Third-party premium has changed from 1st June. Renew now
ಕಾರ್ ಇನ್ಶೂರೆನ್ಸ್ ಅಲ್ಲಿ ಐಡಿವಿ (IDV)ಬಗ್ಗೆ ಎಲ್ಲಾ ಮಾಹಿತಿ
ಐಡಿವಿಯ ಫುಲ್ ಫಾರ್ಮ್ ಏನು?
ಇನ್ಶೂರೆನ್ಸ್ ನಲ್ಲಿ ಕೆಲವು ಕಷ್ಟಕರ ಪದಗಳಿವೆ ಎಂದು ನಮಗೆ ತಿಳಿದಿದೆ, ಆದರೆ ಈ ಕೆಲವು ಪದಗಳಿಂದ ಪರಿಚಿತವಾಗುವುದು ಅತ್ಯಗತ್ಯ ಇಂತದ್ದೇ ಒಂದು ಪದವಾಗಿದೆ ಐಡಿವಿ. ಐಡಿವಿ (IDV)ಎಂದರೆ ‘ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ’.
ಕಾರ್ ಇನ್ಶೂರೆನ್ಸ್ ನಲ್ಲಿ ಐಡಿವಿ (IDV)ಎಂದರೇನು?
ಕಾರ್ ಇನ್ಶೂರೆನ್ಸ್ ನಲ್ಲಿ ಐಡಿವಿ (IDV)(ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ) ಎಂದರೆ ಗೊಂದಲದ್ದೇನು ಅಲ್ಲ ಆದರೆ, ನಿಮ್ಮ ಕಾರಿನ ಮಾರುಕಟ್ಟೆ ಬೆಲೆಯ ಬಗ್ಗೆ ಹೇಳುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇದು ಇವತ್ತಿನ ಮಾರುಕಟ್ಟೆಯಲ್ಲಿ ನಿಮ್ಮ ಕಾರಿಗೆ ಸಿಗಬೇಕಾದ ಬೆಲೆಯಾಗಿದೆ.
ಕಾರ್ ಇನ್ಶೂರೆನ್ಸ್ ನ ಈ ಐಡಿವಿ (IDV)ನಿಮ್ಮ ಕಾರ್ ಇನ್ಸೂರರಿಗೆ, ಅಂದರೆ ನಮಗೆ ಕ್ಲೈಮ್ ಪಾವತಿ ಸಮಯದಲ್ಲಿ ನಿಮ್ಮ ಸರಿಯಾದ ಕ್ಲೈಮ್ ಮೊತ್ತವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಅದರ ಜೊತೆ, ನಿಮ್ಮ ಕಾರ್ ಇನ್ಶೂರೆನ್ಸ್ ಮೇಲಿನ ಸೂಕ್ತ ಪ್ರೀಮಿಯಮ್ ಬೆಲೆಯನ್ನು ನಿರ್ಧರಿಸಲೂ ನಮಗೆ ಸಹಾಯ ಮಾಡುತ್ತದೆ.
ಐಡಿವಿ (IDV)ಯಾಕೆ ಅಗತ್ಯ?
ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ನಿಮ್ಮ ನೆಚ್ಚಿನ ಕಾರ್ ಇನ್ಶೂರೆನ್ಸಿನ ಆತ್ಮವಾಗಿದ್ದೆ. ನಿಮ್ಮ ಐಡಿವಿ (IDV)ನಿಮ್ಮ
ವಾಹನದ ಪ್ರೀಮಿಯಮ್ ಅನ್ನು ನಿರ್ಧರಿಸುತ್ತದೆ. ಐಡಿವಿ (IDV)ಮತ್ತು ಪ್ರೀಮಿಯಮ್ ಮಧ್ಯೆ ನೇರ ಸಂಬಂಧ ಇದೆ.
ಐಡಿವಿ (IDV)ಹೆಚ್ಚಾಗಿ ಇದ್ದರೆ, ಪಾವತಿಸಬೇಕಾದ ಪ್ರೀಮಿಯಮ್ ಹೆಚ್ಚಾಗಿರುತ್ತದೆ. ಆದರೆ, ನೀವು ನಿಮ್ಮ ವಾಹನದ ಐಡಿವಿಗೆ ಕಡಿಮೆ ಬೆಲೆ ಕಟ್ಟುವುದು ಸೂಕ್ತವಲ್ಲ ಯಾಕೆಂದರೆ ವಾಹನಕ್ಕೆ ಹಾನಿಯಾದ ಪಕ್ಷದಲ್ಲಿ, ನಿಮಗೆ ನಷ್ಟವಾಗುವುದು.
ಐಡಿವಿ (IDV)ಕ್ಯಾಲ್ಕುಲೇಟರ್ - ನಿಮ್ಮ ಕಾರಿನ ಐಡಿವಿ (IDV)ಅನ್ನು ಕ್ಯಾಲ್ಕುಲೇಟ್ ಮಾಡಿ
ಐಡಿವಿ (IDV)ಕ್ಯಾಲ್ಕುಲೇಟರ್ ಇನ್ಶೂರೆನ್ಸ್ ಕ್ಯಾಲ್ಕುಲೇಟ್ ಮಾಡುವ ಪ್ರಮುಖ ಸಾಧನಗಳಲ್ಲೊಂದು ಯಾಕೆಂದರೆ ಇದು ನಿಮಗೆ ನಿಮ್ಮ ಕಾರಿನ ಮಾರುಕಟ್ಟೆ ಬೆಲೆ ನಿರ್ಧರಿಸಲು ಸಹಾಯ ಮಾಡುವುದಲ್ಲದೆ ನೀವು ನಿಮ್ಮ ಕಾರ್ ಇನ್ಶೂರೆನ್ಸ್ ಮೇಲೆ ಎಷ್ಟು ಪ್ರೀಮಿಯಮ್ ಕಟ್ಟಬೇಕೆಂದು ನಿರ್ಧರಿಸಲೂ ಸಹಾಯ ಮಾಡುತ್ತದೆ.
ಇದು ಮುಂದಕ್ಕೆ ನಮಗೆ, (ಇನ್ಶೂರರಿಗೆ) ಕ್ಲೈಮ್ಸ್ ಇತ್ಯರ್ಥದ ಸಂದರ್ಭದಲ್ಲಿ, ಹಾಗಾಗದೇ ಇರಲಿ, ಆದರೆ ನಿಮ್ಮ ಕಾರ್ ಕಳುವಾದಲ್ಲಿ ಅಥವಾ ದುರಸ್ತಿಗೆ ಮೀರುವಷ್ಟು ಹಾನಿಯಾದಲ್ಲಿ ನಿಮಗೆ ಪಾವತಿಸಬೇಕಾದ, ಸೂಕ್ತ ಮೊತ್ತವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.
ನಿಮ್ಮ ಕಾರಿನ ಬೆಲೆ ಡೆಪ್ರಿಸಿಯೇಷನ್ ಬಗ್ಗೆ ಹೆಚ್ಚು ತಿಳಿಯಿರಿ
ಕಾರಿನ ವಯಸ್ಸು | ಡೆಪ್ರಿಸಿಯೇಷನ್ % |
---|---|
6 ತಿಂಗಳು ಅಥವಾ ಕಡಿಮೆ | 5% |
6 ತಿಂಗಳಿಂದ 1 ವರ್ಷ | 15% |
1 ವರ್ಷದಿಂದ 2 ವರ್ಷದವರೆಗೆ | 20% |
2ವರ್ಷದಿಂದ 3 ವರ್ಷದವರೆಗೆ | 30% |
3 ವರ್ಷದಿಂದ 4 ವರ್ಷದ ವರೆಗೆ | 40% |
4 ವರ್ಷದಿಂದ 5 ವರ್ಷದ ವರೆಗೆ | 50% |
ಉದಾಹರಣೆ : ನಿಮ್ಮ ಕಾರಿನ ವಯಸ್ಸು 6 ತಿಂಗಳು ಅಥವಾ ಕಡಿಮೆ ಆಗಿದ್ದರೆ ಮತ್ತು ಅದರ ಎಕ್ಸ್ - ಶೋರೂಮ್ ಬೆಲೆ ರೂ. 100 ಆಗಿದ್ದರೆ, ಅದರ ಇಳಿತಾಯ ದರ ಕೇವಲ 5% ಆಗಿರುತ್ತದೆ.
ಇದರರ್ಥ ಕಾರಿನ ಖರೀದಿಯ ನಂತರ, ನಿಮ್ಮ ಐಡಿವಿ (IDV)ರೂ.95 ಗೆ ಇಳಿಯುತ್ತದೆ - 6 ತಿಂಗಳಿಂದ 1 ವರ್ಷ ಹಳೆಯ ಕಾರಿಗೆ ರೂ.85, 1 ವರ್ಷದಿಂದ 2 ವರ್ಷ ಹಳೆಯ ಕಾರಿಗೆ ರೂ. 80, 2 ವರ್ಷದಿಂದ 3 ವರ್ಷ ಹಳೆಯ ಕಾರಿಗೆ ರೂ. 70 ಮತ್ತು ಹೀಗೇ ಅದರ 5 ನೇ ವರ್ಷದಲ್ಲಿ ಅದು 50% ಇಳಿತಾಯ ಕಂಡ ನಂತರದ ವರೆಗೆ.
ನಿಮ್ಮ ಕಾರು 5 ವರ್ಷಕ್ಕಿಂತ ಹೆಚ್ಚು ಹಳೆಯದಾಗಿದ್ದರೆ, ಐಡಿವಿ (IDV)ಕಾರಿನ ಸ್ಥಿತಿಯ ಮೇಲೆ ಅವಲಂಬಿಸುತ್ತದೆ - ಉತ್ಪಾದಕರು, ಮಾಡೆಲ್ ಮತ್ತು ಅದರ ಬಿಡಿ ಭಾಗಗಳ ಲಭ್ಯತೆ.
ಮರು ಮಾರಾಟದ ಸಮಯದಲ್ಲಿ, ನಿಮ್ಮ ಐಡಿವಿ (IDV)ನಿಮ್ಮ ಕಾರಿನ ಮಾರುಕಟ್ಟೆ ಬೆಲೆಯ ಸೂಚಕವಾಗುತ್ತದೆ. ಆದರೆ, ನೀವು ನಿಮ್ಮ ಕಾರನ್ನು ತುಂಬಾ ಚೆನ್ನಾಗಿ ಕಾಪಾಡಿ, ಅದು ಹೊಸದರ ಹಾಗೇ ಹೊಳೆಯುತ್ತಿದರೆ, ನೀವು ಯಾವಾಗಲೂ ನಿಮ್ಮ ಐಡಿವಿ (IDV)ನಿಮಗೆ ನೀಡುವುದಕ್ಕಿಂತ ಹೆಚ್ಚಿನ ಮೌಲ್ಯವನ್ನು ನೀವು ಪಡೆಯಬಹುದು .
ಕೊನೆಯಲ್ಲಿ, ನೀವು ನಿಮ್ಮ ಕಾರಿನ ಮೇಲೆ ಎಷ್ಟು ಪ್ರೀತಿ ತೋರಿದ್ದೀರಿ ಅದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ.
ನಿಮ್ಮ ಕಾರಿನ ಐಡಿವಿ (IDV)ಅನ್ನು ನಿರ್ಧರಿಸುವ ಅಂಶಗಳೇನು?
ಕಾರಿನ ವಯಸ್ಸು : ಐಡಿವಿ (IDV)ನಿಮ್ಮ ಕಾರಿನ ಮಾರುಕಟ್ಟೆ ಬೆಲೆಯನ್ನು ಸೂಚಿಸುವ ಕಾರಣ, ಸೂಕ್ತ ಐಡಿವಿ (IDV)ಅನ್ನು ನಿರ್ಧರಿಸಲು ನಿಮ್ಮ ಕಾರಿನ ವಯಸ್ಸು ಬಹಳ ಅಗತ್ಯವಾಗಿದೆ. ನಿಮ್ಮ ಕಾರು ಎಷ್ಟು ಹಳೆಯದೋ ಅದರ ಐಡಿವಿ (IDV)ಅಷ್ಟೇ ಕಡಿಮೆ ಇರುತ್ತದೆ ಮತ್ತು ವೈಸ್ ವರ್ಸಾ.
- ವಾಹನದ ತಯಾರಿಕೆ ಮೇಕ್ ಮತ್ತು ಮಾಡೆಲ್ : ನಿಮ್ಮ ಕಾರಿನ ತಯಾರಿಕೆ ಮತ್ತು ಮಾಡೆಲ್ ನಿಮ್ಮ ಐಡಿವಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಉದಾಹರಣೆಗೆ : ಒಂದು ಲ್ಯಾಂಬಾರ್ಘಿನಿ ವೆನೆನ್ ನ ಐಡಿವಿ (IDV)ಆಶ್ಟನ್ ಮಾರ್ಟಿನ್ ನ ಐಡಿವಿಗಿಂತ ಹೆಚ್ಚಿರುತ್ತದೆ, ಅದರ ಮೇಕ್ ಮತ್ತು ಮಾಡೆಲ್ ನಲ್ಲಿರುವ ವ್ಯತ್ಯಾಸದ ಕಾರಣ.
ನಗರ ನೋಂದಣಿ ವಿವರಗಳು : ನಿಮ್ಮ ಕಾರಿನ ನೋಂದಣಿ ವಿವರಗಳು ನಿಮ್ಮ ಕಾರ್ ನೋಂದಣಿ ಸರ್ಟಿಫಿಕೇಟಿನಲ್ಲಿ ಲಭ್ಯವಿದೆ. ಹಾಗೂ, ನಿಮ್ಮ ಕಾರಿನ ನೊಂದಣಿ ಯಾವ ನಗರದಲ್ಲಿಯಾಗಿದೆ ಅನ್ನುವುದೂ ನಿಮ್ಮ ಐಡಿವಿ (IDV)ಮೇಲೆ ಪರಿಣಾಮ ಬೀರುತ್ತದೆ. ಒಂದು ಮೆಟ್ರೋ ನಗರದಲ್ಲಿ ನಿಮ್ಮ ಕಾರಿನ ಐಡಿವಿ (IDV)ಒಂದು ಟಿಯರ್ - II ನಗರದಲ್ಲಿ ಇದ್ದದ್ದಕ್ಕಿಂತ ಕಡಿಮೆ ಇರಬಹುದು.
ಪ್ರಮಾಣಿತ ಇಳಿತಾಯ ( ಇಂಡಿಯನ್ ಮೋಟಾರ್ ಟ್ಯಾರಿಫ್ ನ ಪ್ರಾಕರ) : ನಿಮ್ಮ ಕಾರಿನ ಮೌಲ್ಯ ನೀವು ಅದನ್ನು ಶೋರೂಮಿನಿಂದ ಹೊರಗೆ ಡ್ರೈವ್ ಮಾಡಿದ ತಕ್ಷಣ ಇಳಿತಾಯವಾಗುತ್ತದೆ - ಮತ್ತು ಈ ಇಳಿತಾಯದ ಪ್ರತಿಶತ ಪ್ರತೀ ವರ್ಷ ಹೆಚ್ಚಾಗುತ್ತದೆ. ಇದು ಕೂಡಾ ಕೊನೆಯಲ್ಲಿ ನಿಮ್ಮ ಐಡಿವಿಗೆ ಪರಿಣಾಮ ಬೀರುತ್ತದೆ. ಈ ಟೇಬಲ್ ನಿಮ್ಮ ಕಾರಿನ ವಯಸ್ಸಿಗೆ ಅನುಗುಣವಾಗಿ ಇಳಿತಾಯದ ದರಗಳನ್ನು ತಿಳಿಸುತ್ತದೆ.
ಐಡಿವಿ (IDV)ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಮ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಮತ್ತು ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಮ್ ಜೊತೆಜೊತೆಯಾಗಿ ನಡೆಯುತ್ತವೆ.
ಇದರರ್ಥ, ನಿಮ್ಮ ಐಡಿವಿ (IDV)ಹೆಚ್ಚಿದ್ದರೆ, ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಮ್ ಹಚ್ಚಿರುತ್ತದೆ - ಮತ್ತು ನಿಮ್ಮ ವಾಹನಕ್ಕೆ ವಯಸ್ಸಾದ್ದಂತೆ ಐಡಿವಿಯ ಇಳಿತಾಯವಾಗುತ್ತದೆ, ನಿಮ್ಮ ಪ್ರೀಮಿಯಮ್ ಕೂಡಾ ಕಡಿಮೆಯಾಗುತ್ತದೆ.
ಹಾಗೂ, ನೀವು ನಿಮ್ಮ ಕಾರನ್ನು ಮಾರಾಟ ಮಾಡಾಲು ನಿರ್ಧರಿಸಿದರೆ, ಐಡಿವಿ (IDV)ಹೆಚ್ಚಿದ್ದರೆ ನಿಮಗೆ ಅದಕ್ಕಾಗಿ ಹೆಚ್ಚು ಬೆಲೆ ದೊರೆಯುತ್ತದೆ. ದರವು ಬೇರೆ ಅಂಶಗಳಾದ ಬಳಕೆ, ಹಿಂದಿನ ಕಾರ್ ಇನ್ಶುರೆನ್ಸ್ ಕ್ಲೈಮ್ ಅನುಭವ ಇತ್ಯಾದಿಗಳ ಮೇಲೂ ಅವಲಂಬಿಸುತ್ತದೆ.
ಆದ್ದರಿಂದ, ನೀವು ನಿಮ್ಮ ಕಾರಿಗೆ ಸೂಕ್ತವಾದ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವಾಗ, ಕೇವಲ ಪ್ರೀಮಿಯಮ್ ಮಾತ್ರವಲ್ಲ, ನಿಮಗೆ ನೀಡಲಾಗುವ ಐಡಿವಿಯ ಬಗ್ಗೆಯೂ ಗಮನ ಹರಿಸಿ.
ಕಡಿಮೆ ಪ್ರೀಮಿಯಮ್ ನೀಡುತ್ತಿರುವ ಕಂಪನಿ ಆಕರ್ಷಕವಾಗಿ ಕಾಣಬಹುದು, ಆದರೆ ಇದಕ್ಕೆ ಕಾರಣ ಕಡಿಮೆ ಐಡಿವಿ (IDV)ಇರಬಹುದು. ನಿಮ್ಮ ಕಾರಿನ ಸಂಪೂರ್ಣ ಹಾನಿಯ ಸಂದರ್ಭದಲ್ಲಿ, ಹೆಚ್ಚಿನ ಐಡಿವಿ (IDV)ನಿಮಗೆ ಹೆಚ್ಚಿನ ಪರಿಹಾರವನ್ನು ನೀಡುತ್ತದೆ
ಹೆಚ್ಚುತ್ತಿರುವ/ ಕಡಿಮೆ ಐಡಿವಿಯ ಲಾಭಗಳು?
ಹೆಚ್ಚು ಐಡಿವಿ (IDV): ಹೆಚ್ಚು ಐಡಿವಿ (IDV)ಎಂದರೆ ಹೆಚ್ಚು ಪ್ರೀಮಿಯಮ್ ಅದರೆ ನಿಮ್ಮ ಇನ್ಶೂರ್ಡ್ ಕಾರಿನ ಕಳವು ಅಥವಾ ಹಾನಿಯ ಸಮಯದಲ್ಲಿ ನಿಮಗೆ ಹೆಚ್ಚಿನ ಪರಿಹಾರ ದೊರೆಯುವುದು.
ಕಡಿಮೆ ಐಡಿವಿ (IDV): ಕಡಿಮೆ ಐಡಿವಿ (IDV)ಎಂದರೆ ಕಡಿಮೆ ಪ್ರೀಮಿಯಮ್ ಆದರೆ ಪ್ರೀಮಿಯಮ್ ಮೇಲಿನ ಈ ಚಿಕ್ಕ ಉಳಿತಾಯ ನಿಮ್ಮ ಇನ್ಶೂರ್ಡ್ ಕಾರಿನ ಕಳವು ಅಥವಾ ಹಾನಿಯ ಸಮಯದಲ್ಲಿ ನಿಮಗೆ ದೊಡ್ಡ ನಷ್ಟವನ್ನು ಉಂಟುಮಾಡುತ್ತದೆ.
ಕಾರ್ ಇನ್ಶುರೆನ್ಸ್ ನಲ್ಲಿ ಐಡಿವಿಯ ಮಹತ್ವ
ನಿಮ್ಮ ಐಡಿವಿ (IDV)ನಿಮ್ಮ ಕಾರಿನ ಮಾರುಕಟ್ಟೆಯ ಮೌಲ್ಯವಾಗಿದೆ, ಆದ್ದರಿಂದ ನಿಮ್ಮ ಕಾರ್ ಇನ್ಶುರೆನ್ಸ್ ನ ಪ್ರೀಮಿಯಮ್ ಮೇಲೆ ನೇರ ಪರಿಣಾಮ ಬೀರುತ್ತದೆ.
ನಿಮ್ಮ ಕಾರಿನ ಐಡಿವಿ (IDV)ಅದರ ಅಪಾಯದ ಮಟ್ಟವನ್ನೂ ನಿರ್ಧರಿಸುತ್ತದೆ. ನಿಮ್ಮ ಕಾರಿನ ಐಡಿವಿ (IDV)ಹೆಚ್ಚಿದ್ದರೆ ಅದರ ಅಪಾಯವೂ ಹೆಚ್ಚಿರುತ್ತದೆ, ಇದರಿಂದಾಗಿ ಅದು ಹೆಚ್ಚಿನ ಪ್ರೀಮಿಯಮ್ ಬಯಸುತ್ತದೆ.
ಕ್ಲೈಮ್ಸ್ ನ ಸಮಯದಲ್ಲಿ ನಿಮ್ಮ ಕಾರಿನ ಮೌಲ್ಯದ ಮೇಲೆ ಪರಿಹಾರವನ್ನು ನೀಡಲಾಗುತ್ತದೆ. ಸ್ವಾಭಾವಿಕವಾಗಿ, ದುರಸ್ತಿ ಹಾಗೂ ನಿರ್ವಹಣೆಯ ವೆಚ್ಚವು ಅದರ ಮೇಲೆಯೇ ಇರುತ್ತದೆ. ಆದ್ದರಿಂದ,ಅಗತ್ಯದ ಸಮಯದಲ್ಲಿ, ನಿಮಗೆ ಹಾನಿ ಅಥವಾ ಕ್ಲೈಮ್ಸ್ ನ ಸಂದರ್ಭದಲ್ಲಿ ಸೂಕ್ತ ಮೊತ್ತ ದೊರೆಯಬೇಕಾದರೆ, ನಿಮ್ಮ ಕಾರ್ ಇನ್ಶುರೆನ್ಸ್ ನಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
ನಿಮ್ಮ ಕಾರ್ ಕಳುವಾಗಿದ್ದರೆ ಅಥವಾ ದುರಸ್ತಿಗೂ ಮೀರಿ ಹಾನಿಯಾಗಿದ್ದರೆ, ನಿಮಗೆ ಸಿಗುವ ಪರಿಹಾರದ ಮೊತ್ತವು ಸರಿಯಾಗಿ ನಿಮ್ಮ ಐಡಿವಿಯಷ್ಟೇ ಆಗಿರುತ್ತದೆ. ಆದ್ದರಿಂದ, ನಿಮ್ಮ ಐಡಿವಿ (IDV)ನಿಮ್ಮ ಕಾರಿನ ಸೂಕ್ತ ಮೌಲ್ಯಕ್ಕೆ ಸರಿಯಾಗಿದೆಯೇ ಎಂದು ಯಾವಾಗಲೂ ಖಚಿತ ಪಡಿಸಿರಿ.
ಐದು ವರ್ಷದವರಿಗೆ ತಿಳಿಸಿದ ಹಾಗೇ ತಿಳಿಸಿ
ನಾವು ಇನ್ಶೂರೆನ್ಸ್ ಅನ್ನು ಎಷ್ಟು ಸರಳ ಗೊಳಿಸುತ್ತೇವೆ ಎಂದರೆ ಐದು ವರ್ಷದವರೂ ಇದನ್ನು ಅರ್ಥ ಮಾಡಿಕೊಳ್ಳಬಹುದು.
ನಿಮ್ಮ ಬಳಿ ಒಂದು ಬೆಲೆಬಾಳುವ ವಾಚ್ ಇದೆ. ಒಂದು ದಿನ,ನೀವು ಅದನ್ನು ಮಾರಾಟ ಮಾಡಿದರೆ ಎಷ್ಟು ಸಿಗಬಹುದು ಎಂದು ಪರಿಶೀಲಿಸಲು ನಿರ್ಧರಿಸುತ್ತೀರಿ. ನೀವು ಅದನ್ನು ಕೈ ಗಡಿಯಾರದವನ ಬಳಿತೆಗೆದುಕೊಂಡುಹೋಗುತ್ತೀರಿ. ಅವನು ನಿಮ್ಮ ವಾಚನ್ನು ನೋಡಿ, ನಿಮಗೆ ಇದುಗ್ಲಾಸ್, ಮೆಟ್ಟಲ್, ಲೆದರ್ ಮತ್ತು ಸ್ಕ್ರೂ ಗಳಿಂದ ಮಾಡಲಾಗಿದೆ ಎಂದು ವಿವರಿಸುತ್ತಾನೆ.ಆದ್ದರಿಂದ, ಮೊದಲಿಗೆ ಅವನು ಆ ವಸ್ತುಗಳ ಬೆಲೆಯನ್ನು ಕೂಡಿಸುತ್ತಾನೆ. ನಂತರಈ ವಾಚ್ ಎಷ್ಟು ಹಳೆಯದು ಎಂದು ಕೇಳುತ್ತಾನೆ, ನೀವು ಐದು ವರ್ಷ ಎನ್ನುತ್ತೀರಿ. ಅವನು ಅದನ್ನು ಬರೆಯುತ್ತಾನೆ. ಇದಲ್ಲವನ್ನು ಆಧರಿಸಿ ಅವನು ನಿಮಗೆ, ನೀವು ವಾಚನ್ನು ಮಾರಾಟ ಮಾಡಿದರೆ ನಿಮಗೆ ರೂ. 500 ಸಿಗಬಹುದು ಎನ್ನುತ್ತಾನೆ.ಈ ಸಂದರ್ಭದಲ್ಲಿ ಇದು ನಿಮ್ಮ ಐಡಿವಿ (IDV)ಆಗಿದೆ!
ಕಾರ್ ಇನ್ಶೂರೆನ್ಸ್ ನಲ್ಲಿ ಐಡಿವಿಯ ಬಗ್ಗೆ ಹೆಚ್ಚು ಕೇಳಿರುವ ಪ್ರಶ್ನೆಗಳು
ಒಂದು ಹೊಸ ಕಾರಿನ ಐಡಿವಿ (IDV)ಎಷ್ಟು?
ನಿಮ್ಮ ಹೊಸ ಕಾರಿನ ಐಡಿವಿ (IDV)ಅದರ ಇನ್ವಾಯಿಸ್ ಮೌಲ್ಯವಾಗಿರುತ್ತದೆ, ನೀವು ಅದನ್ನು ಈಗಾಗಲೇ ಬಳಸಲು ಆರಂಭಿಸಿದ್ದರೆ ಅದರ ಇಳಿತಾಯ ದರವನ್ನು ಸೇರಿಸಿ.
ಕಾರ್ ಶೋರೂಮ್ ನ ಹೊರಗಡೆ ಅದರ ಐಡಿವಿ (IDV)ಎಷ್ಟು?
ನೀವು ಅದನ್ನು ಈಗಾಗಲೇ ಬಳಸಲು ಆರಂಭಿಸಿದ್ದರೆ, ಅಣ್ದರೆ ಶೋರೂಮ್ ನಿಂದ ಹೊರಗಡೆ ಡ್ರೈವ್ ಮಾಡಿದ್ದರೆ ಐಡಿವಿ (IDV)ಕಾರಿನ ಇನ್ವಾಯಿಸ್, ಅದರ ಮೇಲೆ ಇರುವ ಕನಿಷ್ಟ ಇಳಿತಾಯವನ್ನು ಬಿಟ್ಟು.
ಹಳೆಯ ಕಾರುಗಳ ಐಡಿವಿ (IDV)ಎಷ್ಟು>5 ವರ್ಷ?
ಇಂಡಿಯನ್ ಮೋಟಾರ್ ತ್ಯಾರಿಫ್ ಇಳಿತಾಯ ದರಗಳ ಪ್ರಕಾರ, ೫ ವರ್ಷಕ್ಕಿಂತ ಹಳೆಯ ಕಾರಿನ ಇಳಿತಾಯ ಮೌಲ್ಯ ಕನಿಷ್ಟ ೫೦% ಆಗಿರುತ್ತದೆ ಅದರ ಐಡಿವಿ (IDV)ಅನ್ನು ನಿರ್ಧರಿಸಲು.
ಹೆಚ್ಚು ಐಡಿವಿ (IDV)ತೆಗೆದುಕೊಳ್ಳುವುದು ಸೂಕ್ತವೇ?
ವಾಸ್ತವವಾಗಿ, ಅದು ನೀವು ತೆಗೆದುಕೊಳ್ಳುವ ಕಾರು ಮತ್ತು ಅದರ ಕಂಡೀಶನ್ ಮೇಲೆ ಅವಲಂಬಿಸುತ್ತದೆ. ಅತೀ ಹಳೆಯದಲ್ಲದ ಉತ್ತಮ ಸ್ಥಿತುಯಲ್ಲಿರುವ ಕಾರುಗಳಿಗೆ ಹೆಚ್ಚು ಐಡಿವಿ (IDV)ಸೂಕ್ತವಾಗಿದೆ. ನೆನಪಿಡಿ ಐಡಿವಿ (IDV)ಎಷ್ಟು ಹೆಚ್ಚಿರುತ್ತದೋ ನೀವು ವಾರ್ಷಿಕವಾಗಿ ಕಟ್ಟುವ ಪ್ರೀಮಿಯಮ್ ಅಷ್ಟೇ ಹೆಚ್ಚಿರುತ್ತದೆ.
ಯಾರಾದರೂ ಕಡಿಮೆ ಐಡಿವಿ (IDV)ಡಿಕ್ಲೇರ್ ಮಾಡಿದರೆ ಏನಾಗುತ್ತದೆ?
ಕೆಲವೊಮ್ಮೆ, ಜನರು ಕಡಿಮೆ ಪ್ರೀಮಿಯಮ್ ಕಡೆ ಆಕರ್ಷಿತರಾಗುತ್ತಾರೆ,ಕಡಿಮೆ ಐಡಿವಿ (IDV)ಡಿಕ್ಲೇರ್ ಮಾಡುತ್ತಾರೆ. ಆದರೆ, ನೆನಪಿಡಿ ನಿಮ್ಮ ಪ್ರೀಮಿಯಮ್ ಕಡಿಮೆ ಇರುತ್ತದೆ ಆದರೆ ಕ್ಲೈಮ್ ಸಮಯದಲ್ಲಿ ಅದಕ್ಕೆ ದೊರೆಯುವ ಪರಿಹಾರ ಕಡಿಮೆಯಾಗುತ್ತದೆ, ಹಾಗೂ ಇದು ನಿಮ್ಮ ಕಾರಿಗೆ ಸಾಕಾಗದೇ ಇರಬಹುದು. ಆದ್ದರಿಂದ, ನಮ್ಮ ಸಲಹೆ ಏನೆಂದರೆ ಕಡಿಮೆ ಅಥವಾ ಹೆಚ್ಚು ಐಡಿವಿಗೆ ಹೋಗದೆ, ನಿಮ್ಮ ಕಾರಿಗೆ ಸೂಕ್ತವಾದ ಐಡಿವಿಯನ್ನು ಖರೀದಿಸಿ.