Fetching Your Data...
- Team Digit
ಆನ್‌ಲೈನ್‌ನಲ್ಲಿ ಹೆಲ್ತ್ ಕ್ಲೈಮ್ ಅನ್ನು ಫೈಲ್ ಮಾಡುವುದು ಹೇಗೆ
ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಅನ್ನು ಫೈಲ್ ಮಾಡಲು ಬಯಸುವಿರಾ?
ನಮ್ಮ ಸಹಾಯವಾಣಿ ಸಂಖ್ಯೆಯಾದ 1800-258-4242 ಗೆ ಕರೆ ಮಾಡಿ ಅಥವಾ ನಮಗೆ ಇಮೇಲ್ ಮಾಡಿ - healthclaims@godigit.com. ಹಿರಿಯ ನಾಗರಿಕರಿಗಾಗಿ, seniors@godigit.com ನಲ್ಲಿ ನಮಗೆ ಇಮೇಲ್ ಮಾಡಿ. ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ ನಾವು 24/7 ಲಭ್ಯವಿರುತ್ತೇವೆ.
ಡಿಜಿಟ್ ನಲ್ಲಿ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಮಾಡುವುದು ಸರಳ
ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಎನ್ನುವುದು ನಿಮ್ಮ ಆರೋಗ್ಯ ಮತ್ತು ವೈದ್ಯಕೀಯ ವೆಚ್ಚಗಳನ್ನು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪೂರೈಕೆದಾರು ನಿಭಾಯಿಸುವಂತೆ ಮಾಡುವ ಒಂದು ಅಧಿಕೃತ ವಿನಂತಿ ಮತ್ತು ಪ್ರಕ್ರಿಯೆಯಾಗಿದೆ. ಉದಾಹರಣೆಗೆ; ದುರದೃಷ್ಟವಶಾತ್ ಕುಟುಂಬದ ಒಬ್ಬ ಸದಸ್ಯರು ಅನಾರೋಗ್ಯದ ಕಾರಣ ಹಾಸ್ಪಿಟಲೈಸೇಷನ್ ಆದರೆ ಮತ್ತು ಅವರು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಯೋಜನೆಯಲ್ಲಿ ಕವರ್ ಆಗಿದ್ದರೆ, ಕ್ಯಾಶ್‌ಲೆಸ್ ಚಿಕಿತ್ಸೆಯೊಂದಿಗೆ ಮುಂದುವರಿಯಲು, ಅಥವಾ ಅವರ ಆಸ್ಪತ್ರೆ ದಾಖಲಾತಿಗಾಗಿ ರಿಇಂಬರ್ಸ್‌ಮೆಂಟ್ ಪ್ರಕ್ರಿಯೆಯನ್ನು ಆರಂಭಿಸಲು, ನೀವು ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ಗಾಗಿ ಫೈಲ್ ಮಾಡಬೇಕಾಗುತ್ತದೆ.
ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ಗಳ ವಿಧಗಳು
ಕ್ಯಾಶ್‌ಲೆಸ್ ಕ್ಲೈಮ್ ಮಾಡುವುದು ಹೇಗೆ?
ನಾವು ಪಾರದರ್ಶಕತೆಯಲ್ಲಿ ನಂಬಿಕೆ ಇಡುತ್ತೇವೆ, ಹೀಗಾಗಿ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಸಮಯದಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ನೀವು ನಿಖರವಾಗಿ ತಿಳಿದಿರುತ್ತೀರಿ. ನಮ್ಮ ಯಾವುದೇ 5900+ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ನೀವು ಆಯ್ಕೆ ಮಾಡಬಹುದಾದ ಕ್ಯಾಶ್‌ಲೆಸ್ ಕ್ಲೈಮ್ ಅನ್ನು ಹೇಗೆ ಪಡೆಯಬಹುದು ಎನ್ನುವುದಕ್ಕೆ ಸಂಪೂರ್ಣ ಹಂತಗಳನ್ನು ನಾವು ಈ ಕೆಳಗೆ ನೀಡಿದ್ದೇವೆ.
ಹಂತ 1 : ಯಾವುದೇ ಯೋಜಿತ ಹಾಸ್ಪಿಟಲೈಸೇಷನ್ ನ ಕನಿಷ್ಠ ಎರಡು ಅಥವಾ ಮೂರು ದಿನಗಳ ಮೊದಲು ಅಥವಾ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದ 24 ಗಂಟೆಗಳ ಒಳಗೆ ದಯವಿಟ್ಟು ನಮಗೆ ಸೂಚನೆಯನ್ನು ನೀಡಿ.
ಹಂತ 2 : ನಿಮ್ಮ ಇ-ಹೆಲ್ತ್ ಕಾರ್ಡ್ ಅನ್ನು ತೋರಿಸಿ ಮತ್ತು ಆಸ್ಪತ್ರೆಯ ಮೆಡಿಅಸಿಸ್ಟ್ ಹೆಲ್ಪ್ ಡೆಸ್ಕ್/ಇನ್ಶೂರೆನ್ಸ್ ಹೆಲ್ಪ್ಡೆಸ್ಕ್ನಲ್ಲಿ ಪೂರ್ವ-ಅನುಮೋದನೆಯ ಫಾರ್ಮ್ ಅನ್ನು ಕೇಳಿ ಪಡೆದುಕೊಳ್ಳಿ.
ಹಂತ 3 : ಫಾರ್ಮ್ ಅನ್ನು ಭರ್ತಿ ಮಾಡಿ ಹಾಗೂ ಸಹಿ ಮಾಡಿ ಹೆಲ್ಪ್ಡೆಸ್ಕ್ನಲ್ಲಿ ಸಲ್ಲಿಸಿ.
ಹಂತ 4 : ಎಲ್ಲವೂ ಸರಿಯಾಗಿದ್ದರೆ, ನೀವು ಕ್ಯಾಶ್‌ಲೆಸ್ ಸೌಲಭ್ಯವನ್ನು ಬಳಸಿಕೊಂಡು ಚಿಕಿತ್ಸೆಯೊಂದಿಗೆ ಮುಂದುವರಿಯಬಹುದು. ಅನುಮೋದನೆಯ 15 ದಿನಗಳ ಒಳಗಾಗಿ ಚಿಕಿತ್ಸೆಯನ್ನು ಮಾಡಲಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ರಿಇಂಬರ್ಸ್‌ಮೆಂಟ್ ಕ್ಲೈಮ್ ಮಾಡುವುದು ಹೇಗೆ?
ಹಂತ 1 : ನಿಮ್ಮ ದಾಖಲಾತಿ ದಿನಾಂಕದ ಎರಡು ದಿನಗಳ ಒಳಗಾಗಿ ನೀವು ನಮಗೆ ಕರೆ ಮಾಡಬೇಕಾಗುತ್ತದೆ. ನಮ್ಮ ಕರೆಯ ನಂತರ, ನೀವು ನಿಮ್ಮ ಎಲ್ಲಾ ಒರಿಜಿನಲ್ ಡಾಕ್ಯುಮೆಂಟ್ ಗಳ (ಬಿಲ್‌ಗಳು, ವರದಿಗಳು, ಇತ್ಯಾದಿ), ಮತ್ತು ನಿಮ್ಮ ಬಯಸಿದ ಬ್ಯಾಂಕ್ ಖಾತೆಯ ಬ್ಯಾಂಕ್ ವಿವರಗಳ ಸಾಫ್ಟ್ ಕಾಪಿಗಳನ್ನು ಅಪ್ಲೋಡ್ ಮಾಡುವುದಕ್ಕಾಗಿ ಒಂದು ಲಿಂಕ್ ಅನ್ನು ನಾವು ನಿಮಗೆ ಕಳುಹಿಸುತ್ತೇವೆ.
ಹಂತ 2 : ಅಪ್ಲೋಡ್ ಮಾಡುವ ಮೊದಲು, ನೀವು ಸ್ವತಃ ಎಲ್ಲಾ ಡಾಕ್ಯುಮೆಂಟ್ ಗಳಿಗೆ ಸಹಿ ಮಾಡಬೇಕಾಗುತ್ತದೆ. ಅವುಗಳ ಮೇಲೆ ‘ಡಿಜಿಟ್ ಇನ್ಶೂರೆನ್ಸ್ ಗಾಗಿ’ ಎಂದೂ ಬರೆಯಬೇಕಾಗುತ್ತದೆ. ಎಲ್ಲಾ ಒರಿಜಿನಲ್ ಪ್ರತಿಗಳನ್ನು ಸಿದ್ಧವಾಗಿಡಿ. ಏಕೆಂದರೆ ಅಗತ್ಯವಿದ್ದಲ್ಲಿ ನಾವು ಅವುಗಳನ್ನು ಕೇಳಬಹುದು.
ಹಂತ 3 : ಡಿಸ್ಚಾರ್ಜ್ ಮಾಡಿದ ದಿನಾಂಕದಿಂದ 30 ದಿನಗಳ ಒಳಗಾಗಿ ಅಥವಾ ನೀವು ಲಿಂಕ್ ಅನ್ನು ಸ್ವೀಕರಿಸಿದಾಗ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡಿ.
ಹಂತ 4 : ಯಾವುದೇ ಹೆಚ್ಚುವರಿ ಅವಶ್ಯಕತೆಗಳಿದ್ದರೆ ನಾವು ನಿಮಗೆ ತಿಳಿಸುತ್ತೇವೆ.
ಹಂತ 5 : ಕೊನೆಯ ಅಗತ್ಯ ಕ್ಲೈಮ್ ಡಾಕ್ಯುಮೆಂಟ್ನ ಸ್ವೀಕೃತಿಯಾದ 30 ದಿನಗಳ ಒಳಗೆ ನೀವು ಪಾವತಿಯನ್ನು ಸ್ವೀಕರಿಸುತ್ತೀರಿ.
ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ಗಾಗಿ ಅಗತ್ಯವಿರುವ ಡಾಕ್ಯುಮೆಂಟ್ ಗಳು
ನೀವು ಕ್ಯಾಶ್‌ಲೆಸ್ ಕ್ಲೈಮ್ ಅಥವಾ ರಿಇಂಬರ್ಸ್‌ಮೆಂಟ್‌ಯಲ್ಲಿ ಯಾವುದರ ಆಯ್ಕೆ ಮಾಡಿದರೂ, ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಮಾಡುವಾಗ ನೀವು ಅಪ್ಲೋಡ್ ಮಾಡಬೇಕಾಗಬಹುದಾದ ಅಥವಾ ಸಲ್ಲಿಸಬೇಕಾದ ಡಾಕ್ಯುಮೆಂಟ್ ಗಳ ಸಮಗ್ರ ಪಟ್ಟಿ ಇಲ್ಲಿದೆ. ಚಿಂತಿಸಬೇಡಿ, ಡಾಕ್ಯುಮೆಂಟ್‌ಗಳು ಕ್ಲೈಮ್‌ನಿಂದ ಕ್ಲೈಮ್‌ಗೆ ಭಿನ್ನವಾಗಿರುತ್ತವೆ ಆದರೆ ಈ ಪಟ್ಟಿಯು ಸಾಧ್ಯವಿರುವ ಎಲ್ಲವನ್ನೂ ಒಳಗೊಂಡಿದೆ. ನಿಮ್ಮ ಪರಿಸ್ಥಿತಿಯ ಆಧಾರದ ಮೇಲೆ ನಿಮಗೆ ಕೇವಲ ಕೆಲವು ಅಥವಾ ಎಲ್ಲಾ ಡಾಕ್ಯುಮೆಂಟ್ ಗಳ ಅಗತ್ಯವಿರಬಹುದು
ಡಾಕ್ಯುಮೆಂಟ್ ಗಳ ಪಟ್ಟಿ | ಹಾಸ್ಪಿಟಲೈಸೇಷನ್ ನ ಕ್ಲೈಮ್ | ಕ್ರಿಟಿಕಲ್ ಇಲ್‌ನೆಸ್ ಕ್ಲೈಮ್ | ಡೈಲಿ ಹಾಸ್ಪಿಟಲ್ ಕ್ಯಾಶ್ ಕ್ಲೈಮ್ |
ಸರಿಯಾಗಿ ಭರ್ತಿ ಮಾಡಿ ಸಹಿ ಮಾಡಿದ ಫಾರ್ಮ್ | |||
ಡಿಸ್ಚಾರ್ಜ್ ಸಾರಾಂಶ | |||
ಮೆಡಿಕಲ್ ದಾಖಲೆಗಳು (ಅಗತ್ಯದ ಆಧಾರದ ಮೇಲೆ ಐಚ್ಛಿಕ ಡಾಕ್ಯುಮೆಂಟ್ ಗಳನ್ನು ಕೇಳಬಹುದು: ಇನ್ ಡೋರ್ ಕೇಸ್ ಪೇಪರ್‌ಗಳು, ಒಟಿ ಟಿಪ್ಪಣಿಗಳು, ಪಿಎಸಿ ಟಿಪ್ಪಣಿಗಳು ಇತ್ಯಾದಿ) | |||
ಒರಿಜಿನಲ್ ಆಸ್ಪತ್ರೆಯ ಪ್ರಮುಖ ಬಿಲ್ | |||
ಒರಿಜಿನಲ್ ಆಸ್ಪತ್ರೆಯ ಪ್ರಮುಖ ಬಿಲ್ ವಿಂಗಡನೆಯೊಂದಿಗೆ | |||
ಪ್ರಿಸ್ಕ್ರಿಪ್ಷನ್‌ಗಳೊಂದಿಗೆ ಒರಿಜಿನಲ್ ಫಾರ್ಮಸಿ ಬಿಲ್‌ಗಳು (ಆಸ್ಪತ್ರೆಯ ಪೂರೈಕೆಯನ್ನು ಮತ್ತು ಆಸ್ಪತ್ರೆಯ ಹೊರಗೆ ಮಾಡಿದ ವಿಚಾರಣೆಗಳನ್ನು ಹೊರತುಪಡಿಸಿ) | |||
ಸಮಾಲೋಚನೆ ಮತ್ತು ವಿಚಾರಣೆಯ ಪೇಪರ್ ಗಳು | |||
ವಿಚಾರಣೆ ವಿಧಾನಗಳ ಡಿಜಿಟಲ್ ಚಿತ್ರಗಳು/ಸಿಡಿಗಳು (ಅಗತ್ಯವಿದ್ದರೆ) | |||
ಕೆವೈಸಿ (ಫೋಟೋ ಐಡಿ ಕಾರ್ಡ್) ರದ್ದಾದ ಚೆಕ್‌ನೊಂದಿಗೆ ಬ್ಯಾಂಕ್ ವಿವರಗಳು | |||
ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಅಗತ್ಯವಿರುವ ಕೆಲವು ಡಾಕ್ಯುಮೆಂಟ್ ಗಳಿವೆ, ಅವುಗಳೆಂದರೆ: | |||
ಗರ್ಭಧಾರಣೆಯ ಸಂಬಂಧಿತ ಕ್ಲೈಮ್ ಗಳ ಸಂದರ್ಭದಲ್ಲಿ- ಪ್ರಸವಪೂರ್ವ ದಾಖಲೆ, ಜನನ ಡಿಸ್ಚಾರ್ಜ್ ಸಾರಾಂಶ | |||
ಅಪಘಾತ ಅಥವಾ ಪೊಲೀಸರ ಉಪಸ್ಥಿತಿಯ ಸಂದರ್ಭದಲ್ಲಿ- ಎಂ ಎಲ್ ಸಿ/ಎಫ್ಐಆರ್ ವರದಿ | |||
ಮರಣ ಅಥವಾ ಅಂಗವೈಕಲ್ಯದ ಸಂದರ್ಭದಲ್ಲಿ- ಮರಣೋತ್ತರ ಪರೀಕ್ಷೆಯ ವರದಿ, ಮರಣ ಪ್ರಮಾಣಪತ್ರ ಅಥವಾ ಅಂಗವೈಕಲ್ಯ ಪ್ರಮಾಣಪತ್ರ ಒರಿಜಿನಲ್ ಇನ್ವಾಯ್ಸ್/ಸ್ಟಿಕ್ಕರ್ (ಅನ್ವಯಿಸಿದರೆ) | |||
ನೋಡಿಕೊಳ್ಳುವ ವೈದ್ಯರ ಸರ್ಟಿಫಿಕೇಟ್ (ಅನ್ವಯಿಸಿದರೆ) |
ಕ್ಯಾಶ್‌ಲೆಸ್ ಸೌಲಭ್ಯಕ್ಕಾಗಿ ನೆಟ್ವರ್ಕ್ ಆಸ್ಪತ್ರೆಗಳು
ಡಿಜಿಟ್ ವೆಬ್‌ಸೈಟ್‌ನಲ್ಲಿ ತೋರಿಸಿರುವ ಪಟ್ಟಿಯಲ್ಲಿ ಸೇರಿಸಲಾದ ಆಸ್ಪತ್ರೆಗಳನ್ನು ನೈಜ ಸಮಯದಲ್ಲಿ ಅಪ್ಡೇಟ್ ಮಾಡಲಾಗುವುದಿಲ್ಲ, ಅಪ್ಡೇಟೆಡ್ ಮಾಹಿತಿಗಾಗಿ ದಯವಿಟ್ಟು ಕೆಳಗಿನ ಟಿಪಿಎ ಪಟ್ಟಿಗಳು ಮತ್ತು ಆಯಾ ಟಿಪಿಎ ಗಳನ್ನು ಪರಿಶೀಲಿಸಿ.
ಟಿಪಿಎ ಹೆಸರು |
ಪಾಲಿಸಿಯ ವಿಧ |
ಲಿಂಕ್ |
ಮೆಡಿ ಅಸಿಸ್ಟ್ ಇನ್ಶುರೆನ್ಸ್ ಟಿಪಿಎ ಪ್ರೈವೇಟ್ ಲಿಮಿಟೆಡ್.. |
ರೀಟೈಲ್ ಮತ್ತು ಗ್ರೂಪ್ |
|
ಪ್ಯಾರಾಮೌಂಟ್ ಹೆಲ್ತ್ ಸರ್ವೀಸಸ್ ಮತ್ತು ಇನ್ಶುರೆನ್ಸ್ ಟಿಪಿಎ ಪ್ರೈವೇಟ್ ಲಿಮಿಟೆಡ್. |
ಗ್ರೂಪ್ |
|
ಹೆಲ್ತ್ ಇಂಡಿಯಾ ಇನ್ಶೂರೆನ್ಸ್ ಟಿಪಿಎ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್. |
ಗ್ರೂಪ್ |
|
ಗುಡ್ ಹೆಲ್ತ್ ಇನ್ಶೂರೆನ್ಸ್ ಟಿಪಿಎ ಲಿಮಿಟೆಡ್. |
ಗ್ರೂಪ್ |
|
ಫ್ಯಾಮಿಲಿ ಹೆಲ್ತ್ ಪ್ಲಾನ್ ಇನ್ಶೂರೆನ್ಸ್ ಟಿಪಿಡಿ ರ್ವಿಸಸ್ ಲಿಮಿಟೆಡ್(ಎಫ್ ಎಚ್ ಪಿ ಎಲ್). |
ಗ್ರೂಪ್ |
ನಾವು ಕೆಲವು ಆಸ್ಪತ್ರೆಗಳೊಂದಿಗೆ ನೇರ ಟೈ-ಅಪ್ ವ್ಯವಸ್ಥೆಯನ್ನು ಮಾಡಿದ್ದೇವೆ. ಇವುಗಳು ನಮ್ಮ TPA ಗಳೊಂದಿಗೆ ನಾವು ನಿರ್ವಹಿಸುವ ಆಸ್ಪತ್ರೆ ನೆಟ್‌ವರ್ಕ್ ಹೊರತಾಗಿವೆ.