ಹೋಂಡಾ ಸಿಟಿ ಇನ್ಶೂರೆನ್ಸ್
Get Instant Policy in Minutes*

Third-party premium has changed from 1st June. Renew now

ಆನ್‌ಲೈನ್‌ನಲ್ಲಿ ಹೋಂಡಾ ಸಿಟಿ ಕಾರ್ ಇನ್ಶೂರೆನ್ಸ್ ಖರೀದಿಸಿ/ರಿನೀವ್ ಮಾಡಿ

ಪ್ರತೀ ವರ್ಷ ಹಲವಾರು ಹೊಸ ಕಾರುಗಳು ಬಿಡುಗಡೆಯಾದರೂ, ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ ಎಲ್ಲಿಯವರೆಗೆ ಇರುತ್ತದೆಯೇ ಅಲ್ಲಿಯವರೆಗೆ ವಿಶೇಷ ವೆಹಿಕಲ್ ಎಂದೇ ಪರಿಗಣಿಸಲಾಗುತ್ತದೆ. ಇವತ್ತು, ಇದು ಭಾರತದ ಅತ್ಯಂತ ಜನಪ್ರಿಯ ಸೆಡಾನ್‌ಗಳಲ್ಲಿ ಒಂದಾಗಿದೆ, ಶೈಲಿ ಸೌಕರ್ಯ ಮತ್ತು ಕಾರ್ಯಕ್ಷಮತೆಯ ಮಧ್ಯೆ ಆಸಕ್ತಿಕರ ಸಮತೋಲನವನ್ನು ಒದಗಿಸುತ್ತದೆ.

ವರ್ಷಗಳು ಕಳೆದಂತೆ, ಹೋಂಡಾದ ಈ ಉತ್ಪನ್ನ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದೆ. 2014ರಲ್ಲಿ ಈ ವೆಹಿಕಲ್ ಜೆ.ಡಿ. ಪವರ್ಸ್‌ ಏಷ್ಯಾ ಅವಾರ್ಡ್ಸ್‌ನಲ್ಲಿ ಮೋಸ್ಟ್ ಡಿಪೆಂಡೆಬಲ್ ಕಾರ್ ಎಂಬ ಕಿರೀಟವನ್ನು ಧರಿಸಿಕೊಂಡಿತು. (1)

ಸಹಜವಾಗಿ, ಈ ಕಾರುಗಳ ಮಾಲೀಕರು ತಮ್ಮ ಆರ್ಥಿಕ ಭದ್ರತೆ ನೋಡಿಕೊಳ್ಳುವಾಗ ವೆಹಿಕಲ್‌ನ ದೀರ್ಘಾಯುಷ್ಯ ಮತ್ತು ಬಾಳಿಕೆಗಾಗಿ ಗುಣಮುಟ್ಟದ ಹೋಂಡಾ ಸಿಟಿ ಕಾರ್ ಇನ್ಸೂರೆನ್ಸ್ ಪಾಲಿಸಿಯಲ್ಲಿ ಹೂಡಿಕೆ ಮಾಡುವ ಅವಶ್ಯಕತೆ ಇದೆ.

ಮೋಟಾರ್ ಇನ್ಶೂರೆನ್ಸ್ ಖರೀದಿ ಸಂದರ್ಭದಲ್ಲಿ ನೀವು ಎರಡು ರೀತಿಯ ಪ್ರೈಮ್ ಆಯ್ಕೆಗಳ ಮಧ್ಯೆ ಒಂದನ್ನು ಆರಿಸಿಕೊಳ್ಳಬಹುದು- ಥರ್ಡ್-ಪಾರ್ಟಿ ಲಯಬಿಲಿಟಿ ಅಥವಾ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿ.

ಈ ಮೊದಲನೆಯದನ್ನು ನಿಮ್ಮ ಕಾರನ್ನು ಒಳಗೊಂಡು ನಡೆಯುವ ವೆಹಿಕಲ್‌ನ ಅಪಘಾತ ಅಥವಾ ಅವರ ವ್ಯಕ್ತಿ, ಪ್ರಾಪರ್ಟಿಗಳಿಗೆ ಸಂಭವಿಸಿದ ಡ್ಯಾಮೇಜ್‌ಗಳಿಗೆ ಥರ್ಡ್-ಪಾರ್ಟಿಗಳಿಗೆ ಪರಿಹಾರ ಒದಗಿಸುವಂತೆ ವಿನ್ಯಾಸ ಮಾಡಲಾಗಿದೆ. ಆದಾಗ್ಯೂ, ಈ ಪ್ಲಾನ್‌ಗಳು ಪಾಲಿಸಿಹೋಲ್ಡರ್‌ಗಳ ಕಾರ್‌ಗಳ ಡ್ಯಾಮೇಜ್ ರಿಪೇರಿಗೆ ನೆರವಾಗುವ ಯಾವುದೇ ನಿಬಂಧನೆಗಳನ್ನು ಹೊಂದಿರುವುದಿಲ್ಲ.

ಮತ್ತೊಂದೆಡೆ, ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯಿಂದ, ನೀವು ಥರ್ಡ್-ಪಾರ್ಟಿ ಲಯಬಿಲಿಟಿ ಮತ್ತು ಓನ್-ಡ್ಯಾಮೇಜ್ ಕಾಂಪನ್‌ಸೇಶನ್‌ಗಳು ಈ ಎರಡೂ ಪ್ರಯೋಜನಗ‍ಳನ್ನು ಪಡೆಯಬಹುದು. ಹಾಗಾಗಿ, ಎರಡನೆಯದು ಎಲ್ಲಾ ರೀತಿಯಿಂದಲೂ ಸಂಪೂರ್ಣವಾಗಿರುವ ಅತ್ಯುತ್ತಮ ಆಯ್ಕೆಯಾಗಿದೆ.

ಆದರೂ, ನೀವು ಕಾಂಪ್ರೆಹೆನ್ಸಿವ್ ಪಾಲಿಸಿ ಪಡೆಯುವುದು ಸಾಧ್ಯವಾಗದಿದ್ದರೆ, ಭಾರತದ ಕಾನೂನಿನ ಪ್ರಕಾರ ಕಡ್ಡಾಯ ಆಗಿರುವುದರಿಂದ ಕನಿಷ್ಠ ಥರ್ಡ್-ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಬೇಕು.

ಮೋಟಾರ್ ವೆಹಿಕಲ್ ಆ್ಯಕ್ಟ್ 1988 ಪ್ರಕಾರ, ವ್ಯಾಲಿಡ್ ಆದ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಹೊಂದಿಲ್ಲದೆ ರಸ್ತೆಗಳಲ್ಲಿ ಸಂಚರಿಸುವ ಯಾವುದೇ ವೆಹಿಕಲ್‌ನ ಮಾಲೀಕರು ದಂಡವನ್ನು ತೆರಬೇಕಾದ ಹೊಣೆ ಹೊರಬೇಕಾಗುತ್ತದೆ. ಪ್ರಥಮ ಬಾರಿಗೆ ರೂ.2000 ದಂಡವನ್ನು ನಿಮಗೆ ಹೇರಲಾಗುತ್ತದೆ ಮತ್ತು ಪುನರಾವರ್ತಿತ ಅಪರಾಧಗಳಿಗೆ ರೂ.4000.

ಆಕರ್ಷಕ ವೈಶಿಷ್ಟ್ಯಗಳು ಮತ್ತು ಸೌಲಭ್ಯಗಳನ್ನು ಹೊಂದಿರುವ ಹಲವು ಅತ್ಯುತ್ತಮ ಹೋಂಡಾ ಸಿಟಿ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಡಿಜಿಟ್ ಒದಗಿಸುತ್ತದೆ. ಒಂದು ವೇಳೆ ನೀವು ಹೊಸ ಇನ್ಶೂರೆನ್ಸ್ ಖರೀದಿ ಮಾಡುವುದಿದ್ದರೆ, ಡಿಜಿಟ್ ಒಂದು ಕಾರ್ಯಸಾಧ್ಯವಾದ ಇನ್ಶೂರೆನ್ಸ್ ಪೂರೈಕೆದಾರ ಎಂಬುದಕ್ಕೆ ಈ ಕೆಳಗಿನ ಹಲವು ಕಾರಣಗಳಿವೆ.

ಹೋಂಡಾ ಸಿಟಿ ಕಾರ್ ಇನ್ಶೂರೆನ್ಸ್ ರಿನೀವಲ್ ಬೆಲೆ

ರಿಜಿಸ್ಟ್ರೇಷನ್ ದಿನಾಂಕ ಪ್ರೀಮಿಯಂ (ಓನ್ ಡ್ಯಾಮೇಜ್ ಪಾಲಿಸಿಗೆ ಮಾತ್ರ)
ಆಗಸ್ಟ್-2019 2,178
ಆಗಸ್ಟ್-2018 2,577
ಆಗಸ್ಟ್-2017 2,379

**ಡಿಸ್‌ಕ್ಲೈಮರ್ - ಹೋಂಡಾ ಸಿಟಿ 1.5 Exi ಪೆಟ್ರೋಲ್‌ಗೆ ಮಾಡಿದ ಪ್ರೀಮಿಯಂ ಕ್ಯಾಲ್ಕುಲೇಷನ್ 1493. ಜಿಎಸ್‌ಟಿ ಒಳಗೊಂಡಿಲ್ಲ.

ಸಿಟಿ - ಮುಂಬೈ, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಆಗಸ್ಟ್, ಎನ್‌ಸಿಬಿ- 50%, ಆ್ಯಡ್-ಆನ್‌ಗಳು ಇಲ್ಲ ಮತ್ತು ಕಡಿಮೆ ಐಡಿವಿ ಲಭ್ಯವಿದೆ. ಆಗಸ್ಟ್-2020ರಲ್ಲಿ ನಡೆಸಿದ ಪ್ರೀಮಿಯಂ ಕ್ಯಾಲ್ಕುಲೇಷನ್. ದಯವಿಟ್ಟು ಮೇಲೆ ನಿಮ್ಮ ವೆಹಿಕಲ್‌ನ ಮಾಹಿತಿಗಳನ್ನು ತುಂಬುವುದರ ಮೂಲಕ ಅಂತಿಮ ಪ್ರೀಮಿಯಂ ಚೆಕ್ ಮಾಡಿ.

ಹೋಂಡಾ ಸಿಟಿ ಕಾರ್ ಇನ್ಶೂರೆನ್ಸ್‌ನಲ್ಲಿ ಏನೆಲ್ಲಾ ಕವರ್ ಆಗುತ್ತದೆ

ಡಿಜಿಟ್‌ನ ಹೋಂಡಾ ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?

ಹೋಂಡಾ ಸಿಟಿ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು

ಥರ್ಡ್-ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು

×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್‌ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವೆಹಿಕಲ್‌ನ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

ಎಷ್ಟು ವೇಗವಾಗಿ ಡಿಜಿಟಲ್ ಇನ್ಶೂರೆನ್ಸ್ ಕ್ಲೈಮ್‌ಗಳು ಸೆಟಲ್ ಆಗುತ್ತವೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಹೋಂಡಾ ಸಿಟಿ ಇನ್ಶೂರೆನ್ಸ್‌ಗೆ ಡಿಜಿಟ್ ಅನ್ನು ಆರಿಸಿಕೊಳ್ಳಲು ಇರುವ ಕಾರಣಗಳು

ಕಾರ್ ಇನ್ಶೂರೆನ್ಸ್ ವಿಚಾರಕ್ಕೆ ಬಂದರೆ ಡಿಜಿಟ್ ಪಾಲಿಸಿಗಳು ನಿಮ್ಮ ಅಗತ್ಯಗಳು ಮತ್ತು ನಿರೀಕ್ಷೆಗಳನ್ನು ತೃಪ್ತಿಪಡಿಸಬಲ್ಲದು ಎಂಬುದನ್ನು ನಾವು ಭಾರಿ ಖಚಿತವಾಗಿ ಹೇಳಬಲ್ಲೆವು. ಅತಿ ಹೆಚ್ಚು ಗಮನಾರ್ಹವಾದ ಕೆಲವು ವೈಶಿಷ್ಟ್ಯಗಳು ಮತ್ತು ಆಯ್ಕೆಗಳು ಇಲ್ಲಿವೆ:

  • ಡಿಜಿಟಲ್ ಮತ್ತು ತೊಂದರೆಮುಕ್ತ ಕ್ಲೈಮ್ಸ್ ಪ್ರೊಸೆಸ್ - ಡಿಜಿಟ್‌ನಲ್ಲಿ, ನೀವು ಪ್ರತೀಸಲ ಕ್ಲೈಮ್ ಫೈಲ್ ಮಾಡಲು ಬಯಸುವಾಗ ಕಠಿಣ ಪರೀಕ್ಷೆಗೆ ಒಳಪಡಲು ನಾವು ಒತ್ತಾಯ ಮಾಡುವುದಿಲ್ಲ. ಡಿಜಿಟ್‌ನಲ್ಲಿ, ಪ್ರತೀ ಸಲ ನೀವು ಕ್ಲೈಮ್ ಫೈಲ್ ಮಾಡಲು ಬಯಸಿದಾಗೆಲ್ಲಾ ಕಠಿಣ ಪರೀಕ್ಷೆಗಳನ್ನು ದಾಟಿ ಬರುವಂತೆ ನಾವು ಒತ್ತಾಯ ಮಾಡುವುದಿಲ್ಲ. ಹೌದು, ಅದು ಅಷ್ಟು ಸರಳವಾಗಿದೆ! ನಮ್ಮ ಆ್ಯಪ್ ಮೂಲಕ ನಿಮ್ಮ ಇನ್ಶೂರೆನ್ಸ್ ಕ್ಲೈಮ್‌ಗಾಗಿ ಸ್ವ-ತಪಾಸಣೆ ಪ್ರೊಸೆಸ್ ಅನ್ನು ನೀವು ಆರಂಭಿಸಬಹುದು. ವೆಹಿಕಲ್‌ನ ಡ್ಯಾಮೇಜ್‌ ಆಗಿರುವ ಭಾಗಗಳ ಪಿಕ್ಚರ್‌ಗಳನ್ನು ಕ್ಲಿಕ್ ಮಾಡಿ ಮತ್ತು ನಮ್ಮ ಇನ್-ಹೌಸ್ ತಂಡಕ್ಕೆ ಕಳುಹಿಸಿ. ವಿವರಗಳನ್ನು ಪರಿಶೀಲಿಸಿದ ಬಳಿಕ ತಕ್ಷಣವೇ ನಿಮ್ಮ ಬಳಿಗೆ ಬರುತ್ತೇವೆ.
  • ನಿಮ್ಮ ವೆಹಿಕಲ್ ಐಡಿವಿ ಕಸ್ಟಮೈಸ್ ಮಾಡಿ - ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಹೆಚ್ಚಿದ್ದರೆ ನಿಮ್ಮ ಪ್ರೀಮಿಯಂ ಕೊಂಚ ಹೆಚ್ಚಾಗುವಂತೆ ಪರಿಣಾಮ ಬೀರಬಹುದು, ಆದರೆ ದೊಡ್ಡ ಅಪಘಾತಗಳು ಅಥವಾ ಕಳ್ಳತನ ನಡೆದಾಗ ಹೆಚ್ಚುವರಿ ಪ್ರೊಟೆಕ್ಷನ್ ಒದಗಿಸುವ ಭರವಸೆ ನೀಡುತ್ತದೆ. ಸಿದ್ಧವಾಗಿ ಲಭ್ಯವಿರುವ ಕಸ್ಟಮೈಸೇಷನ್ ಆಯ್ಕೆಗಳೊಂದಿಗೆ, ಪಾಲಿಸಿಗೆ ನೀವು ಎಷ್ಟು ಐಡಿವಿ ಬಯಸುತ್ತೀರೋ ಅಷ್ಟನ್ನು ಆಯ್ಕೆ ಮಾಡುವ ಅವಕಾಶವನ್ನು ಡಿಜಿಟ್ ಪಾಲಿಸಿಗಳು ಒದಗಿಸುತ್ತವೆ. ನೀವು ಹೋಂಡಾ ಸಿಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಅಥವಾ ರಿನೀವ್ ಮಾಡಲು ಬಯಸಿದರೆ, ಒಂದು ವೇಳೆ ಭವಿಷ್ಯದಲ್ಲಿ ಇನ್ಶೂರ್ಡ್ ವೆಹಿಕಲ್ ಕಳ್ಳತನವಾದರೆ ಅಥವಾ ರಿಪೇರಿ ಮಾಡಲಾಗದಷ್ಟು ಡ್ಯಾಮೇಜ್ ಆದರೆ ನಿಮ್ಮ ಐಡಿವಿ ಹೆಚ್ಚಿಸುವ ಸಾಮರ್ಥ್ಯವು ಸಂಪೂರ್ಣ ಆರ್ಥಿಕ ಭದ್ರತೆ ನೀಡುವ ಭರವಸೆ ಒದಗಿಸಬೇಕು.
  • ಹೈ ಕ್ಲೈಮ್ ಸೆಟಲ್‌ಮೆಂಟ್ ರೇಶಿಯೋ - ಅಗತ್ಯ ಬಿದ್ದಾಗ ಅವಶ್ಯವಿರುವ ಪರಿಹಾರ ದೊರಕುತ್ತದೆಯೇ ಎಂಬುದು ಆನ್‌ಲೈನ್‌ನಲ್ಲಿ ಹೋಂಡಾ ಸಿಟಿ ಕಾರ್ ಇನ್ಶೂರೆನ್ಸ್ ಖರೀದಿಸಲು ಆಲೋಚಿಸುತ್ತಿರುವವರ ದೊಡ್ಡ ಆತಂಕಗಳಲ್ಲಿ ಒಂದು. ಅದೃಷ್ಟವಶಾತ್, ನೀವು ನಮ್ಮ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಒಂದನ್ನು ಆರಿಸಿಕೊಂಡಾಗ, ಕ್ಲೈಮ್ ಸೆಟಲ್‌ಮೆಂಟ್‌ ಸಂದರ್ಭದಲ್ಲಿ ನೀವು ನಿರಾಳವಾಗಿ ವಿಶ್ರಾಂತರಾಗಬಹುದು. ಆಧಾರರಹಿತ ನಿಯಮಗಳ ಕಾರಣದಿಂದ ನಾವು ಕ್ಲೈಮ್‌ಗಳನ್ನು ತಿರಸ್ಕರಿಸುವುದಿಲ್ಲ. ಬದಲಿಗೆ, ಪಾಲಿಸಿಹೋಲ್ಡರ್‌ಗಳಿಗೆ ಅತಿ ಶೀಘ್ರದಲ್ಲಿ ಪರಿಹಾರ ತಲುಪುವಂತೆ ಮಾಡುವ ಭರವಸೆ ಒದಗಿಸುತ್ತೇವೆ.
  • ಕಾರ್‌ ಇನ್ಶೂರೆನ್ಸ್ ಆ್ಯಡ್‌-ಆನ್‌ಗಳ ವೈವಿಧ್ಯ - ನೀವು ನಮ್ಮ ಆ್ಯಡ್-ಆನ್ ಕವರ್‌ಗಳನ್ನು ಸ್ಟಾಂಡರ್ಡ್ ಹೋಂಡಾ ಸಿಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯ ರಿಇನ್‌ಫೋರ್ಸ್‌ಮೆಂಟ್ ಎಂದು ಭಾವಿಸಬಹುದು. ಉದಾಹರಣೆಗೆ, ಝೀರೋ ಡೆಪ್ರಿಸಿಯೇಷನ್ ಆ್ಯಡ್-ಆನ್‌ನೊಂದಿಗೆ, ಅಪಘಾತದ ನಂತರ ಮತ್ತು ಅದಕ್ಕೆ ಸಂಬಂಧಿಸಿದ ರಿಪೇರಿಗೆ ಕ್ಲೈಮ್ ಮಾಡುವ ಸರಿಯಾದ ಅಮೌಂಟ್ ಅನ್ನು ನಿರ್ಧರಿಸುವಾಗ ಡೆರ್ರಿಸಿಯೇಷನ್ ಪರಿಣಾಮ ಬೀರುವುದಿಲ್ಲ ಎಂದು ನಿಮಗೆ ಖಚಿತಪಡಿಸಲಾಗಿರುತ್ತದೆ. ಅದೇ ಥರ, ಬೇರೆ ಆ್ಯಡ್‌-ಆನ್‌ಗಳನ್ನೂ ನಿವು ನಮ್ಮಲ್ಲಿ ಪಡೆಯಬಹುದು, ಅವು ಪ್ರತಿಯೊಂದೂ ಬೇರೆ ಬೇರೆ ಉದ್ದೇಶಗಳನ್ನು ಪೂರೈಸುತ್ತದೆ. ಅವುಗಳು ರಿಟರ್ನ್ ಟು ಇನ್‌ವಾಯ್ಸ್ ಕವರ್, ಕನ್ಸ್ಯೂಮೇಬಲ್ಸ್ ಕವರ್, ಪ್ಯಾಸೆಂಜರ್ ಕವರ್, ಎಂಜಿನ್ ಪ್ರೊಟೆಕ್ಷನ್ ಕವರ್, ಮತ್ತಿತ್ಯಾದಿಗಳನ್ನು ಒಳಗೊಂಡಿದೆ. ನಿಮ್ಮ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಅವುಗಳಲ್ಲಿ ಆರಿಸಿಕೊಳ್ಳಲು ನೀವು ಸ್ವತಂತ್ರರು.
  • ಡಿಪೆಂಡೆಬಲ್ ಕಸ್ಟಮರ್ ಸರ್ವೀಸ್ - ನಿಮಗೆ ಪಾಲಿಸಿಯನ್ನು ಮಾರಾಟ ಮಾಡಿದ ಬಳಿಕ ಅತ್ಯುತ್ತಮ ಗುಣಮಟ್ಟದ ಗ್ರಾಹಕ ಸೇವೆಯನ್ನು ನಿರ್ವಹಿಸುವುದನ್ನು ನಾವು ಬಲವಾಗಿ ನಂಬುತ್ತೇವೆ. ಆದ್ದರಿಂದ, ನಿಮ್ಮ ಹೋಂಡಾ ಸಿಟಿ ಕಾರ್ ಇನ್ಶೂರೆನ್ಸ್ ಪಾಲಿಸಿ ಕುರಿತಾದ ಪ್ರಶ್ನೆಗಳು, ಅನುಮಾನಗಳು ಮತ್ತು ಕ್ಲೈಮ್‌ಗಳನ್ನು ನಿರ್ವಹಿಸಲು ನಾವು 24x7 ಲಭ್ಯರಿರುತ್ತೇವೆ. ಭಾನುವಾರಗಳಂದೂ ನೀವು ನಮ್ಮನ್ನು ಸಂಪರ್ಕಿಸಬಹುದು, ಅಲ್ಲದೇ ಸಾರ್ವಜನಿಕ ರಜಾ ದಿನಗಳಂದೂ ನಮ್ಮ ತಂಡ ನಿಮಗೆ ಅಸಿಸ್ಟ್ ಮಾಡಲು ತಯಾರಿರುತ್ತದೆ. ನಮ್ಮ ಟೋಲ್-ಫ್ರೀ ನಂಬರ್ 1800-103-4448. ಪಾಲಿಸಿಗೆ ಸಂಬಂಧಿಸಿದಂತೆ ನೀವು ಹೊಂದಿರುವ ಯಾವುದೇ ಅನುಮಾನಗಳನ್ನು ನಮ್ಮ ರೆಪ್ರೆಸೆಂಟೇಟಿವ್ ಜೊತೆ ಮಾತನಾಡಬಹುದು. ನಿಮ್ಮ ಕಾರಿನ ಇನ್ಶೂರೆನ್ಸ್ ಬಗ್ಗೆ ಉತ್ತಮ ತಿಳುವಳಿಕೆ ರೂಪಿಸಿಕೊಳ್ಳಲು ಅವರು ನಿಮಗೆ ನೆರವಾಗುತ್ತಾರೆ.
  • 1400+ ನೆಟ್‌ವರ್ಕ್‌ ಗ್ಯಾರೇಜ್‌ಗಳ ಪ್ರಯೋಜನ ಪಡೆದುಕೊಳ್ಳಿ  - ನಾವು ಭಾರತದಾದ್ಯಂತ ಕೆಲಸ ಮಾಡುವ 1400ಕ್ಕೂ ಹೆಚ್ಚು ನೆಟ್‌ವರ್ಕ್‌ ಗ್ಯಾರೇಜ್‌ಗಳನ್ನು ಹೊಂದಿದ್ದೇವೆ. ನೀವು ಬಯಸಿದ ಯಾವುದೇ ಗ್ಯಾರೇಜಿನಲ್ಲಿ ಅಪಘಾತದ ಡ್ಯಾಮೇಜ್ ಅನ್ನು ರಿಪೇರಿ ಮಾಡಲು ನೀವು ಬಯಸಿದರೆ, ಈ ನೆಟ್‌ವರ್ಕ್‌ ಸರ್ವೀಸ್‌ ಸೆಂಟರ್‌ಗಳು ಡಿಜಿಟ್‌ ಪಾಲಿಸಿಹೋಲ್ಡರ್‌ಗಳಿಗೆ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುತ್ತವೆ. ಈ ಸೌಲಭ್ಯಗಳಲ್ಲಿ ನಿಮಗೆ ಕ್ಯಾಶ್‌ಲೆಸ್ ರಿಪೇರಿ ದೊರೆಯುತ್ತದೆ ಅನ್ನುವುದು ಬಹುದೊಡ್ಡ ಲಾಭ, ಇದರಿಂದ ತುರ್ತುಪರಿಸ್ಥಿಗ‍ಳಲ್ಲಿ ಹಣವನ್ನು ಒಟ್ಟುಮಾಡುವ ತೊಂದರೆಗಳಿಂದ ಮುಕ್ತಿ ಪಡೆಯಬಹುದು. ಇಲ್ಲಿ ನೀವು ನಿಮ್ಮ ಸ್ವಂತ ಜೇಬಿನಿಂದ ಪಾವತಿ ಮಾಡದೆಯೇ ನಿಮ್ಮ ಕಾರನ್ನು ರಿಪೇರಿ ಮಾಡಿಕೊಳ್ಳಬಹುದು. ಆದ್ದರಿಂದ, ಇನ್ಶೂರೆನ್ಸ್ ಕ್ಲೈಮ್ ಮಾಡುವ ಅಗತ್ಯ ಬರುವುದಿಲ್ಲ, ಅಲ್ಲದೇ ಸರಳವಾಗಿ ಮತ್ತು ಕೈಗೆಟಕುವ ದರದಲ್ಲಿ ರಿಪೇರಿಗಳನ್ನು ಮಾಡಬಹುದು.
  • ನಿಮ್ಮ ಡೋರ್‌ಸ್ಟೆಪ್‌ಗೆ ವೆಹಿಕಲ್‌ಗಳ ಪಿಕ್ಕಿಂಗ್ ಅಪ್ ಮತ್ತು ಡ್ರಾಪಿಂಗ್ - ಡಿಜಿಟ್ ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ರಿಪೇರಿ ಬಯಸುವುದರ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ, ನೀವು ಯಾವುದೇ ಅಪಘಾತದ ಡ್ಯಾಮೇಜ್‌ಗಳ ಸಂದರ್ಭದಲ್ಲಿ ಕಾರ್ ಪಿಕ್‌-ಅಫ್ ಮತ್ತು ಡ್ರಾಪ್ ಸೌಲಭ್ಯವನ್ನು ಬುಕ್ ಮಾಡಬಹುದು. ಅಂಥಾ ಸಂದರ್ಭಗಳಲ್ಲಿ, ಗ್ಯಾರೇಜ್‌ನ ರೆಪ್ರೆಸೆಂಟೇಟಿವ್ ನಿಮ್ಮ ಮನೆಯನ್ನು ತಲುಪುತ್ತಾರೆ ಮತ್ತು ಡ್ಯಾಮೇಜ್ ಆಗಿರುವ ವೆಹಿಕಲ್ ಅನ್ನು ಸರ್ವೀಸ್ ಸೆಂಟರ್‌ಗೆ ತೆಗೆದುಕೊಂಡು ಬರುತ್ತಾರೆ. ರಿಪೇರಿ ಪೂರ್ತಿಯಾದ ಬಳಿಕ, ನಿಮ್ಮ ಕಾರನ್ನು ನಿಮ್ಮ ಮನೆಗೆ ವಾಪಸ್ ತಲುಪಿಸುವ ಸಾಗಣೆ ವ್ಯವಸ್ಥೆಯನ್ನು ಗ್ಯಾರೇಜ್‌ನವರು ಮಾಡುತ್ತಾರೆ.

ಹಾಗಾಗಿ, ಡಿಜಿಟ್‌ನ ಹೋಂಡಾ ಸಿಟಿ ಕಾರ್ ಇನ್ಶೂರೆನ್ಸ್ ಪಾಲಿಸಿಹೋಲ್ಡರ್‌ಗಳು ಕಾರು ರಿಪೇರಿ ಮಾಡಲು ಬಯಸಿದಾಗ ಅವರ ಮನೆಗಳ ಆರಾಮದಾಯಕ ವಾತಾವರಣದಿಂದ ಆಚೆ ಕಾಲಿಡಬೇಕಾಗಿಯೂ ಇಲ್ಲ. ಈ ಸೌಲಭ್ಯಗಳಿಂದಾಗಿ, ನಿಮ್ಮ ಕಾರಿನ ರಿಪೇರಿಯನ್ನು ಬಯಸುವುದು ತುಂಬಾ ಸರಳವಾಗಿದೆ!

ಈಗಾಗಲೇ ತಿಳಿಸಿದ ಡಿಜಿಟ್‌ನ ಇನ್ಶೂರೆನ್ಸೂ ಪಾಲಿಸಿಯಲ್ಲಿ ಲಭ್ಯವಿರುವ ಇನ್ನಿತರ ಹೆಚ್ಚುವರಿ ಪ್ರಯೋಜನಗಳ ಕುರಿತು ನೀವು ತಿಳಿದುಕೊಳ್ಳಬಹುದು. ಅಂಥಾ ಪಾಲಿಸಿಯ ಜೊತೆ ಇದ್ದಾಗ, ಅನಿರೀಕ್ಷಿತ ಘಟನೆಗಳಿಂದ ವೆಹಿಕಲ್ ಡ್ಯಾಮೇಜ್ ಆಗುತ್ತದೆ ಎಂದು ಚಿಂತಿಸುವ ಬದಲು ರಸ್ತೆಯ ಮೇಲೆ ಗಮನ ಕೊಡಬಹುದು.

ಸೇಫ್ ಡ್ರೈವಿಂಗ್!

ಹೋಂಡಾ ಸಿಟಿ ಕಾರ್ ಇನ್ಶೂರೆನ್ಸ್ ಖರೀದಿಸುವುದು ಯಾಕೆ ಮುಖ್ಯ?

ವೆಹಿಕಲ್ ಖರೀದಿಸಿದ ಬಳಿ ನೀವು ಮಾಡಬಹುದಾದ ಪ್ರಮುಖ ಹಂತವೆಂದರೆ ಹೋಂಡಾ ಸಿಟಿ ಕಾರ್ ಇನ್ಶೂರೆನ್ಸ್ ಪಡೆಯುವುದು. ಮಾರ್ಕೆಟ್‌ನಲ್ಲಿ ಹಲವಾರು ವಿಧದ ಇನ್ಶೂರೆನ್ಸ್‌ ಪ್ಲಾನ್‌ಗಳು ಲಭ್ಯವಿದೆ. ಈಗ ನಾವು ಒಬ್ಬ ಕಾರ್‌ ಮಾಲೀಕನಿಗೆ ಇನ್ಶೂರೆನ್ಸ್ ಪಾಲಿಸಿ ಹೇಗೆ ಫ್ರೆಂಡ್ ಎಂಬುದನ್ನು ನೋಡೋಣ.

  • ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್‌ ಪ್ಲಾನ್ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್  - ಯಾವುದೇ ದುರದೃಷ್ಟಕರ ಅಪಘಾತಗಳು ಅಥವಾ ದುರಂತಗಳು ಸಂಭವಿಸಿದಾಗ ನಿಮ್ಮ ಹೋಂಡಾ ಸಿಟಿಯ ದುಬಾರಿ ಭಾಗಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ, ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ಲಾನ್ ಸಂಪೂರ್ಣ ಕವರೇಜ್ ಒದಗಿಸುತ್ತದೆ. ಇದು ಬ್ರೇಕ್‌ಡೌನ್ ಅಸಿಸ್ಟೆನ್ಸ್, ಎಂಜಿನ್ ಮತ್ತು ಗೇರ್‌ಬಾಕ್ಸ್‌ ಪ್ರೊಟೆಕ್ಷನ್ ಮತ್ತು ಝೀರೋ-ಡೆಪ್ ಕವರ್ ಒಳಗೊಂಡಿರುತ್ತದೆ. ಉದಾಹರಣೆಗೆ, ಯಾವುದೇ ನೈಸರ್ಗಿಕ ವಿಪತ್ತುಗಳು ಜರುಗಿದಾಗ ನಿಮ್ಮ ಕಾರ್‌ ತೀವ್ರವಾದ ಡ್ಯಾಮೇಜ್‌ಗೆ ಒಳಗಾದ ಸಮಯದಲ್ಲಿ ಈ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲಾನ್ ಕವರೇಜ್ ನೀಡುವುದರ ಮೂಲಕ ಭಾರಿ ಖರ್ಚುಗಳಿಂದ ನಿಮಗೆ ನಿರಾಳತೆ ಒದಗಿಸುತ್ತದೆ.
  • ಆರ್ಥಿಕ ಲಯಬಿಲಿಟಿಗಳಿಂದ ರಕ್ಷಣೆ - ನಿಮ್ಮ ಕಾರಿಗೆ ಅಪಘಾತ ಅಥವಾ ಕಳ್ಳತನ ಆದ ಸಂದರ್ಭದಲ್ಲಿ ನಿಮ್ಮ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ. ರಿಪೇರಿಗೆ ಉಂಟಾಗುವ ಆರ್ಥಿಕ ಹೊರೆಯಿಂದ ಹಲವು ಸಲ ನಿಮ್ಮ ಜೇಬಿಗೆ ಟ್ಯಾಕ್ಸ್ ಬೀಳಬಹುದು, ಆದರೆ ಆ ಸಮಯದಲ್ಲಿ ನೀವು ಹೊಂದಿರುವ ಕಾರ್ ಇನ್ಶೂರೆನ್ಸ್ ನಿಮ್ಮ ಪಾಲಿನ ರಕ್ಷಕನಾಗಬಹುದು.
  • ಕಾನೂನುಬದ್ಧ ಅನುಸರಣೆ - ನಿಮ್ಮ ಹೋಂಡಾ ಸಿಟಿ ಕಾರ್ ಇನ್ಶೂರೆನ್ಸ್ ನೀವು ರಸ್ತೆಯಲ್ಲಿ ಕಾನೂನುಬದ್ಧವಾಗಿ ಓಡಾಡಲು ಅನುವು ಮಾಡುತ್ತದೆ. ಕಾರ್ ಇನ್ಶೂರೆನ್ಸ್ ಹೊಂದಿರದಿದ್ದರೆ, ನಿಮ್ಮ ಮೇಲೆ ರೂ. 2000 ದಂಡ ಹೇರಬಹುದು ಮತ್ತು ನಿಮ್ಮ ಲೈಸೆನ್ಸ್ ಅನರ್ಹಗೊಳ್ಳಬಹುದು ಮತ್ತು/ಅಥವಾ 3 ತಿಂಗಳ ಜೈಲುವಾಸ ಮಾಡಬೇಕಾಗಿ ಬರಬಹುದು. ಚೆಕ್ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಮತ್ತು ಆ್ಯಡ್‌-ಆನ್‌ಗಳೊಂದಿಗೆ ಕಾರ್‌ ಇನ್ಶೂರೆನ್ಸ್‌ ಪಾಲಿಸಿಯ ನಿಮ್ಮ ಕಾರಿನ ಪ್ರೀಮಿಯಂ ಪಡೆಯಿರಿ.
  • ಥರ್ಡ್-ಪಾರ್ಟಿ ಲಯಬಿಲಿಟಿಗಳ ಕವರ್  - ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಅಪಘಾತದಲ್ಲಿ ಥರ್ಡ್-ಪಾರ್ಟಿ ಅಥವಾ ಪ್ರಯಾಣಿಕರಿಗೆ ಡ್ಯಾಮೇಜ್ ಉಂಟಾದರೆ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಕವರ್ ಮಾಡುತ್ತದೆ. ಇಂಥಾ ಸಂದರ್ಭದಲ್ಲಿ ಥರ್ಡ್ ಪಾರ್ಟಿ ಬೇಡಿಕೆಗಳನ್ನು ಕವರ್ ಮಾಡುವ ಮೂಲಕ ನಿಮ್ಮ ಕಾರ್ ಇನ್ಶೂರೆನ್ಸ್ ಉಪಯೋಗಕ್ಕೆ ಬರುತ್ತದೆ. ಮತ್ತು ಕನಿಷ್ಠ ಪಕ್ಷ ಥರ್ಡ್ ಪಾರ್ಟಿ ಇನ್ಶೂರೆನ್ಸ್ ನೀವು ಭಾರತೀಯ ರಸ್ತೆಗಳಲ್ಲಿ ಕಾನೂನುಬದ್ಧವಾಗಿ ಡ್ರೈವ್ ಮಾಡುವ ಅನುಮತಿ ಒದಗಿಸುತ್ತದೆ.

ಹೋಂಡಾ ಸಿಟಿ ಕಾರ್ ಕುರಿತು ಇನ್ನಷ್ಟು

ಹೋಂಡಾ ಸಿಟಿ ಎಲ್ಲಾ ಕಾರುಪ್ರಿಯರ ಅತ್ಯಂತ ಫೇವರಿಟ್ ಕಾರು ಎಂದೇ ಹೆಸರಾಗಿದೆ. ಹೋಂಡಾದ ಕಣ್ಮನ ಸೆಳೆಯುವ ಅಪೀಯರೆನ್ಸ್ ಹೊಂದಿರುವ ಮತ್ತು ಆರಾಮದಾಯಕ ವೆಹಿಕಲ್ ಅನ್ನು ಎಲ್ಲಾ ಕಡೆಯ ಮಾರುಕಟ್ಟೆಗಳಲ್ಲಿ ವಿತರಿಸಲಾಗಿದೆ. ಈ ಅದ್ಭುತ ವೆಹಿಕಲ್ SV, V, VX, ಮತ್ತು ZX ಎಂಬ ಹೆಸರಿನ ನಾಲ್ಕು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಹೋಂಡಾ ಸಿಟಿಯ ಪೆಟ್ರೋಲ್‌ ವೇರಿಯಂಟ್‌ನ ಬೆಲೆ ಸರಣಿ ರೂ.9.70 ಲಕ್ಷದಿಂದ ಆರಂಭಗೊಂಡು ರೂ.14.05ಲಕ್ಷದವರೆಗೆ ತಲುಪುತ್ತದೆ, ಡೀಸೆಲ್ ವರ್ಷನ್ ಬೆಲೆ ರೂ.11 ಲಕ್ಷದಿಂದ ರೂ.14.05ಲಕ್ಷದ ಮಧ್ಯದಲ್ಲಿ ಇರುತ್ತದೆ.

ಈ ಮಧ್ಯಮ ಗಾತ್ರದ ಸೆಡಾನ್ ಲಿಂಗಭೇದವಿಲ್ಲದೆ ಎಲ್ಲಾ ವಯಸ್ಸಿನ ಮಂದಿಗೆ ಹೊಂದಿಕೊಳ್ಳುತ್ತದೆ. ಈ ಕಾರು ಸಿಟಿ ರೈಡ್‌ಗಳಿಗೆ ಮತ್ತು ಲಾಂಗ್‌ ಡ್ರೈವ್‌ಗಳಿಗೆ ಎರಡಕ್ಕೂ ಸೂಕ್ತವಾಗಿದೆ.

ಹೋಂಡಾ ಕಾರ್ ಇನ್ಶೂರೆನ್ಸ್ ಕುರಿತು ಇನ್ನಷ್ಟು ತಿಳಿಯಿರಿ.

ನೀವು ಹೋಂಡಾ ಸಿಟಿಯನ್ನು ಯಾಕೆ ಖರೀದಿಸಬೇಕು?

ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ ಯಾವತ್ತಿಗೂ ಜನಪ್ರಿಯವಾಗಿದೆ. ಈ ಕಾರು ಹಲವು ವಿಶೇಷ ವೈಶಿಷ್ಟ್ಯಗಳಿಂದಾಗಿ ಯಂಗ್‌ಸ್ಟರ್‌ಗಳು ಮತ್ತು ಕಾರು ಪ್ರಿಯರಲ್ಲಿ ಜನಪ್ರಿಯವಾಗಿದೆ. ನೀವು ಯಾಕೆ ಹೋಂಡಾ ಸಿಟಿಗೆ ಪಾವತಿ ಮಾಡಬೇಕು ಎಂಬ ಕುರಿತು ಈಗ ಗಮನ ಹರಿಸೋಣ.

ಇಂಟರ್ನಲ್ ಮತ್ತು ಎಕ್ಸ್‌ಟರ್ನಲ್ ವೈಶಿಷ್ಟ್ಯಗಳು - ಹೊಂಡಾ ಸಿಟಿಯು ನಿಖರವಾದ ನ್ಯಾವಿಗೇಷನ್‌ನೊಂದಿಗೆ 7 ಇಂಚಿನ ಇನ್‌ಫೋಟೈನ್‌ಮೆಂಟ್ ಸಿಸ್ಟಮ್, ರೇರ್ ಪಾರ್ಕಿಂಗ್ ಕ್ಯಾಮೆರಾ ಸಪೋರ್ಟ್, ಎಲೆಕ್ಟ್ರಿಕ್ ಸನ್‌ರೂಫ್‌, ರೈನ್-ಸೆನ್ಸಿಂಗ್‌ ವೈಪರ್‌ಗಳು, ಅಟೋಮ್ಯಾಟಿಕ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಕ್ರೂಸ್ ಕಂಟ್ರೋಲ್, ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಆಟೋ-ಡಿಮ್ಮಿಂಗ್ ಐಆರ್‌ವಿಎಂ ಮತ್ತು ಪುಶ್ ಬಟನ್ ಸ್ಟಾರ್ಟ್ ಹೊಂದಿದೆ.

ಸೇಪ್ಟಿ ಕ್ರಮಗಳು - ಭದ್ರತೆ ಉದ್ದೇಶಕ್ಕಾಗಿ ಸಿಟಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಹೊಂದಿದೆ, ಆದರೆ ಟಾಪ್‌-ಸ್ಪೆಸಿಫಿಕೇಷನ್‌ನ ಝಡ್‌ಎಕ್ಸ್‌ ವೇರಿಯಂಟ್‌ನಲ್ಲಿ ಎರಡರ ಬದಲಾಗಿ ಆರು ಏರ್‌ಬ್ಯಾಗ್‌ಗಳು ಇವೆ, ಇಬಿಡಿ ಜೊತೆಗೆ ಎಬಿಎಸ್, ಮತ್ತು ಐಎಸ್‌ಓಎಫ್‌ಐಎಕ್ಸ್ ಚೈಲ್ಡ್‌ ಸೀಟ್‌ ಆ್ಯಂಕರ್‌ಗಳು ಎಲ್ಲಾ ಸರಣಿಯಲ್ಲೂ ಸ್ಟಾಂಡರ್ಡ್ ಆಗಿವೆ.

ಎಂಜಿನ್ ಸ್ಪೆಸಿಫಿಕೇಷನ್ - ಹೋಂಡಾ ಸಿಟಿಯ ಎಂಜಿನ್ 1.5-ಲೀಟರ್ i-VTEC ಮತ್ತು 1.5-ಲೀಟರ್ i-DTEC ಪೆಟ್ರೋಲ್ ಮತ್ತು ಡೀಸೆಲ್ ಎರಡೂ ವೇರಿಯಂಟ್‌ಗಳಲ್ಲಿ ಲಭ್ಯವಿದೆ.

  • ಪೆಟ್ರೋಲ್ ಎಂಜಿನ್ 119ಪಿಎಸ್/145ಎನ್‌ಎಮ್‌ ಉತ್ಪಾದಿಸುತ್ತದೆ ಮತ್ತು ಒಂದೋ ಸಿವಿಟಿ ಅಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅಥವಾ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿರುತ್ತದೆ.
  • ಡೀಸೆಲ್ ಎಂಜಿನ್, ಮತ್ತೊಂದೆಡೆ 100ಪಿಎಸ್‌/200ಎನ್‌ಎಂ ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿರುತ್ತದೆ.

ಹೋಂಡಾ ಸಿಟಿ ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ ಕ್ರಮವಾಗಿ 17.4 ಕೆಎಂಪಿಎಲ್ ಮತ್ತು 35.6 ಕೆಎಂಪಿಎಲ್ ವ್ಯಾಪ್ತಿಯಲ್ಲಿ ಮೈಲೇಜ್ ಅನ್ನು ನೀಡುತ್ತದೆ.

ಹೋಂಡಾ ಸಿಟಿ - ವೇರಿಯಂಟ್‌ಗಳು ಮತ್ತು ಎಕ್ಸ್‌-ಶೋರೂಮ್ ಬೆಲೆ

ವೇರಿಯಂಟ್‌ಗಳು ಎಕ್ಸ್‌-ಶೋರೂಮ್ ಬೆಲೆ (ನಗರಗಳಿಗೆ ತಕ್ಕಂತೆ ಬದಲಾಗಬಹುದು)
i-VTEC SV1497 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.4 ಕೆಎಂಪಿಎಲ್ ₹ 9.81 ಲಕ್ಷ
i-VTEC V1497 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.4 ಕೆಎಂಪಿಎಲ್ ₹ 10.5 ಲಕ್ಷ
i-DTEC SV1498 ಸಿಸಿ, ಮ್ಯಾನ್ಯುವಲ್‌, ಡೀಸೆಲ್‌, 25.6 ಕೆಎಂಪಿಎಲ್‌ ₹ 11.11 ಲಕ್ಷ
i-VTEC VX1497 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.4 ಕೆಎಂಪಿಎಲ್ ₹ 11.67 ಲಕ್ಷ
i-DTEC V1498 ಸಿಸಿ, ಮ್ಯಾನ್ಯುವಲ್‌, ಡೀಸೆಲ್‌, 25.6 ಕೆಎಂಪಿಎಲ್‌ ₹ 11.86 ಲಕ್ಷ
i-VTEC CVT V1497 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್, 18.0 ಕೆಎಂಪಿಎಲ್ ₹ 11.86 ಲಕ್ಷ
i-VTEC ZX1497 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.14 ಕೆಎಂಪಿಎಲ್ ₹ 12.86 ಲಕ್ಷ
i-DTEC VX1498 ಸಿಸಿ, ಮ್ಯಾನ್ಯುವಲ್‌, ಡೀಸೆಲ್‌, 25.6 ಕೆಎಂಪಿಎಲ್‌ ₹ 12.97 ಲಕ್ಷ
i-VTEC CVT VX1497 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್, 18.0 ಕೆಎಂಪಿಎಲ್ ₹ 12.97 ಲಕ್ಷ
i-DTEC ZX1498 ಸಿಸಿ, ಮ್ಯಾನ್ಯುವಲ್‌, ಡೀಸೆಲ್‌, 25.6 ಕೆಎಂಪಿಎಲ್‌ ₹ 14.16 ಲಕ್ಷ
i-VTEC CVT ZX1497 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್, 18.0 ಕೆಎಂಪಿಎಲ್ ₹ 14.16 ಲಕ್ಷ

ಹೋಂಡಾ ಸಿಟಿ ಕಾರ್ ಇನ್ಶೂರೆನ್ಸ್ ಆನ್‌ಲೈನ್‌ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ಅಪಘಾತ ಸಂದರ್ಭಗಳಲ್ಲಿ ಕಾರ್‌ ಒಳಗಿರುವ ಪ್ರಯಾಣಿಕರನ್ನು ಡಿಜಿಟ್‌ ಹೋಂಡಾ ಸಿಟಿ ಇನ್ಶೂರೆನ್ಸ್ ಪಾಲಿಸಿ ಕವರ್ ಮಾಡುತ್ತದೆಯೇ?

ಅಪಘಾತ ಸಂದರ್ಭಗಳಲ್ಲಿ ಚಾಲಕ ಮಾಲೀಕ ಹೊರತಾಗಿ ಪ್ರಯಾಣಿಕರು ಯಾವುದೇ ರೀತಿಯ ಕವರೇಜ್ ಪಡೆಯುವುದಿಲ್ಲ. ಪ್ರಯಾಣಿಕರಿಗೂ ಕವರೇಜ್ ಪಡೆಯುವ ಒಂದೇ ಒಂದು ಮಾರ್ಗವೆಂದರೆ ಡಿಜಿಟ್‌ನಲ್ಲಿ ಪ್ಯಾಸೆಂಜರ್‌ ಕವರ್‌ ಆ್ಯಡ್‌-ಆನ್‌ ಆಯ್ಕೆ ಮಾಡುವುದು.

ನನ್ನ ಹೋಂಡಾ ಸಿಟಿ ಇನ್ಶೂರೆನ್ಸ್ ಪಾಲಿಸಿಗೆ ಹೆಚ್ಚಿನ ಐಡಿವಿ ಯಾಕೆ ಪ್ರಯೋಜನಕಾರಿ?

ನಿಮ್ಮ ಪಾಲಿಸಿಯ ಐಡಿವಿ ಇನ್ಸೂರ್ಡ್ ವೆಹಿಕಲ್‌ನ ಕಳ್ಳತನ ಅಥವಾ ರಿಪೇರಿ ಮಾಡಲಾಗದ ಡ್ಯಾಮೇಜ್ ಇದ್ದ ಸಂದರ್ಭದಲ್ಲಿ ನೀವು ನಿಮ್ಮ ಇನ್ಶೂರರ್‌ರಿಂದ ಪಡೆಯುವ ಪರಿಹಾರದ ಅಮೌಂಟ್ ಅನ್ನು ನಿಮ್ಮ ಪಾಲಿಸಿಯ ಐಡಿವಿ ನಿರ್ಧರಿಸುತ್ತದೆ. ಅಂಥಾ ದುರದೃಷ್ಟಕರ ಘಟನೆಗಳಲ್ಲಿ ಆರ್ಥಿಕ ನಷ್ಟವನ್ನು ಸೀಮಿತಗೊಳಿಸುವ, ಹೆಚ್ಚಿನ ಹಣಕಾಸು ಮೌಲ್ಯವನ್ನು ರಿಕವರ್ ಮಾಡುವ ಭರವಸೆಯನ್ನು ಹೆಚ್ಚಿನ ಐಡಿವಿ ಒದಗಿಸುತ್ತದೆ.

ನಾನು ಬೇರೆ ಪೂರೈಕೆದಾರರಿಂದ ಪಡೆದ ನನ್ನ ಈಗಿನ ಹೋಂಡಾ ಸಿಟಿ ಇನ್ಶೂರೆನ್ಸ್ ಪಾಲಿಸಿಯನ್ನು ಎನ್‌ಸಿಬಿ ಕಳೆದುಕೊಳ್ಳದೆಯೇ ಡಿಜಿಟ್‌ಗೆ ಬದಲಾಯಿಸಿಕೊಳ್ಳಬಹುದೇ?

ಬೇರೆ ಪೂರೈಕೆದಾರರಿಂದ ಪಡೆದ ಈಗಿನ ಇನ್ಶೂರೆನ್ಸ್ ಪಾಲಿಸಿಯನ್ನು ಸಂಗ್ರಹಗೊಂಡ ಎನ್‌ಸಿಬಿಯನ್ನು ಕಳೆದುಕೊಳ್ಳದೆಯೇ ಟ್ರಾನ್ಸ್‌ಫರ್‌ ಮಾಡಲು ಡಿಜಿಟ್‌ ಅನುವು ಮಾಡಿಕೊಡುತ್ತದೆ. ಆದಾಗ್ಯೂ, ಪಾಲಿಸಿಹೋಲ್ಡರ್‌ಗಳು ಎನ್‌ಸಿಬಿ ಹೊಂದಿದ್ದಾರೆಯೇ ಹೊರತು ಇನ್ಶೂರ್ಡ್ ವೆಹಿಕಲ್ ಅಲ್ಲ ಎಂಬುದನ್ನು ಮನಸ್ಸಲ್ಲಿಟ್ಟುಕೊಳ್ಳಬೇಕು. ಆದ್ದರಿಂದ, ಒಂದು ವೇಳೆ ನೀವು ಇನ್ಶೂರ್ಡ್ ವೆಹಿಕಲ್ ಅನ್ನು ಇನ್ನೊಂದು ಪಾರ್ಟಿಗೆ ಮಾರಾಟ ಮಾಡಿದರೆ, ಆತ/ಆಕೆ ಇನ್ಸೂರೆನ್ಸ್ ಪಾಲಿಸಿ ಜೊತೆ ಅಟ್ಯಾಚ್ ಆಗಿರುವ ಎನ್‌ಸಿಬಿಯನ್ನು ಕ್ಲೈಮ್ ಮಾಡಲು ಸಾಧ್ಯವಿಲ್ಲ.

ಹೋಂಡಾ ಸಿಟಿ ಇನ್ಶೂರೆನ್ಸ್‌ನಲ್ಲಿ ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಎಂದರೇನು?

ಕಾರನ್ನು ಒಳಗೊಂಡ ಅಪಘಾತ ನಡೆದ ಸಂದರ್ಭದಲ್ಲಿ ಅಂಗವೈಕಲ್ಯ ಉಂಟಾದರೆ ಇನ್ಶೂರ್ಡ್‌ ವೆಹಿಕಲ್‌ನ ಚಾಲಕ-ಮಾಲೀಕರಿಗೆ ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಪರಿಹಾರ ಒದಗಿಸುತ್ತದೆ. ಒಂದು ವೇಳೆ ಅಪಘಾತದಲ್ಲಿ ಚಾಲಕ-ಮಾಲೀಕರ ಮರಣ ಉಂಟಾದರೆ ಪಾಲಿಸಿಹೋಲ್ಡರ್‌ನ ಕುಟುಂಬ ಸದಸ್ಯರು ಪರಿಹಾರಕ್ಕಾಗಿ ಕ್ಲೈಮ್ ಮಾಡಬಹುದು.