Third-party premium has changed from 1st June. Renew now
ಆಟೋ ರಿಕ್ಷಾ ಇನ್ಶೂರೆನ್ಸ್ ಎಂದರೇನು?
ಹೆಸರೇ ಹೇಳುವ ಹಾಗೆ, ಆಟೋ ರಿಕ್ಷಾ ಇನ್ಶೂರೆನ್ಸ್ ಭಾರತದ ಥ್ರೀ ವೀಲರ್ ವಾಹನವನ್ನು ಸಂರಕ್ಷಿಸಲು ಹಾಗೂ ಅದರ ಅಗತ್ಯಗಳಿಗೆ ಹೋಂದಲು ರಚಿಸಲಾದ ಒಂದು ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಾಗಿದೆ. ಎಲ್ಲಾ ಆಟೋ ಮಾಲಕರಿಗೆ ಥರ್ಡ್ ಪಾರ್ಟೀ ಹೊಣೆಗಾರಿಕೆಗಳಿಂದ ಆರ್ಥಿಕ ರಕ್ಷಿಣೆ ಪಡೆಯಲು, ಕನಿಷ್ಠ ಪಕ್ಷ ಒಂದು ಥರ್ಡ್ ಪಾರ್ಟೀ ಆಟೋ ರಿಕ್ಷಾ ಇನ್ಶೂರೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ, ಅಥವಾ ನೀವು ಅಪಘಾತಗಳು, ಢಿಕ್ಕಿ, ನೈಸರ್ಗಿಕ ವಿಪತ್ತು, ಬೆಂಕಿ ಹಾಗೂ ಇತರ ದುರ್ಘಟನೆಗಳಿಂದ ಆದ ಸ್ವಂತ ಹಾನಿಗಳನ್ನು ಕವರ್ ಮಾಡಲು ಕಾಂಪ್ರೆಹೆನ್ಸಿವ್ ಆಟೋ ರಿಕ್ಷಾ ಪಾಲಿಸಿಯನ್ನು ಹೊಂದಿದ್ದರೆ ಅದು ಇನ್ನೂ ಉತ್ತಮ.
ಡಿಜಿಟ್ ಇನ್ಶೂರೆನ್ಸ್ ಆಟೋ ಮಾಲಕರಿಗೆ ಈ ಎರಡೂ ಪಾಲಿಸಿಗಳನ್ನು, ಕೈಗೆಟಕುವ, ಕಸ್ಟಮೈಜ್ಡ್(ನಿಮಗೆ ತಕ್ಕಂತೆ ತಯಾರಿಸಿದ) ಪ್ರೀಮಿಯಮ್ ದರಗಳಲ್ಲಿ ಒದಗಿಸುತ್ತೆದೆ.
ನಾನು ಆಟೋ ರಿಕ್ಷಾ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?
- ನೀವು ಅಥವಾ ನಿಮ್ಮ ಸಂಸ್ಥೆ ಆಟೋ ರಿಕ್ಷಾಗಳನ್ನು ಹೊಂದಿದ್ದರೆ, ಕನಿಷ್ಠ ಪಕ್ಷ ಒಂದು ಲಯಾಬಿಲಿಟಿ ಓನ್ಲಿ(ಹೊಣೆಗಾರಿಕೆ ಮಾತ್ರದ) ಪಾಲಿಸಿಯನ್ನಾದರೂ ಖರೀದಿಸುವುದು ಕಾನೂನಾತ್ಮಕವಾಗಿ ಕಡ್ಡಾಯವಾಗಿರುತ್ತದೆ. ಇದು, ನಿಮ್ಮ ರಿಕ್ಷಾ(ಗಳು) ಥರ್ಡ್ ಪಾರ್ಟೀ ಸ್ವತ್ತು, ವ್ಯಕ್ತಿ ಅಥವಾ ವಾಹನಕ್ಕೆ ಹಾನಿ ಮಾಡಿದ್ದಲ್ಲಿ, ನಿಮ್ಮನ್ನು ಹಾಗೂ ನಿಮ್ಮ ಉದ್ಯಮವನ್ನು ಆರ್ಥಿಕವಾಗಿ ಕವರ್ ಮಾಡಿತ್ತದೆ.
- ನೀವು ನಿಮ್ಮ ಆಟೋ ರಿಕ್ಷಾವನ್ನು ನಿಮ್ಮ ವ್ಯವಹಾರದ ಪ್ರಾಥಮಿಕ ಭಾಗವಾಗಿ ಬಳಸುತ್ತಿದ್ದಲ್ಲಿ, ನೀವು ಸ್ಟಾಂಡರ್ಡ್ ಅಥವಾ ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿಯನ್ನು ಖರೀದಿಸಬೇಕೆಂದು ನಾವು ಸಲಹೆ ನೀಡುತ್ತೇವೆ ಯಾಕೆಂದರೆ ಇದು ನಿಮ್ಮ ಆಟೋ ಮತ್ತು ಆಟೋ ಮಾಲಕ-ಚಾಲಕನನ್ನು ಪ್ರಕೃತಿ ವಿಪತ್ತು, ಅಪಘಾತಗಳು, ಉಗ್ರ ಚಟುವಟಿಕೆಗಳು, ಬೆಂಕಿ, ಕಳವು, ದುಷ್ಕೃತ್ಯಗಳಂತಹ ಎಲ್ಲಾ ಅನಿರೀಕ್ಷಿತ ಘಟನೆಗಳಿಂದ ಸಂರಕ್ಷಿಸುತ್ತದೆ.
- ಒಂದು ಮಾನ್ಯ ಇನ್ಶೂರೆನ್ಸ್ ಹೊಂದಿರುವ ಆಟೋ ರಿಕ್ಷಾ, ನೀವು ಒಂದು ಜವಾಬ್ದಾರ ವ್ಯವಹಾರಿಯಾಗಿದ್ದು ತಮ್ಮ ಕೆಲಸವನ್ನು ಗಂಭೀರವಾಗಿ ಪರಿಗಣಿಸುತ್ತೀರಿ ಎಂದು ಗ್ರಾಹಕರಿಗೆ/ಪ್ರಯಾಣಿಕರಿಗೆ ಮನವರಿಕೆ ಮಾಡುತ್ತದೆ.
- ಒಂದು ಇನ್ಶೂರ್ಡ್ ಆಟೋ ರಿಕ್ಷಾವು ನಿಮ್ಮ ಉದ್ಯಮದಲ್ಲಿ ಯಾವುದೇ ಅನಿರೀಕ್ಷಿತ ಹಾನಿ ಅಥವಾ ನಷ್ಟ ಆಗದಂತೆ ಖಚಿತಪಡಿಸುತ್ತದೆ, ಇದರರ್ಥ ನೀವು ನಿಮ್ಮ ಸಮಯ ಹಾಗೂ ಹಣವನ್ನು ನಿಮ್ಮ ವ್ಯವಹಾರದ ಇತರ ವಿಭಾಗಗಳಲ್ಲಿ ವ್ಯಯಿಸಬಹುದು.
ಡಿಜಿಟ್ ನ ಆಟೋ ರಿಕ್ಷಾ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಬೇಕು?
ಆಟೋ ರಿಕ್ಷಾ ಇನ್ಶೂರೆನ್ಸ್ ನಲ್ಲಿ ಏನೆಲ್ಲ ಕವರ್ ಆಗಿರುತ್ತದೆ?
ಏನೆಲ್ಲಾ ಕವರ್ ಆಗಿರುವುದಿಲ್ಲ?
ನಿಮ್ಮ ಆಟೋ ರಿಕ್ಷಾ ಪಾಲಿಸಿಯಲ್ಲಿ ಏನೆಲ್ಲಾ ಕವರ್ ಆಗಿರುವುದಿಲ್ಲ ಎಂದು ತಿಳಿಯುವುದು ಅಷ್ಟೇ ಮುಖ್ಯ ಯಾಕೆಂದರೆ ಕ್ಲೈಮ್ ಮಾಡುವ ಸಮಯದಲ್ಲಿ ನಿಮಗೆ ಯಾವುದೇ ರೀತಿಯ ಆಶ್ಚರ್ಯವಾಗಬಾರದು. ಈ ಕೆಳಗೆ ಇಂತಹ ಕೆಲವು ಸಂದರ್ಭಗಳನ್ನು ನೀಡಲಾಗಿದೆ:
ಥರ್ಡ್ ಪಾರ್ಟೀ ಹೊಣೆಗಾರಿಕೆ ಮಾತ್ರದ ಪಾಲಿಸಿಯ ಸಂದರ್ಭದಲ್ಲಿ, ನಿಮ್ಮ ಸ್ವಂತ ವಾಹನಕ್ಕಾದ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ.
ಇನ್ಶೂರ್ಡ್ ಆಟೋ ರಿಕ್ಷಾದ ಚಾಲಕ-ಮಾಲಕ ಕುಡಿದ ಮತ್ತಿನಲ್ಲಿ ಅಥವಾ ಪರವಾನಿಗೆ ಇಲ್ಲದೆ ವಾಹನ ಚಲಾಯಿಸುತ್ತಿದ್ದರೆ
ಚಾಲಕ-ಮಾಲಕನಿಂದಾದ ಸಹಾಯಕ ನಿರ್ಲಕ್ಷ್ಯತೆಯಿಂದಾದ ಯಾವುದೇ ರೀತಿಯ ಹಾನಿ(ಉದಾಹರಣೆಗೆ ಪ್ರವಾಹ ಸ್ಥಿತಿಯ ಸಂದರ್ಭದಲ್ಲಿ ವಾಹನ ಚಲಾಯಿಸುವುದು)
ಅಪಘಾತ/ನೈಸರ್ಗಿಕ ವಿಪತ್ತು ಇತ್ಯಾದಿಗಳ ನೇರ ಪರಿಣಾಮವಾಗಿರದ ಯಾವುದೇ ರೀತಿಯ ಹಾನಿಗಳು.
ಡಿಜಿಟ್ ನ ಆಟೋ ರಿಕ್ಷಾ ಇನ್ಶೂರೆನ್ಸ್ ನ ಪ್ರಮುಖ ವೈಶಿಷ್ಠ್ಯಗಳು
ಪ್ರಮುಖ ವೈಷಿಷ್ಠ್ಯಗಳು | ಡಿಜಿಟ್ ಲಾಭಗಳು |
---|---|
ಕ್ಲೈಮ್ ಪ್ರಕ್ರಿಯೆ | ಕಾಗದರಹಿತ ಕ್ಲೈಮ್ ಗಳು |
ಗ್ರಾಹಕ ಬೆಂಬಲ | 24x7 ಗ್ರಾಹಕ ಬೆಂಬಲ |
ಹೆಚ್ಚುವರಿ ಕವರೇಜ್ | ಪಿಎ ಕವರ್ ಗಳು, ಕಾನೂನುಬದ್ಧ ಹೊಣೆಗಾರಿಕೆ ಕವರ್, ವಿಶೇಷ ಹೊರಪಡಿಕೆ ಮತ್ತು ಕಡ್ಡಾಯ ಕಡಿತಗಳು ಇತ್ಯಾದಿ |
ಥರ್ಡ್ ಪಾರ್ಟೀಗೆ ಆದ ಹಾನಿ | ವಯಕ್ತಿಕ ಹಾನಿಗಳಿಗೆ ಅನಿಯಮಿತ ಹೊಣೆಗಾರಿಕೆ, ಸ್ವತ್ತು/ವಾಹನ ಹಾನಿಗಳಿಗೆ 7.5 ಲಕ್ಷದ ವರೆಗಿನ ಮೊತ್ತ |
ಆಟೋ ರಿಕ್ಷಾ ಇನ್ಶೂರೆನ್ಸ್ ಯೋಜನೆಗಳ ಪ್ರಕಾರಗಳು11
ನಿಮ್ಮ ಥ್ರೀ ವೀಲರ್ ವಾಹನದ ಅಗತ್ಯಗಳನ್ನು ಆಧಾರವನ್ನಾಗಿರಿಸಿ, ನಾವು ಪ್ರಾಥಮಿಕವಾಗಿ ಎರಡು ಪಾಲಿಸಿಗಳನ್ನು ಒದಗಿಸುತ್ತೇವೆ. ಆದರೆ, ಯಾವುದೇ ವಾಣಿಜ್ಯ ವಾಹನಕ್ಕೆ ಉಂಟಾಗಬಹುದಾದ ಅಪಾಯದ ಪ್ರಮಾಣ ಹಾಗೂ ಹೆಚ್ಚು ಬಳಕೆಯನ್ನು ಪರಿಗಣಿಸಿ, ನಿಮ್ಮ ರಿಕ್ಷಾದ ಜೊತೆ ಚಾಲಕ - ಮಾಲಕನನ್ನೂ ಆರ್ಥಿಕವಾಗಿ ಸಂರಕ್ಷಿಸುವ ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿಯನ್ನು ಕೊಳ್ಳುವುದೇ ಸೂಕ್ತವಾಗಿರುತ್ತದೆ ಎಂಬ ಸಲಹೆಯನ್ನು ನಾವು ನೀಡುತ್ತೇವೆ
ಹೊಣೆಗಾರಿಕೆ ಮಾತ್ರ | ಸ್ಟಾಂಡರ್ಡ್ ಪ್ಯಾಕೇಜ್ |
ಯಾವುದೇ ಥರ್ಡ್ ಪಾರ್ಟೀ ವ್ಯಕ್ತಿ ಅಥವಾ ಸ್ವತ್ತಿಗೆ ನಿಮ್ಮ ಆಟೋ ರಿಕ್ಷಾದಿಂದ ಉಂಟಾದ ಹಾನಿ |
|
ಯಾವುದೇ ಥರ್ಡ್ ಪಾರ್ಟೀ ವಾಹನಕ್ಕೆ ನಿಮ್ಮ ಆಟೋ ರಿಕ್ಷಾದಿಂದ ಉಂಟಾದ ಹಾನಿ |
|
ನೈಸರ್ಗಿಕ ವಿಪತ್ತು, ಬೆಂಕಿ, ಕಳವು ಅಥವಾ ಅಪಘಾತಗಳಿಂದ ನಿಮ್ಮ ಸ್ವಂತ ಆಟೋ ರಿಕ್ಷಾಗಾದ ಹಾನಿ ಅಥವಾ ನಷ್ಟ |
|
ಚಾಲಕ-ಮಾಲಕನಿಗೆ ಗಾಯ/ಸಾವುIf the owner-driver doesn’t already have a Personal Accident cover in his name |
|
Get Quote | Get Quote |
ಕ್ಲೈಮ್ ಮಾಡುವುದು ಹೇಗೆ?
1800-258-5956 ಸಂಖ್ಯೆ ಮೂಲಕ ನಮಗೆ ಕರೆ ಮಾಡಿ ಅಥವಾ hello@godigit.com ಗೆ ಇ - ಮೇಲ್ ಕಳಿಸಿರಿ.
ನಮ್ಮ ಪ್ರಕ್ರಿಯೆಯನ್ನು ಸರಳಗೊಳಿಸಲು ನಿಮ್ಮ ವಿವರಗಳಾದ ಪಾಲಿಸಿ ಸಂಖ್ಯೆ, ಅಪಘಾತ ನಡೆದ ಸ್ಥಳ, ಅಪಘಾತದ ದಿನಾಂಕ ಹಾಗೂ ಸಮಯ, ಮತ್ತು ಇನ್ಶೂರ್ಡ್ ವ್ಯಕ್ತಿ/ಕರೆ ಮಾಡಿದವರ ಸಂಪರ್ಕ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳಿ.
ನಮ್ಮ ಗ್ರಾಹಕರು ನಮ್ಮ ಬಗ್ಗೆ ಏನು ಹೇಳುತ್ತಾರೆ
ಡಿಜಿಟ್ ಇನ್ಶೂರೆನ್ಸ್ ನೊಂದಿಗೆ ನನ್ನ ವಾಹನದ ಇನ್ಶೂರೆನ್ಸ್ ಅನ್ನು ಪಡೆಯುವ ನನ್ನ ಅನುಭವ ಅದ್ಭುತವಾಗಿತ್ತು. ಇದು ಗ್ರಾಹಕ ಸ್ನೇಹಿಯಾಗಿದ್ದು ಸೂಕ್ತ ತಂತ್ರಜ್ಞಾನವನ್ನು ಒಳಗೊಂಡಿದೆ. ಯಾವ ವ್ಯಕ್ತಿಯನ್ನೂ ದೈಹಿಕವಾಗಿ ಭೇಟಿಯಾಗದೆಯೇ ನನ್ನ ಕ್ಲೈಮ್ ಪ್ರಕ್ರಿಯೆ 24 ಘಂಟೆಗಳೊಳಗಡೆ ಪೂರ್ಣವಾಯಿತು. ಗ್ರಾಹಕ ಕೇಂದ್ರಗಳು ನನ್ನ ಕರೆಗಳನ್ನು ಚೆನ್ನಾಗಿ ನಿರ್ವಹಿಸಿದರು. ನನ್ನ ಕೇಸ್ ಅನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ ಶ್ರೀ ರಾಮರಾಜು ಕೊಂಧಾನ ಅವರಿಗೆ ನನ್ನ ವಿಶೇಷ ಮನ್ನಣೆಯಿದೆ.
ಅತೀ ಹೆಚ್ಚು ಐಡಿವಿ ಮೊತ್ತವನ್ನು ಡಿಕ್ಲೇರ್ ಮಾಡಿದ ಇದೊಂದು ಶ್ರೇಷ್ಠ ಇನ್ಶೂರೆನ್ಸ್ ಕಂಪೆನಿಯಾಗಿದೆ. ಇಲ್ಲಿನ ನೌಕರರು ಸಭ್ಯರಾಗಿದ್ದು ಈ ಬಗ್ಗೆ ನನಗೆ ನಿರಾಳತೆ ಇದೆ. ವಿಶೇಷವಾಗಿ ಉವೈಸ್ ಖಾನ್ ಅವರು ನನಗೆ ಸರಿಯಾದ ಸಮಯದಲ್ಲಿ ವಿಭಿನ್ನ ಕೊಡುಗೆಗಳ ಹಾಗೂ ಲಾಭಗಳ ಬಗ್ಗೆ ಅರಿವು ಮೂಡಿಸಿದ್ದರಿಂದ ನನಗೆ ಕೇವಲ ಡಿಜಿಟ್ ಇನ್ಶೂರೆನ್ಸ್ ಕೊಳ್ಳಬೇಕು ಎಂಬ ಮನವರಿಕೆಯಾಯಿತು ಹಾಗೂ ಇನ್ನು ಮುಂದೆ ಕೂಡಾ ನನ್ನ ಇತರ ವಾಹನಗಳಿಗೆ ಡಿಜಿಟಿನ್ಶೂರೆನ್ಸ್ ಅನ್ನೇ ಬಳಸುತ್ತೇನೆ ಕಾರಣ ಇದರ ಉತ್ತಮ ದರ ಹಾಗೂ ಸೇವೆ.
ಗೊ - ಡಿಜಿಟ್ ನಲ್ಲಿ ನನ್ನ 4 ನೇ ವಾಹನದ ಇನ್ಶೂರೆನ್ಸ್ ಕೊಳ್ಳುವುದು ಒಂದು ಒಳ್ಳೆಯ ಅನುಭವವಾಗಿತ್ತು. ಮಿಸ್ ಪೂನಮ್ ದೇವಿಯವರು ಉತ್ತಮ ರೀತಿಯಲ್ಲಿ ಪಾಲಿಸಿಯನ್ನು ವಿವರಿಸಿದರು, ಅವರಿಗೆ ಗ್ರಾಹಕರ ನಿರೀಕ್ಷೆ ಚೆನ್ನಾಗಿ ತಿಳಿದಿದ್ದು, ನನ್ನ ಅಗತ್ಯದ ಪ್ರಕಾರ ಉಲ್ಲೇಖವನ್ನು ಅನ್ನು ನೀಡಿದರು. ಆನ್ಲೈನ್ ಪಾವತಿ ಗೊಂದಲರಹಿತವಾಗಿತ್ತು. ಇದನ್ನು ಅತೀ ಶೀಘ್ರದಲ್ಲಿ ಮಾಡಿದ್ದಕ್ಕೆ ಪೂನಮ್ ಅವರಿಗೆ ವಿಶೇಷ ಧನ್ಯವಾದಗಳು. ನಿಮ್ಮ ಗ್ರಾಹಕ ಸಂಬಂಧ ತಂಡವು ದಿನದಿಂದ ದಿನ ಉತ್ತಮಗೊಳ್ಳಲಿ ಎಂದು ನಾನು ಆಶಿಸುತ್ತೇನೆ!!
ಆಟೋ ರಿಕ್ಷಾ ಇನ್ಶೂರೆನ್ಸ್ ಬಗ್ಗೆ ಹೆಚ್ಚು ತಿಳಿಯಿರಿ
ಡಿಜಿಟ್ ನ ಆಟೋ ರಿಕ್ಷಾ ಇನ್ಶೂರೆನ್ಸ್ ಯೋಜನೆಯಡಿಯಲ್ಲಿ ಯಾವ ಪ್ರಕಾರದ ರಿಕ್ಷಾಗಳು ಕವರ್ ಆಗುತ್ತವೆ?
ಡಿಜಿಟ್ ನ ವಾಣಿಜ್ಯ ವಾಹನ ಪ್ಯಾಕೇಜ್ ಪಾಲಿಸಿ ಅಡಿಯಲ್ಲಿ, ನಾವು ಎಲ್ಲ ಪ್ರಕಾರದ ಆಟೋ ರಿಕ್ಷಾಗಳನ್ನು ಕವರ್ ಮಾಡುತ್ತೇವೆ:
- ಪೆಟ್ರೋಲ್/ಡಿಸೀಲ್ ನಲ್ಲಿ ಓಡುವ ಆಟೋರಿಕ್ಷಾಗಳು: ಭಾರತದ ಅತೀ ಸಾಮಾನ್ಯ ನಗರ ಸಾರಿಗೆಯ ಮಾಧ್ಯಮವಾದ ಆಟೋ ರಿಕ್ಷಾಗಳು, ಅಂದರೆ ನೀವು ನಿಮ್ಮ ನಗರದ ಸುತ್ತಲೂ ನೋಡುತ್ತಿರುವ ಟಿವಿಎಸ್ ಮತ್ತು ಬಜಾಜ್ ಆಟೋರಿಕ್ಷಾಗಳಾಗಿವೆ.
- ವಿದ್ಯುತ್ ಆಟೋರಿಕ್ಷಾಗಳು: ಥ್ರೀ ವೀಲರ್ ಪರಿವಾರದ ಹೊಸ ಸದಸ್ಯ ಇದಾಗಿದ್ದು, ಇ - ಆಟೋರಿಕ್ಷಾವು ಪ್ರಾಥಮಿಕವಾಗಿ ವಿದ್ಯುತ್ ಮೋಟರ್/ಸೋಲಾರ್ ಫಲಕ ಅಥವಾ ಬ್ಯಾಟರಿ ಗಳಿಂದಾಗಿ ಚಲಿಸುತ್ತದೆ, ಪೆಟ್ರೋಲ್ ಮತ್ತು ಡೀಸಿಲ್ನಿಂದಲ್ಲ.
ಆಟೋ ರಿಕ್ಷಾ ಇನ್ಶೂರೆನ್ಸ್ ಕಡ್ಡಾಯವೇ?
ಹೌದು, ಭಾರತದ ಮೋಟಾರ್ ವೆಹಿಕಲ್ ಅಧಿನಿಯಮ(ಆಕ್ಟ್) ಪ್ರಕಾರ, ಎಲ್ಲಾ ವಾಹನಗಳು ಕನಿಷ್ಠ ಪಕ್ಷ ಒಂದು ಹೊಣೆಗಾರಿಕೆ ಮಾತ್ರ ಪಾಲಿಸಿಯನ್ನಾದರೂ ಹೊಂದಿರುವುದು ಕಡ್ಡಾಯವಾಗಿದೆ. ಇದಿಲ್ಲದೆ, ಭಾರತದಲ್ಲಿ ಆಟೋ ರಿಕ್ಷಾ ಚಲಾಯಿಸುವುದು ಕಾನೂನುಬಾಹಿರವಾಗಿದೆ.
ಆದರೆ, ನೀವು ನಿಮ್ಮ ಆಟೋರಿಕ್ಷಾ ಅನ್ನು ನಿಮ್ಮ ಪ್ರಾಥಮಿಕ ಆದಾಯದ ಮೂಲವಾಗಿ ಅಥವಾ ನಿಮ್ಮ ಉದ್ಯಮದ ಭಾಗವಾಗಿ ಉಪಯೋಗಿಸುತ್ತಿದ್ದರೆ, ನೀವು ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿಯನ್ನು ಹೊಂದಿರಬೇಕೆಂದು ಸಲಹೆ ನೀಡುತ್ತೇವೆ ಯಾಕೆಂದರೆ, ಇದು ನಿಮ್ಮನ್ನು ಥರ್ಡ್ ಪಾರ್ಟೀಗೆ ನಿಮ್ಮ ಆಟೋ ರಿಕ್ಷಾದಿಂದಾದ ಹಾನಿಯನ್ನು ಕವರ್ ಮಾಡುವುದಲ್ಲದೆ ನಿಮ್ಮ ಸ್ವಂತ ವಾಹನ ಮತ್ತು ಚಾಲಕ ಮಾಲಕನಿಗಾದ ಹಾನಿಯನ್ನೂ ಕವರ್ ಮಾಡುತ್ತದೆ.
ಆಟೋ ರಿಕ್ಷಾ ಇನ್ಶೂರೆನ್ಸ್ ಅನ್ನು ಖರೀದಿಸುವುದು/ರಿನ್ಯೂ ಮಾಡುವುದು ಏಕೆ ಅಗತ್ಯ?
- ಯಾವುದೇ ಸಣ್ಣ ಅಥವಾ ದೊಡ್ಡ ಅಪಘಾತ, ಢಿಕ್ಕಿ ಹಾಗೂ ಪ್ರಕೃತಿ ವಿಪತ್ತುಗಳಿಂದ ಕೂಡಾ ಆಗುವ ಹಾನಿಗಳಿಂದ ನಿಮ್ಮ ದಿನನಿತ್ಯದ ಉದ್ಯಮವನ್ನು ಸಂರಕ್ಷಿಸಲು.
- ಯಾವುದೇ ಥರ್ಡ್ ಪಾರ್ಟೀ ಹೊಣೆಗಾರಿಕೆ ಅಥವಾ ಸಮಸ್ಯೆಗಳಿಂದ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಲು; ಕಾನೂನಿನ ಪ್ರಕಾರ, ಭಾರತದಲ್ಲಿ ಆಟೋ ರಿಕ್ಷಾಗಳೂ ಸೇರಿ ಎಲ್ಲಾ ವಾಹನಗಳು, ಕನಿಷ್ಠ ಪಕ್ಷ ಒಂದು ಥರ್ಡ್ ಪಾರ್ಟೀ ಪಾಲಿಸಿಯನ್ನಾದರೂ ಹೊಂದಿರಬೇಕು.
- ನಿಮ್ಮ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಲು. ನೀವು ಸಮಗ್ರ ಆಟೋರಿಕ್ಷಾ ಇನ್ಶೂರೆನ್ಸ್ ಅನ್ನು ಖರೀದಿಸಿದರೆ ಪ್ಯಾಸೆಂಜರ್ ಕವರ್ ಅನ್ನು ಕೂಡಾ ಆಯ್ಕೆ ಮಾಡಬಹುದು. ಇದರಿಂದ ನಿಮ್ಮ ಆಟೋ ಮತ್ತು ಅದರಲ್ಲಿರುವ ಪ್ರಯಾಣಿಕರ ಸುರಕ್ಷತೆಯನ್ನೂ ನೀವು ಖಚಿತಪಡಿಸಬಹುದು.
ಅಟೋ ರಿಕ್ಷಾ ಇನ್ಶೂರೆನ್ಸ್ ಒಂದು ಸಾಧಾರಣ ಮೋಟಾರ್ ಇನ್ಶೂರೆನ್ಸ್ ಕ್ಕಿಂತ ಭಿನ್ನ ಹೇಗೆ?
ಈ ಎರಡರ ನಡುವೆ ಇರುವ ಮುಖ್ಯ ವ್ಯತ್ಯಾಸ ಏನೆಂದರೆ, ಒಂದು ಆಟೋವನ್ನು ಪ್ರಾಥಮಿಕವಾಗಿ ವಾಣಿಜ್ಯ ಉದ್ದೇಶಗಳಿಗಾಗಿ ಉಪಯೋಗಿಸಲಾಗುತ್ತಿದ್ದು ಒಂದು ದಿನದಲ್ಲಿ ಹಲವು ಪ್ರಯಾಣಿಕರನ್ನು ಹೊತ್ತೊಯ್ಯುತ್ತದೆ. ಇದರೊಂದಿಗೆ, ಆಟೋ ಇನ್ಶೂರೆನ್ಸ್ ಇತರ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ನಿಂದ ಭಿನ್ನ ಹೇಗಿದೆ ಎಂದರೆ, ಇದು ಗಾತ್ರದಲ್ಲಿ ಸಣ್ಣದಾದ್ದರಿಂದ ಇದರಲ್ಲಿ ಅಪಾಯ ಕಡಿಮೆ ಇರುತ್ತದ್ದೆ. ಆದ್ದರಿಂದ ಟ್ರಕ್ ಅಥವಾ ಬಸ್ ಗೆ ಹೋಲಿಸಿದರೆ ಆಟೋ ರಿಕ್ಷಾದ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ತುಂಬಾ ಅಗ್ಗವಾಗಿರುತ್ತದೆ.
ನಾನು ನನ್ನ ಆಟೋ ರಿಕ್ಷಾಕ್ಕಾಗಿ ಸರಿಯಾದ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಹೇಗೆ ಆಯ್ಕೆ ಮಾಡಬೇಕು?
ಇಂದು ಲಭ್ಯವಿರುವ ಆಯ್ಕೆಗಳನ್ನು ನೋಡಿದಾಗ, ಒಂದು ಸರಳ, ಕೈಗೆಟಕುವ, ಎಲ್ಲಾ ಸಂದರ್ಭಗಳಲ್ಲಿ ನಿಮ್ಮನ್ನು ಹಾಗೂ ನಿಮ್ಮ ಉದ್ಯಮವನ್ನು ಸಂರಕ್ಷಿಸಿ ಕವರ್ ಮಾಡುವ ಮತ್ತು ಅತೀ ಮುಖ್ಯವಾಗಿ, ಆದಷ್ಟು ಬೇಗ ಕ್ಲೈಮ್ ಗಳ ಇತ್ಯರ್ಥ(ಸೆಟ್ಲ್) ಮಾಡುವ ಗ್ಯಾರಂಟಿ ನೀಡುವ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದು ಮುಖ್ಯವಾಗುತ್ತದೆ. ಆದಾಗ್ಯೂ, ಒಂದು ಇನ್ಶೂರೆನ್ಸ್ ನ ಅತ್ಯಂತ ಮುಖ್ಯ ಭಾಗ ಅದೇ ಆಗಿದೆ!
ನೀವು ನಿಮ್ಮ ಥ್ರೀ ವೀಲರ್ ವಾಹನಕ್ಕಾಗಿ ಸರಿಯಾದ ಮೋಟಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ಈ ಕೆಳಗಡೆ ಕೆಲವು ಸಲಹೆ ನೀಡಲಾಗಿದೆ:
- ಸರಿಯಾದ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ(ಐಡಿವಿ): ಐಡಿವಿ ಎಂದರೆ ನೀವು ಇನ್ಶೂರ್ ಮಾಡಬೇಕಾದ ಆಟೋದ ತಯಾರಕರ ಮಾರಾಟದ ಬೆಲೆ( ಡಿಪ್ರಿಸಿಯೇಷನ್ ಸೇರಿ). ನಿಮ್ಮ ಪ್ರೀಮಿಯಂ ಇದರ ಮೇಲೆ ಆಧಾರಿತವಾಗಿದೆ. ಅನ್ಲೈನ್ ಅಲ್ಲಿ ಸರಿಯಾದ ಆಟೋರಿಕ್ಷಾ ಇನ್ಶೂರೆನ್ಸ್ ಅನ್ನು ಹುಡುಕುವಾಗ, ನಿಮ್ಮ ಐಡಿವಿ ಅನ್ನು ಸರಿಯಾಗಿ ನಮೂದಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
- ಸೇವಾ ಲಾಭಗಳು: 24x7 ಗ್ರಾಹಕ ಬೆಂಬಲ, ನಗದುರಹಿತ ಗ್ಯಾರೇಜ್ ಗಳ ವಿಸ್ತಾರವಾದ ಜಾಲ ಹಾಗೂ ಇತರ ಸೇವೆಗಳನ್ನು ಪರಿಗಣಿಸಿ. ಅಗತ್ಯವಿರುವಾಗ, ಈ ಸೇವೆಗಳು ಉಪಯೋಗಕ್ಕೆ ಬರುತ್ತವೆ.
- ಆಡ್ - ಆನ್ ಗಳನ್ನು ಪರಿಶೀಲಿಸಿ: ನಿಮ್ಮ ಥ್ರೀ ವೀಲರ್ ವಾಹನಕ್ಕಾಗಿ ಸೂಕ್ತ ಆಟೋ ರಿಕ್ಷಾ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವಾಗ, ಗರಿಷ್ಠ ಲಾಭಗಳನ್ನು ಪಡೆಯಲು ಲಭ್ಯವಿರುವ ಆಡ್ - ಆನ್ ಗಳನ್ನು ಪರಿಗಣಿಸಿ.
- ಕ್ಲೈಮ್ ಶೀಘ್ರತೆ: ಇದು ಯಾವುದೇ ಇನ್ಶೂರೆನ್ಸ್ ನ ಪ್ರಮುಖ ಅಂಶವಾಗಿದೆ. ಇದು ಕ್ಲೈಮ್ ಗಳನ್ನು ಶೀಘ್ರ ಇತ್ಯರ್ಥ ಮಾಡುವುದು ಎಂದು ನಿಮಗೆ ತಿಳಿದಿರುವ ಒಂದು ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡಿ.
- ಉತ್ತಮ ಮೌಲ್ಯ: ಸರಿಯಾದ ಪ್ರೀಮಿಯಂ ಮತ್ತು ನಂತರದ ಸೇವೆಗಳು ಹಾಗೂ ಕ್ಲೈಮ್ ಸೆಟ್ಲ್ಮೆಂಟ್ ಆಡ್ - ಆನ್ಸ್ ಗಳ ನಂತರ, ಉತ್ತಮ ಮೌಲ್ಯದಲ್ಲಿ ನಿಮಗೆ ಬೇಕಾದ ಎಲ್ಲಾ ಅಗತ್ಯಗಳನ್ನು ಸುಸೂತ್ರವಾಗಿ ಕವರ್ ಮಾಡುವ ಆಟೋ ರಿಕ್ಷಾ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿ.
ಆಟೋ ರಿಕ್ಷಾ ಇನ್ಶೂರೆನ್ಸ್ ಕೊಟೇಶನ್ ಗಳನ್ನು ಆನ್ಲೈನ್ ನಲ್ಲಿ ಹೋಲಿಕೆ ಮಾಡಿ
ಅತ್ಯಂತ ಕಡಿಮೆ ದರದ ಆಟೋ ರಿಕ್ಷಾ ಇನ್ಶೂರೆನ್ಸ್ ಅನ್ನು ಖರೀದಿಸುವ ಕಡೆಗೆ ನೀವು ಆಕರ್ಷಿತರಾಗಬಹುದು. ಆದರೆ, ವಿಭಿನ್ನ ಆಟೋ ಇನ್ಶೂರೆನ್ಸ್ ಉಲ್ಲೇಖಗಳನ್ನು ಹೋಲಿಕೆ ಮಾಡುವಾಗ, ಸೇವಾ ಲಾಭಗಳು ಮತ್ತು ಕ್ಲೈಮ್ ಇತ್ಯರ್ಥದ ಅವಧಿಯಂತಹ ಅಂಶಗಳನ್ನು ಪರಿಗಣಿಸಿ.
ನಿಮ್ಮ ಥ್ರೀ ವೀಲರ್ ವಾಹನ ಮತ್ತು ನಿಮ್ಮ ಉದ್ಯಮವು ಎಲ್ಲಾ ದುರ್ಘಟನೆಗಳಿಂದ ಸಂರಕ್ಷಿತವಾಗಿದೆ ಎಂದೂ ಖಚಿತಪಡಿಸಲು ಮುಖ್ಯ ಅಂಶಗಳನ್ನು ಗಮನಿಸುವುದು ಆವಶ್ಯಕವಾಗಿದೆ:
- ಸೇವಾ ಲಾಭಗಳು : ಸಮಸ್ಯೆಯ ಸಂದರ್ಭದಲ್ಲಿ ಉತ್ತಮ ಸೇವೆಗಳು ಬಹಳ ಆವಶ್ಯಕವಾಗುತ್ತವೆ. ಪ್ರತೀ ಇನ್ಶೂರೆನ್ಸ್ ಕಂಪನಿ ಒದಗಿಸುವ ಸೇವೆಗಳನ್ನು ಪರಿಶೀಲಿಸಿ ಅದಕ್ಕೆ ತಕ್ಕಂತೆ ಸೂಕ್ತ ಆಯ್ಕೆಯನ್ನು ಮಾಡಿ. 24*7 ಗ್ರಾಹಕ ಬೆಂಬಲ 2500+ ಗ್ಯಾರೆಜ್ ಗಳಲ್ಲಿ ನಗದುರಹಿತ ಇತ್ಯಾದಿ ಡಿಜಿಟ್ ನೀಡುವ ಕೆಲವು ಸೇವೆಗಳಾಗಿವೆ.
- ಶೀಘ್ರ ಕ್ಲೈಮ್ ಇತ್ಯರ್ಥ : ನಿಮ್ಮ ಕ್ಲೈಮ್ ಇತ್ಯರ್ಥ ಮಾಡುವುದೇ ಇನ್ಶೂರೆನ್ಸ್ ನ ಏಕಮಾತ್ರ ಉದ್ದೇಶವಾಗಿದೆ! ಆದ್ದರಿಂದ ಶೀಘ್ರ ಕ್ಲೈಮ್ ಇತ್ಯರ್ಥಗಳ ಗ್ಯಾರಂಟಿ ನೀಡುವ ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡಿ. ಡಿಜಿಟ್ ನ 96% ಕ್ಲೈಮ್ ಗಳು 30 ದಿನಗಳೋಳಗಡೆ ಸೆಟ್ಲ್ ಆಗುತ್ತವೆ! ಇದರ ಜೊತೆ, ನಮ್ಮ ಬಳಿ ಶೂನ್ಯ ಹಾರ್ಡ್ ಕಾಪಿ(ಕಾಗದ)ಪಾಲಿಸಿ ಇದೆ, ಅಂದರೆ ನಾವು ಕೇವಲ ಸಾಫ್ಟ್ ಕಾಪಿಗಳನ್ನು ಕೇಳುತ್ತೇವೆ. ಎಲ್ಲವೂ ಕಾಗದರಹಿತ, ಶೀಘ್ರ ಹಾಗೂ ಗೊಂದಲರಹಿತವಾಗಿದೆ!
- ನಿಮ ಐಡಿವಿಯನ್ನು ಪರಿಶೀಲಿಸಿ : ಆನ್ಲೈನ್ ಲಭ್ಯವಿರುವ ಹಲವು ಆಟೋ ರಿಕ್ಷಾ ಇನ್ಶೂರೆನ್ಸ್ ಉಲ್ಲೇಖಗಳು ಕಡಿಮೆ ಐಡಿವಿ ಅನ್ನು ಹೊಂದಿರುತ್ತದೆ (ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ)ಅಂದರೆ ಥ್ರೀ ವೀಲರ್ ವಾಹನಕ್ಕೆ ತಯಾರಕರು ನೀಡುವ ಮಾರಾಟದ ಬೆಲೆ. ಐಡಿವಿ ನಿಮ್ಮ ಪ್ರೀಮಿಯಂ ಮೇಲೆ ಪರಿಣಾಮ ಬೀರಿದರೂ ಸೆಟ್ಲ್ಮೆಂಟ್ ಸಮಯದಲ್ಲಿ ನಿಮಗೆ ಸರಿಯಾದ ಮೊತ್ತ ದೊರೆಯುವುದನ್ನು ಖಚಿತಪಡಿಸುತ್ತದೆ. ಹಾನಿ ಅಥವಾ ಕಳವಿನ ಸಂದರ್ಭದಲ್ಲಿ ನಿಮ್ಮ ಐಡಿವಿ ಕಡಿಮೆ ಅಥವಾ ತಪ್ಪು ಮೌಲ್ಯದ್ದಾಗಿತ್ತು ಎಂದು ತಿಳಿಯುವುದು ಒಂದು ಬೇಡವಾದ ವಿಷಯ! ಡಿಜಿಟ್ ನಲ್ಲಿ ನೀವು ಆನ್ಲೈನ್ ಆಗಿ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವಾಗ ನಾವು ನಿಮಗೆ ನಿಮ್ಮ ಐಡಿವಿಯನ್ನು ಸೆಟ್ ಮಾಡುವ ಆಯ್ಕೆಯನ್ನು ನೀಡುತ್ತೇವೆ.
- ಉತ್ತಮ ಮೌಲ್ಯ : ಕೊನೆಯಲ್ಲಿ, ಈ ಎಲ್ಲದರ ಒಂದು ಉಚಿತ ಸಂಯೋಜನೆ ಇರುವ ಆಟೋ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿ. ಉತ್ತಮ ಬೆಲೆ, ಸೇವೆಗಳು ಹಾಗೂ ಖಂಡಿತವಾಗಿಯೂ ಶೀಘ್ರ ಕ್ಲೈಮ್ ಗಳು!
ಆಟೋ ರಿಕ್ಷಾ ಇನ್ಶೂರೆನ್ಸ್ ಪ್ರೀಮಿಯಮ್ ಮೇಲೆ ಪರಿಣಾಮ ಬೀರುವ ಅಂಶಗಳು
ಆಟೋ ರಿಕ್ಷಾ ಇನ್ಶೂರೆನ್ಸ್ ಪ್ರೀಮಿಯಮ್ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳನ್ನು ಈ ಕೆಳಗಡೆ ನೀಡಲಾಗಿದೆ
- ಮಾಡೆಲ್, ಎಂಜಿನ್ ಮತ್ತು ವಾಹನದ ನಿರ್ಮಾಣ(ಮೇಕ್): ಯಾವುದೇ ಮೋಟಾರ್ ಇನ್ಶೂರೆನ್ಸ್ ಗೆ ಸರಿಯಾದ ಇನ್ಶೂರೆನ್ಸ್ ಪ್ರೀಮಿಯಮ್ ಅನ್ನು ನಿರ್ಧರಿಸಲು ಮಾಡೆಲ್, ಎಂಜಿನ್ ಮತ್ತು ವಾಹನದ ನಿರ್ಮಾಣ(ಮೇಕ್) ಅತೀ ಆವಶ್ಯಕ. ಆದ್ದರಿಂದ, ನಿಮ್ಮ ಆಟೋ ರಿಕ್ಷಾ ಇನ್ಶೂರೆನ್ಸ್ ಪ್ರಾಥಮಿಕವಾಗಿ ನಿಮ್ಮ ಆಟೋ ರಿಕ್ಷಾದ ಮಾಡೆಲ್ ಮತ್ತು ನಿರ್ಮಾಣ, ತೈಲದ ಪ್ರಕಾರ, ಅದು ತಯಾರಾದ ವರ್ಷ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳು ಇತ್ಯಾದಿ ಮೇಲೆ ಅವಲಂಬಿಸಿರುತ್ತದೆ.
- ಸ್ಥಳ : ಇನ್ಶೂರೆನ್ಸ್ ಪ್ರೀಮಿಯಮ್ ಅನ್ನು ಆಯ್ಕೆ ಮಾಡುವಾಗ ನೀವು ನೋಂದಣಿ ಮಾಡಿದ ಸ್ಥಳ ಮತ್ತು ನೀವು ನಿಮ್ಮ ರಿಕ್ಷಾ ಅನ್ನು ಎಲ್ಲಿ ಚಲಿಸಲು ನಿರ್ಧರಿಸುತ್ತೀರಿ ಎಂಬುದು ಬಹಳ ಮುಖ್ಯವಾಗುತ್ತದೆ. ಹೆಚ್ಚು ಟ್ರಾಫಿಕ್, ಅಪರಾಧ ಮತ್ತು ಅಪರಾಧ ದರಗಳು ಹೆಚ್ಚಿರುವ ಮಹಾನಗರಗಳು ಖಂಡಿತವಾಗಿಯೂ ಹೆಚ್ಚು ಪ್ರೀಮಿಯಮ್ ಕೇಳುತ್ತವೆ, ಹಾಗೂ ಸಣ್ಣ ಸುರಕ್ಷಿತ ನಗರಗಳು ಕಡಿಮೆ ಇನ್ಶೂರೆನ್ಸ್ ಪ್ರೀಮಿಯಮ್ ಕೇಳಬಹುದು.
- ನೋ-ಕ್ಲೈಮ್ ಬೋನಸ್ : ನಿಮ್ಮ ಬಳಿ ಈಗಾಗಲೇ ಒಂದು ಆಟೋ ರಿಕ್ಷಾ ಇನ್ಶೂರೆನ್ಸ್ ಇದ್ದು ನೀವು ಅದನ್ನು ರಿನ್ಯೂ ಮಾಡಲು ಅಥವಾ ಹೊಸ ಇನ್ಶೂರರ್ ಪಡೆಯಲು ಯೋಚಿಸುತ್ತಿದ್ದರೆ- ಇಂತಹ ಸಂದರ್ಭದಲ್ಲಿ ನಿಮ್ಮ ಎನ್ ಸಿ ಬಿ(ನೋ ಕ್ಲೈಮ್ ಬೋನಸ್) ಅನ್ನೂ ಪರಿಗಣಿಸಲಾಗುವುದು, ಹಾಗೂ ನಿಮ್ಮ ಪ್ರೀಮಿಯಂ ದರದಲ್ಲಿ ರಿಯಾಯಿತಿ ದೊರೆಯುವುದು! ನೋ ಕ್ಲೈಮ್ ಬೋನಸ್ ಎಂದರೆ ನಿಮ್ಮ ಆಟೋ ರಿಕ್ಷಾದ ಮೇಲೆ ಕಳೆದ ಪಾಲಿಸಿ ಟರ್ಮ್ ನಲ್ಲಿ ಯಾವುದೇ ಕ್ಲೈಮ್ ಇರಲಿಲ್ಲ.
- ಇನ್ಶೂರೆನ್ಸ್ ಪ್ಲಾನ್ ನ ಪ್ರಕಾರ : ಎಲ್ಲಾ ವಾಣಿಜ್ಯ ವಾಹನಗಳಿಗೆ, ಆಟೋ ರಿಕ್ಷಾ ಗಳನ್ನೂ ಸೇರಿ, ಪ್ರಾಥಮಿಕವಾಗಿ ಎರಡು ಪ್ರಕಾರದ ಇನ್ಶೂರೆನ್ಸ್ ಗಳು ಲಭ್ಯ ಇವೆ. ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ನ ದರ ನೀವು ಆಯ್ಕೆ ಮಾಡುವ ಯೋಜನೆಯ ಮೇಲೆ ಅವಲಂಬಿಸುತ್ತದೆ. ಕಡ್ಡಾಯವಾಗಿರುವ ಹೊಣೆಗಾರಿಕೆ ಮಾತ್ರದ ಯೋಜನೆ ಕಡಿಮೆ ಪ್ರೀಮಿಯಂ ಜೊತೆ ಬರುತ್ತದಾದರೂ - ಇದು ಕೇವಲ ಥರ್ಡ್ ಪಾರ್ಟೀ ಹಾನಿ ಎಂದರೆ ಮೂರನೇ ಪಾರ್ಟೀಗೆ ಹಾಗೂ ಮಾಲಕನಿಗೆ ಆದ ಹಾನಿ ಅನ್ನು ಕವರ್ ಮಾಡುತ್ತದೆ; ಇನ್ನೊಂದೆಡೆ ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿಯ ಪ್ರೀಮಿಯಂ ಹೆಚ್ಚಿರಬಹುದು ಆದರೆ ನಮ್ಮ ಸ್ವಂತ ಆಟೋ ಮತ್ತು ಚಾಲಕ ಮಾಲಕನಿಗಾದ ನಷ್ಟವನ್ನೂ ಕವರ್ ಮಾಡುತ್ತದೆ.
ಆಟೋ ರಿಕ್ಷಾ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು
ನಾನು ಡಿಜಿಟ್ ನಿಂದ ಇ - ರಿಕ್ಷಾ ಇನ್ಶೂರೆನ್ಸ್ ಅನ್ನು ಆನ್ಲೈನ್ ಆಗಿ ಪಡೆಯಬಹುದೇ?
ಹೌದು, ಪಡೆಯಬಹುದು. ನೀವು ಮಾಡಬೇಕಾದದ್ದು ಇಷ್ಟೇ; ನಮಗೆ ಈ ಸಂಖ್ಯೆ 70 2600 2400 ಗೆ ವಾಟ್ಸಾಪ್ ಮಾಡಿ ಹಾಗೂ ನಾವು ನಿಮ್ಮ ಇ - ರಿಕ್ಷಾ ಇನ್ಶೂರೆನ್ಸ್ ಗಾಗಿ ಒಂದು ಸೂಕ್ತ ಯೋಜನೆಯನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಕಸ್ಟಮೈಜ್ ಮಾಡಿ ಕೊಡುತ್ತೇವೆ.
ಹೊಣೆಗಾರಿಕೆ ಮಾತ್ರದ ಆಟೋ ರಿಕ್ಷಾ ಪಾಲಿಸಿ ಹಾಗೂ ಒಂದು ಸ್ಟಾಂಡರ್ಡ್ ಆಟೋ ರಿಕ್ಷಾ ಪಾಲಿಸಿ ಮಧ್ಯೆ ಇರುವ ವ್ಯತ್ಯಾಸವೇನು?
ಒಂದು ಹೊಣೆಗಾರಿಕೆ ಮಾತ್ರದ ಆಟೋ ರಿಕ್ಷಾ ಪಾಲಿಸಿ ಕೇವಲ ಥರ್ಡ್ ಪಾರ್ಟೀಗೆ ಸಂಬಂಧಿಸಿದ ನಷ್ಟ ಹಾಗೂ ಹಾನಿಗಳನ್ನು ಅಂದರೆ ನಿಮ್ಮ ರಿಕ್ಷಾ ಬೇರೆ ವ್ಯಕ್ತಿ, ವಾಹನ ಅಥವಾ ಸ್ವತ್ತಿಗೆ ಹಾನಿ ಉಂಟು ಮಾಡಿದ್ದರೆ ಇದನ್ನು ಕವರ್ ಮಾಡುತ್ತದೆ. ಇನ್ನೊಂದೆಡೆ ಸ್ಟಾಂಡರ್ಡ್ ಪ್ಯಾಕೇಜ್ ಥರ್ಡ್ ಪಾರ್ಟೀ ಹಾನಿಗಳು ಮತ್ತು ನಮ್ಮ ಸ್ವಂತ ಆಟೋ ಗೆ ಆದ ಹಾನಿ ಉದಾಹರಣೆಗೆ ಅಪಘಾತ ಅಥವಾ
ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನಿಮ್ಮ ಅಟೋಗೆ ಆದ ಹಾನಿ, ಈ ಎರಡನ್ನೂ ಕವರ್ ಮಾಡುತ್ತದೆ.
ಹಾನಿಯಾದ ಸಂದರ್ಭದಲ್ಲಿ ನಾನು ನನ್ನ ಆಟೋ ರಿಕ್ಷಾ ಅನ್ನು ಎಲ್ಲಿ ರಿಪೇರಿ ಮಾಡಬಹುದು?
ನಮ್ಮೊಂದಿಗೆ ನೀವು ನಿಮ್ಮ ಆಟೋ ರಿಕ್ಷಾ ಪಾಲಿಸಿಯನ್ನು ಸಕ್ರೀಯಗೊಳಿಸಿದ್ದರೆ, ನೀವು ಭಾರತದಾದ್ಯಂತ ಇರುವ ನಮ್ಮ 1400+ ಗ್ಯಾರೇಜ್ ಗಳಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಬಹುದು. ಇನ್ನೊಂದಡೆ, ನಿಮ್ಮ ಆಯ್ಕೆಯ ಬೇರೆ ಗ್ಯಾರೆಜ್ ನಲ್ಲಿಯೂ ದುರಸ್ತಿ ಮಾಡಿ ನಮ್ಮ ಬಳಿ ಸೂಕ್ತ ಮರುಪಾವತಿ ಕೇಳಬಹುದು.ನಮ್ಮ ಗ್ಯಾರೇಜ್ ನೆಟ್ವರ್ಕ್ ಅನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಆಟೋ ರಿಕ್ಷಾ ಇನ್ಶೂರೆನ್ಸ್ ನಲ್ಲಿ ಪ್ರಯಾಣಿಕರು ಕೂಡಾ ಕವರ್ ಆಗಿರುತ್ತಾರೆಯೇ?
ಪ್ರಯಾಣಿಕರನ್ನು ಥರ್ಡ್ ಪಾರ್ಟೀ ಎಂದು ಪರಿಗಣಿಸುವ ಕಾರಣ ಅವರು ಹೊಣೆಗಾರಿಕೆ ಮಾತ್ರದ ಪಾಲಿಸಿ ಸ್ಟಾಂಡರ್ಡ್ ಪಾಲಿಸಿ ಎರಡರಲ್ಲೂ ಕವರ್ ಆಗಿರುತ್ತಾರೆ.
ನನ್ನ ಸಂಸ್ಥೆಯ ಭಾಗವಾಗಿ ನನ್ನ ಬಳಿ 100 ಕ್ಕಿಂತ ಹೆಚ್ಚು ಆಟೋ ರಿಕ್ಷಾ ಗಳಿವೆ, ನಾನು ಅವೆಲ್ಲವನ್ನೂ ಡಿಜಿಟ್ ನ ಆಟೋ ರಿಕ್ಷಾ ಇನ್ಶೂರೆನ್ಸ್ ನಲ್ಲಿ ಇನ್ಶೂರ್ ಮಾಡಾಬಹುದೇ?
ಹೌದು, ನೀವು ನಮ್ಮ ಬಳಿ ಇನ್ಶೂರ್ ಮಾಡಬಹುದಾದ ಆಟೋ ರಿಕ್ಷಾಗಳ ಸಂಖ್ಯೆಗೆ ಯಾವುದೇ ಮಿತಿ ಇಲ್ಲ.
ನನ್ನ ಆಟೋ ರಿಕ್ಷಾ ಅಪಘಾತಕ್ಕೀಡಾದರೆ ನಾನೇನು ಮಾಡಬೇಕು?
ತಕ್ಷಣ ನಮಗೆ 1800-103-4448 ಗೆ ಕರೆ ಮಾಡಿ! ಮುಂದಿನ ಸಹಾಯವನ್ನು ನಾವು ನಿಮಗೆ ಮಾಡುತ್ತೇವೆ.