Third-party premium has changed from 1st June. Renew now
ಟು-ವೀಲರ್ ಇನ್ಶೂರೆನ್ಸ್ ಅನ್ನು ಏಕೆ ಹೋಲಿಸಬೇಕು?
ನೀವು ಹೊಸದೊಂದು ಶರ್ಟ್ ಖರೀದಿಸಬೇಕೆಂದು ಅಂದುಕೊಂಡರೆ, ನೀವು ಸುಮ್ಮನೇ ಬಟ್ಟೆ ಅಂಗಡಿಗೆ ಹೋಗಿ, ಯಾವುದನ್ನಾದರೂ ಸರಿ ಎಂದು ಖರೀದಿಸಿ ಬಿಡುತ್ತೀರಾ? ಸ್ಪಷ್ಟ ಉತ್ತರ, ಇಲ್ಲ! ನೀವು ಲಭ್ಯವಿರುವ ಶರ್ಟ್‌ಗಳನ್ನು ನೋಡುತ್ತೀರಿ, ಅವುಗಳನ್ನು ಹೋಲಿಕೆ ಮಾಡುತ್ತೀರಿ, ಅವುಗಳಲ್ಲಿ ಒಂದನ್ನು ಆಯ್ಕೆ ಮಾಡುತ್ತೀರಿ, ಟ್ರಯಲ್ ರೂಮ್‌ಗೆ ಹೋಗಿ ಆ ಶರ್ಟ್ ನಿಮಗೆ ಉತ್ತಮವಾಗಿದೆಯೇ ಮತ್ತು ಸರಿಹೊಂದುತ್ತದೆಯೇ ಎಂದು ಪರಿಶೀಲಿಸುತ್ತೀರಿ.
ಮತ್ತು ನೀವು ಪೇಮೆಂಟ್ ಕೌಂಟರ್‌ಗೆ ಹೋಗುವ ಮೊದಲು ನೀವು ಖರೀದಿಸಿದ ಶರ್ಟ್ ಹಾಗೇ ಇದೆಯೇ, ಇಲ್ಲವೇ ಎಂದು ಪರಿಶೀಲಿಸುತ್ತೀರಿ, ನಂತರ ಪೇಮೆಂಟ್ ಮಾಡುತ್ತೀರಿ. ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸುವ ಮೊದಲು ನೀವು ಕೂಡ ಅದೇ ರೀತಿ ಮಾಡಬೇಕು. ಲಭ್ಯವಿರುವ ಆಯ್ಕೆಗಳನ್ನು ಪರಿಶೀಲಿಸಿ ಮತ್ತು ನಿಮಗೆ ಹೆಚ್ಚು ಸೂಕ್ತವಾದ ಪಾಲಿಸಿಯನ್ನು ಆರಿಸಿಕೊಳ್ಳಿ. ಏಕೆಂದರೆ ನೀವು ಪಾಲಿಸಿಗೆ ಒಮ್ಮೆ ಪಾವತಿಸಿದ ನಂತರ ಪಾಲಿಸಿಯ ಬಗ್ಗೆ ಸರಿಯೆನಿಸದಿರುವುದನ್ನು ಕಂಡುಹಿಡಿಯಲು ನೀವು ಆಸಕ್ತಿ ಹೊಂದಿರಬಾರದು.
ಒಂದೊಮ್ಮೆ ನೀವು ನಿಮ್ಮ ಅವಶ್ಯಕತೆಗಳಿಗೆ ಉತ್ತಮವಾಗಿ ಹೊಂದಿಕೊಳ್ಳುವ, ಅಗ್ಗದ ಪಾಲಿಸಿಯನ್ನು ಕಂಡುಕೊಂಡರೆ ಅದು ಮುಂದೆ ವಿಷಾದಕ್ಕೆ ಕಾರಣವಾಗುತ್ತದೆ. ಆದ್ದರಿಂದ ನೀವು ಒಂದು ಪಾಲಿಸಿಯನ್ನು ಖರೀದಿಸುವ ಮೊದಲು, ಬಹಳಷ್ಟು ಬೈಕ್ ಇನ್ಶೂರೆನ್ಸ್ ಪಾಲಿಸಿಗಳನ್ನು ಪರಿಶೀಲಿಸುವುದು ಮತ್ತು ಹೋಲಿಸುವುದು ತುಂಬಾ ಅತ್ಯಗತ್ಯ.
ನೀವು ಬೈಕ್ ಇನ್ಶೂರೆನ್ಸ್ ಅನ್ನು ಏಕೆ ಹೋಲಿಸಬೇಕು?
ನೀವು ಇನ್ಶೂರೆನ್ಸ್ ಕಂಪನಿಗಳನ್ನು ಅವುಗಳ ವಿಶ್ವಾಸಾರ್ಹತೆಯ ಆಧಾರದ ಮೇಲೆ ಹೋಲಿಸಬಹುದು ಮತ್ತು ಅವುಗಳನ್ನು ಶ್ರೇಣೀಕರಿಸಬಹುದು. ನೀವು ಜನರ ವಿಮರ್ಶೆಗಳನ್ನು ಹುಡುಕಬಹುದು ಮತ್ತು ಯಾವ ಕಂಪನಿಗಳು ತಾವು ನೀಡುತ್ತಿರುವ ಸೇವೆಯಲ್ಲಿ ಉತ್ತಮವಾಗಿವೆ ಮತ್ತು ಕ್ಲೇಮ್‌ಗಳನ್ನು ಇತ್ಯರ್ಥಪಡಿಸುವಲ್ಲಿ ಉತ್ತಮವಾಗಿವೆ ಎಂಬುದನ್ನು ತಿಳಿದುಕೊಳ್ಳಬಹುದು. ನಂತರ ಅತ್ಯುತ್ತಮ ಇನ್ಶೂರೆನ್ಸ್ ಕಂಪನಿಯನ್ನು ಕಂಡುಹಿಡಿಯುವುದು ಸುಲಭವಾಗುತ್ತದೆ.
ನಿಮ್ಮ ಪಾಲಿಸಿಯನ್ನು ಸ್ವತಃ ನಿಮ್ಮಷ್ಟಕ್ಕೆ ನೀವೇ ಅರ್ಥಮಾಡಿಕೊಂಡಾಗ, ನೀವು ಯಾವುದೇ ತಜ್ಞರು ಅಥವಾ ಇನ್ಶೂರೆನ್ಸ್ ಏಜೆಂಟ್ ಅನ್ನು ಅವಲಂಬಿಸಬೇಕಾಗಿರುವುದಿಲ್ಲ. ಪಾಲಿಸಿಯು ಏನನ್ನು ಒಳಗೊಂಡಿದೆ ಮತ್ತು ಏನನ್ನು ಒಳಗೊಂಡಿಲ್ಲ ಎಂಬುದರ ಕುರಿತು ನಿಮಗೆ ಸಂಪೂರ್ಣ ಮಾಹಿತಿ ನೀಡಿದಾಗ, ನೀವು ನಿಮ್ಮದೇ ಆದ ನಿಷ್ಪಕ್ಷಪಾತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನೀವು ಹಲವಾರು ಇನ್ಶೂರೆನ್ಸ್ ಕಂಪನಿಗಳ ಪಾಲಿಸಿಗಳನ್ನು ಅಧ್ಯಯನ ಮಾಡಿದರೆ ಹಾಗೂ ಹೋಲಿಕೆ ಮಾಡಿದರೆ ಮಾತ್ರ ನಿಮಗೆ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ.
ವಿವಿಧ ಪಾಲಿಸಿಗಳ ಸರಿಯಾದ ಸಂಶೋಧನೆ ಮತ್ತು ಹೋಲಿಕೆಯು, ನಿಮಗೆ ಅತ್ಯುತ್ತಮ ಇನ್ಶೂರೆನ್ಸ್ ಕಂಪನಿಗಳ ಕ್ಲೇಮ್ ಪ್ರಕ್ರಿಯೆಗಳ ಬಗ್ಗೆ ತಿಳಿಸುತ್ತದೆ. ನಿಜವಾದ ಕ್ಲೇಮ್ ಸಂಗ್ರಹಿಸಿದ ನಂತರ ನೀವು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿದುಕೊಳ್ಳುತ್ತೀರಿ. ನಂತರ ನಿಮಗೆ ಹೆಚ್ಚು ಹೊಂದಿಕೆಯಾಗುವಂತಹ ಪಾಲಿಸಿಯೊಂದಿಗೆ ನೀವು ಮುಂದುವರೆಯುತ್ತೀರಿ.
ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಇನ್ಶೂರೆನ್ಸ್ ಕಂಪನಿಗಳು ನೀಡುವ ಡೀಲ್‌ಗಳನ್ನು ನೀವು ಪರಿಶೀಲಿಸಬಹುದು. ವಿವಿಧ ಕಂಪನಿಗಳು ಒದಗಿಸುವ ಕವರೇಜ್ ವಿರುದ್ಧದ ಪ್ರೀಮಿಯಂಗಳನ್ನು ಪರಿಶೀಲಿಸುವುದರಿಂದ, ನೀವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ.
ಕೆಲವು ಇನ್ಶೂರೆನ್ಸ್ ಕಂಪನಿಗಳು ತಮ್ಮ ಕೆಲವು ಬೈಕ್ ಇನ್ಶೂರೆನ್ಸ್ ಯೋಜನೆಗಳ ಮೇಲೆ ಉತ್ತಮ ರಿಯಾಯಿತಿಗಳನ್ನು ನೀಡುತ್ತಿರಬಹುದು. ಆದ್ದರಿಂದ ಒಂದುವೇಳೆ ನೀವು ಸಂಶೋಧನೆ ಮತ್ತು ಹೋಲಿಕೆ ಮಾಡಲು ಅಲಕ್ಷಿಸಿದರೆ, ಇಂತಹ ರಿಯಾಯಿತಿಗಳಿಂದ ನೀವು ತಪ್ಪಿಸಿಕೊಳ್ಳುವಿರಿ. ನೀವು ಖಂಡಿತವಾಗಿಯೂ ರಿಯಾಯಿತಿಗಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ!
ಬೈಕ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಹೋಲಿಸುವಾಗ ನೀವು ಪರಿಗಣಿಸಬೇಕಾದ ಅಂಶಗಳು
ಕವರೇಜ್ : ಥರ್ಡ್-ಪಾರ್ಟಿ ಲೈಬಿಲಿಟಿ ಪಾಲಿಸಿ ಮತ್ತು ಕಾಂಪ್ರೆಹೆನ್ಸಿವ್ ಪಾಲಿಸಿಗಳಲ್ಲಿ ನಿಮ್ಮ ಬೈಕ್‌ಗೆ ನೀವು ಯಾವ ರೀತಿಯ ಕವರ್ ಅನ್ನು ಬಯಸುತ್ತೀರಿ ಎಂದು ಖಚಿತರಾಗಿರಬೇಕು. ಭಾರತದಲ್ಲಿ, ಥರ್ಡ್-ಪಾರ್ಟಿ ಪಾಲಿಸಿ ಖಡ್ಡಾಯವಾಗಿದೆ ಮತ್ತು ವ್ಯಕ್ತಿ ಅಥವಾ ಆಸ್ತಿಗೆ ಹಾನಿಯ ವಿರುದ್ಧ ಇನ್ಶೂರೆನ್ಸ್ ಹೋಲ್ಡರ್'ನನ್ನು ಕವರ್ ಮಾಡುತ್ತದೆ. ಮತ್ತು ಪ್ರೀಮಿಯಂ, ಇಂಜಿನ್ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಇದನ್ನು IRDAI ನಿಗದಿಪಡಿಸಿರುತ್ತದೆ. ಕಾಂಪ್ರೆಹೆನ್ಸಿವ್ ಪಾಲಿಸಿಯು, ಸ್ವಂತ ಹಾನಿ ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆ ಎರಡನ್ನೂ ಕವರ್ ಮಾಡುತ್ತದೆ. ಕಡಿಮೆ ಪ್ರೀಮಿಯಂನೊಂದಿಗೆ ಉತ್ತಮವಾದ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಅನ್ನು ನೀಡುವ ಇನ್ಶೂರೆನ್ಸ್ ಕಂಪನಿಯನ್ನು ನೋಡಿ.
ಇನ್ಶೂರೆನ್ಸಿನ ಘೋಷಿತ ಮೌಲ್ಯ (IDV): ಇನ್ಶೂರೆನ್ಸಿನ ಘೋಷಿತ ಮೌಲ್ಯ ಎಂದರೆ, ಡೆಪ್ರಿಸಿಯೇಷನ್ ಅನ್ನು ಕಳೆದು ನಿಮ್ಮ ಬೈಕ್‌ನ ಇವತ್ತಿನ ಮಾರುಕಟ್ಟೆ ಮೌಲ್ಯ. ನಿಮ್ಮ ಇನ್ಶೂರೆನ್ಸ್ ಕಂಪನಿಯು ನಿಮ್ಮ ಪ್ರೀಮಿಯಂ ಅನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು, ಐಡಿವಿ ಕಸ್ಟಮೈಸ್ ಮಾಡುವ ಆಯ್ಕೆಯನ್ನು, ನಿಮಗೆ ನೀಡುತ್ತಿದೆಯೇ ಎಂದು ಪರಿಶೀಲಿಸಿ. ಈ ಬಗ್ಗೆ ನಿಮಗೆ ಮಾಹಿತಿಯಿಲ್ಲದಿದ್ದರೆ, ಕಡಿಮೆ ಪ್ರೀಮಿಯಂ ಬೆಲೆಯೊಂದಿಗೆ ನಿಮ್ಮನ್ನು ಆಕರ್ಷಿಸಲು, ಇನ್ಶೂರೆನ್ಸ್ ಕಂಪನಿಯವರು ನಿಮ್ಮ ಐಡಿವಿ ಅನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ಬೈಕ್ ಇನ್ಶೂರೆನ್ಸಿನಲ್ಲಿ ಐಡಿವಿ ಕುರಿತು ಇನ್ನಷ್ಟು ತಿಳಿಯಿರಿ.
ಪ್ರೀಮಿಯಂ : ನಿಮ್ಮ ಪರಿಗಣನೆಯಂತೆ, ಇನ್ಶೂರೆನ್ಸ್ ಕಂಪನಿಗಳು ನೀಡುವ ಕೊಟೇಶನ್ (quotes) ಮತ್ತು ಕಡಿಮೆ ಪ್ರೀಮಿಯಂ ವಿರುದ್ಧ ಹೆಚ್ಚಿನ ಕವರೇಜ್ ನೀಡುವ ಟು-ವೀಲರ್ ಇನ್ಶೂರೆನ್ಸ್, ಎರಡನ್ನೂ ಹೋಲಿಕೆ ಮಾಡಿ. ಆದರೆ ಕಡಿಮೆ ಪ್ರೀಮಿಯಂ ಅನ್ನು ಆಯ್ಕೆ ಮಾಡುವುದು ಯಾವಾಗಲೂ ಉತ್ತಮ ನಿರ್ಧಾರವಾಗದು ಎಂಬುದನ್ನು ನೆನಪಿನಲ್ಲಿಡಿ! ಆದ್ದರಿಂದ ಪಾಲಿಸಿಯ ವಿಷಯಗಳನ್ನು ಸಂಪೂರ್ಣವಾಗಿ ಓದಿ ಮತ್ತು ಅರ್ಥಮಾಡಿಕೊಳ್ಳಿ.
ಆಡ್-ಆನ್‌ಗಳು : ಆಡ್-ಆನ್‌ಗಳು, ಕವರೇಜ್'ನ ವ್ಯಾಪ್ತಿಯನ್ನು ಹೆಚ್ಚಿಸಲು, ಕಾಂಪ್ರೆಹೆನ್ಸಿವ್ ಇನ್ಶೂರೆನ್ಸಿನೊಂದಿಗೆ ತಮ್ಮ ಸ್ವಂತ ವೆಚ್ಚದಲ್ಲಿ ಸ್ವತಂತ್ರವಾಗಿ ಬರುತ್ತವೆ. ನಿಮ್ಮ ಅವಶ್ಯಕತೆಗಳಿಗೆ ಮತ್ತು ಬಜೆಟ್‌ಗೆ ಸರಿಹೊಂದುವ ಆಡ್-ಆನ್‌ಗಳನ್ನು ಯಾವ ಇನ್ಶೂರೆನ್ಸ್ ಪೂರೈಕೆದಾರರು ಒದಗಿಸುತ್ತಾರೆ ಎಂಬುದನ್ನು ಪರಿಶೀಲಿಸಿ. ಇನ್ಶೂರೆನ್ಸ್ ಕಂಪನಿಗಳು ಎಂಜಿನ್ ರಕ್ಷಣೆ, ಝೀರೋ -ಡೆಪ್ರಿಸಿಯೇಷನ್, ರಿಟರ್ನ್ ಟು ಇನ್‌ವಾಯ್ಸ್ ಇತ್ಯಾದಿಗಳಂತಹ ವಿಭಿನ್ನ ಆಡ್-ಆನ್‌ಗಳನ್ನು ಒದಗಿಸುತ್ತವೆ. ಪ್ರೊ-ಟಿಪ್: ನಿಮಗೆ ನಿಜವಾಗಿಯೂ ಅಗತ್ಯವಿದ್ದರೆ ಮಾತ್ರ ಆಡ್-ಆನ್‌ಗಾಗಿ ಪಾವತಿಸಿ, ಇಲ್ಲದಿದ್ದರೆ ಅದು ಪ್ರೀಮಿಯಂ ದರವನ್ನು ಅನಗತ್ಯವಾಗಿ ಹೆಚ್ಚಿಸುತ್ತದೆ. ಬೈಕ್ ಇನ್ಶೂರೆನ್ಸಿನಲ್ಲಿ ಆಡ್-ಆನ್ ಕವರ್ ಕುರಿತು ಇನ್ನಷ್ಟು ತಿಳಿಯಿರಿ.
ಕ್ಲೇಮ್ ಪ್ರಕ್ರಿಯೆ ಮತ್ತು ಕ್ಲೈಮ್ ಇತ್ಯರ್ಥದ ಅನುಪಾತ : ಕ್ಲೇಮ್ ಪ್ರಕ್ರಿಯೆಯು ಸರಳ ಮತ್ತು ವೇಗವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಇದು ಡಿಜಿಟಲ್ ಜಗತ್ತು, ಆದ್ದರಿಂದ ಆನ್‌ಲೈನ್ ಪೇಪರ್‌ಲೆಸ್ ಕ್ಲೇಮ್ ಪ್ರಕ್ರಿಯೆಯನ್ನು ನೋಡಿ. ಪಾಲಿಸಿದಾರರ ಮುಖ್ಯ ಕಾಳಜಿಯೆಂದರೆ, ಪಾಲಿಸಿದಾರರ ಕ್ಲೇಮ್‌ಗಳು ಅಗತ್ಯವಿದ್ದಾಗ, ಸಮಯಕ್ಕೆ ಸರಿಯಾಗಿ ಇತ್ಯರ್ಥವಾಗುವುದೇ, ಇಲ್ಲವೇ ಎನ್ನುವುದು. ಕ್ಲೇಮ್ ಇತ್ಯರ್ಥದ ಅನುಪಾತವನ್ನು, ಕಂಪನಿಯು ಸ್ವೀಕರಿಸಿದ ಕ್ಲೇಮ್‌ಗಳ ಸಂಖ್ಯೆಯನ್ನು, ಇತ್ಯರ್ಥಪಡಿಸಿದ ಕ್ಲೈಮ್‌ಗಳ ಸಂಖ್ಯೆಯಿಂದ ಭಾಗಿಸುವ ಮೂಲಕ ಲೆಕ್ಕಹಾಕಲಾಗುತ್ತದೆ. ಆದ್ದರಿಂದ, ಹೆಚ್ಚಿನ ಅನುಪಾತ ಎಂದರೆ, ಕಂಪನಿಯು ಹೆಚ್ಚು ವಿಶ್ವಾಸಾರ್ಹವಾದದ್ದು ಎಂದು.
ಗ್ರಾಹಕ ಸೇವೆ ಲಭ್ಯತೆ : ನೀವು ಪ್ರೀಮಿಯಂಗಳನ್ನು ಪಾವತಿಸಲು ಬದ್ಧರಾದ ನಂತರ, ಕೆಲವು ಇನ್ಶೂರೆನ್ಸ್ ಕಂಪನಿಗಳು ಸಂತೃಪ್ತರಾಗಬಹುದು. ನಾವು ಉತ್ಸಾಹದಿಂದ ಏನನ್ನಾದರೂ ಖರೀದಿಸಿದಾಗ ಹಾಗೂ ಅದಕ್ಕೆ ಗ್ರಾಹಕರ ಬೆಂಬಲದ ಅಗತ್ಯವಿದ್ದಾಗ ನಾವು ಖಾಲಿಯಾದಂತೆ ಅನಿಸುತ್ತದೆ. ಈಗ ನಾವೆಲ್ಲರೂ ಅಂತಹ ಪರಿಸ್ಥಿತಿಯಲ್ಲಿದ್ದೇವೆ. ಇನ್ಶೂರೆನ್ಸ್ ಕಂಪನಿಗಳ ವಿಷಯವೂ ಇದೇ ಆಗಿದೆ ಮತ್ತು ಉತ್ತಮ ಗ್ರಾಹಕ ಸೇವೆಯ ಲಭ್ಯತೆಯು ಯಾವಾಗಲೂ ಪ್ರಮುಖ ಅಂಶವಾಗಿದೆ.
ದೀರ್ಘಾವಧಿ ಪಾಲಿಸಿ, ಕಡಿಮೆ ಪ್ರೀಮಿಯಂ : ಇನ್ಶೂರೆನ್ಸ್ ಎನ್ನುವುದು ಅನೇಕರಿಗೆ ಒಂದು ಟ್ರಿಕಿ ಉತ್ಪನ್ನವಾಗಿರಬಹುದು! ಆದ್ದರಿಂದ ನಿಮ್ಮ ಕೈಗೆ ಸಿಗುವಷ್ಟು ಹೆಚ್ಚು ರಿಯಾಯಿತಿಯನ್ನು ಪಡೆಯಿರಿ . ದೀರ್ಘಾವಧಿಯ ಅವಧಿಯನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಒಂದು ವರ್ಷದ ಪಾಲಿಸಿಗೆ ವಿರುದ್ಧವಾಗಿ ಸಣ್ಣ ಮೊತ್ತವನ್ನು ಮನ್ನಾ ಮಾಡುತ್ತದೆ.
ಗ್ಯಾರೇಜ್ ನೆಟ್ವರ್ಕ್ : ದೇಶದಾದ್ಯಂತ ವ್ಯಾಪಕವಾದ ಗ್ಯಾರೇಜ್‌ಗಳ ನೆಟ್ವರ್ಕ್, ನಿಮಗೆ ಅಗತ್ಯವಿದ್ದಲ್ಲಿ ನಗದುರಹಿತ ಸೌಲಭ್ಯಗಳನ್ನು ಪಡೆಯಲು ನಿಮ್ಮನ್ನು ಅನುಮತಿಸುತ್ತದೆ. ದೀರ್ಘಾವಧಿಯಲ್ಲಿ ನಿಮ್ಮ ಟು-ವೀಲರ್ ಅನ್ನು ರಕ್ಷಿಸಲು ನಿಮ್ಮ ಸಮೀಪದಲ್ಲಿರುವಂತಹ ಅಧಿಕೃತ ಗ್ಯಾರೇಜ್‌ಗಳನ್ನು ಹುಡುಕುವುದು ಅತ್ಯಗತ್ಯವಾಗಿರುತ್ತದೆ.
ವಿಮರ್ಶೆಗಳು : ನೀವು ಖರೀದಿಸುವ ಬೇರೆ ಉತ್ಪನ್ನಗಳಂತೆ ಈಗಾಗಲೇ ಇನ್ಶೂರೆನ್ಸ್ ಪಾಲಿಸಿಗಳನ್ನು ಬಳಸಿದವರ ವಿಮರ್ಶೆಗಳಿಗಾಗಿ ಆನ್‌ಲೈನ್‌ನಲ್ಲಿ ಪರಿಶೀಲಿಸಬೇಕಾಗುತ್ತದೆ. Google ವಿಮರ್ಶೆಗಳು ಮತ್ತು Facebook ರೇಟಿಂಗ್‌ಗಳು ನಿಮಗೆ ಉತ್ಪನ್ನದ ನೈಜ ಕಲ್ಪನೆಯನ್ನು ನೀಡುತ್ತವೆ ಮತ್ತು ಅವು ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಹೆಚ್ಚು ಸುಲಭಗೊಳಿಸಬಹುದು ಹಾಗೂ ಪರಿಷ್ಕರಿಸಬಹುದು.
ಏನನ್ನು ಒಳಗೊಂಡಿಲ್ಲ : ಇನ್ಶೂರೆನ್ಸ್ ಕಂಪನಿಗಳು ಇನ್ಶೂರೆನ್ಸ್ ಪಾಲಿಸಿಯಲ್ಲಿ ಒಳಗೊಂಡಿರುವ ವಿಷಯಗಳನ್ನು ದೊಡ್ಡದಾಗಿ ಬೋಲ್ಡ್ ಮಾಡಿ ಪ್ರದರ್ಶಿಸಿದರೂ, ಕವರೇಜ್‌ಗಾಗಿ ಯಾವ ಸೌಲಭ್ಯಗಳನ್ನು ಸೇರಿಸಲಾಗಿಲ್ಲ ಎಂಬುದನ್ನು ಇಲ್ಲಿ ಸ್ವಲ್ಪ ತನಿಖೆ ಮಾಡುವುದು ಮುಖ್ಯ. ಯೋಚಿಸಿ, ನೀವು ಕ್ಲೇಮ್ ಮಾಡುವಾಗ ನಿಮ್ಮ ಪಾಲಿಸಿಯು ನಿಮಗೆ ಬೇಕಾದ ವಿಷಯವನ್ನು ಒಳಗೊಂಡಿಲ್ಲ ಎಂದು ನಿಮಗೆ ತಿಳಿದರೆ, ನಿಮಗೆ ಆಘಾತ ಆಗುವುದಿಲ್ಲವೇ?
ಡಿಡಕ್ಟಿಬಲ್ಸ್ : ನಿಮ್ಮ ಇನ್ಶೂರೆನ್ಸ್ ಕವರೇಜ್ ಪ್ರಾರಂಭವಾಗುವ ಮೊದಲು 'ವಾಲಂಟರಿ ಮತ್ತು ಕಂಪಲ್ಸರಿ ಡಿಡಕ್ಟಿಬಲ್ಸ್' ಚಿತ್ರದಲ್ಲಿ ಬರುತ್ತವೆ. ಇದು ಮೂಲಭೂತವಾಗಿ, ನಿಮ್ಮ ಕ್ಲೇಮ್ ಮೊತ್ತದಿಂದ ಕಡಿತಗೊಳಿಸಲಾಗುವ ಮೊತ್ತವಾಗಿದೆ. ಆದ್ದರಿಂದ, ಇನ್ಶೂರೆನ್ಸ್ ಪಾಲಿಸಿಯಲ್ಲಿ ಹೆಚ್ಚಿನ ಡಿಡಕ್ಟಿಬಲ್ಸ್ ಇದ್ದರೆ, ಪ್ರೀಮಿಯಂ ಮೊತ್ತವು ಕಡಿಮೆ ಇರುತ್ತದೆ ಮತ್ತು ಡಿಡಕ್ಟಿಬಲ್ಸ್ ಕಡಿಮೆಯಿದ್ದರೆ, ಪ್ರೀಮಿಯಂ ಹೆಚ್ಚಿರುತ್ತದೆ.
ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೇಗೆ ಹೋಲಿಸುವುದು?
ಆನ್‌ಲೈನ್‌ನಲ್ಲಿ ಟು-ವೀಲರ್ ಇನ್ಶೂರೆನ್ಸ್ ಅನ್ನು ಹೋಲಿಕೆ ಮಾಡಿ | ಆಫ್‌ಲೈನ್‌ನಲ್ಲಿ ಟು-ವೀಲರ್ ಇನ್ಶೂರೆನ್ಸ್ ಅನ್ನು ಹೋಲಿಕೆ ಮಾಡಿ |
---|---|
ನಿಮ್ಮ ಡ್ರಾಯಿಂಗ್ ರೂಮಿನ ಸೌಕರ್ಯದಲ್ಲಿ ನಿಮ್ಮ ಲ್ಯಾಪ್‌ಟಾಪ್ ತೆರೆಯಿರಿ. ಪಾಲಿಸಿಗಳನ್ನು ಹೋಲಿಕೆ ಮಾಡುವ ವೆಬ್‌ಸೈಟ್‌ಗಳಿಗೆ ಲಾಗ್ ಇನ್ ಆಗಿರಿ ಮತ್ತು ನೀವು ಸಿದ್ಧರಾಗುತ್ತೀರಿ. | ನಿಮ್ಮ ಪ್ರದೇಶದ ಹೆಸರಾಂತ ಹಾಗೂ ಉತ್ತಮ ಮೊತ್ತದಲ್ಲಿ, ಸರಿಯಾದ ಪಾಲಿಸಿಗಳನ್ನು ನೀಡುವ ಸ್ವತಂತ್ರ ಇನ್ಶೂರೆನ್ಸ್ ಏಜೆಂಟ್ (ಬ್ರೋಕರ್) ಅನ್ನು ಭೇಟಿ ಮಾಡಿ |
ನಿಮ್ಮ ಬೈಕ್‌ನ ವಿವರಗಳನ್ನು ನೀವೇ ಭರ್ತಿ ಮಾಡಿ. ಅಗತ್ಯವಿದ್ದರೆ ವಿಶೇಷಣಗಳು, ಐಡಿವಿ, ಆಡ್-ಆನ್‌ಗಳನ್ನು ಸೇರಿಸಿ. | ನಿಮ್ಮ ಬೈಕ್‌ನ ಎಲ್ಲಾ ವಿವರಗಳನ್ನು ಏಜೆಂಟ್‌ಗೆ ನೀಡಿರಿ. ಇದರಿಂದ ಏಜೆಂಟ್ ನಿಮಗೆ ಸೂಕ್ತವಾದ ಪಾಲಿಸಿಗಳನ್ನು ಒದಗಿಸಲು ಮಾಹಿತಿಯನ್ನು ಪ್ರಕ್ರಿಯೆಗೊಳಿಸಬಹುದು. |
ಹೊಸ ಯುಗದ ಫಿನ್‌ಟೆಕ್ ಕಂಪನಿಗಳು ನೀವು ನಿರ್ದಿಷ್ಟಪಡಿಸಿದ ವಿವರಗಳ ಪ್ರಕಾರ, ಪಾಲಿಸಿಗಳು ಮತ್ತು ದರಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತವೆ. | ಬ್ರೋಕರ್ ತನ್ನ ಸಂಶೋಧನೆಯನ್ನು ಮಾಡಿದ ನಂತರ ವಿವಿಧ ಕಂಪನಿಗಳ ಉಲ್ಲೇಖಗಳನ್ನು (quotes) ನೀಡುತ್ತಾನೆ. |
ಆನ್‌ಲೈನ್‌ನಲ್ಲಿ ಬೈಕ್ ಇನ್ಶೂರೆನ್ಸ್ ಅನ್ನು ಹೋಲಿಸುವ ಪ್ರಯೋಜನಗಳು
ಬೈಕ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಹೋಲಿಸುವ ಅನುಕೂಲತೆಯ ಅಂಶವೇ ಪ್ರಮುಖ ಪ್ರಯೋಜನವಾಗಿದೆ. ನಿಮ್ಮ ವಿವರಗಳನ್ನು ಸಿದ್ಧವಾಗಿಟ್ಟುಕೊಂಡು, ನೀವು ಆನ್‌ಲೈನ್‌ನಲ್ಲಿ ಉಚಿತ ಉಲ್ಲೇಖಗಳನ್ನು (quotes) ಪಡೆಯಬಹುದು ಮತ್ತು ವಿಭಿನ್ನ ಪಾಲಿಸಿಗಳನ್ನು ಹೋಲಿಸಬಹುದು, ಅದು ಖಂಡಿತವಾಗಿಯೂ ನಿಮ್ಮ ಅಮೂಲ್ಯ ಸಮಯವನ್ನು ಉಳಿಸುತ್ತದೆ.
ಆನ್‌ಲೈನ್‌ನಲ್ಲಿ ಬೈಕ್ ಇನ್ಶೂರೆನ್ಸ್ ಹೋಲಿಸಲು ಅನುಸರಿಸಬೇಕಾದ ಪ್ರಕ್ರಿಯೆಯು ಸರಳವಾಗಿದೆ. ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಹೋಲಿಸುವುದರಿಂದ, ನಿಮ್ಮ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಪಾಲಿಸಿಯನ್ನು ಆಯ್ಕೆ ಮಾಡುವ ಸಂಪೂರ್ಣ ಸ್ವಾತಂತ್ರ್ಯ ನಿಮಗೆ ಸಿಗುತ್ತದೆ. ಇದರಿಂದ ನಿಮ್ಮ ಸ್ವಂತ ಸಮಯದಲ್ಲಿ ಇನ್ಶೂರೆನ್ಸ್ ಪಾಲಿಸಿಯ ಬಗ್ಗೆ ನೀವು ಹೆಚ್ಚಿನ ಸಂಶೋಧನೆಯನ್ನು ಮಾಡಬಹುದು.
ಪಾಲಿಸಿಯನ್ನು ಆಯ್ಕೆಮಾಡುವ ವಿಷಯ ಬಂದಾಗ, ನಾವೆಲ್ಲರೂ ವಿಭಿನ್ನ ಅವಶ್ಯಕತೆಗಳನ್ನು ಹೊಂದಿದ್ದೇವೆ. ಪ್ರೀಮಿಯಂ ಕ್ಯಾಲ್ಕುಲೇಟರ್‌ನಂತಹ ಪರಿಕರಗಳ (tools) ಆಕ್ಸೆಸ್'ನೊಂದಿಗೆ , ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಹೋಲಿಸುವುದು ನಿಮ್ಮಲ್ಲಿರುವ DIY ವ್ಯಕ್ತಿಯನ್ನು "ಹೌದು!" ಎನ್ನುವಂತೆ ಮಾಡುತ್ತದೆ. ನೀವು ಬಯಸಿದಲ್ಲಿ ರಾತ್ರಿ 2 ಗಂಟೆಯ ಸಮಯದಲ್ಲೂ ನಿಮ್ಮ ಪ್ರೀಮಿಯಂ ಅನ್ನು ಲೆಕ್ಕ ಹಾಕಬಹುದು!
ಇನ್ಶೂರೆನ್ಸ್ ಬ್ರೋಕರ್ ಅನ್ನು ಮುಖತಃ ಭೇಟಿ ಮಾಡುವುದನ್ನು ಹೋಲಿಸಿದರೆ, ಆನ್‌ಲೈನ್‌ನಲ್ಲಿ ಬೈಕ್ ಇನ್ಶೂರೆನ್ಸ್ ಅನ್ನು ಹೋಲಿಸುವುದು ನಿಮಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ. ಸರಿಯಾದ ಕವರೇಜ್ ಅನ್ನು ಆಯ್ಕೆ ಮಾಡುವುದು ಅತ್ಯಂತ ಮಹತ್ವದ್ದಾಗಿದೆ ಮತ್ತು ನಿಮ್ಮ ಪಾಲಿಸಿಗಾಗಿ ವಿಭಿನ್ನ ಆಡ್-ಆನ್‌ಗಳನ್ನು ಮಿಕ್ಸ್ ಅಂಡ್ ಮ್ಯಾಚ್ ಮಾಡಲು ಇಂಟರ್ನೆಟ್ ಅತ್ಯುತ್ತಮ ಸ್ಥಳವಾಗಿದೆ.
ಬೈಕ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಹೋಲಿಸುವಾಗ ನೆನಪಿಡಬೇಕಾದ ಚೆಕ್ ಲಿಸ್ಟ್
ಇನ್ಶೂರೆನ್ಸ್ ಕಂಪನಿಯ ವಿಶ್ವಾಸಾರ್ಹತೆ - ಇಂದು ಡಜನ್‌ಗಟ್ಟಲೇ ಇನ್ಶೂರೆನ್ಸ್ ಕಂಪನಿಗಳು ಮಾರುಕಟ್ಟೆಯಲ್ಲಿ ಇವೆ. ಆದರೆ ಇನ್ಶೂರೆನ್ಸ್ ಕಂಪನಿಗಳ ಹಿನ್ನೆಲೆಯನ್ನು ಪರಿಶೀಲಿಸಲು, ಸ್ವಲ್ಪ ಸಮಯ ನೀಡುವುದು ಅತ್ಯಗತ್ಯ. ಕಂಪನಿಯ ಕ್ಲೇಮ್ ಇತ್ಯರ್ಥದ ಅನುಪಾತವನ್ನು ಖಚಿತಪಡಿಸಿಕೊಳ್ಳಲು, ನೀವು ಆನ್‌ಲೈನ್‌ನಲ್ಲಿ ಅದಕ್ಕೆ ಸಂಬಂಧಿಸಿದ ವಿಮರ್ಶೆಗಳನ್ನು ನೋಡಬಹುದು.
ನೀವು ಏನು ಪಾವತಿಸುವಿರಿ - ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್‌ಗಳು, ನೀವು ಕವರೇಜ್‌ಗಾಗಿ ಪಾವತಿಸುವ ಮೊತ್ತದ ಶ್ರೇಣಿಯ ಮೇಲೆ ಬೆಳಕು ಚೆಲ್ಲುತ್ತವೆ. ನೀವು ವಿವರಗಳನ್ನು ಭರ್ತಿ ಮಾಡಿ ಮತ್ತು ಬಟನ್ ಒತ್ತಿದರೆ, ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವು ಪಾಪ್ಅಪ್ ಆಗುತ್ತದೆ. ಆಡ್-ಆನ್‌ಗಳ ಬೆಲೆಯನ್ನು ನೋಡಿ ಮತ್ತು ಒಳಗೊಂಡಿರುವ ನಿಜವಾದ ಅಪಾಯಗಳೊಂದಿಗೆ ಅದನ್ನು ತುಲನೆ ಮಾಡಿ.
ನಿಮ್ಮ ಅಗತ್ಯಗಳ ಸ್ಪಷ್ಟತೆ - ಪಾಲಿಸಿ ಖರೀದಿದಾರರಾಗಿ, ನೀವು ಬೈಕ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಂಡಾಗ, ನಿಮಗೆ ಯಾವ ರೀತಿಯ ಆಡ್-ಆನ್‌ಗಳು ಬೇಕಾಗುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ನಿಮ್ಮ ವಿಶೇಷ ಅಧಿಕಾರವಾಗಿದೆ. ನಿಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸಲು, ಸರಿಯಾದ ಆಡ್-ಆನ್‌ಗಳೊಂದಿಗೆ ಸರಿಯಾದ ಪಾಲಿಸಿಯಲ್ಲಿ ಮುಂದುವರಿಯುವ ಮೊದಲು ಸ್ಪಷ್ಟತೆ ಇರಬೇಕಾದುದು ಮುಖ್ಯವಾಗಿದೆ.
ಎರಡೂ ಡಿಡಕ್ಟಿಬಲ್ಸ್- ಇದು ಜೂಜು, ಆದ್ದರಿಂದ ನಿಮ್ಮ ಕಾರ್ಡ್‌ಗಳನ್ನು ಸರಿಯಾಗಿ ಪ್ಲೇ ಮಾಡಿ. ಇತರವುಗಳ ಮೇಲೆ ನೀವು ಕವರ್ ಮಾಡಲು ಬಯಸುವ ನಿರ್ದಿಷ್ಟ ಅಪಾಯಗಳು ನಿಮಗೆ ಮಾತ್ರ ತಿಳಿದಿರುತ್ತದೆ. ಕಡಿಮೆ ಅಪಾಯದ ಕವರ್ ಆಯ್ಕೆಗಳಿಗಾಗಿ, ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್ಸ್ ಆರಿಸುವುದರಿಂದ, ನಿಮ್ಮ ಪ್ರೀಮಿಯಂ ಮೇಲಿನ ಹೊರೆ ಕಡಿಮೆಯಾಗುತ್ತದೆ.