ಹೋಮ್ ಲೋನ್ ಟ್ಯಾಕ್ಸ್ ಪ್ರಯೋಜನಗಳು
ಹೋಮ್ ಲೋನ್ ಮೇಲಿನ ಇನ್‌ಕಮ್ ಟ್ಯಾಕ್ಸ್ ರಿಬೇಟ್ ಕುರಿತು ಇನ್ನಷ್ಟು ತಿಳಿಯಿರಿ
ಹೌಸಿಂಗ್ ಲೋನ್‌ಗಳು ಭಾರತದಲ್ಲಿ ಸಾಮಾನ್ಯವಾಗಿ ಸ್ವಾಧೀನಪಡಿಸಿಕೊಂಡಿರುವ ಕ್ರೆಡಿಟ್ ರೂಪಗಳಲ್ಲಿ ಒಂದಾಗಿದೆ, ಇದು ಲಕ್ಷಾಂತರ ಜನರು ತಮ್ಮ ಕನಸಿನ ಪ್ರಾಪರ್ಟಿಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ. ನೀವು ಮುಂದಿನ ದಿನಗಳಲ್ಲಿ ಹೋಮ್ ಲೋನ್ ಅನ್ನು ಆಯ್ಕೆ ಮಾಡಲು ಪ್ಲಾನ್ ಮಾಡುತ್ತಿದ್ದೀರಾ?
ಇಂಟರೆಸ್ಟ್ ದರ ಮತ್ತು ಅವಧಿಗಳಂತಹ ಅಂಶಗಳನ್ನು ಪರಿಗಣಿಸುವುದರ ಹೊರತಾಗಿ, ನಿಮ್ಮ ಹೋಮ್ ಲೋನ್ ರಿಪೇಮೆಂಟ್‌ಗಳ ಟ್ಯಾಕ್ಸ್ ಡಿಡಕ್ಷನ್‌ಗಳ ಮೇಲೆಯೂ ನೀವು ಗಮನಹರಿಸಬೇಕು.
ವಾರ್ಷಿಕ ಟ್ಯಾಕ್ಸ್ ಲಯಬಿಲಿಟಿಗಳಲ್ಲಿ ನೀವು ಎಷ್ಟು ಉಳಿಸಬಹುದು?
ಸರಿ, ಅದಕ್ಕೆ ಸಂಕ್ಷಿಪ್ತ ಉತ್ತರವೆಂದರೆ ಅದು ಹಲವು ವಿಚಾರಗಳನ್ನು ಅವಲಂಬಿಸಿರುತ್ತದೆ ಎನ್ನುವುದು. ಇದು ನಿಮ್ಮ ವಯಸ್ಸು, ಟ್ಯಾಕ್ಸೇಬಲ್ ಇನ್‌ಕಮ್, ಅಸಲು ರೀಪೇಮೆಂಟ್ ಮತ್ತು ಮೌಲ್ಯಮಾಪನ ವರ್ಷದ ಇಂಟರೆಸ್ಟ್ ಅಮೌಂಟ್‌ನಂತಹ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಹೆಚ್ಚುವರಿ ಅಂಶಗಳು ಸಹ ಕಾರಣವಾಗಬಹುದು.
ಉದಾಹರಣೆಗೆ, ಹಳೆಯ ರೆಜಿಮ್ ಅಡಿಯಲ್ಲಿ ತಮ್ಮ ಟ್ಯಾಕ್ಸ್‌ಗಳನ್ನು ಅಸೆಸ್ ಮಾಡುವಾಗ ವ್ಯಕ್ತಿಗಳು ಹೊಸ ಟ್ಯಾಕ್ಸ್ ರೆಜಿಮ್ ಅಸೆಸ್ಸೀಗಳಿಗೆ ಹೋಲಿಸಿದರೆ ಹೋಮ್ ಲೋನ್ ರಿಪೇಮೆಂಟ್‌ನ ವಿವಿಧ ಟ್ಯಾಕ್ಸ್ ರಿಬೇಟ್‌ಗಳಿಗೆ ಅರ್ಹರಾಗಿರುತ್ತಾರೆ.
ನಿಮ್ಮ ಹೋಮ್ ಲೋನ್ ಟ್ಯಾಕ್ಸ್ ಪ್ರಯೋಜನಗಳ ಬಗ್ಗೆ ನೀವು ಇನ್ನೂ ಗೊಂದಲಕ್ಕೊಳಗಾಗಿದ್ದೀರಾ? ಈ ಗೈಡ್ ನಿಮಗೆ ಸಹಾಯ ಮಾಡುವುದಕ್ಕೆಂದೇ ಇದೆ!
ಹೋಮ್ ಲೋನ್‌ಗಳ ಮೇಲೆ ಇನ್‌ಕಮ್ ಟ್ಯಾಕ್ಸ್ ಪ್ರಯೋಜನಗಳು
ಇನ್‌ಕಮ್ ಟ್ಯಾಕ್ಸ್ ಆ್ಯಕ್ಟ್, 1961 ಹೋಮ್ ಲೋನ್‌ಗಳ ಮೇಲಿನ ಟ್ಯಾಕ್ಸ್ ರಿಬೇಟ್‌ಗಾಗಿ ವಿವಿಧ ನಿಬಂಧನೆಗಳನ್ನು ನೀಡುತ್ತದೆ. ಅಂತಹ ಸಾಲಗಾರರು ವಿನಾಯಿತಿಗಳನ್ನು ಕ್ಲೈಮ್ ಮಾಡಬಹುದಾದ ಮೂರು ಪ್ರಮುಖ ಕ್ಷೇತ್ರಗಳು ಈ ಕೆಳಗಿನಂತಿವೆ:
- ಹೋಮ್ ಲೋನ್‌ಗಳ ಅಸಲು ರೀಪೇಮೆಂಟ್ ಐಟಿಎಯ ಸೆಕ್ಷನ್ 80C ಅಡಿಯಲ್ಲಿ ರೂ.1.5 ಲಕ್ಷದವರೆಗೆ ವಾರ್ಷಿಕ ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಪಡೆಯಬಹುದು.
- ಹೋಮ್ ಲೋನ್ ಇಂಟರೆಸ್ಟ್ ಪೇಮೆಂಟ್‌ಗಳ ಮೇಲೆ, ಇನ್‌ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 24ರ ಪ್ರಕಾರ ನೀವು ರೂ.2 ಲಕ್ಷದವರೆಗೆ ತೆರಿಗೆ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಬಹುದು.
- ನೀವು ಮೊದಲ ಬಾರಿಗೆ ಮನೆ ಮಾಲೀಕರಾಗಿದ್ದರೆ, ಸೆಕ್ಷನ್ 80EEಯ ನಿಬಂಧನೆಗಳ ಅಡಿಯಲ್ಲಿ ರೂ.50000 ವರೆಗಿನ ಹೆಚ್ಚುವರಿ ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ. ಈ ಡಿಡಕ್ಷನ್ ಲೋನ್‌ಗಳ ಇಂಟರೆಸ್ಟ್ ಪೇಮೆಂಟ್‌ಗಳ ಮೇಲೆ ನಡೆಯುತ್ತದೆ.
ತೆರಿಗೆ ಡಿಡಕ್ಷನ್‌ಗಳನ್ನು ನಿಮ್ಮ ಟ್ಯಾಕ್ಸೇಬಲ್ ಇನ್‌ಕಮ್ ಮೇಲೆ ಮಾತ್ರ ಕ್ಯಾಲ್ಕುಲೇಟ್ ಮಾಡಲಾಗುತ್ತದೆ ಮತ್ತು ನಿಮ್ಮ ನೆಟ್ ಗಳಿಕೆಯ ಮೇಲಲ್ಲ ಎಂಬುದನ್ನು ನೆನಪಿನಲ್ಲಿಡಿ.
ಉದಾಹರಣೆಗೆ, ಇನ್‌ಕಮ್ ಟ್ಯಾಕ್ಸ್‌ನ ಹಳೆಯ ರೆಜಿಮ್ ಅಡಿಯಲ್ಲಿ, ವರ್ಷಕ್ಕೆ ರೂ.2.5 ಲಕ್ಷಕ್ಕಿಂತ ಹೆಚ್ಚು ಗಳಿಸುವ ವ್ಯಕ್ತಿಗಳು ಟ್ಯಾಕ್ಸ್‌ಗಳನ್ನು ಭರಿಸಲು ಲಯಬಲ್ ಆಗಿರುತ್ತಾರೆ.
ಈಗ ನಿಮ್ಮ ವಾರ್ಷಿಕ ಇನ್‌ಕಮ್ ರೂ.4 ಲಕ್ಷ ಎಂದು ಪರಿಗಣಿಸಿ. ಆ ಸಂದರ್ಭದಲ್ಲಿ, ಹೋಮ್ ಲೋನ್ ಪ್ರಯೋಜನಗಳು ನಿಮ್ಮ ಟ್ಯಾಕ್ಸೇಬಲ್ ಇನ್‌ಕಮ್ ರೂ.1.5 ಲಕ್ಷ (ರೂ.4 ಲಕ್ಷ-ರೂ.2.5 ಲಕ್ಷ)ದ ಮೇಲೆ ಮಾತ್ರ ಅಪ್ಲಿಕೇಬಲ್ ಆಗುತ್ತವೆ ಮತ್ತು ನಿಮ್ಮ ಸಂಪೂರ್ಣ ವಾರ್ಷಿಕ ಗಳಿಕೆಯ ಮೇಲೆ ಅಲ್ಲ.
ಹೋಮ್ ಲೋನ್ ಟ್ಯಾಕ್ಸ್ ಪ್ರಯೋಜನಗಳಿಗಾಗಿ ವಿವಿಧ ಸೆಕ್ಷನ್‌ಗಳು ಮತ್ತು ಷರತ್ತುಗಳು
ಮೇಲೆ-ಪಟ್ಟಿ ಮಾಡಲಾದ ನಿಬಂಧನೆಗಳು ತಮ್ಮ ಇನ್‌ಕಮ್ ಟ್ಯಾಕ್ಸ್ ಲಯಬಿಲಿಟಿಗಳ ಮೇಲೆ ಒಬ್ಬರು ಕ್ಲೈಮ್ ಮಾಡಬಹುದಾದ ಗಮನಾರ್ಹ ಉಳಿತಾಯದ ಒಂದು ನೋಟವನ್ನು ನೀಡುತ್ತವೆ.
ಅದೇನೇ ಇದ್ದರೂ, ಅಂತಹ ಉಳಿತಾಯಗಳು ಅಪ್ಲಿಕೇಬಲ್ ಆಗುವ ಸೆಕ್ಷನ್‌ಗಳ ಜೊತೆಗೆ ವಿವಿಧ ನಿಯಮಗಳು ಮತ್ತು ಷರತ್ತುಗಳನ್ನು ಸಹ ನೀವು ಅರ್ಥಮಾಡಿಕೊಳ್ಳಬೇಕು:
1. ಸೆಕ್ಷನ್ 80C (ಹೋಮ್ ಲೋನ್ ಅಸಲು ರೀಪೇಮೆಂಟ್ ಮೇಲಿನ ಡಿಡಕ್ಷನ್)
ಟ್ಯಾಕ್‌ಪೇಯರ್‌ಗಳು ಈ ಪ್ರಯೋಜನವನ್ನು ಒಮ್ಮೆ ಮಾತ್ರ ಕ್ಲೈಮ್ ಮಾಡಬಹುದು, ನಿರ್ದಿಷ್ಟ ಆರ್ಥಿಕ ವರ್ಷದಲ್ಲಿ ಗರಿಷ್ಠ ಡಿಡಕ್ಷನ್ ರೂ.1.5 ಲಕ್ಷಕ್ಕೆ ಸೀಮಿತವಾಗಿರುತ್ತದೆ.
ಆದಾಗ್ಯೂ, ಅಸಲು ರೀಪೇಮೆಂಟ್ ಮೊತ್ತದ ಹೊರತಾಗಿ, ಈ ನಿರ್ದಿಷ್ಟ ಲಾಭದ ಕ್ಯಾಲ್ಕುಲೇಷನ್ ಸಂಬಂಧಿಸಿದ ಪ್ರಾಪರ್ಟಿಯನ್ನು ಖರೀದಿಸಲು ಸಂಬಂಧಿಸಿದ ವೆಚ್ಚಗಳನ್ನು ಪರಿಗಣಿಸುತ್ತದೆ, ಉದಾಹರಣೆಗೆ ಸ್ಟ್ಯಾಂಪ್ ಡ್ಯೂಟಿ ಮತ್ತು ರಿಜಿಸ್ಟ್ರೇಷನ್ ಶುಲ್ಕಗಳು.
2. ಸೆಕ್ಷನ್ 24 (ಹೋಮ್ ಲೋನ್ ಇಂಟರೆಸ್ಟ್ ಪೇಮೆಂಟ್‌ಗಳ ಮೇಲಿನ ಡಿಡಕ್ಷನ್)
ಸ್ವಯಂ ನೆಲೆಸಿರುವ ಮನೆ ಪ್ರಾಪರ್ಟಿಗಳಿಗೆ ಹೋಮ್ ಲೋನ್ ಇಂಟರೆಸ್ಟ್ ಪೇಮೆಂಟ್‌ಗಳ ಆಧಾರದ ಮೇಲೆ, ನಿಮ್ಮ ಇನ್‌ಕಮ್ ಟ್ಯಾಕ್ಸ್ ಲಯಬಿಲಿಟಿಗಳ ಮೇಲೆ ನೀವು ಗರಿಷ್ಠ ರೂ.2 ಲಕ್ಷದವರೆಗಿನ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಬಹುದು. ಬಾಡಿಗೆ ಮನೆ ಪ್ರಾಪರ್ಟಿಯ ಮೇಲಿನ ಡಿಡಕ್ಷನ್‌ಗೆ ಅಂತಹ ಸೀಲಿಂಗ್ ಲಿಮಿಟ್ ಇಲ್ಲ.
ಆದಾಗ್ಯೂ, ಇದನ್ನು ಕ್ಲೈಮ್ ಮಾಡಲು, ಪ್ರಶ್ನೆಯಲ್ಲಿರುವ ಪ್ರಾಪರ್ಟಿಯು ಅದರ ನಿರ್ಮಾಣವನ್ನು 5 ವರ್ಷಗಳಲ್ಲಿ ಪೂರ್ಣಗೊಳಿಸಬೇಕು. ಹಾಗೆ ಮಾಡಲು ವಿಫಲವಾದರೆ ಟ್ಯಾಕ್ಸ್‌ಪೇಯರ್‌ಗಳಿಗೆ ಉಳಿತಾಯದ ಸಾಮರ್ಥ್ಯವನ್ನು ಕೇವಲ ರೂ.30000ಕ್ಕೆ ತಗ್ಗಿಸಲಾಗುತ್ತದೆ.
3. ಸೆಕ್ಷನ್ 80EE (ಮೊದಲ ಬಾರಿಯ ಪ್ರಾಪರ್ಟಿ ಖರೀದಿದಾರರಿಗೆ ಹೋಮ್ ಲೋನ್ ಇಂಟರೆಸ್ಟ್ ಮೇಲಿನ ಟ್ಯಾಕ್ಸ್ ಡಿಡಕ್ಷನ್)
ನಿಮ್ಮ ಹೆಸರಲ್ಲಿ ಬೇರೆ ಯಾವುದೇ ಪ್ರಾಪರ್ಟಿ ಇಲ್ಲದಿದ್ದರೆ ಮಾತ್ರ ಈ ಸೆಕ್ಷನ್ ನಿಮಗೆ ಅಪ್ಲೈ ಆಗುತ್ತದೆ. ಈ ಹೆಚ್ಚುವರಿ ಪ್ರಯೋಜನವನ್ನು ಕ್ಲೈಮ್ ಮಾಡಲು ಪೂರೈಸಬೇಕು ಇತರ ಷರತ್ತುಗಳೆಂದರೆ:
- ಹೋಮ್ ಲೋನ್ ಅಸಲು ಅಮೌಂಟ್ ರೂ.35 ಲಕ್ಷ ಮೀರಬಾರದು.
- ಪ್ರಾಪರ್ಟಿಯ ಮೌಲ್ಯ ರೂ.50 ಲಕ್ಷಕ್ಕಿಂತ ಹೆಚ್ಚಿರಬಾರದು.
- ಲೋನ್ ಅನ್ನು 1ನೇ ಏಪ್ರಿಲ್ 2016 ಮತ್ತು 31ನೇ ಮಾರ್ಚ್ 2017ರ ನಡುವೆ ಮಂಜೂರು ಮಾಡಿರಬೇಕು.
ಈ ನಿಬಂಧನೆಗಳ ಹೊರತಾಗಿ, ಕೈಗೆಟುಕುವ ಮನೆಗಳ ಸಂದರ್ಭದಲ್ಲಿ ನೀವು ಸೆಕ್ಷನ್ 80EEA ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಸಹ ಪಡೆಯಬಹುದು.
ಇದರ ಅಡಿಯಲ್ಲಿ, ಟ್ಯಾಕ್ಸ್‌ಪೇಯರ್‌ಗಳು ಸೆಕ್ಷನ್ 24ರ ಅಡಿಯಲ್ಲಿ ಒದಗಿಸಲಾಗುವ ಇಂಟರೆಸ್ಟ್-ಸಂಬಂಧಿತ ರಿಬೇಟ್‌ಗಳ ಹೊರತಾಗಿ ಹೋಮ್ ಲೋನ್‌ನ ಇಂಟರೆಸ್ಟ್ ಪೇಮೆಂಟ್ ಮೇಲೆ ಹೆಚ್ಚುವರಿ ರೂ.1.5 ಲಕ್ಷ ಟ್ಯಾಕ್ಸ್ ಉಳಿತಾಯವನ್ನು ಕ್ಲೈಮ್ ಮಾಡಬಹುದು. ಹೋಮ್ ಲೋನ್‌ನ ಪೂರ್ಣ ರೀಪೇಮೆಂಟ್ ಆಗುವವರೆಗೆ ನೀವು ಈ ಪ್ರಯೋಜನವನ್ನು ಕ್ಲೈಮ್ ಮಾಡುತ್ತಿರಬಹುದು.
ಇಲ್ಲಿ ಪರಿಗಣನೆಗೆ ಬರುವ ಹೆಚ್ಚುವರಿ ಷರತ್ತುಗಳೆಂದರೆ, ಈ ಹೆಚ್ಚಿನ ಟ್ಯಾಕ್ಸ್ ವಿನಾಯಿತಿಗಳು ಪ್ರಾಪರ್ಟಿಯ ನಿರ್ಮಾಣ ಪೂರ್ಣಗೊಂಡ ನಂತರ ಮಾತ್ರ ಅಪ್ಲಿಕೇಬಲ್ ಆಗುತ್ತವೆ. ಬದಲಿಗೆ ನೀವು ರೆಡಿ-ಟು-ಮೂವ್ ಪ್ರಾಪರ್ಟಿಯನ್ನು ಖರೀದಿಸುತ್ತಿದ್ದರೆ, ಈ ಪ್ರಯೋಜನಗಳು ಪ್ರಾರಂಭದಿಂದಲೇ ಆರಂಭವಾಗುತ್ತವೆ.
ಹೆಚ್ಚಾಗಿ, ನೀವು ಸ್ವಾಧೀನಪಡಿಸಿಕೊಂಡ 5 ವರ್ಷಗಳೊಳಗೆ ಸಂಬಂಧಿಸಿದ ಪ್ರಾಪರ್ಟಿಯನ್ನು ಮಾರಾಟ ಮಾಡಲು ನಿರ್ಧರಿಸಿದರೆ, ಅಲ್ಲಿಯವರೆಗೆ ನೀವು ಕ್ಲೈಮ್ ಮಾಡಿದ ಟ್ಯಾಕ್ಸ್ ಪ್ರಯೋಜನಗಳನ್ನು ಅನೂರ್ಜಿತವೆಂದು ಪರಿಗಣಿಸಲಾಗುತ್ತದೆ. ಮುಂದಿನ ಮೌಲ್ಯಮಾಪನದ ಸಮಯದಲ್ಲಿ ಇವುಗಳನ್ನು ನಿಮ್ಮ ಟ್ಯಾಕ್ಸೇಬಲ್ ಇನ್‌ಕಮ್‌ಗೆ ಸೇರಿಸಲಾಗುತ್ತದೆ.
ನೀವು ನೋಡುವಂತೆ, ಹೋಮ್ ಲೋನ್‌ಗಳ ಮೇಲಿನ ಇನ್‌ಕಮ್ ಟ್ಯಾಕ್ಸ್ ರಿಬೇಟ್ ಒಬ್ಬ ವ್ಯಕ್ತಿಗೆ ಭಾರಿ ಉಳಿತಾಯಕ್ಕೆ ಕಾರಣವಾಗಬಹುದು.
ಆದರೆ, ಜಂಟಿ ಹೋಮ್ ಲೋನ್ ಸಂದರ್ಭದಲ್ಲಿ ಏನಾಗುತ್ತದೆ? ಅಂತಹ ಸಂದರ್ಭಗಳಲ್ಲಿ ಇನ್‌ಕಮ್ ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಲು ಸಾಲಗಾರರಲ್ಲಿ ಯಾರು ಲಯಬಲ್ ಆಗಿರುತ್ತಾರೆ?
ಜಂಟಿ ಹೋಮ್ ಲೋನ್ ಟ್ಯಾಕ್ಸ್ ಲಯಬಿಲಿಟಿಗಳನ್ನು ಹೇಗೆ ಕಡಿಮೆ ಮಾಡುತ್ತದೆ?
ಸಹ-ಮಾಲೀಕರಾಗಿರುವ ಸಹ-ಸಾಲಗಾರರೊಂದಿಗೆ ಹೋಮ್ ಲೋನ್ ಅನ್ನು ಆಯ್ಕೆ ಮಾಡಲು ನೀವು ನಿರ್ಧರಿಸಿದರೆ, ಟ್ಯಾಕ್ಸ್-ಉಳಿತಾಯ ಸಾಮರ್ಥ್ಯವು ಮೂಲಭೂತವಾಗಿ ದುಪ್ಪಟ್ಟುಗೊಳ್ಳುತ್ತದೆ. ಸೆಕ್ಷನ್ 80C ಮತ್ತು 24ರ ಅಡಿಯಲ್ಲಿ, ಇಬ್ಬರು ಸಾಲಗಾರರು ಇಂಟರೆಸ್ಟ್ ಪೇಮೆಂಟ್ ಮೇಲೆ ತಲಾ ರೂ.2 ಲಕ್ಷದವರೆಗಿನ ಟ್ಯಾಕ್ಸ್ ರಿಬೇಟ್ ಮತ್ತು ಅಸಲು ರೀಪೇಮೆಂಟ್ ಮೇಲೆ ತಲಾ ರೂ.1.5 ಲಕ್ಷದವರೆಗಿನ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದ್ದರಿಂದ, ಪ್ರತಿಯೊಬ್ಬ ಸಾಲಗಾರರು ಹೋಮ್ ಲೋನ್ ಮೇಲೆ ವಾರ್ಷಿಕ ಇನ್‌ಕಮ್ ಟ್ಯಾಕ್ಸ್ ಪ್ರಯೋಜನವಾಗಿ ರೂ.3.5 ಲಕ್ಷದವರೆಗೆ ಕ್ಲೈಮ್ ಮಾಡಬಹುದು.
ಹಳೆಯ ಮತ್ತು ಹೊಸ ರೆಜಿಮ್‌ಗಳ ಅಡಿಯಲ್ಲಿ ಹೋಮ್ ಲೋನ್ ತೆರಿಗೆ ಡಿಡಕ್ಷನ್‌ಗಳಲ್ಲಿ ವ್ಯತ್ಯಾಸಗಳು
ಕೇಂದ್ರ ಬಜೆಟ್ 2020 ಪ್ರಸ್ತಾವಿತ ಟ್ಯಾಕ್ಸ್ ರೆಜಿಮ್ ಅನ್ನು ಪರಿಚಯಿಸಿತು, ಇದು ಅಸ್ತಿತ್ವದಲ್ಲಿರುವ ಟ್ಯಾಕ್ಸ್ ಸ್ಲ್ಯಾಬ್ ದರಗಳನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಈ ಹೊಸ ರೆಜಿಮ್ ಅಸ್ತಿತ್ವದಲ್ಲಿರುವ ಟ್ಯಾಕ್ಸೇಷನ್ ವಿಧಾನದಲ್ಲಿ ಕಂಡುಬರುವ ಅನೇಕ ವಿನಾಯಿತಿಗಳು ಮತ್ತು ಟ್ಯಾಕ್ಸ್-ಉಳಿತಾಯ ನಿಬಂಧನೆಗಳನ್ನು ತೆಗೆದುಹಾಕುತ್ತದೆ.
ಈ ಹೊಸ ರೆಜಿಮ್‌ಗೆ ಬದಲಾಯಿಸಲು ನಿರ್ಧರಿಸುವ ಹೋಮ್ ಲೋನ್ ಸಾಲಗಾರರು ಲೋನ್ ರೀಪೇಮೆಂಟ್ ಆಧಾರದ ಮೇಲೆ ಡಿಡಕ್ಷನ್‌ಗಳಿಗೆ ಬಂದಾಗ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ತಿಳಿದಿರಬೇಕು.
ಐಟಿಎಯ ಸೆಕ್ಷನ್ 24ರ ಅಡಿಯಲ್ಲಿ, ಸ್ವಯಂ-ನೆಲೆಸಿರುವ ಪ್ರಾಪರ್ಟಿಗಾಗಿ ಹೋಮ್ ಲೋನ್ ಅನ್ನು ಹೊಂದಿರುವ ಟ್ಯಾಕ್ಸ್‌ಪೇಯರ್‌ಗಳು ಇನ್ನು ಮುಂದೆ ಇಂಟರೆಸ್ಟ್ ಪೇಮೆಂಟ್ ಮೇಲೆ ಇನ್‌ಕಮ್ ಟ್ಯಾಕ್ಸ್ ಪ್ರಯೋಜನವನ್ನು ಕ್ಲೈಮ್ ಮಾಡಲು ಸಾಧ್ಯವಿಲ್ಲ ಎಂದು ಹೊಸ ಟ್ಯಾಕ್ಸ್ ರೆಜಿಮ್ ಪ್ರಸ್ತಾಪಿಸುತ್ತದೆ. ಹೀಗಾಗಿ, ಅಂತಹ ನಿಯಮವು ನಿಮ್ಮ ಟ್ಯಾಕ್ಸ್-ಉಳಿತಾಯ ಸಾಮರ್ಥ್ಯವನ್ನು ರೂ.2 ಲಕ್ಷದವರೆಗೆ ಕಡಿಮೆ ಮಾಡುತ್ತದೆ.
ಆದಾಗ್ಯೂ, ಪ್ರಶ್ನೆಯಲ್ಲಿರುವ ಪ್ರಾಪರ್ಟಿಯನ್ನು ಬಾಡಿಗೆಗೆ ನೀಡುವ ವ್ಯಕ್ತಿಗಳಿಗೆ ಹೋಮ್ ಲೋನ್ ಇಂಟರೆಸ್ಟ್ ಮೇಲಿನ ಟ್ಯಾಕ್ಸ್ ರಿಬೇಟ್ ಇನ್ನೂ ಅಪ್ಲಿಕೇಬಲ್ ಆಗುತ್ತದೆ. ಈ ಜನರು ಈ ಕೆಳಗಿನ ವಿಧಾನಗಳಲ್ಲಿ ಇನ್ನೂ ಪ್ರಯೋಜನಗಳನ್ನು ಪಡೆಯಬಹುದು:
- ನೆಟ್ ಬಾಡಿಗೆ ಇನ್‌ಕಮ್‌ನ 30%ರಷ್ಟು ಸ್ಟಾಂಡರ್ಡ್ ಡಿಡಕ್ಷನ್ ಅಪ್ಲಿಕೇಬಲ್ ಆಗುತ್ತದೆ. ಪ್ರಾಪರ್ಟಿಯಿಂದ ಬರುವ ನಿಮ್ಮ ಒಟ್ಟು ಬಾಡಿಗೆ ಇನ್‌ಕಮ್‌ನಿಂದ ಅಪ್ಲಿಕೇಬಲ್ ಆಗುವ ಪುರಸಭೆಯ ಟ್ಯಾಕ್ಸ್‌ಗಳನ್ನು ಕಳೆಯುವುದರ ಮೂಲಕ ನಿಮ್ಮ ನೆಟ್ ಬಾಡಿಗೆ ಇನ್‌ಕಮ್ ಅನ್ನು ನೀವು ತಲುಪಬಹುದು.
- ಸ್ಟಾಂಡರ್ಡ್ ಡಿಡಕ್ಷನ್ ಅನ್ನು ಒಮ್ಮೆ ಕ್ಯಾಲ್ಕುಲೇಟ್ ಮಾಡಿದ ನಂತರ, ಇನ್‌ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 24ಬಿ ಪ್ರಕಾರ, ಇಂಟರೆಸ್ಟ್ ಲಯಬಿಲಿಟಿಗಳ ಮೇಲೆ ವ್ಯಕ್ತಿಗಳು ಹೋಮ್ ಲೋನ್ ಟ್ಯಾಕ್ಸ್ ಪ್ರಯೋಜನಗಳನ್ನು ಕ್ಲೈಮ್ ಮಾಡಬಹುದು.
ಆದಾಗ್ಯೂ, ಟ್ಯಾಕ್ಸ್ ಮೌಲ್ಯಮಾಪನದ ಈ ಹೊಸ ವ್ಯವಸ್ಥೆಗೆ ಬದಲಾಯಿಸುವುದು ಆಪ್ಷನಲ್ ಆಗಿದೆ.
ಹಲವಾರು ಇತರ ನಿಬಂಧನೆಗಳ ಜೊತೆಗೆ ಹೋಮ್ ಲೋನ್ ಟ್ಯಾಕ್ಸ್ ವಿನಾಯಿತಿಗಳ ಲಾಭ ಪಡೆಯಲು ನೀವು ಹಳೆಯ ರೆಜಿಮ್ ಅಡಿಯಲ್ಲಿ ಟ್ಯಾಕ್ಸ್ ಪ್ರಯೋಜನಗಳನ್ನು ಅನುಸರಿಸುವ ಆಯ್ಕೆ ಮಾಡಬಹುದು.
ಹೋಮ್ ಲೋನ್ ಟ್ಯಾಕ್ಸ್ ಬೆನಿಫಿಟ್ ಕ್ಯಾಲ್ಕುಲೇಟರ್ ಎಂದರೇನು?
ಹೋಮ್ ಲೋನ್ ಟ್ಯಾಕ್ಸ್ ಬೆನಿಫಿಟ್ ಕ್ಯಾಲ್ಕುಲೇಟರ್ ಒಂದು ವಿಶೇಷವಾದ ಆನ್‌ಲೈನ್ ಸಾಧನವಾಗಿದ್ದು, ಅಂತಹ ಲೋನ್‌ಗಳನ್ನು ಮರುಪಾವತಿ ಮಾಡುವಾಗ ನಿಮ್ಮ ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಅಸೆಸ್ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ.
ವಿವಿಧ ಟ್ಯಾಕ್ಸ್-ಉಳಿತಾಯ ಅವಕಾಶಗಳ ಬಗ್ಗೆ ಜ್ಞಾನವನ್ನು ಪಡೆದ ನಂತರವೂ, ಟ್ಯಾಕ್ಸ್‌ಪೇಯರ್‌ಗಳಿಗೆ ನಿಖರವಾದ ಡಿಡಕ್ಷನ್‌ಗಳನ್ನು ಅಸೆಸ್ ಮಾಡುವುದು ಕಷ್ಟಕರವಾಗಿರುತ್ತದೆ. ಹಾಗೆ ಮಾಡುವುದರಿಂದ ದೀರ್ಘವಾದ ಮತ್ತು ಸಂಕೀರ್ಣವಾದ ಕ್ಯಾಲ್ಕುಲೇಷನ್‌ಗಳನ್ನು ಸಹ ಒಳಗೊಳ್ಳಬಹುದು.
ಟ್ಯಾಕ್ಸ್ ಬೆನಿಫಿಟ್ ಕ್ಯಾಲ್ಕುಲೇಟರ್, ಮತ್ತೊಂದೆಡೆ, ಫಲಿತಾಂಶಗಳನ್ನು ತಕ್ಷಣವೇ ಒದಗಿಸುತ್ತದೆ. ಹೋಮ್ ಲೋನ್ ಪ್ರಯೋಜನಗಳನ್ನು ಕ್ಯಾಲ್ಕುಲೇಟ್ ಮಾಡುವ ಮೊದಲು ಮತ್ತು ನಂತರ ನಿಖರವಾದ ಟ್ಯಾಕ್ಸ್ ಲಯಬಿಲಿಟಿಗಳನ್ನು ನಿರ್ಧರಿಸಲು ನೀವು ಇದನ್ನು ಬಳಸಬಹುದು.
ಅಂತಹ ಕ್ಯಾಲ್ಕುಲೇಟರ್ ಉಪಕರಣವನ್ನು ನೀವು ಹೇಗೆ ಬಳಸುತ್ತೀರಿ?
ಹೋಮ್ ಲೋನ್ ಟ್ಯಾಕ್ಸ್ ಡಿಡಕ್ಷನ್ ಕ್ಯಾಲ್ಕುಲೇಷನ್‌ಗೆ ಕಾರಣವಾಗುವ ಅಂಶಗಳು
ಟ್ಯಾಕ್ಸ್ ಬೆನಿಫಿಟ್ ಕ್ಯಾಲ್ಕುಲೇಟರ್ ಕೆಲವು ವಿವರಗಳನ್ನು ಪರಿಗಣಿಸುವ ಮೂಲಕ ನಿಮ್ಮ ಇನ್‌ಕಮ್ ಟ್ಯಾಕ್ಸ್ ಬಾಕಿಗಳನ್ನು ಕ್ಯಾಲ್ಕುಲೇಟ್ ಮಾಡುತ್ತದೆ, ಆ ವಿವರಗಳನ್ನು ನೀವು ಒದಗಿಸಬೇಕು.
ಸಾಮಾನ್ಯವಾಗಿ, ಅಂತಹ ಸಾಧನವು ಅಸೆಸ್ಸೀಗಳಿಂದ ಈ ಕೆಳಗಿನ ಮಾಹಿತಿಯನ್ನು ಕೇಳುತ್ತದೆ.
- ಮೌಲ್ಯಮಾಪನ ವರ್ಷ - ಇದು ನೀವು ನಿಮ್ಮ ಇನ್‌ಕಮ್ ಟ್ಯಾಕ್ಸ್ ಬಾಕಿಗಳನ್ನು ನಿರ್ಧರಿಸಲು ಪ್ರಯತ್ನಿಸುತ್ತಿರುವ ವರ್ಷ
- ವರ್ಗ - ಅಸೆಸ್ಸೀಗಳ ವರ್ಗವು ಪುರುಷ, ಮಹಿಳೆ, ಸೀನಿಯರ್ ಸಿಟಿಜನ್ ಅಥವಾ ಸೂಪರ್ ಸೀನಿಯರ್ ಸಿಟಿಜನ್ ಆಗಿರಬಹುದು. ಸೀನಿಯರ್ ಸಿಟಿಜನ್‌ಗಳು ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗಿಂತ ವಿಭಿನ್ನ ಟ್ಯಾಕ್ಸ್ ಸ್ಲ್ಯಾಬ್‌ಗೆ ಬದ್ಧರಾಗಿರುತ್ತಾರೆ ಎಂಬುದನ್ನು ನೆನಪಿನಲ್ಲಿಡಿ.
- ವಾರ್ಷಿಕ ಗಳಿಕೆಗಳು - ಒಂದು ವರ್ಷದಲ್ಲಿ ನೀವು ಗಳಿಸುವ ಹಣದ ಅಮೌಂಟ್ ಟ್ಯಾಕ್ಸ್ ಲಯಬಿಲಿಟಿಗಳ ನಿರ್ಣಯಕ್ಕೆ ಪ್ರಮುಖವಾದ ಪರಿಗಣನೆಗಳಲ್ಲಿ ಒಂದಾಗಿದೆ. ನೀವು ಹಳೆಯ ರೆಜಿಮ್ ಅಡಿಯಲ್ಲಿ ಟ್ಯಾಕ್ಸ್‌ಗಳನ್ನು ಅಸೆಸ್ ಮಾಡಲು ಅಥವಾ ಹೊಸ ರೂಪದ ಮೌಲ್ಯಮಾಪನಕ್ಕೆ ಬದಲಾಯಿಸಲು ಆಯ್ಕೆಮಾಡಿದರೆ, ವರ್ಷಕ್ಕೆ ರೂ.2.5 ಲಕ್ಷದವರೆಗಿನ ಇನ್‌ಕಮ್ ಟ್ಯಾಕ್ಸ್-ಮುಕ್ತವಾಗಿ ಉಳಿಯುತ್ತದೆ. ಈ ಅಮೌಂಟ್ ಅನ್ನು ಮೀರಿದ ಇನ್‌ಕಮ್‌ಗೆ ಮಾತ್ರ ಅಪ್ಲಿಕೇಬಲ್ ಆಗುವ ದರಗಳ ಪ್ರಕಾರ ಟ್ಯಾಕ್ಸ್ ವಿಧಿಸಲಾಗುತ್ತದೆ.
- ಪಾವತಿಸಿದ ಇಂಟರೆಸ್ಟ್ ಅಮೌಂಟ್ - ಮುಂದೆ, ಮೌಲ್ಯಮಾಪನ ವರ್ಷದಲ್ಲಿ ನಿಮ್ಮ ಹೋಮ್ ಲೋನ್‌ಗೆ ಪಾವತಿಸಬೇಕಾದ ಒಟ್ಟು ಇಂಟರೆಸ್ಟ್ ಅನ್ನು ನೀವು ಭರ್ತಿ ಮಾಡಬೇಕಾಗುತ್ತದೆ. ಸೆಕ್ಷನ್ 24ರ ಆಧಾರದ ಮೇಲೆ ನಿಮ್ಮ ಡಿಡಕ್ಷನ್‌ಗಳನ್ನು ಕ್ಯಾಲ್ಕುಲೇಟ್ ಮಾಡಲು ಈ ಮಾಹಿತಿಯು ಉಪಯುಕ್ತವಾಗಿದೆ.
- ಅಸಲು ರೀಪೇಮೆಂಟ್‌ನ ಅಮೌಂಟ್ - ಅಂತೆಯೇ, ಮುಂದಿನ ಕ್ಷೇತ್ರದಲ್ಲಿ, ಮೌಲ್ಯಮಾಪನದ ಅವಧಿಯಲ್ಲಿ ನೀವು ಮರುಪಾವತಿಸಿದ ಹೋಮ್ ಲೋನ್‌ನ ಅಸಲು ಅಮೌಂಟ್ ಅನ್ನು ನೀವು ನಮೂದಿಸಬೇಕಾಗುತ್ತದೆ. ಸೆಕ್ಷನ್ 80C ಅಡಿಯಲ್ಲಿ ನಿಮ್ಮ ಟ್ಯಾಕ್ಸ್ ಪ್ರಯೋಜನಗಳನ್ನು ಕ್ಯಾಲ್ಕುಲೇಟ್ ಮಾಡಲು ಈ ಮಾಹಿತಿಯು ಅವಶ್ಯಕವಾಗಿದೆ.
ಒಮ್ಮೆ ನೀವು ಕ್ಯಾಲ್ಕುಲೇಟರ್‌ನಲ್ಲಿ ಈ ಎಲ್ಲಾ ವಿವರಗಳನ್ನು ನಮೂದಿಸಿದರೆ, ಅದು ಮೂರು ಪ್ರಮುಖ ಮಾಹಿತಿಯನ್ನು ಪ್ರದರ್ಶಿಸುತ್ತದೆ.
ಮೊದಲನೆಯದಾಗಿ, ಇದು ಹೋಮ್ ಲೋನ್ ಪ್ರಯೋಜನಗಳಲ್ಲಿ ಅಪವರ್ತನವಿಲ್ಲದೆ ಪಾವತಿಸಬೇಕಾದ ಟ್ಯಾಕ್ಸ್ ಅಮೌಂಟ್ ಅನ್ನು ಬಹಿರಂಗಪಡಿಸುತ್ತದೆ.
ಎರಡನೆಯದಾಗಿ, ಹೌಸಿಂಗ್ ಲೋನ್ ಸಾಲಗಾರರಿಗೆ ಇರುವ ಹಲವಾರು ಟ್ಯಾಕ್ಸ್ ಉಳಿಸುವ ನಿಬಂಧನೆಗಳನ್ನು ಪರಿಗಣಿಸಿದ ನಂತರ ಟ್ಯಾಕ್ಸ್‌ಪೇಯರ್‌ಗಳು ತಮ್ಮ ಲಯಬಿಲಿಟಿಗಳ ಬಗ್ಗೆ ತಿಳಿದುಕೊಳ್ಳುತ್ತಾರೆ.
ಕೊನೆಯದಾಗಿ, ನಿಮ್ಮ ಹೋಮ್ ಲೋನ್ ರೀಪೇಮೆಂಟ್‌ನಿಂದಾಗಿ ನೀವು ಉಳಿಸುವ ಟ್ಯಾಕ್ಸ್ ಅಮೌಂಟ್ ಅನ್ನು ಬೇರೆ ಸೆಕ್ಷನ್ ವಿವರಿಸುತ್ತದೆ.
ಹೌಸಿಂಗ್ ಲೋನ್ ಟ್ಯಾಕ್ಸ್ ಬೆನಿಫಿಟ್ ಕ್ಯಾಲ್ಕುಲೇಟರ್ ಅನ್ನು ಬಳಸುವ ಪ್ರಯೋಜನಗಳು
ಈಗ ನೀವು ಅಂತಹ ಕ್ಯಾಲ್ಕುಲೇಟರ್‌ನ ಕಾರ್ಯಚಟುವಟಿಕೆಗಳ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಹೊಂದಿದ್ದೀರಿ, ಅದನ್ನು ನೀವು ಏಕೆ ಬಳಸಬೇಕು ಎಂಬುದನ್ನೂ ಪರಿಗಣಿಸಿ.
- ಕ್ಯಾಲ್ಕುಲೇಷನ್‌ಗಳು ವೇಗವಾಗಿರುತ್ತವೆ - ಹೋಮ್ ಲೋನ್ ರೀಪೇಮೆಂಟ್‌ನಿಂದ ತನ್ನ ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಪಡೆಯಲು ಒಬ್ಬ ವ್ಯಕ್ತಿಯು ದೀರ್ಘವಾದ ಮ್ಯಾನ್ಯುವಲ್ ಕ್ಯಾಲ್ಕುಲೇಷನ್‌ಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಇದು ಬಹುತೇಕ ಜನರಿಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಸವಾಲಾಗಿರುತ್ತದೆ. ಟ್ಯಾಕ್ಸ್ ಬೆನಿಫಿಟ್ ಕ್ಯಾಲ್ಕುಲೇಟರ್ ಮೂಲಕ ಅದರ ವಿಲೇವಾರಿಯಲ್ಲಿ, ಟ್ಯಾಕ್ಸ್‌ಪೇಯರ್‌ಗಳು ತಮ್ಮ ಲಯಬಿಲಿಟಿಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಇದಲ್ಲದೆ, ಅವರು ತಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಬಾಕಿಗಳ ಕಾರಣದಿಂದಾಗಿ ಅವರು ಟ್ಯಾಕ್ಸ್ ಪೇಮೆಂಟ್‌ಗಳಲ್ಲಿ ಉಳಿಸುವ ಅಮೌಂಟ್ ಅನ್ನು ಅಸೆಸ್ ಮಾಡಬಹುದು.
- ಫಲಿತಾಂಶಗಳು ಯಾವಾಗಲೂ ನಿಖರವಾಗಿರುತ್ತವೆ - ಈ ಕ್ಯಾಲ್ಕುಲೇಷನ್‌ಗಳಲ್ಲಿನ ಒಂದು ತಪ್ಪು ನಿಮ್ಮ ಟ್ಯಾಕ್ಸ್ ಪೇಮೆಂಟ್ ಪ್ಲಾನ್‌ಗಳಲ್ಲಿ ರಾಜಿ ಮಾಡಿಕೊಳ್ಳುವಂತೆ ಮಾಡಬಹುದು. ನಿಮ್ಮ ಬಾಕಿಗಳನ್ನು ತೆರವುಗೊಳಿಸುವ ಸಮಯ ಬಂದಾಗ, ನೀವು ಮೊದಲು ಊಹಿಸಿದ್ದಕ್ಕಿಂತ ದೊಡ್ಡ ಲಯಬಿಲಿಟಿಗಳನ್ನು ನೀವು ಕಾಣಬಹುದು. ಹೀಗಾಗಿ, ಇಂತಹ ಸಮಸ್ಯೆಗಳು ಉಂಟಾಗದಂತೆ ತಡೆಯಲು, ನೀವು ಹೋಮ್ ಲೋನ್ ಟ್ಯಾಕ್ಸ್ ಬೆನಿಫಿಟ್ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಳ್ಳಬಹುದು. ಇದರಲ್ಲಿ, ಯಾವುದೇ ದೋಷಗಳು ಅಥವಾ ತಪ್ಪುಗಳ ಸಾಧ್ಯತೆಗಳನ್ನು ತೆಗೆದುಹಾಕಲಾಗುತ್ತದೆ, ಅಪ್ಲಿಕೇಬಲ್ ಆಗುವ ಟ್ಯಾಕ್ಸ್ ರಿಬೇಟ್‌ಗಳನ್ನು ಅಪ್ಲೈ ಮಾಡಿದ ನಂತರ ನಿಮಗೆ ನಿಜವಾದ ಟ್ಯಾಕ್ಸ್ ಲಯಬಿಲಿಟಿಗಳ ತಿಳುವಳಿಕೆಯನ್ನು ನೀಡುತ್ತದೆ.
- ಇಂಟರ್‌ಫೇಸ್ ಅರ್ಥ ಮಾಡಿಕೊಳ್ಳುವು ಸುಲಭ - ಅಂತಹ ಕ್ಯಾಲ್ಕುಲೇಟರ್ ಅನ್ನು ಬಳಸುವುದು ಅತ್ಯಂತ ಸರಳವಾಗಿದೆ, ಸುವ್ಯವಸ್ಥಿತ ಇಂಟರ್‌ಫೇಸ್‌ಗೆ ಧನ್ಯವಾದ. ಅಂತಹ ಆನ್‌ಲೈನ್ ಉಪಕರಣವನ್ನು ಹಿಂದೆಂದೂ ಬಳಸದ ಜನರು ಸಹ ಮೊದಲ ಬಾರಿಗೆ ಅದನ್ನು ಬಳಸುವಾಗ ನಿರಾಳರಾಗುತ್ತಾರೆ. ಹೀಗಾಗಿ, ಅಂತಹ ಕ್ಯಾಲ್ಕುಲೇಟರ್ ಅಸೆಸ್ಸೀಗೆ ಕನಿಷ್ಠ ತೊಡಕುಗಳನ್ನು ಒದಗಿಸುತ್ತದೆ ಮತ್ತು ಲಯಬಿಲಿಟಿಗಳನ್ನು ಚೆಕ್ ಮಾಡಲು ಅನುವು ಮಾಡಿಕೊಡುತ್ತದೆ.
ನಿಮ್ಮ ಟ್ಯಾಕ್ಸ್‌ಗಳನ್ನು ಫೈಲ್ ಮಾಡುವ ಮೊದಲು ಈ ಕ್ಯಾಲ್ಕುಲೇಟರ್ ಉಪಕರಣವನ್ನು ಬಳಸುವುದನ್ನು ಪರಿಗಣಿಸಲು ಇವು ಕೆಲವು ಪ್ರಮುಖ ಕಾರಣಗಳಾಗಿವೆ.
ಟ್ಯಾಕ್ಸ್ ಲಯಬಿಲಿಟಿಗಳ ಮೌಲ್ಯಮಾಪನವು ಹೌಸಿಂಗ್ ಲೋನ್ ಪ್ರಯೋಜನಗಳ ಹೊರತಾಗಿ ಹಲವಾರು ಇತರ ಡಿಡಕ್ಷನ್‌ಗಳು ಮತ್ತು ವಿನಾಯಿತಿಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ನೆನಪಿಡಿ.
ಈ ಕ್ಯಾಲ್ಕುಲೇಟರ್ ನಿಮ್ಮ ಹೋಮ್ ಲೋನ್ ನಿಯಮಗಳ ಆಧಾರದ ಮೇಲೆ ಉಳಿತಾಯವನ್ನು ನಿರ್ಧರಿಸಬಹುದಾದರೂ, ಇದು ಅವೆನ್ಯೂಗಳ ಹೆಚ್ಚುವರಿ ಟ್ಯಾಕ್ಸ್-ಉಳಿತಾಯಗಳನ್ನು ಪ್ರಮಾಣೀಕರಿಸಲು ಸಾಧ್ಯವಿಲ್ಲ.
ಹೋಮ್ ಲೋನ್ ನೀವು ಬಯಸುವ ಪ್ರಾಪರ್ಟಿಯನ್ನು ಪಡೆಯಲು ಸಹಾಯ ಮಾಡುತ್ತದೆ ಆದರೆ ಇನ್‌ಕಮ್ ಟ್ಯಾಕ್ಸ್ ಪೇಮೆಂಟ್‌ಗಳನ್ನೂ ಕಡಿಮೆ ಮಾಡುತ್ತದೆ.
ಅದೇನೇ ಇದ್ದರೂ, ಸಾಲಗಾರರಾಗಿ, ನಿಮ್ಮ ಅರ್ಹತೆಯ ಅಸಲು ರೀಪೇಮೆಂಟ್ ಮತ್ತು ಇಂಟರೆಸ್ಟ್ ಬಾಕಿಗಳ ಆಧಾರದ ಮೇಲೆ ನೀವು ಹೋಮ್ ಲೋನಿನ ಮೇಲೆ ನಿಖರವಾದ ಟ್ಯಾಕ್ಸ್ ರಿಬೇಟ್ ಅನ್ನು ಚೆಕ್ ಮಾಡಬೇಕು.
ಹೋಮ್ ಲೋನ್ ಟ್ಯಾಕ್ಸ್ ಪ್ರಯೋಜನಗಳ ಬಗ್ಗೆ ಪದೇಪದೇ ಕೇಳಲಾದ ಪ್ರಶ್ನೆಗಳು
ನಿರ್ಮಾಣ ಹಂತದಲ್ಲಿರುವ ಪ್ರಾಪರ್ಟಿಗಾಗಿ ಹೋಮ್ ಲೋನ್‌ಗೆ ಅಪ್ಲಿಕೇಬಲ್ ಆಗುವ ಟ್ಯಾಕ್ಸ್ ಪ್ರಯೋಜನಗಳು ಯಾವುವು?
ನಿರ್ಮಾಣ ಹಂತದಲ್ಲಿರುವ ಪ್ರಾಪರ್ಟಿಗಾಗಿ ಹೋಮ್ ಲೋನ್‌ನ ಅಸಲು ರೀಪೇಮೆಂಟ್ ಮೇಲಿನ ಟ್ಯಾಕ್ಸ್ ಪ್ರಯೋಜನವು ರೆಡಿ-ಟು-ಮೂವ್ ಪ್ರಾಪರ್ಟಿಗೂ ಸಮಾನವಾಗಿರುತ್ತದೆ. ಆದ್ದರಿಂದ, ನೀವು ಈ ಸಂದರ್ಭಗಳಲ್ಲಿ ಸೆಕ್ಷನ್ 80C ಅಡಿಯಲ್ಲಿ ರೂ.1.5 ಲಕ್ಷದವರೆಗೆ ಕ್ಲೈಮ್ ಮಾಡಬಹುದು.
ಆದಾಗ್ಯೂ, ನಿರ್ಮಾಣ ಪೂರ್ಣಗೊಳ್ಳುವ ಮೊದಲು ಕ್ಲೈಮ್ ಮಾಡಲು ಇಂಟರೆಸ್ಟ್ ಪೇಮೆಂಟ್ ಮೇಲೆ ರೂ.2 ಲಕ್ಷದವರೆಗಿನ ಟ್ಯಾಕ್ಸ್ ಡಿಡಕ್ಷನ್ ಲಭ್ಯವಿಲ್ಲ.
ಈ ನಿದರ್ಶನದಲ್ಲಿ, ಯೋಜನೆಯು ಪೂರ್ಣಗೊಳ್ಳುವವರೆಗೆ ಗರಿಷ್ಠ ಐದು ವರ್ಷಗಳವರೆಗೆ ಡಿಡಕ್ಷನ್ ಅನ್ನು ಸಂಗ್ರಹಿಸಲಾಗುತ್ತದೆ. ಮನೆಯನ್ನು ಪೂರ್ಣಗೊಳಿಸಿದ ವರ್ಷದಿಂದ ಐದು-ವಾರ್ಷಿಕ ಕಂತುಗಳ ಮೂಲಕ ಮನೆಮಾಲೀಕರು ಅದನ್ನು ಕ್ಲೈಮ್ ಮಾಡಬಹುದು.
ಹೋಮ್ ಇಂಪ್ರೂವ್‌ಮೆಂಟ್ ಲೋನ್ ಪಡೆಯುವ ಸಾಲಗಾರರಿಗೆ ಟ್ಯಾಕ್ಸ್-ಉಳಿತಾಯ ಆಯ್ಕೆಗಳು ಯಾವುವು?
ನಿಮ್ಮ ಮನೆಯನ್ನು ಸುಧಾರಿಸಲು ನೀವು ಲೋನ್ ಪಡೆದರೆ, ಅಂತಹ ಲೋನ್‌ನ ಇಂಟರೆಸ್ಟ್ ಪೇಮೆಂಟ್‌ಗಳು ಸೆಕ್ಷನ್ 24ರ ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್‌ಗಳಿಗೆ ಅರ್ಹತೆ ಪಡೆಯುತ್ತವೆ. ಪ್ರತಿ ವರ್ಷ, ಸಾಲಗಾರನು ತನ್ನ ಇಂಟರೆಸ್ಟ್ ಲಯಬಿಲಿಟಿಗಳ ಆಧಾರದ ಮೇಲೆ ರೂ.30000ವರೆಗೆ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಬಹುದು.
ಆದಾಗ್ಯೂ, ಅಂತಹ ಲೋನ್‌ಗಳು ಲೋನ್‌ನ ಅಸಲು ರೀಪೇಮೆಂಟ್ ಆಧಾರದ ಮೇಲೆ ನಿಮ್ಮ ಟ್ಯಾಕ್ಸ್ ಬಾಕಿಯನ್ನು ಕಡಿಮೆ ಮಾಡುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.
ಹೋಮ್ ಟಾಪ್-ಅಪ್ ಲೋನ್‌ನಲ್ಲಿ ತೆರಿಗೆ ರಿಬೇಟ್‌ಗಳಿಗೆ ನೀವು ಅರ್ಹರಾಗಿದ್ದೀರಾ?
ತಮ್ಮ ಪ್ರಾಪರ್ಟಿಯನ್ನು ರಿಪೇರಿ ಮಾಡಲು ಅಥವಾ ನವೀಕರಿಸಲು ತಮ್ಮ ಹೋಮ್ ಲೋನ್ ಮೇಲೆ ಟಾಪ್-ಅಪ್ ಲೋನ್ ಅನ್ನು ಪಡೆಯುವ ಸಾಲಗಾರರು ಸೆಕ್ಷನ್ 24ರ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಕ್ಲೈಮ್ ಮಾಡಲು ಅರ್ಹರಾಗಿರುತ್ತಾರೆ. ಅವರು ರೂ.30000ವರೆಗಿನ ವಾರ್ಷಿಕ ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಪಡೆದುಕೊಳ್ಳಬಹುದು.
ಆದಾಗ್ಯೂ, ನೀವು ಮನೆಯನ್ನು ಖರೀದಿಸಲು ಅಥವಾ ನಿರ್ಮಿಸಲು ಅಸಲು ಅಮೌಂಟ್ ಅನ್ನು ಬಳಸಿದರೆ, ಲೋನ್‌ನ ಅಸಲು ರೀಪೇಮೆಂಟ್ ಮತ್ತು ಇಂಟರೆಸ್ಟ್ ಪೇಮೆಂಟ್ ಭಾಗಗಳಲ್ಲಿ ಕ್ರಮವಾಗಿ ರೂ.1.5 ಲಕ್ಷ ಮತ್ತು ರೂ.2 ಲಕ್ಷಗಳ ಟ್ಯಾಕ್ಸ್ ಪ್ರಯೋಜನಗಳು ಲಭ್ಯವಿವೆ.
ಎರಡನೇ ಪ್ರಾಪರ್ಟಿಯ ಮೇಲಿನ ಹೋಮ್ ಲೋನ್‌ಗಳಿಗೆ ನಿಮ್ಮ ಟ್ಯಾಕ್ಸ್ ರಿಬೇಟ್ ಅನ್ನು ಹೇಗೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ?
ಈ ಮನೆಗಳಲ್ಲಿ ಒಂದರಲ್ಲಿ ಸ್ವಯಂ-ನೆಲೆಸಿದ್ದರೆ ಮತ್ತು ಇನ್ನೊಂದು ಖಾಲಿಯಾಗಿದ್ದರೆ ವ್ಯಕ್ತಿಗಳು ತಮ್ಮ ಎರಡನೇ ಹೋಮ್ ಲೋನ್ ಮೇಲಿನ ಟ್ಯಾಕ್ಸ್ ಪ್ರಯೋಜನಗಳನ್ನು ಮೊದಲ ಲೋನ್‌ನಂತೆಯೇ ಕ್ಲೈಮ್ ಮಾಡಬಹುದು.
ಬಾಡಿಗೆಗೆ ನೀಡಿದ ಪ್ರಾಪರ್ಟಿಯ ಸಂದರ್ಭದಲ್ಲಿ, ಮತ್ತೊಂದೆಡೆ, ಸಾಲಗಾರರು 30% ಸ್ಟಾಂಡರ್ಡ್ ಡಿಡಕ್ಷನ್ ಅನ್ನು ಮತ್ತು ಒಟ್ಟು ಇಂಟರೆಸ್ಟ್ ಪೇಮೆಂಟ್‌ಗಳನ್ನು ಕ್ಲೈಮ್ ಮಾಡಬಹುದು. ಇಂಟರೆಸ್ಟ್ ಪೇಮೆಂಟ್ ಡಿಡಕ್ಷನ್ ಮೇಲೆ ಯಾವುದೇ ಗರಿಷ್ಠ ಲಿಮಿಟ್ ಇಲ್ಲ.
ಸ್ವಾಧೀನಪಡಿಸಿಕೊಂಡ 5 ವರ್ಷಗಳೊಳಗೆ ಪ್ರಾಪರ್ಟಿಯನ್ನು ಮಾರಾಟ ಮಾಡಿದರೆ ಇಂಟರೆಸ್ಟ್ ಪೇಮೆಂಟ್ ಮೇಲಿನ ಹೋಮ್ ಲೋನ್ ಟ್ಯಾಕ್ಸ್ ಉಳಿತಾಯಕ್ಕೆ ಏನಾಗುತ್ತದೆ?
ನೀವು ಖರೀದಿಸಿದ ಐದು ವರ್ಷಗಳೊಳಗೆ ಪ್ರಶ್ನೆಯಲ್ಲಿರುವ ಪ್ರಾಪರ್ಟಿಯನ್ನು ಮಾರಾಟ ಮಾಡುವ ಸಂದರ್ಭ ಬಂದಲ್ಲಿ, ಇಂಟರೆಸ್ಟ್ ಪೇಮೆಂಟ್‌ಗಳ ಆಧಾರದ ಮೇಲೆ ಡಿಡಕ್ಷನ್ ಮಾಡಿದ ಟ್ಯಾಕ್ಸ್‌ಗಳನ್ನು ನಿಮ್ಮ ಟ್ಯಾಕ್ಸೇಬಲ್ ಇನ್‌ಕಮ್‌ಗೆ ಸೇರಿಸಲಾಗುತ್ತದೆ.
ಆದ್ದರಿಂದ, ಅಸೆಸ್ಸೀಗಳು ಅವರ ಒಡೆತನದ ಪ್ರಾಪರ್ಟಿಯನ್ನು ಮಾರಾಟ ಮಾಡಲು ನಿರ್ಧರಿಸಿದಾಗ ಸೆಕ್ಷನ್ 80C ಅಡಿಯಲ್ಲಿ ತಮ್ಮ ಹೋಮ್ ಲೋನ್‌ಗಳ ಮೇಲಿನ ಎಲ್ಲಾ ಪ್ರಯೋಜನಗಳನ್ನು ಸರೆಂಡರ್ ಮಾಡುತ್ತಾರೆ.