ಮಾರುತಿ ಸುಜುಕಿ ಇಗ್ನಿಸ್ ಇನ್ಶೂರೆನ್ಸ್

Get Instant Policy in Minutes*

Third-party premium has changed from 1st June. Renew now

ಮಾರುತಿ ಸುಜುಕಿ ಇಗ್ನಿಸ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ ಅಥವಾ ರಿನೀವ್ ಮಾಡಿ

ಜಪಾನಿನ ಆಟೋಮೊಬೈಲ್ ತಯಾರಕರಾದ ಸುಜುಕಿ 2000 ರಲ್ಲಿ ಸಬ್‌ಕಾಂಪ್ಯಾಕ್ಟ್ ಕಾರ್, ಇಗ್ನಿಸ್ ಅನ್ನು ಬಿಡುಗಡೆ ಮಾಡಿತು. ಮಾರುತಿ ಸುಜುಕಿ ಇಗ್ನಿಸ್‌ನ ಎರಡನೇ ಜನರೇಶನ್‌ ಅನ್ನು ಮಾರುತಿ ಸುಜುಕಿ ರಿಟ್ಜ್‌ಗೆ ರಿಪ್ಲೇಸ್‌ಮೆಂಟ್ ಆಗಿ ಭಾರತೀಯ ಕಮ್ಯುಟರ್ ಮಾರ್ಕೆಟ್‌ನಲ್ಲಿ ಪರಿಚಯಿಸಲಾಯಿತು. ನಂತರ, ಫೆಬ್ರವರಿ 2020 ರಲ್ಲಿ, ಈ ಮಾಡೆಲ್‌ನ ಫೇಸ್‌ಲಿಫ್ಟೆಡ್ ವರ್ಷನ್ ಅನ್ನು 15 ನೇ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಯಿತು.

ಭಾರತದಲ್ಲಿ ಮಾರುತಿ ಇಗ್ನಿಸ್ ಫೇಸ್‌ಲಿಫ್ಟ್ ವರ್ಷನ್‌ನ ಬಿಡುಗಡೆಯ ನಂತರ, ಕಂಪನಿಯು ಆಗಸ್ಟ್ 2020 ರಲ್ಲಿ ಸುಮಾರು 3,262 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಂಪನಿಯು ಈ ಕಾರನ್ನು ತನ್ನ ನೆಕ್ಸಾ ಪ್ರೀಮಿಯಂ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡುತ್ತದೆ.

ಮುಂಬರುವ ವರ್ಷದಲ್ಲಿ ನೀವು ಈ ಕಾರನ್ನು ಖರೀದಿಸಲು ಪ್ಲ್ಯಾನ್ ಮಾಡುತ್ತಿದ್ದರೆ, ನೀವು ಮಾರುತಿ ಸುಜುಕಿ ಇಗ್ನಿಸ್ ಕಾರ್ ಇನ್ಶೂರೆನ್ಸ್ ಅನ್ನು ಪ್ರತಿಷ್ಠಿತ ಇನ್ಶೂರೆನ್ಸ್ ಕಂಪನಿಯಿಂದ ಪಡೆಯಬೇಕು. ನಿಮ್ಮ ಕಾರ್ ಅಪಘಾತಕ್ಕೀಡಾದರೆ ಮತ್ತು ಭಾರೀ ಹಾನಿಯನ್ನುಂಟುಮಾಡುವ ಸಂದರ್ಭದಲ್ಲಿ, ವ್ಯಾಲಿಡ್ ಆಗಿರುವ ಇನ್ಶೂರೆನ್ಸ್ ಪ್ಲ್ಯಾನ್ ನಿಮ್ಮ ಹಣಕಾಸನ್ನು ಭದ್ರವಾಗಿಸಲು ಸಹಾಯ ಮಾಡುತ್ತದೆ.

ಭಾರತದಲ್ಲಿನ ಇನ್ಶೂರೆನ್ಸ್ ಕಂಪನಿಗಳು ನಿಮ್ಮ ಅಗತ್ಯಗಳಿಗೆ ತಕ್ಕಂತೆ ಕಾರ್ ಇನ್ಶೂರೆನ್ಸ್ ಪಾಲಿಸಿಗಳ ಮೇಲೆ ಆಕರ್ಷಕ ಡೀಲ್‌ಗಳನ್ನು ನೀಡುತ್ತವೆ. ಈ ನಿಟ್ಟಿನಲ್ಲಿ, ಡಿಜಿಟ್ ಇನ್ಶೂರೆನ್ಸ್ ತನ್ನ ಪ್ರಯೋಜನಗಳ ಹೋಸ್ಟ್ ಮತ್ತು ಸ್ಪರ್ಧಾತ್ಮಕ ಮಾರುತಿ ಸುಜುಕಿ ಇಗ್ನಿಸ್ ಇನ್ಶೂರೆನ್ಸ್ ಬೆಲೆಯಿಂದಾಗಿ ಇತರರಿಗಿಂತ ವಿಶೇಷವಾಗಿ ಕಾಣುತ್ತದೆ.

ಮಾರುತಿ ಇಗ್ನಿಸ್ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?

ನೀವು ಡಿಜಿಟ್‌ನ ಮಾರುತಿ ಇಗ್ನಿಸ್ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಮಾರುತಿ ಸುಜುಕಿ ಇಗ್ನಿಸ್‌ಗಾಗಿ ಕಾರ್‌ ಇನ್ಶೂರೆನ್ಸ್ ಪ್ಲ್ಯಾನ್‌ಗಳು

ಥರ್ಡ್-ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು

×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್‌ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್‌ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವಾಹನದ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

ಎಷ್ಟು ವೇಗವಾಗಿ ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಸೆಟಲ್ ಆಗುತ್ತವೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಮಾರುತಿ ಸುಜುಕಿ ಇಗ್ನಿಸ್‌ಗಾಗಿ ಕಾರ್ ಇನ್ಶೂರೆನ್ಸ್' ಕುರಿತು ಇನ್ನಷ್ಟು ಮಾಹಿತಿ

ಇನ್ಶೂರೆನ್ಸ್ ಬೆಲೆಯ ಹೊರತಾಗಿ, ಅತ್ಯುತ್ತಮ ಇನ್ಶೂರೆನ್ಸ್ ಪಾಲಿಸಿಯ ಖರೀದಿಯ ಮೊದಲು ಅಗತ್ಯವಾಗಿ ಪರಿಗಣಿಸಬೇಕಾದ ಇತರ ಅಂಶಗಳಿವೆ

ಹೀಗಾಗಿ, ನೀವು ಈ ಪಾಯಿಂಟರ್‌ಗಳಿಗೆ ಸಂಬಂಧಿಸಿದಂತೆ ಪ್ಲ್ಯಾನ್‌ಗಳನ್ನು ಹೋಲಿಸಬೇಕು ಮತ್ತು ತಿಳುವಳಿಕೆಯುತ ನಿರ್ಧಾರವನ್ನು ತೆಗೆದುಕೊಳ್ಳಬೇಕು.

ಡಿಜಿಟ್‌ನಿಂದ ಮಾರುತಿ ಸುಜುಕಿ ಇಗ್ನಿಸ್‌ಗಾಗಿ ಇನ್ಶೂರೆನ್ಸ್ ಅನ್ನು ಪಡೆಯುವ ಕೆಲವು ಅನುಕೂಲಗಳು ಇಲ್ಲಿವೆ -

1. ಇನ್ಶೂರೆನ್ಸ್ ಆಯ್ಕೆಗಳು

ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಾಗಿ ನೀವು ಡಿಜಿಟ್ ಅನ್ನು ಆಯ್ಕೆ ಮಾಡಿಕೊಂಡರೆ, ಕೆಳಗಿನ ಇನ್ಶೂರೆನ್ಸ್ ವಿಧಗಳಿಂದ ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಸೂಕ್ತವಾದ ಪ್ಲ್ಯಾನ್‌ಗಳನ್ನು ನೀವು ಆಯ್ಕೆ ಮಾಡಬಹುದು -

  • ಥರ್ಡ್-ಪಾರ್ಟಿ ಇನ್ಶೂರೆನ್ಸ್

ಇದು ನಿಮ್ಮ ಮಾರುತಿ ಇಗ್ನಿಸ್‌ನಿಂದ ಯಾವುದೇ ವ್ಯಕ್ತಿ, ಪ್ರಾಪರ್ಟಿ ಅಥವಾ ವಾಹನಕ್ಕೆ ಉಂಟಾಗುವ ಥರ್ಡ್ ಪಾರ್ಟಿ ಹಾನಿಯನ್ನು ಕವರ್ ಮಾಡುವ ಬೇಸಿಕ್ ಇನ್ಶೂರೆನ್ಸ್ ಪ್ಲ್ಯಾನ್‌ ಆಗಿದೆ. ನಿಮ್ಮ ಕಾರ್ ಮತ್ತು ಥರ್ಡ್ ಪಾರ್ಟಿ ನಡುವಿನ ಅಪಘಾತದಲ್ಲಿ, ನಿಮ್ಮ ಲಯಬಿಲಿಟಿಯನ್ನು ಹೆಚ್ಚಿಸುವ ಹಾನಿಗಳ ವೆಚ್ಚವನ್ನು ನೀವು ಭರಿಸಬೇಕಾಗುತ್ತದೆ. ಆದಾಗ್ಯೂ, ನಿಮ್ಮ ಮಾರುತಿ ಸುಜುಕಿ ಇಗ್ನಿಸ್‌ಗಾಗಿ ನೀವು ಡಿಜಿಟ್‌ನಿಂದ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಅನ್ನು ಪಡೆದರೆ, ನಿಮ್ಮ ಪರವಾಗಿ ನಿಮ್ಮ ಇನ್ಶೂರೆನ್ಸ್ ಕಂಪನಿಯು ಅಂತಹ ವೆಚ್ಚಗಳನ್ನು ಪಾವತಿಸುತ್ತದೆ. ಇದಲ್ಲದೆ, ಮೋಟಾರ್ ವೆಹಿಕಲ್ಸ್ ಆ್ಯಕ್ಟ್, 1988 ರ ಪ್ರಕಾರ ಈ ಪಾಲಿಸಿಯನ್ನು ಹೊಂದುವುದು ಕಡ್ಡಾಯವಾಗಿದೆ.

  • ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್

ನಿಮ್ಮ ಮಾರುತಿ ಕಾರಿಗೆ ನೀವು ಒಟ್ಟಾರೆ ರಕ್ಷಣೆಯನ್ನು ಬಯಸಿದರೆ, ಡಿಜಿಟ್‌ನಿಂದ ಕಾಂಪ್ರೆಹೆನ್ಸಿವ್ ಸುಜುಕಿ ಇಗ್ನಿಸ್ ಇನ್ಶೂರೆನ್ಸ್ ಪ್ಲ್ಯಾನ್‌ಗಳನ್ನು ನೀವು ಖರೀದಿಸಬಹುದು. ಈ ಇನ್ಶೂರೆನ್ಸ್ ಅಪಘಾತಗಳು, ಬೆಂಕಿ, ಕಳ್ಳತನ, ಭೂಕಂಪ ಇತ್ಯಾದಿಗಳಿಂದ ಉಂಟಾದ ಸ್ವಂತ ಕಾರಿನ ಹಾನಿ (ಓನ್ ಕಾರ್ ಡ್ಯಾಮೇಜ್) ಯ ಜೊತೆಗೆ ಥರ್ಡ್ ಪಾರ್ಟಿ ಹಾನಿಗಳಿಗೂ ಸಹ ಕವರೇಜ್ ಪ್ರಯೋಜನಗಳನ್ನು ಒದಗಿಸುತ್ತದೆ.

2. ಸುಲಭ ಕ್ಲೈಮ್ ಪ್ರಕ್ರಿಯೆ

ಡಿಜಿಟ್‌ನಿಂದ ಮಾರುತಿ ಸುಜುಕಿ ಇಗ್ನಿಸ್ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವ ಮೂಲಕ ನೀವು ತೊಂದರೆ-ಮುಕ್ತ ಕ್ಲೈಮ್ ಪ್ರಕ್ರಿಯೆಯನ್ನು ಅನಂದಿಸಬಹುದು. ಇದು ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸೆಲ್ಫ್-ಇನ್‌ಸ್ಪೆಕ್ಷನ್ ಪ್ರಕ್ರಿಯೆಯಿಂದಾಗಿ. ಈ ತಂತ್ರಜ್ಞಾನ-ಚಾಲಿತ ಪ್ರಕ್ರಿಯೆಯ ಅಡಿಯಲ್ಲಿ, ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ನಿಮ್ಮ ಇನ್ಶೂರೆನ್ಸ್ ಪ್ಲ್ಯಾನ್‌ನ ವಿರುದ್ಧ ನೀವು ಕ್ಲೈಮ್ ಮಾಡಬಹುದು. ನೀವು ಮಾಡಬೇಕಿರುವುದು ಇಷ್ಟೇ, ನಿಮ್ಮ ಕಾರಿನ ಹಾನಿಯನ್ನು ಶೂಟ್ ಮಾಡಿ ಮತ್ತು ರಿಪೇರಿ ವಿಧಾನವನ್ನು ಆಯ್ಕೆ ಮಾಡಿ.

3. ಕ್ಯಾಶ್‌ಲೆಸ್ ರಿಪೇರಿ ವಿಧಾನ

ಡಿಜಿಟ್ ತನ್ನ ಕಸ್ಟಮರ್‌ಗಳಿಗೆ ಕ್ಯಾಶ್‌ಲೆಸ್ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದರಿಂದ ಅವರು ಕಾರ್ ರಿಪೇರಿ ಸರ್ವೀಸ್‌ಗಳಿಗೆ ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ. ಹೀಗಾಗಿ, ನೀವು ಅಥರೈಸ್ಡ್ ನೆಟ್‌ವರ್ಕ್ ಗ್ಯಾರೇಜ್‌ಗಳಿಂದ ನಿಮ್ಮ ಮಾರುತಿ ಕಾರನ್ನು ರಿಪೇರಿ ಮಾಡಿಸಬಹುದು ಮತ್ತು ನಿಮ್ಮ ಪರವಾಗಿ ಹಣ ಪಾವತಿಸಲು ನಿಮ್ಮ ಇನ್ಶೂರರ್‌ಗಾಗಿ ಕಾಯಿರಿ. ನೀವು ಮಾಡಬೇಕಿರುವುದು ಇಷ್ಟೇ, ಆನ್‌ಲೈನ್‌ನಲ್ಲಿ ನಿಮ್ಮ ಮಾರುತಿ ಸುಜುಕಿ ಇಗ್ನಿಸ್ ಕಾರ್ ಇನ್ಶೂರೆನ್ಸ್‌ಗಾಗಿ ಕ್ಲೈಮ್ ಮಾಡುವಾಗ, ನೀವು ಕ್ಯಾಶ್‌ಲೆಸ್ ರಿಪೇರಿ ವಿಧಾನವನ್ನು ಆಯ್ಕೆ ಮಾಡುವುದು.

4. ಹಲವಾರು ನೆಟ್ವರ್ಕ್ ಗ್ಯಾರೇಜ್‌ಗಳು

ಡಿಜಿಟ್‌ನ ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳ ರಿಪೇರಿ ಸೆಂಟರ್‌ಗಳು ದೇಶದಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದ, ಸುಲಭವಾಗಿ ಆ್ಯಕ್ಸೆಸ್ ಮಾಡಬಹುದಾಗಿದೆ. ಆದ್ದರಿಂದ, ಅಪಘಾತಗಳ ಸಂದರ್ಭದಲ್ಲಿ ಈ ಪ್ರೊಫೆಷನಲ್ ಸೆಂಟರ್‌ಗಳಿಂದ ನಿಮ್ಮ ಮಾರುತಿ ಕಾರನ್ನು ರಿಪೇರಿ ಮಾಡಿಸುವುದು ನಿಮಗೆ ಅನುಕೂಲಕರವಾಗಿರುತ್ತದೆ.

5. ಆ್ಯಡ್-ಆನ್ ಪ್ರಯೋಜನಗಳು

ನೀವು ಡಿಜಿಟ್‌ನಿಂದ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಅನ್ನು ಪಡೆದರೆ, ಹೆಚ್ಚುವರಿ ಕವರೇಜ್‌ಗಾಗಿ ನಿಮ್ಮ ಬೇಸ್ ಪ್ಲ್ಯಾನ್‌ನ ಮೇಲೆ ಆ್ಯಡ್-ಆನ್ ಪಾಲಿಸಿಗಳನ್ನು ಸೇರಿಸುವ ಆಯ್ಕೆಯನ್ನು ನೀವು ಪಡೆಯುತ್ತೀರಿ. ಆದಾಗ್ಯೂ, ಈ ಆ್ಯಡ್-ಆನ್ ಪ್ರಯೋಜನಗಳನ್ನು ಪಡೆಯಲು, ನೀವು ಮಾರುತಿ ಸುಜುಕಿ ಇಗ್ನಿಸ್ ಇನ್ಶೂರೆನ್ಸ್ ವೆಚ್ಚವನ್ನು ಅಲ್ಪ ಮೊತ್ತದಿಂದ ಹೆಚ್ಚಿಸಬೇಕಾಗುತ್ತದೆ. ನೀವು ಪ್ರಯೋಜನ ಪಡೆಯಬಹುದಾದ ಕೆಲವು ಆ್ಯಡ್-ಆನ್ ಕವರ್‌ಗಳು ಹೀಗಿವೆ -

  • ಕನ್ಸ್ಯೂಮೆಬಲ್ ಕವರ್
  • ಇಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಷನ್ ಕವರ್
  • ರಿಟರ್ನ್ ಟು ಇನ್‌ವಾಯ್ಸ್ ಕವರ್‌
  • ರೋಡ್‌ಸೈಡ್ ಅಸಿಸ್ಟೆನ್ಸ್ 
  • ಝೀರೋ ಡೆಪ್ರಿಸಿಯೇಶನ್ ಕವರ್

6. ಡೋರ್‌ಸ್ಟೆಪ್ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯ

ನಿಮ್ಮ ಮಾರುತಿ ಸುಜುಕಿ ಇಗ್ನಿಸ್ ಕಾರ್ ಇನ್ಶೂರೆನ್ಸ್ ಪ್ಲ್ಯಾನ್‌ನ ವಿರುದ್ಧ ಕ್ಲೈಮ್ ಫೈಲ್ ಮಾಡುವಾಗ, ಡಿಜಿಟ್ ನಿಮ್ಮ ಹಾನಿಗೊಳಗಾದ ಕಾರಿನ ಭಾಗಗಳಿಗೆ ಡೋರ್‌ಸ್ಟೆಪ್ ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯದ ಆಯ್ಕೆಯನ್ನು ನೀಡುತ್ತದೆ. ಈ ರೀತಿಯಾಗಿ, ನಿಮ್ಮ ಮನೆಯಿಂದಲೇ ನೀವು ರಿಪೇರಿ ಸರ್ವೀಸ್‌ಗಳನ್ನು ಪಡೆಯಬಹುದು.

7. ಪಾಲಿಸಿ ಪ್ರೀಮಿಯಂಗಳ ಮೇಲೆ ಬೋನಸ್‌ಗಳು ಮತ್ತು ಡಿಸ್ಕೌಂಟ್‌ಗಳು

ಮಾರುತಿ ಸುಜುಕಿ ಇಗ್ನಿಸ್ ಕಾರ್ ಇನ್ಶೂರೆನ್ಸ್‌ನ ರಿನೀವಲ್ ಸಮಯದಲ್ಲಿ, ನಿಮ್ಮ ಪಾಲಿಸಿ ಅವಧಿಯೊಳಗೆ ನೀವು ನಾನ್-ಕ್ಲೈಮ್ ವರ್ಷವನ್ನು ನಿಭಾಯಿಸಿದರೆ, ಆಗ ನಿಮ್ಮ ಪಾಲಿಸಿ ಪ್ರೀಮಿಯಂನ ಮೇಲೆ ಡಿಜಿಟ್ ಇನ್ಶೂರೆನ್ಸ್ ಕಂಪನಿಯು 50% ವರೆಗೆ ಡಿಸ್ಕೌಂಟ್‌ಗಳನ್ನು ನೀಡಬಹುದು. ನೋ ಕ್ಲೈಮ್ ಬೋನಸ್ ಎಂದೂ ಕರೆಯಲ್ಪಡುವ ಈ ಡಿಸ್ಕೌಂಟ್‌ಗಳನ್ನು ಟ್ರಾನ್ಸ್‌ಫರ್ ಮಾಡಬಹುದಾಗಿದೆ; ಅಂದರೆ, ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ನೀವು ಬದಲಾಯಿಸಿದರೂ, ನೀವು ಆಗಲೂ ಈ ಬೋನಸ್ ಅನ್ನು ಪಡೆಯಬಹುದು.

8. ಐಡಿವಿ (IDV) ಕಸ್ಟಮೈಸೇಶನ್

ಮಾರುತಿ ಸುಜುಕಿ ಇಗ್ನಿಸ್ ಕಾರ್ ಇನ್ಶೂರೆನ್ಸ್ ರಿನೀವಲ್‌ನ ಬೆಲೆಯು ಕಾರ್ ಇನ್ಶೂರೆನ್ಸ್‌ನ ಘೋಷಿತ ಮೌಲ್ಯದೊಂದಿಗೆ ಬದಲಾಗುತ್ತದೆ. ನಿಮ್ಮ ಮಾರುತಿ ಕಾರಿನ ಐಡಿವಿಯನ್ನು ನಿರ್ಧರಿಸುವ ಮೂಲಕ, ಕಾರಿನ ಕಳ್ಳತನವಾದಲ್ಲಿ ಅಥವಾ ರಿಪೇರಿಯನ್ನು ಮೀರಿದ ಹಾನಿಯಾದಲ್ಲಿ, ಇನ್ಶೂರೆನ್ಸ್ ಕಂಪನಿಯವರು ರಿಟರ್ನ್ ಮೊತ್ತವನ್ನು ನೀಡುತ್ತಾರೆ. ಆದಾಗ್ಯೂ, ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಈ ಮೌಲ್ಯವನ್ನು ಆಯ್ಕೆ ಮಾಡಲು ಡಿಜಿಟ್ ನಿಮ್ಮನ್ನು ಅನುಮತಿಸುತ್ತದೆ. ಹೀಗಾಗಿ, ಮೌಲ್ಯವನ್ನು ಕಸ್ಟಮೈಸ್ ಮಾಡುವಾಗ ನಿಮ್ಮ ಆದಾಯವನ್ನು ನೀವು ಗರಿಷ್ಠಗೊಳಿಸಬಹುದು.

ಇದನ್ನು ಹೊರತುಪಡಿಸಿ, ನಿಮ್ಮ ಮಾರುತಿ ಸುಜುಕಿ ಇಗ್ನಿಸ್ ಕಾರ್ ಇನ್ಶೂರೆನ್ಸ್‌ನ ಬಗ್ಗೆ ಯಾವುದಾದರೂ ಸಂದೇಹ ಮತ್ತು ಪ್ರಶ್ನೆಗಳಿದ್ದಲ್ಲಿ, ನೀವು ಯಾವುದೇ ಸಮಯದಲ್ಲಿ ಡಿಜಿಟ್‌ನ ಕಸ್ಟಮರ್ ಸಪೋರ್ಟ್ ಅನ್ನು ಸಂಪರ್ಕಿಸಬಹುದು ಮತ್ತು ತ್ವರಿತ ಪರಿಹಾರಗಳನ್ನು ಪಡೆಯಬಹುದು. ಆದ್ದರಿಂದ, ಮೇಲೆ ತಿಳಿಸಲಾದ ಪ್ರಯೋಜನಗಳ ಕಾರಣದಿಂದಾಗಿ, ನೀವು ಮಾರುತಿ ಸುಜುಕಿ ಇಗ್ನಿಸ್‌ಗಾಗಿ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಾಗಿ ಡಿಜಿಟ್ ಕಂಪನಿಯನ್ನು ಆಯ್ಕೆ ಮಾಡಬಹುದು.

ಮಾರುತಿ ಸುಜುಕಿ ಇಗ್ನಿಸ್‌ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯವಾಗಿದೆ?

ಮಾರುತಿ ಸುಜುಕಿ ಇಗ್ನಿಸ್ ಕಾರ್ ಒಂದು ಮಿನಿ ಲಕ್ಷುರಿ ವರ್ಷನ್ ಆಗಿದೆ. ಆದ್ದರಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನಿಮಗೆ ಕಾರ್ ಇನ್ಶೂರೆನ್ಸ್‌ನ ಅಗತ್ಯವಿದೆ. ನಷ್ಟ ಉಂಟಾದಾಗ ವಿವಿಧ ರೀತಿಯಲ್ಲಿ ನಿಮಗೆ ರಿಇಂಬರ್ಸ್ ಮಾಡುವುದು ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿನ ಕವರೇಜ್ ಆಗಿದೆ.

  • ಹಣಕಾಸಿನ ನಷ್ಟದಿಂದ ನಿಮ್ಮನ್ನು ರಕ್ಷಿಸುತ್ತದೆ: ನೈಸರ್ಗಿಕ ವಿಪತ್ತುಗಳು, ಕಳ್ಳತನದಿಂದಾಗಲಿ ಅಥವಾ ಅಪಘಾತದಿಂದಾಗಲಿ, ನೀವು ನಿಮ್ಮ ಕಾರಿನ ಮೌಲ್ಯದ ಅಥವಾ ಅದರ ಭಾಗಗಳ ಮೌಲ್ಯದ ಹಣವನ್ನು ಕಳೆದುಕೊಳ್ಳುತ್ತೀರಿ. ರಿಪೇರಿಗಾಗಿ ಉಂಟಾಗುವ ಹಣಕಾಸಿನ ಹೊರೆ ಕೆಲವೊಮ್ಮೆ ನಿಮ್ಮ ಜೇಬಿಗೆ ತೆರಿಗೆಯನ್ನು ವಿಧಿಸಬಹುದು ಆದರೆ ಇಂತಹ ಸಮಯದಲ್ಲಿ ಇನ್ಶೂರೆನ್ಸ್ ನಿಮ್ಮ ರಕ್ಷಕನಾಗಬಹುದು.
  • ಭಾರತೀಯ ರಸ್ತೆಗಳಲ್ಲಿ ಕಾನೂನುಬದ್ಧವಾಗಿ ಚಲಾಯಿಸಲು ಮಾಡಲು: ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಕಾನೂನು ಅನುಸರಣೆಯನ್ನು ಅನುಮೋದಿಸುತ್ತದೆ. ರಸ್ತೆಯಲ್ಲಿ ಕಾನೂನುಬದ್ಧವಾಗಿ ವಾಹನ ಚಲಾಯಿಸಲು ಇದು ಪರ್ಮಿಟ್ ಆಗಿದೆ. ಪಾಲಿಸಿಯಿಲ್ಲದೇನೀವು ವಾಹನ ಚಲಾಯಿಸಿದರೆ, ನಿಮ್ಮ ಲೈಸೆನ್ಸ್ ಅನ್ನು ಕ್ಯಾನ್ಸಲ್ ಮಾಡಲಾಗುತ್ತದೆ.
  • ಥರ್ಡ್-ಪಾರ್ಟಿ ಲಯಬಿಲಿಟಿ: ಥರ್ಡ್-ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಕಾನೂನಿನ ಮೂಲಕ ಕಡ್ಡಾಯವಾಗಿದೆ. ಅಪಘಾತದಲ್ಲಿ ಥರ್ಡ್ ಪಾರ್ಟಿ ವ್ಯಕ್ತಿಗೆ ಅಥವಾ ಪ್ಯಾಸೆಂಜರ್‌ಗಳಿಗೆ ಆಗುವ ಹಾನಿಯು ದೊಡ್ಡದಾಗಿರುತ್ತದೆ ಮತ್ತು ರಿಇಂಬರ್ಸ್ ಪ್ರಮಾಣವು ನಿಮ್ಮ ಸಾಮರ್ಥ್ಯವನ್ನು ಮೀರಿ ಹೋಗಬಹುದು. ಅಂತಹ ಲಯಬಿಲಿಟಿಗಳಿಂದ ನಿಮ್ಮನ್ನು ರಕ್ಷಿಸಲು ಇನ್ಶೂರೆನ್ಸ್ ಪಾಲಿಸಿಯು ವ್ಯವಸ್ಥೆ ಮಾಡುತ್ತದೆ.
  • ಕಾಂಪ್ರೆಹೆನ್ಸಿವ್ ಕವರ್: ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅನ್ನು ಹೊಂದುವುದು ಪ್ರಯೋಜನಕಾರಿಯಾಗಿದೆ ಏಕೆಂದರೆ ಇದು ಅಪಘಾತದ ನಂತರ ಸ್ವಂತ ಹಾನಿಯನ್ನು (ಓನ್ ಡ್ಯಾಮೇಜ್) ಮತ್ತು ವಾಹನದ ಹಾನಿಯಿಂದ ಮಾಲೀಕರನ್ನು ರಕ್ಷಿಸುತ್ತದೆ. ಡ್ರೈವರ್‌ಗಳಿಗೆ ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಕಡ್ಡಾಯವಾಗಿದೆ.

ಇದನ್ನು ಹೊರತುಪಡಿಸಿ, ಪಾಲಿಸಿಯ ಅಡಿಯಲ್ಲಿ ಕೆಲವು ಕಾರ್ ಇನ್ಶೂರೆನ್ಸ್ ಆ್ಯಡ್-ಆನ್‌ಗಳನ್ನು ಆಯ್ಕೆ ಮಾಡುವ ಮೂಲಕ ಕವರೇಜನ್ನು ವಿಸ್ತರಿಸುವ ಆಯ್ಕೆ ಇದೆ. ಇವುಗಳಲ್ಲಿ ಕೆಲವು ಬ್ರೇಕ್‌ಡೌನ್ ಅಸಿಸ್ಟೆನ್ಸ್, ಇಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಷನ್, ಟೈರ್ ಪ್ರೊಟೆಕ್ಟಿವ್ ಕವರ್ ಮತ್ತು ಝೀರೋ ಡೆಪ್ರಿಸಿಯೇಶನ್ ಕವರ್ ಇತ್ಯಾದಿಗಳು ಸೇರಿವೆ.

ಮಾರುತಿ ಸುಜುಕಿ ಇಗ್ನಿಸ್ ಬಗ್ಗೆ ಇನ್ನಷ್ಟು ತಿಳಿಯಿರಿ

ಭಾರತೀಯ ಆಟೋಮೊಬೈಲ್ ಮಾರ್ಕೆಟ್ ಇತರ ಯಾವುದೇ ಉದ್ಯಮಕ್ಕಿಂತ ಹೆಚ್ಚು ಹೊಸ ಉತ್ಪನ್ನ ಸೇರ್ಪಡೆಗಳನ್ನು ನೋಡುತ್ತದೆ. ಪ್ರೀಮಿಯಂ ಕಾರ್ ಮಾರಾಟಗಾರರಿಂದ ಅಂತಹ ಒಂದು ಆವಿಷ್ಕಾರವೇ ಮಾರುತಿ ಸುಜುಕಿ ಇಗ್ನಿಸ್ ಆಗಿದೆ. ಅದರ ಅತ್ಯದ್ಭುತ ಡಿಸೈನ್ಸ್ ಮತ್ತು ಪ್ರೀಮಿಯಂ ಅನುಭವಕ್ಕಾಗಿ ತನ್ನ 13ನೇ ವರ್ಷನ್‌ನಲ್ಲಿ NDTV Carandbike ಪ್ರಶಸ್ತಿಗಳನ್ನು ಪಡೆದಿದೆ.

ಮಾರುತಿ ಸುಜುಕಿ ಇಗ್ನಿಸ್ ಅನ್ನು ಟೋಟಲ್ ಎಫೆಕ್ಟಿವ್ ಕಂಟ್ರೋಲ್ ಟೆಕ್ನಾಲಜಿ ಪ್ಲಾಟ್‌ಫಾರ್ಮ್‌ನಲ್ಲಿ ತಯಾರಿಸಲಾಗುತ್ತಿದ್ದು, ಇದು ಪ್ಯಾಸೆಂಜರ್‌ಗಳಿಗೆ ಕಾರುಗಳನ್ನು ಸುರಕ್ಷಿತಗೊಳಿಸುತ್ತದೆ. ಇದು ಮನಸೆಳೆಯುವ ಲುಕ್‌ನೊಂದಿಗೆ 1000 ಪ್ಲಸ್ ಕ್ಯೂಬಿಕ್ ಕೆಪ್ಯಾಸಿಟಿಯ ಫ್ಯೂಯೆಲ್-ಎಫಿಶಿಯೆಂಟ್ ಕಾರ್ ಆಗಿದೆ.

20 ಪ್ಲಸ್ ಮಾಡೆಲ್‌ಗಳಲ್ಲಿ, ಮಾರುತಿ ಸುಜುಕಿ ಇಗ್ನಿಸ್ ಕಾರ್ ಅರ್ಬನ್ ಸೆಕ್ಟರ್‌ಗಾಗಿ ಮತ್ತೊಂದು ಕಾರ್ ಆಗಿದೆ. ಅದರ 4 ವೇರಿಯಂಟ್‌ಗಳು ಪೆಟ್ರೋಲ್/ಡೀಸೆಲ್ ಎರಡರಲ್ಲೂ ಲಭ್ಯವಿದ್ದು, ಬೆಲೆಯು₹4.79 ಲಕ್ಷಗಳಿಂದ ₹7.14 ಲಕ್ಷಗಳ ನಡುವೆಯಿದೆ. ಇದು ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ವರ್ಷನ್ ಅನ್ನು ಹೊಂದಿದೆ. ಸಾಕಷ್ಟು ಫ್ಯೂಯೆಲ್-ಎಫಿಶಿಯೆಂಟ್ ಕಾರ್ ಆಗಿರುವ ಮಾರುತಿ ಸುಜುಕಿ ಇಗ್ನಿಸ್ ಕಾರ್, ಸರಾಸರಿ 20.89 ಕಿಮೀ/ಲೀಟರ್ ಮೈಲೇಜ್ ನೀಡುತ್ತದೆ.

ನೀವು ಮಾರುತಿ ಸುಜುಕಿ ಇಗ್ನಿಸ್ ಅನ್ನು ಏಕೆ ಖರೀದಿಸಬೇಕು?

ಮಾರುತಿ ಸುಜುಕಿ ಇಗ್ನಿಸ್ ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ ಎಂಬ ಹೆಸರಿನ ವೇರಿಯಂಟ್‌ಗಳಿರುವ ಕಾಂಪ್ಯಾಕ್ಟ್ ಕಾರ್ ಆಗಿದೆ. ಇವುಗಳನ್ನು ಏರ್‌ಬ್ಯಾಗ್‌ಗಳು, ಎಬಿಎಸ್, ಹೆಡ್ ಬೀಮ್ ಅಡ್ಜಸ್ಟರ್, ಆನ್ ಇಂಡಿಕೇಟರ್‌ಗಳು ಮತ್ತು ಹೆಚ್ಚಿನವುಗಳಂತಹ ಅಲ್ಟ್ರಾಮೋಡರ್ನ್ ಫೀಚರ್‌ಗಳೊಂದಿಗೆ ಡಿಸೈನ್ ಮಾಡಲಾಗಿದೆ. ಆಲ್ಫಾ ಮತ್ತು ಝೀಟಾದಂತಹ ಹೆಚ್ಚಿನ ವೇರಿಯಂಟ್‌ಗಳು ರಿಯರ್ ವೈಪರ್‌ಗಳು, ಹ್ಯಾಲೊಜೆನ್‌ಗಳು ಮತ್ತು ಫ್ರಂಟ್ ಫಾಗ್ ಲ್ಯಾಂಪ್‌ಗಳನ್ನು ಸಹ ಹೊಂದಿವೆ.

ಉತ್ತಮ ಅನುಕೂಲತೆಯನ್ನು ನೀಡಲು ಸ್ಟೀರಿಂಗ್ ಮೌಂಟೆಡ್ ಆಡಿಯೋ, ರಿಯರ್ ಪಾರ್ಕಿಂಗ್ ಸೆನ್ಸಾರ್, ಪುಶ್ ಸ್ಟಾರ್ಟ್-ಸ್ಟಾಪ್ ಮತ್ತು ಹೈಟ್-ಅಡ್ಜಸ್ಟೆಬಲ್ ಡ್ರೈವರ್ ಸೀಟ್ ಅನ್ನು ವೇರಿಯಂಟ್‌ಗಳು ಹೊಂದಿವೆ. ಮಾರುತಿ ಸುಜುಕಿ ಇಗ್ನಿಸ್ ಸರಿಯಾದ ಟೆಕ್ನಾಲಜಿ ಇನ್ಸ್ಟಾಲೇಶನ್‌ನೊಂದಿಗೆ ಹೊಸ ಯುಗದ ವಿಶಾಲವಾದ ಕಾರ್ ಆಗಿದೆ. ಫ್ಯೂಯೆಲ್, ಲೈಟ್ಸ್, ಡೋರ್ಸ್ ಮತ್ತು ಸೀಟ್ ಬೆಲ್ಟ್‌ಗಳಂತಹ ವಿಷಯಗಳಿಗಾಗಿ ನೀವು ಸರಿಯಾದ ಸಮಯದಲ್ಲಿ ಎಚ್ಚರಿಕೆಯ ಅಲಾರ್ಮ್ ಅನ್ನು ಪಡೆಯುತ್ತೀರಿ.

ಲಕ್ಷುರಿ ಮಾರುತಿ ಸುಜುಕಿ ಇಗ್ನಿಸ್‌ನ ಸ್ವಾದವನ್ನು ನೀಡುವ ಮೂಲಕ ಕೀಲೆಸ್ ಎಂಟ್ರಿಯನ್ನು ಮತ್ತು ಮ್ಯೂಸಿಕ್ ಸಿಸ್ಟಮ್ ಅನ್ನು ಸಹ ಹೊಂದಿದೆ.

ಚೆಕ್ ಮಾಡಿ: ಮಾರುತಿ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ

ಮಾರುತಿ ಸುಜುಕಿ ಇಗ್ನಿಸ್‌ನ ವೇರಿಯಂಟ್‌ಗಳು

ವೇರಿಯಂಟ್‌ಗಳ ಹೆಸರು ವೇರಿಯಂಟ್‌ಗಳ ಬೆಲೆ (ನವದೆಹಲಿಯಲ್ಲಿ, ಇತರ ನಗರಗಳಲ್ಲಿ ಬೆಲೆಯು ಬದಲಾಗಬಹುದು)
ಸಿಗ್ಮಾ ₹5.65 ಲಕ್ಷ
ಡೆಲ್ಟಾ ₹6.41 ಲಕ್ಷ
ಝೀಟಾ ₹7.03 ಲಕ್ಷ
ಡೆಲ್ಟಾ AMT ₹7.13 ಲಕ್ಷ
ಝೀಟಾ AMT ₹7.58ಲಕ್ಷ
ಆಲ್ಫಾ ₹7.85 ಲಕ್ಷ
ಆಲ್ಫಾ AMT ₹8.50 ಲಕ್ಷ

[1]

ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಮಾರುತಿ ಸುಜುಕಿ ಇಗ್ನಿಸ್ ಕಾರ್ ಇನ್ಶೂರೆನ್ಸಿನ ಪ್ರೀಮಿಯಂ ಅನ್ನು ಹೇಗೆ ಕಡಿಮೆ ಮಾಡುವುದು?

ಮಾರುತಿ ಸುಜುಕಿ ಇಗ್ನಿಸ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ನೀವು ಸರಿಯಾದ ಐಡಿವಿಯನ್ನು ಸೆಟ್ ಮಾಡುವ ಮೂಲಕ, ನೋ ಕ್ಲೈಮ್ ಬೋನಸ್ ಅನ್ನು ಕಲೆಕ್ಟ್ ಮಾಡುವ ಮೂಲಕ, ಮುಕ್ತಾಯ ದಿನಾಂಕದ ಮೊದಲೇ ಪಾಲಿಸಿಗಳನ್ನು ರಿನೀವ್ ಮಾಡುವ ಮೂಲಕ ಮತ್ತು ಅಗತ್ಯವಿರುವ ಕವರೇಜನ್ನು ಮಾತ್ರ ಪಡೆಯುವ ಮೂಲಕ ಕಡಿಮೆ ಮಾಡಬಹುದು.

ಮಾರುತಿ ಸುಜುಕಿ ಇಗ್ನಿಸ್ ಇನ್ಶೂರೆನ್ಸ್‌ನ ಪ್ರೀಮಿಯಂ ಅನ್ನು ಇನ್ಸೂರೆನ್ಸ್ ಕಂಪನಿಗಳು ಹೇಗೆ ನಿರ್ಧರಿಸುತ್ತವೆ?

ಇನ್ಶೂರೆನ್ಸ್ ಕಂಪನಿಗಳು ನಿಮ್ಮ ಮಾರುತಿ ಕಾರಿನ ಕಾರ್ ಮಾಡೆಲ್, ಮೇಕಿಂಗ್, ಅದರ ವಯಸ್ಸು ಮತ್ತು ರಿಜಿಸ್ಟ್ರೇಷನ್ ಲೊಕೇಶನ್ ಅನ್ನು ಆಧರಿಸಿ ಪಾಲಿಸಿ ಪ್ರೀಮಿಯಂ ಅನ್ನು ನಿರ್ಧರಿಸುತ್ತವೆ.