ಭಾರತದಲ್ಲಿನ ಸರ್ಕಾರಿ ಉದ್ಯೋಗಿಗಳು ತಾವು ಉದ್ಯೋಗದಲ್ಲಿರುವಾಗ ಮತ್ತು ರಿಟೈರ್ ಮೆಂಟ್ ನಂತರವೂ, ಸರ್ಕಾರದ ಇನ್ಶೂರೆನ್ಸ್ ಸ್ಕೀಮ್ಗಳ ಮೂಲಕ ಹೆಲ್ತ್ ಇನ್ಶೂರೆನ್ಸ್ ಕವರೇಜಿಗೆ ಅರ್ಹರಾಗಿರುತ್ತಾರೆ. ಉದಾಹರಣೆಗೆ, ಕೇಂದ್ರ ಸರ್ಕಾರಿ ಉದ್ಯೋಗಿಗಳು ಕೇಂದ್ರ ಸರ್ಕಾರದ ಹೆಲ್ತ್ ಸ್ಕೀಮ್ (CGHS) ನಿಂದ ಹೆಲ್ತ್ಕೇರ್ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಆದಾಗ್ಯೂ, ಕೇವಲ ಈ ಸ್ಕೀಮ್ಗಳ ಮೇಲೆ ಮಾತ್ರವೇ ಅವಲಂಬನೆಯಾದರೆ, ಅಲ್ಲಿ ಕೆಲವು ಮಿತಿಗಳು ಮತ್ತು ಸವಾಲುಗಳಿವೆ. ಆದ್ದರಿಂದ, ಸರ್ಕಾರಿ ಸ್ಕೀಮ್ನಿಂದ ಈ ಬೇಸಿಕ್ ಕವರೇಜನ್ನು ಹೊಂದುವುದರ ಜೊತೆಗೆ, ಸಪ್ಲಿಮೆಂಟರಿ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಲು ಯಾವಾಗಲೂ ರೆಕಮೆಂಡ್ ಮಾಡಲಾಗುತ್ತದೆ.
ಸರ್ಕಾರಿ ಉದ್ಯೋಗಿಗಳು ತಮ್ಮ ಚಾಲ್ತಿಯಲ್ಲಿರುವ ಕವರೇಜ್ ಅನ್ನು ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ನೊಂದಿಗೆ ಸಪ್ಲಿಮೆಂಟ್ ಆಗಿ ಪರಿಗಣಿಸಲು ಕೆಲವು ಬಲವಾದ ಕಾರಣಗಳು ಇಲ್ಲಿವೆ.
ಸರ್ಕಾರಿ ಉದ್ಯೋಗಿಗಳಿಗೆ ಇರುವ ಪ್ರಮುಖ ಕಳವಳ ಏನೆಂದರೆ ಸರ್ಕಾರದ ಇನ್ಶೂರೆನ್ಸ್ ಸ್ಕೀಮ್ಗಳ ಅಡಿಯಲ್ಲಿನ ನೆಟ್ವರ್ಕ್ ಆಸ್ಪತ್ರೆಗಳ ಸೀಮಿತ ಲಭ್ಯತೆ.
ಹೆಚ್ಚಿನ ಬಾರಿ, ಸರ್ಕಾರಿ ಉದ್ಯೋಗಿಗಳು ದೇಶಾದ್ಯಂತ ಎಲ್ಲಿಯಾದರೂ ಮತ್ತು ಕೆಲವು ಸಂದರ್ಭಗಳಲ್ಲಿ, ವಿದೇಶದಲ್ಲಿ ಪೋಸ್ಟಿಂಗ್ ಪಡೆಯಲು ಜವಾಬ್ದಾರರಾಗಿರುತ್ತಾರೆ. ಆದಾಗ್ಯೂ, ಸರ್ಕಾರಿ ಹೆಲ್ತ್ ಸ್ಕೀಮ್ಗಳ ನೆಟ್ವರ್ಕ್ ಆಸ್ಪತ್ರೆಗಳು ಪ್ರತಿಯೊಂದು ಸ್ಥಳದಲ್ಲಿಯೂ ಇರುವುದಿಲ್ಲ.
ಈ ನಿರ್ಬಂಧವು ಸಮಸ್ಯೆಗೆ ಕಾರಣವಾಗಬಹುದು ಮತ್ತು ಉದ್ಯೋಗಿಗಳು ತಮ್ಮ ಮನೆಗಳಿಂದ ಸಮಂಜಸವಾದ ದೂರದಲ್ಲಿ, ಉತ್ತಮ ಗುಣಮಟ್ಟದ ಹೆಲ್ತ್ಕೇರ್ ಸರ್ವೀಸ್ಗಳನ್ನು ಪಡೆಯಲು ತೊಂದರೆಗಳನ್ನು ಎದುರಿಸಬಹುದು.
ಅನೇಕ ಸರ್ಕಾರಿ ಉದ್ಯೋಗಿಗಳು ತಮ್ಮ ಪೋಷಕರಿಗೆ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಅನ್ನು ನೀಡಲು ಬಯಸುತ್ತಾರೆ. ಆದಾಗ್ಯೂ, ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಸರ್ಕಾರಿ ಇನ್ಶೂರೆನ್ಸ್ ಸ್ಕೀಮ್ಗಳು, ಪೋಷಕರಿಗೆ ಲಿಮಿಟೆಡ್ ಕವರೇಜನ್ನು ನೀಡುತ್ತವೆ. ಅದು ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ ಉದ್ಯೋಗಿಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತದೆ. ಸರ್ಕಾರಿ ಉದ್ಯೋಗಿಗಳು ತಮ್ಮ ಪೋಷಕರ ಹೆಲ್ತ್ಕೇರ್ ಅಗತ್ಯಗಳಿಗನುಗುಣವಾಗಿ ನಿರ್ದಿಷ್ಟವಾದ ಹೆಚ್ಚುವರಿ ರಕ್ಷಣೆಯನ್ನು ಪಡೆಯಲು, ಪ್ರೈವೇಟ್ ಹೆಲ್ತ್ ಇನ್ಶೂರೆನ್ಸ್ ಅನುಮತಿಸುತ್ತದೆ.
ಕೆಲವು ಕ್ರಿಟಿಕಲ್ ಇಲ್ನೆಸ್ಗಳಿಗೆ ವಿಶೇಷ ಚಿಕಿತ್ಸೆಯ ಅಗತ್ಯವಿರುತ್ತದೆ, ಇದು ಎಂಪೇನಲ್ಡ್ ಆಸ್ಪತ್ರೆಗಳಲ್ಲಿ ಲಭ್ಯವಿರುವುದಿಲ್ಲ. ಅನೇಕ ಬಾರಿ, ಇಂತಹ ಕ್ರಿಟಿಕಲ್ ಇಲ್ನೆಸ್ಗಳು ನಮ್ಮ ದೇಶದಲ್ಲಿ ಅಥವಾ ವಿದೇಶದಲ್ಲಿ ಕೆಲವು ನಿರ್ದಿಷ್ಟ ಟ್ರೀಟ್ಮೆಂಟ್ ಸೆಂಟರ್ಗಳನ್ನು ಹೊಂದಿರುತ್ತವೆ.
ಸರ್ಕಾರಿ ಇನ್ಶೂರೆನ್ಸ್ ಕವರೇಜ್ನಲ್ಲಿನ ಮಿತಿಗಳಿಂದಾಗಿ, ತಮಗೆ ಅಥವಾ ತಮ್ಮ ಕುಟುಂಬದ ಸದಸ್ಯರಿಗೆ ಅಂತಹ ಪ್ರಮುಖ ಚಿಕಿತ್ಸೆಗಳ ಅಗತ್ಯವಿದ್ದಾಗ ಹಾಗೂ ನೆಟ್ವರ್ಕ್ ಸೌಲಭ್ಯಗಳು ಸೀಮಿತವಾಗಿದ್ದಾಗ, ಸರ್ಕಾರಿ ಉದ್ಯೋಗಿಗಳು ಕಠಿಣ ಪರಿಸ್ಥಿತಿಗೆ ಸಿಲುಕಿಕೊಳ್ಳುತ್ತಾರೆ.
ಜನರು ಪ್ರೈವೇಟ್ ಹೆಲ್ತ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ, ಆಸ್ಪತ್ರೆಗಳು ಮತ್ತು ಸ್ಪೆಷಲಿಸ್ಟ್ಗಳ ವ್ಯಾಪಕ ನೆಟ್ವರ್ಕ್ಗೆ ಆ್ಯಕ್ಸೆಸ್ ಪಡೆಯುತ್ತಾರೆ. ಇದು ಕ್ರಿಟಿಕಲ್ ಇಲ್ನೆಸ್ಗಳಿಗೆ ಸಾಧ್ಯವಾದಷ್ಟು ಉತ್ತಮ ಆರೈಕೆ ಪಡೆಯುವ ಅವಕಾಶವನ್ನು ಹೆಚ್ಚಿಸುತ್ತದೆ.
ಸಾಮಾನ್ಯವಾಗಿ ಸರ್ಕಾರಿ ಇನ್ಶೂರೆನ್ಸ್ ಸ್ಕೀಮ್ಗಳು ನಿರ್ದಿಷ್ಟ ಆಸ್ಪತ್ರೆಗಳೊಂದಿಗೆ ಟೈ-ಅಪ್ಗಳನ್ನು ಹೊಂದಿದ್ದು, ಉದ್ಯೋಗಿಗಳ ಆಯ್ಕೆಗಳನ್ನು ಸೀಮಿತಗೊಳಿಸುತ್ತದೆ. ಕೆಲವು ಸಂದರ್ಭಗಳಲ್ಲಿ, ಈ ಎಂಪೇನಲ್ಡ್ ಆಸ್ಪತ್ರೆಗಳು ಒದಗಿಸುವ ಸೇವೆಗಳ ಗುಣಮಟ್ಟವು ಸರ್ಕಾರಿ ಉದ್ಯೋಗಿಗಳ ನಿರೀಕ್ಷೆಗಳನ್ನು ಪೂರೈಸುವುದಿಲ್ಲ. ಪ್ರೈವೇಟ್ ಹೆಲ್ತ್ ಇನ್ಶೂರೆನ್ಸ್ನಲ್ಲಿ ಇನ್ವೆಸ್ಟ್ ಮಾಡುವ ಮೂಲಕ, ಜನರು ತಮ್ಮ ಆದ್ಯತೆಗಳ ಆಧಾರದ ಮೇಲೆ ಆಸ್ಪತ್ರೆಗಳು ಮತ್ತು ಹೆಲ್ತ್ಕೇರ್ ಪೂರೈಕೆದಾರರನ್ನು ಆಯ್ಕೆ ಮಾಡಬಹುದು. ಇದರಿಂದ ಉದ್ಯೋಗಿಗಳು ಹೆಚ್ಚಿನ ತೃಪ್ತಿ ಮತ್ತು ಸುಧಾರಿತ ಹೆಲ್ತ್ಕೇರ್ ಫಲಿತಾಂಶಗಳನ್ನು ಖಾತ್ರಿಪಡಿಸಿಕೊಳ್ಳಬಹುದು.
ಸರ್ಕಾರಿ ಇನ್ಶೂರೆನ್ಸ್ ಸ್ಕೀಮ್ಗಳು ಸಾಮಾನ್ಯವಾಗಿ ಸಂಕೀರ್ಣವಾದ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತವೆ, ಇದರಿಂದಾಗಿ ವಿಳಂಬಗಳು ಮತ್ತು ಅಡಚಣೆಗಳು ಉಂಟಾಗುತ್ತವೆ. ಪ್ರೈವೇಟ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ಗಳು ಸಾಮಾನ್ಯವಾಗಿ ವ್ಯವಸ್ಥಿತ ಮತ್ತು ಸಮರ್ಥ ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆಗಳನ್ನು ನೀಡುತ್ತವೆ. ಹೆಚ್ಚಾಗಿ, ಡಿಜಿಟಲ್ ಮತ್ತು ತೊಂದರೆ-ಮುಕ್ತ ಪ್ರಕ್ರಿಯೆಗಳು, ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತವೆ. ಅಲ್ಲದೇ ತಮ್ಮ ಹೆಲ್ತ್ ಮತ್ತು ಯೋಗಕ್ಷೇಮದ ಮೇಲೆ ಗಮನಹರಿಸಲು ಜನರಿಗೆ ಅನುವು ಮಾಡಿಕೊಡುತ್ತದೆ.
ಈಗ ಸೀನಿಯರ್ ಸಿಟಿಜನ್ ಹಂತವನ್ನು ತಲುಪಿರುವ ನಿವೃತ್ತ ಉದ್ಯೋಗಿಗಳಿಗೆ ಇದು ಹೆಚ್ಚು ಮಹತ್ವದ್ದಾಗಿದೆ ಹಾಗೂ ದೀರ್ಘ ಮತ್ತು ತೊಡಕಿನ ಪ್ರಕ್ರಿಯೆಗಳನ್ನು ಎದುರಿಸುವುದು ಅವರಿಗೆ ಇನ್ನಷ್ಟು ಕಷ್ಟಕರವಾಗುತ್ತದೆ.
ವಿಶೇಷವಾಗಿ ಚಾಲ್ತಿಯಲ್ಲಿರುವ ಸರ್ಕಾರಿ ಇನ್ಶೂರೆನ್ಸ್ ಕವರೇಜ್ ಅಸಮರ್ಪಕವಾಗಿದ್ದರೆ, ವೈದ್ಯಕೀಯ ತುರ್ತು ಪರಿಸ್ಥಿತಿಗಳು ಆರ್ಥಿಕವಾಗಿ ಬರಿದಾಗಬಹುದು. ಹೆಚ್ಚುವರಿ ಪ್ರೈವೇಟ್ ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳುವ ಮೂಲಕ, ಸರ್ಕಾರಿ ಉದ್ಯೋಗಿಗಳು ಅನಿರೀಕ್ಷಿತ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ತಮ್ಮ ಆರ್ಥಿಕ ರಕ್ಷಣೆಯನ್ನು ಹೆಚ್ಚಿಸಿಕೊಳ್ಳಬಹುದು.
ಈ ಹೆಚ್ಚುವರಿ ಕವರ್ಗಳು ಉದ್ಯೋಗಿಗಳಿಗೆ ಸುರಕ್ಷತಾ ಕವಚವಾಗಿ ಕೆಲಸ ಮಾಡುತ್ತವೆ. ಅಂದರೆ ಅತಿಯಾದ ಹಣಕಾಸಿನ ವೆಚ್ಚಗಳ ಹೊರೆಯಿಲ್ಲದೆ, ಜನರು ಅತ್ಯುತ್ತಮ ಹೆಲ್ತ್ಕೇರ್ ಸರ್ವೀಸ್ಗಳನ್ನು ಪಡೆಯಬಹುದು ಎಂಬುದನ್ನು ಇವು ಖಚಿತಪಡಿಸುತ್ತವೆ. ಅಲ್ಲದೆ, ತುರ್ತು ಪರಿಸ್ಥಿತಿಗಳನ್ನು ಅಲ್ಪಾವಧಿಯಲ್ಲಿ ನಿಭಾಯಿಸಬೇಕಾದ ಸಂದರ್ಭಗಳಲ್ಲಿ ಮತ್ತು ಹತ್ತಿರದಲ್ಲಿ ಎಂಪೇನಲ್ಡ್ ಸೌಲಭ್ಯ ಇಲ್ಲದಿದ್ದಲ್ಲಿ, ಈ ಹೆಚ್ಚುವರಿ ಕವರ್ ನಿಮ್ಮ ರಕ್ಷಣೆಗೆ ಬರಬಹುದು.
ಭಾರತದಲ್ಲಿನ ಸರ್ಕಾರಿ ಉದ್ಯೋಗಿಗಳು ಹೆಲ್ತ್ ಇನ್ಶೂರೆನ್ಸ್ ಪ್ರಯೋಜನಗಳನ್ನು ಆನಂದಿಸುತ್ತಿರುವಾಗ, ಸರ್ಕಾರಿ ಇನ್ಶೂರೆನ್ಸ್ ಸ್ಕೀಮ್ಗಳಿಗೆ ಪೂರಕವಾದ ಪ್ರಾಮುಖ್ಯತೆಯನ್ನು ಒತ್ತಿ ಹೇಳುವ ಸೂಕ್ತ ಕಾರಣಗಳು ಇವೆ.
ಪ್ರೈವೇಟ್ ಹೆಲ್ತ್ ಇನ್ಶೂರೆನ್ಸ್ನಲ್ಲಿ ಇನ್ವೆಸ್ಟ್ ಮಾಡುವ ಮೂಲಕ, ಸರ್ಕಾರಿ ಉದ್ಯೋಗಿಗಳು ಮೇಲೆ ಚರ್ಚಿಸಿದ ಮಿತಿಗಳನ್ನು ನಿವಾರಿಸಬಹುದು ಮತ್ತು ತಮ್ಮ ಹೆಲ್ತ್ಕೇರ್ ಆಯ್ಕೆಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಪಡೆಯಬಹುದು. ತಮಗೆ ಮತ್ತು ತಮ್ಮ ಕುಟುಂಬಗಳಿಗೆ ಕೆಲಸದ ಅವಧಿಯಲ್ಲಿ ಮಾತ್ರವಲ್ಲದೆ, ನಿವೃತ್ತಿಯ ನಂತರವೂ ಸಹ ಅವರಿಗೆ ಹೆಚ್ಚುವರಿ ಮತ್ತು ತೊಂದರೆ-ಮುಕ್ತ ಆರೈಕೆಯ ಅಗತ್ಯವಿರುವಾಗ, ಕಾಂಪ್ರೆಹೆನ್ಸಿವ್ ಕವರೇಜನ್ನು ಮತ್ತು ಮನಃಶಾಂತಿಯನ್ನು ಖಾತ್ರಿಪಡಿಸಿಕೊಳ್ಳಬಹುದು.