ಡೆಂಟಲ್ ಕವರ್ ಜೊತೆಗೆ ಹೆಲ್ತ್ ಇನ್ಶೂರೆನ್ಸ್
No Capping
on Room Rent
24/7
Customer Support
Zero
Co-payment
No Capping
on Room Rent
24/7
Customer Support
Zero
Co-payment
ಡೆಂಟಲ್ ಹೆಲ್ತ್ ಇನ್ಶೂರೆನ್ಸ್ ಎಂದರೇನು?
ನಿಮಗೆ ಡೆಂಟಲ್ ಹೆಲ್ತ್ ಇನ್ಶೂರೆನ್ಸ್ ಏಕೆ ಬೇಕು?
ಡೆಂಟಲ್ ಚಿಕಿತ್ಸೆಗಳನ್ನು ಒಳಗೊಂಡಿರುವ ಡಿಜಿಟ್ ಹೆಲ್ತ್ ಇನ್ಶೂರೆನ್ಸ್ನಲ್ಲಿ ಯಾವುದು ಉತ್ತಮವಾಗಿದೆ?
ಡೆಂಟಲ್ ಚಿಕಿತ್ಸೆಗಳಿಗೆ ಕವರೇಜ್ ಸೇರಿದಂತೆ ಒಪಿಡಿ (OPD) ಕವರ್ನೊಂದಿಗೆ ಡಿಜಿಟ್ ಹೆಲ್ತ್ ಇನ್ಶೂರೆನ್ಸ್ನಲ್ಲಿ ಏನು ಒಳಗೊಂಡಿದೆ?
ಸ್ಮಾರ್ಟ್ + OPD
ಡೆಂಟಲ್ ಚಿಕಿತ್ಸೆಗಳು ಹಲ್ಲಿನ ನೋವಿನ ತಕ್ಷಣದ ಪರಿಹಾರಕ್ಕಾಗಿ ಹೊರರೋಗಿ ಹಲ್ಲಿನ ಚಿಕಿತ್ಸೆ; ದಂತವೈದ್ಯರಿಂದ ತೆಗುದುಕೊಂಡದ್ದು , ನಾವು X-ರೇ, ಹಲ್ಲು ತೆಗೆಯುವಿಕೆ , ಅಮಾಲ್ಗಮ್ ಅಥವಾ ಸಂಯೋಜಿತ ಫಿಲ್ಲಿಂಗ್ಗಳು, ರೂಟ್ ಕೆನಾಲ್ ಚಿಕಿತ್ಸೆಗಳು ಮತ್ತು ಶಿಫಾರಸು ಮಾಡಲಾದ ಔಷಧಿಗಳಿಗೆ ಮತ್ತು ಹದಿಹರೆಯದವರಿಗೆ ಹಲ್ಲು ಜೋಡಣೆಗೆ ಮಾತ್ರ ಪಾವತಿಸುತ್ತೇವೆ. |
✔
|
ಒಪಿಡಿ (OPD) ಕವರೇಜುಗಳು |
|
ವೃತ್ತಿಪರ ಶುಲ್ಕ ಯಾವುದೇ ಅನಾರೋಗ್ಯಕ್ಕಾಗಿ ನಿಮ್ಮ ಆರೋಗ್ಯವನ್ನು ನಿರ್ಧರಿಸಲು ವೈದ್ಯಕೀಯವಾಗಿ ಅಗತ್ಯವಾದ ಸಮಾಲೋಚನೆಗಳು ಮತ್ತು ವೈದ್ಯರ ಪರೀಕ್ಷಾ ಶುಲ್ಕಗಳು. |
✔
|
ರೋಗನಿರ್ಣಯದ ಶುಲ್ಕಗಳು x-ರೇಗಳು, ರೋಗಶಾಸ್ತ್ರ, ಮೆದುಳು ಮತ್ತು ದೇಹದ ಸ್ಕ್ಯಾನ್ಗಳು (MRI, CT ಸ್ಕ್ಯಾನ್ಗಳು) ಇತ್ಯಾದಿಗಳಂತಹ ವೈದ್ಯಕೀಯವಾಗಿ ಅಗತ್ಯವಿರುವ ಹೊರರೋಗಿ ರೋಗನಿರ್ಣಯ ಪ್ರಕ್ರಿಯೆಗಳು... ರೋಗನಿರ್ಣಯ ಕೇಂದ್ರದಿಂದ ಚಿಕಿತ್ಸೆಗಾಗಿ ರೋಗನಿರ್ಣಯವನ್ನು ಮಾಡಲು ಬಳಸಲಾಗುತ್ತದೆ. |
✔
|
ಶಸ್ತ್ರಚಿಕಿತ್ಸೆಯ ಚಿಕಿತ್ಸೆಗಳು ಸಣ್ಣ ಶಸ್ತ್ರಚಿಕಿತ್ಸಾ ವಿಧಾನಗಳಾದ ಪಿಒಪಿ, ಸ್ಟಿಚ್ ಹಾಕುವುದು, ಅಪಘಾತಗಳಿಗೆ ಡ್ರೆಸ್ಸಿಂಗ್ ಮತ್ತು ಪ್ರಾಣಿಗಳ ಕಚ್ಚುವಿಕೆಗೆ ಸಂಬಂಧಿಸಿದ ಹೊರರೋಗಿ ವಿಧಾನಗಳು ಇತ್ಯಾದಿಗಳನ್ನು ವೈದ್ಯರು ನಡೆಸುತ್ತಾರೆ. |
✔
|
ಔಷಧ ಬಿಲ್ಲುಗಳು ನಿಮ್ಮ ವೈದ್ಯರು ಸೂಚಿಸಿದಂತೆ ಔಷಧಗಳು ಮತ್ತು ಮದ್ದುಗಳು. |
✔
|
ಶ್ರವಣ ಉಪಕರಣಗಳು ಗಂಭೀರ ಶ್ರವಣೇಂದ್ರಿಯ ಪರಿಸ್ಥಿತಿಗಳಿಗೆ ಅಗತ್ಯವಿರುವ ಶ್ರವಣ ಸಾಧನಗಳನ್ನು ಒಳಗೊಂಡಿದೆ. |
✔
|
ಇತರ ಕವರೇಜುಗಳು |
|
ಕೊರೊನಾವೈರಸ್ ಸೇರಿದಂತೆ ಎಲ್ಲಾ ಆಸ್ಪತ್ರೆಗೆ ದಾಖಲು ಇದು ಅನಾರೋಗ್ಯ, ಅಪಘಾತ ಅಥವಾ ಗಂಭೀರ ಅನಾರೋಗ್ಯದ ಕಾರಣದ ಆಸ್ಪತ್ರೆಯ ವೆಚ್ಚಗಳನ್ನು ಒಳಗೊಂಡಿದೆ. ನಿಮ್ಮ ಇನ್ಶೂರ್ಡ್ ಮೊತ್ತಕ್ಕೆ ಒಟ್ಟು ವೆಚ್ಚಗಳು ಇರುವವರೆಗೆ, ಮಲ್ಟಿಪಲ್ ಆಸ್ಪತ್ರೆಗೆ ಸೇರಿಸಲು ಇದನ್ನು ಬಳಸಬಹುದು. |
✔
|
ಡೇಕೇರ್ ಪ್ರಕ್ರಿಯೆಗಳು ಹೆಲ್ತ್ ಇನ್ಶೂರೆನ್ಸ್ ಸಾಮಾನ್ಯವಾಗಿ 24 ಗಂಟೆಗಳನ್ನು ಮೀರಿದ ಮಾತ್ರ ಆಸ್ಪತ್ರೆ ದಾಖಲಾತಿಯ ವೈದ್ಯಕೀಯ ವೆಚ್ಚಗಳನ್ನು ಒಳಗೊಂಡಿರುತ್ತವೆ. ಇದು ಆಸ್ಪತ್ರೆಯಲ್ಲಿ ಕೈಗೊಳ್ಳಲಾದ ವೈದ್ಯಕೀಯ ಚಿಕಿತ್ಸೆಗಳನ್ನು ಒಳಗೊಂಡಿರುತ್ತದೆ, ತಾಂತ್ರಿಕ ಪ್ರಗತಿಯಿಂದಾಗಿ 24 ಗಂಟೆಗಳಿಗಿಂತ ಕಡಿಮೆ ಸಮಯ ಬೇಕಾಗಿರುವ ಚಿಕಿತ್ಸೆಯನ್ನು ಸಹ ಒಳಗೊಡಿರುತ್ತದೆ . |
✔
|
ವಯಸ್ಸಿನ ಆಧಾರದ ಮೇಲೆ ಪಾವತಿ ಇಲ್ಲ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಸಮಯದಲ್ಲಿ ನಿಮ್ಮ ಜೇಬಿನಿಂದ ನೀವು ಪಾವತಿಸಬೇಕಾದ ಹಣವನ್ನು ಸಹಪಾವತಿ ಎಂದು ಕರೆಯಲಾಗುತ್ತದೆ. ನಮ್ಮ ಪ್ಲ್ಯಾನುಗಳಲ್ಲಿ , ನಾವು ಯಾವುದೇ ವಯಸ್ಸಿನ ಆಧಾರಿತ ಸಹಪಾವತಿಯನ್ನು ಒಳಗೊಂಡಿಲ್ಲ! |
✔
|
ಕೊಠಡಿ ಬಾಡಿಗೆಗೆ ಕ್ಯಾಪಿಂಗ್ ಇಲ್ಲ ವಿವಿಧ ವರ್ಗದ ಕೊಠಡಿಗಳು ವಿಭಿನ್ನ ಬಾಡಿಗೆಗಳನ್ನು ಹೊಂದಿರುತ್ತವೆ. ಹೇಗೆ ಹೋಟೆಲ್ ಕೊಠಡಿಗಳು ಸುಂಕವನ್ನು ಹೊಂದಿರುತ್ತವೆಯೋ ಇದು ಹಾಗೆಯೇ. ಡಿಜಿಟ್ನ, ಕೆಲವು ಯೋಜನೆಗಳು ನಿಮಗೆ ನಿಮ್ಮ ಇನ್ಶೂರೆನ್ಸ್ ಮೊತ್ತಕ್ಕಿಂತ ಕಡಿಮೆ ಇರುವ, ಕೊಠಡಿ ಬಾಡಿಗೆ ಮಿತಿಯನ್ನು ಹೊಂದಿರದ ಪ್ರಯೋಜನವನ್ನು ನೀಡುತ್ತದೆ. |
✔
|
ಯಾವುದೇ ICU ಕೊಠಡಿ ಬಾಡಿಗೆ ಕ್ಯಾಪಿಂಗ್ ಇಲ್ಲ ಐಸಿಯು (ತೀವ್ರ ನಿಗಾ ಘಟಕಗಳು) ಗಂಭೀರ ರೋಗಿಗಳಿಗೆ ಮೀಸಲಾಗಿರುತ್ತದೆ. ಐಸಿಯುಗಳಲ್ಲಿ ಆರೈಕೆಯ ಮಟ್ಟವು ಹೆಚ್ಚಾಗಿರುತ್ತದೆ, ಅದಕ್ಕಾಗಿಯೇ ಬಾಡಿಗೆಯೂ ಹೆಚ್ಚು. ನಿಮ್ಮ ಇನ್ಶೂರೆನ್ಸ್ ಮೊತ್ತಕ್ಕಿಂತ, ಐಸಿಯು ಕೊಠಡಿ ಬಾಡಿಗೆ ಕಡಿಮೆ ಇರುವವರೆಗೆ ಡಿಜಿಟ್, ಐಸಿಯು ಬಾಡಿಗೆಗೆ ಯಾವುದೇ ಮಿತಿಯನ್ನು ಹಾಕುವುದಿಲ್ಲ. |
✔
|
ಸಂಚಿತ ಬೋನಸ್ ಪ್ರತಿ ಕ್ಲೈಮ್ ಇಲ್ಲದ ವರ್ಷಕ್ಕೆ ರಿವಾರ್ಡ್ ಪಡೆಯಿರಿ.ಒಂದು ವರ್ಷದಲ್ಲಿ ನೀವು ಯಾವುದೇ ಕ್ಲೈಮ್ ಮಾಡದಿದ್ದರೆ, ಮುಂದಿನ ವರ್ಷದಲ್ಲಿ ಕೆಲವು ಪ್ಲ್ಯಾನುಗಳಲ್ಲಿ ನಿಮಗೆ ಡಿಸ್ಕೌಂಟ್ ನೀಡುತ್ತವೆ. ಈ ಹೆಚ್ಚುವರಿ ಡಿಸ್ಕೌಂಟ್ ಅನ್ನು 'ಕ್ಯುಮುಲೇಟಿವ್ ಬೋನಸ್'ಅಥವಾ ಸಂಚಿತ ಬೋನಸ್ ಎಂದು ಕರೆಯಲಾಗುತ್ತದೆ. |
ಪ್ರತಿ ಕ್ಲೈಮ್ ಮುಕ್ತ ವರ್ಷಕ್ಕೆ 10% CB (50% ವರೆಗೆ)
|
ರೋಡ್ ಆಂಬ್ಯುಲೆನ್ಸ್ ಶುಲ್ಕಗಳು ರಸ್ತೆ ಆಂಬ್ಯುಲೆನ್ಸ್ ಶುಲ್ಕಗಳು |
✔
|
ಪೂರಕ ಆರೋಗ್ಯ ತಪಾಸಣೆಗಳು ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ನೀವು ತಿಳಿದುಕೊಂಡಿರುವುದನ್ನು ಖಚಿತಪಡಿಸಿಕೊಳ್ಳಲು ವಾರ್ಷಿಕ ಆರೋಗ್ಯ ತಪಾಸಣೆಗಳು ಮುಖ್ಯವಾಗಿವೆ. ಇದು ರಿನೀವಲ್ ಪ್ರಯೋಜನವಾಗಿದ್ದು, ನಿಮ್ಮ ಆಯ್ಕೆಯ ಯಾವುದೇ ಆಸ್ಪತ್ರೆಯಲ್ಲಿ, ಯಾವುದೇ ವಾರ್ಷಿಕ ವೈದ್ಯಕೀಯ ಪರೀಕ್ಷೆಗಳು ಮತ್ತು ತಪಾಸಣೆಗಳಿಗೆ ನಿಮ್ಮ ಖರ್ಚುಗಳನ್ನು ಮರುಪಾವತಿಸಲು ನಿಮ್ಮನ್ನು ಅನುಮತಿಸುತ್ತದೆ. |
✔
|
ಆಸ್ಪತ್ರೆಯ ಚಿಕಿತ್ಸಾ ನಂತರದ ಒಟ್ಟುಮೊತ್ತ ಚಿಕಿತ್ಸೆಯ ನಂತರ, ಡಿಸ್ಚಾರ್ಜ್ ಆಗುವ ಸಮಯದಲ್ಲಿ ನಿಮ್ಮ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಸರಿದೂಗಿಸಲು, ನೀವು ಬಳಸಬಹುದಾದ ಪ್ರಯೋಜನ ಇದಾಗಿದೆ. ಇದಕ್ಕೆ ಯಾವುದೇ ಬಿಲ್ಗಳ ಅಗತ್ಯವಿಲ್ಲ. ಮರುಪಾವತಿ ಪ್ರಕ್ರಿಯೆಯ ಮೂಲಕ ನೀವು ಈ ಪ್ರಯೋಜನವನ್ನು ಬಳಸಿಕೊಳ್ಳಲು ಅಥವಾ ಸ್ಟ್ಯಾಂಡರ್ಡ್ ಚಿಕಿತ್ಸಾ ಪ್ರಯೋಜನವನ್ನು ಪಡೆಯಲು ಆಯ್ಕೆ ಮಾಡಿಕೊಳ್ಳಹುದು. |
✔
|
ಮನೋವೈದ್ಯಕೀಯ ಕಾಯಿಲೆಯ ಕವರ್ ಆಘಾತದ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಮನೋವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಬೇಕಾದರೆ, ಅದು ಈ ಪ್ರಯೋಜನದ ಅಡಿಯಲ್ಲಿ ಬರುತ್ತದೆ. ಆದಾಗ್ಯೂ, ಓಪಿಡಿ (OPD) ಸಮಾಲೋಚನೆಗಳು ಇದರ ಅಡಿಯಲ್ಲಿ ಕವರ್ ಆಗುವುದಿಲ್ಲ. |
✔
|
ಬಾರಿಯಾಟ್ರಿಕ್ ಸರ್ಜರಿ ತಮ್ಮ ಸ್ಥೂಲಕಾಯತೆ (BMI > 35) ಕಾರಣದಿಂದಾಗಿ ಅಂಗಾಂಗ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಈ ಕವರೇಜ್ ಇದೆ. ಆದಾಗ್ಯೂ, ಸ್ಥೂಲಕಾಯತೆ ಎನ್ನುವುದು ತಿನ್ನುವ ಅಸ್ವಸ್ಥತೆಗಳಿಂದ, ಹಾರ್ಮೋನುಗಳಿಂದ ಅಥವಾ ಇತರ ಯಾವುದೇ ಚಿಕಿತ್ಸೆ ನೀಡಬಲ್ಲ ಪರಿಸ್ಥಿತಿಗಳ ಕಾರಣದಿಂದಾಗಿ ಉಂಟಾಗಿದ್ದರೆ, ಈ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಕವರ್ ಮಾಡಲಾಗುವುದಿಲ್ಲ. |
✔
|
ನೀವು ಆಯ್ಕೆಮಾಡಬಹುದಾದ ಹೆಚ್ಚುವರಿ ಕವರ್ಗಳು |
|
ನವಜಾತ ಶಿಶುವಿನ ಕವರ್ನೊಂದಿಗೆ ಹೆರಿಗೆ ಪ್ರಯೋಜನ ನೀವೇನಾದರೂ ಮುಂದಿನ ಎರಡು ವರ್ಷಗಳಲ್ಲಿ ಮಗು ಹೊಂದಲು ಯೋಜಿಸುತ್ತಿದ್ದರೆ, ನೀವಿದನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ನವಜಾತ ಮಗುವಿನ ಹೆರಿಗೆ (ವೈದ್ಯಕೀಯವಾಗಿ ಅಗತ್ಯವಾದ ಅವಧಿಗಳು ಸೇರಿದಂತೆ) ಬಂಜೆತನದ ವೆಚ್ಚಗಳನ್ನು ಕವರ್ ಮಾಡುತ್ತದೆ. ಜೊತೆಗೆ ಶಿಶುವಿನ ಮೊದಲ 90 ದಿನಗಳವರೆಗಿನ ಕವರೇಜ್ ಅನ್ನು ಒಳಗೊಂಡಿದೆ. |
✔
|
ಝೋನ್ ಅಪ್ಗ್ರೇಡ್ ಪ್ರತಿಯೊಂದು ನಗರವು ವಲಯ ಎ, ಬಿ ಅಥವಾ ಸಿ ಯಲ್ಲಿ ಬರುತ್ತದೆ. ವಲಯ ಎ ದೆಹಲಿ ಮತ್ತು ಮುಂಬೈ ನಗರಗಳನ್ನು ಹೊಂದಿದೆ. ಬಿ ವಲಯವು ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾದಂತಹ ನಗರಗಳನ್ನು ಹೊಂದಿದೆ. ವೈದ್ಯಕೀಯ ವೆಚ್ಚಗಳ ಪ್ರಕಾರ ವಲಯಗಳನ್ನು ವಿಂಗಡಿಸಲಾಗಿದೆ. ಎ ವಲಯದ ನಗರಗಳು ಹೆಚ್ಚಿನ ವೈದ್ಯಕೀಯ ವೆಚ್ಚವನ್ನು ಹೊಂದಿವೆ. ಆದ್ದರಿಂದ ಈ ನಗರಗಳಲ್ಲಿ ಹೆಲ್ತ್ ಇನ್ಶೂರೆನ್ಸಿನ ಅಡಿಯಲ್ಲಿ ಚಿಕಿತ್ಸೆ ಪಡೆಯಬೇಕಾದರೆ ಪ್ರೀಮಿಯಂ ಸ್ವಲ್ಪ ಹೆಚ್ಚಾಗಿರುತ್ತದೆ. ನೀವು ವಾಸಿಸುವ ಸ್ಥಳಕ್ಕಿಂತ ದೊಡ್ಡ ನಗರದಲ್ಲಿ ಚಿಕಿತ್ಸೆ ಪಡೆಯಲು ನೀವು ಬಯಸಿದರೆ, ನಿಮ್ಮ ಯೋಜನೆಯನ್ನು ನೀವು ಅಪ್ಗ್ರೇಡ್ ಮಾಡಬಹುದು. |
✔
|
ಯಾವುದು ಕವರ್ ಆಗುವುದಿಲ್ಲ?
ಡೆಂಟಲ್ ಚಿಕಿತ್ಸೆಗಾಗಿ ಈ ಇನ್ಶೂರೆನ್ಸ್ ಕಾಸ್ಮೆಟಿಕ್ ಸರ್ಜರಿಗಳು, ಡೆಂಟಲ್, ಡೆಂಟಲ್ ಕೃತಕ ಅಂಗಗಳು, ಡೆಂಟಲ್ ಕಸಿಗಳು, ಆರ್ಥೋಡಾಂಟಿಕ್ಸ್, ಆರ್ಥೋಗ್ನಾಥಿಕ್ ಶಸ್ತ್ರಚಿಕಿತ್ಸೆಗಳು, ದವಡೆಯ ಜೋಡಣೆ ಅಥವಾ ಟೆಂಪೊರೊಮ್ಯಾಂಡಿಬ್ಯುಲರ್ (ದವಡೆ) ಅಥವಾ ಮೇಲಿನ ಮತ್ತು ಕೆಳಗಿನ ದವಡೆಯ ಮೂಳೆ ಶಸ್ತ್ರಚಿಕಿತ್ಸೆ ಮತ್ತು ಟೆಂಪೊರಮ್ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ವೆಚ್ಚಗಳನ್ನು ಒಳಗೊಂಡಿರುವುದಿಲ್ಲ. (ದವಡೆ) ತೀವ್ರವಾದ ಆಘಾತಕಾರಿ ಗಾಯ ಅಥವಾ ಕ್ಯಾನ್ಸರ್ನಿಂದ ಅಗತ್ಯವಿಲ್ಲದಿದ್ದರೆ.
ಇದರ ಹೊರತಾಗಿ, ಕನ್ನಡಕ, ಕಾಂಟ್ಯಾಕ್ಟ್ ಲೆನ್ಸ್ ಮತ್ತು ಫಿಸಿಯೋಥೆರಪಿ, ಕಾಸ್ಮೆಟಿಕ್ ಕಾರ್ಯವಿಧಾನಗಳು, ವಾಕರ್ಸ್, ಬಿಪಿ ಮಾನಿಟರ್ಗಳು, ಗ್ಲುಕೋಮೀಟರ್ಗಳು, ಥರ್ಮಾಮೀಟರ್ಗಳಂತಹ ಆಂಬ್ಯುಲೇಟರಿ ಸಾಧನಗಳು, ಡಯೆಟಿಷಿಯನ್ ಶುಲ್ಕಗಳು, ವಿಟಮಿನ್ಗಳು ಮತ್ತು ಸಪ್ಲಿಮೆಂಟ್ಗಳ ವೆಚ್ಚವನ್ನು ಒಪಿಡಿ (OPD) ಕವರ್ ಹೊರಗಿಡುತ್ತದೆ.