ನಿಮಗೆ ಉತ್ತಮವಾದುದನ್ನು ಮಾತ್ರ ಆಯ್ಕೆ ಮಾಡುವ ಬಗ್ಗೆ ನೀವು ಯಾವಾಗಲೂ ಜಾಗರೂಕರಾಗಿರುತ್ತೀರಿ. ಸರಿಯಾದ ನೌಕರಿಯ ಆಯ್ಕೆ, ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸುವುದು ಅಥವಾ ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಕಾರನ್ನು ಖರೀದಿಸುವುದು. ಆದರೆ ಹೆಲ್ತ್ ಇನ್ಶೂರೆನ್ಸ್ ವಿಷಯ ಬಂದಾಗ ಸಹ ನೀವು ಹೀಗೆಯೇ ಮಾಡುತ್ತೀರಾ? ಹೆಲ್ತ್ ಇನ್ಶೂರೆನ್ಸ್ ಹೊಂದಿದ ಮಾತ್ರಕ್ಕೇ ನಾವು ಸುರಕ್ಷಿತ ಎಂದುಕೊಳ್ಳುತ್ತೇವೆ. ಆದರೆ ಸರಿಯಾದ ಸಮ್ ಇನ್ಶೂರ್ಡ್ ಅನ್ನು ಆಯ್ಕೆ ಮಾಡುವುದು ಹೆಲ್ತ್ ಇನ್ಶೂರೆನ್ಸ್ ಆಯ್ಕೆ ಮಾಡುವಷ್ಟೇ ಮುಖ್ಯವಾಗಿದೆ.
ಅಗತ್ಯಕ್ಕಿಂತ ಕಡಿಮೆ ಸಮ್ ಇನ್ಶೂರ್ಡ್ ಅನ್ನು ಹೊಂದಿರುವುದು ಇನ್ಶೂರೆನ್ಸ್ ಇಲ್ಲದೇ ಇರುವುದಕ್ಕೆ ಸಮಾನವಾಗಿರುತ್ತದೆ ಏಕೆಂದರೆ ಇಂತಹ ಸಂದರ್ಭದಲ್ಲಿ, ನೀವು ಅದಕ್ಕೆ ಪ್ರೀಮಿಯಂ ಅನ್ನು ಸಹ ಪಾವತಿಸುತ್ತೀರಿ ಮತ್ತು ನೀವು ಈ ಕವರ್ ಅನ್ನು ಹೊಂದಿದ್ದೀರಿ ಎಂದು ಭಾವಿಸಿ ಆರೋಗ್ಯಕ್ಕಾಗಿ ಸಾಕಷ್ಟು ಉಳಿತಾಯವನ್ನು ಸಹ ಮಾಡುವುದಿಲ್ಲ.
ಸ್ವಲ್ಪ ಸಮಯವನ್ನು ತೆಗೆದುಕೊಂಡು ಕೆಲವು ಆಘಾತಕಾರಿ ಸಂಗತಿಗಳನ್ನು ನೋಡೋಣ:
"5 ರಲ್ಲಿ 1 ಕ್ಯಾನ್ಸರ್ ರೋಗಿಗಳು 36 ರಿಂದ 45 ವರ್ಷದೊಳಗಿನವರು"
ಮೂಲ: ಟೈಮ್ಸ್ ಆಫ್ ಇಂಡಿಯಾ
"ಒಬ್ಬ ಕ್ಯಾನ್ಸರ್ ರೋಗಿಯು ಚಿಕಿತ್ಸೆ, ಔಷಧಿಗಳು ಮತ್ತು ಇತರ ಎಲ್ಲಾ ಆರೈಕೆಗಳಿಗಾಗಿ ಸುಮಾರು 20 ಲಕ್ಷಗಳನ್ನು ಖರ್ಚು ಮಾಡುತ್ತಾರೆ."
ಮೂಲ: ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್
ಆದ್ದರಿಂದ, ಅಂತಹ ಅಗತ್ಯದ ಸಮಯದಲ್ಲಿ ನಾವು 20 ಲಕ್ಷವನ್ನು ನಿಭಾಯಿಸಬಹುದು ಎಂದು ನಾವು ಭಾವಿಸಿದರೂ, ನಮ್ಮ ಇಡೀ ಜೀವನದ ಉಳಿತಾಯವನ್ನು ಖಾಲಿ ಮಾಡುವುದು ನಿಜವಾಗಿಯೂ ಯೋಗ್ಯವೇ?
ಹಾಗಾದರೆ, ಇದಕ್ಕೆ ಪರಿಹಾರವೇನು ಎಂದು ನೀವು ಕೇಳುತ್ತೀರಿ. ಏಕೆಂದರೆ ಇಂತಹ ತುರ್ತು ಸಂದರ್ಭಗಳಲ್ಲಿ ನಮ್ಮ ಉಳಿತಾಯವೇ ನಮ್ಮ ಬೆನ್ನೆಲುಬು ಆಗುತ್ತದೆ. ಆದರೆ ಸಾಕಷ್ಟು ಸಮ್ ಇನ್ಶೂರ್ಡ್ ಅನ್ನು ಹೊಂದಿರುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ತೆಗೆದುಕೊಳ್ಳುವುದರಿಂದ ನೀವು ನಿಮ್ಮ ಉಳಿತಾಯಗಳನ್ನು ಉಳಿಸಬಹುದು ಎಂದು ನಾವು ಹೇಳಿದರೆ? ಇದನ್ನು ನಿಮಗೆ ಒಂದು ಉದಾಹರಣೆಯೊಂದಿಗೆ ವಿವರಿಸೋಣ.
30 ವರ್ಷ ವಯಸ್ಸಿನ ಶ್ರೀ ಅಗ್ನಿಹೋತ್ರಿಯವರು ತಿಂಗಳಿಗೆ 50,000 ಗಳಿಸುತ್ತಾರೆ ಮತ್ತು ಪ್ರತಿ ತಿಂಗಳು 10,000 ಉಳಿಸುತ್ತಾರೆ. 40ನೇ ವಯಸ್ಸಿನಲ್ಲಿ, ಅವರು ಸುಮಾರು 17 ಲಕ್ಷಗಳನ್ನು ಉಳಿಸುತ್ತಾರೆ. ಆದರೆ ಪರಿಸ್ಥಿತಿಗಳು ಹದಗೆಟ್ಟು, ಶ್ರೀ ಅಗ್ನಿಹೋತ್ರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತದೆ. ಊಹಿಸಲಾಗದ ಮಾನಸಿಕ ಮತ್ತು ದೈಹಿಕ ಒತ್ತಡದ ಹೊರತಾಗಿ, ಶ್ರೀ ಅಗ್ನಿಹೋತ್ರಿಯವರು ಚಿಕಿತ್ಸೆ ಮತ್ತು ಔಷಧಿ ವೆಚ್ಚಗಳ ವ್ಯವಸ್ಥೆಯನ್ನು ಸಹ ಮಾಡಬೇಕಾಗುತ್ತದೆ.
ಆದ್ದರಿಂದ, ಸರಿಯಾದ ಸಮ್ ಇನ್ಶೂರ್ಡ್ವಿರುವ ಹೊಂದಿರುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಉಳಿತಾಯವನ್ನು ಸಂಪೂರ್ಣ ಜೀವನಕಾಲಕ್ಕಾಗಿ ರಕ್ಷಿಸುವ ಒಂದು ಹೂಡಿಕೆಯಾಗಿದೆ ಎಂದು ನಾವು ನೋಡುತ್ತೇವೆ.
ನಿಮ್ಮ ವಯಸ್ಸು: ನೀವು ಎಷ್ಟು ಬೇಗನೆ ಪ್ರಾರಂಭಿಸುತ್ತೀರೋ ನಿಮ್ಮ ಸಮ್ ಇನ್ಶೂರ್ಡ್ ಅಷ್ಟೇ ಹೆಚ್ಚು ಆಗಿರಬೇಕು ಏಕೆಂದರೆ ಉಳಿದಿರುವ ವರ್ಷಗಳ ಸಂಖ್ಯೆಗೆ ಹೆಚ್ಚಿನ ಸುರಕ್ಷತೆಯ ಅಗತ್ಯವಿರುತ್ತದೆ.
ನಿಮ್ಮ ಜೀವನ ಹಂತ: ನೀವು ಇರುವ ಜೀವನದ ಹಂತದ ಆಧಾರದ ಮೇಲೆ, ಉದಾಹರಣೆಗೆ, ನೀವು ಮದುವೆಯಾಗಲು ಅಥವಾ ಕುಟುಂಬವನ್ನು ಪ್ರಾರಂಭಿಸಲು ಹೊರಟಿದ್ದರೆ, ನಿಮ್ಮ ಸಮ್ ಇನ್ಶೂರ್ಡ್ ಅದಕ್ಕೆ ಸಂಬಂಧಿಸಿದ ಆರೋಗ್ಯ ವೆಚ್ಚಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
ಆರೋಗ್ಯ ಪರಿಸ್ಥಿತಿಗಳು: ನಿಮ್ಮ ಕುಟುಂಬದಲ್ಲಿ ನೀವು ಯಾವುದೇ ವೈದ್ಯಕೀಯ ಸ್ಥಿತಿಯ ಇತಿಹಾಸವನ್ನು ಹೊಂದಿದ್ದರೆ, ನಿಮ್ಮ ಸಮ್ ಇನ್ಶೂರ್ಡ್ ಭವಿಷ್ಯದಲ್ಲಿ ಅನಿರೀಕ್ಷಿತ ಆರೋಗ್ಯ ಸ್ಥಿತಿಯ ಸಾಧ್ಯತೆಯನ್ನು ಗಣನೆಗೆ ತೆಗೆದುಕೊಳ್ಳಬೇಕು.
ಕುಟುಂಬದಲ್ಲಿರುವ ಅವಲಂಬಿತರು: ನಿಮ್ಮ ಕುಟುಂಬದ ಸದಸ್ಯರೊಂದಿಗೆ ನೀವು ಫ್ಲೋಟರ್ ಪಾಲಿಸಿಯನ್ನು ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ, ಸಮ್ ಇನ್ಶೂರ್ಡ್ ಪ್ರತಿಯೊಬ್ಬ ಸದಸ್ಯರ ಅಗತ್ಯತೆಗಳನ್ನು ಮತ್ತು ಅವರ ಭವಿಷ್ಯದ ಆರೋಗ್ಯ ವೆಚ್ಚಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
ಜೀವನಶೈಲಿ ಮತ್ತು ವೈಯಕ್ತಿಕ ಅಭ್ಯಾಸಗಳು: ನೌಕರಿಯ ಪ್ರಕಾರ, ಆಹಾರ ಪದ್ಧತಿ, ಒತ್ತಡದ ಮಟ್ಟಗಳು ಮತ್ತು ಇತರ ವೈಯಕ್ತಿಕ ಅಭ್ಯಾಸಗಳು ಒಬ್ಬ ವ್ಯಕ್ತಿಯ ಭವಿಷ್ಯದ ಆರೋಗ್ಯ ಅಗತ್ಯಗಳಿಗೆ ಹಾದಿ ತೋರಿಸುತ್ತವೆ. ಸಮ್ ಇನ್ಶೂರ್ಡ್ ಅನ್ನು ಆಯ್ಕೆ ಮಾಡುವಾಗ ಇವುಗಳ ಬಗ್ಗೆಯೂ ಯೋಚಿಸಬೇಕಾಗುತ್ತದೆ.
ಎಷ್ಟೇ ಆದರೂ ಆರೋಗ್ಯವೇ ಭಾಗ್ಯ ಅಲ್ಲವೇ!
ಪ್ರಮುಖ: ಭಾರತದಲ್ಲಿ ಕೊರೊನಾವೈರಸ್ ಇನ್ಶೂರೆನ್ಸ್ ನ ಅನುಕೂಲಗಳು ಮತ್ತು ಅನನುಕೂಲಗಳ ಬಗ್ಗೆ ಇನ್ನಷ್ಟು ತಿಳಿಯಿರಿ