ಕೆಟರಾಕ್ಟ್ ಹೆಲ್ತ್ ಇನ್ಶೂರೆನ್ಸ್, ಕಣ್ಣಿನ ಪೊರೆಯ ಚಿಕಿತ್ಸೆಯನ್ನು ಕವರ್ ಮಾಡುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಸೂಚಿಸುತ್ತದೆ. ಇದು ವೃದ್ಧಾಪ್ಯದಲ್ಲಿ ಎದುರಿಸುವ ಸಾಮಾನ್ಯ ಕಣ್ಣಿನ ಸ್ಥಿತಿಯಾಗಿದೆ. ಆದರೆ, ಇದು ಕಣ್ಣಿನ ಗಾಯಗಳಿಂದ ಸಹ ಪ್ರಚೋದಿಸಬಹುದು.
ಡಿಜಿಟ್ನಲ್ಲಿ, ಈ ಚಿಕಿತ್ಸೆಯು ನಮ್ಮ ಡೇಕೇರ್ ಕಾರ್ಯವಿಧಾನಗಳ ಅಡಿಯಲ್ಲಿ ಒಳಗೊಂಡಿರುತ್ತದೆ. ಹಾಗೂ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಕವರ್ ಆಗುತ್ತದೆ.
ಕೆಟರಾಕ್ಟ್ ಎನ್ನುವುದು ಕಣ್ಣಿನ ಮಸೂರದಲ್ಲಿ ದಟ್ಟವಾದ, ಮೋಡದ ಪ್ರದೇಶದಂತಹ ರಚನೆಯಿಂದ ಉಂಟಾಗುವ ಕಣ್ಣಿನ ಸ್ಥಿತಿಯಾಗಿದೆ. ವಯಸ್ಸಾದವರಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ ಮತ್ತು ಚಿಕಿತ್ಸೆಯನ್ನು ನೀಡದೆ ಹಾಗೇ ಬಿಟ್ಟಲ್ಲಿ, ಅದು ಭಾಗಶಃ ಅಥವಾ ಸಂಪೂರ್ಣ ಕುರುಡುತನಕ್ಕೆ ಕಾರಣವಾಗಬಹುದು.
ಕೆಟರಾಕ್ಟ್ಗೆ ಕೇವಲ ಒಂದೇ ಕಾರಣವಿಲ್ಲ. ಹಿರಿಯರಲ್ಲಿ ಇದು ಸಾಮಾನ್ಯವಾದರೂ, ಭಾರತದಲ್ಲಿ 50ರ ಹರೆಯದವರಿಗೂ ಕೆಟರಾಕ್ಟ್ ಬರುತ್ತಿರುವುದು ಟ್ರೆಂಡ್ ಆಗುತ್ತಿದೆ!
ಭಾರತದಲ್ಲಿ ಮಧುಮೇಹದ (ಡಯಾಬಿಟಿಸ್) ಹೆಚ್ಚಳ ಮತ್ತು ಅದರ ಹರಡುವಿಕೆ ಇದಕ್ಕೆ ಒಂದು ಕಾರಣವಾಗಿರಬಹುದು. ಮಧುಮೇಹ ಮತ್ತು ಹೆಚ್ಚುತ್ತಿರುವ ವಯಸ್ಸನ್ನು ಹೊರತುಪಡಿಸಿ, ಕೆಟರಾಕ್ಟ್ಗೆ ಇನ್ನೂ ಕೆಲವು ಕಾರಣಗಳಿವೆ:
ಆಕ್ಸಿಡಂಟ್'ಗಳ ಅಧಿಕ ಉತ್ಪಾದನೆ, ಅಂದರೆ ಸಾಮಾನ್ಯ ದೈನಂದಿನ ಜೀವನದಿಂದಾಗಿ ರಾಸಾಯನಿಕವಾಗಿ ಬದಲಾಗಿರುವ ಆಮ್ಲಜನಕದ ಅಣುಗಳು
ಧೂಮಪಾನ
ನೇರಳಾತೀತ ವಿಕಿರಣ
ಸ್ಟೀರಾಯ್ಡಗಳು ಮತ್ತು ಇತರ ಔಷಧಿಗಳ ದೀರ್ಘಾವಧಿಯ ಬಳಕೆ
ಮಧುಮೇಹದಂತಹ ಕೆಲವು ರೋಗಗಳು
ಹಳೆಯ ಗಾಯಗಳಿಂದ ಕಣ್ಣಿಗೆ ಆಘಾತ
ವಿಕಿರಣ ಚಿಕಿತ್ಸೆ
ಅಸ್ಪಷ್ಟ ದೃಷ್ಟಿ
ರಾತ್ರಿಯಲ್ಲಿ ನೋಡಲು ತೊಂದರೆ
ಬಣ್ಣಗಳು ಮಾಸಿದಂತೆ ಕಾಣುವುದು
ಪ್ರಜ್ವಲಿಸುವಿಕೆಗೆ ಹೆಚ್ಚಿದ ಸಂವೇದನೆ
ಬೆಳಕಿನ ಸುತ್ತಮುತ್ತಲು ಹಾಲೋಸ್
ದೋಷವಿರುವ ಕಣ್ಣಿನಲ್ಲಿ ಎರಡು ದೃಷ್ಟಿಗಳು ಕಾಣುವುದು.
ಪ್ರಿಸ್ಕ್ರಿಪ್ಷನ್ ಗ್ಲಾಸ್ಗಳಲ್ಲಿ ಆಗಾಗ ಬದಲಾವಣೆಗಳ ಅಗತ್ಯತೆ
ಸಾಮಾನ್ಯವಾಗಿ ಕೆಟರಾಕ್ಟ್ ಎನ್ನುವುದು ಕೇವಲ ವೃದ್ಧಾಪ್ಯಕ್ಕೆ ಮಾತ್ರ ಸಂಬಂಧಿಸಿದ್ದು ಎನ್ನುವ ತಪ್ಪು ಕಲ್ಪನೆಯನ್ನು ಜನರು ಹೊಂದಿರುತ್ತಾರೆ.
ಆದಾಗ್ಯೂ, ಇದು ನಿಜವಲ್ಲ. ಕೆಟರಾಕ್ಟ್ ವಿವಿಧ ರೀತಿಯದ್ದಾಗಿರಬಹುದು, ಅದರ ಕಾರಣ ಮತ್ತು ಅದು ಕಣ್ಣಿನ ಯಾವ ಭಾಗವನ್ನು ಬಾಧಿಸುತ್ತದೆ ಎಂಬುದರ ಆಧಾರದ ಮೇಲೆ ನಿರ್ಣಾಯವಾಗುತ್ತದೆ. ಕೆಟರಾಕ್ಟ್ನ ವಿವಿಧ ಪ್ರಕಾರಗಳನ್ನು ಕೆಳಗೆ ನೀಡಲಾಗಿದೆ:
ನ್ಯೂಕ್ಲಿಯರ್ ಕೆಟರಾಕ್ಟ್ಗಳು : ಇದು ಮಸೂರದ ಮಧ್ಯದಲ್ಲಿ ರೂಪುಗೊಳ್ಳುತ್ತದೆ ಮತ್ತು ನ್ಯೂಕ್ಲಿಯಸ್ (ಕಣ್ಣಿನ ಮಧ್ಯಭಾಗ) ಹಳದಿ/ಕಂದು ಬಣ್ಣಕ್ಕೆ ತಿರುಗುತ್ತದೆ.
ಕಾರ್ಟಿಕಲ್ ಕೆಟರಾಕ್ಟ್ಗಳು : ಕಟ್ಟಿಗೆಯ ಚೂರಿನಾಕಾರದ, ನ್ಯೂಕ್ಲಿಯಸ್ ಅಂಚಿನ ಸುತ್ತಲೂ ರೂಪುಗೊಳ್ಳುತ್ತದೆ.
ಹಿಂಭಾಗದ ಕ್ಯಾಪ್ಸುಲರ್ ಕೆಟರಾಕ್ಟ್ಗಳ: ಇತರ ಕೆಟರಾಕ್ಟ್ಗಳಿಗೆ ಹೋಲಿಸಿದರೆ ಇದು ಅತ್ಯಂತ ವೇಗವಾಗಿ ರೂಪುಗೊಳ್ಳುತ್ತದೆ ಮತ್ತು ಕಣ್ಣಿನ ಮಸೂರದ ಹಿಂಭಾಗದ ಮೇಲೆ ಪರಿಣಾಮ ಬೀರುತ್ತದೆ.
ಜನ್ಮಜಾತ ಕೆಟರಾಕ್ಟ್ಗಳ: ಒಂದು ವಿಧದ ಕೆಟರಾಕ್ಟ್ ಆಗಿದ್ದು, ಇದು ವಯಸ್ಸಾಗುತ್ತಿರುವ ಕಾರಣದಿಂದ ಉಂಟಾಗುವುದಿಲ್ಲ. ಆದರೆ ಇದು ಹುಟ್ಟಿನಿಂದಲೇ ಇರುತ್ತದೆ ಅಥವಾ ಮಗುವಿನ ಮೊದಲ ವರ್ಷದಲ್ಲಿ ರೂಪುಗೊಂಡಿರುತ್ತದೆ.
ದ್ವಿತೀಯ ಕೆಟರಾಕ್ಟ್ಗಳು : ಮತ್ತೊಂದು ಕಾಯಿಲೆಯ ಕಾರಣದಿಂದ ಅಥವಾ ಮಧುಮೇಹ ಮತ್ತು ಗ್ಲುಕೋಮಾದಂತಹ ಆರೋಗ್ಯ ಸ್ಥಿತಿಯಿಂದ ಉಂಟಾಗುತ್ತದೆ. ಹೆಚ್ಚುವರಿಯಾಗಿ, ಸ್ಟೀರಾಯ್ಡಗಳು ಮತ್ತು ಇತರ ಔಷಧಿಗಳ ಬಳಕೆಯು ಕೆಟರಾಕ್ಟ್ಗೆ ಕಾರಣವಾಗಬಹುದು.
ಆಘಾತಕಾರಿ ಕೆಟರಾಕ್ಟ್ಗಳು: ಕೆಲವೊಮ್ಮೆ, ಕಣ್ಣಿನ ಗಾಯದ ನಂತರ ಆಘಾತಕಾರಿ ಕೆಟರಾಕ್ಟ್ಗಳು ಬೆಳೆಯಬಹುದು, ಆದರೂ ಇದು ಉಂಟಾಗಲು ವರ್ಷಗಳನ್ನು ತೆಗೆದುಕೊಳ್ಳಬಹುದು.
ವಿಕಿರಣ ಕೆಟರಾಕ್ಟ್ಗಳು: ಒಬ್ಬ ವ್ಯಕ್ತಿಯು ಕ್ಯಾನ್ಸರ್ಗೆ ಸಂಬಂಧಿಸಿದ ವಿಕಿರಣ ಚಿಕಿತ್ಸೆಗೆ ಒಳಗಾದ ನಂತರ ಇದು ಸಂಭವಿಸಬಹುದು.
ಹೌದು, ಕೆಟರಾಕ್ಟ್ ಅನ್ನು ಪ್ರಾಥಮಿಕವಾಗಿ ನಿಮ್ಮ ಕಣ್ಣಿನ ಆರೋಗ್ಯ ಮತ್ತು ಒಟ್ಟಾರೆ ಆರೋಗ್ಯ - ಯೋಗಕ್ಷೇಮವನ್ನು ಕಾಪಾಡಿಕೊಳ್ಳುವ ಮೂಲಕ ತಡೆಗಟ್ಟಬಹುದು. ಕೆಟರಾಕ್ಟ್ ಅನ್ನು ತಡೆಗಟ್ಟುವ ಕೆಲವು ವಿಧಾನಗಳು:
ಹಗಲು ಹೊತ್ತಿನಲ್ಲಿ ಯುವಿಬಿ (UVB) ಕಿರಣಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಸನ್ಗ್ಲಾಸ್ ಅನ್ನು ಧರಿಸಿ.
ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿ. ವಿಶೇಷವಾಗಿ ನೀವೇನಾದರೂ ಕಣ್ಣಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ 65 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಕಣ್ಣಿನ ತಪಾಸಣೆ ಅವಶ್ಯವಾಗಿ ಮಾಡಿಸಿ.
ಧೂಮಪಾನ ನಿಲ್ಲಿಸಿ!
ಆಂಟಿ ಆಕ್ಸಿಡಂಟ್'ಗಳನ್ನು ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ನಿಯಮಿತವಾಗಿ ಸೇವಿಸಿ.
ಇದು ಇತರ ಕಾಯಿಲೆಗಳನ್ನು ತಡೆಗಟ್ಟುವುದರಿಂದ - ಯಾವಾಗಲೂ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ.
ನೀವು ಮಧುಮೇಹಿಗಳಾಗಿದ್ದರೆ, ನಿಮ್ಮ ಮಧುಮೇಹದ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.
ಹೌದು, ದುರದೃಷ್ಟವಶಾತ್ ಕೆಲವರು ಇತರರಿಗಿಂತ ಕೆಟರಾಕ್ಟ್ಗೆ ಹೆಚ್ಚು ಒಳಗಾಗುತ್ತಾರೆ. ಈ ಕೆಲವು ಅಪಾಯಕಾರಿ ಅಂಶಗಳು ಕೆಳಗಿನವುಗಳನ್ನು ಒಳಗೊಂಡಿವೆ:
ಹೆಚ್ಚುತ್ತಿರುವ ವಯಸ್ಸು
ಅತಿಯಾದ ಮದ್ಯ ಸೇವನೆ
ನಿಯಮಿತ ಧೂಮಪಾನ
ಬೊಜ್ಜು
ತೀವ್ರ ರಕ್ತದೊತ್ತಡ
ಹಳೆಯ ಕಣ್ಣಿನ ಗಾಯಗಳು
ಕೆಟರಾಕ್ಟ್ಗಳಿಗೆ ಸಂಬಂಧಿಸಿದಂತೆ ಕುಟುಂಬದ ಇತಿಹಾಸ
ಅತಿಯಾಗಿ ಸೂರ್ಯನಿಗೆ ಮೈಯೊಡ್ಡುವುದು
ಮಧುಮೇಹ
X- ಕಿರಣಗಳು ಮತ್ತು ಕ್ಯಾನ್ಸರ್ ಚಿಕಿತ್ಸೆಗಳಿಂದ ವಿಕಿರಣಕ್ಕೆ ಒಡ್ಡಿಕೊಳ್ಳುವುದು
ಫ್ಯಾಕೋಎಮಲ್ಸಿಫಿಕೇಶನ್ ಕೆಟರಾಕ್ಟ್ ಸರ್ಜರಿ ಎನ್ನುವುದು ಕೆಟರಾಕ್ಟ್ ಸರ್ಜರಿಯ ಅತ್ಯಂತ ಸಾಮಾನ್ಯ ರೂಪವಾಗಿದ್ದರೂ, ಕೆಟರಾಕ್ಟ್ಗೆ ಇತರ ರೀತಿಯ ಸರ್ಜರಿಗಳೂ ಇವೆ.
ನಿಮ್ಮ ವೈದ್ಯರ ಶಿಫಾರಸ್ಸಿನಂತೆ, ನೀವು ವಾಸಿಸುವ ನಗರ, ನೀವು ಆಯ್ಕೆ ಮಾಡುವ ಆಸ್ಪತ್ರೆ ಮತ್ತು ನಿಮ್ಮ ವಯಸ್ಸಿನ ಆಧಾರದ ಮೇಲೆ, ಭಾರತದಲ್ಲಿ ಕೆಟರಾಕ್ಟ್ ಸರ್ಜರಿಯ ವೆಚ್ಚವು ಭಿನ್ನವಾಗಿರುತ್ತದೆ. ಭಾರತದಲ್ಲಿನ ಮೂರು ವಿಭಿನ್ನ ರೀತಿಯ ಕೆಟರಾಕ್ಟ್ ಸರ್ಜರಿಗಳಿಗೆ ಸರಿಸುಮಾರು ಎಷ್ಟು ವೆಚ್ಚವಾಗುತ್ತದೆ ಎಂಬುದನ್ನು ಕೆಳಗೆ ನೀಡಲಾಗಿದೆ:
ಫಾಕೋಎಮಲ್ಸಿಫಿಕೇಶನ್ ಕೆಟರಾಕ್ಟ್ ಸರ್ಜರಿ |
ಹೆಚ್ಚುವರಿ ಕ್ಯಾಪ್ಸುಲರ್ ಕೆಟರಾಕ್ಟ್ ಸರ್ಜರಿ |
ಬ್ಲೇಡ್ಲೆಸ್ ಕೆಟರಾಕ್ಟ್ ಸರ್ಜರಿ |
ಏನಿದು : ಕೆಟರಾಕ್ಟ್ ಅನ್ನು ಒಡೆಯಲು ಮತ್ತು ತೆಗೆದುಹಾಕಲು ದೋಷವಿರುವ ಕಾರ್ನಿಯಾದಲ್ಲಿ ಸಣ್ಣ ಛೇದನವನ್ನು ಮಾಡುವ ಮೊದಲು, ಲೋಕಲ್ ಅನಸ್ತೇಷಿಯ ಬಳಸಿ ಕೆಟರಾಕ್ಟ್ ಸರ್ಜರಿಯನ್ನು ಮಾಡುವ ಅತ್ಯಂತ ಸಾಮಾನ್ಯವಾದ ಸರ್ಜರಿ. |
ಆದರೆ ಇಲ್ಲಿ ಅಗತ್ಯವಿರುವ ಛೇದನದ ಗಾತ್ರ, ಸಾಮಾನ್ಯಕ್ಕಿಂತ ದೊಡ್ಡದಾಗಿದೆ |
ಏನಿದು : ಈ ಸರ್ಜರಿಯು ಯಾವುದೇ ಛೇದನದ ವಿಧಾನಗಳನ್ನು ಬಳಸುವುದಿಲ್ಲ ಬದಲಿಗೆ ಕೆಟರಾಕ್ಟ್ ಅನ್ನು ಕರಗಿಸುವ ಕಂಪ್ಯೂಟರ್-ಮಾರ್ಗದರ್ಶಿತ ಫೆಮ್ಟೋಸೆಕೆಂಡ್ ಲೇಸರ್ ಮೂಲಕ ಕೆಟರಾಕ್ಟ್ಗೆ ಚಿಕಿತ್ಸೆ ನೀಡುತ್ತದೆ. |
ವೆಚ್ಚ: ಬಾಧಿತ ಕಣ್ಣಿಗೆ ಸುಮಾರು ₹40,000 |
ವೆಚ್ಚ: ಬಾಧಿತ ಕಣ್ಣಿಗೆ ₹40,000 ರಿಂದ ₹60,000 |
ವೆಚ್ಚ: ಈ ಸರ್ಜರಿಯು ತೀರಾ ಇತ್ತೀಚಿನದು. ಮತ್ತು ಅತ್ಯಂತ ತಾಂತ್ರಿಕ ಸ್ವರೂಪದ್ದಾಗಿದೆ. ಇದು ಇತರ ಸರ್ಜರಿಗಿಂತ ಹೆಚ್ಚು ದುಬಾರಿಯಾಗಿದೆ. ಅಂದರೆ ಬಾಧಿತ ಕಣ್ಣಿಗೆ ಸುಮಾರು ₹85,000 ರಿಂದ ₹120,000 |
ಡಿಸ್ ಕ್ಲೇಮರ್ : ಮೇಲಿನ ವೆಚ್ಚಗಳು ಕೇವಲ ಅಂದಾಜು ವೆಚ್ಚಗಳಾಗಿವೆ ಮತ್ತು ಆಸ್ಪತ್ರೆಯಿಂದ ಆಸ್ಪತ್ರೆಗೆ ಮತ್ತು ನಗರದಿಂದ ನಗರಕ್ಕೆ ಈ ವೆಚ್ಚಗಳು ಭಿನ್ನವಾಗಿರಬಹುದು.
ಸಹಪಾವತಿ |
ಇಲ್ಲ |
ರೂಮ್ ಬಾಡಿಗೆ ಮಿತಿ |
ಇಲ್ಲ |
ಕ್ಯಾಶ್ಲೆಸ್ ಆಸ್ಪತ್ರೆಗಳು |
ಭಾರತದಾದ್ಯಂತ 10500+ ಕ್ಯಾಶ್ಲೆಸ್ ಆಸ್ಪತ್ರೆಗಳು |
ಅಂತರ್ಗತ ವೈಯಕ್ತಿಕ ಅಪಘಾತ ಕವರ್ |
ಹೌದು |
ವೆಲ್ ನೆಸ್ ಪ್ರಯೋಜನಗಳು |
10+ ವೆಲ್ನೆಸ್ ಪಾಲುದಾರರಿಂದ ಲಭ್ಯವಿದೆ |
ನಗರ ಆಧಾರಿತ ಡಿಸ್ಕೌಂಟ್ |
10% ವರೆಗೆ ಡಿಸ್ಕೌಂಟ್ |
ವಿಶ್ವಾದ್ಯಂತ ಕವರೇಜ್ |
ಹೌದು* |
ಉತ್ತಮ ಆರೋಗ್ಯ ಡಿಸ್ಕೌಂಟ್ |
5% ವರೆಗೆ ಡಿಸ್ಕೌಂಟ್ |
ಉಪಭೋಗ್ಯ ಕವರ್ |
ಆಡ್-ಆನ್ ಆಗಿ ಲಭ್ಯವಿದೆ |
*ವಿಶ್ವಾದ್ಯಂತ ಚಿಕಿತ್ಸಾ ಯೋಜನೆಯಲ್ಲಿ ಮಾತ್ರ ಲಭ್ಯವಿದೆ
ಡಿಜಿಟ್ನ ಹೆಲ್ತ್ ಇನ್ಶೂರೆನ್ಸ್ 'ಡೇಕೇರ್ ಪ್ರೊಸೀಜರ್ಸ್' ಅಡಿಯಲ್ಲಿ ಕೆಟರಾಕ್ಟ್ ಸರ್ಜರಿಯನ್ನು ಕವರ್ ಮಾಡುತ್ತದೆ. ಏಕೆಂದರೆ ಇದು ಚಿಕಿತ್ಸೆಯಲ್ಲಿನ ವೈದ್ಯಕೀಯ ಪ್ರಗತಿಯಿಂದಾಗಿ 24-ಗಂಟೆಗಳೊಳಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುವ, ವೈದ್ಯಕೀಯ ಚಿಕಿತ್ಸೆಯಾಗಿ ಅರ್ಹತೆ ಪಡೆಯುತ್ತದೆ.
ನೀವು ಕೆಟರಾಕ್ಟ್ ಸರ್ಜರಿಯನ್ನು ಮಾಡಿಸಿಕೊಳ್ಳಲು ಬಯಸಿದರೆ ಮತ್ತು ನಮ್ಮೊಂದಿಗೆ ಇನ್ಶೂರೆನ್ಸ್ ಖರೀದಿಸಿದ್ದರೆ - ನೀವು ಹೇಗೆ ಕ್ಲೈಮ್ ಮಾಡಬಹುದು ಎನ್ನುವುದನ್ನು ತಿಳಿಯಲು ಕೆಳಗಡೆ ಓದಿ:
ನಿಗದಿತ ಸರ್ಜರಿ ಮತ್ತು ಚಿಕಿತ್ಸೆಯನ್ನು ಮುಂಚಿತವಾಗಿ ಅಥವಾ ದಾಖಲಾದ ಎರಡು ದಿನಗಳಲ್ಲಿ ನಮಗೆ ತಿಳಿಸಿ. ಆದಾಗ್ಯೂ, ಕೆಟರಾಕ್ಟ್ ಸರ್ಜರಿಯನ್ನು ಸಾಮಾನ್ಯವಾಗಿ ಮುಂಚಿತವಾಗಿ ನಿಗದಿಪಡಿಸಲಾಗಿರುವುದರಿಂದ, ನೀವು ನಮಗೆ ಮೊದಲೇ ತಿಳಿಸುವುದು ಉತ್ತಮ! ಇದರಿಂದ ಕೊನೆಕ್ಷಣದ ಸಮಸ್ಯೆಗಳನ್ನು ತಪ್ಪಿಸಬಹುದು.
1800-258-4242 ಸಂಖ್ಯೆಗೆ ಕರೆ ಮಾಡುವ ಮೂಲಕ ನೀವು ನಮಗೆ ತಿಳಿಸಬಹುದು ಅಥವಾ healthclaims@godigit.com ನಲ್ಲಿ ನಮಗೆ ಇಮೇಲ್ ಮಾಡಬಹುದು ಮತ್ತು ಅಗತ್ಯವಿರುವ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಲು ನಾವು ನಿಮಗೆ ಲಿಂಕ್ ಒಂದನ್ನು ಕಳುಹಿಸುತ್ತೇವೆ. ಸರ್ಜರಿಯ ನಂತರ, ಮರುಪಾವತಿಯನ್ನು ಅದರ ಆರಂಭಿಕ ಹಂತದಲ್ಲಿಯೇ ಮಾಡಲಾಗುತ್ತದೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
ನೀವು ಕ್ಯಾಶ್ಲೆಸ್ ಕ್ಲೈಮ್ ಅನ್ನು ಬಯಸಿದರೆ, ನೀವು ಕೆಟರಾಕ್ಟ್ ಸರ್ಜರಿಯನ್ನು ಮಾಡಿಸಲು ಬಯಸುವ ನೆಟ್ವರ್ಕ್ ಆಸ್ಪತ್ರೆಯನ್ನು ಮೊದಲು ಆಯ್ಕೆ ಮಾಡಬಹುದು.
ಮೇಲಿನ ದೂರವಾಣಿ ಸಂಖ್ಯೆಯಲ್ಲಿ ಅಥವಾ ಇಮೇಲ್ನಲ್ಲಿ ಕನಿಷ್ಠ 72-ಗಂಟೆಗಳ ಮುಂಚಿತವಾಗಿ ನಮಗೆ ಮಾಹಿತಿ ತಿಳಿಸಿ.
ನೆಟ್ವರ್ಕ್ ಆಸ್ಪತ್ರೆಯ ಡೆಸ್ಕ್ನಲ್ಲಿ, ನಿಮ್ಮ ಇ-ಹೆಲ್ತ್ ಕಾರ್ಡ್ ಅನ್ನು ತೋರಿಸಿ. ಮತ್ತು 'ಕ್ಯಾಶ್ಲೆಸ್ ರಿಕ್ವೆಸ್ಟ್ ಫಾರ್ಮ್' ಅನ್ನು ಕೇಳಿ. ಎಲ್ಲವೂ ಸರಿಯಾಗಿದ್ದರೆ, ನಿಮ್ಮ ಕ್ಲೈಮ್ ಅಲ್ಲಿಯೇ ಪ್ರಕ್ರಿಯೆಗೊಳ್ಳುತ್ತದೆ!