಂಪಿಎಲ್ ಫ್ಯುಯಲ್ ಎಕಾನಮಿಯನ್ನು ಹೊಂದಿದೆ. ಡೀಸೆಲ್ ವೇರಿಯಂಟ್ ಗಾಗಿ ಈ ಕಾರು 1.5 ಲೀಟರ್ ಎಂಜಿನ್ ಅನ್ನು ನೀಡುತ್ತದೆ ಮತ್ತು 26.1 ಕೆಎಂಪಿಎಲ್ ನಷ್ಟು ಸೆಗ್ಮೆಂಟ್ ನ ಅತ್ಯುತ್ತಮ ಇಂಧನ ದಕ್ಷತೆಯನ್ನು ಹೊಂದಿದೆ.
  • ಮೋಜಿನ ಡ್ರೈವ್: ಎಲ್ಲಾ ಫೋರ್ಡ್ ಕಾರುಗಳು ಮೋಜಿನ ಡ್ರೈವಿಂಗ್ ಒದಗಿಸುತ್ತವೆ, ಇದು ಈ ಕಾರಿನ ಅತ್ಯುತ್ತಮ ಅಂಶವಾಗಿ. ಸವಾರಿ ಮತ್ತು ನಿರ್ವಹಣೆ ವಿಭಾಗದಲ್ಲಿ ಆಸ್ಪೈರ್ ನಿಜವಾಗಿಯೂ ಉತ್ತಮವಾಗಿದೆ. ಸ್ಟೀರಿಂಗ್ ಸೂಕ್ತವಾದ ತೂಕವನ್ನು ಹೊಂದಿದೆ ಮತ್ತು ತಿರುವುಗಳಲ್ಲಿ ತುಂಬಾ ಆಹ್ಲಾದ ನೀಡುತ್ತದೆ.
  • ಉತ್ತಮ ಸಸ್ಪೆನ್ಷನ್: ಈ ಕಾರಿನಲ್ಲಿ ಸವಾರಿ ಅದ್ಭುತವಾಗಿದೆ, ನೀವು ಒರಟು ಪ್ರದೇಶಗಳು ಮತ್ತು ರಸ್ತೆಗಳ ಮೇಲೆ ಬಲ ಹೊಂದಿದೆ ಮತ್ತು ಸಸ್ಪೆನ್ಷನ್ ಎಲ್ಲವನ್ನೂ ಸುಲಭಗೊಳಿಸುತ್ತದೆ.

ಫೋರ್ಡ್ ಆಸ್ಪೈರ್‌ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?

ಈ ಸುಂದರ ಕಾರು ನಿಮ್ಮನ್ನು ತಕ್ಷಣವೇ ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ. ಆದ್ದರಿಂದ ಅದಕ್ಕೆ ಇನ್ಶೂರೆನ್ಸ್ ಮಾಡಿಸುವುದು ಮತ್ತು ಅದನ್ನು ಚೆನ್ನಾಗಿ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ. ಫೋರ್ಡ್ ಆಸ್ಪೈರ್ ಕಾರ್ ಇನ್ಶೂರೆನ್ಸ್ ನಿಮಗೆ ಹೇಗೆ ಸಹಾಯಕವಾಗಬಹುದು ಎಂಬುದನ್ನು ಚರ್ಚಿಸೋಣ.

  • ಕಾನೂನುಬದ್ಧವಾಗಿ ಡ್ರೈವ್ ಮಾಡಿ ಮತ್ತು ಭಾರೀ ಪೆನಲ್ಟಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ: ಫೋರ್ಡ್ ಆಸ್ಪೈರ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ಭಾರತೀಯ ರಸ್ತೆಗಳಲ್ಲಿ ಕಾನೂನುಬದ್ಧವಾಗಿ ಡ್ರೈವ್ ಮಾಡಲು ಅನುಮತಿಯಾಗಿ ಕಾರ್ಯನಿರ್ವಹಿಸುತ್ತದೆ. ಇನ್ಶೂರೆನ್ಸ್ ಪಾಲಿಸಿ ಇಲ್ಲದಿದ್ದರೆ, ನಿಮಗೆ ₹2,000 ದಂಡ ವಿಧಿಸಬಹುದು ಮತ್ತು ನಿಮ್ಮ ಲೈಸೆನ್ಸ್ ಅನ್ನು ರದ್ದುಗೊಳಿಸಬಹುದು. ಅಪರಾಧದ ತೀವ್ರತೆಯ ಪ್ರಕಾರ, ನಿಮ್ಮನ್ನು 3 ತಿಂಗಳ ಜೈಲು ಶಿಕ್ಷೆ ವಿಧಿಸಬಹುದು.

ಇನ್ಶೂರೆನ್ಸ್ ಇಲ್ಲದೆ ವಾಹನ ಡ್ರೈವಿಂಗ್ ಮಾಡಿದರೆ ವಿಧಿಸಬಹುದಾದ ದಂಡದ ಬಗ್ಗೆ ಇನ್ನಷ್ಟು ತಿಳಿಯಿರಿ.

  • ನಿಮ್ಮ ಥರ್ಡ್ ಪಾರ್ಟಿ ಲಯಬಿಲಿಟಿ ಕವರ್ ಆಗುವಂತೆ ನೋಡಿಕೊಳ್ಳಿ: ಅಪಘಾತದ ಸಮಯದಲ್ಲಿ ನೀವು ಯಾರನ್ನಾದರೂ ಗಾಯಗೊಳಿಸಿದರೆ ಅಥವಾ ಅವರ ಪ್ರಾಪರ್ಟಿಯನ್ನು ಡ್ಯಾಮೇಜ್ ಗೊಳಿಸಿದರೆ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ನಿಮ್ಮನ್ನು ಕವರ್ ಮಾಡುತ್ತದೆ. ಅವರ ಕ್ಲೈಮ್ ಅಮೌಂಟ್ ಅನ್ನು ನಿಮ್ಮ ಇನ್ಶೂರರ್ ಪಾವತಿಸುತ್ತಾರೆ. ಆದರೆ ಈ ಪಾಲಿಸಿಯು ನಿಮ್ಮ ಸ್ವಂತ ಕಾರಿನ ಡ್ಯಾಮೇಜ್ ಅನ್ನು ಕವರ್ ಮಾಡುವುದಿಲ್ಲ.
  • ಕಾಂಪ್ರೆಹೆನ್ಸಿವ್ ಪಾಲಿಸಿಯೊಂದಿಗೆ ನಿಮ್ಮ ಕಾರನ್ನು ರಕ್ಷಿಸಿ: ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಎರಡು ಘಟಕಗಳೊಂದಿಗೆ ಬರುತ್ತದೆ. ಈ ಪಾಲಿಸಿಯೊಂದಿಗೆ ನೀವು ನಿಮ್ಮ ಸ್ವಂತ ಕಾರಿಗೆ ಮತ್ತು ಥರ್ಡ್ ಪಾರ್ಟಿ ಡ್ಯಾಮೇಜ್ ಗಳನ್ನು ರಿಕವರ್ ಮಾಡಿಕೊಳ್ಳಬಹುದು. ಕಾಂಪ್ರೆಹೆನ್ಸಿವ್ ಪ್ಲಾನ್ ಕೇವಲ ರಸ್ತೆ ಅಪಘಾತಕ್ಕಿಂತ ಹೆಚ್ಚಿನದನ್ನು ಕವರ್ ಮಾಡುತ್ತದೆ. ಚಂಡಮಾರುತ, ಭೂಕಂಪ, ಪ್ರವಾಹ, ಕಳ್ಳತನ, ಗಲಭೆ ಇತ್ಯಾದಿಗಳಿಂದಾದ ಡ್ಯಾಮೇಜ್ ಗಳಿಗೆ ನೀವು ಕ್ಲೈಮ್ ಮಾಡಬಹುದು.
  • ಆ್ಯಡ್-ಆನ್‌ಗಳೊಂದಿಗೆ ಹೆಚ್ಚಿನ ರಕ್ಷಣೆ ಪಡೆಯಿರಿ: ಆ್ಯಡ್-ಆನ್‌ಗಳು ಕಾಂಪ್ರೆಹೆನ್ಸಿವ್ ಕವರ್‌ನೊಂದಿಗೆ ತಮ್ಮದೇ ಆದ ಹೆಚ್ಚುವರಿ ವೆಚ್ಚದಲ್ಲಿ ಬರುತ್ತವೆ. ಕೆಲವು ಸಂದರ್ಭಗಳಲ್ಲಿ ಕವರ್ ವ್ಯಾಪ್ತಿಯನ್ನು ವಿಸ್ತರಿಸಲು ಅವುಗಳನ್ನು ವಿನ್ಯಾಸಗೊಳಿಸಲಾಗಿದೆ. ಝೀರೋ ಡೆಪ್ರಿಸಿಯೇಷನ್ ಆ್ಯಡ್-ಆನ್‌ನಲ್ಲಿ ಇನ್ಶೂರೆನ್ಸ್ ಕಂಪನಿಯು ನಿಮ್ಮ ಕ್ಲೈಮ್‌ನ ವಿರುದ್ಧ ಪರಿಗಣನೆಯಲ್ಲಿರುವ ಯಾವುದೇ ಕಾರ್ ಘಟಕದ ಡೆಪ್ರಿಸಿಯೇಷನ್ ವ್ಯಾಲ್ಯೂ ಅನ್ನು ತೆಗೆದುಕೊಳ್ಳುವುದಿಲ್ಲ. ಎಂಜಿನ್ ಆಂಡ್ ಗೇರ್‌ಬಾಕ್ಸ್ ಪ್ರೊಟೆಕ್ಷನ್, ಟೈರ್ ಪ್ರೊಟೆಕ್ಷನ್, ರಿಟರ್ನ್ ಟು ಇನ್ ವಾಯ್ಸ್ ಮುಂತಾದ ಇತರ ಆ್ಯಡ್-ಆನ್‌ ಆಯ್ಕೆಗಳಿವೆ.

ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಫೋರ್ಡ್ ಆಸ್ಪೈರ್ ಕಾರ್ ಇನ್ಶೂರೆನ್ಸ್ ಪಾಲಿಸಿಗಾಗಿ ಡಿಜಿಟ್ ಅನ್ನು ಏಕೆ ಆರಿಸಬೇಕು?

ಕೈಗೆಟುಕುವ ಕಾರ್ ಇನ್ಶೂರೆನ್ಸ್ ಪಾಲಿಸಿಗಳೊಂದಿಗೆ ಡಿಜಿಟ್ ಹಲವಾರು ಲಾಭದಾಯಕ ಕೊಡುಗೆಗಳನ್ನು ನೀಡುತ್ತದೆ.

ನಾವು ಅವುಗಳನ್ನು ನೋಡೋಣ.

  • ಅನುಕೂಲಕರ ಪಾಲಿಸಿ ಪ್ಲಾನ್ ಗಳು - ಡಿಜಿಟ್ ವೈವಿಧ್ಯಮಯ ಅವಶ್ಯಕತೆಗಳನ್ನು ಪೂರೈಸಲು ಸೂಕ್ತವಾದ ಇನ್ಶೂರೆನ್ಸ್ ಪಾಲಿಸಿಗಳನ್ನು ಸಿದ್ಧಪಡಿಸುತ್ತದೆ.
  • ಥರ್ಡ್-ಪಾರ್ಟಿ ರಕ್ಷಣೆ - ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ವಾಹನವು ಮತ್ತೊಂದು ಕಾರು, ವ್ಯಕ್ತಿ ಅಥವಾ ಪ್ರಾಪರ್ಟಿಗೆ ಉಂಟುಮಾಡುವ ಡ್ಯಾಮೇಜ್ ಅನ್ನು ಕವರ್ ಮಾಡುತ್ತದೆ. 1988ರ ಮೋಟಾರ್ ವೆಹಿಕಲ್ಸ್ ಆಕ್ಟ್ ಪ್ರಕಾರ ಭಾರತೀಯ ರಸ್ತೆಗಳಲ್ಲಿ ಸಂಚರಿಸುವ ಎಲ್ಲಾ ವಾಹನಗಳಿಗೆ ಇದು ಕಡ್ಡಾಯವಾಗಿದೆ. ಬೇಸಿಕ್ ಆದರೂ, ಈ ಪಾಲಿಸಿಯು ಅಪರಾಧದ ತೀವ್ರತೆಯ ಆಧಾರದ ಮೇಲೆ ₹ 2,000 ಅಥವಾ ₹ 4,000ದಷ್ಟು ಭಾರೀ ದಂಡದಿಂದ ನಿಮ್ಮನ್ನು ರಕ್ಷಿಸಬಹುದು. ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ರದ್ದುಗೊಳಿಸಲೂಬಹುದು.
  • ಕಾಂಪ್ರೆಹೆನ್ಸಿವ್ ರಕ್ಷಣೆ - ಹೆಸರೇ ಸೂಚಿಸುವಂತೆ, ಇದು ಲಭ್ಯವಿರುವ ಅತ್ಯಂತ ವಿಸ್ತಾರವಾದ ಇನ್ಶೂರೆನ್ಸ್ ಪ್ಲಾನ್ ಆಗಿದೆ. ಇದು ಥರ್ಡ್ ಪಾರ್ಟಿ ಮತ್ತು ಓನ್ ಡ್ಯಾಮೇಜ್ ಪ್ರೊಟೆಕ್ಷನ್ ಎರಡನ್ನೂ ಕವರ್ ಮಾಡುತ್ತದೆ. ಆದ್ದರಿಂದ, ಥರ್ಡ್ ಪಾರ್ಟಿಗೆ ಡಿಕ್ಕಿ ಹೊಡೆಯುವಾಗ, ನಿಮ್ಮ ಆಸ್ಪೈರ್ ಡ್ಯಾಮೇಜ್ ಗೊಳಗಾದರೆ, ಚಿಂತಿಸಬೇಡಿ. ಫೋರ್ಡ್ ಆಸ್ಪೈರ್‌ಗೆ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ನಷ್ಟವನ್ನು ರಿಇಂಬರ್ಸ್ ಮಾಡುತ್ತದೆ. ವಾಸ್ತವವಾಗಿ, ನೈಸರ್ಗಿಕ ವಿಪತ್ತುಗಳು, ಬೆಂಕಿ, ಕಳ್ಳತನ ಅಥವಾ ಇತರ ಅಪಾಯಗಳಿಂದ ಡ್ಯಾಮೇಜ್ ಉಂಟಾಗಿದ್ದರೆ, ಕಾಂಪ್ರೆಹೆನ್ಸಿವ್ ಪಾಲಿಸಿಯು ಎಲ್ಲವನ್ನೂ ಕವರ್ ಮಾಡುತ್ತದೆ.

ಸೂಚನೆ: ಥರ್ಡ್ ಪಾರ್ಟಿ ಪಾಲಿಸಿಯು ಓನ್ ಡ್ಯಾಮೇಜ್ ಪ್ರೊಟೆಕ್ಷ್ ಅನ್ನು ಒದಗಿಸುವುದಿಲ್ಲ. ಆದ್ದರಿಂದ, ಹಣಕಾಸಿನ ನೆರವನ್ನು ಬಳಸಿಕೊಳ್ಳಲು, ನೀವು ಅದನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಬಹುದು.

  • ಆನ್‌ಲೈನ್‌ನಲ್ಲಿ ಪಾಲಿಸಿಗಳನ್ನು ಖರೀದಿಸಿ ಅಥವಾ ರಿನೀವ್ ಮಾಡಿ - ತಡೆರಹಿತ ಅನುಭವವನ್ನು ಖಚಿತಪಡಿಸಿಕೊಳ್ಳಲು ಡಿಜಿಟ್ ಆನ್‌ಲೈನ್‌ನಲ್ಲಿ ಫೋರ್ಡ್ ಆಸ್ಪೈರ್ ಕಾರ್ ಇನ್ಶೂರೆನ್ಸ್ ಅನ್ನು ನೀಡುತ್ತದೆ. ಪ್ರೊಸೆಸ್ ಅನ್ನು ಪ್ರಾರಂಭಿಸಲು ನೀವು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಈಗ, ಫೋರ್ಡ್ ಆಸ್ಪೈರ್ ಕಾರ್ ಇನ್ಶೂರೆನ್ಸ್ ರಿನೀವಲ್ ಗಾಗಿ, ನೀವು ನಿಮ್ಮ ಅಸ್ತಿತ್ವದಲ್ಲಿರುವ ಖಾತೆಗಳಿಗೆ ಸೈನ್ ಇನ್ ಮಾಡಬೇಕು.
  • ಹೆಚ್ಚಿನ ಕ್ಲೈಮ್ ಸೆಟಲ್ಮೆಂಟ್ ಅನುಪಾತ - ಡಿಜಿಟ್ ತನ್ನ ಗ್ರಾಹಕರು ಸಂಗ್ರಹಿಸಿದ ಗರಿಷ್ಠ ಸಂಖ್ಯೆಯ ಕ್ಲೈಮ್‌ಗಳನ್ನು ಇತ್ಯರ್ಥಪಡಿಸುವ ಖ್ಯಾತಿಯನ್ನು ಹೊಂದಿದೆ. ಹೆಚ್ಚುವರಿಯಾಗಿ, ಇನ್ಶೂರರ್ ನಿಮಗೆ ತೊಂದರೆ-ಮುಕ್ತ ಕ್ಲೈಮ್‌ಗಳನ್ನು ಫೈಲ್ ಮಾಡಲು ಸಹಾಯ ಮಾಡಲು ಸ್ವಯಂ-ತಪಾಸಣಾ ಪ್ರೊಸೆಸ್ ಅನ್ನು ನೀಡುತ್ತಾರೆ. ನಿಮ್ಮ ರಿಜಿಸ್ಟರ್ಡ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆ ಲಿಂಕ್ ಪಡೆಯಲು 1800 258 5956ಗೆ ಕರೆ ಮಾಡಿ. ನಂತರ, ಚಿತ್ರಗಳನ್ನು ಲಿಂಕ್‌ಗೆ ಲಗತ್ತಿಸಿ ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ ರಿಇಂಬರ್ಸ್ ಮೆಂಟ್ ಅಥವಾ ಕ್ಯಾಶ್ ಲೆಸ್ ನಡುವೆ ಆಯ್ಕೆಮಾಡಿ.
  • ಐಡಿವಿ(IDV) ಮಾರ್ಪಾಡು - ಡಿಜಿಟ್ ತನ್ನ ಗ್ರಾಹಕರು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅನ್ನು ಕಸ್ಟಮೈಸ್ ಮಾಡಲು ಅನುಮತಿಸುತ್ತದೆ. ಆದ್ದರಿಂದ, ನೀವು ಹೆಚ್ಚಿನ ಐಡಿವಿ ಅನ್ನು ಆರಿಸಿದರೆ, ಕಳ್ಳತನ ಅಥವಾ ಸರಿಪಡಿಸಲಾಗದ ಡ್ಯಾಮೇಜ್ ಸಂದರ್ಭದಲ್ಲಿ ನೀವು ಹೆಚ್ಚಿನ ಪರಿಹಾರವನ್ನು ಪಡೆಯುತ್ತೀರಿ.
  • ಆ್ಯಡ್-ಆನ್‌ಗಳ ವ್ಯಾಪಕ ಶ್ರೇಣಿ - ನೀವು ಫೋರ್ಡ್ ಆಸ್ಪೈರ್‌ಗಾಗಿ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ, ಆ್ಯಡ್-ಆನ್ ಕವರ್‌ಗಳನ್ನು ಸೇರಿಸುವ ಮೂಲಕ ನಿಮ್ಮ ಪಾಲಿಸಿಯನ್ನು ನೀವು ಹೆಚ್ಚಿಸಬಹುದು. ಲಭ್ಯವಿರುವ ಆಯ್ಕೆಗಳು ಇಲ್ಲಿವೆ.

ಸೂಚನೆ: ಫೋರ್ಡ್ ಆಸ್ಪೈರ್ ಕಾರ್ ಇನ್ಶೂರೆನ್ಸ್ ರಿನೀವಲ್ ಬೆಲೆಯನ್ನು ಹೆಚ್ಚಿಸುವ ಮೂಲಕ ನವೀಕರಣದ ನಂತರ ನೀವು ಆ್ಯಡ್-ಆನ್ ಕವರ್‌ಗಳನ್ನು ಮುಂದುವರಿಸಬಹುದು.

  • ಪ್ರೀಮಿಯಂ ಮೇಲಿನ ಡಿಸ್ಕೌಂಟುಗಳು - ನೀವು ಕ್ಲೈಮ್-ಮುಕ್ತ ವರ್ಷವನ್ನು ಪೂರ್ಣಗೊಳಿಸಿದ ನಂತರ, ಡಿಜಿಟ್ ನಿಮಗೆ ನೋ ಕ್ಲೈಮ್ ಬೋನಸ್ ಅನ್ನು ನೀಡುತ್ತದೆ. ಈ ಬೋನಸ್, ರಕ್ಷಣೆಯಲ್ಲಿ ರಾಜಿ ಮಾಡಿಕೊಳ್ಳದೆ ಪ್ರೀಮಿಯಂ ಮೇಲೆ ಡಿಸ್ಕೌಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಎನ್ ಸಿ ಬಿ 20% ರಿಂದ 50% ವರೆಗೆ ಇರುತ್ತದೆ ಮತ್ತು ಕ್ಲೈಮ್ ಪಡೆಯದ ವರ್ಷಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ.
  • ಕ್ವಿಕ್ ಕಸ್ಟಮರ್ ಕೇರ್ - ಡಿಜಿಟ್‌ನಲ್ಲಿ ಯಾವುದೇ ಸಮಯದಲ್ಲಿ ನಿಮ್ಮ ಎಲ್ಲಾ ಇನ್ಶೂರೆನ್ಸ್-ಸಂಬಂಧಿತ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಿರಿ. ಡಿಜಿಟ್‌ನ ಗ್ರಾಹಕ ಆರೈಕೆ ತಂಡವು 24X7 ಲಭ್ಯವಿದ್ದು, ತ್ವರಿತ ಪರಿಹಾರಗಳನ್ನು ಒದಗಿಸುತ್ತದೆ.
  • ಗ್ಯಾರೇಜ್‌ಗಳ ವ್ಯಾಪಕ ನೆಟ್‌ವರ್ಕ್ - 6000ಕ್ಕೂ ಹೆಚ್ಚು ಡಿಜಿಟ್ ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳು ದೇಶದ ಮೂಲೆ ಮೂಲೆಯಲ್ಲಿ ಲಭ್ಯವಿರುವುದರಿಂದ ಉದ್ವೇಗ-ಮುಕ್ತರಾಗಿ ಪ್ರವಾಸಕ್ಕೆ ಹೋಗಬಹುದು. ಯಾವುದೇ ಗ್ಯಾರೇಜ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ಕ್ಯಾಶ್ ಲೆಸ್ ದುರಸ್ತಿಯನ್ನು ಆರಿಸಿಕೊಳ್ಳಿ.

ನಿಮ್ಮ ಕಾರು ದೇಶದೊಳಗೆ ಎಲ್ಲಿಯಾದರೂ ಕೆಟ್ಟುಹೋದರೂ ಸಹ, ತೊಂದರೆಗಳನ್ನು ತಪ್ಪಿಸಲು ನಿಮ್ಮ ಫೋರ್ಡ್ ಆಸ್ಪೈರ್ ಕಾರ್ ಇನ್ಶೂರೆನ್ಸ್ ವಿರುದ್ಧ ಆನ್-ಸೈಟ್ ಪಿಕ್-ಅಪ್ ಸೌಲಭ್ಯವನ್ನು ನೀವು ಆರಿಸಿಕೊಳ್ಳಬಹುದು. ಹೆಚ್ಚುವರಿಯಾಗಿ, ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್ ಗಳನ್ನು ನೀಡುವ ಮೂಲಕ ಡಿಜಿಟ್ ತನ್ನ ಗ್ರಾಹಕರಿಗೆ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅದೇನೇ ಇದ್ದರೂ, ಕಡಿಮೆ ಪ್ರೀಮಿಯಂ ಸಂಪೂರ್ಣ ಆರ್ಥಿಕ ರಕ್ಷಣೆಯನ್ನು ಖಾತರಿಪಡಿಸುವುದಿಲ್ಲ. ಆದ್ದರಿಂದ, ಆಯ್ಕೆ ಮಾಡುವ ಮೊದಲು, ವಿಷಯದ ಬಗ್ಗೆ ಸ್ಪಷ್ಟತೆ ಪಡೆಯಲು ನೀವು ಇನ್ಶೂರೆನ್ಸ್ ಕಂಪನಿಯನ್ನು ಸಂಪರ್ಕಿಸಬೇಕು.

ಫೋರ್ಡ್ ಆಸ್ಪೈರ್- ವೇರಿಯಂಟ್ ಗಳು ಮತ್ತು ಎಕ್ಸ್-ಶೂರೂಮ್ ಬೆಲೆ

ವೇರಿಯಂಟ್ ಗಳು ಎಕ್ಸ್-ಶೋರೂಮ್ ಬೆಲೆ(ನಗರಗಳಿಗನುಗುಣವಾಗಿ ಬಲಾಗಬಹುದು)
ಆಂಬಿಯೆಂಟೆ 1194 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 20.4 ಕೆಎಂಪಿಎಲ್ ₹ 5.88 ಲಕ್ಷ
ಟ್ರೆಂಡ್ 1194 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 20.4 ಕೆಎಂಪಿಎಲ್ ₹ 6.53 ಲಕ್ಷ
ಆಂಬಿಯೆಂಟೆ ಸಿಎನ್‌ಜಿ 1194 ಸಿಸಿ, ಮ್ಯಾನ್ಯುವಲ್, ಸಿಎನ್‌ಜಿ, 20.4 ಕಿಮೀ/ಕೆಜಿ ₹ 6.6 ಲಕ್ಷ
ಟ್ರೆಂಡ್ ಪ್ಲಸ್1194 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 20.4 ಕೆಎಂಪಿಎಲ್ ₹ 6.87 ಲಕ್ಷ
ಆಂಬಿಯೆಂಟೆ ಡೀಸೆಲ್ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 26.1 ಕೆಎಂಪಿಎಲ್ ₹ 6.89 ಲಕ್ಷ
ಟೈಟಾನಿಯಂ 1194 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 19.4 ಕೆಎಂಪಿಎಲ್ ₹ 7.27 ಲಕ್ಷ
ಟ್ರೆಂಡ್ ಡೀಸೆಲ್ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 26.1 ಕೆಎಂಪಿಎಲ್ ₹ 7.27 ಲಕ್ಷ
ಟೈಟಾನಿಯಂ ಬ್ಲೂ1194 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 20.4 ಕೆಎಂಪಿಎಲ್ ₹ 7.52 ಲಕ್ಷ
ಟ್ರೆಂಡ್ ಪ್ಲಸ್ ಸಿಎನ್‌ಜಿ 1194 ಸಿಸಿ, ಮ್ಯಾನ್ಯುವಲ್, ಸಿಎನ್‌ಜಿ, 20.4 ಕಿಮೀ/ಕೆಜಿ ₹ 7.59 ಲಕ್ಷ
ಟ್ರೆಂಡ್ ಪ್ಲಸ್ ಡೀಸೆಲ್ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 26.1 ಕೆಎಂಪಿಎಲ್ ₹ 7.67 ಲಕ್ಷ
ಟೈಟಾನಿಯಂ ಪ್ಲಸ್ 1194 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 19.4 ಕೆಎಂಪಿಎಲ್ ₹ 7.72 ಲಕ್ಷ
ಟೈಟಾನಿಯಂ ಡೀಸೆಲ್ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 26.1 ಕೆಎಂಪಿಎಲ್ ₹ 8.07 ಲಕ್ಷ
ಟೈಟಾನಿಯಂ ಬ್ಲೂ ಡೀಸೆಲ್ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 25.5 ಕೆಎಂಪಿಎಲ್ ₹ 8.32 ಲಕ್ಷ
ಟೈಟಾನಿಯಂ ಪ್ಲಸ್ ಡೀಸೆಲ್ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 26.1 ಕೆಎಂಪಿಎಲ್ ₹ 8.52 ಲಕ್ಷ
ಟೈಟಾನಿಯಂ ಅಟೋಮ್ಯಾಟಿಕ್ 1497 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್, 16.3 ಕೆಎಂಪಿಎಲ್ ₹ 9.0 ಲಕ್ಷ

ಭಾರತದಲ್ಲಿ ಫೋರ್ಡ್ ಆಸ್ಪೈರ್ ಕಾರ್ ಇನ್ಶೂರೆನ್ಸ್ ಕುರಿತು ಪದೇಪದೇ ಕೇಳಲಾದ ಪ್ರಶ್ನೆಗಳು

ಡಿಜಿಟ್ ಒದಗಿಸುವ ಯಾವುದೇ ಹೆಚ್ಚು ಪಾಲಿಸಿ ಆಯ್ಕೆಗಳಿವೆಯೇ?

ಇಲ್ಲ, ಡಿಜಿಟ್ ಥರ್ಡ್ ಪಾರ್ಟಿ ಮತ್ತು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾತ್ರ ನೀಡುತ್ತದೆ.

ನಾನು ಥರ್ಡ್-ಪಾರ್ಟಿ ಫೋರ್ಡ್ ಆಸ್ಪೈರ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದರೆ, ನಾನು ಡೋರ್ ಸ್ಟೆಪ್ ಕಾರ್ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯವನ್ನು ಆರಿಸಿಕೊಳ್ಳಬಹುದೇ?

ಇಲ್ಲ, ಡೋರ್‌ಸ್ಟೆಪ್ ಕಾರ್ ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯವು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಗೆ ಮಾತ್ರ ಲಭ್ಯವಿದೆ.