Zero
Documentation
Quick Claim
Process
Affordable
Premium
Terms and conditions apply*
ಬರ್ಗ್ಲರಿ ಇನ್ಶೂರೆನ್ಸ್ ಎಂದರೇನು?
ಬರ್ಗ್ಲರಿ ಇನ್ಶೂರೆನ್ಸ್ ಏಕೆ ಮುಖ್ಯ ಎಂದು ಗೊಂದಲವೇ?
ಮುಂದೆ ಓದಿ…
ಡಿಜಿಟ್ ನ ಬರ್ಗ್ಲರಿ ಇನ್ಶೂರೆನ್ಸ್ ನ ವಿಶೇಷತೆಯೇನು?
ಡಿಜಿಟ್ ನ ಬರ್ಗ್ಲರಿ ಇನ್ಶೂರೆನ್ಸ್ ಏನನೆಲ್ಲಾ ಕವರ್ ಮಾಡುತ್ತದೆ?
ಡಿಜಿಟ್ ನೀಡುವ ಬರ್ಗ್ಲರಿ ಇನ್ಶೂರೆನ್ಸ್ ಪಾಲಿಸಿಯು ಈ ಕೆಳಗಿನ ಕವರೇಜ್‌ಗಳನ್ನು ನೀಡುತ್ತದೆ -
ಡಿಸ್ಕ್ಲೈಮರ್– Tಪಾಲಿಸಿದಾರನು ಪಾಲಿಸಿ ಅವಧಿಯೊಳಗೆ ಅರ್ಹತೆ ಹೊಂದಿರುವ ಗರಿಷ್ಠ ಪ್ರಮಾಣದ ಕವರೇಜ್ ಪಾಲಿಸಿದಾರರಿಂದ ಇನ್ಶೂರೆನ್ಸ್ ಮೊತ್ತಕ್ಕೆ ಸೀಮಿತವಾಗಿರುತ್ತದೆ.
ಬರ್ಗ್ಲರಿ ಇನ್ಶೂರೆನ್ಸ್ ನ ವಿಧಗಳು
ಡಿಜಿಟ್ ನಲ್ಲಿ, ಬರ್ಗ್ಲರಿ ಇನ್ಶೂರೆನ್ಸ್ ನ ಖರೀದಿಯು ಪ್ರಾಪರ್ಟಿಗಳ ಸಂಪೂರ್ಣ ಕವರೇಜ್ ನ ಒಂದು ಭಾಗವಾಗಿದೆ, ಅಂದರೆ ಡಿಜಿಟ್ ನ ಸ್ಟಾಂಡರ್ಡ್ ಫಯರ್ ಹಾಗೂ ಸ್ಪೆಷಲ್ ಪೆರಿಲ್ಸ್ ಪಾಲಿಸಿ(ಸ್ಟಾಂಡರ್ಡ್ ಬೆಂಕಿ ಹಾಗೂ ವಿಶೇಷ ಅಪಾಯಗಳ ಪಾಲಿಸಿ) ಇದರರ್ಥ, ಕಳ್ಳತನ, ನೈಸರ್ಗಿಕ ಪಿಪತ್ತುಗಳು ಹಾಗೂ ಬೆಂಕಿಯನ್ನೂ ಸೇರಿ ಎಲ್ಲವೂ ಕವರ್ ಆಗಿರುತ್ತದೆ. ನಾವು ಒದಗಿಸುವ ಕೆಲ ಕವರ್ ಗಳನ್ನು ಇಲ್ಲಿ ನೀಡಲಾಗಿದೆ.
ಆಯ್ಕೆ 1 |
ಆಯ್ಕೆ 2 |
ಆಯ್ಕೆ 3 |
ಕೇವಲ ನಿಮ್ಮ ಮನೆ ಹಾಗೂ ಉದ್ಯಮದ ವಸ್ತುಗಳನ್ನು ಕವರ್ ಮಾಡುತ್ತದೆ |
ನಿಮ್ಮ ಮನೆ ಹಾಗೂ ಉದ್ಯಮದ ವಸ್ತುಗಳ ಜೊತೆ ಕಟ್ಟಡವನ್ನೂ ಕವರ್ ಮಾಡುತ್ತದೆ |
ನಿಮ್ಮ ಮನೆ, ಉದ್ಯಮದ ವಸ್ತುಗಳು ಹಾಗೂ ಕಟ್ಟಡದ ಜೊತೆ ತಿಜೋರಿ ಅಥವಾ ಅಂಗಡಿ ಕೌಂಟರ್ ನಲ್ಲಿ ರುವ ಕ್ಯಾಷ್ ನಂತಹ ಅಮೂಲ್ಯ ವಸ್ತುಗಳನ್ನೂ ಕವರ್ ಮಾಡುತ್ತದೆ |
ನಮ್ಮ ಬರ್ಗ್ಲರಿ ಇನ್ಶೂರೆನ್ಸ್ ನ ಕೊಡುಗೆಗಳು
ನಿಮ್ಮ ಮನೆಗಾಗಿ ಬರ್ಗ್ಲರಿ ಇನ್ಶೂರೆನ್ಸ್ - ವಸತಿ ಕಟ್ಟಡಗಳು ಮತ್ತು ಸ್ವತಂತ್ರ ಮನೆಗಳು ಕಳ್ಳತನಕ್ಕೆ ಹೆಚ್ಚು ಒಳಗಾಗುತ್ತವೆ. ವಾಸ್ತವವಾಗಿ, 'ಹರ್ ಘರ್ ಸುರಕ್ಷಿತ್ 2018 ವರದಿ: ಭಾರತದ ಭದ್ರತಾ ವಿರೋಧಾಭಾಸ - ಹೋಮ್ ಸೇಫ್ಟಿ Vs ಡಿಜಿಟಲ್ ಸೇಫ್ಟಿ' ಪ್ರಕಾರ ಭಾರತದಲ್ಲಿ 70% ಕಳ್ಳತನಗಳು ವಸತಿ ಆವರಣದಲ್ಲಿ ನಡೆದಿವೆ. ಅದಕ್ಕಾಗಿಯೇ, ನೀವು ಸ್ವತಂತ್ರ ಮನೆ ಹೊಂದಿದ್ದರೂ ಅಥವಾ ಸಮುದಾಯ ಸಂಕೀರ್ಣದಲ್ಲಿ ವಾಸಿಸುತ್ತಿರಲಿ, ನಮ್ಮ ಬರ್ಗ್ಲರಿ ಇನ್ಶೂರೆನ್ಸ್ ದೊಡ್ಡ ಮತ್ತು ಸಣ್ಣ ಎಲ್ಲಾ ಮನೆಗಳಿಗೆ ಸೂಕ್ತವಾಗಿದೆ.
- ನಿಮ್ಮ ಉದ್ಯಮ ಹಾಗೂ ಅಂಗಡಿಗಾಗಿ ಬರ್ಗ್ಲರಿ ಇನ್ಶೂರೆನ್ಸ್ - ಒಮ್ಮೆ ಕೆಲಸದ ಅವಧಿ ಮುಗಿದ ಮೇಲೆ, ಎಲ್ಲರೂ ತಮ್ಮ ಕಛೇರಿ ಹಾಗೂ ಅಂಗಡಿಗಳ ಬಾಗಿಲು ಹಾಗೂ ಶಟ್ಟರ್ ಗಳನ್ನು ಮುಚ್ಚಿ ಮನೆಗೆ ತೆರಳುತ್ತಾರೆ. ನಿಮ್ಮ ಅಂಗಡಿಯಿರುವ ಸ್ಥಳ ಹಾಗೂ ಅದರ ಸ್ವರೂಪವನ್ನು ಅವಲಂಬಿಸಿ, ಹಲವು ಉದ್ಯಮಗಳು ಕಳ್ಳತನದ ಅಪಾಯಕ್ಕೆ ತುತ್ತಾಗುವ ಸಂಭಾವನೆ ಹೆಚ್ಚಿರುತ್ತದೆ. ಆದ್ದರಿಂದ ನಿಮ್ಮ ಉದ್ಯಮದ ಪ್ರಾಪರ್ಟಿಗಾಗಿ ಇರುವ ಬರ್ಗ್ಲರಿ ಇನ್ಶೂರೆನ್ಸ್ ನ ನಮ್ಮ ಕಸ್ಟಮೈಜ್ ಮಾಡಲಾದ ಕೊಡುಗೆಯು, ನಿಮಗೆ ಇದಕ್ಕಾಗಿ ಕವರ್ ಅನ್ನು ನೀಡುತ್ತದೆ.
ಬರ್ಗ್ಲರಿ ಇನ್ಶೂರೆನ್ಸ್ ನ ಅಗತ್ಯ ಯಾರಿಗಿದೆ?
ಕಳ್ಳತನಗಳು ಅನಿರೀಕ್ಷಿತವಾಗಿರುತ್ತವೆ ಹಾಗೂ ಹೆಚ್ಚಾಗಿ, ಕಳ್ಳತನವಾದ ಸರಕುಗಳನ್ನೂ ಮೀರಿದ ಹಾನಿ ಹಾಗೂ ನಷ್ಟಗಳನ್ನು ಉಂಟುಮಾಡುತ್ತದೆ. ಆದ್ದರಿಂದ, ಅಂಗಡಿ ಮಾಲೀಕರಿಂದ ಹಿಡಿದು ಮನೆ ಮಾಲೀಕರ ವರೆಗೆ ಎಲ್ಲರೂ, ತಮ್ಮ ಪ್ರಾಪರ್ಟಿ ಹಾಗೂ ಅದರಲ್ಲಿರುವ ವಸ್ತುಗಳನ್ನು ಅನಿರೀಕ್ಷಿತ ನಷ್ಟಗಳಿಂದ ಸಂರಕ್ಷಿಸಲು, ಬರ್ಗ್ಲರಿ ಇನ್ಶೂರೆನ್ಸ್ ಅನ್ನು ಹೊಂದಿರಬೇಕು.