ನಿಮ್ಮ ಮನೆ, ಅಂಗಡಿ ಮತ್ತು ವ್ಯಾಪಾರಕ್ಕಾಗಿ ಬರ್ಗ್ಲರಿ ಇನ್ಶೂರೆನ್ಸ್

ಜೀರೋ ಪೇಪರ್ ವರ್ಕ್. ಆನ್‌ಲೈನ್ ಪ್ರಕ್ರಿಯೆ

ಬರ್ಗ್ಲರಿ ಇನ್ಶೂರೆನ್ಸ್ (ಕಳ್ಳತನ ) ಆಸ್ತಿ ಇನ್ಶೂರೆನ್ಸಿನಲ್ಲಿ   ಒಳಗೊಂಡಿರುವ ಪ್ರಮುಖ ಕವರೇಜ್‌ಗಳಲ್ಲಿ ಒಂದಾಗಿದೆ, ಇದು ಸಂಭಾವ್ಯ ಕಳ್ಳತನದಿಂದ ಉಂಟಾಗಬಹುದಾದ ನಷ್ಟಗಳು ಮತ್ತು ಹಾನಿಗಳಿಂದ ನಿಮ್ಮ ಮನೆ ಅಥವಾ ಬಿಸಿನೆಸ್  ಆಸ್ತಿಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ನೀವು ಸ್ವತಂತ್ರ ಮನೆಯನ್ನು ಹೊಂದಿದ್ದರೂ, ಗೇಟೆಡ್ ಸಮುದಾಯ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿರಲಿ ಅಥವಾ ಸ್ವತಂತ್ರ ಅಂಗಡಿ ಅಥವಾ ಆಫೀಸ್ ಸ್ಥಳವನ್ನು ಹೊಂದಿರಲಿ; ಒಂದು ಬರ್ಗ್ಲರಿ ಇನ್ಶೂರೆನ್ಸ್ ನಿಮ್ಮ ಆಸ್ತಿಯನ್ನು ರಕ್ಷಿಸುವಲ್ಲಿ ಅತ್ಯಂತ ಪ್ರಮುಖವಾಗಿದೆ ಮತ್ತು ಅನಿರೀಕ್ಷಿತ ಕಳ್ಳತನವು ತರಬಹುದಾದ ನಷ್ಟಗಳಿಂದ ನಿಮ್ಮ ಆಸ್ತಿಯನ್ನು ಕವರ್ ಮಾಡುತ್ತದೆ.

ಬರ್ಗ್ಲರಿ ಇನ್ಶೂರೆನ್ಸ್ ಏಕೆ ಮುಖ್ಯ ಎಂದು ಗೊಂದಲವೇ?

ಮುಂದೆ ಓದಿ…

1

ಕಳೆದ ವರ್ಷಕ್ಕೆ ಹೋಲಿಸಿದರೆ 2022 ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ದರೋಡೆ ಪ್ರಕರಣಗಳು ಶೇಕಡಾ 112 ರಷ್ಟು ಹೆಚ್ಚಾಗಿದೆ.(1)

 

2

ಭಾರತದಲ್ಲಿ, ವಸತಿ ಆವರಣದಲ್ಲಿ ಆಸ್ತಿ ಅಪರಾಧಗಳ 2,81,602 ಪ್ರಕರಣಗಳು 2021 ರಲ್ಲಿ ದಾಖಲಾಗಿವೆ.. (2)

 

3

2021 ರಲ್ಲಿ ಭಾರತದಲ್ಲಿ ಆಸ್ತಿ ವಿರುದ್ಧದ ಅಪರಾಧಗಳು ಶೇಕಡಾ 18.5 ರಷ್ಟು ಹೆಚ್ಚಾಗಿದೆ. ಒಟ್ಟು ಸಂಖ್ಯೆಯಲ್ಲಿ, ಶೇಕಡಾ 12.8 ರಷ್ಟು ಬರ್ಗ್ಲರಿ ಪ್ರಕರಣಗಳಿಗೆ ಕಾರಣವಾಗಿವೆ.(3)

 

ಡಿಜಿಟ್ ನ ಬರ್ಗ್ಲರಿ ಇನ್ಶೂರೆನ್ಸ್ ನ ವಿಶೇಷತೆಯೇನು?

ಹಣಕ್ಕಾಗಿ ಮೌಲ್ಯ : ನಿಮ್ಮ ಪ್ರಾಪರ್ಟಿಯನ್ನು ಹಾನಿಗಳಿಂದ ಸಂರಕ್ಷಿಸುವುದು ಮಹತ್ತರವಾದ ಕಾರ್ಯವಾಗಿದೆ. ಎಷ್ಟೇ ಆದರೂ, ಇಲ್ಲಿ ಅಪಾಯದ ಪ್ರಮಾಣ ಅತೀ ಹೆಚ್ಚಾಗಿದೆ! ಆದ್ದರಿಂದಲೇ, ಬರ್ಗ್ಲರಿ ಇನ್ಶೂರೆನ್ಸ್  ನ ಪ್ರೀಮಿಯಂ ಕೂಡಾ ಸಾಮಾನ್ಯವಾಗಿ ಹೆಚ್ಚಾಗಿರುವುದನ್ನು ನೀವು ಗಮನಿಸಬಹುದು. ಆದರೆ, ನಾವು ನಿಮ್ಮನ್ನು ಕಳ್ಳತನ ಹಾಗೂ ಇತರ ಸಾಭವ್ಯ ಹಾನಿಗಳಂತಹ ಅನಿರೀಕ್ಷಿತ ಘಟನೆಗಳಿಂದ ನಿಮ್ಮ ಪ್ರಾಪರ್ಟಿಯನ್ನು ಇನ್ಶೂರ್ ಮಾಡಲು ನಿಮಗೆ ಅತ್ಯುತ್ತಮ ಹಾಗೂ ಕೈಗೆಟಕುವ ದರದ ಪ್ರೀಮಿಯಂ ಅನ್ನು ನೀಡಲು ಕೈಲಾದಷ್ಟು ಪ್ರಯತ್ನವನ್ನು ಮಾಡುತ್ತೇವೆ.

ಡಿಜಿಟಲ್ ಸ್ನೇಹಿ : ಭಾರತದ ಮೊದಲ ಇನ್ಶೂರೆನ್ಸ್ ಕಂಪನಿಗಳಲ್ಲಿ ಒಂದಾಗಿರುವುದರಿಂದ, ಬರ್ಗ್ಲರಿ ಇನ್ಶೂರೆನ್ಸ್  ಅನ್ನು ಖರೀದಿಸುವುದರಿಂದ ಹಿಡಿದು ಬರ್ಗ್ಲರಿ ಇನ್ಶೂರೆನ್ಸ್  ಕ್ಲೈಮ್ ಮಾಡುವವರೆಗೆ ಎಲ್ಲಾ ಪ್ರಕ್ರಿಯೆಗಳನ್ನೂ ಡಿಜಿಟಲ್ ಆಗಿಸಲು ಪ್ರಯತ್ನಿಸುತ್ತೇವೆ. ಆದ್ದರಿಂದ ಒಂದು ಪರಿಶೀಲನೆಯ ಅಗತ್ಯ ಬಿದ್ದಾಗಲೂ, ನೀವು ಅದನ್ನು ಆನ್ಲೈನ್ ಆಗಿಯೇ ಮಾಡಬಹುದು! (ರೂ  1 ಲಕ್ಷ ಮೇಲ್ಪಟ್ಟ ಕ್ಲೈಮ್ ಅನ್ನು ಹೊರತುಪಡಿಸಿ, ಐ.ಆರ್.ಡಿ.ಎ.ಐ( IRDAI - ಇನ್ಶೂರೆನ್ಸ್ ರೆಗುಲೇಟರಿ ಆಂಡ್ ಡೆವೆಲಪ್ಮೆಂಟ್ ಅಥಾರಿಟಿ) ಪ್ರಕಾರ ಇವುಗಳನ್ನು ನಾವಾಗಿಯೇ ಹೋಗಿ ಮಾಡಬೇಕಾಗಿದೆ).

ಎಲ್ಲಾ ಉದ್ಯಮವರ್ಗಗಳನ್ನು ಕವರ್ ಮಾಡುತ್ತದೆ : ನೀವು ನಿಮ್ಮ ಕುಟುಂಬದ ಉದ್ಯಮವನ್ನಾಗಲಿ, ಕಛೇರಿ ಸ್ಥಳವನ್ನಾಗಲಿ, ದಿನಸಿ ಅಂಗಡಿ ಅಥವಾ ಅಂಗಡಿಗಳ ಸರಣಿಯನ್ನಾಗಲಿ ಸಂರಕ್ಷಿಸಲು ಬಯಸಿದರೆ, ನಮ್ಮ ಬರ್ಗ್ಲರಿ ಇನ್ಶೂರೆನ್ಸ್  ಎಲ್ಲಾ ರೀತಿಯ ಉದ್ಯಮಗಳಿಗೂ ಹೊಂದಿಕೊಳ್ಳುತ್ತದೆ, ಅವುಗಳ ಗಾತ್ರ ಏನೇ ಇರಲಿ.

ಬಾಡಿಗೆದಾರರಿಗೆ ಯೋಜನೆಗಳು : ಇಂದಿನ ಮಿಲೇನಿಯಲ್ ಗಳು ಸ್ವಂತಕ್ಕೆ  ಪಡೆಯುವುದನ್ನು ಕಡಿಮೆ, ಹಾಗೂ ಬಾಡಿಗೆಗೆ ಪಡೆಯುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಅದಕ್ಕಾಗಿಯೇ, ನಾವು ಬಾಡಿಗೆದಾರರಿಗಾಗಿ ಕೂಡಾ ಯೋಜನೆಗಳನ್ನು ಒದಗಿಸುತ್ತೇವೆ. ಇದು ಕೇವಲ ನೀವು ಒಡೆತನ ಪಡೆದಿರುವ ವಸ್ತುಗಳಿಗೆ ಮಾತ್ರ ಕವರ್ ನೀಡುತ್ತದೆ. ಆದ್ದರಿಂದ, ನೀವು ನಿಮ್ಮ ಬಾಡಿಗೆಯ ಅಪಾರ್ಟ್ಮೆಂಟನ್ನೂ ಕಳ್ಳತನದಿಂದ ಸಂರಕ್ಷಿಸಬೇಕಿದ್ದರೆ , ನೀವಿದನ್ನು ಮಾಡಬಹುದು, ನಿರ್ದಿಷ್ಟವಾಗಿ ನಿಮ್ಮ ಒಡೆತನದಲ್ಲಿರುವ ವಸ್ತುಗಳಿಗೆ!

ಡಿಜಿಟ್ ನ ಬರ್ಗ್ಲರಿ ಇನ್ಶೂರೆನ್ಸ್ ಏನನೆಲ್ಲಾ ಕವರ್ ಮಾಡುತ್ತದೆ?

ಡಿಸ್ಕ್ಲೈಮರ್– Tಪಾಲಿಸಿದಾರನು ಪಾಲಿಸಿ ಅವಧಿಯೊಳಗೆ ಅರ್ಹತೆ ಹೊಂದಿರುವ ಗರಿಷ್ಠ ಪ್ರಮಾಣದ ಕವರೇಜ್ ಪಾಲಿಸಿದಾರರಿಂದ ಇನ್ಶೂರೆನ್ಸ್ ಮೊತ್ತಕ್ಕೆ ಸೀಮಿತವಾಗಿರುತ್ತದೆ. 

ಬರ್ಗ್ಲರಿ ಇನ್ಶೂರೆನ್ಸ್ ನ ವಿಧಗಳು

ಡಿಜಿಟ್ ನಲ್ಲಿ, ಬರ್ಗ್ಲರಿ ಇನ್ಶೂರೆನ್ಸ್  ನ ಖರೀದಿಯು ಪ್ರಾಪರ್ಟಿಗಳ ಸಂಪೂರ್ಣ ಕವರೇಜ್ ನ ಒಂದು ಭಾಗವಾಗಿದೆ, ಅಂದರೆ ಡಿಜಿಟ್ ನ ಸ್ಟಾಂಡರ್ಡ್ ಫಯರ್ ಹಾಗೂ ಸ್ಪೆಷಲ್ ಪೆರಿಲ್ಸ್ ಪಾಲಿಸಿ(ಸ್ಟಾಂಡರ್ಡ್ ಬೆಂಕಿ ಹಾಗೂ ವಿಶೇಷ ಅಪಾಯಗಳ ಪಾಲಿಸಿ) ಇದರರ್ಥ, ಕಳ್ಳತನ, ನೈಸರ್ಗಿಕ ಪಿಪತ್ತುಗಳು ಹಾಗೂ ಬೆಂಕಿಯನ್ನೂ ಸೇರಿ ಎಲ್ಲವೂ ಕವರ್ ಆಗಿರುತ್ತದೆ. ನಾವು ಒದಗಿಸುವ ಕೆಲ ಕವರ್ ಗಳನ್ನು ಇಲ್ಲಿ ನೀಡಲಾಗಿದೆ.

ಆಯ್ಕೆ 1 ಆಯ್ಕೆ 2 ಆಯ್ಕೆ 3
ಕೇವಲ ನಿಮ್ಮ ಮನೆ ಹಾಗೂ ಉದ್ಯಮದ ವಸ್ತುಗಳನ್ನು ಕವರ್ ಮಾಡುತ್ತದೆ ನಿಮ್ಮ ಮನೆ ಹಾಗೂ ಉದ್ಯಮದ ವಸ್ತುಗಳ ಜೊತೆ ಕಟ್ಟಡವನ್ನೂ ಕವರ್ ಮಾಡುತ್ತದೆ ನಿಮ್ಮ ಮನೆ, ಉದ್ಯಮದ ವಸ್ತುಗಳು ಹಾಗೂ ಕಟ್ಟಡದ ಜೊತೆ ತಿಜೋರಿ ಅಥವಾ ಅಂಗಡಿ ಕೌಂಟರ್ ನಲ್ಲಿ ರುವ ಕ್ಯಾಷ್ ನಂತಹ ಅಮೂಲ್ಯ ವಸ್ತುಗಳನ್ನೂ ಕವರ್ ಮಾಡುತ್ತದೆ

ನಮ್ಮ ಬರ್ಗ್ಲರಿ ಇನ್ಶೂರೆನ್ಸ್  ನ ಕೊಡುಗೆಗಳು

  • ನಿಮ್ಮ ಮನೆಗಾಗಿ ಬರ್ಗ್ಲರಿ ಇನ್ಶೂರೆನ್ಸ್ - ವಸತಿ ಕಟ್ಟಡಗಳು ಮತ್ತು ಸ್ವತಂತ್ರ ಮನೆಗಳು ಕಳ್ಳತನಕ್ಕೆ ಹೆಚ್ಚು ಒಳಗಾಗುತ್ತವೆ. ವಾಸ್ತವವಾಗಿ, 'ಹರ್ ಘರ್ ಸುರಕ್ಷಿತ್ 2018 ವರದಿ: ಭಾರತದ ಭದ್ರತಾ ವಿರೋಧಾಭಾಸ - ಹೋಮ್ ಸೇಫ್ಟಿ Vs ಡಿಜಿಟಲ್ ಸೇಫ್ಟಿ' ಪ್ರಕಾರ ಭಾರತದಲ್ಲಿ 70% ಕಳ್ಳತನಗಳು ವಸತಿ ಆವರಣದಲ್ಲಿ ನಡೆದಿವೆ. ಅದಕ್ಕಾಗಿಯೇ, ನೀವು ಸ್ವತಂತ್ರ ಮನೆ ಹೊಂದಿದ್ದರೂ ಅಥವಾ ಸಮುದಾಯ ಸಂಕೀರ್ಣದಲ್ಲಿ ವಾಸಿಸುತ್ತಿರಲಿ, ನಮ್ಮ ಬರ್ಗ್ಲರಿ ಇನ್ಶೂರೆನ್ಸ್ ದೊಡ್ಡ ಮತ್ತು ಸಣ್ಣ ಎಲ್ಲಾ ಮನೆಗಳಿಗೆ ಸೂಕ್ತವಾಗಿದೆ. 

  • ನಿಮ್ಮ ಉದ್ಯಮ ಹಾಗೂ ಅಂಗಡಿಗಾಗಿ ಬರ್ಗ್ಲರಿ ಇನ್ಶೂರೆನ್ಸ್ - ಒಮ್ಮೆ ಕೆಲಸದ ಅವಧಿ ಮುಗಿದ ಮೇಲೆ, ಎಲ್ಲರೂ ತಮ್ಮ ಕಛೇರಿ ಹಾಗೂ ಅಂಗಡಿಗಳ ಬಾಗಿಲು ಹಾಗೂ ಶಟ್ಟರ್ ಗಳನ್ನು ಮುಚ್ಚಿ ಮನೆಗೆ ತೆರಳುತ್ತಾರೆ. ನಿಮ್ಮ ಅಂಗಡಿಯಿರುವ ಸ್ಥಳ ಹಾಗೂ ಅದರ ಸ್ವರೂಪವನ್ನು ಅವಲಂಬಿಸಿ, ಹಲವು ಉದ್ಯಮಗಳು ಕಳ್ಳತನದ ಅಪಾಯಕ್ಕೆ ತುತ್ತಾಗುವ ಸಂಭಾವನೆ ಹೆಚ್ಚಿರುತ್ತದೆ. ಆದ್ದರಿಂದ ನಿಮ್ಮ ಉದ್ಯಮದ ಪ್ರಾಪರ್ಟಿಗಾಗಿ ಇರುವ ಬರ್ಗ್ಲರಿ ಇನ್ಶೂರೆನ್ಸ್  ನ ನಮ್ಮ ಕಸ್ಟಮೈಜ್ ಮಾಡಲಾದ ಕೊಡುಗೆಯು, ನಿಮಗೆ ಇದಕ್ಕಾಗಿ ಕವರ್ ಅನ್ನು ನೀಡುತ್ತದೆ.

ಬರ್ಗ್ಲರಿ ಇನ್ಶೂರೆನ್ಸ್ ನ ಅಗತ್ಯ ಯಾರಿಗಿದೆ?

ಕಳ್ಳತನಗಳು ಅನಿರೀಕ್ಷಿತವಾಗಿರುತ್ತವೆ ಹಾಗೂ ಹೆಚ್ಚಾಗಿ, ಕಳ್ಳತನವಾದ ಸರಕುಗಳನ್ನೂ ಮೀರಿದ ಹಾನಿ ಹಾಗೂ ನಷ್ಟಗಳನ್ನು ಉಂಟುಮಾಡುತ್ತದೆ. ಆದ್ದರಿಂದ, ಅಂಗಡಿ ಮಾಲೀಕರಿಂದ ಹಿಡಿದು ಮನೆ ಮಾಲೀಕರ ವರೆಗೆ ಎಲ್ಲರೂ, ತಮ್ಮ ಪ್ರಾಪರ್ಟಿ ಹಾಗೂ ಅದರಲ್ಲಿರುವ ವಸ್ತುಗಳನ್ನು ಅನಿರೀಕ್ಷಿತ ನಷ್ಟಗಳಿಂದ ಸಂರಕ್ಷಿಸಲು, ಬರ್ಗ್ಲರಿ ಇನ್ಶೂರೆನ್ಸ್  ಅನ್ನು ಹೊಂದಿರಬೇಕು.

ಮನೆ ಮಾಲೀಕರು

ಅದು ಹಲವು ವರ್ಷಗಳಿಂದ ನಿಮ್ಮ ಮನೆಯಾಗಿದ್ದರೂ ಅಥವಾ ನಿಮ್ಮ ಹೊಸದಾದ ಕನಸಿನ ಮನೆಯಾಗಿದ್ದರೂ, ಮನೆಯು ಒಬ್ಬರ ಅತ್ಯಂತ ಬೆಲೆಬಾಳುವ ಆಸ್ತಿಯಾಗಿರುತ್ತದೆ. ಆದ್ದರಿಂದ ಅದನ್ನು ಅನಿರೀಕ್ಷಿತ ನಷ್ಟ ಹಾಗೂ ಹಾನಿಗಳಿಂದ ಸಂರಕ್ಷಿಸುವುದು ನಿಮ್ಮ ಸರ್ವಪ್ರಥಮ ಆದ್ಯತೆಯಾಗಿರಬೇಕು.

ಬಾಡಿಗೆದಾರರು

ಜನರು ಸಾಮಾನ್ಯವಾಗಿ, ಒಂದು ಕಳ್ಳತನ ಇನ್ಶೂರೆನ್ಸ್ ಇರುವುದು ಪ್ರಾಪರ್ಟಿಯ ಒಡೆತನ ಹೊಂದಿದವರಿಗೆ ಮಾತ್ರ, ಎಂದು ಭಾವಿಸುತ್ತಾರೆ. ಆದರೆ, ಡಿಜಿಟ್ ನಲ್ಲಿ ನಾವು ಬಾಡಿಗೆದಾರರಿಗೂ ಬರ್ಗ್ಲರಿ ಇನ್ಶೂರೆನ್ಸ್  ಅನ್ನು ಒದಗಿಸುತ್ತೇವೆ. ಆದ್ದರಿಂದ, ನೀವು ಬಾಡಿಗೆ ಅಪಾರ್ಟ್ಮೆಂಟ್ ನಲ್ಲಿದ್ದರೂ ಬರ್ಗ್ಲರಿ ಇನ್ಶೂರೆನ್ಸ್  ಮೂಲಕ ನಿಮ್ಮ ವಸ್ತುಗಳನ್ನು ಸಂರಕ್ಷಿಸಬಹುದಾಗಿದೆ.

ಸಣ್ಣ ಉದ್ಯಮದ ಮಾಲೀಕರು

ನೀವು ಒಂದು ಸಣ್ಣ ಜನರಲ್ ಸ್ಟೋರ್ ಅನ್ನು ನಡೆಸುತ್ತಿದ್ದರೂ ಅಥವಾ ಕರಕುಶಲಗಳ ಸಣ್ಣ ಬುಟೀಕ್ ಅನ್ನು ವ್ಯವಸ್ಥಿತ ಶೈಲಿಯಲ್ಲಿ ನಡೆಸುತ್ತಿದ್ದರೂ, ನಮ್ಮ ಬರ್ಗ್ಲರಿ ಇನ್ಶೂರೆನ್ಸ್  ಕವರೇಜ್ ಎಲ್ಲಾ ರೀತಿಯ ಉದ್ಯಮಗಳಿಗೆ ಸೂಕ್ತವಾಗಿದೆ. ನೀವು ಒಂದು ಸ್ವತಂತ್ರ, ಸಣ್ಣ ಉದ್ಯಮವನ್ನು ನಡೆಸುವವರಾಗಿದ್ದರೆ, ಕಳ್ಳತನದಿಂದ ಉಂಟಾಗುವ ಸಾಂಭವ್ಯ ಹಾನಿಗಳಿಂದ ಹಾಗೂ ನಷ್ಟಗಳಿಂದ ನಿಮ್ಮ ಉದ್ಯಮನ್ನು ರಕ್ಷಿಸುವುದು ಆವಶ್ಯಕ.

ಮಧ್ಯಮ ಉದ್ಯಮದ ಮಾಲೀಕರು

ನೀವು ಜನರಲ್ ಸ್ಟೊರ್ ಗಳ ಸರಣಿಯನ್ನು, ರೆಸ್ಟುರೆಂಟ್ ಗಳನ್ನು ಅಥವಾ ಮಧ್ಯಮ ಗಾತ್ರದ ಉದ್ಯಮವನ್ನು ನಡೆಸುತ್ತಿದ್ದರೆ; ನಮ್ಮ ಬರ್ಗ್ಲರಿ ಇನ್ಶೂರೆನ್ಸ್  ಕವರೇಜ್ ಮಧ್ಯಮ ಗಾತ್ರದ ಉದ್ಯಮ ಮಾಲೀಕರಿಗೆ ಕಳ್ಳತನದಿಂದ ಉಂಟಾಗಬಹುದಾದ ಯಾವುದೇ ಹಾನಿ ಅಥವಾ ನಷ್ಟಗಳನ್ನು ಕವರ್ ಮಾಡಲು ಸೂಕ್ತವಾಗಿದೆ; ಅದು ಎಷ್ಟೇ ದೊಡ್ಡದು ಅಥವಾ ಸಣ್ಣದಾಗಿದ್ದರೂ ಕೂಡಾ.

ದೊಡ್ಡ ಉದ್ಯಮಗಳು

ನಿಮ್ಮ ಉದ್ಯಮದ ದೊಡ್ಡ ಪ್ರಮಾಣದ ಕಾರ್ಯಾಚರಣೆಯಿಂದಾಗಿ ನೀವು ಹಲವು ಪ್ರಾಪರ್ಟಿಗಳನ್ನು ಹೊಂದಿದ್ದರೆ, ಬರ್ಗ್ಲರಿ ಇನ್ಶೂರೆನ್ಸ್  ಒಂದು ಮಾತ್ರವಲ್ಲ ನಿಮ್ಮ ಎಲ್ಲಾ ಪ್ರಾಪರ್ಟಿಗಳನ್ನು ಸಂರಕ್ಷಿಸುವಲ್ಲಿ ಅತೀ ಮುಖ್ಯವಾಗಿದೆ, ಇದು ನಿಮ್ಮ ಉದ್ಯಮದ ಅಪಾಯವನ್ನು ಕಡಿಮೆಗೊಳಿಸುವುದಲ್ಲದೆ, ನೀವು ಒಂದು ಜವಾಬ್ದಾರಿಯುತ ಉದ್ಯಮ ಮಾಲೀಕರೆಂಬ ಹೆಗ್ಗಳಿಕೆಯನ್ನೂ ನಿಮಗೆ ತಂದುಕೊಡುತ್ತದೆ.

ಬರ್ಗ್ಲರಿ ಇನ್ಶೂರೆನ್ಸ್ ನಲ್ಲಿ ಕವರ್ ಆಗಿರುವ ವೈಯಕ್ತಿಕ ಪ್ರಾಪರ್ಟಿ ಗಳ ವಿಧಗಳು

ಸ್ವತಂತ್ರ ಅಪಾರ್ಟ್ಮೆಂಟ್ ಗಳು

ಇದು, ಒಂದು ಹೌಸಿಂಗ್ ಸೊಸೈಟಿ ಅಥವಾ ಪ್ರತ್ಯೇಕ ಕಟ್ಟಡಗಳ ಭಾಗವಾಗಿರುವ  ಸ್ವತಂತ್ರ ಫ್ಲ್ಯಾಟ್ ನಲ್ಲಿ ವಾಸಿಸುವವರಿಗೆ ಆಗಿದೆ. ಈ ಫ್ಲ್ಯಾಟ್ ನಿಮ್ಮ ಸ್ವಂತದ್ದಾಗಿರಬಹುದು ಅಥವಾ ಬಾಡಿಗೆಯದ್ದಾಗಿರಬಹುದು. ನಮ್ಮ ಉತ್ಪನ್ನವು ಎರಡಕ್ಕೂ ಸೂಕ್ತವಾಗಿದೆ!

ಸ್ವತಂತ್ರ ಕಟ್ಟಡ

ಬಹುಶಃ ನೀವು ಸಂಪೂರ್ಣ ಕಟ್ಟಡದಲ್ಲಿ ಫ್ಲ್ಯಾಟ್ಗಳ ಒಡೆತ ಹೊಂದಿದ್ದು, ಅವುಗಳನ್ನು ಬಾಡಿಗೆಗೆ ನೀಡುತ್ತಾ, ನಿಮ್ಮ ವಿಸ್ತೃತ ಕುಟುಂಬದೊಂದಿಗೆ ಒಂದು ಪ್ರತ್ಯೇಕ ಕಟ್ಟಡದಲ್ಲಿ ವಾಸವಾಗಿರಬಹುದು. ಈ ಸಂದರ್ಭದಲ್ಲಿ, ನೀವು ಎಲ್ಲವನ್ನೂ ಕವರ್ ಮಾಡಲು ಡಿಜಿಟ್ ನ ಎಸ್ ಎಫ್ ಎಸ್ ಪಿ(ಸ್ಟಾಂಡರ್ಡ್ ಫಯರ್ ಹಾಗೂ ಸ್ಪೆಷಲ್ ಪೆರಿಲ್ಸ್ ಪಾಲಿಸಿ) ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿಯ ಭಾಗವಾಗಿರುವ ಬರ್ಗ್ಲರಿ ಇನ್ಶೂರೆನ್ಸ್  ಅನ್ನು ಪಡೆಯಬಹುದು.

ಸ್ವತಂತ್ರ ಮನೆ

ನೀವು ಒಂದು ಸ್ವತಂತ್ರ ವಿಲ್ಲಾ ಅಥವಾ ಮನೆಯನ್ನು ಹೊಂದಿದ್ದರೆ ಅಥವಾ ಬಾಡಿಗೆಗೆ ಪಡೆದಿದ್ದರೆ, ನಿಮ್ಮ ವಿಲ್ಲಾ ಹಾಗೂ ಅದರಲ್ಲಿರುವ ವಸ್ತುಗಳನ್ನು ಕಳ್ಳತನದ ಸಂಭಾವ್ಯ ಅಪಾಯದಿಂದ ಕಾಪಾಡುವುದು ಆವಶ್ಯಕವಾಗಿದೆ.

ಬರ್ಗ್ಲರಿ ಇನ್ಶೂರೆನ್ಸ್ ನಲ್ಲಿ ಕವರ್ ಆಗಿರುವ ಉದ್ಯಮದ ಪ್ರಾಪರ್ಟಿಗಳ ವಿಧಗಳು

ಮೊಬೈಲ್, ಆಟೋಮೊಬೈಲ್ ಹಾಗೂ ಇತರ ಎಲೆಕ್ಟ್ರಾನಿಕ್ ವಸ್ತುಗಳು

ಪ್ರಾಥಮಿಕವಾಗಿ ಆಟೊಮೊಬೈಲ್ ಗಳನ್ನು, ಮೊಬೈಲ್ ಫೋನ್ ಗಳನ್ನು, ಮೊಬೈಲ್ ಫೋನ್ ಉಪಕರಣಗಳನ್ನು ಹಾಗೂ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡುವ ಉದ್ಯಮಗಳು. ಕ್ರೋಮಾ, ವನ್ ಪ್ಲಸ್, ರೆಡ್ಮಿ ಇತ್ಯಾದಿಗಳು ಇಂತಹ ಪ್ರಾಪರ್ಟಿಗಳಿಗೆ ಉತ್ತಮ ಉದಾಹರಣೆಗಳಾಗಿವೆ. ಇಂತಹ ಸಂದರ್ಭದಲ್ಲಿ ಒಂದು ಬರ್ಗ್ಲರಿ ಇನ್ಶೂರೆನ್ಸ್  ಕವರೇಜ್ ನಿಮ್ಮ ಅಂಗಡಿ ಹಾಗೂ ಅದರ ಪ್ರಾಥಮಿಕ ವಸ್ತುಗಳನ್ನು ಕಳ್ಳತನದಿಂದ ಉಂಟಾಗಬಹುದಾದ ಯಾವುದೇ ಸಂಭಾವ್ಯ ಹಾನಿ ಅಥವಾ ನಷ್ಟಗಳನ್ನು ಕವರ್ ಮಾಡಲು ಸಹಾಯ ಮಾಡುತ್ತದೆ.

ದಿನಸಿ, ಜನರಲ್ ಹಾಗೂ ಸ್ಟೇಷನರಿ ಅಂಗಡಿಗಳು

ನಿಮ್ಮ ನೆರೆಕರೆಯ ದಿನಸಿ ಅಂಗಡಿಳಿಂದ ಹಿಡಿದು ನಿಮ್ಮ ಬಜೆಟ್ ಸ್ನೇಹಿ ಸೂಪರ್ ಮಾರ್ಕೆಟ್ ಹಾಗೂ ಜನರಲ್ ಸ್ಟೋರ್ ಗಳ ವರೆಗೆ; ಎಲ್ಲಾ ದಿನಸಿ ಅಂಗಡಿಗಳು ಹಾಗೂ ಜನರಲ್ ಸ್ಟೋರ್ ಗಳು ಕೂಡಾ ಬರ್ಗ್ಲರಿ ಇನ್ಶೂರೆನ್ಸ್  ನಲ್ಲಿ ಕವರ್ ಆಗುತ್ತವೆ. ಬಿಗ್ ಬಜಾರ್, ಸ್ಟಾರ್ ಬಜಾರ್, ರಿಲಯನ್ಸ್ ಸೂಪರ್ಮಾರ್ಕೆಟ್ ಗಳಂತಹ ಅಂಗಡಿಗಳು ಇದಕ್ಕೆ ಕೆಲ ಸಾಮಾನ್ಯ ಉದಾಹರಣೆಗಳಾಗಿವೆ.

ಕಛೇರಿಗಳು ಹಾಗೂ ಶೈಕ್ಷಣಿಕ ಸ್ಥಳಗಳು

ನಮ್ಮ ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿಯ ಈ ವರ್ಗವು ಕಛೇರಿಗಳು ಹಾಗೂ ಶೈಕ್ಷಣಿಕ ಸ್ಥಳಗಳಾದ ಕಾಲೇಜ್ ಗಳು, ಶಾಲೆಗಳು ಕೋಚಿಂಗ್ ಕ್ಲಾಸ್ ಗಳು ಇತ್ಯಾದಿಗಳಿಗೆ ಹೊಂದುವಂತೆ ವಿನ್ಯಾಸಗೊಳೀಸಲಾಗಿದೆ. ಇಂತಹ ಪ್ರಾಪರ್ಟಿ ಗಳನ್ನು ಕಳ್ಳತನದಿಂದ ಇನ್ಶೂರ್ ಮಾಡುವುದು ನಷ್ಟಗಳನ್ನು ಕವರ್ ಮಾಡುವುದಕ್ಕಾಗಿ ಮಾತ್ರವಲ್ಲದೆ, ನೌಕರರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಿಮ್ಮ ಅಯಾ ಸಂಸ್ಥೆಯ ಪ್ರತಿ ಹೆಚ್ಚಿನ ವಿಶ್ವಾಸವನ್ನು ಬೆಳೆಸಲೂ ಮುಖ್ಯವಾಗಿದೆ.

ಮನೆ ರಿಪೇರಿಗಳು ಹಾಗೂ ಮನೆಗೆಲಸದ ಸೇವೆಗಳು

ಉದ್ಯಮದ ಈ ವರ್ಗವು ಮರಗೆಲಸ ಹಾಗೂ ಪ್ಲಂಬಿಂಗ್ ರಿಪೇರಿಗಳಿಂದ ಹಿಡಿದು ಮೋಟಾರ್ ಗ್ಯಾರೇಜ್ ಹಾಗೂ ಎಂಜಿನೀರಿಂಗ್ ವರ್ಕ್ಷಾಪ್ ಗಳ ವರೆಗೆ ಇವೆಲ್ಲವನ್ನೂ ಕಳ್ಳತನದ ಅಪಾಯದಿಂದ ರಕ್ಷಿಸಬಹುದು.

ವೈಯಕ್ತಿಕ ಗೃಹ, ಲೈಫ್ಸ್ಟೈಲ್ ಹಾಗೂ ಫಿಟ್ನೆಸ್

ನಿಮ್ಮ ನೆಚ್ಚಿನ ಮಾಲ್ ಗಳು ಹಾಗೂ ಬಟ್ಟೆ ಮಳಿಗೆಗಳಿಂದ ಹಿಡಿದು ಸ್ಪಾ ಗಳು, ಜಿಮ್ ಗಳು ಹಾಗೂ ಇತರ ಮಳಿಗೆಗಳವರೆಗೆ; ಡಿಜಿಟ್ ನ ಪ್ರಾಪರ್ಟಿ ಇನ್ಶೂರೆನ್ಸ್ ಅನ್ನು ಕವರ್ ಮಾಡುವ ಬರ್ಗ್ಲರಿ ಇನ್ಶೂರೆನ್ಸ್  ವೈಯಕ್ತಿಕ ಲೈಫ್ಸ್ಟೈಲ್ ಹಾಗೂ ಫಿಟ್ನೆಸ್ ವಿಭಾಗದ ಎಲ್ಲಾ ಉದ್ಯಮಗಳನ್ನೂ ಕವರ್ ಮಾಡುತ್ತದೆ. ಎನ್ರಿಚ್ ಸೆಲೋನ್, ಕಲ್ಟ್ ಫಿಟ್ನೆಸ್ ಕೇಂದ್ರಗಳು, ಫೀನಿಕ್ಸ್ ಮಾರ್ಕೆಟ್ ಸಿಟಿ ಹಾಗೂ ಇತರ ಅಂಗಡಿಗಳು ಇದಕ್ಕೆ ಉದಾಹರಣೆಗಳಾಗಿವೆ.

ಆಹಾರ ಹಾಗೂ ತಿಂಡಿತಿನಿಸುಗಳು

ಎಲ್ಲರೂ ಹೊಟ್ಟೆ ತುಂಬಿಸಿಕೊಳ್ಳುವ ಆ ಸ್ಥಳ! ಕ್ಯಾಫೆ, ಫೂಡ್ ಟ್ರಕ್ ಗಳಿಂದ ಹಿಡಿದು ರೆಸ್ಟುರೆಂಟ್ ಸರಣಿಗಳು, ಬೇಕರಿಗಳ ವರೆಗೆ; ನಮ್ಮ ಬರ್ಗ್ಲರಿ ಇನ್ಶೂರೆನ್ಸ್  ಎಲ್ಲಾ ರೀತಿಯ ಉಪಹಾರ ಗೃಹಗಳಿಗೂ ಉತ್ತಮವಾಗಿ ಹೊಂದಿಕೊಳ್ಳುತ್ತವೆ. ಇಂತಹ ಪ್ರಾಪರ್ಟಿಗಳಿಗೆ ಕೆಲ ಉದಾಹರಣೆಗಳೆಂದರೆ ಫೂಡ್ ಕೋರ್ಟ್ ನಲ್ಲಿರುವ ರೆಸ್ಟುರೆಂಟ್ ಗಳು, ಚಾಯ್ ಪಾಯಿಂಟ್ ಅಥವಾ ಚಾಯೋಸ್ ನಂತಹ ಚಹಾದ ಅಂಗಡಿಗಳು, ಫಾಸ್ಟ್ ಫೂಡ್ ಕೇಂದ್ರಗಳಾದ ಬರ್ಗರ್ ಕಿಂಗ್ ಹಾಗೂ ಪಿಜ್ಜಾ ಹಟ್ ಕೂಡಾ.

ಆರೋಗ್ಯ

ಕಳ್ಳತನ ಹಾಗೂ ಇತರ ಅಪಾಯಗಳಾದ ಬೆಂಕಿ ಅಥವಾ ನೈಸರ್ಗಿಕ ವಿಪತ್ತುಗಳಿಂದ ಸಂರಕ್ಷಣೆ ಪಡೆಯಬೇಕಾದ ಒಂದು ಪ್ರಮುಖ ಪ್ರಾಪರ್ಟಿ ಇದಾಗಿದೆ; ಡಿಜಿಟ್ ನ ಪ್ರಾಪರ್ಟಿ ಇನ್ಶೂರೆನ್ಸ್ ಆಸ್ಪತ್ರೆಗಳನ್ನು, ಕ್ಲಿನಿಕ್ ಗಳನ್ನು, ಡಯಾಗ್ನಾಸ್ಟಿಕ್ ಕೇಂದ್ರಗಳನ್ನು, ಫಾರ್ಮಸಿ ಹಾಗೂ ಇತರ ಮೆಡಿಕಲ್ ಸ್ಟೋರ್ ಗಳನ್ನು ಕೂಡಾ ಕವರ್ ಮಾಡುತ್ತದೆ.

ಸೇವೆಗಳು ಹಾಗೂ ಇತರ

ಮೇಲೆ ಉಲ್ಲೇಖಿಸಿರುವ ವರ್ಗಗಳನ್ನು ಹೊರತುಪಡಿಸಿ, ಡಿಜಿಟ್ ನ ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿಯ ಭಾಗವಾದ ಬರ್ಗ್ಲರಿ ಇನ್ಶೂರೆನ್ಸ್  ಕವರೇಜ್ ಎಲ್ಲಾ ಗಾತ್ರದ ಹಾಗೂ ಸ್ವರೂಪದ ಉದ್ಯಮಗಳಿಗೆ ಸೂಕ್ತವಾಗಿದೆ. ಈ ಪಟ್ಟಿಯಲ್ಲಿ ನೀವು ನಿಮ್ಮ ವರ್ಗವನ್ನು ಕಾಣದೇ ಇದ್ದರೆ, ನಮ್ಮನ್ನು ಸಂಪರ್ಕಿಸಲು ಹಿಂಜರಿಯಬೇಡಿ. ನಾವು ನಿಮ್ಮ ಮನೆ ಹಾಗೂ ಉದ್ಯಮಕ್ಕೆ ಉತ್ತಮವಾಗಿ ಹೊಂದುವ ಪ್ರಾಪರ್ಟಿ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುತ್ತೇವೆ.

ಭಾರತದಲ್ಲಿ ಆನ್ಲೈನ್ ಬರ್ಗ್ಲರಿ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಬರ್ಗ್ಲರಿ ಇನ್ಶೂರೆನ್ಸ್ ಪ್ರಾಪರ್ಟಿ ಇನ್ಶೂರೆನ್ಸಿನ ಭಾಗವೇ?

ಹೌದು, ಡಿಜಿಟ್‌ನಲ್ಲಿ, ನಮ್ಮ ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿಯ ಭಾಗವಾಗಿ ಕಳ್ಳತನದಿಂದ ಉಂಟಾಗುವ ಹಾನಿಗಳು ಮತ್ತು ನಷ್ಟಗಳ ವಿರುದ್ಧ ನಾವು ರಕ್ಷಣೆಯನ್ನು ಒದಗಿಸುತ್ತೇವೆ. ಇದು ಹೆಚ್ಚುವರಿಯಾಗಿ ನಿಮ್ಮ ಆಸ್ತಿಗಳನ್ನು ಬೆಂಕಿ ಮತ್ತು ನೈಸರ್ಗಿಕ ವಿಪತ್ತುಗಳಂತಹ ಇತರ ಅಪಾಯಗಳಿಂದ ರಕ್ಷಿಸುತ್ತದೆ.

ಬರ್ಗ್ಲರಿ ಇನ್ಶೂರೆನ್ಸ್ ಅನ್ನು ಪಡೆಯಲು ಬೇಕಾಗಿರುವ ಅರ್ಹತೆಯೇನು?

ಪ್ರಾಪರ್ಟಿಯನ್ನು ಹೊಂದಿರುವ ಅಥವಾ ಬಾಡಿಗೆಗೆ ಪಡೆದಿರುವ ಯಾವುದೇ ವ್ಯಕ್ತಿಯು ಆನ್ಲೈನ್ ಬರ್ಗ್ಲರಿ ಇನ್ಶೂರೆನ್ಸ್  ಗೆ ಅರ್ಹರು.

ಬರ್ಗ್ಲರಿ ಇನ್ಶೂರೆನ್ಸ್ ಅನ್ನು ಕ್ಲೈಮ್ ಮಾಡಲು ಎಫ್ ಐ ಆರ್(FIR)ಆವಶ್ಯಕವೇ?

ಹೌದು, ನಿರ್ದಿಷ್ಟವಾಗಿ ಬರ್ಗ್ಲರಿ ಇನ್ಶೂರೆನ್ಸ್  ಅನ್ನು ಕ್ಲೈಮ್ ಮಾಡಲು ಎಫ್ ಐ ಆರ್(FIR) ಆವಶ್ಯಕವಾಗಿದೆ.

ನಾನು ಒಂದು ಬರ್ಗ್ಲರಿ ಇನ್ಶೂರೆನ್ಸ್ ನಿಂದ ಸಂಪೂರ್ಣ ಹೌಸಿಂಗ್ ಸೊಸೈಟಿಗೆ ಸಂರಕ್ಷಣೆ ಪಡೆಯಬಹುದೇ?

ಹೌದು, ಇದು ಸಾಧ್ಯವಿದೆ. ಡಿಜಿಟ್ ನ ಪ್ರಾಪರ್ಟಿ ಇನ್ಶೂರೆನ್ಸ್ ಯೋಜನೆಗಳು(ಸ್ಟಾಂಡರ್ಡ್ ಫಯರ್ ಆಂಡ್ ಪೆರಿಲ್ ಪಾಲಿಸಿ) ಹೌಸಿಂಗ್ ಸೊಸೈಟಿಗಳಿಗೆ ಹಾಗೂ ಕಂಪೌಂಡ್ ಗಳಿಗೂ ಅನ್ವಯಿಸುತ್ತದೆ.