ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್
I agree to the Terms & Conditions
ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
I agree to the Terms & Conditions
ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಎನ್ನುವುದು ಕಸ್ಟಮೈಸ್ ಮಾಡಿದ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಕಮರ್ಷಿಯಲ್ ವೆಹಿಕಲ್ ಹಾಗೂ ಅವುಗಳ ಮಾಲೀಕ-ಚಾಲಕರಿಂದ/ಗೆ ಉಂಟಾಗುವ ಹಾನಿ ಮತ್ತು ನಷ್ಟಗಳಿಗೆ ರಕ್ಷಣೆ ನೀಡುತ್ತದೆ. ಈ ಪಾಲಿಸಿಯು ಅಪಘಾತಗಳು, ಘರ್ಷಣೆಗಳು, ನೈಸರ್ಗಿಕ ವಿಪತ್ತುಗಳು, ಬೆಂಕಿ ಮುಂತಾದವುಗಳಿಂದ ಸಂಭವಿಸುವ ಹಾನಿ ಮತ್ತು ನಷ್ಟಗಳನ್ನು ಕವರ್ ಮಾಡುತ್ತದೆ. ಎಲ್ಲಾ ವ್ಯವಹಾರಗಳು ತಮ್ಮ ವೆಹಿಕಲ್ಗಳಿಗೆ ಅಂದರೆ ಆಟೋ-ರಿಕ್ಷಾಗಳು, ಕ್ಯಾಬ್ಗಳು, ಸ್ಕೂಲ್ ಬಸ್ಗಳು, ಟ್ರಾಕ್ಟರ್ಗಳು , ಕಮರ್ಷಿಯಲ್ ವ್ಯಾನ್ಗಳು ಮತ್ತು ಟ್ರಕ್ಗಳು ಮುಂತಾದವುಗಳಿಗೆ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಖಡ್ಡಾಯವಾಗಿದೆ.
ನಾವು ನಮ್ಮ ಗ್ರಾಹಕರನ್ನು ವಿಐಪಿ ಗಳಂತೆ ನೋಡಿಕೊಳ್ಳುತ್ತೇವೆ. ಹೇಗೆ ಎಂದು ತಿಳಿಯಿರಿ…
ಕೆಲವೊಮ್ಮೆ, ಎಲ್ಲಾ ಸಂದರ್ಭಗಳನ್ನು ಕವರ್ ಮಾಡಲು ಕೇವಲ ಸ್ಟ್ಯಾಂಡರ್ಡ್ ಕವರೇಜ್ ಸಾಕಾಗುವುದಿಲ್ಲ. ಅದಕ್ಕಾಗಿಯೇ, ನಿಮ್ಮ ಕಮರ್ಷಿಯಲ್ ವೆಹಿಕಲ್ ಕವರೇಜನ್ನು ವಿಸ್ತರಿಸಲು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ, ನೀವು ಆಯ್ಕೆಮಾಡಬಹುದಾದ ಐಚ್ಛಿಕ ಕವರ್ಗಳನ್ನು ನಾವು ನೀಡುತ್ತೇವೆ.
ನಿಮ್ಮ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯು, ಏನನ್ನು ಒಳಗೊಂಡಿಲ್ಲ ಎನ್ನುವುದನ್ನು ನೀವು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ಇದರಿಂದಾಗಿ ನೀವು ಕ್ಲೇಮ್ ಮಾಡುವ ಸಂದರ್ಭದಲ್ಲಿ, ಯಾವುದೇ ಅಚ್ಚರಿ ಪಡಬೇಕಿಲ್ಲ. ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:
ಪ್ರಮುಖ ಲಕ್ಷಣಗಳು |
ಡಿಜಿಟ್ ಪ್ರಯೋಜನಗಳು |
ಕ್ಲೇಮ್ ಪ್ರಕ್ರಿಯೆ |
ಕಾಗದರಹಿತ ಕ್ಲೇಮ್ಸ್ |
ಗ್ರಾಹಕರ ಬೆಂಬಲ |
24x7 ಬೆಂಬಲ |
ಕವರ್ ಆಗುವ ಕಮರ್ಷಿಯಲ್ ವೆಹಿಕಲ್ನ ವಿಧಗಳು |
ಕ್ಯಾಬ್ಗಳು ಮತ್ತು ಟ್ಯಾಕ್ಸಿಗಳು, ಟ್ರಕ್'ಗಳು ಲಾರಿಗಳು, ಬಸ್ಗಳು, ಆಟೋ ರಿಕ್ಷಾಗಳು , ಸ್ಕೂಲ್ ವ್ಯಾನ್ಗಳು ಇತ್ಯಾದಿ. |
ಪ್ರೀಮಿಯಂ |
ಕಮರ್ಷಿಯಲ್ ವೆಹಿಕಲ್ನ ಪ್ರಕಾರ ಮತ್ತು ಇನ್ಶೂರೆನ್ಸ್ ಮಾಡಬೇಕಾದ ವೆಹಿಕಲ್ನ ಸಂಖ್ಯೆಗೆ ಅನುಗುಣವಾಗಿ ಕಸ್ಟಮೈಸ್ ಮಾಡಲಾಗಿದೆ |
ಹೆಚ್ಚುವರಿ ಕವರೇಜ್ |
ಪಿಎ ಕವರ್'ಗಳು, ಲೀಗಲ್ ಲೈಬಿಲಿಟಿ ಕವರ್, ವಿಶೇಷ ಹೊರಗಿಡುವಿಕೆಗಳು ಖಡ್ಡಾಯ ಕಡಿತಗಳು |
ಥರ್ಡ್ ಪಾರ್ಟಿಗೆ ಆಗುವ ಹಾನಿಗಳು |
ವೈಯುಕ್ತಿಕ ಹಾನಿಗಳಿಗೆ ಅನಿಯಮಿತ ಹೊಣೆಗಾರಿಕೆ, ಆಸ್ತಿ/ವಾಹನ ಹಾನಿಗಳಿಗೆ 7.5 ಲಕ್ಷ ರೂಗಳವರೆಗೆ |
ನಿಮ್ಮ ಕಮರ್ಷಿಯಲ್ ವೆಹಿಕಲ್ನ ಅಗತ್ಯವನ್ನು ಆಧರಿಸಿ, ನಾವು ಪ್ರಾಥಮಿಕವಾಗಿ ಎರಡು ಪಾಲಿಸಿಗಳನ್ನು ನೀಡುತ್ತೇವೆ. ಆದಾಗ್ಯೂ, ಕಮರ್ಷಿಯಲ್ ವೆಹಿಕಲ್ನ ಅಪಾಯ ಮತ್ತು ಬಳಕೆಯನ್ನು ಪರಿಗಣಿಸಿ, ನಾವು ನಿಮಗೆ ಸ್ಟ್ಯಾಂಡರ್ಡ್ ಪ್ಯಾಕೇಜ್ ಪಾಲಿಸಿಯನ್ನು ತೆಗೆದುಕೊಳ್ಳಲು ಶಿಫಾರಸು ಮಾಡುತ್ತೇವೆ. ಇದು ನಿಮ್ಮ ಕಮರ್ಷಿಯಲ್ ವೆಹಿಕಲ್ನ ಜೊತೆಗೆ ಅದರ ಮಾಲೀಕ -ಚಾಲಕನನ್ನು ಸಹ ಆರ್ಥಿಕವಾಗಿ ರಕ್ಷಿಸುತ್ತದೆ.
ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ, ನಿಮ್ಮ ಕಮರ್ಷಿಯಲ್ ವೆಹಿಕಲ್ನಿಂದ ಉಂಟಾಗುವ ಹಾನಿಗಳು. |
✔
|
✔
|
ಇನ್ಶೂರೆನ್ಸ್ ಮಾಡಲಾದ ನಿಮ್ಮ ಕಮರ್ಷಿಯಲ್ ವೆಹಿಕಲ್ನಿಂದ, ವೆಹಿಕಲ್ ಟೋಯಿಂಗ್ ಮೂಲಕ ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಉಂಟಾಗುವ ಹಾನಿಗಳು |
✔
|
✔
|
ನೈಸರ್ಗಿಕ ವಿಪತ್ತುಗಳು, ಬೆಂಕಿ, ಕಳ್ಳತನ ಅಥವಾ ಅಪಘಾತಗಳಿಂದ ಸ್ವಂತ ಕಮರ್ಷಿಯಲ್ ವೆಹಿಕಲ್ಗೆ ಉಂಟಾಗುವ ನಷ್ಟ ಅಥವಾ ಹಾನಿಗಳು. |
×
|
✔
|
ಮಾಲಕ-ಚಾಲಕನಿಗೆ ಹಾನಿ/ಸಾವು ಮಾಲಕ-ಚಾಲಕ ಮೊದಲಿನಿಂದಲೇ ವಯಕ್ತಿಕ ಅಪಘಾತ ಕವರ್ ಅನ್ನು ಹೊಂದದೇ ಇದ್ದರೆ |
✔
|
✔
|
1800-258-5956 ಈ ಸಂಖ್ಯೆಯಲ್ಲಿ ನಮಗೆ ಕರೆ ಮಾಡಿ ಅಥವಾ hello@godigit.com ನಲ್ಲಿ ನಮಗೆ ಇಮೇಲ್ ಕಳುಹಿಸಿ
ನಮ್ಮ ಕ್ಲೇಮ್ ಪ್ರಕ್ರಿಯೆಯನ್ನು ಸುಲಭಗೊಳಿಸಲು ನೀವು ಪಾಲಿಸಿ ಸಂಖ್ಯೆ, ಅಪಘಾತದ ಸ್ಥಳ, ಅಪಘಾತದ ದಿನಾಂಕ ಮತ್ತು ಸಮಯ ಹಾಗೂ ಇನ್ಶೂರೆನ್ಸ್ ಹೋಲ್ಡರ್ / ಕರೆ ಮಾಡಿದವರ ಕಾಂಟಾಕ್ಟ್ ನಂಬರ್ ಮುಂತಾದ ನಿಮ್ಮ ವಿವರಗಳನ್ನು ನಮಗೆ ನೀಡಿ.
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ!
ಡಿಜಿಟ್ನ ಕ್ಲೇಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿನೀವು ನಿಮ್ಮ ವಾಹನವನ್ನು ನಿಮ್ಮ ಪ್ರಾಥಮಿಕ ವ್ಯವಹಾರಕ್ಕೆ ಬಳಸದೇ ಇದ್ದರೂ, ಕಮರ್ಷಿಯಲ್ ಉದ್ದೇಶಗಳಿಗೆ ಬಳಸಲಾಗುವ ಎಲ್ಲಾ ವಾಹನಗಳನ್ನು ಸಂರಕ್ಷಿಸುವುದು ಆವಶ್ಯಕವಾಗಿರುತ್ತದೆ. ಹೊಣೆಗಾರಿಕೆ ಮಾತ್ರದ ಪಾಲಿಸಿಯು ಕಾನೂನಾತ್ಮಕವಾಗಿ ಕಡ್ಡಾಯವಾಗಿದ್ದರೂ ಕೂಡಾ, ಒಂದು ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿ ಇರುವುದರಿಂದ ನಿಮ್ಮ ವಾಹನ ಹಾಗೂ ಮಾಲಕ-ಚಾಲಕ, ನೈಸರ್ಗಿಕ ವಿಪತ್ತುಗಳು, ಬೆಂಕಿ,ಕಳವು ಅಪಘಾತ ಇತ್ಯಾದಿಗಳಂತಹ ಅನಿರೀಕ್ಷಿತ ಘಟನೆಗಳಿಂದ ಆರ್ಥಿಕ ಸಂರಕ್ಷಣೆ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬಹುದು.
ನಿಮ್ಮ ವ್ಯವಹಾರವು, ಬಳಕೆಯ ವಾಹನಗಳಿಂದಾಗಿ ಭಾರೀ ಆಸ್ತಿಯದ್ದಾಗಿದ್ದರೆ, ನೀವು ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿಯನ್ನು ಹೊಂದಿರಬೇಕು. ಇದು ಮಾಲಕ-ಚಾಲಕನನ್ನು ಸಂರಕ್ಷಿಸುವುದು ಮಾತ್ರವಲ್ಲದೆ, ಸಂಭಾವ್ಯ ನಷ್ಟದಿಂದಲೂ ನಿಮ್ಮ ವ್ಯವಹಾರವನ್ನು ಸಂರಕ್ಷಿಸುತ್ತದೆ. ಎಷ್ಟೇ ಆದರೂ ವ್ಯವಹಾರಗಳು ಅಪಾಯಗಳಿಂದ ಕೂಡಿರುತ್ತವೆ. ಒಂದು ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ನಿಮ್ಮನ್ನು ಕನಿಷ್ಟ ಒಂದು ಅಪಾಯದಿಂದಾದರೂ ಕಾಪಾಡುತ್ತದೆ.
ಹೌದು, ಒಂದು ವಾಣಿಜ್ಯ ವಾಹನ ಇನ್ಶೂರೆನ್ಸ್ ಅತ್ಯಗತ್ಯವಾಗಿದೆ. ಹೊಣೆಗಾರಿಕೆ ಮಾತ್ರದ ಪಾಲಿಸಿಯು ಕಾನೂನಾತ್ಮಕವಾಗಿ ಕಡ್ಡಾಯವಾಗಿದ್ದರೂ ಕೂಡಾ, ಒಂದು ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿ ಇರುವುದರಿಂದ ಸ್ವತಃ ನಿಮ್ಮನ್ನು ಹಾಗೂ ನಿಮ್ಮ ಸ್ವಂತ ವಾಹನವನ್ನು ಸಂರಕ್ಷಿಸಲು ಆವಶ್ಯಕವಾಗಿರುತ್ತದೆ. ಇದರ ಜೊತೆ ಒಂದು ವಾಣಿಜ್ಯ ವಾಹನ ಇನ್ಶೂರೆನ್ಸ್, ನೈಸರ್ಗಿಕ ವಿಪತ್ತುಗಳು, ಬೆಂಕಿ,ಕಳವು ಅಪಘಾತ ಇತ್ಯಾದಿಗಳಂತ ಅನಿರೀಕ್ಷಿತ ಘಟನೆಗಳಿಂದ ನಿಮ್ಮ ವ್ಯವಹಾರವನ್ನು ಆರ್ಥಿಕವಾಗಿ ಸಂರಕ್ಷಿಸುತ್ತದೆ.
ಇಂದು ಲಭ್ಯವಿರುವ ಆಯ್ಕೆಗಳ ಸಂಖ್ಯೆಯನ್ನು ಪರಿಗಣಿಸಿದರೆ, ನಿಮ್ಮನ್ನು ಹಾಗೂ ನಿಮ್ಮ ವ್ಯವಹಾರವನ್ನು ಎಲ್ಲಾ ಸಂಭಾವ್ಯ ಸನ್ನಿವೇಶಗಳಿಂದ ಸಂರಕ್ಷಿಸಿ ಕವರ್ ನೀಡುವ ಒಂದು ಸರಳ, ಕೈಗೆಟಕುವ ದರದ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದು ಮುಖ್ಯವಾಗಿದೆ. ಎಷ್ಟೇ ಆದರೂ, ಒಂದು ಇನ್ಶೂರೆನ್ಸ್ ನ ಅತ್ಯಂತ ಪ್ರಮುಖ ಅಂಶ ಅದೇ ಆಗಿದೆ!
ನಿಮ್ಮ ವಾಹನಕ್ಕಾಗಿ ಸರಿಯಾದ ಮೋಟಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ:
ಸರಿಯಾದ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ(ಐಡಿವಿ) : ಐಡಿವಿ ಯು ನೀವು ಇನ್ಶೂರ್ ಮಾಡಲು ಬಯಸುವ ಕಮರ್ಷಿಯಲ್ ವಾಹನದ ತಯಾರಕರ ಮಾರಾಟ ಬೆಲೆಯಾಗಿದೆ. ನಿಮ್ಮ ಪ್ರೀಮಿಯಂ ಇದನ್ನು ಅವಲಂಬಿಸುತ್ತದೆ. ಆನ್ಲೈನ್ ಆಗಿ ಸರಿಯಾದ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಹುಡುಕುವಾಗ, ನಿಮ್ಮ ಐಡಿವಿ ಅನ್ನು ಸರಿಯಾಗಿ ಉಲ್ಲೇಖಿಸಲು ಮರೆಯಬೇಡಿ.
ಸೇವಾ ಲಾಭಗಳು :ಇತರ ಸೇವೆಗಳೊಂದಿಗೆ, 24x7 ಗ್ರಾಹಕ ಬೆಂಬಲ, ನಗದುರಹಿತ ಗ್ಯಾರೇಜ್ ಗಳ ವಿಸ್ತಾರವಾದ ನೆಟ್ವರ್ಕ್ ಗಳಂತಹ ಸೇವೆಗಳನ್ನೂ ಪರಿಗಣಿಸಿ. ಅಗತ್ಯ ಬಿದ್ದಾಗ ಈ ಸೇವೆಗಳು ಪ್ರಯೋಜನಕಾರಿಯಾಗಿರುತ್ತವೆ.
ಆಡ್-ಆನ್ಸ್ ಗಳನ್ನು ಪರಿಶೀಲಿಸಿ : ನಿಮ್ಮ ವಾಹನಕ್ಕಾಗಿ ಸೂಕ್ತ ಕಮರ್ಷಿಯಲ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವಾಗ, ಗರಿಷ್ಠ ಲಾಭಗಳನ್ನು ಪಡೆದುಕೊಳ್ಳಲು ಲಭ್ಯವಿರುವ ಆಡ್-ಆನ್ ಗಳನ್ನು ಪರಿಗಣಿಸಬಹುದು.
ಕ್ಲೈಮ್ ನ ಶೀಘ್ರತೆ: ಇದು ಯಾವುದೆ ಇನ್ಶುರೆನ್ಸ್ ನ ಅತಿ ಪ್ರಮುಖ ಅಂಶವಾಗಿದೆ. ಕ್ಲೈಮ್ ಗಳನ್ನು ಶೀಘ್ರದಲ್ಲಿ ಇತ್ಯರ್ಥ ಮಾಡುವ ಇನ್ಶೂರೆನ್ಸ್ ಕಂಪನಿಯ ಆಯ್ಕೆ ಮಾಡಿ.
ಉತ್ತಮ ಮೌಲ್ಯ : ಸೂಕ್ತ ಪ್ರೀಮಿಯಂ, ಸೇವೆಯ ನಂತರದ ಲಾಭಗಳಿಂದ ಹಿಡಿದು ಕ್ಲೈಮ್ ಇತ್ಯರ್ಥ ಹಾಗೂ ಆಡ್ ಆನ್ ಗಳ ವರೆಗೆ; ನಿಮಗೆ ಅಗತ್ಯವಿರುವ ಎಲ್ಲವನ್ನೂ ಉತ್ತಮ ಬೆಲೆಯಲ್ಲಿ ಕವರ್ ಮಾಡುತ್ತದೆ ಎಂದು ನಿಮಗನಿಸುವ ಮೋಟಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿ
ಎಲ್ಲಕ್ಕಿಂತ ಕಡಿಮೆ ಬೆಲೆಯ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ನಿಮಗೆ ಮನಸ್ಸಾಗಬಹುದು. ಆದರೆ, ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ನ ದರಗಳ ಹೋಲಿಕೆ ಮಾಡುವಾಗ, ಸೇವಾ ಲಾಭಗಳು ಹಾಗೂ ಕ್ಲೈಮ್ ಇತ್ಯರ್ಥಗಳಂತಹ ಅಂಶಗಳನ್ನು ಪರಿಗಣಿಸಿ.
ನಿಮ್ಮ ವಾಹನದ ಪ್ರಕಾರವನ್ನು ಅವಲಂಬಿಸಿ, ಕಮರ್ಷಿಯಲ್ ಉದ್ದೇಶಗಳಿಗಾಗಿ ಬಳಸಲಾಗುವ ವಾಹನಗಳು ಅಪಾಯಕ್ಕೆ ತುತ್ತಾಗುವ ಸಂಭಾವನೆಗಳು ಹೆಚ್ಚಿರುತ್ತವೆ. ಆದ್ದರಿಂದ ನಿಮ್ಮ ವಾಹನ ಹಾಗೂ ವ್ಯವಹಾರವನ್ನು ಎಲ್ಲಾ ಸಂಧರ್ಭಗಳಲ್ಲಿ ಸಂರಕ್ಷಿಸಲು ಪ್ರಮುಖ ಅಂಶಗಳ ಮೌಲ್ಯಮಾಪನ ಮಾಡುವುದು ಅವಶ್ಯಕವಾಗಿರುತ್ತದೆ:
ಸೇವಾ ಲಾಭಗಳು : ಸಮಸ್ಯೆಯ ಸಂದರ್ಭದಲ್ಲಿ ಒಂದು ಒಳ್ಳೆಯ ಸೇವೆಯು ಪ್ರಯೋಜನಕಾರಿಯಾಗಿರುತ್ತದೆ. ಪ್ರತೀ ಇನ್ಶೂರೆನ್ಸ್ ಕಂಪನಿ ನೀಡುವ ಸೇವೆಗಳನ್ನು ತೂಗಿ ಅಳೆದು ಸೂಕ್ತ ಅಯ್ಕೆಯನ್ನು ಮಾಡಿ.
ಡಿಜಿಟ್ ಒದಗಿಸುವ ಕೆಲ ಸೇವೆಗಳೆಂದರೆ 24*7 ಗ್ರಾಹಕ ಸೇವೆ ಮತ್ತು 1400+ ಗ್ಯಾರೇಜ್ ಗಳಲ್ಲಿ ಕ್ಯಾಷ್ಲೆಸ್ಸ್ ಇತ್ಯಾದಿಗಳು.
ಶೀಘ್ರ ಕ್ಲೈಮ್ ಇತ್ಯರ್ಥ : ಕ್ಲೈಮ್ ಗಳ ಇತ್ಯರ್ಥವೇ ಇನ್ಶೂರೆನ್ಸ್ ಪಡೆಯುವ ಪೂರ್ತಿ ಉದ್ದೇಶವಾಗಿದೆ! ಆದ್ದರಿಂದಲೇ, ಶೀಘ್ರ ಕ್ಲೈಮ್ ಇತ್ಯರ್ಥಗಳನ್ನು ಖಚಿತಪಡಿಸುವ ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡಲು ಮರೆಯದಿರಿ.
ಇದರ ಜೊತೆ ನಮ್ಮದು ಶೂನ್ಯ ಹಾರ್ಡ್ ಕಾಪಿ ನೀತಿಯಾಗಿದೆ. ಅಂದರೆ ನಾವು ಕೇವಲ ಸಾಫ್ಟ್ ಕಾಪಿಯನ್ನು ಕೇಳುತ್ತೇವೆ. ಎಲ್ಲವೂ ಕಾಗದರಹಿತ, ಶೀಘ್ರ ಹಾಗೂ ಗೊಂದಲರಹಿತವಾಗಿದೆ!
ನಿಮ್ಮ ಐಡಿವಿ(IDV) ಅನ್ನು ಪರಿಶೀಲಿಸಿ: ಆನ್ಲೈನ್ ನಲ್ಲಿ ಸಿಗುವ ಹಲವು ಇನ್ಶೂರೆನ್ಸ್ ದರಗಳು ಕಡಿಮೆ ಐಡಿವಿ ಅನ್ನು ಹೊಂದಿರುತ್ತವೆ(ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ) ಅಂದರೆ ನಿಮ್ಮ ಕಮರ್ಷಿಯಲ್ ವಾಹನದ ತಯಾರಕರ ಮಾರಾಟ ಬೆಲೆ. ಐಡಿವಿ ನಿಮ್ಮ ಪ್ರೀಮಿಯಂ ಮೇಲೆ ಪರಿಣಾಮ ಬೀರಿದರೂ ಕೂಡಾ, ಸೆಟ್ಲ್ಮೆಂಟ್ ಸಮಯದಲ್ಲಿ ನಿಮಗೆ ಸರಿಯಾದ ಕ್ಲೈಮ್ ದೊರೆಯುವಂತೆ ಮಾಡುತ್ತದೆ.
ಕಳವು ಅಥವಾ ಹಾನಿಯ ಸಮಯದಲ್ಲಿ ನಿಮ್ಮ ಐಡಿವಿಯು ಕಡಿಮೆಯಾಗಿತ್ತು/ ತಪ್ಪು ಆಗಿತ್ತು ಎಂದು ತಿಳಿಯಲು ಯಾರಿಗೂ ಇಷ್ಟವಿರುವುದಿಲ್ಲ! ಡಿಜಿಟ್ ನಲ್ಲಿ, ನೀವು ಆನ್ಲೈನ್ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ ನಾವು ನಿಮಗೆ ನಿಮ್ಮ ಐಡಿವಿ ಅನ್ನು ಸೆಟ್ ಮಾಡುವ ಆಯ್ಕೆಯನ್ನು ನೀಡುತ್ತೇವೆ.
ಉತ್ತಮ ಮೌಲ್ಯ: ಕೊನೆಯಲ್ಲಿ, ಈ ಎಲ್ಲದರ ಒಂದು ಉತ್ತಮ ಸಂಯೋಜನೆಯನ್ನು ನೀಡುವ ವಾಹನ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿ. ಸೂಕ್ತ ಬೆಲೆ, ದರ ಹಾಗೂ ಖಂಡಿತವಾಗಿಯೂ ಶೀಘ್ರ ಕ್ಲೈಮ್ ಗಳು!
ಈ ಕೆಳಗಿನ ಅಂಶಗಳು ನಿಮ್ಮ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಪ್ರೀಮಿಯಂ ನ ಮೇಲೆ ಪರಿಣಾಮವನ್ನು ಬೀರಬಹುದು:
ವಾಹನದ ಮಾದರಿ, ತಯಾರಿ ಹಾಗೂ ಎಂಜಿನ್: ಖಂಡಿತವಾಗಿಯೂ, ನಿಮ್ಮ ವಾಹನ ಅದು ಎಷ್ಟರ ಮಟ್ಟಿಗೆ ಅಪಾಯಕ್ಕೆ ತುತ್ತಾಗಬಹುದು ಎಂಬುದು ಹೆಚ್ಚಾಗಿ ಅದರ ಪ್ರಕಾರವನ್ನು ಅವಲಂಬಿಸುತ್ತದೆ!
ಒಂದು ಸಾಮಾನ್ಯ ಕ್ಯಾಬಿನ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಒಂದು ಸರಕು ಸಾಗಿಸುವ ಟ್ರಕ್ ಅಥವಾ ಶಾಲಾ ಬಸ್ಸಿಗಿಂತ ತುಂಬಾ ಕಡಿಮೆ ಇರುತ್ತದೆ, ಕಾರಣ, ಅದರ ಗಾತ್ರ ಹಾಗೂ ವಾಹನದ ಪ್ರಕಾರ. ಇದರ ಜೊತೆ, ತಯಾರಾದ ವರ್ಷ, ವಾಹನದ ಸ್ಥಿತಿ ಇತ್ಯಾದಿಗಳಂತಹ ಅಂಶಗಳೂ ನಿಮ್ಮ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತವೆ.
ಸ್ಥಳ: ನಿಮ್ಮ ಕಮರ್ಷಿಯಲ್ ವಾಹನ ನೊಂದಣಿ ಎಲ್ಲಿಯಾಗಿದೆ ಹಾಗೂ ಅದನ್ನು ಯಾವ ಸ್ಥಳದಲ್ಲಿ ಬಳಾಸಲಾಗುತ್ತದೆ ಎನ್ನುವುದರ ಮೇಲೂ ನಿಮ್ಮ ವಾಹನದ ಇನ್ಶೂರೆನ್ಸ್ ಪ್ರೀಮಿಯಂ ನ ದರ ಬದಲಾಗಬಹುದು.
ಏಕೆಂದರೆ ಪ್ರತಿಯೊಂದೂ ಸ್ಥಳದಲ್ಲೂ ಅಪಾಯದ ಅಂಶ ಬೇರೆಬೇರೆಯಾಗಿರುತ್ತದೆ, ಉದಾಹರಣೆಗೆ, ಮುಂಬಯಿ, ಬೆಂಗಳೂರು, ಹೈದರಾಬಾದ್, ದೆಹೆಲಿಯಂತಹ ಮಹಾನಗರಗಳಲ್ಲಿ ಇದು ಹೆಚ್ಚಿರುತ್ತದೆ.
ನೋ ಕ್ಲೈಮ್ ಬೋನಸ್: ನೀವು ಈಗಾಗಲೇ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಹೊಂದಿದ್ದು ಪಾಲಿಸಿ ರಿನ್ಯೂವಲ್ ಬಗ್ಗೆ ಅಥವಾ ಇನ್ಶೂರರ್ ಅನ್ನು ಬದಲಿಸಲು ಯೋಚಿಸುತ್ತಿದ್ದರೆ, ಈ ಸಂದರ್ಭದಲ್ಲಿ ನಿಮ್ಮ ಎನ್ ಸಿ ಬಿ (NCB - ನೋ ಕ್ಲೈಮ್ ಬೋನಸ್) ಅನ್ನೂ ಪರಿಗಣಿಸಲಾಗುವುದು ಹಾಗೂ ನಿಮ್ಮ ಪ್ರೀಮಿಯಂ ನಲ್ಲಿ ನಿಮಗೆ ರಿಯಾಯಿತಿ ದೊರೆಯುವುದು!
ನೋ ಕ್ಲೈಮ್ ಬೋನಸ್ ನ ಅರ್ಥ ನಿಮ್ಮ ಕಮರ್ಷಿಯಲ್ ವಾಹನಕ್ಕೆ ಹಿಂದಿನ ವರ್ಷ ಯಾವುದೇ ಕ್ಲೈಮ್ ಅನ್ನು ಮಾಡಲಾಗಲಿಲ್ಲ ಎಂದು.
ಇನ್ಶೂರೆನ್ಸ್ ಯೋಜನೆಯ ವಿಧಗಳು : ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅಡಿಯಲ್ಲಿ, ಪ್ರಾಥಮಿಕವಾಗಿ ಎರಡು ರೀತಿಯ ಇನ್ಶೂರೆನ್ಸ್ ಗಳು ಲಭ ಇವೆ. ಆದ್ದರಿಂದ, ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಕೂಡಾ ನೀವು ಆಯ್ಕೆ ಮಾಡುವ ಯೋಜನೆಯನ್ನು ಅವಲಂಬಿಸುತ್ತದೆ.
ಕಡ್ಡಾಯವಾಗಿರುವ ಹೊಣೆಗಾರಿಕೆ ಮಾತ್ರ ಯೋಜನೆಯು ಕಡಿಮೆ ಪ್ರೀಮಿಯಂ ಅನ್ನು ಹೊಂದಿದ್ದರೂ, ಇದು ಕೇವಲ ಥರ್ಡ್ ಪಾರ್ಟೀ ಹಾನಿ ಅಥವಾ ಥರ್ಡ್ ಪಾರ್ಟೀಗಾದ ನಷ್ಟ ಹಾಗೂ ಮಾಲಕನ ವಯಕ್ತಿಕ ಅಪಘಾತ(ಅವನು/ಅವಳು ಇನ್ಶೂರ್ಡ್ ವಾಹನದಲ್ಲಿ ಪ್ರಯಾಣಿಸುತ್ತಿದ್ದರೆ)ವನ್ನು ಕವರ್ ಮಾಡುತ್ತದೆ; ಆದರೆ ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿಯ ಪ್ರೀಮಿಯಂ ಹೆಚ್ಚಿದ್ದರೂ, ಅದು ನಮ್ಮ ಸ್ವಂತ ಕಮರ್ಷಿಯಲ್ ವಾಹನಕ್ಕೆ ಹಾಗೂ ಚಾಲಕನಿಗಾದ ಹಾನಿ ಹಾಗೂ ನಷ್ಟವನ್ನು ಅನುಕ್ರಮವಾಗಿ ಕವರ್ ಮಾಡುತ್ತದೆ.
ಕಮರ್ಷಿಯಲ್ ವಾಹನದ ಉದ್ದೇಶ : ಪ್ರತಿಯೊಂದು ಕಮರ್ಷಿಯಲ್ ವಾಹನವನ್ನೂ ವಿವಿಧ ಉದ್ದೇಶಗಳಿಗಾಗಿ ಉಪಯೋಗಿಸಲಾಗುತ್ತದೆ. ಕೆಲವನ್ನು ಪ್ರಯಾಣಿಕರನ್ನು ಕರೆದೊಯ್ಯಲು ಉಪಯೋಗಿಸಿದರೆ ಇನ್ನೂ ಕೆಲವನ್ನು ಸರಕು ಸಾಗಣೆ ಅಥವಾ ಕಟ್ಟಡ ನಿರ್ಮಾಣಗಳಲ್ಲಿ ಉಪಯೋಗಿಸಲಾಗುತ್ತದೆ. ಆದ್ದರಿಂದಲೇ, ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಗಾಗಿ ನಿಮ್ಮ ವಾಹನದ ಉದ್ದೇಶವನ್ನೂ ಪರಿಗಣಿಸಲಾಗುತ್ತದೆ.
ಸಾಮಾನ್ಯವಾಗಿ, ಒಂದು ಸಾಧಾರಣ ಆಟೋ ರಿಕ್ಷಾದ ಇನ್ಶೂರೆನ್ಸ್ ಇಂದು ಸರಕು ಸಾಗಿಸುವ ಟ್ರಕ್ ನ ಇನ್ಶೂರೆನ್ಸ್ ಗಿಂತ ಕಡಿಮೆ ಇರುತ್ತದೆ, ಕಾರಣ ಇದರ ಗಾತ್ರ ಮಾತ್ರವಲ್ಲ ಟ್ರಕ್ ಇನ್ಶೂರೆನ್ಸ್ ನಲ್ಲಿ ಅದರಲ್ಲಿ ನಿಯಮಿತವಾಗಿ ಸಾಗಿಸುವ ಸರಕುಗಳ ಪ್ರಕಾರ ಹಾಗೂ ಅದರ ಮೌಲ್ಯವೂ ಕವರ್ ಆಗಿರುತ್ತದೆ.
ಐಡಿವಿ(IDV) ಎಂದರೇನು?
ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ, ನಿಮ್ಮ ಕಾರಿನ ಕಳವು ಅಥವಾ ದುರಸ್ತಿಗೂ ಮೀರಿ ಹಾನಿಯ ಸಂದರ್ಭದಲ್ಲಿ ನಿಮ್ಮ ಇನ್ಶೂರರ್ ನಿಮಗೆ ಪಾವತಿಸಬಹುದಾದ ಗರಿಷ್ಟ ಮೊತ್ತವಾಗಿದೆ. ಈ ಮೌಲ್ಯವನ್ನು ನಿಮ್ಮ ವಾಹನದ ತಯಾರಕರ ಮಾರಾಟ ಬೆಲೆ ಹಾಗೂ ಅದರ ಡಿಪ್ರಿಸಿಯೇಷನ್ ಅನ್ನು ಸೇರಿಸಿ ಪರಿಗಣಿಸಲಾಗುತ್ತದೆ.
ಎನ್ ಸಿ ಬಿ(NCB- ನೋ ಕ್ಲೈಮ್ ಬೋನಸ್) ಎಂದರೇನು?
ನೋ ಕ್ಲೈಮ್ ಬೋನಸ್(NCB) ಎಂದರೆ ಒಂದು ಕ್ಲೈಮ್ ಫ್ರೀ ಅವಧಿ ಹೊಂದಿರುವುದಕ್ಕಾಗಿ ಪಾಲಿಸಿದಾರನಿಗೆ ಸಿಗುವ ಪ್ರೀಮಿಯಂ ಮೇಲಿನ ರಿಯಾಯಿತಿಯಾಗಿದೆ. ಒಂದು ನೋ ಕ್ಲೈಮ್ ಬೋನಸ್ ನ ವ್ಯಾಪ್ತಿಯು 20-50% ಇರುತ್ತದೆ ಹಾಗೂ ಇದು ನಿಮಗೆ ಪಾಲಿಸಿ ಅವಧಿಯ ಕೊನೆಯಲ್ಲಿ ದೊರೆಯುತ್ತದೆ, ಹಾಗೂ ನೀವು ನಿಮ್ಮ ಕಮರ್ಷಿಯಲ್ ವಾಹನವು ಯಾವುದೇ ಅಪಘಾತದಲ್ಲಿ ಸಿಲುಕದೇ ಇದ್ದ ದಾಖಲೆಯನ್ನು ಹೊಂದಿದ್ದರೆ ಇದನ್ನು ಸಂಪಾದಿಸುತ್ತೀರಿ.
ಡಿಡಕ್ಟಿಬಲ್ಸ್(ಕಡಿತಗಳು) ಎಂದರೇನು?
ಡಿಡಕ್ಟಿಬಲ್ಸ್ ಪಾಲಿಸಿದಾರರು ಕ್ಲೈಮ್ ಸಂದರ್ಭದಲ್ಲಿ ಪಾವತಿಸಬೇಕಾದ ಮೊತ್ತವಾಗಿದೆ. ಸಾಮಾನ್ಯವಾಗಿ ಎರಡು ರೀತಿಯ ಡಿಡಕ್ಟಿಬಲ್ ಗಳಿರುತ್ತವೆ; ಒಂದು ಕಡ್ಡಾಯವಾದದ್ದು, ಹಾಗೂ ಇನ್ನೊಂದು ಸ್ವಯಂಪ್ರೇರಿತ(ವಾಲಂಟರಿ) ಕ್ಲೈಮ್ - ಇದನ್ನು ನೀವು ಆಯ್ಕೆ ಮಾಡಬಹುದು ನಿಮ್ಮ ವ್ಯವಹಾರವು ಪ್ರತೀ ಕ್ಲೈಮ್ ಗಾಗಿ ಎಷ್ಟು ಮೊತ್ತವನ್ನು ನಿಭಾಯಿಸಬಹುದು ಎಂಬ ಆಧಾರದ ಮೇಲೆ.
ನಿಮ್ಮ ವಾಲಂಟರಿ ಕ್ಲೈಮ್ ಹೆಚ್ಚಿದ್ದಷ್ಟು, ನಿಮ್ಮ ಪ್ರೀಮಿಯಂ ಕಡಿಮೆ ಇರುತ್ತದೆ. ಆದರೆ ಒಂದು ವೊಲಂಟರಿ ಡಿಡಕ್ಟಿಬಲ್ ಮೊತ್ತವನ್ನು ಆಯ್ಕೆ ಮಾಡುವಾಗ - ಈ ಮೊತ್ತವು ಕ್ಲೈಮ್ ನ ಸಂದರ್ಭದಲ್ಲಿ ನಿಮ್ಮಿಂದ ಭರಿಸಲು ಸಾಧ್ಯವೇ ಎಂದು ಅರಿಯಿರಿ.
ನಗದುರಹಿತ( ಕ್ಯಾಷ್ಲೆಸ್ಸ್) ಕ್ಲೈಮ್ ಎಂದರೇನು?
ನೀವು ನಿಮ್ಮ ಕಮರ್ಷಿಯಲ್ ವಾಹನವನ್ನು ಡಿಜಿಟ್ ನ ಅಧಿಕೃತ ರಿಪೇರಿ ಕೇಂದ್ರದಲ್ಲಿ ರಿಪೇರಿ ಮಾಡಿಸಲು ಆಯ್ಕೆ ಮಾಡಿದರೆ, ನಾವು ನೇರವಾಗಿ ರಿಪೇರಿ ಕೇಂದ್ರಕ್ಕೆ ಸ್ವೀಕೃತ ಕ್ಲೈಮ್ ಮೊತ್ತದ ಪಾವತಿಯನ್ನು ಮಾಡುತ್ತೇವೆ. ಇದು ನಗದುರಹಿತ ಕ್ಲೈಮ್ ಆಗಿದೆ.
ದಯವಿಟ್ಟು ಗಮನಿಸಿ, ಯಾವುದೇ ರೀತಿಯ ಡಿಡಕ್ಟಿಬಲ್ ಗಳಿದ್ದರೆ ಉದಾಹರಣೆಗೆ ಕಡ್ಡಾಯ ಹೆಚ್ಚುವರಿ/ ಡಿಡಕ್ಟಿಬಲ್, ನಿಮ್ಮ ಇನ್ಶೂರರ್ ಕವರ್ ಮಾಡದ ಯಾವುದೇ ರಿಪೇರಿ ಶುಲ್ಕಗಳು ಅಥವಾ ಯಾವುದೇ ಡಿಪ್ರಿಸಿಯೇಷನ್ ವೆಚ್ಚಗಳನ್ನು ಪಾಲಿಸಿದಾರ ತಮ್ಮ ಜೇಬಿನಿಂದಲೇ ನೀಡಬೇಕಾಗುವುದು.
ಥರ್ಡ್ ಪಾರ್ಟಿ ಹೊಣೆಗಾರಿಕೆ ಎಂದರೇನು?
ನಿಮ್ಮ ವಾಣಿಜ್ಯ ವಾಹನವು ಯಾವುದೇ ಥರ್ಡ್ ಪಾರ್ಟೀ ಸ್ವತ್ತು, ವ್ಯಕ್ತಿ ಅಥವಾ ವಾಹನಕ್ಕೆ ಹಾನಿ ಮಾಡಿದರೆ ಅದು ಥರ್ಡ್ ಪಾರ್ಟಿ ಹೊಣೆಗಾರಿಕೆಯಾಗುತ್ತದೆ. ಈ ಸಂದರ್ಭದಲ್ಲಿ, ನಿಮ್ಮ ಇನ್ಶೂರೆನ್ಸ್ ಪಾಲಿಸಿಯು(ಹೊಣೆಗಾರಿಕೆ ಮಾತ್ರ/ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿ) ಅದಕ್ಕೆ ಆದ ನಷ್ಟವನ್ನು ಆರ್ಥಿಕವಾಗಿ ಕವರ್ ಮಾಡಲು ಬದ್ಧವಾಗಿರುತ್ತದೆ.
ಒಂದು ಸಾಧಾರಣ ಕಾರಿಗೆ ಹೋಲಿಸಿದರೆ ಒಂದು ವಾಣಿಜ್ಯ ವಾಹನವು ಅಪಾಯಕ್ಕೆ ತುತ್ತಾಗುವ ಸಂಭಾವನೆ ಹೆಚ್ಚಿರುತ್ತದೆ. ಸರಕು ಸಾಗಿಸುವ ಉದಾಹರಣೆಯನ್ನು ನೋಡಿದರೆ, ಅಪಘಾತ ಅಥವಾ ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ, ಟ್ರಕ್ ನ ಗಾತ್ರ ಹಾಗೂ ಅದು ಸಾಗಿಸುತ್ತಿರುವ ಸರಕುಗಳ ಮೌಲ್ಯದಿಂದಾಗಿ ಅದಕ್ಕೆ ಅಪಾಯವೂ ಹೆಚ್ಚಿರುತ್ತದೆ.
ಸರಳವಾಗಿ ಹೇಳುವುದಾದರೆ, ಒಂದು ಸಾಧಾರಣ ಕಾರ್ ಇನ್ಶೂರೆನ್ಸ್ ನ ವಿನ್ಯಾಸವು ಪ್ರಾಥಮಿಕವಾಗಿ ನೀವು ಹಾಗೂ ನಿಮ್ಮ ಕುಟುಂಬ ಬಳಸುವ ಕಾರುಗಳಿಗಾಗಿ ಮಾಡಲಾಗಿದೆ. ಆದರೆ, ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ನಿರ್ದಿಷ್ಟವಾಗಿ ಒಂದು ವ್ಯವಹಾರದ ಮುಖ್ಯ ಅಂಗಗಳಾಗಿರುವ ವಾಹನಗಳಿಗಾಗಿ ತಯಾರಿಸಲಾಗಿದೆ. ಈ ಎಅಡು ವಾಹನಗಳು ಎದುರಿಸುವ ಸಂದರ್ಭಗಳು ಹಾಗೂ ಅಪಾಯಗಳು ಬೇರೆಬೇರೆಯಾಗಿರುವ ಕಾರಣ ಅದರ ಪಾಲಿಸಿ ಗಳನ್ನು ಕೂಡ ಸೂಕ್ತವಾಗಿ ಕಸ್ಟಮೈಜ್ ಮಾಡಲಾಗಿದೆ.
ಇತರ ಪ್ರಮುಖ ಲೇಖನಗಳು