ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್

Zero Paperwork. Quick Process.

ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಎಂದರೇನು?

ಸೂಪರ್ ಟಾಪ್-ಅಪ್ ಹೆಲ್ತ್  ಇನ್ಶೂರೆನ್ಸ್, ಹೆಲ್ತ್  ಇನ್ಶೂರೆನ್ಸ್ ನ ಒಂದು ರೀತಿಯ ವಿಸ್ತರಣೆಯಾಗಿದೆ ಹಾಗೂ ನೀವು ಈಗಾಗಲೇ ನಿಮ್ಮ ಕಾರ್ಪೋರೇಟ್ ಇನ್ಶೂರೆನ್ಸ್ ನ ಗರಿಷ್ಠ ಕ್ಲೈಮ್ ಮೊತ್ತವನ್ನು(ಈ ವರ್ಷದಲ್ಲಿ) ಬಳಕೆ ಮಾಡಿದ್ದರೆ ಅಥವಾ ನೀವು ಸ್ವಲ್ಪ ಮೊತ್ತವನ್ನು ನಿಮ್ಮ ಜೇಬಿನಿಂದ ನೀಡಲು ಸಂಪೂರ್ಣವಾಗಿ ಒಪ್ಪಿದ್ದರೂ, ವಸ್ತುಗಳು ದುಬಾರಿಯಾದಾಗ ನಿಮ್ಮ ಆರೋಗ್ಯ ಇನ್ಶೂರರ್ ನಿಮಗಾಗಿ ಕವರ್ ನೀಡಬೇಕೆಂದು ನೀವು ಬಯಸಿದರೆ, ಇದನ್ನು ಬಳಸಬಹುದು.

ಸೂಪರ್ ಟಾಪ್-ಅಪ್ ಯೋಜನೆಯ ವಿಶೇಷತೆ ಏನೆಂದರೆ, ಇದು ನಿಮ್ಮ ಒಂದು ಪಾಲಿಸಿ ವರ್ಷದ ಒಳಗಿನ ಸಂಚಿತ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ, ಒಮ್ಮೆ ನೀವು ಡಿಡಕ್ಟಿಬಲ್(ಕಡಿತ) ಗಳನ್ನು ಮೀರಿದ ನಂತರ. ಹೀಗಾಗಿ ಇದು,ಕೇವಲ ಒಂದು ಸಿಂಗಲ್ ಕ್ಲೈಮ್ ಡಿಡಕ್ಟಿಬಲ್ ಅನ್ನು ಮೀರಿದರೆ ಮಾತ್ರ ಕ್ಲೈಮ್ ಗಳನ್ನು ಕವರ್ ಮಾಡುವ ಸಾಧಾರಣ ಟಾಪ್-ಅಪ್ ಗಿಂತ, ಭಿನ್ನವಾಗಿದೆ!

ಸೂಪರ್ ಟಾಪ್-ಅಪ್ ಅನ್ನು ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳಿ

ಸೂಪರ್ ಟಾಪ್-ಅಪ್ ಇನ್ಶೂರೆನ್ಸ್(ಡಿಜಿಟ್ಹೆಲ್ತ್ ಕೇರ್ ಪ್ಲಸ್) ಇತರ ಟಾಪ್-ಅಪ್ ಯೋಜನೆಗಳು
ಆಯ್ಕೆ ಮಾಡಿರುವ ಡಿಡಕ್ಟಿಬಲ್ 2 ಲಕ್ಷ 2 ಲಕ್ಷ
ಆಯ್ಕೆ ಮಾಡಿರುವ ಇನ್ಶೂರ್ಡ್ ಮೊತ್ತ 10 ಲಕ್ಷ 10 ಲಕ್ಷ
ವರ್ಷದ 1ನೇ ಕ್ಲೈಮ್ 4 ಲಕ್ಷ 4 ಲಕ್ಷ
ನೀವು ಪಾವತಿಸುತ್ತೀರಿ 2 ಲಕ್ಷ 2 ಲಕ್ಷ
ನಿಮ್ಮ ಟಾಪ್-ಅಪ್ ಇನ್ಶೂರರ್ ಪಾವತಿಸುತ್ತಾರೆ 2 ಲಕ್ಷ 2 ಲಕ್ಷ
ವರ್ಷದ 2ನೇ ಕ್ಲೈಮ್ 6 ಲಕ್ಷ 6 ಲಕ್ಷ
ನೀವು ಪಾವತಿಸುತ್ತೀರಿ ಏನೂ ಇಲ್ಲ!😊 2 ಲಕ್ಷ (ಡಿಡಕ್ಟಿಬಲ್ ಆಯ್ಕೆ ಮಾಡಲಾಗಿದೆ)
ನಿಮ್ಮ ಟಾಪ್-ಅಪ್ ಇನ್ಶೂರರ್ ಪಾವತಿಸುತ್ತಾರೆ 6 ಲಕ್ಷ 4 ಲಕ್ಷ
ವರ್ಷದ 3ನೇ ಕ್ಲೈಮ್ 1 ಲಕ್ಷ 1 ಲಕ್ಷ
ನೀವು ಪಾವತಿಸುತ್ತೀರಿ ಏನೂ ಇಲ್ಲ! 😊 1 ಲಕ್ಷ
ನಿಮ್ಮ ಟಾಪ್ ಅಪ್ ಇನ್ಶೂರರ್ ಪಾವತಿಸುತ್ತಾರೆ 1 ಲಕ್ಷ ಏನೂ ಇಲ್ಲ☹

ಸೂಪರ್ ಟಾಪ್-ಅಪ್ ಇನ್ಶೂರೆನ್ಸ್ ನ ಲಾಭಗಳೇನು?

ಸಾಂಕ್ರಾಮಿಕಗಳನ್ನು ಕವರ್ ಮಾಡುತ್ತದೆ - ಕೋವಿಡ್ - 19 ನಮ್ಮ ಬದುಕಿನಲ್ಲಿ ಬಹಳ ಅನಿಶ್ಚಿತತೆಯನ್ನು ಮೂಡಿಸಿದೆ ಎಂದು ನಾವು ಅರಿತಿದ್ದೇವೆ. ಇತರ ಅನಾರೋಗ್ಯಗಳ ಜೊತೆಯಲ್ಲಿ, ಕೋವಿಡ್ - 19 ಅನ್ನೂ ಕವರ್ ಮಾಡಲಾಗಿದೆ, ಅದು ಒಂದು ಪಿಡುಗು ಆಗಿದ್ದರೂ ಸಹ.

.

ನಿಮ್ಮ ಡಿಡಕ್ಟಿಬಲ್ ಗಳನ್ನು ಕೇವಲ ಒಂದು ಬಾರಿ ಪಾವತಿಸಿ  - ಸೂಪರ್ ಟಾಪ್-ಅಪ್ ಇನ್ಶೂರೆನ್ಸ್ ನೊಂದಿಗೆ, ನೀವು ನಿಮ್ಮ ಡಿಡಕ್ಟಿಬಲ್ ಗಳನ್ನು ಕೇವಲ ಒಂದು ಬಾರಿ ಪಾವತಿಸಿ ಒಂದು ವರ್ಷದಲ್ಲಿ ಹಲವು ಬಾರಿ ಕ್ಲೈಮ್ ಮಾಡಬಹುದು. ನಿಜವಾದ ಡಿಜಿಟ್ ವಿಶೇಷತೆ! 😊

ನಿಮ್ಮ ಟಾಪ್-ಅಪ್ ಪಾಲಿಸಿಯನ್ನು ಆರೋಗ್ಯದ ಅವಶ್ಯಕತೆಗಳ ಅನುಸಾರ ಕಸ್ಟಮೈಜ್ ಮಾಡಿ - ನೀವು 1, 2, 3, ಮತ್ತು 5 ಲಕ್ಷದ ಡಿಡಕ್ಟಿಬಲ್ ಗಳಿಂದ ಆಯ್ಕೆ ಮಾಡಬಹುದು ಹಾಗೂ 10 ಲಕ್ಷದಿಂದ 20 ಲಕ್ಷದ ವರೆಗಿನ ಮೊತ್ತವನ್ನು ನಿಮ್ಮ ಇನ್ಶೂರ್ಡ್ ಮೊತ್ತವಾಗಿ ಆಯ್ಕೆ ಮಾಡಬಹುದು.

ರೂಂ ಬಾಡಿಗೆ ಪ್ರತಿಬಂಧವಿಲ್ಲ - ಪ್ರತಿಯೊಬ್ಬರ ಆದ್ಯತೆಗಳೂ ಬೇರೆಬೇರೆಯಾಗಿರುತ್ತದೆ ಎಂದು ನಮಗೆ ಅರ್ಥವಾಗುತ್ತದೆ. ಆದ್ದರಿಂದಲೇ, ನಮ್ಮ ಬಳಿ ರೂಂ ಬಾಡಿಗೆ ಪ್ರತಿಬಂಧವಿಲ್ಲ! ನೀವು ಬಯಸಿದ ಆಸ್ಪತ್ರೆ ರೂಂ ಅನ್ನು ಆಯ್ಕೆ ಮಾಡಿ. 😊

ನೀವು ಬಯಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ- ನಗದುರಹಿತ ಕ್ಲೈಮ್ ಗಳಿಗಾಗಿ ಭಾರತದಲ್ಲಿರುವ ನಮ್ಮ 16400+ ನೆಟ್ವರ್ಕ್ ಆಸ್ಪತ್ರೆಗಳಿಂದ ಆಯ್ಕೆ ಮಾಡಿ. ನೀವು ಮರುಪಾವತಿಯ ಆಯ್ಕೆಯನ್ನೂ ಮಾಡಬಹುದು.

ಸರಳ ಆನ್ಲೈನ್ ಪ್ರಕ್ರಿಯೆ - ಸೂಪರ್ ಟಾಪ್-ಅಪ್ ಹೆಲ್ತ್  ಇನ್ಶೂರೆನ್ಸ್ ನಲ್ಲಿ, ಖರೀದಿಸುವುದರಿಂದ ಹಿಡಿದು ಕ್ಲೈಮ್ ಮಾಡುವವರೆಗೆ ಎಲ್ಲವೂ ಕಾಗದರಹಿತ, ಸುಲಭ ಹಾಗೂ ಗೊಂದಲರಹಿತವಾಗಿದೆ! ಯಾವುದೇ ಹಾರ್ಡ್ ಕಾಪಿಗಳಿಲ್ಲ, ಕ್ಲೈಮ್ ಗಳಿಗೆ ಕೂಡಾ!

ನೀವು ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಏಕೆ ಪಡೆಯಬೇಕು?

ನೀವು ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ?

ಪ್ರಯೋಜನಗಳು

ಸೂಪರ್ ಟಾಪ್-ಅಪ್

ಇದು ಡಿಡಕ್ಟಿಬಲ್‌ನ ಮೊತ್ತವನ್ನು ಮೀರಿದ ನಂತರ ಒಂದು ಪಾಲಿಸಿ ವರ್ಷದೊಳಗೆ ಕ್ಯುಮುಲೇಟಿವ್ ಮೆಡಿಕಲ್ ವೆಚ್ಚಗಳಿಗೆ ಕ್ಲೈಮ್‌ಗಳನ್ನು ಪಾವತಿಸುತ್ತದೆ. Vs ರೆಗ್ಯುಲರ್ ಟಾಪ್-ಅಪ್ ಇನ್ಶೂರೆನ್ಸ್, ಇದು ಪ್ರಾರಂಭದ ಮಿತಿಗಿಂತ ಹೆಚ್ಚಿನ ಸಿಂಗಲ್ ಕ್ಲೈಮ್ ಅನ್ನು ಮಾತ್ರ ಕವರ್ ಮಾಡುತ್ತದೆ.

ನಿಮ್ಮ ಡಿಡಕ್ಟಿಬಲ್ ಮೊತ್ತವನ್ನು ಒಮ್ಮೆ ಮಾತ್ರ ಪಾವತಿಸಿ - ಡಿಜಿಟ್ ಸ್ಪೆಷಲ್

ಎಲ್ಲ ಆಸ್ಪತ್ರೆಯ ಚಿಕಿತ್ಸೆ

ಇದು ಅನಾರೋಗ್ಯ, ಅಪಘಾತ ಅಥವಾ ಗಂಭೀರ ಅನಾರೋಗ್ಯದ ಕಾರಣದಿಂದ ಉಂಟಾದ ಆಸ್ಪತ್ರೆಯ ವೆಚ್ಚಗಳನ್ನು ಒಳಗೊಂಡಿದೆ. ನಿಮ್ಮ ಡಿಡಕ್ಟಿಬಲ್‌ನ ಲಿಮಿಟ್ ಅನ್ನು ದಾಟಿದ ನಂತರ, ನಿಮ್ಮ ಒಟ್ಟು ವೆಚ್ಚಗಳು ಇನ್ಶೂರೆನ್ಸ್ ಮೊತ್ತದಷ್ಟು ಇರುವವರೆಗೆ, ವಿವಿಧ ಚಿಕಿತ್ಸೆಗಳಿಗೆ ಕವರ್ ಮಾಡಲು ಇದನ್ನು ಬಳಸಬಹುದು.

ಡೇ ಕೇರ್ ಪ್ರಕ್ರಿಯೆಗಳು

ಹೆಲ್ತ್ ಇನ್ಶೂರೆನ್ಸ್, 24 ಗಂಟೆಗಳನ್ನು ಮೀರಿದ ಚಿಕಿತ್ಸೆಗಳಿಗೆ ಮಾತ್ರ ವೈದ್ಯಕೀಯ ವೆಚ್ಚವನ್ನು ಕವರ್ ಮಾಡುತ್ತದೆ. ಡೇ ಕೇರ್ ಪ್ರಕ್ರಿಯೆಗಳು ಆಸ್ಪತ್ರೆಯಲ್ಲಿ ಕೈಗೊಳ್ಳಲಾದ ವೈದ್ಯಕೀಯ ಚಿಕಿತ್ಸೆಗಳನ್ನು ಅಂದರೆ ಟೆಕ್ನಾಲಜಿಗಳ ಪ್ರಗತಿಯಿಂದಾಗಿ 24 ಗಂಟೆಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುವ ಚಿಕಿತ್ಸೆಗಳನ್ನು ಸೂಚಿಸುತ್ತವೆ.

ಮೊದಲೇ ಅಸ್ತಿತ್ವದಲ್ಲಿರುವ/ನಿರ್ದಿಷ್ಟ ಅನಾರೋಗ್ಯದ ವೇಟಿಂಗ್ ಪೀರಿಡ್

ಈ ಮೊದಲೇ ಅಸ್ತಿತ್ವದಲ್ಲಿರುವ ಅಥವಾ ನಿರ್ದಿಷ್ಟವಾದ ಅನಾರೋಗ್ಯಕ್ಕೆ ಕ್ಲೈಮ್ ಮಾಡುವವರೆಗೆ ನೀವು ಕಾಯಬೇಕಾದ ಸಮಯವಿದು.

4 ವರ್ಷಗಳು / 2 ವರ್ಷಗಳು

ರೂಮ್ ಬಾಡಿಗೆ ಮಿತಿ

ವಿವಿಧ ವರ್ಗದ ರೂಮ್‌ಗಳು ವಿಭಿನ್ನ ಬಾಡಿಗೆಗಳನ್ನು ಹೊಂದಿವೆ. ಹೋಟೆಲ್ ರೂಮ್‌ಗಳು ಟ್ಯಾಕ್ಸ್ ಅನ್ನು ಹೊಂದಿರುವಂತೆ. ಡಿಜಿಟ್‌ನ ಕೆಲವು ಪ್ಲ್ಯಾನ್‌ಗಳು, ರೂಮ್‌ನ ಮಿತಿಯು ನಿಮ್ಮ ಇನ್ಶೂರೆನ್ಸ್ ಮೊತ್ತಕ್ಕಿಂತ ಕಡಿಮೆಯಿರುವವರೆಗೆ, ನಿಮಗೆ ರೂಮ್‌ ಬಾಡಿಗೆ ಮಿತಿಯನ್ನು ಹೊಂದಿರದ ಪ್ರಯೋಜನವನ್ನು ನೀಡುತ್ತದೆ.

ರೂಮ್ ಬಾಡಿಗೆಗೆ ಮಿತಿ ಇಲ್ಲ - ಡಿಜಿಟ್ ಸ್ಪೆಷಲ್

ಐಸಿಯು ರೂಮ್ ಬಾಡಿಗೆ

ಐಸಿಯು (ತೀವ್ರ ನಿಗಾ ಘಟಕಗಳು) ಗಂಭೀರ ರೋಗಿಗಳಿಗೆ ಮೀಸಲಾಗಿದೆ. ಐಸಿಯುಗಳಲ್ಲಿ ಆರೈಕೆಯ ಮಟ್ಟವು ಹೆಚ್ಚಾಗಿರುತ್ತದೆ. ಅದಕ್ಕಾಗಿಯೇ ಬಾಡಿಗೆಯೂ ಹೆಚ್ಚಿರುತ್ತದೆ. ಐಸಿಯು ಬಾಡಿಗೆ ನಿಮ್ಮ ಇನ್ಶೂರೆನ್ಸ್ ಮೊತ್ತಕ್ಕಿಂತ ಕಡಿಮೆಯಿರುವವರೆಗೆ ಡಿಜಿಟ್, ಬಾಡಿಗೆಗೆ ಯಾವುದೇ ಮಿತಿಯನ್ನು ಹಾಕುವುದಿಲ್ಲ.

ಮಿತಿ ಇಲ್ಲ

ರೋಡ್ ಆಂಬ್ಯುಲೆನ್ಸ್ ಶುಲ್ಕಗಳು

ಆಂಬ್ಯುಲೆನ್ಸ್ ಸೇವೆಗಳು ಅತ್ಯಂತ ಅವಶ್ಯಕವಾದ ವೈದ್ಯಕೀಯ ಸೇವೆಗಳಲ್ಲಿ ಒಂದಾಗಿದೆ. ಏಕೆಂದರೆ ಇವು ಕೇವಲ ಅನಾರೋಗ್ಯದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡುವುದಲ್ಲದೇ ಅದರೊಂದಿಗೆ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಅದರ ವೆಚ್ಚವು ಈ ಸೂಪರ್ ಟಾಪ್-ಅಪ್ ಪಾಲಿಸಿಯ ಅಡಿಯಲ್ಲಿ ಕವರ್ ಆಗುತ್ತದೆ

ಕಾಂಪ್ಲಿಮೆಂಟರಿ ವಾರ್ಷಿಕ ಆರೋಗ್ಯ ತಪಾಸಣೆಗಳು

ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ನೀವು ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಲು ವಾರ್ಷಿಕ ಆರೋಗ್ಯ ತಪಾಸಣೆಗಳು ಮುಖ್ಯವಾಗಿವೆ. ಇದು ರಿನೀವಲ್ ಪ್ರಯೋಜನವಾಗಿದ್ದು, ನಿಮ್ಮ ಆಯ್ಕೆಯ ಯಾವುದೇ ಆಸ್ಪತ್ರೆಯಲ್ಲಿ ಯಾವುದೇ ವಾರ್ಷಿಕ ವೈದ್ಯಕೀಯ ಪರೀಕ್ಷೆಗಳು ಮತ್ತು ತಪಾಸಣೆಗಳಿಗೆ ನಿಮ್ಮ ಖರ್ಚುಗಳನ್ನು ಮರುಪಾವತಿಸಲು ನಿಮ್ಮನ್ನು ಅನುಮತಿಸುತ್ತದೆ.

ಪೂರ್ವ ಅಥವಾ ನಂತರದ ಚಿಕಿತ್ಸೆ

ಡಯಾಗ್ನೋಸಿಸ್, ಟೆಸ್ಟ್‌ಗಳು ಮತ್ತು ರಿಕವರಿಯಂತಹ ಚಿಕಿತ್ಸೆಯ ಮೊದಲು ಮತ್ತು ಚಿಕಿತ್ಸೆಯ ನಂತರದ ಎಲ್ಲಾ ವೆಚ್ಚಗಳನ್ನು ಇದು ಕವರ್ ಮಾಡುತ್ತದೆ.

ಚಿಕಿತ್ಸಾ ನಂತರದ ಮೊತ್ತ - ಡಿಜಿಟ್ ವಿಶೇಷ

ಚಿಕಿತ್ಸಾ ನಂತರದಲ್ಲಿ, ಡಿಸ್ಚಾರ್ಜ್ ಆಗುವ ಸಮಯದಲ್ಲಿ ನಿಮ್ಮ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲು ನೀವು ಬಳಸಬಹುದಾದ ಪ್ರಯೋಜನ ಇದಾಗಿದೆ. ಯಾವುದೇ ಬಿಲ್‌ಗಳ ಅಗತ್ಯವಿಲ್ಲ. ಮರುಪಾವತಿ ಪ್ರಕ್ರಿಯೆಯ ಮೂಲಕ ನೀವು ಈ ಪ್ರಯೋಜನವನ್ನು ಬಳಸಲು ಅಥವಾ ಸ್ಟ್ಯಾಂಡರ್ಡ್ ಚಿಕಿತ್ಸಾ ನಂತರದ ಪ್ರಯೋಜನವನ್ನು ಬಳಸಲು ಆಯ್ಕೆ ಮಾಡಬಹುದು.

ಮನೋವೈದ್ಯಕೀಯ ಕಾಯಿಲೆಯ ಕವರ್

ಆಘಾತದಿಂದಾಗಿ, ವ್ಯಕ್ತಿಯೊಬ್ಬರು ಮನೋವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರೆ, ಅದು ಈ ಪ್ರಯೋಜನದ ಅಡಿಯಲ್ಲಿ ಬರುತ್ತದೆ. ಆದಾಗ್ಯೂ, ಓಪಿಡಿ ಸಮಾಲೋಚನೆಗಳು ಇದರ ಅಡಿಯಲ್ಲಿ ಕವರ್ ಆಗುವುದಿಲ್ಲ.

ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ

ಒಬೆಸಿಟಿ (BMI > 35) ಕಾರಣದಿಂದಾಗಿ ಅಂಗಾಂಗ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಈ ಕವರೇಜ್ ಇದೆ. ಆದಾಗ್ಯೂ, ತಿನ್ನುವ ಅಸ್ವಸ್ಥತೆಗಳು, ಹಾರ್ಮೋನುಗಳು ಅಥವಾ ಯಾವುದೇ ಇತರ ಚಿಕಿತ್ಸೆ ನೀಡಬಹುದಾದ ಪರಿಸ್ಥಿತಿಯ ಕಾರಣದಿಂದಾಗಿ ಒಬೆಸಿಟಿಯು ಬಂದಿದ್ದರೆ, ಈ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಕವರ್ ಮಾಡುವುದಿಲ್ಲ.

Get Quote

ಏನೆಲ್ಲಾ ಕವರ್ ಆಗಿರುವುದಿಲ್ಲ?

ನಿಮ್ಮ ಡಿಡಕ್ಟಿಬಲ್ ಗಳು ಮುಗಿಯುವ ತನಕ ನಿಮಗೆ ಕ್ಲೈಮ್ ಮಾಡಲು ಆಗುವುದಿಲ್ಲ

ನಿಮ್ಮ ಪ್ರಸ್ತುತ ಹೆಲ್ತ್  ಇನ್ಶೂರೆನ್ಸ್ ನ ಕ್ಲೈಮ್ ಮೊತ್ತ ಈಗಾಗಲೇ ಮುಗಿದು ಹೋಗಿದ್ದರೆ, ಅಥವಾ ಹೇಳಲಾದ 

ಡಿಡಕ್ಟಿಬಲ್ ಅನ್ನು ನೀವು ಸಂಪೂರ್ಣವಾಗಿ ನಿಮ್ಮ ಜೇಬಿನಿಂದಲೇ ಖರ್ಚು ಮಾಡಿದ್ದರೆ ಮಾತ್ರ ನಿಮ್ಮ ಟಾಪ್-ಅಪ್ 

ಹೆಲ್ತ್  ಇನ್ಶೂರೆನ್ಸ್ ಮೇಲೆ ನೀವು ಕ್ಲೈಮ್ ಮಾಡಬಹುದು. ಆದರೆ, ಒಳ್ಳೆಯ ಸುದ್ದಿಯೇನೆಂದರೆ, ನೀವು ನಿಮ್ಮ 

ಡಿಡಕ್ಟಿಬಲ್ ಅನ್ನು ಕೇವಲ ಒಂದೇ ಬಾರಿ ಪಾವತಿಸಬೇಕಾಗುವುದು.

ಮೊದಲೇ ಇರುವ ಖಾಯಿಲೆಗಳು

ಮೊದಲೇ ಇರುವ ಖಾಯಿಲೆಗಳು ಇದ್ದ ಸಂದರ್ಭದಲ್ಲಿ, ಕಾಯುವಿಕೆಯ ಅವಧಿ ಮುಗಿಯದೇ ಇದ್ದರೆ, ಆ ಖಾಯಿಲೆ ಅಥವಾ ಅನಾರೋಗ್ಯಕ್ಕಾಗಿ ಕ್ಲೈಮ್ ಮಾಡಲು ಆಗುವುದಿಲ್ಲ.

ವೈದ್ಯರ ಶಿಫಾರಸು ಇಲ್ಲದೆಯೇ ಆಸ್ಪತ್ರೆ ದಾಖಲಾತಿ

ನೀವು ಯಾವುದೇ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರೂ, ಇದು ನಿಮ್ಮ ವೈದ್ಯರ ಸೂಚಿಗೆ ಸರಿಹೊಂದದಿದ್ದರೆ ಅದನ್ನು ಕವರ್ ಮಾಡಲಾಗುವುದಿಲ್ಲ. 

ಪ್ರಸವ-ಪೂರ್ವ ಹಾಗೂ ಪ್ರಸವ ನಂತರದ ವೆಚ್ಚಗಳು

ಪ್ರಸವ-ಪೂರ್ವ ಹಾಗೂ ಪ್ರಸವ ನಂತರದ ವೆಚ್ಚಗಳು, ಅವುಗಳು ಆಸ್ಪತ್ರೆ ದಾಖಲಾತಿಗೆ ಕಾರಣವಾಗದಿದ್ದರೆ.

ಕ್ಲೈಮ್ ಫೈಲ್ ಮಾಡುವುದು ಹೇಗೆ?

ಮರುಪಾವತಿ ಕ್ಲೈಮ್ ಗಳು - ಆಸ್ಪತ್ರೆಗೆ ದಾಖಲಾದ ಎರಡು ದಿನಗಳೊಳಗೆ ನಮಗೆ 1800-258-4242 ಗೆ ಕರೆ ಮಾಡಿ ಅಥವಾ healthclaims@godigit.com ಗೆ ಇ-ಮೇಲ್ ಮಾಡಿ ತಿಳಿಸಿ. ನಿಮ್ಮ ಮರುಪಾವತಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು, ನಾವು ಕಳಿಸಿದ ಲಿಂಕ್ ನಲ್ಲಿ ನಿಮ್ಮ ಆಸ್ಪತ್ರೆ ಬಿಲ್ ಗಳು ಹಾಗೂ ಇತರ ಎಲ್ಲಾ ಸೂಕ್ತ ದಾಖಲೆಗಳನ್ನು ಅಪ್ಲೋಡ್ ಮಾಡಿ.

ನಗದುರಹಿತ ಕ್ಲೈಮ್ ಗಳು - ನೆಟ್ವರ್ಕ್ ಆಸ್ಪತ್ರೆಯನ್ನು ಆಯ್ಕೆ ಮಾಡಿ. ಇಲ್ಲಿ ನಿಮಗೆ ನೆಟ್ವರ್ಕ್ ಆಸ್ಪತ್ರೆಗಳ ಸಂಪೂರ್ಣ ಪಟ್ಟಿ ದೊರೆಯುತ್ತದೆ. ಆಸ್ಪತ್ರೆಯ ಸಹಾಯ ಡೆಸ್ಕ್ ನಲ್ಲಿ ನಿಮ್ಮ ಇ-ಹೆಲ್ಥ್ ಕಾರ್ಡ್ ಅನ್ನು ತೋರಿಸಿ, ನಗದುರಹಿತ ಮನವಿ ಪತ್ರವನ್ನು ಕೇಳಿ. ಎಲ್ಲವೂ ಸರಿಯಾಗಿದ್ದರೆ, ನಿಮ್ಮ ಕ್ಲೈಮ್ ಅನ್ನು ಆ ಕ್ಷಣವೇ ಪರಿಷ್ಕರಿಸಲಾಗುವುದು.

ನೀವು ಕೊರೋನಾ ವೈರಸ್ ಗಾಗಿ ಕ್ಲೈಮ್ ಮಾಡಿದ್ದರೆ, ನಿಮ್ಮ ಬಳಿ, ಐಸಿಎಂಆರ್ - ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಪುಣೆಯ, ಅಧಿಕೃತ ಕೇಂದ್ರದಿಂದ ಪಡೆದ ಪಾಸಿಟಿವ್ ತಪಾಸಣಾ ವರದಿ ಇರುವುದನ್ನು ಖಚಿತಪಡಿಸಿಕೊಳ್ಳಿ.

ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ನ ಪ್ರಮುಖ ಲಾಭಗಳು

ಡಿಡಕ್ಟಿಬಲ್ ಒಂದೇ ಬಾರಿ ಪಾವತಿಸಿ!
ಸಹಪಾವತಿ ವಯಸ್ಸು ಆಧಾರಿತ ಸಹಪಾವತಿ ಇಲ್ಲ
ನಗದುರಹಿತ ಆಸ್ಪತ್ರೆ ಭಾರತದಾದ್ಯಂತ 16400+ ನೆಟ್ವರ್ಕ್ ಆಸ್ಪತ್ರೆಗಳು
ರೂಂ ಬಾಡಿಗೆ ಮಿತಿ ರೂಂ ಬಾಡಿಗೆ ಮಿತಿ ಇಲ್ಲ. ನೀವು ಬಯಸಿದ ರೂಂ ಅನ್ನು ಆಯ್ಕೆ ಮಾಡಿ.
ಕ್ಲೈಮ್ ಪ್ರಕ್ರಿಯೆ ಡಿಜಿಟಲ್ ಸ್ನೇಹಿ. ಹಾರ್ಡ್ ಕಾಪಿಗಳ ಅಗತ್ಯವಿಲ್ಲ!
ಕೋವಿಡ್-19 ಚಿಕಿತ್ಸೆ ಕವರ್ ಆಗಿದೆ

ಭಾರತದಲ್ಲಿ ಸೂಪರ್ ಟಾಪ್-ಅಪ್ ಹೆಲ್ತ್ ಇನ್ಸೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಒಂದು ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಹೇಗೆ ಕೆಲಸ ಮಾಡುತ್ತದೆ?

ಸೂಪರ್ ಟಾಪ್-ಅಪ್ ಯೋಜನೆಯು ವೆಚ್ಚ-ಹಂಚಿಕೆಯ ಆಧಾರದ ಮೇಲೆ ಕೆಲಸ ಮಾಡುತ್ತದೆ. ಇದರರ್ಥ, ನಿಮ್ಮ ಸೂಪರ್ ಟಾಪ್-ಅಪ್ ಆರೋಗ್ಯ ಇನ್ಶೂರರ್ ಇದರ ಪೂರ್ತಿ ವೆಚ್ಚವನ್ನು ಭರಿಸದೆ, ನಿಮ್ಮ ಡಿಡಕ್ಟಿಬಲ್ ಮೊತ್ತವನ್ನು ಆಧರಿಸಿ, ಕೇವಲ ಇದರ ಒಂದು ಭಾಗವನ್ನು ಕವರ್ ಮಾಡುತ್ತಾರೆ. ನಿಮ್ಮ ಸೂಪರ್ ಟಾಪ್-ಅಪ್ ಯೋಜನೆಯ ಡಿಡಕ್ಟಿಬಲ್ 2 ಲಕ್ಷವಿದ್ದರೆ, ನಿಮ್ಮ ಸೂಪರ್ ಟಾಪ್-ಅಪ್ ಯೋಜನೆ 2 ಲಕ್ಷವನ್ನು ಮೀರಿದ ಕ್ಲೈಮ್ ಗಳಿಗೆ ಕವರ್ ನೀಡುತ್ತದೆ.

ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಹಾಗೂ ಸಾಧಾರಣ ಹೆಲ್ತ್ ಇನ್ಶೂರೆನ್ಸ್ ಯೋಜನೆ ಮಧ್ಯೆ ಇರುವ ವ್ಯತ್ಯಾಸವೇನು?

ಸೂಪರ್ ಟಾಪ್-ಅಪ್ ಹೆಲ್ತ್  ಇನ್ಶೂರೆನ್ಸ್ ಹಾಗೂ ಸಾಧಾರಣ ಹೆಲ್ತ್  ಇನ್ಶೂರೆನ್ಸ್ ಯೋಜನೆ ಮಧ್ಯೆ ಇರುವ ಪ್ರಮುಖ ವ್ಯತ್ಯಾಸವೇನೆಂದರೆ, ನಿಮ್ಮ ಅರೋಗ್ಯ ಇನ್ಶೂರೆನ್ಸ್ ಯೋಜನೆಯು ನಿಮ್ಮ ಆಸ್ಪತ್ರೆ ವೆಚ್ಚಗಳನ್ನು ಸಂಪೂರ್ಣವಾಗಿ ಅಥವಾ 70% ಕವರ್ ಮಾಡುತ್ತದೆ(ನಿಮ್ಮ ಹೆಲ್ತ್  ಇನ್ಶೂರೆನ್ಸ್ ಪಾಲಿಸಿಯನ್ನು ಅವಲಂಬಿಸಿ).

ಆದರೆ, ಸೂಪರ್ ಟಾಪ್-ಅಪ್ ಹೆಲ್ತ್  ಇನ್ಶೂರೆನ್ಸ್ ಯೋಜನೆಯು, ವೆಚ್ಚಗಳು ಒಂದು ಮಿತಿಗಿಂತ ಹೆಚ್ಚಿದ್ದರೆ ಮಾತ್ರ ಕವರ್ ನೀಡುತ್ತದೆ.

ಉದಾಹರಣೆಗೆ: ನಿಮ್ಮ ಸೂಪರ್ ಟಾಪ್-ಅಪ್ ಹೆಲ್ತ್  ಇನ್ಶೂರೆನ್ಸ್ ಪಾಲಿಸಿ ನಿಮ್ಮನ್ನು 5 ಲಕ್ಷದ ನಂತರ ಮಾತ್ರ ಕವರ್ ಮಾಡಿದರೆ… ಅಂದರೆ, ನಿಮ್ಮ ಬಿಲ್ 8 ಲಕ್ಷವಾಗಿದ್ದರೆ, ನೀವು ನಿಮ್ಮ ಜೇಬಿನಿಂದ ಅಥವಾ ನಿಮ್ಮ ಸ್ಟಾಂಡರ್ಡ್ ಹೆಲ್ತ್  ಇನ್ಶೂರೆನ್ಸ್ ಪಾಲಿಸಿಯಿಂದ ಖರ್ಚು ಮಾಡಿಯಾದ ಮೇಲೆ, ನಿಮಗೆ 3 ಲಕ್ಷದ ಕವರ್ ನೀಡುತ್ತದೆ.

Why is a super top-up health insurance plan cheaper?

ಸೂಪರ್ ಟಾಪ್-ಅಪ್ ಇನ್ಶೂರೆನ್ಸ್ ಯೋಜನೆಯ ಬೆಲೆ ಕಡಿಮೆ ಇರಲು ಮುಖ್ಯ ಕಾರಣವೇನೆಂದರೆ, ಸಂಪೂರ್ಣ ವೆಚ್ಚವನ್ನು ಸೂಪರ್ ಟಾಪ್-ಅಪ್ ಆರೋಗ್ಯ ಇನ್ಶೂರರ್ ಭರಿಸುವುದಿಲ್ಲ. ಹಾಗೂ ವೆಚ್ಚಗಳು ಡಿಡಕ್ಟಿಬಲ್ ಮಿತಿಯನ್ನು ಮೀರಿದರೆ ಮಾತ್ರ ಕವರ್ ಅನ್ನು ನೀಡಲಾಗುತ್ತದೆ.

ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಹಾಗೂ ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸವೇನು?

ನೀವು ಟಾಪ್-ಅಪ್ ಹೆಲ್ತ್  ಇನ್ಶೂರೆನ್ಸ್ ಹಾಗೂ ಸೂಪರ್ ಟಾಪ್-ಅಪ್ ಹೆಲ್ತ್  ಇನ್ಶೂರೆನ್ಸ್ ಎರಡರ ಬಗ್ಗೆಯೂ ಓದಿದ್ದು, ಇವುಗಳ ನಡುವಿನ ವ್ಯತ್ಯಾಸವೇನೆಂದು ನಿಮಗೆ ಗೊಂದಲ ಉಂಟಾಗಿರಬಹುದು.

ಸರಳ ಶಬ್ದಗಳಲ್ಲಿ ಹೇಳಬೇಕೆಂದರೆ, ಒಂದು ಕ್ಲೈಮ್, ಡಿಡಕ್ಟಿಬಲ್ ಮಿತಿಯನ್ನೂ ಮೀರಿ ಹೋದರೆ ಮಾತ್ರ ಟಾಪ್-ಅಪ್ ಹೆಲ್ತ್  ಇನ್ಶೂರೆನ್ಸ್ ವೆಚ್ಚಗಳನ್ನು ಕವರ್ ಮಾಡುತ್ತದೆ.

ಆದರೆ, ಸೂಪರ್ ಟಾಪ್-ಅಪ್ ಹೆಲ್ತ್  ಇನ್ಶೂರೆನ್ಸ್, ಒಂದು ವರ್ಷದಲ್ಲಿ,  ಒಂದಕ್ಕಿಂತ ಹೆಚ್ಚು ಕ್ಲೈಮ್ ಗಳು ಒಟ್ಟು ಸೇರಿ ಡಿಡಕ್ಟಿಬಲ್ ಮಿತಿಯನ್ನು ಮೀರಿದರೂ ವೆಚ್ಚಗಳನ್ನು ಕವರ್ ಮಾಡುತ್ತದೆ.

ಉದಾಹರಣೆಗೆ : ನೀವು ಒಂದು ವರ್ಷಕ್ಕಾಗಿ 5 ಲಕ್ಷ ಡಿಡಕ್ಟಿಬಲ್ ಇರುವ ಟಾಪ್-ಅಪ್ ಯೋಜನೆಯನ್ನು ಆಯ್ಕೆ ಮಾಡಿದ್ದು, ನಿಮ್ಮ ಬಳಿ 4 ಲಕ್ಷ ಪ್ರತೀ ಕ್ಲೈಮ್ ಮೌಲ್ಯದ ಎರಡು ಕ್ಲೈಮ್ ಗಳಿದ್ದರೆ, ನಿಮ್ಮ ಟಾಪ್-ಅಪ್ ಹೆಲ್ತ್  ಇನ್ಶೂರೆನ್ಸ್ ನಿಮ್ಮ ಕ್ಲೈಮ್ ಗೆ ಕವರ್ ಅನ್ನು ನೀಡುವುದಿಲ್ಲ ಏಕೆಂದರೆ ಒಂದು ಸಿಂಗಲ್ ಕ್ಲೈಮ್ ನ ಮೊತ್ತ  5 ಲಕ್ಷ ದಾಟುವುದಿಲ್ಲ.

ಆದರೆ, ಒಂದು ವರ್ಷದ ಕ್ಲೈಮ್ ನ ಒಟ್ಟು ಮೊತ್ತ 8 ಲಕ್ಷವಾಗಿದ್ದರಿಂದ,ಒಂದು ಸೂಪರ್ ಟಾಪ್-ಅಪ್ ಯೋಜನೆಯು ಉಳಿದ 3 ಲಕ್ಷಕ್ಕೆ ಕವರ್ ನೀಡುತ್ತದೆ.

ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ನಲ್ಲಿ ಡಿಡಕ್ಟಿಬಲ್ ನ ಅರ್ಥವೇನು?

ಡಿಡಕ್ಟಿಬಲ್ ಎಂದರೆ, ನಿಮ್ಮ ಸೂಪರ್ ಟಾಪ್-ಅಪ್ ಇನ್ಶೂರೆನ್ಸ್ ನಿಮಗಾಗಿ ಪಾವತಿ ಮಾಡುವುದಕ್ಕಿಂತ ಮೊದಲು ನೀವು ಅಥವಾ ನಿಮ್ಮ ಪ್ರಾಥಮಿಕ ಇನ್ಶೂರರ್ ಪಾವತಿಸಬೇಕಾದ ಮೊತ್ತವಾಗಿದೆ.

ಈಗ, ಉದಾಹರಣೆಗೆ, ನೀವು ರೂ 2 ಲಕ್ಷದ ಡಿಡಕ್ಟಿಬಲ್ ಇರುವ  ಟಾಪ್-ಅಪ್ ಅಥವಾ ಸೂಪರ್ ಟಾಪ್-ಅಪ್ ಯೋಜನೆಯನ್ನು ಆಯ್ಕೆ ಮಾಡಿದ್ದರೆ, ಹಾಗೂ ನಿಮ್ಮ ಇನ್ಶೂರ್ಡ್ ಮೊತ್ತ 20 ಲಕ್ಷವಾಗಿದ್ದರೆ.

ಕ್ಲೈಮ್ ಸಂದರ್ಭದಲ್ಲಿ, ನಿಮ್ಮ ಬಳಿ 3 ಲಕ್ಷದ ಒಟ್ಟು ಕ್ಲೈಮ್ ಇದ್ದರೆ, ನಿಮ್ಮ ಸೂಪರ್ ಟಾಪ್-ಅಪ್ ಇನ್ಶೂರೆನ್ಸ್ ಉಳಿದ 1 ಲಕ್ಷಕ್ಕೆ ಕ್ಲೈಮ್ ಮಾಡುತ್ತದೆ, ಆದರೆ ಮೊದಲ 2 ಲಕ್ಷವನ್ನು ನೀವೇ ನೀಡಬೇಕಾಗುತ್ತದೆ(ನಿಮ್ಮ ಸ್ವಂತ ಜೇಬಿನಿಂದ ಅಥವಾ ನಿಮ್ಮ ಗುಂಪು ವೈದ್ಯಕೀಯ ಯೋಜನೆ/ಪ್ರಾಥಮಿಕ ಹೆಲ್ತ್  ಇನ್ಶೂರೆನ್ಸ್).

ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಆಯುಷ್ ಅನ್ನು ಕವರ್ ಮಾಡುತ್ತದೆಯೇ?

ಹೌದು, ಸೂಪರ್ ಟಾಪ್-ಅಪ್ ಹೆಲ್ತ್  ಇನ್ಶೂರೆನ್ಸ್ ಆಯುಷ್ ಮೂಲಕದ ಚಿಕಿತ್ಸೆಗಳನ್ನೂ ಕವರ್ ಮಾಡುತ್ತದೆ.

ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಖರೀದಿಸಲು ಯಾರು ಅರ್ಹರು?

18 ರಿಂದ 65 ವಯಸ್ಸಿನ ಯಾವುದೇ ವ್ಯಕ್ತಿ ಸೂಪರ್ ಟಾಪ್-ಅಪ್ ಹೆಲ್ತ್  ಇನ್ಶೂರೆನ್ಸ್ ಖರೀದಿಸಲು ಅರ್ಹತೆಯನ್ನು ಹೊಂದಿರುತ್ತಾರೆ.

ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ನನ್ನ ಹೆತ್ತವರಿಗೆ ಹೇಗೆ ಲಾಭದಾಯಕವಾಗುತ್ತದೆ?

ಒಬ್ಬ ವ್ಯಕ್ತಿಗೆ ವಯಸ್ಸಾಗುತ್ತಿರುವ ಹಾಗೆಯೇ, ಆರೋಗ್ಯ ಆರೈಕೆಯ ವೆಚ್ಚಗಳೂ ಹೆಚ್ಚುತ್ತವೆ. ಇದರರ್ಥ, ನಿಮ್ಮ ಒಂದು ವರ್ಷದ ಆರೋಗ್ಯ ಆರೈಕೆಯ ವೆಚ್ಚವು, ನಿಮ್ಮ ಕಾರ್ಪೋರೇಟ್ ಯೋಜನೆ ಅಥವಾ ನಿಮ್ಮ ಸಾಧಾರಣ ಹೆಲ್ತ್  ಇನ್ಶೂರೆನ್ಸ್ ಯೋಜನೆ ಕವರ್ ಮಾಡುವುದಕ್ಕಿಂತ ಹೆಚ್ಚಿರಬಹುದು. 

ನಾನು ಯಾವುದನ್ನು ಆಯ್ಕೆ ಮಾಡಬೇಕು - ಟಾಪ್-ಅಪ್ ಅನ್ನೇ ಅಥವಾ ಸೂಪರ್ ಟಾಪ್-ಅಪ್ ಯೋಜನೆಯನ್ನೇ?

ಹೆಚ್ಚಿನವರು ತಮ್ಮ ಅರ್ಥಿಕ ಅನಿಶ್ಚಿತೆಗಳನ್ನು ಸುಗಮವಾಗಿಸಲು ಟಾಪ್-ಅಪ್ ಹೆಲ್ತ್  ಇನ್ಶೂರೆನ್ಸ್ ಯೋಜನೆಯನ್ನು ಆಯ್ಕೆ ಮಾಡುತ್ತಾರೆ. ಟಾಪ್-ಅಪ್ ಹಾಗೂ ಸೂಪರ್ ಟಾಪ್-ಅಪ್ ಎರಡೂ, ನಿರ್ಧಾರಿತ ಡಿಡಕ್ಟಿಬಲ್ ಅನ್ನು ಮೀರಿದಾಗ ಖರ್ಚುಗಳನ್ನು ನಿರ್ವಹಿಸಿದರೂ ಕೂಡಾ, ಸೂಪರ್ ಟಾಪ್-ಅಪ್ ಯೋಜನೆಗಳು, ಒಂದು ವರ್ಷದ ಒಟ್ಟು ವೆಚ್ಚಗಳು ಡಿಡಕ್ಟಿಬಲ್ ಅನ್ನು ಮೀರಿದಾಗ ಅನ್ವಯಿಸುತ್ತದೆ ಆದರೆ ಟಾಪ್-ಅಪ್ ಯೋಜನೆಗಳು, ಒಂದು ಸಿಂಗಲ್ ಕ್ಲೈಮ್ ಗೆ ಮಾತ್ರ ಅನ್ವಯಿಸುತ್ತವೆ.

 

ಆದ್ದರಿಂದ, ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ, ಸೂಪರ್ ಟಾಪ್-ಅಪ್ ಯೋಜನೆಗಳು ನಿಮಗೆ ಹೆಚ್ಚಿನ ಉಳಿತಾಯ ಹಾಗೂ ಇನ್ನೂ ಹೆಚ್ಚಿನ ಲಾಭಗಳನ್ನು ನೀಡುತ್ತದೆ!

ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ನನ್ನ ಇನ್ಶೂರ್ಡ್ ಮೊತ್ತವನ್ನು ಹೇಗೆ ಹೆಚ್ಚಿಸುತ್ತದೆ?

ಸೂಪರ್ ಟಾಪ್-ಅಪ್ ಹೆಲ್ತ್  ಇನ್ಶೂರೆನ್ಸ್ ನ ಪರಿಕಲ್ಪನೆ ಏನೆಂದರೆ, ನೀವು ಒಂದು ವರ್ಷದಲ್ಲಿ ನಿಮ್ಮ ಡಿಡಕ್ಟಿಬಲ್ ಮೊತ್ತವನ್ನು ಆರೋಗ್ಯ ಸಂಬಂಧಿತ ಕ್ಲೈಮ್ ಗಳಲ್ಲಿ ಖರ್ಚು ಮಾಡಿ ಮುಗಿಸಿದ್ದರೆ, ನೀವು ನಿಮ್ಮ ಸೂಪರ್ ಟಾಪ್-ಅಪ್ ಯೋಜನೆಯನ್ನು ಹೆಚ್ಚುವರಿ ಕವರೇಜ್ ಗಾಗಿ ಉಪಯೋಗಿಸಬಹುದು. ಇದರರ್ಥ, ನಿಮ್ಮ ಬಳಿ ರೂ. 3 ಲಕ್ಷ ವರೆಗಿನ ಇನ್ಶೂರ್ಡ್ ಮೊತ್ತವಿರುವ ಕಾರ್ಪೋರೇಟ್ ಯೋಜನೆಯ ಜೊತೆ ರೂ.10 ಲಕ್ಷದ ಸೂಪರ್ ಟಾಪ್-ಅಪ್ ಹೆಲ್ತ್  ಇನ್ಶೂರೆನ್ಸ್ ಕೂಡಾ ಇದ್ದರೆ, ನಿಮ್ಮ ಬಳಿ ರೂ.13 ಲಕ್ಷದ ಒಟ್ಟು ಇನ್ಶೂರ್ಡ್ ಮೊತ್ತವಿರುತ್ತದೆ, ಹೀಗೆ, ನಿಮ್ಮ ಸೂಪರ್ ಟಾಪ್-ಅಪ್ ನಿಮಗೆ ಪ್ರಾಥಮಿಕ ಏರಿಕೆಯನ್ನು ನೀಡಿದೆ.

ನನ್ನ ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು ಯಾವುವು?

ನಿಮ್ಮ ಸೂಪರ್ ಟಾಪ್-ಅಪ್ ಹೆಲ್ತ್  ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು ಈ ರೀತಿ ಇವೆ; ನಿಮ್ಮ ವಯಸ್ಸು, ಭೌಗೋಳಿಕ ಸ್ಥಳ ಹಾಗೂ ನೀವು ನಿಮ್ಮ ಸೂಪರ್ ಟಾಪ್-ಅಪ್ ಹೆಲ್ತ್  ಇನ್ಶೂರೆನ್ಸ್ ಯೋಜನೆಯ ಭಾಗವಾಗಿ ಆಯ್ಕೆ ಮಾಡಿರುವ ಡಿಡಕ್ಟಿಬಲ್ ಹಾಗೂ ಇನ್ಶೂರ್ಡ್ ಮೊತ್ತ.