ಹ್ಯುಂಡೈ ಆಕ್ಸೆಂಟ್ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ದಕ್ಷಿಣ ಕೊರಿಯಾದ ತಯಾರಕರಾದ ಹ್ಯುಂಡೈ ಹಲವಾರು ದೇಶಗಳ ಪ್ರಯಾಣಿಕ ಕಾರುಗಳ ಮಾರುಕಟ್ಟೆಯಲ್ಲಿ ಸಬ್ಕಾಂಪ್ಯಾಕ್ಟ್ ಕಾರ್ ಆದ, ಆಕ್ಸೆಂಟ್ ಅನ್ನು ಪರಿಚಯಿಸಿತು. ಭಾರತದಲ್ಲಿ, ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಈ ಮಾಡೆಲ್ ಅನ್ನು ಮಾರ್ಚ್ 2014ರಲ್ಲಿ ತಯಾರಿಸಿತು. ಈ ಮಾಡೆಲ್ ಭಾರತೀಯ ಪ್ರಯಾಣಿಕ ಕಾರು ವಿಭಾಗದಲ್ಲಿ ಭಾರಿ ಜನಪ್ರಿಯ ಸೆಡಾನ್ ಆಗಿದೆ. ಹೆಚ್ಚುವರಿಯಾಗಿ, ಹ್ಯುಂಡೈ ಆಕ್ಸೆಂಟ್ ಭಾರತದ ಜನಪ್ರಿಯ ಸಬ್-4 ಮೀಟರ್ ಸೆಡಾನ್ ವಿಭಾಗಕ್ಕೆ ಸೇರಿಕೊಳ್ಳುತ್ತದೆ, 4,000 ಮಿಮೀ ಉದ್ದದ ಕಾರುಗಳಿಗೆ ಜಿಓಐ ಹೆಚ್ಚಿನ ತೆರಿಗೆಯನ್ನು ವಿಧಿಸಿದ ನಂತರ ಇದು ಸಾಧ್ಯವಾಗಿದೆ.
ಈ 5 ಆಸನಗಳ ಸೆಡಾನ್, ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಜೊತೆಗೆ 5 ವಿಭಿನ್ನ ಬಣ್ಣಗಳಲ್ಲಿ ದೊರೆಯುತ್ತದೆ. ಇದಲ್ಲದೆ, ಇದು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ವೇರಿಯೆಂಟ್ ಗಳಲ್ಲಿ ಲಭ್ಯವಿದೆ.
ಈ ಕಾರು ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಸಾಟಿಯಿಲ್ಲದ ಕಾರ್ಯಕ್ಷಮತೆಯನ್ನು ಒದಗಿಸುತ್ತದೆಯಾದರೂ, ಇದು ಅಪಘಾತಗಳಿಂದ ಅಪಾಯಗಳು ಮತ್ತು ಡ್ಯಾಮೇಜ್ ಗಳಿಗೆ ಒಳಗಾಗುತ್ತದೆ. ಆ ನಿಟ್ಟಿನಲ್ಲಿ, ನೀವು ಈ ಕಾರನ್ನು ಹೊಂದಿದ್ದರೆ, ನೀವು ಪ್ರತಿಷ್ಠಿತ ಇನ್ಶೂರೆನ್ಸ್ ಕಂಪನಿಗಳಿಂದ ಹ್ಯುಂಡೈ ಆಕ್ಸೆಂಟ್ ಕಾರ್ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳುವುದು ಅಥವಾ ರಿನೀವ್ ಮಾಡುವುದನ್ನು ಪರಿಗಣಿಸಬೇಕು.
ಭಾರತದಲ್ಲಿ ಹಲವಾರು ಇನ್ಶೂರರ್ಗಳು ಕಾರ್ ಇನ್ಶೂರೆನ್ಸ್ ಮೇಲೆ ಕೈಗೆಟುಕುವ ಪಾಲಿಸಿ ಪ್ರೀಮಿಯಂಗಳು, ರಿಯಾಯಿತಿಗಳು ಮತ್ತು ಇತರ ಸೇವಾ ಪ್ರಯೋಜನಗಳಂತಹ ಆಕರ್ಷಕ ಕೊಡುಗೆಗಳನ್ನು ನೀಡುತ್ತವೆ. ಈ ನಿಟ್ಟಿನಲ್ಲಿ, ಕೆಳಗೆ ತಿಳಿಸಿರುವಂತೆ ಡಿಜಿಟ್ ಇನ್ಶೂರೆನ್ಸ್ ಅದರ ವಿವಿಧ ಪ್ರಯೋಜನಗಳ ಕಾರಣದಿಂದಾಗಿ ವಿಭಿನ್ನವಾಗಿ ಕಾಣುತ್ತದೆ.
ಇನ್ನಷ್ಟು ತಿಳಿಯಲು ಮುಂದೆ ಓದಿ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...
ಅಪಘಾತದ ಕಾರಣದಿಂದಾಗಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ಥರ್ಡ್ ಪಾರ್ಟಿ ವೆಹಿಕಲ್ಗೆ ಉಂಟಾಗುವ ಹಾನಿ |
✔
|
✔
|
ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಉಂಟಾಗುವ ಹಾನಿ |
✔
|
✔
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಮರಣ |
✔
|
✔
|
ನಿಮ್ಮ ಕಾರ್ನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳೊಂದಿಗೆ ಹೆಚ್ಚುವರಿ ರಕ್ಷಣೆ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ
ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!
1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್ಗಳನ್ನೂ ತುಂಬಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್ಫೋನ್ನಿಂದಲೇ ನಿಮ್ಮ ವಾಹನದ ಡ್ಯಾಮೇಜ್ಗಳನ್ನು ತಿಳಿಸಿರಿ.
ನಮ್ಮ ನೆಟ್ವರ್ಕ್ ಗ್ಯಾರೇಜ್ಗಳಲ್ಲಿ ಕ್ಯಾಶ್ಲೆಸ್ ಅಥವಾ ರಿಇಂಬರ್ಸ್ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.
ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಓದಿ
ಸೂಕ್ತವಾದ ಪಾಲಿಸಿಯನ್ನು ಖರೀದಿಸುವ ಮೊದಲು ಗ್ರಾಹಕರು ಇನ್ಶೂರೆನ್ಸ್ ಪ್ಲಾನ್ ಗಳನ್ನು ಮತ್ತು ಅವುಗಳನ್ನು ಒದಗಿಸುವ ಸಂಬಂಧಿತ ಇನ್ಶೂರರ್ಗಳನ್ನು ಆನ್ಲೈನ್ನಲ್ಲಿ ಹೋಲಿಕೆ ಮಾಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ, ಈ ಕೆಳಗಿನ ಪ್ರಯೋಜನಗಳಿಂದಾಗಿ ಡಿಜಿಟ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಬಹುದು:
ಡಿಜಿಟ್ನಿಂದ ಕಾರು ಇನ್ಶೂರೆನ್ಸ್ ಪಾಲಿಸಿಯನ್ನು ಆರಿಸಿಕೊಳ್ಳುವ ವ್ಯಕ್ತಿಗಳು ಈ ಕೆಳಗಿನ ಆಯ್ಕೆಗಳಿಂದ ಪ್ಲಾನ್ ಅನ್ನು ಆಯ್ಕೆ ಮಾಡಬಹುದು:
ಹೆಸರೇ ಸೂಚಿಸುವಂತೆ, ಹ್ಯುಂಡೈ ಆಕ್ಸೆಂಟ್ಗೆ ಇರುವ ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್, ಹ್ಯುಂಡೈ ಆಕ್ಸೆಂಟ್ ನಿಂದ ಆಗುವ ಅಪಘಾತಗಳಿಂದ ಉಂಟಾಗುವ ಥರ್ಡ್ ಪಾರ್ಟಿ ಡ್ಯಾಮೇಜ್ ಅನ್ನು ಕವರ್ ಮಾಡುತ್ತದೆ. ಡಿಜಿಟ್ನಿಂದ ಈ ಇನ್ಶೂರೆನ್ಸ್ ಅನ್ನು ಪಡೆಯುವ ವ್ಯಕ್ತಿಗಳು ಥರ್ಡ್ ಪಾರ್ಟಿ ಲಯಬಿಲಿಟಿಗಳನ್ನು ಕಡಿಮೆ ಮಾಡಬಹುದು. ಏಕೆಂದರೆ ಥರ್ಡ್-ಪಾರ್ಟಿ ವ್ಯಕ್ತಿ, ಪ್ರಾಪರ್ಟಿ ಅಥವಾ ವಾಹನಕ್ಕೆ ಉಂಟಾದ ಡ್ಯಾಮೇಜ್ ಗಳಿಗೆ ಇನ್ಶೂರರ್ ಪಾವತಿಸುತ್ತಾರೆ. ಇದಲ್ಲದೆ, ಮೋಟಾರ್ ವೆಹಿಕಲ್ ಆ್ಯಕ್ಟ್, 1989ರ ಪ್ರಕಾರ ಈ ಬೇಸಿಕ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವುದು ಕಡ್ಡಾಯವಾಗಿದೆ.
ಅಪಘಾತಗಳು ಅಥವಾ ಘರ್ಷಣೆಗಳು ವ್ಯಕ್ತಿಯ ಆಕ್ಸೆಂಟ್ ಕಾರಿಗೆ ಡ್ಯಾಮೇಜ್ ಉಂಮಾಡಬಹುದು, ಇದು ದೊಡ್ಡ ದುರಸ್ತಿ ವೆಚ್ಚಗಳಿಗೆ ಕಾರಣವಾಗುತ್ತದೆ. ಈ ವೆಚ್ಚಗಳನ್ನು ಸರಿದೂಗಿಸಲು, ಡಿಜಿಟ್ನಿಂದ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ಲಾನ್ ಅನ್ನು ಖರೀದಿಸಬಹುದು. ಈ ಸುಸಜ್ಜಿತ ಆಕ್ಸೆಂಟ್ ಇನ್ಶೂರೆನ್ಸ್ ಥರ್ಡ್ ಪಾರ್ಟಿ ಮತ್ತು ಓನ್ ಕಾರ್ ಡ್ಯಾಮೇಜ್ ಎರಡಕ್ಕೂ ಕವರೇಜ್ ಪ್ರಯೋಜನಗಳನ್ನು ಒದಗಿಸುತ್ತದೆ.
ಈ ಇನ್ಶೂರೆನ್ಸ್ ಪೂರೈಕೆದಾರರು ನಿಮ್ಮ ಹ್ಯುಂಡೈ ಕಾರನ್ನು ಅದರ ಅಧಿಕೃತ ನೆಟ್ವರ್ಕ್ ಗ್ಯಾರೇಜ್ಗಳಲ್ಲಿ ರಿಪೇರಿ ಮಾಡಿದರೆ ಕ್ಯಾಶ್ಲೆಸ್ ಪ್ರಯೋಜನಗಳನ್ನು ನೀಡುತ್ತಾರೆ. ಈ ಸೌಲಭ್ಯದ ಅಡಿಯಲ್ಲಿ, ಇನ್ಶೂರರ್ ದುರಸ್ತಿ ಕೇಂದ್ರಕ್ಕೆ ನೇರವಾಗಿ ಹಣ ಪಾವತಿಸುವುದರಿಂದ ದುರಸ್ತಿ ವೆಚ್ಚಗಳಿಗಾಗಿ ಮುಂಗಡವನ್ನು ಪಾವತಿಸುವ ಅಗತ್ಯವಿರುವುದಿಲ್ಲ.
ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ ಹಲವಾರು ಗ್ಯಾರೇಜ್ಗಳು ಇರುವುದರಿಂದ ಡಿಜಿಟ್ ನೆಟ್ವರ್ಕ್ ಕಾರ್ ಗ್ಯಾರೇಜ್ಗಳಲ್ಲೊಂದರಲ್ಲಿ ಸುಲಭವಾಗಿ ದುರಸ್ತಿ ಮಾಡಬಹುದು. ಆದ್ದರಿಂದ, ನೀವು ಈ ಇನ್ಶೂರರ್ ರನ್ನು ಆರಿಸಿದರೆ ಅಂತಹ ಗ್ಯಾರೇಜ್ ಅನ್ನು ಕಂಡುಹಿಡಿಯುವುದು ಮತ್ತು ಕ್ಯಾಶ್ಲೆಸ್ ಸೇವೆಗಳನ್ನು ಪಡೆಯುವುದು ಸುಲಭ ಮತ್ತು ಅನುಕೂಲಕರವಾಗಿರುತ್ತದೆ.
ಹ್ಯುಂಡೈ ಆಕ್ಸೆಂಟ್ನ ನಿಮ್ಮ ಕಾರ್ ಇನ್ಶೂರೆನ್ಸ್ ಮೇಲೆ ಹೆಚ್ಚುವರಿ ಕವರೇಜ್ಗಾಗಿ, ನೀವು ಕಾಂಪ್ರೆಹೆನ್ಸಿವ್ ಪ್ಲಾನ್ ಅನ್ನು ಹೊರತುಪಡಿಸಿ ಡಿಜಿಟ್ನಿಂದ ಆ್ಯಡ್-ಆನ್ ಪಾಲಿಸಿಗಳನ್ನು ಆರಿಸಿಕೊಳ್ಳಬಹುದು. ಲಭ್ಯವಿರುವ ಕೆಲವು ಕವರ್ಗಳು ಹೀಗಿವೆ:
ಗಮನಿಸಿ: ಈ ಪ್ರಯೋಜನಗಳನ್ನು ಪಡೆಯಲು, ನಿಮ್ಮ ಹ್ಯುಂಡೈ ಆಕ್ಸೆಂಟ್ ಕಾರ್ ಇನ್ಶೂರೆನ್ಸ್ ಬೆಲೆಯನ್ನು ಅತ್ಯಲ್ಪ ಮೌಲ್ಯದಷ್ಟು ಹೆಚ್ಚಿಸುವ ಅಗತ್ಯವಿದೆ.
ಡಿಜಿಟ್ನ ಅನುಕೂಲಕರ ಪಿಕ್-ಅಪ್ ಮತ್ತು ಡ್ರಾಪ್ ಸೇವೆಗಳು ಒಬ್ಬ ವ್ಯಕ್ತಿಗೆ ತನ್ನ ಮನೆಯಿಂದಲೇ ಹ್ಯುಂಡೈ ಕಾರನ್ನು ರಿಪೇರಿ ಮಾಡಲು ಅನುವು ಮಾಡಿಕೊಡುತ್ತದೆ. ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲಾನ್ ಅನ್ನು ಹೊಂದಿರುವ ವ್ಯಕ್ತಿಗಳು ಈ ಸೌಲಭ್ಯವನ್ನು ಪಡೆಯಬಹುದು.
ಡಿಜಿಟ್ನ ಸ್ಮಾರ್ಟ್ಫೋನ್-ಎನೇಬಲ್ಡ್ ಪ್ರೊಸೆಸ್ ಗಳ ಕಾರಣದಿಂದಾಗಿ, ಸ್ಮಾರ್ಟ್ಫೋನ್ ಮೂಲಕವೇ ಆನ್ಲೈನ್ನಲ್ಲಿ ಹ್ಯುಂಡೈ ಆಕ್ಸೆಂಟ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದು. ಇದಲ್ಲದೆ, ಈ ಪ್ರೊಸೆಸ್ ಗ್ರಾಹಕರಿಗೆ ಮಿನಿಮಲ್ ಡಾಕ್ಯುಮೆಂಟೇಷನ್(ಕನಿಷ್ಠ ದಾಖಲಾತಿ) ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ.
ಹ್ಯುಂಡೈ ಆಕ್ಸೆಂಟ್ ಕಾರ್ ಇನ್ಶೂರೆನ್ಸ್ ರಿನೀವಲ್ ಬೆಲೆಯು ಅದರ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅನ್ನು ಅವಲಂಬಿಸಿರುತ್ತದೆ. ಇನ್ಶೂರರ್ ಈ ಮೌಲ್ಯವನ್ನು ಅದರ ತಯಾರಕರ ಮಾರಾಟದ ಸ್ಥಳದಿಂದ ಕಾರಿನ ಡೆಪ್ರಿಸಿಯೇಷನ್ ಅನ್ನು ಕಳೆಯುವ ಮೂಲಕ ಕಂಡುಹಿಡಿಯುತ್ತಾರೆ. ಡಿಜಿಟ್ ಇನ್ಶೂರೆನ್ಸ್ ಅನ್ನು ಆರಿಸುವ ಮೂಲಕ, ನೀವು ಈ ಮೌಲ್ಯವನ್ನು ಕಸ್ಟಮೈಸ್ ಮಾಡಬಹುದು. ಈ ರೀತಿಯಾಗಿ, ನಿಮ್ಮ ಹ್ಯುಂಡೈ ಕಾರು ಕಳವಾದರೆ ಅಥವಾ ಸರಿಪಡಿಸಲಾಗದ ಡ್ಯಾಮೇಜ್ ಗೆ ಒಳಗಾದರೆ ನಿಮ್ಮ ಗಳಿಕೆಯನ್ನು ನೀವು ಗರಿಷ್ಠಗೊಳಿಸಬಹುದು.
ಹ್ಯುಂಡೈ ಆಕ್ಸೆಂಟ್ ಕಾರ್ ಇನ್ಶೂರೆನ್ಸ್ ರಿನೀವಲ್ ಸಮಯದಲ್ಲಿ, ನೀವು ಅನುಮಾನಗಳು ಅಥವಾ ಪ್ರಶ್ನೆಗಳನ್ನು ಎದುರಿಸಿದರೆ, ಡಿಜಿಟ್ನ 24x7 ಗ್ರಾಹಕ ಸೇವೆಯು ತ್ವರಿತ ಪರಿಹಾರಗಳನ್ನು ನೀಡುತ್ತದೆ.
ಇದಲ್ಲದೆ, ನಿಮ್ಮ ಪಾಲಿಸಿ ಅವಧಿಯೊಳಗೆ ಕಡಿಮೆ ಕ್ಲೈಮ್ಗಳನ್ನು ಮಾಡುವ ಮೂಲಕ ಮತ್ತು ನೋ ಕ್ಲೈಮ್ ಬೋನಸ್ಗಳನ್ನು ಸಂಗ್ರಹಿಸುವ ಮೂಲಕ ನೀವು ಹುಂಡೈ ಆಕ್ಸೆಂಟ್ ಇನ್ಶೂರೆನ್ಸ್ ವೆಚ್ಚವನ್ನು ಕಡಿಮೆ ಮಾಡಬಹುದು.
ಅದೇನೇ ಇದ್ದರೂ, ಕಡಿಮೆ ಪ್ರೀಮಿಯಂಗಳಲ್ಲಿ ಹ್ಯುಂಡೈ ಆಕ್ಸೆಂಟ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆಮಾಡುವಾಗ ನೀವು ಅಗತ್ಯ ಪ್ರಯೋಜನಗಳನ್ನು ಕಳೆದುಕೊಳ್ಳುವಂತಾಗಬಾರದು.
ನಿಮ್ಮ ಕಾರು ನಿಮಗೆ ಪ್ರಮುಖ ಆಸ್ತಿಯಾಗಿದೆ, ಏಕೆಂದರೆ ನೀವು ಅದರಲ್ಲಿ ಆರ್ಥಿಕ ಬಂಡವಾಳವನ್ನು ಹೊಂದಿದ್ದೀರಿ. ಆದ್ದರಿಂದ, ಕಾರ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವುದು ಅತ್ಯಗತ್ಯ. ಏಕೆಂದರೆ ಅದು:
ಆರ್ಥಿಕ ಲಯಬಿಲಿಟಿಗಳಿಂದ ನಿಮ್ಮನ್ನು ರಕ್ಷಿಸುತ್ತದೆ: ಕಾರಿಗೆ ಡ್ಯಾಮೇಜ್ ಉಂಟು ಮಾಡುವ ಯಾವುದೇ ಅಪಘಾತ ಸಂಭವಿಸಿದಲ್ಲಿ ನಿಮ್ಮ ಕಾರಿನ ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿಯು ಆರ್ಥಿಕ ಹೊರೆಯಿಂದ ನಿಮ್ಮನ್ನು ರಕ್ಷಿಸುತ್ತದೆ.
ಡ್ಯಾಮೇಜ್ ಗೊಳಗಾದ ಕಾರು ರಿಪೇರಿ ವೆಚ್ಚಕ್ಕೆ ಕಾರಣವಾಗುತ್ತದೆ, ಅದು ಕೆಲವೊಮ್ಮೆ ನಿಮ್ಮ ಜೇಬಿನಿಂದ ಭರಿಸಬೇಕಾಗಬಹುದು. ವೆಚ್ಚಗಳನ್ನು ಭರಿಸುವುದು ನಿಮ್ಮ ಜೇಬಿಗೆ ತುಂಬಾ ಹೊರೆಯಾಗಬಹುದು. ಅದಕ್ಕೆ ಬದಲಾಗಿ ಇನ್ಶೂರೆನ್ಸ್ ಪಾಲಿಸಿಯು ನಿಮಗೆ ರಿಪೇರಿಗಾಗಿ ಪಾವತಿಸುತ್ತದೆ.
ಕಾರಿನ ಕಳ್ಳತನದಿಂದಾಗಿ ಪಾಲಿಸಿಹೋಲ್ಡರ್ ಗಳು ಆರ್ಥಿಕ ನಷ್ಟವನ್ನು ಸಹ ಅನುಭವಿಸಬಹುದು. ಒಟ್ಟು ನಷ್ಟದ ಅಂತಹ ಸಂದರ್ಭಗಳಲ್ಲಿ, ಇನ್ಶೂರೆನ್ಸ್ ಪಾಲಿಸಿಯು ನಿಯಮಗಳ ಪ್ರಕಾರ ಪಾವತಿಸುತ್ತದೆ.
ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ.
ಆಡ್-ಆನ್ಗಳೊಂದಿಗೆ ಕವರ್ನ ವ್ಯಾಪ್ತಿಯನ್ನು ವಿಸ್ತರಿಸಲು ಅನುಮತಿಸಿ: ಬೇಸಿಕ್ ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿಯನ್ನು ಹೊರತುಪಡಿಸಿ ನಿಮ್ಮ ಕಾರಿಗೆ ಗರಿಷ್ಠ ರಕ್ಷಣೆಯನ್ನು ಖರೀದಿಸಲು ನೀವು ಬಯಸಿದರೆ, ಬ್ರೇಕ್ಡೌನ್ ಅಸಿಸ್ಟೆನ್ಸ್, ಎಂಜಿನ್ ಆಂಡ್ ಗೇರ್ಬಾಕ್ಸ್ ಪ್ರೊಟೆಕ್ಷನ್, ಟೈರ್ ಪ್ರೊಟೆಕ್ಟಿವ್ ಕವರ್ ಮತ್ತು ಝೀರೋ-ಡೆಪ್ ಕವರ್ ಹಾಗೂ ಇತ್ಯಾದಿಗಳಂತಹ ಕಾರ್ ಇನ್ಶೂರೆನ್ಸ್ ಆ್ಯಡ್-ಆನ್ಗಳನ್ನು ಖರೀದಿಸಿ.
ಅನಿರೀಕ್ಷಿತ ಥರ್ಡ್ ಪಾರ್ಟಿ ಲಯಬಿಲಿಟಿಯಿಂದ ರಕ್ಷಿಸಿಕೊಳ್ಳಿ: ನೀವು ಥರ್ಡ್ ಪಾರ್ಟಿ ಪ್ರಾಪರ್ಟಿ ಅಥವಾ ದೇಹಕ್ಕೆ ಡ್ಯಾಮೇಜ್ ಉಂಟುಮಾಡಿದಾಗ ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯು ಅನಿರೀಕ್ಷಿತ ಹಣಕಾಸಿನ ಹೊರೆಯಿಂದ ನಿಮ್ಮನ್ನು ರಕ್ಷಿಸುತ್ತದೆ. ರಸ್ತೆಯಲ್ಲಿ ಚಾಲನೆ ಮಾಡುವಾಗ, ನೀವು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದ ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಇದೇ ರೀತಿಯ ಸಂದರ್ಭಗಳಲ್ಲಿ, ಲಯಬಿಲಿಟಿಯು ದೊಡ್ಡದಾಗಿರಬಹುದು, ಅದು ಕಲ್ಪನೆ ಮೀರಿ ಹೋಗಬಹುದು.
ಕಾರನ್ನು ಓಡಿಸಲು ಕಾನೂನುಬದ್ಧವಾಗಿ ನಿಮಗೆ ಅನುಮತಿ ನೀಡುತ್ತದೆ: ನಿಮ್ಮ ಕಾರಿಗೆ ಇನ್ಶೂರೆನ್ಸ್ ಪಾಲಿಸಿಯು ರಸ್ತೆಯಲ್ಲಿ ಕಾರನ್ನು ಓಡಿಸಲು ಇರುವ ಕಾನೂನು ಅನುಮತಿಯಾಗಿದೆ. ಪಾಲಿಸಿಯನ್ನು ಹೊಂದಿರದ ಯಾರಾದರೂ ಚಾಲನೆ ಮಾಡಿದರೆ ಡ್ರೈವಿಂಗ್ ಲೈಸೆನ್ಸ್ ಅನ್ನು ರದ್ದುಗೊಳಿಸಬಹುದು ಅಥವಾ ಭಾರೀ ಪೆನಲ್ಟಿಗಳಿಗೆ ಮತ್ತು ಜೈಲು ಶಿಕ್ಷೆಗೆ ಗುರಿಯಾಗಬಹುದು.
ವಾಹನ ಚಾಲನೆಯು ಅಗತ್ಯಕ್ಕಿಂತ ಹೆಚ್ಚಾದಾಗ, ಹ್ಯುಂಡೈನಂತಹ ಕಂಪನಿಯು ಹ್ಯುಂಡೈ ಆಕ್ಸೆಂಟ್ ಅನ್ನು ಒಳಗೊಂಡಿರುವ ಕೆಲವು ಉತ್ತಮ ವೈಶಿಷ್ಟ್ಯಗೊಳಿಸಿದ ಕಾರುಗಳನ್ನು ನಮಗೆ ಒದಗಿಸಿತು. ಈ ಸೆಡಾನ್ ಯಾವಾಗಲೂ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಜನರ ನಂಬಿಕೆಯನ್ನು ಗಳಿಸಿಕೊಂಡಿದೆ. ಎಲ್ಲರ ಆಶ್ಚರ್ಯಕ್ಕೆ ಕಾರಣವಾದ ಅಂಶವೆಂದರೆ, ಹ್ಯುಂಡೈ ಯಾವಾಗಲೂ ಆಟೋಮೊಬೈಲ್ ವಿಭಾಗದಲ್ಲಿ ಸ್ಪರ್ಧಾತ್ಮಕ ಮಾಡೆಲ್ ಗಳನ್ನು ಪರಿಚಯಿಸಿದೆ. ಇತ್ತೀಚೆಗೆ, ತಯಾರಕರು ಸುಧಾರಿತ ಆಕ್ಸೆಂಟ್ ಮಾಡೆಲ್ ಅನ್ನು ಖರೀದಿಸಲು ನಮಗೆ ಹಲವು ಕಾರಣಗಳನ್ನು ನೀಡಿದೆ.
ಹ್ಯುಂಡೈ ಆಕ್ಸೆಂಟ್ನ ಬೆಲೆಯು ರೂ.5.81 ಲಕ್ಷದಿಂದ ಪ್ರಾರಂಭವಾಗಿ ರೂ.8.79 ಲಕ್ಷಗಳವರೆಗೆ ಇದೆ.
ಹ್ಯುಂಡೈ ಆಕ್ಸೆಂಟ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದಾಗ ಐಷಾರಾಮಿತನಕ್ಕೆ ಆದ್ಯತೆ ನೀಡಲಾಗಿತ್ತು. ನಿಮ್ಮನ್ನು ಆಕರ್ಷಿಸುವ ಕಾರಿನ ಮತ್ತೊಂದು ಅತ್ಯಾಕರ್ಷಕ ವಿವರಣೆ ಎಂದರೆ ಅದರ ಮೈಲೇಜ್, ಅದು ಪ್ರತಿ ಲೀಟರ್ಗೆ 16.1 ರಿಂದ 24.4 ಕಿ.ಮೀ ಮೈಲೇಜ್ ನಿಡುತ್ತದೆ. ಇದು ಮ್ಯಾನ್ಯುವಲ್ ಮತ್ತು ಅಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನೋಂದಿಗೆ 1186 ರಿಂದ 1197 ಕ್ಯುಬಿಕ್ ಕೆಪಾಸಿಟಿ ಎಂಜಿನ್ ಹೊಂದಿದೆ.
ಹ್ಯುಂಡೈ ಆಕ್ಸೆಂಟ್ ಡೀಸೆಲ್ ಮತ್ತು ಪೆಟ್ರೋಲ್ ವರ್ಷನ್ ನಲ್ಲಿ ತಲಾ ಮೂರು ವೇರಿಯಂಟ್ ಗಳಲ್ಲಿ ಲಭ್ಯವಿದೆ. ಜೊತೆಗೆ ನಾಲ್ಕು ಸ್ಪೀಡ್ ಆಟೋಮ್ಯಾಟಿಕ್ ಮತ್ತು 5 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಹೊಂದಿದೆ. ಒಳಭಾಗದಲ್ಲಿ, ಹೊಸ ಆಕ್ಸೆಂಟ್ ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ಅನ್ನು ಹೊಂದಿದೆ ಮತ್ತು ಉತ್ತಮವಾಗಿ ಸಜ್ಜು ಗೊಂಡಿದೆ. ಸ್ಟೋರೇಜ್, ಡ್ಯಾಶ್, ವೆಂಟ್ ಮತ್ತು ಬಟನ್ಗಳಂತಹ ಇತರ ಇಂಟೀರಿಯರ್ ಗಳು ಬದಲಾಗದೆ ಉಳಿದಿವೆ. ಆದರೆ ನೀವು ಹೊಸ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆದುಕೊಳ್ಳುತ್ತೀರಿ, ಅದು ಆ್ಯಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ ಹೊಂದಿಕೊಳ್ಳುತ್ತದೆ. ನೀವು ಸಣ್ಣ ಸೆಡಾನ್ ವಿಭಾಗದಲ್ಲಿ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ಹ್ಯುಂಡೈ ಆಕ್ಸೆಂಟ್ ಉತ್ತಮ ಆಯ್ಕೆಯಾಗಿದೆ. ಬಳಕೆದಾರರ ಅನುಕೂಲಕ್ಕಾಗಿ ಒಳಗೆ ದೊಡ್ಡ ಪರದೆಯೊಂದಿಗೆ ಸ್ಟಾಂಡರ್ಡ್ ರೇರ್ ವ್ಯೂ ಕ್ಯಾಮೆರಾದೊಂದಿಗೆ ಇಂಧನ-ಸಮರ್ಥ ಕಾರನ್ನು ನೀವು ಪಡೆಯುತ್ತೀರಿ.
ಹ್ಯುಂಡೈ ಆಕ್ಸೆಂಟ್ ಅನ್ನು ಉತ್ತಮ ಗುಣಮಟ್ಟದ ಉಕ್ಕಿನಿಂದ ಮಾಡಿದ ಸೊಗಸಾದ ಫ್ಯಾಮಿಲಿ ಸೆಡಾನ್ ಎಂದು ಕರೆಯಲಾಗುತ್ತದೆ, ಇದು ಶಬ್ದ-ಮುಕ್ತ ಪ್ರಯಾಣವನ್ನು ಸಾಧ್ಯವಾಗಿಸುತ್ತದೆ. ಇದು ಸ್ಲಿಮ್ಡ್-ಡೌನ್ ಹೆಡ್ಲೈಟ್ಗಳು ಮತ್ತು ಟೈಲ್ಲೈಟ್ಗಳನ್ನು ಹೊಂದಿದೆ. ಹೊಚ್ಚ ಹೊಸ ಗ್ರಿಲ್ಗಳು ಮತ್ತು ಉತ್ತಮ ಗುಣಮಟ್ಟದ ಒಳಾಂಗಣಗಳು ಹ್ಯುಂಡೈ ಆಕ್ಸೆಂಟ್ನ ಲುಕ್ ಅನ್ನು ಆಕರ್ಷಕಗೊಳಿಸಿವೆ..
ಚೆಕ್: ಹ್ಯುಂಡೈ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ವೇರಿಯಂಟ್ನ ಹೆಸರು |
ವೇರಿಯಂಟ್ನ ಬೆಲೆ |
ಪ್ರೈಮ್ ಟಿ ಪ್ಲಸ್ ಸಿಎನ್ಜಿ ಬಿಎಸ್ IV |
₹5.37 ಲಕ್ಷ |
ಫೇಸ್ಲಿಫ್ಟ್ |
₹5.50 ಲಕ್ಷ |
1.2 ವಿಟಿವಿಟಿ ಇ |
₹5.81 ಲಕ್ಷ |
1.2 ವಿಟಿವಿಟಿ ಇ ಪ್ಲಸ್ |
₹5.93 ಲಕ್ಷ |
1.2 ವಿಟಿವಿಟಿ ಎಸ್ |
₹6.43 ಲಕ್ಷ |
1.2 ಸಿಆರ್ಡಿಐ ಇ |
₹6.73 ಲಕ್ಷ |
1.2 ಸಿಆರ್ಡಿಐ ಇ ಪ್ಲಸ್ |
₹6.83 ಲಕ್ಷ |
1.2 ವಿಟಿವಿಟಿ ಎಸ್ಎಕ್ಸ್ |
₹7.05 ಲಕ್ಷ |
1.2 ವಿಟಿವಿಟಿ ಎಸ್ ಎಟಿ |
₹7.33 ಲಕ್ಷ |
1.2 ಸಿಆರ್ಡಿಐ ಎಸ್ |
₹7.42 ಲಕ್ಷ |
1.2 ವಿಟಿವಿಟಿ ಎಸ್ಎಕ್ಸ್ ಆಪ್ಷನ್ |
₹7.82 ಲಕ್ಷ |
1.2 ಸಿಆರ್ಡಿಐ ಎಸ್ಎಕ್ಸ್ |
₹7.98 ಲಕ್ಷ |
1.2 ಸಿಆರ್ಡಿಐ ಎಸ್ಎಕ್ಸ್ ಆಪ್ಷನ್ |
₹8.75 ಲಕ್ಷ |