ಫೋರ್ಡ್ ಇಕೋಸ್ಪೋರ್ಟ್ ಕಾರ್ ಇನ್ಶೂರೆನ್ಸ್

Get Instant Policy in Minutes*

Third-party premium has changed from 1st June. Renew now

ಫೋರ್ಡ್ ಇಕೋಸ್ಪೋರ್ಟ್ ಕಾರ್ ಇನ್ಶೂರೆನ್ಸ್ ಬೆಲೆ ಮತ್ತು ತ್ವರಿತವಾಗಿ ಆನ್‌ಲೈನ್‌ ರಿನೀವಲ್

ಫೋರ್ಡ್ ಇಕೋಸ್ಪೋರ್ಟ್ ಬಿಡುಗಡೆಯು ಭಾರತದಲ್ಲಿ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಟ್ರೆಂಡ್ ಅನ್ನು ಬದಲಾಯಿಸಿತು. ಇದು ಆರಾಮದಾಯಕ ಡ್ರೈವಿಂಗ್ ಅನುಭವ, ಉತ್ತಮ ಕಾರ್ಯಕ್ಷಮತೆ ಮತ್ತು ಪ್ರಭಾವಶಾಲಿ ರೋಡ್ ಪ್ರೆಸೆನ್ಸ್ ಅನ್ನು ಹೊಂದಿದೆ. ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್, ವಿಶಾಲವಾದ ಕ್ಯಾಬಿನ್, ಸನ್‌ರೂಫ್ ಹೊಂದಿರುವ ಇಕೋಸ್ಪೋರ್ಟ್ ಎಲ್ಲಾ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ.

ಆದ್ದರಿಂದ, ನೀವು ಈಗಾಗಲೇ ಈ ಮಾಡೆಲ್ ಅನ್ನು ಡ್ರೈವ್ ಮಾಡುತ್ತಿದ್ದರೆ ಅಥವಾ ಇತ್ತೀಚಿನ ವರ್ಷನ್ ಅನ್ನು ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ಸಂಭವನೀಯ ಆರ್ಥಿಕ ಒತ್ತಡವನ್ನು ತಪ್ಪಿಸಲು ಫೋರ್ಡ್ ಇಕೋಸ್ಪೋರ್ಟ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದುಕೊಳ್ಳಿ.

ವಾಸ್ತವವಾಗಿ, 1988ರ ಮೋಟಾರ್ ವೆಹಿಕಲ್ಸ್ ಆಕ್ಟ್ ಪ್ರಕಾರ ಭಾರತದಲ್ಲಿ ನಿಮ್ಮ ವಾಹನವನ್ನು ಇನ್ಶೂರೆನ್ಸ್ ಮಾಡುವುದು ಕಡ್ಡಾಯವಾಗಿದೆ. ಯಾವುದೇ ಉಲ್ಲಂಘನೆಯು ತೀವ್ರವಾದ ಕಾನೂನು ಪರಿಣಾಮಗಳು ಮತ್ತು ಪೆನಲ್ಟಿಗಳಿಗೆ ಕಾರಣವಾಗುತ್ತದೆ.

ಈಗ, ಆನ್‌ಲೈನ್‌ನಲ್ಲಿ ವಿಶ್ವಾಸಾರ್ಹ ಇನ್ಶೂರೆನ್ಸ್ ಆಯ್ಕೆಗಳನ್ನು ಹುಡುಕುತ್ತಿರುವಾಗ, ತಿಳುವಳಿಕೆಯುಳ್ಳ ಆಯ್ಕೆಯನ್ನು ಮಾಡುವ ಮೊದಲು ನೀವು ಹಲವಾರು ಅಂಶಗಳನ್ನು ನಿರ್ಧರಿಸಬೇಕು. ಉದಾಹರಣೆಗೆ, ನೀವು ಫೋರ್ಡ್ ಇಕೋಸ್ಪೋರ್ಟ್ ಕಾರ್ ಇನ್ಶೂರೆನ್ಸ್ ಬೆಲೆ, ಲಭ್ಯವಿರುವ ಆ್ಯಡ್-ಆನ್ ಕವರ್‌ಗಳು, ಐಡಿವಿ ಫ್ಯಾಕ್ಟರ್ ಮತ್ತು ಹೆಚ್ಚಿನದನ್ನು ಹೋಲಿಸಬೇಕು.

ಈ ನಿಟ್ಟಿನಲ್ಲಿ, ಡಿಜಿಟ್ ಕಾರ್ ಇನ್ಶೂರೆನ್ಸ್ ಗೆ ಸೂಕ್ತವಾದ ಆಯ್ಕೆಯನ್ನು ಮಾಡುತ್ತದೆ.

ಏಕೆ ಎಂಬುದನ್ನು ತಿಳಿಯಲು ಪೂರ್ತಿ ಓದಿ.

ಫೋರ್ಡ್ ಇಕೋಸ್ಪೋರ್ಟ್ ಇನ್ಶೂರೆನ್ಸ್ ಬೆಲೆ

ರಿಜಿಸ್ಟ್ರೇಷನ್ ದಿನಾಂಕ ಪ್ರೀಮಿಯಂ (ಓನ್ ಡ್ಯಾಮೇಜ್ ಪಾಲಿಸಿಗೆ)
ಜೂನ್-2021 7,721
ಜೂನ್-2020 5,295
ಜೂನ್-2019 5,019

** ಡಿಸ್‌ಕ್ಲೈಮರ್‌ - ಫೋರ್ಡ್ ಇಕೋಸ್ಪೋರ್ಟ್ 1.0 ಇಕೋಬೂಸ್ಟ್ ಟೈಟಾನಿಯಂ ಪ್ಲಸ್ ಪೆಟ್ರೋಲ್ ಗೆ ಮಾಡಲಾದ ಪ್ರೀಮಿಯಂ ಕ್ಯಾಲ್ಕುಲೇಷನ್ 999.0 ಜಿಎಸ್‌ಟಿ ಹೊರತುಪಡಿಸಲಾಗಿದೆ.

ನಗರ - ಬೆಂಗಳೂರು, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಜೂನ್, ಎನ್‌ಸಿಬಿ- 0%, ಯಾವುದೇ ಆ್ಯಡ್‌-ಆನ್‌ಗಳಿಲ್ಲ, ಪಾಲಿಸಿ ಎಕ್ಸ್ಪೈರ್ ಆಗಿಲ್ಲ & ಕಡಿಮೆ ಐಡಿವಿ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕುಲೇಷನ್ ಅನ್ನು ಮಾರ್ಚ್-2022ರಲ್ಲಿ ಮಾಡಲಾಗಿದೆ. ದಯವಿಟ್ಟು ನಿಮ್ಮ ವಾಹನದ ವಿವರಗಳನ್ನು ಮೇಲೆ ನಮೂದಿಸುವ ಮೂಲಕ ಅಂತಿಮ ಪ್ರೀಮಿಯಂ ಅನ್ನು ಚೆಕ್ ಮಾಡಿ.

ಫೋರ್ಡ್ ಇಕೋಸ್ಪೋರ್ಟ್ ಕಾರ್ ಇನ್ಶೂರೆನ್ಸ್‌ ನಲ್ಲಿ ಏನೆಲ್ಲಾ ಕವರ್‌ ಆಗುತ್ತದೆ

ಡಿಜಿಟ್‌ನ ಫೋರ್ಡ್ ಇಕೋಸ್ಪೋರ್ಟ್ ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?

ಫೋರ್ಡ್ ಇಕೋಸ್ಪೋರ್ಟ್ ಗೆ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು

×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್‌ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವಾಹನದ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

ಎಷ್ಟು ವೇಗವಾಗಿ ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಸೆಟಲ್ ಆಗುತ್ತವೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಫೋರ್ಡ್ ಇಕೋಸ್ಪೋರ್ಟ್‌ಗಾಗಿ ಕಾರ್ ಇನ್ಶೂರೆನ್ಸ್ ಕುರಿತು ಮತ್ತಷ್ಟು

ಭಾರತೀಯ ಕಾರ್ ಉತ್ಸಾಹಿಗಳು ಕಾಲಾನಂತರದಲ್ಲಿ ಸಬ್-4-ಮೀಟರ್ ಎಸ್‌ಯುವಿಗಳ ಅಭಿರುಚಿಯನ್ನು ಬೆಳೆಸಿಕೊಂಡಂತೆ, ಫೋರ್ಡ್ ಕಂಪನಿ ಇಕೋಸ್ಪೋರ್ಟ್ ಎಂಬ ತನ್ನ ಅತ್ಯುನ್ನತ ಉತ್ಪನ್ನವನ್ನು ತಂದಿತು. ಮಾನದಂಡಗಳನ್ನು ಸ್ಥಾಪಿಸಲು ಈ ಕಾರು ಸೆಗ್ಮೆಂಟ್ ಅನ್ನು ಪ್ರವೇಶಿಸಿತು. ಈ ಕಾರಿನ ಭಾರೀ ಯಶಸ್ಸು ಮತ್ತು ಕ್ಷಿಪ್ರ ಜನಪ್ರಿಯತೆಯಿಂದಾಗಿ, ಫೋರ್ಡ್ ನ ರೇಸ್ ಅನ್ನು ಮುನ್ನಡೆಸಲು ಈ ಮಾಡೆಲ್ ಅನ್ನು ಫೇಸ್‌ಲಿಫ್ಟ್ ಮಾಡಿದೆ. ಮಾರುಕಟ್ಟೆಯಲ್ಲಿನ ಅಪಾರ ಪ್ರದರ್ಶನ ಮತ್ತು ಜನರಿಂದ ಪಡೆದ ಪ್ರೀತಿಯ ಅಗಾಧತೆಯು ಅದು ಪಡೆದ ಪ್ರಶಸ್ತಿಗಳಿಂದ ಸಾಬೀತಾಗಿದೆ. ಕೆಳಗಿನವುಗಳು ಆ ಕೆಲವು ಪ್ರಶಸ್ತಿಗಳು:

  • ವರ್ಷದ ಕಾಂಪ್ಯಾಕ್ಟ್ ಎಸ್‌ಯುವಿ- ಆಟೋಕಾರ್ ಅವಾರ್ಡ್ಸ್ 2018
  • ವರ್ಷದ ಅತ್ಯುತ್ತಮ ಎಸ್‌ಯುವಿ- ಆಟೋ ಪೋರ್ಟಲ್ ಅವಾರ್ಡ್ 2018
  • ವರ್ಷದ ಎಂಜಿನ್- ಆಟೋಕಾರ್ ಅವಾರ್ಡ್ಸ್ 2018
  • ವರ್ಷದ ಕಾಂಪ್ಯಾಕ್ಟ್ ಎಸ್‌ಯುವಿ- ಮೋಟಾರಿಂಗ್ ಅವಾರ್ಡ್ 2018
  • ವರ್ಷದ ಕಾಂಪ್ಯಾಕ್ಟ್ ಎಸ್‌ಯುವಿ- ಓವರ್‌ಡ್ರೈವ್ ಅವಾರ್ಡ್ 2018

ಫೋರ್ಡ್ ಇಕೋಸ್ಪೋರ್ಟ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಆಂಬಿಯೆಂಟ್, ಟ್ರೆಂಡ್, ಟೈಟಾನಿಯಂ, ಥಂಡರ್, ಎಸ್ & ಟೈಟಾನಿಯಮ್+ ಎಂಬ 6 ವೇರಿಯಂಟ್ ಗಳು ಲಭ್ಯವಿದೆ. ತಯಾರಕರು ಹೇಳಿಕೊಳ್ಳುವ ಸರಾಸರಿ ಫ್ಯುಯಲ್ ಎಕಾನಮಿಯು 15-23 ಕೆಎಂಪಿಎಲ್ ಆಗಿದೆ. ಇದು ಕಾಂಪ್ಯಾಕ್ಟ್ ಎಸ್‌ಯುವಿ ಆಗಿರುವುದರಿಂದ, ಇದು ನಿಮ್ಮ ದೈನಂದಿನ ಪ್ರಯಾಣಿಕ ಕಾರ್ ಕೂಡ ಆಗಿರಬಹುದು ಮತ್ತು ಹೆದ್ದಾರಿಗಳಲ್ಲಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ವೈಶಿಷ್ಟ್ಯಗಳು ಮತ್ತು ಬೆಲೆ ಶ್ರೇಣಿಯಿಂದಾಗಿ ಈ ಕಾರು ಯುವ ಪೀಳಿಗೆಯನ್ನು ಆಕರ್ಷಿಸುತ್ತದೆ.

ನೀವು ಫೋರ್ಡ್ ಇಕೋಸ್ಪೋರ್ಟ್ ಅನ್ನು ಏಕೆ ಖರೀದಿಸಬೇಕು?

  • ಅದರ ಲುಕ್ ಹೇಗಿದೆ: ಇಕೋಸ್ಪೋರ್ಟ್ ವಿಶಾಲವಾದ ಫೋರ್ಡ್ ಎಂಡೀವರ್ ನಿಂದ ಪ್ರೇರಿತ ಗ್ರಿಲ್ ಹೊಂದಿದ್ದು ಆಕ್ರಮಣಕಾರಿಯಾಗಿ ಕಾಣುತ್ತದೆ. ಎಲ್ಇಡ್ ಡಿಆರ್‌ಎಲ್‌ಗಳು, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ದೊಡ್ಡ ಫಾಗ್ ಲ್ಯಾಂಪ್‌ಗಳು ಇದನ್ನು ಸುಂದರವಾಗಿಸಿದೆ. ಟೈರ್‌ಗಳು ಹಿಂದೆಂದಿಗಿಂತಲೂ ದೊಡ್ಡದಾಗಿದೆ ಮತ್ತು ದಪ್ಪವಾಗಿರುತ್ತದೆ. 17-ಇಂಚಿನ ಅಲಾಯ್ ಗಳು ಇದನ್ನು ಸರಿಯಾದ ಎಸ್‌ಯುವಿ ಯಂತೆ ತೋರಿಸಲು ವಿಫಲವಾಗುವುದಿಲ್ಲ. ಮತ್ತು ಬೂಟ್ ಡೋರ್ ಹತ್ತಿರ ಇರುವ ಸ್ಪೇರ್ ಟೈರ್ ಅನ್ನು ನೀವು ನಿರ್ಲಕ್ಷಿಸುವುದಾದರೂ ಹೇಗೆ? ಇದು ಬಿಸಿನೆಸ್ ಗೆ ಸಿದ್ಧವಾಗಿದೆ ಎಂಬುದನ್ನು ತೋರುತ್ತಿದೆ.
  • ಹೆಚ್ಚು ಸಂಗ್ರಹಣೆ ಮತ್ತು ಆರಾಮದಾಯಕ ಸೀಟ್ ಗಳು: ಫೋರ್ಡ್ ನಲ್ಲಿ, ಕ್ಯಾಬಿನ್ ಒಳಗೆ 30 ಇಂಡಿವಿಜುವಲ್ ಶೇಖರಣಾ ಸ್ಥಳಗಳಿವೆ. ಈ ಕಾರು ಕ್ಲಾಸ್-ಲೀಡಿಂಗ್ ಬೂಟ್ ಸ್ಪೇಸ್ ಅನ್ನು ಹೊಂದಿದೆ, ಅಂದರೆ ಸೀಟ್ ಇದ್ದಾಗ 352 ಲೀಟರ್ ಮತ್ತು ಸೀಟುಗಳು ಇಲ್ಲದಿದ್ದಾಗ 1178 ಲೀಟರ್ ಡಿಕ್ಕಿ ಸ್ಪೇಸ್ ಇದೆ. ಸ್ಪೇರ್ ವೀಲ್ ಅನ್ನು ಹಿಂಬದಿಯ ಬಾಗಿಲಿಗೆ ವರ್ಗಾಯಿಸಿದಾಗ 52 ಲೀಟರ್ ಹೆಚ್ಚುವರಿ ಸ್ಥಳಾವಕಾಶ ದೊರೆಯುತ್ತದೆ. ಉತ್ತಮ ಆರಾಮಕ್ಕಾಗಿ ನೀವು ಉನ್ನತ ಸ್ಥಾನದಲ್ಲಿ ಕುಳಿತುಕೊಳ್ಳುವ ರೀತಿಯಲ್ಲಿ ಸೀಟುಗಳನ್ನು ಜೋಡಿಸಲಾಗಿದೆ. ಈ ಎಲ್ಲಾ ವೈಶಿಷ್ಟ್ಯಗಳು ಕಾರನ್ನು ರಸ್ತೆ ಪ್ರವಾಸಕ್ಕೆ ಸದಾ ಸಿದ್ಧಗೊಳಿಸಿಟ್ಟಿರುತ್ತವೆ.
  • ಆಕರ್ಷಕ ಡ್ಯಾಶ್‌ಬೋರ್ಡ್ ಮತ್ತು ವೈಶಿಷ್ಟ್ಯಗಳು: 8-ಇಂಚಿನ ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯಾಶ್‌ಬೋರ್ಡ್ ಅನ್ನು ಐಷಾರಾಮಿಯಾಗಿ ಕಾಣುವಂತೆ ಮಾಡುತ್ತದೆ. ಇದು ಈ ಸೆಗ್ಮೆಂಟಿನಲ್ಲಿ ಅತಿ ದೊಡ್ಡ ಟಚ್ ಸ್ಕ್ರೀನ್ ಆಗಿದೆ. ಆಧುನಿಕ ವೈಶಿಷ್ಟ್ಯಗಳ ವಿಷಯದಲ್ಲಿ ಇದು ಕ್ರೂಸ್ ಕಂಟ್ರೋಲ್, ಅಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು, ಅಟೋಮ್ಯಾಟಿಕ್ ವೈಪರ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಡ್ಯುಯಲ್ ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಐಸೋಫಿಕ್ಸ್ ಮೌಂಟ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಇತ್ಯಾದಿಗಳನ್ನು ಹೊಂದಿದೆ. 7 ಆಂಬಿಯೆಂಟ್ ಲೈಟಿಂಗ್ ಮೋಡ್ ಗಳು ಇಂಟೀರಿಯರ್ ಅನ್ನು ಸುಂದರ ಮಾಡುತ್ತದೆ.
  • ಡ್ರೈವಿಂಗ್ ಆನಂದ: ಈ ಕಾರು, ಶಕ್ತಿಯುತ 1.5-ಲೀಟರ್ ಡೀಸೆಲ್ ಅಥವಾ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಎಂಜಿನ್ 122 ಬಿಎಚ್‌ಪಿ ಮತ್ತು 155 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು ಎಷ್ಟು ಸಾಧ್ಯವೋ ಅಷ್ಟು ಪರಿಷ್ಕರಿಸಲಾಗಿದೆ, ಮತ್ತು ಎಂಜಿನ್ ಈ ಶಕ್ತಿಯುತ ಫಲಿತಾಂಶಗಳನ್ನು ಎಲ್ಲಾ ಥರದ ತಿರುವು ರಸ್ತೆಗಳಲ್ಲಿ ಮತ್ತು ನೇರ ಹೆದ್ದಾರಿಗಳಲ್ಲಿ ಸಂಪೂರ್ಣ ಡ್ರೈವಿಂಗ್ ಆನಂದವನ್ನು ನೀಡುತ್ತದೆ. ಸಸ್ಪೆನ್ಷನ್ ಎಷ್ಟು ಉತ್ತಮವಾಗಿದೆ ಎಂದರೆ ಕ್ಯಾಬಿನ್‌ನೊಳಗಿನ ಪ್ರಯಾಣಿಕರಿಗೆ ಕಾರು ಗುಂಡಿಯಿಂದ ಜರ್ಕ್ ಆದಾಗಲೂ ಅದು ಅವರ ಅನುಭವಕ್ಕೆ ಬರುವುದಿಲ್ಲ.

ಫೋರ್ಡ್ ಇಕೋಸ್ಪೋರ್ಟ್ ಕಾರ್ ಇನ್ಶೂರೆನ್ಸ್ ಪಾಲಿಸಿಗಾಗಿ ಡಿಜಿಟ್ ಅನ್ನು ಏಕೆ ಆರಿಸಬೇಕು?

ವಾಹನ ಇನ್ಶೂರೆನ್ಸ್ ಪಾಲಿಸಿಯಿಂದ ಗ್ರಾಹಕರು ಯಾವ ರೀತಿಯ ಆರ್ಥಿಕ ಕವರೇಜ್ ಅನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಡಿಜಿಟ್ ಪ್ರಯಾಣಿಕರ ವೈವಿಧ್ಯಮಯ ಅವಶ್ಯಕತೆಗಳನ್ನು ನಿಖರವಾಗಿ ಸಂಶೋಧಿಸುತ್ತದೆ. ಅದರ ಆಧಾರದ ಮೇಲೆ, ಅದು ತನ್ನ ಹೊಂದಿಕೊಳ್ಳುವ ಪಾಲಿಸಿ ಪ್ಲಾನ್ ಗಳನ್ನು ಸಿದ್ಧಪಡಿಸುತ್ತದೆ ಮತ್ತು ಸಂಪೂರ್ಣ ಆರ್ಥಿಕ ರಕ್ಷಣೆಯನ್ನು ಒದಗಿಸಲು ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ.

  • ವ್ಯಾಪಕ ರೇಂಜಿನ ಪಾಲಿಸಿಗಳು - ನಿಮ್ಮ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲು ಡಿಜಿಟ್ ಕೆಳಗಿನ ಇನ್ಶೂರೆನ್ಸ್ ಯೋಜನೆಗಳನ್ನು ಒದಗಿಸುತ್ತದೆ.
  • ಥರ್ಡ್-ಪಾರ್ಟಿ ಪಾಲಿಸಿ - ಈ ಕವರ್ ಅಡಿಯಲ್ಲಿ, ನಿಮ್ಮ ಕಾರು ಮತ್ತು ಇನ್ನೊಂದು ವಾಹನ, ವ್ಯಕ್ತಿ ಅಥವಾ ಪ್ರಾಪರ್ಟಿಯ ನಡುವಿನ ಅಪಘಾತದಲ್ಲಿ ಒಳಗೊಂಡಿರುವ ಥರ್ಡ್ ಪಾರ್ಟಿ ಡ್ಯಾಮೇಜ್ ವೆಚ್ಚಗಳಿಗೆ ಡಿಜಿಟ್ ಪಾವತಿಸುತ್ತದೆ. ವಾಸ್ತವವಾಗಿ, ಅಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಲಿಟಿಗೇಷನ್ ಸಮಸ್ಯೆಗಳನ್ನು ಡಿಜಿಟ್ ನೋಡಿಕೊಳ್ಳುತ್ತದೆ. ಇದಲ್ಲದೆ, ಮೋಟಾರ್ ವೆಹಿಕಲ್ ಆಕ್ಟ್ 1988ರ ಪ್ರಕಾರ ಇದು ಕಡ್ಡಾಯವಾಗಿದೆ.
  • ಕಾಂಪ್ರೆಹೆನ್ಸಿವ್ ಪಾಲಿಸಿ - ಇದು ಡಿಜಿಟ್ ಒದಗಿಸುವ ಅತ್ಯಂತ ವಿಸ್ತಾರವಾದ ಪಾಲಿಸಿಯಾಗಿದೆ. ಈ ಪಾಲಿಸಿಯ ಅಡಿಯಲ್ಲಿ, ನೀವು ಥರ್ಡ್ ಪಾರ್ಟಿ ಮತ್ತು ಓನ್ ಡ್ಯಾಮೇಜ್ ಪ್ರೊಟೆಕ್ಷನ್ ಎರಡನ್ನೂ ಪಡೆಯುತ್ತೀರಿ. ಇದಲ್ಲದೆ, ಡಿಜಿಟ್ ತನ್ನ ಗ್ರಾಹಕರಿಗೆ ಆ್ಯಡ್-ಆನ್ ಕವರ್‌ಗಳೊಂದಿಗೆ ಕಾಂಪ್ರೆಹೆನ್ಸಿವ್ ಪಾಲಿಸಿಯನ್ನು ಹೆಚ್ಚಿಸಲು ಅನುಕೂಲ ಮಾಡುತ್ತದೆ.
  • ಆ್ಯಡ್-ಆನ್‌ಗಳ ವ್ಯಾಪಕ ಶ್ರೇಣಿ - ನೀವು ಫೋರ್ಡ್ ಇಕೋಸ್ಪೋರ್ಟ್‌ಗಾಗಿ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ, ನೀವು ಈ ಕೆಳಗಿನ ಪಟ್ಟಿಯಿಂದ ಆ್ಯಡ್-ಆನ್ ಕವರ್‌ಗಳನ್ನು ಸೇರಿಸಿಕೊಳ್ಳಬಹುದು.
    • ಕನ್ಸ್ಯೂಮೇಬಲ್ಸ್
    • ಝೀರೋ ಡೆಪ್ರಿಸಿಯೇಷನ
    • ರಿಟರ್ನ್ ಟು ಇನ್ವಾಯ್ಸ್
    • ಬ್ರೇಕ್ ಡೌನ್ ಅಸಿಸ್ಟೆನ್ಸ್ ಮತ್ತು ಇತ್ಯಾದಿ

ಸೂಚನೆ: ನಿಮ್ಮ ಫೋರ್ಡ್ ಇಕೋಸ್ಪೋರ್ಟ್ ಕಾರ್ ಇನ್ಶೂರೆನ್ಸ್ ರಿನೀವಲ್ ಬೆಲೆಯನ್ನು ಹೆಚ್ಚಿಸುವ ಮೂಲಕ ರಿನೀವಲ್ ನಂತರ ನೀವು ಆ್ಯಡ್-ಆನ್ ಕವರ್ ಅನ್ನು ಮುಂದಕ್ಕೆ ಸಾಗಿಸಬಹುದು.

  • ಆನ್‌ಲೈನ್‌ನಲ್ಲಿ ಪಾಲಿಸಿಗಳನ್ನು ಖರೀದಿಸಿ ಅಥವಾ ರಿನೀವ್ ಮಾಡಿ - ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಸುರಕ್ಷಿತವಾಗಿರಿಸಲು ನೀವು ಸುದೀರ್ಘವಾದ ಪೇಪರ್ ಕೆಲಸಗಳನ್ನು ಮತ್ತು ಸಮಯ ತೆಗೆದುಕೊಳ್ಳುವ ಪ್ರೊಸೆಸ್ ಗಳನ್ನು ಬದಿಗೊತ್ತಬಹುದು. ನೀವು ಮಾಡಬೇಕಾಗಿರುವುದು ಡಿಜಿಟ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಆನ್‌ಲೈನ್‌ನಲ್ಲಿ ಫೋರ್ಡ್ ಇಕೋಸ್ಪೋರ್ಟ್ ಕಾರ್ ಇನ್ಶೂರೆನ್ಸ್ ಅನ್ನು ಅಂತಿಮಗೊಳಿಸುವುದು. ಈಗ, ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ, ಫೋರ್ಡ್ ಇಕೋಸ್ಪೋರ್ಟ್ ಕಾರ್ ಇನ್ಶೂರೆನ್ಸ್ ರಿನೀವಲ್ ಗಾಗಿ ನಿಮ್ಮ ಖಾತೆಗೆ ಸೈನ್ ಇನ್ ಮಾಡಿ.
  • ಐಡಿವಿ(IDV) ಮಾರ್ಪಾಡು - ನಿಮ್ಮ ಅನುಕೂಲತೆಯ ಆಧಾರದ ಮೇಲೆ ಹೆಚ್ಚಿನ ಅಥವಾ ಕಡಿಮೆ ಐಡಿವಿ ಅನ್ನು ಆಯ್ಕೆ ಮಾಡಲು ಡಿಜಿಟ್ ನಿಮಗೆ ಅನುಮತಿಸುತ್ತದೆ. ಹೆಚ್ಚಿನ ಐಡಿವಿ, ಕಳ್ಳತನ ಅಥವಾ ಸರಿಪಡಿಸಲಾಗದ ಡ್ಯಾಮೇಜ್ ನ ಸಂದರ್ಭದಲ್ಲಿ ಉತ್ತಮ ಪರಿಹಾರವನ್ನು ನೀಡುತ್ತದೆ, ಕಡಿಮೆ ಐಡಿವಿ ವೆಚ್ಚಗಳು ಕಡಿಮೆ ಪರಿಹಾರ ನೀಡುತ್ತದೆ.
  • 3-ಹಂತದ ಕ್ಲೈಮ್ ಫೈಲಿಂಗ್ ಪ್ರೊಸೆಸ್ - ನಿಮ್ಮ ಕ್ಲೈಮ್‌ನ ಕಾರಣವನ್ನು ಪರಿಶೀಲಿಸಲು ನಿಮ್ಮ ಸ್ಥಳಕ್ಕೆ ಭೇಟಿ ನೀಡುವ ಮಧ್ಯವರ್ತಿ ವ್ಯಕ್ತಿಯನ್ನು ಡಿಜಿಟ್ ಒಳಗೊಂಡಿರುವುದಿಲ್ಲ. ಬದಲಾಗಿ, ಇದು ಸ್ವಯಂ ಕ್ಲೈಮ್ ಫ್ಲೈಲಿಂಗ್ ಪ್ರೊಸೆಸ್ ಅನ್ನು ನೀಡುತ್ತದೆ.

1800 258 5956 ಅನ್ನು ಡಯಲ್ ಮಾಡಿ ಮತ್ತು ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ಸ್ವಯಂ ತಪಾಸಣೆ ಲಿಂಕ್ ಅನ್ನು ಪಡೆಯಿರಿ. ನಂತರ, ನಿಮ್ಮ ಡ್ಯಾಮೇಜ್ ಗೊಳಗಾದ ಕಾರಿನ ಎಲ್ಲಾ ಸಂಬಂಧಿತ ಚಿತ್ರಗಳನ್ನು ಸಬ್ಮಿಟ್ ಮಾಡಿ ಮತ್ತು 'ರೀ-ಇಂಬರ್ಸ್ ಮೆಂಟ್' ಮತ್ತು 'ಕ್ಯಾಶ್ ಲೆಸ್' ಆಯ್ಕೆಗಳಿಂದ ನಿಮ್ಮ ಆದ್ಯತೆಯ ದುರಸ್ತಿ ವಿಧಾನವನ್ನು ಆರಿಸಿ.

  • ನೋ ಕ್ಲೈಮ್ ಬೋನಸ್ ಡಿಸ್ಕೌಂಟ್ - ಇಡೀ ವರ್ಷಕ್ಕೆ ಯಾವುದೇ ಕ್ಲೈಮ್ ಅನ್ನು ಸಲ್ಲಿಸದಿದ್ದುದಕ್ಕಾಗಿ ನಿಮ್ಮ ವಾಹನ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂನಲ್ಲಿ ನೀವು ಡಿಸ್ಕೌಂಟ್ ಅನ್ನು ಗಳಿಸಬಹುದು. ಕ್ಲೈಮ್-ಮುಕ್ತ ವರ್ಷಗಳ ಸಂಖ್ಯೆಯನ್ನು ಆಧರಿಸಿ ಈ ಡಿಸ್ಕೌಂಟ್ 20% ರಿಂದ 50% ವರೆಗೆ ಇರುತ್ತದೆ.
  • 6000+ ನೆಟ್‌ವರ್ಕ್ ಗ್ಯಾರೇಜ್‌ಗಳು - ನೀವು ಭಾರತದಲ್ಲಿ ಎಲ್ಲಿದ್ದರೂ, ನೀವು ಸಮೀಪದಲ್ಲಿ ಡಿಜಿಟ್ ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳನ್ನು ನೋಡುತ್ತೀರಿ. ಫೋರ್ಡ್ ಇಕೋಸ್ಪೋರ್ಟ್ ಗಾಗಿ ವ್ಯಾಲಿಡ್ ಆದ ಇನ್ಶೂರೆನ್ಸ್ ವಿರುದ್ಧ ನೀವು ಈ ಯಾವುದಾದರೂ ಗ್ಯಾರೇಜ್‌ಗಳಲ್ಲಿ ಕ್ಯಾಶ್ ಲೆಸ್ ರಿಪೇರಿಯನ್ನು ಆರಿಸಿಕೊಳ್ಳಬಹುದು.
  • ತತ್‌ಕ್ಷಣ ಗ್ರಾಹಕ ಸಹಾಯ - ಯಾವುದೇ ಸಮಯದಲ್ಲಿ ಯಾವುದೇ ಇನ್ಶೂರೆನ್ಸ್ ಸಂಬಂಧಿತ ಪ್ರಶ್ನೆಗಳನ್ನು ಪರಿಹರಿಸಲು ನೀವು ಡಿಜಿಟ್‌ನ ದಕ್ಷ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್‌ಗಳನ್ನು ಸಂಪರ್ಕಿಸಬಹುದು.

ಈ ಎಲ್ಲಾ ಕಾರಣಗಳು ಡಿಜಿಟ್ ಅನ್ನು ಅದರ ಪ್ರತಿಸ್ಪರ್ಧಿಗಳಿಂದ ಪ್ರತ್ಯೇಕಿಸುತ್ತವೆ. ಹೆಚ್ಚುವರಿಯಾಗಿ, ನೀವು ಹೆಚ್ಚಿನ ವಾಲಂಟರಿ ಆಯ್ಕೆಮಾಡಿದರೆ ಮತ್ತು ಅನಗತ್ಯ ಕ್ಲೈಮ್‌ಗಳಿಂದ ದೂರವಿದ್ದರೆ ನಿಮ್ಮ ಫೋರ್ಡ್ ಇಕೋಸ್ಪೋರ್ಟ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ನೀವು ಮತ್ತಷ್ಟು ಕಡಿಮೆ ಮಾಡಬಹುದು.

ಫೋರ್ಡ್ ಇಕೋಸ್ಪೋರ್ಟ್- ವೇರಿಯಂಟ್ ಗಳು ಮತ್ತು ಎಕ್ಸ್-ಶೂರೂಮ್ ಬೆಲೆ

ವೇರಿಯಂಟ್ ಗಳು ಎಕ್ಸ್-ಶೋರೂಮ್ ಬೆಲೆ(ನಗರಗಳಿಗನುಗುಣವಾಗಿ ಬಲಾಗಬಹುದು)
1.5 ಪೆಟ್ರೋಲ್ ಆಂಬಿಯೆಂಟೆ 1497 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.0 ಕೆಎಂಪಿಎಲ್ ₹ 7.81 ಲಕ್ಷ
1.5 ಡೀಸೆಲ್ ಆಂಬಿಯೆಂಟೆ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 23.0 ಕೆಎಂಪಿಎಲ್ ₹ 8.31 ಲಕ್ಷ
1.5 ಪೆಟ್ರೋಲ್ ಟ್ರೆಂಡ್1497 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.0 ಕೆಎಂಪಿಎಲ್ ₹ 8.61 ಲಕ್ಷ
1.5 ಡೀಸೆಲ್ ಟ್ರೆಂಡ್ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 23.0 ಕೆಎಂಪಿಎಲ್ ₹ 9.11 ಲಕ್ಷ
1.5 ಡೀಸೆಲ್ ಟ್ರೆಂಡ್ ಪ್ಲಸ್1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 23.0 ಕೆಎಂಪಿಎಲ್ ₹ 9.39 ಲಕ್ಷ
1.5 ಪೆಟ್ರೋಲ್ ಟೈಟಾನಿಯಂ 1497 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.0 ಕೆಎಂಪಿಎಲ್ ₹ 9.4 ಲಕ್ಷ
1.5 ಪೆಟ್ರೋಲ್ ಟ್ರೆಂಡ್ ಪ್ಲಸ್ ಎಟಿ 1497 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್, 14.8 ಕೆಎಂಪಿಎಲ್ ₹ 9.68 ಲಕ್ಷ
1.5 ಡೀಸೆಲ್ ಟೈಟಾನಿಯಂ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 23.0 ಕೆಎಂಪಿಎಲ್ ₹ 9.9 ಲಕ್ಷ
1.5 ಪೆಟ್ರೋಲ್ ಟೈಟಾನಿಯಂ ಪ್ಲಸ್ 1497 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.0 ಕೆಎಂಪಿಎಲ್ ₹ 9.99 ಲಕ್ಷ
ಥಂಡರ್ ಎಡಿಷನ್ ಪೆಟ್ರೋಲ್ 1497 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.0 ಕೆಎಂಪಿಎಲ್ ₹ 9.99 ಲಕ್ಷ
ಸಿಗ್ನೇಚರ್ ಎಡಿಷನ್ ಪೆಟ್ರೋಲ್ 1497 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.0 ಕೆಎಂಪಿಎಲ್ ₹ 9.99 ಲಕ್ಷ
1.5 ಡೀಸೆಲ್ ಟೈಟಾನಿಯಂ ಪ್ಲಸ್ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 23.0 ಕೆಎಂಪಿಎಲ್ ₹ 10.8 ಲಕ್ಷ
ಸಿಗ್ನೇಚರ್ ಎಡಿಷನ್ ಡೀಸೆಲ್ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 23.0 ಕೆಎಂಪಿಎಲ್ ₹ 10.8 ಲಕ್ಷ
ಥಂಡರ್ ಎಡಿಷನ್ ಡೀಸೆಲ್ 1498 cc, ಮ್ಯಾನ್ಯುವಲ್, ಡೀಸೆಲ್, 23.0 ಕೆಎಂಪಿಎಲ್ ₹ 10.8 ಲಕ್ಷ
ಎಸ್ ಪೆಟ್ರೋಲ್ 999 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 18.1 ಕೆಎಂಪಿಎಲ್ ₹ 10.85 ಲಕ್ಷ
1.5 ಪೆಟ್ರೋಲ್ ಟೈಟಾನಿಯಂ ಪ್ಲಸ್ ಎಟಿ 1497 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್, 14.8 ಕೆಎಂಪಿಎಲ್ ₹ 11.2 ಲಕ್ಷ
ಎಸ್ ಡೀಸೆಲ್ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 23.0 ಕೆಎಂಪಿಎಲ್ ₹ 11.35 ಲಕ್ಷ

ಫೋರ್ಡ್ ಇಕೋಸ್ಪೋರ್ಟ್‌ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?

ನಿಮ್ಮ ಕಾರನ್ನು ನೀವು ಎಷ್ಟೇ ಜಾಗರೂಕತೆಯಿಂದ ಓಡಿಸಿದರೂ ಅಥವಾ ಅದರ ಬಗ್ಗೆ ನೀವು ಎಷ್ಟು ಕಾಳಜಿ ವಹಿಸಿದರೂ, ನಿಮ್ಮ ಕಾರ್ ಯಾವಾಗಲೂ ನಿಮ್ಮ ವ್ಯಾಲೆಟ್‌ಗೆ ಡ್ಯಾಮೇಜ್ ಆಗಬಹುದಾದ ಅನಿರೀಕ್ಷಿತ ದುರದೃಷ್ಟಕರ ಸನ್ನಿವೇಶಗಳನ್ನು ಎದುರಿಸಬಹುದಾಗಿರುತ್ತದೆ. ನಿಮ್ಮ ಫೋರ್ಡ್ ಇಕೋಸ್ಪೋರ್ಟ್‌ಗೆ ಡಿಜಿಟ್‌ ಕಾರ್ ಇನ್ಶೂರೆನ್ಸ್ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನೋಡೋಣ.

  • ಹಣಕಾಸಿನ ಲಯಬಿಲಿಟಿಯಿಂದ ರಕ್ಷಿಸುತ್ತದೆ: ಅಪಘಾತ ಅಥವಾ ನಿಮ್ಮ ಪ್ರೀತಿಪಾತ್ರರಿಗೆ ಡ್ಯಾಮೇಜ್ ಆಗುವ ಯಾವುದೇ ಘಟನೆಯನ್ನು ಎದುರಿಸುವುದನ್ನು ತಪ್ಪಿಸಲು ನೀವು ಇಷ್ಟಪಡುವುದಿಲ್ಲವೇ? ಆದರೆ ನೀವು ಪ್ರತಿ ಬಾರಿಯೂ ಇಂತಹ ಪರಿಸ್ಥಿತಿಯನ್ನು ತಪ್ಪಿಸಲು ಸಾಧ್ಯವಿಲ್ಲ, ನಿಮ್ಮ ಕಡೆಯಿಂದ ಯಾವುದೇ ತಪ್ಪಿಲ್ಲದಿದ್ದರೂ ನಿಮ್ಮ ಕಾರು ಡ್ಯಾಮೇಜ್ ಗೊಳಗಾಗುವ ಕೆಲವು ಸಾಧ್ಯತೆಗಳು ಯಾವಾಗಲೂ ಇರುತ್ತದೆ. ಒಳ್ಳೆಯದು, ನಿಮ್ಮ ಕಾರನ್ನು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಮೂಲಕ ನೀವು ರಕ್ಷಿಸಬಹುದು. ಅದು ಅಪಘಾತ, ಗಲಭೆ, ಕಳ್ಳತನ, ವಿಧ್ವಂಸಕತೆ, ಯಾವುದೇ ನೈಸರ್ಗಿಕ ವಿಪತ್ತು, ಇತ್ಯಾದಿ ಮತ್ತು ಥರ್ಡ್ ಪಾರ್ಟಿ ಲಯಬಿಲಿಗಳಂತಹ ಘಟನೆಯಲ್ಲಿ ಯಾವುದೇ ಹಣಕಾಸಿನ ನಷ್ಟದ ವಿರುದ್ಧ ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತದೆ.
  • ಥರ್ಡ್-ಪಾರ್ಟಿ ಲಯಬಿಲಿಟಿಯನ್ನು ಕವರ್ ಮಾಡುತ್ತದೆ: ಅಪಘಾತದಲ್ಲಿ ಥರ್ಡ್ ಪಾರ್ಟಿಗೆ ಯಾವುದೇ ದೈಹಿಕ ಗಾಯ ಅಥವಾ ಪ್ರಾಪರ್ಟಿ ಡ್ಯಾಮೇಜ್ ಗೆ ನೀವು ಜವಾಬ್ದಾರರಾಗಿದ್ದರೆ, ನಂತರ ನೀವು ದೊಡ್ಡ ಮತ್ತು ನಿಮ್ಮ ಸಾಮರ್ಥ್ಯವನ್ನು ಮೀರಿದ ಕ್ಲೈಮ್ ಅಮೌಂಟ್ ಅನ್ನು ಭರಿಸಬೇಕಾಗುತ್ತದೆ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ನಿಮ್ಮ ಪರವಾಗಿ ಥರ್ಡ್ ಪಾರ್ಟಿಗೆ ಪಾವತಿಸುವ ಮೂಲಕ ನಿಮ್ಮ ಇನ್ಶೂರೆನ್ಸ್ ನಿಮಗೆ ಸಹಾಯ ಮಾಡುತ್ತದೆ.
  • ಲೀಗಲೀ ಕಂಪ್ಲಯಂಟ್: ಥರ್ಡ್-ಪಾರ್ಟಿ ಇನ್ಶೂರೆನ್ಸ್ ಭಾರತೀಯ ರಸ್ತೆಗಳಲ್ಲಿ ಕಾನೂನುಬದ್ಧವಾಗಿ ಡ್ರೈವ್ ಮಾಡಲು ನೀವು ಹೊಂದಿರಬೇಕಾದ ಕನಿಷ್ಠ ವಸ್ತುವಾಗಿದೆ. ಇಲ್ಲದಿದ್ದರೆ, ಮೊದಲ ಅಪರಾಧಕ್ಕೆ ₹.2000 ಮತ್ತು ನಂತರದ ಅಪರಾಧಕ್ಕೆ ₹.4000 ದಂಡ ವಿಧಿಸಬಹುದಾಗಿದೆ.
  • ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ: ಕವರೇಜ್‌ನ ರಕ್ಷಣೆಯನ್ನು ವಿಸ್ತರಿಸಲು ಕಾಂಪ್ರೆಹೆನ್ಸಿವ್ ಪ್ಲಾನ್ ನ ಅಡಿಯಲ್ಲಿ ನೀವು ಎಂಜಿನ್ ಆಂಡ್ ಗೇರ್‌ಬಾಕ್ಸ್ ಪ್ರೊಟೆಕ್ಷನ್, ರಿಟರ್ನ್ ಟು ಇನ್‌ವಾಯ್ಸ್‌ ಇತ್ಯಾದಿ ಆ್ಯಡ್-ಆನ್‌ಗಳನ್ನು ಆರಿಸಿಕೊಳ್ಳಬಹುದು.

ಭಾರತದಲ್ಲಿ ಫೋರ್ಡ್ ಇಕೋಸ್ಪೋರ್ಟ್ ಕಾರ್ ಇನ್ಶೂರೆನ್ಸ್ ಬಗ್ಗೆ ಪದೇಪದೇ ಕೇಳಲಾದ ಪ್ರಶ್ನೆಗಳು

ನನ್ನ ಫೋರ್ಡ್ ಇಕೋಸ್ಪೋರ್ಟ್‌ಗೆ ಇನ್ಶೂರೆನ್ಸ್ ಮಾಡದಿರುವ ಪರಿಣಾಮಗಳೇನು?

ನೀವು ಫೋರ್ಡ್ ಇಕೋಸ್ಪೋರ್ಟ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯದಿದ್ದರೆ, ನೀವು ₹ 2,000 ಮತ್ತು ₹ 4,000ರಷ್ಟು ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ. ಡ್ರೈವಿಂಗ್ ಲೈಸೆನ್ಸ್ ರದ್ದತಿ ಮತ್ತು 3 ತಿಂಗಳವರೆಗೆ ಜೈಲು ಶಿಕ್ಷೆಯು ಕಾನೂನನ್ನು ಉಲ್ಲಂಘಿಸಿದರೆ ಆಗುವ ಇತರ ಪರಿಣಾಮಗಳಾಗಿವೆ.

ಡಿಜಿಟ್ ಟೈರ್ ಪ್ರೊಟೆಕ್ಷನ್ ಆ್ಯಡ್-ಆನ್ ಕವರ್ ಅನ್ನು ಒದಗಿಸುತ್ತದೆಯೇ?

ಹೌದು, ಡಿಜಿಟ್ ಕಾಂಪ್ರೆಹೆನ್ಸಿವ್ ಪಾಲಿಸಿ ಪ್ಲಾನ್ ಗಳಿಗಾಗಿ ಟೈರ್ ಪ್ರೊಟೆಕ್ಷನ್ ಆ್ಯಡ್-ಆನ್ ಕವರ್ ಅನ್ನು ಒದಗಿಸುತ್ತದೆ.