Third-party premium has changed from 1st June. Renew now
ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಎಂದರೇನು?
ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್, ಇದನ್ನು ಥರ್ಡ್ ಪಾರ್ಟಿ ಹೊಣೆಗಾರಿಕೆಯ ಇನ್ಶೂರೆನ್ಸ್ ( ಥರ್ಡ್ ಪಾರ್ಟಿ ಲೈಬಿಲಿಟಿ ಇನ್ಶೂರೆನ್ಸ್ ) ಎಂದೂ ಕರೆಯುತ್ತಾರೆ. ಯಾವುದೇ ಮೂರನೇ ವ್ಯಕ್ತಿಯ ವಾಹನ, ವ್ಯಕ್ತಿ ಅಥವಾ ಆಸ್ತಿಗೆ ಯಾವುದೇ ನಷ್ಟ ಅಥವಾ ಹಾನಿ ಉಂಟಾದಾಗ ಸಂಭವಿಸಬಹುದಾದ ಯಾವುದೇ ಹೊಣೆಗಾರಿಕೆಯ ವಿರುದ್ಧ ಈ ಇನ್ಶೂರೆನ್ಸ್ ರಕ್ಷಣೆ ಮಾಡುತ್ತದೆ. ದುರದೃಷ್ಟವಶಾತ್, ಇದು ನಿಮ್ಮ ಸ್ವಂತ ವಾಹನಕ್ಕಾಗುವ ಹಾನಿಯನ್ನು ಒಳಗೊಂಡಿರುವುದಿಲ್ಲ.
ಭಾರತದಲ್ಲಿ ಮೋಟಾರ್ ವೆಹಿಕಲ್ ಆಕ್ಟ್ ಮೂಲಕ ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಕಡ್ಡಾಯವಾಗಿದೆ. ನಿಮ್ಮ ಕಾರು ಯಾವುದೇ ಥರ್ಡ್-ಪಾರ್ಟಿ ವಾಹನ, ವ್ಯಕ್ತಿ ಅಥವಾ ಆಸ್ತಿಯನ್ನು ಹಾನಿಗೊಳಿಸಿದರೆ ಉಂಟಾಗಬಹುದಾದ ಯಾವುದೇ ನಷ್ಟದಿಂದ ನಿಮ್ಮ ಪಾಕೆಟ್ ಅನ್ನು ರಕ್ಷಿಸುತ್ತದೆ.
ಉದಾಹರಣೆಗೆ, ನೀವು ಆಕಸ್ಮಿಕವಾಗಿ ಮತ್ತೊಂದು ಕಾರಿನ ಹೆಡ್‌ಲೈಟ್‌ಗಳನ್ನು ಹಾನಿಗೊಳಿಸಿದರೆ, ನಿಮ್ಮ ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಮೂಲಕ ಮೂರನೇ ವ್ಯಕ್ತಿಗೆ ಉಂಟಾದ ಅದೇ ನಷ್ಟವನ್ನು ಭರಿಸುತ್ತದೆ.
ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಬೆಲೆ
ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್‌ಗಿಂತ, ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಭಿನ್ನವಾಗಿದೆ. ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ನಿಮ್ಮ ಇಂಜಿನ್ ಸಿಸಿ ಮೇಲೆ ಮಾತ್ರ ಅವಲಂಬಿತವಾಗಿದೆ ಮತ್ತು ಆಯಾ ಪ್ರೀಮಿಯಂಗಳು IRDAI ಮೂಲಕ ಪೂರ್ವನಿರ್ಧರಿತವಾಗಿರುತ್ತವೆ.
ಪ್ರೈವೇಟ್ ಕಾರುಗಳು, ಎಂಜಿನ್ ಕೆಪಾಸಿಟಿಯೊಂದಿಗೆ | ಪ್ರೀಮಿಯಂ ರೇಟ್ |
---|---|
1000cc ಮೀರದಂತೆ | ₹2,072 |
1000cc ಮೀರುವಂತೆ, ಅದರೆ 1500cc ಮೀರದಂತೆ | ₹3,221 |
1500cc ಮೀರುವಂತೆ | ₹7,890 |
ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್‌ನಲ್ಲಿ ಏನು ಒಳಗೊಂಡಿದೆ?
ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್‌ನಲ್ಲಿ ಏನನ್ನು ಒಳಗೊಂಡಿಲ್ಲ?
ನಿಮ್ಮ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಒಳಗೊಂಡಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಸಹ ಮುಖ್ಯ, ಅದರಿಂದ ನೀವು ಕ್ಲೇಮ್ ಮಾಡುವ ಸಂದರ್ಭದಲ್ಲಿ ಯಾವುದೇ ಅಚ್ಚರಿ ಪಡುವುದಿಲ್ಲ . ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:
ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಸ್ವಂತ ಕಾರಿಗೆ ಆಗುವ ಹಾನಿಯನ್ನು ಒಳಗೊಂಡಿರುವುದಿಲ್ಲ.
ನೀವು ಕುಡಿದು ಚಾಲನೆ ಮಾಡುತ್ತಿರುವಾಗ ಅಥವಾ ವ್ಯಾಲಿಡ್ ಲೈಸೆನ್ಸ್ ಇಲ್ಲದೆ ಫೋರ್ ವೀಲರ್ ವೆಹಿಕಲ್ ಚಾಲನೆ ಮಾಡಿದರೆ ನಿಮ್ಮ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ನಿಮಗೆ ರಕ್ಷಣೆ ನೀಡುವುದಿಲ್ಲ.
ನೀವು ಕಲಿಯುವವರ ಲೈಸೆನ್ಸ್ ಹೊಂದಿದ್ದರೆ ಮತ್ತು ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ವ್ಯಾಲಿಡ್ ಡ್ರೈವಿಂಗ್ ಲೈಸೆನ್ಸ್-ಹೋಲ್ಡರ್ ಇಲ್ಲದೆ ಚಾಲನೆ ಮಾಡುತ್ತಿದ್ದರೆ - ಆ ಸಂದರ್ಭಗಳಲ್ಲಿ ನೀವು ಕ್ಲೇಮ್ ಮಾಡಲು ಆಗುವುದಿಲ್ಲ.
ಡಿಜಿಟ್ನ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸಿನ ಪ್ರಮುಖ ಲಕ್ಷಣಗಳು
ಪ್ರಮುಖ ಲಕ್ಷಣಗಳು | ಡಿಜಿಟ್ ನ ಪ್ರಯೋಜನಗಳು |
---|---|
ಪ್ರೀಮಿಯಂ | ₹2072/-ರಿಂದ ಪ್ರಾರಂಭ |
ಖರೀದಿಸುವ ಪ್ರಕ್ರಿಯೆ | ಸ್ಮಾರ್ಟ್ ಫೋನ್-ಸಕ್ರಿಯಗೊಳಿಸಲಾದ ಪ್ರಕ್ರಿಯೆ. ಕೇವಲ ಐದು ನಿಮಿಷಗಳಲ್ಲಿ ಮಾಡಬಹುದು. |
ಕ್ಲೇಮ್ ಸೆಟಲ್ ಮೆಂಟ್ | ಪ್ರೈವೇಟ್ ಕಾರುಗಳ 96% ಕ್ಲೇಮ್ಸ್ಗಳನ್ನು ಇತ್ಯರ್ಥಗೊಳಿಸಲಾಗಿದೆ |
ಥರ್ಡ್ ಪಾರ್ಟಿಗೆ ಪರ್ಸನಲ್ ಹಾನಿ | ಅನ್ ಲಿಮಿಟೆಡ್ ಹೊಣೆಗಾರಿಕೆ |
ಥರ್ಡ್ ಪಾರ್ಟಿಗೆ ಆಸ್ತಿ ಹಾನಿ | ₹7.5 ಲಕ್ಷಗಳವರೆಗೆ |
ಪರ್ಸನಲ್ ಆಕ್ಸಿಡೆಂಟ್ ಕವರ್ | ₹15 ಲಕ್ಷಗಳವರೆಗೆ |
ಪರ್ಸನಲ್ ಆಕ್ಸಿಡೆಂಟ್ ಕವರ್ ಪ್ರೀಮಿಯಂ | ₹220/- |
ಥರ್ಡ್ ಪಾರ್ಟಿ ಕಾರು ಇನ್ಶೂರೆನ್ಸಿಗಾಗಿ ಕ್ಲೈಮ್ ಮಾಡುವುದು ಹೇಗೆ?
- ಅಪಘಾತದ ಸಂದರ್ಭದಲ್ಲಿ, ಸಂಬಂಧಿತ ಥರ್ಡ್-ಪಾರ್ಟಿಯು ಎಫ್‌ಐಆರ್ ದಾಖಲಿಸಬೇಕು ಮತ್ತು ಚಾರ್ಜ್ ಶೀಟ್ ಪಡೆಯಬೇಕು.
- ಪರಿಹಾರವಿದ್ದಲ್ಲಿ, ನಿಮ್ಮ ಪರವಾಗಿ ಅದನ್ನು ನಾವು ನೋಡಿಕೊಳ್ಳುತ್ತೇವೆ. 1800-103-4448 ಸಂಖ್ಯೆಗೆ ನೀವು ನಮಗೆ ಕರೆ ಮಾಡಿ.
- ಯಾವುದೇ ನಿಯಮಗಳ ಉಲ್ಲಂಘನೆ ಇಲ್ಲದಿದ್ದರೆ, ನಾವು ನಿಮ್ಮ ಪರವಾಗಿ ನಾನ್-ಮಾನಿಟರಿ ಸೆಟಲ್ ಮೆಂಟ್'ಗೆ ಪ್ರಯತ್ನಿಸುತ್ತೇವೆ. ಪರಿಸ್ಥಿತಿ ಬಂದಲ್ಲಿ , ನಾವು ನಿಮ್ಮನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತೇವೆ.
- ಬಹು ಮುಖ್ಯವಾಗಿ, ನೀವು ಉತ್ತಮ ನಾಗರಿಕರಾಗಿದ್ದರೆ ಮತ್ತು ಯಾವುದೇ ರೀತಿಯ ನಿರ್ಲಕ್ಷ್ಯಕ್ಕಾಗಿ ನಿಮ್ಮ ತಪ್ಪನ್ನು ಒಪ್ಪಿಕೊಂಡಿದ್ದರೆ, ನಿಮ್ಮ ಡಿಜಿಟ್ ಥರ್ಡ್ ಪಾರ್ಟಿ ಕವರ್ ಇನ್ನೂ ಉತ್ತಮವಾಗಿರುತ್ತದೆ.
- ಪರ್ಸನಲ್ ಆಕ್ಸಿಡೆಂಟ್ - ಸಂಬಂಧಿತ ಕ್ಲೇಮ್'ನ ಸಂದರ್ಭದಲ್ಲಿ, ನೀವು ಮಾಡಬೇಕಾಗಿರುವುದು ಇಷ್ಟೇ,1800-258-5956 ಸಂಖ್ಯೆಗೆ ನಮಗೆ ಕರೆ ಮಾಡುವುದು ಮತ್ತು ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ!
ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಕ್ಲೇಮ್ ಮಾಡುವಾಗ ಪರಿಗಣಿಸಬೇಕಾದ ವಿಷಯಗಳು
- ಅಪಘಾತದ ಸಂದರ್ಭದಲ್ಲಿ, ಥರ್ಡ್-ಪಾರ್ಟಿಯು ಹಾನಿಯಾದ ಸಮಯದಲ್ಲಿ, ಸಂಬಂಧಿತ ಎಫ್‌ಐಆರ್ ಅನ್ನು ದಾಖಲಿಸಬೇಕು - ಪೋಸ್ಟ್ ಅನ್ನು ಇನ್ಶೂರೆನ್ಸ್ ಕಂಪನಿಗೆ ತಿಳಿಸಬೇಕು. ಇಲ್ಲದಿದ್ದರೆ , ಅಗತ್ಯವಿರುವ ಪರಿಹಾರವನ್ನು ನೀಡಲು ಸಾಧ್ಯವಿಲ್ಲ.
- ಅಪಘಾತದಲ್ಲಿ, ವಿರೋಧ ಪಕ್ಷದ ತಪ್ಪನ್ನು ಸಾಬೀತುಪಡಿಸಲು ಥರ್ಡ್ ಪಾರ್ಟಿಯು ಯೋಗ್ಯವಾದ ಪುರಾವೆಗಳನ್ನು ಹೊಂದುವುದು ಮುಖ್ಯ.
- ಸಣ್ಣಪುಟ್ಟ ಹಾನಿಗಳು ಮತ್ತು ನಷ್ಟಗಳ ಸಂದರ್ಭದಲ್ಲಿ, ಎಫ್‌ಐಆರ್ ದಾಖಲಿಸುವ ಮತ್ತು ಮೋಟಾರು ವಾಹನ ನ್ಯಾಯಮಂಡಳಿಯೊಂದಿಗೆ (Motor Vehicle Tribunal) ವ್ಯವಹರಿಸುವ ಪ್ರಕ್ರಿಯೆಯು ಹೆಚ್ಚಾಗಿ ಸಮಯ ತೆಗೆದುಕೊಳ್ಳುವುದರಿಂದ ಅವುಗಳನ್ನು ಯಾವಾಗಲೂ ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸುವಂತೆ ಸಲಹೆ ನೀಡಲಾಗುತ್ತದೆ.
- IRDAI ನ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ, ಮೋಟಾರು ಅಪಘಾತದ ಹಕ್ಕುಗಳ ನ್ಯಾಯಮಂಡಳಿಯು ಕ್ಲೇಮ್ ಮೊತ್ತವನ್ನು ನಿರ್ಧರಿಸುತ್ತದೆ. ಥರ್ಡ್-ಪಾರ್ಟಿಗೆ ವೈಯಕ್ತಿಕ ಹಾನಿಗಳ ಮೇಲೆ ಯಾವುದೇ ಹೆಚ್ಚಿನ ಮಿತಿಯಿಲ್ಲದಿದ್ದರೂ, ಥರ್ಡ್ ಪಾರ್ಟಿಯ ವಾಹನ ಅಥವಾ ಆಸ್ತಿಯ ಹಾನಿ ಮತ್ತು ನಷ್ಟದ ಸಂದರ್ಭದಲ್ಲಿ 7.5 ಲಕ್ಷ ರೂಗಳವರೆಗೆ ಸೀಮಿತ ಹೊಣೆಗಾರಿಕೆ ಇರುತ್ತದೆ.
ನಮ್ಮ ಗ್ರಾಹಕರು ನಮ್ಮ ಬಗ್ಗೆ ಏನು ಹೇಳುತ್ತಾರೆ
ಟೀಮ್ ಗೋ ಡಿಜಿಟ್ , ನಿಮ್ಮ ಬೆಂಬಲ ಮತ್ತು ತ್ವರಿತ ಪ್ರತಿಕ್ರಿಯೆಯನ್ನು ನಿಜವಾಗಿಯೂ ಪ್ರಶಂಸಿಸುತ್ತೇವೆ. ವಾಸ್ತವವಾಗಿ ನನ್ನ ಕಾರಿಗೆ ಮೋಟಾರ್ ಸೈಕಲ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಹಿಂಬದಿಯ ಬಂಪರ್, ಟ್ರಂಕ್ ಮತ್ತು ಟೈಲ್ ಲೈಟ್ ಮುರಿದು ಬಿದ್ದಿದೆ. ಅವರು ತ್ವರಿತವಾಗಿ ಪ್ರತಿಕ್ರಿಯೆಯನ್ನು ನೀಡುತ್ತಾರೆ ಮತ್ತು ಕೆಲಸಗಳು ಸುಲಭವಾಗಿ, ನಗದುರಹಿತವಾಗಿ ಹಾಗೂ ಪೇಪರ್‌ಲೆಸ್ ನಡೆಯುತ್ತವೆ. ಗುಡ್ ಜಾಬ್ ಗೆಳೆಯ.
ಅತ್ಯುತ್ತಮ ಸೇವೆ. ಇದು ಪೇಪರ್‌ಲೆಸ್ ಕ್ಲೇಮ್ ರಿಜಿಸ್ಟರ್ ಮತ್ತು ಸೆಟಲ್‌ಮೆಂಟ್ ಆಗಿತ್ತು. ಧನ್ಯವಾದಗಳು, ಶ್ರೀ ಅರವಿಂದ್ ರೆಡ್ಡಿ ಮತ್ತು ತಂಡ, ನಿಮ್ಮ ಬೆಂಬಲ ಮತ್ತು ತ್ವರಿತ ಪ್ರತಿಕ್ರಿಯೆಗಾಗಿ. ಅವರ ವೃತ್ತಿಪರತೆ ಮತ್ತು ಬದ್ಧತೆಗಾಗಿ ಗೋ ಡಿಜಿಟ್ ಕಾರ್ ಇನ್ಶೂರೆನ್ಸ್ ಅನ್ನು ಹೆಚ್ಚು ರೆಕಮೆಂಡ್ ಮಾಡುತ್ತೇನೆ.
ಇದು ಎರಡನೇ ಸಲ, ನಾನು ನನ್ನ ಕಾರ್ ಪಾಲಿಸಿಯನ್ನು ಡಿಜಿಟ್ ಮೂಲಕ ರಿನೀವ್ ಮಾಡಿಸಿದ್ದೇನೆ . ಡಿಜಿಟ್ ಎಕ್ಸಿಕ್ಯೂಟಿವ್ ಗೋಕುಲ್ ಅಯ್ಯಂಗಾರ್ ಅವರು ನನ್ನನ್ನು ತೃಪ್ತಿಪಡಿಸಲು ಮತ್ತು ಅತ್ಯುತ್ತಮ ಕೊಡುಗೆ ನೀಡಲು ಎಲ್ಲ ಪ್ರಯತ್ನಗಳನ್ನು ಮಾಡಿದರು. ನಾನು ವರ್ಷವಿಡೀ ಅದೇ ಬೆಂಬಲ ಮತ್ತು ಸೇವೆಯನ್ನು ಪಡೆಯುತ್ತೇನೆ ಎಂದು ಭಾವಿಸುತ್ತೇನೆ.
ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ರಯೋಜನಗಳು
ತಂತ್ರಜ್ಞಾನಕ್ಕೆ ಧನ್ಯವಾದಗಳು, ಆನ್‌ಲೈನ್‌ನಲ್ಲಿ ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಲು ನಿಮಗೆ ಕೆಲವೇ ನಿಮಿಷಗಳು ಬೇಕಾಗುತ್ತವೆ . ನಿಮಗೆ ಬೇಕಾಗಿರುವುದು ಕೇವಲ ನಿಮ್ಮ ಬೇಸಿಕ್ ಕಾರ್ ವಿವರಗಳು (ಕಾರ್ ರಿಜಿಸ್ಟ್ರೇಷನ್ ನಂಬರ್/ಕಾರ್ ತಯಾರಿಕೆ ಮತ್ತು ಮಾಡೆಲ್ ) ಮತ್ತು ಐಡಿ ಪ್ರೂಫ್ (ಆಧಾರ್/ಪ್ಯಾನ್) ಮತ್ತು ನಿಮ್ಮ ಪಾಲಿಸಿಯನ್ನು ನಿಮಗೆ ಇಮೇಲ್ ಮಾಡಲಾಗುತ್ತದೆ!
ದುರದೃಷ್ಟಕರ ಸಂದರ್ಭದಲ್ಲಿ ಚಾಲನೆ ಮಾಡುವಾಗ, ನೀವು ಅಪಘಾತಕ್ಕೀಡಾಗುತ್ತೀರಿ ಮತ್ತು ದೈಹಿಕವಾಗಿ ಯಾರನ್ನಾದರೂ ನೋಯಿಸಿದರೆ ಅಥವಾ ಇನ್ನೂ ಕೆಟ್ಟ ಸಂದರ್ಭದಲ್ಲಿ- ಒಬ್ಬರ ಸಾವಿಗೆ ಕಾರಣವಾದರೆ, ಈ ಸಂದರ್ಭದಲ್ಲಿ, ನಿಮ್ಮ ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಅನ್ ಲಿಮಿಟೆಡ್ ಹೊಣೆಗಾರಿಕೆಯ ನಷ್ಟವನ್ನು ಒಳಗೊಳ್ಳುತ್ತದೆ.
ಒಂದುವೇಳೆ ನೀವು ಒಬ್ಬರ ಆಸ್ತಿ ಅಥವಾ ವಾಹನವನ್ನು ಹಾನಿಗೊಳಿಸಿದರೆ, ನಿಮ್ಮ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಅವರ ನಷ್ಟಕ್ಕೆ 7.5 ಲಕ್ಷ ರೂಗಳವರೆಗೆ ರಕ್ಷಣೆ ನೀಡುತ್ತದೆ!
ನೀವು ಈಗಾಗಲೇ ಯಾವುದೇ ಇತರ ಪಾಲಿಸಿಯಿಂದ (ಉದಾಹರಣೆಗೆ ನಿಮ್ಮ ಹೆಲ್ತ್ ಇನ್ಶೂರೆನ್ಸ್ ) ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಹೊಂದಿಲ್ಲದಿದ್ದರೆ, ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಅದನ್ನು ಆಯ್ಕೆ ಮಾಡಲು ನಿಮಗೆ ಅನುಮತಿಸುತ್ತದೆ. ಆದ್ದರಿಂದ, ನೀವು ಅಪಘಾತಕ್ಕೆ ಸಿಲುಕಿ ಶಾಶ್ವತ ಅಂಗವೈಕಲ್ಯ ಹೊಂದಿದರೆ ಅಥವಾ ಅಪಘಾತದಿಂದ ಸಾವು ಸಂಭವಿಸಿದರೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅದನ್ನು ಕವರ್ ಮಾಡುತ್ತದೆ.
ರಸ್ತೆಯಲ್ಲಿ ಹಲವಾರು ಕಾರುಗಳು ಓಡಾಡುವುದರಿಂದ ಮತ್ತು ಟ್ರಾಫಿಕ್ ಪ್ರಮಾಣದಿಂದ- ತಪ್ಪುಗಳು ಸಂಭವಿಸುತ್ತವೆ. ನಿಮ್ಮ ತಪ್ಪಿರುವಾಗ ಮತ್ತು ನಿಮ್ಮ ಕಾರು ಯಾರಿಗಾದರೂ ಹಾನಿ ಮಾಡಿದಾಗ ಅಥವಾ ಅವರ ವಾಹನ/ಆಸ್ತಿಗೆ ಹಾನಿ ಮಾಡಿದಾಗ- ಅಂತಹ ಹಾನಿಗಳಿಗೆ ಪಾವತಿಸುವ ವೆಚ್ಚವನ್ನು ನಿಮ್ಮ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯಿಂದ ಭರಿಸಲಾಗುವುದು ಆದ್ದರಿಂದ ನೀವು ಅನಿರೀಕ್ಷಿತ ನಷ್ಟಗಳನ್ನು ಭರಿಸಬೇಕಾಗಿಲ್ಲ.
ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ, ಪ್ರತಿಯೊಬ್ಬ ಕಾರು ಮಾಲೀಕರು ಕನಿಷ್ಠ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಹೊಂದಿರಬೇಕು. ನಿಮ್ಮ ಕಾರನ್ನು ನೀವು ಮತ್ತಷ್ಟು ರಕ್ಷಿಸಲು ಬಯಸಿದರೆ, ನೀವು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಗೆ ಸಹ ಆಯ್ದುಕೊಳ್ಳಬಹುದು. ಇದು ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ ಮತ್ತು ನಿಮ್ಮ ಸ್ವಂತ ಕಾರಿನ ರಕ್ಷಣೆಯನ್ನು ಒಳಗೊಂಡಿರುತ್ತದೆ.
ಒಂದುವೇಳೆ ಕನಿಷ್ಠ ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಇಲ್ಲದೆ ನೀವು ರಸ್ತೆಯಲ್ಲಿ ಕಂಡುಬಂದರೆ, ನೀವು 2,000ರೂಗಳ ದಂಡ ಮತ್ತು/ಅಥವಾ ಮೂರು ತಿಂಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುತ್ತೀರಿ.
ಥರ್ಡ್ ಪಾರ್ಟಿ ಇನ್ಸೂರೆನ್ಸಿನ ಅನಾನುಕೂಲಗಳು
ದುರದೃಷ್ಟವಶಾತ್, ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ನಿಮ್ಮ ಸ್ವಂತ ಕಾರಿಗೆ ಆಗುವ ಹಾನಿ ಮತ್ತು ನಷ್ಟಗಳಿಗೆ ರಕ್ಷಣೆ ನೀಡುವುದಿಲ್ಲ.
ಯಾವುದೇ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಉಂಟಾದ ನಿಮ್ಮ ಕಾರ್ /ವಾಹನ ಹಾನಿಯನ್ನು ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಒಳಗೊಂಡಿರುವುದಿಲ್ಲ.
ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ನಿಮ್ಮ ನಾಲ್ಕು-ಚಕ್ರದ ವಾಹನಗಳಿಗೆ ಲಭ್ಯವಿರುವ ಮೂಲಭೂತ ಯೋಜನೆಯಾಗಿದೆ ಮತ್ತು ಹೆಚ್ಚುವರಿ ಪ್ರಯೋಜನಗಳು ಹಾಗೂ ಕವರ್‌ಗಳೊಂದಿಗೆ ಕಸ್ಟಮೈಸ್ ಮಾಡಲು ಸಾಧ್ಯವಿಲ್ಲ. ಆದಾಗ್ಯೂ, ನೀವು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಜೊತೆಗೆ ಹಾಗೆ ಮಾಡಬಹುದು.
ಭಾರತದಲ್ಲಿ ಕಾರ್ ಇನ್ಶೂರೆನ್ಸ್ ಯೋಜನೆಗಳ ವಿಧಗಳು
ಥರ್ಡ್ ಪಾರ್ಟಿ | ಕಾಂಪ್ರೆಹೆನ್ಸಿವ್ |
ಅಪಘಾತದಿಂದಾಗಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ |
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟಗಳು |
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟಗಳು |
|
ಥರ್ಡ್ ಪಾರ್ಟಿಯ ವಾಹನಕ್ಕೆ ಆಗುವ ಹಾನಿ |
|
ಥರ್ಡ್ ಪಾರ್ಟಿಯ ಆಸ್ತಿಗೆ ಆಗುವ ಹಾನಿ |
|
ಪರ್ಸನಲ್ ಆಕ್ಸಿಡೆಂಟ್ ಕವರ್ |
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು |
|
ನಿಮ್ಮ ಕಾರಿನ ಕಳ್ಳತನ |
|
ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
|
ನಿಮ್ಮಐಡಿವಿ ಅನ್ನು ಕಸ್ಟಮೈಸ್ ಮಾಡಿ |
|
ಕಸ್ಟಮೈಸ್ ಮಾಡಿದ ಆಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ |
|
Get Quote | Get Quote |
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸಗಳನ್ನು ಇನ್ನಷ್ಟು ತಿಳಿಯಿರಿ.
ಭಾರತದಲ್ಲಿನ ಜನಪ್ರಿಯ ಮಾಡೆಲ್'ಗಳಿಗಾಗಿ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್
ಭಾರತದಲ್ಲಿನ ಜನಪ್ರಿಯ ಬ್ರ್ಯಾಂಡ್ಗಳಿಗಾಗಿ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್
ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಗೆ ಸಂಬಂಧಿಸಿದ ಪದೇ ಪದೇ ಕೇಳಲಾದ ಪ್ರಶ್ನೆಗಳು
ನಾನು ವ್ಯಾಲಿಡ್ ಥರ್ಡ್-ಪಾರ್ಟಿ ಹೊಣೆಗಾರಿಕೆಯ ಇನ್ಶೂರೆನ್ಸ್ ಪಾಲಿಸಿಯಿಲ್ಲದೆ ಚಾಲನೆ ಮಾಡುವಾಗ ಸಿಕ್ಕಿಬಿದ್ದರೆ ಏನಾಗುತ್ತದೆ?
ವ್ಯಾಲಿಡ್ ಥರ್ಡ್ ಪಾರ್ಟಿ ಹೊಣೆಗಾರಿಕೆಯ ಇನ್ಶೂರೆನ್ಸ್ ಇಲ್ಲದೆ ನೀವು ಚಾಲನೆ ಮಾಡುವಾಗ ಸಿಕ್ಕಿಬಿದ್ದರೆ, ನೀವು ರೂ 2,000 ದಂಡವನ್ನು ಪಾವತಿಸಲು ಹೊಣೆಗಾರರಾಗಿರುತ್ತೀರಿ. ಹೆಚ್ಚುವರಿಯಾಗಿ, ನಿಮ್ಮ ಲೈಸೆನ್ಸ್ ಅನ್ನು ಅನರ್ಹಗೊಳಿಸಬಹುದು ಮತ್ತು/ಅಥವಾ 3-ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.
ನೀವು ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಕ್ಲೇಮ್ ಮಾಡಿದರೆ, ನಿಮ್ಮ NCB ಅನ್ನು ಕಳೆದುಕೊಳ್ಳುತ್ತೀರಾ?
ಇಲ್ಲ, ನೀವು ಕಳೆದುಕೊಳ್ಳುವುದಿಲ್ಲ. ನಿಮ್ಮ ಎನ್.ಸಿ.ಬಿ.(NCB) ಅಥವಾ ನೋ ಕ್ಲೇಮ್ ಬೋನಸ್ ಹಾಗೇ ಉಳಿಯುತ್ತದೆ.
ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಕಡ್ಡಾಯವೇ?
ಹೌದು, ಮೋಟಾರ್ ವೆಹಿಕಲ್ ಆಕ್ಟ್ , 1988ರ ಅಡಿಯಲ್ಲಿ ಕನಿಷ್ಠ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.
ಅಪಘಾತದ ಸಮಯದಲ್ಲಿ ಬೇರೊಬ್ಬರು ನನ್ನ ಕಾರನ್ನು ಚಾಲನೆ ಮಾಡುತ್ತಿದ್ದರೆ, ನನ್ನ ನಷ್ಟವನ್ನು ಡಿಜಿಟ್ ಭರಿಸುತ್ತದೆಯೇ?
ಹೌದು, ಅಪಘಾತದ ಸಮಯದಲ್ಲಿ ಕಾರನ್ನು ಚಲಾಯಿಸುತ್ತಿದ್ದವರು ಯಾರೇ ಆಗಿರಲಿ, ಡಿಜಿಟ್ ಇನ್ಶೂರೆನ್ಸ್ ನಿಮ್ಮ ನಷ್ಟವನ್ನು ಭರಿಸುತ್ತದೆ. ಆದರೆ ಚಾಲಕನು ವ್ಯಾಲಿಡ್ ಲೈಸೆನ್ಸ್ ಅನ್ನು ಹೊಂದಿಲ್ಲದಿದ್ದರೆ ಅಥವಾ ಲರ್ನಿಂಗ್ ಲೈಸೆನ್ಸ್ ಅನ್ನು ಹೊಂದಿಲ್ಲದೇ ಸಹ-ಚಾಲಕನ ಸೀಟಿನಲ್ಲಿ ಲೈಸೆನ್ಸ್ ಹೊಂದಿರುವವರು ಇಲ್ಲದೆ ಚಾಲನೆ ಮಾಡುತ್ತಿದ್ದರೆ, ಅವರು ರಕ್ಷಣೆ ಪಡೆಯುವುದಿಲ್ಲ ಮತ್ತು ನಿಮ್ಮ ಕ್ಲೇಮ್ ಅನ್ನು ರದ್ದುಗೊಳಿಸಬಹುದು.
ನನ್ನ ಕಾರಿಗೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಸಾಕೇ?
ಹೇಯ್ , ನಿಮ್ಮ ಸ್ವಂತ ಕಾರಿಗೆ ಎಲ್ಲಾ ಹಾನಿಗಳನ್ನು ಪಾವತಿಸಲು ನೀವು ಒಪ್ಪುವಿರಾ? ಅದು ನಿಮಗೆ ವೆಚ್ಚವಾಗಬಹುದು ಎಂದು ನಿಮಗೆ ತಿಳಿದಿದೆ. ಥರ್ಡ್ ಪಾರ್ಟಿ, ವ್ಯಾಖ್ಯಾನದಂತೆ,ಇದು ಥರ್ಡ್ ಪಾರ್ಟಿಯನ್ನು ಮಾತ್ರ ಕವರ್ ಮಾಡುತ್ತದೆ. ಅಂದರೆ ನಿಮ್ಮ ಅಪಘಾತದಿಂದ ಹಾನಿಯಾಗುವ ಇತರ ಜನರು. ಥರ್ಡ್-ಪಾರ್ಟಿ ಕವರ್‌ಗೆ ಒಳಪಡದ ಹಾನಿಯನ್ನು, ಕಾಂಪ್ರೆಹೆನ್ಸಿವ್ ಪಾಲಿಸಿಯು ಕವರ್ ಮಾಡುತ್ತದೆ . ಥರ್ಡ್ ಪಾರ್ಟಿ ಮತ್ತು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಈ ಲೇಖನವನ್ನು ಓದಿ.
ಒಂದುವೇಳೆ ನಾನು ಬೇರೆ ನಗರ/ರಾಜ್ಯದಲ್ಲಿ ಅಪಘಾತಕ್ಕೊಳಗಾದರೆ ಏನಾಗುತ್ತದೆ?
ಘಟನೆಯು ಯಾವುದೇ ನಗರ ಅಥವಾ ರಾಜ್ಯವನ್ನು ಲೆಕ್ಕಿಸದೆಯೇ ನಿಮ್ಮನ್ನು ಡಿಜಿಟ್ ಇನ್ಶೂರೆನ್ಸ್ ಕವರ್ ಮಾಡುತ್ತದೆ .
ಈ ಪಾಲಿಸಿಯ ಭಾಗವಾಗಿ ನೀಡಲಾಗುವ ಗರಿಷ್ಠ ಪರಿಹಾರ ಎಷ್ಟು ?
ಥರ್ಡ್ ಪಾರ್ಟಿಗೆ ವೈಯಕ್ತಿಕ ಹಾನಿಯ ಸಂದರ್ಭದಲ್ಲಿ, ಯಾವುದೇ ಗರಿಷ್ಠ ಪರಿಹಾರವಿಲ್ಲ ಆದರೆ ಥರ್ಡ್ ಪಾರ್ಟಿಯ ಆಸ್ತಿ ಅಥವಾ ವಾಹನ ಹಾನಿಯ ಸಂದರ್ಭದಲ್ಲಿ, ಗರಿಷ್ಠ ಪರಿಹಾರ ಮೊತ್ತವು 7.5 ಲಕ್ಷ ರೂಗಳವರೆಗೆ ಲಭ್ಯವಿರುತ್ತದೆ.
ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಆನ್‌ಲೈನ್‌ನಲ್ಲಿ ಕ್ಲೇಮ್ ಮಾಡುವಾಗ ನಾನು ಯಾವ ದಾಖಲೆಗಳನ್ನು ಸಲ್ಲಿಸಬೇಕು?
ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಕ್ಲೈಮ್‌ನಲ್ಲಿ ಕೇಳದ ಹೊರತು ನಿಮಗೆ ವೈಯಕ್ತಿಕವಾಗಿ ಯಾವುದೇ ದಾಖಲೆಗಳ ಅಗತ್ಯವಿಲ್ಲ. ಥರ್ಡ್-ಪಾರ್ಟಿ ಕ್ಲೈಮ್‌ನ ಸಂದರ್ಭದಲ್ಲಿ, ಆಯಾ ಥರ್ಡ್-ಪಾರ್ಟಿಯು ಅವನು/ಅವಳು ಉಂಟಾಗಿರುವ ನಷ್ಟ ಮತ್ತು ಹಾನಿಗಳಿಗೆ ಪರಿಹಾರವನ್ನು ಪಡೆಯಲು ಬಯಸಿದರೆ ಎಫ್‌ಐಆರ್ ಚಾರ್ಜ್ ಶೀಟ್ ಅನ್ನು ಸಲ್ಲಿಸಬೇಕಾಗುತ್ತದೆ.