Group Hospital Cash
-
- {{familyMember.multipleCount}} + {{coronaPolicyCtrl.isGhcFlow ? "Max " + coronaPolicyCtrl.maxChildCount + " kids" : "Max 4 kids"}}
- {{vlaue}}
ಕೊರೋನ ವೈರಸ್ ಮತ್ತು ವೆಕ್ಟರ್ ಮೂಲಕ ಹರಡುವ ರೋಗಗಳಿಗೆ ರಕ್ಷಣೆ ನೀಡುವುದು ಏಕೆ ಮುಖ್ಯ?
ಕೋವಿಡ್-19 ಮತ್ತು ವೆಕ್ಟರ್ನಿಂದ ಹರಡುವ ರೋಗಗಳನ್ನು ಕವರ್ ಮಾಡುವ ಡಿಜಿಟ್ ನ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಏನು ಉತ್ತಮವಾಗಿದೆ?
ಈ ಪಾಲಿಸಿಯು ಏನನ್ನು ಒಳಗೊಂಡಿದೆ?
ಈ ಕವರ್ ಅನ್ನು ರೆಗ್ಯುಲೇಟರ್, IRDAI ಅವರ ಸ್ಯಾಂಡ್ಬಾಕ್ಸ್ ನಿಯಮಗಳ ಅಡಿಯಲ್ಲಿ ಸಲ್ಲಿಸಲಾಗಿದೆ. Formation of Group for the Purpose of Group Insurance; 442/IRDAI/HLT/GEN/GOD-SB/2019-20
ಯಾವುದನ್ನು ಒಳಗೊಂಡಿಲ್ಲ?
ನಾವು ಪಾರದರ್ಶಕತೆಯನ್ನು ನಂಬುತ್ತೇವೆ ಮತ್ತು ನೀವು ಯಾವುದೇ ಕೊನೆ ಕ್ಷಣದ ಆಶ್ಚರ್ಯಗಳನ್ನು ಎದುರಿಸಬೇಕೆಂದು ಬಯಸುವುದಿಲ್ಲ. ಆದ್ದರಿಂದ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ - ಈ ಪಾಲಿಸಿಯು ಏನನ್ನು ಒಳಗೊಂಡಿಲ್ಲ ಎನ್ನುವುದು.
ಈ ಪಾಲಿಸಿಯು ವೆಕ್ಟರ್ ಮೂಲಕ ಹರಡುವ ಯಾವ ರೋಗಗಳನ್ನು ಒಳಗೊಂಡಿದೆ?
ಮಲೇರಿಯಾ
ಮಲೇರಿಯಾ ಜ್ವರವು ಪ್ರೊಟೊಜೋವಾನ್ನಿಂದ ಉಂಟಾಗುತ್ತದೆ - ಪ್ಲಾಸ್ಮೋಡಿಯಮ್ ಹೆಣ್ಣು ಅನಾಫಿಲಿಸ್ ಸೊಳ್ಳೆಯ ಮೂಲಕ ಇದು ಜ್ವರ, ನಿಶ್ಶಕ್ತಿ , ಶೀತ, ತಲೆನೋವು, ವಾಂತಿ ಮತ್ತು ಕಾಮಾಲೆಗೆ ಕಾರಣವಾಗುತ್ತದೆ.
ಡೆಂಗ್ಯೂ
ಡೆಂಗ್ಯೂ ಜ್ವರವು ಈಡಿಸ್ ಸೊಳ್ಳೆ ಕಡಿತದ ಮೂಲಕ ಹರಡುವ ವೈರಸ್ನಿಂದ ಉಂಟಾಗುತ್ತದೆ. ಇದರ ಪರಿಣಾಮವಾಗಿ ಜ್ವರ, ತೀವ್ರ ತಲೆನೋವು, ವಾಂತಿ, ಚರ್ಮದ ದದ್ದು ಮತ್ತು ಜೀವಕ್ಕೆ ಅಪಾಯಕಾರಿಯಾಗುವ ಆಂತರಿಕ ರಕ್ತಸ್ರಾವ ಉಂಟಾಗುತ್ತದೆ.
ಝಿಕಾ ವೈರಸ್
ಝಿಕಾ ವೈರಸ್, ಸೊಳ್ಳೆ ಕಡಿತದ ಮೂಲಕ ಹರಡುವ ವೈರಸ್ನಿಂದ ಉಂಟಾಗುತ್ತದೆ, ಇದು ಜ್ವರ, ದದ್ದು, ಸ್ನಾಯು ನೋವು ಮತ್ತು ಕೀಲು ನೋವಿಗೆ ಕಾರಣವಾಗುತ್ತದೆ. ಗರ್ಭಿಣಿಯರಿಂದ ಈ ವೈರಸ್ ಹುಟ್ಟಲಿರುವ ಮಗುವಿಗೆ ವರ್ಗವಾಗಬಹುದು, ಇದು ಮೈಕ್ರೊಸೆಫಾಲಿಗೆ ಕಾರಣವಾಗುತ್ತದೆ.
ಫೈಲೇರಿಯಾಸಿಸ್
ಮೈಕ್ರೋಫಿಲೇರಿಯಾ ಪರಾವಲಂಬಿಯಿಂದ, ದುಗ್ಧರಸ ವ್ಯವಸ್ಥೆಯನ್ನು ನಿರ್ಬಂಧಿಸಿದಾಗ ಫೈಲೇರಿಯಾಸಿಸ್ ಉಂಟಾಗುತ್ತದೆ. ಇದು ಅಂಗಗಳ ಶಾಶ್ವತ ಬದಲಾವಣೆಗಳಿಗೆ ಕಾರಣವಾಗುತ್ತದೆ.
ಕಾಲಾ ಅಜರ್
(ಲೀಸ್ಮೇನಿಯಾ ದೋನೊವನಿ) ಎಂಬ ಪರಾವಲಂಬಿಗಳ ಸೋಂಕಿನಿಂದಾಗಿ, ಆಂತರಿಕ ಅಂಗಗಳು (ಆಂತರಿಕ ಅಂಗಗಳು, ನಿರ್ದಿಷ್ಟವಾಗಿ ಯಕೃತ್ತು, ಗುಲ್ಮ, ಮೂಳೆ ಮಜ್ಜೆ ಮತ್ತು ದುಗ್ಧರಸ ಗ್ರಂಥಿಗಳು) ದೀರ್ಘಕಾಲದ ಮತ್ತು ಸಂಭಾವ್ಯ ಮಾರಣಾಂತಿಕ ಪರಾವಲಂಬಿ ಕಾಯಿಲೆಗೆಳಿಗೆ ಕಾರಣವಾಗುತ್ತವೆ.
ಚಿಕುನ್ ಗುನ್ಯಾ
ಚಿಕುನ್ಗುನ್ಯಾ, ಈಡಿಸ್ ಸೊಳ್ಳೆಗಳ ಮೂಲಕ ಹರಡುವ ವೈರಸ್ನಿಂದ ಜ್ವರ, ದೌರ್ಬಲ್ಯ ಮತ್ತು ತೀವ್ರವಾದ ಕೀಲು ನೋವಿಗೆ ಕಾರಣವಾಗುತ್ತದೆ.
ಜಪನೀಸ್ ಎನ್ಸೆಫಾಲಿಟಿಸ್
ವೈರಸ್ನಿಂದಾಗಿ ಮೆದುಳಿನ ಉರಿಯೂತ ಉಂಟಾಗುತ್ತದೆ. ಇದು ದಿಗ್ಭ್ರಮೆ, ಜ್ವರ, ವಾಂತಿ, ಸೆಳೆತ ಮತ್ತು ಸಾವಿಗೆ ಕಾರಣವಾಗುತ್ತದೆ.
ಈ ಪಾಲಿಸಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳು
ಈ ಭಯಾನಕ ಕಾಯಿಲೆಗಳಿಗೆ ಡಯಾಗ್ನೋಸ್ ಪಡೆಯುವುದು, ಹೃದಯವನ್ನು ಒಡೆಯುವಂತೆ ಮಾಡುತ್ತವೆ. ಡಿಜಿಟ್ ಇದನ್ನು ಅರ್ಥಮಾಡಿಕೊಂಡಿದೆ ಮತ್ತು ಯಾವುದೇ 8 ಖಾಯಿಲೆಗಳಿಗಾಗಿ (ಕೋವಿಡ್-19 ಸೇರಿದಂತೆ) ಆಸ್ಪತ್ರೆಗೆ ದಾಖಲಾದ ವೆಚ್ಚಗಳ ಮರುಪಾವತಿ ಮಾಡುವ ಕುಶನ್ ಅನ್ನು ನೀಡುತ್ತದೆ.
ವೆಕ್ಟರ್ ಮೂಲಕ ಹರಡುವ ರೋಗಗಳಿಗೆ ಸಂಬಂಧಿಸಿದ ಕ್ಲೇಮ್ಗಳ ಮೇಲೆ
- ನೀವು ಕೋವಿಡ್-19, ಡೆಂಗ್ಯೂ, ಮಲೇರಿಯಾ, ಫೈಲೇರಿಯಾಸಿಸ್ (ಜೀವಮಾನದಲ್ಲಿ ಒಮ್ಮೆ ಮಾತ್ರ ಪಾವತಿಸಬಹುದು), ಕಾಲಾ ಅಜರ್, ಚಿಕುನ್ಗುನ್ಯಾ, ಜಪನೀಸ್ ಎನ್ಸೆಫಾಲಿಟಿಸ್ ಮತ್ತು ಝಿಕಾ ವೈರಸ್ನಿಂದ ಡಯಾಗ್ನೋಸ್ ಮಾಡಿಸಿಕೊಂಡಿದ್ದರೆ ಮತ್ತು ಆಸ್ಪತ್ರೆಗೆ ಒಂಟಿಯಾಗಿ ದಾಖಲಾಗಿದ್ದರೆ, ನೀವು ಆಸ್ಪತ್ರೆಯ ವೆಚ್ಚಗಳಿಗೆ ಕವರ್ ಆಗುತ್ತೀರಿ.
ಕೋವಿಡ್-19 ಗೆ ಸಂಬಂಧಿಸಿದ ಕ್ಲೇಮ್ಗಳ ಮೇಲೆ
- ನೀವು ಒಳರೋಗಿಯಾಗಿ ಕೋವಿಡ್-19 ನಿಂದ ಬಳಲುತ್ತಿದ್ದರೆ ಮತ್ತು ಪಾಲಿಸಿ ಅವಧಿಯಲ್ಲಿ ಕೇವಲ ಕೋವಿಡ್-19 ನಿಂದ ಆಸ್ಪತ್ರೆಗೆ ದಾಖಲಾದರೆ, ಸರ್ಕಾರಿ, ಮಿಲಿಟರಿ ಅಥವಾ ಸರ್ಕಾರಿ ಅನುಮೋದಿತ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡುವುದರಿಂದ ಉಂಟಾಗುವ ಆಸ್ಪತ್ರೆಯ ವೆಚ್ಚಗಳನ್ನು ಸಹ ಕವರ್ ಮಾಡುತ್ತದೆ.
- ಕೋವಿಡ್-1 ಗಾಗಿ ಆಸ್ಪತ್ರೆಗೆ ದಾಖಲಾಗುವುದು ಭಾರತದ ಎಲ್ಲಾ ಆಸ್ಪತ್ರೆಗಳಲ್ಲೂ ಅನ್ವಯಿಸುತ್ತದೆ. ಆದಾಗ್ಯೂ, ಭಾರತದಲ್ಲಿನ ಯಾವುದೇ ICMR ಅಧಿಕೃತ ಪರೀಕ್ಷಾ ಕೇಂದ್ರಗಳಿಂದ, ಇನ್ಶೂರೆನ್ಸ್ ಪಡೆಯುವವರಿಗಾಗಿ ನಡೆಸುವ ಕರೋನವೈರಸ್ ಟೆಸ್ಟ್, ಪಾಸಿಟಿವ್ ಆದ ನಂತರವೇ ಕ್ಲೇಮ್ಗಳನ್ನು ಸ್ವೀಕರಿಸಲಾಗುತ್ತದೆ.