ಬಸ್ ಇನ್ಶೂರೆನ್ಸ್

ಪ್ಯಾಸೆಂಜರ್ ಹಾಗೂ ಶಾಲಾ ಬಸ್ಸುಗಳಿಗಾಗಿ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್

Third-party premium has changed from 1st June. Renew now

ಬಸ್ ಇನ್ಶೂರೆನ್ಸ್ ಕಮರ್ಷಿಯಲ್  ಬಸ್ ಗಳನ್ನು, ಆಗಬಹುದಾದ ಹಾನಿಗಳು ಹಾಗೂ ನಷ್ಟಗಳು, ಉದಾಹರಣೆಗೆ ಒಂದು ಅಪಘಾತ,  ನೈಸರ್ಗಿಕ ವಿಪತ್ತು, ಬೆಂಕಿ ಇತ್ಯಾದಿಗಳಿಂದ ಕಾಪಾಡುವ ಒಂದು ಕಮರ್ಷಿಯಲ್  ವೆಹಿಕಲ್ ಇನ್ಶೂರೆನ್ಸ್ ಆಗಿದೆ.ಇದರ ಮೂಲ ಯೋಜನೆಯು ಥರ್ಡ್ ಪಾರ್ಟೀ ಹೊಣೆಗಾರಿಕೆಗಳನ್ನು(ಕಾನೂನಾತ್ಮಕವಾಗಿ ಕಡ್ಡಾಯವಾದ) ಕವರ್ ಮಾಡಿದರೆ, ಒಂದು ಕಾಂಪ್ರೆಹೆನ್ಸಿವ್ ಪಾಲಿಸಿ ಸ್ವಂತ ಹಾನಿ ಹಾಗೂ ನಷ್ಟಗಳನ್ನೂ ಕವರ್ ಮಾಡುತ್ತದೆ,ಅಂದರೆ ಎರಡನ್ನೂ ಒಂದೇ ಪಾಲಿಸಿಯಲ್ಲಿ ಸಂಯೋಜಿಸಿ.

 

ಕವರ್ ಆಗಿರುವ ಬಸ್ ಗಳ ಪ್ರಕಾರಗಳು :

  • ಶಾಲಾ ಬಸ್ ಗಳು :ಪ್ರಾಥಮಿಕವಾಗಿ ವಿದ್ಯಾರ್ಥಿಗಳ ಸಾರಿಗೆಗಾಗಿ ಶೈಕ್ಷಣಿಕ ಸಂಸ್ಥೆಗಳಿಗೆ,ಅಂದರೆ ಶಾಲೆ ಅಥವಾ ಕಾಲೇಜಿಗೆ ಸೇರಿದ ಬಸ್ ಗಳನ್ನು ಈ ಪಾಲಿಸಿ ಅಡಿಯಲ್ಲಿ ಕವರ್ ಮಾಡಬಹುದಾಗಿದೆ.
  • ಸಾರ್ವಜನಿಕ ಬಸ್ ಗಳು :ಪ್ರಯಾಣಿಕರನ್ನು ನಗರದೊಳಗೆ ಅಥವಾ ನಗರದ ಹೊರಗೂ ಕೂಡಾ ಒಂದು ಕಡೆಯಿಂದ ಇನ್ನೊಂದೂ ಕಡೆಗೆ ಒಯ್ಯುವ, ಸರಕಾರವು ಹೊಂದಿರುವ ಹಾಗೂ ನಡೆಸುತ್ತಿರುವ ಬಸ್ ಗಳನ್ನೂ ಈ ಪಾಲಿಸಿ ಅಡಿಯಲ್ಲಿ ಕವರ್ ಮಾಡಬಹುದಾಗಿದೆ.
  • ಖಾಸಗಿ ಬಸ್ ಗಳು : ಖಾಸಗಿ ಸಂಸ್ಥೆಗಳಿಗೆ ಸೇರಿದ ಬಸ್ ಗಳು ಉದಾಹರಣೆಗೆ ಟೂರ್ ಬಸ್ ಗಳನ್ನು, ತನ್ನ ನೌಕರರಿಗಾಗಿ ಕಛೇರಿಗಳು ಹೊಂದಿರುವ ಬಸ್ ಗಳನ್ನೂ ಈ ಕವರ್ ಅಡಿಯಲ್ಲಿ ಸೇರಿಸಬಹುದಾಗಿದೆ.
  •  ಪ್ರಯಾಣಿಕರನ್ನು ಒಯ್ಯುವ ಇತರ ಬಸ್ ಗಳು : ಇತರ ಎಲ್ಲಾ ರೀತಿಯ ಕಮರ್ಷಿಯಲ್  ಬಸ್ ಗಳು ಉದಾಹರೆಣೆಗೆ ಪ್ರಯಾಣಿಕರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಯ್ಯುವ ವ್ಯಾನ್ ಗಳು ಈ ಪಾಲಿಸಿ ಅಡಿಯಲ್ಲಿ ಕವರ್ ಆಗಿವೆ.

ನಾನು ಬಸ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು

  • ಅನಿರೀಕ್ಷಿತ ಹಾನಿಗಳಿಂದ ಸಂರಕ್ಷಣೆ : ಥರ್ಡ್ ಪಾರ್ಟೀಗಾದ ಹಾನಿ ಇರಲಿ ಅಥವಾ ನಿಮ್ಮ ಸ್ವಂತ ಬಸ್ಸಿಗಾದ ಹಾನಿಯೇ ಇರಲಿ, ಒಂದು ಬಸ್ ಇನ್ಶೂರೆನ್ಸ್ ನೀವು ಈ ಎಲ್ಲದರಿಂದ ಕವರ್ ಆಗುವಂತೆ ಖಚಿತ ಪಡಿಸುತ್ತದೆ ಹಾಗೂ ಇದರಿಂದ ಉದ್ಯಮದಲ್ಲಿ ನೀಮಗಾಗಬಹುದಾದ ನಷ್ಟ ಅಥವಾ ನಿಮ್ಮ ದೈನಂದಿನ ಸಾಗಾಟದ ಕಾರ್ಯಗಳಿಗೆ ಎದುರಾಗುವ ಸಮಸ್ಯೆಗಳನ್ನು ತಪ್ಪಿಸುತ್ತದೆ.
  • ಕಾನೂನಿನ ಅನುಸರಣೆ : ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ, ಎಲ್ಲಾ ವಾಹನಗಳಿಗೆ, ವಿಶೇಷವಾಗಿ ಕಮರ್ಷಿಯಲ್  ಉದ್ದೇಶಗಳಿಗಾಗಿ ಬಳಸುವ ವಾಹನಗಳಿಗೆ, ಆಗಬಹುದಾದ ಥರ್ಡ್ ಪಾರ್ಟೀ ಹಾನಿಗಳು ಹಾಗೂ ನಷ್ಟಗಳಿಂದ ಸಂರಕ್ಷಿಸಲು, ಕನಿಷ್ಠ ಪಕ್ಷ ಒಂದು ಥರ್ಡ್ ಪಾರ್ಟೀ ಕಮರ್ಷಿಯಲ್  ಬಸ್ ಇನ್ಶೂರೆನ್ಸ್ ಪಾಲಿಸಿಯನ್ನಾದರೂ ಹೊಂದುವುದು ಕಡ್ಡಾಯವಾಗಿದೆ. ಇದಿಲ್ಲದ್ದೆ ನೀವು ಸಿಕ್ಕಿಬಿದ್ದಲ್ಲಿ, ದಂಡ ತೆರಬೇಕಾಗುವುದು.
  • ಮಾಲಕ-ಚಾಲಕನಿಗೆ ಕವರ್ : ಒಂದು ಬಸ್ ಇನ್ಶೂರೆನ್ಸ್ ನಿಮಗೆ ಹಾಗೂ ಯಾವುದೇ ಥರ್ಡ್ ಪಾರ್ಟೀ ವಾಹನಕ್ಕೆ ಆದ ಹಾನಿ ಹಾಗೂ ನಷ್ಟಗಳನ್ನು ಕವರ್ ಮಾಡುವುದಲ್ಲದೆ, ಮಾಲಕ-ಚಾಲಕನಿಗೆ ಆಗಬಹುದಾದ ದೈಹಿಕ ಗಾಯಗಳಿಗೂ ಕವರ್ ನೀಡುತ್ತದೆ.
  • ಪ್ರಯಾಣಿಕನ ಸಂರಕ್ಷಣೆ : ಎಲ್ಲ ಕಮರ್ಷಿಯಲ್  ವೆಹಿಕಲ್  ಇನ್ಶೂರೆನ್ಸ್ ನ ಭಾಗವಾಗಿ, ನೀವು ನಿಮ್ಮ ಪ್ರಯಾಣಿಕರನ್ನೂ, ಅಪಘಾತ, ಬೆಂಕಿ ನೈಸರ್ಗಿಕ ವಿಪತ್ತಿನಂತಹ ದುರ್ಘಟನೆಗಳಿಂದ ಕವರ್ ನೀಡಲು, ಹೆಚ್ಚುವರಿ ಅನುಮೋದನೆಗಳ ಆಯ್ಕೆಯನ್ನು ಮಾಡಬಹುದು.

ಡಿಜಿಟ್ ನ ಕಮರ್ಷಿಯಲ್ ಬಸ್ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಬೇಕು?

ಕಮರ್ಷಿಯಲ್ ಬಸ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ?

ಏನೆಲ್ಲ ಕವರ್ ಆಗಿರುವುದಿಲ್ಲ

ನಿಮ್ಮ ಕಮರ್ಷಿಯಲ್  ಬಸ್ಸಿನ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಕವರ್ ಆಗಿರುವುದಿಲ್ಲ ಎಂದು ತಿಳಿಯುವುದೂ ಬಹಳ ಮುಖ್ಯ ಏಕೆಂದರೆ ಕ್ಲೈಮ್ ಸಮಯದಲ್ಲಿ ನಿಮಗೆ ಯಾವುದೇ ರೀತಿಯ ಆಶ್ಚರ್ಯ ಕಾದಿರಬಾರದು. ಇಲ್ಲಿ ಕೆಲವು ಸಂದರ್ಭಗಳಿವೆ:

ಥರ್ಡ್ ಪಾರ್ಟೀ ಪಾಲಿಸಿದಾರರಿಗಾದ ಸ್ವಂತ ಹಾನಿಗಳು

If you’re only going for a Third-Party Commercial Insurance for your bus, then own damages and losses won’t be covered. 

)ಕುಡಿದ ಮತ್ತಿನಲ್ಲಿ ಅಥವಾ ಮಾನ್ಯ ಪರವಾನೀಗೆ ಇಲ್ಲದೆ ವಾಹನ ಚಲಾವಣೆ

ಕ್ಲೈಮ್ ಸಮಯದಲ್ಲಿ, ಮಾಲಕ-ಚಾಲಕ ಮಾನ್ಯ ಪರವಾನಿಗೆ ಇಲ್ಲದೇ ಅಥವಾ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುವುದು ತಿಳಿದುಬಂದರೆ ಆ ಬಸ್ ಅನ್ನು ಕವರ್ ಮಾಡಲಾಗುವುದಿಲ್ಲ.

ಸಹಾಯಕ ನಿರ್ಲಕ್ಷ್ಯ

ಸಹಾಯಕ ನಿರ್ಲಕ್ಷ್ಯದಿಂದ ಬಸ್ಸಿಗಾದ ಹಾನಿ ಅಥವಾ ನಷ್ಟಗಳನ್ನು ಕವರ್ ಮಾಡಲಾಗುವುದಿಲ್ಲ. ಉದಾಹರಣೆಗೆ, ನಗರದಲ್ಲಿ ಪ್ರವಾಹದ ಪರಿಸ್ಥಿತಿ ಇರುವಾಗಲೂ ಬಸ್ಸನ್ನು ವ್ಯಕ್ತಿ ಚಲಾಯಿಸಿದ್ದರೆ.

ತತ್ಪರಿಣಾಮವಾದ ಹಾನಿಗಳು

ಅಪಘಾತ, ನೈಸರ್ಗಿಕ ವಿಪತ್ತು ಅಥವಾ ಬೆಂಕಿಯ ನೇರ ಪರಿಣಾಮವಾಗಿರದ ಹಾನಿ ಅಥವಾ ನಷ್ಟಗಳು.

ಡಿಜಿಟ್ ನ ಕಮರ್ಷಿಯಲ್ ಬಸ್ ಇನ್ಶೂರೆನ್ಸ್ ನ ಪ್ರಮುಖ ವೈಶಿಷ್ಠ್ಯಗಳು

ಪ್ರಮುಖ ವೈಶಿಷ್ಠ್ಯಗಳು ಡಿಜಿಟ್ಪ್ರಯೋಜನಗಳು
ಕ್ಲೈಮ್ ಪ್ರಕ್ರಿಯೆ ಕಾಗದರಹಿತ ಕ್ಲೈಮ್ ಗಳು
ಹೆಚ್ಚುವರಿ ಕವರೇಜ್ ಪಿಎ ಕವರ್, ಕಾನೂನು ಹೊಣೆಗಾರಿಕೆಯ ಕವರ್,ವಿಶೇಷ ಹೊರಪಡಿಕೆಗಳು, ಕಡ್ಡಾಯ ಕಡಿತಗಳು, ಇತ್ಯಾದಿ
ಥರ್ಡ್ ಪಾರ್ಟೀ ಗೆ ಆದ ಹಾನಿ ವಯಕ್ತಿಕ ಹಾನಿಗಾಗಿ ಅನಿಯಮಿತ ಹೊಣೆಗಾರಿಕೆ, ಸ್ವತ್ತು/ವಾಹನ ಹಾನಿಗಳಿಗೆ 7.5 ಲಕ್ಷದವರೆಗಿನ ಮೊತ್ತ
ಪ್ರಮುಖ ವೈಶಿಷ್ಠ್ಯಗಳು ಡಿಜಿಟ್ಪ್ರಯೋಜನಗಳು

ಕಮರ್ಷಿಯಲ್ ಬಸ್ ಇನ್ಶೂರೆನ್ಸ್ ಯೋಜನೆಗಳ ಪ್ರಕಾರಗಳು

ನಿಮಗೆ ನಿಮ್ಮ ಬಸ್ ಅಥವಾ ಅನೇಕ ಬಸ್ ಗಳನ್ನು ಇನ್ಶೂರ್ ಮಾಡಬೇಕೆಂದಿದ್ದರೆ, ಪ್ರಾಥಮಿಕವಾಗಿ ಆಯ್ಕೆ ಮಾಡಲು ಎರಡು ಯೋಜನೆಗಳಿವೆ

ಹೊಣೆಗಾರಿಕೆ ಮಾತ್ರ ಸ್ಟಾಂಡರ್ಡ್ ಪ್ಯಾಕೇಜ್

ಯಾವುದೇ ಥರ್ಡ್ ಪಾರ್ಟೀ ವ್ಯಕ್ತಿ ಅಥವಾ ಸ್ವತ್ತಿಗೆ ನಿಮ್ಮ ಬಸ್ಸಿನಿಂದಾದ ಹಾನಿ

×

Damages caused by your bus to a third-party vehicle

×

ನೈಸರ್ಗಿಕ ವಿಪತ್ತು, ಬೆಂಕಿ, ಕಳವು ಅಥವಾ ಅಪಘಾತಗಳಿಂದ ನಿಮ್ಮ ಸ್ವಂತ ಬಸ್ಸಿಗಾದ ಹಾನಿ ಅಥವಾ ನಷ್ಟ

×

ಬಸ್ ಚಾಲಕ- ಮಾಲಕನಿಗೆ ಗಾಯ/ಸಾವು

If the owner-driver doesn’t already have a Personal Accident Cover from before

×
Get Quote Get Quote

ಕ್ಲೈಮ್ ಮಾಡುವುದು ಹೇಗೆ?

ನಮಗೆ 1800-258-5956 ಗೆ ಕರೆ ಮಾಡಿ ಅಥವಾ hello@godigit.com ಗೆ ಈ-ಮೇಲ್ ಕಳುಹಿಸಿ.

ನಮ್ಮ ಪ್ರಕ್ರಿಯೆಯನ್ನು ಸರಳಗೊಳಿಸಲು ನಿಮ್ಮ ವಿವರಗಳಾದ ಪಾಲಿಸಿ ಸಂಖ್ಯೆ, ಅಪಘಾತದ ಸ್ಥಳ, ಅಪಘಾತವಾದ ದಿನಾಂಕ ಹಾಗೂ ಸಮಯ, ಇನ್ಶೂರ್ಡ್ ವ್ಯಕ್ತಿ/ಕರೆ ಮಾಡಿದವರ ಸಂಪರ್ಕ ಸಂಖ್ಯೆಯನ್ನು ಸಿದ್ಧವಾಗಿಡಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ ಅನ್ನು ಎಷ್ಟು ಬೇಗ ಇತ್ಯರ್ಥ ಮಾಡಲಾಗುತ್ತದೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪೆನಿಯನ್ನು ಬದಲಿಸುವಾಗ ಇದು ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆಯಾಗಿರಬೇಕು. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ! ಡಿಜಿಟ್ ನ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿರಿ

ಭಾರತದ ಕಮರ್ಷಿಯಲ್ ಬಸ್ ಇನ್ಶೂರೆನ್ಸ್ ನ ಬಗ್ಗೆ ಹೆಚ್ಚು ತಿಳಿಯಿರಿ

ಶಾಲಾ ಬಸ್ ಇನ್ಶೂರೆನ್ಸ್ ಖರೀದಿಸುವುದು ಅಗತ್ಯವೇ?

ಹೌದು, ಖಂಡಿತವಾಗಿ! ಶಾಲಾ ಬಸ್ ಗಳನ್ನು ಪ್ರಾಥಮಿಕವಾಗಿ ಶಾಲೆಗಳು ಅಥವಾ ಥರ್ಡ್ ಪಾರ್ಟೀ ಸಂಸ್ಥೆಗಳು ಮಕ್ಕಳನ್ನು ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ಕರೆದೊಯ್ಯಲು ಉಪಯೋಗಿಸುತ್ತವೆ. ಆದ್ದರಿಂದ, ನೀವು ಕನಿಷ್ಠ ಪಕ್ಷ ನಿಮ್ಮನ್ನು ಹಾಗೂ ನಿಮ್ಮ ಸಂಸ್ಥೆಯನ್ನು ಅನಿರೀಕ್ಷಿತ ನಷ್ಟಗಳಿಂದ ಮಾತ್ರವಲ್ಲದೆ, ಬಸ್ಸಿನಲ್ಲಿ ಪ್ರತಿದಿನ ಪ್ರಯಾಣಿಸುವ ಮಕ್ಕಳನ್ನು ಹಾಗೂ ಶಿಕ್ಷಕರನ್ನೂ ಕವರ್ ಮಾಡುವಂತಹ ಬಸ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಅತ್ಯಗತ್ಯ.

ಹೌದು, ಖಂಡಿತವಾಗಿ! ಶಾಲಾ ಬಸ್ ಗಳನ್ನು ಪ್ರಾಥಮಿಕವಾಗಿ ಶಾಲೆಗಳು ಅಥವಾ ಥರ್ಡ್ ಪಾರ್ಟೀ ಸಂಸ್ಥೆಗಳು ಮಕ್ಕಳನ್ನು ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ಕರೆದೊಯ್ಯಲು ಉಪಯೋಗಿಸುತ್ತವೆ. ಆದ್ದರಿಂದ, ನೀವು ಕನಿಷ್ಠ ಪಕ್ಷ ನಿಮ್ಮನ್ನು ಹಾಗೂ ನಿಮ್ಮ ಸಂಸ್ಥೆಯನ್ನು ಅನಿರೀಕ್ಷಿತ ನಷ್ಟಗಳಿಂದ ಮಾತ್ರವಲ್ಲದೆ, ಬಸ್ಸಿನಲ್ಲಿ ಪ್ರತಿದಿನ ಪ್ರಯಾಣಿಸುವ ಮಕ್ಕಳನ್ನು ಹಾಗೂ ಶಿಕ್ಷಕರನ್ನೂ ಕವರ್ ಮಾಡುವಂತಹ ಬಸ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಅತ್ಯಗತ್ಯ.

ಸರಿಯಾದ ಬಸ್ ಇನ್ಶೂರೆನ್ಸ್ ಆಯ್ಕೆ ಮಾಡಲು ಕೆಲವು ಸಲಹೆಗಳು

ಆನ್ಲೈನ್ ಆಗಿ ನಿಮ್ಮ ಬಸ್ಸಿಗಾಗಿ ಸರಿಯಾದ ಬಸ್ ಇನ್ಶೂರೆನ್ಸ್ ಖರೀದಿಸಲು, ಈ ಕೆಳಗಡೆ ನೀಡಿರುವ ಅಂಶಗಳನ್ನು ಹೋಲಿಕೆ ಮಾಡಿ ಮೌಲ್ಯಮಾಪನ ಮಾಡುವುದು ತುಂಬಾ ಮುಖ್ಯ: ಸರಿಯಾದ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ(ಐಡಿವಿ): ಐಡಿವಿ ಬೇರೇನೂ ಅಲ್ಲ, ನಿಮ್ಮ ಬಸ್ಸಿನ ಮಾರುಕಟ್ಟೆ ಮೌಲ್ಯವಾಗಿದೆ. ನಿಮ್ಮ ಬಸ್ ಇನ್ಶೂರೆನ್ಸ್ ಪ್ರೀಮಿಯಮ್ ನಿಂದ ನಿಮ್ಮ ಕ್ಲೈಮ್ ಪಾವತಿಗಳ ವರೆಗೆ ಎಲ್ಲವೂ ಇದನ್ನು ಅವಲಂಬಿಸಿದೆ ಆದ್ದರಿಂದ ನಿಮ್ಮ ಬಸ್ಸಿಗಾಗಿ ಸರಿಯಾದ ಹಾಗೂ ಸೂಕ್ತ ಐಡಿವಿ ಅನ್ನು ನೀಡುವ ಇನ್ಶೂರರ್ ಅನ್ನೇ ಆಯ್ಕೆ ಮಾಡಿ. ಸೇವಾ ಲಾಭಗಳು: 24x7 ಗ್ರಾಹಕ ಸೇವೆ ಮತ್ತು ನಗದುರಹಿತ ಗ್ಯಾರೇಜ್ ಗಳ ವಿಸ್ತಾರವಾದ ನೆಟ್ವರ್ಕ್ ಹಾಗೂ ಇತರ ಸೇವೆಗಳನ್ನು ಪರಿಗಣಿಸಿ. ಅಗತ್ಯದ ಸಮಯದಲ್ಲಿ, ಇಂತಹ ಸೇವೆಗಳು ಬಹಳ ಮುಖ್ಯವಾಗುತ್ತವೆ. ಆಡ್- ಆನ್ ಗಳನ್ನು ಪರಿಶೀಲಿಸಿ: ಆಡ್ - ಆನ್ ಗಳು ನಿಮ್ಮ ಬಸ್ಸಿಗೆ ಸಿಗುವ ಕವರೇಜ್ ಅನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ, ನಮ್ಮ ಹೆಚ್ಚುವರಿ ಅನುಮೋದನೆಗಳಲ್ಲಿ ವಯಕ್ತಿಕ ಅಪಘಾತ ಕವರ್, ಪ್ರಯಾಣಿಕರ ಕವರ್,ಕಡ್ಡಾಯ ಕಡಿತಗಳು, ವಿದ್ಯುತ್ ಭಾಗಗಳ ಕವರ್, ಇತ್ಯಾದಿಯಂತಹ ಕವರ್ ಗಳು ಲಭ್ಯ ಇವೆ. ಕ್ಲೈಮ್ ವೇಗ: ಇದು ಯಾವುದೇ ಇನ್ಶೂರೆನ್ಸ್ ನ ಮುಖ್ಯ ಅಂಶವಾಗಿದೆ. ನಿಮ್ಮ ಕ್ಲೈಮ್ ಗಳನ್ನು ಅತೀ ಶೀಘ್ರವಾಗಿ ಸೆಟ್ಲ್ ಮಾಡುವ ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡಿ. ಉತ್ತಮ ಮೌಲ್ಯ: ಮೇಲೆ ನೀಡಿರುವ ಎಲ್ಲಾ ಅಂಶಗಳನ್ನು ಪರಿಗಣಿಸಿದ ಮೇಲೆ, ಬಸ್ ಇನ್ಶೂರೆನ್ಸ್ ಪ್ರೀಮಿಯಮ್ ಗಳನ್ನು ಹೋಲಿಸಿ ಯಾವುದು ನಿಮಗೆ ಒಳ್ಳೆಯ ಬೆಲೆಗೆ ಉತ್ತಮ ಲಾಭಗಳನ್ನು ನೀಡುತ್ತದೆ ಎಂದು ತಿಳಿಯಿರಿ.

ಆನ್ಲೈನ್ ಆಗಿ ನಿಮ್ಮ ಬಸ್ಸಿಗಾಗಿ ಸರಿಯಾದ ಬಸ್ ಇನ್ಶೂರೆನ್ಸ್ ಖರೀದಿಸಲು, ಈ ಕೆಳಗಡೆ ನೀಡಿರುವ ಅಂಶಗಳನ್ನು ಹೋಲಿಕೆ ಮಾಡಿ ಮೌಲ್ಯಮಾಪನ ಮಾಡುವುದು ತುಂಬಾ ಮುಖ್ಯ:

  • ಸರಿಯಾದ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ(ಐಡಿವಿ): ಐಡಿವಿ ಬೇರೇನೂ ಅಲ್ಲ, ನಿಮ್ಮ ಬಸ್ಸಿನ ಮಾರುಕಟ್ಟೆ ಮೌಲ್ಯವಾಗಿದೆ. ನಿಮ್ಮ ಬಸ್ ಇನ್ಶೂರೆನ್ಸ್ ಪ್ರೀಮಿಯಮ್ ನಿಂದ ನಿಮ್ಮ ಕ್ಲೈಮ್ ಪಾವತಿಗಳ ವರೆಗೆ ಎಲ್ಲವೂ ಇದನ್ನು ಅವಲಂಬಿಸಿದೆ ಆದ್ದರಿಂದ ನಿಮ್ಮ ಬಸ್ಸಿಗಾಗಿ ಸರಿಯಾದ ಹಾಗೂ ಸೂಕ್ತ ಐಡಿವಿ ಅನ್ನು ನೀಡುವ ಇನ್ಶೂರರ್ ಅನ್ನೇ ಆಯ್ಕೆ ಮಾಡಿ.
  • ಸೇವಾ ಲಾಭಗಳು: 24x7 ಗ್ರಾಹಕ ಸೇವೆ ಮತ್ತು ನಗದುರಹಿತ ಗ್ಯಾರೇಜ್ ಗಳ ವಿಸ್ತಾರವಾದ ನೆಟ್ವರ್ಕ್ ಹಾಗೂ ಇತರ ಸೇವೆಗಳನ್ನು ಪರಿಗಣಿಸಿ. ಅಗತ್ಯದ ಸಮಯದಲ್ಲಿ, ಇಂತಹ ಸೇವೆಗಳು ಬಹಳ ಮುಖ್ಯವಾಗುತ್ತವೆ.
  • ಆಡ್- ಆನ್ ಗಳನ್ನು ಪರಿಶೀಲಿಸಿ: ಆಡ್ - ಆನ್ ಗಳು ನಿಮ್ಮ ಬಸ್ಸಿಗೆ ಸಿಗುವ ಕವರೇಜ್ ಅನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ, ನಮ್ಮ ಹೆಚ್ಚುವರಿ ಅನುಮೋದನೆಗಳಲ್ಲಿ ವಯಕ್ತಿಕ ಅಪಘಾತ ಕವರ್, ಪ್ರಯಾಣಿಕರ ಕವರ್,ಕಡ್ಡಾಯ ಕಡಿತಗಳು, ವಿದ್ಯುತ್ ಭಾಗಗಳ ಕವರ್, ಇತ್ಯಾದಿಯಂತಹ ಕವರ್ ಗಳು ಲಭ್ಯ ಇವೆ.
  • ಕ್ಲೈಮ್ ವೇಗ: ಇದು ಯಾವುದೇ ಇನ್ಶೂರೆನ್ಸ್ ನ ಮುಖ್ಯ ಅಂಶವಾಗಿದೆ. ನಿಮ್ಮ ಕ್ಲೈಮ್ ಗಳನ್ನು ಅತೀ ಶೀಘ್ರವಾಗಿ ಸೆಟ್ಲ್ ಮಾಡುವ ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡಿ.
  • ಉತ್ತಮ ಮೌಲ್ಯ: ಮೇಲೆ ನೀಡಿರುವ ಎಲ್ಲಾ ಅಂಶಗಳನ್ನು ಪರಿಗಣಿಸಿದ ಮೇಲೆ, ಬಸ್ ಇನ್ಶೂರೆನ್ಸ್ ಪ್ರೀಮಿಯಮ್ ಗಳನ್ನು ಹೋಲಿಸಿ ಯಾವುದು ನಿಮಗೆ ಒಳ್ಳೆಯ ಬೆಲೆಗೆ ಉತ್ತಮ ಲಾಭಗಳನ್ನು ನೀಡುತ್ತದೆ ಎಂದು ತಿಳಿಯಿರಿ.

ನನ್ನ ಬಸ್ ಇನ್ಶೂರೆನ್ಸ್ ಪ್ರೀಮಿಯಮ್ ಮೇಲೆ ಪರಿಣಾಮ ಬೀರುವ ಅಂಶಗಳು ಯಾವುವು?

ನಿಮ್ಮ ಬಸ್ ಇನ್ಶೂರೆನ್ಸ್ ದರಗಳ ಮೇಲೆ ಕೊನೆಯಲ್ಲಿ ಪರಿಣಾಮ ಬೀರುವ ಹಲವು ಅಂಶಗಳಿವೆ, ಅವುಗಳನ್ನು ಇಲ್ಲಿ ನೀಡಲಾಗಿದೆ: ಮಾಡೆಲ್, ಎಂಜಿನ್ ಹಾಗೂ ಎಂಜಿನ್ ನ ನಿರ್ಮಾಣ: ಮಾರುಕಟ್ಟೆಯಲ್ಲಿ ವಿವಿಧ ಪ್ರಕಾರದ ಬಸ್ ಗಳಿವೆ. ಪ್ರತಿಯೊಂದೂ ಅದರದೇ ಆದ ಗುಣಲಕ್ಷಣಗಳನ್ನು ಹಾಗೂ ಅಪಾಯದ ಹಂತಗಳನ್ನು ಹೊಂದಿದೆ. ಆದ್ದರಿಂದ ನಿಮ್ಮ ಬಸ್ ಇನ್ಶೂರೆನ್ಸ್ ದರದ ಮೇಲೆ ನಿಮ್ಮ ಬಸ್ಸಿನ ನಿರ್ಮಾಣ ಹಾಗೂ ಮಾಡೆಲ್, ಗಣನೀಯ ಪರಿಣಾಮವನ್ನು ಬೀರುತ್ತದೆ.  ಸ್ಥಳ: ಪ್ರತೀ ನಗರ ಹಾಗೂ ಪಟ್ಟಣಕ್ಕೆ ಅದರದ್ದೇ ಆದ ಅಪಾಯದ ಹಂತಗಳಿರುತ್ತವೆ. ಕೆಲವು ಉಳಿದದ್ದಕ್ಕಿಂತ ಸುರಕ್ಷಿತವಾಗಿರುತ್ತವೆ, ಇನ್ನೊಂದೆಡೆ ಕೆಲವು ಉಳಿದದ್ದಕ್ಕಿಂತ ದುಬಾರಿಯಾಗಿರುತ್ತವೆ. ಆದ್ದರಿಂದ, ನೀವು ಬಸ್ ಓಡಿಸುವ ನಗರವನ್ನು ಅವಲಂಬಿಸಿ, ನಿಮ್ಮ ಬಸ್ ಇನ್ಶೂರೆನ್ಸ್ ದರ ಬದಲಾಗುತ್ತದೆ. (ನೋ ಕ್ಲೈಮ್ ಬೋನಸ್): ನೀವು ಈಗಾಗಲೇ ನಿಮ್ಮ ಬಸ್ಸಿಗಾಗಿ ಬಸ್ ಇನ್ಶೂರೆನ್ಸ್ ಮಾಡಿಸಿದ್ದು ಪ್ರಸ್ತುತದಲ್ಲಿ ನೀವು ಇನ್ಶೂರೆನ್ಸ್ ರಿನ್ಯೂ ಮಾಡಲು ಅಥವಾ ಇನ್ಶೂರರ್ ಅನ್ನು ಬದಲಿಸಲು ಯೋಚಿಸುತ್ತಿದ್ದರೆ, ಇಂತಹ ಸಂದರ್ಭದಲ್ಲಿ,  ನಿಮ್ಮ ಎನ್ ಸಿ ಬಿ(ನೋ ಕ್ಲೈಮ್ ಬೋನಸ್) ಅನ್ನೂ ಪರಿಗಣಿಸಲಾಗುವುದು ಹಾಗೂ ನಿಮ್ಮ ಬಸ್ ಇನ್ಶೂರೆನ್ಸ್ ಪ್ರೀಮಿಯಮ್ ಮೇಲೆ ನಿಮಗೆ ರಿಯಾಯಿತಿ ದೊರೆಯುವುದು! ನೋ ಕ್ಲೈಮ್ ಬೋನಸ್, ಈ ಬಸ್  ಮೇಲೆ ಹಿಂದಿನ ಪಾಲಿಸಿ ವರ್ಷದಲ್ಲಿ ಯಾವುದೇ ಕ್ಲೈಮ್ ಇರಲಿಲ್ಲ, ಎಂದು ಸೂಚಿಸುತ್ತದೆ. ಇನ್ಶೂರೆನ್ಸ್ ಯೋಜನೆಗಳ ಪ್ರಕಾರಗಳು : ನೀವು ನಿಮ್ಮ ಬಸ್ಸಿಗಾಗಿ ಥರ್ಡ್ ಪಾರ್ಟೀ ಹೊಣೆಗಾರಿಕಾ ಇನ್ಶೂರೆನ್ಸ್ ಯೋಜನೆ ಆಯ್ಕೆ ಮಾಡುತ್ತಿರೋ ಅಥವಾ ಕಾಂಪ್ರೆಹೆನ್ಸಿವ್  ಇನ್ಶೂರೆನ್ಸ್ ಪಾಲಿಸಿ ಆಯ್ಕೆ ಮಾಡುತ್ತಿರೋ; ಈ ಎರಡಕ್ಕೂ ಬಸ್ ಇನ್ಶೂರೆನ್ಸ್ ಪ್ರೀಮಿಯಮ್ ದರವು ಬೇರೆ ಬೇರೆಯಾಗಿರುತ್ತದೆ ಯಾಕೆಂದರೆ ಎರಡೂ ಯೋಜನೆಗಳಲ್ಲಿ ನೀಡಲಾದ ಕವರೇಜ್ ಲಾಭಗಳು ಬೇರೆಯಾಗಿವೆ.

ನಿಮ್ಮ ಬಸ್ ಇನ್ಶೂರೆನ್ಸ್ ದರಗಳ ಮೇಲೆ ಕೊನೆಯಲ್ಲಿ ಪರಿಣಾಮ ಬೀರುವ ಹಲವು ಅಂಶಗಳಿವೆ, ಅವುಗಳನ್ನು ಇಲ್ಲಿ ನೀಡಲಾಗಿದೆ:

  • ಮಾಡೆಲ್, ಎಂಜಿನ್ ಹಾಗೂ ಎಂಜಿನ್ ನ ನಿರ್ಮಾಣ: ಮಾರುಕಟ್ಟೆಯಲ್ಲಿ ವಿವಿಧ ಪ್ರಕಾರದ ಬಸ್ ಗಳಿವೆ. ಪ್ರತಿಯೊಂದೂ ಅದರದೇ ಆದ ಗುಣಲಕ್ಷಣಗಳನ್ನು ಹಾಗೂ ಅಪಾಯದ ಹಂತಗಳನ್ನು ಹೊಂದಿದೆ. ಆದ್ದರಿಂದ ನಿಮ್ಮ ಬಸ್ ಇನ್ಶೂರೆನ್ಸ್ ದರದ ಮೇಲೆ ನಿಮ್ಮ ಬಸ್ಸಿನ ನಿರ್ಮಾಣ ಹಾಗೂ ಮಾಡೆಲ್, ಗಣನೀಯ ಪರಿಣಾಮವನ್ನು ಬೀರುತ್ತದೆ. 
  • ಸ್ಥಳ: ಪ್ರತೀ ನಗರ ಹಾಗೂ ಪಟ್ಟಣಕ್ಕೆ ಅದರದ್ದೇ ಆದ ಅಪಾಯದ ಹಂತಗಳಿರುತ್ತವೆ. ಕೆಲವು ಉಳಿದದ್ದಕ್ಕಿಂತ ಸುರಕ್ಷಿತವಾಗಿರುತ್ತವೆ, ಇನ್ನೊಂದೆಡೆ ಕೆಲವು ಉಳಿದದ್ದಕ್ಕಿಂತ ದುಬಾರಿಯಾಗಿರುತ್ತವೆ. ಆದ್ದರಿಂದ, ನೀವು ಬಸ್ ಓಡಿಸುವ ನಗರವನ್ನು ಅವಲಂಬಿಸಿ, ನಿಮ್ಮ ಬಸ್ ಇನ್ಶೂರೆನ್ಸ್ ದರ ಬದಲಾಗುತ್ತದೆ.
  • (ನೋ ಕ್ಲೈಮ್ ಬೋನಸ್): ನೀವು ಈಗಾಗಲೇ ನಿಮ್ಮ ಬಸ್ಸಿಗಾಗಿ ಬಸ್ ಇನ್ಶೂರೆನ್ಸ್ ಮಾಡಿಸಿದ್ದು ಪ್ರಸ್ತುತದಲ್ಲಿ ನೀವು ಇನ್ಶೂರೆನ್ಸ್ ರಿನ್ಯೂ ಮಾಡಲು ಅಥವಾ ಇನ್ಶೂರರ್ ಅನ್ನು ಬದಲಿಸಲು ಯೋಚಿಸುತ್ತಿದ್ದರೆ, ಇಂತಹ ಸಂದರ್ಭದಲ್ಲಿ,  ನಿಮ್ಮ ಎನ್ ಸಿ ಬಿ(ನೋ ಕ್ಲೈಮ್ ಬೋನಸ್) ಅನ್ನೂ ಪರಿಗಣಿಸಲಾಗುವುದು ಹಾಗೂ ನಿಮ್ಮ ಬಸ್ ಇನ್ಶೂರೆನ್ಸ್ ಪ್ರೀಮಿಯಮ್ ಮೇಲೆ ನಿಮಗೆ ರಿಯಾಯಿತಿ ದೊರೆಯುವುದು! ನೋ ಕ್ಲೈಮ್ ಬೋನಸ್, ಈ ಬಸ್  ಮೇಲೆ ಹಿಂದಿನ ಪಾಲಿಸಿ ವರ್ಷದಲ್ಲಿ ಯಾವುದೇ ಕ್ಲೈಮ್ ಇರಲಿಲ್ಲ, ಎಂದು ಸೂಚಿಸುತ್ತದೆ.
  • ಇನ್ಶೂರೆನ್ಸ್ ಯೋಜನೆಗಳ ಪ್ರಕಾರಗಳು : ನೀವು ನಿಮ್ಮ ಬಸ್ಸಿಗಾಗಿ ಥರ್ಡ್ ಪಾರ್ಟೀ ಹೊಣೆಗಾರಿಕಾ ಇನ್ಶೂರೆನ್ಸ್ ಯೋಜನೆ ಆಯ್ಕೆ ಮಾಡುತ್ತಿರೋ ಅಥವಾ ಕಾಂಪ್ರೆಹೆನ್ಸಿವ್  ಇನ್ಶೂರೆನ್ಸ್ ಪಾಲಿಸಿ ಆಯ್ಕೆ ಮಾಡುತ್ತಿರೋ; ಈ ಎರಡಕ್ಕೂ ಬಸ್ ಇನ್ಶೂರೆನ್ಸ್ ಪ್ರೀಮಿಯಮ್ ದರವು ಬೇರೆ ಬೇರೆಯಾಗಿರುತ್ತದೆ ಯಾಕೆಂದರೆ ಎರಡೂ ಯೋಜನೆಗಳಲ್ಲಿ ನೀಡಲಾದ ಕವರೇಜ್ ಲಾಭಗಳು ಬೇರೆಯಾಗಿವೆ.

ಭಾರತದ ಬಸ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಸಂಸ್ಥೆಯಲ್ಲಿ ಹತ್ತಕ್ಕೂ ಹೆಚ್ಚು ಶಾಲಾ ಬಸ್ ಗಳಿವೆ. ನಾನು ಆ ಎಲ್ಲವನ್ನೂ ಇನ್ಶೂರ್ ಮಾಡಬಹುದೇ?

ಹೌದು ಖಂಡಿತವಾಗಿ!ಒಂದು ಬಸ್ ಇನ್ಶೂರೆನ್ಸ್ ಶಾಲಾ ಬಸ್ ಗಳ ಸಾಲುಗಳಂತಹ ನಿಮ್ಮ ಬಸ್ ಗಳನ್ನು  ಸಂರಕ್ಷಿಸುವ ಸಲುವಾಗಿಯೇ ರಚಿಸಲಾಗಿದೆ. ಈ ಎಲ್ಲವನ್ನೂ ಡಿಜಿಟ್ ನಲ್ಲಿ ಕವರ್ ಮಾಡಬಹುದು. ನೀವು ಮಾಡಬೇಕಾದ್ದು ಇಷ್ಟೇ; ನಮ್ಮನ್ನು ಸಂಪರ್ಕಿಸಿ ನಿಮ್ಮ ಸಂಸ್ಥೆಗೆ ಬೇಕಾದಂತಹ ಕಸ್ಟಮೈಜ್ಡ್ ಯೋಜನೆಯನ್ನು ಪಡೆದುಕೊಳ್ಳಿ.

ಯಾವ ರೀತಿಯ ಬಸ್ಸುಗಳನ್ನು ಕವರ್ ಮಾಡುತ್ತದೆ ?

ಶಾಲಾ ಬಸ್ ಗಳು, ವ್ಯಾನ್ ಗಳು, ಮಿನಿ ಬಸ್ ಗಳು ಮತ್ತು ಟೂರ್ ಬಸ್ ಗಳು ಸೇರಿ ಎಲ್ಲಾ ಬಸ್ ಗಳನ್ನೂ ನಮ್ಮ ಕಮರ್ಷಿಯಲ್  ಬಸ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಮಾಡಲಾಗುವುದು.

ಶಾಲಾ ಬಸ್ ಇನ್ಶೂರೆನ್ಸ್ ನ ದರ ಎಷ್ಟು ಆಗಿದೆ?

ನೀವು ಇನ್ಶೂರ್ ಮಾಡಬಯಸುವ ಬಸ್ ನ ಮಾದರಿ, ನಿಮ್ಮ ಸ್ಥಳ ಇವುಗಳನ್ನು ಆಧರಿಸಿ ನಿಮ್ಮ ಬಸ್ ನ್ಶೂರೆನ್ಸ್ ನ ದರ ಬದಲಾಗುತ್ತದೆ. ನಿಮ್ಮ ಶಾಲಾ ಬಸ್ ಇನ್ಶೂರೆನ್ಸ್ ನ ದರ ಎಷ್ಟಾಗಬಹುದು ಎಂದು ತಿಳಿಯಲು, ನಿಮ್ಮ ವಿವರಗಳನ್ನು ಇಲ್ಲಿ ತುಂಬಿಸಿರಿ.