Zero
Documentation
Quick Claim
Process
Affordable
Premium
Terms and conditions apply*
ಆಫೀಸ್ ಇನ್ಶೂರೆನ್ಸ್ ಎಂದರೇನು?
ಆಫೀಸ್ ಇನ್ಶೂರೆನ್ಸ್ ಪ್ರಯೋಜನಕಾರಿಯಾಗಿದೆ ಎಂದು ಇನ್ನೂ ಖಚಿತತೆ ಇಲ್ಲವೇ?
ಮುಂದೆ ಓದಿ....
ಡಿಜಿಟ್ನ ಆಫೀಸ್ ಇನ್ಶೂರೆನ್ಸ್ನಲ್ಲಿ ಏನು ಉತ್ತಮವಾಗಿದೆ?
డిజిట్ ద్వారా ఆఫీస్ ఇన్సూరెన్స్లో ఏమి కవర్ చేయబడింది?
ಡಿಜಿಟ್ ನ ಆಫೀಸ್ ಇನ್ಶೂರೆನ್ಸ್ ಈ ಕೆಳಗಿನವುಗಳಿಗೆ ಕವರೇಜ್ ನೀಡುತ್ತದೆ:
ಯಾವುದಕ್ಕೆ ಕವರ್ ಇಲ್ಲ?
ಯಾರಿಂದಲೂ ಬೇಕಂದಲೇ ಮಾಡಿದ , ಉದ್ದೇಶಪೂರ್ವಕ ಅಥವಾ ತಿಳಿದು ಮಾಡಿದ ಕ್ರಿಯೆಯು ಒಳಗೊಳ್ಳುವುದಿಲ್ಲ
ಯಾವುದೇ ಪರಿಣಾಮದ ನಷ್ಟಗಳನ್ನು ಒಳಗೊಂಡಿರುವುದಿಲ್ಲ
ನಿಗೂಢ ನಾಪತ್ತೆಗಳು ಮತ್ತು ವಿವರಿಸಲಾಗದ ನಷ್ಟಗಳನ್ನು ಒಳಗೊಂಡಿರುವುದಿಲ್ಲ.
ಕ್ಯೂರಿಯಸ್, ಕಲೆಯ ಕೆಲಸ ಅಥವಾ ಹೊಂದಿಸದ ಅಮೂಲ್ಯ ಕಲ್ಲುಗಳಂತಹ ಹೆಚ್ಚುವರಿ ಬೆಲೆಬಾಳುವ ವಸ್ತುಗಳನ್ನು ಒಳಗೊಂಡಿರುವುದಿಲ್ಲ.
ನೈಸರ್ಗಿಕ ವಿಪತ್ತು, ಬೆಂಕಿ, ಸ್ಫೋಟ, ಸ್ಫೋಟ, ಇತ್ಯಾದಿಗಳ ಪರಿಣಾಮವಾಗಿಲ್ಲದ ಯಂತ್ರೋಪಕರಣಗಳ ಸ್ಥಗಿತಗಳನ್ನು ಒಳಗೊಂಡಿರುವುದಿಲ್ಲ.
ಯುದ್ಧ ಅಥವಾ ಪರಮಾಣು ದುರಂತದಿಂದ ಉಂಟಾಗುವ ನಷ್ಟಗಳನ್ನು ಒಳಗೊಂಡಿರುವುದಿಲ್ಲ
ಆಫೀಸ್ ಇನ್ಶೂರೆನ್ಸ್ ಪ್ಲಾನ್ ಪ್ರಕಾರಗಳು
ಡಿಜಿಟ್ನಲ್ಲಿ, ಬೆಂಕಿ ಮತ್ತು ಪ್ರವಾಹಗಳು ಮತ್ತು ಭೂಕಂಪಗಳಂತಹ ನೈಸರ್ಗಿಕ ವಿಪತ್ತುಗಳ ವಿರುದ್ಧ ನಮ್ಮ ಇನ್ಶೂರೆನ್ಸ್ ನಿಮ್ಮ ಆಫೀಸ್ ಅನ್ನು ಕವರ್ ಮಾಡುತ್ತದೆ. ಆದರೆ ಆಫೀಸುಗಳಿಗೂ ಕಳ್ಳತನದ ಅಪಾಯದಲ್ಲಿರುವುದರಿಂದ, ನಾವು ಪ್ರತ್ಯೇಕ ಪಾಲಿಸಿಯಲ್ಲಿ ಕಳ್ಳತನವನ್ನು ಸಹ ಕವರ್ ಮಾಡುತ್ತೇವೆ. ಇದನ್ನು ಸರಳಗೊಳಿಸಲು, ನಾವು ಕೆಳಗಿನಂತೆ ವಿಭಿನ್ನ ಕವರೇಜ್ ಆಯ್ಕೆಗಳನ್ನು ಹೊಂದಿದ್ದೇವೆ:
ಆಪ್ಷನ್ 1 |
ಆಪ್ಷನ್ 2 |
ಆಪ್ಷನ್ 3 |
ಆಫೀಸ್ ನಲ್ಲಿರುವ ವಸ್ತುಗಳಿಗೆ ಮಾತ್ರ ಕವರ್ ಸಿಗುತ್ತದೆ |
ಆಫೀಸ್ ಜಾಗ ಮತ್ತು ಆಫೀಸ್ ನಲ್ಲಿರುವ ವಸ್ತುಗಳು ಎರಡಕ್ಕೂ ರಕ್ಷಣೆ ಸಿಗುತ್ತದೆ |
ನಿಮ್ಮ ಬಿಲ್ಡಿಂಗ್ ಅನ್ನು ಕವರ್ ಮಾಡುತ್ತದೆ |
ಆಫೀಸ್ ಇನ್ಶೂರೆನ್ಸ್ ಬಗ್ಗೆ ತಿಳುದುಕೊಳ್ಳಬೇಕಾದ ವಿಚಾರಗಳು
‘ಕಂಟೆಂಟ್’ ಎಂದರೇನು?: ಆಫೀಸ್ ಇನ್ಶೂರೆನ್ಸ್ನಲ್ಲಿರುವ ವಿಷಯಗಳು ನಿಮ್ಮ ಆಫೀಸಿನಲ್ಲಿರುವ ಪ್ರಾಥಮಿಕ ವಸ್ತುಗಳನ್ನು ಉಲ್ಲೇಖಿಸುತ್ತವೆ. ಉದಾಹರಣೆಗೆ, ಭೂಕಂಪ ಅಥವಾ ಇನ್ನಾವುದೇ ನೈಸರ್ಗಿಕ ವಿಕೋಪದಲ್ಲಿ ಆಫೀಸಿನಲ್ಲಿರುವ ವಸ್ತುಗಳು ಹಾನಿಗೊಳಗಾದರೆ, ಅದನ್ನು ಪಾಲಿಸಿಯು ಕವರ್ ಮಾಡುತ್ತದೆ.
‘ಬಿಲ್ಡಿಂಗ್’ ಎಂದರೆ ಏನು?: ಆಫೀಸ್ ಇನ್ಶೂರೆನ್ಸ್ ನಲ್ಲಿ ಬಿಲ್ಡಿಂಗ್ ಎಂದರೆ ನಿಮ್ಮ ಆಫೀಸ್ ಇರುವ ಕಟ್ಟಡದ ಭೌತಿಕ ಜಾಗ.
ಆಫೀಸ್ ಇನ್ಶೂರೆನ್ಸ್ ಯಾರಿಗೆ ಅಗತ್ಯವಿದೆ?
ಆಫೀಸ್ ಇನ್ಶೂರೆನ್ಸ್ ನ ಪ್ರಯೋಜನಗಳೇನು?
ಭಾರತದಲ್ಲಿ ಬಿಲ್ಡಿಂಗ್ ಇನ್ಶೂರೆನ್ಸ್ ನ ಪ್ರಮುಖ ಪ್ರಯೋಜನಗಳ ಬಗ್ಗೆ ನೋಡುವುದಾದರೆ:
- ಅನಿರೀಕ್ಷಿತ ಸಂದರ್ಭಗಳ ವಿರುದ್ಧ ರಕ್ಷಣೆ - ಇದು ಆಗ್ನಿ ಅವಘಡಗಳು, ಕಳ್ಳತನ, ನೈಸರ್ಗಿಕ ವಿಪತ್ತುಗಳು ಮತ್ತು ಸ್ಫೋಟಗಳಂತಹ ಎಲ್ಲಾ ಅನಿರೀಕ್ಷಿತ ನಷ್ಟಗಳು ಮತ್ತು ಹಾನಿಗಳ ವಿರುದ್ಧ ನಿಮ್ಮ ಆಫೀಸ್ ಮತ್ತು ಅದರ ವಸ್ತುಗಳನ್ನು ರಕ್ಷಿಸುತ್ತದೆ.
- ಬಿಸಿನೆಸ್ ಅಪಾಯಗಳನ್ನು ಕಡಿಮೆ ಮಾಡುತ್ತದೆ - ನಿಮ್ಮ ಆಫೀಸ್ ಮತ್ತು ಅದರ ವಸ್ತುಗಳನ್ನು ರಕ್ಷಿಸಲು ಕಸ್ಟಮೈಸ್ ಮಾಡಿದ ಪಾಲಿಸಿಗಳೊಂದಿಗೆ ಆಫೀಸ್ ಇನ್ಶೂರೆನ್ಸ್ ಕೂಡ ಬರುತ್ತದೆ. ಹೀಗಾಗಿ ಬೆಂಕಿ ಆವಘಡಗಳು, ಭೂಕಂಪ, ಪ್ರವಾಹ, ಕಳ್ಳತನ ಇತ್ಯಾದಿ ಘಟನೆಗಳು ಸಂಭವಿಸಿದಲ್ಲಿ ಇದು ನಷ್ಟದ ಅಪಾಯವನ್ನು ಕಡಿಮೆ ಮಾಡುತ್ತದೆ.
- ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ – ನಿಮ್ಮ ಕಛೇರಿಯು ರಕ್ಷಿಸಲ್ಪಟ್ಟಿದೆ ಎಂಬ ಧೈರ್ಯ ನಿಮಗಿದ್ದರೆ, ನಿಮ್ಮ ಅಂಗಡಿ ಮತ್ತು ಅದರ ರಕ್ಷಣೆಯ ಬಗ್ಗೆ ನೀವು ಚಿಂತೆ ಮಾಡಬೇಕಾಗಿಲ್ಲ ಮತ್ತು ಈ ಬಗ್ಗೆ ಮನಸ್ಸಿಗೆ ಅನವಶ್ಯಕ ಒತ್ತಡ ತಂದುಕೊಳ್ಳುವ ಅಗತ್ಯವಿಲ್ಲ, ಏಕೆಂದರೆ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ನಿಮ್ಮ ಬೆನ್ನಿಗೆ ನಿಂತಿರುತ್ತಾರೆ!
ಆಫೀಸ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
ನಿಮ್ಮ ಬಿಲ್ಡಿಂಗ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಈ ಕೆಳಗಿನ ಅಂಶಗಳಿಂದ ಲೆಕ್ಕ ಹಾಕಲಾಗುತ್ತದೆ:
- ಬಿಲ್ಡಿಂಗ್ ಪ್ರಕಾರ - ನೀವು ಇನ್ಶೂರೆನ್ಸ್ ಮಾಡುತ್ತಿರುವ ಬಿಲ್ಡಿಂಗ್ ನಿಮ್ಮ ಆಫೀಸ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಒಂದು ಮಹಡಿಯಲ್ಲಿನ ಆಫೀಸ್ ಜಾಗಕ್ಕೆ ಕಡಿಮೆ ಪ್ರೀಮಿಯಂ, ಹಾಗೆ ಇಡೀ ಬಿಲ್ಡಿಂಗ್ ಹೆಚ್ಚಿನ ಪ್ರೀಮಿಯಂ ಅನ್ನು ಹೊಂದಿರುತ್ತದೆ.
- ಕಟ್ಟಡದ ವಯಸ್ಸು - ಯಾವುದೇ ಇತರ ಇನ್ಶೂರೆನ್ಸ್ ಪಾಲಿಸಿಯಂತೆ, ಪ್ರೀಮಿಯಂ ಬೆಲೆಗಳನ್ನು ನಿರ್ಧಾರ ಮಾಡುವಲ್ಲಿ ವಯಸ್ಸು ಪ್ರಮುಖ ಅಂಶವಾಗಿದೆ. ಕಟ್ಟಡವು ಹಳೆಯದಾಗಿದ್ದರೆ, ಅದರ ಪ್ರೀಮಿಯಂ ಕಡಿಮೆ ಇರುತ್ತದೆ ಮತ್ತು ಹೊಸದಾಗಿದ್ದರೆ, ಹೆಚ್ಚಿರುತ್ತದೆ.
- ಆಸ್ತಿಯ ಪ್ರದೇಶ - ಇನ್ಶೂರೆನ್ಸ್ ಮಾಡಬೇಕಾದ ಆಫೀಸ್ ಪ್ರದೇಶವು ಅದರ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ನೇರ ಪರಿಣಾಮ ಬೀರುತ್ತದೆ. ದೊಡ್ಡದಾದ ಜಾಗಕ್ಕೆ ಹೆಚ್ಚಿನ ಇನ್ಶೂರೆನ್ಸ್ ಮೊತ್ತ, ಹಾಗಾಗಿ ಪ್ರೀಮಿಯಂ ಸಹ ಹೆಚ್ಚು.
- ತೆಗೆದುಕೊಂಡ ಭದ್ರತಾ ಕ್ರಮಗಳು - ಕಳ್ಳತನ ಮತ್ತು ಅಗ್ನಿ ಅವಘಡಗಳಂತಹ ಅಪಾಯಗಳಿಂದ ರಕ್ಷಿಸಿಕೊಳ್ಳಲು ಅನೇಕ ಆಫೀಸ್ ಗಳು ವಿವಿಧ ಭದ್ರತಾ ಕ್ರಮಗಳನ್ನು ಹೊಂದಿರುತ್ತವೆ. ಒಂದು ವೇಳೆ ನಿಮ್ಮ ಕಛೇರಿಯು ಸಹ ಇವುಗಳನ್ನು ಹೊಂದಿದ್ದರೆ, ನಿಮ್ಮ ಆಫೀಸ್ ಗೆ ಅಪಾಯ ಕಡಿಮೆ ಇರುತ್ತದೆ ಮತ್ತು ಆಫೀಸ್ ಇನ್ಶೂರೆನ್ಸ್ ಪ್ರೀಮಿಯಂ ಸಹ ಕಡಿಮೆ ಇರುತ್ತದೆ.
- ಹೆಚ್ಚುವರಿ ರಕ್ಷಣೆಗಳು - ಆಫೀಸ್ ಇನ್ಶೂರೆನ್ಸ್ ಮುಖ್ಯವಾಗಿ ಆಫೀಸ್ ಮತ್ತು ಅದರೊಳಗಿನ ವಸ್ತುಗಳಿಗೆ ಸಂಬಂಧಪಟ್ಟಿರುತ್ತದೆ. ಆದರೆ, ಕ್ಯುರಿಯೋಸ್, ಕಲೆ ಮತ್ತು ಆಭರಣಗಳಂತಹ ಇತರ ಬೆಲೆ ಬಾಳುವ ವಸ್ತುಗಳೂ ಸಹ ಅಲ್ಲಿರಬಹುದು. ಇಂತಹ ವಸ್ತುಗಳಿಗಾಗಿ ನೀವು ಆಡ್-ಆನ್ಗಳನ್ನು ಆಯ್ಕೆ ಮಾಡಬಹುದು. ಏಕೆಂದರೆ ಅದು ನಿಮಗೆ ಇಲ್ಲಿ ಉತ್ತಮ ರಕ್ಷಣೆ ನೀಡಲು ನೆರವಿಗೆ ಬರುತ್ತದೆ ಮತ್ತು ಇದರ ಪರಿಣಾಮವಾಗಿ ನಿಮ್ಮ ಆಫೀಸ್ ಇನ್ಶೂರೆನ್ಸ್ ಪ್ರೀಮಿಯಂ ಸಹ ಹೆಚ್ಚಾಗುತ್ತದೆ.
ನಾನು ಆನ್ಲೈನ್ ನಲ್ಲಿ ಆಫೀಸ್ ಇನ್ಶೂರೆನ್ಸ್ ಪಾಲಿಸಿಯನ್ನು ಏಕೆ ಖರೀದಿಸಬೇಕು?
ಹಿಂದಿನಿಂದ ಇರುವ ಇನ್ಶೂರೆನ್ಸ್ ಕಂಪನಿಗಳೂ ಸೇರಿದಂತೆ, ಆಫ್ಲೈನ್ನಲ್ಲಿ ಸಾಕಷ್ಟು ಆಫೀಸ್ ಇನ್ಶೂರೆನ್ಸ್ ಪಾಲಿಸಿಗಳು ಲಭ್ಯವಿವೆ.
ಆದರೆ, ಆನ್ಲೈನ್ ನಲ್ಲಿ ಆಫೀಸ್ ಇನ್ಶೂರೆನ್ಸ್ ಅನ್ನು ಖರೀದಿಸಿದರೆ, ಈ ಕೆಳಗಿನ ಪ್ರಯೋಜನಗಳಿವೆ:
- ನಿಮ್ಮ ಸಮಯ ಉಳಿಸುತ್ತದೆ: ಆನ್ಲೈನ್ನಲ್ಲಿ ನಿಮ್ಮ ಆಫೀಸ್ ಸ್ಥಳಕ್ಕಾಗಿ ಇನ್ಶೂರೆನ್ಸ್ ಖರೀದಿಸುವ ಪ್ರಕ್ರಿಯೆ ಕೇವಲ ಕೆಲವೇ ನಿಮಿಷಗಳಲ್ಲಿ ಆಗುತ್ತದೆ. ಇದರಿಂದ ನಿಮಗೆ ನಿಮ್ಮ ಅಮೂಲ್ಯ ಸಮಯದ ಉಳಿತಾಯವಾಗುತ್ತದೆ.
- ವೇಗವಾದ ಕ್ಲೈಮ್ಗಳು: ನಮ್ಮಂತಹ ಆನ್ಲೈನ್ ಇನ್ಶೂರೆನ್ಸ್ ಜೊತೆಗೆ, ನಮ್ಮ ಸ್ಮಾರ್ಟ್ಫೋನ್-ಸಕ್ರಿಯಗೊಳಿಸಿದ ಸೆಲ್ಫ್ ಇನ್ಸ್ಪೆಕ್ಷನ್ ಪ್ರಕ್ರಿಯೆಗೆ ಧನ್ಯವಾದಗಳನ್ನು ಹೇಳಬೇಕು. ಏಕೆಂದರೆ ಇಲ್ಲಿ ಕ್ಲೈಮ್ಗಳನ್ನು ಸುಲಭವಾಗಿ ಮಾಡಬಹುದು ಮತ್ತು ಇತ್ಯರ್ಥಪಡಿಸಿಕೊಳ್ಳಬಹುದು.
- ಕಡಿಮೆ ದಾಖಲೆಗಳು: ಡಿಜಿಟಲ್ ಇನ್ಶೂರೆನ್ಸ್ ಕಂಪನಿಯಾಗಿ, ನಮ್ಮ ಪ್ರಕ್ರಿಯೆಯಲ್ಲಿ ಹಿಂದಿನ ಕಾಲದ ಹಾಗೆ ನಾವು ಯಾವುದೇ ದಾಖಲೆಗಳನ್ನು ಪರಿಶೀಲಿಸುತ್ತಾ ಕೂರುವ ಸಂದರ್ಭ ಹೊಂದಿಲ್ಲ! ಸಂಪೂರ್ಣವಾಗಿ ನಮಗೆ ಅಗತ್ಯವಿದ್ದರೆ ಮಾತ್ರ ನಾವು ಅದನ್ನು ಬಳಸುತ್ತೇವೆ ಮತ್ತು ಪರಿಸ್ಥಿತಿಯನ್ನು ಆಧರಿಸಿ, ನಾವು ಕೇವಲ ಒಂದು ಅಥವಾ ಎರಡು ದಾಖಲೆಗಳನ್ನು ಕೇಳಬಹುದು ಅಷ್ಟೇ.
ಬಿಲ್ಡಿಂಗ್ ಇನ್ಶೂರೆನ್ಸ್ ಪ್ಲಾನ್ ಗಳನ್ನು ಹೋಲಿಸಲು ಟಿಪ್ಸ್
ಸರಿಯಾದ ಆಫೀಸ್ ಇನ್ಶೂರೆನ್ಸ್ ಯಾವುದು ಎಂದು ನಿರ್ಧರಿಸುವುದು ಸಾಕಷ್ಟು ಗೊಂದಲದ ಕೆಲಸ ಎನಿಸಬಹುದು. ನಿಮ್ಮ ಆಫೀಸ್ ಮತ್ತು ನಿಮ್ಮ ಬಿಸಿನೆಸ್ ಅನ್ನು ರಕ್ಷಣೆ ಮಾಡಿಕೊಳ್ಳಲು ನೀವು ಸರಿಯಾದ ಮಾರ್ಗವನ್ನು ಹುದುಕುತ್ತಿದ್ದೀರಿ ಅಷ್ಟೇ!
ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸುಲಭಗೊಳಿಸಲು, ನಿಮ್ಮ ಆಫೀಸ್ ಗೆ ಸರಿಯಾದ ಇನ್ಶೂರೆನ್ಸ್ ಹುಡುಕುವ ಸಂದರ್ಭದಲ್ಲಿ ನೀವು ಗಣನೆಗೆ ತೆಗೆದುಕೊಳ್ಳಬಹುದಾದ ಕೆಲವು ಪ್ರಮುಖ ಅಂಶಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ:
ರಕ್ಷಣೆಯ ಪ್ರಯೋಜನಗಳು - ನಿಮ್ಮ ಇನ್ಶೂರೆನ್ಸ್ ನ ಪ್ರಮುಖ ಭಾಗವೆಂದರೆ ನೀವು ಪಡೆಯುತ್ತಿರುವ ರಕ್ಷಣೆ ಎಂದು ಹೇಳಬಹುದು. ನಿಮ್ಮ ಆಫೀಸ್ ಇನ್ಶೂರೆನ್ಸ್ ನಿಮಗೆ ಯಾವುದರ ವಿರುದ್ಧ ರಕ್ಷಣೆ ನೀಡುತ್ತದೆ? ಇದು ನಿಮ್ಮ ಆಫೀಸ್ ಸ್ಥಳವನ್ನು ಮಾತ್ರ ಒಳಗೊಂಡಿದೆಯೇ ಅಥವಾ ನಿಮ್ಮ ಆಫೀಸ್ ನಲ್ಲಿರುವ ವಸ್ತುಗಳನ್ನು ಸಹ ಒಳಗೊಂಡಿರುತ್ತದೆಯೇ? ನಿಮಗೆ ಅತ್ಯಮೂಲ್ಯವಾಗಿ ಸೂಟಬಲ್ ಆಗುವ ಪ್ಲಾನ್ ಯಾವುದೆಂದು ತಿಳಿದುಕೊಳ್ಳಲು ಇದರಲ್ಲಿ ಯಾವ ರಕ್ಷಣೆ ಸೇರಿದೆ ಮತ್ತು ಯಾವುದು ಸೇರಿಲ್ಲ ಎಂಬುದನ್ನು ಮೊದಲು ನೋಡಿ.
- ಇನ್ಶೂರೆನ್ಸ್ ಮೊತ್ತ- ಇನ್ಶೂರೆನ್ಸ್ ಮೊತ್ತವು ನೀವು ಕ್ಲೈಮ್ ಮಾಡುವ ಸಂದರ್ಭದಲ್ಲಿ ನಿಮಗೆ ಸಿಗುವ ಅತ್ಯಧಿಕ ರಕ್ಷಣೆಯ ಮೊತ್ತವಾಗಿದೆ. ಆದ್ದರಿಂದ ನಿಮ್ಮ ಆಫೀಸ್ ನಲ್ಲಿರುವ ವಸ್ತುಗಳ ಒಟ್ಟು ಮೌಲ್ಯದ ಆಧಾರದ ಮೇಲೆ ನಿಮ್ಮ ಇನ್ಶೂರೆನ್ಸ್ ಮೊತ್ತವನ್ನು ಕಸ್ಟಮೈಸ್ ಮಾಡಲು ನಿಮಗೆ ಅನುಮತಿಸುವ ಆಫೀಸ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಲು ಮರೆಯದಿರಿ. ನೆನಪಿಡಿ, ಹೆಚ್ಚಿನ ಇನ್ಶೂರೆನ್ಸ್ ಮೊತ್ತ ಎಂದರೆ ಹೆಚ್ಚಿನ ಇನ್ಶೂರೆನ್ಸ್ ಪ್ರೀಮಿಯಂ ಎಂದರ್ಥ.
- ಸುಲಭ ಕ್ಲೈಮ್ಗಳು- ಕ್ಲೈಮ್ ಮಾಡುವುದು ಯಾವುದೇ ಇನ್ಶೂರೆನ್ಸ್ ನ ಪ್ರಮುಖ ಭಾಗ ಎಂದು ಹೇಳಬಹುದು. ಏಕೆಂದರೆ, ನೀವು ನಷ್ಟವನ್ನು ನೋಡುವ ಸಂದರ್ಭ, ನಿಮ್ಮ ಮನಸ್ಸಿಗೆ ಹೆಚ್ಚು ಘಾಸಿ ಉಂಟು ಮಾಡುತ್ತದೆ! ಮತ್ತು ಈ ಸಂದರ್ಭದಲ್ಲಿ ಅದೇ ನಿಮಗೆ ಹೆಚ್ಚು ಎನಿಸುತ್ತದೆ. ಆದ್ದರಿಂದ, ಕ್ಲೈಮ್ ಸೆಟಲ್ಮೆಂಟ್ ದಾಖಲೆಗಳು ಮತ್ತು ಒಳಗೊಂಡಿರುವ ಪ್ರಕ್ರಿಯೆಗಳ ಆಧಾರದ ಮೇಲೆ ನೀವು ಆಫೀಸ್ ಇನ್ಶೂರೆನ್ಸ್ ಆರಿಸಿಕೊಳ್ಳಿ. ಉತ್ತಮ ಕ್ಲೈಮ್ ಇತ್ಯರ್ಥ ಅನುಪಾತವನ್ನು ಹೊಂದಿರುವ ಮತ್ತು ನಿಮ್ಮ ಕ್ಲೈಮ್ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಯಾವುದನ್ನು ಬೇಕಾದರೂ ನೀವು ಸಾಧಾರಣವಾಗಿ ಆರಿಸಿಕೊಳ್ಳುವಿರಿ.
ಆಡ್-ಆನ್ಗಳು ಲಭ್ಯವಿವೆ - ಕೆಲವೊಮ್ಮೆ, ನೀವು ತೆಗೆದುಕೊಳ್ಳುವ ಬೇಸಿಕ್ ಪ್ಲಾನ್ ಪ್ರಯೋಜನಗಳಿಗಿಂತ ಹೆಚ್ಚಿನ ರಕ್ಷಣೆ ಅಗತ್ಯವಿರುತ್ತದೆ. ಇಂತಹ ಸಂದರ್ಭದಲ್ಲಿ ನಿಮಗೆ ಸಹಾಯಕ್ಕೆ ಬರುವುದೇ ಈ ಆಡ್- ಆನ್ ಗಳು. ನೀವು ಆಯ್ಕೆ ಮಾಡಲು ಬೇರೆ ಬೇರೆ ಇನ್ಶೂರೆನ್ಸ್ ಪೂರೈಕೆದಾರರು ವಿಭಿನ್ನ ಶ್ರೇಣಿಯ ಆಡ್-ಆನ್ಗಳನ್ನು ಹೊಂದಿರುತ್ತಾರೆ. ಹೀಗಾಗಿ, ನಿಮ್ಮ ಆಯ್ಕೆಗಳನ್ನು ಒಮ್ಮೆ ಹೋಲಿಕೆ ಮಾಡಿ ಮತ್ತು ನಿಮಗೆ ಮತ್ತು ನಿಮ್ಮ ಆಫೀಸ್ ಗೆ ಯಾವುದು ಉತ್ತಮವಾಗಿ ಸೂಕ್ತ ಎನಿಸುತ್ತದೆ ಎಂಬುದನ್ನು ನೋಡಿ ನಂತರ ಆಯ್ಕೆ ಮಾಡಿ.