ಆನ್‌ಲೈನ್‌ನಲ್ಲಿ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಿ
ಪ್ರೀಮಿಯಂ ಪ್ರಾರಂಭ ₹225ರಿಂದ ಮಾತ್ರ*

ಆನ್‌ಲೈನ್‌ನಲ್ಲಿ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಲು ಉತ್ತಮ ಸಮಯ ಯಾವುದು?

ಟ್ರಾವೆಲ್ ಇನ್ಶೂರೆನ್ಸ್ ಎಂದರೇನು?

ಟ್ರಾವೆಲ್ ಇನ್ಶೂರೆನ್ಸ್ ಪ್ರಯಾಣದೊಂದಿಗೆ ಬರುವ ಅಪಾಯಗಳನ್ನು ಕವರ್ ಮಾಡಲು ನೀವು ಖರೀದಿಸುವ ಒಂದು ಅಗತ್ಯ ಡಾಕ್ಯುಮೆಂಟ್ ಆಗಿದೆ ಮತ್ತು ಇದನ್ನು ಅಂತಾರಾಷ್ಟ್ರೀಯವಾಗಿ ಅಥವಾ ದೇಶೀಯ ಪ್ರಯಾಣಕ್ಕಾಗಿ ಮತ್ತು ಅನಿರೀಕ್ಷಿತ ಸಂದರ್ಭಗಳಲ್ಲಿ ಬಳಸಬಹುದು.

ಟ್ರಾವೆಲ್ ಇನ್ಶೂರೆನ್ಸ್ ಖರೀದುಸುವುದನ್ನು ನೀವು ಯಾವಾಗ ಪರಿಗಣಿಸಬೇಕು?

ನೀವು ನಿಮ್ಮ ಟ್ರಿಪ್ ಗಾಗಿ ಮೊದಲ ಡೆಪಾಸಿಟ್ (ಹೋಟೆಲ್ ಅಥವಾ ಫ್ಲೈಟ್ ಟಿಕೆಟ್‌ಗಳನ್ನು ಬುಕ್ ಮಾಡುವುದು) ಮಾಡಿದ 15 ದಿನಗಳಲ್ಲಿ ಆನ್‌ಲೈನ್‌ನಲ್ಲಿ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಲು ಉತ್ತಮ ಸಮಯವಾಗಿದೆ. ನಿಮ್ಮ ಟ್ರಿಪ್ ಪ್ಲಾನಿಂಗ್ ಪೂರ್ಣಗೊಳಿಸಿದ ನಂತರ, ನಿಮ್ಮ ಒಟ್ಟು ಪೂರ್ವ-ಪಾವತಿಯಾಗಿರುವ ಟ್ರಿಪ್ ವೆಚ್ಚವನ್ನು ಅಂದಾಜು ಮಾಡಲು ನಿಮಗೆ ಸಾಧ್ಯವಾಗುತ್ತದೆ. ಇದು ನಿಮ್ಮ ಟ್ರಿಪ್ ಅನ್ನು ಸೆಕ್ಯೂರ್ ಆಗಿಸಲು ನಿಮ್ಮ ಪ್ಲ್ಯಾನ್ ಗಾಗಿ ನಿಖರವಾದ ಕೊಟೇಶನ್ ಅನ್ನು ಪಡೆಯಲು ಅನುಮತಿಸುತ್ತದೆ. 

ಟ್ರಾವೆಲ್ ಇನ್ಶೂರೆನ್ಸ್ ಅನ್ನು ಮುಂಚಿತವಾಗಿಯೇ ಖರೀದಿಸುವುದರಿಂದ ನೀವು ಟ್ರಿಪ್ ಕ್ಯಾನ್ಸಲೇಶನ್, ಅಡಚಣೆ, ಫ್ಲೈಟ್ ವಿಳಂಬ ಇತ್ಯಾದಿಗಳಂತಹ ಟೇಕ್ -ಆಫ್ ಪೂರ್ವದ ಕವರೇಜ್‌ಗಳಿಗೆ ಅರ್ಹರಾಗುತ್ತೀರಿ. ಅನೇಕ ಕಂಪನಿಗಳು (ನಮ್ಮಂತೆ) ನೀವು ಹೊರಡುವ ಹಿಂದಿನ ದಿನದವರೆಗೆ ಪ್ಲ್ಯಾನ್ ಗಳನ್ನು ಖರೀದಿಸಲು ನಿಮಗೆ ಅವಕಾಶ ಮಾಡಿಕೊಡುತ್ತವೆ. ನೀವು ಕೇವಲ ಏನೆಲ್ಲಾ ಕವರ್ ಆಗಿರುತ್ತದೆ ಮತ್ತು ಆಗಿರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ನೀವು ಎಲ್ಲಾ ಪ್ರಯೋಜನಗಳನ್ನು ಪಡೆಯದಿದ್ದರೂ ಸಹ, ಬ್ಯಾಗೇಜ್ ಮತ್ತು ಪಾಸ್‌ಪೋರ್ಟ್ ನಷ್ಟ, ವೈದ್ಯಕೀಯ ಕವರ್‌ಗಳು, ಸಾಹಸ ಚಟುವಟಿಕೆಯ ಕವರೇಜ್, ಪರ್ಸನಲ್ ಲಯಬಿಲಿಟಿ ಮತ್ತು ಬೈಲ್ ಬಾಂಡ್ ಇತ್ಯಾದಿಗಳಂತಹ ಪ್ರಮುಖ ಕವರ್‌ಗಳನ್ನು ನೀವು ಇನ್ನೂ ಪಡೆಯುತ್ತೀರಿ. 

ನೀವು ಎಷ್ಟು ಮುಂಚಿತವಾಗಿ ನಿಮ್ಮ ಪ್ಲ್ಯಾನ್ ಅನ್ನು ಖರೀದಿಸುತ್ತೀರೋ, ಅಷ್ಟೇ ಶೀಘ್ರವಾಗಿ ನಿಮ್ಮನ್ನು ಕವರ್ ಮಾಡಲಾಗುತ್ತದೆ. ಆದರೆ, ನೀವು ಒಬ್ಬ ಆವೇಗಭರಿತ ಅಲೆಮಾರಿಯಾಗಿದ್ದರೂ ಸಹ, ಹೊರಡುವ ಮೊದಲು ನಿಮ್ಮ ಟ್ರಿಪ್ ಅನ್ನು ನೀವು ಸೆಕ್ಯೂರ್ ಮಾಡಬಹುದು. ನೀವು ಈಗ ಆನ್‌ಲೈನ್‌ನಲ್ಲಿ ಡಿಜಿಟ್‌ನ ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಬಹುದು!

ಯಾವಾಗ ನೀವು ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಬಾರದು?

ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ತೆರವುಗೊಳಿಸಿದ ನಂತರ ಭಾರತದ ಜನರಲ್ ಇನ್ಶೂರರ್ ಗಳಿಂದ ನೀವು ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಲು ಸಾಧ್ಯವಿಲ್ಲ. 

ತಾಂತ್ರಿಕವಾಗಿ, ನೀವು ಟೇಕ್ ಆಫ್ ಮಾಡಿದಾಗಿನಿಂದ ನಿಮ್ಮ ಪಾಲಿಸಿಯು ಪ್ರಾರಂಭವಾಗಿ ನೀವು ತಾಯ್ನಾಡಿಗೆ ಹಿಂದಿರುಗುವವರೆಗೆ ಇರುತ್ತದೆ. ಏನಾದರೂ ಸಂಭವಿಸಿದ ನಂತರ ಸಹ ನೀವು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಸಾಧ್ಯವಿಲ್ಲ. ಉದಾಹರಣೆಗೆ, ನಿಮ್ಮ ಥೈಲ್ಯಾಂಡ್ ಪ್ರವಾಸದಲ್ಲಿ, ನಿಮ್ಮ ಕಾಲಿಗೆ ಗಾಯವಾಯಿತು, ಅಥವಾ ನಿಮ್ಮ ಸಾಮಾನು ಕಳವಾಯಿತು. ದುರದೃಷ್ಟವಶಾತ್, ಇದು ಸಂಭವಿಸಿದ ನಂತರ ಇಂತಹ ಸಂದರ್ಭಗಳಿಗಾಗಿ ನೀವು ಟ್ರಾವೆಲ್ ಇನ್ಶೂರೆನ್ಸ್ ಅನ್ನು ಕ್ಲೈಮ್ ಮಾಡಲು ಸಾಧ್ಯವಿಲ್ಲ. ಪರಿಸ್ಥಿತಿಯು ಈಗಾಗಲೇ ಸಂಭವಿಸಿದಲ್ಲಿ ಅಥವಾ ಸಂಭವಿಸುವ ನಿರೀಕ್ಷೆಯಿದ್ದಲ್ಲಿ, ನಿಮ್ಮ ಪಾಲಿಸಿಯ ಅಡಿಯಲ್ಲಿ ನಿಮ್ಮನ್ನು ಕವರ್ ಮಾಡಲಾಗುವುದಿಲ್ಲ.

ಟ್ರಾವೆಲ್ ಇನ್ಶೂರೆನ್ಸ್ ಅನ್ನು ಮುಂಚಿತವಾಗಿ ಖರೀದಿಸುವ ಅನುಕೂಲಗಳು ಯಾವುವು?

ಟ್ರಾವೆಲ್ ಇನ್ಶೂರೆನ್ಸ್ ಆನ್‌ಲೈನ್ ಪಾಲಿಸಿಯನ್ನು ಮುಂಚಿತವಾಗಿ ಖರೀದಿಸುವುದು ಒಂದು ಬುದ್ಧಿವಂತ ಆಯ್ಕೆಯಾಗಿದೆ, ಆದ್ದರಿಂದ ಇದರ ನಂತರ ಹಾಗೆ ಮಾಡಲು ಮರೆಯದಿರಿ. 

  • ಸಾಮಾನ್ಯವಾಗಿ, ಟ್ರಾವೆಲ್ ಪೂರೈಕೆದಾರರು ಅಥವಾ ಪ್ರೊಫೆಷನಲ್ ಒಂದು ಪಾಲಿಸಿಯನ್ನು ಖರೀದಿಸಲು ಶಿಫಾರಸು ಮಾಡುತ್ತಾರೆ; ನೀವು ಸಂಪೂರ್ಣವಾಗಿ ಪರಿಚಿತರಾಗಿರುವ ಸ್ಥಳದಿಂದ ಪ್ಲ್ಯಾನ್ ಅನ್ನು ಪಡೆಯುವುದು ಯಾವಾಗಲೂ ಉತ್ತಮವಾಗಿರುತ್ತದೆ. ಉತ್ತಮ ಡೀಲ್ ಅನ್ನು ಪಡೆಯುವುದು ಎಂದರೆ, ನಿಮ್ಮ ಟ್ರಾವೆಲ್ ಉದ್ದೇಶಕ್ಕೆ ಯಾವ ಯೋಜನೆಯು ಸಂಪೂರ್ಣವಾಗಿ ಸರಿಹೊಂದುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮತ್ತು ಅದನ್ನು ಕೈಗೆಟುಕುವ ಬೆಲೆಯಲ್ಲಿ ಪಡೆಯುವುದು ಆಗಿದೆ. ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ಆನ್‌ಲೈನ್‌ನಲ್ಲಿ ಪ್ಲ್ಯಾನ್ ಗಳನ್ನು ಹೋಲಿಸುವುದುಹೇಗೆ ಎಂಬುದನ್ನು ನೀವು ತಿಳಿದಿರಬೇಕು.
  • ನಿಮ್ಮ ಪ್ಲ್ಯಾನ್ ಅನ್ನು ಕೊನೆ ನಿಮಿಷದಲ್ಲಿ ನೀವು ಖರೀದಿಸಿದರೆ ಮುಗಿದು ಹೋಗುವ ಕವರೇಜ್‌ಗಳಿಗೆ ಸಹ ನೀವು ಅರ್ಹರಾಗುತ್ತೀರಿ. ಆದ್ದರಿಂದ, ಪ್ರವಾಸದ ಕ್ಯಾನ್ಸಲೇಶನ್ ಮತ್ತು ಸಾಮಾನ್ಯ ವಾಹಕ(ಕ್ಯಾರಿಯರ್) ವಿಳಂಬದಂತಹ ಕವರೇಜ್‌ಗಳು ನೀವು ಟೇಕ್-ಆಫ್ ಮಾಡುವ ಮೊದಲು ನೀವು ಪಡೆಯುವ ಪ್ರಯೋಜನಗಳಾಗಿವೆ.
  • ಅಲ್ಲದೆ, ನೀವು ಮುಂಚಿತವಾಗಿಯೇ ಖರೀದಿಸಿದರೆ, ನಿಮ್ಮ ಚೆಕ್ ಲಿಸ್ಟ್ ನಿಂದ ನೀವು ಒಂದು ವಿಷಯವನ್ನು ತೆಗೆದುಹಾಕಿ, ವಸತಿ, ಪ್ರಯಾಣ, ಬಟ್ಟೆಗಳು ಇತ್ಯಾದಿಗಳಂತಹ ಇತರ ಅಗತ್ಯ ವಿಷಯಗಳ ಮೇಲೆ ಗಮನಹರಿಸಬಹುದು. 
  • ನೀವು ಇನ್ನೂ ಸಹ ಪ್ಲ್ಯಾನ್ ಗಳನ್ನು ಮಾಡುತ್ತಿದ್ದರೆ ಅಥವಾ ನಿಮ್ಮ ಸ್ಥಳಗಳ ಪಟ್ಟಿಯನ್ನು ಬದಲಾಯಿಸುತ್ತಿದ್ದರೆ, ಚಿಂತಿಸಬೇಡಿ. ಪ್ಲ್ಯಾನ್ ಚೇಂಜ್ ಗೆ ವಿನಂತಿಸುವ ಮೂಲಕ ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ನೀವು ಸರಿಹೊಂದಿಸಬಹುದು. ನಂತರ ನೀವು ನಿಮ್ಮ ಟ್ರಿಪ್ ನ ಒಟ್ಟು ವೆಚ್ಚವನ್ನು ಅಪ್ಡೇಟ್ ಮಾಡಬಹುದು ಅಥವಾ ನಿಮ್ಮ ಪ್ರಯಾಣದ ದಿನಾಂಕಗಳಲ್ಲಿ ಹೊಂದಾಣಿಕೆ ಮಾಡಬಹುದು.

ನೀವು ಇನ್ಶೂರೆನ್ಸ್ ಇಲ್ಲದೆ ಪ್ರಯಾಣಿಸಿದರೆ ಏನಾಗುತ್ತದೆ?

ಟ್ರಾವೆಲ್ ಇನ್ಶೂರೆನ್ಸ್ ಇಲ್ಲದೆ ಪ್ರಯಾಣಿಸುವುದು ನೀವು ತೆಗೆದುಕೊಳ್ಳಲು ಬಯಸದ ಒಂದು ರಿಸ್ಕ್ ಆಗಿದೆ. ಕಾರಣಗಳು ಇಲ್ಲಿವೆ:

ಪ್ರತಿ ವರ್ಷ ಏರ್ಲೈನ್ ಸಂಸ್ಥೆಗಳಿಂದ 28 ಮಿಲಿಯನ್ ಬ್ಯಾಗೇಜ್ ಗಳನ್ನು ತಪ್ಪಾಗಿ ಹಾಕಲಾಗುತ್ತದೆ ಎಂದು ವರದಿಯಾಗಿದೆ. (1)

ಭಾರತದ ಹೊರಗೆ ವೈದ್ಯಕೀಯ ವೆಚ್ಚವಗಳು 3 ರಿಂದ 5 ಪಟ್ಟು ಅಧಿಕವಾಗಿವೆ. (2)

47% ಬ್ಯಾಗೇಜ್ ನಷ್ಟವು ಇಂಟರ್‌ನ್ಯಾಷನಲ್ ಟ್ರಾನ್ಸಫರ್ ಸಮಯದಲ್ಲಿ ಸಂಭವಿಸುತ್ತದೆ. (3)

ಫೋನ್‌ಗಳು, ಬ್ಯಾಂಕ್ ಕಾರ್ಡ್‌ಗಳು, ಲೈಸೆನ್ಸ್ ಗಳು ಮತ್ತು ಪಾಸ್‌ಪೋರ್ಟ್‌ಗಳು ಜನರು ಪ್ರಯಾಣ ಮಾಡುವಾಗ ಕಳೆದುಕೊಳ್ಳುವ ಅಗ್ರ ಟಾಪ್ ವಸ್ತುಗಳಾಗಿವೆ. (4)

ಕೇವಲ 2021ರಲ್ಲಿ, 3 ಹೈಜ್ಯಾಕ್ ಪ್ರಕರಣಗಳು ನಡೆದಿವೆ. (5)

ಯಾವುದೇ ದಿನದಲ್ಲಿ ನೀವು ಫ್ಲೈಟ್ ಅನ್ನು ಮಿಸ್ ಮಾಡುವ ಅಥವಾ ಫ್ಲೈಟ್ ವಿಳಂಬವಾಗುವ ಹೆಚ್ಚಿನ ಸಾಧ್ಯತೆ ಇರುತ್ತದೆ. (6)

ಪ್ರವಾಸಿಗಳು ತುಂಬಿರುವ ದೇಶಗಳಲ್ಲಿ ಟ್ರಾವೆಲ್ ಹಗರಣಗಳು ಅತ್ಯಂತ ಸಾಮಾನ್ಯವಾಗಿವೆ. (7)

ಹಾಗಾದರೆ, ಟ್ರಾವೆಲ್ ಇನ್ಶೂರೆನ್ಸ್ ನಿಜವಾಗಿಯೂ ಖರೀದಿಗೆ ಯೋಗ್ಯವೇ?

ಹೌದು, ಏಕೆಂದರೆ ಇದು ಅನಿರೀಕ್ಷಿತ ಅಡೆತಡೆಗಳು ಅಥವಾ ವಿಪತ್ತುಗಳ ಸಂದರ್ಭದಲ್ಲಿ ಪ್ರಯಾಣ-ಸಂಬಂಧಿತ ವೆಚ್ಚಗಳಲ್ಲಿ ಸಾವಿರಾರು ರೂಪಾಯಿಗಳನ್ನು ಕವರ್ ಮಾಡಲು ಇದು ಸಹಾಯ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ, ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸುವ ಅನೇಕ ಪ್ರಯಾಣಿಕರು ಕ್ಲೈಮ್ ಅನ್ನು ಫೈಲ್ ಮಾಡುವುದಿಲ್ಲ. ಮತ್ತು ಬಹುತೇಕ ಸಂಪೂರ್ಣ ಉದ್ದೇಶವೂ ಇದೆ ಆಗಿದೆ! 

ನಿಮ್ಮ ಪ್ರವಾಸದಲ್ಲಿ ನೀವು ಯಾವುದೇ ಅಡಚಣೆಯನ್ನು ಎದುರಿಸಿದರೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಒಂದು ಸೆಕ್ಯೂರಿಟಿ ಬ್ಲಾಂಕೆಟ್ ಆಗಿ ಖರೀದಿಸಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಹಣಕಾಸಿನ ಪರಿಣಾಮಗಳು ಗಂಭೀರವಾಗಬಹುದು, ಆದ್ದರಿಂದ ನಿಮ್ಮ ಜೇಬಿಗೆ ಕತ್ತರಿ ಬೀಳುವುದನ್ನು ತಪ್ಪಿಸಲು ನಿಮ್ಮ ವಿದೇಶ ಪ್ರವಾಸಗಳಿಗಾಗಿ ನೀವು ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸುತ್ತೀರಿ. ಪಶ್ಚಾತಾಪ ಪಡುವುದಕ್ಕಿಂತ ಸುರಕ್ಷಿತವಾಗಿರುವುದು ಉತ್ತಮ.

ನೀವು ಟ್ರಾವೆಲ್ ಇನ್ಶೂರೆನ್ಸ್ ಪಡೆಯಲು ಕೆಲವು ಪ್ರಮುಖ ಕಾರಣಗಳು ಮತ್ತು ಪ್ರಯೋಜನಗಳನ್ನು ನಾವು ಕೆಳಗೆ ಉಲ್ಲೇಖಿಸಿದ್ದೇವೆ:

  • ನಿಮಗೆ ಎಮೆರ್ಜೆನ್ಸಿ ಆಸ್ಪತ್ರೆ ದಾಖಲಾತಿ, ಸ್ಥಳಾಂತರಿಸುವಿಕೆಯ ಅಗತ್ಯವಿದ್ದರೆ , ನಿಮ್ಮ ಟ್ರಿಪ್ ಕ್ಯಾನ್ಸಲ್ ಆದರೆ ಅಥವಾ ನಿಮ್ಮ ಬುಕಿಂಗ್ ಬೌನ್ಸ್ ಆಗಿದ್ದರೆ, ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ನಿಮ್ಮ ವೆಚ್ಚಗಳ ರಿಅಂಬರ್ಸ್‌ಮೆಂಟ್ ಗೆ ಸಹಾಯ ಮಾಡುತ್ತದೆ, ಹಾಗೂ ಅದರ ಮೇಲಿನ ಇನ್ವೆಸ್ಟಿಂಗ್ ಅನ್ನು ಯೋಗ್ಯವಾಗಿಸುತ್ತದೆ. 
  • ಕೆಲವು ದೇಶಗಳಿಗೆ ಪ್ರಯಾಣಿಸುವಾಗ ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವಾಗಿದೆ ಎಂಬುದು ಇಲ್ಲಿ ಗಮನಾರ್ಹ ಅಂಶವಾಗಿದೆ.
  • ಮತ್ತೊಂದು ಸನ್ನಿವೇಶವೆಂದರೆ ನೀವು ಉಚಿತ ಇನ್ಶೂರೆನ್ಸ್ ಅನ್ನು ಪಡೆದಾಗ (ಅಥವಾ ಒಂದು ಪ್ಯಾಕೇಜ್, ಕ್ರೆಡಿಟ್ ಕಾರ್ಡ್, ನಿಮ್ಮ ಬ್ಯಾಂಕ್, ಇತ್ಯಾದಿಗಳೊಂದಿಗೆ ಇನ್ಶೂರೆನ್ಸ್ ಪಡೆದಾಗ). ಇಂತಹ ಸಂದರ್ಭಗಳಲ್ಲಿ, ಪಾಲಿಸಿ ಡಾಕ್ಯುಮೆಂಟ್ ಅನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಮತ್ತು ನೀವು ಸರಿಯಾದ ಬೆಲೆಗೆ ಸರಿಯಾದ ಕವರೇಜ್ ಅನ್ನು ಪಡೆಯುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳುವುದು ಇನ್ನಷ್ಟು ನಿರ್ಣಾಯಕವಾಗುತ್ತದೆ. ಡಿಜಿಟ್‌ನ ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ಪಾಲಿಸಿ ನೀಡುತ್ತಿರುವ ಕವರೇಜ್ ಗಳ ರೇಂಜ್ ಅನ್ನು ನೋಡೋಣ.

ಟ್ರಾವೆಲ್ ಇನ್ಶೂರೆನ್ಸ್ ಏಕೆ ನಿರ್ಣಾಯಕ ಮತ್ತು ಅದನ್ನು ಖರೀದಿಸಲು ಸರಿಯಾದ ಸಮಯ ಯಾವುದು ಎಂದು ಈಗ ನಿಮಗೆ ತಿಳಿದಿರುವುದರಿಂದ, ನಿಮ್ಮ ಪಾಲಿಸಿಯನ್ನು ಡಿಜಿಟ್‌ನಿಂದ ಪಡೆಯಲು ಮುಂದುವರಿಯಿರಿ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಟ್ರಿಪ್ ಹತ್ತಿರ ಬರುತ್ತಿದಂತೆ ಟ್ರಾವೆಲ್ ಇನ್ಶೂರೆನ್ಸ್ ಇನ್ನಷ್ಟು ದುಬಾರಿಯಾಗುತ್ತದೆಯೇ?

ನಿಮ್ಮ ಪ್ರಯಾಣದ ದಿನಾಂಕಕ್ಕೆ ನೀವು ಹತ್ತಿರವಾದಂತೆ ಟ್ರಾವೆಲ್ ಇನ್ಶೂರೆನ್ಸ್ ಬೆಲೆಯು ಹೆಚ್ಚಾಗುವುದಿಲ್ಲ. ಆದಾಗ್ಯೂ, ನೀವು ಕೊನೆಯ ಕ್ಷಣದಲ್ಲಿ ನಿಮ್ಮ ಪಾಲಿಸಿಯನ್ನು ಖರೀದಿಸಿದರೆ ನಿಮಗೆ ಪ್ರಯೋಜನವನ್ನು ನೀಡಬಹುದಾದ ಟೇಕ್-ಆಫ್ ಪೂರ್ವದ ಕವರೇಜ್ ಗಳನ್ನುನು ನೀವು ಕಳೆದುಕೊಳ್ಳುತ್ತೀರಿ. ಇಂತಹ ಕೆಲ ಕವರೇಜ್‌ಗಳಲ್ಲಿ ಟ್ರಿಪ್ ಕ್ಯಾನ್ಸಲೇಶನ್, ಸಾಮಾನ್ಯ ವಾಹಕ(ಕ್ಯಾರಿಯರ್) ವಿಳಂಬ ಇತ್ಯಾದಿಗಳು ಒಳಗೊಂಡಿವೆ.

ಟ್ರಾವೆಲ್ ಇನ್ಶೂರೆನ್ಸ್ ವೆಚ್ಚದ ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ?

ಟ್ರಾವೆಲ್ ಇನ್ಶೂರೆನ್ಸ್ ವೆಚ್ಚದ ಮೇಲೆ ಪರಿಣಾಮ ಬೀರುವ ಅಂಶಗಳು ಈ ರೀತಿ ಇವೆ:

  • ಪ್ರಯಾಣಿಕರ ವಯಸ್ಸು ಮತ್ತು ಆರೋಗ್ಯ ಸ್ಥಿತಿಗಳು: ಕಿರಿಯ ಪ್ರಯಾಣಿಕರಿಗಿಂತ ಹಿರಿಯ ಪ್ರಯಾಣಿಕರಿಗೆ ಸಾಮಾನ್ಯವಾಗಿ ಹೆಚ್ಚಿನ ದರಗಳನ್ನು ವಿಧಿಸಲಾಗುತ್ತದೆ. 
  • ಟ್ರಿಪ್ ಅವಧಿ ಮತ್ತು ಡೆಸ್ಟಿನೇಷನ್: ನಿಮ್ಮ ಟ್ರಿಪ್ ಎಷ್ಟು ದಿನಗಳದ್ದಾಗಿರುತ್ತದೆ ಮತ್ತು ನೀವು ಎಲ್ಲಿ ಪ್ರಯಾಣಿಸುತ್ತಿದ್ದೀರಿ ಎಂಬುದು ಮತ್ತೊಂದು ಮಹತ್ವದ ಅಂಶವಾಗಿದೆ. 
  • ಸಮ್ ಇನ್ಶೂರ್ಡ್: ಸಮ್ ಇನ್ಶೂರ್ಡ್ ವಿವಿಧ ಪ್ರಯೋಜನಗಳ ಮೂಲಕ ಪಾವತಿಸಲಾದ ಗರಿಷ್ಠ ಇನ್ಶೂರೆನ್ಸ್ ಅಮೌಂಟ್ ಆಗಿದೆ. ಹೆಚ್ಚಿನ ಸಮ್ ಇನ್ಶೂರ್ಡ್ ಹೆಚ್ಚಿನ ಪ್ರೀಮಿಯಂ ರೇಟ್ ಗೆ ಕಾರಣವಾಗುತ್ತದೆ.

ಕಂಪೆನಿಯು ನೀಡುವ ರಿಯಾಯಿತಿಗಳು ಮತ್ತು ನೀವು ಆಯ್ಕೆ ಮಾಡುವ ಪ್ಲ್ಯಾನ್ ನ ವಿಧದಂತಹ ಇತರ ಅಂಶಗಳು ನೀವು ಪಾವತಿಸುವ ಅಮೌಂಟ್ ಮೇಲೆ ಪ್ರಭಾವ ಬೀರುತ್ತವೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂನ ವೆಚ್ಚವನ್ನು ಕಡಿಮೆ ಮಾಡಲು ಸಹ ನೀವು ಪ್ರಯತ್ನಿಸಬಹುದು!

ಟ್ರಾವೆಲ್ ಇನ್ಶೂರೆನ್ಸ್ ಎಷ್ಟು ಕಾಲ ಉಳಿಯುತ್ತದೆ?

ನಿಮ್ಮ ಪಾಲಿಸಿಯನ್ನು ಖರೀದಿಸಿದಾಗಿನಿಂದ ನಿಮ್ಮ ಪ್ರವಾಸದಿಂದ ನೀವು ಹಿಂದಿರುಗುವವರೆಗೆ ಟ್ರಾವೆಲ್ ಇನ್ಶೂರೆನ್ಸ್ ಮಾನ್ಯವಾಗಿರುತ್ತದೆ. ನೀವು ಪಡೆಯುವ ಟ್ರಾವೆಲ್ ಪ್ಲ್ಯಾನ್ ಗಳ ಅವಧಿಯು ಬದಲಾಗುತ್ತದೆ- ಕೆಲವು ನೀವು ಆಯ್ಕೆ ಮಾಡಿದ ದಿನಾಂಕಗಳಿಗೆ ಮಾತ್ರ ಮಾನ್ಯವಾಗಿರುತ್ತವೆ, ಆದರೆ ವಾರ್ಷಿಕ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ನಂತಹ ಇತರವು, ಒಂದು ವರ್ಷಕ್ಕೆ ಮಾನ್ಯವಾಗಿರುತ್ತವೆ. ಡಿಜಿಟ್‌ನ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಗಳು 3 ವರ್ಷಗಳವರೆಗೆ ಮಾನ್ಯವಾಗಿರುತ್ತವೆ, ಇತ್ಯಾದಿ.

 

ಟ್ರಾವೆಲ್ ಇನ್ಶೂರೆನ್ಸ್ ಗಾಗಿ ಪಾವತಿಸಬಹುದಾದ ಒಂದು ಸಮಂಜಸವಾದ ಅಮೌಂಟ್ ಎಷ್ಟು?

ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ವೆಚ್ಚವು ಅನೇಕ ಅಂಶಗಳ ಮೇಲೆ ಅವಲಂಬಿತಗಿರುತ್ತದೆ ಮತ್ತು ಒಬ್ಬ ಇನ್ಶೂರರ್ ನಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ. ಡಿಜಿಟ್‌ನ ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಪ್ರಪಂಚದಾದ್ಯಂತ 150+ ದೇಶಗಳು ಮತ್ತು ದ್ವೀಪಗಳಿಗೆ ₹225 ರಿಂದ ಪ್ರಾರಂಭವಾಗುವ ಪ್ರೀಮಿಯಂಗಳನ್ನು ನೀಡುತ್ತದೆ.