ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್

9000+ Cashless
Network Garages
96% Claim
Settlement (FY23-24)
24*7 Claims
Support
Click here for new car
I agree to the Terms & Conditions
9000+ Cashless
Network Garages
96% Claim
Settlement (FY23-24)
24*7 Claims
Support
Click here for new car
I agree to the Terms & Conditions
ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಆನ್ಲೈನ್ ನಲ್ಲಿ ಲಭ್ಯವಿರುವ ಲೆಕ್ಕಹಾಕುವಿಕೆ ವಿಧಾನವಾಗಿದ್ದು ನೀವು ಭರಿಸಬಹುದಾದ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಎಷ್ಟೆಂಬುದನ್ನು ತಿಳಿಯಲು ನಿಮಗೆ ನೆರವಾಗುತ್ತದೆ. ನೀವು ಕೇವಲ ನಿಮ್ಮ ವಾಹನದ ನೊಂದಾಯಿತ ಸಂಖ್ಯೆಯನ್ನು ನಮೂದಿಸಿದರೆ ಸಾಕು, ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ನಿಮ್ಮ ಪ್ರೀಮಿಯಂ ಕುರಿತು ಮಾಹಿತಿ ನೀಡುತ್ತದೆ. ಇಷ್ಟವಿದ್ದಲ್ಲಿ ನೀವು ನಿಮಗಿಷ್ಟವಾದ ಆಡ್-ಆನ್ ಕವರ್ ಗಳನ್ನು ಸೇರಿಸಿ ಸಂಚಿತವಾಗುವ ಎನ್.ಸಿ.ಬಿ. ತಿಳಿಯಬಹುದು.
Digit ಅವರ ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಕಾರಿಗೆ ಸರಿಯಾದ ಇನ್ಶೂರೆನ್ಸ್ ಪಡೆಯುವುದು ಹೇಗೆಂದು ಈ ಕೆಳಗಿನ ಹಂತಗಳ ಮೂಲಕ ಸರಳವಾಗಿ ತಿಳಿಯಿರಿ!
ನಿಮ್ಮ ಕಾರಿನ ಮೇಕ್, ಮಾಡಲ್, ವೇರಿಯಂಟ್, ನೊಂದಣಿ ದಿನಾಂಕ ಮತ್ತು ನಗರದ ಮಾಹಿತಿಗಳನ್ನು ತುಂಬಿ.
"ಗೆಟ್ ಕೋಟ್" ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಪ್ಲ್ಯಾನ್ ಆಯ್ಕೆ ಮಾಡಿ.
ಥರ್ಡ್ ಪಾರ್ಟಿ ಹೊಣೆಗಾರಿಕೆ ಅಥವಾ ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಆಯ್ಕೆ ಮಾಡಿ.
ನಿಮ್ಮ ಕಡೆಯ ಇನ್ಶೂರೆನ್ಸ್ ಪಾಲಿಸಿ ಕುರಿತು ತಿಳಿಸಿ - ಅವಧಿ ಪೂರ್ಣಗೊಂಡ ದಿನಾಂಕ, ಮಾಡಲಾದ ಕ್ಲೈಮುಗಳು ಹಾಗೂ ಗಳಿಸಿದ ಕ್ಲೈಮ್ ಬೋನಸ್.
ಈಗ ಲೋಡ್ ಆದ ಪುಟದ ಕೆಳಗಿನ ಬಲಬದಿಯಲ್ಲಿ ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ನೋಡಬಹುದು.
ನೀವು ಸ್ಟ್ಯಾಂಡರ್ಡ್/ಕಾಂಪ್ರೆಹೆನ್ಸಿವ್ ಪ್ಲ್ಯಾನ್ ಆಯ್ಕೆ ಮಾಡಿದ್ದಲ್ಲಿ, ಐಡಿವಿ ಸೆಟ್ ಮಾಡಿ, ನಂತರ ಝೀರೋ ಡೆಪ್ರಿಸಿಯೇಷನ್, ರಿಟರ್ನ್ ಟು ಇನ್ವಾಯ್ಸ್, ಗೇರ್ ಆಂಡ್ ಇಂಜಿನ್ ಪ್ರೊಟೆಕ್ಷನ್ ಹಾಗೂ ಇನ್ನೂ ಅನೇಕ ಆಡ್-ಆನ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿಮಗೆ ಬೇಕಾದ ರೀತಿಯಲ್ಲಿ ಮಾರ್ಪಾಡು ಮಾಡಿಕೊಳ್ಳಬಹುದು.
ಈಗ ನಿಮ್ಮ ಬಲಬದಿಯಲ್ಲಿ ಲೆಕ್ಕ ಹಾಕಲಾದ ಅಂತಿಮವಾದ ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ನೋಡಬಹುದು.
ಯಾವುದಾದರೂ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಪಡೆಯುವುದೇ ಅಥವಾ ನೀವೇ ಸ್ವತಃ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಲೆಕ್ಕ ಹಾಕಿ ನಿಮಗೆ ಸೂಕ್ತವಾದ ಪ್ಲ್ಯಾನ್ ಪಡೆಯುವುದೇ ಎಂಬ ಗೊಂದಲದಲ್ಲಿರುವಿರಾ? ಹಾಗಾದರೆ, ಈ ಕೆಳಗಿನ ಕಾರಣಗಳಿಗಾಗಿ ಎರಡನೆಯದ್ದನ್ನು ಪಾಲಿಸಿ ಹಾಗೂ ಭಾರತದಲ್ಲಿ ಅದಕ್ಕಾಗಿ ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಅನ್ನು ಬಳಸಿ.
ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ, ಪ್ರೀಮಿಯಂ ಮೊತ್ತವು ಕಾರಿನ ಬಾಳಿಕೆ ಅವಧಿಯ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ, ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವು ಹಳೆ ಕಾರಿಗಿಂತ ಹೊಸ ಕಾರಿನ ಮೇಲೆ ಹೆಚ್ಚಾಗಿರಬಹುದು. ಆದರೆ, ಚಿಂತಿಸದಿರಿ ನಿಮ್ಮ ಐಡಿವಿ ಮತ್ತು ಇನ್ಶೂರೆನ್ಸ್ ಮೊತ್ತವು ಸಹ ಹೆಚ್ಚಾಗಿರುತ್ತದೆ, ಏಕೆಂದರೆ ನಿಮ್ಮ ಬಳಿ ಇರುವ ಕಾರ್ ಹೊಚ್ಚ ಹೊಸದಾಗಿರುತ್ತದೆ.
ನೀವು ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಳಸಿ, ನಿಮಗೆ ಲಭ್ಯವಿರುವ ಆಯ್ಕೆಗಳ ಆಧಾರದ ಮೇಲೆ ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತದಲ್ಲಿ ಆಗುವ ವ್ಯತ್ಯಾಸವನ್ನು ತಿಳಿಯಬಹುದು.
ನಿಮ್ಮ ಕಾರ್ ಹಳೆಯದಾಗಿದ್ದಲ್ಲಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವು ಹೊಸ ಕಾರಿಗೆ ತಗಲುವ ಮೊತ್ತಕ್ಕಿಂತ ಸಾಕಷ್ಟು ಕಡಿಮೆಯಾಗಿರಬಹುದು. ಏಕೆಂದರೆ, ಪ್ರೀಮಿಯಂ ಮೊತ್ತವು ಕಾರಿನ ಬಾಳಿಕೆ ಅವಧಿಯ ಮೇಲೆ ಅವಲಂಬಿತವಾಗಿರುತ್ತದೆ.
ಹೆಚ್ಚುವರಿಯಾಗಿ, ಕಾರ್ 5 ವರ್ಷಗಳಿಗೂ ಹೆಚ್ಚು ಹಳೆಯದಾಗಿದ್ದಲ್ಲಿ ಅದಕ್ಕೆ ಕೆಲವು ಆಡ್-ಆನ್ ಗಳಾದ ಝೀರೋ ಡೆಪ್ರಿಸಿಯೇಷನ್ ಕವರ್ ಹಾಗೂ ರಿಟರ್ನ್ ಟು ಇನ್ವಾಯ್ಸ್ ಕವರ್ ಅನ್ವಯವಾಗುವುದಿಲ್ಲ. ಹಾಗಾಗಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವು ಕಡಿಮೆಯಾಗುತ್ತದೆ.
ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ನಿಮ್ಮ ಕಾರಿಗೆ 360-ಡಿಗ್ರಿ ವ್ಯಾಪ್ತಿಯನ್ನು ನೀಡುವ ಒಂದು ರೀತಿಯ ಇನ್ಶೂರೆನ್ಸ್ ಯೋಜನೆಯಾಗಿದೆ. ಮೂರನೇ ವ್ಯಕ್ತಿಗಳಿಗೆ ಉಂಟಾದ ನಷ್ಟದಿಂದ ನಿಮ್ಮನ್ನು ರಕ್ಷಿಸುವುದರಿಂದ ಹಿಡಿದು ನಿಮ್ಮ ಸ್ವಂತ ಹಾನಿಯನ್ನು ಸರಿದೂಗಿಸುವವರೆಗೆ ಮತ್ತು ಆಡ್-ಆನ್ ಕವರ್‌ಗಳ ವ್ಯಾಪ್ತಿಯನ್ನು ಅನುಮತಿಸುವವರೆಗೆ, ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ನಿಮ್ಮ ಅನುಕೂಲತೆಗಳನ್ನು ಅನುಮತಿಸುವ ಏಕೈಕ ರೀತಿಯ ಕಾರ್ ಇನ್ಶೂರೆನ್ಸ್ ಯೋಜನೆಯಾಗಿದೆ. ಇಂತಹ ಸಂದರ್ಭದಲ್ಲಿ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ನಿಮ್ಮಉಪಯೋಗಕ್ಕೆ ಬರುತ್ತದೆ, ಏಕೆಂದರೆ ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ವಿವಿಧ ಆಡ್-ಆನ್‌ಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ನೀವು ಇದರ ಮೂಲಕ ತಿಳಿದು - ನಿಮ್ಮ ನಿರ್ಧಾರವನ್ನು ಹೆಚ್ಚು ಸರಳ ಮತ್ತು ನೇರವಾಗಿರುವಂತೆ ಮಾಡುತ್ತದೆ.
ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂನ ಪ್ರಮುಖ ಅಂಶಗಳ ಕುರಿತು ಇನ್ನಷ್ಟು ಓದಿ.
ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಕಾನೂನಿನ ಪ್ರಕಾರ ಅತ್ಯಂತ ಮೂಲಭೂತವಾದ ಇನ್ಶೂರೆನ್ಸ್ . ನಿಮ್ಮ ಕಾರ್ ಯಾರಾದರೂ ವ್ಯಕ್ತಿಗೆ ಗುದ್ದಿದರೆ, ಆಸ್ತಿ ಅಥವಾ ವಾಹನಕ್ಕೆ ಹಾನಿಯುಂಟು ಮಾಡುವಂತಹ ಥರ್ಡ್ ಪಾರ್ಟಿ ನಷ್ಟಗಳಿಗೆ ಮಾತ್ರ ಇದು ರಕ್ಷಣೆ ನೀಡುತ್ತದೆ.
ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂನ ಪ್ರಮುಖ ಅಂಶಗಳ ಕುರಿತು ಇನ್ನಷ್ಟು ಓದಿ.
ಪ್ರೈವೆಟ್ ಕಾರುಗಳು ಹಾಗೂ ಎಂಜಿನ್ ಸಾಮರ್ಥ್ಯ |
ಪ್ರೀಮಿಯಂ ದರ |
1000ಸಿಸಿ ಮೀರದ |
₹2,094 |
1000ಸಿಸಿ ಮೀರಿದ ಆದರೆ 1500ಸಿಸಿ ಮೀರದ |
₹3,416 |
1500ಸಿಸಿ ಮೀರಿದ |
₹7,897 |
ಈ ಕೆಳಗಿನ ಅಂಶಗಳ ಮೂಲಕ ನೀವು ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆಗೊಳಿಸಬಹುದಾಗಿದೆ:
ನಾವು ನಮ್ಮ ಗ್ರಾಹಕರನ್ನು ಗಣ್ಯರಂತೆ ನೋಡುತ್ತೇವೆ, ಹೇಗೆ ಎಂದು ತಿಳಿಯಿರಿ...
ಪ್ರಮುಖ ವೈಶಿಷ್ಟ್ಯಗಳು |
ಡಿಜಿಟ್ ಲಾಭ |
ಪ್ರೀಮಿಯಂ |
₹2,094 ರಿಂದ ಆರಂಭ |
ನೋ ಕ್ಲೈಮ್ ಬೋನಸ್ |
50% ವರೆಗೂ ವಿನಾಯಿತಿ |
ಕಸ್ಟಮೈಸ್ ಮಾಡಬಹುದಾದ ಆಡ್-ಆನ್ ಗಳು |
10 ಆಡ್-ಆನ್ ಗಳು ಲಭ್ಯ |
ನಗದುರಹಿತ ರಿಪೇರಿಗಳು |
6000+ ಗ್ಯಾರೇಜುಗಳಲ್ಲಿ ಲಭ್ಯ |
ಕ್ಲೈಮ್ ಪ್ರಕ್ರಿಯೆ |
ಸ್ಮಾರ್ಟ್ ಫೋನ್ ಚಾಲಿತ ಕ್ಲೈಮ್ ಪ್ರಕ್ರಿಯೆ. ಆನ್ಲೈನ್ ಮೂಲಕ 7 ನಿಮಿಷಗಳಲ್ಲೇ ಮಾಡಬಹುದು! |
ಸ್ವಂತ ಹಾನಿಗೆ ಕವರ್ |
ಲಭ್ಯ |
ಥರ್ಡ್ ಪಾರ್ಟಿಗೆ ಆದ ಹಾನಿ |
ವೈಯಕ್ತಿಕ ಹಾನಿಗಳಿಗೆ ಅನಿಯಮಿತ ಹೊಣೆಗಾರಿಕೆ, ಆಸ್ತಿ/ವಾಹನ ಹಾನಿಗಳಿಗೆ 7.5 ಲಕ್ಷದವರೆಗೆ |
ನಮ್ಮ ಕಾರ್ ಇನ್ಶೂರೆನ್ಸ್ ಯೋಜನೆಯನ್ನು ನೀವು ಖರೀದಿಸಿದ ನಂತರ ಅಥವಾ ನವೀಕರಿಸಿದ ನಂತರ, ನೀವು ಚಿಂತಾ ಮುಕ್ತರಾಗಿ. ಏಕೆಂದರೆ, ನಾವು 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!!
1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ ಲಿಂಕ್ ಪಡೆಯಿರಿ. ಮಾರ್ಗಸೂಚಿಯ ಪ್ರಕಾರ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನಕ್ಕಾದ ಹಾನಿಯನ್ನು ಶೂಟ್ ಮಾಡಿ.
ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ಮರುಪಾವತಿ ಅಥವಾ ನಗದುರಹಿತ ಇವುಗಳಲ್ಲಿ ಯಾವುದಾದರೊಂದು ರಿಪೇರಿ ವಿಧಾನವನ್ನು ಆಯ್ಕೆ ಮಾಡಿ.
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ನಿಜಕ್ಕೂ ಇದು ಒಳ್ಳೆಯ ಸಂಗತಿಯೆ ಸರಿ!
ಡಿಜಿಟ್ ಕ್ಲೈಮುಗಳ ರಿಪೋರ್ಟ್ ಕಾರ್ಡ್ ಓದಿಭಾರತದಲ್ಲಿನ ಜನಪ್ರಿಯ ಕಾರ್ಗಳ ಕಾರ್ ವಿಮೆ
ಭಾರತದಲ್ಲಿನ ಜನಪ್ರಿಯ ಬ್ರ್ಯಾಂಡುಗಳಿಗೆ ಕಾರುಗಳ ಇನ್ಶೂರೆನ್ಸ್