ಸೆಕೆಂಡ್ ಹ್ಯಾಂಡ್ ಬೈಕ್ ಇನ್ಶೂರೆನ್ಸ್

ಸೆಕೆಂಡ್ ಹ್ಯಾಂಡ್ ಬೈಕ್ ಇನ್ಶೂರೆನ್ಸ್ ಉಲ್ಲೇಖವನ್ನು ಆನ್ಲೈನ್ ಪಡೆಯಿರಿ

Third-party premium has changed from 1st June. Renew now

ಬೈಕ್ ಇನ್ಶೂರೆನ್ಸ್ ನ ಬಗ್ಗೆ

ಟು ವೀಲರ್  ವಾಹನವನ್ನು ಹೊಂದುವುದೇ ಒಂದು ಉತ್ಸಾಹದ ವಿಷಯ, ವಿಶೇಷವಾಗಿ ನೀವು ಯುವಕರಾಗಿದ್ದರೆ. ಒಂದು ಕಾಲದಲ್ಲಿ ಯಾವುದೇ ವಾಹನವನ್ನು ಹೊಂದಿರುವುದು ಒಂದು ಐಷಾರಮದ ಅಭಿವ್ಯಕ್ತಿಯಾಗಿತ್ತು. ಭಾರತದಲ್ಲಿ ಈಗ ಕಾರು ಮಾಲೀಕರ ಸಂಖ್ಯೆ ಹೆಚ್ಚಾಗಿದ್ದರೂ ಕೂಡಾ ಯುವಕರು ಮಾತ್ರ ಬೈಕುಗಳು ಹಾಗೂ ಅದರ ರೈಡ್ ಅನ್ನೇ ಇಷ್ಟ ಪಡುತ್ತಾರೆ.

ದೈನಂದಿನದ ಮಾಡೆಲ್ ಗಳ ಜೊತೆ, ಭಾರತದ ಮಾರುಕಟ್ಟೆಯು ಚುರುಕಾದ ವೈಶಿಷ್ಠ್ಯ ಮತ್ತು ಅಸಾಧಾರಣ ಡಿಸೈನ್ ಗಳಿರುವ ಹವ್ಯಾಸಿ(ಫ಼್ಯಾನ್ಸಿ) ಬೈಕ್ ಗಳನ್ನೂ ಹೊರತರುತ್ತಿದೆ. ಅದು ಹೊಸದಾಗಿರಲಿ ಹಳೆಯದಾಗಿರಲಿ, ಒಳ್ಳೆಯ ಬೈಕ್ ಎಂದಿಗೂ ಒಳ್ಳೆಯ ಬೈಕ್ ಆಗಿರುತ್ತದೆ. ಅಂತೆಯೇ, ವಿಂಟೇಜ್ ಇಷ್ಟ ಪಡುವ ಹಲವರು ಹಳೆಯ ಬೈಕ್ ಅನ್ನು ಖರೀದಿಸಲು ಇಷ್ಟ ಪಡುತ್ತಾರೆ. 

ಟು ವೀಲರ್  ವಾಹನದ ಬಳಕೆಯು ಫುಡ್ ಡೆಲಿವರಿ, ಕೊರಿಯರ್ ಮತ್ತು ಇಂತಹ ಹಲವು ಸೇವೆಗಳ ಕಾರಣದಿಂದ ಬಹಳ ಹೆಚ್ಚಾಗಿದೆ. ಪರಿಣಾಮವಾಗಿ, ಬೈಕ್ ಗಳಿಗೆ ಬೇಡಿಕೆ ಹೆಚ್ಚೇ ಆಗಿದೆ, ಅದು ಸೆಕೆಂಡ್ -ಹ್ಯಾಂಡ್ ಇರಲಿ ಅಥವಾ ಹೊಚ್ಚ ಹೊಸದಿರಲಿ.

ಅದು ಒಳ್ಳೆಯ ಸ್ಥಿತಿಯಲ್ಲಿದ್ದರೆ ಸೆಕೆಂಡ್- ಹ್ಯಾಂಡ್ ಬೈಕ್ ಅನ್ನು ಖರೀದಿಸುವುದು ಗೊಂದಲರಹಿತವಾಗಿರುತ್ತದೆ. ಆದರೆ ಬೈಕ್ ರೈಡ್ ಮಾಡುವಾಗ, ಒಂದು ನಿಗದಿತ ಸಮಯದಲ್ಲಿ ಎಲ್ಲಿಯಾದರೂ ತಲುಪಬೇಕೆಂದಿದ್ದರೆ, ಅದು ಅಪಯಕಾರಿಯಾಗಿರುತ್ತದೆ.

ಅದರ ಮೇಲೆ, ಟ್ರಾಫಿಕ್ ಮತ್ತು ರಸ್ತೆಗಳ ಸ್ಥಿತಿಯೂ ದಯನೀಯವಾಗಿದ್ದಾಗ ನಾವು ನಮ್ಮ ಬೈಕ್ ಹಾಗೂ ತಮ್ಮನ್ನು ಬೈಕ್ ಇನ್ಶೂರೆನ್ಸ್ ಜೊತೆ ಸಂರಕ್ಷಿಸುವುದು ಅನಿವಾರ್ಯವಾಗುತ್ತದೆ.

ಸೆಕೆಂಡ್- ಹ್ಯಾಂಡ್ ಬೈಕ್ ಇನ್ಶೂರೆನ್ಸ್ ಎಂದರೇನು?

ಇತರ ಯಾವುದೇ ಲೈಫ್ ಇನ್ಶೂರೆನ್ಸ್ ನಂತೆಯೇ, ಸೆಕೆಂಡ್ -ಹ್ಯಾಂಡ್ ಬೈಕ್ ಇನ್ಶೂರೆನ್ಸ್ ಕೂಡಾ ವ್ಯಕ್ತಿಯನ್ನು ಸ್ವಂತ ಹಾಗೂ ಥರ್ಡ್ ಪಾರ್ಟೀಗೆ ಆದ ಹಾನಿ ಹಾಗೂ ನಷ್ಟಗಳಿಂದ ಸಂರಕ್ಷಿಸುತ್ತದೆ.

ಸೆಕೆಂಡ್- ಹ್ಯಾಂಡ್ ಬೈಕ್ ಅನ್ನು ಏಕೆ ಇನ್ಶೂರ್ ಮಾಡಬೇಕು?

ನೀವು ಖರೀದಿಸಿರುವ ಸೆಕೆಂಡ್- ಹ್ಯಾಂಡ್ ಬೈಕ್ ನಿಮಗೆ ಉತ್ತಮ ಎನಿಸುತ್ತಿದೆಯೇ? ಇರಬಹುದು, ಆದರೆ ಹಿಂದಿನ ಮಾಲೀಕನಿಂದ ಇದರ ಮೇಲಾದ ಸವೆತದ ಬಗ್ಗೆ ನಮಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ನಿಮ್ಮ ಸೆಕೆಂಡ್- ಹ್ಯಾಂಡ್ ಬೈಕ್ ಗೆ ಇನ್ಶೂರೆನ್ಸ್ ಅಗತ್ಯ. ಏಕೆ? ಈ ಕೆಳಗಿನ ಕಲ್ಪನೆಗಳನ್ನು ಪರಿಗಣಿಸಿ, ಇದರ ಬಗ್ಗೆ ತಿಳಿಯೋಣ:

 

#ನೀವು ಖರೀದಿಸಿದ ಸೆಕೆಂಡ್ -ಹ್ಯಾಂಡ್ ಬೈಕಿನ ಗೇರ್ ಲೂಸ್ ಇದೆ ಎಂದಿಟ್ಟುಕೊಳ್ಳಿ. ಟ್ರಾಫಿಕ್ ಮಧ್ಯೆ ನೀವು ಬೈಕ್ ಚಲಾಯಿಸಿಕೊಂಡು ಹೋಗುತ್ತಿರುವಾಗ ನಿಮ್ಮ ಗೇರ್ ಕೆಟ್ಟು ಹೋಗಿ ಮುಂದೆ ಸಾಗುವಾಗ ಅಪಘಾತವಾಗುತ್ತದೆ. ಈ ಅಪಘಾತದದಲ್ಲಿ ನಿಮ್ಮ ಬೈಕ ಮಡ್ ಗಾರ್ಡ್ ಕೆಟ್ಟು ಹೋಗಿ ಹ್ಯಾಂಡಲ್ ತಿರುಚುತ್ತದೆ.

ಇನ್ಶೂರೆನ್ಸ್, ಇಂತಹ ಸಂದರ್ಭದಲ್ಲಿ, ನಿಮ್ಮ ಹಾನಿಯಾದ ಬೈಕಿನ ದುರಸ್ತಿಯ ವೆಚ್ಚವನ್ನು ಕವರ್ ಮಾಡುತ್ತದೆ. ಆದ್ದರಿಂದಲೇ, ಯಾವುದೇ ಸಂದರ್ಭದಲ್ಲೂ ನಿಮ್ಮ ಸೆಕೆಂಡ್- ಹ್ಯಾಂಡ್ ಬೈಕ್ ಗೆ ಇನ್ಶೂರೆನ್ಸ್ ಪಾಲಿಸಿ ಅತ್ಯಗತ್ಯ.

 

# ನೀವು ಒಬ್ಬ ಪಾದಾಚಾರಿ(ಥರ್ಡ್ ಪಾರ್ಟೀ) ಗೆ ಅವನು/ಅವಳು ರಸ್ತೆ ದಾಟುತ್ತಿರುವಾಗ ಧಿಕ್ಕಿ ಹೊಡೆದರೆ ಒಂದು ಇನ್ಶೂರೆನ್ಸ್ ಕವರ್ ನಿಮ್ಮನ್ನು ಇದರಿಂದ ಉಂಟಾಗುವ ಕಾನೂನಾತ್ಮಕ ಹೊಣೆಗಾರಿಕೆಗಳಿಂದ ಸಂರಕ್ಷಿಸುತ್ತದೆ. ಕೊನೆಯ ಕೆಲವು ಕ್ಷಣಗಳಲ್ಲಿ ಟ್ರಾಫಿಕ್ ದೀಪ ಹಳದಿ ಬಣ್ಣಕ್ಕೆ ತಿರುಗಿದಾಗ, ನೀವು ರಸ್ತೆ ದಾಟಲು ಪ್ರಯತ್ನಿಸುತ್ತೀರಿ ಹಾಗೂ ಅದೇ ಸಮಯದಲ್ಲಿ ಒಬ್ಬ ಪಾದಾಚಾರಿ ಅವಸರದಲ್ಲಿ ರಸ್ತೆ ದಾಟಲು ಆರಂಭಿಸುತ್ತಾನೆ. ಮರುಕ್ಷಣವೇ ನೀವಿಬ್ಬರೂ ಅಪಘಾತದಲ್ಲಿ ಸಿಲುಕುತ್ತೀರಿ. ನಿಮ್ಮ ಢಿಕ್ಕಿಯಿಂದ ಪಾದಾಚಾರಿ ರಸ್ತೆಗೆ ಬಿದ್ದು ಅವನ ಕೈಗೆ ಫ್ರಾಕ್ಚರ್ ಆಗುತ್ತದೆ.

ಇದು ಸಂಪೂರ್ಣವಾಗಿ ನಿಮ್ಮದೇ ತಪ್ಪಾಗಿದ್ದರಿಂದ ಈ ನಷ್ಟವನ್ನು ಭರಿಸುವ ಹೊಣೆಗಾರಿಕೆ ಕೂಡಾ ನಿಮ್ಮದೇ ಆಗಿರುತ್ತದೆ. ಇನ್ಶೂರೆನ್ಸ್ ಪಾಲಿಸಿಯು ನೀವು ಥರ್ಡ್ ಪಾರ್ಟೀಯ ದೈಹಿಕ ಗಾಯಗಳಿಗಾಗಿ ತಗಲುವ ವೆಚ್ಚವನ್ನು ಭರಿಸುತ್ತದೆ.

 

#ವಾಹನ ಚಲಾಯಿಸುವಾಗ ಟ್ರಾಫಿಕ್ ನಿಯಮಗಳನ್ನು ಪಾಲಿಸುವುದು ಕಡ್ಡಾಯ, ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಲು ಮಾತ್ರವಲ್ಲದೆ ರಸ್ತೆಯಲ್ಲಿರುವ ಇತರರಿಗೆ ಹಾನಿ ಮಾಡುವುದನ್ನು ತಡೆಯಲು ಕೂಡಾ.

ಹುಡುಗರ ಗುಂಪೊಂದು ತಮ್ಮ ಪ್ರತಿದಿನದ ಬೈಕ್ ರೈಡ್ ಗಾಗಿ ಹೋದ ಒಂದು ಸಂಜೆಯನ್ನು ಕಲ್ಪಿಸಿಕೊಳ್ಳಿ. ಇವರಲ್ಲಿ ಒಬ್ಬನು ತಾನು ಖರೀದಿಸಿದ ಸೆಕೆಂಡ್- ಹ್ಯಾಂಡ್ ಬೈಕ್ ನ ವೇಗವನ್ನು ಹೆಚ್ಚಿಸುತ್ತಾನೆ. ಹಠಾತ್ ಆಗಿ ಒಂದು ಕಾರು ಬಲಬದಿಯಿಂದ ಬಂದು ಅವನಿಗೆ ಢಿಕ್ಕಿ ಹೊಡೆಯುತ್ತದೆ. ಬೈಕ್ ನ ಚಾಲಕ ಕೆಳಗೆ ಬಿದ್ದು ಸಾವನ್ನಪ್ಪುತ್ತಾನೆ. ಅವನ ಬಳಿ ಇನ್ಶೂರೆನ್ಸ್ ಕವರ್ ಇದ್ದು ಅವನು ಚಾಲಕ-ಮಾಲಕನಿಗಾಗಿ ಕಡ್ಡಾಯ ಪಿಎ ಕವರ್ ಅನ್ನು ಆಯ್ಕೆ ಮಾಡಿದ್ದನು. ಇದು ಸಾವು ಅಥವಾ ಅಂಗ ವೈಕಲ್ಯದ ಸಂದರ್ಭದಲ್ಲಿ, ವಾಹನದ ಮಾಲೀಕನ ನಾಮಿನಿಗೆ ಹಣವನ್ನು ಪಾವತಿಸುತ್ತದೆ.

 

ದುರಸ್ತಿಗಳ ಹಾಗೂ ಅಪಘಾತದಿಂದಾಗುವ ಗಾಯಗಳ ಚಿಕಿತ್ಸೆಯ ಆರ್ಥಿಕ ಹೊರೆಯಿಂದ ತಪ್ಪಿಸಿಕೊಳ್ಳಲು, ನಮಗೆ ಬೈಕ್ ಇನ್ಶೂರೆನ್ಸ್ ನ ಅಗತ್ಯವಿದೆ. ನಿಮ್ಮ ಸೆಕೆಂಡ್- ಹ್ಯಾಂಡ್ ಬೈಕ್ ಇನ್ಶೂರೆನ್ಸ್ ನ ಪ್ರೀಮಿಯಂ ಪಡೆಯಲು ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಳಸಿ

ಸೆಕೆಂಡ್-ಹ್ಯಾಂಡ್ ಬೈಕ್ ಇನ್ಶೂರೆನ್ಸ್ ಜೊತೆಗಿನ ಆಡ್-ಆನ್ ಕವರ್ ಗಳು

ಪ್ರಾಥಮಿಕ ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಅನ್ನು ಹೊರತುಪಡಿಸಿ, ಸಾಧ್ಯವಾಗಿದ್ದರೆ ಕವರೇಜ್ ಅನ್ನು ವಿಸ್ತರಿಸುವುದು ಸೂಕ್ತವಾಗಿದೆ. ಆಯ್ಕೆ ಮಾಡಬಹುದಾದ ಕೆಲವು ಆಡ್- ಆನ್ ಕವರ್ ಗಳನ್ನು ಇಲ್ಲಿ ನೀಡಲಾಗಿದೆ:

ನಿಲ್(ಶೂನ್ಯ)ಡಿಪ್ರಿಸಿಯೇಷನ್ ಕವರ್

ಅಪಘಾತದ ನಂತರ, ಬದಲಾವಣೆ ಹಾಗೂ ಹಾನಿಯಾದ ಭಾಗಗಳ ವೆಚ್ಚವನ್ನು ಭಾಗಶಃ ಮಾಲೀಕನು ಭರಿಸಬೇಕಾಗುತ್ತದೆ.ಆದರೆ ಹೆಚ್ಚುವರಿ ಪ್ರೀಮಿಯಂ ಪಾವತಿಸಿ, ನೀವು ನಿಲ್ ಡಿಪ್ರಿಸಿಯೇಷನ್ ಕವರ್ ಅನ್ನು ಪಡೆಯಬಹುದು, ಇದರರ್ಥ ಇನ್ಶೂರರ್ ಇಂತಹ ಎಲ್ಲಾ ವೆಚ್ಚವನ್ನು ತಾವೇ ನೋಡಿಕೊಳ್ಳುತ್ತಾರೆ. ನಿಲ್ ಡಿಪ್ರಿಸಿಯೇಷನ್ ಕವರ್ ಕೇವಲ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಾಹನಕ್ಕೆ  ಲಭ್ಯವಿದೆ.

ರಿಟರ್ನ್ ಟು ಇನ್ವಾಯ್ಸ್ ಕವರ್

ನಿಮ್ಮ ಬೈಕ್ ಕಳವಾಗಿದ್ದರೆ ಅಥವಾ ದುರಸ್ತಿಗೂ ಮೀರಿ ಹಾನಿಗೊಂಡಿದ್ದರೆ, ಈ ರಿಟರ್ನ್ ಟು ಇನ್ವಾಯ್ಸ್ ಕವರ್ ನಿಮ್ಮ ಬೈಕ್ ಅನ್ನು ನಿಮ್ಮ ಇನ್ವಾಯ್ಸ್(ಬೆಲೆಪಟ್ಟಿ)ಮೊತ್ತದ ವರೆಗೆ ಕವರ್ ಮಾಡುತ್ತದೆ. ಈ ಕವರ್ ನಿಮ್ಮ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕವನ್ನೂ ಮರುಪಾವತಿಸುತ್ತದೆ.

ಎಂಜಿನ್ ಮತ್ತು ಗೇರ್ ಸಂರಕ್ಷಣಾ ಕವರ್

ಎನು ಆದರೂ ಆಗದಿದ್ದರೂ ಸಹ, ಎಂಜಿನ್ ಮತ್ತು ಗೇರ್ ಬಾಕ್ಸಿಗೆ ಎಂದಿಗೂ ಸ್ವಲ್ಪ ಹೆಚ್ಚುವರಿ ಸಂರಕ್ಷಣೆ ಬೇಕೇ ಬೇಕಾಗುತ್ತದೆ. ಎಂಜಿನ್ ಮತ್ತು ಗೇರ್ ಆಡ್-ಆನ್ ಎಲ್ಲಾ ಸಂದರ್ಭಗಳಲ್ಲೂ ಇವುಗಳಿಗೆ ಕವರ್ ನೀಡುತ್ತದೆ.

ಕುಸಿತದ ಸಮಯದಲ್ಲಿ ನೆರವು

ಈ ರೋಡ್ ಸೈಡ್ ಅಸ್ಸಿಸ್ಟೆನ್ಸ್ ಆಡ್- ಆನ್ ಯಾವುದೇ ರೀತಿಯ ಕುಸಿತದ ಸಂದರ್ಭದಲ್ಲಿ ನಾವು ನಿಮ್ಮ ಹಾಗೂ ನಿಮ್ಮ ಟು ವೀಲರ್  ವಾಹನದ ಜೊತೆಗಿದ್ದೇವೆ ಎಂಬುವುದನ್ನು ಖಚಿತಪಡಿಸುತ್ತದೆ. ಉತ್ತಮ ಭಾಗ ಏನು ಗೊತ್ತೆ? ನಮ್ಮ ಸಹಾಯವನ್ನು ಕ್ಲೈಮ್ ಎಂದು ಕೂಡಾ ಪರಿಗಣಿಸಲಾಗುವುದಿಲ್ಲ.

ಕನ್ಸ್ಯೂಮೇಬಲ್(ಗ್ರಾಹಕ ಬಳಕೆಯ)ಕವರ್

ಕನ್ಸ್ಯೂಮೇಬಲ್ ಕವರ್ ಹೆಸರಿನಲ್ಲಿ ಬೈಕ್ ನ ಅಗತ್ಯ ವಸ್ತುಗಳಾದ ಎಂಜಿನ್ ಆಯಿಲ್ ಗಳು, ಸ್ಕ್ರೂಗಳು, ನಟ್ ಮತ್ತು ಬೋಲ್ಟ್ ಇತ್ಯಾದಿಗಳಿಗೆ ಒಂದು ಕವಚ ಲಭ್ಯವಿದೆ.

ಕೆಲವು ಅಪಘಾತಗಳು ಮಾರಣಾಂತಿಕವಾಗಿರುತ್ತವೆ. ಮುಂಚೆ, ಸಮಗ್ರ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕೇವಲ ಮಾಲೀಕನನ್ನು ಕವರ್ ಮಾಡಲಾಗಿತ್ತು. ನಂತರ, ಈ ಪಾಲಿಸಿಯನ್ನು ವರ್ಧಿಸಿ ಪಿಲಿಯನ್(ಹಿಂದೆ ಕುಳಿತಿರುವ)ರೈಡರಿಗೂ ಸುರಕ್ಷತಾ ಕವರ್ ಅನ್ನು ನೀಡಲಾಯಿತು.


ಥರ್ಡ್ ಪಾರ್ಟೀ ಹೊಣೆಗಾರಿಕೆ ಪಾಲಿಸಿ ಅಡಿಯಲ್ಲಿ ಪಿಲಿಯನ್ ರೈಡರ್ ಕೂಡಾ ಕವರ್ ಆಗುವಂತೆ ಐ ಆರ್ ಡಿ ಎ ಅವಕಾಶ ಮಾಡಿಕೊಟ್ಟಿದೆ. ಅಪಘಾತದ ಸಂದರ್ಭದಲ್ಲಿ, ಪಿಲಿಯನ್ ರೈಡರ್ ಗೆ ರೂ. 3 ಲಕ್ಷ ಮೊತ್ತದ ಕವರ್ ನೀಡಲಾಗುತ್ತದೆ. ಪಿಲಿಯನ್ ರೈಡರ್ ಸಾವಿಗೀಡಾದ ಸಂದರ್ಭದಲ್ಲಿ, ಹತ್ತಿರ ಸಂಬಂಧಿಗೆ 5 ಲಕ್ಷದ ಪರಿಹಾರ ನೀಡಲಾಗುತ್ತದೆ.

ಬೈಕ್ ಮಾಲೀಕತ್ವ ಹಾಗೂ ಇನ್ಶೂರೆನ್ಸ್ ನ ವರ್ಗಾವಣೆ

ವಾಹನದ ಆರ್ ಸಿ ಅಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ಸೆಕೆಂಡ್ ಹ್ಯಾಂಡ್ ಬೈಕಿನ ಒಡೆತನ ನಿಮ್ಮದಾಗಿರುತ್ತದೆ. ಆದ್ದರಿಂದ, ನೀವು ನೀವು ನಿಮ್ಮ ಮೊದಲ ರೈಡಿಗಾಗಿ ಪಟ್ಟಣಕ್ಕೆ ಹೋಗುವ ಮುನ್ನ ಎಲ್ಲಾ ಸೂಕ್ತ ದಾಖಲೆಗಳು ನಿಮ್ಮ ಹೆಸರಿನಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ.

 

ವರ್ಗಾವಣೆಯ ಮನವಿಗೆ ಚಾಲನೆನೀಡುವ ಮುನ್ನ ವಾಹನ ನೋಂದಣಿಯಾದ ಆರ್ ಟಿ ಓ ದಿಂದ ಎನ್ ಓ ಸಿ ಅನ್ನು ಪಡೆಯಬೇಕು. ಲೋನ್ ಮೇಲೆ ವಾಹನ ಖರೀದಿ ಮಾಡಿದ್ದರೆ, ಆಗ, ಆರ್ ಟಿ ಓ ಜೊತೆಗೆ, ಬ್ಯಾಂಕರ್ ನಿಂದ ಕೂಡಾ ಎನ್ ಓ ಸಿಯ ಅಗತ್ಯವಿರುತ್ತದೆ.

 

ನಿಮ್ಮ ಸೆಕೆಂಡ್ ಹ್ಯಾಂಡ್ ಬೈಕ್ ನ ಮಾಲೀಕತ್ವದ ವರ್ಗಾವಣೆಯನ್ನು ಪೂರ್ಣಗೊಳಿಸಲು, ನೀವು ಈ ಕೆಲವು ಶೀಘ್ರ ಹೆಜ್ಜೆಗಳನ್ನು ಅನುಸರಿಸಬೇಕಾಗುವುದು:

ಪ್ರಕ್ರಿಯೆ ಪೂರ್ಣಗೊಳ್ಳಲು ಹಾಗೂ ಮಾಲೀಕತ್ವದ ವರ್ಗಾವಣೆಯಾಗಲು 10-15 ದಿನಗಳು ಬೇಕಾಗುತ್ತವೆ. ಆ ಸಮಯದಲ್ಲಿ, ಬೈಕ್ ನ ಇನ್ಶೂರೆನ್ಸ್ ಪಾಲಿಸಿ ಇದೆಯೋ ಇಲ್ಲವೋ ಎಂದು ಪರಿಶೀಲಿಸಿ. ಹೌದೆಂದಾದರೆ, ನೀವು ಆ ಇನ್ಶೂರೆನ್ಸ್ ನ ವರ್ಗಾವಣೆ ಮಾಡಬಯಸುತ್ತೀರೋ ಅಥವಾ ನಿಮಗೆ ಬೇಕಾದ ಇನ್ಶೂರೆನ್ಸ್ ಸರ್ವಿಸ್ ಪ್ರೊವೈಡರ್ ನಿಂದ ಹೊಸ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುತ್ತೀರೋ ಎಂದು ನಿರ್ಧರಿಸಬೇಕಾಗುತ್ತದೆ.

 

ಇನ್ಶೂರೆನ್ಸ್ ಪಾಲಿಸಿ ಈಗಾಗಲೇ ಇದ್ದು ನೀವು ಅದನ್ನು ವರ್ಗಾಯಿಸಲು ಇಚ್ಛಿಸುತ್ತೀರಿ ಎಂದು ಭಾವಿಸಿ. ಈ ಸಂದರ್ಭದಲ್ಲಿ, ಬೈಕ್ ನ ಹಳೆಯ ಮಾಲೀಕ ಇನ್ಶೂರೆನ್ಸ್ ಪಾಲಿಸಿ, ಐಡೆಂಟಿಟಿ ಪ್ರೂಫ್, ವಾಹನ ನೋಂದಣಿಯ ಪ್ರತಿ, ಮತ್ತು ಫಾರ್ಮ್ 20 ಮತ್ತು ಫಾರ್ಮ್ 30 ರ  ಜೊತೆ ಇನ್ಶೂರೆನ್ಸ್ ಕಂಪನಿಗೆ ಭೇಟಿ ನೀಡಬೇಕು.

ಸೆಕೆಂಡ್ - ಹ್ಯಾಂಡ್ ಬೈಕ್ ಖರೀದಿಸುವ ಮುನ್ನ ಪರಿಶೀಲಿಸಬೇಕಾದ ವಿಷಯಗಳು

ಒಬ್ಬ ಜಾಣ ವ್ಯಕ್ತಿ ಅದರ ಲಾಭಗಳು/ವೈಶಿಷ್ಠ್ಯಗಳನ್ನು ಪರಿಶೀಲಿಸದೆ ಯಾವ ವಸ್ತುವನ್ನೂ ಆಯ್ಕೆ ಅಥವಾ ಖರೀದಿ ಮಾಡುವುದಿಲ್ಲ. ಹಾಗೂ ಆ ವಸ್ತು ಸೆಕೆಂಡ್- ಹ್ಯಾಂಡ್ ಬೈಕ್ ಆಗಿದ್ದರೆ, ನಿಮಗೆ ಅದರ ಬಗ್ಗೆ ಖಡಾಖಂಡಿತವಾದ ನಂಬಿಕೆ ಇರಬೇಕು. ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸುವ ಮುನ್ನ ನೀವು ಪರಿಶೀಲಿಸಬೇಕಾಗುವ ಕೆಲವು ವಿಷಯಗಳು ಇಲ್ಲಿವೆ:

  • ಬೈಕನ್ನು ಸ್ವತಃ ಪರಿಶೀಲಿಸಿ: ಬೈಕನ್ನು ಚೆನ್ನಾಗಿ ಪರಿಶೀಲಿಸಿ ನೀವು ಗಮನಿಸಿದ ಕೆಲವು ಅಂಶಗಳ ಬಗ್ಗೆ ಸಂಶೋಧನೆ ನಡೆಸಿ. ನಿಮ್ಮ ಕಣ್ಣುಗಳನ್ನು ತೆರೆದಿಡಿ ಹಾಗೂ ನಿಮ್ಮ ಅಂತಃಪ್ರಜ್ಞೆ ಸಕ್ರಿಯವಾಗಿರಲಿ.ಯಾವುದೇ ಗೀರುಗಳು ಅಥವಾ ಗುದ್ದಿದ ಚಿಹ್ನೆಗಳಿವೆಯೇ ಎಂದು ಕಂಡುಹಿಡಿಯಿರಿ.
  • ಅಸಮಾನ್ಯ ಸದ್ದುಗಳನ್ನು ಪರಿಶೀಲಿಸಿ: ಬೈಕ್ ಅನ್ನು ಸ್ಟಾರ್ಟ್ ಮಾಡಿ ಅದು ಐಡ್ಲಿಂಗ್ ಮತ್ತು ಆಕ್ಸಲರೇಷನ್ ಸಮಯದಲ್ಲಿ ಯಾವುದಾದರೂ ಸದ್ದು ಮಾಡುತ್ತದೆಯೇ ಎಂದು ಪರಿಶೀಲಿಸಿ. ಇದರ ಜೊತೆ, ನೀವು ಇಂಡಿಕೇಟರ್, ಲೈಟ್ ಗಳು, ಹಾರ್ನ್ ಶಬ್ದಗಳನ್ನೂ ಚೆಕ್ ಮಾಡಬೇಕು.
  • ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ: ಎಂಜಿನ್ ನಲ್ಲಿ ಉಲ್ಲೇಖವಾಗಿರುವ ಐಡೆಂಟಿಫಿಕೇಷನ್ ಸಂಖ್ಯೆ ಹಾಗೂ ಆರ್ ಸಿ ಯಲ್ಲಿ ಇರುವ ಸಂಖ್ಯೆ ಒಂದೇ ಆಗಿದೆಯೇ ಎಂದು ಪರಿಶೀಲಿಸಿ. ಇದರಲ್ಲಿ ಯಾವುದೇ ರೀತಿಯ ವ್ಯತ್ಯಾಸವಿದ್ದರೆ, ಕ್ಲೈಮ್ ಸಮಯದಲ್ಲಿ ಸಮಸ್ಯೆ ಉತ್ಪನ್ನವಾಗುವುದು.
  • ಸರ್ವಿಸ್ ವಿವರಗಳನ್ನು ತಿಳಿಯಿರಿ: ನೀವು ಬೈಕ್ ನ ಮಾಲೀಕನೊಂದಿಗೆ ಸರ್ವಿಸ್ ಗಳ ಸಂಖ್ಯೆ ಮತ್ತು ಅದನ್ನು ಮಾಡಿದ ಕೇಂದ್ರದ ಬಗ್ಗೆ ಮಾಹಿತಿ ಪಡೆಯಿರಿ.
  • ಟೆಸ್ಟ್ ರೈಡ್ ಮಾಡಿ:  ನೀವು ಬೈಕ್ ನ ಟೆಸ್ಟ್ ಡ್ರೈವ್ ಮಾಡಲು ಮರೆಯದಿರಿ. ಬೈಕ್ ನ ಸಾಮರ್ಥ್ಯವನ್ನು ಅಳೆಯಲು ಗುಂಡಿ ಗುರಿಗಳಿರುವ ರಸ್ತೆಯನ್ನು ಆಯ್ಕೆ ಮಾಡಿ. ಅದರ ಸಸ್ಪೆನ್ಷನ್ ಮತ್ತು ಬ್ರೇಕ್ ಗಳು ಅದರ ಆಟ ತೋರಿಸುವವು.

 

ನೀವು ನಿಮ್ಮ ಸೆಕೆಂಡ್- ಹ್ಯಾಂಡ್ ಬೈಕ್ ಖರೀದಿಸುವ ಮುನ್ನ ಪರಿಶೀಲಿಸಬೇಕಾದ ಅಂಶಗಳನ್ನು ಈಗ ನೋಡಿಯಾಗಿದೆ. ಮಾಲೀಕತ್ವದ ವರ್ಗಾವಣೆ ಹಾಗೂ ಇನ್ಶೂರೆನ್ಸ್ ಅನ್ನು ನಿಮ್ಮ ಹೆಸರಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನೂ ನೀವು ತಿಳಿದುಕೊಂಡಾಗಿದೆ. ಆದರೆ ನಿಮಗೆ ಹೊಸ ಇನ್ಶೂರೆನ್ಸ್ ಪಾಲಿಸಿ ಬೇಕಿದ್ದರೆ? ಈ ಚಿಕ್ಕ ವಿಷಯ ನಿಮ್ಮನ್ನು ಚಿಂತೆಗೀಡುಮಾಡುತ್ತದೆಯೇ? ಸೆಕೆಂಡ್-ಹ್ಯಾಂಡ್ ಬೈಕ್ ಗಾಗಿ ಹೊಸ ಇನ್ಶೂರೆನ್ಸ್ ಪಡೆಯುವುದು ಹೇಗೆ ಎಂದು ನಾವು ತಿಳಿಯೋಣ.

ನಿಮ್ಮ ಸೆಕೆಂಡ್-ಹ್ಯಾಂಡ್ ಬೈಕ್ ಗಾಗಿ ಹೊಸ ಇನ್ಶೂರೆನ್ಸ್ ಖರೀದಿಸಬೇಕೇ?

ನಿಮ್ಮ ಸೆಕೆಂಡ್-ಹ್ಯಾಂಡ್ ಬೈಕ್ ನ ಜೊತೆ ನಿಮಗೆ ಮಾನ್ಯ ಇನ್ಶೂರೆನ್ಸ್ ದೊರೆಯದಿದ್ದರೆ, ಅಥವಾ ಪ್ರಸ್ತುತ ಇನ್ಶೂರೆನ್ಸ್ ನಿಮಗೆ ಹಿಡಿಸದೇ ಇದ್ದಲ್ಲಿ, ಈ ಕೆಳಗಿನ ಪ್ರಕ್ರಿಯೆಯನ್ನು ಬಳಸಿ ನೀವು ನಿಮ್ಮ ಸೆಕೆಂಡ್-ಹ್ಯಾಂಡ್ ಬೈಕ್ ಗೆ ಹೊಸ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದು:

 

# ಹೆಚ್ಚಿನ ಇನ್ಶೂರರ್ ಗಳ ಬಳಿ ಆನ್ಲೈನ್ ಸಾಧ್ಯತೆಯ ಪ್ರಕ್ರಿಯೆಗಳಿರುತ್ತವೆ. ಅವರ ವೆಬ್ ಸೈಟ್ ಅನ್ನು ಆನ್ಲೈನ್ ಹೋಗಿ ಭೇಟಿ ಮಾಡಿ.

 

# ನಿಮ್ಮ ಆರ್ ಸಿ ಯ ಸ್ಕ್ಯಾನ್ ಮಾಡಿದ ಪ್ರತಿ, ಇನ್ವಾಯ್ಸ್(ಬೆಲೆ ಚೀಟಿ) ಹಾಗೂ ಐಡೆಂಟಿಟಿ ಪ್ರೂಫ್ ನ ಪ್ರತಿಯನ್ನು ಆನ್ಲೈನ್ ಪೋರ್ಟಲ್ ಮೂಲಕ ಸಲ್ಲಿಸಿ. ಅಥವಾ ನೀವು ಕೇವಲ ನೋಂದಣಿಯಾದ ನಗರ, ಮಾಡೆಲ್ ಹೆಸರ್ ಹಾಗೂ ವೇರಿಯೆಂಟ್ ಹಾಗೂ ನೋಂದಣಿ ದಿನಾಂಕವನ್ನು ನಮೂದಿಸಬಹುದು.

 

#ಇನ್ಶೂರರ್ ಪರಿಶೀಲನೆಗೆ ಏರ್ಪಾಡನ್ನು ಮಾಡುತ್ತಾರೆ, ಇದರ ನಂತರ ನೀವು ಪ್ರೀಮಿಯಂ ಪಾವತಿ ಮಾಡಬಹುದು.

 

# ಯಾವ ರೀತಿಯ ಕಾಯುವಿಕೆ ಇಲ್ಲದೆ ನಿಮಗೆ ಇನ್ಶೂರೆನ್ಸ್ ನ ಪ್ರತಿ ದೊರೆಯುತ್ತದೆ.

 

ಕೊನೆಗೂ, ನಿಮ್ಮ ಕನಸಿನ ಬೈಕ್ ನಿಮ್ಮದಾಗಿದೆ. ಜೀವನವು ಸಾಹಸಗಳಿಂದ ಕೂಡಿದೆ ಆದರೆ ಅತ್ಯಮೂಲ್ಯವಾಗಿದೆ.  ನೀವು ಖರೀದಿಸಿದ ಬೈಕ್, ಸೆಕೆಂಡ್-ಹ್ಯಾಂಡ್ ಆದರೂ, ಬೆಲೆಬಾಳುತ್ತದೆ. ನೀವು ಬೈಕ್ ರೈಡ್ ಮಾಡುವಾಗ ಸುರಕ್ಷತೆಯ ಪ್ರಮಾಣಗಳನ್ನು ಕಾಪಾಡಲು ಮರೆಯಬೇಡಿ. ಅದು ನಿಮ್ಮನ್ನು ಮಾತ್ರವಲ್ಲದೆ ರಸ್ತೆಯಲ್ಲಿರುವ ಇನ್ನೊಬ್ಬರನ್ನೂ ಸಂರಕ್ಷಿಸುತ್ತದೆ.