ಗ್ರೂಪ್ ಹೆಲ್ತ್ ಇನ್ಶೂರೆನ್ಸ್, ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಜನರ ಒಂದು ಗುಂಪನ್ನು ಕವರ್ ಮಾಡುವ ಒಂದು ರೀತಿಯ ಹೆಲ್ತ್ ಇನ್ಶೂರೆನ್ಸ್ ಯೋಜನೆಯಾಗಿದೆ.ಇದನ್ನು ಹೆಚ್ಚಾಗಿ ನೌಕರರಿಗೆ ಒಂದು ಬೆಲೆಬಾಳುವ ಲಾಭದ ಕೊಡುಗೆಯಾಗಿ ನೀಡಲಾಗುತ್ತದೆ ಹಾಗೂ ಇದರ ಪ್ರೀಮಿಯಂ ಅನ್ನು ಉದ್ಯೋಗದಾತರಿಂದ ಭರಿಸಲಾಗುತ್ತದೆ.ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಕೆಲವು ಸಂದರ್ಭಗಳಲ್ಲಿ ಉದ್ಯೋಗಿಗಳ ಕುಟುಂಬ ಸದಸ್ಯರಿಗೆ ವಿಸ್ತರಿಸಬಹುದು. ಈ ಇನ್ಶೂರೆನ್ಸ್ ಯೋಜನೆಯನ್ನು ಕಾರ್ಪೊರೇಟ್ ಆರೋಗ್ಯ ಇನ್ಶೂರೆನ್ಸ್ ಅಥವಾ ಉದ್ಯೋಗಿ ಹೆಲ್ತ್ ಇನ್ಶೂರೆನ್ಸ್ ಎಂದೂ ಕರೆಯಲಾಗುತ್ತದೆ.
ಆದರೆ, ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಗೆ ಹೋಲಿಸಿದರೆ ಇದರ ಬೆಲೆಯು ಬಹಳ ಕಡಿಮೆ ಇದ್ದು, ಉದ್ಯೋಗದಾತರಿಗೆ ತನ್ನ ತೆರಿಗೆ ಕಡಿತಗಳಲ್ಲೂ ಲಾಭ ನೀಡುತ್ತದೆ, ಹೀಗಾಗಿ ಇದು ನೌಕರ ಹಾಗೂ ಉದ್ಯೋಗ್ಯದಾತ ಇಬ್ಬರಿಗೂ ಲಾಭದಾಯಕವಾಗಿರುತ್ತದೆ.
ಡಿಜಿಟ್ ನಲ್ಲಿ ನಾವು, ನೌಕರರನ್ನು ಎಲ್ಲಾ ರೀತಿಯ ಅನಾರೋಗ್ಯ ಹಾಗೂ ಖಾಯಿಲೆಗಳಿಂದ ಕವರ್ ಮಾಡಲು ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆ, ಹಾಗೂ ಈ ಗಂಭೀರ ಪಿಡುಗಿನಿಂದ ನಿಮ್ಮ ಎಲ್ಲಾ ನೌಕರರು ಸುರಕ್ಷಿತವಾಗಿದ್ದಾರೆ ಎಂದು ಖಚಿತ ಪಡಿಸಲು ಒಂದು ನಿರ್ದಿಷ್ಟ ಕೋವಿಡ್ - 19 ಗ್ರೂಪ್ ಕವರ್, ಎರಡನ್ನೂ ಒದಗಿಸುತ್ತೇವೆ
ಡಿಜಿಟ್ ಹೆಲ್ತ್ ಪ್ಲಸ್ ಪಾಲಿಸಿ (ಪರಿಷ್ಕರಣೆ) - ಜಿ ಒಡಿ ಎಚ್ ಎಲ್ ಜಿ ಪಿ 21487ವಿ032021
ಪ್ರೀಮಿಯಂ |
ರೂ 1302 ಪ್ರತೀ ನೌಕರನಿಂದ ಆರಂಭ |
ಸಹಪಾವತಿ |
ವಯಸ್ಸು ಆಧಾರಿತ ಸಹಪಾವತಿ ಇಲ್ಲ |
ನಗದುರಹಿತ ಆಸ್ಪತ್ರೆಗಳು |
ಭಾರತದಾದ್ಯಂತ 10500+ ನಗದುರಹಿತ ಆಸ್ಪತ್ರೆಗಳು |
ಖರೀದಿ ಹಾಗೂ ಕ್ಲೈಮ್ ಪ್ರಕ್ರಿಯೆ |
ಕಾಗದರಹಿತ ಪ್ರಕ್ರಿಯೆ, ಡಿಜಿಟಲ್ ಸ್ನೇಹಿ |
ಸಂಪರ್ಕ ಬಿಂದು |
ಏಕೈಕ ಸಂಪರ್ಕ ಬಿಂದು |
ಕೋರೋನಾವೈರಸ್ ನ ಚಿಕಿತ್ಸೆ |
ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ನಲ್ಲಿ ಕವರ್ ಆಗಿದ್ದು, ಪ್ರತ್ಯೇಕ ಗ್ರೂಪ್ಕವರ್ ಆಗಿಯೂ ಲಭ್ಯವಿದೆ |
ತಮ್ಮ ನೌಕರರ ಬಗ್ಗೆ ನಿಜವಾದ ಕಾಳಜಿ ಇರುವ ಉದ್ಯೋಗದಾತರಾಗಿ. ಹೆಸರೇ ಸೂಚಿಸುವಂತೆ, ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಎಂದರೆ, ಒಂದೇ ಛತ್ರಿಯ ಅಡಿಯಲ್ಲಿ ಕೆಲಸ ಮಾಡುವ ಜನರ ಒಂದು ಗುಂಪಿಗೆ ಮೀಸಲಾಗಿರುವ ಹೆಲ್ತ್ ಇನ್ಶೂರೆನ್ಸ್ ನ ಒಂದು ಪ್ರಕಾರ.
ಸಾಮಾನ್ಯವಾಗಿ ಸ್ಟಾರ್ಟ್ ಅಪ್ಸ್ ಹಾಗೂ ದೊಡ್ಡ ಸಂಸ್ಥೆಗಳೆರಡರ ನೌಕರರಿಗೂ ಖರೀದಿಸಲಾಗುವ ಗ್ರೂಪ್ಇನ್ಶೂರೆನ್ಸ್ ಯೋಜನೆಯು, ನೌಕರರಿಗೆ ಮಾತ್ರವಲ್ಲದೆ, ಇಂದಿನ ಕಾಲದಲ್ಲಿ ಜನರು ತಮಗೆ ಹೆಲ್ತ್ ಇನ್ಶೂರೆನ್ಸ್ ನಂತಹ ಅಗತ್ಯ ಕೊಡುಗೆಗಳನ್ನು ನೀಡುವ ಸಂಸ್ಥೆಗಳಿಗೆ ಪ್ರಾಶಸ್ತ್ಯ ನೀಡಿ ಅಲ್ಲೇ ಉಳಿದುಕೊಳ್ಳಲು ಇಷ್ಟಪಡುವುದರಿಂದ, ಉದ್ಯೋಗದಾತರಿಗೂ ಲಾಭದಾಯಕವಾಗಿ ಪರಿಣಮಿಸುತ್ತದೆ.
ಸಾಮಾನ್ಯವಾಗಿ, 10ಕ್ಕಿಂತ ಹೆಚ್ಚು ನೌಕರರಿರುವ ಸಂಸ್ಥೆಯು ಹೆಲ್ತ್ ಇನ್ಶೂರೆನ್ಸ್ ನಿಂದ ತಮ್ಮ ನೌಕರರನ್ನು ಸಂರಕ್ಷಿಸಬೇಕು. ನಿಮಗೆ ಇದು ಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದರೆ, ನಾವು ನಿಮಗಾಗಿ ಇದನ್ನು ಸರಳಗೊಳಿಸುತ್ತೇವೆ.
ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ |
ಗ್ರೂಪ್ ಹೆಲ್ತ್ ಇನ್ಶೂರೆನ್ಸ್ |
ಇದರಲ್ಲಿ, ಪ್ರತೀ ವ್ಯಕ್ತಿಯು ತನ್ನ ನಿಗದಿತ ಇನ್ಶೂರರ್ ನ ನೇರ ಸಂಪರ್ಕದಲ್ಲಿರುತ್ತಾರೆ |
ಇಲ್ಲಿ, ಕಂಪನಿಯೇ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪ್ರೊವೈಡರ್ ನ ಜೊತೆ ನೇರ ಸಂಪರ್ಕದಲ್ಲಿರುತ್ತದೆ |
ಪ್ರತೀ ವ್ಯಕ್ತಿಗೂ ಬೇಕಾದ ಸಮಯದಲ್ಲಿ ತಮ್ಮ ಪಾಲಿಸಿಯನ್ನು ರದ್ದುಗೊಳಿಸುವ ಹಕ್ಕಿರುತ್ತದೆ. |
ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಸಂದರ್ಭದಲ್ಲಿ, ಪಾಲಿಸಿ ರದ್ದುಗೊಳಿಸುವ ಹಕ್ಕು ಕೇವಲ ಉದ್ಯೋಗದಾತರಿಗಿರುತ್ತದೆ |
ವ್ಯಕ್ತಿಯು ತನ್ನ ವಾರ್ಷಿಕ ಪ್ರೀಮಿಯಂ ಅನ್ನು ಕಟ್ಟುತ್ತಾ ಇರುವಷ್ಟು ಸಮಯ ಅವರ ಪಾಲಿಸಿ ಮಾನ್ಯವಾಗಿರುತ್ತದೆ |
ನೌಕರರು ನಿಗದಿತ ಸಂಸ್ಥೆಯ ಭಾಗವಾಗಿದ್ದಷ್ಟು ಸಮಯ ಗ್ರೂಪ್ ಹೆಲ್ತ್ ಪಾಲಿಸಿ ಮಾನ್ಯವಾಗಿರುತ್ತದೆ |
ವ್ಯಕ್ತಿಯ ಹೆಲ್ತ್ ಪಾಲಿಸಿಯು ಅವರ ವಯಸ್ಸು, ವೈದ್ಯಕೀಯ ಇತಿಹಾಸ, ಹೆಲ್ತ್ ಸ್ಥಿತಿ ಇತ್ಯಾದಿಗಳ ಮೇಲೆ ಅವಲಂಬಿಸುತ್ತದೆ. |
ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಪ್ರಾಥಮಿಕವಾಗಿ ಸಂಸ್ಥೆಯ ಸಾಮರ್ಥ್ಯವನ್ನು ಅವಲಂಬಿಸುತ್ತದೆ; ಸಂಸ್ಥೆಯ ಆರ್ಥಿಕ ಹಾಗೂ ನೌಕರರ ಸಾಮರ್ಥ್ಯ. |
ಸಾಮಾನ್ಯವಾಗಿ, ಯಾವುದೇ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ನಲ್ಲಿ, ಇನ್ಶೂರರ್ ಪೂರ್ವ ವೈದ್ಯಕೀಯ ತಪಾಸಣೆಗಳನ್ನು ನಡೆಸುತ್ತಾರೆ ಹಾಗೂ ಇದನ್ನು ಆಧರಿಸಿ ಪಾಲಿಸಿಯನ್ನು ನೀಡಲಾಗುತ್ತದೆ. |
ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯಲ್ಲಿ, ಇನ್ಶೂರರ್ ಪೂರ್ವ ವೈದ್ಯಕೀಯ ತಪಾಸಣೆಗಳನ್ನು ನಡೆಸುವುದಿಲ್ಲ, ಆದ್ದರಿಂದ ಪಾಲಿಸಿ ತಿರಸ್ಕಾರವಾಗುವ ಭಯ ಇರುವುದಿಲ್ಲ. |
ಡಿಜಿಟ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ |
ಡಿಜಿಟ್ ಅನಾರೋಗ್ಯ ಗ್ರೂಪ್ಇನ್ಶೂರೆನ್ಸ್ |
ಡಿಜಿಟ್ ನ ಹೆಲ್ತ್ ಇನ್ಶೂರೆನ್ಸ್ ಒಂದು ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯಾಗಿದ್ದು ಒಂದು ಸಂಸ್ಥೆಯ ಎಲ್ಲಾ ನೌಕರರನ್ನು ಅನಾರೋಗ್ಯ, ಖಾಯಿಲೆ ಹಾಗೂ ಅಪಘಾತದಿಂದ ಉಂಟಾಗುವ ಅಸ್ಪತ್ರೆ ದಾಖಲಾತಿಗಳ ಖರ್ಚನ್ನು ಕವರ್ ಮಾಡುತ್ತದೆ. ಇದರ ಜೊತೆ, ಡಿಜಿಟ್ ನ ಗ್ರೂಪ್ ಹೆಲ್ತ್ ಇನ್ಶೂರೆನ್ಸ್, ಅದು ಒಂದು ಪಿಡುಗು ಆಗಿದ್ದರೂ ಕೋವಿಡ್ - 19 ಅನ್ನು ಕವರ್ ಮಾಡುತ್ತದೆ. |
ಪ್ರಸ್ತುತ ಸಮಯದಲ್ಲಿ, ಪ್ರೀಮಿಯಂ ವೆಚ್ಚಗಳು ಹಾಗೂ ಪ್ರಸ್ತುತ ಆರ್ಥಿಕ ಅಸ್ಥಿರತೆಯನು ಗಮನಿಸಿದಾಗ ಹಲವು ಉದ್ಯಮಗಳು ಸಂಪೂರ್ಣ ಹೆಲ್ತ್ ಇನ್ಶೂರೆನ್ಸ್ ಕವರ್ ಅನ್ನು ಖರೀದಿಸಲು ಬಯಸದೇ ಇರುವುದು ನಮಗೆ ಅರ್ಥವಾಗುತ್ತದೆ. ಆದರೆ ಉದ್ಯೋಗದಾತರು ತಮ್ಮ ನೌಕರರಿಗೆ ಕನಿಷ್ಠ ಪಕ್ಷ ಕೋವಿಡ್ - 19 ನಿಂದಲಾದರೂ ಕವರ್ ನೀಡಬೇಕೆಂಬ ಶಿಫಾರಸ್ಸನ್ನು ನಾವು ಮಾಡುತ್ತೇವೆ. ಇದಕ್ಕಾಗಿಯೇ ನಾವು ಕೋವಿಡ್ - 19 ನಿಂದ ಎಲ್ಲಾ ನೌಕರರನ್ನು, ಕೈಗೆಟಕುವ ಪ್ರೀಮಿಯಂ ದರದಲ್ಲಿ, ಕವರ್ ಮಾಡಲು ಕಸ್ಟಮೈಜ್ಡ್ ಕೋವಿಡ್ ಕವರ್ ಅನ್ನು ತಯಾರಿಸಿದ್ದೇವೆ. |
ಅಲ್ಲಗಳೆತ : ಈ ಮಾಹಿತಿಯು, ಡಿಜಿಟ್ ಹೆಲ್ಥ್ ಪ್ಲಸ್ ಪಾಲಿಸಿ(ಪರಿಷ್ಕರಣೆ) ಹಾಗೂ ಡಿಜಿಟ್ ಗ್ರೂಪ್ಇನ್ಶೂರೆನ್ಸ್ ಪಾಲಿಸಿ ಆರಂಭದಿಂದ 13 ಸೆಪ್ಟೆಂಬರ್ 2021 ವರೆಗೆ, ಇದರಡಿಯಲ್ಲಿ ಕವರ್ ಆದ ಸದಸ್ಯರನ್ನು ಒಳಗೊಂಡಿದೆ.