ಟ್ರಾವೆಲ್ ಇನ್ಶೂರೆನ್ಸ್ ಪ್ರಯಾಣದೊಂದಿಗೆ ಬರುವ ಅಪಾಯಗಳನ್ನು ಕವರ್ ಮಾಡಲು ನೀವು ಖರೀದಿಸುವ ಒಂದು ಅಗತ್ಯ ಡಾಕ್ಯುಮೆಂಟ್ ಆಗಿದೆ ಮತ್ತು ಇದನ್ನು ಅಂತಾರಾಷ್ಟ್ರೀಯವಾಗಿ ಅಥವಾ ದೇಶೀಯ ಪ್ರಯಾಣಕ್ಕಾಗಿ ಮತ್ತು ಅನಿರೀಕ್ಷಿತ ಸಂದರ್ಭಗಳಲ್ಲಿ ಬಳಸಬಹುದು.
ನೀವು ನಿಮ್ಮ ಟ್ರಿಪ್ ಗಾಗಿ ಮೊದಲ ಡೆಪಾಸಿಟ್ (ಹೋಟೆಲ್ ಅಥವಾ ಫ್ಲೈಟ್ ಟಿಕೆಟ್ಗಳನ್ನು ಬುಕ್ ಮಾಡುವುದು) ಮಾಡಿದ 15 ದಿನಗಳಲ್ಲಿ ಆನ್ಲೈನ್ನಲ್ಲಿ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಲು ಉತ್ತಮ ಸಮಯವಾಗಿದೆ. ನಿಮ್ಮ ಟ್ರಿಪ್ ಪ್ಲಾನಿಂಗ್ ಪೂರ್ಣಗೊಳಿಸಿದ ನಂತರ, ನಿಮ್ಮ ಒಟ್ಟು ಪೂರ್ವ-ಪಾವತಿಯಾಗಿರುವ ಟ್ರಿಪ್ ವೆಚ್ಚವನ್ನು ಅಂದಾಜು ಮಾಡಲು ನಿಮಗೆ ಸಾಧ್ಯವಾಗುತ್ತದೆ. ಇದು ನಿಮ್ಮ ಟ್ರಿಪ್ ಅನ್ನು ಸೆಕ್ಯೂರ್ ಆಗಿಸಲು ನಿಮ್ಮ ಪ್ಲ್ಯಾನ್ ಗಾಗಿ ನಿಖರವಾದ ಕೊಟೇಶನ್ ಅನ್ನು ಪಡೆಯಲು ಅನುಮತಿಸುತ್ತದೆ.
ಟ್ರಾವೆಲ್ ಇನ್ಶೂರೆನ್ಸ್ ಅನ್ನು ಮುಂಚಿತವಾಗಿಯೇ ಖರೀದಿಸುವುದರಿಂದ ನೀವು ಟ್ರಿಪ್ ಕ್ಯಾನ್ಸಲೇಶನ್, ಅಡಚಣೆ, ಫ್ಲೈಟ್ ವಿಳಂಬ ಇತ್ಯಾದಿಗಳಂತಹ ಟೇಕ್ -ಆಫ್ ಪೂರ್ವದ ಕವರೇಜ್ಗಳಿಗೆ ಅರ್ಹರಾಗುತ್ತೀರಿ. ಅನೇಕ ಕಂಪನಿಗಳು (ನಮ್ಮಂತೆ) ನೀವು ಹೊರಡುವ ಹಿಂದಿನ ದಿನದವರೆಗೆ ಪ್ಲ್ಯಾನ್ ಗಳನ್ನು ಖರೀದಿಸಲು ನಿಮಗೆ ಅವಕಾಶ ಮಾಡಿಕೊಡುತ್ತವೆ. ನೀವು ಕೇವಲ ಏನೆಲ್ಲಾ ಕವರ್ ಆಗಿರುತ್ತದೆ ಮತ್ತು ಆಗಿರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ನೀವು ಎಲ್ಲಾ ಪ್ರಯೋಜನಗಳನ್ನು ಪಡೆಯದಿದ್ದರೂ ಸಹ, ಬ್ಯಾಗೇಜ್ ಮತ್ತು ಪಾಸ್ಪೋರ್ಟ್ ನಷ್ಟ, ವೈದ್ಯಕೀಯ ಕವರ್ಗಳು, ಸಾಹಸ ಚಟುವಟಿಕೆಯ ಕವರೇಜ್, ಪರ್ಸನಲ್ ಲಯಬಿಲಿಟಿ ಮತ್ತು ಬೈಲ್ ಬಾಂಡ್ ಇತ್ಯಾದಿಗಳಂತಹ ಪ್ರಮುಖ ಕವರ್ಗಳನ್ನು ನೀವು ಇನ್ನೂ ಪಡೆಯುತ್ತೀರಿ.
ನೀವು ಎಷ್ಟು ಮುಂಚಿತವಾಗಿ ನಿಮ್ಮ ಪ್ಲ್ಯಾನ್ ಅನ್ನು ಖರೀದಿಸುತ್ತೀರೋ, ಅಷ್ಟೇ ಶೀಘ್ರವಾಗಿ ನಿಮ್ಮನ್ನು ಕವರ್ ಮಾಡಲಾಗುತ್ತದೆ. ಆದರೆ, ನೀವು ಒಬ್ಬ ಆವೇಗಭರಿತ ಅಲೆಮಾರಿಯಾಗಿದ್ದರೂ ಸಹ, ಹೊರಡುವ ಮೊದಲು ನಿಮ್ಮ ಟ್ರಿಪ್ ಅನ್ನು ನೀವು ಸೆಕ್ಯೂರ್ ಮಾಡಬಹುದು. ನೀವು ಈಗ ಆನ್ಲೈನ್ನಲ್ಲಿ ಡಿಜಿಟ್ನ ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಬಹುದು!
ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ತೆರವುಗೊಳಿಸಿದ ನಂತರ ಭಾರತದ ಜನರಲ್ ಇನ್ಶೂರರ್ ಗಳಿಂದ ನೀವು ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಲು ಸಾಧ್ಯವಿಲ್ಲ.
ತಾಂತ್ರಿಕವಾಗಿ, ನೀವು ಟೇಕ್ ಆಫ್ ಮಾಡಿದಾಗಿನಿಂದ ನಿಮ್ಮ ಪಾಲಿಸಿಯು ಪ್ರಾರಂಭವಾಗಿ ನೀವು ತಾಯ್ನಾಡಿಗೆ ಹಿಂದಿರುಗುವವರೆಗೆ ಇರುತ್ತದೆ. ಏನಾದರೂ ಸಂಭವಿಸಿದ ನಂತರ ಸಹ ನೀವು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಸಾಧ್ಯವಿಲ್ಲ. ಉದಾಹರಣೆಗೆ, ನಿಮ್ಮ ಥೈಲ್ಯಾಂಡ್ ಪ್ರವಾಸದಲ್ಲಿ, ನಿಮ್ಮ ಕಾಲಿಗೆ ಗಾಯವಾಯಿತು, ಅಥವಾ ನಿಮ್ಮ ಸಾಮಾನು ಕಳವಾಯಿತು. ದುರದೃಷ್ಟವಶಾತ್, ಇದು ಸಂಭವಿಸಿದ ನಂತರ ಇಂತಹ ಸಂದರ್ಭಗಳಿಗಾಗಿ ನೀವು ಟ್ರಾವೆಲ್ ಇನ್ಶೂರೆನ್ಸ್ ಅನ್ನು ಕ್ಲೈಮ್ ಮಾಡಲು ಸಾಧ್ಯವಿಲ್ಲ. ಪರಿಸ್ಥಿತಿಯು ಈಗಾಗಲೇ ಸಂಭವಿಸಿದಲ್ಲಿ ಅಥವಾ ಸಂಭವಿಸುವ ನಿರೀಕ್ಷೆಯಿದ್ದಲ್ಲಿ, ನಿಮ್ಮ ಪಾಲಿಸಿಯ ಅಡಿಯಲ್ಲಿ ನಿಮ್ಮನ್ನು ಕವರ್ ಮಾಡಲಾಗುವುದಿಲ್ಲ.
ಟ್ರಾವೆಲ್ ಇನ್ಶೂರೆನ್ಸ್ ಆನ್ಲೈನ್ ಪಾಲಿಸಿಯನ್ನು ಮುಂಚಿತವಾಗಿ ಖರೀದಿಸುವುದು ಒಂದು ಬುದ್ಧಿವಂತ ಆಯ್ಕೆಯಾಗಿದೆ, ಆದ್ದರಿಂದ ಇದರ ನಂತರ ಹಾಗೆ ಮಾಡಲು ಮರೆಯದಿರಿ.
ಟ್ರಾವೆಲ್ ಇನ್ಶೂರೆನ್ಸ್ ಇಲ್ಲದೆ ಪ್ರಯಾಣಿಸುವುದು ನೀವು ತೆಗೆದುಕೊಳ್ಳಲು ಬಯಸದ ಒಂದು ರಿಸ್ಕ್ ಆಗಿದೆ. ಕಾರಣಗಳು ಇಲ್ಲಿವೆ:
ಹೌದು, ಏಕೆಂದರೆ ಇದು ಅನಿರೀಕ್ಷಿತ ಅಡೆತಡೆಗಳು ಅಥವಾ ವಿಪತ್ತುಗಳ ಸಂದರ್ಭದಲ್ಲಿ ಪ್ರಯಾಣ-ಸಂಬಂಧಿತ ವೆಚ್ಚಗಳಲ್ಲಿ ಸಾವಿರಾರು ರೂಪಾಯಿಗಳನ್ನು ಕವರ್ ಮಾಡಲು ಇದು ಸಹಾಯ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ, ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸುವ ಅನೇಕ ಪ್ರಯಾಣಿಕರು ಕ್ಲೈಮ್ ಅನ್ನು ಫೈಲ್ ಮಾಡುವುದಿಲ್ಲ. ಮತ್ತು ಬಹುತೇಕ ಸಂಪೂರ್ಣ ಉದ್ದೇಶವೂ ಇದೆ ಆಗಿದೆ!
ನಿಮ್ಮ ಪ್ರವಾಸದಲ್ಲಿ ನೀವು ಯಾವುದೇ ಅಡಚಣೆಯನ್ನು ಎದುರಿಸಿದರೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಒಂದು ಸೆಕ್ಯೂರಿಟಿ ಬ್ಲಾಂಕೆಟ್ ಆಗಿ ಖರೀದಿಸಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಹಣಕಾಸಿನ ಪರಿಣಾಮಗಳು ಗಂಭೀರವಾಗಬಹುದು, ಆದ್ದರಿಂದ ನಿಮ್ಮ ಜೇಬಿಗೆ ಕತ್ತರಿ ಬೀಳುವುದನ್ನು ತಪ್ಪಿಸಲು ನಿಮ್ಮ ವಿದೇಶ ಪ್ರವಾಸಗಳಿಗಾಗಿ ನೀವು ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸುತ್ತೀರಿ. ಪಶ್ಚಾತಾಪ ಪಡುವುದಕ್ಕಿಂತ ಸುರಕ್ಷಿತವಾಗಿರುವುದು ಉತ್ತಮ.
ನೀವು ಟ್ರಾವೆಲ್ ಇನ್ಶೂರೆನ್ಸ್ ಪಡೆಯಲು ಕೆಲವು ಪ್ರಮುಖ ಕಾರಣಗಳು ಮತ್ತು ಪ್ರಯೋಜನಗಳನ್ನು ನಾವು ಕೆಳಗೆ ಉಲ್ಲೇಖಿಸಿದ್ದೇವೆ:
ಟ್ರಾವೆಲ್ ಇನ್ಶೂರೆನ್ಸ್ ಏಕೆ ನಿರ್ಣಾಯಕ ಮತ್ತು ಅದನ್ನು ಖರೀದಿಸಲು ಸರಿಯಾದ ಸಮಯ ಯಾವುದು ಎಂದು ಈಗ ನಿಮಗೆ ತಿಳಿದಿರುವುದರಿಂದ, ನಿಮ್ಮ ಪಾಲಿಸಿಯನ್ನು ಡಿಜಿಟ್ನಿಂದ ಪಡೆಯಲು ಮುಂದುವರಿಯಿರಿ.