ಫೋರ್ಡ್ ಫ್ರೀಸ್ಟೈಲ್ ಇನ್ಶೂರೆನ್ಸ್

Get Instant Policy in Minutes*

Third-party premium has changed from 1st June. Renew now

ಫೋರ್ಡ್ ಫ್ರೀಸ್ಟೈಲ್ ಇನ್ಶೂರೆನ್ಸ್ ಅನ್ನು ಖರೀದಿಸಿ ಅಥವಾ ರಿನೀವ್ ಮಾಡಿ

ಫೋರ್ಡ್ ಫ್ರೀಸ್ಟೈಲ್ ಕಾಂಪ್ಯಾಕ್ಟ್ ಯುಟಿಲಿಟಿ ವೆಹಿಕಲ್ ಆಗಿದ್ದು ಅದು ಭಾರತೀಯ ಹ್ಯಾಚ್ ಬ್ಯಾಕ್ ಮಾರುಕಟ್ಟೆ ಸೆಗ್ಮೆಂಟ್ ಅನ್ನು ತ್ವರಿತವಾಗಿ ವಶಪಡಿಸಿಕೊಂಡಿದೆ ಮತ್ತು ಮಧ್ಯಮ ಶ್ರೇಣಿಯ ಕಾರು ಖರೀದಿದಾರರಲ್ಲಿ ಉತ್ತಮ ಯಶಸ್ಸನ್ನು ಕಂಡಿದೆ. ಫೋರ್ಡ್ ಫ್ರೀಸ್ಟೈಲ್ ಸ್ಪೆಸಿಫಿಕೇಷನ್ ಗಳ ಸುಧಾರಿತ ಪಟ್ಟಿ ಮತ್ತು ದೃಢವಾದ ಎಸ್‌ಯುವಿ ಲುಕ್ ನಿಂದಾಗಿ ಭಾರತದಲ್ಲಿ ಆದ್ಯತೆಯ ಆಯ್ಕೆಯಾಗಿದೆ. ಹೊಸ ಫೋರ್ಡ್ ಫ್ರೀಸ್ಟೈಲ್ ಶಕ್ತಿಯುತ ಎಂಜಿನ್ ಮತ್ತು (ಆಕ್ಟಿವ್ ರೋಲ್‌ಓವರ್ ಪ್ರಿಟೆನ್ಷನ್) ಅಥವಾ ಎಪಿಆರ್ ಅನ್ನು ಹೊಂದಿದ್ದು ಅದು ಯಾವುದೇ ರಸ್ತೆಯ ಮೇಲೆ ಸಾಟಿಯಿಲ್ಲದ ನಿಯಂತ್ರಣವನ್ನು ಒದಗಿಸುತ್ತದೆ. ಅಲ್ಲದೆ, ವರ್ಧಿತ ಬ್ರೇಕಿಂಗ್ ನಿಯಂತ್ರಣದೊಂದಿಗೆ ಎಬಿಎಸ್ ಮತ್ತು ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್)ನಂತಹ ವೈಶಿಷ್ಟ್ಯಗಳು ತಿರುವುಗಳಲ್ಲಿ ಉತ್ತಮ ಗ್ರಿಪ್ ಅನ್ನು ಒದಗಿಸುತ್ತದೆ.

ನೀವು ಫೋರ್ಡ್ ಫ್ರೀಸ್ಟೈಲ್ ಅನ್ನು ಹೊಂದಿದ್ದರೆ ಅಥವಾ ಅದರ ಹೊಸ ಮಾಡೆಲ್ ಅನ್ನು ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ಭಾರತೀಯ ಬೀದಿಗಳಲ್ಲಿ ಕಾನೂನುಬದ್ಧವಾಗಿ ಉಳಿಯಲು ನೀವು ವ್ಯಾಲಿಡ್ ಆದ ಫೋರ್ಡ್ ಫ್ರೀಸ್ಟೈಲ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. ಇಲ್ಲದಿದ್ದರೆ, 1988ರ ಮೋಟಾರ್ ವೆಹಿಕಲ್ಸ್ ಆಕ್ಟ್ ಪ್ರಕಾರ ನೀವು ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ.

ಆದಾಗ್ಯೂ, ಮಾರುಕಟ್ಟೆಯಲ್ಲಿ ಅನೇಕ ಕಾರ್ ಇನ್ಶೂರೆನ್ಸ್ ಕಂಪನಿಗಳು ಇರುವುದರಿಂದ, ಅದರಲ್ಲೊಂದನ್ನು ಆಯ್ಕೆ ಮಾಡುವುದು ಸವಾಲಿನ ಸಂಗತಿಯಾಗಿದೆ. ಆದ್ದರಿಂದ, ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಪ್ರತಿ ಕಂಪನಿಯ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ನೋಡಬೇಕು.

ಫೋರ್ಡ್ ಫ್ರೀಸ್ಟೈಲ್ ಕಾರ್ ಇನ್ಶೂರೆನ್ಸ್‌ ನಲ್ಲಿ ಏನೆಲ್ಲಾ ಕವರ್‌ ಆಗುತ್ತದೆ

ಡಿಜಿಟ್‌ನ ಫೋರ್ಡ್ ಫ್ರೀಸ್ಟೈಲ್ ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?

ಫೋರ್ಡ್ ಫ್ರೀಸ್ಟೈಲ್ ಗೆ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು

×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್‌ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವಾಹನದ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

ಎಷ್ಟು ವೇಗವಾಗಿ ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಸೆಟಲ್ ಆಗುತ್ತವೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಫೋರ್ಡ್ ಫ್ರೀಸ್ಟೈಲ್ ಇನ್ಶೂರೆನ್ಸ್ ಗಾಗಿ ಡಿಜಿಟ್ ಅನ್ನು ಏಕೆ ಆರಿಸಬೇಕು?

ಸ್ಪರ್ಧಾತ್ಮಕವಾದ ಫೋರ್ಡ್ ಫ್ರೀಸ್ಟೈಲ್ ಇನ್ಶೂರೆನ್ಸ್ ಬೆಲೆಯನ್ನು ನೀಡುವುದರ ಜೊತೆಗೆ, ಡಿಜಿಟ್ ಇನ್ಶೂರೆನ್ಸ್ ಕಂಪನಿಯು ತಮ್ಮ ಪಾಲಿಸಿಹೋಲ್ಡರ್ ಗಳಿಗೆ ಹೆಚ್ಚುವರಿ ಪ್ರಯೋಜನಗಳ ಪಟ್ಟಿಯನ್ನು ಒದಗಿಸುತ್ತದೆ. ಅದನ್ನು ಇಲ್ಲಿ ನೋಡೋಣ!

1. ಉತ್ಪನ್ನಗಳ ವ್ಯಾಪಕ ಶ್ರೇಣಿ

ಡಿಜಿಟ್ ನಿಮಗೆ ಹೆಚ್ಚಿನ ಸಂಖ್ಯೆಯ ಕಾರ್ ಇನ್ಶೂರೆನ್ಸ್ ನಿಂದ ಆಯ್ಕೆ ಮಾಡಲು ಅನುಮತಿಸುತ್ತದೆ, ಅವುಗಳೆಂದರೆ -

  • ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿ

ಭಾರತೀಯ ರಸ್ತೆಗಳಲ್ಲಿ ಡ್ರೈವ್ ಮಾಡಲು ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಕಡ್ಡಾಯವಾಗಿದೆ. ಈ ಪಾಲಿಸಿಯ ಅಡಿಯಲ್ಲಿ, ಡಿಜಿಟ್ ನಿಮ್ಮ ಪರವಾಗಿ ಅಪಘಾತದಲ್ಲಿ ನಿಮ್ಮ ಕಾರು ಥರ್ಡ್ ಪಾರ್ಟಿ ವ್ಯಕ್ತಿ, ಪ್ರಾಪರ್ಟಿ ಅಥವಾ ವಾಹನದ ಮೇಲೆ ಡ್ಯಾಮೇಜ್ ಉಂಟುಮಾಡಿದಾಗಿನ ಎಲ್ಲಾ ಥರ್ಡ್ ಪಾರ್ಟಿ ಹಣಕಾಸಿನ ಲಯಬಿಲಿಟಿಯನ್ನು ನೋಡಿಕೊಳ್ಳುತ್ತದೆ. ಅಲ್ಲದೆ, ಅಂತಹ ಘಟನೆಗಳಿಗೆ ಸಂಬಂಧಿಸಿದ ಎಲ್ಲಾ ಲಿಟಿಗೇಷನ್ ಸಮಸ್ಯೆಗಳನ್ನು ಡಿಜಿಟ್ ನಿರ್ವಹಿಸುತ್ತದೆ.

  • ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್

ಡಿಜಿಟ್‌ನ ಕಾಂಪ್ರೆಹೆನ್ಸಿವ್ ಫೋರ್ಡ್ ಫ್ರೀಸ್ಟೈಲ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮಗೆ ಥರ್ಡ್ ಪಾರ್ಟಿ ಮತ್ತು ಸ್ವಂತ ಡ್ಯಾಮೇಜ್ ಗಳ ವಿರುದ್ಧ ಸಂಪೂರ್ಣ ಕವರೇಜ್ ಅನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಈ ಪಾಲಿಸಿಯ ಅಡಿಯಲ್ಲಿ, ಅಪಘಾತದಿಂದ ಮರಣ ಅಥವಾ ಅಂಗವಿಕಲತೆ ಸಂಭವಿಸಿದ ಸಂದರ್ಭದಲ್ಲಿ ಇನ್ಶೂರರ್ ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಸಹ ಪಡೆಯಬಹುದು.

2. ನೆಟ್‌ವರ್ಕ್ ಗ್ಯಾರೇಜ್‌ಗಳ ದೊಡ್ಡ ಸಂಖ್ಯೆ

ಡಿಜಿಟ್ ಭಾರತದಾದ್ಯಂತ 6000ಕ್ಕೂ ಹೆಚ್ಚು ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳನ್ನು ಹೊಂದಿದೆ. ಡಿಜಿಟ್‌ನಿಂದ ಫೋರ್ಡ್ ಫ್ರೀಸ್ಟೈಲ್‌ಗೆ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವ ಮೂಲಕ, ನೀವು ಯಾವುದೇ ನೆಟ್‌ವರ್ಕ್ ಗ್ಯಾರೇಜ್‌ಗಳಿಂದ ವೃತ್ತಿಪರ ದುರಸ್ತಿ ಮತ್ತು ಬದಲಿ ಸೇವೆಗಳನ್ನು ಕ್ಯಾಶ್ ಲೆಸ್ ಪಾವತಿ ಆಯ್ಕೆಯೊಂದಿಗೆ ಪಡೆಯಲು ಸಾಧ್ಯವಾಗುತ್ತದೆ.

3. ಆಡ್-ಆನ್ ಪ್ರಯೋಜನಗಳ ವ್ಯಾಪಕ ಸಂಖ್ಯೆ

ನೀವು ಡಿಜಿಟ್‌ನಿಂದ ಕಾಂಪ್ರೆಹೆನ್ಸಿವ್ ಫೋರ್ಡ್ ಫ್ರೀಸ್ಟೈಲ್ ಇನ್ಶೂರೆನ್ಸ್ ಅನ್ನು ಆರಿಸಿಕೊಂಡರೆ, ನೀವು ಹಲವಾರು ಆಡ್-ಆನ್ ಪ್ರಯೋಜನಗಳನ್ನು ಆನಂದಿಸಲು ಸಾಧ್ಯವಾಗುತ್ತದೆ, ಅವುಗಳಲ್ಲಿ ಕೆಲವು ಹೀಗಿವೆ -

  • ರೋಡ್ ಸೈಡ್ ಕವರ್
  • ಕನ್ಸ್ಯೂಮೇಬಲ್ ಕವರ್
  • ಝೀರೋ ಡೆಪ್ರಿಸಿಯೇಷನ್ ಕವರ್
  • ರಿಟರ್ನ್ ಟು ಇನ್‌ವಾಯ್ಸ್ ಕವರ್‌
  • ಎಂಜಿನ್ ಪ್ರೊಟೆಕ್ಷನ್ ಕವರ್

ಈ ಆಡ್-ಆನ್ ಪ್ರಯೋಜನಗಳನ್ನು ಪಡೆಯಲು ನೀವು ಒಟ್ಟು ಫೋರ್ಡ್ ಫ್ರೀಸ್ಟೈಲ್ ಇನ್ಶೂರೆನ್ಸ್ ವೆಚ್ಚಕ್ಕಿಂತ ಹೆಚ್ಚಿನ ನಾಮಮಾತ್ರ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

4. ನೋ-ಕ್ಲೈಮ್ ಬೋನಸ್

ಪ್ರತಿ ಕ್ಲೈಮ್-ಮುಕ್ತ ವರ್ಷಕ್ಕೆ ನೀವು ಹೆಚ್ಚುವರಿ ಪ್ರಯೋಜನಗಳನ್ನು ಆನಂದಿಸಲು ಸಾಧ್ಯವಾಗುತ್ತದೆ. ವಾಸ್ತವವಾಗಿ, ಡಿಜಿಟ್ ಫೋರ್ಡ್ ಫ್ರೀಸ್ಟೈಲ್ ಇನ್ಶೂರೆನ್ಸ್ ರಿನೀವಲ್ ಸಮಯದಲ್ಲಿ ಪ್ರೀಮಿಯಂನಲ್ಲಿ 50% ವರೆಗೆ ರಿಯಾಯಿತಿಯನ್ನು ನೀಡಬಹುದು. ಇದು ಇನ್ಶೂರರ್ ಹೊಂದಿರುವ ಕ್ಲೈಮ್-ಮುಕ್ತ ವರ್ಷಗಳ ಒಟ್ಟು ಸಂಖ್ಯೆಯನ್ನು ಅವಲಂಬಿಸಿರುತ್ತದೆ.

5. ಐಡಿವಿ(IDV) ಕಸ್ಟಮೈಸೇಷನ್

ನಿಮ್ಮ ಫೋರ್ಡ್ ಫ್ರೀಸ್ಟೈಲ್ ಇನ್ಶೂರೆನ್ಸ್ ಗಾಗಿ ನೀವು ಐಡಿವಿ ಅನ್ನು ಕಸ್ಟಮೈಸ್ ಮಾಡಬಹುದು. ಈ ರೀತಿಯಾಗಿ, ನಿಮ್ಮ ಕಾರು ಸಂಪೂರ್ಣವಾಗಿ ಡ್ಯಾಮೇಜ್ ಗೊಳಗಾದಾಗ ಅಥವಾ ಕಳ್ಳತನವಾದಾಗ ನೀವು ಪಡೆಯುವ ಗರಿಷ್ಠ ಅಮೌಂಟ್ ನ್ನು ನೀವು ತಿಳಿಯಬಹುದು. ನೀವು ಕಾರನ್ನು ಮಾರಾಟ ಮಾಡಲು ನಿರ್ಧರಿಸಿದಾಗ ಹೆಚ್ಚಿನ ಐಡಿವಿ ನಿಮಗೆ ಉತ್ತಮ ಮರುಮಾರಾಟ ಮೌಲ್ಯವನ್ನು ನೀಡುತ್ತದೆ.

6. ಹೆಚ್ಚಿನ ಕ್ಲೈಮ್ ಸೆಟಲ್ಮೆಂಟ್ ಅನುಪಾತ

ಡಿಜಿಟ್ ಸುಮಾರು 96% ನಷ್ಟು ಹೆಚ್ಚಿನ ಕ್ಲೈಮ್ ಸೆಟಲ್ಮೆಂಟ್ ಅನುಪಾತವನ್ನು ಹೊಂದಿದೆ. ನೀವು ಡಿಜಿಟ್‌ನಿಂದ ಫೋರ್ಡ್ ಫ್ರೀಸ್ಟೈಲ್‌ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಪಡೆದರೆ, ನೀವು ಸ್ಮಾರ್ಟ್‌ಫೋನ್-ಎನೇಬಲ್ಡ್ ಕ್ಲೈಮ್ ಪ್ರೊಸೆಸ್ ಅನ್ನು ಬಳಸಬಹುದು. ಅದು ಕೇವಲ 7 ನಿಮಿಷಗಳಲ್ಲಿ ಪೂರ್ಣಗೊಳ್ಳಬಹುದಾಗಿದೆ.

ಹೆಚ್ಚುವರಿಯಾಗಿ, ನೀವು ಆನ್‌ಲೈನ್‌ನಲ್ಲಿ ಡಿಜಿಟ್‌ನಿಂದ ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದು ಅಥವಾ ರಿನೀವ್ ಮಾಡಬಹುದು. ಕಾರ್ ಇನ್ಶೂರೆನ್ಸ್ ಬೆಲೆಗಳ ಬಗ್ಗೆ ಎಲ್ಲಾ ವಿವರಗಳು ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅಲ್ಲದೆ, ಡಿಜಿಟ್ 24x7 ಗ್ರಾಹಕರ ನೆರವನ್ನು ಒದಗಿಸುತ್ತದೆ, ಇದು ತುರ್ತು ಸಂದರ್ಭಗಳಲ್ಲಿ ಅಪಾರವಾಗಿ ಸಹಾಯ ಮಾಡುತ್ತದೆ.

ಫೋರ್ಡ್ ಫ್ರೀಸ್ಟೈಲ್‌ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?

ಕಾರನ್ನು ಖರೀದಿಸಿದ ನಂತರ ಪ್ರತಿ ಕಾರ್ ಮಾಲೀಕರು ಕಾರ್ ಇನ್ಶೂರೆನ್ಸ್ ಖರೀದಿಸಬೇಕು. ವಿವಿಧ ಸಂದರ್ಭಗಳಲ್ಲಿ ಹಣವನ್ನು ಉಳಿಸಲು ಕಾರ್ ಇನ್ಶೂರೆನ್ಸ್ ನಿಮಗೆ ಸಹಾಯ ಮಾಡುತ್ತದೆ. ಅದು ಹೇಗೆ ಎಂದು ಚರ್ಚಿಸೋಣವೇ?

  • ಕಾನೂನುಬದ್ಧವಾಗಿ ಡ್ರೈವ್ ಮಾಡಲು ನಿಮಗೆ ಸಹಾಯ ಮಾಡುತ್ತದೆ: ನೀವು ಭಾರತದಲ್ಲಿ ಇನ್ಶೂರೆನ್ಸ್ ಇಲ್ಲದೆ ಕಾರನ್ನು ಡ್ರೈವ್ ಮಾಡುತ್ತಿದ್ದರೆ ನಿಮಗೆ ಕಾನೂನು ಅಪರಾಧಕ್ಕೆ ದಂಡ, ಶಿಕ್ಷೆ ವಿಧಿಸಲಾಗುತ್ತದೆ. ಮೊದಲ ಅಪರಾಧಕ್ಕೆ ಪೆನಲ್ಟಿ ಅಮೌಂಟ್ ₹2000 ಮತ್ತು/ಅಥವಾ ಮೂರು ತಿಂಗಳ ಸೆರೆವಾಸ. ನಂತರದ ಅಪರಾಧಕ್ಕೆ ಪೆನಲ್ಟಿ ಅಮೌಂಟ್ ₹4000 ವರೆಗೆ ಹೆಚ್ಚಾಗುತ್ತದೆ ಮತ್ತು/ಅಥವಾ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಬಹುದು. ಜೊತೆಗೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಅಮಾನತುಗೊಳಿಸಬಹುದು.

ಇನ್ಶೂರೆನ್ಸ್ ಇಲ್ಲದೆ ಡ್ರೈವಿಂಗ್ ಮಾಡುವುದಕ್ಕೆ ದಂಡದ ಬಗ್ಗೆ ಮತ್ತಷ್ಟು ತಿಳಿಯಿರಿ.

  • ಥರ್ಡ್ ಪಾರ್ಟಿ ಲಯಬಿಲಿಟಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ: ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಹೊಂದುವುದು ಭಾರತದಲ್ಲಿ ಕಡ್ಡಾಯವಾಗಿದೆ. ಇದು ಕಾನೂನು ಅನುಸರಣೆಯನ್ನು ಪೂರೈಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಥರ್ಡ್ ಪಾರ್ಟಿ ಕ್ಲೈಮ್ ಗಳನ್ನು ಕವರ್ ಮಾಡುತ್ತದೆ. ಈ ಪಾಲಿಸಿಯ ವಿರುದ್ಧ, ನೀವು ಜವಾಬ್ದಾರರಾಗಿರುವ ಅಪಘಾತದಲ್ಲಿ ಗಾಯಗೊಂಡ ಅಥವಾ ಪ್ರಾಪರ್ಟಿ ಡ್ಯಾಮೇಜ್ ನಿಂದ ಬಳಲುತ್ತಿರುವ ಥರ್ಡ್ ಪಾರ್ಟಿಗೆ ಇನ್ಶೂರರ್ ಕ್ಲೈಮ್ ಅಮೌಂಟ್ ಅನ್ನು ಪಾವತಿಸುತ್ತಾರೆ. ಕೆಲವೊಮ್ಮೆ ಕ್ಲೈಮ್ ಅಮೌಂಟ್ ದೊಡ್ಡದಾಗಿರುತ್ತದೆ, ಆದ್ದರಿಂದ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು ಹೊಂದಿರುವುದು ಸುರಕ್ಷಿತವಾಗಿದೆ.
  • ಕಾಂಪ್ರೆಹೆನ್ಸಿವ್ ಪಾಲಿಸಿಯೊಂದಿಗೆ ನಿಮ್ಮ ಕಾರನ್ನು ಸುರಕ್ಷಿತಗೊಳಿಸಿ: ಅಪಘಾತ ಅಥವಾ ಯಾವುದೇ ನೈಸರ್ಗಿಕ ಅಥವಾ ಮಾನವ ನಿರ್ಮಿತ ದುರಂತದಿಂದ ಕಾರಿಗೆ ಉಂಟಾಗುವ ಯಾವುದೇ ಡ್ಯಾಮೇಜ್ ಅನ್ನು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಕವರ್ ಮಾಡುತ್ತದೆ. ನಿಮ್ಮ ಥರ್ಡ್ ಪಾರ್ಟಿ ಲಯಬಿಲಿಟಿಯು ಈ ಪಾಲಿಸಿಯ ಅಡಿಯಲ್ಲಿಯೂ ಕವರ್ ಆಗುತ್ತದೆ.
  • ಆಡ್-ಆನ್‌ಗಳೊಂದಿಗೆ ಉತ್ತಮ ರಕ್ಷಣೆಯನ್ನು ಹೊಂದಿರಿ: ನೀವು ಕಾಂಪ್ರೆಹೆನ್ಸಿವ್ ಪ್ಲಾನ್ ನೊಂದಿಗೆ ಇಂಡಿವಿಜುವಲ್ ಬೆಲೆಯಲ್ಲಿ ಆಡ್-ಆನ್‌ಗಳನ್ನು ಖರೀದಿಸಬಹುದು. ನಿರ್ದಿಷ್ಟ ಸಂದರ್ಭಗಳನ್ನು ಎದುರಿಸಲು ನಿಮ್ಮನ್ನು ಸಿದ್ಧಗೊಳಿಸಲು ಆಡ್-ಆನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ರಿಟರ್ನ್ ಟು ಇನ್‌ವಾಯ್ಸ್ ನಂತಹ ಆಡ್-ಆನ್‌, ಕ್ಲೈಮ್ ಸಮಯದಲ್ಲಿ ಕಾರಿನ ಪೂರ್ಣ ಅಮೌಂಟ್ ಅನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಕಾರಿನ ಕವರೇಜ್ ಅನ್ನು ವಿಸ್ತರಿಸಲು ಎಂಜಿನ್ ಪ್ರೊಟೆಕ್ಷನ್, ಬ್ರೇಕ್ ಡೌನ್ ಅಸಿಸ್ಟೆನ್ಸ್ ಇತ್ಯಾದಿ ಇತರ ಆಡ್-ಆನ್‌ಗಳಿವೆ.

ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಗ್ಗೆ ಮತ್ತಷ್ಟು ತಿಳಿಯಿರಿ.

ಫೋರ್ಡ್ ಫ್ರೀಸ್ಟೈಲ್ ಬಗ್ಗೆ ಮತ್ತಷ್ಟು ತಿಳಿಯಿರಿ

ಹೌದು! ಭಾರತದಲ್ಲಿನ ಯುವಕರು ಹ್ಯಾಚ್‌ಬ್ಯಾಕ್ ಖರೀದಿಸುವ ಸಂದರ್ಭ ಬಂದಾಗ ಆಯ್ಕೆಯಿಂದ ಹೊರಗುಳಿಯುತ್ತಾರೆ. ಏಕೆಂದರೆ ಒಂದು ಕುಟುಂಬಕ್ಕೆ ಸೂಕ್ತವಾದ ಅನೇಕ ಕಾರುಗಳು ಲಭ್ಯವಿವೆ, ಆದರೆ ನಮ್ಮಲ್ಲಿ ಯುವಕರ ಅಭಿರುಚಿಗೆ ಸರಿಹೊಂದುವ ಹ್ಯಾಚ್‌ಬ್ಯಾಕ್ ಗಳ ಕೊರತೆಯಿದೆ. ಆದ್ದರಿಂದ ಯುವ ಪೀಳಿಗೆಯ ಡ್ರೈವಿಂಗ್ ಆನಂದದ ಬಾಯಾರಿಕೆಯನ್ನು ನೀಗಿಸಲು ಫೋರ್ಡ್ 100 ಕುದುರೆಗಳಿಗೆ ಸಮಾನವಾದ ಶಕ್ತಿಯನ್ನು ಹೊಂದಿರುವ ಫಿಗೋನಂತೆ ಕಾಣುವ ಕಾರನ್ನು ಒದಗಿಸುತ್ತದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ ₹5.82 ಲಕ್ಷದಿಂದ ಪ್ರಾರಂಭವಾಗುತ್ತದೆ.

ನೀವು ಫೋರ್ಡ್ ಫ್ರೀಸ್ಟೈಲ್ ಅನ್ನು ಏಕೆ ಖರೀದಿಸಬೇಕು?

  • ಬ್ಯಾಡ್ ಬಾಯ್ ಥರ ಕಾಣಿಸುತ್ತದೆ: ನೀವು ಈ ಕಾರನ್ನು ನೋಡಿದಾಗ ಅದು ದೊಡ್ಡ ಫೋರ್ಡ್ ಫಿಗೋದಂತೆ ಕಾಣುವುದರಿಂದ ನೀವು ಗೊಂದಲಕ್ಕೊಳಗಾಗಬಹುದು. ಹೌದು, ಇದು ಕ್ರಾಸ್‌ಹ್ಯಾಚ್ ಆಗಿದೆ! ಇದು ಫ್ಯಾಮಿಲಿ ಹ್ಯಾಚ್‌ಬ್ಯಾಕ್‌ ಕಾರ್ ಗಳ ಶ್ರೇಣಿಯನ್ನು ಸೇರುತ್ತದೆ. ನೆಲದಿಂದ ಎತ್ತರಕ್ಕೆ ಕಾಣುತ್ತಿದ್ದು ಮತ್ತು ಎಸ್‌ಯುವಿಯಂತೆ ದೃಢವಾದ ಅಂಶಗಳಿಂದ ಕೂಡಿದೆ. ಮೇಲ್ಛಾವಣಿಯ ರೇಲ್ ಗಳು, ಕಾರಿನ ಕೆಳಗಿನ ಭಾಗದ ಸುತ್ತಲೂ ಕ್ಲಾಡಿಂಗ್ ಮತ್ತು ಮುಂಭಾಗ ಮತ್ತು ಹಿಂಭಾಗದಲ್ಲಿ ಸ್ಕಫ್ ಪ್ಲೇಟ್‌ಗಳು, ಇವೆಲ್ಲವೂ ಈ ಕಾರನ್ನು ಬ್ಯಾಡ್ ಬಾಯ್ ಥರ ಕಾಣುವಂತೆ ಮಾಡುತ್ತದೆ.

ಗನ್ ಮಟಲ್ ಬಣ್ಣದ 15-ಇಂಚಿನ ಅಲಾಯ್ ಚಕ್ರಗಳು ಕಾರಿನ ವ್ಯಕ್ತಿತ್ವಕ್ಕೆ ತಕ್ಕಂತೆ ಇವೆ. ಬಾನೆಟ್ ತೀಕ್ಷ್ಣವಾದ ಕಟ್ ಗ್ರಿಲ್‌ ಹೊಂದಿದೆ. ಸಿ-ಆಕಾರದ ಫಾಗ್ ಲ್ಯಾಂಪ್ ನೊಂದಿಗೆ ಚೆನ್ನಾಗಿ ರೂಪಿಸಿರುವ ಬಂಪರ್ ಆಕ್ರಮಣಕಾರಿ ಲುಕ್ ಅನ್ನು ನೀಡುತ್ತದೆ. ಹೆಡ್‌ಲ್ಯಾಂಪ್‌ಗಳ ಮೇಲೆ ಸ್ಮೋಕ್ ಫೆಕ್ಟ್ ಲುಕ್ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ.

  • ದೊಡ್ಡದಾದ ಬೂಟ್ ಸ್ಪೇಸ್(ಡಿಕ್ಕಿ ಜಾಗ): ಈ ಕಾರ್ ಸೆಗ್ಮೆಂಟ್-ಮುಂಚೂಣಿಯ ಬೂಟ್ ಸ್ಪೇಸ್(ಡಿಕ್ಕಿ ಜಾಗ)ವನ್ನು ಹೊಂದಿದ್ದು, ನೀವು ಲಾಂಗ್ ಡ್ರೈವ್‌ ಹೋಗುವಾಗ ನಿಮ್ಮ ಲಗೇಜ್ ಅನ್ನು ಸುಲಭವಾಗಿ ಇಡಬಹುದು. ಸಣ್ಣ ಕಾರಿಗೆ ಇದು ಗಣನೀಯ ಗಾತ್ರವಾಗಿದೆ.
  • ಸ್ಟೈಲಿಶ್ ಕ್ಯಾಬಿನ್: ಫೋರ್ಡ್ ಫ್ರೀಸ್ಟೈಲ್ ಇಂಟೀರಿಯರ್ ಆಕರ್ಷಕ ಬಣ್ಣದ ಸ್ಕೀಮ್ ಅನ್ನು ಹೊಂದಿದೆ. ಬೀಜ್ ಪ್ಲಾಸ್ಟಿಕ್ ಡ್ಯಾಶ್‌ಬೋರ್ಡ್‌ಗಳನ್ನು ಒದಗಿಸುವ ಪ್ರತಿಸ್ಪರ್ಧಿ ಕಾರುಗಳಿಗೆ ಹೋಲಿಸಿದರೆ ಇದು ಸುಂದರವಾದ ಚಾಕೊಲೇಟ್ ಕಂದು ಮತ್ತು ಕಪ್ಪು ಸಂಯೋಜನೆಯೊಂದಿಗೆ ಬರುತ್ತದೆ. ಹೊಸ ಸ್ಟೀರಿಂಗ್ ಚಕ್ರವು ಮೌಂಟೆಡ್ ಕಂಟ್ರೋಲ್ ಗಳೊಂದಿಗೆ ಬರುತ್ತದೆ. ಸೆಂಟರ್ ಕನ್ಸೋಲ್‌ನಲ್ಲಿನ ಶೇಖರಣಾ ಸ್ಥಳ ಮತ್ತು ಬೃಹತ್ ಡೋರ್ ಬಿನ್‌ಗಳು ಈ ಕಾರಿಗೆ ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಹೆಚ್ಚಿನ ಅಂಕ ನೀಡುತ್ತವೆ. ಇದು 6.5-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತದೆ, ಅದನ್ನು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಬೆಂಬಲಿಸುತ್ತದೆ.
  • ಸುರಕ್ಷತೆ: ಫೋರ್ಡ್ ಸುರಕ್ಷತೆಯನ್ನು ಸಾರುತ್ತದೆ, ಅದರಲ್ಲಿ ಯಾವುದೇ ಸಂದೇಹವಿಲ್ಲ. ಈ ಕಾರು ಸುರಕ್ಷತೆಯನ್ನು ಹೆಚ್ಚಿಸಲು 6 ಏರ್‌ಬ್ಯಾಗ್‌ಗಳು, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಆಂಟಿ-ರೋಲ್‌ಓವರ್ ಪ್ರೊಟೆಕ್ಷನ್, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್‌ಗಳು, ರೇರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ನೀಡುತ್ತದೆ.
  • ಚಾಲನೆಯ ಆನಂದ: ಪೆಟ್ರೋಲ್ ವೇರಿಯಂಟ್ ನಲ್ಲಿ ಈ ಕಾರು 1.2 ಲೀಟರ್ 3 ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಡೀಸೆಲ್ ಟ್ರಿಮ್ ನಲ್ಲಿ, ಇದು 1.5-ಲೀಟರ್ ಎಂಜಿನ್ ಅನ್ನು ಪಡೆಯುತ್ತದೆ. ಎರಡೂ ಇಂಜಿನ್‌ಗಳು ತುಂಬಾ ಫ್ರೀ-ರಿವ್ವಿಂಗ್ ಇಂಜಿನ್‌ಗಳಾಗಿವೆ, ಅವುಗಳು 6000 ಆರ್‌ಪಿಎಮ್‌ವರೆಗೆ ಎಳೆಯಬಹುದಾದ ಸಾಮರ್ಥ್ಯ ಹೊಂದಿವೆ. ದಪ್ಪನಾದ ಟೈರ್‌ಗಳು, ರಿಟ್ಯೂನ್ಡ್ ಸಸ್ಪೆನ್ಷನ್, ರಿಫೈನ್ಡ್ ಗೇರ್‌ಬಾಕ್ಸ್, ಸುಪ್ರೀಂ ಬ್ರೇಕ್‌ಗಳು, ಉತ್ತಮ ಕ್ಲಚ್ ಆಕ್ಷನ್‌ಗಳು, ಇವೆಲ್ಲವೂ ಒಟ್ಟಾಗಿ ಫೋರ್ಡ್ ಕಾರುಗಳು ನಿಮಗೆ ಭರವಸೆ ನೀಡುವ ಡ್ರೈವಿಂಗ್ ಆನಂದವನ್ನು ಫ್ರೀಸ್ಟೈಲ್‌ನಲ್ಲಿ ಅಖಂಡವಾಗಿರುವುದನ್ನು ಖಚಿತಪಡಿಸುತ್ತದೆ.

ಫೋರ್ಡ್ ಫ್ರೀಸ್ಟೈಲ್ ವೇರಿಯಂಟ್ ಗಳು

ವೇರಿಯಂಟ್ ಹೆಸರು ವೇರಿಯಂಟ್ ಬೆಲೆ (ಮುಂಬೈನಲ್ಲಿ, ಇತರ ನಗರಗಳಲ್ಲಿ ಬದಲಾಗಬಹುದು)
ಫ್ರೀಸ್ಟೈಲ್ ಟೈಟಾನಿಯಂ 1.2 ಟಿಐ-ವಿಸಿಟಿ ₹ 8.58 ಲಕ್ಷ
ಫ್ರೀಸ್ಟೈಲ್ ಟೈಟಾನಿಯಂ ಪ್ಲಸ್ 1.2 ಟಿಐ-ವಿಸಿಟಿ ₹ 8.99 ಲಕ್ಷ
ಫ್ರೀಸ್ಟೈಲ್ ಫ್ಲೇರ್ ಎಡಿಷನ್ 1.2 ಟಿಐ-ವಿಸಿಟಿ ₹ 9.33 ಲಕ್ಷ
ಫ್ರೀಸ್ಟೈಲ್ ಟೈಟಾನಿಯಂ 1.5 ಟಿಡಿಸಿಐ ₹ 10.02 ಲಕ್ಷ
ಫ್ರೀಸ್ಟೈಲ್ ಟೈಟಾನಿಯಂ ಪ್ಲಸ್ 1.5 ಟಿಡಿಸಿಐ ₹ 10.44 ಲಕ್ಷ
ಫ್ರೀಸ್ಟೈಲ್ ಫ್ಲೇರ್ ಎಡಿಷನ್ 1.5 ಟಿಡಿಸಿಐ ₹ 10.79 ಲಕ್ಷ

[1]

ಪದೇ ಪದೇ ಕೇಳಲಾದ ಪ್ರಶ್ನೆಗಳು

ಥರ್ಡ್-ಪಾರ್ಟಿ ಡ್ಯಾಮೇಜ್ ಸಂದರ್ಭದಲ್ಲಿ ಡಿಜಿಟ್ ನೀಡಬಹುದಾದ ಗರಿಷ್ಠ ಕವರೇಜ್ ಯಾವುದು?

ಡಿಜಿಟ್ ವೈಯಕ್ತಿಕ ಡ್ಯಾಮೇಜ್ ಗಳಿಗೆ ಅನಿಯಮಿತ ಲಯಬಿಲಿಟಿಯನ್ನು ನೀಡುತ್ತದೆ ಮತ್ತು ಪ್ರಾಪರ್ಟಿ ಅಥವಾ ವಾಹನ ಡ್ಯಾಮೇಜ್ ಗಳಿಗೆ ₹ 7.5 ಲಕ್ಷದವರೆಗೆ ನೀಡುತ್ತದೆ.

ನಾನು ಹೊಸ ಕಾರನ್ನು ಖರೀದಿಸಿದರೆ ನನ್ನ ಎನ್‌ಸಿಬಿ ವ್ಯಾಲಿಡ್ ಆಗಿ ಉಳಿಯುತ್ತದೆಯೇ?

ಹೌದು, ನೀವು ಹೊಸ ಕಾರನ್ನು ಖರೀದಿಸಿದರೂ ಸಹ, ಹಳೆಯ ಕಾರ್ ಪಾಲಿಸಿಯಲ್ಲಿ ನೀವು ಸಂಗ್ರಹಿಸಿದ ನೋ-ಕ್ಲೈಮ್ ಬೋನಸ್ ಅನ್ನು ನೀವು ಇನ್ನೂ ಪಡೆಯಬಹುದು.