Third-party premium has changed from 1st June. Renew now
ನಿಸ್ಸಾನ್ ಕಾರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿ ಅಥವಾ ರಿನೀವ್ ಮಾಡಿ
ನಿಸ್ಸಾನ್ ಮೋಟಾರ್ ಕಾರ್ಪೊರೇಶನ್ ಡಿಸೆಂಬರ್ 1933ರಲ್ಲಿ ಸ್ಥಾಪನೆಯಾದ ಜಪಾನಿನ ಬಹುರಾಷ್ಟ್ರೀಯ ಆಟೋಮೊಬೈಲ್ ತಯಾರಕಾ ಕಂಪನಿಯಾಗಿದೆ. 2013ರಲ್ಲಿ ವಿಶ್ವದ ಆರನೇ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿದ್ದ ಈ ಕಂಪನಿ ಏಪ್ರಿಲ್ 2018ರ ಹೊತ್ತಿಗೆ ಎಲೆಕ್ಟ್ರಿಕ್ ವೆಹಿಕಲ್ಸ್ (ಇವಿ)ನ ಅತಿದೊಡ್ಡ ತಯಾರಕರಾದರು. ಕಂಪನಿಯು ವಿಶ್ವಾದ್ಯಂತ 3,20,000 ಯುನಿಟ್ ಗಳಿಗೂ ಹೆಚ್ಚು ಆಲ್-ಎಲೆಕ್ಟ್ರಿಕ್ ವಾಹನಗಳು ಮಾರಾಟವಾಯಿತು..
ಈ ಉತ್ಪಾದನಾ ಕಂಪನಿಯ ಭಾರತೀಯ ಅಂಗಸಂಸ್ಥೆಯಾದ ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅನ್ನು 2005ರಲ್ಲಿ ಸ್ಥಾಪಿಸಲಾಯಿತು. ಇದು ಹ್ಯಾಚ್‌ಬ್ಯಾಕ್, ಎಂಯುವಿ, ಎಸ್‌ಯುವಿಗಳು ಮತ್ತು ಸೆಡಾನ್‌ಗಳ ಸರಣಿಯಿಂದಾಗಿ ಭಾರತೀಯ ಖರೀದಿದಾರರಲ್ಲಿ ಬಹುವರ್ಷಗಳಿಂದ ನೆಚ್ಚಿನ ಕಾರು ತಯಾರಕಾ ಕಂಪನಿಯಾಗಿದೆ.
ಇದಲ್ಲದೆ, ಈ ಕಂಪನಿಯು ನಿಸ್ಸಾನ್ ಮತ್ತು ಡಾಟ್ಸನ್ ಎಂಬ ಎರಡು ಬ್ರಾಂಡ್‌ಗಳ ಪೋರ್ಟ್‌ಫೋಲಿಯೊವನ್ನು ಹೊಂದಿದೆ. ನಿಸ್ಸಾನ್ ಕಿಕ್ಸ್, ನಿಸ್ಸಾನ್ ಮ್ಯಾಗ್ನೈಟ್, ಡಾಟ್ಸನ್ ಗೋ, ಡಾಟ್ಸನ್ ಗೋ+ ಮತ್ತು ಡಾಟ್ಸನ್ ರೆಡಿ-ಗೋ ಸೇರಿದಂತೆ ಕೆಲವು ಇತ್ತೀಚಿನ ಮಾಡೆಲ್ ಗಳು ಭಾರತೀಯ ಪ್ರಯಾಣಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.
ನಿಸ್ಸಾನ್‌ನ ಇತ್ತೀಚಿನ ವರದಿಗಳ ಪ್ರಕಾರ, ಇದು ಭಾರತದಾದ್ಯಂತ 2021ರ ಏಪ್ರಿಲ್-ಡಿಸೆಂಬರ್ ನಲ್ಲಿ ಸುಮಾರು 27,000 ಯುನಿಟ್‌ಗಳನ್ನು ಮಾರಾಟ ಮಾಡಿದೆ. ನೀವು ನಿಸ್ಸಾನ್ ಕಾರಿನ ಮಾಲೀಕರಾಗಿದ್ದರೆ ಅಥವಾ ಮುಂಬರುವ ವರ್ಷದಲ್ಲಿ ಆ ಕಾರನ್ನು ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ಅಪಘಾತದ ಸಮಯದಲ್ಲಿ ಅದು ಒಳಗಾಗುವ ಅಪಾಯಗಳು ಮತ್ತು ಡ್ಯಾಮೇಜ್ ಗಳ ಬಗ್ಗೆ ನೀವು ತಿಳಿದಿರಬೇಕು. ಅಂತಹ ಹಾನಿಗಳನ್ನು ಸರಿಪಡಿಸುವುದು ನಿಮಗೆ ಕಷ್ಟವನ್ನು ನೀಡುತ್ತದೆ ಮತ್ತು ನಿಮ್ಮ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ.
ಆದಾಗ್ಯೂ, ನೀವು ಹೆಸರಾಂತ ಇನ್ಸೂರರ್ ರಿಂದ ನಿಸ್ಸಾನ್ ಕಾರ್ ಇನ್ಶೂರೆನ್ಸ್ ಪ್ಲಾನ್ ಅನ್ನು ಆರಿಸಿಕೊಳ್ಳಬಹುದು ಮತ್ತು ಅಂತಹ ವೆಚ್ಚಗಳಿಗೆ ಕವರೇಜ್ ಪಡೆಯಬಹುದು. ಭಾರತದಲ್ಲಿನ ಇನ್ಶೂರೆನ್ಸ್ ಕಂಪನಿಗಳು ನಿಮ್ಮ ನಿಸ್ಸಾನ್ ಕಾರಿಗೆ ಥರ್ಡ್ ಪಾರ್ಟಿ ಮತ್ತು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುತ್ತವೆ.
ಮೋಟಾರ್ ವೆಹಿಕಲ್ಸ್ ಆಕ್ಟ್, 1988ರ ಪ್ರಕಾರ, ನಿಸ್ಸಾನ್ ಕಾರುಗಳಿಗೆ ಥರ್ಡ್ ಪಾರ್ಟಿ ಲಯಬಿಲಿಟಿಗಳೊಂದಿಗೆ ಟ್ರಾಫಿಕ್ ಪೆನಲ್ಟಿಗಳನ್ನು ತಪ್ಪಿಸಲು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು ಪಡೆಯುವುದು ಕಡ್ಡಾಯವಾಗಿದೆ. ಅದೇನೇ ಇದ್ದರೂ, ಓನ್ ಕಾರ್ ಮತ್ತು ಥರ್ಡ್ ಪಾರ್ಟಿ ಡ್ಯಾಮೇಜ್ ಗಳು ಎರಡನ್ನೂ ಕವರ್ ಮಾಡುವ ಸುಸಜ್ಜಿತ, ಕಾಂಪ್ರೆಹೆನ್ಸಿವ್ ಪ್ಲಾನ್ ಅನ್ನು ಆಯ್ಕೆ ಮಾಡುವುದು ಪ್ರಾಯೋಗಿಕ ನಡೆಯಾಗಿದೆ.
ಈ ನಿಟ್ಟಿನಲ್ಲಿ, ನಿಸ್ಸಾನ್ ಕಾರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಪಡೆಯಲು ನೀವು ಡಿಜಿಟ್‌ನಂತಹ ಇನ್ಶೂರರ್ ರನ್ನು ಆಯ್ಕೆ ಮಾಡಬಹುದು. ಈ ಇನ್ಶೂರೆನ್ಸ್ ಪೂರೈಕೆದಾರರು ಸುಲಭವಾದ ಕ್ಲೈಮ್ ಪ್ರೊಸೆಸ್, ನೆಟ್‌ವರ್ಕ್ ಗ್ಯಾರೇಜ್‌ಗಳ ಶ್ರೇಣಿ, ಕ್ಯಾಶ್ ಲೆಸ್ ರಿಪೇರಿ ಮತ್ತು ಇತ್ಯಾದಿಗಳಂತಹ ಹಲವಾರು ಪ್ರಯೋಜನಗಳನ್ನು ಒದಗಿಸುತ್ತಾರೆ. ಹೆಚ್ಚುವರಿಯಾಗಿ, ಇದು ಹಣಕಾಸಿನ ಲಯಬಿಲಿಟಿಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೈಗೆಟುಕುವ ಬೆಲೆಯಲ್ಲಿ ನಿಸ್ಸಾನ್ ಕಾರ್ ಇನ್ಶೂರೆನ್ಸ್ ಅನ್ನು ನೀಡುತ್ತದೆ.
ಹೀಗಾಗಿ, ನಿಸ್ಸಾನ್‌ಗೆ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವ ಮೊದಲು, ನೀವು ಡಿಜಿಟ್ ಅನ್ನು ಪರಿಗಣಿಸಬಹುದು ಮತ್ತು ಹೆಚ್ಚು ಪ್ರಯೋಜನಗಳನ್ನು ಪಡೆಯಬಹುದು.
ನಿಸ್ಸಾನ್ ಕಾರ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗುತ್ತದೆ
ಏನೆಲ್ಲಾ ಕವರ್ ಆಗುವುದಿಲ್ಲ
ನಿಮ್ಮ ಕಾರು ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಕವರ್ ಆಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಕೂಡ ಅಷ್ಟೇ ಮುಖ್ಯ, ಹಾಗೆ ಮಾಡುವುದರಿಂದ ಕ್ಲೈಮ್ ಮಾಡುವ ಸಂದರ್ಭದಲ್ಲಿ ನೀವು ಯಾವುದೇ ಅಚ್ಚರಿಗೆ ಒಳಗಾಗುವ ಸಾಧ್ಯತೆ ಎದುರಾಗುವುದಿಲ್ಲ. ಅಂತಹ ಕೆಲವು ಸಂದರ್ಭಗಳು ಇಲ್ಲಿವೆ:
ಥರ್ಡ್-ಪಾರ್ಟಿ ಅಥವಾ ಲಯಬಿಲಿಟಿ ಓನ್ಲಿ ಕಾರ್ ಪಾಲಿಸಿಯ ಸಂದರ್ಭದಲ್ಲಿ, ಓನ್ ವೆಹಿಕಲ್ ಡ್ಯಾಮೇಜ್‌ಗಳನ್ನು ಕವರ್ ಮಾಡಲಾಗುವುದಿಲ್ಲ.
ನೀವು ಕುಡಿದು ಅಥವಾ ವ್ಯಾಲಿಡ್ ಆದ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲದೆ ವಾಹನ ಚಾಲನೆ ಮಾಡುತ್ತಿರುವಾಗ.
ನೀವು ಲರ್ನರ್ಸ್(ಕಲಿಯುವವರ) ಲೈಸೆನ್ಸ್ ಅನ್ನು ಹೊಂದಿದ್ದೀರಿ ಮತ್ತು ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ವ್ಯಾಲಿಡ್ ಆದ ಡ್ರೈವಿಂಗ್ ಲೈಸೆನ್ಸ್-ಹೋಲ್ಡರ್ ಇಲ್ಲದೆ ಚಾಲನೆ ಮಾಡುತ್ತಿರುವಾಗ.
ಅಪಘಾತದ ನೇರ ಪರಿಣಾಮವಲ್ಲದ ಯಾವುದೇ ಡ್ಯಾಮೇಜ್ (ಉದಾ. ಅಪಘಾತದ ನಂತರ, ಡ್ಯಾಮೇಜ್ ಆದ ಕಾರನ್ನು ತಪ್ಪಾಗಿ ಚಲಾಯಿಸಿದರೆ ಮತ್ತು ಎಂಜಿನ್ ಡ್ಯಾಮೇಜ್ ಆದರೆ, ಅದನ್ನು ಕವರ್ ಮಾಡಲಾವುದಿಲ್ಲ)
ನಿರ್ಲಕ್ಷ್ಯದಿಂದಾಗುವ ಯಾವುದೇ ಅನಾಹುತಗಳು (ಉದಾ. ಪ್ರವಾಹದಲ್ಲಿ ಕಾರನ್ನು ಚಾಲನೆ ಮಾಡುವುದರಿಂದ ಉಂಟಾಗುವ ಡ್ಯಾಮೇಜ್, ಅದನ್ನು ತಯಾರಕರ ಮ್ಯಾನ್ಯುವಲ್ ಪ್ರಕಾರ ಶಿಫಾರಸು ಮಾಡಲಾಗಿರುವುದಿಲ್ಲ, ಡ್ಯಾಮೇಜ್ ಕವರ್ ಆಗುವುದಿಲ್ಲ)
ಕೆಲವು ಸನ್ನಿವೇಶಗಳನ್ನು ಆ್ಯಡ್-ಆನ್‌ಗಳ ಮೂಲಕ ಕವರ್ ಮಾಡಬಹುದಾಗಿದೆ. ನೀವು ಆ ಆ್ಯಡ್ -ಆನ್‌ಗಳನ್ನು ಖರೀದಿಸದಿದ್ದರೆ, ಅನುಗುಣವಾದ ಸಂದರ್ಭಗಳ ಡ್ಯಾಮೇಜ್ ಅನ್ನು ಕವರ್ ಮಾಡಲಾಗುವುದಿಲ್ಲ.
ಡಿಜಿಟ್‌ನ ನಿಸ್ಸಾನ್ ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?
ನಿಸ್ಸಾನ್ ಗೆ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು
ಥರ್ಡ್ ಪಾರ್ಟಿ | ಕಾಂಪ್ರೆಹೆನ್ಸಿವ್ |
ಅಪಘಾತದ ಕಾರಣದಿಂದಾಗಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
|
ಥರ್ಡ್ ಪಾರ್ಟಿ ವೆಹಿಕಲ್‌ಗೆ ಉಂಟಾಗುವ ಹಾನಿ |
|
ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಉಂಟಾಗುವ ಹಾನಿ |
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಮರಣ |
|
ನಿಮ್ಮ ಕಾರ್‌ನ ಕಳ್ಳತನ |
|
ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
|
ಕಸ್ಟಮೈಸ್ಡ್ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ |
|
Get Quote | Get Quote |
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್‌ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ
ಕ್ಲೈಮ್ ಸಲ್ಲಿಸುವುದು ಹೇಗೆ?
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!
ಹಂತ 1
1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ
ಹಂತ 2
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಲ್ಲಿ ಸೆಲ್ಫ್- ಇನ್‌ಸ್ಪೆಕ್ಷನ್‌ಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವೆಹಿಕಲ್‌ನ ಹಾನಿಯನ್ನು ಶೂಟ್ ಮಾಡಿ.
ಹಂತ 3
ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ರಿಇಂಬರ್ಸ್‌ಮೆಂಟ್ ಅಥವಾ ಕ್ಯಾಶ್‌ಲೆಸ್ ಈ ಎರಡು ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ
ನಿಸ್ಸಾನ್ ಕುರಿತು ಇನ್ನಷ್ಟು ತಿಳಿಯಿರಿ
ನಿಸ್ಸಾನ್ ಜಪಾನ್ ಮೂಲದ ವಿಶ್ವದ ಅಗ್ರಮಾನ್ಯ ವಾಹನ ತಯಾರಕ ಸಂಸ್ಥೆಯಾಗಿದೆ. ನಿರಂತರ ಆವಿಷ್ಕಾರಗಳು, ಅತ್ಯಾಧುನಿಕ ವಿನ್ಯಾಸಗಳು ಮತ್ತು ನವೀನ ತಂತ್ರಜ್ಞಾನದೊಂದಿಗೆ ಬ್ರ್ಯಾಂಡ್ ತನ್ನ ವಿಶಿಷ್ಟ ಗುರುತನ್ನು ಸ್ಥಾಪಿಸಿದೆ. ಭಾರತದಲ್ಲಿ, ನಿಸ್ಸಾನ್ ತನ್ನ ಕಾರ್ಯಾಚರಣೆಯನ್ನು 2005ರಲ್ಲಿ ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಪ್ರಾರಂಭಿಸಿತು. ಬ್ರ್ಯಾಂಡ್ ನಮಗೆ ಮಧ್ಯಮಗಾತ್ರದ ಐಷಾರಾಮಿ ಕಾರುಗಳಾದ ನಿಸ್ಸಾನ್ ಟೀನಾ ದಿಂದ ಹಿಡಿದು ನಿಸ್ಸಾನ್ 370ಝಡ್ ನಂತಹ ಸ್ಪೋರ್ಟ್ಸ್ ಕಾರುಗಳನ್ನು ನೀಡಿದೆ. ಇವುಗಳನ್ನು ಹೊರತುಪಡಿಸಿ, ನಿಸ್ಸಾನ್ ಇಂಡಿಯಾ ನಿಸ್ಸಾನ್ ಸನ್ನಿ, ನಿಸ್ಸಾನ್ ಮೈಕ್ರಾ ಮತ್ತು ನಿಸ್ಸಾನ್ ಇವಾಲಿಯಾ ಮುಂತಾದ ಕೈಗೆಟುಕುವ ಬೆಲೆಯ ಕಾರುಗಳನ್ನು ನೀಡಿದೆ.
ಇದರ ತಯಾರಿಕಾ ಘಟಕಗಳಲ್ಲಿ ಒಂದು ಚೆನ್ನೈನಲ್ಲಿದೆ ಮತ್ತು ಇನ್ನೊಂದು ಚೆನ್ನೈನ ಹೊರವಲಯದಲ್ಲಿರುವ ಓರಗಡಂನಲ್ಲಿದೆ. ಈ ಇಂಡೋ-ಜಪಾನೀಸ್ ಕಂಪನಿ ಸಣ್ಣ ಮತ್ತು ಆಕರ್ಷಕವಾದ ಹ್ಯಾಚ್‌ಬ್ಯಾಕ್ ನಿಸ್ಸಾನ್ ಮೈಕ್ರಾದಿಂದ ರೂಮಿ ಸೆಡಾನ್ ಸನ್ನಿ ವರೆಗಿನ ಮಾಡೆಲ್ ಗಳನ್ನು ಪರಿಚಯಿಸಿದೆ. ನಿಸ್ಸಾನ್‌ನಿಂದ ನೀವು ರೂ.5.25 ಲಕ್ಷದಿಂದ ಪ್ರಾರಂಭವಾಗುವ ಕೈಗೆಟುಕುವ ಮತ್ತು ಆರಾಮದಾಯಕ ಕಾರುಗಳನ್ನು ಪಡೆಯಬಹುದು. ನಿಸ್ಸಾನ್‌ನ ಅತಿ ಹೆಚ್ಚು ಬೆಲೆಯ ಕಾರು ರೂ.2.12 ಕೋಟಿ ಮೌಲ್ಯದ ಜಿಟಿಆರ್ ಆಗಿದೆ.
ಎಲ್ಲಾ ಮಾಡೆಲ್ ಗಳಲ್ಲಿ, ನಿಸ್ಸಾನ್ ಮೈಕ್ರಾ 2010ರಲ್ಲಿ "ಕಾರ್ ಇಂಡಿಯಾ ಸ್ಮಾಲ್ ಕಾರ್ ಆಫ್ ದಿ ಇಯರ್ ಅವಾರ್ಡ್" ಅನ್ನು ಪಡೆದುಕೊಂಡಿದೆ. ನಿಸ್ಸಾನ್ ಟೆರಾನೊಗೆ ಕಾರ್ಯಕ್ಷಮತೆ, ಶೈಲಿ ಮತ್ತು ಸೌಕರ್ಯಕ್ಕಾಗಿ 5-ಸ್ಟಾರ್ ರೇಟಿಂಗ್‌ಗಳನ್ನು ನೀಡಲಾಗಿದೆ. ಇದು ಭಾರತದ ಅತ್ಯಂತ ಆಕರ್ಷಕ ಎಸ್‌ಯುವಿ ಆಗಿದೆ.
ಮಧ್ಯಮ ಶ್ರೇಣಿಯ ಸೆಗ್ಮೆಂಟ್ ನಲ್ಲಿ, ನಿಸ್ಸಾನ್‌ನ ಎಲ್ಲಾ ಕಾರುಗಳು ಕೈಗೆಟುಕುವ ಬೆಲೆಯಲ್ಲಿವೆ. ನೀವು ಪೆಟ್ರೋಲ್ ಅಥವಾ ಡೀಸೆಲ್ ವೇರಿಯಂಟ್ ಅನ್ನು ಆಯ್ಕೆ ಮಾಡಬಹುದು. ಸರ್ವೀಸ್ ವೆಚ್ಚವೂ ಬಜೆಟ್‌ನಲ್ಲಿ ಬರುತ್ತದೆ. ಅದೇನೇ ಇದ್ದರೂ, ಕಾರ್ ಇನ್ಶೂರೆನ್ಸ್ ಅನ್ನು ಹೊಂದಿರುವುದು ತನ್ನದೇ ಆದ ಸವಲತ್ತುಗಳನ್ನು ಹೊಂದಿದೆ. ಕಾರ್ ಇನ್ಶೂರೆನ್ಸ್ ನೀವು ಹೊಂದಬೇಕಾದ ಕಡ್ಡಾಯ ದಾಖಲೆಯಾಗಿದೆ. ಇಲ್ಲದಿದ್ದರೆ, ನೀವು ಭಾರೀ ಪೆನಲ್ಟಿ ಅನ್ನು ಪಾವತಿಸಬೇಕಾಗುತ್ತದೆ.
ನಿಸ್ಸಾನ್ ಕಾರ್ ಖರೀದಿಸಲು ಕಾರಣವೇನು?
ನೀವು ನಿಸ್ಸಾನ್ ಕಾರುಗಳನ್ನು ಖರೀದಿಸಲು ಕಾರಣಗಳು ಇಲ್ಲಿವೆ:
- ಕೈಗೆಟುಕುವ ಬೆಲೆ: ನಿಸ್ಸಾನ್ ಕಾರುಗಳು ಸಾಕಷ್ಟು ಕೈಗೆಟುಕುವ ಬೆಲೆಯಲ್ಲಿ ಸಿಗುತ್ತವೆ. ಆ ಕಾರುಗಳ ಮೂಲಕ ನೀವು ನೋಡಲು ಇಷ್ಟವಾಗುವ ಬಜೆಟ್ ಸ್ನೇಹಿ ಐಷಾರಾಮಿ ಕಾರನ್ನು ಪಡೆಯುತ್ತೀರಿ.
- ಸುರಕ್ಷತಾ ವೈಶಿಷ್ಟ್ಯಗಳು: ಇಂಡೋ-ಜಪಾನೀಸ್ ಕಾರು ತಯಾರಕರು ಸುರಕ್ಷತೆಯನ್ನು ಆದ್ಯತೆಯಾಗಿಡುತ್ತಾರೆ. ವಿನ್ಯಾಸಕರು ಮತ್ತು ತಯಾರಕರ ತಂಡವು ಟ್ರಾಕ್ಷನ್ ಕಂಟ್ರೋಲ್, ಸ್ಟೆಬಿಲಿಟಿ ಕಂಟ್ರೋಲ್, ಫ್ರಂಟ್ ಏರ್ ಬ್ಯಾಗ್ ಗಳು ಮತ್ತು ರೇರ್ ವ್ಯೂ ಕ್ಯಾಮೆರಾಗಳಂತಹ ಸುರಕ್ಷತಾ ಸಾಧನಗಳನ್ನು ಸ್ಥಾಪಿಸಿದ್ದಾರೆ.
- ಕಡಿಮೆ ನಿರ್ವಹಣೆ ಅಗತ್ಯವಿದೆ: ನಿಸ್ಸಾನ್‌ನ ಕಾರುಗಳು ಬಾಳಿಕೆ ಬರುವವು ಮತ್ತು ಅದಕ್ಕೆ ಕಡಿಮೆ ನಿರ್ವಹಣೆ ಅಗತ್ಯವಿರುತ್ತದೆ. ಮತ್ತು ಸಮಸ್ಯೆ ಉದ್ಭವಿಸಿದ ಸಂದರ್ಭದಲ್ಲಿ, ನೀವು ಅವರ ವ್ಯಾಪಕ ಶ್ರೇಣಿಯ ಸೇವಾ ಕೇಂದ್ರಗಳಲ್ಲಿ ಸೇವೆ ಪಡೆದು ಸಮಾಧಾನ ಹೊಂದುತ್ತೀರಿ.
- ಇಂಧನ-ಸಮರ್ಥ ಕಾರುಗಳು: ನಿಸ್ಸಾನ್ ಕಾರುಗಳು ಇಂಧನ-ಸಮರ್ಥವಾಗಿವೆ. ನೀವು ಸುಲಭವಾಗಿ ದೂರ ಪ್ರಯಾಣ ಮಾಡಲು ಸಾಧ್ಯವಾಗುತ್ತದೆ.
- ತಾಂತ್ರಿಕ ಅಪ್‌ಗ್ರೇಡ್‌ಗಳು: ತಮ್ಮನ್ನು ತಾಂತ್ರಿಕವಾಗಿ ಅಪ್‌ಗ್ರೇಡ್ ಮಾಡಲು ಬಂದಾಗ ನಿಸ್ಸಾನ್ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಪ್ರಸ್ತುತ ಮಾಡೆಲ್ ಗಳು ನಿಸ್ಸಾನ್ ಇಂಟೆಲಿಜೆಂಟ್ ಮೊಬಿಲಿಟಿಯನ್ನು ಹೊಂದಿವೆ.
ನಿಸ್ಸಾನ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?
ನಿಸ್ಸಾನ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಈ ಕಾರಣಗಳಿಗೆ ಮುಖ್ಯವಾಗಿದೆ:
- ನಿಮ್ಮನ್ನು ಲೀಗಲೀ ಕಂಪ್ಲಯಂಟ್ ಮಾಡಿ: ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮನ್ನು ಲೀಗಲೀ ಕಂಪ್ಲಯಂಟ್ ಮಾಡುತ್ತದೆ. ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ, ಡ್ರೈವಿಂಗ್ ಮಾಡುವಾಗ ನೀವು ಕೊಂಡೊಯ್ಯಬೇಕಾದ ಕಡ್ಡಾಯ ದಾಖಲೆಗಳಲ್ಲಿ ಇದು ಒಂದಾಗಿದೆ. ಹಾಗೆ ಮಾಡಲು ವಿಫಲವಾದರೆ, ನೀವು ರೂ.2000/- ದಂಡವನ್ನು ಪಾವತಿಸಲು ಲಯಬಲ್ ಆಗಿರುತ್ತೀರಿ. ಅಷ್ಟೇ ಅಲ್ಲ, ನೀವು 3 ತಿಂಗಳ ಸೆರೆವಾಸವನ್ನು ಎದುರಿಸಬೇಕಾಗಬಹುದು ಮತ್ತು ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳ್ಳಬಹುದು.
- ಓನ್ ಡ್ಯಾಮೇಜ್ ವೆಚ್ಚಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ: ಅಪಘಾತ, ಬೆಂಕಿ, ಕಳ್ಳತನ ಅಥವಾ ಪ್ರವಾಹದಂತಹ ನೈಸರ್ಗಿಕ ವಿಕೋಪದಿಂದಾಗಿ ನಿಮ್ಮ ನಿಸ್ಸಾನ್ ಡ್ಯಾಮೇಜ್ ಗೊಳಗಾದರೆ, ರಿಪೇರಿ ವೆಚ್ಚವು ಭರಿಸಲಾಗದಂತಾಗುತ್ತದೆ. ಅಂತಹ ನಷ್ಟಗಳನ್ನು ಕಾರ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುತ್ತದೆ. ನೀವು ಕ್ಯಾಶ್ ಲೆಸ್ ಸೌಲಭ್ಯ ಅಥವಾ ರೀ-ಇಂಬರ್ಸ್ ಮೆಂಟ್ ಅನ್ನು ಪಡೆಯಬಹುದು.
- ಥರ್ಡ್ ಪಾರ್ಟಿ ಲಯಬಿಲಿಟಿಗಾಗಿ ನಿಮಗೆ ಸಹಾಯ ಮಾಡುತ್ತದೆ: ನೀವು ಥರ್ಡ್ ಪಾರ್ಟಿ ದೇಹವನ್ನು ಗಾಯಗೊಳಿಸಿದಾಗ ಅಥವಾ ಅವರ ಪ್ರಾಪರ್ಟಿಯನ್ನು ಡ್ಯಾಮೇಜ್ ಮಾಡಿದಾಗ, ನಷ್ಟವನ್ನು ಪಾವತಿಸಲು ನೀವು ಲಯಬಲ್ ಆಗಿರುತ್ತೀರಿ. ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಪರವಾಗಿ ಪಾವತಿ ಮಾಡುತ್ತದೆ.
- ಆಡ್-ಆನ್ ಕವರ್‌ಗಳೊಂದಿಗೆ ಇನ್ಶೂರೆನ್ಸ್ ಅನ್ನು ವರ್ಧಿಸಿ: ಬೆಂಕಿ, ಕಳ್ಳತನ, ನೈಸರ್ಗಿಕ ವಿಪತ್ತು ಅಥವಾ ಅಪಘಾತವನ್ನು ಹೊರತುಪಡಿಸಿ ಇತರ ನಷ್ಟಗಳನ್ನು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅಡಿಯಲ್ಲಿ ಪಾವತಿಸಲಾಗುವುದಿಲ್ಲ. ಆದರೆ ಕೆಲವೊಮ್ಮೆ ನಿಮ್ಮ ನಿಸ್ಸಾನ್ ಟೈರ್ ಒಡೆದುಹೋಗುವುದು, ಇತರ ಅಪಘಾತಗಳ ನಡುವೆ ಎಂಜಿನ್ ತೊಂದರೆ ಉಂಟಾಗುವುದು ಮುಂತಾದ ಡ್ಯಾಮೇಜ್ ಗಳನ್ನು ಎದುರುಗೊಳ್ಳಬಹುದು. ಇವುಗಳಿಂದ ಉಂಟಾಗುವ ನಷ್ಟವನ್ನು ಕವರ್ ಮಾಡಲಾಗುವುದಿಲ್ಲ ಮತ್ತು ಆದ್ದರಿಂದ ನಿಮಗೆ ಆಡ್-ಆನ್ ಕವರ್‌ಗಳು ಬೇಕಾಗುತ್ತವೆ. ಈ ಆಡ್-ಆನ್ ಕವರ್‌ಗಳಿಗೆ ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ನೀವು ಕವರ್ ಅನ್ನು ವರ್ಧಿಸಿಕೊಳ್ಳಬಹುದು.
ನಿಸ್ಸಾನ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು
ವಿವಿಧ ಕಾರಣಗಳಿಂದ ಪ್ರೀಮಿಯಂ ಭಿನ್ನವಾಗಿರುತ್ತದೆ.
- ಕಾರಿನ ಐಡಿವಿ: ನಿಮ್ಮ ಕಾರಿನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (ಐಡಿವಿ) ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಐಡಿವಿಗೆ, ಪ್ರೀಮಿಯಂ ಹೆಚ್ಚಾಗಿರುತ್ತದೆ ಮತ್ತು ವೈಸ್ ವರ್ಸಾ.
- ಆಡ್-ಆನ್ ಕವರ್‌ಗಳು: ನೀವು ಖರೀದಿಸುವ ಯಾವುದೇ ಆಡ್-ಆನ್ ಕವರ್ ಹೆಚ್ಚುವರಿ ಪ್ರೀಮಿಯಂ ಪಾವತಿಯೊಂದಿಗೆ ಬರುತ್ತದೆ. ಪ್ರತಿಯೊಂದು ಆಡ್-ಆನ್ ಕವರ್ ಅದರದೇ ಆದ ದರವನ್ನು ಹೊಂದಿದೆ. ಆಡ್-ಆನ್‌ಗಳ ಸಂಖ್ಯೆಗಳ ಜೊತೆಗೆ ಪ್ರೀಮಿಯಂ ಹೆಚ್ಚಾಗುತ್ತದೆ.
- ನೋ ಕ್ಲೈಮ್ ಬೋನಸ್ (ಎನ್‌ಸಿಬಿ): ನೀವು ಒಂದು ಸಂಪೂರ್ಣ ವರ್ಷಕ್ಕೆ ಒಂದೂ ಕ್ಲೈಮ್ ಅನ್ನು ಫೈಲ್ ಮಾಡದಿದ್ದರೆ ಮುಂದಿನ ರಿನೀವಲ್ ಗಾಗಿ ನೀವು ಎನ್‌ಸಿಬಿ ಅನ್ನು ಪಡೆಯುತ್ತೀರಿ. ನೀವು ಕ್ಲೈಮ್ ಸಲ್ಲಿಸದ ಪ್ರತಿ ಮುಂದಿನ ವರ್ಷಕ್ಕೆ, ಬೋನಸ್‌ಗಳ ಶೇಕಡಾವಾರು ಪ್ರಮಾಣವೂ ಹೆಚ್ಚಾಗುತ್ತದೆ.
- ಭೌಗೋಳಿಕ ಸ್ಥಳ: ಮೆಟ್ರೋಪಾಲಿಟನ್ ನಗರಗಳು ಹೆಚ್ಚಿನ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೊಂದಿರುತ್ತವೆ. ಏಕೆಂದರೆ ಹಲವಾರು ವಾಹನಗಳು ಮತ್ತು ಭಾರೀ ದಟ್ಟಣೆಯಿಂದಾಗಿ ಅಪಘಾತಗಳ ಸಂಭವನೀಯತೆ ಹೆಚ್ಚಾಗಿರುತ್ತದೆ.
- ಹೆಚ್ಚುವರಿ ಸಿಎನ್‌ಜಿ ಕಿಟ್: ನಿಮ್ಮ ಕಾರಿನಲ್ಲಿ ಸಿಎನ್‌ಜಿ ಕಿಟ್ ಅನ್ನು ಇನ್ಸ್ಚಾಲ್ ಮಾಡುವುದನ್ನು ನೀವು ಆರಿಸಿಕೊಂಡರೆ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ, ಏಕೆಂದರೆ ಸಿಎನ್‌ಜಿ ಕಿಟ್‌ಗೆ ಹೆಚ್ಚುವರಿ ರಕ್ಷಣೆ ಅಗತ್ಯವಿರುತ್ತದೆ. ಕಾರಿಗೆ ಸಿಎನ್‌ಜಿ ಕಿಟ್‌ನ ಸೇರ್ಪಡೆಯ ಸಂದರ್ಭದಲ್ಲಿ ಇನ್ಶೂರೆನ್ಸ್ ಪ್ರೀಮಿಯಂಗೆ ಕೆಲವು ಕನಿಷ್ಠ ಅಮೌಂಟ್ ಅನ್ನು ಸೇರಿಸಲಾಗುತ್ತದೆ.
- ಕಾರಿನ ವಯಸ್ಸು: ಕಾರಿನ ವಯಸ್ಸು ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ. ಹೊಸ ಕಾರುಗಳಿಗೆ, ಪ್ರೀಮಿಯಂ ಹೆಚ್ಚು ಇರುತ್ತದೆ. ಆದರೆ ಇನ್ಶೂರೆನ್ಸ್ ಕಂಪನಿಯು ನಿಮಗೆ ರಿಯಾಯಿತಿಗಳನ್ನು ನೀಡಬಹುದು. ತುಂಬಾ ಹಳೆಯದಾದ ಕಾರುಗಳಿಗೆ, ಕಡಿಮೆ ಐಡಿವಿ ವ್ಯಾಲ್ಯೂ ಮತ್ತು ಅನೇಕ ಆಡ್-ಆನ್‌ಗಳನ್ನು ಖರೀದಿಸುವ ಅನರ್ಹತೆಯಿಂದಾಗಿ ಶುಲ್ಕದ ಪ್ರೀಮಿಯಂ ತುಲನಾತ್ಮಕವಾಗಿ ಕಡಿಮೆ ಇರುತ್ತದೆ.
- ಇನ್ಶೂರೆನ್ಸ್ ಪಾಲಿಸಿಯ ವಿಧ: ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿಯ ಅಡಿಯಲ್ಲಿ ಪ್ರೀಮಿಯಂ ಜಾಸ್ತಿ ಇರುತ್ತದೆ. ಅದು ಓನ್ ಡ್ಯಾಮೇಜ್ ಮತ್ತು ಥರ್ಡ್ ಪಾರ್ಟಿ ಲಯಬಿಲಿಟಿ ಕವರ್‌ನ ಅಂಶದಿಂದಾಗಿರುತ್ತದೆ. ಆದರೆ ಸ್ವತಂತ್ರ ಥರ್ಡ್-ಪಾರ್ಟಿಯಲ್ಲಿ, ಪ್ರೀಮಿಯಂ ಕಡಿಮೆ ಮತ್ತು ಸ್ಥಿರವಾಗಿರುತ್ತದೆ.
- ಎಂಜಿನ್ ಸಾಮರ್ಥ್ಯ: ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಸ್ವಲ್ಪ ಮಟ್ಟಿಗೆ ಕಾರಿನ ಎಂಜಿನ್ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಪ್ರೀಮಿಯಂನ ಥರ್ಡ್-ಪಾರ್ಟಿ ಅಂಶವು ಎಂಜಿನ್ ನ ಘನ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚಿನ ಎಂಜಿನ್ ಸಿಸಿ ಇದ್ದರೆ, ಹೆಚ್ಚಿನ ಪ್ರೀಮಿಯಂ ಇರುತ್ತದೆ.
- ವಾಲಂಟರಿ ಡಿಡಕ್ಟಿಬಲ್: ಕ್ಲೈಮ್ ಅಮೌಂಟ್ ನಲ್ಲಿ ಕೊಡುಗೆ ನೀಡಲು ನೀವು ನಿರ್ಧರಿಸಿದಾಗ, ಅದನ್ನು ವಾಲಂಟರಿ ಡಿಡಕ್ಟಿಬಲ್ ಆಯ್ಕೆ ಎಂದು ಕರೆಯಲಾಗುತ್ತದೆ. ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್ ಇದ್ದರೆ ಕಡಿಮೆ ಪ್ರೀಮಿಯಂ ಎಂದರ್ಥ.
ನಿಸ್ಸಾನ್ ಕಾರ್ ಇನ್ಶೂರೆನ್ಸ್‌ಗಾಗಿ ಡಿಜಿಟ್ ಅನ್ನು ಏಕೆ ಆರಿಸಬೇಕು?
- ನಿರ್ವಿವಾದವಾಗಿ ಉನ್ನತ-ಗುಣಮಟ್ಟದ ಸೇವೆ: ಡಿಜಿಟ್ ಇನ್ಶೂರೆನ್ಸ್ ನಿಮಗೆ ಎಲ್ಲವನ್ನೂ ಸುಲಭವಾಗಿಸಿದೆ - ಪಾಲಿಸಿಯನ್ನು ಖರೀದಿಸುವುದರಿಂದ ಹಿಡಿದು ಕ್ಲೈಮ್ ಮಾಡುವವರೆಗೆ ಎಲ್ಲವೂ ಆನ್‌ಲೈನ್‌ನಲ್ಲಿ ಮಾಡಬಹುದಾಗಿದೆ. ಉತ್ತಮ ಸೇವೆ ನೀಡಲು, ಅವರು ದುರಸ್ತಿ ಗ್ಯಾರೇಜುಗಳ ವ್ಯಾಪಕ ಜಾಲವನ್ನು ರಚಿಸಿದ್ದಾರೆ.
- ಇನ್ಶೂರೆನ್ಸ್ ಪಾಲಿಸಿಯ ಆಯ್ಕೆ: ಡಿಜಿಟ್ ಎರಡು ವಿಧದ ಪಾಲಿಸಿಗಳನ್ನು ನೀಡುತ್ತದೆ. ಒಂದು ನಿಮ್ಮ ವಾಹನಕ್ಕೆ ನಿಮ್ಮ ಡ್ಯಾಮೇಜ್ ಮತ್ತು ಥರ್ಡ್ ಪಾರ್ಟಿ ಲೀಗಲ್ ಲಯಬಿಲಿಟಿಗಾಗಿ ನಿಮಗೆ ಪಾವತಿಸುವ ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿಯಾಗಿದೆ. ಎರಡನೆಯ ಆಯ್ಕೆಯು ಸ್ವತಂತ್ರ ಥರ್ಡ್ ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಆಗಿದೆ. ಥರ್ಡ್ ಪಾರ್ಟಿಗೆ ದೈಹಿಕ ಡ್ಯಾಮೇಜ್ ಅಥವಾ ಪ್ರಾಪರ್ಟಿ ಡ್ಯಾಮೇಜಿ ನಿಂದಾಗಿ ನೀವು ಅನುಭವಿಸುವ ನಷ್ಟಗಳನ್ನು ಇದು ಪಾವತಿಸುತ್ತದೆ.
- ಕಸ್ಟಮೈಸ್ ಮಾಡಬಹುದಾದ ಐಡಿವಿ: ನಿಮ್ಮ ಕಾರಿಗೆ ಐಡಿವಿ ಆಯ್ಕೆ ಮಾಡಲು ಡಿಜಿಟ್ ಇನ್ಶೂರೆನ್ಸ್ ನಿಮಗೆ ಅನುಮತಿಸುತ್ತದೆ. ಹೆಚ್ಚಿನ ಐಡಿವಿ ಅನ್ನು ಆಯ್ಕೆ ಮಾಡುವುದರಿಂದ ಹೆಚ್ಚು ಪ್ರೀಮಿಯಂ ಭರಿಸಬೇಕಾಗುತ್ತದೆ ಮತ್ತು ವ್ಯಾಪಕ ರಕ್ಷಣೆ ನೀಡುತ್ತದೆ.
- ಆಡ್-ಆನ್‌ಗಳೊಂದಿಗೆ ವರ್ಧಿತ ಕವರ್ ನೀಡುತ್ತದೆ: ಝೀರೋ ಡೆಪ್ರಿಸಿಯೇಷನ್, ರಿಟರ್ನ್-ಟು-ಇನ್‌ವಾಯ್ಸ್ ಕವರ್, ಕನ್ಸ್ಯೂಮೇಬಲ್ ಕವರ್, ಬ್ರೇಕ್‌ಡೌನ್ ಅಸಿಸ್ಟೆನ್ಸ್ ಕವರ್, ಪ್ಯಾಸೆಂಜರ್ ಕವರ್, ಟೈರ್ ಪ್ರೊಟೆಕ್ಟ್ ಕವರ್ ಮತ್ತು ಎಂಜಿನ್ ಆಂಡ್ ಗೇರ್‌ಬಾಕ್ಸ್ ಪ್ರೊಟೆಕ್ಷನ್ ನಂತಹ ಆಡ್-ಆನ್ ಕವರ್‌ಗಳನ್ನು ಡಿಜಿಟ್ ಇನ್ಶೂರೆನ್ಸ್ ನೀಡುತ್ತದೆ. ನಿಸ್ಸಾನ್‌ಗಾಗಿ, ಅಪಘಾತ ಸೇರಿದಂತೆ ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮ ಎಂಜಿನ್ ವಿಫಲವಾದಾಗ ವೆಚ್ಚಗಳನ್ನು ತಡೆಗಟ್ಟಲು ನೀವು ಎಂಜಿನ್ ಆಂಡ್ ಗೇರ್‌ಬಾಕ್ಸ್ ಪ್ರೊಟೆಕ್ಷನ್ ಅನ್ನು ಖರೀದಿಸಬಹುದು. ಕ್ಲೈಮ್ ಮಾಡುವಾಗ ಬಿಡಿ ಭಾಗಗಳಿಗೆ ಅನ್ವಯವಾಗುವ ಡಿಡಕ್ಷನ್ ಅನ್ನು ತಡೆಗಟ್ಟಲು ನೀವು ಝೀರೋ ಡೆಪ್ರಿಸಿಯೇಷನ್ ಕವರ್ ಅನ್ನು ಸಹ ಆಯ್ಕೆ ಮಾಡಬಹುದು.
- ಹೈ ಕ್ಲೈಮ್ ಸೆಟಲ್‌ಮೆಂಟ್ ಅನುಪಾತ: ಕ್ಲೈಮ್ ಸೆಟಲ್‌ಮೆಂಟ್ ವಿಷಯದಲ್ಲಿ ಡಿಜಿಟ್ ಇನ್ಶೂರೆನ್ಸ್‌ನ ಸೇವೆಗಳು ಅತ್ಯುತ್ತಮವಾಗಿವೆ. ಕ್ಲೈಮ್ ಸೆಟಲ್ಮೆಂಟ್ ಅನುಪಾತವು ಹೆಚ್ಚಿದೆ. ಕ್ಲೈಮ್‌ಗಳನ್ನು ತ್ವರಿತವಾಗಿ ಮತ್ತು ಸ್ಮಾರ್ಟ್‌ಫೋನ್-ಎನೇಬಲ್ಡ್ ಸ್ವಯಂ ತಪಾಸಣೆಯ ಆಧಾರದ ಮೇಲೆ ಪ್ರೊಸೆಸ್ ಮಾಡಲಾಗುತ್ತದೆ.
ಪದೇ ಪದೇ ಕೇಳಲಾದ ಪ್ರಶ್ನೆಗಳು
ಒಂದು ಕಾಂಪ್ರೆಹೆನ್ಸಿವ್ ನಿಸ್ಸಾನ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ಬೆಂಕಿಯಿಂದ ಉಂಟಾದ ಡ್ಯಾಮೇಜ್ ಗಳ ವಿರುದ್ಧ ಕವರೇಜ್ ನೀಡುತ್ತದೆಯೇ?
ಹೌದು, ನಿಮ್ಮ ನಿಸ್ಸಾನ್ ಕಾರು ಬೆಂಕಿಯಿಂದ ಅಥವಾ ಯಾವುದೇ ಇತರ ನೈಸರ್ಗಿಕ ಅಥವಾ ಕೃತಕ ವಿಕೋಪದಿಂದ ಡ್ಯಾಮೇಜ್ ಗೊಳಗಾದರೆ, ನೀವು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲಾನ್ ನಡಿ ದುರಸ್ತಿ ವೆಚ್ಚವನ್ನು ಕವರ್ ಮಾಡಬಹುದು.
ನನ್ನ ಸ್ವತಂತ್ರ ನಿಸ್ಸಾನ್ ಕಾರ್ ಇನ್ಶೂರೆನ್ಸ್ ನ ಅಡಿಯಲ್ಲಿ ಎಂಜಿನ್ ದುರಸ್ತಿ ವೆಚ್ಚಗಳಿಗೆ ನಾನು ಕವರೇಜ್ ಪಡೆಯಬಹುದೇ?
ಇಲ್ಲ, ಸ್ವತಂತ್ರ ಇನ್ಶೂರೆನ್ಸ್ ಪಾಲಿಸಿಯು ಎಂಜಿನ್ ದುರಸ್ತಿ ವೆಚ್ಚಗಳನ್ನು ಒಳಗೊಂಡಿರುವುದಿಲ್ಲ. ಆದಾಗ್ಯೂ, ಹೆಚ್ಚುವರಿ ಶುಲ್ಕಗಳ ವಿರುದ್ಧ ಎಂಜಿನ್ ರಕ್ಷಣೆಗಾಗಿ ನೀವು ಆಡ್-ಆನ್ ಕವರ್ ಪಡೆಯಬಹುದು.
ನನ್ನ ಅಸ್ತಿತ್ವದಲ್ಲಿರುವ ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಅಡಿಯಲ್ಲಿ ನನ್ನ ನಿಸ್ಸಾನ್ ಕಾರಿನ ಐಡಿವಿ ಅನ್ನು ಕಸ್ಟಮೈಸ್ ಮಾಡಲು ನನಗೆ ಸಾಧ್ಯವಾಗುತ್ತದೆಯೇ?
ಥರ್ಡ್-ಪಾರ್ಟಿ ನಿಸ್ಸಾನ್ ಕಾರ್ ಇನ್ಶೂರೆನ್ಸ್ ಪಾಲಿಸಿಹೋಲ್ಡರ್ ಥರ್ಡ್ ಪಾರ್ಟಿ ಡ್ಯಾಮೇಜ್ ಗಳ ವಿರುದ್ಧ ಕವರೇಜ್ ಪ್ರಯೋಜನಗಳನ್ನು ಮಾತ್ರ ಪಡೆಯಬಹುದು. ಅವರು ಈ ಯೋಜನೆಯಡಿಯಲ್ಲಿ ಐಡಿವಿ ಕಸ್ಟಮೈಸೇಷನ್ ಆಯ್ಕೆಯನ್ನು ಪಡೆಯಲು ಸಾಧ್ಯವಿಲ್ಲ.