ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
ಇಂದು, ಭಾರತದಲ್ಲಿ ಆರೋಗ್ಯ ಮತ್ತು ಕ್ಷೇಮ ಅತಿ ಚರ್ಚಿತ ಪದಗಳಾಗಿವೆ. ಸಮಗ್ರ ಆರೋಗ್ಯದ ಕುರಿತಾಗಿ ಹೆಚ್ಚಿನ ಅರಿವು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಲು ಜನರನ್ನು ಉತ್ತೇಜಿಸುತ್ತದೆ. ಆದಾಗ್ಯೂ, ಸೂಕ್ತವಾದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಇಲ್ಲದಿರುವುದು ಆರೋಗ್ಯ ಪರಿಸ್ಥಿತಿಗಳ ವಿರುದ್ಧದ ನಿಮ್ಮ ಹೋರಾಟದ ಕೊರತೆಯಾಗಲಿದೆ.
ಇನ್ಶೂರೆನ್ಸ್ ಸುತ್ತ ಇರಬಹುದಾದ ಸಂದೇಹಗಳು ಪ್ರಾಥಮಿಕವಾಗಿ ತಪ್ಪು ಮಾಹಿತಿಯಿಂದ ಉಂಟಾಗುತ್ತದೆ. ನಾವು ನಿಮಗೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳ ಕುರಿತು ಈ ಮಾರ್ಗದರ್ಶಿಯನ್ನು ನೀಡುತ್ತಿದ್ದೇವೆ. ನಾವು ಫಿಕ್ಸ್ಡ್ ಬೆನಿಫಿಟ್ ಹೆಲ್ತ್ ಇನ್ಶೂರೆನ್ಸ್ ಮತ್ತು ಇನ್ಡೆಮ್ನಿಟಿ ಮೆಡಿಕಲ್ ಇನ್ಶೂರೆನ್ಸ್ ಮತ್ತು ಅದರ ಎಲ್ಲಾ ಜಟಿಲತೆಗಳನ್ನು ಕವರ್ ಮಾಡುತ್ತೇವೆ.
ಆದ್ದರಿಂದ, ಈಗ ಶುರು ಮಾಡೋಣ!
ಫಿಕ್ಸ್ಡ್ ಬೆನಿಫಿಟ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್, ಇನ್ಶೂರ್ಡ್ ಆಗಿದ್ದ ಸಂದರ್ಭದಲ್ಲಿ ಪೂರ್ವನಿರ್ಧರಿತ ಘಟನೆಗೆ ನಿರ್ದಿಷ್ಟ ನಿಗದಿತ ಮೊತ್ತವನ್ನು ಪಾವತಿಸುತ್ತದೆ. ಪಾಲಿಸಿ ನಿಯಮಗಳ ಪ್ರಕಾರ ಇನ್ಶೂರೆನ್ಸ್ ಮಾಡಿದ ಘಟನೆಗೆ ಅವನು/ಅವಳು ಒಳಗಾದರೆ ಪ್ಲಾನ್ ಅದರ ಇನ್ಶೂರರ್ ಖಾತರಿಪಡಿಸಿದ ಮತ್ತು ಫಿಕ್ಸ್ಡ್ ಅಮೌಂಟ್ ಅನ್ನು ನೀಡುತ್ತದೆ.
ಇಲ್ಲಿ, ಇನ್ಶೂರ್ಡ್ ಘಟನೆಯು ಮೆಡಿಕಲ್ ಪರಿಸ್ಥಿತಿಗಳು ಅಥವಾ ಹೃದಯರಕ್ತನಾಳದ ಕಾಯಿಲೆಗಳು, ಮೂತ್ರಪಿಂಡದ ಕಾರ್ಯನಿರ್ವಹಣೆಯ ಸಮಸ್ಯೆಗಳು ಮತ್ತು ಕ್ಯಾನ್ಸರ್ ಮುಂತಾದ ಕ್ರಿಟಿಕಲ್ ಇಲ್ನೆಸ್ ಗಳಾಗಿರಬಹುದು.
ಇದಲ್ಲದೆ, ಫಿಕ್ಸ್ಡ್ ಬೆನಿಫಿಟ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಇನ್ಶೂರ್ಡ್ ಗೆ ಅವನು/ಅವಳ ಹಾಸ್ಪಿಟಲೈಸೇಷನ್ ಸಮಯದಲ್ಲಿ ಮಾಡಿದ ನಿಜವಾದ ಅಥವಾ ಉದ್ದೇಶಿತ ವೆಚ್ಚಗಳನ್ನು ಲೆಕ್ಕಿಸದೆ ಒಂದು ದೊಡ್ಡ ಅಮೌಂಟ್ ಅನ್ನು ಕ್ಲೈಮ್ ಆಗಿ ನೀಡುತ್ತದೆ. ಆದ್ದರಿಂದ, ಕ್ಲೈಮ್ ಅಮೌಂಟ್ ಬಳಕೆಯು ಸಂಪೂರ್ಣವಾಗಿ ಪಾಲಿಸಿಹೋಲ್ಡರ್ ನ ಹಕ್ಕು ಆಗಿದೆ.
ಮೆಡಿಕಲ್ ಎಮರ್ಜೆನ್ಸಿಗಳು ಒಬ್ಬರ ಹಾಸ್ಪಿಟಲೈಸೇಷನ್ ಅವಧಿಯನ್ನು ಹೆಚ್ಚಿಸುತ್ತವೆ ಹಾಗೂ ಹೆಚ್ಚಿನ ಪ್ರಮಾಣದ ನಿಧಿಯ ಅಗತ್ಯವಿರುತ್ತದೆ. ಇದು ವಿಶೇಷವಾಗಿ ಇತ್ತೀಚೆಗೆ ಹೆಚ್ಚುತ್ತಿರುವ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಹೆಚ್ಚು ಸಂಬಂಧಿಸುತ್ತದೆ.
ಭಾರತವು ವರ್ಷಗಳಲ್ಲಿ ಕ್ರಿಟಿಕಲ್ ಇಲ್ನೆಸ್ ಗಳ ಪ್ರಕರಣಗಳಲ್ಲಿ ಉಲ್ಬಣಗೊಂಡಿದೆ.
ಹೆಚ್ಚುವರಿಯಾಗಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) 2020ರ ವರದಿಯು ಕ್ರಿಟಿಕಲ್ ಇಲ್ನೆಸ್ ಗಳಿಂದ ಉಂಟಾಗುವ ಸಾವುಗಳು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುತ್ತವೆ ಎಂದು ಸೂಚಿಸುತ್ತದೆ. ಆದ್ದರಿಂದ, ನಿಮ್ಮ ಪ್ರೀತಿಪಾತ್ರರನ್ನು ಅಂತಹ ಕಾಯಿಲೆಗಳಿಂದ ರಕ್ಷಿಸಲು ನಾವು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಸಮಯ ಇದು.
ಇದಲ್ಲದೆ, ಇಲ್ಲಿ ಫಿಕ್ಸ್ಡ್ ಬೆನಿಫಿಟ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳು ವಿಶೇಷವಾಗಿ ನೆರವಿಗೆ ಬರುತ್ತವೆ.
ಕ್ರಿಟಿಕಲ್ ಇಲ್ನೆಸ್ ಪಾಲಿಸಿಯ ಸಂದರ್ಭದಲ್ಲಿ, ಈ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ತನ್ನ ಪಾಲಿಸಿಹೋಲ್ಡರ್ ಗೆ ಪ್ಲಾನ್ ಅಡಿಯಲ್ಲಿ ಸೇರ್ಪಡೆಗೊಂಡ ಯಾವುದೇ ಕ್ರಿಟಿಕಲ್ ಇಲ್ನೆಸ್ ಗಳಿಗೆ ಇನ್ಶೂರ್ಡ್ ವ್ಯಕ್ತಿಗಳ ಕಾಂಟ್ರಾಕ್ಟ್ ನಲ್ಲಿನ ಅಶ್ಯೂರ್ಡ್ ಅಮೌಂಟ್ ಅನ್ನು ಪಾವತಿಸುತ್ತದೆ. ಅದನ್ನು ಉದಾಹರಣೆಯ ಮೂಲಕ ವಿವರಿಸುತ್ತೇವೆ ನೋಡಿ:
ಶ್ರೀಮತಿ ವರ್ಮಾ ಅವರು ರೂ.10 ಲಕ್ಷಗಳ ಇನ್ಶೂರೆನ್ಸ್ ಮೊತ್ತದೊಂದಿಗೆ ಕ್ರಿಟಿಕಲ್ ಇಲ್ನೆಸ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗೆ ಸೈನ್ ಹಾಕಿದ್ದಾರೆ ಎಂದು ಅಂದುಕೊಳ್ಳೋಣ. ಪಾಲಿಸಿಯ ನಿಯಮಗಳೊಳಗೆ, ಪ್ಲಾನ್ ನಡಿಯಲ್ಲಿ ಸೇರಿಸಲಾದ ಕ್ರಿಟಿಕಲ್ ಕಾಯಿಲೆಗಳಲ್ಲಿ ಒಂದು ಆಕೆಯನ್ನು ಬಾಧಿಸಿತ್ತಿರುವುದು ತಿಳಿದುಬರುತ್ತದೆ. ಆದ್ದರಿಂದ, ಅವಳು ಮಾಡುವ ವೆಚ್ಚವನ್ನು ಲೆಕ್ಕಿಸದೆ ಕ್ಲೈಮ್ ಪಾವತಿಯಾಗಿ ರೂ.10 ಲಕ್ಷಗಳನ್ನು ಅವಳು ಪಡೆಯುತ್ತಾಳೆ. ಪ್ಲಾನ್ ಅಡಿಯಲ್ಲಿ ಇನ್ಶೂರೆನ್ಸ್ ಮಾಡಿದ ಒಟ್ಟು ಸಮ್ ಇನ್ಶೂರ್ಡ್ ಅನ್ನು ಅವಳು ಸ್ವೀಕರಿಸಿದರೆ, ಅಲ್ಲಿಗೆ ಪಾಲಿಸಿಯನ್ನು ಕೊನೆಗೊಳಿಸಲಾಗುತ್ತದೆ.
ಇದಲ್ಲದೆ, ಫಿಕ್ಸ್ಡ್ ಬೆನಿಫಿಟ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಆಯ್ಕೆಮಾಡುವಾಗ, ನಿಮ್ಮ ಯೋಜನೆಯು ಸಂಭಾವ್ಯ ರೋಗಗಳ ಕವರೇಜ್ ಅನ್ನು ಪರಿಣಾಮಕಾರಿಯಾಗಿ ಒಳಗೊಳ್ಳುತ್ತದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ಆದ್ದರಿಂದ, ನೀವು ಕನಿಷ್ಠ ಕೆಲವು ಸಾಮಾನ್ಯ ಕ್ರಿಟಿಕಲ್ ಇಲ್ನೆಸ್ ಗಳನ್ನು ಕವರ್ ಮಾಡುವ ಪ್ಲಾನ್ ಅನ್ನು ಆರಿಸಿಕೊಳ್ಳುವಂತೆ ನಾವು ಸಲಹೆ ನೀಡುತ್ತೇವೆ.
ಹೆಚ್ಚುವರಿಯಾಗಿ, ಗಗನಕ್ಕೇರುತ್ತಿರುವ ಮೆಡಿಕಲ್ ಕೇರ್ ವೆಚ್ಚದಿಂದಾಗಿ ನೀವು ಉತ್ತಮವಾದ ಯೋಜಿತ ಹಣಕಾಸಿನ ವ್ಯವಸ್ಥೆಯನ್ನು ಹೊಂದಿರಬೇಕು. ಇಲ್ಲಿ, ನಿಮ್ಮ ಅಸ್ತಿತ್ವದಲ್ಲಿರುವ ಹೆಲ್ತ್ ಕವರ್ ನ ವರ್ಧನೆಯಾಗಿ ನೀವು ಫಿಕ್ಸ್ಡ್ ಬೆನಿಫಿಟ್ ಪ್ಲಾನ್ ಕುರಿತು ಯೋಚಿಸಬಹುದು.
ಇದು ಜೀವನೋಪಾಯದ ನಷ್ಟ ಅಥವಾ ಹಾಸ್ಪಿಟಲೈಸೇಷನ್ ಸಮಯದಲ್ಲಿ ಮತ್ತು ಚೇತರಿಸಿಕೊಳ್ಳುವ ಸಮಯದಲ್ಲಿ ಗಳಿಕೆಯ ಕೊರತೆಯಿಂದಾಗಿ ಉಂಟಾಗಬಹುದಾದ ನಾನ್-ಮೆಡಿಕಲ್ ವೆಚ್ಚಗಳನ್ನು ಸಹ ಪೂರೈಸುತ್ತದೆ. ಇದಲ್ಲದೆ, ಜೆನೆಟಿಕ್ಸ್ ಅಥವಾ ಜೀವನಶೈಲಿ ಇತ್ಯಾದಿಗಳಿಂದ ನೀವು ಕೆಲವು ಮೆಡಿಕಲ್ ಪರಿಸ್ಥಿತಿಗಳಿಗೆ ಗುರಿಯಾಗಿದ್ದರೆ ಈ ಪ್ಲಾನ್ ನಿಮಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
ಹೆಸರೇ ಸೂಚಿಸುವಂತೆ, ಹಾಸ್ಪಿಟಲೈಸೇಷನ್ ವೆಚ್ಚಗಳ ವಿರುದ್ಧ ಇನ್ಡೆಮ್ನಿಟಿ ಮೆಡಿಕಲ್ ಇನ್ಶೂರೆನ್ಸ್ ಪ್ಲಾನ್ ತನ್ನ ಪಾಲಿಸಿಹೋಲ್ಡರ್ ಗೆ ನಷ್ಟ ಪರಿಹಾರವನ್ನು ನೀಡುತ್ತದೆ. ಈ ಪ್ಲಾನ್ ಹಾಸ್ಪಿಟಲೈಸೇಷನ್ ಸಮಯದಲ್ಲಿ ಇನ್ಶೂರ್ಡ್ ಮಾಡಿದ ನಿಜವಾದ ವೆಚ್ಚಗಳನ್ನು ರೀ-ಇಂಬರ್ಸ್ ಮಾಡುತ್ತದೆ. ಆದಾಗ್ಯೂ, ಪ್ಲಾನ್ ಅದರ ಅಡಿಯಲ್ಲಿ ಬರುವ ಒಟ್ಟು ಸಮ್ ಅಶ್ಯೂರ್ಡ್ ವರೆಗಿನ ಈ ವೆಚ್ಚಗಳನ್ನು ರಿ-ಇಂಬರ್ಸ್ ಮಾಡುತ್ತದೆ. ಈ ಪ್ಲಾನ್ ಗೆ ಉತ್ತಮ ಉದಾಹರಣೆಯೆಂದರೆ ಮೆಡಿಕ್ಲೈಮ್, ಇದು ಜನಪ್ರಿಯ ಇನ್ಶೂರೆನ್ಸ್ ಉತ್ಪನ್ನವಾಗಿದೆ.
ಈ ಯೋಜನೆಗಳು ಕ್ರಿಟಿಕಲ್ ಇಲ್ನೆಸ್ ಪಾಲಿಸಿ, ಡೈಲಿ ಹಾಸ್ಪಿಟಲ್ ಕ್ಯಾಶ್ ಪಾಲಿಸಿ ಮತ್ತು ಪರ್ಸನಲ್ ಆಕ್ಸಿಡೆಂಟ್ ಪಾಲಿಸಿಗಳಂತಹ ಪಾಲಿಸಿಗಳ ಒಂದು ಶ್ರೇಣಿಯೊಂದಿಗೆ ಬರುತ್ತವೆ. ಪರಿಣಾಮವಾಗಿ, ಅವರು ವಿವಿಧ ರೀತಿಯ ಮೆಡಿಕಲ್ ಅಗತ್ಯಗಳನ್ನು ಪೂರೈಸುತ್ತಾರೆ.
ಮೇಲಾಗಿ, ಇನ್ಶೂರರ್ ಕ್ಯಾಶ್ ಲೆಸ್ ಹಾಸ್ಪಿಟಲೈಸೇಷನ್ ಪ್ಲಾನ್ ಅನ್ನು ಆರಿಸಿಕೊಂಡರೆ, ಅವನು/ಅವಳು ಒಂದು ನಿರ್ದಿಷ್ಟ ನಿಗದಿತ ಅಮೌಂಟ್ ಅನ್ನು ಮಾತ್ರ ಪಾವತಿಸಬೇಕಾಗುತ್ತದೆ ಮತ್ತು ಉಳಿದ ಹಣವನ್ನು ಇನ್ಶೂರರ್ ನೋಡಿಕೊಳ್ಳುತ್ತಾರೆ. ಆದಾಗ್ಯೂ, ಈ ವ್ಯಕ್ತಿಯು ಕ್ಯಾಶ್ ಲೆಸ್ ಹಾಸ್ಪಿಟಲೈಸೇಷನ್ ಪ್ಲಾನ್ ಅನ್ನು ಹೊಂದಿಲ್ಲದಿದ್ದರೆ, ಅವನು ಎಲ್ಲಾ ರಸೀದಿಗಳು ಮತ್ತು ಬಿಲ್ಗಳನ್ನು ಇನ್ಶೂರರ್ ರಿಗೆ ಸಬ್ಮಿಟ್ ಮಾಡಬೇಕಾಗುತ್ತದೆ. ಈ ದಾಖಲೆಗಳ ಆಧಾರದ ಮೇಲೆ, ಇನ್ಶೂರೆನ್ಸ್ ಪೂರೈಕೆದಾರರು ಇನ್ಶೂರ್ಡ್ ವ್ಯಕ್ತಿಗೆ ರೀ-ಇಂಬರ್ಸ್ ಮಾಡುತ್ತಾರೆ.
ಈ ಹೆಲ್ತ್ ಪ್ಲಾನ್ ಗಳ ಇನ್ಶೂರರ್ ಗಳು ಸಾಮಾನ್ಯವಾಗಿ ಹಲವಾರು ಮೆಡಿಕಲ್ ಕೇಂದ್ರಗಳು ಮತ್ತು ಪಾಲುದಾರ ಆಸ್ಪತ್ರೆಗಳೊಂದಿಗೆ ಟೈ-ಅಪ್ಗಳನ್ನು ಹೊಂದಿರುತ್ತಾರೆ. ಇದರ ಪರಿಣಾಮವಾಗಿ, ಹಾಸ್ಪಿಟಲೈಸೇಷನ್ ಸಂದರ್ಭದಲ್ಲಿ ಇನ್ಡೆಮ್ನಿಟಿ ಆಧಾರಿತ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳು ಹೆಚ್ಚಿನ ಮಟ್ಟದ ಹೊಂದಾಣಿಕೆ ವ್ಯವಸ್ಥೆಯನ್ನು ನೀಡುತ್ತವೆ. ಆದ್ದರಿಂದ, ಪಾಲಿಸಿಹೋಲ್ಡರ್ ಗಳು ಆರೈಕೆಯ ವೆಚ್ಚದ ಬಗ್ಗೆ ಚಿಂತಿಸದೆ ನಿರ್ದಿಷ್ಟ ಮೆಡಿಕಲ್ ಕೇಂದ್ರ ಅಥವಾ ಆಸ್ಪತ್ರೆಗೆ ಭೇಟಿ ನೀಡಲು ಅನುಕೂಲಕರ ಆಯ್ಕೆ ಮಾಡಬಹುದು.
ಹೆಚ್ಚುವರಿಯಾಗಿ, ಈ ಪ್ಲಾನ್ ಗಳು ಹಾಸ್ಪಿಟಲೈಸೇಷನ್ ನ ವಾಸ್ತವಿಕ ವೆಚ್ಚವನ್ನು ಕವರ್ ಮಾಡುವ ಜೊತೆಗೆ ವಿವಿಧ ರೀತಿಯ ಇಲ್ನೆಸ್ಗಳು ಮತ್ತು ಚಿಕಿತ್ಸೆಗಳನ್ನು ಕವರ್ ಮಾಡುತ್ತವೆ. ಕೆಳಗಿನ ಉದಾಹರಣೆಯು ಹಾಸ್ಪಿಟಲ್ ಇನ್ಡೆಮ್ನಿಟಿ ಇನ್ಶೂರೆನ್ಸ್ ಕವರೇಜ್ ಪ್ರಯೋಜನಗಳನ್ನು ಪರಿಣಾಮಕಾರಿಯಾಗಿ ಸಂಕ್ಷಿಪ್ತಗೊಳಿಸುತ್ತದೆ:
ಶ್ರೀ ಶರ್ಮಾ ಅವರು ರೂ.10 ಲಕ್ಷಗಳ ಇನ್ಶೊರೆನ್ಸ್ ಅಮೌಂಟ್ ನೊಂದಿಗೆ ಇನ್ಡೆಮ್ನಿಟಿ ಆಧಾರಿತ ಹೆಲ್ತ್ ಪ್ಲಾನ್ ಗೆ ಸಹಿ ಹಾಕುತ್ತಾರೆ ಎಂದುಕೊಳ್ಳೋಣ. ಪಾಲಿಸಿ ನಿಯಮಗಳ ಪ್ರಕಾರ, ಅವರು ಹಾಸ್ಪಿಟಲೈಸೇಷನ್ ಆಗುತ್ತಾರೆ ಮತ್ತು ರೂ.3.5 ಲಕ್ಷಗಳ ಬಿಲ್ ಆಗುತ್ತದೆ. ಇಲ್ಲಿ, ಶ್ರೀ. ಶರ್ಮಾ ಅವರು ಆಸ್ಪತ್ರೆಯಲ್ಲಿ ತಂಗಿದ್ದ ಸಮಯದಲ್ಲಿ ಮಾಡಿದ ವೆಚ್ಚಗಳನ್ನು ವಿವರಿಸುವ ಎಲ್ಲಾ ಆಸ್ಪತ್ರೆ ಬಿಲ್ಗಳನ್ನು ಸಬ್ಮಿಟ್ ಮಾಡುತ್ತಾರೆ. ಈ ದಾಖಲೆಗಳನ್ನು ಪರಿಶೀಲಿಸಿದ ನಂತರ, ಅವನ ಮೆಡಿಕಲ್ ಇನ್ಶೂರೆನ್ಸ್ ಕಂಪನಿಯು ರೂ.3.5 ಲಕ್ಷಗಳನ್ನು ಪಾವತಿಸುತ್ತದೆ.
ಈಗ ನೀವು ಈ ಎರಡು ಹೆಲ್ತ್ ಪ್ಲಾನ್ ಗಳೊಂದಿಗೆ ಪರಿಚಿತರಾಗಿರುವಿರಿ, ಕೆಳಗಿನ ಕೋಷ್ಟಕದ ಮೂಲಕ ಅವುಗಳನ್ನು ಹೋಲಿಕೆ ಮಾಡೋಣ:
ಹೋಲಿಕೆಯ ಆಧಾರ |
ಫಿಕ್ಸ್ಡ್ ಬೆನಿಫಿಟ್ ಹೆಲ್ತ್ ಪ್ಲಾನ್ |
ಇನ್ಡೆಮ್ನಿಟಿ ಆಧಾರಿತ ಹೆಲ್ತ್ ಪ್ಲಾನ್ |
ಉಪಯುಕ್ತತೆ |
ಈ ಪ್ಲಾನ್ ಪೂರ್ವನಿರ್ಧರಿತ ಮೆಡಿಕಲ್ ಪರಿಸ್ಥಿತಿಗಳು ಅಥವಾ ಕ್ರಿಟಿಕಲ್ ಇಲ್ನೆಸ್ಗಳಿಗೆ ಸಮ್ ಇನ್ಶೂರ್ಡ್ ಅನ್ನು ಪಾವತಿಸುತ್ತದೆ. |
ಈ ವಿಧದ ಹೆಲ್ತ್ ಪ್ಲಾನ್ ಪೂರೈಕೆದಾರರು ಮೆಡಿಕಲ್ ಚಿಕಿತ್ಸೆಯಲ್ಲಿ ಖರ್ಚು ಮಾಡಿದ ಹಣಕ್ಕೆ ಒಬ್ಬ ವ್ಯಕ್ತಿಗೆ ಸಮ್ ಇನ್ಶೂರ್ಡ್ ವರೆಗಿನ ರೀಇಂಬರ್ಸ್ಮೆಂಟ್ ಅನ್ನು ಒದಗಿಸುತ್ತಾರೆ. |
ಮೂಲಭೂತ ಅವಶ್ಯಕತೆಗಳು |
ಪಾಲಿಸಿಹೋಲ್ಡರ್ ಪಾಲಿಸಿ ನಿಯಮಗಳ ಪ್ರಕಾರ ಪೂರ್ವನಿರ್ಧರಿತ ಮೆಡಿಕಲ್ ಸ್ಥಿತಿಯನ್ನು ಹೊಂದುವ ಅಗತ್ಯವಿದೆ, ಇನ್ಶೂರ್ಡ್ ಅಮೌಂಟ್ ಅನ್ನು ಕ್ಲೈಮ್ ಮಾಡಲು, ಒಬ್ಬರು ಪ್ರಮಾಣೀಕೃತ ವೈದ್ಯರಿಂದ ರೋಗನಿರ್ಣಯದ ವರದಿಯನ್ನು ಒದಗಿಸಬೇಕು. |
ಇನ್ ಡೆಮ್ನಿಟಿ ಮೆಡಿಕಲ್ ಇನ್ಶೂರೆನ್ಸ್ ಗೆ ಸಾಮಾನ್ಯವಾಗಿ ಇನ್ಶೂರ್ಡ್ ಹಾಸ್ಪಿಟಲೈಸ್ ಆಗಬೇಕು ಅಥವಾ ಮೆಡಿಕಲ್ ಚಿಕಿತ್ಸೆಗೆ (ಡೇ-ಕೇರ್ ವಿಧಾನ ಅಥವಾ ರೋಗನಿರ್ಣಯ ಪರೀಕ್ಷೆಗಳು) ಒಳಗಾಗುವುದು ಅಗತ್ಯವಾಗಿರುತ್ತದೆ, ಕ್ಲೈಮ್ ಮಾಡಲು, ಪಾಲಿಸಿಹೋಲ್ಡರ್, ಇನ್ಶೂರರ್ ಅಥವಾ ಇನ್ಶೂರೆನ್ಸ್ ಕಂಪನಿಗೆ ಪ್ರತಿ ವೆಚ್ಚವನ್ನು ವಿವರಿಸುವ ಎಲ್ಲಾ ಆಸ್ಪತ್ರೆ ಬಿಲ್ಗಳನ್ನು ಒದಗಿಸಬೇಕು. ಇದಲ್ಲದೆ, ಅವನು/ಅವಳು ಕ್ಲೈಮ್ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಬೇಕು ಮತ್ತು ಸಹಿ ಮಾಡಬೇಕು. ಈ ಫಾರ್ಮ್ಗೆ ಹಾಸ್ಪಿಟಲೈಸೇಷನ್ ಅವಧಿ, ಡಿಸ್ಚಾರ್ಜ್ ದಿನಾಂಕ ಇತ್ಯಾದಿಗಳಂತಹ ಹಲವಾರು ಪ್ರಮುಖ ವಿವರಗಳ ಅಗತ್ಯವಿದೆ. |
ಪ್ಲಾನ್ ನ ವೈಶಿಷ್ಟ್ಯವನ್ನು ಹೈಲೈಟ್ ಮಾಡುವುದು |
ಪಾಲಿಸಿಹೋಲ್ಡರ್ ಪಾಲಿಸಿ ನಿಯಮಗಳ ಪ್ರಕಾರ ಪೂರ್ವನಿರ್ಧರಿತ ಮೆಡಿಕಲ್ ಸ್ಥಿತಿಯನ್ನು ಹೊಂದುವ ಅಗತ್ಯವಿದೆ, ಇನ್ಶೂರ್ಡ್ ಅಮೌಂಟ್ ಅನ್ನು ಕ್ಲೈಮ್ ಮಾಡಲು, ಒಬ್ಬರು ಪ್ರಮಾಣೀಕೃತ ವೈದ್ಯರಿಂದ ರೋಗನಿರ್ಣಯದ ವರದಿಯನ್ನು ಒದಗಿಸಬೇಕು. ಒಟ್ಟು ಮೊತ್ತದ ಪಾವತಿಯನ್ನು ನೀಡುವ ಮೂಲಕ ಕ್ಯಾಶ್ ಫ್ಲೋ ಅನ್ನು ಹೆಚ್ಚಿಸುತ್ತದೆ. ಕ್ರಿಟಿಕಲ್ ಇಲ್ನೆಸ್ಗಳ ಸಂದರ್ಭದಲ್ಲಿ ಚಿಕಿತ್ಸೆಗೆ ಗಣನೀಯ ಹಣದ ಅಗತ್ಯವಿರುವವರಿಗೆ ಈ ಪಾವತಿಯು ದೊಡ್ಡ ಸಂಪನ್ಮೂಲವಾಗಿರುತ್ತದೆ, ಈ ಪ್ಲಾನ್ ಚಿಕಿತ್ಸೆ ಮತ್ತು ಚೇತರಿಕೆಯ ಸಮಯದಲ್ಲಿ ಜೀವನೋಪಾಯ ಅಥವಾ ಗಳಿಕೆಯ ನಷ್ಟಕ್ಕೆ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಪರಿಣಾಮವಾಗಿ, ಇದು ಇನ್ಶೂರ್ಡ್ ಗೆ ಮನೆಯ ವೆಚ್ಚಗಳು, ಶುಶ್ರೂಷಾ ವೆಚ್ಚಗಳು ಮತ್ತು ಮಕ್ಕಳ ಶಿಕ್ಷಣದ ಹಣಕಾಸು ಕವರ್ ಮಾಡಲು ಅನುಮತಿಸುತ್ತದೆ, ನಿರ್ದಿಷ್ಟ ಮೆಡಿಕಲ್ ಸ್ಥಿತಿಗೆ ಕವರೇಜ್ ಪಡೆಯಲು ಫಿಕ್ಸ್ಡ್ ಬೆನಿಫಿಟ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳು ಉಪ-ಲಿಮಿಟ್ ಗಳನ್ನು ಹೊಂದಿಲ್ಲ, ಕ್ಲೈಮ್ಗಾಗಿ ದಾಖಲಾತಿ ಪ್ರಕ್ರಿಯೆಯು ಇನ್ಡೆಮ್ನಿಟಿ ಮೆಡಿಕಲ್ ಇನ್ಶೂರೆನ್ಸ್ ಗಿಂತ ಸರಳ ಮತ್ತು ಸುಲಭವಾಗಿದೆ. ಈ ಪ್ಲಾನ್ ಗಳು ವಿವಿಧ ಮೆಡಿಕಲ್ ಅಗತ್ಯಗಳನ್ನು ಪೂರೈಸುವ ಪಾಲಿಸಿಗಳ ಶ್ರೇಣಿಯೊಂದಿಗೆ ಬರುತ್ತವೆ. |
ಇದು ವ್ಯಾಪಕ ಶ್ರೇಣಿಯ ಕಾಯಿಲೆಗಳು ಮತ್ತು ಮೆಡಿಕಲ್ ಚಿಕಿತ್ಸೆಗಳಿಗೆ ವ್ಯಾಪಕ ಕವರೇಜ್ ಅನ್ನು ನೀಡುತ್ತದೆ, ಇನ್ಶೂರರ್ ಯಾವುದೇ ವರ್ಷದಲ್ಲಿ ಅವನು/ಅವಳು ಸಂಪೂರ್ಣ ಸಮ್ ಇನ್ಶೂರ್ಡ್ ಅನ್ನು ಬಳಸಿಕೊಳ್ಳುವವರೆಗೆ ಬಹು ಕ್ಲೈಮ್ಗಳನ್ನು ಸಬ್ಮಿಟ್ ಮಾಡಬಹುದು, ಇದು ಕೆಲವು ಸಂದರ್ಭಗಳಲ್ಲಿ ಕ್ಯಾಶ್ ಲೆಸ್ ಸೌಲಭ್ಯದ ಹೆಚ್ಚುವರಿ ಪ್ರಯೋಜನದೊಂದಿಗೆ ವಿವಿಧ ಮೆಡಿಕಲ್ ಕೇಂದ್ರಗಳು ಮತ್ತು ಆಸ್ಪತ್ರೆಗಳ ನಡುವೆ ಆಯ್ಕೆ ಮಾಡುವ ಸೌಲಭ್ಯವನ್ನು ಒದಗಿಸುತ್ತದೆ. ಫಿಕ್ಸ್ಡ್ ಇನ್ಡೆಮ್ನಿಟಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳ ಅಡಿಯಲ್ಲಿ ಪ್ರೀಮಿಯಂಗಳು ಸಾಮಾನ್ಯವಾಗಿ ವೆಚ್ಚ-ಪರಿಣಾಮಕಾರಿಯಾಗಿರುತ್ತವೆ. ಇದಲ್ಲದೆ, ಪ್ರೀಮಿಯಂ ಅಮೌಂಟ್, ಪಾಲಿಸಿಹೋಲ್ಡರ್ ವಯಸ್ಸು, ಅವನ/ಅವಳ ಪೂರ್ವ ಅಸ್ತಿತ್ವದಲ್ಲಿರುವ ಕಾಯಿಲೆಗಳು ಮತ್ತು ಇತರ ಅಂಶಗಳ ಜೊತೆಗೆ ಪಾಲಿಸಿಯ ವೈಶಿಷ್ಟ್ಯಗಳನ್ನು ಅವಲಂಬಿಸಿರುತ್ತದೆ. |
ಪ್ಲಾನ್ ನ ಮಿತಿ |
ಇದು ವ್ಯಾಪಕ ಶ್ರೇಣಿಯ ಕಾಯಿಲೆಗಳು ಮತ್ತು ಮೆಡಿಕಲ್ ಚಿಕಿತ್ಸೆಗಳಿಗೆ ವ್ಯಾಪಕ ಕವರೇಜ್ ಅನ್ನು ನೀಡುತ್ತದೆ, ಇನ್ಶೂರರ್ ಯಾವುದೇ ವರ್ಷದಲ್ಲಿ ಅವನು/ಅವಳು ಸಂಪೂರ್ಣ ಸಮ್ ಇನ್ಶೂರ್ಡ್ ಅನ್ನು ಬಳಸಿಕೊಳ್ಳುವವರೆಗೆ ಬಹು ಕ್ಲೈಮ್ಗಳನ್ನು ಸಬ್ಮಿಟ್ ಮಾಡಬಹುದು, ಇದು ಕೆಲವು ಸಂದರ್ಭಗಳಲ್ಲಿ ಕ್ಯಾಶ್ ಲೆಸ್ ಸೌಲಭ್ಯದ ಹೆಚ್ಚುವರಿ ಪ್ರಯೋಜನದೊಂದಿಗೆ ವಿವಿಧ ಮೆಡಿಕಲ್ ಕೇಂದ್ರಗಳು ಮತ್ತು ಆಸ್ಪತ್ರೆಗಳ ನಡುವೆ ಆಯ್ಕೆ ಮಾಡುವ ಸೌಲಭ್ಯವನ್ನು ಒದಗಿಸುತ್ತದೆ. ಫಿಕ್ಸ್ಡ್ ಇನ್ಡೆಮ್ನಿಟಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳ ಅಡಿಯಲ್ಲಿ ಪ್ರೀಮಿಯಂಗಳು ಸಾಮಾನ್ಯವಾಗಿ ವೆಚ್ಚ-ಪರಿಣಾಮಕಾರಿಯಾಗಿರುತ್ತವೆ. ಇದಲ್ಲದೆ, ಪ್ರೀಮಿಯಂ ಅಮೌಂಟ್, ಪಾಲಿಸಿಹೋಲ್ಡರ್ ವಯಸ್ಸು, ಅವನ/ಅವಳ ಪೂರ್ವ ಅಸ್ತಿತ್ವದಲ್ಲಿರುವ ಕಾಯಿಲೆಗಳು ಮತ್ತು ಇತರ ಅಂಶಗಳ ಜೊತೆಗೆ ಪಾಲಿಸಿಯ ವೈಶಿಷ್ಟ್ಯಗಳನ್ನು ಅವಲಂಬಿಸಿರುತ್ತದೆ. |
ಇನ್ಡೆಮ್ನಿಟಿ ಆಧಾರಿತ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳು ತಮ್ಮ ಪಾಲಿಸಿಯ ನಿಯಮಗಳ ಪ್ರಕಾರ ಡಿಡಕ್ಟಿಬಲ್ ಗಳಿಗೆ ಪಾವತಿಸುವುದಿಲ್ಲ. ಸರಳವಾಗಿ ಹೇಳುವುದಾದರೆ, ಈ ಪ್ಲಾನ್ ವೆಚ್ಚಗಳ ಪಟ್ಟಿಯಲ್ಲಿ ನಿರ್ದಿಷ್ಟ ವಸ್ತುಗಳನ್ನು ಹೊಂದಿದ್ದು, ಅದರ ವೆಚ್ಚಗಳನ್ನು ಭರಿಸುವುದಿಲ್ಲ, ಉದಾಹರಣೆಗೆ ಗಾಜ್, ಕೈಗವಸು, ಆಮ್ಲಜನಕ ಮುಖವಾಡ, ಇತ್ಯಾದಿ. ಆದ್ದರಿಂದ, ಹಾಸ್ಪಿಟಲೈಸೇಷನ್ ಸಂದರ್ಭದಲ್ಲಿ ಪಾಲಿಸಿಹೋಲ್ಡರ್ ಈ ವಸ್ತುಗಳಿಗೆ ಪಾವತಿಸಬೇಕು, ಕ್ಲೈಮ್ಗಾಗಿ ದಾಖಲಾತಿ ಪ್ರೊಸೆಸ್ ಸಾಮಾನ್ಯವಾಗಿ ವಿಸ್ತಾರವಾಗಿರುತ್ತದೆ ಮತ್ತು ಹೀಗಾಗಿ ಸಮಯ ತೆಗೆದುಕೊಳ್ಳುತ್ತದೆ. |
ಈ ಎರಡೂ ಹೆಲ್ತ್ ಪ್ಲಾನ್ ಗಳು ಅತ್ಯಂತ ವಿಶಿಷ್ಟವಾದವು ಮತ್ತು ವಿವಿಧ ಮೆಡಿಕಲ್ ಅಗತ್ಯಗಳನ್ನು ಪೂರೈಸುತ್ತವೆ. ಇದಲ್ಲದೆ, ಮೇಲಿನ ಕೋಷ್ಟಕದಲ್ಲಿ ಗಮನಿಸಿದಂತೆ, ಈ ಎರಡೂ ಪ್ಲಾನ್ ಕೂಡ ಅದರ ಪ್ರಯೋಜನಗಳು ಮತ್ತು ಅನಾನುಕೂಲಗಳನ್ನು ಹೊಂದಿದೆ.
ಈ ಎರಡು ಪ್ಲಾನ್ ಗಳನ್ನು ಮೌಲ್ಯಮಾಪನ ಮಾಡುವ ಇನ್ನೊಂದು ಅಂಶವೆಂದರೆ ಅವುಗಳ ಟ್ಯಾಕ್ಸ್ ಪ್ರಯೋಜನಗಳು. ಆದಾಗ್ಯೂ, ಈ ಎರಡೂ ಪ್ಲಾನ್ ಗಳಿಗೆ ಟ್ಯಾಕ್ಸ್ ಪ್ರಯೋಜನಗಳು ಒಂದೇ ಆಗಿರುತ್ತವೆ. ಆದ್ದರಿಂದ, ನಿಮ್ಮ ಆಯ್ಕೆಯನ್ನು ಲೆಕ್ಕಿಸದೆ, ನೀವು ಇನ್ಕಮ್ ಟ್ಯಾಕ್ಸ್ ಆಕ್ಟ್, 1961ರ ಸೆಕ್ಷನ್ 80ಡಿ ಪ್ರಕಾರ ಟ್ಯಾಕ್ಸ್ ಡಿಡಕ್ಷ್ ಅನ್ನು ಪಡೆಯಬಹುದು. ಇಲ್ಲಿ, ಸೀನಿಯರ್ ಸಿಟಿಜನ್ ಗಳಿಗೆ ರೂ.50,000ವರೆಗೆ ಮತ್ತು ಸೀನಿಯರ್ ಸಿಟಿಜನ್ ಗಳಲ್ಲದಿದ್ದ ಸಂದರ್ಭದಲ್ಲಿ ರೂ.25,000 ವರೆಗಿನ ಪ್ರೀಮಿಯಂ, ಟ್ಯಾಕ್ಸ್ ಡಿಡಕ್ಷನ್ ಗೆ ಅರ್ಹವಾಗಿದೆ.
ಆದ್ದರಿಂದ, ನೀವು ಯಾವುದನ್ನು ಆರಿಸಿಕೊಳ್ಳಬೇಕು? ಈ ನಿರ್ಧಾರವು ನಿಮ್ಮ ಅಗತ್ಯತೆಗಳು ಮತ್ತು ಅವಶ್ಯಕತೆಗಳಿಗೆ ಪೂರಕವಾಗಿರುತ್ತದೆ ಎಂದು ನಾವು ನಂಬುತ್ತೇವೆ. ಫಿಕ್ಸ್ಡ್ ಇನ್ಡೆಮ್ನಿಟಿ ಮೆಡಿಕಲ್ ಇನ್ಶೂರೆನ್ಸ್ ನೊಂದಿಗೆ, ನೀವು ಮತ್ತು ನಿಮ್ಮ ಕುಟುಂಬಕ್ಕೆ ಆರ್ಥಿಕ ಸಿದ್ಧತೆ ಮತ್ತು ಹೆಚ್ಚಿನ ರಕ್ಷಣೆಯನ್ನು ಪಡೆಯಬಹುದು.
ಇದಲ್ಲದೆ, ನಾವು ಇಂದು ಒತ್ತಡದ ಜೀವನವನ್ನು ನಡೆಸುತ್ತಿದ್ದು, ಅದು ನಮ್ಮನ್ನು ಕ್ರಿಟಿಕಲ್ ಇಲ್ ನೆಸ್ ಗಳಿಗೆ ಗುರಿಯಾಗುವಂತೆ ಮಾಡುತ್ತದೆ, ನಿಮ್ಮ ಅಸ್ತಿತ್ವದಲ್ಲಿರುವ ಹೆಲ್ತ್ ಪಾಲಿಸಿಯೊಂದಿಗೆ ಫಿಕ್ಸ್ಡ್ ಬೆನಿಫಿಟ್ ಹೆಲ್ತ್ ಪ್ಲಾನ್ ಇದ್ದರೆ ಅರ್ಥಪೂರ್ಣವಾಗಿರುತ್ತದೆ.
ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಂತ ಮಹತ್ವದ ವಿಷಯವಾಗಿದೆ. ಆದಾಗ್ಯೂ, ಮೆಡಿಕಲ್ ಸೇವೆಯು ಪ್ರಸ್ತುತ ದುಬಾರಿಯಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದ್ದರಿಂದ, ಇನ್ಶೂರೆನ್ಸ್ ಪ್ಲಾನ್ ಗಳು ನಿಮ್ಮ ಹಣಕಾಸಿನ ಹಳಿತಪ್ಪಿಸುವ ಭಾರೀ ವೈದ್ಯಕೀಯ ಬಿಲ್ಗಳಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ನಿಮಗೆ ನೀಡುತ್ತವೆ. ಮತ್ತು, ಈ ಮಾರ್ಗದರ್ಶಿ ಬರಹವು ನಿಮಗೆ ಸಾಕಷ್ಟು ಒಳನೋಟವನ್ನು ಒದಗಿಸಿದೆ ಮತ್ತು ಹೆಲ್ತ್ ಪ್ಲಾನ್ ಅನ್ನು ಖರೀದಿಸುವ ನಿಮ್ಮ ಹಿಂಜರಿಕೆಯನ್ನು ನಿವಾರಿಸಿದೆ ಎಂದು ನಾವು ಭಾವಿಸುತ್ತೇವೆ.