ನಿಸ್ಸಾನ್ ಕಾರ್ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ನಿಸ್ಸಾನ್ ಮೋಟಾರ್ ಕಾರ್ಪೊರೇಶನ್ ಡಿಸೆಂಬರ್ 1933ರಲ್ಲಿ ಸ್ಥಾಪನೆಯಾದ ಜಪಾನಿನ ಬಹುರಾಷ್ಟ್ರೀಯ ಆಟೋಮೊಬೈಲ್ ತಯಾರಕಾ ಕಂಪನಿಯಾಗಿದೆ. 2013ರಲ್ಲಿ ವಿಶ್ವದ ಆರನೇ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿದ್ದ ಈ ಕಂಪನಿ ಏಪ್ರಿಲ್ 2018ರ ಹೊತ್ತಿಗೆ ಎಲೆಕ್ಟ್ರಿಕ್ ವೆಹಿಕಲ್ಸ್ (ಇವಿ)ನ ಅತಿದೊಡ್ಡ ತಯಾರಕರಾದರು. ಕಂಪನಿಯು ವಿಶ್ವಾದ್ಯಂತ 3,20,000 ಯುನಿಟ್ ಗಳಿಗೂ ಹೆಚ್ಚು ಆಲ್-ಎಲೆಕ್ಟ್ರಿಕ್ ವಾಹನಗಳು ಮಾರಾಟವಾಯಿತು..
ಈ ಉತ್ಪಾದನಾ ಕಂಪನಿಯ ಭಾರತೀಯ ಅಂಗಸಂಸ್ಥೆಯಾದ ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅನ್ನು 2005ರಲ್ಲಿ ಸ್ಥಾಪಿಸಲಾಯಿತು. ಇದು ಹ್ಯಾಚ್ಬ್ಯಾಕ್, ಎಂಯುವಿ, ಎಸ್ಯುವಿಗಳು ಮತ್ತು ಸೆಡಾನ್ಗಳ ಸರಣಿಯಿಂದಾಗಿ ಭಾರತೀಯ ಖರೀದಿದಾರರಲ್ಲಿ ಬಹುವರ್ಷಗಳಿಂದ ನೆಚ್ಚಿನ ಕಾರು ತಯಾರಕಾ ಕಂಪನಿಯಾಗಿದೆ.
ಇದಲ್ಲದೆ, ಈ ಕಂಪನಿಯು ನಿಸ್ಸಾನ್ ಮತ್ತು ಡಾಟ್ಸನ್ ಎಂಬ ಎರಡು ಬ್ರಾಂಡ್ಗಳ ಪೋರ್ಟ್ಫೋಲಿಯೊವನ್ನು ಹೊಂದಿದೆ. ನಿಸ್ಸಾನ್ ಕಿಕ್ಸ್, ನಿಸ್ಸಾನ್ ಮ್ಯಾಗ್ನೈಟ್, ಡಾಟ್ಸನ್ ಗೋ, ಡಾಟ್ಸನ್ ಗೋ+ ಮತ್ತು ಡಾಟ್ಸನ್ ರೆಡಿ-ಗೋ ಸೇರಿದಂತೆ ಕೆಲವು ಇತ್ತೀಚಿನ ಮಾಡೆಲ್ ಗಳು ಭಾರತೀಯ ಪ್ರಯಾಣಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.
ನಿಸ್ಸಾನ್ನ ಇತ್ತೀಚಿನ ವರದಿಗಳ ಪ್ರಕಾರ, ಇದು ಭಾರತದಾದ್ಯಂತ 2021ರ ಏಪ್ರಿಲ್-ಡಿಸೆಂಬರ್ ನಲ್ಲಿ ಸುಮಾರು 27,000 ಯುನಿಟ್ಗಳನ್ನು ಮಾರಾಟ ಮಾಡಿದೆ. ನೀವು ನಿಸ್ಸಾನ್ ಕಾರಿನ ಮಾಲೀಕರಾಗಿದ್ದರೆ ಅಥವಾ ಮುಂಬರುವ ವರ್ಷದಲ್ಲಿ ಆ ಕಾರನ್ನು ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ಅಪಘಾತದ ಸಮಯದಲ್ಲಿ ಅದು ಒಳಗಾಗುವ ಅಪಾಯಗಳು ಮತ್ತು ಡ್ಯಾಮೇಜ್ ಗಳ ಬಗ್ಗೆ ನೀವು ತಿಳಿದಿರಬೇಕು. ಅಂತಹ ಹಾನಿಗಳನ್ನು ಸರಿಪಡಿಸುವುದು ನಿಮಗೆ ಕಷ್ಟವನ್ನು ನೀಡುತ್ತದೆ ಮತ್ತು ನಿಮ್ಮ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ.
ಆದಾಗ್ಯೂ, ನೀವು ಹೆಸರಾಂತ ಇನ್ಸೂರರ್ ರಿಂದ ನಿಸ್ಸಾನ್ ಕಾರ್ ಇನ್ಶೂರೆನ್ಸ್ ಪ್ಲಾನ್ ಅನ್ನು ಆರಿಸಿಕೊಳ್ಳಬಹುದು ಮತ್ತು ಅಂತಹ ವೆಚ್ಚಗಳಿಗೆ ಕವರೇಜ್ ಪಡೆಯಬಹುದು. ಭಾರತದಲ್ಲಿನ ಇನ್ಶೂರೆನ್ಸ್ ಕಂಪನಿಗಳು ನಿಮ್ಮ ನಿಸ್ಸಾನ್ ಕಾರಿಗೆ ಥರ್ಡ್ ಪಾರ್ಟಿ ಮತ್ತು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುತ್ತವೆ.
ಮೋಟಾರ್ ವೆಹಿಕಲ್ಸ್ ಆಕ್ಟ್, 1988ರ ಪ್ರಕಾರ, ನಿಸ್ಸಾನ್ ಕಾರುಗಳಿಗೆ ಥರ್ಡ್ ಪಾರ್ಟಿ ಲಯಬಿಲಿಟಿಗಳೊಂದಿಗೆ ಟ್ರಾಫಿಕ್ ಪೆನಲ್ಟಿಗಳನ್ನು ತಪ್ಪಿಸಲು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು ಪಡೆಯುವುದು ಕಡ್ಡಾಯವಾಗಿದೆ. ಅದೇನೇ ಇದ್ದರೂ, ಓನ್ ಕಾರ್ ಮತ್ತು ಥರ್ಡ್ ಪಾರ್ಟಿ ಡ್ಯಾಮೇಜ್ ಗಳು ಎರಡನ್ನೂ ಕವರ್ ಮಾಡುವ ಸುಸಜ್ಜಿತ, ಕಾಂಪ್ರೆಹೆನ್ಸಿವ್ ಪ್ಲಾನ್ ಅನ್ನು ಆಯ್ಕೆ ಮಾಡುವುದು ಪ್ರಾಯೋಗಿಕ ನಡೆಯಾಗಿದೆ.
ಈ ನಿಟ್ಟಿನಲ್ಲಿ, ನಿಸ್ಸಾನ್ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್ನಲ್ಲಿ ಪಡೆಯಲು ನೀವು ಡಿಜಿಟ್ನಂತಹ ಇನ್ಶೂರರ್ ರನ್ನು ಆಯ್ಕೆ ಮಾಡಬಹುದು. ಈ ಇನ್ಶೂರೆನ್ಸ್ ಪೂರೈಕೆದಾರರು ಸುಲಭವಾದ ಕ್ಲೈಮ್ ಪ್ರೊಸೆಸ್, ನೆಟ್ವರ್ಕ್ ಗ್ಯಾರೇಜ್ಗಳ ಶ್ರೇಣಿ, ಕ್ಯಾಶ್ ಲೆಸ್ ರಿಪೇರಿ ಮತ್ತು ಇತ್ಯಾದಿಗಳಂತಹ ಹಲವಾರು ಪ್ರಯೋಜನಗಳನ್ನು ಒದಗಿಸುತ್ತಾರೆ. ಹೆಚ್ಚುವರಿಯಾಗಿ, ಇದು ಹಣಕಾಸಿನ ಲಯಬಿಲಿಟಿಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೈಗೆಟುಕುವ ಬೆಲೆಯಲ್ಲಿ ನಿಸ್ಸಾನ್ ಕಾರ್ ಇನ್ಶೂರೆನ್ಸ್ ಅನ್ನು ನೀಡುತ್ತದೆ.
ಹೀಗಾಗಿ, ನಿಸ್ಸಾನ್ಗೆ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವ ಮೊದಲು, ನೀವು ಡಿಜಿಟ್ ಅನ್ನು ಪರಿಗಣಿಸಬಹುದು ಮತ್ತು ಹೆಚ್ಚು ಪ್ರಯೋಜನಗಳನ್ನು ಪಡೆಯಬಹುದು.
ನಿಮ್ಮ ಕಾರು ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಕವರ್ ಆಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಕೂಡ ಅಷ್ಟೇ ಮುಖ್ಯ, ಹಾಗೆ ಮಾಡುವುದರಿಂದ ಕ್ಲೈಮ್ ಮಾಡುವ ಸಂದರ್ಭದಲ್ಲಿ ನೀವು ಯಾವುದೇ ಅಚ್ಚರಿಗೆ ಒಳಗಾಗುವ ಸಾಧ್ಯತೆ ಎದುರಾಗುವುದಿಲ್ಲ. ಅಂತಹ ಕೆಲವು ಸಂದರ್ಭಗಳು ಇಲ್ಲಿವೆ:
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...
ಅಪಘಾತದ ಕಾರಣದಿಂದಾಗಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ಥರ್ಡ್ ಪಾರ್ಟಿ ವೆಹಿಕಲ್ಗೆ ಉಂಟಾಗುವ ಹಾನಿ |
✔
|
✔
|
ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಉಂಟಾಗುವ ಹಾನಿ |
✔
|
✔
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಮರಣ |
✔
|
✔
|
ನಿಮ್ಮ ಕಾರ್ನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳೊಂದಿಗೆ ಹೆಚ್ಚುವರಿ ರಕ್ಷಣೆ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!
1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರ್ಮ್ಗಳನ್ನು ಭರ್ತಿ ಮಾಡಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ನಲ್ಲಿ ಸೆಲ್ಫ್- ಇನ್ಸ್ಪೆಕ್ಷನ್ಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್ಫೋನ್ನಿಂದ ನಿಮ್ಮ ವೆಹಿಕಲ್ನ ಹಾನಿಯನ್ನು ಶೂಟ್ ಮಾಡಿ.
ನಮ್ಮ ಗ್ಯಾರೇಜ್ಗಳ ನೆಟ್ವರ್ಕ್ ಮೂಲಕ ರಿಇಂಬರ್ಸ್ಮೆಂಟ್ ಅಥವಾ ಕ್ಯಾಶ್ಲೆಸ್ ಈ ಎರಡು ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ
ನಿಸ್ಸಾನ್ ಜಪಾನ್ ಮೂಲದ ವಿಶ್ವದ ಅಗ್ರಮಾನ್ಯ ವಾಹನ ತಯಾರಕ ಸಂಸ್ಥೆಯಾಗಿದೆ. ನಿರಂತರ ಆವಿಷ್ಕಾರಗಳು, ಅತ್ಯಾಧುನಿಕ ವಿನ್ಯಾಸಗಳು ಮತ್ತು ನವೀನ ತಂತ್ರಜ್ಞಾನದೊಂದಿಗೆ ಬ್ರ್ಯಾಂಡ್ ತನ್ನ ವಿಶಿಷ್ಟ ಗುರುತನ್ನು ಸ್ಥಾಪಿಸಿದೆ. ಭಾರತದಲ್ಲಿ, ನಿಸ್ಸಾನ್ ತನ್ನ ಕಾರ್ಯಾಚರಣೆಯನ್ನು 2005ರಲ್ಲಿ ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಪ್ರಾರಂಭಿಸಿತು. ಬ್ರ್ಯಾಂಡ್ ನಮಗೆ ಮಧ್ಯಮಗಾತ್ರದ ಐಷಾರಾಮಿ ಕಾರುಗಳಾದ ನಿಸ್ಸಾನ್ ಟೀನಾ ದಿಂದ ಹಿಡಿದು ನಿಸ್ಸಾನ್ 370ಝಡ್ ನಂತಹ ಸ್ಪೋರ್ಟ್ಸ್ ಕಾರುಗಳನ್ನು ನೀಡಿದೆ. ಇವುಗಳನ್ನು ಹೊರತುಪಡಿಸಿ, ನಿಸ್ಸಾನ್ ಇಂಡಿಯಾ ನಿಸ್ಸಾನ್ ಸನ್ನಿ, ನಿಸ್ಸಾನ್ ಮೈಕ್ರಾ ಮತ್ತು ನಿಸ್ಸಾನ್ ಇವಾಲಿಯಾ ಮುಂತಾದ ಕೈಗೆಟುಕುವ ಬೆಲೆಯ ಕಾರುಗಳನ್ನು ನೀಡಿದೆ.
ಇದರ ತಯಾರಿಕಾ ಘಟಕಗಳಲ್ಲಿ ಒಂದು ಚೆನ್ನೈನಲ್ಲಿದೆ ಮತ್ತು ಇನ್ನೊಂದು ಚೆನ್ನೈನ ಹೊರವಲಯದಲ್ಲಿರುವ ಓರಗಡಂನಲ್ಲಿದೆ. ಈ ಇಂಡೋ-ಜಪಾನೀಸ್ ಕಂಪನಿ ಸಣ್ಣ ಮತ್ತು ಆಕರ್ಷಕವಾದ ಹ್ಯಾಚ್ಬ್ಯಾಕ್ ನಿಸ್ಸಾನ್ ಮೈಕ್ರಾದಿಂದ ರೂಮಿ ಸೆಡಾನ್ ಸನ್ನಿ ವರೆಗಿನ ಮಾಡೆಲ್ ಗಳನ್ನು ಪರಿಚಯಿಸಿದೆ. ನಿಸ್ಸಾನ್ನಿಂದ ನೀವು ರೂ.5.25 ಲಕ್ಷದಿಂದ ಪ್ರಾರಂಭವಾಗುವ ಕೈಗೆಟುಕುವ ಮತ್ತು ಆರಾಮದಾಯಕ ಕಾರುಗಳನ್ನು ಪಡೆಯಬಹುದು. ನಿಸ್ಸಾನ್ನ ಅತಿ ಹೆಚ್ಚು ಬೆಲೆಯ ಕಾರು ರೂ.2.12 ಕೋಟಿ ಮೌಲ್ಯದ ಜಿಟಿಆರ್ ಆಗಿದೆ.
ಎಲ್ಲಾ ಮಾಡೆಲ್ ಗಳಲ್ಲಿ, ನಿಸ್ಸಾನ್ ಮೈಕ್ರಾ 2010ರಲ್ಲಿ "ಕಾರ್ ಇಂಡಿಯಾ ಸ್ಮಾಲ್ ಕಾರ್ ಆಫ್ ದಿ ಇಯರ್ ಅವಾರ್ಡ್" ಅನ್ನು ಪಡೆದುಕೊಂಡಿದೆ. ನಿಸ್ಸಾನ್ ಟೆರಾನೊಗೆ ಕಾರ್ಯಕ್ಷಮತೆ, ಶೈಲಿ ಮತ್ತು ಸೌಕರ್ಯಕ್ಕಾಗಿ 5-ಸ್ಟಾರ್ ರೇಟಿಂಗ್ಗಳನ್ನು ನೀಡಲಾಗಿದೆ. ಇದು ಭಾರತದ ಅತ್ಯಂತ ಆಕರ್ಷಕ ಎಸ್ಯುವಿ ಆಗಿದೆ.
ಮಧ್ಯಮ ಶ್ರೇಣಿಯ ಸೆಗ್ಮೆಂಟ್ ನಲ್ಲಿ, ನಿಸ್ಸಾನ್ನ ಎಲ್ಲಾ ಕಾರುಗಳು ಕೈಗೆಟುಕುವ ಬೆಲೆಯಲ್ಲಿವೆ. ನೀವು ಪೆಟ್ರೋಲ್ ಅಥವಾ ಡೀಸೆಲ್ ವೇರಿಯಂಟ್ ಅನ್ನು ಆಯ್ಕೆ ಮಾಡಬಹುದು. ಸರ್ವೀಸ್ ವೆಚ್ಚವೂ ಬಜೆಟ್ನಲ್ಲಿ ಬರುತ್ತದೆ. ಅದೇನೇ ಇದ್ದರೂ, ಕಾರ್ ಇನ್ಶೂರೆನ್ಸ್ ಅನ್ನು ಹೊಂದಿರುವುದು ತನ್ನದೇ ಆದ ಸವಲತ್ತುಗಳನ್ನು ಹೊಂದಿದೆ. ಕಾರ್ ಇನ್ಶೂರೆನ್ಸ್ ನೀವು ಹೊಂದಬೇಕಾದ ಕಡ್ಡಾಯ ದಾಖಲೆಯಾಗಿದೆ. ಇಲ್ಲದಿದ್ದರೆ, ನೀವು ಭಾರೀ ಪೆನಲ್ಟಿ ಅನ್ನು ಪಾವತಿಸಬೇಕಾಗುತ್ತದೆ.
ನೀವು ನಿಸ್ಸಾನ್ ಕಾರುಗಳನ್ನು ಖರೀದಿಸಲು ಕಾರಣಗಳು ಇಲ್ಲಿವೆ:
ನಿಸ್ಸಾನ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಈ ಕಾರಣಗಳಿಗೆ ಮುಖ್ಯವಾಗಿದೆ:
ವಿವಿಧ ಕಾರಣಗಳಿಂದ ಪ್ರೀಮಿಯಂ ಭಿನ್ನವಾಗಿರುತ್ತದೆ.
Car Insurance for other Nissan models