ನೀವು ಆರೋಗ್ಯವಾಗಿದ್ದೀರಿ ಎಂದು ನೀವು ಭಾವಿಸಿದ್ದೀರಾ? ಸರಿ, ನಿಮ್ಮ ಉತ್ತರ ಹೌದು ಎಂದಾದರೆ, ನಿಮ್ಮ ಬಗ್ಗೆ ನಮಗೆ ಖುಷಿ ಇದೆ. ಆದರೆ ಭವಿಷ್ಯದಲ್ಲಿಯೂ ನೀವು ಆರೋಗ್ಯವಾಗಿರುತ್ತೀರಿ ಎಂದು ನಿಮಗೆ ಶೇ.100 ಖಚಿತತೆ ಇದೆಯೇ? ಇಲ್ಲ, ನಮ್ಮಲ್ಲಿ ಯಾರಲ್ಲೂ ಈ ಬಗ್ಗೆ ಖಚಿತತೆ ಇಲ್ಲ. ಹಾಗಾಗಿ ನಿಮಗಾಗಿ ಮತ್ತು ನಿಮ್ಮ ಪ್ರೀತಿಪಾತ್ರರಿಗಾಗಿ ಯೋಜನೆ ರೂಪಿಸಿಕೊಳ್ಳುವುದು ಒಳಿತು. ಆ ಮೂಲಕ ಭವಿಷ್ಯದಲ್ಲಿ ಒತ್ತಡ ಮುಕ್ತರಾಗಿ ಇರಬಹುದು.
ಆದರೆ ಸರಿಯಾಗಿ ಎಲ್ಲಿಂದ ಪ್ರಾರಂಭಿಸಬೇಕು ಎನ್ನುವುದು ನಿಮಗೆ ತಿಳಿದಿಲ್ಲ ಅಲ್ಲವೇ? ಚಿಂತಿಸಬೇಡಿ, ನಿಮ್ಮ ಸಹಾಯಕ್ಕೆ ನಾವಿದ್ದೇವೆ😊
ಮೆಡಿಕಲ್ ತುರ್ತು ಸಂದರ್ಭಗಳಲ್ಲಿ ನೀವು ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಲು ಎರಡು ಮಾರ್ಗಗಳಿವೆ. ಒಂದು ಮಾರ್ಗವೆಂದರೆ ಮೆಡಿಕ್ಲೈಮ್, ಇನ್ನೊಂದು ಮಾರ್ಗವೆಂದರೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ಅನ್ನು ಪಡೆದುಕೊಳ್ಳುವುದು. ಈ ಎರಡರ ಬಗ್ಗೆಯೂ ನಾವು ನಿಮಗೆ ವಿವರಿಸುತ್ತೇವೆ. ಅದರಿಂದಾಗಿ ನಿಮಗೆ ಎರಡರಲ್ಲಿ ಯಾವುದು ಉತ್ತಮ ಎಂಬ ಮೌಲ್ಯಮಾಪನ ಮಾಡಲು ಸಹಾಯವಾಗುತ್ತದೆ.
ಮೆಡಿಕ್ಲೈಮ್ ಎನ್ನುವುದು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಅದು ವೈದ್ಯಕೀಯ ತುರ್ತುಸ್ಥಿತಿಯ ಸಮಯದಲ್ಲಿ ನಿಮಗೆ ನಿಗದಿತ ಆರ್ಥಿಕ ರಕ್ಷಣೆಯನ್ನು ನೀಡುತ್ತದೆ. ನೀವು ಹಾಸ್ಪಿಟಲೈಸೇಷನ್ ಸಂದರ್ಭದಲ್ಲಿ ಈ ಕೆಳಗಿನ ಎಲ್ಲಾ ವೆಚ್ಚಗಳನ್ನು ಅದು ಭರಿಸುತ್ತದೆ;
ಮೆಡಿಕ್ಲೈಮ್ ನಲ್ಲಿ ಎರಡು ವಿಧಗಳಿವೆ- ಕ್ಯಾಶ್ ಲೆಸ್ ಮತ್ತು ರಿಇಂಬರ್ಸ್ ಮೆಂಟ್.
ಹೆಲ್ತ್ ಇನ್ಶೂರೆನ್ಸ್ ನಿಮಗೆ ತುರ್ತು ಸಂದರ್ಭಗಳಲ್ಲಿ ಮೆಡಿಕಲ್ ಮತ್ತು ಶಸ್ತ್ರಚಿಕಿತ್ಸಾ ವೆಚ್ಚಗಳಿಗೆ ಸಂಪೂರ್ಣ ಕವರೇಜನ್ನು ನೀಡುವ ಇನ್ಶೂರೆನ್ಸ್ ಪಾಲಿಸಿಯಾಗಿದೆ. ನೀವು ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ ಒಂದೋ ನೀವು ನಿಮ್ಮ ಜೇಬಿನಿಂದ ವೆಚ್ಚವನ್ನು ಪಾವತಿಸಿದರೆ ಆ ವೆಚ್ಚವನ್ನು ನಿಮ್ಮ ಇನ್ಶೂರೆನ್ಸ್ ಕಂಪನಿಯು ನಿಮಗೆ ರಿಇಂಬರ್ಸ್ ಮೆಂಟ್ ಮಾಡುತ್ತದೆ ಅಥವಾ ಇನ್ಶೂರೆನ್ಸ್ ಕಂಪನಿಯು ನೇರವಾಗಿ ಆಸ್ಪತ್ರೆಯ ಬಿಲ್ ಅನ್ನು ಪಾವತಿಸುತ್ತದೆ.
ಎರಡೂ ಒಂದೇ ರೀತಿ ಎನಿಸುತ್ತಿದೆ. ಅಲ್ಲವೇ? ಆದರೆ ಇವೆರಡರ ನಡುವಿನ ವ್ಯತ್ಯಾಸವನ್ನು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ.
ಮೆಡಿಕ್ಲೈಮ್ |
ಹೆಲ್ತ್ ಇನ್ಶೂರೆನ್ಸ್ |
ಮೆಡಿಕ್ಲೈಮ್ ಕೇವಲ ಹಾಸ್ಪಿಟಲೈಸೇಷನ್ ಸಂದರ್ಭದ ವೆಚ್ಚಗಳನ್ನು ಮಾತ್ರ ಭರಿಸುತ್ತದೆ. ಅಂದರೆ ನೀವು ಆಸ್ಪತ್ರೆಗೆ ದಾಖಲಾದರೆ ಮಾತ್ರ ನೀವಿದನ್ನು ಕ್ಲೇಮ್ ಮಾಡಬಹುದು. |
ಹೆಲ್ತ್ ಇನ್ಶೂರೆನ್ಸ್ ಕೇವಲ ಹಾಸ್ಪಿಟಲೈಸೇಷನ್ ವೆಚ್ಚಗಳಲ್ಲದೆ ಕಾಂಪ್ರೆಹೆನ್ಸಿವ್ ಕವರ್ ಒದಗಿಸುತ್ತದೆ. ವಾರ್ಷಿಕ ಆರೋಗ್ಯ ತಪಾಸಣೆಗಳು, ಡೈಲಿ ಹಾಸ್ಪಿಟಲ್ ಕ್ಯಾಶ್, ಓಪಿಡಿ ವೆಚ್ಚಗಳು ಮತ್ತು ಪರ್ಯಾಯ ಚಿಕಿತ್ಸೆಗಳಾದ ಆಯುಷ್ ಮುಂತಾದವುಗಳು ಈ ವೆಚ್ಚಗಳಲ್ಲಿ ಒಳಗೊಂಡಿವೆ. |
ಮೆಡಿಕ್ಲೈಮ್ ನಲ್ಲಿ ಯಾವುದೇ ಆ್ಯಡ್-ಆನ್ ಕವರ್ಗಳಿಲ್ಲ. |
ಕ್ರಿಟಿಕಲ್ ಕಾಯಿಲೆಗಳ ಕವರ್, ಹೆರಿಗೆ ಪ್ರಯೋಜನ ಮತ್ತು ಇನ್ಫರ್ಟಿಲಿಟಿ ಕವರ್ ಮುಂತಾದ ಹಲವಾರು ಆ್ಯಡ್-ಆನ್ ಕವರ್ಗಳಿವೆ. |
ಮೆಡಿಕ್ಲೈಮ್ ನಲ್ಲಿ ಹಾಸ್ಪಿಟಲೈಸೇಷನ್ ಕವರ್ ಮಿತಿ ಸೀಮಿತವಾಗಿದೆ ಮತ್ತು ರೂ.5 ಲಕ್ಷವನ್ನು ಮೀರುವುದಿಲ್ಲ. |
ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಕವರ್ ವಿಸ್ತಾರವಾಗಿದ್ದು, ವಯಸ್ಸು, ನಗರ, ಒಂದೇ ಯೋಜನೆಯಲ್ಲಿರುವ ಸದಸ್ಯರ ಸಂಖ್ಯೆ ಇತ್ಯಾದಿಗಳ ಆಧಾರದ ಮೇಲೆ ನಿರ್ಧಾವಾಗುತ್ತದೆ. |
ಮೆಡಿಕ್ಲೈಮ್ ಫ್ಲೆಕ್ಸಿಬಲ್ ಆಗಿಲ್ಲ |
ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ಫ್ಲೆಕ್ಸಿಬಲ್ ಆಗಿವೆ ಮತ್ತು ಅವುಗಳನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು. |
ನಿಮ್ಮ ನಿರ್ಧಾರವು ಅನೇಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ, ಉದಾಹರಣೆಗೆ:
ಮೇಲೆ ತಿಳಿಸಲಾದ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಯಾವುದು ಸೂಕ್ತ ಅನ್ನುವುದನ್ನು ತಿಳಿದುಕೊಂಡರೆ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡುವುದು ಕಷ್ಟವಾಗುವುದಿಲ್ಲ. ಮತ್ತು ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ, ಸಂಪರ್ಕದಲ್ಲಿರಿ! ನಿಮ್ಮ ಸಹಾಯಕ್ಕಾಗಿ ನಾವು ಸದಾ ಸಿದ್ಧ.
ಗಮನಿಸಿ: ಕೊರೋನಾ ವೈರಸ್ ಹೆಲ್ತ್ ಇನ್ಶೂರೆನ್ಸ್ನ ಪ್ರಯೋಜನಗಳು ಮತ್ತು ಅದರ ಕವರೇಜ್ ಗಳ ಕುರಿತು ಇನ್ನಷ್ಟು ತಿಳಿಯಿರಿ