ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್

ಆನ್‌ಲೈನ್‌ನಲ್ಲಿ ಟು ವೀಲರ್ ಓ.ಡಿ ಇನ್ಶೂರೆನ್ಸ್ ಅನ್ನು ರಿನ್ಯೂ ಮಾಡಿ

Third-party premium has changed from 1st June. Renew now

ಬೈಕ್‌ಗೆ ಓನ್ ಡ್ಯಾಮೇಜ್ ಇನ್ಶೂರೆನ್ಸ್ ಎಂದರೇನು?

ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ಎನ್ನುವುದು, ನಿಮ್ಮ ಸ್ವಂತ ವಾಹನಕ್ಕೆ ಉಂಟಾಗುವ ಹಾನಿ ಮತ್ತು ನಷ್ಟದ ವಿರುದ್ಧ ಮಾತ್ರ ರಕ್ಷಣೆ ನೀಡುವ ಸ್ವತಂತ್ರ ಬೈಕ್ ಇನ್ಶೂರೆನ್ಸ್ ಪಾಲಿಸಿಯಾಗಿದೆ. ಅಪಘಾತ, ಘರ್ಷಣೆ, ನೈಸರ್ಗಿಕ ವಿಕೋಪ ಅಥವಾ ಬೆಂಕಿಯ ಕಾರಣದಿಂದಾಗಿ ಬೈಕಿಗೆ ನಷ್ಟ ಸಂಭವಿಸುವ ಸಮಯದಲ್ಲಿ ಈ ಪಾಲಿಸಿ ಸಹಕಾರಿಯಾಗಿದೆ.

ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ಅನ್ನು ಪರಿಚಯಿಸಿರುವ ಉದ್ದೇಶವೇನು?

ಸದ್ಯ ಎರಡು ವಿಧದ ಬೈಕ್ ಇನ್ಶೂರೆನ್ಸ್ ಪಾಲಿಸಿಗಳಿವೆ. ಆದಾಗ್ಯೂ, ಇತ್ತೀಚಿಗೆ IRDA,  ಅಸ್ತಿತ್ವದಲ್ಲಿರುವ ಥರ್ಡ್-ಪಾರ್ಟಿ ಓನ್ಲಿ ಪಾಲಿಸಿಗಳನ್ನು ಹೊಂದಿರುವ ಜನರಿಗೆ, ತಮ್ಮ ಓನ್ ಬೈಕ್‌ನ ಹಾನಿ ಮತ್ತು ನಷ್ಟವನ್ನು ಸಹ ಭರಿಸಲು ಸಹಾಯವಾಗುವಂತೆ ಸ್ವತಂತ್ರವಾದ ಓನ್ ಡ್ಯಾಮೇಜ್ ಕವರ್ ಅನ್ನು ಪರಿಚಯಿಸಿದೆ.

ಬೈಕ್‌ಗಾಗಿ ಸ್ವತಂತ್ರ (standalone) ಓ.ಡಿ ಇನ್ಶೂರೆನ್ಸ್ ಹೇಗೆ ಕೆಲಸ ಮಾಡುತ್ತದೆ?

ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ; ನೀವು ಇತ್ತೀಚೆಗಷ್ಟೇ ಹೊಸ ಬೈಕು ಖರೀದಿಸಿದ್ದೀರಿ ಮತ್ತು ಕಾನೂನು ಹಾಗೂ ಥರ್ಡ್-ಪಾರ್ಟಿ ಲೈಬಿಲಿಟಿಗಳನ್ನು ಸರಿದೂಗಿಸಲು ಮೂರು ವರ್ಷಗಳ ದೀರ್ಘಾವಧಿಯ ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ತಕ್ಷಣವೇ ಪಡೆದುಕೊಂಡಿದ್ದೀರಿ ಎಂದು ಭಾವಿಸೋಣ.

ಆದಾಗ್ಯೂ, ಒಂದು ವರ್ಷದ ನಂತರವೇ ನಿಮ್ಮ ಸ್ವಂತ ಬೈಕ್ ನ ಡ್ಯಾಮೆಜ್ ಮತ್ತು ನಷ್ಟದಿಂದ ರಕ್ಷಿಸುವ ಪ್ರಾಮುಖ್ಯತೆಯನ್ನು ಸಹ ನೀವು ಅರಿತುಕೊಳ್ಳುತ್ತೀರಿ ಆದರೆ ಇದೀಗ, ಸಮಗ್ರ ಬೈಕ್ ಇನ್ಶೂರೆನ್ಸ್ ಪಾಲಿಸಿಗೆ ಅಪ್‌ಗ್ರೇಡ್ ಮಾಡಲು ನಿಮ್ಮ ಇನ್ಶೂರೆನ್ಸ್ ರಿನೇವಲ್'ಗಾಗಿ ನೀವು ಕಾಯಬೇಕಾಗಿದೆ.

ಬದಲಿಗೆ ನಿಮ್ಮ ಬೈಕ್‌ಗೆ ಓನ್ ಡ್ಯಾಮೇಜ್ ಕವರ್ ಅನ್ನು ನೀವು ಖರೀದಿಸಬಹುದಾದಂತಹ ಪರಿಸ್ಥಿತಿ ಇದು. ಈ ರೀತಿಯಾಗಿ, ರಿಯಾಯಿತಿ ದರದಲ್ಲಿ ನಿಮ್ಮ ಸ್ವಂತ ಬೈಕ್ ಅನ್ನು ಸಹ ನೀವು ರಕ್ಷಿಸಬಹುದು.

ಯಾರು ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ಅನ್ನು ಪಡೆಯಬೇಕು?

ನೀವು ಇತ್ತೀಚೆಗೆ ಬೈಕ್ ಖರೀದಿಸಿದ್ದು ಮತ್ತು ಈಗಾಗಲೇ ನಿಮ್ಮ ಬೈಕ್‌ಗಾಗಿ ಡಿಜಿಟ್‌ ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸಿದ್ದರೆ, ನಿಮ್ಮ ಸ್ವಂತ ಬೈಕ್‌ಗೆ ಉಂಟಾಗಬಹುದಾದ ಡ್ಯಾಮೆಜ್ ಮತ್ತು ನಷ್ಟದಿಂದ ರಕ್ಷಿಸಲು ನಿಮ್ಮ ಟು ವೀಲರ್ ವಾಹನಕ್ಕೆ ಓನ್ ಡ್ಯಾಮೇಜ್ ಕವರ್ ಅನ್ನು ಸಹ ನೀವು ಖರೀದಿಸಬಹುದು.

ನೀವು ಈಗಾಗಲೇ ಬೇರೊಂದು ಇನ್ಶೂರೆನ್ಸ್ ಕಂಪನಿಯಿಂದ ಈಗಿರುವ ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ಡಿಜಿಟ್ ಇನ್ಶೂರೆನ್ಸ್‌ನಿಂದ ಸ್ವತಂತ್ರವಾದ ಓನ್ ಡ್ಯಾಮೇಜ್  ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸಲು ನೀವು ಆಯ್ಕೆ ಮಾಡಬಹುದು. ಇದರಿಂದ ನಿಮ್ಮ ಸ್ವಂತ ಬೈಕು ಕೂಡ ನಷ್ಟದಿಂದ ರಕ್ಷಣೆ ಪಡೆಯುತ್ತದೆ.

ಬೈಕ್‌ OD ಇನ್ಶೂರೆನ್ಸ್, ಏನೇನೆಲ್ಲ ಒಳಗೊಂಡಿದೆ?

OD ಬೈಕ್ ಇನ್ಶೂರೆನ್ಸನೊಂದಿಗೆ ಆಡ್-ಆನ್ ಕವರ್‌ಗಳು

ಶೂನ್ಯ ಡೆಪ್ರಿಸಿಯೇಷನ್ ಕವರ್

ನಿಮ್ಮ ಬೈಕ್ ಮತ್ತು ಅದರ ಬಿಡಿ ಭಾಗಗಳಿಗೆ ಆಂಟಿ-ಏಜಿಂಗ್ ಕ್ರೀಮ್ ಬಳಸಿದಂತೆ. ಸಾಮಾನ್ಯವಾಗಿ, ಕ್ಲೇಮ್‌ಗಳ ಸಮಯದಲ್ಲಿ ಅಗತ್ಯವಿರುವ ಡೆಪ್ರಿಸಿಯೇಷನ್ ಮೊತ್ತವನ್ನು ಯಾವಾಗಲೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದಾಗ್ಯೂ, ಜೀರೋ ಡೆಪ್ರಿಸಿಯೇಷನ್ ಕವರ್ ಯಾವುದೇ ಡೆಪ್ರಿಸಿಯೇಷನ್ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಖಚಿತಪಡಿಸುತ್ತದೆ, ಆದ್ದರಿಂದ ನೀವು ಕ್ಲೇಮ್‌ಗಳ ಸಮಯದಲ್ಲಿ ರಿಪೇರಿ /ರಿಪ್ಲೇಸ್ ಮೆಂಟ್ ವೆಚ್ಚದ ಸಂಪೂರ್ಣ ಮೌಲ್ಯವನ್ನು ಪಡೆಯುತ್ತೀರಿ.

ಇನ್‌ವಾಯ್ಸ್ ಕವರ್‌ಗೆ ರಿಟರ್ನ್

ನಿಮ್ಮ ಬೈಕು ಕಳ್ಳತನವಾದಾಗ ಅಥವಾ ರಿಪೇರಿಗೂ ಮೀರಿ ಹಾನಿಯಾಗಿರುವ  ಪರಿಸ್ಥಿತಿಯಲ್ಲಿದ್ದರೆ, ಈ ಆಡ್-ಆನ್ ಸಹಾಯಕ್ಕೆ ಬರುತ್ತವೆ . ಇನ್‌ವಾಯ್ಸ್ ಆಡ್-ಆನ್‌ ರಿಟರ್ನ್ ಜೊತೆಗೆ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕವನ್ನು ಒಳಗೊಂಡಂತೆ ನಿಮಗೆ ಅದೇ ಬೈಕ್ ಅಥವಾ ಅದೇ ರೀತಿಯ ಬೇರೊಂದು ಬೈಕು ಪಡೆಯಲು ಆಗುವ ವೆಚ್ಚವನ್ನು ನಾವು ಭರಿಸುತ್ತೇವೆ.

ಎಂಜಿನ್ ಮತ್ತು ಗೇರ್ ಬಾಕ್ಸ್ ರಕ್ಷಣೆಯ ಕವರ್

ನಿಮ್ಮ ಎಂಜಿನ್ ಅನ್ನು ಬದಲಿಸಲು ತಗಲುವ ವೆಚ್ಚವು, ಅದರ ವೆಚ್ಚದ ಸರಿಸುಮಾರು 40% ಆಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಸ್ಟ್ಯಾಂಡರ್ಡ್ ಟೂ-ವೀಲರ್ ಇನ್ಶೂರೆನ್ಸ್ ಪಾಲಿಸಿ, ಅಪಘಾತದ ಸಮಯದಲ್ಲಿ ಉಂಟಾದ ಹಾನಿಗಳಿಗೆ ಮಾತ್ರ ರಕ್ಷಣೆ ನೀಡಲಾಗುತ್ತದೆ. ಆದಾಗ್ಯೂ, ಈ ಆಡ್-ಆನ್‌ನೊಂದಿಗೆ, ಅಪಘಾತದ ನಂತರ ಬೈಕಿಗೆ ಉಂಟಾದ ಯಾವುದೇ ಪರಿಣಾಮದ ಹಾನಿಗಳಿಗೆ ನೀವು ನಿರ್ದಿಷ್ಟವಾಗಿ ನಿಮ್ಮ ವಾಹನದ (ಇಂಜಿನ್ ಮತ್ತು ಗೇರ್‌ಬಾಕ್ಸ್!) ಜೀವಿತಾವಧಿಯನ್ನು ಸಹ ರಕ್ಷಣೆ ಮಾಡಬಹುದು. ಇವು ನೀರಿನ ಹಿಮ್ಮೆಟ್ಟುವಿಕೆ ಲೂಬ್ರಿಕೇಟಿಂಗ್ ಎಣ್ಣೆಯ ಸೋರಿಕೆ ಮತ್ತು ಅಂಡರ್‌ಕ್ಯಾರೇಜ್ ಹಾನಿಗಳಿಂದ ಸಂಭವಿಸಬಹುದು.

ಕನ್ಸ್ಯೂಮಬಲ್ ಕವರ್

ಕನ್ಸ್ಯೂಮಬಲ್ ಕವರ್ ನಿಮ್ಮ ಟು ವೀಲರ್ ವಾಹನಕ್ಕೆ ಹೆಚ್ಚುವರಿ ಶೀಲ್ಡ್ ಅನ್ನು ಸೇರಿಸುತ್ತದೆ. ಅಪಘಾತದ ಸಂದರ್ಭದಲ್ಲಿ ಎಂಜಿನ್ ಆಯಿಲ್‌ಗಳು, ಸ್ಕ್ರೂಗಳು, ನಟ್‌ಗಳು ಮತ್ತು ಬೋಲ್ಟ್‌ಗಳು, ಗ್ರೀಸ್, ಇತ್ಯಾದಿಗಳಂತಹ ನಿಮ್ಮ ಬೈಕ್‌ನ ಎಲ್ಲಾ ನಿಟಿ-ಗ್ರಿಟ್ಟಿಗಳ ವೆಚ್ಚವನ್ನು ಸಹ ಭರಿಸುತ್ತದೆ.

ಬ್ರೇಕ್ ಡೌನ್ ಅಸಿಸ್ಟನ್ಸ್

ರಸ್ತೆಬದಿ ಅಸಿಸ್ಟನ್ಸ್  ಆಡ್-ಆನ್‌, ಇದು ಯಾವುದೇ ಬ್ರೇಕ್ ಡೌನ್ ಆದ ಸಂದರ್ಭದಲ್ಲಿ, ನಿಮಗೆ ಮತ್ತು ನಿಮ್ಮ ಟು ವೀಲರ್ ವಾಹನಕ್ಕೆ ನಾವು ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ ಎಂದು ಖಚಿತಪಡಿಸುತ್ತದೆ. ಬೆಸ್ಟ್ ಪಾರ್ಟ್ ಏನು ಗೊತ್ತೇ? ನಮ್ಮನ್ನು ನೀವು ಸಹಾಯಕ್ಕಾಗಿ ಕೇಳುವುದನ್ನು ನಾವು ಕ್ಲೇಮ್ ಎಂದು ಪರಿಗಣಿಸುವುದಿಲ್ಲ.

ಯಾವುದನ್ನು ಒಳಗೊಂಡಿಲ್ಲ?

ನಿಮ್ಮ ಬೈಕ್‌ನ ಒಟ್ಟಾರೆ ರಕ್ಷಣೆಗಾಗಿ ಓನ್ ಡ್ಯಾಮೇಜ್ ಕವರ್ ಉತ್ತಮವಾಗಿದ್ದರೂ, ಕವರ್ ಆಗದ ಕೆಲವು ವಿಷಯಗಳು ಇಲ್ಲಿವೆ.

ಥರ್ಡ್ ಪಾರ್ಟಿ ಹೊಣೆಗಾರಿಕೆಗಳು

ಸ್ಟ್ಯಾಂಡಲೋನ್ ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ನಿಮ್ಮ ಸ್ವಂತ ಬೈಕ್‌ಗೆ ಆಗುವ ನಷ್ಟಗಳನ್ನು ಮಾತ್ರ ಕವರ್ ಮಾಡುತ್ತದೆ. ಮತ್ತು ಥರ್ಡ್-ಪಾರ್ಟಿ ನಷ್ಟವನ್ನು ಭರಿಸುವುದಿಲ್ಲ. ನಿಮ್ಮ ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಅದನ್ನು ನೋಡಿಕೊಳ್ಳುತ್ತದೆ.

ಕುಡಿದು ವಾಹನ ಚಾಲನೆ

ಕುಡಿದು ವಾಹನ ಚಾಲನೆ ಮಾಡುವುದನ್ನು ಕಾನೂನಿನಿಂದ ಅನುಮತಿಸಿರುವುದಿಲ್ಲ. ಆದ್ದರಿಂದ ನೀವು ಮದ್ಯದ ಅಮಲಿನಲ್ಲಿ ವಾಹನ ಓಡಿಸಿದ್ದರೆ, ನಿಮ್ಮ ಬೈಕ್ ಇನ್ಶೂರೆನ್ಸ್ ಕ್ಲೇಮ್‌ಗಳನ್ನು ಕವರ್ ಮಾಡಲಾಗುವುದಿಲ್ಲ.

ಲೈಸೆನ್ಸ್ ಇಲ್ಲದೆ ಚಾಲನೆ

ಕ್ಲೇಮ್ ಮಾಡಿದ ವ್ಯಕ್ತಿ ಕಾನೂನು ಬಾಹಿರವಾಗಿ ಚಾಲನೆ ಮಾಡುತ್ತಿದ್ದರೆ, ಅಂತಹವರಿಂದ ಯಾವುದೇ ಬೈಕ್ ಇನ್ಶೂರೆನ್ಸ್ ಕ್ಲೇಮ್‌ಗಳನ್ನು ಸ್ವೀಕರಿಸುವುದಿಲ್ಲ. ಆದ್ದರಿಂದ, ನೀವು ವ್ಯಾಲಿಡ್ ಇರುವ ಟೂ-ವ್ಹಿಲರ್ ಲೈಸೆನ್ಸ್ ಹೊಂದಿದ್ದರೆ ಮಾತ್ರ ಕ್ಲೇಮ್‌ಗಳನ್ನು ಮಾಡಬಹುದು.

ಆಡ್-ಆನ್‌ಗಳನ್ನು ಖರೀದಿಸಿಲ್ಲ

ನೀವು ನಿರ್ದಿಷ್ಟ ಆಡ್-ಆನ್ ಅನ್ನು ಖರೀದಿಸದೇ ಇದ್ದರೆ, ನಿಸ್ಸಂಶಯವಾಗಿ, ಅದರ ಪ್ರಯೋಜನಗಳಿಗಾಗಿ ನೀವು ಕ್ಲೇಮ್ ಮಾಡಲು ಸಾಧ್ಯವಿಲ್ಲ!

ಪರಿಣಾಮದ ಹಾನಿಗಳು

ದುರದೃಷ್ಟವಶಾತ್, ಅಪಘಾತದ ಸಮಯದಲ್ಲಿ ಸಂಭವಿಸದಿರುವ ಡ್ಯಾಮೆಜ್ ಗಳನ್ನು, ನಿಮ್ಮ ಬೈಕ್ ಕವರ್ ಮಾಡುವುದಿಲ್ಲ.

ಕೊಡುಗೆ ನಿರ್ಲಕ್ಷ್ಯ

ಇದರರ್ಥ ನೀವು ಏನಾದರೂ ಮಾಡಬಾರದ್ದನ್ನು ಮಾಡಿದ್ದರೆ,  ಅಂತಹದನ್ನು ನಿಮ್ಮ ಬೈಕ್' ಕವರ್ ಮಾಡುವುದಿಲ್ಲ. ಉದಾಹರಣೆಗೆ; ನಿಮ್ಮ ನಗರವು ಪ್ರವಾಹಕ್ಕೆ ಒಳಗಾಗಿದೆ, ಆಗಲೂ ನೀವು ನಿಮ್ಮ ಬೈಕನ್ನು ಹೊರತೆಗೆದಿದ್ದರಿಂದ ಕೊನೆಗೆ ಅದು,  ಬೈಕಿನ ಹಾನಿಗೆ ಕಾರಣವಾಯಿತು!

ಲೈಸೆನ್ಸ್ ಹೋಲ್ಡರ್ ಇಲ್ಲದೆ ಚಾಲನೆ

ಕಾನೂನಿನ ಪ್ರಕಾರ,  ಒಂದು ಕಲಿಕಾ ಲೈಸೆನ್ಸ್ ಹೊಂದಿದ್ದರೆ, ನೀವು, ನಿಮ್ಮ ಹಿಂಬದಿಯ ಸ್ಥಾನದಲ್ಲಿ ಪರಮನೆಂಟ್ ಲೈಸೆನ್ಸ್ ಹೊಂದಿರುವ ಯಾರನ್ನಾದರೂ ಹೊಂದಿರಲೇಬೇಕು. ಇಲ್ಲದಿದ್ದಲ್ಲಿ, ನಿಮ್ಮ ಓ.ಡಿ ಕ್ಲೇಮ್ ಅನ್ನು ಅಪ್ರೂವ್ ಮಾಡಲಾಗುವುದಿಲ್ಲ.

ಏಕೆ ನೀವು ಡಿಜಿಟ್ ಮೂಲಕ ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸಬೇಕು?

ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ಕ್ಲೇಮ್ ಅನ್ನು ಸಲ್ಲಿಸುವುದು ಹೇಗೆ ?

ನಮ್ಮ OD ಬೈಕ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ ನೀವು ಚಿಂತೆಯಿಂದ ಮುಕ್ತರಾಗಿ ಬದುಕುತ್ತೀರಿ. ಏಕೆಂದರೆ ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೇಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!

ಹಂತ 1

1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಿಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ (self-inspection)ಲಿಂಕ್ ಪಡೆಯಿರಿ. ಸ್ಟೆಪ್ ಬೈ ಸ್ಟೆಪ್ ಮಾರ್ಗದರ್ಶನ ನೀಡಿದಂತೆ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಡ್ಯಾಮೆಜನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ಮರುಪಾವತಿಗಾಗಿ ಅಥವಾ ನಗದುರಹಿತ ಆಯ್ಕೆಗಾಗಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ.

ಡಿಜಿಟ್ ಇನ್ಶೂರೆನ್ಸ್ ಕ್ಲೇಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ಅದನ್ನು ನೀವೀಗ ಕೇಳಿಕೊಳ್ಳುತ್ತಿದ್ದೀರಿ! ಡಿಜಿಟ್‌ನ ಕ್ಲೇಮ್'ಗಳ ವರದಿ ಕಾರ್ಡ್ ಅನ್ನು ಓದಿ

ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕಾಚಾರ

OD ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

 

ತಾಂತ್ರಿಕವಾಗಿ ಹೇಳುವುದಾದರೆ, OD ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದು ಇಲ್ಲಿದೆ:

IDV × [ಪ್ರೀಮಿಯಂ ದರ (ಇನ್ಶೂರೆನ್ಸ್ ಕಂಪನಿಯಿಂದ ನಿರ್ಧಾರಿಸಲಾದ ದರ )] [ಆಡ್-ಆನ್ (ಉದಾ ಎಕ್ಸ್ಟ್ರಾ ಕವರೇಜ್ )] - [ಡಿಸ್ಕೌಂಟ್ & ಬೆನಿಫಿಟ್ಸ್ (. ಉದಾ ನೋ ಕ್ಲೇಮ್ ಬೋನಸ್(NCB)]

ನಿಮ್ಮ OD ಪ್ರೀಮಿಯಂ ಅನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಕುರಿತು ಸಲಹೆಗಳು

ವಾಲಂಟರಿ ಕಡಿತಗಳನ್ನು ಹೆಚ್ಚಿಸಿ: ಕ್ಲೇಮ್‌ಗಳನ್ನು ಇತ್ಯರ್ಥಗೊಳಿಸುವ ಸಮಯದಲ್ಲಿ ನೀವು ಪಾವತಿಸಲು ಆಯ್ಕೆಮಾಡಿದ ಕ್ಲೇಮ್‌ಗಳ ಶೇಕಡಾವಾರು ಪ್ರಮಾಣವನ್ನು ವಾಲಂಟರಿ ಕಡಿತಗಳು  ಸೂಚಿಸುತ್ತವೆ. ನಿಮಗೆ ಸಾಧ್ಯವಾದರೆ, ನಿಮ್ಮ OD ಪ್ರೀಮಿಯಂ ಅನ್ನು ನೇರವಾಗಿ ಕಡಿಮೆ ಮಾಡಲು, ವಾಲಂಟರಿ  ಕಡಿತಗಳನ್ನು ಹೆಚ್ಚಿಸುವ  ಆಯ್ಕೆಯನ್ನು ಮಾಡಬಹುದು.

ಸರಿಯಾದ ಐ.ಡಿ.ವಿ (IDV) ಅನ್ನು ಘೋಷಿಸಿ: ನಿಮ್ಮ OD ಕವರ್ ಅನ್ನು ನೀವು ಡಿಜಿಟ್‌ನೊಂದಿಗೆ ಖರೀದಿಸಿದಾಗ, ನಿಮಗಾಗಿ ಸ್ವಯಂಚಾಲಿತವಾಗಿ ಮಾಡುವ ಬದಲು ನಿಮ್ಮ IDV ಅನ್ನು ಕಸ್ಟಮೈಸ್ ಮಾಡುವ ಅವಕಾಶವನ್ನು ನಾವು ನಿಮಗೇ ನೀಡುತ್ತೇವೆ.  ಇದರೊಂದಿಗೆ,  ಸರಿಯಾದ IDV ಹೇಳಲಾಗಿದೆಯೇ ಎಂದು ನೀವು ಖಚಿತಪಡಿಸಿಕೊಳ್ಳಬಹುದು. ಏಕೆಂದರೆ ಇದು ನಿಮ್ಮ OD ಪ್ರೀಮಿಯಂ ಮತ್ತು ಕ್ಲೇಮ್‌ಗಳ ಸಮಯದಲ್ಲಿ ನೀವು ಸ್ವೀಕರಿಸಬಹುದಾದ ಹಣದ ಮೊತ್ತ, ಎರಡನ್ನೂ ನಿರ್ಧರಿಸುತ್ತದೆ.

ನಿಮ್ಮ ಎನ್.ಸಿ.ಬಿ (NCB) ಅನ್ನು ವರ್ಗಾಯಿಸಲು ಮರೆಯಬೇಡಿ: ಮೊದಲೇ ಹೇಳಿದಂತೆ, ನಿಮ್ಮ ನೋ ಕ್ಲೇಮ್ ಬೋನಸ್‌ನೊಂದಿಗೆ, OD ಪ್ರೀಮಿಯಂನಲ್ಲಿ ನೀವು ರಿಯಾಯಿತಿಯನ್ನು ಪಡೆಯಬಹುದು. ಆದ್ದರಿಂದ, ನಿಮ್ಮ OD ಪಾಲಿಸಿಯನ್ನು ಖರೀದಿಸುವಾಗ ನೀವು ಅದನ್ನು ವರ್ಗಾಯಿಸುತ್ತೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ನಿಮ್ಮ OD ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು

ಓನ್ ಡ್ಯಾಮೇಜಸ್ ಪಾಲಿಸಿಯಲ್ಲಿ, ನಿಮ್ಮ ಬೈಕ್ ಪ್ರೀಮಿಯಂ ಅನ್ನು ಮುಖ್ಯವಾಗಿ ನಿಮ್ಮ ಬೈಕ್‌ನ ಸಿಸಿ ಮತ್ತು ನಿಮ್ಮ ಬೈಕಿನ IDV ಮೂಲಕ ಲೆಕ್ಕ ಹಾಕಲಾಗುತ್ತದೆ ಅದರ ಹೊರತಾಗಿ, ನಿಮ್ಮ ಓನ್ ಡ್ಯಾಮೇಜ್ ಕವರ್ ಪ್ರೀಮಿಯಂ ಅನ್ನು ಲೆಕ್ಕಾಚಾರ ಮಾಡುವಾಗ ಈ ಕೆಳಗಿನ ಅಂಶಗಳನ್ನು ಸಹ ಪರಿಗಣಿಸಲಾಗುತ್ತದೆ:

ಐ.ಡಿ.ವಿ

ನಿಮ್ಮ ಐ.ಡಿ.ವಿಯು ನಿಮ್ಮ ಬೈಕ್‌ನ ಸರಿಯಾದ ಮಾರುಕಟ್ಟೆ ಮೌಲ್ಯವನ್ನು ಸೂಚಿಸುತ್ತದೆ. ಆದ್ದರಿಂದ, ನಿಮ್ಮ ಬೈಕ್‌ನ  OD ಪ್ರೀಮಿಯಂ ಆಧರಿಸಿ, ಇದು ಹೆಚ್ಚು ಅವಲಂಬಿಸಿರುತ್ತದೆ.

ಬೈಕಿನ ಸಿ.ಸಿ

ನಿಮ್ಮ ಬೈಕ್‌ನ ಸಿಸಿಯು ನಿಮ್ಮ ಬೈಕ್‌ನ ವೇಗವನ್ನು ಹಾಗೂ ಅಪಾಯವನ್ನು ನಿರ್ಧರಿಸುತ್ತದೆ. ಆದ್ದರಿಂದ, ನಿಮ್ಮ ಬೈಕ್‌ನ ಸಿ.ಸಿ ಕೂಡ ನಿಮ್ಮ OD ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಸಿಸಿಗೆ ಪ್ರತಿಯಾಗಿ ಹೆಚ್ಚಿನ ಓ.ಡಿ ಪ್ರೀಮಿಯಂ.

ಬೈಕ್ ತಯಾರಿಕೆ ಮತ್ತು ಮಾಡೆಲ್

ನಿಮ್ಮ ಬೈಕ್‌ನ ತಯಾರಿಕೆ ಮತ್ತು ಮಾಡೆಲ್ ನಿಮ್ಮ OD ಪ್ರೀಮಿಯಂ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಿಮ್ಮ ಬೈಕ್ ಹೆಚ್ಚು ಪ್ರೀಮಿಯಂ ಆಗಿದ್ದರೆ, ಅದಕ್ಕೆ ಸರಿಯಾಗಿ ಅದರ OD ಪ್ರೀಮಿಯಂ ಹೆಚ್ಚಾಗುತ್ತದೆ.

ಬೈಕಿನ ವಯಸ್ಸು

ನಿಮ್ಮ ಬೈಕ್ ಹಳೆಯದಾಗಿದ್ದರೆ ಅದಕ್ಕೆ ಪ್ರತಿಯಾಗಿ ಅದರ OD ಪ್ರೀಮಿಯಂ ಕಡಿಮೆ ಆಗುತ್ತದೆ!

ನೋ ಕ್ಲೇಮ್ ಬೋನಸ್

ನೀವು ಈ ಹಿಂದೆ ಸಮಗ್ರ ಬೈಕ್ ಇನ್ಶೂರೆನ್ಸಿನ ಓನ್ ಡ್ಯಾಮೇಜ್ ಕವರ್ ಅನ್ನು ಹೊಂದಿದ್ದರೆ ಮತ್ತು ಇನ್ನೂ ಯಾವುದೇ ಕ್ಲೇಮ್‌ಗಳನ್ನು ಮಾಡಿಲ್ಲದಿದ್ದರೆ, ನಿಮ್ಮ ಪ್ರಸ್ತುತ OD ಪ್ರೀಮಿಯಂ ಮೇಲಿನ ರಿಯಾಯಿತಿಗಾಗಿ ನೀವು ಸಂಗ್ರಹಿಸಿದ ನೋ ಕ್ಲೇಮ್ ಬೋನಸ್  (NCB) ಅನ್ನು ವರ್ಗಾಯಿಸಬಹುದು.

ಆಡ್-ಆನ್‌ಗಳನ್ನು ಆಯ್ಕೆ ಮಾಡಲಾಗಿದೆ

ಪ್ರತಿಯೊಂದು ಆಡ್-ಆನ್ ವಿಭಿನ್ನವಾಗಿದೆ. ಆದ್ದರಿಂದ, ನೀವು ಆಯ್ಕೆಮಾಡುವ ಆಡ್-ಆನ್ ಪ್ರಕಾರ ಮತ್ತು ನೀವು ಆಯ್ಕೆಮಾಡುವ ಆಡ್-ಆನ್‌ಗಳ ಸಂಖ್ಯೆಯನ್ನು ಆಧರಿಸಿ, ಅದಕ್ಕೆ ಅನುಗುಣವಾಗಿ ನಿಮ್ಮ OD ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ.

ಹೋಲಿಕೆ: ಥರ್ಡ್ ಪಾರ್ಟಿ , ಓನ್ ಡ್ಯಾಮೇಜ್ ಮತ್ತು ಸಮಗ್ರ ಬೈಕ್ ಇನ್ಶೂರೆನ್ಸ್

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ಸಮಗ್ರ ಬೈಕ್ ಇನ್ಶೂರೆನ್ಸ್
ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಬೈಕ್ ವಿಮೆಯ ಅತ್ಯಂತ ಮೂಲಭೂತ ರೂಪವಾಗಿದೆ. ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ, ಪ್ರತಿಯೊಬ್ಬ ಬೈಕ್ ಮಾಲೀಕರು ಕಾನೂನುಬದ್ಧವಾಗಿ ವಾಹನ ಓಡಿಸಲು ಕನಿಷ್ಠ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಅನ್ನು ಹೊಂದಿರಬೇಕು ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ಒಂದು ಸ್ವತಂತ್ರ ಬೈಕ್ ಇನ್ಶೂರೆನ್ಸ್ ಪಾಲಿಸಿಯಾಗಿದ್ದು ಅದು ಬೈಕ್‌ನ ಸ್ವಂತ ಹಾನಿ ಮತ್ತು ನಷ್ಟಗಳಿಗೆ ಮಾತ್ರ ರಕ್ಷಣೆ ನೀಡುತ್ತದೆ. ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಮತ್ತು ಓನ್ ಡ್ಯಾಮೇಜ್ ಕವರ್ ಎರಡನ್ನೂ ಒಟ್ಟಿಗೆ ಸೇರಿಸಿ ಮತ್ತು ನೀವು ಸಮಗ್ರ ಬೈಕ್ ಇನ್ಶೂರೆನ್ಸ್ ಹೊಂದುತ್ತೀರಿ. ಇದು ಥರ್ಡ್ ಪಾರ್ಟಿ ಮತ್ತು ನಿಮ್ಮ ಸ್ವಂತ ಬೈಕಿನ ಹಾನಿ ಎರಡನ್ನೂ ಕವರ್ ಮಾಡುತ್ತದೆ.
ಥರ್ಡ್-ಪಾರ್ಟಿ ಹೊಣೆಗಾರಿಕೆಗಳನ್ನು ಒಳಗೊಂಡಿರುವ ಕನಿಷ್ಠ ಬೈಕ್ ಇನ್ಶೂರೆನ್ಸ್ ಹೊಂದುವುದು ಕಾನೂನಿನ ಪ್ರಕಾರ ಖಡ್ಡಾಯವಾಗಿದೆ. ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ಕಾನೂನಿನ ಪ್ರಕಾರ ಖಡ್ಡಾಯವಲ್ಲ, ಆದರೆ ಇದು ಅಂತಿಮವಾಗಿ ಸವಾರರಿಗೆ ಹೆಚ್ಚು ಉಪಯುಕ್ತವಾಗಿದೆ. ಏಕೆಂದರೆ ಇದು ಒಬ್ಬರ ಸ್ವಯಂ ಹಾನಿ ಮತ್ತು ನಷ್ಟಗಳಿಗೆ ರಕ್ಷಣೆ ನೀಡುತ್ತದೆ ಸಮಗ್ರ ಬೈಕ್ ಇನ್ಶೂರೆನ್ಸ್ ಕೂಡ ಖಡ್ಡಾಯವಲ್ಲ ಆದರೆ, ಎಲ್ಲಾ ಸಂಭವನೀಯ ಸನ್ನಿವೇಶಗಳನ್ನು ಒಳಗೊಳ್ಳುವ ಇದೊಂದು ಅತ್ಯುತ್ತಮ ವಿಧದ ಪಾಲಿಸಿಯಾಗಿದೆ.
ಪ್ರತಿ ಬೈಕ್ ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಖರೀದಿಸಲು ಅರ್ಹವಾಗಿದೆ. ಅಸ್ತಿತ್ವದಲ್ಲಿರುವ ಥರ್ಡ್-ಪಾರ್ಟಿ ಬೈಕ್ ವಿಮೆಯನ್ನು ಹೊಂದಿರುವ ಬೈಕ್‌ಗಳು ಮಾತ್ರ ಸ್ವತಂತ್ರವಾದ ಸ್ವಯಂ ಡ್ಯಾಮೇಜ್ ಬೈಕ್ ವಿಮೆಯನ್ನು ಸಹ ಖರೀದಿಸಬಹುದು. ಬೈಕ್ ಹೊಂದಿರುವ ಯಾರಾದರೂ ಸಮಗ್ರ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದಾಗ್ಯೂ, ಒಂದು ಸಮಗ್ರ ಬೈಕ್ ಇನ್ಶೂರೆನ್ಸ್ ಎಲ್ಲದಕ್ಕೂ ಒಳಪಡುವುದರಿಂದ, ನೀವು ಯಾವುದೇ ಇನ್ನೊಂದು ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಅಗತ್ಯವಿಲ್ಲ.
ಇದರ ಜೊತೆ ಯಾವುದೇ ಆಡ್ -ಆನ್'ಗಳು ಲಭ್ಯವಿಲ್ಲ ಆಡ್-ಆನ್'ಗಳು'ಗಳು ಲಭ್ಯವಿದೆ. ಆಡ್ -ಆನ್'ಗಳು ಲಭ್ಯವಿದೆ.

ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ಬಗ್ಗೆ ಕೇಳುವ FAQಗಳು

ನಾನು ಅದೇ ಇನ್ಶೂರೆನ್ಸ್ ಸಂಸ್ಥೆಯಿಂದ ನನ್ನ ಬೈಕ್‌ನ ಓನ್ ಡ್ಯಾಮೇಜ್ ಕವರ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು ಖರೀದಿಸುವ ಅಗತ್ಯವಿದೆಯೇ?

ಇಲ್ಲ, ಅದೇ ಇನ್ಶೂರೆನ್ಸ್ ಸಂಸ್ಥೆಯಿಂದ ನಿಮ್ಮ ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಮತ್ತು ಓನ್ ಡ್ಯಾಮೇಜ್ ಕವರ್ ಅನ್ನು ಖರೀದಿಸುವ ಅಗತ್ಯವಿಲ್ಲ.

ಎಷ್ಟು ವಿಧದ ಬೈಕ್ ಇನ್ಶೂರೆನ್ಸ್ ಪಾಲಿಸಿಗಳು ಲಭ್ಯವಿದೆ?

ಎಷ್ಟು ವಿಧದ ಬೈಕ್ ಇನ್ಶೂರೆನ್ಸ್ ಪಾಲಿಸಿಗಳು ಲಭ್ಯವಿದೆ?

ಯಾರು ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸಲು ಅರ್ಹರು?

ಅಸ್ತಿತ್ವದಲ್ಲಿರುವ 'ಥರ್ಡ್-ಪಾರ್ಟಿ ಮಾತ್ರ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು'ಹೊಂದಿರುವ ಯಾರಾದರೂ ತಮ್ಮ ಸ್ವಂತ ಬೈಕ್‌ನ ನಷ್ಟವನ್ನು ಸರಿದೂಗಿಸಲು ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ಅನ್ನು ಪಡೆಯಲು ಅರ್ಹರಾಗಿರುತ್ತಾರೆ.

ಓ.ಡಿ ಕವರ್ ವೈಯಕ್ತಿಕ ಅಪಘಾತವನ್ನೂ ಒಳಗೊಂಡಿರುತ್ತದೆಯೇ?

ಪ್ರತಿ ಬೈಕ್ ಮಾಲೀಕರಿಗೆ ಪರ್ಸನಲ್ ಆಕ್ಸಿಡೆಂಟ್ ಕವರ್ ಖಡ್ಡಾಯವಾಗಿದೆ. ಇದನ್ನು ಸಾಮಾನ್ಯವಾಗಿ ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಜೊತೆ ಖರೀದಿಸಲಾಗುತ್ತದೆ. ನೀವು ಯಾವುದನ್ನು ಹೊಂದಿಲ್ಲದಿದ್ದರೆ, ನಿಮ್ಮ OD ಕವರ್‌ನಲ್ಲಿಯೂ ನೀವು ಅದನ್ನು ಆಯ್ಕೆ ಮಾಡಬಹುದು.

ಕಾನೂನಿನ ಪ್ರಕಾರ ಯಾವ ಬೈಕ್ ಇನ್ಶೂರೆನ್ಸ್ ಖಡ್ಡಾಯವಾಗಿದೆ?

ಮೋಟಾರ್ ವೆಹಿಕಲ್ ಆಕ್ಟ್  ಪ್ರಕಾರ, ಪ್ರತಿಯೊಬ್ಬ ಬೈಕ್ ಮಾಲೀಕರು ಕನಿಷ್ಠ ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಅನ್ನು ಹೊಂದಿರಬೇಕು. ಇದು ಇಲ್ಲದೆಯೇ ಭಾರತೀಯ ರಸ್ತೆಗಳಲ್ಲಿ ವಾಹನ ಓಡಿಸುವುದು  ಕಾನೂನುಬಾಹಿರವಾಗಿದೆ ಮತ್ತು ಟ್ರಾಫಿಕ್ ಪೆನಾಲ್ಟಿಗೆ ಕಾರಣವಾಗಬಹುದು.