Third-party premium has changed from 1st June. Renew now
ಟು ವೀಲರ್ ವಾಹನದಲ್ಲಿ ಆಡ್-ಆನ್ ಕವರ್ ಎಂದರೇನು?
ಹೆಚ್ಚಾಗಿ ನಾವು ನಮ್ಮ ನೆಚ್ಚಿನ ಟು ವೀಲರ್ ವಾಹನಕ್ಕಾಗಿ ‘ಕಾಂಪ್ರೆಹೆನ್ಸಿವ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್’ ಇದ್ದ ಮಾತ್ರಕ್ಕೆ ಖುಷಿಪಡುತ್ತೇವೆ, ಕಾರಣ, ಅದು ನಮ್ಮ ಎಲ್ಲಾ ಇನ್ಶೂರೆನ್ಸ್ ಅಗತ್ಯಗಳನ್ನು ಪೂರೈಸುತ್ತದೆ ಎಂಬ ನಂಬಿಕೆ. ಆದರೆ ಇದು ನಿಜವೇ?
ಸರಿ, ಹೀಗೆ ಅರ್ಥಮಾಡಿಕೊಳ್ಳೋಣ. ನೀವು ಹೇಗಿದ್ದರೂ ರುಚಿಕರವಾಗಿಯೇ ಇರುವ ನಿಮ್ಮ ನೆಚ್ಚಿನ ಪಿಜ್ಜಾ ಆರ್ಡರ್ ಮಾಡಿದ್ದೀರಿ. ಆದರೆ ನೀವು, ಇನ್ನಷ್ಟು ಆಲಿವ್ ಗಳು, ಕೆಲ ಪೆಪ್ಪರ್ ಗಳು ಅಥವಾ ಸ್ವಲ್ಪ ಟಬಾಸ್ಕೋ ಸಾಸ್ ನಂತಹ, ನಿಮ್ಮ ಆಯ್ಕೆಯ ಹೆಚ್ಚುವರಿ ಟಾಪಿಂಗ್ ಗಳನ್ನು ಸೇರಿಸಿದರೆ ಅದು ಇನ್ನೂ ಉತ್ತಮ ರುಚಿ ನೀಡುತ್ತದೆ? ಈಗ, ನಿಮ್ಮ ಬಾಯಲ್ಲಿ ನೀರೂರುತ್ತಿದೆ, ಅಲ್ಲವೇ!😊
ನಿಮ್ಮ ಟು ವೀಲರ್ ವಾಹನದ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ವಿಷಯದಲ್ಲೂ ಹೀಗೇ. ಇನ್ಶೂರೆನ್ಸ್ ಕಂಪನಿಗಳು ನಿಮ್ಮ ಆಯ್ಕೆಗಾಗಿ ಆಡ್-ಆನ್ ಗಳ ಸಾಲನ್ನೇ ನೀಡುತ್ತಾರೆ. ಇದನ್ನು ನೀವು ಆರಿಸಿ ನಿಮ್ಮ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಅನ್ನು ಇನ್ನಷ್ಟು ಕಾಂಪ್ರೆಹೆನ್ಸಿವ್ ಆಗಿ ಮಾಡಬಹುದು!
ಆದ್ದರಿಂದಲೇ, ನಿಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಗಾಗಿ ನಾವು ಶಿಫಾರಸು ಮಾಡುವ ಆಡ್-ಆನ್ ಕವರ್‌ಗಳು ಇಲ್ಲಿವೆ. ಆದರೆ ಗಮನಿಸಿ, ಈ ಆಡ್-ಆನ್ ಗಳು ನಿಮ್ಮ ಬೇಸಿಕ್ ಇನ್ಶೂರೆನ್ಸ್ ಪಾಲಿಸಿ ಮೇಲೆ ಒಂದು ಕ್ಷುಲ್ಲಕ ಪ್ರೀಮಿಯಂ ನೊಂದಿಗೆ ಬರುತ್ತವೆ. ಆದರೆ ಚಿಂತಿಸಬೇಡಿ, ಇದು ನಿಮ್ಮ ಜೇಬಿಗೆ ಕನ್ನವನ್ನು ಹಾಕುವುದಿಲ್ಲ, ಹಾಗೂ ನಿಮ್ಮ ಹಣಕ್ಕೆ ಮೌಲ್ಯವಾಗಿದೆ!
ಸೂಚನೆ : ಆಡ್-ಆನ್ ಗಳೊಂದಿಗಿನ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕ್ಯಾಲ್ಕುಲೇಟ್ ಮಾಡಲು ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಬಳಸಿ.
ಡಿಜಿಟ್ ನ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಆಡ್-ಆನ್ ಗಳು
ಹೆಚ್ಚಿನ ಕೇಸ್ ಗಳಲ್ಲಿ, ಅಪಘಾತದ ನಂತರ, ಡೆಪ್ರಿಸಿಯೇಷನ್ ಹಾಗೂ ಹೊಸ ಬಿಡಿ ಭಾಗಗಳ ಅಳವಡಿಕೆಗೆ ಬೈಕ್ ಮಾಲೀಕರೇ ಪಾವತಿ ಮಾಡುತ್ತಾರೆ. ಆದರೆ, ಒಬ್ಬರಿಗೆ ಈ ವೆಚ್ಚವು ಅವರ ಇನ್ಶೂರೆನ್ಸ್ ಕಂಪನಿ ಕವರ್ ಮಾಡಬೇಕೆಂದಿದ್ದರೆ, ಅವರು ನಿಲ್ ಅಥವಾ ಝೀರೋ ಡೆಪ್ರಿಸಿಯೇಷನ್ ಆಡ್- ಆನ್ ಅನ್ನು ಖರೀದಿಸಿ ಅವರ ಪ್ರಸ್ತುತ ಇನ್ಶೂರೆನ್ಸ್ ಯೋಜನೆಯ ಜೊತೆ ಈ ಕವರ್ ನ ಲಾಭಗಳನ್ನೂ ಪಡೆಯಬಹುದಾಗಿದೆ.
ರೋಡ್ಸೈಡ್ ಅಸಿಸ್ಟೆನ್ಸ್ ಅಥವಾ ರಸ್ತೆಬದಿಯ ನೆರವು ಆಡ್-ಆನ್ ನಿಮಗೆ ನಿಮ್ಮ ಟು ವೀಲರ್ ವಾಹನಕ್ಕೆ ರಸ್ತೆಯಲ್ಲಿ ನೆರವು ಬೇಕಾದಾಗ ಸಹಾಯ ಮಾಡುತ್ತದೆ. ಈ ಸೇವೆಯು ಹಲವು ಲಾಭಗಳನ್ನು ಒದಗಿಸುತ್ತದೆ; ನಿಮ್ಮ ಬೈಕ್ ಅನ್ನು ಸ್ಥಳದಲ್ಲೇ ರಿಪೇರಿ ಮಾಡುವುದರಿಂದ ಹಿಡಿದು ಟೋವಿಂಗ್ ಅಥವಾ ನೀವು ತಲುಪಬೇಕಾಗಿದ್ದಲ್ಲಿಗೆ ಟ್ಯಾಕ್ಸಿ ಸೇವೆಯನ್ನು ಒದಗಿಸುವವರೆಗೆ. ನಗರ ಮಧ್ಯದ 500 ಕಿಮಿ ರೇಡಿಯಸ್ ಒಳಗಡೆ ನೀವು ಎಲ್ಲಿ ಸಿಕ್ಕಿಬಿದ್ದಿದ್ದರೂ ನಾವು ರಸ್ತೆಬದಿಯ ನೆರವನ್ನು ಒದಗಿಸುತ್ತೇವೆ.
ಕ್ಲೈಮ್ ಗಳ ಸಮಯದಲ್ಲಿ, ಸಾಮಾನ್ಯವಾಗಿ ಬಳಕೆ ವಸ್ತುಗಳಾದ ಒಇಲ್, ನಟ್, ಬೋಲ್ಟ್ ಇತ್ಯಾದಿಗಳು ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗಿ ಇರುವುದಿಲ್ಲ. ಈ ಆಡ್-ಆನ್ ನೊಂದಿಗೆ ನೀವು ಈ ಬಳಕೆಯ ವಸ್ತುಗಳ ಮೇಲೆ ಉಳಿತಾಯ ಮಾಡಬಹುದು, ಅವುಗಳು ಎಷ್ಟೇ ಸಣ್ಣದಾಗಿದ್ದರೂ ಕೂಡಾ! ಈ ಆಡ್-ಆನ್, ಅಪಘಾತದಿಂದಾಗಿ ಬಳಕೆಗೆ ಯೋಗ್ಯವಾಗಿರದ ಉಪಭೋಗ್ಯ ವಸ್ತುಗಳ ವೆಚ್ಚಗಳನ್ನು ಕವರ್ ಮಾಡುತ್ತದೆ.
ಒಂದು ಸ್ಟಾಂಡರ್ಡ್ ಟು ವೀಲರ್ -ವೆಹಿಕಲ್ ಪಾಲಿಸಿಯಲ್ಲಿ, ಅಪಘಾತದಿಂದಾದ ಹಾನಿಗಳನ್ನು ಮಾತ್ರ ಕವರ್ ಮಾಡಲಾಗುತ್ತದೆ. ಆದರೆ ಹಲವು ಬಾರಿ, ಅಪಘಾತದ ನಂತರ, ನಿಮ್ಮ ಎಂಜಿನ್ ಕೂಡಾ ಪರಿಣಾಮಕ ಹಾನಿಗಳನ್ನು ಅನುಭವಿಸುತ್ತಿರಬಹುದು. ಇಂತಹ ಹಾನಿಗಳಿಂದ ಸಂರಕ್ಷಣೆ ಪಡೆಯಲು ಈ ಆಡ್-ಆನ್ ಸಹಾಯ ಮಾಡುತ್ತದೆ. ಉದಾಹರಣೆಗೆ ಲ್ಯೂಬ್ರಿಕೇಟಿಂಗ್ ತೈಲದ ಲೀಕೇಜ್ ನಿಂದಾದ ಅಥವಾ ಕೆಲವು ಬಾರಿ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಎಂಜಿನ್ ನೊಳಗೆ ನೀರು ಹೊಕ್ಕಿದಾಗ ಆಗುವಂತಹ ಹಾನಿ.
ಇದು ಬಹುಶಃ ಮೋಟಾರ್ ಮಾಲೀಕನ ಅತೀ ಕೆಟ್ಟ ದುಸ್ವಪ್ನವಾಗಿದೆ- ನಿಮ್ಮ ಬೈಕ್ ರಿಪೇರಿಗೂ ಮೀರಿದ ಹಾನಿಗೊಳಗಾದಾಗ! ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಭೀಕರ ದುರ್ಘಟನೆಯಲ್ಲಿ ಸಂಪೂರ್ಣವಾಗಿ ನಷ್ಟ. ಅದೃಷ್ಟವಶಾತ್ ಇಂತಹ ವಿಪರೀತ ಪ್ರಕರಣದಲ್ಲಿ ಒಂದಷ್ಟು ಸಮಧಾನಕರ ವಿಷಯವಿದೆ. ಇನ್ಶೂರೆನ್ಸ್ ಕಂಪನಿಗಳು, ಇನ್ವಾಯ್ಸ್ ನಲ್ಲಿ ಉಲ್ಲೇಖಿಸಲಾದ ಸಂಪೂರ್ಣ ಮೌಲ್ಯ/ಮೊತ್ತವನ್ನು ಮರುಪಾವತಿಸುತ್ತಾರೆ.
ನಿಮ್ಮ ಟು ವೀಲರ್ ವೆಹಿಕಲ್ ನ ಟೈರ್ ಹಾನಿಗೊಳಗಾದ ಸಂದರ್ಭದಲ್ಲಿ ಈ ಆಡ್-ಆನ್ ಕವರ್ ನಿಮಗೆ ಸಹಾಯ ಮಾಡುತ್ತದೆ. ಈ ಕವರ್ ಹಾನಿಗೊಳಗಾದ ಟೈರ್ ಅನ್ನು ಅಂತಹದ್ದೇ ಹೊಸದರೊಂದಿಗೆ ಬದಲಾಯಿಸಲು ತಗಲುವ ವೆಚ್ಚವನ್ನು ಮರುಪಾವತಿಸುತ್ತದೆ ಮತ್ತು ವೀಲ್ ನ ಸಮತೋಲನಕ್ಕಾಗಿ ಶುಲ್ಕಗಳು ಮತ್ತು ಟೈರ್ ಅನ್ನು ಬದಲಿಸಲು ತಗಲುವ ಕಾರ್ಮಿಕರ ವೆಚ್ಚವನ್ನು ಮರುಪಾವತಿಸುತ್ತದೆ.
ಈ ಆಡ್-ಆನ್ ಕವರ್ ಪ್ರಕಾರ, ಡಿಜಿಟ್ ಪಾಲಿಸಿ ಹೋಲ್ಡರ್ ನಿಗೆ ನಿಗದಿತ ಭತ್ಯೆಯನ್ನು ಪಾವತಿಸುತ್ತದೆ ಅಥವಾ ರಿಪೇರಿ ಮಾಡುವಾಗ ವೆಹಿಕಲ್ ಲಭ್ಯತೆಯಿಲ್ಲದ ಕಾರಣ ಗೊತ್ತಿರುವ ಟ್ಯಾಕ್ಸಿ ಆಪರೇಟರ್‌ಗಳಿಂದ ಕೂಪನ್‌ಗಳನ್ನು ನೀಡುತ್ತದೆ. ಟು ವೀಲರ್ ವೆಹಿಕಲ್ ಗೆ ಆಕ್ಸಿಡೆಂಟಲ್ ಡ್ಯಾಮೇಜ್ ಕ್ಲೈಮ್ ಅನ್ನು ಇನ್ಶೂರೆನ್ಸ್ ಪಾಲಿಸಿಯ 'ಓನ್ ಡ್ಯಾಮೇಜ್' ಅಡಿಯಲ್ಲಿ ಸಲ್ಲಿಸಿದ್ದರೆ ಮಾತ್ರ ಇದು ಅನ್ವಯಿಸುತ್ತದೆ.
ಅಂತಿಮವಾಗಿ, ಆಡ್-ಆನ್ ಕವರ್ ಗಳೊಂದಿಗೆ ನೀವು ಸಂಪೂರ್ಣ ನೆಮ್ಮದಿಯಿಂದ ರೈಡ್ ಮಾಡಬಲ್ಲಿರಿ. ಏಕೆಂದರೆ ನೀವು ಸುರಕ್ಷಿತ ಮಾತ್ರವಲ್ಲ, ಸೂಪರ್-ಸುರಕ್ಷಿತವಾಗಿದ್ದೀರಿ😊!