ನಗದುರಹಿತ ಕಾರು ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಒಂದು ನಗದುರಹಿತ ಇನ್ಶೂರೆನ್ಸ್ ಪಾಲಿಸಿ ನಿಮಗೆ ಕಾರು ಇನ್ಶೂರೆನ್ಸ್ ಪಾಲಿಸಿಯ ಎಲ್ಲಾ ಲಾಭಗಳು, ಎಂದರೆ, ಅಪಘಾತದ ನಂತರ ತನ್ನ ಜೇಬಿನಿಂದ ಹಣ ಖರ್ಚು ಮಾಡದೆಯೇ ಕಾರು ರಿಪೇರಿ ಮಾಡಿಸುವುದು, ಇತ್ಯಾದಿಗಳಿಗೆ ಅನುಮತಿ ನೀಡುತ್ತದೆ.
ಇಂತಹ ರಿಪೇರಿ ಗಳ ಬಿಲ್ಲನ್ನು ನೇರವಾಗಿ ನಮಗೆ(ಇನ್ಶೂರರ್ ಗೆ!) ಕಳಿಸಲಾಗುತ್ತದೆ ಹಾಗೂ ನಾವು ಗ್ಯಾರೇಜ್ ನವರೊಂದಿಗೆ ಬಿಲ್ ಅನ್ನು ಸೆಟ್ಲ್ ಮಾಡುತ್ತೇವೆ. ಆದ್ದರಿಂದ ನೀವು ನಮ್ಮ ಕ್ಯಾಷ್ಲೆಸ್ ನೆಟ್ವರ್ಕ್ ನ ಭಾಗವಾದ ಯಾವುದೇ ಗ್ಯಾರೇಜ್ ಗೆ ಹೋಗಿ, ಯಾವ ಹಣವನ್ನು ಖರ್ಚು ಮಾಡದೆಯೇ(ನಿಮ್ಮ ಕಡಿತಗಳು ಹಾಗೂ ಡಿಪ್ರಿಸಿಯೇಷನ್ ಅನ್ನು ಹೊರತುಪಡಿಸಿ) ನಿಮ್ಮ ಕಾರಿನ ರಿಪೇರಿ ಮಾಡಿಸಬಹುದು.
ಸಾಂಪ್ರದಾಯಿಕ ಮರುಪಾವತಿ ಕ್ಲೈಮ್ ಗಳಿಗೆ ಹೋಲಿಸಿದರೆ, ನಗದುರಹಿತ ಕ್ಲೈಮ್ ಅತೀ ಶೀಘ್ರ, ಸರಳ ಹಾಗೂ ಗೊಂದಲ ರಹಿತವಾಗಿರುತ್ತದೆ. ಡಿಜಿಟ್ ನಲ್ಲಿ, ನಾವು 6 ತಿಂಗಳುಗಳ ವಾರಂಟಿಯ ಜೊತೆ ಮನೆಬಾಗಿಲಿನಿಂದ ಪಿಕಪ್ ಡ್ರಾಪ್ ಅನ್ನೂ ನೀಡುತ್ತೇವೆ!
ಆದರೆ ನೆನಪಿಡಿ, ಇದು ನಿಮ್ಮ ಕಾರು ಇನ್ಶೂರೆನ್ಸ್ ನಲ್ಲಿ ಕವರ್ ಆದ ಲಾಭಗಳಿಗೆ ಮಾತ್ರ ಅನ್ವಯಿಸುತ್ತದೆ. ಆದ್ದರಿಂದ, ಆಗಿರುವ ಹಾನಿ ನಿಮ್ಮ ಕಾರು ಇನ್ಶೂರೆನ್ಸ್ ನಲ್ಲಿ ಕವರ್ ಆಗದೇ ಇದ್ದರೆ, ನೀವು ನಿಮ್ಮ ಸ್ವಂತ ಜೇಬಿನಿಂದಲೇ ಪಾವತಿ ಮಾಡಬೇಕಾಗುತ್ತದೆ. ಉದಾಹರಣೆಗೆ, ನಿಮ್ಮ ಎಂಜಿನಿಗೆ ನೀರಿನಿಂದ ಆದ ಹಾನಿಯನ್ನು ಹಲವು ಮೂಲ ಪಾಲಿಸಿಗಳು ಕವರ್ ಮಾಡುವುದಿಲ್ಲ.
ಇದರ ಜೊತೆ, ಡಿಡಕ್ಟಿಬಲ್ಸ್ ಹಾಗೂ ಡಿಪ್ರಿಸಿಯೇಷನ್ ರೂಪದಲ್ಲಿ ಬಿಲ್ಲಿನ ಒಂದು ಚಿಕ್ಕ ಭಾಗವನ್ನು ಪಾವತಿಸಬೇಕಾಗುತ್ತದೆ, ನಿಮ್ಮ ಕಾರು ಇನ್ಶೂರೆನ್ಸ್ ಪಾಲಿಸಿಯ ಷರತ್ತು ಹಾಗೂ ನಿಯಮಗಳ ಪ್ರಕಾರ.
ನಗದುರಹಿತ ಕಾರು ಇನ್ಶೂರೆನ್ಸ್ ಹೇಗೆ ಕೆಲಸ ಮಾಡುತ್ತದೆ ಎಂದರೆ, ಇನ್ಶೂರರ್ ಗೆ ಭಾರತದಾದ್ಯಂತ ಗ್ಯಾರೇಜ್ ಗಳ ಜೊತೆ ಟೈ ಅಪ್(ಸಹಯೋಗ) ಇರುತ್ತದೆ. ಇಂತಹ ಅಧಿಕೃತ ಗ್ಯಾರೇಜ್ ಗಳನ್ನು ಗ್ಯಾರೇಜ್ ಗಳ ನೆಟ್ವರ್ಕ್ ಎಂದು ಕರೆಯಲಾಗುತ್ತದೆ ಹಾಗೂ ಇವುಗಳು ಅಪಘಾತದ ಸಂದರ್ಭದಲ್ಲಿ ನೀವು ಹಾನಿಗಳಿಗಾಗಿ ಕ್ಲೈಮ್ ಮಾಡಿದರೆ ನಿಮಗೆ ನಗದುರಹಿತ ಕಾರು ರಿಪೇರಿ ಸೇವೆಗಳನ್ನು ಒದಗಿಸುತ್ತಾರೆ.
ಕಾರನ್ನು ರಿಪೇರಿಗೆ, ಇನ್ಶೂರರ್ ನ ನೆಟ್ವರ್ಕ್ ನ ಭಾಗವಾದ, ಗ್ಯಾರೇಜ್ ಗೆ ಕಳಿಸಿದರೆ ಮಾತ್ರ ನಗದುರಹಿತ ಕಾರು ಇನ್ಶೂರೆನ್ಸ್ ಕೆಲಸ ಮಾಡುತ್ತದೆ.ನೆಟ್ವರ್ಕ್ ಗ್ಯಾರೇಜ್ ಎಂದರೆ, ಇದರಲ್ಲಿ ತನ್ನ ಎಲ್ಲಾ ಪಾಲಿಸಿದಾರರಿಗೆ ನಗದುರಹಿತ ಕಾರು ರಿಪೇರಿ ಸೇವೆಗಳನ್ನು ಒದಗಿಸಬೇಕೆಂದು ಇನ್ಶೂರರ್ ಮತ್ತು ಗ್ಯಾರೇಜ್ ನಡುವೆ ಒಪ್ಪಂದ ಇರುತ್ತದೆ.
ನಗದುರಹಿತ ಗ್ಯಾರೇಜ್ ಸೌಲಭ್ಯಕ್ಕೆ ಪ್ರವೇಶ ಪಡೆಯಬೇಕೆಂದರೆ, ನೀವು ಕೇವಲ ಒಂದು ಒಳ್ಳೆಯ ಇನ್ಶೂರೆನ್ಸ್ ಕಂಪನಿಯಿಂದ ಕಾಂಪ್ರೆಹೆನ್ಸಿವ್ ಕಾರು ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬೇಕು.
ಡಿಜಿಟ್ ನಲ್ಲಿ, ನಾವು ಇದನ್ನು ಮನೆಬಾಗಿಲಿಗೆ ಪಿಕಪ್ ಡ್ರಾಪ್ ಜೊತೆ ರಿಪೇರಿಗಳ ಮೇಲೆ 6 ತಿಂಗಳ ವಾರಂಟಿಯನ್ನೂ ನೀಡುತ್ತೇವೆ.
ಇನ್ಶೂರೆನ್ಸ್ ಖರೀದಿಸುವ ಮೊದಲು, ಇನ್ಶೂರರ್ ಒದಗಿಸಿದ ನೆಟ್ವರ್ಕ್ ಗ್ಯಾರೇಜ್ ಗಳ ಪಟ್ಟಿಯನ್ನು ಪರಿಶೀಲಿಸಿ ಗ್ಯಾರೇಜ್ ನಿಮ್ಮ ಹತ್ತಿರ ಇದೆಯೋ ಎಂದು ಚೆಕ್ ಮಾಡಿಕೊಌ. ನಂತರ ಆರಾಮವಾಗಿ ಕುಳಿತುಕೊಂಡು, ನಮಗೆ ಎಲ್ಲವನ್ನೂ ನಿರ್ವಹಿಸಲು ಬಿಡಿ.
ಹತ್ತಿರದಲ್ಲಿ ನಗದುರಹಿತ ಗ್ಯಾರೇಜ್ ಇಲ್ಲದಿದ್ದರೆ, ಉದಾಹರಣೆ ನೀವು ದೂರದ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದರೆ, ಡಿಜಿಟ್ ರಿಪೇರಿಯ 80% ಪಾವತಿಯನ್ನು ಮುಂಗಡವಾಗಿ ವರ್ಕ್ ಶಾಪಿಗೇ ಮಾಡುತ್ತದೆ ಹಾಗೂ ಇದರಿಂದ ದುರಸ್ತಿ ಕಾರ್ಯವು ಸರಿಯಾದ ಸಮಯದಲ್ಲಿ ಆರಂಭವಾಗುತ್ತದೆ.
ಕಾರ್ಯ ಆರಂಭವಾದ ಮೇಲೆ, ನಾವು ವರ್ಕ್ ಶಾಪಿಗೆ ಉಳಿದ ಪಾವತಿಯನ್ನು ಮಾಡುತ್ತೇವೆ, ಕಡಿತಗಳು ಹಾಗೂ ಡಿಪ್ರಿಸಿಯೇಷನ್ ಅನ್ನು ಹೊರತುಪಡಿಸಿ, ಆದರೆ ಇನ್ವಾಯ್ಸ್(ಬೆಲೆ ಪಟ್ಟಿ) ನಮ್ಮ ಹೆಸರಿನಲ್ಲಿದ್ದರೆ ಮಾತ್ರ.
ನಾವು ನಮ್ಮ ಗ್ರಾಹಕರನ್ನು ವಿ ಐ ಪಿ ಗಳಂತೆ ನೋಡಿಕೊಳ್ಳುತ್ತೇವೆ, ಹೇಗೆಂದು ತಿಳಿಯಿರಿ…
ನಗದುರಹಿತ ಕಾರು ಇನ್ಶೂರೆನ್ಸ್ ಪಾಲಿಸಿಗಾಗಿ ಕ್ಲೈಮ್ ಮಾಡುವ ಪ್ರಕ್ರಿಯೆ ತುಂಬಾ ಸರಳವಾಗಿದೆ. ನೀವು ಕೇವಲ ಮುಂಚಿತವಾಗಿಯೇ ನಿಮ್ಮ ಇನ್ಶೂರೆನ್ಸ್ ಕಂಪನಿಯ ಜೊತೆ ಸಂಯೋಜನೆ ಹೊಂದಿರುವ ಸೇವೆಗಳ ಪಟ್ಟಿ ಹಾಗೂ ದುರಸ್ತಿ ಕೇಂದ್ರಗಳ ಬಗ್ಗೆ ಅರಿತಿರಬೇಕು.
ನಿಮ್ಮ ಆಯ್ಕೆಯ ಯಾವುದೇ ಗ್ಯಾರೇಜ್ ನೆಟ್ವರ್ಕ್ ಗಳಲ್ಲಿ ಒಂದರೊಳಗಡೆ ಬಂದು, ನೀವು ನಿಮ್ಮ ನಗದುರಹಿತ ಕಾರು ಇನ್ಶೂರೆನ್ಸ್ ಪಾಲಿಸಿ ವಿವರಗಳನ್ನು ನೀಡಬಹುದು.
ಅಲ್ಲಿಂದ ನಮ್ಮ ಗ್ಯಾರೇಜ್ ನೆಟ್ವರ್ಕ್ ಗಳು ಎಲ್ಲವನ್ನೂ ನೋಡಿಕೊಳ್ಳುತ್ತವೆ. ನಿಮ್ಮ ಕಾರಿಗಾದ ಹಾನಿಯ ಪ್ರಮಾಣದಿಂದ ಹಿಡಿದು ಅದಕ್ಕೆ ತಗಲುವ ರಿಪೇರಿಯ ವೆಚ್ಚದ ಮೌಲ್ಯಮಾಪನ, ಬಿಲ್ಲನ್ನು ಇನ್ಶೂರೆನ್ಸ್ ಕಂಪನಿಗೆ ಕಳಿಸುವುದು, ಖಂಡಿತವಾಗಿಯೂ ನಿಮ್ಮ ಕಸ್ಟಮೈಜ್ಡ್ ಕಾರು ಇನ್ಶೂರೆನ್ಸ್ ಪಾಲಿಸಿಯ ಷರತ್ತು ಹಾಗೂ ನಿಯಮಗಳ ಪ್ರಕಾರ!.
ನಗದುರಹಿತ ಕ್ಲೈಮ್ ಗಳು 100% ನಗದುರಹಿತವಾಗಿರುವುದಿಲ್ಲ ಎಂಬುವುದು ಇಲ್ಲಿ ಗಮನಿಸಬೇಕಾದ ವಿಷಯವಾಗಿದೆ. ಡಿಡಕ್ಟಿಬಲ್ಸ್(ಕಡಿತಗಳು) ಹಾಗೂ ಡಿಪ್ರಿಸಿಯೇಷನ್ ರೂಪದಲ್ಲಿ ನೀವು ಕ್ಲೈಮ್ ಮೊತ್ತದ ಸಣ್ಣ ಭಾಗವನ್ನು ಪಾವತಿಸಬೇಕಾಗುತ್ತದೆ, ಯಾಕೆಂದರೆ ಇವುಗಳನ್ನು ನಿಮ್ಮ ಇನ್ಶೂರರ್ ಕವರ್ ಮಾಡುವುದಿಲ್ಲ.
ಡಿಪ್ರಿಸಿಯೇಷನ್ ಎಂದರೆ ಹಲವು ವರ್ಷಗಳ ಬಳಕೆಯಿಂದಾಗಿ ನಿಮ್ಮ ಕಾರು ಹಾಗೂ ಅದರ ಭಾಗಗಳಲ್ಲಿ ಉಂಟಾದ ಸವೆತದ ಕಾರಣ ನಿಮ್ಮ ಕಾರಿನ ಮೌಲ್ಯದ ಕುಸಿತ.
ವಾಸ್ತವದಲ್ಲಿ, ನಿಮ್ಮ ಹೊಚ್ಚಹೊಸ ಕಾರು ಶೋರೂಂ ನಿಂದ ಹೊರ ಬಂದ ಮರುಕ್ಷಣವೇ, ಅದರ ಮೌಲ್ಯದಲ್ಲಿ 5%! ಡಿಪ್ರಿಯೇಷನ್ ಆಗಿದೆ ಎನ್ನಲಾಗುತ್ತದೆ!
ನೀವು ಕ್ಲೈಮ್ ಫೈಲ್ ಮಾಡಿದಾಗ, ಇನ್ಶೂರರ್ ಸಾಮಾನ್ಯವಾಗಿ ಪಾವತಿ ಮಾಡುವ ಮುಂಚೆ ಡಿಪ್ರಿಸಿಯೇಷನ್ ದರವನ್ನು ಕಡಿತ ಮಾಡುತ್ತಾರೆ.
ಕಾರು ಇನ್ಶೂರೆನ್ಸ್ ನಲ್ಲಿ ಎರಡು ರೀತಿಯ ಡಿಪ್ರಿಸಿಯೇಷನ್ ಗಳಿವೆ -ಸಂಪೂರ್ಣ ಕಾರಿನ ಡಿಪ್ರಿಸಿಯೇಷನ್ ಹಾಗೂ ಕಾರಿನ ಬಿಡಿ ಭಾಗಗಳ ಮತ್ತು ಇತರ ವಿವಿಧ ಭಾಗಗಳ ಡಿಪ್ರಿಸಿಯೇಷನ್. ಡಿಪ್ರಿಸಿಯೇಷನ್ ಅನ್ನು ಹೇಗೆ ಕ್ಯಾಲ್ಕುಲೇಟ್ ಮಾಡಬೇಕು ಎನ್ನುವುದಕ್ಕೆ ಐ ಆರ್ ಡಿ ಎ ಐ ಕೆಲವು ನಿಯಮಗಳನ್ನು ಮುಂದಿಟ್ಟಿದೆ.
ಭಾಗಶಃ ಹಾನಿಯಾಗಿರುವ ಎಂದರೆ ಸಣ್ಣ ಪುಟ್ಟ ವಾಹನ ಹಾನಿಯಾದ ಸಂದರ್ಭದಲ್ಲಿ, ಕ್ಲೈಮ್ ಸಮಯದಲ್ಲಿ ಕಾರಿನ ಭಾಗಗಳ ಡಿಪ್ರಿಸಿಯೇಷನ್ ಅನ್ನು ಪರಿಗಣಿಸಲಾಗುವುದಿಲ್ಲ. ಈ ಕೆಳಗಡೆ ನೀಡಿದಂತೆ ಕಾರಿನ ಭಾಗಗಳ ಡಿಪ್ರಿಸಿಯೇಷನ್ ದರ ವಿಭಿನ್ನವಾಗಿರುತ್ತದೆ:
ಸಂಪೂರ್ಣ ನಷ್ಟದ ಸಂದರ್ಭ ಎದುರಾದಲ್ಲಿ, ಉದಾಹರಣೆಗೆ ಕಳವು, ಆಗ ವಾಹನದ ಡಿಪ್ರಿಸಿಯೇಷನ್ ನ ಮಹತ್ವ ತಿಳಿಯುತ್ತದೆ. ಇದು ನಿಮ್ಮ ಕಾರಿನ ವಯಸ್ಸಿನ ಮೇಲೆ ಆಧರಿತವಾಗಿದೆ.
ಡಿಡಕ್ಟಿಬಲ್ಸ್ ಎಂದರೆ ಇನ್ಶೂರರ್ ಉಳಿದ ಪಾವತಿ ಮಾಡುವ ಮುಂಚೆ ನೀವು ನಿಮ್ಮ ಜೇಬಿನಿಂದಲೇ ಪಾವತಿಸಬೇಕಾದ ಇನ್ಶೂರ್ಡ್ ವೆಚ್ಚದ ಒಂದು ಭಾಗವಾಗಿದೆ.
ಕಾರು ಇನ್ಶೂರೆನ್ಸ್ ನಲ್ಲಿ, ಹೆಚ್ಚಾಗಿ ಕ್ಲೈಮ್ ಆಧಾರದ ಪ್ರಕಾರ ಈ ಡಿಡಕ್ಟಿಬಲ್ ಗಳು ಅನ್ವಯಿಸುತ್ತವೆ. ಅಂದರೆ, ನೀವು ₹15,000 ವೆಚ್ಚದ ಹಾನಿಗೆ ಕ್ಲೈಮ್ ಫೈಲ್ ಮಾಡಿದರೆ ಹಾಗೂ ಡಿಡಕ್ಟಿಬಲ್ ಗಳು ₹1,000 ಆಗಿದ್ದರೆ - ಇನ್ಶೂರರ್ ನಿಮ್ಮ ಕಾರು ರಿಪೇರಿಗಾಗಿ ₹14,000 ಪಾವತಿಸುತ್ತಾರೆ.
ಡಿಡಕ್ಟಿಬಲ್ ಗಳು ಎರಡು ಪ್ರಕಾರದ್ದಾಗಿರುತ್ತವೆ -ಕಂಪಲ್ಸರಿ ಡಿಡಕ್ಟಿಬಲ್ಸ್ ಹಾಗೂ ವಾಲಂಟರಿ ಡಿಡಕ್ಟಿಬಲ್ಸ್.
ನೀವು ಕಾರು ಇನ್ಶೂರೆನ್ಸ್ ಪಾಲಿಸಿ ಕೊಳ್ಳುವಾಗಲೇ ಎಷ್ಟು ಪಾವತಿಸಲು ಬಯಸುತ್ತೀರಿ ಎಂದು ನಿರ್ಧರಿಸಬೇಕಾಗುತ್ತದೆ, ಹಾಗೂ ಇದನ್ನೇ ಪ್ರತೀ ಕ್ಲೈಮ್ ಗೆ ಅನ್ವಯಿಸಲಾಗುತ್ತದೆ.
ನಿಮ್ಮ ಇನ್ಶೂರರ್, ಒಟ್ಟು ವಾಲಂಟರಿ ಮತ್ತು ಕಡ್ಡಾಯ ಡಿಡಕ್ಟಿಬಲ್ ಕ್ಕಿಂತ ಹೆಚ್ಚಾಗಿರುವ ಕ್ಲೈಮ್ ನ ಒಂದು ಭಾಗವನ್ನಷ್ಟೇ ಪಾವತಿ ಮಾಡುತ್ತಾರೆ.
ಕಂಪಲ್ಸರಿ(ಕಡ್ಡಾಯ)ಡಿಡಕ್ಟಿಬಲ್ - ಈ ತರಹದ ಡಿಡಕ್ಟಿಬಲ್ ನಲ್ಲಿ, ಪಾಲಿಸಿದಾರನಿಗೆ ಮೋಟಾರ್ ಇನ್ಶೂರೆನ್ಸ್ ಕ್ಲೈಮ್ ನ ಒಂದು ಭಾಗವನ್ನು ಪಾವತಿಸಲೇಬೇಕಾಗುತ್ತದೆ.
ಐ ಆರ್ ಡಿ ಎ ಐ ನಿಭಂದನೆಗಳ ಪ್ರಕಾರ, ಕಾರು ಇನ್ಶೂರೆನ್ಸ್ ನ ಈ ಕಡ್ದಾಯ ಡಿಡಕ್ಟಿಬಲ್ ನ ಫಿಕ್ಸ್ಡ್ ಮೊತ್ತವನ್ನು ಕಾರು ಎಂಜಿನ್ ನ ಕ್ಯೂಬಿಕ್ ಸಾಮರ್ಥ್ಯದ ಮೇಲೆ ಆಧರಿಸಲಾಗುತ್ತದೆ. ಪ್ರಸ್ತುತವಾಗಿ, ಇದನ್ನು ಹೀಗೆ ಸೆಟ್ ಮಾಡಲಾಗಿದೆ :
ವಾಲಂಟರಿ(ಸ್ವ ಇಚ್ಛೆಯ) ಡಿಡಕ್ಟಿಬಲ್ - ವಾಲಂಟರಿ ಡಿಡಕ್ಟಿಬಲ್ ಎಂದರೆ ಸಾಮನ್ಯವಾಗಿ ಇನ್ಶೂರರ್ ಪಾವತಿ ಮಾಡಬಹುದಾದ ಮೊತ್ತವನ್ನು, ನೀವೇ ನಿಮ್ಮ ಜೇಬಿನಿಂದ ಪಾವತಿಸುವ ಆಯ್ಕೆ ಮಾಡುತ್ತೀರಿ.
ನೀವು ನಿಮ್ಮ ಇನ್ಶೂರೆನ್ಸ್ ಕವರ್ ನಲ್ಲಿ ವಾಲಂಟರಿ ಡಿಡಕ್ಟಿಬಲ್ ನ ಆಯ್ಕೆ ಮಾಡಿದರೆ, ಇದು ನಿಮ್ಮ ಕಾರು ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆಗೊಳುಸುತ್ತದೆ, ಯಾಕೆಂದರೆ ಇದರಿಂದ ಇನ್ಶೂರರ್ ಗೆ ಅಪಾಯ ಕಡಿಮೆ ಇರುತ್ತದೆ.
ಆದರೆ, ಇದರರ್ಥ ಏನಾಗುತ್ತದೆಂದರೆ ನಿಮ್ಮ ಕಾರಿಗೆ ಯಾವುದೇ ಹಾನಿಯಾದ ಸಂದರ್ಭದಲ್ಲಿ ಹೆಚ್ಚು ಹಣವನ್ನು ನೀವೇ ಪಾವತಿಸಬೇಕಾಗುತ್ತದೆ( ಇದು ನಿಮ್ಮ ಇತರ ಖರ್ಚುಗಳ ಮೇಲೆ ಪರಿಣಾಮ ಬೀರಬಹುದು) ಆದ್ದರಿಂದ ಇದನ್ನು ಪರಿಗಣಿಸಲು ಮರೆಯದಿರಿ.
ನಿಮಗೆ ನಗದುರಹಿತ ಕ್ಲೈಮ್ ಎಂದರೇನು ಎಂದು ತಿಳಿದಮೇಲೆ, ನೀವು ಬಹುಶಃ ಯಾವುದು ಉತ್ತಮ ಎಂದು ಯೋಚಿಸುತ್ತಿದ್ದೀರಿ - ನಗದುರಹಿತ ಕ್ಲೈಮ್ ಅಥವಾ ಮರುಪಾವತಿ?
ಸರಿ, ಈ ಪ್ರಶ್ನೆಯನ್ನು ಉತ್ತರಿಸುವ ಮುಂಚೆ ಮರುಪಾವತಿ ಕ್ಲೈಮ್ ಏನೆಂದು ಸಹ ತಿಳಿದುಕೊಳ್ಳಿ
ಹೆಸರೇ ಸೂಚಿಸುವ ಹಾಗೆ, ರೀಎಂಬರ್ಸ್ಮೆಂಟ್ ಕ್ಲೈಮ್ ಅಥವಾ ಮರುಪಾವತಿ ಕ್ಲೈಮ್ ಎಂದರೆ ನೀವು ನಿಮಗೆ ತಗಲುವ ರಿಪೇರಿ ವೆಚ್ಚಗಳನ್ನು ತಾವೇ ಭರಿಸಿ, ನಂತರ ಬಿಲ್ಲ್ ಮತ್ತು ಸೂಕ್ತ ದಾಖಲೆಗಳನ್ನು ಸಲ್ಲಿಸಿ, ನಿಮ್ಮ ಇನ್ಶೂರೆನ್ಸ್ ಕಂಪನಿಯಿಂದ ಖರ್ಚು ಮಾಡಿದ ಹಣವನ್ನು ಹಿಂದೆ ಪಡೆಯುತ್ತೀರಿ.
ಈ ಎರಡರ ನಡುವೆ ಪ್ರಾಥಮಿಕ ವ್ಯತ್ಯಾಸ ಏನೆಂದರೆ, ಮರುಪಾವತಿ ಸಂದರ್ಭದಲ್ಲಿ ಮೊದಲು ನೀವು ಒಟ್ಟು ಮೊತ್ತವನ್ನು ತಮ್ಮ ಜೇಬಿನಿಂದಲೇ ನೀಡಿ, ನಂತರ ಮರುಪಾವತಿಗಾಗಿ ಬಿಲ್ ಹಾಗೂ ಸೂಕ್ತ ದಾಖಲೆಗಳ ಸಲ್ಲಿಕೆ ಹಾಗೂ ಪರಿಶೀಲನೆಗಳ ಹೆಚ್ಚುವರಿ ಹಂತವನ್ನು ದಾಟಬೇಕಾಗುತ್ತದೆ.
ಇನ್ನೊಂದೆಡೆ ನಗದುರಹಿತ ಕ್ಲೈಮ್ ನಲ್ಲಿ, ನೀವು ಕೇವಲ ಕ್ಲೈಮ್ ನ ಒಂದು ಸಣ್ಣ ಭಾಗವನ್ನು ಜೇಬಿನಿಂದ ನೀಡಬೇಕಾಗುತ್ತದೆ(ಡಿಪ್ರಿಸಿಯೇಷನ್ ಹಾಗೂ ಡಿಡಕ್ಟಿಬಲ್ಸ್) ಹಾಗೂ ಇನ್ಶೂರರ್ ತಾವಾಗಿಯೇ ಎಲ್ಲಾ ಪಾವತಿಗಳನ್ನು ಮಾಡುತ್ತಾರೆ.