ಕೆಟರಾಕ್ಟ್ ಸರ್ಜರಿಯನ್ನು ಕವರ್ ಮಾಡುವ ಹೆಲ್ತ್ ಇನ್ಶೂರೆನ್ಸ್
ಕೆಟರಾಕ್ಟ್ ಹೆಲ್ತ್ ಇನ್ಶೂರೆನ್ಸ್ ಎಂದರೇನು?
ಕೆಟರಾಕ್ಟ್ ಹೆಲ್ತ್ ಇನ್ಶೂರೆನ್ಸ್, ಕಣ್ಣಿನ ಪೊರೆಯ ಚಿಕಿತ್ಸೆಯನ್ನು ಕವರ್ ಮಾಡುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಸೂಚಿಸುತ್ತದೆ. ಇದು ವೃದ್ಧಾಪ್ಯದಲ್ಲಿ ಎದುರಿಸುವ ಸಾಮಾನ್ಯ ಕಣ್ಣಿನ ಸ್ಥಿತಿಯಾಗಿದೆ. ಆದರೆ, ಇದು ಕಣ್ಣಿನ ಗಾಯಗಳಿಂದ ಸಹ ಪ್ರಚೋದಿಸಬಹುದು.
ಡಿಜಿಟ್‌ನಲ್ಲಿ, ಈ ಚಿಕಿತ್ಸೆಯು ನಮ್ಮ ಡೇಕೇರ್ ಕಾರ್ಯವಿಧಾನಗಳ ಅಡಿಯಲ್ಲಿ ಒಳಗೊಂಡಿರುತ್ತದೆ. ಹಾಗೂ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಕವರ್ ಆಗುತ್ತದೆ.
ಕೆಟರಾಕ್ಟ್ ಸರ್ಜರಿಯನ್ನು ಕವರ್ ಮಾಡುವ ಹೆಲ್ತ್ ಇನ್ಶೂರೆನ್ಸ್ ಅನ್ನು ನೀವು ಏಕೆ ಪಡೆಯಬೇಕು?
ಸಾಂಪ್ರದಾಯಿಕ ಕೆಟರಾಕ್ಟ್ ಸರ್ಜರಿಗೆ (ಫಾಕೊಎಮಲ್ಸಿಫಿಕೇಶನ್) ಪ್ರತಿ ಕಣ್ಣಿಗೆ 40,000 ರೂಗಳು. ವೆಚ್ಚವಾಗುತ್ತವೆ. ಆದರೆ ಹೊಸ ಬ್ಲೇಡ್‌ಲೆಸ್ ಸರ್ಜರಿಗೆ 85,000 ರಿಂದ 1.2 ಲಕ್ಷ ರೂಪಾಯಿ ವೆಚ್ಚವಾಗಬಹುದು! (1)
ಕಣ್ಣಿನ ಪೊರೆಗೆ ಯಾವುದೇ ನೈಸರ್ಗಿಕ ಚಿಕಿತ್ಸೆ ಇಲ್ಲ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಟಿಸಿದ 2017 ರ ಅಧ್ಯಯನದ ವಿಮರ್ಶೆಯು, ಕಣ್ಣಿನ ಪೊರೆಗಳಿಗೆ ಲಭ್ಯವಿರುವ ಏಕೈಕ ಚಿಕಿತ್ಸೆಯು ಸರ್ಜರಿಯನ್ನು ದೃಢಪಡಿಸಿದೆ. (2)
ಯುಎಸ್ ಅಥವಾ ಯೂರೋಪ್‌ನಲ್ಲಿ ಕಣ್ಣಿನ ಪೊರೆಗೆ ತುತ್ತಾಗುವ ಸರಾಸರಿ ವಯಸ್ಸು 70+ ಆಗಿದೆ. ಆದರೆ ಭಾರತದಲ್ಲಿ, ಈ ಸ್ಥಿತಿಯು 50 ನೇ ವಯಸ್ಸಿಗೇ ಅತಿರೇಕವಾಗಿ ಬೆಳೆಯುತ್ತಿದೆ. (3)
ಕೆಟರಾಕ್ಟ್ ಎಂದರೇನು?
ಕೆಟರಾಕ್ಟ್ ಎನ್ನುವುದು ಕಣ್ಣಿನ ಮಸೂರದಲ್ಲಿ ದಟ್ಟವಾದ, ಮೋಡದ ಪ್ರದೇಶದಂತಹ ರಚನೆಯಿಂದ ಉಂಟಾಗುವ ಕಣ್ಣಿನ ಸ್ಥಿತಿಯಾಗಿದೆ. ವಯಸ್ಸಾದವರಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ ಮತ್ತು ಚಿಕಿತ್ಸೆಯನ್ನು ನೀಡದೆ ಹಾಗೇ ಬಿಟ್ಟಲ್ಲಿ, ಅದು ಭಾಗಶಃ ಅಥವಾ ಸಂಪೂರ್ಣ ಕುರುಡುತನಕ್ಕೆ ಕಾರಣವಾಗಬಹುದು.
ಕೆಟರಾಕ್ಟ್ ಹೇಗೆ ಉಂಟಾಗುತ್ತದೆ?
ಕೆಟರಾಕ್ಟ್‌ಗೆ ಕೇವಲ ಒಂದೇ ಕಾರಣವಿಲ್ಲ. ಹಿರಿಯರಲ್ಲಿ ಇದು ಸಾಮಾನ್ಯವಾದರೂ, ಭಾರತದಲ್ಲಿ 50ರ ಹರೆಯದವರಿಗೂ ಕೆಟರಾಕ್ಟ್ ಬರುತ್ತಿರುವುದು ಟ್ರೆಂಡ್ ಆಗುತ್ತಿದೆ!
ಭಾರತದಲ್ಲಿ ಮಧುಮೇಹದ (ಡಯಾಬಿಟಿಸ್) ಹೆಚ್ಚಳ ಮತ್ತು ಅದರ ಹರಡುವಿಕೆ ಇದಕ್ಕೆ ಒಂದು ಕಾರಣವಾಗಿರಬಹುದು. ಮಧುಮೇಹ ಮತ್ತು ಹೆಚ್ಚುತ್ತಿರುವ ವಯಸ್ಸನ್ನು ಹೊರತುಪಡಿಸಿ, ಕೆಟರಾಕ್ಟ್‌ಗೆ ಇನ್ನೂ ಕೆಲವು ಕಾರಣಗಳಿವೆ:
ಆಕ್ಸಿಡಂಟ್'ಗಳ ಅಧಿಕ ಉತ್ಪಾದನೆ, ಅಂದರೆ ಸಾಮಾನ್ಯ ದೈನಂದಿನ ಜೀವನದಿಂದಾಗಿ ರಾಸಾಯನಿಕವಾಗಿ ಬದಲಾಗಿರುವ ಆಮ್ಲಜನಕದ ಅಣುಗಳು
ಧೂಮಪಾನ
ನೇರಳಾತೀತ ವಿಕಿರಣ
ಸ್ಟೀರಾಯ್ಡಗಳು ಮತ್ತು ಇತರ ಔಷಧಿಗಳ ದೀರ್ಘಾವಧಿಯ ಬಳಕೆ
ಮಧುಮೇಹದಂತಹ ಕೆಲವು ರೋಗಗಳು
ಹಳೆಯ ಗಾಯಗಳಿಂದ ಕಣ್ಣಿಗೆ ಆಘಾತ
ವಿಕಿರಣ ಚಿಕಿತ್ಸೆ
ಕೆಟರಾಕ್ಟ್‌ನ ಲಕ್ಷಣಗಳು
ಅಸ್ಪಷ್ಟ ದೃಷ್ಟಿ
ರಾತ್ರಿಯಲ್ಲಿ ನೋಡಲು ತೊಂದರೆ
ಬಣ್ಣಗಳು ಮಾಸಿದಂತೆ ಕಾಣುವುದು
ಪ್ರಜ್ವಲಿಸುವಿಕೆಗೆ ಹೆಚ್ಚಿದ ಸಂವೇದನೆ
ಬೆಳಕಿನ ಸುತ್ತಮುತ್ತಲು ಹಾಲೋಸ್
ದೋಷವಿರುವ ಕಣ್ಣಿನಲ್ಲಿ ಎರಡು ದೃಷ್ಟಿಗಳು ಕಾಣುವುದು.
ಪ್ರಿಸ್ಕ್ರಿಪ್ಷನ್ ಗ್ಲಾಸ್ಗಳಲ್ಲಿ ಆಗಾಗ ಬದಲಾವಣೆಗಳ ಅಗತ್ಯತೆ
ಕೆಟರಾಕ್ಟ್‌ನ ವಿಧಗಳು
ಸಾಮಾನ್ಯವಾಗಿ ಕೆಟರಾಕ್ಟ್ ಎನ್ನುವುದು ಕೇವಲ ವೃದ್ಧಾಪ್ಯಕ್ಕೆ ಮಾತ್ರ ಸಂಬಂಧಿಸಿದ್ದು ಎನ್ನುವ ತಪ್ಪು ಕಲ್ಪನೆಯನ್ನು ಜನರು ಹೊಂದಿರುತ್ತಾರೆ.
ಆದಾಗ್ಯೂ, ಇದು ನಿಜವಲ್ಲ. ಕೆಟರಾಕ್ಟ್ ವಿವಿಧ ರೀತಿಯದ್ದಾಗಿರಬಹುದು, ಅದರ ಕಾರಣ ಮತ್ತು ಅದು ಕಣ್ಣಿನ ಯಾವ ಭಾಗವನ್ನು ಬಾಧಿಸುತ್ತದೆ ಎಂಬುದರ ಆಧಾರದ ಮೇಲೆ ನಿರ್ಣಾಯವಾಗುತ್ತದೆ. ಕೆಟರಾಕ್ಟ್‌ನ ವಿವಿಧ ಪ್ರಕಾರಗಳನ್ನು ಕೆಳಗೆ ನೀಡಲಾಗಿದೆ:
ನ್ಯೂಕ್ಲಿಯರ್ ಕೆಟರಾಕ್ಟ್‌ಗಳು : ಇದು ಮಸೂರದ ಮಧ್ಯದಲ್ಲಿ ರೂಪುಗೊಳ್ಳುತ್ತದೆ ಮತ್ತು ನ್ಯೂಕ್ಲಿಯಸ್ (ಕಣ್ಣಿನ ಮಧ್ಯಭಾಗ) ಹಳದಿ/ಕಂದು ಬಣ್ಣಕ್ಕೆ ತಿರುಗುತ್ತದೆ.
ಕಾರ್ಟಿಕಲ್ ಕೆಟರಾಕ್ಟ್‌ಗಳು : ಕಟ್ಟಿಗೆಯ ಚೂರಿನಾಕಾರದ, ನ್ಯೂಕ್ಲಿಯಸ್ ಅಂಚಿನ ಸುತ್ತಲೂ ರೂಪುಗೊಳ್ಳುತ್ತದೆ.
ಹಿಂಭಾಗದ ಕ್ಯಾಪ್ಸುಲರ್ ಕೆಟರಾಕ್ಟ್‌ಗಳ: ಇತರ ಕೆಟರಾಕ್ಟ್‌ಗಳಿಗೆ ಹೋಲಿಸಿದರೆ ಇದು ಅತ್ಯಂತ ವೇಗವಾಗಿ ರೂಪುಗೊಳ್ಳುತ್ತದೆ ಮತ್ತು ಕಣ್ಣಿನ ಮಸೂರದ ಹಿಂಭಾಗದ ಮೇಲೆ ಪರಿಣಾಮ ಬೀರುತ್ತದೆ.
ಜನ್ಮಜಾತ ಕೆಟರಾಕ್ಟ್‌ಗಳ: ಒಂದು ವಿಧದ ಕೆಟರಾಕ್ಟ್ ಆಗಿದ್ದು, ಇದು ವಯಸ್ಸಾಗುತ್ತಿರುವ ಕಾರಣದಿಂದ ಉಂಟಾಗುವುದಿಲ್ಲ. ಆದರೆ ಇದು ಹುಟ್ಟಿನಿಂದಲೇ ಇರುತ್ತದೆ ಅಥವಾ ಮಗುವಿನ ಮೊದಲ ವರ್ಷದಲ್ಲಿ ರೂಪುಗೊಂಡಿರುತ್ತದೆ.
ದ್ವಿತೀಯ ಕೆಟರಾಕ್ಟ್‌ಗಳು : ಮತ್ತೊಂದು ಕಾಯಿಲೆಯ ಕಾರಣದಿಂದ ಅಥವಾ ಮಧುಮೇಹ ಮತ್ತು ಗ್ಲುಕೋಮಾದಂತಹ ಆರೋಗ್ಯ ಸ್ಥಿತಿಯಿಂದ ಉಂಟಾಗುತ್ತದೆ. ಹೆಚ್ಚುವರಿಯಾಗಿ, ಸ್ಟೀರಾಯ್ಡಗಳು ಮತ್ತು ಇತರ ಔಷಧಿಗಳ ಬಳಕೆಯು ಕೆಟರಾಕ್ಟ್‌ಗೆ ಕಾರಣವಾಗಬಹುದು.
ಆಘಾತಕಾರಿ ಕೆಟರಾಕ್ಟ್‌ಗಳು: ಕೆಲವೊಮ್ಮೆ, ಕಣ್ಣಿನ ಗಾಯದ ನಂತರ ಆಘಾತಕಾರಿ ಕೆಟರಾಕ್ಟ್‌ಗಳು ಬೆಳೆಯಬಹುದು, ಆದರೂ ಇದು ಉಂಟಾಗಲು ವರ್ಷಗಳನ್ನು ತೆಗೆದುಕೊಳ್ಳಬಹುದು.
ವಿಕಿರಣ ಕೆಟರಾಕ್ಟ್‌ಗಳು: ಒಬ್ಬ ವ್ಯಕ್ತಿಯು ಕ್ಯಾನ್ಸರ್‌ಗೆ ಸಂಬಂಧಿಸಿದ ವಿಕಿರಣ ಚಿಕಿತ್ಸೆಗೆ ಒಳಗಾದ ನಂತರ ಇದು ಸಂಭವಿಸಬಹುದು.
ಕೆಟರಾಕ್ಟ್‌ಗಳನ್ನು ತಡೆಗಟ್ಟಲು ಯಾವುದಾದರೂ ಮಾರ್ಗವಿದೆಯೇ?
ಹೌದು, ಕೆಟರಾಕ್ಟ್ ಅನ್ನು ಪ್ರಾಥಮಿಕವಾಗಿ ನಿಮ್ಮ ಕಣ್ಣಿನ ಆರೋಗ್ಯ ಮತ್ತು ಒಟ್ಟಾರೆ ಆರೋಗ್ಯ - ಯೋಗಕ್ಷೇಮವನ್ನು ಕಾಪಾಡಿಕೊಳ್ಳುವ ಮೂಲಕ ತಡೆಗಟ್ಟಬಹುದು. ಕೆಟರಾಕ್ಟ್ ಅನ್ನು ತಡೆಗಟ್ಟುವ ಕೆಲವು ವಿಧಾನಗಳು:
ಹಗಲು ಹೊತ್ತಿನಲ್ಲಿ ಯುವಿಬಿ (UVB) ಕಿರಣಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಸನ್‌ಗ್ಲಾಸ್ ಅನ್ನು ಧರಿಸಿ.
ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿ. ವಿಶೇಷವಾಗಿ ನೀವೇನಾದರೂ ಕಣ್ಣಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ 65 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಕಣ್ಣಿನ ತಪಾಸಣೆ ಅವಶ್ಯವಾಗಿ ಮಾಡಿಸಿ.
ಧೂಮಪಾನ ನಿಲ್ಲಿಸಿ!
ಆಂಟಿ ಆಕ್ಸಿಡಂಟ್'ಗಳನ್ನು ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ನಿಯಮಿತವಾಗಿ ಸೇವಿಸಿ.
ಇದು ಇತರ ಕಾಯಿಲೆಗಳನ್ನು ತಡೆಗಟ್ಟುವುದರಿಂದ - ಯಾವಾಗಲೂ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ.
ನೀವು ಮಧುಮೇಹಿಗಳಾಗಿದ್ದರೆ, ನಿಮ್ಮ ಮಧುಮೇಹದ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.
ಕೆಟರಾಕ್ಟ್‌ಗಳಿಗೆ ಸಂಬಂಧಿಸಿದ ಯಾವುದಾದರೂ ಅಪಾಯಕಾರಿ ಅಂಶಗಳಿವೆಯೇ?
ಹೌದು, ದುರದೃಷ್ಟವಶಾತ್ ಕೆಲವರು ಇತರರಿಗಿಂತ ಕೆಟರಾಕ್ಟ್‌ಗೆ ಹೆಚ್ಚು ಒಳಗಾಗುತ್ತಾರೆ. ಈ ಕೆಲವು ಅಪಾಯಕಾರಿ ಅಂಶಗಳು ಕೆಳಗಿನವುಗಳನ್ನು ಒಳಗೊಂಡಿವೆ:
ಹೆಚ್ಚುತ್ತಿರುವ ವಯಸ್ಸು
ಅತಿಯಾದ ಮದ್ಯ ಸೇವನೆ
ನಿಯಮಿತ ಧೂಮಪಾನ
ಬೊಜ್ಜು
ತೀವ್ರ ರಕ್ತದೊತ್ತಡ
ಹಳೆಯ ಕಣ್ಣಿನ ಗಾಯಗಳು
ಕೆಟರಾಕ್ಟ್‌ಗಳಿಗೆ ಸಂಬಂಧಿಸಿದಂತೆ ಕುಟುಂಬದ ಇತಿಹಾಸ
ಅತಿಯಾಗಿ ಸೂರ್ಯನಿಗೆ ಮೈಯೊಡ್ಡುವುದು
ಮಧುಮೇಹ
X- ಕಿರಣಗಳು ಮತ್ತು ಕ್ಯಾನ್ಸರ್ ಚಿಕಿತ್ಸೆಗಳಿಂದ ವಿಕಿರಣಕ್ಕೆ ಒಡ್ಡಿಕೊಳ್ಳುವುದು
ಕೆಟರಾಕ್ಟ್ ಶಸ್ತ್ರಚಿಕಿತ್ಸೆ ಏಕೆ ಮುಖ್ಯ?
- ಕೆಟರಾಕ್ಟ್‌ಗೆ ಶಸ್ತ್ರಚಿಕಿತ್ಸೆಯ ಹೊರತಾಗಿ ಯಾವುದೇ ನೈಸರ್ಗಿಕ ಚಿಕಿತ್ಸೆ ಇಲ್ಲ - ದುರದೃಷ್ಟವಶಾತ್, ರಾಷ್ಟ್ರೀಯ ಆರೋಗ್ಯ ಸಂಸ್ಥೆಯು ದೃಢಪಡಿಸಿದಂತೆ, ಶಸ್ತ್ರಚಿಕಿತ್ಸೆಯ ಹೊರತಾಗಿ ಕೆಟರಾಕ್ಟ್‌ಗೆ ಪ್ರಸ್ತುತ ಯಾವುದೇ ನೈಸರ್ಗಿಕ ಚಿಕಿತ್ಸೆ ಇಲ್ಲ. ಆದ್ದರಿಂದ, ನಿಮ್ಮ ದೃಷ್ಟಿ ಸುಧಾರಿಸಲು ನೀವು ಕೆಟರಾಕ್ಟ್‌ನ ಲಕ್ಷಣಗಳು ಮತ್ತು ಪರಿಣಾಮಗಳ ಮೂಲಕ ತಡೆಯಲು, ನೀವು ಕೆಟರಾಕ್ಟ್ ಶಸ್ತ್ರಚಿಕಿತ್ಸೆಯನ್ನು ಮಾಡಿಸಬೇಕಾಗುತ್ತದೆ.
- ಚಿಕಿತ್ಸೆ ಪಡೆಯದ ಕೆಟರಾಕ್ಟ್, ಭಾಗಶಃ ಅಥವಾ ಸಂಪೂರ್ಣ ಕುರುಡುತನಕ್ಕೆ ಕಾರಣವಾಗಬಹುದು - ಮನುಷ್ಯನೊಬ್ಬನ ವಯಸ್ಸು ಮತ್ತು ಕಣ್ಣಿನ ಸ್ಥಿತಿಗೆ ಅನುಗುಣವಾಗಿ, ರೋಗಲಕ್ಷಣಗಳು ಕಾಲಾನಂತರದಲ್ಲಿ ಉಲ್ಬಣಗೊಳ್ಳಬಹುದು. ಮತ್ತು ಚಿಕಿತ್ಸೆ ಪಡೆಯದಿದ್ದರೆ (ಸಹಜವಾಗಿ ಶಸ್ತ್ರಚಿಕಿತ್ಸೆಯ ಮೂಲಕ), ಇದು ರೋಗಿಯ ಭಾಗಶಃ ಅಥವಾ ಸಂಪೂರ್ಣ ಕುರುಡುತನಕ್ಕೆ ಕಾರಣವಾಗಬಹುದು. ಆದ್ದರಿಂದ, ಅಂತಹ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ನೀವು ಅಥವಾ ನಿಮ್ಮ ಪೋಷಕರು ಒಂದು ಅಥವಾ ಎರಡೂ ಕಣ್ಣುಗಳಲ್ಲಿ ಕೆಟರಾಕ್ಟ್ ಅನ್ನು ಹೊಂದಿದ್ದರೆ ಕೆಟರಾಕ್ಟ್ ಸರ್ಜರಿಯನ್ನು ಮಾಡಿಸಿಕೊಳ್ಳುವುದು ತುಂಬಾ ಮುಖ್ಯ.
- ಕೆಟರಾಕ್ಟ್ ಸರ್ಜರಿಯು ದೃಷ್ಟಿಯನ್ನು ಯಶಸ್ವಿಯಾಗಿ ಮರುಸ್ಥಾಪಿಸುತ್ತದೆ - ಇದರಲ್ಲಿ ಒಳ್ಳೆಯ ಸುದ್ದಿ ಏನೆಂದರೆ ಕೆಟರಾಕ್ಟ್ ಸರ್ಜರಿ ವಾಸ್ತವವಾಗಿ ಸುರಕ್ಷಿತ ಸರ್ಜರಿಗಳಲ್ಲಿ ಒಂದಾಗಿದೆ. ವೈದ್ಯಕೀಯ ತಂತ್ರಜ್ಞಾನಕ್ಕೆ ಧನ್ಯವಾದಗಳು. ವಾಸ್ತವವಾಗಿ, ನೀವು ಕೇವಲ ಕೆಲವು ಗಂಟೆಗಳ ಕಾಲ ಅಡ್ಮಿಟ್ ಆಗಬೇಕಿರುವುದರಿಂದ ಇದು ಇತರ ಶಸ್ತ್ರಚಿಕಿತ್ಸೆಗಳಿಗೆ ಹೋಲಿಸಿದರೆ ಬಹಳ ಚಿಕ್ಕ ಪ್ರಕ್ರಿಯೆಯಾಗಿದೆ (ಚೇತರಿಕೆ ಕೂಡ ತ್ವರಿತವಾಗಿದೆ!) ಮತ್ತು ಈ ಸರ್ಜರಿಯ ಉತ್ತಮ ಅಂಶವೆನೆಂದರೆ, ಅದು ಯಾವುದೇ ಅಡ್ಡಪರಿಣಾಮಗಳಿಲ್ಲದೆ ರೋಗಿಯ ದೃಷ್ಟಿಯನ್ನು ಯಶಸ್ವಿಯಾಗಿ ಮರುಸ್ಥಾಪಿಸುತ್ತದೆ!
- ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ - ಅವರು ಏನು ಹೇಳುತ್ತಾರೆಂದು ನಿಮಗೆ ತಿಳಿದಿದೆ, ಕಣ್ಣುಗಳು ಆತ್ಮಕ್ಕೆ ಕಿಟಕಿಗಳು ಮತ್ತು ಜಗತ್ತಿಗೆ ಕಿಟಕಿ! ಕಣ್ಣುಗಳು ಕೇವಲ ಚಿಕ್ಕ ಮರಿಗಳಂತೆ ಇರಬಹುದು ಆದರೆ ಊಹಿಸಿಕೊಳ್ಳುವುದಕ್ಕಿಂತ ಹೆಚ್ಚಿನ ರೀತಿಯಲ್ಲಿ ನಾವು ಕಣ್ಣುಗಳ ಮೇಲೆ ಅವಲಂಬಿತರಾಗಿದ್ದೇವೆ. ಆದ್ದರಿಂದ, ಕೆಟರಾಕ್ಟ್ ಸರ್ಜರಿಯನ್ನು ಪಡೆಯುವುದು ಒಬ್ಬರ ದೃಷ್ಟಿ ಗುಣಮಟ್ಟವನ್ನು ಮಾತ್ರವಲ್ಲದೆ ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ.
ಭಾರತದಲ್ಲಿ ಕೆಟರಾಕ್ಟ್ ಸರ್ಜರಿಗೆ ಎಷ್ಟು ವೆಚ್ಚವಾಗುತ್ತದೆ?
ಫ್ಯಾಕೋಎಮಲ್ಸಿಫಿಕೇಶನ್ ಕೆಟರಾಕ್ಟ್ ಸರ್ಜರಿ ಎನ್ನುವುದು ಕೆಟರಾಕ್ಟ್ ಸರ್ಜರಿಯ ಅತ್ಯಂತ ಸಾಮಾನ್ಯ ರೂಪವಾಗಿದ್ದರೂ, ಕೆಟರಾಕ್ಟ್‌ಗೆ ಇತರ ರೀತಿಯ ಸರ್ಜರಿಗಳೂ ಇವೆ.
ನಿಮ್ಮ ವೈದ್ಯರ ಶಿಫಾರಸ್ಸಿನಂತೆ, ನೀವು ವಾಸಿಸುವ ನಗರ, ನೀವು ಆಯ್ಕೆ ಮಾಡುವ ಆಸ್ಪತ್ರೆ ಮತ್ತು ನಿಮ್ಮ ವಯಸ್ಸಿನ ಆಧಾರದ ಮೇಲೆ, ಭಾರತದಲ್ಲಿ ಕೆಟರಾಕ್ಟ್ ಸರ್ಜರಿಯ ವೆಚ್ಚವು ಭಿನ್ನವಾಗಿರುತ್ತದೆ. ಭಾರತದಲ್ಲಿನ ಮೂರು ವಿಭಿನ್ನ ರೀತಿಯ ಕೆಟರಾಕ್ಟ್ ಸರ್ಜರಿಗಳಿಗೆ ಸರಿಸುಮಾರು ಎಷ್ಟು ವೆಚ್ಚವಾಗುತ್ತದೆ ಎಂಬುದನ್ನು ಕೆಳಗೆ ನೀಡಲಾಗಿದೆ:
ಫಾಕೋಎಮಲ್ಸಿಫಿಕೇಶನ್ ಕೆಟರಾಕ್ಟ್ ಸರ್ಜರಿ | ಹೆಚ್ಚುವರಿ ಕ್ಯಾಪ್ಸುಲರ್ ಕೆಟರಾಕ್ಟ್ ಸರ್ಜರಿ | ಬ್ಲೇಡ್‌ಲೆಸ್ ಕೆಟರಾಕ್ಟ್ ಸರ್ಜರಿ |
ಏನಿದು : ಕೆಟರಾಕ್ಟ್ ಅನ್ನು ಒಡೆಯಲು ಮತ್ತು ತೆಗೆದುಹಾಕಲು ದೋಷವಿರುವ ಕಾರ್ನಿಯಾದಲ್ಲಿ ಸಣ್ಣ ಛೇದನವನ್ನು ಮಾಡುವ ಮೊದಲು, ಲೋಕಲ್ ಅನಸ್ತೇಷಿಯ ಬಳಸಿ ಕೆಟರಾಕ್ಟ್ ಸರ್ಜರಿಯನ್ನು ಮಾಡುವ ಅತ್ಯಂತ ಸಾಮಾನ್ಯವಾದ ಸರ್ಜರಿ. | ಆದರೆ ಇಲ್ಲಿ ಅಗತ್ಯವಿರುವ ಛೇದನದ ಗಾತ್ರ, ಸಾಮಾನ್ಯಕ್ಕಿಂತ ದೊಡ್ಡದಾಗಿದೆ | ಏನಿದು : ಈ ಸರ್ಜರಿಯು ಯಾವುದೇ ಛೇದನದ ವಿಧಾನಗಳನ್ನು ಬಳಸುವುದಿಲ್ಲ ಬದಲಿಗೆ ಕೆಟರಾಕ್ಟ್ ಅನ್ನು ಕರಗಿಸುವ ಕಂಪ್ಯೂಟರ್-ಮಾರ್ಗದರ್ಶಿತ ಫೆಮ್ಟೋಸೆಕೆಂಡ್ ಲೇಸರ್ ಮೂಲಕ ಕೆಟರಾಕ್ಟ್‌ಗೆ ಚಿಕಿತ್ಸೆ ನೀಡುತ್ತದೆ. |
ವೆಚ್ಚ: ಬಾಧಿತ ಕಣ್ಣಿಗೆ ಸುಮಾರು ₹40,000 | ವೆಚ್ಚ: ಬಾಧಿತ ಕಣ್ಣಿಗೆ ₹40,000 ರಿಂದ ₹60,000 | ವೆಚ್ಚ: ಈ ಸರ್ಜರಿಯು ತೀರಾ ಇತ್ತೀಚಿನದು. ಮತ್ತು ಅತ್ಯಂತ ತಾಂತ್ರಿಕ ಸ್ವರೂಪದ್ದಾಗಿದೆ. ಇದು ಇತರ ಸರ್ಜರಿಗಿಂತ ಹೆಚ್ಚು ದುಬಾರಿಯಾಗಿದೆ. ಅಂದರೆ ಬಾಧಿತ ಕಣ್ಣಿಗೆ ಸುಮಾರು ₹85,000 ರಿಂದ ₹120,000 |
ಡಿಸ್ ಕ್ಲೇಮರ್ : ಮೇಲಿನ ವೆಚ್ಚಗಳು ಕೇವಲ ಅಂದಾಜು ವೆಚ್ಚಗಳಾಗಿವೆ ಮತ್ತು ಆಸ್ಪತ್ರೆಯಿಂದ ಆಸ್ಪತ್ರೆಗೆ ಮತ್ತು ನಗರದಿಂದ ನಗರಕ್ಕೆ ಈ ವೆಚ್ಚಗಳು ಭಿನ್ನವಾಗಿರಬಹುದು.
ಕೆಟರಾಕ್ಟ್ ಅನ್ನು ಕವರ್ ಮಾಡುವ ಡಿಜಿಟ್‌ನ ಹೆಲ್ತ್ ಇನ್ಶೂರೆನ್ಸಿನಲ್ಲಿ ಯಾವ ಅಂಶಗಳು ಉತ್ತಮವಾಗಿವೆ?
ಸರಳ ಆನ್‌ಲೈನ್ ಪ್ರಕ್ರಿಯೆಗಳು -ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಪ್ರಕ್ರಿಯೆಯಿಂದ ಕ್ಲೈಮ್‌ಗಳನ್ನು ಮಾಡುವವರೆಗೆ ಪೇಪರ್‌ಲೆಸ್, ಸುಲಭ, ತ್ವರಿತ ಮತ್ತು ತೊಂದರೆ ಮುಕ್ತವಾಗಿದೆ! ಕ್ಲೈಮ್‌ಗಳಿಗೆ ಸಹ ಯಾವುದೇ ಕಾಗದಪತ್ರಗಳ ಅಗತ್ಯವಿಲ್ಲ!
ವಯಸ್ಸು-ಆಧಾರಿತ ಅಥವಾ ಝೋನ್-ಆಧಾರಿತ ಸಹ-ಪಾವತಿ ಇಲ್ಲ - ನಮ್ಮ ಹೆಲ್ತ್ ಇನ್ಶೂರೆನ್ಸ್ ವಯಸ್ಸು ಆಧಾರಿತ ಅಥವಾ ಝೋನ್-ಆಧಾರಿತ ಸಹಪಾವತಿಯೊಂದಿಗೆ ಬರುತ್ತದೆ. ಇದರರ್ಥ, ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಸಮಯದಲ್ಲಿ, ನಿಮ್ಮ ಜೇಬಿನಿಂದ ನೀವು ಏನನ್ನೂ ಪಾವತಿಸಬೇಕಾಗಿಲ್ಲ.
ಎಸ್‌ಐ ವಾಲೆಟ್ ಪ್ರಯೋಜನ - ಪಾಲಿಸಿ ಅವಧಿಯಲ್ಲಿ ನಿಮ್ಮ ಇನ್ಸೂರ್ಡ್ ಮೊತ್ತವನ್ನು ನೀವು ಖಾಲಿ ಮಾಡಿದರೆ, ನಾವು ಅದನ್ನು ನಿಮಗಾಗಿ ರಿಫಿಲ್ ಮಾಡುತ್ತೇವೆ.
ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ - ಕ್ಯಾಶ್ ಲೆಸ್ ಚಿಕಿತ್ಸೆಗಾಗಿ ಭಾರತದಲ್ಲಿನ ನಮ್ಮ 10500+ ನೆಟ್‌ವರ್ಕ್ ಆಸ್ಪತ್ರೆಗಳಿಂದ ಆಯ್ಕೆಮಾಡಿ ಅಥವಾ ಮರುಪಾವತಿಯನ್ನು ಆರಿಸಿಕೊಳ್ಳಿ.
ವೆಲ್‌ನೆಸ್ ಪ್ರಯೋಜನಗಳು - ಉನ್ನತ ದರ್ಜೆಯ ಹೆಲ್ತ್ ಮತ್ತು ವೆಲ್‌ನೆಸ್ ಪಾರ್ಟ್ನರ್ ಸಹಯೋಗದೊಂದಿಗೆ ಡಿಜಿಟ್ ಅಪ್ಲಿಕೇಶನ್‌ನಲ್ಲಿ ವಿಶೇಷ ವೆಲ್‌ನೆಸ್ ಪ್ರಯೋಜನಗಳನ್ನು ಪಡೆಯಿರಿ.
ಡಿಜಿಟ್ ನ ಹೆಲ್ತ್ ಇನ್ಶೂರೆನ್ಸ್ ನ ಪ್ರಮುಖ ಪ್ರಯೋಜನಗಳು
ಸಹಪಾವತಿ | ಇಲ್ಲ |
---|---|
ರೂಮ್ ಬಾಡಿಗೆ ಮಿತಿ | ಇಲ್ಲ |
ಕ್ಯಾಶ್ಲೆಸ್ ಆಸ್ಪತ್ರೆಗಳು | ಭಾರತದಾದ್ಯಂತ 10500+ ಕ್ಯಾಶ್ಲೆಸ್ ಆಸ್ಪತ್ರೆಗಳು |
ಅಂತರ್ಗತ ವೈಯಕ್ತಿಕ ಅಪಘಾತ ಕವರ್ | ಹೌದು |
ವೆಲ್ ನೆಸ್ ಪ್ರಯೋಜನಗಳು | 10+ ವೆಲ್‌ನೆಸ್ ಪಾಲುದಾರರಿಂದ ಲಭ್ಯವಿದೆ |
ನಗರ ಆಧಾರಿತ ಡಿಸ್ಕೌಂಟ್ | 10% ವರೆಗೆ ಡಿಸ್ಕೌಂಟ್ |
ವಿಶ್ವಾದ್ಯಂತ ಕವರೇಜ್ | ಹೌದು* |
ಉತ್ತಮ ಆರೋಗ್ಯ ಡಿಸ್ಕೌಂಟ್ | 5% ವರೆಗೆ ಡಿಸ್ಕೌಂಟ್ |
ಉಪಭೋಗ್ಯ ಕವರ್ | ಆಡ್-ಆನ್ ಆಗಿ ಲಭ್ಯವಿದೆ |
*ವಿಶ್ವಾದ್ಯಂತ ಚಿಕಿತ್ಸಾ ಯೋಜನೆಯಲ್ಲಿ ಮಾತ್ರ ಲಭ್ಯವಿದೆ
ಡಿಜಿಟ್‌ನ ಹೆಲ್ತ್ ಇನ್ಶೂರೆನ್ಸಿನಲ್ಲಿ ಕೆಟರಾಕ್ಟ್‌ಗಾಗಿ ಕ್ಲೈಮ್ ಮಾಡುವುದು ಹೇಗೆ?
ಡಿಜಿಟ್‌ನ ಹೆಲ್ತ್ ಇನ್ಶೂರೆನ್ಸ್ 'ಡೇಕೇರ್ ಪ್ರೊಸೀಜರ್ಸ್' ಅಡಿಯಲ್ಲಿ ಕೆಟರಾಕ್ಟ್ ಸರ್ಜರಿಯನ್ನು ಕವರ್ ಮಾಡುತ್ತದೆ. ಏಕೆಂದರೆ ಇದು ಚಿಕಿತ್ಸೆಯಲ್ಲಿನ ವೈದ್ಯಕೀಯ ಪ್ರಗತಿಯಿಂದಾಗಿ 24-ಗಂಟೆಗಳೊಳಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುವ, ವೈದ್ಯಕೀಯ ಚಿಕಿತ್ಸೆಯಾಗಿ ಅರ್ಹತೆ ಪಡೆಯುತ್ತದೆ.
ನೀವು ಕೆಟರಾಕ್ಟ್ ಸರ್ಜರಿಯನ್ನು ಮಾಡಿಸಿಕೊಳ್ಳಲು ಬಯಸಿದರೆ ಮತ್ತು ನಮ್ಮೊಂದಿಗೆ ಇನ್ಶೂರೆನ್ಸ್ ಖರೀದಿಸಿದ್ದರೆ - ನೀವು ಹೇಗೆ ಕ್ಲೈಮ್ ಮಾಡಬಹುದು ಎನ್ನುವುದನ್ನು ತಿಳಿಯಲು ಕೆಳಗಡೆ ಓದಿ:
A. ಮರುಪಾವತಿ ಕ್ಲೈಮ್
ನಿಗದಿತ ಸರ್ಜರಿ ಮತ್ತು ಚಿಕಿತ್ಸೆಯನ್ನು ಮುಂಚಿತವಾಗಿ ಅಥವಾ ದಾಖಲಾದ ಎರಡು ದಿನಗಳಲ್ಲಿ ನಮಗೆ ತಿಳಿಸಿ. ಆದಾಗ್ಯೂ, ಕೆಟರಾಕ್ಟ್ ಸರ್ಜರಿಯನ್ನು ಸಾಮಾನ್ಯವಾಗಿ ಮುಂಚಿತವಾಗಿ ನಿಗದಿಪಡಿಸಲಾಗಿರುವುದರಿಂದ, ನೀವು ನಮಗೆ ಮೊದಲೇ ತಿಳಿಸುವುದು ಉತ್ತಮ! ಇದರಿಂದ ಕೊನೆಕ್ಷಣದ ಸಮಸ್ಯೆಗಳನ್ನು ತಪ್ಪಿಸಬಹುದು.
1800-258-4242 ಸಂಖ್ಯೆಗೆ ಕರೆ ಮಾಡುವ ಮೂಲಕ ನೀವು ನಮಗೆ ತಿಳಿಸಬಹುದು ಅಥವಾ healthclaims@godigit.com ನಲ್ಲಿ ನಮಗೆ ಇಮೇಲ್ ಮಾಡಬಹುದು ಮತ್ತು ಅಗತ್ಯವಿರುವ ಎಲ್ಲ ದಾಖಲೆಗಳನ್ನು ಅಪ್‌ಲೋಡ್ ಮಾಡಲು ನಾವು ನಿಮಗೆ ಲಿಂಕ್ ಒಂದನ್ನು ಕಳುಹಿಸುತ್ತೇವೆ. ಸರ್ಜರಿಯ ನಂತರ, ಮರುಪಾವತಿಯನ್ನು ಅದರ ಆರಂಭಿಕ ಹಂತದಲ್ಲಿಯೇ ಮಾಡಲಾಗುತ್ತದೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
B. ಕ್ಯಾಶ್‌ಲೆಸ್ ಕ್ಲೈಮ್
ನೀವು ಕ್ಯಾಶ್‌ಲೆಸ್ ಕ್ಲೈಮ್ ಅನ್ನು ಬಯಸಿದರೆ, ನೀವು ಕೆಟರಾಕ್ಟ್ ಸರ್ಜರಿಯನ್ನು ಮಾಡಿಸಲು ಬಯಸುವ ನೆಟ್‌ವರ್ಕ್ ಆಸ್ಪತ್ರೆಯನ್ನು ಮೊದಲು ಆಯ್ಕೆ ಮಾಡಬಹುದು.
ಮೇಲಿನ ದೂರವಾಣಿ ಸಂಖ್ಯೆಯಲ್ಲಿ ಅಥವಾ ಇಮೇಲ್‌ನಲ್ಲಿ ಕನಿಷ್ಠ 72-ಗಂಟೆಗಳ ಮುಂಚಿತವಾಗಿ ನಮಗೆ ಮಾಹಿತಿ ತಿಳಿಸಿ.
ನೆಟ್‌ವರ್ಕ್ ಆಸ್ಪತ್ರೆಯ ಡೆಸ್ಕ್‌ನಲ್ಲಿ, ನಿಮ್ಮ ಇ-ಹೆಲ್ತ್ ಕಾರ್ಡ್ ಅನ್ನು ತೋರಿಸಿ. ಮತ್ತು 'ಕ್ಯಾಶ್‌ಲೆಸ್ ರಿಕ್ವೆಸ್ಟ್ ಫಾರ್ಮ್' ಅನ್ನು ಕೇಳಿ. ಎಲ್ಲವೂ ಸರಿಯಾಗಿದ್ದರೆ, ನಿಮ್ಮ ಕ್ಲೈಮ್ ಅಲ್ಲಿಯೇ ಪ್ರಕ್ರಿಯೆಗೊಳ್ಳುತ್ತದೆ!
ಕೆಟರಾಕ್ಟ್ ಕವರ್ ಮಾಡುವ ಹೆಲ್ತ್ ಇನ್ಶೂರೆನ್ಸಿಗೆ ಸಂಬಂಧಿಸಿದ ಪ್ರಶ್ನೆಗಳು.
ಯಾವ ವಯಸ್ಸಿನವರು ಕೆಟರಾಕ್ಟ್‌ಗೆ ಗುರಿಯಾಗುತ್ತಾರೆ?
ಹೆಚ್ಚಾಗಿ, ಹಿರಿಯ ವಯಸ್ಸಿನವರು ಕ್ಯಾಟರಾಕ್ಟ್‌ಗೆ ಹೆಚ್ಚು ಒಳಗಾಗುತ್ತಾರೆ.
ಎಲ್ಲಾ ಮೆಡಿಕಲ್ ಹೆಲ್ತ್ ಇನ್ಶೂರೆನ್ಸ್, ಕ್ಯಾಟರಾಕ್ಟ್ ಸರ್ಜರಿಯನ್ನು ಕವರ್ ಮಾಡುತ್ತವೆಯೇ?
ಇಲ್ಲ, ಇದು ವಿವಿಧ ಹೆಲ್ತ್ ಇನ್ಶೂರೆನ್ಸ್ ಪೂರೈಕೆದಾರರ ನಿಯಮಗಳು ಮತ್ತು ಷರತ್ತುಗಳನ್ನು ಅವಲಂಬಿಸಿರುತ್ತದೆ. ನಿಮ್ಮ ಪಾಲಿಸಿ ಡಾಕ್ಯುಮೆಂಟ್ ಅನ್ನು ಪರಿಶೀಲಿಸುವುದು ಯಾವಾಗಲೂ ಉತ್ತಮ ಹೆಜ್ಜೆಯಾಗಿದೆ. ಅಥವಾ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರನ್ನು, ನಿಮ್ಮ ಪಾಲಿಸಿಯು ಕ್ಯಾಟರಾಕ್ಟ್ ಸರ್ಜರಿಯನ್ನು ಕವರ್ ಮಾಡುತ್ತದೆಯೇ ಇಲ್ಲವೇ ಎಂಬುದನ್ನು ಕೇಳಿ ತಿಳಿಯಿರಿ.😊 ಡಿಜಿಟ್‌ನಲ್ಲಿ, ಇದು ಡೇಕೇರ್ ಕಾರ್ಯವಿಧಾನಗಳ ಅಡಿಯಲ್ಲಿ ಕವರ್ ಆಗುತ್ತದೆ.
ಕ್ಯಾಟರಾಕ್ಟ್ ಸರ್ಜರಿಗೆ ಕಾಯುವ ಅವಧಿ ಇದೆಯೇ?
ಹೌದು, ಕ್ಯಾಟರಾಕ್ಟ್ ಸರ್ಜರಿಗೆ ಕನಿಷ್ಠ 2 ವರ್ಷಗಳ ಕಾಯುವ ಅವಧಿಯಿದೆ, ಡಿಜಿಟ್‌ನಲ್ಲಿ, ಇದು ನಿರ್ದಿಷ್ಟ ಕಾಯಿಲೆಗಳ ಅಡಿಯಲ್ಲಿ ಬರುತ್ತದೆ.
ಒಂದುವೇಳೆ ನನಗೆ ಮಧುಮೇಹವಿದ್ದರೆ, ಇದರರ್ಥ ನನಗೂ ಕೆಟರಾಕ್ಟ್ ಬರುತ್ತದೆಯೇ?
ಇಲ್ಲ, ನೀವು ಮಧುಮೇಹಿಗಳಾಗಿರುವ ಕಾರಣ ನಿಮಗೆ ಕೆಟರಾಕ್ಟ್ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಆದಾಗ್ಯೂ, ಮಧುಮೇಹ ಹೊಂದಿರುವ ಜನರು (ವಿಶೇಷವಾಗಿ ಹೆಚ್ಚಿನ ಮಟ್ಟದಲ್ಲಿದ್ದವರು ) ದ್ವಿತೀಯ ಕೆಟರಾಕ್ಟ್ ಅನ್ನು ಪಡೆಯುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತದೆ.
ಕೆಟರಾಕ್ಟ್ ಸರ್ಜರಿಗಾಗಿ ನಾನು ಪ್ರತ್ಯೇಕವಾಗಿ ಆಡ್-ಆನ್ ಕವರ್ ಅನ್ನು ಪಡೆಯಬೇಕೇ?
ಇದು ಮತ್ತೇ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪೂರೈಕೆದಾರರ ಮೇಲೆ ಅವಲಂಬಿತವಾಗಿರುತ್ತದೆ. ಆದಾಗ್ಯೂ, ಡಿಜಿಟ್‌ನಲ್ಲಿ - ಕೆಟರಾಕ್ಟ್ ಸರ್ಜರಿಗಳು ಡೇಕೇರ್ ಕಾರ್ಯವಿಧಾನಗಳ ಅಡಿಯಲ್ಲಿ ಕವರ್ ಆಗುತ್ತವೆ. ಇವುಗಳನ್ನು ನಮ್ಮ ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಆಯ್ಕೆಗಳಲ್ಲಿ, ಡೀಫಾಲ್ಟ್ ಆಗಿ ಸೇರಿಸಲಾಗಿದೆ.
ಕೆಟರಾಕ್ಟ್ ಹೊಂದಿರುವ ಪ್ರತಿಯೊಬ್ಬರಿಗೂ ಸರ್ಜರಿಯ ಅಗತ್ಯವಿದೆಯೇ?
ಇದು ಪ್ರಾಥಮಿಕವಾಗಿ ನಿಮ್ಮ ರೋಗಲಕ್ಷಣಗಳು ಮತ್ತು ಪ್ರಸ್ತುತ ದೃಷ್ಟಿಯ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಕೆಟರಾಕ್ಟ್ ಹೊಂದಿರುವ ಹೆಚ್ಚಿನ ಜನರಿಗೆ, ಸರ್ಜರಿಯನ್ನು ಮಾಡಿಸಲು ಶಿಫಾರಸು ಮಾಡಲಾಗುತ್ತದೆ. ಏಕೆಂದರೆ ಇದು ಸುರಕ್ಷಿತವಾಗಿದೆ ಮತ್ತು ದೃಷ್ಟಿಯ ಗುಣಮಟ್ಟವನ್ನು ಯಶಸ್ವಿಯಾಗಿ ಮರುಸ್ಥಾಪಿಸುತ್ತದೆ. ಆದಾಗ್ಯೂ, ನಿಮ್ಮ ಕಣ್ಣುಗಳು ಪ್ರಸ್ತುತ ಎಷ್ಟು ಬಾಧಿತಗೊಂಡಿವೆ ಎಂಬುದರ ಆಧಾರದ ಮೇಲೆ ಸರ್ಜರಿಯನ್ನು ವಿಳಂಬಗೊಳಿಸಬಹುದು. ಅವರಿವರ ಮಾತಿಗಿಂತಲೂ, ಕಣ್ಣಿನ ತಪಾಸಣೆ ಮತ್ತು ಪರೀಕ್ಷೆಯ ನಂತರ ನಿಮಗೆ ಸರಿಯಾದ ಶಿಫಾರಸ್ಸು ಮಾಡಲು, ನಿಮ್ಮ ಕಣ್ಣಿನ ತಜ್ಞರು ಸೂಕ್ತವಾದ ಆಯ್ಕೆಯಾಗಿದ್ದಾರೆ.