ಎಂಪ್ಲಾಯೀ ಸ್ಟೇಟ್ ಇನ್ಶೂರೆನ್ಸ್ (ಇಎಸ್ಐ ಯೋಜನೆ) ಬಗ್ಗೆ ಎಲ್ಲಾ ಮಾಹಿತಿ
ಇಂದಿನ ಬಿಡುವಿಲ್ಲದ ಕೆಲಸಗಳು ಮತ್ತು ಜಡ ಜೀವನಶೈಲಿಯನ್ನು ಗಮನಿಸಿದರೆ, ಒಬ್ಬ ಸಾಧಾರಣ ಮನುಷ್ಯನು ಒಂದು ಆರೋಗ್ಯಕರ ಅಸ್ತಿತ್ವಕ್ಕಾಗಿ ಕೆಲ ದಿನನಿತ್ಯದ ಔಷಧಗಳ ಮೇಲೆ ಅವಲಂಬಿಸುವುದನ್ನು ನಿರಾಕರಿಸಲು ಸಾಧ್ಯವಿಲ್ಲ.
ಆದಾಗ್ಯೂ, ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳೊಂದಿಗೆ, ಅಂತಹ ವೆಚ್ಚಗಳನ್ನು ನಿಯಮಿತವಾಗಿ ಉಳಿಸಿಕೊಳ್ಳುವ ಚಿಂತೆಯೂ ಬರುತ್ತದೆ, ಹಾಗೂ ಇಲ್ಲಿ ಇನ್ಶೂರೆನ್ಸ್ ಯೋಜನೆಯು ಕಾರ್ಯರೂಪಕ್ಕೆ ಬರುತ್ತದೆ.
ಇಂತಹ ಕಾರ್ಮಿಕರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು ಮೆಡಿಕಲ್ ತುರ್ತು ಸಂದರ್ಭಗಳಲ್ಲಿ ಅವರನ್ನು ಬೆಂಬಲಿಸಲು ಇಎಎಸ್ಐ ಯೋಜನೆಯನ್ನು ಪರಿಚಯಿಸಿತು.
ಓದುವುದನ್ನು ಮುಂದುವರಿಸಿ!
ಎಂಪ್ಲಾಯೀ ಸ್ಟೇಟ್ ಇನ್ಶೂರೆನ್ಸ್ ಯೋಜನೆ (ಇಎಸ್ಐಎಸ್): ಏನಿದು ಮತ್ತು ನಿಮ್ಮ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ?
ಒಂದು ಬಹು ಆಯಾಮದ ಸಾಮಾಜಿಕ ಭದ್ರತಾ ಯೋಜನೆಯಾಗಿರುವ ಈ ಎಂಪ್ಲಾಯೀ ಸ್ಟೇಟ್ ಇನ್ಶೂರೆನ್ಸ್ ಯೋಜನೆಯು ಸಂಘಟಿತ ವಲಯದಲ್ಲಿ ಉದ್ಯೋಗದಲ್ಲಿರುವ ಜನಸಂಖ್ಯೆ ಮತ್ತು ಅವರ ಅವಲಂಬಿತ ಸದಸ್ಯರಿಗೆ ಸಾಮಾಜಿಕ-ಆರ್ಥಿಕ ರಕ್ಷಣೆಯನ್ನು ನೀಡುವ ಗುರಿಯನ್ನು ಹೊಂದಿದೆ. ಈ ಇನ್ಶೂರೆನ್ಸ್ ಯೋಜನೆಯಡಿಯಲ್ಲಿ, ಔದ್ಯೋಗಿಕ ಅಪಾಯಗಳು, ಅನಾರೋಗ್ಯ ಮತ್ತು ಹೆರಿಗೆಯ ಕಾರಣದಿಂದಾಗಿ ಉಂಟಾಗುವ ಮೆಡಿಕಲ್ ತುರ್ತು ಸಂದರ್ಭಗಳಲ್ಲಿ ವ್ಯಕ್ತಿಗಳು ಹಣಕಾಸಿನ ನೆರವನ್ನು ಪಡೆಯಬಹುದು.
ಈ ಸಮಗ್ರ ಕಾರ್ಯಕ್ರಮವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತಿರುವ ಕಾರ್ಪೊರೇಟ್ ಸಂಸ್ಥೆಯನ್ನು ಎಂಪ್ಲಾಯೀ ಸ್ಟೇಟ್ ಇನ್ಶೂರೆನ್ಸ್ ನಿಗಮ (ಇಎಸ್ಐಎಸ್) ಎಂದು ಕರೆಯಲಾಗುತ್ತದೆ.
ಈ ಯೋಜನೆಯನ್ನು ಎಂಪ್ಲಾಯೀ ಸ್ಟೇಟ್ ಇನ್ಶೂರೆನ್ಸ್ ಕಾಯಿದೆಯಡಿ ಜಾರಿಗೊಳಿಸಲಾಗಿದೆ ಹಾಗೂ ಇದರ ಮೂಲಕ ಪ್ರತಿಯೊಬ್ಬ ಉದ್ಯೋಗದಾತರು ಈ ಕಾರ್ಯಕ್ರಮದ ಅಡಿಯಲ್ಲಿ ಹೊಸ ಉದ್ಯೋಗಿಯ ನೋಂದಣಿಯನ್ನು ಖಚಿತಪಡಿಸಿಕೊಳ್ಳಬೇಕು.
ಎಂಪ್ಲಾಯೀ ಸ್ಟೇಟ್ ಇನ್ಶೂರೆನ್ಸ್ ಕಾಯಿದೆಯ ಒಂದು ಮೇಲ್ನೋಟ
ಭಾರತದ ಸಂಸತ್ತು 1948 ರಲ್ಲಿ ಎಂಪ್ಲಾಯೀ ಸ್ಟೇಟ್ ಇನ್ಶೂರೆನ್ಸ್ ಕಾಯಿದೆಯನ್ನು ಪರಿಚಯಿಸಿತು ಮತ್ತು 1952 ರಲ್ಲಿ ಮೊದಲಬಾರಿಗೆ ದೆಹಲಿ ಮತ್ತು ಕಾನ್ಪುರದಲ್ಲಿ ಇದನ್ನು ಲಾಂಚ್ ಮಾಡಿತು ಹಾಗೂ ಇದರಲ್ಲಿ ಸುಮಾರು 1.20 ಲಕ್ಷ ಉದ್ಯೋಗಿಗಳು ಕವರ್ ಆಗಿದ್ದಾರೆ. ಈ ಆರಂಭಿಕ ಅನುಷ್ಠಾನದ ನಂತರ, ಹಲವು ಹಂತಗಳಲ್ಲಿ ದೇಶದ ಹೆಚ್ಚಿನ ಭಾಗಗಳನ್ನು ಸೇರಿಸಲು ರಾಜ್ಯ ಸರ್ಕಾರಗಳು ಈ ಉಪಕ್ರಮವನ್ನು ಕೈಗೊಂಡವು.
ಈ ಕಾಯಿದೆಯು ಇನ್ಶೂರ್ಡ್ ಉದ್ಯೋಗಿಗಳ ಅರ್ಹತೆ ಮತ್ತು ಎಂಪ್ಲಾಯೀ ಸ್ಟೇಟ್ ಇನ್ಶೂರೆನ್ಸ್ ನಿಗಮದ (ಇಎಸ್‌ಐಸಿ) ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಒಳಗೊಂಡಂತೆ ಯೋಜನೆಯ ಮಾನ್ಯತೆಗೆ ಸಂಬಂಧಿಸಿದ ಹಲವಾರು ನಿಯಮಗಳು ಮತ್ತು ಷರತ್ತುಗಳನ್ನು ವ್ಯಾಖ್ಯಾನಿಸುತ್ತದೆ.
ಇಎಸ್‌ಐ ಯೋಜನೆಯಡಿಯಲ್ಲಿ ಕುಟುಂಬದ ಸದಸ್ಯರು ಇನ್ಶೂರೆನ್ಸ್ ಮಾಡಿದ ವ್ಯಕ್ತಿಯ ಅವಲಂಬಿತರಾಗಲು ಬೇಕಾಗುವ ಕೆಲವು ಅವಶ್ಯಕತೆಗಳನ್ನು ಸಹ ಇದು ನಿರ್ದಿಷ್ಟಪಡಿಸುತ್ತದೆ. ಈ ಕಾಯಿದೆಯ ಪ್ರಕಾರ, ಅರ್ಹ ಅವಲಂಬಿತರು ಎಂದರೆ:
1. ವಿಧವೆ ತಾಯಿ ಸೇರಿದಂತೆ ಯಾವುದೇ ಪೋಷಕರು.
2. ಯಾವುದೇ ದತ್ತು ಪಡೆದ ಅಥವಾ ನ್ಯಾಯಸಮ್ಮತವಲ್ಲದ ಸಂತತಿಯನ್ನು ಒಳಗೊಂಡಂತೆ ಪುತ್ರರು ಮತ್ತು ಪುತ್ರಿಯರು.
3. ವಿಧವೆಯಾದ ಅಥವಾ ಅವಿವಾಹಿತ ಸಹೋದರಿ.
4. ಅಪ್ರಾಪ್ತ ಸಹೋದರ.
5. ಅವನ/ಅವಳ ಹೆತ್ತವರು ತೀರಿಕೊಂಡಿದ್ದರೆ ತಂದೆಯ ತಂದೆ.
6. ವಿಧವೆಯಾದ ಸೊಸೆ.
7. ಹಿಂದಿನ ಪ್ರಕರಣದಲ್ಲಿ ಮೊದಲೇ ತೀರಿರುವ ಮಗ ಅಥವಾ ಮೊದಲೇ ತೀರಿರುವ ಮಗಳ ಅಪಾಪ್ತ ಸಂತಾನ ಆ ಸಂತಾನದ ಪೋಷಕರಿಬ್ಬರಲ್ಲಿ ಯಾರೂ ಬದುಕಿಲ್ಲದಿದ್ದರೆ.
ಎಂಪ್ಲಾಯೀ ಸ್ಟೇಟ್ ಇನ್ಶೂರೆನ್ಸ್ ಕಾಯಿದೆ 1948, 2 ಕೊಡುಗೆ ಅವಧಿಗಳನ್ನು ಮತ್ತು 2 ನಗದು ಪ್ರಯೋಜನದ ಅವಧಿಗಳನ್ನು ಸಹ ನಿರ್ದಿಷ್ಟಪಡಿಸುತ್ತದೆ. ಅವುಗಳನ್ನು ಈ ಕೆಳಗಿನಂತೆ ಗುರುತಿಸಲಾಗಿದೆ:
ಅವಧಿ | ತಿಂಗಳುಗಳು |
---|---|
ಕೊಡುಗೆ ಅವಧಿಗಳು | ಏಪ್ರಿಲ್ 1- ಸೆಪ್ಟೆಂಬರ್ 30, ಅಕ್ಟೋಬರ್ 1- ಮಾರ್ಚ್ 31 |
ನಗದು ಪ್ರಯೋಜನ ಅವಧಿಗಳು | ಜನವರಿ 1 - ಜೂನ್ 31, ಜುಲೈ 1- ಡಿಸೆಂಬರ್ 31 |
ಕೊಡುಗೆಯ ಅವಧಿಯಲ್ಲಿ ಉದ್ಯೋಗಿಯ ಕೊಡುಗೆಯ ದಿನಗಳನ್ನು ಅವಲಂಬಿಸಿ, ಅವರು ಮುಂಬರುವ ನಗದು ಪ್ರಯೋಜನದ ಅವಧಿಯಲ್ಲಿ ಸೂಕ್ತವಾದ ಪರಿಹಾರವನ್ನು ಪಡೆಯಬಹುದು.
ಇಎಸ್‌ಐಸಿ (ಎಂಪ್ಲಾಯೀ ಸ್ಟೇಟ್ ಇನ್ಶೂರೆನ್ಸ್ ಯೋಜನೆ) ಯ ವೈಶಿಷ್ಟ್ಯಗಳು ಯಾವುವು
ನೀವು ಈ ಸರ್ಕಾರಿ ಪ್ರಾಯೋಜಿತ ಇನ್ಶೂರೆನ್ಸ್ ಯೋಜನೆಯ ನಿರ್ದಿಷ್ಟ ವಿವರಗಳನ್ನು ತಿಳಿಯುವ ಕುತೂಹಲ ಹೊಂದಿದ್ದರೆ, ಇದರ ಕೆಲವು ಪ್ರಮುಖ ಗುಣಲಕ್ಷಣಗಳು ಇಲ್ಲಿವೆ.
- ಎಂಪ್ಲಾಯೀ ಸ್ಟೇಟ್ ಇನ್ಶೂರೆನ್ಸ್ ಯೋಜನೆಯು ರೂ.21000 ಕ್ಕಿಂತ ಕಡಿಮೆ ಅಥವಾ ಸಮಾನವಾದ ಮಾಸಿಕ ಪಾವತಿಯನ್ನು ಹೊಂದಿರುವ ಎಲ್ಲಾ ಕಾರ್ಮಿಕರನ್ನು ಕವರ್ ಮಾಡುವ ಗುರಿಯನ್ನು ಹೊಂದಿದೆ.
- ಪಾಲಿಸಿದಾರರು ಮತ್ತು ಅವರ ಅವಲಂಬಿತ ಸದಸ್ಯರು ನಿರ್ದಿಷ್ಟ ಕಾಯಿಲೆಗಳ ವಿರುದ್ಧ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
- ಉದ್ಯೋಗದಾತರಿಗೆ ಪ್ರಸ್ತುತ ಕೊಡುಗೆಯ ದರವು 3.25% ಆಗಿದೆ ಮತ್ತು ಉದ್ಯೋಗಿಗಳಿಗೆ ಇದು ಪಾವತಿಸಬೇಕಾದ ವೇತನದ 0.75% ಆಗಿದೆ. ಸರ್ಕಾರವು 2019 ರಲ್ಲಿ ಒಟ್ಟು ಕೊಡುಗೆಯನ್ನು 6.5% ರಿಂದ 4% ಕ್ಕೆ ಇಳಿಸಿತು. ರೂ.137 ಕ್ಕಿಂತ ಕಡಿಮೆ ಮೌಲ್ಯದ ದೈನಂದಿನ ವೇತನವನ್ನು ಹೊಂದಿರುವ ಕಾರ್ಮಿಕರಿಗೆ ಅವರ ಪಾಲನ್ನು ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ ಎಂಬುದನ್ನು ಗಮನಿಸಿ.
- ಉದ್ಯೋಗದಾತರು ತಿಂಗಳ 21 ದಿನಗಳ ಒಳಗೆ ಯಾವುದೇ ಬಾಕಿ ಕೊಡುಗೆಯನ್ನು ಪಾವತಿಸಬೇಕು.
- ರಾಜ್ಯ ಸರ್ಕಾರಗಳು ಇಎಸ್‌ಐ ಯೋಜನೆಯಡಿ ತಲಾ ರೂ.1500 ವರೆಗಿನ ಒಟ್ಟು ಮೆಡಿಕಲ್ ವೆಚ್ಚದ 1/8ನೇ ಭಾಗವನ್ನು ಪಾವತಿಸಬೇಕು.
- ಅವರು ವಿಎಚ್ಎಸ್ ಯೋಜನೆಯಡಿಯಲ್ಲಿ ಅಕಾಲಿಕ ರಿಟೈರ್ಮೆಂಟ್ ಪಡೆದಿದ್ದರೂ ಈ ಯೋಜನೆಯು ಇನ್ಶೂರ್ಡ್ ವ್ಯಕ್ತಿಗಳಿಗೆ ಪ್ರಯೋಜನಗಳನ್ನು ನೀಡುವುದನ್ನು ಮುಂದುವರಿಸುತ್ತದೆ. ಒಬ್ಬ ನಿರುದ್ಯೋಗಿ ವ್ಯಕ್ತಿಯೂ ಸಹ 3 ವರ್ಷಗಳವರೆಗೆ ಯೋಜನೆಯಿಂದ ಪ್ರಯೋಜನ ಪಡೆಯುವುದನ್ನು ಮುಂದುವರಿಸಬಹುದು. ಆದಾಗ್ಯೂ, ಅವರು ತಮ್ಮ ಹಿಂಬಡ್ತಿ ಪತ್ರ ಮತ್ತು ಅವರ ಕೊನೆಯ ಕೆಲಸದ ಸ್ಥಳಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಒದಗಿಸಬೇಕಾಗುತ್ತದೆ.
- ಹೆಲ್ತ್‌ಕೇರ್ ವ್ಯಕ್ತಿಗಳ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವುದಕ್ಕಾಗಿ ಹೆಚ್ಚಿನ ಮೆಡಿಕಲ್ ಕಾಲೇಜುಗಳನ್ನು ತೆರೆಯಲು ಈ ಯೋಜನೆಯು ಪ್ರೋತ್ಸಾಹಿಸುತ್ತದೆ.
- ಈ ಯೋಜನೆಯು ಪ್ರಯಾಣದ ಸಮಯದಲ್ಲಿ ಆಗುವ ಅಪಘಾತಗಳನ್ನು ಔದ್ಯೋಗಿಕ ಅಪಾಯಗಳ ಅಪಾಯಗಳ ಅಡಿಯಲ್ಲಿ ಕವರ್ ಮಾಡುತ್ತದೆ.
- ಮಹಿಳಾ ಉದ್ಯೋಗಿಗಳು ಗರ್ಭಧಾರಣೆಗೆ ಸಂಬಂಧಿತ ಸಮಸ್ಯೆಗಳ ಸಂದರ್ಭದಲ್ಲಿ ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ಅವರ ವೇತನದ ಸ್ಲ್ಯಾಬ್‌ಗೆ ಧಕ್ಕೆಯಾಗದಂತೆ ಅವರು 26 ವಾರಗಳ ಮೆಟರ್ನಿಟಿ ರಜೆಯನ್ನು 1 ತಿಂಗಳವರೆಗೆ ವಿಸ್ತರಿಸಬಹುದು.
ಈ ಹೆಲ್ತ್ ಇನ್ಶೂರೆನ್ಸ್ ಯೋಜನೆಯ ಎಲ್ಲಾ ವೈಶಿಷ್ಟ್ಯಗಳು ನಿಮಗೆ ಹಲವಾರು ಪ್ರಯೋಜನಗಳನ್ನು ಪಡೆಯಲು ಅನುವು ಮಾಡಿಕೊಡುತ್ತವೆ.
ಇಎಸ್‌ಐಸಿ(ESIC) ಯ ಪ್ರಯೋಜನಗಳೇನು?
ನೀವು ಇಎಸ್‌ಐ ಯೋಜನೆಯಡಿಯಲ್ಲಿ ಸೇರಿಕೊಂಡಿದ್ದರೆ ನೀವು ಇಎಸ್‌ಐ ಆಸ್ಪತ್ರೆ/ಔಷಧಾಲಯದಲ್ಲಿ ಈ ಕೆಳಗಿನ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
1. ಅನಾರೋಗ್ಯದ ಪ್ರಯೋಜನಗಳು
ಇನ್ಶೂರ್ ಆಗಿರುವ ಉದ್ಯೋಗಿಗಳು ಪ್ರಮಾಣೀಕೃತ ಅನಾರೋಗ್ಯದ ಅವಧಿಗಳಿಗೆ, ವರ್ಷಕ್ಕೆ 91 ದಿನಗಳವರೆಗೆ ಮಾನ್ಯವಾಗಿವ, ತಮ್ಮ ವೇತನದ 70% ಮೌಲ್ಯದ ನಗದು ಪರಿಹಾರವನ್ನು ಆನಂದಿಸಬಹುದು, ಅಂತಹ ಪ್ರಯೋಜನಗಳನ್ನು ಪಡೆಯಲು, ಕೊಡುಗೆ ಅವಧಿಯಲ್ಲಿ ವ್ಯಕ್ತಿಗಳು ಕನಿಷ್ಠ 78 ದಿನಗಳವರೆಗೆ ಕೊಡುಗೆ ನೀಡಬೇಕಾಗುತ್ತದೆ.
ಎಂಪ್ಲಾಯೀ ಸ್ಟೇಟ್ ಇನ್ಶೂರೆನ್ಸ್ ಕಾಯಿದೆ 1948 ರ ವಿಸ್ತೃತ ಅನಾರೋಗ್ಯದ ಪ್ರಯೋಜನಗಳ ಅಡಿಯಲ್ಲಿ ದೀರ್ಘಾವಧಿಯ ಕಾಯಿಲೆಗಳನ್ನು ಹೊಂದಿರುವ ವ್ಯಕ್ತಿಗಳು 2 ವರ್ಷಗಳವರೆಗೆ 80% ನಷ್ಟು ಹೆಚ್ಚಿನ ಪರಿಹಾರ ದರಗಳನ್ನು ಪಡೆಯಬಹುದು.
2. ಮೆಡಿಕಲ್ ಪ್ರಯೋಜನಗಳು
ಪಾಲಿಸಿದಾರರು ಮತ್ತು ಅವನ/ಅವಳ ಅವಲಂಬಿತ ಕುಟುಂಬದ ಸದಸ್ಯರು ಈ ಯೋಜನೆಯಡಿಯಲ್ಲಿ ವೈದ್ಯರ ಸಮಾಲೋಚನೆ, ಔಷಧಿ ಮತ್ತು ಆಂಬ್ಯುಲೆನ್ಸ್ ಸೇವೆಗಳನ್ನು ಒಳಗೊಂಡಂತೆ ಸಂಪೂರ್ಣ ಮೆಡಿಕಲ್ ಮತ್ತು ಶಸ್ತ್ರಚಿಕಿತ್ಸಾ ಆರೈಕೆಯನ್ನು ಪಡೆಯಬಹುದು.
ಅಂತಹ ವೆಚ್ಚಗಳಿಗೆ ಯೋಜನೆಯು ಯಾವುದೇ ಗರಿಷ್ಠ ಮಿತಿಯನ್ನು ನಿರ್ದಿಷ್ಟಪಡಿಸುವುದಿಲ್ಲ.
3. ಅಂಗವಿಕಲತೆ (ತಾತ್ಕಾಲಿಕ ಮತ್ತು ಶಾಶ್ವತ) ಪ್ರಯೋಜನಗಳು
ಉದ್ಯೋಗದಲ್ಲಾದ ಗಾಯದಿಂದ ತಾತ್ಕಾಲಿಕ ಅಂಗವೈಕಲ್ಯವನ್ನು ಎದುರಿಸಿದರೆ ಇನ್ಶೂರ್ ಆಗಿರುವ ಕೆಲಸಗಾರರು ತಮ್ಮ ವೇತನದ 90% ನಷ್ಟು ಪರಿಹಾರವನ್ನು ಪಡೆಯಬಹುದು.
ನೀವು ಯಾವುದೇ ಕೊಡುಗೆಯನ್ನು ಪಾವತಿಸಿದ್ದರೂ, ಪಾವತಿಸದಿದ್ದರೂ ಸಹ, ಉದ್ಯೋಗದ 1 ನೇ ದಿನದಿಂದ ಈ ಪ್ರಯೋಜನವನ್ನು ಅನುಮತಿಸಲಾಗುತ್ತದೆ.
ಅಂಗವೈಕಲ್ಯವು ಅಪಘಾತದ ದಿನಾಂಕದಿಂದ 3 ದಿನಗಳಿಗಿಂತ ಹೆಚ್ಚು ಕಾಲ ಮುಂದುವರೆದರೆ, ಗಳಿಸುವ ಸಾಮರ್ಥ್ಯದ ನಷ್ಟದ ಸಂಪೂರ್ಣ ಅವಧಿಗಾಗಿ ಪರಿಹಾರವನ್ನು ಒದಗಿಸಲಾಗುತ್ತದೆ.
4. ಮೆಟರ್ನಿಟಿ ಪ್ರಯೋಜನಗಳು
ಮಹಿಳಾ ಉದ್ಯೋಗಿಗಳು ಗರ್ಭಧಾರಣೆ, ಗರ್ಭಪಾತ, ಮೆಡಿಕಲ್ ಗರ್ಭಪಾತ, ಅಕಾಲಿಕ ಜನನ ಅಥವಾ ಹೆರಿಗೆಯಿಂದ ಉಂಟಾಗುವ ಯಾವುದೇ ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ನಗದು ಪ್ರಯೋಜನಗಳನ್ನು ಪಡೆಯಬಹುದು.
ಪರಿಹಾರದ ಗರಿಷ್ಠ ಅವಧಿಯು ಮೆಡಿಕಲ್ ಅವಶ್ಯಕತೆಯ ವಿಧವನ್ನು ಅವಲಂಬಿಸಿ 6-12 ತಿಂಗಳುಗಳ ನಡುವೆ ಬದಲಾಗುತ್ತದೆ ಮತ್ತು ಇನೊಂದು ತಿಂಗಳವರೆಗೆ ಅದನ್ನು ವಿಸ್ತರಿಸಬಹುದಾಗಿದೆ.
ನಿಮ್ಮ ನಗದು ಪ್ರಯೋಜನದ ಅವಧಿಯ ಮೊದಲು 2 ಸತತ ಕೊಡುಗೆ ಅವಧಿಗಳಲ್ಲಿ ಕನಿಷ್ಠ 70 ದಿನಗಳವರೆಗೆ ನೀವು ಕೊಡುಗೆಗಳನ್ನು ನೀಡಿದ್ದರೆ ಮಾತ್ರ ನೀವು ಪ್ರಯೋಜನವನ್ನು ಪಡೆಯಬಹುದು ಎಂಬುದನ್ನು ಗಮನಿಸಿ.
5. ಮರಣದ ಪ್ರಯೋಜನಗಳು
ಇನ್ಶೂರ್ ಆಗಿರುವ ಉದ್ಯೋಗಿಯು ಔದ್ಯೋಗಿಕ ಅಪಾಯದಿಂದ ಮರಣಕ್ಕೀಡಾದರೆ, ಅವರ ಅವಲಂಬಿತ ಕುಟುಂಬದ ಸದಸ್ಯರು ಮೃತ ವ್ಯಕ್ತಿಯ ಸಂಬಳದ 90% ಮೌಲ್ಯದ ಮಾಸಿಕ ಪರಿಹಾರವನ್ನು ಪಡೆಯಬಹುದು.
ಅವಲಂಬಿತ ಸಂಗಾತಿಗಳು ಮತ್ತು ಪೋಷಕರು ಸಾಯುವವರೆಗೂ ಈ ಪ್ರಯೋಜನಗಳನ್ನು ಆನಂದಿಸಬಹುದು, ಹಾಗೂ ಅವಲಂಬಿತ ಸಂತತಿಯು 25 ವರ್ಷ ವಯಸ್ಸಿನಿಂದ ಪ್ರಯೋಜನವನ್ನು ಪಡೆಯಬಹುದು.
6. ಅಂತ್ಯಕ್ರಿಯೆಯ ವೆಚ್ಚಗಳು
ನೀವು ಅವಲಂಬಿತ ಕುಟುಂಬ ಸದಸ್ಯರಾಗಿದ್ದರೆ, ತೀರಿಕೊಂಡ ವ್ಯಕ್ತಿಯ ಅಂತಿಮ ವಿಧಿಗಳನ್ನು ನಿರ್ವಹಿಸಲು ನೀವು ರೂ.10000 ವರೆಗೆ ಕ್ಲೈಮ್ ಮಾಡಬಹುದು.
7. ರಿಟೈರ್ಮೆಂಟ್ ನಂತರದ ಪ್ರಯೋಜನಗಳು
ನೀವು ಕನಿಷ್ಟ 5 ವರ್ಷಗಳ ಕಾಲ ಎಂಪ್ಲಾಯೀ ಸ್ಟೇಟ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗಿದ್ದರೆ, ನೀವು ಮತ್ತು ನಿಮ್ಮ ಸಂಗಾತಿಯು ನಿಮ್ಮ ರಿಟೈರ್ಮೆಂಟ್ ನಂತರವೂ ಮೆಡಿಕಲ್ ಪ್ರಯೋಜನಗಳನ್ನು ಆನಂದಿಸಬಹುದು.
ಯೋಜನೆಯ ಪ್ರಯೋಜನಗಳನ್ನು ಪಡೆಯಲು ನೀವು ಪ್ರತಿ ವರ್ಷ ರೂ.120 ರ ನಾಮಮಾತ್ರ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂಬುದನ್ನು ಗಮನಿಸಿ.
8. ನಿರುದ್ಯೋಗಿ ವ್ಯಕ್ತಿಗಳಿಗೆ ಅವಕಾಶ
ಕನಿಷ್ಠ 3 ವರ್ಷಗಳ ಕಾಲ ಇನ್ಶೂರ್ ಆದ ಉದ್ಯೋಗಿಯಾಗಿರುವ ನಂತರ, ನೀವು ಹಿಂಬಡ್ತಿ, ಕೆಲಸದ ಸ್ಥಳದ ಮುಚ್ಚುವಿಕೆ ಅಥವಾ ಶಾಶ್ವತ ಅಂಗವೈಕಲ್ಯದಿಂದಾಗಿ ನಿರುದ್ಯೋಗಿಗಳಾಗಿದ್ದರೆ, ಆಗಲೂ ನೀವು ರಾಜೀವ್ ಗಾಂಧಿ ಶ್ರಮಿಕ್ ಕಲ್ಯಾಣ್ ಯೋಜನೆ ಅಡಿಯಲ್ಲಿ ನಿರ್ದಿಷ್ಟ ಪ್ರಯೋಜನಗಳನ್ನು ಆನಂದಿಸಬಹುದು.
ಈ ಪ್ರಯೋಜನಗಳಲ್ಲಿ ಮೆಡಿಕಲ್ ಆರೈಕೆ ಮತ್ತು 1 ವರ್ಷದವರೆಗೆ ನಿಮ್ಮ ವೇತನದ 50% ಮೌಲ್ಯದ ನಿರುದ್ಯೋಗ ಭತ್ಯೆ ಸೇರಿವೆ.
ನಿರುದ್ಯೋಗಿ ಫಲಾನುಭವಿಗಳು ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ್ ಯೋಜನೆ ಅಡಿಯಲ್ಲಿ ನಗದು ಪರಿಹಾರವನ್ನು ಸಹ ಪಡೆಯಬಹುದು. ಇಎಸ್ಐ ಕಾಯಿದೆಯ ಸೆಕ್ಷನ್ 2(9) ಅಡಿಯಲ್ಲಿ ಪಾಲಿಸಿದಾರರು ತಮ್ಮ ಮಾಸಿಕ ವೇತನದ 25% ಅನ್ನು ಮೂರು ತಿಂಗಳವರೆಗೆ ಪಡೆಯುತ್ತಾರೆ.
ಇಎಸ್‌ಐ ಯೋಜನೆಯ ಮೇಲಿನ ಪ್ರಯೋಜನಗಳ ಜೊತೆಯಲ್ಲಿ, ವ್ಯಕ್ತಿಗಳು ಇಎಸ್‌ಐ ಆಸ್ಪತ್ರೆಗಳು/ಡಿಸ್ಪೆನ್ಸರಿಗಳನ್ನು ಹೊರತುಪಡಿಸಿ ಇತರ ಯಾವುದೇ ಸ್ಥಳದಲ್ಲಿ ದಾಖಲಾಗಿದ್ದಾರೆ ರೂ.5000 ವರೆಗೆ ಪರಿಹಾರವನ್ನು ಪಡೆಯಬಹುದು. ಆದರೆ, ಅಂತಹ ಹಕ್ಕುಗಳನ್ನು 2 ಬಾರಿ ಮಾತ್ರ ಅನುಮತಿಸಲಾಗುತ್ತದೆ.
ಎಂಪ್ಲಾಯೀ ಸ್ಟೇಟ್ ಇನ್ಶೂರೆನ್ಸ್ ಯೋಜನೆಯಡಿ ಕವರೇಜ್ ನ ವ್ಯಾಪ್ತಿ
ಅಂಗಡಿಗಳು ಮತ್ತು ಸ್ಥಾಪನೆ ಕಾಯಿದೆ ಅಥವಾ ಕಾರ್ಖಾನೆ ಕಾಯಿದೆಯ ಅಡಿಯಲ್ಲಿ 10 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಭಾರತದಾದ್ಯಂತದ ಎಲ್ಲಾ ವ್ಯಾಪಾರ ಸಂಸ್ಥೆಗಳಿಗೆ ಈ ಯೋಜನೆಯು ಅನ್ವಯಿಸುತ್ತದೆ.
ಇಎಸ್‌ಐಸಿ ಕವರೇಜ್ ಏನನ್ನು ಒಳಗೊಂಡಿದೆ ಎಂಬುದನ್ನು ನೀವು ವಿವರವಾಗಿ ಅರ್ಥಮಾಡಿಕೊಳ್ಳಲು ಬಯಸಿದರೆ, ಕೆಳಗಿನ ಪಟ್ಟಿಯನ್ನು ನೋಡಿ.
- ಎಂಪ್ಲಾಯೀ ಸ್ಟೇಟ್ ಇನ್ಶೂರೆನ್ಸ್ ಕಾಯಿದೆ 1948 ರ ಅಡಿಯಲ್ಲಿರುವ ವಿಭಾಗ 2(12) ಎಲ್ಲಾ ಕಾಲೋಚಿತವಲ್ಲದ ಕಾರ್ಖಾನೆಗಳನ್ನು ಒಳಗೊಂಡಿದೆ.
- ವಿಭಾಗ 1(5) ಈ ಯೋಜನೆಯನ್ನು ಎಲ್ಲಾ ರೆಸ್ಟೋರೆಂಟ್‌ಗಳು, ಚಿತ್ರಮಂದಿರಗಳು, ಅಂಗಡಿಗಳು, ಪತ್ರಿಕೆ ಸ್ಥಾಪನೆಗಳು, ರಸ್ತೆ-ಮೋಟಾರು ಸಾರಿಗೆ ಉದ್ಯಮಗಳು ಮತ್ತು ಹೋಟೆಲ್‌ಗಳಿಗೆ ಅನ್ವಯಿಸುವಂತೆ ಮಾಡುತ್ತದೆ. ಇಎಸ್‌ಐ ಯೋಜನೆಯಡಿ ಖಾಸಗಿ ಶಿಕ್ಷಣ ಮತ್ತು ಮೆಡಿಕಲ್ ಸಂಸ್ಥೆಗಳನ್ನು ಸೇರಿಸಲು ಇನ್ನಷ್ಟು ವಿಸ್ತರಣೆಗಳನ್ನು ಮಾಡಲಾಗಿದೆ.
ಈಗಾಗಲೇ ಹೇಳಿದಂತೆ, ರೂ.21000 ವರೆಗಿನ ಒಟ್ಟು ವೇತನ ಹೊಂದಿರುವ ಕಾರ್ಮಿಕರು ಈ ಇನ್ಶೂರೆನ್ಸ್ ಯೋಜನೆಯ ಚಂದಾದಾರರಾಗಬಹುದು, ಆದರೆ ವಿಕಲಾಂಗರಿಗೆ ವೇತನದ ಮಿತಿ ರೂ.25000 ವರೆಗೆ ಇರುತ್ತದೆ.
ಇಎಸ್ಐಸಿಗೆ ನೋಂದಾಯಿಸುವುದು ಹೇಗೆ?
ನೀವು ಕಂಪನಿಯನ್ನು ಹೊಂದಿದ್ದರೆ ಮತ್ತು ಅದನ್ನು ಇಎಸ್ಐಸಿ ಅಡಿಯಲ್ಲಿ ನೋಂದಾಯಿಸಲು ಬಯಸಿದರೆ, ಇದಕ್ಕಾಗಿ ಹಂತ-ಹಂತದ ಮಾರ್ಗದರ್ಶಿ ಇಲ್ಲಿದೆ.
- ಹಂತ 1: ಅಧಿಕೃತ ಇಎಸ್ಐಸಿ ಪೋರ್ಟಲ್‌ಗೆ ಭೇಟಿ ನೀಡಿ ಮತ್ತು "ಸೈನ್ ಅಪ್" ಮೇಲೆ ಕ್ಲಿಕ್ ಮಾಡಿ.
- ಹಂತ 2: ನಿಖರವಾದ ವಿವರಗಳೊಂದಿಗೆ ಮುಂದಿನ ಸ್ಕ್ರೀನ್ ನಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ.
- ಹಂತ 3: ನಂತರ, ನಿಮ್ಮ ನೋಂದಾಯಿತ ಇಮೇಲ್ ಐಡಿಯಲ್ಲಿ ನಿಮ್ಮ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ವಿವರಗಳನ್ನು ಹೊಂದಿರುವ ದೃಢೀಕರಣ ಮೇಲ್ ಅನ್ನು ನೀವು ಪಡೆಯುತ್ತೀರಿ.
- ಹಂತ 4: ನೀವು ಸ್ವೀಕರಿಸಿರುವ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ಬಳಸಿ, ಇಎಸ್ಐಸಿ ಪೋರ್ಟಲ್‌ನಲ್ಲಿ ಲಾಗ್ ಇನ್ ಮಾಡಿ ಮತ್ತು "ನ್ಯೂ ಎಂಪ್ಲಾಯರ್ ರಿಜಿಸ್ಟ್ರೇಷನ್ "ನ ಮೇಲೆ ಕ್ಲಿಕ್ ಮಾಡಿ. ಡ್ರಾಪ್-ಡೌನ್ ಮೆನುವಿನಿಂದ "ಯುನಿಟ್ ಟೈಪ್ " ಆಯ್ಕೆಮಾಡಿ ಮತ್ತು "ಸಬ್ಮಿಟ್" ಅನ್ನು ಆಯ್ಕೆಮಾಡಿ.
- ಹಂತ 5: ಈಗ "ಎಂಪ್ಲಾಯರ್ ರೆಜಿಸ್ಟ್ರೇಷನ್ ಫಾರ್ಮ್ 1" ಅನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಅದನ್ನು ಎಲ್ಲಾ ಕಡ್ಡಾಯ ಡಾಕ್ಯುಮೆಂಟ್ ಗಳೊಂದಿಗೆ ಸಲ್ಲಿಸಿ.
- ಹಂತ 6: "ಪೇಮೆಂಟ್ ಆಫ್ ಅಡ್ವಾನ್ಸ್ ಕಾಂಟ್ರಿಬ್ಯುಷನ್ " ಶೀರ್ಷಿಕೆ ಇರುವ ಪುಟಕ್ಕೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ, ಅಲ್ಲಿ ನೀವು 6 ತಿಂಗಳುಗಳ ಮುಂಗಡ ಕೊಡುಗೆಗಾಗಿ ಮೊತ್ತವನ್ನು ನಮೂದಿಸಬೇಕು ಮತ್ತು ಪಾವತಿ ಮೋಡ್ ಅನ್ನು ಆರಿಸಬೇಕಾಗುತ್ತದೆ.
ಪಾವತಿಯನ್ನು ಪೂರ್ಣಗೊಳಿಸಿದ ನಂತರ, ನೀವು 17-ಅಂಕಿಯ ಇಎಸ್ಐಸಿ ನೋಂದಣಿ ಸಂಖ್ಯೆ ಇರುವ ನೋಂದಣಿ ಪತ್ರವನ್ನು (ಸಿ-11) ಸ್ವೀಕರಿಸುತ್ತೀರಿ.
ಇಎಸ್ಐಸಿ(ESIC) ನೋಂದಣಿಗೆ ಅಗತ್ಯವಿರುವ ಡಾಕ್ಯುಮೆಂಟ್ ಗಳು ಯಾವುವು?
ಇಎಸ್ಐಸಿ ಅಡಿಯಲ್ಲಿ ಆನ್‌ಲೈನ್ ನೋಂದಣಿಯೊಂದಿಗೆ ಮುಂದುವರಿಯುವ ಮೊದಲು, ಈ ಕೆಳಗಿನ ಡಾಕ್ಯುಮೆಂಟ್ ಗಳನ್ನು ಸಿದ್ಧವಾಗಿ ಇಟ್ಟುಕೊಂಡಿರುವುದನ್ನು ಖಚಿತಪಡಿಸಿಕೊಳ್ಳಿ.
- ಅಂಗಡಿಗಳು ಮತ್ತು ಸ್ಥಾಪನೆ ಕಾಯಿದೆ ಅಥವಾ ಕಾರ್ಖಾನೆ ಕಾಯಿದೆ ಅಡಿಯಲ್ಲಿ ನೋಂದಣಿ ಪ್ರಮಾಣಪತ್ರ ಅಥವಾ ಲೈಸನ್ಸ್.
- ಪಾಲುದಾರಿಕೆ ಸಂಸ್ಥೆಗಳಿಗೆ ಪಾಲುದಾರಿಕೆ ಪತ್ರ ಮತ್ತು ಖಾಸಗಿ ಲಿಮಿಟೆಡ್ ಕಂಪನಿಗಳಿಗೆ ನೋಂದಣಿ ಪ್ರಮಾಣಪತ್ರ.
- ಅವರ ಮಾಸಿಕ ಪರಿಹಾರ ವಿವರಗಳನ್ನು ಹೊಂದಿರುವ ಎಲ್ಲಾ ಕಾರ್ಮಿಕರ ಪಟ್ಟಿ.
- ಎಲ್ಲಾ ಉದ್ಯೋಗಿಗಳು ಮತ್ತು ವ್ಯಾಪಾರ ಘಟಕದ ವಿಳಾಸ ಪುರಾವೆ ಮತ್ತು ಪಾನ್ ಕಾರ್ಡ್
- ಷೇರುದಾರರು, ಪಾಲುದಾರರು ಮತ್ತು ಸ್ಥಾಪನೆಯ ನಿರ್ದೇಶಕರ ಪಟ್ಟಿ.
- ನೌಕರರ ಹಾಜರಾತಿ ನೋಂದಣಿಗಳು.
ವ್ಯಾಪಾರ ಮಾಲೀಕರು ಈ ಯೋಜನೆಯಡಿಯಲ್ಲಿ ಯಶಸ್ವಿಯಾಗಿ ನೋಂದಾಯಿಸಿಕೊಂಡ ನಂತರ ಅವರು, ಹೊಸ ಉದ್ಯೋಗಿಗಳು ಸಂಸ್ಥೆಗೆ ಸೇರಿದಾಗ ಅವರನ್ನು ನೋಂದಾಯಿಸಿಕೊಳ್ಳಬಹುದು. ಯಶಸ್ವಿ ದಾಖಲಾತಿಯ ನಂತರ, ಪ್ರತಿ ಕೆಲಸಗಾರರು ಇಎಸ್ಐಸಿ ಅಥವಾ ಪೆಹಚಾನ್ ಕಾರ್ಡ್ ಅನ್ನು ಪಡೆಯುತ್ತಾರೆ, ಅವರು ಮೆಡಿಕಲ್ ಚಿಕಿತ್ಸೆಗಳ ವಿರುದ್ಧ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಬಯಸಿದಾಗ ಪ್ರತಿ ಬಾರಿ ಇದನ್ನು ಪ್ರದರ್ಶಿಸಬೇಕಾಗುತ್ತದೆ.
ಎಂಪ್ಲಾಯೀ ಸ್ಟೇಟ್ ಇನ್ಶೂರೆನ್ಸ್ ಕಾರ್ಡ್ ಅಥವಾ ಪೆಹಚಾನ್ ಕಾರ್ಡಿನ ಬಗ್ಗೆ
ಇಎಸ್ಐಸಿ ನೋಂದಣಿಗಾಗಿ ನಿಮ್ಮ ಬಳಿ ಇರುವ ಪುರಾವೆ ಏನು ಎಂದು ನೀವು ಯೋಚಿಸುತ್ತಿದ್ದರೆ , ಇಎಸ್ಐ ಅಥವಾ ಪೆಹಚಾನ್ ಕಾರ್ಡ್ ಆ ಡಾಕ್ಯುಮೆಂಟ್ ಆಗಿದೆ. ಇದು ಆಸ್ಪತ್ರೆಯ ಅಧಿಕಾರಿಗಳು ಪಾಲಿಸಿದಾರರನ್ನು ಗುರುತಿಸಲು ಮತ್ತು ಅವನ/ಅವಳ ಮೆಡಿಕಲ್ ಇತಿಹಾಸವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಮತ್ತು ಕೆಳಗಿನ ವಿವರಗಳನ್ನು ಪ್ರದರ್ಶಿಸುತ್ತದೆ.
- ಇನ್ಶೂರ್ ಆಗಿರುವ ವ್ಯಕ್ತಿಯ ಹೆಸರು
- ಅವನ/ಅವಳ ಇನ್ಶೂರೆನ್ಸ್ ಸಂಖ್ಯೆ
- ವಿಳಾಸದ ವಿವರಗಳು
- ಇನ್ಶೂರ್ ಆದ ವ್ಯಕ್ತಿಯ ಜನ್ಮ ದಿನಾಂಕ
- ಕುಟುಂಬದ ಛಾಯಾಚಿತ್ರ
ಉದ್ಯೋಗಿಯಾಗಿ, ನಿಜವಾದ ಇಎಸ್ಐ ಕಾರ್ಡ್ ಹಂಚಿಕೆಯಾಗುವ 90 ದಿನಗಳವರೆಗೆ ಮಾನ್ಯವಾಗಿರುವ ತಾತ್ಕಾಲಿಕ ಐಡಿ ಕಾರ್ಡ್ ಅನ್ನು ನೀವು ಪಡೆಯುತ್ತೀರಿ. ನಂತರದ್ದು ಶಾಶ್ವತ ಕಾರ್ಡ್ ಆಗಿದ್ದು ಅದು ನಿಮ್ಮ ಜೀವನದುದ್ದಕ್ಕೂ ಒಂದೇ ಆಗಿರುತ್ತದೆ. ಆದಾಗ್ಯೂ, ನೀವು ಉದ್ಯೋಗಗಳನ್ನು ಬದಲಾಯಿಸಿದಾಗಲೆಲ್ಲಾ ನಿಮ್ಮ ಹೊಸ ಉದ್ಯೋಗದಾತರ ಪೋರ್ಟಲ್‌ನಲ್ಲಿ ನಿಮ್ಮನ್ನು ನೀವೇ ನೋಂದಾಯಿಸಿಕೊಳ್ಳಬೇಕು ಎಂಬುದನ್ನು ಗಮನಿಸಿ.
ನಿಮ್ಮ ಪೆಹಚಾನ್ ಕಾರ್ಡ್ ಅನ್ನು ನೀವು ಇನ್ನೂ ಪಡೆದಿಲ್ಲವೇ?
ಅತ್ಯಂತ ಮೂಲಭೂತವಾದ ಮೆಡಿಕಲ್ ಇನ್ಶೂರೆನ್ಸ್ ಪಾಲಿಸಿಗಳು ಸಹ ನಮ್ಮ ದೇಶದ ಹೆಚ್ಚಿನ ಜನಸಂಖ್ಯೆಗೆ ಕೈಗೆಟುಕದಂತಹ ಪರಿಸ್ಥಿತಿ ಇರುವಂತಿದೆ - ಅದರ ಜನಸಂಖ್ಯೆಯ 22% ಪ್ರತಿ ದಿನ ರೂ.143 ಕ್ಕಿಂತ ಕಡಿಮೆ ಆದಾಯವನ್ನು ಹೊಂದಿರುವ ದೇಶ, ಅಂತರರಾಷ್ಟ್ರೀಯ ದೈನಂದಿನ ವೇತನ ಮಾನದಂಡ (1).
ಈಗ, ನೀವು ಉದ್ಯೋಗಗಳನ್ನು ಬದಲಾಯಿಸಿದ ನಂತರ ಇಎಸ್ಐ ಯೋಜನೆಯ ಭಾಗವಾಗಲು ಅರ್ಜಿಯನ್ನು ಸಲ್ಲಿಸುವ ಮೂಲಕ ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳ ಬಗ್ಗೆ ನಿಮಗಿರುವ ಎಲ್ಲಾ ಚಿಂತೆಗಳನ್ನು ದೂರ ಮಾಡಬಹುದಾಗಿದೆ!
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಇಎಸ್ಐ ಕೊಡುಗೆ ಅವಧಿಯಲ್ಲಿ ನನ್ನ ಮಾಸಿಕ ವೇತನವು ರೂ.21000 ಮೀರಿದರೆ ಏನಾಗುತ್ತದೆ?
ಕೊಡುಗೆಯ ಅವಧಿಯ ಮಧ್ಯದಲ್ಲಿ ನಿಮ್ಮ ಒಟ್ಟು ವೇತನವು ರೂ.21000 ಮಾರ್ಕ್ ಅನ್ನು ದಾಟಿದರೂ ಸಹ, ಹೇಳಲಾದ ಕೊಡುಗೆಯ ಅವಧಿ ಮುಗಿಯುವವರೆಗೆ ನೀವು ಎಂಪ್ಲಾಯೀ ಸ್ಟೇಟ್ ಇನ್ಶೂರೆನ್ಸ್ ಯೋಜನೆಯ ಅಡಿಯಲ್ಲಿ ಕವರೇಜ್ ಪಡೆಯುವುದನ್ನು ಮುಂದುವರಿಸುತ್ತೀರಿ. ಉದ್ಯೋಗದಾತರು 3.25% ಪಾವತಿಸುತ್ತಾರೆ ಮತ್ತು ಉದ್ಯೋಗಿಯು ಈ ಇನ್ಶೂರೆನ್ಸ್ ಯೋಜನೆಗೆ 0.75% ಕೊಡುಗೆಯನ್ನು ನೀಡುತ್ತಾರೆ.
ಇಎಸ್ಐ ಯೋಜನೆಯು ಯಾವುದೇ ಮೊತ್ತವನ್ನು ಹಿಂಪಡೆಯಲು ಅವಕಾಶ ನೀಡುತ್ತದೆಯೇ?
ಇಎಸ್ಐ ಯೋಜನೆಯನ್ನು ಲಭ್ಯವಿರುವ ಯಾವುದೇ ಇನ್ಶೂರೆನ್ಸ್ ಪಾಲಿಸಿ ಎಂದು ಮತ್ತು ನಿಮ್ಮ ಮಾಸಿಕ ಕೊಡುಗೆಯನ್ನು ಪ್ರೀಮಿಯಂ ಆಗಿ ಪರಿಗಣಿಸಿ. ನೀವು ವಿತ್ತೀಯ ರೂಪದಲ್ಲಿ ಪ್ರೀಮಿಯಂ ಅನ್ನು ಹಿಂಪಡೆಯಲು ಸಾಧ್ಯವಾಗದಂತೆಯೇ, ಇಎಸ್ಐ ಯೋಜನೆಯು ಯಾವುದೇ ಹಣವನ್ನು ಹಿಂಪಡೆಯಲು ನಿಮಗೆ ಅನುಮತಿಸುವುದಿಲ್ಲ. ಬದಲಾಗಿ, ಈ ಯೋಜನೆಯು ನಿಮಗೆ ಮತ್ತು ನಿಮ್ಮ ಅವಲಂಬಿತ ಕುಟುಂಬ ಸದಸ್ಯರಿಗೆ ಇಎಸ್ಐ-ಅಧಿಕೃತ ಆಸ್ಪತ್ರೆಗಳು ಮತ್ತು ಔಷಧಾಲಯಗಳಲ್ಲಿ ಉಚಿತ ಮೆಡಿಕಲ್ ಚಿಕಿತ್ಸೆಗಳನ್ನು ಪಡೆಯುವುದಕ್ಕಾಗಿ ಕ್ಲೈಮ್ ಮಾಡಲು ಅನುಮತಿಸುತ್ತದೆ.
ಇಎಸ್ಐಎಸ್ ವಿರುದ್ಧ ಕ್ಲೈಮ್ ಫೈಲ್ ಮಾಡುವ ಪ್ರಕ್ರಿಯೆ ಏನು?
ಇಎಸ್ಐಎಸ್ ವಿರುದ್ಧ ಕ್ಲೈಮ್ ಅನ್ನು ಪ್ರಾರಂಭಿಸಲು ನೀಡಿರುವ ಹಂತಗಳನ್ನು ಅನುಸರಿಸಿ.
- ಅಧಿಕೃತ ಇಎಸ್ಐ ಪೋರ್ಟಲ್‌ಗೆ ಭೇಟಿ ನೀಡಿ.
- ಫಾರ್ಮ್ 15 ಅನ್ನು ಡೌನ್‌ಲೋಡ್ ಮಾಡಿ ಮತ್ತು ಅದನ್ನು ನಿಖರವಾದ ವಿವರಗಳೊಂದಿಗೆ ಭರ್ತಿ ಮಾಡಿ.
- ಈ ಭರ್ತಿ ಮಾಡಿದ ಫಾರ್ಮ್ ಅನ್ನು ಎಂಪ್ಲಾಯೀ ಸ್ಟೇಟ್ ಇನ್ಶೂರೆನ್ಸ್ ನಿಗಮದಲ್ಲಿ ಸಲ್ಲಿಸಿ.
ಉದ್ಯೋಗದಾತರು ಕಡಿತಗೊಳಿಸಲಾದ ಉದ್ಯೋಗಿ ಕೊಡುಗೆಯನ್ನು ಪಾವತಿಸಲು ವಿಳಂಬ ಮಾಡಿದರೆ ಅಥವಾ ವಿಫಲವಾದರೆ ಏನಾಗುತ್ತದೆ?
ಎಂಪ್ಲಾಯೀ ಸ್ಟೇಟ್ ಇನ್ಶೂರೆನ್ಸ್ ಕಾಯಿದೆ 1948 ರ ಸೆಕ್ಷನ್ 40(4) ಪ್ರತಿ ಉದ್ಯೋಗದಾತರು ವೇತನದಿಂದ ಕಡಿತಗೊಳಿಸಿದ ಯಾವುದೇ ಮೊತ್ತವನ್ನು ಅದರ ನಿಜವಾದ ಕಾರಣಕ್ಕೆ ಕೊಡುಗೆಯಾಗಿ ಪಾವತಿಸಲು ಕಡ್ಡಾಯಗೊಳಿಸುತ್ತದೆ. ನಿಯಮಾವಳಿ 31 ರ ಅಡಿಯಲ್ಲಿ ನಿಗದಿತ ಮಿತಿಯೊಳಗೆ ಪಾವತಿಯಲ್ಲಿ ವಿಳಂಬ ಅಥವಾ ವಿಫಲವಾದರೆ ಉದ್ಯೋಗದಾತರು ಪ್ರತಿ ವರ್ಷಕ್ಕೆ ವಿಳಂಬ ಅಥವಾ ಡೀಫಾಲ್ಟ್ ದಿನಗಳ ಒಟ್ಟು ಸಂಖ್ಯೆಗಾಗಿ 12% ನಷ್ಟು ಸರಳ ಬಡ್ಡಿ ಪಾವತಿ ಮಾಡಬೇಕಾಗುತ್ತದೆ. ಇದನ್ನು "ನಂಬಿಕೆಯ ಉಲ್ಲಂಘನೆ" ಎಂದು ಪರಿಗಣಿಸಲಾಗುತ್ತದೆ ಮತ್ತು ಕಾಯಿದೆಯ ಸೆಕ್ಷನ್ 85 (ಎ) ಅಡಿಯಲ್ಲಿ ಇದು ಶಿಕ್ಷಾರ್ಹ ಅಪರಾಧವಾಗಿದೆ.