ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್

ಇಂದೇ ಬೈಕ್ ಇನ್ಶೂರೆನ್ಸ್ ಉಲ್ಲೇಖ ಪಡೆಯಿರಿ.

Third-party premium has changed from 1st June. Renew now

ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಎಂದರೇನು?

ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಎನ್ನುವುದು, ನಿಮ್ಮ ಟು ಟು ವೀಲರ್ ವಾಹನಕ್ಕೆ ಸರಿಯಾದ ಬೈಕ್ ಇನ್ಶೂರೆನ್ಸ್  ಪ್ರೀಮಿಯಂ ಅನ್ನು ರಚಿಸಲು, ಸಹಾಯ ಮಾಡುವ ಆನ್‌ಲೈನ್ ಸಾಧನವಾಗಿದೆ. ನೀವು ಅಂತಿಮವಾಗಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಪಡೆಯಲು, ನೀವು ಮಾಡಬೇಕಾಗಿರುವುದು ಇಷ್ಟೇ,  ನಿಮ್ಮ ಬೈಕ್‌ನ ಮೇಕ್ ಮತ್ತು ಮಾಡೆಲ್ , ರಿಜಿಸ್ಟ್ರೇಷನ್ ದಿನಾಂಕ, ನೀವು ರೈಡ್ ಮಾಡುವ ನಗರ ಮತ್ತು ನೀವು ಖರೀದಿಸಲು ಬಯಸುವ ಬೈಕ್ ಇನ್ಶೂರೆನ್ಸ್ ಪ್ಲ್ಯಾನ್. ಮತ್ತು ಬೈಕ್ ಇನ್ಶೂರೆನ್ಸ್  ಕ್ಯಾಲ್ಕುಲೇಟರ್ ನಿಮಗಾಗಿ ಉಲ್ಲೇಖವನ್ನು ರಚಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ನೀವು ಹೆಚ್ಚುವರಿ ಕವರ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಹಾಗೂ ನಿಮ್ಮ ಸಂಚಿತ ನೋ ಕ್ಲೇಮ್ ಬೋನಸ್ ಅನ್ನು ಸೇರಿಸುವ ಮೂಲಕ ಇದನ್ನು ಇನ್ನಷ್ಟು ಕಸ್ಟಮೈಸ್ ಮಾಡಬಹುದು.

ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಬಳಸುವುದು ಹೇಗೆ?

ನಮ್ಮ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಹೇಗೆ ಬಳಸುವುದು ಮತ್ತು ನಿಮ್ಮ ಬೈಕ್‌ಗೆ ಸರಿಯಾದ ಬೈಕ್ ಇನ್ಶೂರೆನ್ಸ್ ಅನ್ನು ಹೇಗೆ ಪಡೆಯುವುದು ಎಂಬುದರ ಕುರಿತು ಪ್ರತಿ ಹಂತದ ವಿವರಣೆ ಇಲ್ಲಿದೆ!

ಹಂತ 1

ನಿಮ್ಮ ಬೈಕ್‌ ಮೇಕ್, ಮಾಡೆಲ್, ವೇರಿಯಂಟ್, ರಿಜಿಸ್ಟ್ರೇಷನ್ ದಿನಾಂಕ ಮತ್ತು ನೀವು ಬೈಕ್ ಓಡಿಸುವ ನಗರವನ್ನು ನಮೂದಿಸಿ.

ಹಂತ 2

'ಉಲ್ಲೇಖ ಪಡೆಯಿರಿ' ಆಯ್ಕೆಯನ್ನು ಕ್ಲಿಕ್ ಮಾಡಿರಿ ಮತ್ತು ನೀವು ಬಯಸುವ ಯೋಜನೆಯನ್ನು ಆಯ್ಕೆಮಾಡಿ.

ಹಂತ 3

ನೀವು ಥರ್ಡ್-ಪಾರ್ಟಿ ಬೈಕ್ ಪಾಲಿಸಿ ಅಥವಾ ಸ್ಟ್ಯಾಂಡರ್ಡ್/ಕಾಂಪ್ರ್ಹೆನ್ಸಿವ್ ಬೈಕ್ ಪಾಲಿಸಿಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದು.

ಹಂತ 4

ನಿಮ್ಮ ಕೊನೆಯ ಬೈಕ್ ಇನ್ಶೂರೆನ್ಸ್ ಪಾಲಿಸಿ - ಮುಕ್ತಾಯ ದಿನಾಂಕ, ಕ್ಲೇಮ್ ಹಿಸ್ಟರಿ, ಎನ್.ಸಿ.ಬಿ. (NCB) ಇತ್ಯಾದಿಗಳ ಬಗ್ಗೆ ನಮಗೆ ತಿಳಿಸಿ.

ಹಂತ 5

ಈಗ ನೀವು ಪೇಜಿನ ಕೆಳಗಿನ ಬಲಭಾಗದಲ್ಲಿ ನಿಮ್ಮ ಪಾಲಿಸಿ ಪ್ರೀಮಿಯಂ ಅನ್ನು ನೋಡುತ್ತೀರಿ.

ಹಂತ 6

ಒಂದುವೇಳೆ ನೀವು ಸ್ಟ್ಯಾಂಡರ್ಡ್ ಯೋಜನೆಯನ್ನು ಆಯ್ಕೆ ಮಾಡಿದರೆ, ಝೀರೋ ಡೆಪ್ರಿಸಿಯೇಷನ್, ರಿಟರ್ನ್ ಟು ಇನ್‌ವಾಯ್ಸ್, ಎಂಜಿನ್ ಮತ್ತು ಗೇರ್ ರಕ್ಷಣೆಗಳಂತಹ ಆಡ್-ಆನ್‌ಗಳನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಐಡಿವಿ(IDV) ಅನ್ನು ನೀವೇ ಹೊಂದಿಸಬಹುದು ಮತ್ತು ನಿಮ್ಮ ಯೋಜನೆಯನ್ನು ಮತ್ತಷ್ಟು ಕಸ್ಟಮೈಸ್ ಮಾಡಬಹುದು.

ಹಂತ 7

ಈಗ ನೀವು ಪೇಜಿನ ಬಲಭಾಗದಲ್ಲಿ, ನಿಮ್ಮ ಫೈನಲ್ ಪ್ರೀಮಿಯಂ ಅನ್ನು ಲೆಕ್ಕಾಚಾರ ಮಾಡಿರುವುದನ್ನು ನೋಡುತ್ತೀರಿ.

ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್‌ನ ಪ್ರಯೋಜನಗಳು

ಸರಿಯಾದ ಐಡಿವಿ(IDV)  ಅನ್ನು ನಿರ್ಧರಿಸಲು ಸಹಾಯ ಮಾಡುತ್ತದೆ- ಸರಿಯಾದ ಐಡಿವಿ(IDV)  ಅನ್ನು ಹೊಂದುವುದರಿಂದ,  ನಿಮ್ಮ ಬೈಕ್‌ ಸಂಪೂರ್ಣ ನಷ್ಟವಾದಲ್ಲಿ ಅಥವಾ ಕಳ್ಳತನವಾದಲ್ಲಿ, ನಿಮ್ಮ ಬೈಕ್‌ನ  ಮಾರುಕಟ್ಟೆ ಮೌಲ್ಯದಷ್ಟು ಪರಿಹಾರವನ್ನು ನೀವು ಪಡೆಯುತ್ತೀರಿ ಎಂದು ಐಡಿವಿ(IDV)  ಖಚಿತಪಡಿಸುತ್ತದೆ. ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಅನ್ನು ಬಳಸುವುದರಿಂದ, ನಿಮ್ಮ ಬೈಕ್‌ನ ವೈಶಿಷ್ಟ್ಯಗಳ ಆಧಾರದ ಮೇಲೆ, ಸರಿಯಾದ ಐಡಿವಿ(IDV)  ಅನ್ನು ಹೊಂದಿಸಲು, ಅದು ನಿಮ್ಮನ್ನು ಅನುಮತಿಸುತ್ತದೆ.

ಸರಿಯಾದ ಆಡ್‌ಆನ್‌ಗಳನ್ನು ಆಯ್ಕೆಮಾಡಿ-ನಿಮ್ಮ ಬೈಕ್ ಇನ್ಶೂರೆನ್ಸ್ ಪಾಲಿಸಿಗಾಗಿ ಸರಿಯಾದ ಆಡ್‌ಆನ್‌ಗಳನ್ನು ಆಯ್ಕೆ ಮಾಡುವುದರಿಂದ, ಅದು ಎಲ್ಲ ಸಂಭಾವ್ಯ ಸಂದರ್ಭಗಳಲ್ಲಿ ಹೆಚ್ಚುವರಿ ರಕ್ಷಣೆ ಮತ್ತು ಕವರೇಜ್ ಅನ್ನು ನೀಡುತ್ತದೆ. ವಿಭಿನ್ನ ಆಡ್-ಆನ್‌ಗಳು ನಿಮ್ಮ ಪ್ರೀಮಿಯಂ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ನಿರ್ಧರಿಸಲು, ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ನಿಮಗೆ ಸಹಾಯ ಮಾಡುತ್ತದೆ. ಇದು ನಿಮ್ಮ ಬೈಕ್‌ಗೆ ಸರಿಯಾದ ಮಿಕ್ಸ್  ಆಡ್-ಆನ್‌ಗಳನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ.

ಸರಿಯಾದ ಪ್ರೀಮಿಯಂ ಅನ್ನು ಆಯ್ಕೆಮಾಡಿ-ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು, ನೀವು ವಿಭಿನ್ನ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಉಲ್ಲೇಖಗಳನ್ನ ಹೋಲಿಸಬಹುದು, ಇದು ನಿಮಗೆ ಉತ್ತಮ ಬೆಲೆಯ ಯೋಜನೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಹಾಗೂ ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ಮಾಡಲಾಗುತ್ತದೆ.

ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಅನ್ನು ಬಳಸುವುದು ಏಕೆ ಮುಖ್ಯ?

ಬೈಕ್ ಇನ್ಶೂರೆನ್ಸ್ ಖರೀದಿಸುವ ವಿಷಯದಲ್ಲಿ, ನಮ್ಮಲ್ಲಿ ಹೆಚ್ಚಿನವರು ಅದನ್ನು ಸಾಧ್ಯವಾದಷ್ಟು ಬೇಗ ಮಾಡಲು ಬಯಸುತ್ತಾರೆ. ಆದ್ದರಿಂದ, ನೀವು ಕೂಡ ತ್ವರಿತವಾಗಿ ಅಗ್ಗದ ಬೈಕ್ ಇನ್ಶೂರೆನ್ಸ್ ಅನ್ನು  ಆರಿಸಬೇಕೇ ಅಥವಾ ಸ್ವಲ್ಪ ಸಮಯ ತೆಗೆದುಕೊಂಡು, ನಿಮ್ಮ ಬೈಕಿಗೆ ಸೂಕ್ತವಾದ ಇನ್ಶೂರೆನ್ಸ್ ಒಂದನ್ನು ಆರಿಸಿಕೊಳ್ಳಬೇಕೇ? ನಂತರದ ಆಯ್ಕೆ ಉತ್ತಮವಾಗಿದೆ. ಮತ್ತು ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಏಕೆ ಮತ್ತು ಹೇಗೆ ಬಳಸುವುದು ಎನ್ನುವುದು ನಿಮಗೆ ಸಹಾಯ ಮಾಡುತ್ತದೆ:

ವೆಚ್ಚ ಪರಿಣಾಮಕಾರಿ, ನಿಮ್ಮ ಹಣವನ್ನು ಉಳಿಸುತ್ತದೆ

ಟು  ವೀಲರ್ ವೆಹಿಕಲ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್‌ನ ಕೆಲಸವು, ನಿಮಗೆ ಅಗ್ಗವಾದುದನ್ನು ಖರೀದಿಸಲು ಸಹಾಯ ಮಾಡುವುದಲ್ಲದೆ, ಹೆಚ್ಚು ವೆಚ್ಚ-ಪರಿಣಾಮಕಾರಿ ನಿರ್ಧಾರವನ್ನು ಮಾಡಲು ನಿಮಗೆ ಸಹಾಯ ಮಾಡುವುದು. ಏಕೆಂದರೆ ಇದು ನಿಮ್ಮ ಬೈಕ್ ಇನ್ಶೂರೆನ್ಸಿನ ಪ್ರೀಮಿಯಂ ಮೇಲೆ, ವಿವಿಧ ಅಂಶಗಳು ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ  ಸರಿಯಾದ ಅಂಶಗಳ ಸಂಯೋಜನೆಯು, ನಿಮ್ಮ ಬೈಕ್ ಅನ್ನು ರಕ್ಷಿಸುವ ಅತ್ಯುತ್ತಮ ಯೋಜನೆಯನ್ನು ಹೇಗೆ ಆಯ್ಕೆ ಮಾಡುವುದೆಂದು ತಿಳಿಸುತ್ತದೆ.

ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಿ

ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಬಳಸುವಾಗ,  ಕೆಲವು ಬದಲಾವಣೆಯ ಅಂಶಗಳು ನಿಮ್ಮ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೇಗೆ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು ಎಂಬುದನ್ನು ನೀವು ಗಮನಿಸುತ್ತೀರಿ. ನೀವು ವಿಭಿನ್ನ ಆಯ್ಕೆಗಳನ್ನು ಪ್ರಯತ್ನಿಸಬಹುದು ಹಾಗೂ ನಿಮಗೆ ಮತ್ತು ನಿಮ್ಮ ಬೈಕಿಗೆ ಯಾವುದು ಉತ್ತಮವೆಂದು ನೋಡಬಹುದು!

ತಿಳುವಳಿಕೆಯುಳ್ಳ ನಿರ್ಧಾರವನ್ನು ಮಾಡಲು ನಿಮಗೆ ಸಹಾಯ ಮಾಡುತ್ತದೆ

ಅಂತಿಮವಾಗಿ, ಇದು ನಿಮ್ಮ ಪ್ರೀತಿಯ ಬೈಕ್ ಮತ್ತು ಅದಕ್ಕಾಗಿ ನೀವು ಮಾಡಬಹುದಾದ ಕನಿಷ್ಠ ಕೆಲಸವೆಂದರೆ, ಎಲ್ಲ ಅಪಾಯಗಳಿಂದ ನಿಮ್ಮ ವಾಹನವನ್ನು ರಕ್ಷಿಸಲು, ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳುವುದು. ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್, ಅದರ ಲೆಕ್ಕಾಚಾರದಲ್ಲಿ ಪಾರದರ್ಶಕವಾಗಿರುತ್ತದೆ ಮತ್ತು ನಿಮ್ಮ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂಬುದನ್ನು ಸ್ವತಃ ನೀವೇ ಸ್ಪಷ್ಟವಾಗಿ ನೋಡಲು ಅನುಮತಿಸುತ್ತದೆ.

ಹೊಸ ಮತ್ತು ಹಳೆಯ ಬೈಕ್‌ಗಳಿಗಾಗಿ ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಅನ್ನು ಬಳಸಿ

ಹೊಸ ಬೈಕ್‌ಗಳಿಗಾಗಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್

ಅಂತಿಮವಾಗಿ, ಇದು ನಿಮ್ಮ ಪ್ರೀತಿಯ ಬೈಕ್ ಮತ್ತು ಅದಕ್ಕಾಗಿ ನೀವು ಮಾಡಬಹುದಾದ ಕನಿಷ್ಠ ಕೆಲಸವೆಂದರೆ, ಎಲ್ಲ ಅಪಾಯಗಳಿಂದ ನಿಮ್ಮ ವಾಹನವನ್ನು ರಕ್ಷಿಸಲು, ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳುವುದು. ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್, ಅದರ ಲೆಕ್ಕಾಚಾರದಲ್ಲಿ ಪಾರದರ್ಶಕವಾಗಿರುತ್ತದೆ ಮತ್ತು ನಿಮ್ಮ ಹೊಸ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂಬುದನ್ನು ಸ್ವತಃ ನೀವೇ ಸ್ಪಷ್ಟವಾಗಿ ನೋಡಲು ಅನುಮತಿಸುತ್ತದೆ.

ಹಳೆಯ ಬೈಕ್‌ಗಳಿಗಾಗಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್

ಮತ್ತೊಂದೆಡೆ, ನೀವು ಹಳೆಯ ಬೈಕನ್ನು ಹೊಂದಿದ್ದರೆ, ನಿಮ್ಮ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಬಹಳಷ್ಟು ಕಡಿಮೆಯದ್ದಾಗಿರುತ್ತದೆ. ಇದು ನಿಮ್ಮ ಬೈಕ್ ಹಳೆಯದಾಗಿರಬಹುದು ಅಥವಾ ಸ್ವಲ್ಪ ಸವೆದಿರಬಹುದು ಎಂದಲ್ಲ. ಬದಲಿಗೆ, ಲಭ್ಯವಿರುವ ಆಡ್-ಆನ್‌ಗಳ ವ್ಯಾಪ್ತಿ ಸಹ ಕಡಿಮೆ ಇರುತ್ತದೆ. ಉದಾಹರಣೆಗೆ, ನಿಮ್ಮ ಬೈಕ್ 5 ವರ್ಷಕ್ಕಿಂತ ಹೆಚ್ಚು ಹಳೆಯದಾಗಿದ್ದರೆ,  ರಿಟರ್ನ್ ಟು ಇನ್‌ವಾಯ್ಸ್ ಕವರ್‌ಗಳಿಗೆ  ಅಥವಾ ಝೀರೋ ಡೆಪ್ರಿಸಿಯೇಷನ್ ಕವರ್‌ಗಳಿಗೆ ನಿಮ್ಮ ಬೈಕ್ ಅರ್ಹವಾಗಿರುವುದಿಲ್ಲ.

ಭಾರತದಲ್ಲಿ ಬೈಕ್ ಇನ್ಶೂರೆನ್ಸ್ ಯೋಜನೆಗಳ ವಿಧಗಳು

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪ್ರೀಮಿಯಂನ ಪ್ರಮುಖ ಅಂಶಗಳ ಕುರಿತು ಇನ್ನಷ್ಟು ಓದಿ.

ಸ್ವಂತ ಹಾನಿಗಳು

ಇದನ್ನು, ಎಲ್ಲ ಕಾಂಪ್ರೆಹೆನ್ಸಿವ್ ಮತ್ತು ಸ್ವಂತ ಹಾನಿಯ ಬೈಕ್ ಇನ್ಶೂರೆನ್ಸ್ ಪಾಲಿಸಿಗಳು ಒಳಗೊಂಡಿವೆ. ಈ ಪ್ರಯೋಜನವು ನಿಮ್ಮ ಸ್ವಂತ ಬೈಕ್‌ಗೆ ಹಾನಿಯಾಗುವುದರಿಂದ ಉಂಟಾಗುವ ನಷ್ಟಗಳನ್ನು ಕವರ್ ಮಾಡುತ್ತದೆ. ಉದಾಹರಣೆಗೆ; ನೀವು ಅಪಘಾತಕ್ಕೀಡಾದರೆ ಅಥವಾ ಪ್ರವಾಹದಿಂದಾಗಿ ನಿಮ್ಮ ಬೈಕ್ ಹಾನಿಯಾದರೆ. ನಿಮ್ಮ ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪ್ರೀಮಿಯಂನ ಈ ಕವರೇಜ್ ಅನ್ನು, ನೀವು ಓಡಿಸುವ ಬೈಕ್ ಪ್ರಕಾರ (ಮೇಕ್, ಮಾಡೆಲ್,ವಾಹನದ ವಯಸ್ಸು, ಸಿಸಿ) ಮತ್ತು ನೀವು ಟು ವೀಲರ್ ವಾಹನ ಓಡಿಸುವ ನಗರದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಇನ್ಶೂರೆನ್ಸ್ ಮಾಡಿದ ಘೋಷಿತ ಮೌಲ್ಯ

ನಿಮ್ಮ ಬೈಕ್‌ನ ಐಡಿವಿ(IDV), ನಿಮ್ಮ ಬೈಕ್‌ನ ಮಾರುಕಟ್ಟೆ ಮೌಲ್ಯವಾಗಿದೆ. ಇದು ಮೂಲಭೂತವಾಗಿ, ನಿಮ್ಮ ಬೈಕ್ ಕಳ್ಳತನವಾಗಿದ್ದರೆ ಅಥವಾ ದುರಸ್ತಿಗೆ ಮೀರಿ ಹಾನಿಗೊಳಗಾಗಿದ್ದರೆ ಅಂತಹ ಸಂದರ್ಭದಲ್ಲಿ ನಿಮಗೆ ನೀಡಬಹುದಾದ ಪರಿಹಾರದ ಮೊತ್ತವನ್ನು ನಿರ್ಧರಿಸುತ್ತದೆ. ಡಿಜಿಟ್‌ ನ ಸಮಗ್ರ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್‌ನಲ್ಲಿ, ನಿಮ್ಮ ಬೈಕ್‌ನ ವೈಶಿಷ್ಟ್ಯಗಳನ್ನು ಅವಲಂಬಿಸಿ ನಿಮ್ಮ ಐಡಿವಿ(IDV)ಅನ್ನು ನೀವೇ ಕಸ್ಟಮೈಸ್ ಮಾಡಬಹುದು.

ಆಡ್-ಆನ್ ಕವರ್‌ಗಳು

ಕಸ್ಟಮೈಸೆಷನ್ ಅದ್ಭುತವಾಗಿದೆ. ಮತ್ತು ಅದು ಸಮಗ್ರ ಬೈಕ್ ಪಾಲಿಸಿಯನ್ನು ವಿಶೇಷವಾಗಿಸುತ್ತದೆ. ನಿಮ್ಮ ಬೈಕ್‌ಗಾಗಿ ನೀವು ಹುಡುಕುತ್ತಿರುವ ರಕ್ಷಣೆಯ ಪ್ರಕಾರವನ್ನು ಆಧರಿಸಿ, ರಿಟರ್ನ್ ಟು ಇನ್‌ವಾಯ್ಸ್ ಕವರ್‌ಗಳು, ಝೀರೋ ಡೆಪ್ರಿಸಿಯೇಷನ್, ಬ್ರೇಕ್ ಡೌನ್ ಅಸಿಸ್ಟೆನ್ಸ್  ಇತ್ಯಾದಿಗಳಂತಹ ಆಡ್-ಆನ್ ಕವರ್‌ಗಳೊಂದಿಗೆ ನಿಮ್ಮ ಕಾಂಪ್ರೆಹೆನ್ಸಿವ್ ಬೈಕ್ ಪಾಲಿಸಿಯನ್ನು ನೀವು ಕಸ್ಟಮೈಸ್ ಮಾಡಬಹುದು.

ಡಿಡಕ್ಟಿಬಲ್ಸ್

ಡಿಡಕ್ಟಿಬಲ್ಸ್ ಎನ್ನುವುದು ಕ್ಲೇಮ್‌ಗಳ ಸಮಯದಲ್ಲಿ ನಿಮ್ಮ ಜೇಬಿನಿಂದ ನೀವು ಹಾಕುವ ಮೊತ್ತವಾಗಿದೆ. ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿಯಲ್ಲಿ, ನಿಮ್ಮ ಷೇರಿನ ಮೊತ್ತವು ಐಚ್ಛಿಕವಾಗಿರುತ್ತದೆ. ನೀವು ಹೆಚ್ಚಿನ ಶೇಕಡಾವಾರು ಆಯ್ಕೆ ಮಾಡಿಕೊಂಡರೆ, ನಿಮ್ಮ ಸಮಗ್ರ ಬೈಕ್ ಇನ್ಶೂರೆನ್ಸಿನ ಪ್ರೀಮಿಯಂ ಕಡಿಮೆ ಇರುತ್ತದೆ ಮತ್ತು ಕಡಿಮೆ ಶೇಕಡಾವಾರು ಆಯ್ಕೆ ಮಾಡಿಕೊಂಡರೆ, ಪ್ರೀಮಿಯಂ ಹೆಚ್ಚಿರುತ್ತದೆ.

ನೋ ಕ್ಲೇಮ್ ಬೋನಸ್

ಪ್ರತಿ ಕ್ಲೇಮ್-ಫ್ರೀ ವರ್ಷಕ್ಕೆ, ನಿಮ್ಮ ಬೈಕ್ ಇನ್ಶೂರೆನ್ಸ್ ಸಂಸ್ಥೆಯವರು ನಿಮಗೆ ರಿಯಾಯಿತಿಯೊಂದಿಗೆ ರಿವಾರ್ಡ್ ನೀಡುತ್ತಾರೆ. ಇದು ನಿಮ್ಮ ಮೊದಲ ಕ್ಲೇಮ್-ಫ್ರೀ ವರ್ಷಕ್ಕೆ 20% ರಷ್ಟು ರಿಯಾಯಿತಿಯನ್ನು ನೀಡುತ್ತದೆ. ನೀವು ಹೆಚ್ಚಿನ NCB ಅನ್ನು ಹೊಂದಿದ್ದರೆ, ನಿಮ್ಮ ಸಮಗ್ರ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕಡಿಮೆ ಇರುತ್ತದೆ.

ಥರ್ಡ್ ಪಾರ್ಟಿ ಹಾನಿ

ಹಾನಿ ಮತ್ತು ನಷ್ಟಗಳಿಂದ ಥರ್ಡ್ ಪಾರ್ಟಿಯನ್ನು ರಕ್ಷಿಸುವ ಹೊಣೆಗಾರಿಕೆಯು ಕಾನೂನಿನ ಪ್ರಕಾರ ಖಡ್ಡಾಯವಾಗಿದೆ. ಆದ್ದರಿಂದ, ನಿಮ್ಮ ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸಿನ ಈ ಅಂಶವು, ಸ್ಟ್ಯಾಂಡರ್ಡ್ ಆಗಿದೆ ಮತ್ತು IRDA ನಿಂದ ಪೂರ್ವನಿರ್ಧರಿತವಾಗಿದೆ.

ನಿಮ್ಮ ಬೈಕಿನ ಮೇಕ್ ಮತ್ತು ಮಾಡೆಲ್

ಹಾನಿ ಮತ್ತು ನಷ್ಟಗಳಿಂದ ಥರ್ಡ್ ಪಾರ್ಟಿಯನ್ನು ರಕ್ಷಿಸುವ ಹೊಣೆಗಾರಿಕೆಯು ಕಾನೂನಿನ ಪ್ರಕಾರ ಖಡ್ಡಾಯವಾಗಿದೆ. ಆದ್ದರಿಂದ, ನಿಮ್ಮ ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸಿನ ಈ ಅಂಶವು, ಸ್ಟ್ಯಾಂಡರ್ಡ್ ಆಗಿದೆ ಮತ್ತು IRDA ನಿಂದ ಪೂರ್ವನಿರ್ಧರಿತವಾಗಿದೆ.

ಮಾಲೀಕರರಿಗೆ-ಚಾಲಕರಿಗೆ ಪರ್ಸನಲ್ ಆಕ್ಸಿಡೆಂಟ್ ಕವರ್

ಹಾನಿ ಮತ್ತು ನಷ್ಟಗಳಿಂದ ಥರ್ಡ್ ಪಾರ್ಟಿಯನ್ನು ರಕ್ಷಿಸುವ ಹೊಣೆಗಾರಿಕೆಯು ಕಾನೂನಿನ ಪ್ರಕಾರ ಖಡ್ಡಾಯವಾಗಿದೆ. ಆದ್ದರಿಂದ, ನಿಮ್ಮ ಸಮಗ್ರ ಬೈಕ್ ಇನ್ಶೂರೆನ್ಸಿನ ಈ ಅಂಶವು, ಸ್ಟ್ಯಾಂಡರ್ಡ್ ಆಗಿದೆ ಮತ್ತು IRDA ನಿಂದ ಪೂರ್ವನಿರ್ಧರಿತವಾಗಿದೆ.

ನಿಮ್ಮ ಬೈಕ್‌ನ ವಯಸ್ಸು

ನಿಮ್ಮ ಬೈಕ್ ಹೊಸದಾಗಿದೆ ಎಂದರೆ, ಅದು ಹೆಚ್ಚಿನ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ನಿಮ್ಮ ಬೈಕ್‌ನ ವಯಸ್ಸು ಸಹ, ನಿಮ್ಮ ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಲೆಕ್ಕಾಚಾರ ಮಾಡಲು ಸಹಾಯ ಮಾಡುತ್ತದೆ.

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಎನ್ನುವುದು, ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ ನಿಮಗೆ ಅಗತ್ಯವಿರುವ ಕನಿಷ್ಠ ರೀತಿಯ ಬೈಕ್ ಇನ್ಶೂರೆನ್ಸ್ . ಇದು ಥರ್ಡ್ ಪಾರ್ಟಿಯ ವಿರುದ್ಧದ ಹಾನಿ ಮತ್ತು ನಷ್ಟಗಳನ್ನು ಮಾತ್ರ ಕವರ್ ಮಾಡುತ್ತದೆ. ಉಧಾಹರಣೆಗೆ ನಿಮ್ಮ ಬೈಕ್ ವ್ಯಕ್ತಿಯೊಬ್ಬರಿಗೆ ಹಾನಿ ಮಾಡಿದರೆ ಅಥವಾ ಮತ್ತೊಬ್ಬರ ಆಸ್ತಿಗೆ ಅಥವಾ ವಾಹನಕ್ಕೆ ಹಾನಿ ಮಾಡಿದರೆ ಅಂತಹ ಹಾನಿಗಳನ್ನು ಕವರ್ ಮಾಡುತ್ತದೆ.

ಥರ್ಡ್ ಪಾರ್ಟಿ ಹಾನಿಗಳು

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್, ಥರ್ಡ್ ಪಾರ್ಟಿಗೆ ಸಂಬಂಧಿಸಿದ ಹಾನಿ ಮತ್ತು ನಷ್ಟಗಳಿಗೆ ಮಾತ್ರ ರಕ್ಷಣೆ ನೀಡುತ್ತದೆ. ಆದ್ದರಿಂದ, ನಿಮ್ಮ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪ್ರೀಮಿಯಂ, ಕೇವಲ ಥರ್ಡ್ ಪಾರ್ಟಿ ಹೊಣೆಗಾರಿಕೆಗಳ ಮೇಲೆ ಮಾತ್ರ ಅವಲಂಬಿತವಾಗಿರುತ್ತದೆ. ಅದರ ಮಿತಿಯು IRDAI ಇಂದ ಪೂರ್ವನಿರ್ಧರಿಸಲ್ಪಟ್ಟಿರುತ್ತದೆ .

ಮಾಲೀಕ-ಸವಾರರಿಗಾಗಿ ಪರ್ಸನಲ್ ಆಕ್ಸಿಡೆಂಟ್ ಕವರ್

ಟು ವೀಲರ್ವಾಹನ ಓಡಿಸುವಾಗ  ಹೆಲ್ಮೆಟ್‌ನೊಂದಿಗೆ ನಿಮ್ಮನ್ನು ರಕ್ಷಿಸಿಕೊಳ್ಳುವುದು ಖಡ್ಡಾಯವಾಗಿರುವಂತೆಯೇ, ನಿಮ್ಮ ಬೈಕ್ ಇನ್ಶೂರೆನ್ಸಿನಲ್ಲಿ ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಸೇರಿಸುವುದು ಸಹ ಖಡ್ಡಾಯವಾಗಿದೆ.

ನಿಮ್ಮ ಬೈಕಿನ ಸಿಸಿ

ನಿಮ್ಮ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ನಿರ್ಧಾರಿಸುವಲ್ಲಿ ನಿಮ್ಮ ಬೈಕಿನ ಸಿಸಿ ದೊಡ್ಡ ಪಾತ್ರವಹಿಸುತ್ತದೆ. ಏಕೆಂದರೆ ನಿಮ್ಮ ಬೈಕ್ ಹೆಚ್ಚಿನ ಸಿಸಿಯನ್ನು ಹೊಂದಿದ್ದರೆ, ಅದು ವೇಗವಾಗಿ ಹೋಗಬಹುದು ಮತ್ತು ಅಂತಿಮವಾಗಿ ಅದರ ಅಪಾಯವು ಹೆಚ್ಚಾಗುತ್ತದೆ. ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್‌ನಲ್ಲಿ, ಪ್ರೀಮಿಯಂ ಅನ್ನು ವಿವಿಧ ಸಿಸಿ ಶ್ರೇಣಿಗಳ ಆಧಾರದ ಮೇಲೆ IRDAI ಪೂರ್ವನಿರ್ಧರಿತಗೊಳಿಸುತ್ತದೆ.

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ದರಗಳು

ಎಂಜಿನ್ ಸಾಮರ್ಥ್ಯದೊಂದಿಗೆ ಟು ವೀಲರ್ವಾಹನ ಪ್ರೀಮಿಯಂ ದರ
75cc ಮೀರದಂತೆ ₹538
75cc ಮೀರುವಂತೆ ಆದರೆ 150cc ಮೀರದಂತೆ ₹714
150cc ಮೀರುವಂತೆ ಆದರೆ 350cc ಮೀರದಂತೆ ₹1,366
350cc ಮೀರುವಂತೆ ₹2,804

ನಿಮ್ಮ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಸಲಹೆಗಳು

ನಿಮ್ಮ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಸಲಹೆಗಳು ಮತ್ತು ಉಪಾಯಗಳು ಇಲ್ಲಿವೆ.

ನಿಮ್ಮ ಸ್ವಯಂ ಕಡಿತಗಳನ್ನು ಹೆಚ್ಚಿಸಿ

ನೀವು ಸುರಕ್ಷಿತ ಸವಾರರಾಗಿದ್ದರೆ ಮತ್ತು ಬಹುಮಟ್ಟಿಗೆ ಕ್ಲೀನ್ ಕ್ಲೇಮ್ ಸ್ಥಿತಿಯನ್ನು ಹೊಂದಿದ್ದರೆ, ಸ್ವಯಂ ಕಡಿತಗಳನ್ನು ಹೆಚ್ಚಿಸುವುದರ ಮೂಲಕ ನಿಮ್ಮ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಸಾಧ್ಯವಿದೆ ಎನ್ನುವುದನ್ನು ನೀವು ಪರಿಗಣಿಸಬಹುದು.

ಉತ್ತಮ ರೈಡಿಂಗ್ ದಾಖಲೆಯನ್ನು ಇರಿಸಿಕೊಳ್ಳಿ

ಇದು ಬಹಳ ಸ್ಪಷ್ಟವಾಗಿದೆ. ಸುರಕ್ಷಿತವಾಗಿ ಸವಾರಿ ಮಾಡಿ ಮತ್ತು ಆದಷ್ಟು ತೊಂದರೆಯಿಂದ ದೂರವಿರಿ, ಇದರಿಂದ ನೀವು ಕ್ಲೇಮ್ ಮಾಡುವುದನ್ನು ತಪ್ಪಿಸಬಹುದು. ಆದ್ದರಿಂದ ಪ್ರತಿ ಬೈಕ್ ಇನ್ಶೂರೆನ್ಸ್ ರಿನೀವಲ್ ಮೇಲೆ ನೋ ಕ್ಲೇಮ್  ಬೋನಸ್ (NCB) ರಿವಾರ್ಡ್ ಪಡೆಯಬಹುದು.

ನಿಮ್ಮ ಇನ್ಶೂರೆನ್ಸ್ ಕಂಪನಿಯೊಂದಿಗೆ ಮಾತನಾಡಿ

ಮುಕ್ತವಾಗಿ ಮಾತನಾಡುವುದು ಯಾವಾಗಲೂ ಉತ್ತಮ ಅಲ್ಲವೇ? ನಿಮ್ಮ ಕಾಳಜಿಗಳು ಏನೇ ಇರಲಿ, ಅವುಗಳನ್ನು ನಿಮ್ಮ ಇನ್ಶೂರೆನ್ಸ್ ಕಂಪನಿಯೊಂದಿಗೆ ಮುಕ್ತವಾಗಿ ಮಾತನಾಡಿ. ಏಕೆಂದರೆ ನಿಮಗೆ  ತಿಳಿದಿರುವುದಿಲ್ಲ, ಅವರು ನಿಮಗೆ ಅತ್ಯಂತ ಸೂಕ್ತವಾದ ಪರಿಹಾರವನ್ನು ನೀಡಬಹುದು ಮತ್ತು ಬಹುಶಃ ವೆಚ್ಚದ ಪರಿಣಾಮಕಾರಿ (cost Effective) ಪ್ರೀಮಿಯಂ ಅನ್ನು ಸಹ ನೀಡಬಹುದು!

ಸಮಯಕ್ಕೆ ಸರಿಯಾಗಿ ನಿಮ್ಮ ಪಾಲಿಸಿಯನ್ನು ರಿನೀವ್ ಮಾಡಿರಿ

ನಾವೆಲ್ಲರೂ ಮುಂದೂಡುತ್ತೇವೆ, ಆದರೆ ಈ ಸಂದರ್ಭದಲ್ಲಿ ಅದನ್ನು ಮಾಡಬೇಡಿ. ನಿಮ್ಮ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಅದರ ಮುಕ್ತಾಯ ದಿನಾಂಕದ ಮೊದಲು ರಿನೀವ್ ಮಾಡಿಸಿ. ಇದು ಕೇವಲ ಬೈಕ್ ತಪಾಸಣೆ ಪ್ರಕ್ರಿಯೆಯನ್ನು ಮಾತ್ರ ತೆಗೆದುಹಾಕುವುದಿಲ್ಲ ಅದರ ಜೊತೆಗೆ ನಿಮ್ಮ ನೋ ಕ್ಲೇಮ್ ಬೋನಸ್ (NCB) ಅನ್ನು ಸೇರಿಸಬಹುದು ಮತ್ತು ರಿಯಾಯಿತಿಯನ್ನು ಪಡೆಯಬಹುದೆಂದು ಖಚಿತಪಡಿಸುತ್ತದೆ.

ಸಂಬಂಧಿತ ಆಡ್-ಆನ್‌ಗಳನ್ನು ಆಯ್ಕೆಮಾಡಿ

ಆಡ್-ಆನ್‌ಗಳು ಮತ್ತು ಕವರ್‌ಗಳು ನಿಮ್ಮ ಬೈಕ್‌ಗೆ ಹೆಚ್ಚುವರಿ ರಕ್ಷಣೆಯ ಪದರವನ್ನು ಸೇರಿಸಲು ಒಂದು ಅದ್ಭುತವಾದ ಮಾರ್ಗವಾಗಿದೆ, ಆದರೆ ಇದು ನಿಮ್ಮ ಬೈಕ್‌ನ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೆಚ್ಚಿಸುತ್ತದೆ. ಆದ್ದರಿಂದ, ನೀವು ಸಂಬಂಧಿತ ಆಡ್-ಆನ್‌ಗಳನ್ನು ಮಾತ್ರ ಆಯ್ಕೆ ಮಾಡುವಂತೆ ನಾವು ಶಿಫಾರಸು ಮಾಡುತ್ತೇವೆ.

ಡಿಜಿಟ್ ಮೂಲಕ ಬೈಕ್ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು?

ಡಿಜಿಟ್ ನ ಟು ವೀಲರ್ ವಾಹನ ಇನ್ಶೂರೆನ್ಸಿನ ಪ್ರಮುಖ ಲಕ್ಷಣಗಳು

ಪ್ರಮುಖ ಲಕ್ಷಣಗಳು ಡಿಜಿಟ್ ಪ್ರಯೋಜನಗಳು
ಪ್ರೀಮಿಯಂ 714 ರೂಗಳಿಂದ ಪ್ರಾರಂಭ
ನೋ ಕ್ಲೇಮ್ ಬೋನಸ್ (NCB) 50% ವರೆಗೆ ರಿಯಾಯಿತಿ
ಕಸ್ಟಮೈಸ್ ಮಾಡಬಹುದಾದ ಆಡ್‌ಆನ್‌ಗಳು 5 ಆಡ್‌ಆನ್‌ಗಳು ಲಭ್ಯ ಇವೆ
ನಗದುರಹಿತ ರಿಪೇರಿಗಳು 4400+ ಗ್ಯಾರೇಜ್‌ಗಳಲ್ಲಿ ಲಭ್ಯ ಇವೆ
ಕ್ಲೇಮ್ ಪ್ರಕ್ರಿಯೆ ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಕ್ಲೇಮ್ ಪ್ರಕ್ರಿಯೆ. ಕೇವಲ 7 ನಿಮಿಷಗಳಲ್ಲಿ ಆನ್‌ಲೈನ್‌ನಲ್ಲಿ ಮಾಡಬಹುದು!
ಓನ್ ಡ್ಯಾಮೇಜ್ ಕವರ್ ಲಭ್ಯವಿದೆ
ಥರ್ಡ್ ಪಾರ್ಟಿ ಹಾನಿಗಳು ವೈಯಕ್ತಿಕ ಹಾನಿಗಳಿಗೆ ಅನಿಯಮಿತ ಹೊಣೆಗಾರಿಕೆ ಮತ್ತು ಆಸ್ತಿ/ವಾಹನ ಹಾನಿಗಳಿಗೆ 7.5 ಲಕ್ಷದವರೆಗೆ

ನಮ್ಮೊಂದಿಗೆ, ವಿಐಪಿ ಕ್ಲೇಮ್‌ಗಳಿಗೆ ಪ್ರವೇಶ ಪಡೆಯಿರಿ

ನಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾಮುಕ್ತರಾಗಿ ಜೀವಿಸುತ್ತೀರಿ! ಏಕೆಂದರೆ, ನಾವು 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೇಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

ಕೇವಲ 1800-258-5956 ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ ಲಿಂಕ್ ಪಡೆಯಿರಿ. ಮಾರ್ಗದರ್ಶಿಯ ಮೂಲಕ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ ನೆಟ್‌ವರ್ಕ್ ಮೂಲಕ ಮರುಪಾವತಿ ಅಥವಾ ನಗದುರಹಿತದ ಆಯ್ಕೆಯನ್ನು ಪಡೆಯುವ 'ರಿಪೇರಿ ವಿಧಾನವನ್ನು' ಆಯ್ದುಕೊಳ್ಳಿ.

ಡಿಜಿಟ್ ಇನ್ಶೂರೆನ್ಸ್ ಕ್ಲೇಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ. ಡಿಜಿಟ್‌ ನ ಕ್ಲೇಮ್‌ಗಳ ವರದಿ ಕಾರ್ಡ್ ಅನ್ನು ಓದಿ

ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್‌ಗೆ ಸಂಬಂಧಿಸಿದ ಪದೇ ಪದೇ ಕೇಳಲಾದ ಪ್ರಶ್ನೆಗಳು

ಟು ವೀಲರ್ ವೆಹಿಕಲ್ ಇನ್ಶೂರೆನ್ಸಿನಲ್ಲಿ ಸ್ವಯಂ ಕಡಿತಗಳು ಎಂದರೇನು? ಮತ್ತು ಅದು ಹೇಗೆ ಪ್ರಯೋಜನಕಾರಿಯಾಗಿದೆ?

ಮೊದಲನೆಯದಾಗಿ, ನೀವು ಬೈಕ್ ಇನ್ಶೂರೆನ್ಸ್ ಕ್ಲೇಮ್ ಮಾಡಿದಾಗ ಮತ್ತು ಅದು ಕ್ಲಿಯರ್ ಆದಮೇಲೆ, ಅಲ್ಲಿ ಒಟ್ಟು ಕ್ಲೇಮ್ ಪಾವತಿಗಾಗಿ ಎರಡು ಭಾಗಗಳಿರುತ್ತವೆ. ಒಂದು ಭಾಗವನ್ನು ನಾವು ಪಾವತಿಸುತ್ತೇವೆ ಮತ್ತು ಇನ್ನೊಂದು ಭಾಗವನ್ನು ನೀವು ಪಾವತಿಸುತ್ತೀರಿ. ನೀವು ಪಾವತಿಸುವ ಭಾಗವನ್ನು ಹೆಚ್ಚುವರಿ ಅಥವಾ ಕಡಿತಗಳು ಎಂದು ಕರೆಯಲಾಗುತ್ತದೆ. ಇದು ಖಡ್ಡಾಯ (ಇದು ಸಹಜವಾಗಿ ಖಡ್ಡಾಯವೂ ಹೌದು) ಮತ್ತು ಸ್ವಯಂಪ್ರೇರಿತ ಸಂಯೋಜನೆಯಾಗಿರಬಹುದು. ಸ್ವಯಂಪ್ರೇರಿತ ಭಾಗ ಎನ್ನುವುದು, ಬೈಕ್ ಇನ್ಶೂರೆನ್ಸ್ ಕ್ಲೇಮ್ ಸಮಯದಲ್ಲಿ ಪಾವತಿಸಲು ನೀವು ಆಯ್ಕೆ ಮಾಡಿಕೊಂಡಿರುವ ಹೆಚ್ಚುವರಿ ಮೊತ್ತವಾಗಿದೆ. ಅದು ನೀವು ಪಾವತಿಸಲು ನಾವು ಹೊಂದಿಸಿರುವ ಮೊತ್ತಕ್ಕಿಂತ ಹೆಚ್ಚಿನ ಮೊತ್ತವಾಗಿದೆ (ಖಡ್ಡಾಯವಾದದ್ದು). ಜನರು ಸ್ವಯಂಪ್ರೇರಿತ ಕಡಿತವನ್ನು ಏಕೆ ಆಯ್ಕೆ ಮಾಡುತ್ತಾರೆ? ಜನರು ತಮ್ಮ ಟು ವೀಲರ್ವಾಹನ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಇದನ್ನು ಬಳಸುತ್ತಾರೆ.

ಸಲಹೆ: ದುರಾಸೆ ಬೇಡ. ನಿಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಈ ವೈಶಿಷ್ಟ್ಯವನ್ನು ಬಳಸಿ. ನೀವು ಉತ್ತಮವಾದ 50% ನೋ ಕ್ಲೇಮ್ ಬೋನಸ್ ಹಂತದಲ್ಲಿದ್ದಾಗ ಮಾತ್ರ ಇದನ್ನು ಬಳಸುವುದು ಉತ್ತಮ.  (ಅಂದರೆ 5 ವರ್ಷಗಳಿಂದ ಕ್ಲೇಮ್ ಮಾಡಲಾಗಿಲ್ಲ). ಇದರರ್ಥ ನೀವು ಕ್ಲೇಮ್ ಮಾಡುವ ಸಂಭಾವ್ಯತೆ ಕಡಿಮೆ ಇರುತ್ತದೆ. ಮತ್ತು ನಿಮ್ಮ ಟು ವೀಲರ್ವಾಹನ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ನೀವು ಕಡಿಮೆ ಮಾಡಬಹುದು.

ಟು ವೀಲರ್ ವೆಹಿಕಲ್ ಇನ್ಶೂರೆನ್ಸಿನಲ್ಲಿ ಖಡ್ಡಾಯ ಹೆಚ್ಚುವರಿ ಎಂದರೆ ಏನು?

ಖಡ್ಡಾಯ ಹೆಚ್ಚುವರಿಯು ಕಡಿತಗಳು ಎಂಬ ಇನ್ನೊಂದು ಪದವಾಗಿದೆ - ಇದು, ನಿಮ್ಮ ಕ್ಲೇಮ್‌ನ ಭಾಗವಾಗಿ ನೀವು ಪಾವತಿಸುವ ಮೊತ್ತ.

ನನ್ನ ಇನ್ಶೂರೆನ್ಸ್ ಕಂಪನಿಯನ್ನು ಆನ್‌ಲೈನ್‌ ನಲ್ಲಿ ಬದಲಾಯಿಸುವ ಮೊದಲು, ನಾನು ಯಾವ ಅಂಶಗಳನ್ನು ಪರಿಗಣಿಸಬೇಕು?

ಯಾವುದೇ ಪಾಲಿಸಿಯನ್ನು ಖರೀದಿಸುವ ಮೊದಲು ಪರಿಗಣಿಸಬೇಕಾದ ಪ್ರಮುಖ ಅಂಶಗಳು:

  • ಕ್ಲೇಮ್ ಇತ್ಯರ್ಥದ ವೇಗ- ನಿಮ್ಮ ಹಣಕ್ಕಾಗಿ ಕಾಯಲು ನೀವು ಬಯಸುವುದಿಲ್ಲ, ಅಲ್ಲವೇ?
  • ಅನುಸಂಧಾನ - ಮತ್ತೊಮ್ಮೆ, ಕಸ್ಟಮರ್ ಕೇರ್ ತಂಡದೊಂದಿಗೆ ಮಾತನಾಡಲು ಗಂಟೆಗಳಷ್ಟು ಕಾಯುವುದು ಮುಗಿಯುವುದಿಲ್ಲ!
  • ನಿಮ್ಮ ಟು ವೀಲರ್ ವೆಹಿಕಲ್ ರಿಪೇರಿಗೆ ನಗದು ರಹಿತ ಆಯ್ಕೆ
  • ನೆಟ್‌ವರ್ಕ್ ಸಂಪರ್ಕ- ನಿಮ್ಮ ಫೋನ್ ಮಾತ್ರವಲ್ಲ, ಅದರೊಂದಿಗೆ ಸರ್ವಿಸ್ ಸೆಂಟರಿನ  ನೆಟ್‌ವರ್ಕ್.
  • ಕಂಪನಿಯ ಕ್ಲೇಮ್ ಸೆಟಲ್‌ಮೆಂಟ್ ಇತಿಹಾಸ.

ಆನ್‌ಲೈನ್‌ನಲ್ಲಿ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ನಾನು ಯಾವುದದರೂ ಹಾರ್ಡ್‌ಕಾಪಿಗಳನ್ನು ಸಲ್ಲಿಸಬೇಕೇ?

ನಿಮ್ಮಂತೆ ನಾವೂ ದಾಖಲೆಯಿಂದ ವಿಮುಖರಾಗಿದ್ದೇವೆ. ಹೊಸ ಪಾಲಿಸಿಗಾಗಿ , ನೀವು ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಿಲ್ಲ.

ನಾನು ಆನ್‌ಲೈನ್‌ನಲ್ಲಿ ಇನ್ಶೂರೆನ್ಸ್ ಖರೀದಿಸಿದರೆ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಎಷ್ಟು ಬೇಗ ನನ್ನನ್ನು ತಲುಪುತ್ತದೆ?

ನೀವು ಪಾವತಿ ಮಾಡಿದ ನಂತರ, ಪಾಲಿಸಿಯ ಸಾಫ್ಟ್-ಕಾಪಿಯು ನಿಮ್ಮ ಮೇಲ್ ಬಾಕ್ಸ್ ಅನ್ನು ತಲುಪುತ್ತದೆ. ಜಿಪ್, ಜ್ಯಾಪ್, ಜೂಮ್! ನಾವು ಪರಿಸರಸ್ನೇಹಿಯಾಗಿ ಇರಲು ಬಯಸುತ್ತೇವೆ. ಆದ್ದರಿಂದ ನಾವು ಯಾವುದೇ ಹಾರ್ಡ್-ಕಾಪಿಯನ್ನು ಕಳುಹಿಸುವುದಿಲ್ಲ ಆದರೆ ಒಂದುವೇಳೆ ನೀವು ಹಾರ್ಡ್-ಕಾಪಿಯನ್ನು ಬಯಸಿದರೆ ನೀವದನ್ನು ನಮಗೆ ತಿಳಿಸಬಹುದು, ಅದಕ್ಕನುಗುಣವಾಗಿ ನಾವದನ್ನು ನಿಮಗೆ ಕಳುಹಿಸುತ್ತೇವೆ.

ನಾನು ನನ್ನ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸಿದರೆ, ನನ್ನ ನೋ ಕ್ಲೇಮ್ ಬೋನಸ್ (NCB) ಏನಾಗುತ್ತದೆ?

ಉತ್ತಮ ಚಾಲನಾ ದಾಖಲೆಗಾಗಿ ನಿಮ್ಮ ಎನ್.ಸಿ.ಬಿ.(NCB) ಇದೆ. ಆದ್ದರಿಂದ, ನೀವು ನಿಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸಿದರೂ, ಅದು ನಿಮ್ಮೊಂದಿಗೆ ಇರುತ್ತದೆ.

ಆನ್‌ಲೈನ್‌ನಲ್ಲಿ ಇನ್ಶೂರೆನ್ಸ್ ಖರೀದಿಸುವುದರಿಂದ ಯಾವುದಾದರೂ ಅನಾನುಕೂಲತೆಗಳಿವೆಯೇ?

ಇಲ್ಲ, ಇದು ಯಾವುದೇ ಅನಾನುಕೂಲಗಳನ್ನು ಹೊಂದಿಲ್ಲ. ಬದಲಿಗೆ ಇದು ನಿಮಗಾಗಿ ಸರಿಯಾದ ಟು ವೀಲರ್ವಾಹನ ಇನ್ಶೂರೆನ್ಸ್ ಅನ್ನು ಹೋಲಿಸಲು ಮತ್ತು ಖರೀದಿಸಲು ಉತ್ತಮ ಮಾರ್ಗವಾಗಿದೆ.