ನಿಮ್ಮ ಆತ್ಮೀಯರೊಬ್ಬರನ್ನು ತುರ್ತಾಗಿ ಹಾಸ್ಪಿಟಲೈಸೇಷನ್ ಮಾಡಬೇಬೇಕಾದ ಸ್ಥಿತಿಯನ್ನು ಯಾವತ್ತಾದರೂ ಎದುರಿಸಿದ್ದೀರಾ? ಕೇಳಲು ಕಹಿಯಾಗಿದ್ದರೂ ಇದು ನಮ್ಮ ಜೀವನದ ಕಠಿಣ ಮತ್ತು ಅನಿವಾರ್ಯ ಸಂಗತಿಗಳು. ಆಕಸ್ಮಿಕ ಘಟನೆಗಳು ಅಥವಾ ಅಪಘಾತಗಳು ಜರುಗಿದ ಸಮಯದಲ್ಲಿ ತುರ್ತು ಆಸ್ಪತ್ರೆ ಚಿಕಿತ್ಸೆಯ ಅಗತ್ಯವಿರುವಾಗ, ನೀವು ವೈದ್ಯಕೀಯ ನೆರವಿಗೆ ಮುಂದಾಗುತ್ತೀರಿ. ಇನ್ಶೂರೆನ್ಸ್ ಪಾಲಿಸಿ ಹೊಂದಿರುವವರು ಸ್ವಲ್ಪ ನಿರಾಳರಾಗಿ ಉಸಿರಾಡಬಹುದು. ಆದರೆ ಪಾಲಿಸಿ ಹೊಂದಿಲ್ಲದವರು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು.
ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ನಾವು ಇನ್ಶೂರೆನ್ಸ್ ಕಂಪನಿಗಳನ್ನು ಹೊಂದಿದ್ದೇವೆ. ಆದರೆ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನಾವು ಟಿ.ಪಿ.ಎ ಅಂದರೆ ಥರ್ಡ್ ಪಾರ್ಟಿ ಅಡ್ಮಿನಿಸ್ಟ್ರೇಟರ್ ಅನ್ನು ಹೊಂದಿದ್ದೇವೆ. ಆದ್ದರಿಂದ ಯಾವುದೇ ವ್ಯಕ್ತಿಯು ಆಸ್ಪತ್ರೆಗೆ ದಾಖಲಾದ ತಕ್ಷಣವೇ ಟಿ.ಪಿ.ಎಗೆ ಅದರ ಸೂಚನೆಯನ್ನು ನೀಡಲಾಗುತ್ತದೆ.
ಟಿ.ಪಿ.ಎ ಪಾತ್ರ ಮತ್ತು ಉಪಯೋಗವನ್ನು ನೀವು ಅರ್ಥಮಾಡಿಕೊಳ್ಳಲು, ನಾವು ಅದರ ಬಗ್ಗೆ ಮತ್ತಷ್ಟು ಒಳನೋಟಗಳನ್ನು ಪಡೆಯೋಣ.
ಥರ್ಡ್ ಪಾರ್ಟಿ ಅಡ್ಮಿನಿಸ್ಟ್ರೇಟರ್ ಎನ್ನುವುದು ಮೆಡಿಕ್ಲೈಮ್ ಪಾಲಿಸಿ ಪ್ರಕಾರ ಸ್ವೀಕಾರಾರ್ಹವಾದ ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆ ಜಾರಿಗೊಳಿಸುವ ಒಂದು ಅಂಗ. ಸಾಮಾನ್ಯವಾಗಿ, ಈ ಅಡ್ಮಿನಿಸ್ಟ್ರೇಟರ್ಗಳು ಸ್ವತಂತ್ರರಾಗಿರುತ್ತಾರೆ. ಆದರೂ ಇನ್ಶೂರೆನ್ಸ್ ಕಂಪನಿ/ ಕಂಪನಿಗಳಿಗೆ ಸೇರಿದ ಒಂದು ಘಟಕವಾಗಿಯೂ ಸಹ ಕಾರ್ಯನಿರ್ವಹಿಸಬಹುದು. ಈ ಘಟಕಗಳು ಇನ್ಶೂರೆನ್ಸ್ ರೆಗ್ಯುಲೇಟರಿ ಐ.ಆರ್.ಡಿ.ಎ.ಐ (IRDAI) ನಿಂದ ಲೈಸೆನ್ಸ್ ಪಡೆದಿರುತ್ತವೆ.
ವರ್ಷಗಳು ಕಳೆದಂತೆ, ಇನ್ಶೂರೆನ್ಸ್ ಪೂರೈಕೆದಾರರ ಸಂಖ್ಯೆ, ಮಾರಾಟವಾದ ಹೆಲ್ತ್ ಪಾಲಿಸಿಗಳು, ಆರೋಗ್ಯ ಉತ್ಪನ್ನಗಳ ವಿಧಗಳು ಮತ್ತು ಖರೀದಿದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿವೆ. ಅಂತಿಮವಾಗಿ, ಗುಣಮಟ್ಟದ ಸೇವೆಗಳನ್ನು ನೀಡದ ಕೆಲಸದ ಬಗ್ಗೆ ನಿಗಾ ಇಡುವುದು ಕಷ್ಟವಾಗತೊಡಗಿತು. ಆದ್ದರಿಂದ, ಐ.ಆರ್.ಡಿ.ಎ (IRDA) ಥರ್ಡ್ ಪಾರ್ಟಿ ಅಡ್ಮಿನಿಸ್ಟ್ರೇಟರ್ಗಳೊಂದಿಗೆ ಬಂದಿತು. ಅಂದಿನಿಂದ, ಒಬ್ಬ ಟಿ.ಪಿ.ಎ (TPA) ಜವಾಬ್ದಾರಿ ಹೊಂದಿರುವ ಅಂಶಗಳು ಹೀಗಿವೆ:
ಥರ್ಡ್ ಪಾರ್ಟಿ ಅಡ್ಮಿನಿಸ್ಟ್ರೇಟರ್ಗಳು ಆಸ್ಪತ್ರೆಯ ಬಿಲ್ಗಳು ಮತ್ತು ಇತರ ವೆಚ್ಚಗಳನ್ನು ನೋಡಿಕೊಳ್ಳುತ್ತಾರೆ. ನಿಮ್ಮ ಕುಟುಂಬದ ಸದಸ್ಯರು ಅಥವಾ ಸ್ನೇಹಿತರು ಅನಾರೋಗ್ಯದಿಂದ ಬಳಲುತ್ತಿರುವಾಗ ನೀವು ಅವರ ಕ್ಷೇಮ ನೋಡಿಕೊಳ್ಳಬಹುದು. ಉಳಿದವುಗಳನ್ನು ಟಿ.ಪಿ.ಎ(TPA) ನೋಡಿಕೊಳ್ಳುತ್ತಾರೆ.
ಪ್ರತಿ ಇನ್ಶೂರೆನ್ಸ್ ಕಂಪನಿಯು ನಿಮಗೆ ಗುಣಮಟ್ಟದ ಸೇವೆಯನ್ನು ನೀಡಲು ಟಿ.ಪಿ.ಎ (TPA) ಅನ್ನು ನೇಮಿಸುತ್ತದೆ. ನೀವು ನೇರವಾಗಿ ಅಡ್ಮಿನಿಸ್ಟ್ರೇಟರ್ಗೆ ಪಾವತಿಸಬೇಕಾಗಿಲ್ಲ. ಒಬ್ಬ ಟಿ.ಪಿ.ಎ ಒಂದೋ ಕ್ಯಾಶ್ ಲೆಸ್ ಕ್ಲೇಮ್ ಸೆಟಲ್ಮೆಂಟ್ ಅನ್ನು ಅನುಮೋದಿಸಬಹುದು ಅಥವಾ ನಂತರದಲ್ಲಿ ರಿಇಂಬರ್ಸ್ ಮೆಂಟ್ ಮಾಡಿಸಬಹುದು. ಆದರೆ ಯಾವುದೇ ದೂರು ಅಥವಾ ಪ್ರಶ್ನೆಗಳ ಸಂದರ್ಭದಲ್ಲಿ ಹೆಲ್ತ್ ಪಾಲಿಸಿದಾರರು ನೇರವಾಗಿ ಟಿ.ಪಿ.ಎ ಅನ್ನು ಸಂಪರ್ಕಿಸುವುದಿಲ್ಲ.
ಪಾಲಿಸಿದಾರರ ಸಂಪರ್ಕವು ಯಾವಾಗಲೂ ಅವರ ಮತ್ತು ಇನ್ಶೂರೆನ್ಸ್ ಕಂಪನಿಯ ನಡುವೆ ಮಾತ್ರ ಇರುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಟಿ.ಪಿ.ಎ (TPA) ಈ ಕೆಳಗಿನ ವಿಚಾರಗಳಿಗೆ ಸಂಬಂಧಿಸಿದೆ:
ಗಮನಿಸಿ: ಭಾರತದಲ್ಲಿ ಕೋವಿಡ್ 19 ಇನ್ಶೂರೆನ್ಸ್ನ ಪ್ರಯೋಜನಗಳು ಮತ್ತು ಅದು ಒಳಗೊಂಡಿರುವ ಕವರೇಜ್ ಗಳ ಕುರಿತು ಇನ್ನಷ್ಟು ತಿಳಿಯಿರಿ.
ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ಗಳ ಒಟ್ಟು ಪ್ರಕ್ರಿಯೆಯಲ್ಲಿ ಟಿ.ಪಿ.ಎ ಪ್ರಮುಖ ಪಾತ್ರ ವಹಿಸುತ್ತಾರೆ. ಇನ್ಶೂರೆನ್ಸ್ನ ಪ್ರಾಯೋಗಿಕ ಜಗತ್ತಿನಲ್ಲಿ, ಟಿ.ಪಿ.ಎ ನಿರ್ವಹಿಸುವ ಕೆಲಸಗಳನ್ನು ಈ ಕೆಳಗಿನಂತೆ ಹೆಸರಿಸಬಹುದು:
ಪಾಲಿಸಿದಾರರಿಗೆ ನೀಡಲಾದ ಪ್ರತಿ ಪಾಲಿಸಿಯನ್ನು ನ್ಯಾಯಸಮ್ಮತಗೊಳಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವುದು. ಅಧಿಕೃತ ಹೆಲ್ತ್ ಕಾರ್ಡ್ ನೀಡುವ ಮೂಲಕ ಇದನ್ನು ನಿರ್ವಹಿಸಲಾಗುತ್ತದೆ. ಈ ಕಾರ್ಡ್, ಪಾಲಿಸಿ ಸಂಖ್ಯೆ ಮತ್ತು ಕ್ಲೈಮ್ಗಳ ಪ್ರಕ್ರಿಯೆಗೆ ಜವಾಬ್ದಾರರಾಗಿರುವ ಟಿ.ಪಿ.ಎ (TPA) ವಿವರವನ್ನು ಹೊಂದಿರುತ್ತದೆ.
ಹಾಸ್ಪಿಟಲೈಸೇಷನ್ ಸಮಯದಲ್ಲಿ, ಪಾಲಿಸಿಹೋಲ್ಡರ್ ಈ ಕಾರ್ಡ್ ಅನ್ನು ತೋರಿಸಬಹುದು ಮತ್ತು ಕ್ಲೈಮ್ ಮಾಡುತ್ತಿದ್ದೇವೆ ಎಂಬುದನ್ನು ಇನ್ಶೂರೆನ್ಸ್ ಕಂಪನಿಗೆ ಅಥವಾ ಟಿ.ಪಿ.ಎಗೆ ತಿಳಿಸಬಹುದು. ಕ್ಲೈಮ್ ಪ್ರಕ್ರಿಯೆಗೆ ಅಗತ್ಯವಾದ ಡಾಕ್ಯುಮೆಂಟುಗಳಲ್ಲಿ ಇದು ಸಹ ಒಂದು.
ಪಾಲಿಸಿಹೋಲ್ಡರ್ ಮಾಹಿತಿ ನೀಡಿದ ತಕ್ಷಣ ಕ್ಲೈಮ್ ಪ್ರಕ್ರಿಯೆ ಮುಂದುವರಿಸಲು ಟಿ.ಪಿ.ಎ ಜವಾಬ್ದಾರನಾಗಿರುತ್ತಾನೆ. ಕ್ಲೈಮ್ ಸಂದರ್ಭ ಸಲ್ಲಿಸಿದ ಎಲ್ಲಾ ಡಾಕ್ಯುಮೆಂಟುಗಳನ್ನು ಪರಿಶೀಲಿಸುವುದು ಇವರ ಕೆಲಸ. ನೀಡಿರುವ ವಿವರಗಳನ್ನು ಪರಿಶೀಲಿಸುವಾಗ ಅಗತ್ಯವಿರುವ ಮತ್ತಷ್ಟು ಮಾಹಿತಿಗಳನ್ನು ಅವರು ಕೇಳಬಹುದು. ಕ್ಲೈಮ್ನ ಇತ್ಯರ್ಥವು ಒಂದೋ ಕ್ಯಾಶ್ ಲೆಸ್ ಮಾದರಿ ಮೂಲಕ ಅಥವಾ ರಿಇಂಬರ್ಸ್ ಮೆಂಟ್ ಆಧಾರದ ಮೇಲೆ ನಡೆಯುತ್ತದೆ.
ಸಂದರ್ಭ ಯಾವುದೇ ಇರಲಿ, ಟಿ.ಪಿ.ಎ ಎಲ್ಲಾ ಡಾಕ್ಯುಮೆಂಟುಗಳನ್ನು ಪರಿಶೀಲಿಸುವ ಜವಾಬ್ದಾರಿ ಹೊಂದಿರುತ್ತಾರೆ. ಕ್ಯಾಶ್ ಲೆಸ್ ಸಂದರ್ಭಗಳಲ್ಲಿ ಟಿ.ಪಿ.ಎ ಆಸ್ಪತ್ರೆಯಿಂದ ಡಾಕ್ಯುಮೆಂಟುಗಳನ್ನು ಸಂಗ್ರಹಿಸಬಹುದು. ಇತರ ಸಂದರ್ಭಗಳಲ್ಲಿ, ಪಾಲಿಸಿಹೋಲ್ಡರ್ ರಿಂದ ಪೂರಕವಾದ ಪೇಪರ್ಗಳನ್ನು ಮತ್ತು ಬಿಲ್ಗಳನ್ನು ಟಿ.ಪಿ.ಎ ಕೇಳಬಹುದು.
ಕ್ಲೈಮ್ ಪ್ರಕ್ರಿಯೆ ಮತ್ತು ಕಾರ್ಡ್ ವಿತರಣೆಯ ಹೊರತಾಗಿ, ಆಂಬ್ಯುಲೆನ್ಸ್, ಯೋಗಕ್ಷೇಮ ಕಾರ್ಯಕ್ರಮಗಳು ಮತ್ತು ಇತರ ಸೇವೆಗಳಿಗೆ ಟಿ.ಪಿ.ಎ ವ್ಯವಸ್ಥೆ ಮಾಡುತ್ತಾರೆ.
ಎಲ್ಲಾ ಪಾಲಿಸಿಹೋಲ್ಡರ್ ತಮ್ಮ ಟಿ.ಪಿ.ಎ ಮೂಲಕ ಕ್ಲೈಮ್ ಮಾಡಲು ಬೇಕಾದ ಮಾಹಿತಿ ಮತ್ತು ಇತರ ಸಹಾಯವನ್ನು ಪಡೆಯಬಹುದು. ಈ ಸೌಲಭ್ಯವು ಗ್ರಾಹಕ ಸೇವೆಗಾಗಿ 24X7 ಲಭ್ಯವಿರುತ್ತದೆ. ಭಾರತದ ಯಾವುದೇ ಪ್ರದೇಶದಿಂದ ಕರೆ ಮಾಡಿ ಮಾಹಿತಿ ಪಡೆಯಬಹುದು. ಪಾಲಿಸಿದಾರರು ತಮ್ಮ ಕ್ಲೈಮ್ ಗಳ ಸ್ಥಿತಿಯನ್ನು ಟೋಲ್-ಫ್ರೀ ಸಂಖ್ಯೆ 1800-258-5956ಗೆ ಕಾಲ್ ಮಾಡುವ ಮೂಲಕವೂ ತಿಳಿದುಕೊಳ್ಳಬಹುದು.
ಟಿ.ಪಿ.ಎ ಅನ್ನು ಹೊಂದುವುದು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಪ್ರಯೋಜನವನ್ನು ಪಡೆಯಲು ಅತ್ಯಂತ ಅಗತ್ಯವಾದ ಅಂಶ. ಇದು ಮುಂದೆ ಪಾಲಿಸಿಹೋಲ್ಡರ್ ಚಿಕಿತ್ಸೆಯನ್ನು ತೆಗೆದುಕೊಳ್ಳಬಹುದಾದ ಆಸ್ಪತ್ರೆಗಳ ಪ್ರಬಲವಾದ ನೆಟ್ವರ್ಕ್ ನಿರ್ಮಿಸುತ್ತದೆ. ಟಿ.ಪಿ.ಎ ತ್ವರಿತವಾಗಿ ಕ್ಯಾಶ್ ಲೆಸ್ ವ್ಯವಸ್ಥೆ ಮಾಡಬಹುದಾದ ಮತ್ತು ದರಗಳ ಕುರಿತ ಸಮಾಲೋಚನೆಗೆ ಅವಕಾಶ ನೀಡಬಹುದಾದ ಅತ್ಯುತ್ತಮ ಆಸ್ಪತ್ರೆಗಳನ್ನು ಸೇರಿಸಲು ಪ್ರಯತ್ನಿಸುತ್ತದೆ.
ಟಿ.ಪಿ.ಎ ಎನ್ನುವುದು ಇನ್ಶೂರೆನ್ಸ್ ಕಂಪನಿ ಮತ್ತು ಪಾಲಿಸಿಹೋಲ್ಡರ್ ನಡುವಿನ ಮಧ್ಯವರ್ತಿಯಾಗಿದೆ. ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಡಿಯಲ್ಲಿ ಕ್ಲೈಮ್ ಪ್ರೊಸೀಜರ್ ಅನ್ನು ಸರಳಗೊಳಿಸುವುದು ಇವರ ಕೆಲಸ. ನಮಗೆಲ್ಲಾ ತಿಳಿದಿರುವಂತೆ ಎರಡು ರೀತಿಯ ಕ್ಲೈಮ್ ವಿಧಾನ ಇದೆ: ಎ) ಕ್ಯಾಶ್ ಲೆಸ್ ಮತ್ತು ಬಿ) ರಿಇಂಬರ್ಸ್ ಮೆಂಟ್.
ವೈದ್ಯಕೀಯ ಅಥವಾ ತುರ್ತು ಚಿಕಿತ್ಸೆಯ ಅವಶ್ಯಕತೆ ಉಂಟಾದ ತಕ್ಷಣ ಪಾಲಿಸಿಹೋಲ್ಡರ್ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ವ್ಯಕ್ತಿಯನ್ನು ಕನಿಷ್ಠ 24 ಗಂಟೆಗಳ ಕಾಲ ಹಾಸ್ಪಿಟಲೈಸೇಷನ್ ತಿಳಿಸಿದರೆ (ಕ್ಯಾಟರಾಕ್ಟ್ ನಂತಹ ಪಟ್ಟಿ ಮಾಡಲಾದ ಕಾಯಿಲೆಗಳನ್ನು ಹೊರತುಪಡಿಸಿ) ಕ್ಲೈಮ್ ಸ್ವೀಕಾರಾರ್ಹವಾಗುತ್ತದೆ.
ಈ ಸಂದರ್ಭದಲ್ಲಿ ಪಾಲಿಸಿಹೋಲ್ಡರ್ ಟಿ.ಪಿ.ಎಗೆ ಅಥವಾ ಇನ್ಶೂರೆನ್ಸ್ ಕಂಪನಿಗೆ ಹಾಸ್ಪಿಟಲೈಸೇಷನ್ ಮತ್ತು ಚಿಕಿತ್ಸೆಯ ಅಗತ್ಯತೆಯನ್ನು ತಿಳಿಸುತ್ತಾರೆ. ನಂತರ ಟಿ.ಪಿ.ಎ ಸಾಧ್ಯವಾದರೆ ಕ್ಯಾಶ್ ಲೆಸ್ ಸೌಲಭ್ಯ ವ್ಯವಸ್ಥೆ ಮಾಡಲು ಆಸ್ಪತ್ರೆಯನ್ನು ಕೇಳುತ್ತಾರೆ. ಇಲ್ಲದಿದ್ದರೆ, ರಿಇಂಬರ್ಸ್ ಮೆಂಟ್ ಕ್ಲೈಮ್ ಜಾರಿಗೆ ಪ್ರಕ್ರಿಯೆ ನಡೆಸಲಾಗುತ್ತದೆ. ಚಿಕಿತ್ಸೆ ಮುಗಿದ ನಂತರ, ಕ್ಯಾಶ್ಲೆಸ್ ಅನ್ನು ಅನುಮೋದಿಸಿದರೆ ಆಸ್ಪತ್ರೆಯು ಎಲ್ಲಾ ಬಿಲ್ಗಳನ್ನು ಟಿ.ಪಿ.ಎಗೆ ಕಳುಹಿಸುತ್ತದೆ. ಇಲ್ಲದಿದ್ದರೆ, ಪಾಲಿಸಿಹೋಲ್ಡರ್ ನಂತರದಲ್ಲಿ ಡಾಕ್ಯುಮೆಂಟುಗಳನ್ನು ಸಲ್ಲಿಸಬೇಕಾಗುತ್ತದೆ.
ಟಿ.ಪಿ.ಎನ ಅಧಿಕಾರಿಗಳು ಬಿಲ್ಗಳು ಮತ್ತು ಇತರ ಡಾಕ್ಯುಮೆಂಟುಗಳನ್ನು ಪರಿಶೀಲಿಸುತ್ತಾರೆ. ಅದರಿಂದ ಕ್ಲೈಮ್ನ ಇತ್ಯರ್ಥ ಸಾಧ್ಯವಾಗುತ್ತದೆ. ಒಂದುವೇಳೆ ಕ್ಯಾಶ್ ಲೆಸ್ ಆಗಿದ್ದರೆ ಆಸ್ಪತ್ರೆಗೆ ಪಾವತಿಸಲಾಗುತ್ತದೆ. ಆದರೆ ರಿಇಂಬರ್ಸ್ ಮೆಂಟ್ ಗಾಗಿ, ಚಿಕಿತ್ಸೆ ವೆಚ್ಚವನ್ನು ಇನ್ಶೂರೆನ್ಸ್ ಕಂಪನಿಯ ಮೂಲಕ ಪಾಲಿಸಿಹೋಲ್ಡರ್ ಸ್ವೀಕರಿಸುತ್ತಾರೆ.