ಫೋರ್ಡ್ ಎಂಡೀವರ್ ಇನ್ಶೂರೆನ್ಸ್

ಫೋರ್ಡ್ ಎಂಡೀವರ್ ಕಾರ್ ಇನ್ಶೂರೆನ್ಸ್ ಬೆಲೆಯನ್ನು ತಕ್ಷಣ ಪರಿಶೀಲಿಸಿ

Third-party premium has changed from 1st June. Renew now

ಫೋರ್ಡ್ ಎಂಡೀವರ್ ಇನ್ಶೂರೆನ್ಸ್ ಅನ್ನು ಖರೀದಿಸಿ ಅಥವಾ ರಿನೀವ್ ಮಾಡಿ

ಭಾರತದಲ್ಲಿನ ಆಫ್-ರೋಡ್ ಕ್ರೂಸರ್‌ಗಳು ಫೋರ್ಡ್ ಎಂಡೀವರ್‌ ಕಡೆಗೆ ಹೆಚ್ಚು ಒಲವು ತೋರುತ್ತಾರೆ. ಕಾರು ಜಯಂಟ್ ಡೈಮೆನ್ಷನ್ ಹೊಂದಿದ್ದು, ಸಾಹಸಮಯ ಟ್ರ್ಯಾಕ್‌ಗಳಲ್ಲಿ ಸಾಟಿಯಿಲ್ಲದ ಡ್ರೈವಿಂಗ್ ಅನುಭವವನ್ನು ನೀಡುವ ಸ್ವಯಂಚಾಲಿತ ಪವರ್‌ಟ್ರೇನ್ ಹೊಂದಿದೆ. ಹೊಸ ಎಂಡೀವರ್ ಅನ್ನು ಸುಧಾರಿತ ಸೆನ್ಸರ್ ತಂತ್ರಜ್ಞಾನಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಅದು ನಿಮ್ಮ ಅಗತ್ಯಗಳಿಗೆ ಕಾರನ್ನು ಸಿದ್ಧಗೊಳಿಸುತ್ತದೆ. ಅಲ್ಲದೆ, ಇತ್ತೀಚಿನ ಟೆರೇನ್ ಮ್ಯಾನೇಜ್ ಮೆಂಟ್ ಸಿಸ್ಟಮ್, ಟ್ರಾಕ್ಷ್ ಮತ್ತು ಸ್ಟೆಬಿಲಿಟಿಯನ್ನು ಹೆಚ್ಚಿಸುತ್ತದೆ ಮತ್ತು ಯಾವುದೇ ಥರದ ಪ್ರದೇಶಗಳನ್ನು ಸುಲಭವಾಗಿ ನಿಭಾಯಿಸಲು ನಿಮಗೆ ಸಹಾಯ ಮಾಡುತ್ತದೆ.

ನೀವು ಫೋರ್ಡ್ ಎಂಡೀವರ್ ಅನ್ನು ಖರೀದಿಸಲು ಅಥವಾ ಡ್ರೈವ್ ಮಾಡಲು ಪ್ಲಾನ್ ಮಾಡುತ್ತಿದ್ದರೆ, ನಿಮ್ಮ ವಾಹನವು ರಸ್ತೆಯಲ್ಲಿ ಕಾನೂನುಬದ್ಧವಾಗಿ ಉಳಿಯಲು ನೀವು ಫೋರ್ಡ್ ಎಂಡೀವರ್ ಇನ್ಶೂರೆನ್ಸ್ ಅನ್ನು ಪಡೆಯಬೇಕು. ಹಾಗೆ ಮಾಡಲು ವಿಫಲವಾದರೆ ನೀವು ಭಾರೀ ಪೆನಲ್ಟಿ ಶುಲ್ಕವನ್ನು ಪಾವತಿಸಬೇಕಾಗಬಹುದು.

ಆದಾಗ್ಯೂ, ಭಾರತದಲ್ಲಿ ಕಾರ್ ಇನ್ಶೂರೆನ್ಸ್ ಅನ್ನು ಒದಗಿಸುವ ಹಲವಾರು ಕಂಪನಿಗಳಿವೆ. ಅಂತಹ ವ್ಯಾಪಕ ಆಯ್ಕೆಗಳಲ್ಲಿ, ಸರಿಯಾದ ಇನ್ಶೂರರ್ ರನ್ನು ಆಯ್ಕೆ ಮಾಡುವುದು ಸಂಕೀರ್ಣ ಆಗಿರಬಹುದು. ಆದ್ದರಿಂದ, ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಅಂತಹ ಎಲ್ಲಾ ಕಾರ್ ಇನ್ಶೂರೆನ್ಸ್ ಕಂಪನಿಗಳ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು.

ಫೋರ್ಡ್ ಎಂಡೀವರ್ ಇನ್ಶೂರೆನ್ಸ್ ಬೆಲೆ

ರಿಜಿಸ್ಟ್ರೇಷನ್ ದಿನಾಂಕ ಪ್ರೀಮಿಯಂ (ಓನ್ ಡ್ಯಾಮೇಜ್ ಪಾಲಿಸಿಗೆ)
ಜೂನ್-2021 25,413
ಜೂನ್-2020 22,236
ಜೂನ್-2019 20,421

** ಡಿಸ್‌ಕ್ಲೈಮರ್‌ - ಫೋರ್ಡ್ ಎಂಡೀವರ್ 3.2 ಟೈಟಾನಿಯಂ ಪ್ಲಸ್ 4x4 ಟೈಟಾನಿಯಂ ಡೀಸೆಲ್ ಗೆ ಮಾಡಲಾದ ಪ್ರೀಮಿಯಂ ಕ್ಯಾಲ್ಕುಲೇಷನ್ 3198.0 ಜಿಎಸ್‌ಟಿ ಒಳಗೊಂಡಿಲ್ಲ.

ನಗರ - ಬೆಂಗಳೂರು, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಜೂನ್, ಎನ್‌ಸಿಬಿ- 0%, ಯಾವುದೇ ಆ್ಯಡ್‌-ಆನ್‌ಗಳಿಲ್ಲ, ಪಾಲಿಸಿ ಎಕ್ಸ್ಪೈರ್ ಆಘಿಲ್ಲ & ಕಡಿಮೆ ಐಡಿವಿ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕುಲೇಷನ್ ಅನ್ನು ಮಾರ್ಚ್-2022ರಲ್ಲಿ ಮಾಡಲಾಗಿದೆ. ದಯವಿಟ್ಟು ನಿಮ್ಮ ವಾಹನದ ವಿವರಗಳನ್ನು ಮೇಲೆ ನಮೂದಿಸುವ ಮೂಲಕ ಅಂತಿಮ ಪ್ರೀಮಿಯಂ ಅನ್ನು ಚೆಕ್ ಮಾಡಿ.

ಫೋರ್ಡ್ ಎಂಡೀವರ್ ಕಾರ್ ಇನ್ಶೂರೆನ್ಸ್‌ ನಲ್ಲಿ ಏನೆಲ್ಲಾ ಕವರ್‌ ಆಗುತ್ತದೆ

ಡಿಜಿಟ್‌ನ ಫೋರ್ಡ್ ಎಂಡೀವರ್ ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?

ಫೋರ್ಡ್ ಎಂಡೀವರ್ ಗೆ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು

×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್‌ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವಾಹನದ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

ಎಷ್ಟು ವೇಗವಾಗಿ ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಸೆಟಲ್ ಆಗುತ್ತವೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಫೋರ್ಡ್ ಎಂಡೀವರ್ ಇನ್ಶೂರೆನ್ಸ್ ಗಾಗಿ ಡಿಜಿಟ್ ಅನ್ನು ಏಕೆ ಆರಿಸಬೇಕು?

ಸ್ಪರ್ಧಾತ್ಮಕ ಫೋರ್ಡ್ ಎಂಡೀವರ್ ಇನ್ಶೂರೆನ್ಸ್ ಬೆಲೆಯನ್ನು ಹುಡುಕುವುದರ ಜೊತೆಗೆ, ನೀವು ಐಡಿವಿ, ಕ್ಲೈಮ್ ಸೆಟ್ಲ್‌ಮೆಂಟ್ ಅನುಪಾತ, ನೋ-ಕ್ಲೈಮ್ ಬೋನಸ್ ಮುಂತಾದ ಇತರ ನಿರ್ಣಾಯಕ ಅಂಶಗಳನ್ನು ಪರಿಶೀಲಿಸುವುದನ್ನು ಸಹ ಪರಿಗಣಿಸಬೇಕು.

ಡಿಜಿಟ್ ಇನ್ಶೂರೆನ್ಸ್ ಕಂಪನಿಯು ತಮ್ಮ ಕಾರ್ ಇನ್ಶೂರೆನ್ಸ್ ಮೇಲೆ ಹಲವಾರುಆ್ಯಡ್-ಆನ್ ಪ್ರಯೋಜನಗಳನ್ನು ಒದಗಿಸುತ್ತದೆ.

ಅವುಗಳನ್ನು ನೋಡೋಣ!

1. ಉತ್ಪನ್ನಗಳ ವ್ಯಾಪಕ ಶ್ರೇಣಿ

  • ಥರ್ಡ್-ಪಾರ್ಟಿ ಇನ್ಶೂರೆನ್ಸ್

ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅಡಿಯಲ್ಲಿ, ಅಪಘಾತದಲ್ಲಿ ಥರ್ಡ್ ಪಾರ್ಟಿ ವ್ಯಕ್ತಿ, ಪ್ರಾಪರ್ಟಿ ಅಥವಾ ವಾಹನಕ್ಕೆ ನಿಮ್ಮ ಕಾರಿನಿಂದ ಉಂಟಾಗುವ ಯಾವುದೇ ಡ್ಯಾಮೇಜ್ ಅಥವಾ ನಷ್ಟವನ್ನು ಕವರ್ ಮಾಡಲು ಡಿಜಿಟ್ ಹಣಕಾಸಿನ ನೆರವು ನೀಡುತ್ತದೆ. ಅಲ್ಲದೆ, ಘಟನೆಗೆ ಸಂಬಂಧಿಸಿದ ಎಲ್ಲಾ ಲಿಟಿಗೇಷನ್ ಸಮಸ್ಯೆಗಳನ್ನು ಡಿಜಿಟ್ ನೋಡಿಕೊಳ್ಳುತ್ತದೆ.

  • ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್

ಡಿಜಿಟ್‌ ಫೋರ್ಡ್ ಎಂಡೀವರ್‌ಗೆ ಒದಗಿಸುವ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಥರ್ಡ್ ಪಾರ್ಟಿ ಡ್ಯಾಮೇಜ್ ಗಳು ಮತ್ತು ಓನ್ ಡ್ಯಾಮೇಜ್ ಗಳ ವಿರುದ್ಧ ಸಂಪೂರ್ಣ ಕವರೇಜ್ ಅನ್ನು ನೀಡುತ್ತದೆ. ಅಲ್ಲದೆ, ಅಪಘಾತದಿಂದ ಮರಣ ಅಥವಾ ಅಂಗವೈಕಲ್ಯ ಉಂಟಾದ ಸಂದರ್ಭದಲ್ಲಿ ಪಾಲಿಸಿಹೋಲ್ಡರ್ ಗಳು ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಪಡೆಯಬಹುದು.

2. ಹೆಚ್ಚುವರಿ ಪ್ರಯೋಜನಗಳು

ಫೋರ್ಡ್ ಎಂಡೀವರ್‌ಗಾಗಿ ಡಿಜಿಟ್ ಕಾರ್ ಇನ್ಶೂರೆನ್ಸ್ ಅನ್ನು ಆರಿಸುವ ಮೂಲಕ, ನೀವು ಈ ಕೆಳಗಿನ ಹಲವಾರು ಹೆಚ್ಚುವರಿ ಪ್ರಯೋಜನಗಳನ್ನು ಆನಂದಿಸಬಹುದು:

  • ರೋಡ್ ಸೈಡ್ ಅಸಿಸ್ಟೆನ್ಸ್
  • ಕನ್ಸ್ಯೂಮೇಬಲ್ ಕವರ್
  • ಝೀರೋ ಡೆಪ್ರಿಸಿಯೇಷನ್ ಕವರ್
  • ರಿಟರ್ನ್ ಟು ಇನ್‌ವಾಯ್ಸ್ ಕವರ್‌
  • ಎಂಜಿನ್ ಪ್ರೊಟೆಕ್ಷನ್ ಕವರ್

3. ಕ್ಯಾಶ್ ಲೆಸ್ ಗ್ಯಾರೇಜ್‌ಗಳ ವ್ಯಾಪಕ ನೆಟ್‌ವರ್ಕ್

ಭಾರತದಾದ್ಯಂತ ಡಿಜಿಟ್ ಸುಮಾರು 5800+ ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳನ್ನು ಹೊಂದಿದೆ. ಈ ಗ್ಯಾರೇಜ್ ಗಳಲ್ಲಿ ಯಾವುದಾದರೂ ವೃತ್ತಿಪರ ದುರಸ್ತಿ ಸೇವೆಗಳನ್ನು ನೀವು ಪಡೆಯಬಹುದು ಮತ್ತು ಗರಿಷ್ಠ ಅನುಕೂಲಕ್ಕಾಗಿ ಕ್ಯಾಶ್ ಲೆಸ್ ಪಾವತಿ ಸೌಲಭ್ಯವನ್ನು ಪಡೆಯಬಹುದು.

4. ಸೂಪರ್-ಫಾಸ್ಟ್ ಕ್ಲೈಮ್‌ಗಳು

ಡಿಜಿಟ್ ಹೆಚ್ಚಿನ ಕ್ಲೈಮ್ ಸೆಟಲ್ಮೆಂಟ್ ಅನುಪಾತವನ್ನು ಹೊಂದಿದೆ. ಕಂಪನಿಯು ಖಾಸಗಿ ಕಾರುಗಳ ಸುಮಾರು 96% ಕ್ಲೈಮ್‌ಗಳನ್ನು ಇತ್ಯರ್ಥಪಡಿಸಿದೆ. ಇದು ವೇಗವಾದ ಮತ್ತು ಸುಲಭವಾದ 3 ಹಂತದ ಕ್ಲೈಮ್ ಫೈಲಿಂಗ್ ಆಯ್ಕೆಗಳನ್ನು ಹೊಂದಿದ್ದು, ಅದು ಹೀಗಿವೆ-

  • ಹಂತ 1: ಸ್ವಯಂ ತಪಾಸಣೆ ಲಿಂಕ್ ಅನ್ನು ಸ್ವೀಕರಿಸಲು ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಯಿಂದ 1800 258 5956 ಅನ್ನು ಡಯಲ್ ಮಾಡಿ.
  • ಹಂತ 2: ಲಿಂಕ್‌ನಲ್ಲಿ ನಿಮ್ಮ ದೋಷಯುಕ್ತ ವಾಹನದ ಅಗತ್ಯ ಛಾಯಾಚಿತ್ರಗಳನ್ನು ಪುರಾವೆಯಾಗಿ ಸಬ್ಮಿಟ್ ಮಾಡಿ.
  • ಹಂತ 3: ರೀ-ಇಂಬರ್ಸ್‌ಮೆಂಟ್‌ ಅಥವಾ ಕ್ಯಾಶ್ ಲೆಸ್ ಆಯ್ಕೆಯಿಂದ ನಿಮ್ಮ ಆದ್ಯತೆಯ ರಿಪೇರಿ ಮೋಡ್ ಅನ್ನು ಆರಿಸಿ.

5. ಐಡಿವಿ(IDV) ಕಸ್ಟಮೈಸೇಷನ್

ನಿಮ್ಮ ಐಡಿವಿಯನ್ನು ಕಸ್ಟಮೈಸ್ ಮಾಡಲು ಡಿಜಿಟ್ ನಿಮಗೆ ಅನುಮತಿಸುತ್ತದೆ. ಐಡಿವಿ ನೇರವಾಗಿ ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮತ್ತು ಕ್ಲೈಮ್ ಮೊತ್ತದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ನಿಮ್ಮ ಕಾರು ಕಳವಾದರೆ ಅಥವಾ ತೀವ್ರವಾಗಿ ಡ್ಯಾಮೇಜ್ ಗೊಳಗಾದರೆ ಗರಿಷ್ಠ ಆರ್ಥಿಕ ಕವರೇಜ್ ಅನ್ನು ಪಡೆಯಲು ನಿಮ್ಮ ಫೋರ್ಡ್ ಎಂಡೀವರ್ ಇನ್ಶೂರೆನ್ಸ್ ಬೆಲೆಯ ವಿರುದ್ಧ ನೀವು ಹೆಚ್ಚಿನ ಐಡಿವಿ ಅನ್ನು ಆಯ್ಕೆ ಮಾಡಬಹುದು.

6. ಸುಲಭ ಆನ್‌ಲೈನ್ ಪ್ರಕ್ರಿಯೆ

ಡಿಜಿಟ್ ನೊಂದಿಗೆ, ಕೆಲವೇ ನಿಮಿಷಗಳಲ್ಲಿ ನಿಮ್ಮ ಫೋರ್ಡ್ ಎಂಡೀವರ್ ಇನ್ಶೂರೆನ್ಸ್ ಅನ್ನು ನೀವು ಸುಲಭವಾಗಿ ಖರೀದಿಸಬಹುದು ಅಥವಾ ರಿನೀವ್ ಮಾಡಬಹುದು. ಇದು ದಾಖಲೀಕರಣದ ತೊಡಕಿನ ಮತ್ತು ಸುದೀರ್ಘ ಪ್ರೊಸೆಸ್ ನಿಂದ ನಿಮ್ಮನ್ನು ಉಳಿಸುತ್ತದೆ. ನೀವು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಮತ್ತು ಸರಿಯಾದದನ್ನು ಆಯ್ಕೆ ಮಾಡಲು ಎಲ್ಲಾ ಪಾಲಿಸಿ ಆಯ್ಕೆಗಳು ಮತ್ತು ಅವುಗಳ ಬೆಲೆಯನ್ನು ವಿವರವಾಗಿ ತಿಳಿದುಕೊಳ್ಳಬಹುದು.

ಹೆಚ್ಚುವರಿಯಾಗಿ, ತುರ್ತು ಸಂದರ್ಭಗಳಲ್ಲಿ ನಿಮಗೆ ಸಹಾಯ ಮಾಡಲು 6-ತಿಂಗಳ ವಾರಂಟಿ ಜೊತೆಗೆ 24x7 ಗ್ರಾಹಕ ನೆರವು ಮತ್ತು ಮನೆ ಬಾಗಿಲಿಗೆ ಪಿಕಪ್, ದುರಸ್ತಿ ಮತ್ತು ಡ್ರಾಪ್ ಸೌಲಭ್ಯವನ್ನು ಡಿಜಿಟ್ ಒದಗಿಸುತ್ತದೆ.

ಫೋರ್ಡ್ ಎಂಡೀವರ್‌ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?

ಫೋರ್ಡ್ ಎಂಡೀವರ್ ದುಬಾರಿ ಕಾರು. ಆದ್ದರಿಂದ ನಿಮ್ಮ ಈ ಆಸ್ತಿಯನ್ನು ಕಾರ್ ಇನ್ಶೂರೆನ್ಸ್ ನೊಂದಿಗೆ ರಕ್ಷಿಸುವುದು ಬುದ್ಧಿವಂತ ನಿರ್ಧಾರವಾಗಿದೆ. ಕಾರ್ ಇನ್ಶೂರೆನ್ಸ್ ಹೇಗೆ ಸಹಾಯಕವಾಗಬಹುದು ಎಂಬುದನ್ನು ಸಂಕ್ಷಿಪ್ತವಾಗಿ ನೋಡೋಣ.

  • ಲೀಗಲೀ ಕಂಪ್ಲಯಂಟ್: ಭಾರತೀಯ ರಸ್ತೆಗಳಲ್ಲಿ ಕಾರ್ ಇನ್ಶೂರೆನ್ಸ್ ಇಲ್ಲದೆ ಡ್ರೈವ್ ಮಾಡುವುದು ಕಾನೂನುಬಾಹಿರವಾಗಿದೆ. ಕನಿಷ್ಠ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ ₹.2000 ದಂಡ ಮತ್ತು/ಅಥವಾ 3 ತಿಂಗಳ ಜೈಲು ಶಿಕ್ಷೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.
  • ಹಣಕಾಸಿನ ಲಯಬಿಲಿಟಿಗಳು: ಅಪಘಾತ, ಕಳ್ಳತನ, ಪ್ರಕೃತಿ ವಿಕೋಪ, ವಿಧ್ವಂಸಕ ಕೃತ್ಯಗಳು, ಗಲಭೆಗಳು ಇತ್ಯಾದಿಗಳಿಂದಾಗಿ ನಿಮ್ಮ ಕಾರಿನಲ್ಲಿ ನೀವು ನಷ್ಟ ಅಥವಾ ಡ್ಯಾಮೇಜ್ ಅನ್ನು ಅನುಭವಿಸಬಹುದು. ಅಂತಹ ಸಂದರ್ಭಗಳಲ್ಲಿ, ಇನ್ಶೂರರ್ ರಿಂದ ದೊಡ್ಡ ರಿಪೇರಿ ವೆಚ್ಚವನ್ನು ರೀ-ಇಂಬರ್ಸ್ ಮಾಡಿಸಬಹುದು.
  • ಥರ್ಡ್-ಪಾರ್ಟಿ ಲಯಬಿಲಿಟಿ: ಅಪಘಾತದ ಅಸಂಭವ ಘಟನೆಯಲ್ಲಿ ಯಾರಿಗಾದರೂ ಅಥವಾ ಅವರ ಪ್ರಾಪರ್ಟಿಗೆ ಡ್ಯಾಮೇಜ್/ಗಾಯಕ್ಕೆ ನೀವು ಜವಾಬ್ದಾರರಾಗಿದ್ದರೆ ಥರ್ಡ್ ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ನಿಮ್ಮನ್ನು ರಕ್ಷಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ಈ ಇನ್ಶೂರೆನ್ಸ್ ನಿಮ್ಮನ್ನು ಮತ್ತು ನಿಮ್ಮ ಜೇಬಿಗೆ ರಕ್ಷಣೆ ನೀಡುತ್ತದೆ.
  • ಕಾಂಪ್ರೆಹೆನ್ಸಿವ್ ಕವರ್: ಕಾಂಪ್ರೆಹೆನ್ಸಿವ್ ಕವರ್ ಯಾವಾಗಲೂ ಉತ್ತಮವಾಗಿರುತ್ತದೆ, ಏಕೆಂದರೆ ಇದು ಪೀಡಿತರಿಗೆ ಮಾತ್ರವಲ್ಲದೆ ನಿಮಗೆ ಮತ್ತು ನಿಮ್ಮ ಫೋರ್ಡ್ ಎಂಡೀವರ್‌ಗೆ ರಕ್ಷಣಾತ್ಮಕ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆ. ಬೆಂಕಿ, ಕಳ್ಳತನ, ಮಾನವ ನಿರ್ಮಿತ/ನೈಸರ್ಗಿಕ ವಿಕೋಪಗಳು, ವಿಧ್ವಂಸಕ ಕೃತ್ಯಗಳು, ಪ್ರಕೃತಿ/ಹವಾಮಾನ, ಪ್ರಾಣಿಗಳು ಇತ್ಯಾದಿಗಳಂತಹ ನಿಮ್ಮ ನಿಯಂತ್ರಣದಲ್ಲಿಲ್ಲದ ಅಂಶಗಳಿಂದ ಉಂಟಾಗುವ ಎಲ್ಲಾ ಡ್ಯಾಮೇಜ್ ಗಳನ್ನು ಕಾಂಪ್ರೆಹೆನ್ಸಿವ್ ಕವರ್ ಪ್ರಮುಖವಾಗಿ ಕವರ್ ಮಾಡುತ್ತದೆ. ಅಲ್ಲದೆ, ಕವರೇಜ್ ಅನ್ನು ವಿಸ್ತರಿಸಲು ಆ್ಯಡ್-ಆನ್‌ಗಳನ್ನು ಖರೀದಿಸಬಹುದು.

ಫೋರ್ಡ್ ಎಂಡೀವರ್ ಬಗ್ಗೆ ಇನ್ನಷ್ಟು ತಿಳಿಯಿರಿ

ಪೂರ್ಣ-ಗಾತ್ರದ ಎಸ್‌ಯುವಿ ಸೆಗ್ಮೆಂಟ್ ನಲ್ಲಿ, ಫೋರ್ಡ್ ಎಂಡೀವರ್ ಯಾವಾಗಲೂ ಭಾರತೀಯ ಕಾರ್ ಖರೀದಿದಾರರಿಗೆ ಜನಪ್ರಿಯ ಆಯ್ಕೆಯಾಗಿದೆ. ಭಾರತದಲ್ಲಿ 2016ರಲ್ಲಿ ಪ್ರಾರಂಭವಾದಾಗಿನಿಂದ, ಇದು ಹೃದಯಗಳನ್ನು ಗೆದ್ದಿದೆ. ಇದು ಫೋರ್ಡ್ ಮನೆಯಿಂದ ಸಿಕ್ಕ ದೊಡ್ಡ ಭಾರಿ ಕಾರು ಆಗಿದೆ. ಟೊಯೋಟಾ ಫಾರ್ಚುನರ್, ಮಹೀಂದ್ರಾ ಅಲ್ಟುರಾಸ್ ಮುಂತಾದ ಮಾರುಕಟ್ಟೆಯಲ್ಲಿರುವ ಇತರ ದೊಡ್ಡ ಕಾರುಗಳ ವಿರುದ್ಧ ಹೋರಾಡಲು ಈ ಕಾರು ಇತ್ತೀಚೆಗೆ ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿದೆ.

ಈ ಕಾರು ರು.28.19-ರು.32.97 ಲಕ್ಷಗಳ ಬೆಲೆ ಶ್ರೇಣಿಯಲ್ಲಿ ಬರುತ್ತದೆ (ಎಕ್ಸ್ ಶೋ ರೂಂ)

ನೀವು ಫೋರ್ಡ್ ಎಂಡೀವರ್ ಅನ್ನು ಏಕೆ ಖರೀದಿಸಬೇಕು?

  • ರೋಡ್ ಪ್ರೆಸೆನ್ಸ್: ಭಾರತದಲ್ಲಿ, ಜನರು ಅದರ ಗಾತ್ರದಿಂದ ಕಾರನ್ನು ನಿರ್ಣಯಿಸುತ್ತಾರೆ. ನೀವು ಫೋರ್ಡ್ ಎಂಡೀವರ್‌ನ ಚಕ್ರದ ಹಿಂದೆ ಇರುವಾಗ, ನೀವು ಸರಿಯಾಗಿ ಕಾರು ವೀಕ್ಷಿಸುವ ಅವಕಾಶ ಸಿಗುತ್ತದೆ. ಈ ಸುಂದರ ದೊಡ್ಡದಾದ ಎಸ್‌ಯುವಿ ಒಂದು ಪ್ರಮುಖ ಕಾರ್ ಆಗಿದೆ. ಇದು ಆಕರ್ಷಖವಾಗಿ, ದೊಡ್ಡದಾಗಿ ಕಾಣಿಸುತ್ತದೆ ಮತ್ತು ಬಹುತೇಕ ರಕ್ಷಾಕವಚವಾಗಿ ರಕ್ಷಿಸುತ್ತದೆ. 18-ಇಂಚಿನ ಡೈಮಂಡ್-ಕಟ್ ಅಲಾಯ್ ಗಳು ಯಾವುದೇ ಭೂಪ್ರದೇಶಕ್ಕೆ ಸಿದ್ಧವಾಗಿವೆ. ಮತ್ತು ಮಿಶ್ರಲೋಹದ ಚಕ್ರಗಳ ಡ್ಯುಯಲ್-ಟೋನ್ ಬಣ್ಣವು ಕಾರನ್ನು ಅನನ್ಯಗೊಳಿಸುತ್ತದೆ. ರಸ್ತೆಗಳನ್ನು ಆಳಲು ಈ ಕಾರನ್ನು ಸಿದ್ಧ ಮಾಡಲಾಗಿದೆ. ನಿಮ್ಮ ಪಕ್ಕದಲ್ಲಿ ಎಂಡೀವರ್‌ ಇದ್ದರೆ, ಯಾರೂ ನಿಮ್ಮೊಂದಿಗೆ ತಕರಾರು ಮಾಡುವುದಿಲ್ಲ.
  • ಇಂಟೀರಿಯರ್: ನೀವು ಕಾರಿಗೆ ಪ್ರವೇಶಿಸಿ ಬಾಗಿಲು ಮುಚ್ಚಿದ ಕ್ಷಣದಲ್ಲಿ, ಬಾಗಿಲು ಮುಚ್ಚಿದ ಸದ್ದು ಈ ಕಾರಿನ ನಿರ್ಮಾಣ ಗುಣಮಟ್ಟವನ್ನು ನಿಮಗೆ ತಿಳಿಸುತ್ತದೆ. ಡ್ಯಾಶ್‌ಬೋರ್ಡ್ ಅನ್ನು ಅಂದವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಎಲ್ಲವೂ ಸುಲಭವಾಗಿ ಸಿಗುತ್ತದೆ. ಸೀಟ್ ಗಳನ್ನು ನೀವು ಸ್ಟೇರಿಂಗ್ ವೀಲ್ ಹಿಂದೆ ಸುದೀರ್ಘ ಸಮಯ ಕಳೆಯುವಂತೆ ವಿನ್ಯಾಸಗೊಳಿಸಲಾಗಿದೆ. ಹೊಂದಿಸಬಹುದಾದ ಆಂಬಿಯೆಂಟ್ ಲೈಟ್ ಯಾರ ಮನಸ್ಥಿತಿಯನ್ನೂ ಹುರಿದುಂಬಿಸುವಂತಿದೆ.
  • ಪ್ರಯಾಣಿಕರ ಸೌಕರ್ಯ: ಪ್ರಯಾಣಿಕರ ಸಾಲಿನಲ್ಲಿನ ಸೀಟ್ ಗಳು ಸಾಕಷ್ಟು ಚೆನ್ನಾಗಿ ಕೂರಿಸಲಾಗಿದೆ. ಎಂಡೀವರ್‌ನ ಕ್ಯಾಬಿನ್ ಈ ಸೆಗ್ಮೆಂಟ್ ನ ಇತರ ಸ್ಪರ್ಧಿಗಳಿಗಿಂತ ಭಿನ್ನವಾಗಿದೆ? ವಿಹಂಗಮ ಸನ್‌ರೂಫ್ ಇದೆ, ಇದು ಕ್ಯಾಬಿನ್ ಅನ್ನು ನಿಜವಾಗಿಯೂ ಸುಂದರ ಮತ್ತು ಗಾಳಿಯಾಡುವಂತೆ ಮಾಡುತ್ತದೆ.
  • ವೈಶಿಷ್ಟ್ಯಗಳು: ಎಂಡೀವರ್, 6 ಏರ್‌ಬ್ಯಾಗ್‌ಗಳು, ಡ್ರೈವರ್ ಸೀಟ್ ಮೆಮೊರಿ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾ, ಗೆಸ್ಚರ್-ನಿಯಂತ್ರಿತ ಹ್ಯಾಂಡ್ಸ್-ಫ್ರೀ ಬೂಟ್ ರಿಲೀಸ್ ಮತ್ತು ಇನ್ನೂ ಹೆಚ್ಚಿನವುಗಳೊಂದಿಗೆ ತನ್ನನ್ನು ಪ್ರತ್ಯೇಕಿಸಿಕೊಂಡಿದೆ. ಈ ಸೆಗ್ಮೆಂಟ್ ನಲ್ಲಿ ಆಟೋ ಪಾರ್ಕಿಂಗ್ ಆಯ್ಕೆಯೊಂದಿಗೆ ಬರುವ ಏಕೈಕ ಕಾರು ಇದಾಗಿದೆ. ಇದು ಎಸ್‌ಯುವಿಯನ್ನು ಸೂಕ್ತವಾದ ಪಾರ್ಕಿಂಗ್ ಸ್ಥಳಕ್ಕೆ ಕರೆದೊಯುತ್ತದೆ. ಈ ವೈಶಿಷ್ಟ್ಯವು ಅಂತಹ ಬೃಹತ್ ಕಾರನ್ನು ಓಡಿಸಲು ಸುಲಭ ಮಾಡುತ್ತದೆ.
  • ಡ್ರೈವ್: ಎಂಡೀವರ್ ಎರಡು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಒಂದು 2.2 ಲೀಟರ್ ಮತ್ತು ಇನ್ನೊಂದು 3.2 ಲೀಟರ್ ನ ಮ್ಯಾನ್ಯುವಲ್ ಮತ್ತು ಅಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಎರಡೂ ಲಭ್ಯವಿದೆ. ಎಂಡೀವರ್ 3.2 ವರ್ಗದ ಅತ್ಯುತ್ತಮ ಆಕ್ಸಲರೇಷನ್ ಅನ್ನು ಹೊಂದಿದೆ. ಎಂಜಿನ್ ಪರಿಷ್ಕರಣೆ ಉತ್ತಮವಾಗಿದೆ, ಎಲ್ಲಾ ಆರ್ ಪಿ ಎಂ ಗಳಲ್ಲಿ ಪವರ್ ದೊರೆಯುತ್ತದೆ. ಈ ಕಾರು ಸದಾ ಸಿದ್ಧವಾಗಿರುವ ಭಾವನೆ ತರುತ್ತದೆ ಮತ್ತು ಸದಾ ಸಿದ್ಧವಾಗಿರುತ್ತದೆ.
  • ಆಫ್ ರೋಡಿಂಗ್: ಫೋರ್ಡ್ ಎಂಡೀವರ್ ಆಫ್ ರೋಡಿಂಗ್‌ನಲ್ಲಿ ಬೆಟ್ಟದ ಟಗರಿನಂತೆ ಭಾಸವಾಗುತ್ತದೆ. ಟೆರೇನ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಎಂಥಾ ತೊಂದರೆಯಿಂದಲೂ ಸುಲಭವಾಗಿ ಹೊರಬರಲು ಅನುವು ಮಾಡಿಕೊಡುತ್ತದೆ.

ಫೋರ್ಡ್ ಎಂಡೀವರ್ ವೇರಿಯಂಟ್ ಗಳು

ವೇರಿಯಂಟ್ ಹೆಸರು ವೇರಿಯಂಟ್ ಬೆಲೆ (ಮುಂಬೈನಲ್ಲಿ, ಇತರ ನಗರಗಳಲ್ಲಿ ಬದಲಾಗಬಹುದು)
2.0l ಟೈಟಾನಿಯಂ ಪ್ಲಸ್ 4x2 ಎಟಿ ₹ 33.8 ಲಕ್ಷ
ಎಂಡೀವರ್ 2.0l ಟೈಟಾನಿಯಂ ಪ್ಲಸ್ 4x4 ಎಟಿ ₹ 35.6 ಲಕ್ಷ
ಎಂಡೀವರ್ 2.0l ಸ್ಪೋರ್ಟ್ 4x4 ಎಟಿ ₹ 36.25 ಲಕ್ಷ

ಭಾರತದಲ್ಲಿ ಫೋರ್ಡ್ ಎಂಡೀವರ್ ಕಾರ್ ಇನ್ಶೂರೆನ್ಸ್ ಕುರಿತು ಪದೇಪದೇ ಕೇಳಲಾದ ಪ್ರಶ್ನೆ ಗಳು

ಡಿಜಿಟ್ ಥರ್ಡ್ ಪಾರ್ಟಿ ಪಾಲಿಸಿಹೋಲ್ಡರ್ ಗಳಿಗೆ ಓನ್ ಕವರ್ ನೀಡುತ್ತದೆಯೇ?

ಇಲ್ಲ, ಥರ್ಡ್ ಪಾರ್ಟಿ ಓನ್ಲಿ ಪಾಲಿಸಿಯ ಸಂದರ್ಭದಲ್ಲಿ ಓನ್ ವೆಹಿಕಲ್ ಡ್ಯಾಮೇಜ್ ಅನ್ನು ಡಿಜಿಟ್ ಕವರ್ ಮಾಡುವುದಿಲ್ಲ.

ಡಿಜಿಟ್ ಎಷ್ಟು ನೋ ಕ್ಲೇಮ್ ಬೋನಸ್ ನೀಡುತ್ತದೆ?

ಡಿಜಿಟ್ ಕ್ಲೈಮ್-ಮುಕ್ತ ವರ್ಷಗಳ ಸಂಖ್ಯೆಯನ್ನು ಆಧರಿಸಿ ನಂತರದ ಪ್ರೀಮಿಯಂಗಳಲ್ಲಿ 50%ವರೆಗೆ ಡಿಸ್ಕೌಂಟ್ ಅನ್ನು ನೀಡಬಹುದು.