Third-party premium has changed from 1st June. Renew now
ಆನ್ಲೈನ್ ನಲ್ಲಿ ಕಾರು ಇನ್ಶೂರೆನ್ಸ್ ಪಾಲಿಸಿ ರಿನೀವಲ್ ಬಗೆಗಿನ ಎಲ್ಲಾ ಮಾಹಿತಿಗಳು
ನಿಮ್ಮ ಕಾರ್ ಇನ್ಶೂರೆನ್ಸ್ ರಿನ್ಯೂ ಮಾಡುವ ವರ್ಷದ ಆ ಸಮಯ ಬಂದಿದ್ದು, ಹೊಸದನ್ನು ಖರೀದಿಸಬೇಕೋ ಅಥವಾ ಪ್ರಸ್ತುತ ಇನ್ಶೂರರ್ ಜೊತೆ ಮುಂದುವರಿಯಬೇಕೋ ಎಂಬ ಗೊಂದಲವೇ? ಇದೊಂದು ಕಷ್ಟದ ನಿರ್ಧಾರ ಆದರೆ ಚಿಂತಿಸಬೇಡಿ, ಇದನ್ನು ನಿಮಗಾಗಿ ಸರಳಗೊಳಿಸಲು ನಾವಿದ್ದೇವೆ.
ಮೊದಲಿಗೆ ನಾವು ಕಾರ್ ಇನ್ಶೂರೆನ್ಸ್ ರಿನೀವಲ್ ಬಗ್ಗೆ ಎಲ್ಲವನ್ನೂ ತಿಳಿಯೋಣ.
ಕಾರ್ ಇನ್ಶೂರೆನ್ಸ್ ರಿನೀವಲ್ ಎಂದರೇನು?
ಕಾರ್ ಇನ್ಶೂರೆನ್ಸ್ ರಿನೀವಲ್ ಎಂದರೆ, ನಿಮ್ಮ ಇನ್ಶೂರೆನ್ಸ್ ಕಂಪೆನಿಯು, ನಿಮ್ಮ ಇನ್ಶೂರೆನ್ಸ್ ದರವನ್ನು ಬದಲಾಯಿಸದೆ ಇದ್ದು ನಿಮ್ಮ ಇನ್ಶೂರೆನ್ಸ್ ಪಾಲಿಸಿಯು ಕಾರ್ಯಗತವಾಗಿರುವ, ಒಂದು ಅವಧಿಯಾಗಿದೆ. ಆದರೆ, ಒಮ್ಮೆ ಆರಂಭದ ಪಾಲಿಸಿ ಅವಧಿ ಮುಗಿದ ನಂತರ, ನೀವು ಮಾಡಿದ ಬದಲಾವಣೆಗಳನ್ನು ಹೊರತುಪಡಿಸಿ, ನಿಮ್ಮ ಇನ್ಶೂರೆನ್ಸ್ ದರವೂ ಪ್ರತೀ ರಿನೀವಲ್ ಸಮಯದಲ್ಲಿ ಒಂದೇ ಆಗಿರಬೇಕು. ಈಗ, ಇಲ್ಲಿ ನಿಮಗೆ ಯೋಚಿಸುವ ಸಮಯ ಸಿಗುತ್ತದೆ. ಒಂದು ನಿರ್ದಿಷ್ಟ ಅವಧಿಯವರೆಗೆ ನಿಮ್ಮ ಇನ್ಶೂರೆನ್ಸ್ ಕಂಪನಿಯು ನಿಮ್ಮ ದರವನ್ನು ಬದಲಾಯಿಸುವುದಿಲ್ಲ ಎಂದು ನಿಮಗೆ ತಿಳಿದಿರುವಾಗ, ರಿನೀವಲ್ ಸಮಯದಲ್ಲಿ ನೀವು ಹೊಸ ಆಯ್ಕೆಗಳನ್ನು ಮಾಡಬಹುದು.
ಲಭ್ಯವಿರುವ ಆಯ್ಕೆಗಳು ಯಾವುವು - ಪ್ರಸ್ತುತ ಇನ್ಶೂರರ್ ಜೊತೆ ಮುಂದುವರಿಯುವುದೇ ಅಥವಾ ಹೊಸಬರನ್ನು ಆಯ್ದುಕೊಳ್ಳುವುದೇ?
ವಾಸ್ತವವಾಗಿ ನಿಮಗೆ ಇಲ್ಲಿ ಎರಡೂ ಆಯ್ಕೆಗಳು ಲಭವಿದೆ, ನಿಮ್ಮ ಅನುಭವ, ಕ್ಲೈಮ್ ಪ್ರಕ್ರಿಯೆಗಳು, ಪಾರದರ್ಶಕತೆ, ಗ್ರಾಹಕ ಬೆಂಬಲ ತೃಪ್ತಿಕರವಾಗಿದ್ದರೆ ಆದೇ ಇನ್ಶೂರರ್ ಜೊತೆ ಮುಂದುವರಿಯಿರಿ ಅಥವಾ ಹೊಸದನ್ನು ಆಯ್ಕೆ ಮಾಡಿ. ಯಾವುದನ್ನು ಆಯ್ಕೆ ಮಾಡಬೇಕು ಎನ್ನುವುದು ಸಂಪೂರ್ಣವಾಗಿ ನಿಮ್ಮ ಅನುಭವ ಹಾಗೂ ಇನ್ಶೂರೆನ್ಸ್ ಅಗತ್ಯಗಳ ಮೇಲೆ ಅವಲಂಬಿತವಾಗಿದೆ.
ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ರಿನ್ಯೂ ಮಾಡುವ ಮೊದಲು ಪರಿಗಣಿಸಬೇಕಾದ ವಿಷಯಗಳು
ಕಾರ್ ಇನ್ಶೂರೆನ್ಸ್ ರಿನೀವಲ್ ಮಾಡಿಸುವಾಗ ಹಲವು ಅಂಶಗಳನ್ನು ಗಮನದಲ್ಲಿಡಬೇಕಾಗುತ್ತದೆ. ಸರಿಯಾಗಿ ಗಮನ ನೀಡಿದ್ದಲ್ಲಿ ಇದು ನಿಮಗೆ ವಾರ್ಷಿಕ ರಿನ್ಯೂವಲ್ ಸಮಯದಲ್ಲಿ ಉತ್ತಮ ಮಟ್ಟದ ಕವರ್ ದೊರೆಯುವುದನ್ನು ಖಚಿತ ಪಡಿಸುತ್ತದೆ. ಕೆಲವು ಅಂಶಗಳನ್ನು ಈ ಕೆಳಗಡೆ ನೀಡಲಾಗಿದೆ:
ಪಾಲಿಸಿಯ ಮಾದರಿ - ನಿಮ್ಮ ಪಾಲಿಸಿಯ ಮಾದರಿಗಳನ್ನು ತಿಳಿದುಕೊಳ್ಳಿ, ಒಂದು ಸೂಕ್ತ ನಿರ್ಧಾರವನ್ನು ಮಾಡಲು ನಿಮಗಿರುವ ಆಯ್ಕೆಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ನಿಮ್ಮ ಬಳಿ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಇದ್ದರೆ ರಿನೀವಲ್ ಸಮಯದಲ್ಲಿ ನೀವು ನಿಮ್ಮ ಬದಲಾದ ಇನ್ಶೂರೆನ್ಸ್ ಅಗತ್ಯಗಳ ಪ್ರಕಾರ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಯೋಜನೆಯನ್ನು ಅನ್ನು ಆಯ್ಕೆ ಮಾಡಬಹುದು.
ನಿಮ್ಮ ಇನ್ಶೂರರ್ ಅನ್ನು ಪರಿಶೀಲಿಸಿ - ನಿಮ್ಮ ಇನ್ಶೂರರ್ ನ ಬಗ್ಗೆ ಸಂಶೋಧನೆ ನಡೆಸಿ, ಭವಿಷ್ಯದಲ್ಲಿ ಪಶ್ಚಾತಾಪ ಪಡದೆ ಇರುವುದಕ್ಕಾಗಿ ಸಾಧ್ಯಾವಾದದ್ದೆಲ್ಲವನ್ನೂ ಪರಿಶೀಲಿಸಿ.
ಆಡ್ - ಆನ್ಸ್ - ನೀವು ನಿಮ್ಮ ಪಾಲಿಸಿಯೊಂದಿಗೆ ಸರಿಯಾದ ಆಡ್ - ಆನ್ ಗಳನ್ನು ಆಯ್ಕೆ ಮಾಡಿದರೆ ಗರಿಷ್ಠ ಲಾಭವನ್ನು ಪಡೆಯಬಹುದು. ಕೆಲವು ಇಲ್ಲಿವೆ ; ಝೀರೋ ಡಿಪ್ರಿಸಿಯೇಷನ್ ಕವರ್, ಎನ್ ಸಿ ಬಿ ಕವರ್, ಇನ್ವಾಯ್ಸ್ ಸಂರಕ್ಷಣಾ ಕವರ್ ಮತ್ತು ಎಂಜಿನ್ ಸಂರಕ್ಷಣಾ ಕವರ್. ಕಾರ್ ಇನ್ಶೂರೆನ್ಸ್ ಆಡ್ - ಆನ್ಸ್ ಬಗ್ಗೆ ತಿಳಿಯಿರಿ ಹಾಗೂ ಸೂಕ್ತವಾದದ್ದನ್ನು ಆಯ್ಕೆ ಮಾಡಿ.
ಕ್ಲೈಮ್ ಪ್ರಕ್ರಿಯೆ - ಇದು ಬಹಳ ಮುಖ್ಯ. ಈ ಪ್ರಕ್ರಿಯೆ ಅತೀ ಶೀಘ್ರ ಹಾಗೂ ಗೊಂದಲ ರಹಿತವಾಗಿರಬೇಕು. ಇನ್ಶೂರರ್ ನ ಕ್ಲೈಮ್ ಇತಿಹಾಸವನ್ನು ಎಲ್ಲಾ ಸಾಧ್ಯ ಮೂಲಗಳಿಂದ ತಿಳಿದುಕೊಳ್ಳಿ.
ದರಗಳನ್ನು ಆನ್ಲೈನ್ ನಲ್ಲಿ ಹೋಲಿಕೆ ಮಾಡಿ - ದರಗಳ ಹೋಲಿಕೆ ಮಾಡಲು ಆನ್ಲೈನ್ ನೋಡಿ, ನೀವು ನಿಮ್ಮ ಪಾಲಿಸಿಯನ್ನು ಆನ್ಲೈನ್ ಆಗಿ ಕೂಡಾ ರಿನ್ಯೂ ಮಾಡಬಹುದು, ಹಲವಾರು ಆಯ್ಕೆಗಳು ಲಭ್ಯವಿದೆ. ಪಾಲಿಸಿಯ ಖರೀದಿ/ರಿನ್ಯೂವಲ್ ಅನ್ನು ಆನ್ಲೈನ್ ಮಾಡಿದರೆ, ವಿಶೇಷವಾಗಿ ನಮ್ಮೊಂದಿಗೆ, ಯಾವುದೇ ದಾಖಲೆ ಪ್ರಕ್ರಿಯೆಗಳು ಇರುವುದಿಲ್ಲ, ಕೇವಲ ನಿಮ್ಮ ವಿವರಗಳನ್ನು ಆನ್ಲೈನ್ ಆಗಿ ಸಲ್ಲಿಸಿ ಹಾಗೂ ನಿಮ್ಮ ಕೆಲಸ ಮುಗಿಯಿತು ಎಂದುಕೊಳ್ಳಿ.
ಸರಿಯಾದ ಐಡಿವಿ - ಪಾಲಿಸಿಯ ಆಯ್ಕೆ ಅಥವಾ ರಿನೀವಲ್ ಸಮಯದಲ್ಲಿ ಸೂಕ್ತ ಐಡಿವಿ ಒಂದು ಮುಖ್ಯ ಪಾತ್ರ ವಹಿಸುತ್ತದೆ. ಐಡಿವಿ ಎಷ್ಟು ಹೆಚ್ಚಿರುವುದೋ, ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿ ನಿಮ್ಮ ಪರಿಹಾರವೂ ಅಷ್ಟೇ ಹೆಚ್ಚಿರುವುದು.
ನಿಮ್ಮ ಕಾರ್ ಇನ್ಶೂರೆನ್ಸ್ ನ ಕಾಲಾವಧಿ ಕೊನೆಯಾಗದಂತೆ ನೋಡಿಕೊಳ್ಳಿ - ನಿಮ್ಮ ಕಾರ್ ಇನ್ಶೂರೆನ್ಸ್ ರಿನೀವಲ್ ಅನ್ನು ಸರಿಯಾದ ಸಮಯಕ್ಕೆ ಮಾಡಿ ಭಾರೀ ದಂಡ ತೆರುವ ಸಂದರ್ಭದಿಂದ ತಪ್ಪಿಸಿಕೊಳ್ಳಿ. ಇದರ ಜೊತೆ, ಒಂದು ಮಾನ್ಯ ಕಾರ್ ಇನ್ಶೂರೆನ್ಸ್ ಪಾಲಿಸಿ ಇಲ್ಲದೇ ನಿಮ್ಮ ಕಾರನ್ನು ಹೊರತೆಗೆಯುವುದು ದೊಡ್ಡ ಅಪಾಯವೇ ಆಗಿದೆ, ಆದ್ದರಿಂದ ಇದನಲ್ಲಾ ತಪ್ಪಿಸಲು ನಿಮ್ಮ ಪಾಲಿಸಿಯನ್ನು ಮುಂಚಿತವಾಗಿಯೇ ರಿನ್ಯೂ ಮಾಡಿರಿ.
ನೋ ಕ್ಲೈಮ್ ಬೋನಸ್ - ನೀವು ಕ್ಲೈಮ್ ರಹಿತ ವರ್ಷವನ್ನು ಹೊಂದಿದ್ದರೆ, ನಿಮಗೆ ನಿಮ್ಮ ಇನ್ಶೂರರ್ ನಿಂದ ನೋ ಕ್ಲೈಮ್ ಬೋನಸ್ ರಿಯಾಯಿತಿ ದೊರೆಯುತ್ತದೆ. ಈ ರಿಯಾಯಿತಿ ಮೊತ್ತವನ್ನು ನೀವು ಪಾವತಿಸುವ ಒಟ್ಟು ಪ್ರೀಮಿಯಮ್ ಮೊತ್ತದಿಂದ ಕಡಿತಗೊಳಿಸಲಾಗುತ್ತದೆ. ಇಲ್ಲಿ ಸಿಹಿ ಸುದ್ದಿಯೇನೆಂದರೆ, ನೀವು ನಿಮ್ಮ ಇನ್ಶೂರರ್ ಅನ್ನು ಬದಲಿಸಲು ಯೋಚಿಸಿದ್ದಲ್ಲಿ, ಈ ಬೋನಸ್ ಹೊಸ ಇನ್ಶೂರರ್ ಗೆ ವರ್ಗಾವಣೆಯಾಗುತ್ತದೆ.
ನೆಟ್ವರ್ಕ್ ಗ್ಯಾರೇಜ್ಗಳು- ನಿಮ್ಮ ಇನ್ಶೂರರ್ ಬಳಿ ಇರುವ ಗ್ಯಾರೇಜ್ ನೆಟ್ವರ್ಕ್ ಗಳನ್ನು ಪರಿಶೀಲಿಸಿ ಯಾವುದೇ ಅನಿರೀಕ್ಷಿತ ರಸ್ತೆ ಅವಘಡದಿಂದ ನಿಮಗೆ ಸಂರಕ್ಷಣೆ ಸಿಗುವ ಹಾಗೆ ಎಂದು ನೀವು ಖಚಿತಪಡಿಸಬೇಕು.
ಗ್ರಾಹಕ ಬೆಂಬಲ - 24/7 ಗ್ರಾಹಕ ಬೆಂಬಲ ತುಂಬಾ ಮುಖ್ಯ, ನಿಮ್ಮ ಇನ್ಶೂರರ್ ಇದನ್ನು ನೀಡುತ್ತರೋ ಇಲ್ಲವೋ ಎಂದು ಪರಿಶೀಲಿಸಿ.
ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್ ಆಗಿ ರಿನ್ಯೂ ಮಾಡಲು ಪ್ರಮುಖ ಕಾರಣಗಳು
ಕಾಗದ ಪ್ರಕ್ರಿಯೆ ಇಲ್ಲ- ಆನ್ಲೈನ್ ಪ್ರಕ್ರಿಯೆ ಸುಲಭವಾಗಿದೆ, ಕೇವಲ ನಿಮ್ಮ ಅಗತ್ಯ ವಿವರಗಳನ್ನು ಹಾಕಿ ನಿಮ್ಮ ಕೆಲಸವನ್ನು ಮುಗಿಸಿ. ಕಾಗದ ಪ್ರಕ್ರಿಯೆಯ ಅಗತ್ಯವಿಲ್ಲ.
ಸುಲಭ ಹಾಗೂ ಶೀಘ್ರ - ಅಂತರ್ಜಾಲ ಒಂದು ಉಡುಗೊರೆಯೇ ಸರಿ! ಇದು ಸುಲಭ ಹಾಗೂ ಶೀಘ್ರವಾಗಿದೆ, ಕೇವಲ ಕೆಲವೇ ಕ್ಲಿಕ್ ಗಳಿಂದ ಸರಳವಾಗಿ ನೀವು ನಿಮ್ಮ ಪಾಲಿಸಿಯನ್ನು ರಿನ್ಯೂ ಮಾಡಬಹುದು.
ನೀವು ಕುಳಿತಲ್ಲೇ ಆರಾಮವಾಗಿ ದರಗಳ/ಆಡ್ - ಆನ್ ಕವರ್ ಗಳ ಹೋಲಿಕೆ ಮಾಡಬಹುದು - ಆನ್ಲೈನ್ ಹೋಲಿಕೆಗಳು ಶೀಘ್ರ ಹಾಗೂ ಗೊಂದಲರಹಿತವಾಗಿವೆ, ನೀವು ಮನೆಯಲ್ಲಿಯೇ ವಿವಿಧ ಇನ್ಶೂರೆನ್ಸ್ ಕಂಪನಿಗಳ ದರಗಳ/ಆಡ್ - ಆನ್ ಕವರ್ ಗಳ ಹೋಲಿಕೆ ಮಾಡಬಹುದು ಹಾಗೂ ಆರಾಮವಾಗಿ ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳಬಹುದು.
ಸಮಯದ ಉಳಿತಾಯ - ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಪಾಲಿಸಿಯನ್ನು ಆನ್ಲೈನ್ ಆಗಿ ರಿನ್ಯೂ ಮಾಡಬಹುದು, ಮನೆಯಲ್ಲಿಯೇ ನಿಮಗೆ ಬೇಕಾದ ಸಮಯದಲ್ಲಿ. ಇದರಿಂದ ಸಮಯದ ಉಳಿತಾಯವಾಗುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನ್ ಆಗಿ ರಿನ್ಯೂ ಮಾಡುವುದು ಹೇಗೆ?
4 ಸರಳ ಹಂತಗಳಲ್ಲಿ ಕಾರ್ ಇನ್ಶೂರೆನ್ಸ್ ಅನ್ನು ರಿನ್ಯೂ ಮಾಡಿ
ಹಂತ 1 - ನಿಮ್ಮ ವಾಹನದ ನಿರ್ಮಾಣ(ಮೇಕ್), ಮಾದರಿ(ಮಾಡೆಲ್), ವ್ಯತ್ಯಾಸ(ವೇರಿಯೆಂಟ್), ನೋಂದಣಿ ದಿನಾಂಕ, ನೀವು ಕಾರು ಚಲಾಯಿಸುತ್ತಿರುವ ನಗರ ಇವುಗಳನ್ನು ತುಂಬಿಸಿ. ‘ಗೆಟ್ ಕೋಟ್’ ಅನ್ನು ಪ್ರೆಸ್ ಮಾಡಿ ನಿಮ್ಮ ಯೋಜನೆಯನ್ನು ಆಯ್ಕೆ ಮಾಡಿ.
ಹಂತ 2 - ಕೇವಲ ಥರ್ಡ್ ಪಾರ್ಟಿ ಬಾಧ್ಯತೆ ಅಥವಾ ಸ್ಟಾಂಡರ್ಡ್ ಪ್ಯಾಕೇಜ್ (ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್) ನ ಮಧ್ಯೆ ಆಯ್ಕೆ ಮಾಡಿ.
ಹಂತ 3 - ನಿಮ್ಮ ಹಿಂದಿನ ಇನ್ಶೂರೆನ್ಸ್ ಪಾಲಿಸಿಯ ಈ ವಿವರಗಳನ್ನು ನಮಗೆ ನೀಡಿ - ಅವಧಿಪೂರ್ತಿಯ ದಿನಾಂಕ, ಹಿಂದಿನ ವರ್ಷ ಮಾಡಿದ ಕ್ಲೈಮ್, ಗಳಿಸಿದ ನೋ ಕ್ಲೈಮ್ ಬೋನಸ್.
ಹಂತ 4 - ನಿಮಗೆ ನಿಮ್ಮ ಪ್ರೀಮಿಯಮ್ ನ ಕೋಟ್ ಸಿಗುತ್ತದೆ. ನೀವು ಒಂದು ಸ್ಟಾಂಡರ್ಡ್ ಯೋಜನೆಯನ್ನು ಆಯ್ಕೆ ಮಾಡಿದ್ದರೆ ಅದಕ್ಕೆ ಆಡ್ - ಆನ್ ಗಳನ್ನು ಸೇರಿಸಿ ಐಡಿವಿ ಅನ್ನು ಸೆಟ್ ಮಾಡಿ, ನಿಮ್ಮ ಬಳಿ ಸಿ ಎನ್ ಜಿ ಕಾರು ಇದೆಯೇ ಎಂದು ಖಚಿತಪಡಿಸಿ ಕಸ್ಟಮೈಜ್ ಮಾಡಬಹುದು. ನಿಮಗೆ ಮುಂದಿನ ಪುಟದಲ್ಲಿ ಅಂತಿಮ ಪ್ರೀಮಿಯಮ್ ದೊರೆಯುವುದು.
ಆನ್ಲೈನ್ ಕಾರ್ ಇನ್ಶೂರೆನ್ಸ್ ರಿನೀವಲ್ ಗೆ ಏನೆಲ್ಲಾ ಅಗತ್ಯವಿದೆ
ಪೂರ್ತಿ ಹೆಸರು
ವಿಳಾಸ
ಕಾರಿನ ನಿರ್ಮಾಣ ಹಾಗೂ ಮಾದರಿ ವಿವರಗಳು
ಕಾರ್ ನೋಂದಣಿ ಸಂಖ್ಯೆ
ಹಿಂದಿನ ಪಾಲಿಸಿ ಸಂಖ್ಯೆ
ಆಯ್ಕೆ ಮಾಡಬೇಕಾದ ಆಡ್ - ಆನ್ ಗಳು
ಪಾವತಿ ವಿವರಗಳು