ಒಂದು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಅಪಘಾತಗಳು, ಅನಾರೋಗ್ಯ ಅಥವಾ ಗಾಯದ ಕಾರಣದಿಂದ ಉಂಟಾಗುವ ವೈದ್ಯಕೀಯ ವೆಚ್ಚಗಳ ವಿರುದ್ಧ, ಕವರೇಜ್ ಅನ್ನು ವಿಸ್ತರಿಸುತ್ತದೆ. ಒಂದು ನಿರ್ದಿಷ್ಟಪಡಿಸಿದ ಅವಧಿಗೆ, ಒಬ್ಬ ವ್ಯಕ್ತಿಯು ಮಾಸಿಕ ಅಥವಾ ವಾರ್ಷಿಕ ಪ್ರೀಮಿಯಂ ಪಾವತಿಗಳ ವಿರುದ್ಧ ಅಂತಹ ಪಾಲಿಸಿಯನ್ನು ಪಡೆಯಬಹುದು.
ಈ ಅವಧಿಯಲ್ಲಿ, ಇನ್ಶೂರೆನ್ಸ್ ಹೋಲ್ಡರ್ ಯಾವುದಾದರೂ ಅಪಘಾತವನ್ನು ಎದುರಿಸಿದರೆ ಅಥವಾ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೆ, ಚಿಕಿತ್ಸೆಯ ಉದ್ದೇಶಗಳಿಗಾಗಿ ಮಾಡಿದ ವೆಚ್ಚವನ್ನು ಇನ್ಶೂರೆನ್ಸ್ ಪೂರೈಕೆದಾರರು ಭರಿಸುತ್ತಾರೆ.
ಕೆಳಗಿನ ವಿಭಾಗಗಳಲ್ಲಿ ವಿವರವಾಗಿ ಚರ್ಚಿಸಲಾದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳೊಂದಿಗೆ, ವಿಸ್ತರಿಸಲಾದ ಹಲವಾರು ಆಡ್-ಆನ್ ಪ್ರಯೋಜನಗಳನ್ನು ಸಹ ನೀವು ಆನಂದಿಸಬಹುದು.
ಆದರೆ, ಮೊದಲ ಸ್ಥಾನದಲ್ಲಿ,
ಈ ಅಂಕಿಅಂಶಗಳು ಏನನ್ನು ಸೂಚಿಸುತ್ತವೆ? ವ್ಯಕ್ತಿಯೊಬ್ಬನು ತನ್ನ ಜೀವಿತಾವಧಿಯಲ್ಲಿ ನೋಡಬಹುದಾದ ಸಂಭಾವ್ಯ ವೈದ್ಯಕೀಯ ತೊಡಕುಗಳು ಮತ್ತು ಅದರ ಚಿಕಿತ್ಸೆಗೆ ಅನುಗುಣವಾದ ವೆಚ್ಚಗಳು.
ಭಾರತದಲ್ಲಿನ ಹೆಲ್ತ್ ಕೇರ್ ಮಾರುಕಟ್ಟೆಯು 2022 ರ ವೇಳೆಗೆ ಯುಎಸ್ $ 372 ಶತಕೋಟಿ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಇದು, ದೇಶದಲ್ಲಿ ವೈದ್ಯಕೀಯ ಶುಲ್ಕಗಳು ಹೆಚ್ಚಾಗುತ್ತಿರುವ ದರವನ್ನು ಪ್ರತಿಬಿಂಬಿಸುತ್ತಿದೆ.
ಈ ಅಚ್ಚರಿಗೊಳಿಸುವ ಅಂಕಿಅಂಶಗಳು, ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳೊಂದಿಗೆ, ಭಾರತದಲ್ಲಿನ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಪ್ರಾಮುಖ್ಯತೆಯನ್ನು ಹೇಳುತ್ತವೆ. ಈ ಪಾಲಿಸಿಗಳು ಪಾಲಿಸಿದಾರರು ಮಾಡಿದ ಆವರ್ತಕ (ಪಿರಿಯಾಡಿಕ್) ಪ್ರೀಮಿಯಂ ಪಾವತಿಗಳ ವಿರುದ್ಧ, ಆರೋಗ್ಯ ಸಂಬಂಧಿ ವೆಚ್ಚಗಳ ಕಾಂಪ್ರೆಹೆನ್ಸಿವ್ ಕವರೇಜ್ ಅನ್ನು ನೀಡುತ್ತವೆ.
ಪ್ರಮುಖವಾದುದು : ಭಾರತದಲ್ಲಿ ಕೊರೊನಾವೈರಸ್ ಇನ್ಶೂರೆನ್ಸಿನ ಅನುಕೂಲಗಳು ಮತ್ತು ಅನಾನುಕೂಲತೆಗಳ ಕುರಿತು ಇನ್ನಷ್ಟು ತಿಳಿಯಿರಿ
ತುರ್ತು ಚಿಕಿತ್ಸೆಗೆ ಅಗತ್ಯವಿರುವ ಯಾವುದೇ ವೈದ್ಯಕೀಯ ಸ್ಥಿತಿಯು, ಸ್ಟ್ಯಾಂಡರ್ಡ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯಡಿಯಲ್ಲಿ ಕವರ್ ಆಗುತ್ತದೆ. ಆದಾಗ್ಯೂ, ಇನ್ಶೂರೆನ್ಸ್ ಯೋಜನೆಯು ಲಭ್ಯವಿಲ್ಲದಿದ್ದಾಗ ರೋಗವನ್ನು ಈ ಹಿಂದೆ ಡಯಾಗ್ನೋಸ್ ಮಾಡದಿದ್ದಲ್ಲಿ ಕ್ಲೈಮ್ಗಳನ್ನು ಮಾಡಲು ಸಾಧ್ಯವಿಲ್ಲ.
ಈ ಕೆಳಗಿನ ಸಂದರ್ಭಗಳಲ್ಲಿ ಉಂಟಾಗುವ ಆಸ್ಪತ್ರೆಯ ವೆಚ್ಚಗಳನ್ನು ಹೆಸರಾಂತ ಇನ್ಶೂರೆನ್ಸ್ ಪೂರೈಕೆದಾರರು ಸಹ ವಿಸ್ತರಿಸುತ್ತಾರೆ:
ರೋಗನಿರ್ಣಯದ ವೆಚ್ಚಗಳು ಮತ್ತು ವೈದ್ಯರ ಶುಲ್ಕಗಳು ಮುಂತಾದ ಆಸ್ಪತ್ರೆಯ ಪೂರ್ವ ವೆಚ್ಚಗಳನ್ನು ಹೆಲ್ತ್ ಇನ್ಶೂರೆನ್ಸ್ ಯೋಜನೆಯಲ್ಲಿ ಕವರ್ ಮಾಡಬಹುದು.
ಔಷಧಿ, ದಿನನಿತ್ಯದ ತಪಾಸಣೆ, ಚುಚ್ಚುಮದ್ದು ಮುಂತಾದ ಬಿಡುಗಡೆಯ ನಂತರದ (post-release) ವೆಚ್ಚಗಳನ್ನು ಹೆಚ್ಚಿನ ಇನ್ಶೂರೆನ್ಸ್ ಕಂಪನಿಗಳು ಮರುಪಾವತಿಸುತ್ತವೆ. ಅಂತಹ ವೆಚ್ಚಗಳ ವಿರುದ್ಧ ಪರಿಹಾರ ನಿಧಿಗಳನ್ನು ಒಟ್ಟು ಮೊತ್ತವನ್ನಾಗಿ ಮಾಡುವ ಮೂಲಕ ಅಥವಾ ಸಂಬಂಧಿತ ಬಿಲ್ಗಳನ್ನು ನೀಡುವ ಮೂಲಕ ಹೊರತೆಗೆಯಬಹುದು.
ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಐಸಿಯು (ICU) ಹಾಸಿಗೆ ಶುಲ್ಕವನ್ನು ಸಹ ಕವರ್ ಮಾಡುತ್ತವೆ. ಇನ್ಶೂರೆನ್ಸ್ ಪಡೆದ ವ್ಯಕ್ತಿಯು ಖಾಸಗಿ ಕೋಣೆಯಲ್ಲಿ ಉಳಿಯುವ ಆಯ್ಕೆಯನ್ನು ಸಹ ಮಾಡಬಹುದು. ಅದಕ್ಕೆ ಸಂಬಂಧಪಟ್ಟ ವೆಚ್ಚವನ್ನು ಇನ್ಶೂರೆನ್ಸ್ ಕಂಪನಿಯ ವಿವೇಚನೆಯಿಂದ ನಿರ್ದಿಷ್ಟ ಮೊತ್ತದವರೆಗೆ ಅಥವಾ ಒಟ್ಟು ಇನ್ಶೂರೆನ್ಸ್ ಮೊತ್ತದವರೆಗೆ, ಆಯಾ ಇನ್ಶೂರೆನ್ಸ್ ಪೂರೈಕೆದಾರರಿಗೆ ಬಿಲ್ ಮಾಡಬಹುದಾಗಿದೆ.
ಮನೋವೈದ್ಯಕೀಯ ಚಿಕಿತ್ಸೆಗಾಗಿ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡುವುದು ಸಹ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಅಡಿಯಲ್ಲಿ ಕವರ್ ಆಗುತ್ತದೆ. ಭಾರತದಲ್ಲಿ ಮತ್ತು ಜಾಗತಿಕವಾಗಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ, ಈ ಸೌಲಭ್ಯವು ವ್ಯಕ್ತಿಗಳು ತಮ್ಮ ಸುಗಮ ಜೀವನಕ್ಕಾಗಿ ಪ್ರೊಫೆಷನಲ್ ಸಹಾಯವನ್ನು ಪಡೆಯಲು ಅನುಮತಿಸುತ್ತವೆ.
ನಿರ್ದಿಷ್ಟ ಇನ್ಶೂರೆನ್ಸ್ ಪೂರೈಕೆದಾರರು ಮಾತ್ರವೇ ತಮ್ಮ ಸ್ಥೂಲಕಾಯತೆಯ ಸಮಸ್ಯೆಗಳನ್ನು ನಿವಾರಿಸಲು, ವ್ಯಕ್ತಿಗಳಿಗೆ ಸಹಾಯವಾಗುವ ಸರ್ಜರಿಗಳ ಎಲ್ಲಾ ವೆಚ್ಚಗಳನ್ನು ಭರಿಸಲು ಒಪ್ಪುತ್ತಾರೆ. ಸ್ಥೂಲಕಾಯತೆಯು ಸಾಮಾನ್ಯವಾಗಿ ಮನುಷ್ಯನಿಗೆ ಹೃದಯ ಸಮಸ್ಯೆಗಳು, ಮಧುಮೇಹ, ಅಧಿಕ ರಕ್ತದೊತ್ತಡ, ಮುಂತಾದ ಇತರ ಸಂಬಂಧಿತ ತೊಂದರೆಗಳು ಹೆಚ್ಚಾಗಲು ಕಾರಣವಾಗುತ್ತದೆ. ಇದು ದೀರ್ಘಾವಧಿಯಲ್ಲಿ ವ್ಯಕ್ತಿಯೊಬ್ಬನ ಒಟ್ಟಾರೆ ಯೋಗಕ್ಷೇಮವನ್ನು ಕೊಂಡೊಯ್ಯುತ್ತದೆ.
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಇಂತಹ ಲಕ್ಷಣಗಳು, ವ್ಯಕ್ತಿಯು ಎದುರಿಸಬಹುದಾದ ಎಲ್ಲ ಪ್ರಮುಖ ವೈದ್ಯಕೀಯ ವೆಚ್ಚಗಳನ್ನು ಪೂರೈಸುವಲ್ಲಿ ಸಮರ್ಥವಾಗಿವೆ. ಸ್ವಲ್ಪ ಹೆಚ್ಚಿನ ಪ್ರೀಮಿಯಂ ಶುಲ್ಕಗಳಲ್ಲಿ ಪ್ರಮುಖ ಸಂಸ್ಥೆಗಳು, ಹೆಚ್ಚಿನ ಕವರೇಜ್ ಸೌಲಭ್ಯದ ರೂಪದಲ್ಲಿ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತವೆ.
ಆಸ್ಪತ್ರೆಯ ಕೊಠಡಿ ಬಾಡಿಗೆಯು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಆಗುತ್ತವೆ. ಇದು, ಇನ್ಶೂರೆನ್ಸ್ ಹೊಂದಿದ ವ್ಯಕ್ತಿಗಳು ಆರಾಮವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡಿಕೊಡುತ್ತದೆ. ಇಂತಹ ಸಂದರ್ಭಗಳಲ್ಲಿ ವಿತರಿಸಲಾಗುವ ಒಟ್ಟು ಮೊತ್ತವನ್ನು ಇನ್ಶೂರೆನ್ಸ್ ಕಂಪನಿಯು ಮುಂಚಿತವಾಗಿಯೇ ನಿರ್ದಿಷ್ಟಪಡಿಸಿರುತ್ತದೆ.
ಆಸ್ಪತ್ರೆಗಳಲ್ಲಿ ಡಯಾಲಿಸಿಸ್, ಕೆಟರಾಕ್ಟ್, ಟಾನ್ಸಿಲೆಕ್ಟಮಿ ಮುಂತಾದ ಡೇಕೇರ್ ಚಿಕಿತ್ಸೆಗಾಗಿ ತಗಲುವ ವೆಚ್ಚಗಳನ್ನು ಹೆಚ್ಚಿನ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳ ಅಡಿಯಲ್ಲಿ ಕವರ್ ಮಾಡಲಾಗುತ್ತದೆ.
ಸ್ಟ್ಯಾಂಡರ್ಡ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ವೈದ್ಯಕೀಯ ತುರ್ತುಸ್ಥಿತಿಯ ಸಮಯದಲ್ಲಿ ಉಂಟಾಗುವ ಯಾವುದೇ ಆಂಬ್ಯುಲೆನ್ಸ್ ವೆಚ್ಚಗಳನ್ನು ಕವರ್ ಮಾಡುತ್ತದೆ. ಸಾಮಾನ್ಯವಾಗಿ ಪ್ರೀಮಿಯಂ ಆಸ್ಪತ್ರೆಗಳು, ಸಾರಿಗೆಗಾಗಿ ಅಧಿಕ ಮೊತ್ತವನ್ನು ವಿಧಿಸುವುದರಿಂದ, ಈ ಯೋಜನೆಯು ನಿಮಗೆ ಗಮನಾರ್ಹ ಪ್ರಯೋಜನವನ್ನು ನೀಡುತ್ತದೆ.
ಅಂತಹ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ, ಪ್ರತಿ ಬಾರಿಯು ನಿಮ್ಮ ಆರೋಗ್ಯದ ಪರಿಸ್ಥಿತಿಯು ಬೇರೆ ಬೇರೆಯಾಗಿದ್ದರೆ, ನೀವು ವರ್ಷಕ್ಕೆ ಎರಡು ಬಾರಿ ಇನ್ಶೂರೆನ್ಸ್ ಮೊತ್ತದಷ್ಟು, ಕ್ಲೈಮ್ಗಳನ್ನು ಮಾಡಬಹುದು.
ಪ್ರತಿ ನಾನ್-ಕ್ಲೈಮ್ ವರ್ಷಕ್ಕೆ, ಇನ್ಶೂರೆನ್ಸ್ ಮಾಡಲಾದ ವ್ಯಕ್ತಿಗಳಿಗೆ ಹೆಚ್ಚಿನ ರಿಯಾಯಿತಿಗಳು ಅಥವಾ ಹೆಚ್ಚಿನ ಇನ್ಶೂರೆನ್ಸ್ ಮೊತ್ತವನ್ನು (ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ) ನೀಡಲಾಗುತ್ತದೆ. ಅದು ವಾರ್ಷಿಕವಾಗಿ ಪಾವತಿಸಬೇಕಾದ ಅವರ ಪ್ರೀಮಿಯಂ ಶುಲ್ಕಗಳನ್ನು ಕಡಿಮೆ ಮಾಡಲು ಅಥವಾ ಅವರ ಇನ್ಶೂರೆನ್ಸ್ ಮೊತ್ತದ ಕವರೇಜ್ ಅನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.
ದಿನನಿತ್ಯದ ನಗದು ಭತ್ಯೆಯನ್ನು ನಿಗದಿತ ಸಂಸ್ಥೆಗಳು ಒದಗಿಸುತ್ತವೆ. ಇದು ಚಿಕಿತ್ಸೆಯ ಸಮಯದಲ್ಲಿ, ಪಾವತಿಯ ನಷ್ಟವನ್ನು ತುಂಬಲು ವ್ಯಕ್ತಿಗಳಿಗೆ ಅನುವು ಮಾಡಿಕೊಡುತ್ತದೆ.
ಹೆಸರಾಂತ ಇನ್ಶೂರೆನ್ಸ್ ಕಂಪನಿಗಳು, ಇನ್ಶೂರೆನ್ಸ್ ಮಾಡಿಸಿದ ವ್ಯಕ್ತಿಯ ಚಿಕಿತ್ಸೆಯ ಸಮಯದಲ್ಲಿ ಉಂಟಾಗುವ ಸಂಪೂರ್ಣ ವೈದ್ಯಕೀಯ ಬಿಲ್ಗಳನ್ನು ಇನ್ಶೂರೆನ್ಸ್ ಮೊತ್ತದವರೆಗೆ ಕವರ್ ಮಾಡುತ್ತವೆ. ಶೂನ್ಯ ಸಹ-ಪಾವತಿಯು ರೋಗಿಯ ಆರ್ಥಿಕ ಹೊಣೆಗಾರಿಕೆಯನ್ನು ತಗ್ಗಿಸುತ್ತದೆ. ಅಲ್ಲದೇ ಅವನು/ಅವಳು ಕೇವಲ ಚೇತರಿಕೆಯ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.
ಈ ಕೆಳಗಿನವುಗಳ ಬಗ್ಗೆ ಇನ್ನಷ್ಟು ತಿಳಿಯಿರಿ
ಗರದ ವೈದ್ಯಕೀಯ ವೆಚ್ಚಗಳ ಪ್ರಕಾರ ಝೋನ್ ಗಳನ್ನು ವರ್ಗೀಕರಿಸಲಾಗಿದೆ. ನಿರ್ದಿಷ್ಟ ಪ್ರದೇಶದಲ್ಲಿ ಹೆಚ್ಚಿನ ವೈದ್ಯಕೀಯ ವೆಚ್ಚ, ಅಂತಹ ವರ್ಗೀಕರಣದಲ್ಲಿ ಹೆಚ್ಚಿನದನ್ನು ಇರಿಸಲಾಗುತ್ತದೆ.
ಈ ಆಡ್-ಆನ್ ಸ್ವಲ್ಪ ಹೆಚ್ಚಿನ ಪ್ರೀಮಿಯಂನೊಂದಿಗೆ ವಿವಿಧ ಪ್ರದೇಶಗಳು ಅಥವಾ ಝೋನ್ ಗಳಾದ್ಯಂತ ಚಿಕಿತ್ಸೆಯ ವೆಚ್ಚದಲ್ಲಿನ ಅಸಮಾನತೆಯನ್ನು ಲೆಕ್ಕಹಾಕಲು ನಿಮಗೆ ಅನುಮತಿಸುತ್ತದೆ. ಆದರೆ ತರುವಾಯ ನಿಮ್ಮ ಒಟ್ಟು ಪ್ರೀಮಿಯಂನಲ್ಲಿ 10%-20% ರಷ್ಟು ಉಳಿಸಲು ನಿಮಗೆ ಅನುಮತಿಸುತ್ತದೆ.
* ಪ್ರಸ್ತುತ, ಡಿಜಿಟ್ನಲ್ಲಿ, ನಾವು ಯಾವುದೇ ಝೋನ್ ಅಪ್ಗ್ರೇಡ್ ಆಡ್ ಆನ್ ಅನ್ನು ಹೊಂದಿಲ್ಲ. ಆದಾಗ್ಯೂ, ನೀವು ಝೋನ್ ಬಿಯಲ್ಲಿ ನೆಲೆಗೊಂಡಿದ್ದರೆ ನೀವು ಪ್ರೀಮಿಯಂನಲ್ಲಿ ಹೆಚ್ಚುವರಿ ಡಿಸ್ಕೌಂಟ್ ಅನ್ನು ಪಡೆಯುತ್ತೀರಿ. ಅಷ್ಟೇ ಅಲ್ಲ, ನಾವು ಯಾವುದೇ ಝೋನ್-ಆಧಾರಿತ ಸಹ-ಪಾವತಿಯನ್ನು ಹೊಂದಿಲ್ಲ.
ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಅಡಿಯಲ್ಲಿ ಮನೆಯಲ್ಲಿನ ಚಿಕಿತ್ಸೆಗೆ ತಗಲುವ ಎಲ್ಲಾ ವೆಚ್ಚಗಳ ವಿರುದ್ಧ ಕವರೇಜ್ ಅನ್ನು ಕವರ್ ಮಾಡುತ್ತದೆ. ಇದು ರೋಗಿಯ ಸಂಪೂರ್ಣ ಚಿಕಿತ್ಸೆಗಾಗಿ ಪಾವತಿಸಬೇಕಾದ ಔಷಧಿಗಳು, ನರ್ಸ್ ಶುಲ್ಕಗಳು, ಚುಚ್ಚುಮದ್ದು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
ಅಂಗಾಂಗ ದಾನಕ್ಕೆ ಸೇರುವ ಎಲ್ಲಾ ವೈದ್ಯಕೀಯ ಬಿಲ್ಗಳನ್ನು ಕ್ಲೈಮ್ ಮಾಡಬಹುದು.
ಎಲ್ಲಾ ಪ್ರಮುಖ ಇನ್ಶೂರೆನ್ಸ್ ಕಂಪನಿಗಳು ತಮ್ಮ ಇನ್ಶೂರೆನ್ಸ್ ಪ್ರಾಡಕ್ಟ್ಗಳಿಗೆ, ಮೇಲೆ ತಿಳಿಸಿದ ನಿಬಂಧನೆಗಳನ್ನು ಹಾಕುತ್ತವೆ. ಅದೇನೇ ಇದ್ದರೂ, ವಿವಿಧ ರೀತಿಯ ಇನ್ಶೂರೆನ್ಸ್ ಪಾಲಿಸಿಗಳನ್ನು, ನಿರ್ದಿಷ್ಟ ರೋಗಗಳಿಗೆ ಅಥವಾ ವಿವಿಧ ವಯೋಮಾನದವರಿಗೆ ಉಪಚರಿಸಲು ನೀಡಲಾಗುತ್ತದೆ.
ಒಬ್ಬ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಅದರ ಹೆಸರೇ ಸೂಚಿಸುವಂತೆ ಒಬ್ಬ ವ್ಯಕ್ತಿಯ ಚಿಕಿತ್ಸಾ ವೆಚ್ಚವನ್ನು ಕವರ್ ಮಾಡುತ್ತದೆ. ಈ ಕವರ್ ಅನ್ನು ನಿಮಗಾಗಿ, ನಿಮ್ಮ ಸಂಗಾತಿ ಮತ್ತು ಮಕ್ಕಳು ಸೇರಿದಂತೆ ನಿಮ್ಮ ಪೋಷಕರಿಗೆ ಪಡೆಯಬಹುದು.
ಈ ಯೋಜನೆಯಡಿಯಲ್ಲಿ, ಪ್ರತಿ ಕುಟುಂಬದ ಸದಸ್ಯರು ವೈಯಕ್ತಿಕ ಇನ್ಶೂರೆನ್ಸ್ ಮೊತ್ತವನ್ನು ಪಡೆಯುತ್ತಾರೆ. ಉದಾಹರಣೆಗೆ; ನಿಮ್ಮ ಯೋಜನೆಯ ಇನ್ಶೂರೆನ್ಸ್ ಮೊತ್ತವು ₹10 ಲಕ್ಷಗಳಾಗಿದ್ದರೆ, ಆ ಪಾಲಿಸಿಯ ಅವಧಿಗೆ ಕುಟುಂಬದ ಪ್ರತಿ ಸದಸ್ಯರು ತಲಾ 10 ಲಕ್ಷಗಳವರೆಗೆ ಬಳಸುತ್ತಾರೆ. ಅಂದರೆ ನೀವು ಮೂರು ಸದಸ್ಯರಿಗೆ ವೈಯಕ್ತಿಕ ಯೋಜನೆಯನ್ನು ಖರೀದಿಸುತ್ತಿದ್ದರೆ, ಮೂವರಿಗೆ ಸಾಮೂಹಿಕ ಇನ್ಶೂರೆನ್ಸ್ ಮೊತ್ತವು ₹30 ಲಕ್ಷ ಆಗಿರುತ್ತದೆ.
ನಿಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬರಿಗೆ ಅಥವಾ ಹೆಚ್ಚಿನವರಿಗೆ ಒಂದೇ ಸಮಯದಲ್ಲಿ ಏನಾದರೂ ಹಾನಿ ಸಂಭವಿಸಿದಲ್ಲಿ, ಈ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಿಂದ ಪ್ರತ್ಯೇಕ ಇನ್ಶೂರೆನ್ಸ್ ಮೊತ್ತದ ಕಾರಣಕ್ಕೆ ಅವರೆಲ್ಲರಿಗೂ ರಕ್ಷಣೆ ನೀಡಲು ಸಾಕಾಗುತ್ತದೆ.
ಇಂತಹ ಯೋಜನೆಗಳಲ್ಲಿ, ಒಂದೇ ಪಾಲಿಸಿಯ ಅಡಿಯಲ್ಲಿ ಎಲ್ಲಾ ವ್ಯಕ್ತಿಗಳಿಗೆ ಒಂದೇ ಇನ್ಶೂರೆನ್ಸ್ ಮೊತ್ತವು ಲಭ್ಯವಿರುತ್ತದೆ. ಈ ಸಂಪೂರ್ಣ ಮೊತ್ತವನ್ನು ಕ್ರಮವಾಗಿ ಒಬ್ಬ ವ್ಯಕ್ತಿಯ ಚಿಕಿತ್ಸೆಗಾಗಿ ನೀಡಬಹುದು. ಆದರೆ ಇದೇ ಸಮಯದಲ್ಲಿ, ಮತ್ತೊಂದು ವೈದ್ಯಕೀಯ ತುರ್ತುಸ್ಥಿತಿಗಾಗಿ ನೀವು ಮುಂದಿನ ಕ್ಲೈಮ್ಗಳನ್ನು ಕವರ್ ಮಾಡಲಾಗುವುದಿಲ್ಲ.
ಕುಟುಂಬದ ಫ್ಲೋಟರ್ ಯೋಜನೆಗಳ ಅಡಿಯಲ್ಲಿ ಹಿರಿಯ ನಾಗರಿಕರು ಅರ್ಹರಾಗಿರುವುದಿಲ್ಲ, ಏಕೆಂದರೆ ಅವರ ವೈದ್ಯಕೀಯ ಅಗತ್ಯಗಳು ಹೆಚ್ಚು ಸಂಕೀರ್ಣವಾಗಿರುತ್ತವೆ.
ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಕುರಿತು ಇನ್ನಷ್ಟು ತಿಳಿಯಿರಿ.
ವಯಸ್ಸಾದ ವ್ಯಕ್ತಿಗಳ ಎಲ್ಲ ವೈದ್ಯಕೀಯ ವೆಚ್ಚಗಳಿಗೆ ಸರಿಹೊಂದುವಂತೆ ಈ ಪಾಲಿಸಿಯನ್ನು ವಿನ್ಯಾಸಗೊಳಿಸಲಾಗಿದೆ. ಅಂತಹ ಯೋಜನೆಗಳನ್ನು 60 ವರ್ಷಕ್ಕಿಂತ ಮೇಲ್ಪಟ್ಟ ಜನರು ಮಾತ್ರ ಪಡೆಯಬಹುದು. ವೃದ್ಧಾಪ್ಯದ ಕಾರಣದಿಂದ ಉಂಟಾಗಬಹುದಾದ ವಿವಿಧ ರೀತಿಯ ಕಾಯಿಲೆಗಳಿಗೆ ಕಾಂಪ್ರೆಹೆನ್ಸಿವ್ ಕವರೇಜ್ ಅನ್ನು ವಿಸ್ತರಿಸಲಾಗಿದೆ.
ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಇಂತಹ ಯೋಜನೆಗಳನ್ನು ನೀಡುತ್ತವೆ. ಪ್ರೀಮಿಯಂ ಅನ್ನು ಉದ್ಯೋಗದಾತರೇ ಪಾವತಿಸುತ್ತಾರೆ ಮತ್ತು ಇನ್ಶೂರೆನ್ಸ್ ಮೊತ್ತದ ರಿಫಿಲ್ ಅನ್ನು ಖಚಿತಪಡಿಸಿಕೊಳ್ಳುವ ನಿಬಂಧನೆಗಳನ್ನು ಹೊಂದಿದೆ. ಅಂತಹ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ವೆಚ್ಚ-ಪರಿಣಾಮಕಾರಿ ಮತ್ತು ಉದ್ಯೋಗಿಗಳನ್ನು ಉಳಿಸಿಕೊಳ್ಳುವ ತಂತ್ರಗಳಾಗಿ ವಿತರಿಸಲಾಗುತ್ತದೆ.
ಆದಾಗ್ಯೂ, ನೀವು ಕಂಪನಿಯಲ್ಲಿ ಉದ್ಯೋಗದಲ್ಲಿರುವವರೆಗೆ ಮಾತ್ರ ಈ ಇನ್ಶೂರೆನ್ಸ್ ಕವರ್ ಅನ್ನು ಪಡೆಯಬಹುದು ಎಂಬುದನ್ನು ನೀವು ನೆನಪಿನಲ್ಲಿಡಬೇಕು. ನಿಮ್ಮನ್ನು ಕೆಲಸದಿಂದ ವಜಾಗೊಳಿಸಿದ್ದರೆ ಅಥವಾ ಕಂಪನಿಯಿಂದ ನೀವು ನಿಮ್ಮ ಕೆಲಸವನ್ನು ತೊರೆದರೆ, ಈ ಕವರ್ನ ಪ್ರಯೋಜನಗಳನ್ನು ನೀವು ಪಡೆಯಲಾಗುವುದಿಲ್ಲ.
ಗರ್ಭಾವಸ್ಥೆಯಲ್ಲಿ ಉಂಟಾಗುವ ಎಲ್ಲಾ ಪ್ರಸವಪೂರ್ವ ಮತ್ತು ಪ್ರಸವಾ ನಂತರದ ಆರೈಕೆ ವೆಚ್ಚಗಳು, ಮೆಟರ್ನಿಟಿ ಇನ್ಶೂರೆನ್ಸ್ ಕವರ್ನ ಅಡಿಯಲ್ಲಿ ಕವರ್ ಆಗುತ್ತವೆ. ನವಜಾತ ಶಿಶುವಿನ ವೈದ್ಯಕೀಯ ಬಿಲ್ಗಳನ್ನು ಮೊದಲ ಮೂರು ತಿಂಗಳವರೆಗೆ ಸೇರಿಸಲಾಗುತ್ತದೆ. ಆದಾಗ್ಯೂ, ಅಂತಹ ಪಾಲಿಸಿಗಳು ಎರಡು ವರ್ಷಗಳ ವೈಟಿಂಗ್ ಪೀರಿಡ್ನೊಂದಿಗೆ ಬರುತ್ತವೆ.
ಮೆಟರ್ನಿಟಿ ಇನ್ಶೂರೆನ್ಸ್ ಕುರಿತು ಇನ್ನಷ್ಟು ತಿಳಿಯಿರಿ.
ಸಾಮಾನ್ಯವಾಗಿ, ಹೆಲ್ತ್ ಇನ್ಶೂರೆನ್ಸ್ ರಕ್ಷಣೆಯನ್ನು ಪಡೆದುಕೊಳ್ಳುವಾಗ ನೀವು ಚಿಕಿತ್ಸಾ ವೆಚ್ಚವನ್ನು ಅಂದಾಜು ಮಾಡುತ್ತೀರಿ. ಹೀಗೆ ನಿಮ್ಮ ಇನ್ಶೂರೆನ್ಸ್ ಮೊತ್ತ ಬದಲಾಗದಿದ್ದರೂ ಸಹ, ಸಮಯ ಕಳೆದಂತೆ ನಿಮ್ಮ ಚಿಕಿತ್ಸಾ ವೆಚ್ಚವೇ ಹೆಚ್ಚಾಗಬಹುದು.
ಅಂತಹ ಸಂದರ್ಭಗಳಲ್ಲಿ, ಪ್ರತ್ಯೇಕ ಪಾಲಿಸಿಯನ್ನು ಖರೀದಿಸುವ ಬದಲು ನಿಮ್ಮ ಪ್ರಸ್ತುತ ಕವರ್ಗಾಗಿ, ಟಾಪ್-ಅಪ್ ಇನ್ಶೂರೆನ್ಸ್ ಅನ್ನು ಪಡೆಯಲು ನೀವು ಆಯ್ಕೆ ಮಾಡಬಹುದು. ಈ ಟಾಪ್-ಅಪ್ ಪಾಲಿಸಿಯು ಯಾವುದೇ ತುರ್ತು ಸಂದರ್ಭದಲ್ಲಿ ನೀವು ಬಳಸಬಹುದಾದ ಇನ್ಶೂರೆನ್ಸಿನ ಒಟ್ಟಾರೆ ಮೊತ್ತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಆದರೆ ಟಾಪ್-ಅಪ್ ಪಡೆಯಲು, ನೀವು ಮೊದಲು ಡಿಡಕ್ಟಿಬಲ್ ಮೊತ್ತವನ್ನು ಆಯ್ದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ನೀವು ₹3 ಲಕ್ಷಗಳ ಟಾಪ್-ಅಪ್ ಯೋಜನೆಯನ್ನು ಪಡೆಯುವುದಾದರೆ ನಿಮ್ಮ ಡಿಡಕ್ಟಿಬಲ್ ಮೊತ್ತ ₹50,000.
ಮುಂದೆ ಕ್ಲೈಮ್ ಸಮಯದಲ್ಲಿ, ನೀವು ಮೊದಲು 50000 ರೂಗಳನ್ನು ನಿಮ್ಮ ಜೇಬಿನಿಂದ ಪಾವತಿಸಬೇಕಾಗುತ್ತದೆ. ಡಿಡಕ್ಟಿಬಲ್ ಮೊತ್ತವು ಮುಗಿದ ಮೇಲೆ, ಇನ್ಶೂರೆನ್ಸ್ ಪೂರೈಕೆದಾರರು ಉಳಿದ 3 ಲಕ್ಷಗಳವರೆಗಿನ ವೆಚ್ಚಗಳನ್ನು ಭರಿಸುತ್ತಾರೆ.
ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಮಾಡಬಹುದಾದ ಎಲ್ಲಾ ಆರೋಗ್ಯ ವೆಚ್ಚಗಳನ್ನು ಪೂರೈಸಲು ಈ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳನ್ನು ಪಡೆಯಲಾಗುತ್ತದೆ. ಇದು ಲೈಫ್ ಇನ್ಶೂರೆನ್ಸ್ ಯೋಜನೆಗಳಿಗಿಂತ ಗಮನಾರ್ಹವಾಗಿ ಭಿನ್ನವಾಗಿದೆ. ಎರಡನೆಯದಾಗಿ ಪಾಲಿಸಿದಾರ ವ್ಯಕ್ತಿಯ ಜೀವನ ಅಥವಾ ಮರಣದ ಆಧಾರದ ಮೇಲೆ ಹಣಕಾಸಿನ ರಕ್ಷಣೆಯನ್ನು ಒದಗಿಸುತ್ತದೆ.
ಭಾರತದಲ್ಲಿನ ಹೆಲ್ತ್ ಇನ್ಶೂರೆನ್ಸಿನ ವಿಧಗಳ ಕುರಿತು ಇನ್ನಷ್ಟು ವಿವರವಾಗಿ ತಿಳಿದುಕೊಳ್ಳಿ.
ಲೈಫ್ ಇನ್ಶೂರೆನ್ಸ್ ಪಾಲಿಸಿಯು ಅಕಾಲಿಕ ಮರಣದ ಸಂದರ್ಭದಲ್ಲಿ ಮಾತ್ರ ಪಾಲಿಸಿದಾರನ ಕುಟುಂಬದ ಅವಲಂಬಿತ ಸದಸ್ಯರ ಆರ್ಥಿಕ ಅವಶ್ಯಕತೆಗಳನ್ನು ಸುರಕ್ಷಿತಗೊಳಿಸುವ ಗುರಿಯನ್ನು ಹೊಂದಿದೆ. ಹೆಲ್ತ್ ಇನ್ಶೂರೆನ್ಸ್ ಯೋಜನೆಯು ಗುಣಮಟ್ಟದ ಆರೋಗ್ಯ ರಕ್ಷಣೆ ಮತ್ತು ಚಿಕಿತ್ಸಾ ಸೌಲಭ್ಯ ಪಡೆಯಲು ಪ್ರಯೋಜನವನ್ನು ನೀಡುತ್ತದೆ.
ವ್ಯತ್ಯಾಸದ ಅಂಶಗಳು |
ಹೆಲ್ತ್ ಇನ್ಶೂರೆನ್ಸ್ |
ಲೈಫ್ ಇನ್ಶೂರೆನ್ಸ್ |
ಗುರಿ |
ಕೆಲವು ಕಾಯಿಲೆಗಳಿಗೆ ರೋಗನಿರ್ಣಯದ ಸಂದರ್ಭದಲ್ಲಿ ಚಿಕಿತ್ಸೆ ಮತ್ತು ಚೇತರಿಕೆಗಾಗಿ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ . |
ಅಕಾಲಿಕ ಮರಣದ ಸಂದರ್ಭದಲ್ಲಿ ಕುಟುಂಬಕ್ಕೆ ತಕ್ಷಣದ ಆರ್ಥಿಕ ರಕ್ಷಣೆ. |
ಪಾವತಿಸಬೇಕಾದ ಮೊತ್ತ |
ಇನ್ಶೂರೆನ್ಸ್ ಮೊತ್ತದವರೆಗೆ. |
ಮರಣದ ಲಾಭ (ಪಾಲಿಸಿದಾರನ ಅವಧಿ ಮುಗಿದ ನಂತರ) ಮೆಚ್ಯೂರಿಟಿಯ ಮೇಲೆ ಒಟ್ಟು ಮೊತ್ತದ ಪಾವತಿ |
ತೆರಿಗೆ ಪ್ರಯೋಜನಗಳು |
₹1 ಲಕ್ಷದವರೆಗಿನ ಹೆಲ್ತ್ ಇನ್ಶೂರೆನ್ಸ್ ತೆರಿಗೆ ಪ್ರಯೋಜನಗಳು. (ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80D) |
ವರ್ಷಕ್ಕೆ 1.5 ಲಕ್ಷದವರೆಗೆ ತೆರಿಗೆ ಪ್ರಯೋಜನಗಳು (ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ) |
ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದರೆ, ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80D ಅಡಿಯಲ್ಲಿ ನೀವು ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.
ಈ ಕೆಳಗಿನ ಟೇಬಲ್, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಮೇಲಿನ ತೆರಿಗೆ ವಿನಾಯಿತಿಗಳ ಹಂಚಿಕೆಯನ್ನು ವಿವರಿಸುತ್ತದೆ:
ಅರ್ಹತೆ |
ವಿನಾಯಿತಿ ಮಿತಿ |
ಸ್ವತಃ ಅವರಿಗೆ ಮತ್ತು ಕುಟುಂಬಕ್ಕಾಗಿ (ಸಂಗಾತಿ, ಅವಲಂಬಿತ ಮಕ್ಕಳು) |
₹25,000 ವರೆಗೆ |
ಸ್ವತಃ ಅವರಿಗೆ, ಕುಟುಂಬ + ಪೋಷಕರು (60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) |
(₹25,000 + ₹25,000) = ₹50,000 ರವರೆಗೆ |
ಸ್ವತಃ ಅವರಿಗೆ ಮತ್ತು ಕುಟುಂಬಕ್ಕಾಗಿ (ಹಿರಿಯ ಸದಸ್ಯರು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) + ಪೋಷಕರು (60 ವರ್ಷಕ್ಕಿಂತ ಮೇಲ್ಪಟ್ಟವರು) |
(₹25,000 + ₹50,000) = ₹75,000 ರವರೆಗೆ |
ಸ್ವತಃ ಅವರಿಗೆ ಮತ್ತು ಕುಟುಂಬಕ್ಕಾಗಿ (ಹಿರಿಯ ಸದಸ್ಯರು 60 ವರ್ಷಕ್ಕಿಂತ ಮೇಲ್ಪಟ್ಟವರು) + ಪೋಷಕರು (60 ವರ್ಷಕ್ಕಿಂತ ಮೇಲ್ಪಟ್ಟವರು) |
(₹50,000 + ₹50,000) = ₹1,00,000 ರವರೆಗೆ |
ಈ ಕೆಳಗಿನವುಗಳ ಬಗ್ಗೆ ಇನ್ನಷ್ಟು ತಿಳಿಯಿರಿ:
ಯೋಜನೆಯನ್ನು ಆಯ್ಕೆಮಾಡುವ ಮೊದಲು ಜನರು ಈ ಕೆಳಗಿನ ಅಂಶಗಳನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು:
ವ್ಯಕ್ತಿಯ ವಯಸ್ಸು ಮತ್ತು ವೈದ್ಯಕೀಯ ಇತಿಹಾಸವನ್ನು ಅವಲಂಬಿಸಿ ಇನ್ಶೂರೆನ್ಸ್ ಯೋಜನೆಯನ್ನು ಆಯ್ಕೆ ಮಾಡಬೇಕು. ಅಲ್ಲದೆ, ಇನ್ಶೂರೆನ್ಸ್ ಪೂರೈಕೆದಾರರು ವಿಸ್ತರಿಸಿದ ಕವರೇಜ್ ಪ್ರಯೋಜನಗಳನ್ನು, ಹಾಗೆಯೇ ಯಾವುದೇ ಕ್ಲೈಮ್ಗಳನ್ನು ಮಾಡಲು ಇರುವ ವೈಟಿಂಗ್ ಪಿರೀಡ್ ಅನ್ನು ಗಮನಿಸಿ.
ಕಂಪನಿಗಿರುವ ಮಾರುಕಟ್ಟೆ ಖ್ಯಾತಿ ಎನ್ನುವುದು ಕ್ಲೈಮ್ ಮೊತ್ತವನ್ನು ನೀಡಲು ತೆಗೆದುಕೊಂಡ ವಿಧಾನ ಮತ್ತು ಸಮಯವನ್ನು ತಿಳಿಸುವ ಕಾರಣ, ಇದೊಂದು ಎಚ್ಚರಿಕೆಯಿಂದ ವಿಶ್ಲೇಷಿಸಬೇಕಾದ ಮಹತ್ವದ ಅಂಶವಾಗಿದೆ.
ತೊಂದರೆ-ಮುಕ್ತ ವಿತರಣೆಯನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ಈ ಕೆಳಗಿನ ಷರತ್ತುಗಳನ್ನು ಪೂರೈಸುತ್ತಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ -
ಹೆಚ್ಚಿನ ಸಂಖ್ಯೆಯ ನೆಟ್ವರ್ಕ್ ಆಸ್ಪತ್ರೆಗಳು ಚಿಕಿತ್ಸೆಗೆ ಅಗತ್ಯವಿರುವ ಕ್ಯಾಶ್ಲೆಸ್ ಕ್ಲೈಮ್ ವರ್ಗಾವಣೆಯನ್ನು ಖಚಿತಪಡಿಸುತ್ತವೆ. ಚಿಕಿತ್ಸಾ ಪ್ರಕ್ರಿಯೆಯನ್ನು ಸುಗಮಗೊಳಿಸುವ ಮೂಲಕ, ಥರ್ಡ್ ಪಾರ್ಟಿಯ ಒಳಗೊಳ್ಳುವಿಕೆಯ ತೊಂದರೆಗಳು ಕಡಿಮೆಯಾಗುತ್ತವೆ.
ಪ್ರಮುಖ ಇನ್ಶೂರೆನ್ಸ್ ಕಂಪನಿಗಳು ಪಾಲಿಸಿದಾರರ ಉಚಿತ ವಾರ್ಷಿಕ ತಪಾಸಣೆಗಾಗಿ ನಿಬಂಧನೆಗಳನ್ನು ಹೊಂದಿವೆ. ಇದು ಅವರ ಆರೋಗ್ಯ ಪರಿಸ್ಥಿತಿಗಳನ್ನು ಟ್ರ್ಯಾಕ್ ಮಾಡಲು ಅವಕಾಶ ನೀಡುತ್ತದೆ.
ತಮ್ಮ ಪಾಲಿಸಿಗಳಲ್ಲಿ ಜೀವಮಾನ ನವೀಕರಣದ ಷರತ್ತು ಹೊಂದಿರುವ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆಮಾಡಿ. ಇಂತಹ ಸೌಲಭ್ಯವು ಜನರಿಗೆ,
ನಿರಂತರ ಪ್ರೀಮಿಯಂನಿಂದ ಅವರ ಆರೋಗ್ಯ ಸ್ಥಿತಿಯಲ್ಲಿ ಕ್ಷೀಣತೆಯನ್ನುಂಟು ಮಾಡುವ ಯಾವುದೇ ಅನಿರೀಕ್ಷಿತ ಸಂದರ್ಭಗಳಲ್ಲಿ, ಆರ್ಥಿಕವಾಗಿ ಸುರಕ್ಷಿತವಾಗಿರಲು ಅನುವು ಮಾಡಿಕೊಡುತ್ತದೆ.
ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಎಲ್ಲಾ ವೈದ್ಯಕೀಯ ಅವಶ್ಯಕತೆಗಳನ್ನು ಪೂರೈಸಲು ಸೂಕ್ತವಾದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ನೀವು ಆಯ್ಕೆ ಮಾಡಬಹುದು. ನಾಮಿನಲ್ ಪ್ರೀಮಿಯಂ ಶುಲ್ಕಗಳು, ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಮೂಲಕ ನಿಮ್ಮ ಜೀವಿತಾವಧಿಯ ಹಣಕಾಸಿನ ಹೊರೆಯನ್ನು ಗಮನಾರ್ಹವಾಗಿ ಸುಗಮಗೊಳಿಸಿ, ಬಹು ಸಮಯದವರೆಗೆ ನಿಮ್ಮೊಂದಿಗಿರುತ್ತದೆ.
ಹೆಚ್ಚಿನ ಜನರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಹೆಲ್ತ್ ಇನ್ಶೂರೆನ್ಸ್ ಆರಿಸಿಕೊಳ್ಳುತ್ತಾರೆ. ಮತ್ತು ನಿಯಮಿತವಾಗಿ ಅದನ್ನು ರಿನೀವ್ ಮಾಡಿಸುತ್ತಾರೆ. ಸರಿಯಾದ ಪ್ಯಾನ್ ಅನ್ನು ಆಯ್ಕೆ ಮಾಡುವುದು ತುಂಬಾ ಮುಖ್ಯವಾಗಿದೆ.