ಆರೋಗ್ಯ ಸಂಜೀವಿನಿ ಪಾಲಿಸಿ ಎಂದರೇನು?
ಆರೋಗ್ಯ ಸಂಜೀವನಿ ಹೆಲ್ತ್ ಇನ್ಶೂರೆನ್ಸಿನ ಪ್ರಮಾಣಿತ ಹೆಲ್ತ್ ಇನ್ಶೂರೆನ್ಸಿನ ಯೋಜನೆಯಾಗಿದ್ದು, ಇದು 3 ಲಕ್ಷದಿಂದ 2 ಕೋಟಿವರೆಗಿನ ಇನ್ಶೂರೆನ್ಸ್ ಮೊತ್ತದೊಂದಿಗೆ ಆರೋಗ್ಯ ವೆಚ್ಚಗಳಿಗಾಗಿ ನಿಮಗೆ ಕವರ್ ನೀಡುತ್ತದೆ. ಈ ಕವರೇಜ್ ಆಸ್ಪತ್ರೆಯ ಪೂರ್ವ ಮತ್ತು ನಂತರದ ವೆಚ್ಚಗಳು, ಆಸ್ಪತ್ರೆಯ ಕೊಠಡಿ ಬಾಡಿಗೆ (ವಾಸ ಮತ್ತು ಹಾಸಿಗೆ ಶುಲ್ಕಗಳು), ಐಸಿಯು ಸೇವೆಗಳು ಮತ್ತು ಹೊಸ-ವಯಸ್ಸಿನ ಚಿಕಿತ್ಸೆಗಳನ್ನು ಒಳಗೊಂಡಿದೆ.
ಡಿಜಿಟ್ ನೀಡುವ ಆರೋಗ್ಯ ಸಂಜೀವನಿ ಹೆಲ್ತ್ ಇನ್ಶೂರೆನ್ಸ್ ನೊಂದಿಗೆ , ನೀವು ಮತ್ತು ನಿಮ್ಮ ಕುಟುಂಬಕ್ಕಾಗಿ ಫ್ಯಾಮಿಲಿ ಫ್ಲೋಟರ್ ಯೋಜನೆ ಅಥವಾ ವೈಯಕ್ತಿಕ ಪಾಲಿಸಿಯ ನಡುವೆ ಆಯ್ಕೆ ಮಾಡಬಹುದು.
ಆರೋಗ್ಯ ಸಂಜೀವಿನಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಮಹತ್ವವೇನು?
ಸಾಮಾನ್ಯವಾಗಿ ನಿಮಗೆ ಆಗಾಗ ತಳಮಳ ಉಂಟಾಗುತ್ತಿದ್ದರೆ, ಮತ್ತು ಆನ್‌ಲೈನ್‌ನಲ್ಲಿ ವಿವಿಧ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಯಾವುದನ್ನೂ ಆಯ್ದುಕೊಳ್ಳಬೇಕೆಂದು ಗೊಂದಲಕ್ಕೊಳಗಾಗಿದ್ದರೆ, ಚಿಂತಿಸಬೇಡಿ, ನೀವು ಒಬ್ಬಂಟಿಯಲ್ಲ, ನಿಮ್ಮೊಂದಿಗೆ ನಾವಿದ್ದೇವೆ. ಅದಕ್ಕಾಗಿಯೇ, ಆರೋಗ್ಯ ಸಂಜೀವನಿ ಹೆಲ್ತ್ ಇನ್ಶೂರೆನ್ಸ್ ಅನ್ನು IRDAI ಮೂಲಕ ಪ್ರಾರಂಭಿಸಲಾಗಿದೆ. ಅಂದರೆ ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ಒಂದೇ ರೀತಿಯ ಪ್ರಯೋಜನಗಳೊಂದಿಗೆ ನೀಡಲಾಗುವ ಬೇಸಿಕ್, ಸ್ಟ್ಯಾಂಡರ್ಡ್ ಪ್ಲ್ಯಾನ್ ಅನ್ನು ಒದಗಿಸುವ ಮೂಲಕ ಹೆಲ್ತ್ ಇನ್ಶೂರೆನ್ಸ್ ಅನ್ನು ಸರಳಗೊಳಿಸುವ ವಿಧಾನವಿದು.
ಖರೀದಿ ಮತ್ತು ಕ್ಲೇಮ್ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಹೆಲ್ತ್ ಇನ್ಶೂರೆನ್ಸ್ ಪೂರೈಕೆದಾರರು ನೀಡುವ ಸೇವೆ, ಪ್ರತಿ ಇನ್ಶೂರೆನ್ಸ್ ಸಂಸ್ಥೆಯ ನೆಟ್‌ವರ್ಕ್‌ನಲ್ಲಿ ಲಭ್ಯವಿರುವ ನಗದು ರಹಿತ ಆಸ್ಪತ್ರೆಗಳು, ಮತ್ತು ಆರೋಗ್ಯ ಸಂಜೀವಿನಿ ಪಾಲಿಸಿ ಪ್ರೀಮಿಯಂಗಳಲ್ಲಿ ಮಾತ್ರ ವ್ಯತ್ಯಾಸವಾಗಬಹುದು.
* ಡಿಸ್ ಕ್ಲೇಮರ್ - ₹640/ತಿಂಗಳ ಪ್ರೀಮಿಯಂ ಅನ್ನು 30 ವರ್ಷ ವಯಸ್ಸಿನವರಿಗೆ ಯಾವುದೇ ಆರೋಗ್ಯ ಅನಾರೋಗ್ಯಗಳಿಲ್ಲದೆ 1 ಕೋಟಿ ಇನ್ಶೂರೆನ್ಸ್ ಮೊತ್ತಕ್ಕೆ ಲೆಕ್ಕಹಾಕಲಾಗುತ್ತದೆ. ಈ ಪ್ರೀಮಿಯಂ ಮೊತ್ತದಲ್ಲಿ GST ಒಳಗೊಂಡಿಲ್ಲ.
ನೀವು ಆರೋಗ್ಯ ಸಂಜೀವಿನಿ ಪಾಲಿಸಿಯನ್ನು ಏಕೆ ಖರೀದಿಸಬೇಕು?
ಭಾರತದಲ್ಲಿ ಆರೋಗ್ಯ ವೆಚ್ಚಗಳು ಮತ್ತು ಆರೋಗ್ಯದ ಪರಿಸ್ಥಿತಿಗಳು ಹೆಚ್ಚುತ್ತಿವೆ.
ಇಂದು ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಆರೋಗ್ಯ ಸಂಜೀವನಿ ಪಾಲಿಸಿಯು ಒಂದಾಗಿದೆ.
ಕನಿಷ್ಠ ಬೇಸಿಕ್ ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದುವುದು ಬುದ್ದಿವಂತ ಹಣಕಾಸು ಯೋಜನೆಯ ಮತ್ತು ಹೂಡಿಕೆಯ ಪ್ರಮುಖ ಕೀಲಿಕೈ ಆಗಿದೆ!
ಭಾರತವು ವಿಶ್ವದ ಅತ್ಯಂತ ಹೀನಾಯ ಕೋವಿಡ್ ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ಪಾಲಿಸಿಯು ನಿಮಗೆ ವೆಚ್ಚ-ಪರಿಣಾಮಕಾರಿ ಆಯ್ಕೆಯಾಗಿರಬಹುದು. ಏಕೆಂದರೆ ಆರೋಗ್ಯ ಸಂಜೀವಿನಿ ಪಾಲಿಸಿಯು, ದೀರ್ಘಾವಧಿಯಲ್ಲಿ ಕೋವಿಡ್-19 ಮತ್ತು ಇತರ ಖಾಯಿಲೆಗಳೆರಡರಿಂದಲೂ ನಿಮ್ಮನ್ನು ಕವರ್ ಮಾಡುತ್ತದೆ.
ಡಿಜಿಟ್ ನ ಆರೋಗ್ಯ ಸಂಜೀವಿನಿ ಪಾಲಿಸಿಯಲ್ಲಿ ಯಾವ ಅಂಶಗಳು ಉತ್ತಮವಾಗಿವೆ?
ಸರಳ ಆನ್‌ಲೈನ್ ಪ್ರಕ್ರಿಯೆಗಳು - ನಿಮ್ಮ ಪಾಲಿಸಿಯನ್ನು ಖರೀದಿಸುವುದರಿಂದ ಹಿಡಿದು ಕ್ಲೇಮ್ ಮಾಡುವವರೆಗೆ ಎಲ್ಲವೂ ಸುಲಭ, ತ್ವರಿತ, ಪೇಪರ್‌ಲೆಸ್ ಮತ್ತು ತೊಂದರೆ ಮುಕ್ತವಾಗಿದೆ! ಯಾವುದೇ ಹಾರ್ಡ್ ಕಾಪಿಗಳ ಅಗತ್ಯವಿಲ್ಲ!
ಇನ್ಶೂರೆನ್ಸ್ ಮೊತ್ತ - ನಿಮ್ಮ ಅವಶ್ಯಕತೆಗಳ ಆಧಾರದ ಮೇಲೆ ನಿಮ್ಮ ಇನ್ಶೂರೆನ್ಸ್ ಮೊತ್ತವನ್ನು ಕಸ್ಟಮೈಸ್ ಮಾಡಿ!
ಕರೋನವೈರಸ್ ನಂತಹ ಸಾಂಕ್ರಾಮಿಕ ರೋಗಗಳನ್ನು ಕವರ್ ಮಾಡುತ್ತದೆ. - COVID-19 ವಿಷಯಕ್ಕೆ ಬಂದರೆ, ಹೆಚ್ಚು ಪೀಡಿತ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ. ನಮ್ಮ ಹೆಲ್ತ್ ಇನ್ಶೂರೆನ್ಸಿನ ಭಾಗವಾಗಿ ನಾವು covid-19 ಅನ್ನು ಕವರ್ ಮಾಡುತ್ತೇವೆ ಆದ್ದರಿಂದ ನೀವು ನಿಜವಾಗಿಯೂ ಪ್ರತ್ಯೇಕ ಕೊರೊನಾವೈರಸ್ ಪಾಲಿಸಿಯನ್ನು ಪಡೆಯಬೇಕಾಗಿಲ್ಲ.
ಸಂಚಿತ ಬೋನಸ್ - ಆರೋಗ್ಯವಾಗಿ ಇರುವುದಕ್ಕೆ ಬಹುಮಾನ ಪಡೆಯಿರಿ! ನಿಮ್ಮ ಕ್ಲೇಮ್-ಫ್ರೀ ವರ್ಷಗಳಿಗೆ ನೀವು ವಾರ್ಷಿಕ ಸಂಚಿತ ಬೋನಸ್ ಪಡೆಯಲು ನೀವು ಅರ್ಹರಾಗುತ್ತೀರಿ.
ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ - ಭಾರತದಲ್ಲಿನ ನಮ್ಮ 6400+ ನೆಟ್‌ವರ್ಕ್ ಆಸ್ಪತ್ರೆಗಳಿಂದ ನಗದುರಹಿತ ಚಿಕಿತ್ಸೆಯನ್ನು ಆಯ್ಕೆಮಾಡಿ ಅಥವಾ ಮರುಪಾವತಿಯನ್ನು ಆರಿಸಿಕೊಳ್ಳಿ.
ಕನಿಷ್ಠ ಸಹಪಾವತಿ - ಹೆಲ್ತ್ ಇನ್ಶೂರೆನ್ಸ್ ಕ್ಲೇಮ್ ಸಮಯದಲ್ಲಿ, ನಿಮ್ಮ ಜೇಬಿನಿಂದ ನೀವು ಕ್ಲೇಮ್ ಮೊತ್ತದ 5% ಅನ್ನು ಪಾವತಿಸಬೇಕಾಗುತ್ತದೆ.
24X7 ಗ್ರಾಹಕ ನೆರವು - ನಿಮಗೆ ಯಾವುದೇ ಸಹಾಯದ ಅಗತ್ಯವಿದ್ದಲ್ಲಿ, ನೀವು ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ ನಮ್ಮ 24x7 ಕರೆಯ ಸೌಲಭ್ಯವನ್ನು ಬಳಸಬಹುದು.
ಸೂಪರ್ ಸುಲಭವಾದ ಕ್ಲೈಮ್‌ಗಳು - ನಮ್ಮ ಕ್ಲೈಮ್‌ಗಳ ಪ್ರಕ್ರಿಯೆಯು ಸಂಪೂರ್ಣವಾಗಿ ತಂತ್ರಜ್ಞಾನ-ಸಕ್ರಿಯಗೊಳಿಸಲ್ಪಟ್ಟಿದೆ, ಅದಕ್ಕಾಗಿಯೇ ಕ್ಲೈಮ್‌ಗಳನ್ನು ಮಾಡಲು ಸುಲಭ ಹಾಗೂ ಇತ್ಯರ್ಥಪಡಿಸಲು ಸುಲಭವಾಗಿದೆ.
ಆರೋಗ್ಯ ಸಂಜೀವನಿ ಪಾಲಿಸಿ ಪ್ರೀಮಿಯಂನ ಚಾರ್ಟ್ ಮತ್ತು ಕ್ಯಾಲ್ಕುಲೇಟರ್
ಡಿಜಿಟ್‌ನ ಆರೋಗ್ಯ ಸಂಜೀವನಿ ಪಾಲಿಸಿಯು ₹ 3 ಲಕ್ಷದಿಂದ ₹ 50,000 ರ ಗುಣಕಗಳಲ್ಲಿ ₹ 2 ಕೋಟಿ ವರೆಗಿನ ಮೊತ್ತದ ಇನ್ಶೂರೆನ್ಸ್ ಆಯ್ಕೆಗಳನ್ನು ಹೊಂದಿದೆ. ಒಬ್ಬ ವ್ಯಕ್ತಿಗೆ ಕನಿಷ್ಠ ₹3 ಲಕ್ಷ ಮತ್ತು ಗರಿಷ್ಠ ₹2 ಕೋಟಿಗಳ ಇನ್ಶೂರೆನ್ಸ್ ಮೊತ್ತದ ಆರೋಗ್ಯ ಸಂಜೀವಿನಿ ಪಾಲಿಸಿ ಪ್ರೀಮಿಯಂ ಹೋಲಿಕೆ ಇಲ್ಲಿದೆ.*
ಏಜ್ ಗ್ರೂಪ್ | ಆರೋಗ್ಯ ಸಂಜೀವಿನಿ ಪಾಲಿಸಿ ಪ್ರೀಮಿಯಂ (SI 3ಲಕ್ಷಗಳು) | ಆರೋಗ್ಯ ಸಂಜೀವಿನಿ ಪಾಲಿಸಿ ಪ್ರೀಮಿಯಂ (SI 2 ಕೋಟಿಗಳು) |
18-25 | ₹2,414 | ₹9,642 |
26-30 | ₹2,503 | ₹9,999 |
31-35 | ₹2,803 | ₹11,197 |
36-40 | ₹3,702 | ₹13,333 |
41-45 | ₹4,698 | ₹18,764 |
46-50 | ₹6,208 | ₹24,799 |
51-55 | ₹8,420 | ₹33,633 |
56-60 | ₹11,569 | ₹46,211 |
ಆರೋಗ್ಯ ಸಂಜೀವಿನಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಒಳಗೊಂಡಿದೆ?
ಆರೋಗ್ಯ ಸಂಜೀವಿನಿ ಪಾಲಿಸಿಯಲ್ಲಿ ಕವರ್ ಆಗುವ ನ್ಯೂ-ಏಜ್ ಚಿಕಿತ್ಸೆಗಳ ಪಟ್ಟಿ
ಯಾವುದನ್ನು ಒಳಗೊಂಡಿಲ್ಲ?
- ನೀವು ಕ್ಲೇಮ್ ಮಾಡುವಾಗ ವೈದ್ಯಕೀಯ ಕ್ಲೇಮ್‌ಗೆ ಸಂಬಂಧಿಸದ ಯಾವುದೇ ಆಸ್ಪತ್ರೆಯ ವೆಚ್ಚಗಳನ್ನು ಅಥವಾ ಪೂರ್ವ-ಆಸ್ಪತ್ರೆ ವೆಚ್ಚಗಳನ್ನು ಒಳಗೊಂಡಿರುವುದಿಲ್ಲ.
- ಯಾವುದೇ ಸಹ-ಅಸ್ವಸ್ಥತೆಗಳಿಗೆ ಸಂಬಂಧಿಸದ ಸ್ಥೂಲಕಾಯತೆ ಅಥವಾ ತೂಕ ನಿಯಂತ್ರಣ ಸಂಬಂಧಿತ ಶಸ್ತ್ರಚಿಕಿತ್ಸೆಗಳನ್ನು ಪಾಲಿಸಿಯು ಒಳಗೊಂಡಿಲ್ಲ.
- ಲಿಂಗ ಬದಲಾವಣೆಯ ಚಿಕಿತ್ಸೆಗಳು ಈ ಪಾಲಿಸಿಯಲ್ಲಿ ಕವರ್ ಆಗುವುದಿಲ್ಲ.
- ಅಪಘಾತ, ಕ್ಯಾನ್ಸರ್ ನಂತರ ಪುನರ್ನಿರ್ಮಾಣಕ್ಕಾಗಿ ಅಥವಾ ನೇರ ಮತ್ತು ತಕ್ಷಣದ ಆರೋಗ್ಯದ ಅಪಾಯವನ್ನು ತೆಗೆದುಹಾಕಲು ಮಾಡಿಸಿಕೊಳ್ಳುವ ಕಾಸ್ಮೆಟಿಕ್ ಮತ್ತು ಸರ್ಜರಿಯನ್ನು ಕವರ್ ಮಾಡುವುದಿಲ್ಲ.
- ಆರೋಗ್ಯ ಸಂಜೀವಿನಿ ಪಾಲಿಸಿಯು ಮನೆಯಲ್ಲಿ ನೀಡುವ ಆರೈಕೆ ಅಥವಾ OPD ವೆಚ್ಚಗಳನ್ನು ಒಳಗೊಂಡಿರುವುದಿಲ್ಲ.
- ಕ್ರಿಮಿನಲ್ ಆಕ್ಟ್ ಮಾಡುವುದರಿಂದ ಅಥವಾ ಮಾಡಲು ಪ್ರಯತ್ನಿಸುವುದರಿಂದ ಉಂಟಾಗುವ ಕ್ಲೇಮ್‌ಗಳನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.
- ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ಚಿಕಿತ್ಸೆಗಳನ್ನು ಹೆಲ್ತ್ ಪಾಲಿಸಿಯು ಕವರ್ ಮಾಡುವುದಿಲ್ಲ.
- ಅಪಾಯಕಾರಿ ಅಥವಾ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವುವಿಕೆಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚಗಳನ್ನು ಈ ಪಾಲಿಸಿಯಿಂದ ಹೊರತುಪಡಿಸಲಾಗಿದೆ.
- ಹೆರಿಗೆ ಸಂಬಂಧಿತ ವೆಚ್ಚಗಳು ಈ ಪಾಲಿಸಿಯ ಭಾಗವಾಗಿರುವುದಿಲ್ಲ.
- ಸಂತಾನಹೀನತೆ ಮತ್ತು ಫಲವತ್ತತೆ ಚಿಕಿತ್ಸೆಗಳನ್ನು ಈ ಪಾಲಿಸಿಯು ಒಳಗೊಂಡಿರುವುದಿಲ್ಲ.
- ವೈದ್ಯರ ಶಿಫಾರಸಿಲ್ಲದೆ ಅಥವಾ ವೈದ್ಯಕೀಯವಾಗಿ ಅಗತ್ಯವಿಲ್ಲದ ಚಿಕಿತ್ಸೆಗಳನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.
ಕ್ಲೇಮ್ ಸಲ್ಲಿಸುವುದು ಹೇಗೆ ?
ಕ್ಲೇಮ್‌ಗಳ ಮರುಪಾವತಿ - ಆಸ್ಪತ್ರೆಗೆ ಸೇರಿದ ಎರಡು ದಿನಗಳ ಒಳಗಾಗಿ ನಮಗೆ ತಿಳಿಸಲು 1800-258-4242 ಸಂಖ್ಯೆಗೆ ಕರೆ ಮಾಡಿ ಅಥವಾ healthclaims@godigit.com ಗೆ ಇಮೇಲ್ ಮಾಡಿ ಮತ್ತು ನಾವು ನಿಮಗೊಂದು ಲಿಂಕ್ ಕಳುಹಿಸುತ್ತೇವೆ. ಅದರಲ್ಲಿ ನೀವು ಮರುಪಾವತಿ ಪಡೆಯಲು ಆಸ್ಪತ್ರೆಯ ಬಿಲ್, ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಬಹುದು.
ನಗದುರಹಿತ ಕ್ಲೇಮ್‌ಗಳು - ನೆಟ್‌ವರ್ಕ್ ಆಸ್ಪತ್ರೆಯನ್ನು ಆಯ್ಕೆಮಾಡಿ. ನೆಟ್‌ವರ್ಕ್ ಆಸ್ಪತ್ರೆಗಳ ಸಂಪೂರ್ಣ ಪಟ್ಟಿಯನ್ನು ನೀವು ಇಲ್ಲಿ ಕಾಣಬಹುದು. ಆಸ್ಪತ್ರೆಯ ಹೆಲ್ಪ್ ಡೆಸ್ಕಿಗೆ ನೀವು ಇ-ಹೆಲ್ತ್ ಕಾರ್ಡ್ ಅನ್ನು ತೋರಿಸಿ ಮತ್ತು ಕ್ಯಾಶ್'ಲೆಸ್ ರಿಕ್ವೆಸ್ಟ್ ಫಾರ್ಮ್ ಅನ್ನು ಕೇಳಿ. ಎಲ್ಲವೂ ಸರಿಯಾಗಿದ್ದರೆ, ನಿಮ್ಮ ಕ್ಲೇಮ್ ಅನ್ನು ಆಗಲೇ ಮತ್ತು ಅಲ್ಲಿಯೇ ಪ್ರಕ್ರಿಯೆಗೊಳಿಸಲಾಗುತ್ತದೆ.
ನೀವು ಕೊರೊನಾವೈರಸ್‌ಗಾಗಿ ಕ್ಲೇಮ್ ಮಾಡಿದ್ದರೆ, ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ - ICMR ನ ಅಧಿಕೃತ ಕೇಂದ್ರದಿಂದ ನಿಮ್ಮ ರಿಪೋರ್ಟ್, ಕೊರೋನಾ ಪಾಸಿಟಿವ್ ಇರುವುದನ್ನು ಖಚಿತಪಡಿಸಿಕೊಳ್ಳಿ.
ಆರೋಗ್ಯ ಸಂಜೀವನಿ ಪಾಲಿಸಿಯ ಪ್ರಮುಖ ಲಕ್ಷಣಗಳು
ಇನ್ಶೂರೆನ್ಸ್ ಮೊತ್ತ | 3 ಲಕ್ಷದಿಂದ 2 ಕೋಟಿಗಳು |
---|---|
ಸಹಪಾವತಿ | 5% ಖಡ್ಡಾಯ ಸಹಪಾವತಿ |
ಪ್ರೀಮಿಯಂ | ವರ್ಷಕ್ಕೆ ₹2414 ರಿಂದ ಪ್ರಾರಂಭವಾಗುತ್ತದೆ* |
ಕೊಠಡಿ ಬಾಡಿಗೆಗೆ ಮಿತಿ | ನಿಮ್ಮ ಇನ್ಶೂರೆನ್ಸ್ ಮೊತ್ತದ 2% (5000 ದವರೆಗೆ) |
ಸಂಚಿತ ಬೋನಸ್ | ಪ್ರತಿ ಕ್ಲೇಮ್-ಫ್ರೀ ವರ್ಷಕ್ಕೆ ನಿಮ್ಮ ಇನ್ಶೂರೆನ್ಸ್ ಮೊತ್ತದಲ್ಲಿ ಹೆಚ್ಚುವರಿ 5% |
ಕ್ಲೇಮ್ ಪ್ರಕ್ರಿಯೆ | ಡಿಜಿಟಲ್ ಫ್ರೆಂಡ್ಲಿ, ಹಾರ್ಡ್ ಕಾಪಿಗಳಿಲ್ಲ |
ಲಭ್ಯವಿರುವ ಆಯ್ಕೆಗಳು | ಫ್ಯಾಮಿಲಿ ಫ್ಲೋಟರ್ ಮತ್ತು ವೈಯುಕ್ತಿಕ ಪಾಲಿಸಿ |
ಆರೋಗ್ಯ ಸಂಜೀವನಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಸ್ಟ್ಯಾಂಡರ್ಡ್ ಪ್ರಯೋಜನಗಳು
ಈ ಪಾಲಿಸಿ ಖರೀದಿಯ ವಯೋಮಿತಿ 18 ರಿಂದ 65 ವರ್ಷ ವಯಸ್ಸಿನವರಿಗೆ ಸೀಮಿತವಾಗಿದೆ. ನೀವು ಸರಿಯಾದ ಸಮಯಕ್ಕೆ ರಿನೀವ್ ಮಾಡುವವರೆಗೆ ಈ ಪಾಲಿಸಿಯು ಜೀವಿತಾವಧಿಯ ನವೀಕರಣದೊಂದಿಗೆ ಬರುತ್ತದೆ.
ಇದು IRDAI ನಿಗದಿಪಡಿಸಿದ ಬೇಸಿಕ್, ಸ್ಟ್ಯಾಂಡರ್ಡ್ ಪಾಲಿಸಿಯಾಗಿರುವುದರಿಂದ, ಮಾರುಕಟ್ಟೆಯಲ್ಲಿರುವ ಇತರ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗಿಂತ, ಆರೋಗ್ಯ ಸಂಜೀವನಿ ಪಾಲಿಸಿ ಪ್ರೀಮಿಯಂ ತುಲನಾತ್ಮಕವಾಗಿ ಕಡಿಮೆಯಾಗಿದೆ.
ಪ್ರತಿ ಹೆಲ್ತ್ ಇನ್ಶೂರೆನ್ಸ್, ಸ್ವತಂತ್ರ ಸಹಪಾವತಿ ಮಿತಿಗಳೊಂದಿಗೆ ಬರುತ್ತದೆ. ಕೆಲವರು 10-20% ಸಹಪಾವತಿಯನ್ನು ಹೊಂದಿದ್ದರೆ, ಕೆಲವರು ಯಾವುದೇ ಸಹಪಾವತಿಯನ್ನು ಹೊಂದಿರುವುದಿಲ್ಲ. ಈ ಪಾಲಿಸಿಯಲ್ಲಿ, ಕನಿಷ್ಠ 5% ನಷ್ಟು ಮಾತ್ರ ಸಹಪಾವತಿ ಇರುತ್ತದೆ; ಅಂದರೆ ಕ್ಲೇಮ್‌ಗಳ ಸಮಯದಲ್ಲಿ ನೀವು ನಿಮ್ಮ ಜೇಬಿನಿಂದ 5% ವೆಚ್ಚವನ್ನು ಮಾಡುತ್ತೀರಿ.
ಗೋ ಡಿಜಿಟ್ ನ ಜನರಲ್ ಇನ್ಶೂರೆನ್ಸ್ ನೀಡುವ ಆರೋಗ್ಯ ಸಂಜೀವಿನಿ ಪಾಲಿಸಿಯು ಎರಡು ಯೋಜನೆಗಳೊಂದಿಗೆ ಲಭ್ಯವಿದೆ: ವೈಯಕ್ತಿಕ ಹೆಲ್ತ್ ಪಾಲಿಸಿ (ಕುಟುಂಬದ ಸದಸ್ಯರಿಗೆ ತಲಾ ಒಂದೊಂದು ಪಾಲಿಸಿ) ಮತ್ತು ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ (ಇಡೀ ಕುಟುಂಬಕ್ಕೆ ಒಂದು ಪಾಲಿಸಿ).
ಆರೋಗ್ಯ ಸಂಜೀವನಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ, ನೀವು ಆಯ್ಕೆ ಮಾಡಬಹುದಾದ ಇನ್ಶೂರೆನ್ಸ್ ಮೊತ್ತವು 3 ಲಕ್ಷಗಳಿಂದ 2 ಕೋಟಿಗಳಿಗೆ ಸೀಮಿತವಾಗಿದೆ.
ಆರೋಗ್ಯ ಸಂಜೀವಿನಿ ಪಾಲಿಸಿಯನ್ನು ಯಾರು ಖರೀದಿಸಬೇಕು?
ಆರೋಗ್ಯ ಸಂಜೀವಿನಿ ಪಾಲಿಸಿಯ ಪ್ರಯೋಜನಗಳು ಎಲ್ಲಾ ಇನ್ಶೂರೆನ್ಸ್ ಸಂಸ್ಥೆಗಳಂತೆ ಬಹುತೇಕ ಒಂದೇ ಆಗಿರುತ್ತದೆ. ಮತ್ತು ಪ್ರಸ್ತುತ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಾಗಿದೆ. ಆದ್ದರಿಂದ, ನೀವು ಇನ್ನೂ ಚಿಕ್ಕವರಾಗಿದ್ದರೆ ಮತ್ತು ಹೆಲ್ತ್ ಇನ್ಶೂರೆನ್ಸ್ ಜೊತೆಗೆ ನಿಮ್ಮ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದರೆ, ನೀವು ಆರೋಗ್ಯ ಸಂಜೀವಿನಿ ಪಾಲಿಸಿಯಂತಹ ಬೇಸಿಕ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸುವುದು ಸೂಕ್ತವಾಗಿದೆ. ಏಕೆಂದರೆ, ನಿಮಗೆ 5 ಲಕ್ಷಕ್ಕಿಂತ ಹೆಚ್ಚಿನ ಇನ್ಶೂರೆನ್ಸ್ ಮೊತ್ತದ, ಅಗತ್ಯವಿರುವ ಸಾಧ್ಯತೆಗಳು ಕಡಿಮೆಯಿರಬಹುದು. ಮತ್ತು ನೀವು ಇನ್ನೂ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಹೆಚ್ಚು ಖರ್ಚು ಮಾಡಲು ಬಯಸದಿರಬಹುದು.
COVID-19 ಬಂದಮೇಲೆ ಜನರು ಏಕಾಏಕಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹೆಚ್ಚು ಹುಡುಕುತ್ತಿದ್ದಾರೆ ಏಕೆಂದರೆ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಿದ್ದರೆ, ಅದು ಸೋಂಕಿಗೆ ಒಳಗಾದವರನ್ನು ಕವರ್ ಮಾಡುತ್ತದೆ. ನೀವು ಸಹ ಅಂತಹ ಪಾಲಿಸಿಯನ್ನು ಹುಡುಕುತ್ತಿದ್ದರೆ, ಆರೋಗ್ಯ ಸಂಜೀವನಿ ಪಾಲಿಸಿಯು ನಿಮಗೆ ಅತ್ಯಂತ ಸೂಕ್ತವಾಗಿದೆ. ಏಕೆಂದರೆ ಇದರ ವೆಚ್ಚವೂ, ಕೊರೊನಾವೈರಸ್'ನ ನಿರ್ದಿಷ್ಟ ಯೋಜನೆಗಳಂತೆಯೇ ಇದೆ ಮತ್ತು ಈ ಪಾಲಿಸಿಯು COVID-19 ಹಾಗೂ ಇತರ ಖಾಯಿಲೆಗಳನ್ನು ಸಹ ಕವರ್ ಮಾಡುತ್ತದೆ. ಈ ಪಾಲಿಸಿಯ ಬೆಸ್ಟ್ ಪಾರ್ಟ್ ಏನು ಗೊತ್ತೇ? ಈ ಪಾಲಿಸಿಯು, ಕೆಲವೇ ತಿಂಗಳುಗಳಲ್ಲಿ ಅವಧಿ ಮುಗಿಯಲಿರುವ ವೈಯಕ್ತಿಕ ಕರೋನವೈರಸ್ ಯೋಜನೆಗಳಿಗೆ ಹೋಲಿಸಿದರೆ ಇದು ಜೀವನಪರ್ಯಂತ ನವೀಕರಣದೊಂದಿಗೆ ಬರುತ್ತದೆ.
ನೀವು ಹೆಲ್ತ್ ಇನ್ಶೂರೆನ್ಸಿನೊಂದಿಗೆ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಲು ಬಯಸಿದ್ದರೆ ಹಾಗೂ ನಿಮ್ಮ ವಾರ್ಷಿಕ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂನಲ್ಲಿ ಹೆಚ್ಚು ಖರ್ಚು ಮಾಡಲು ಬಯಸದಿದ್ದರೆ, ನೀವು ಆರೋಗ್ಯ ಸಂಜೀವನಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆರಿಸಿಕೊಳ್ಳಬಹುದು. ಇದು ಪ್ರಸ್ತುತ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಆಯ್ಕೆಗಳಲ್ಲಿ ಒಂದಾಗಿದೆ.
ಆರೋಗ್ಯ ಸಂಜೀವನಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸುವುದು ಹೇಗೆ?
ಆನ್‌ಲೈನ್‌ನಲ್ಲಿ ಆರೋಗ್ಯ ಸಂಜೀವನಿ ಪಾಲಿಸಿಯನ್ನು ಖರೀದಿಸುವುದು 123 ರಂತೆ ತುಂಬಾ ಸರಳವಾದ ಪ್ರಕ್ರಿಯೆಯಾಗಿದೆ:
- ಹಂತ 1: ಡಿಜಿಟ್ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗೆ ಭೇಟಿ ನೀಡಿ ಮತ್ತು ಆರೋಗ್ಯ ಸಂಜೀವನಿ ಪೇಜಿನಲ್ಲಿ, ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪಿನ್ ಕೋಡ್ ಅನ್ನು ನಮೂದಿಸಿ.
- ಹಂತ 2: ಪಾಲಿಸಿಯಲ್ಲಿ ಯಾರನ್ನು ಸೇರಿಸಲಾಗಿದೆ, ಜನ್ಮ ದಿನಾಂಕ, ಆದ್ಯತೆಯ ಇನ್ಶೂರೆನ್ಸ್ ಮೊತ್ತ, ಮೂಲ ವೈದ್ಯಕೀಯ ಮಾಹಿತಿ ಮತ್ತು ಸಂಪರ್ಕ ವಿವರಗಳಂತಹ ಕೆಲವು ವಿವರಗಳನ್ನು ನಮೂದಿಸಿ.
- ಹಂತ 3: ಈ ಮಾಹಿತಿಯನ್ನು ಹಂಚಿಕೊಂಡ ನಂತರ, ನೀವು ಅಂತಿಮ ಉಲ್ಲೇಖವೊಂದನ್ನು (quote) ಪಡೆಯುತ್ತೀರಿ ಮತ್ತು ನೀವು ಪೇಮೆಂಟ್ ಮಾಡುವುದರ ಮೂಲಕ ಮುಂದುವರಿಯಬಹುದು. ನಂತರ, ನಿಮ್ಮ ಇನ್‌ಬಾಕ್ಸ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ನಿಮ್ಮ ಪಾಲಿಸಿಯನ್ನು ಪಡೆಯುತ್ತೀರಿ.
ನಿಮ್ಮ ಪಾಲಿಸಿಯನ್ನು ರಿನೀವ್ ಮಾಡುವುದು ಇನ್ನೂ ಸುಲಭ. ನೀವು ಮಾಡಬೇಕಾಗಿರುವುದು ಇಷ್ಟೇ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ (ಅಥವಾ ಪಾಲಿಸಿಯ ವಿವರಗಳೊಂದಿಗೆ) ಸೈನ್ ಇನ್ ಮಾಡಿ, ನಿಮ್ಮ ವಿವರಗಳನ್ನು ದೃಢೀಕರಿಸಿ ಮತ್ತು ಪಾವತಿಯನ್ನು ಮಾಡಿ. ಅಷ್ಟೆ!
ಗೋ ಡಿಜಿಟ್ ನ ಆರೋಗ್ಯ ಸಂಜೀವನಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು.
ಆರೋಗ್ಯ ಸಂಜೀವಿನಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕೊರೋನವೈರಸ್ ಕವರ್ ಆಗುತ್ತದೆಯೇ?
ಹೌದು, ಆಸ್ಪತ್ರೆಯ ಚಿಕಿತ್ಸಾ ಪ್ರಯೋಜನದ ಅಡಿಯಲ್ಲಿ ಕರೋನವೈರಸ್ಕವರ್ ಆಗುತ್ತದೆ.
ಗೋ ಡಿಜಿಟ್ ನ ಆರೋಗ್ಯ ಸಂಜೀವಿನಿ ಪಾಲಿಸಿಯನ್ನು ಯಾರು ಖರೀದಿಸಬಹುದು?
18 ವರ್ಷದಿಂದ 60 ವರ್ಷದೊಳಗಿನ ಯಾರಾದರೂ ಆರೋಗ್ಯ ಸಂಜೀವಿನಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಅರ್ಹರಾಗಿರುತ್ತಾರೆ.
ಗೋ ಡಿಜಿಟ್ ನ ಆರೋಗ್ಯ ಸಂಜೀವಿನಿ ಪಾಲಿಸಿಯಲ್ಲಿ ಗರಿಷ್ಠ ಇನ್ಶೂರೆನ್ಸ್ ಮೊತ್ತ ಎಷ್ಟು?
ಗೋ ಡಿಜಿಟ್ ನ ಆರೋಗ್ಯ ಸಂಜೀವಿನಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ, ನೀವು ಕನಿಷ್ಟ 3 ಲಕ್ಷಗಳು ಮತ್ತು ಗರಿಷ್ಠ 2 ಕೋಟಿಗಳ ಕವರ್ ಅನ್ನು ಖರೀದಿಸಬಹುದು.
ವೈಯಕ್ತಿಕ ಮತ್ತು ಫ್ಯಾಮಿಲಿ ಫ್ಲೋಟರ್ ಆರೋಗ್ಯ ಸಂಜೀವನಿ ಪಾಲಿಸಿಗಳ ನಡುವಿನ ವ್ಯತ್ಯಾಸವೇನು?
ಡಿಜಿಟ್ ನಲ್ಲಿ , ಆರೋಗ್ಯ ಸಂಜೀವಿನಿ ಪಾಲಿಸಿಯು ನಿಮಗೆ ಇನ್ಶೂರೆನ್ಸ್ ಖರೀದಿಸಲು ಎರಡು ಆಯ್ಕೆಗಳನ್ನು ನೀಡುತ್ತದೆ; ನೀವು ಒಂದು ಪಾಲಿಸಿಯೊಂದಿಗೆ ನಿಮ್ಮ ಇಡೀ ಕುಟುಂಬವನ್ನು ರಕ್ಷಿಸಬಹುದು, ಅಂದರೆ ಫ್ಯಾಮಿಲಿ ಫ್ಲೋಟರ್ (ಗರಿಷ್ಠ ಮೊತ್ತ 2 ಕೋಟಿಗಳು) ಅಥವಾ ಪ್ರತಿ ಕುಟುಂಬದ ಸದಸ್ಯರಿಗೆ ಒಂದೊಂದು ವೈಯಕ್ತಿಕ ಪಾಲಿಸಿಯನ್ನು ಖರೀದಿಸಬಹುದು. (ನೀವು ಇನ್ಶೂರೆನ್ಸ್ ಮೊತ್ತವಾಗಿ 3 ಲಕ್ಷದಿಂದ 2 ಕೋಟಿಗಳ ನಡುವೆ ಆಯ್ಕೆ ಮಾಡಬಹುದು)
ಆರೋಗ್ಯ ಸಂಜೀವಿನಿ ಪಾಲಿಸಿಗೆ ವೇಟಿಂಗ್ ಪಿರೇಡ್ ಇದೆಯೇ?
ಹೌದು, ಇದೆ. ಈ ಪಾಲಿಸಿಯಲ್ಲಿ ಖಾಯಿಲೆಯ ಪ್ರಕಾರದ ಮೇಲೆ ವೇಟಿಂಗ್ ಪಿರೀಡ್ ಬದಲಾಗುತ್ತದೆ: 24 ತಿಂಗಳುಗಳು ಮತ್ತು 48 ತಿಂಗಳುಗಳು. ಇದರರ್ಥ ಕೆಲವು ಖಾಯಿಲೆಗಳಿಗೆ ನಿರ್ದಿಷ್ಟಪಡಿಸಿದ ವೇಟಿಂಗ್ ಪಿರೀಡ್ ಮುಗಿದ ನಂತರವೇ ನೀವು ಕವರ್ ಪಡೆಯುತ್ತೀರಿ.
ನನ್ನ ಅಸ್ತಿತ್ವದಲ್ಲಿರುವ ಪಾಲಿಸಿಯನ್ನು, ನಾನು ಗೋ ಡಿಜಿಟ್ ನ ಆರೋಗ್ಯ ಸಂಜೀವಿನಿ ಪಾಲಿಸಿಗೆ ಪೋರ್ಟ್ ಮಾಡಬಹುದೇ?
ಹೌದು, ನೀವು ಪೋರ್ಟ್ ಮಾಡಬಹುದು!
ಕ್ಲೇಮ್‌ಗಳ ಸಮಯದಲ್ಲಿ ನಾನು ನನ್ನ ಜೇಬಿನಿಂದ ಪಾವತಿಸಬೇಕೇ?
ಹೌದು, ಪಾಲಿಸಿ ಷರತ್ತುಗಳ ಪ್ರಕಾರ, ಎಲ್ಲ ಆರೋಗ್ಯ ಸಂಜೀವಿನಿ ಹೆಲ್ತ್ ಪಾಲಿಸಿಗಳು 5% ಸಹಪಾವತಿಯೊಂದಿಗೆ ಬರುತ್ತವೆ.
ಆರೋಗ್ಯ ಸಂಜೀವನಿ ಪಾಲಿಸಿಗೆ ಕೊಠಡಿ ಬಾಡಿಗೆ ಮಿತಿ ಇದೆಯೇ?
ಹೌದು, ಸ್ಟ್ಯಾಂಡರ್ಡ್ ಕೊಠಡಿಯ ಬಾಡಿಗೆಯು 2% SI ಆಗಿದ್ದರೆ, ಗರಿಷ್ಠ ಮಿತಿಯು ದಿನಕ್ಕೆ ರೂ 5,000 ಆಗಿದ್ದು, ಹೆಚ್ಚಿನ ಆಸ್ಪತ್ರೆಗಳು ಈ ಬೆಲೆಯಲ್ಲಿ ಉತ್ತಮ ಕೊಠಡಿಗಳನ್ನು ನೀಡುತ್ತವೆ ಎಂದು ಪರಿಗಣಿಸಲು ಯೋಗ್ಯ ಮೊತ್ತವಾಗಿದೆ.
ನೀಡಲಾಗಿರುವ ಕವರೇಜ್‌ನಿಂದ ನನ್ನ ಕವರೇಜ್‌ಗಳನ್ನು ವಿಸ್ತರಿಸಬಹುದೇ?
ಇಲ್ಲ, ಆರೋಗ್ಯ ಸಂಜೀವಿನಿ ಪಾಲಿಸಿಯು, ತನ್ನ ಯೋಜನೆಯಲ್ಲಿ ಒಳಗೊಂಡಿರುವ ಸ್ಟ್ಯಾಂಡರ್ಡ್ ಪ್ರಯೋಜನಗಳೊಂದಿಗೆ ಬರುತ್ತದೆ. ಅದರ ಹೊರತಾಗಿ ಪಾಲಿಸಿಯಲ್ಲಿ ನೀವು ಆಯ್ಕೆಮಾಡಬಹುದಾದ ಯಾವುದೇ ಆಡ್-ಆನ್‌ಗಳು ಅಥವಾ ಕವರ್‌ಗಳಿರುವುದಿಲ್ಲ.
ನಿಗದಿತ ಬ್ರಾಕೆಟ್‌ಗಳನ್ನು ಮೀರಿ ನಾನು ನನ್ನ ಇನ್ಶೂರೆನ್ಸ್ ಮೊತ್ತವನ್ನು ಹೆಚ್ಚಿಸಬಹುದೇ?
ಇಲ್ಲ, ಆರೋಗ್ಯ ಸಂಜೀವಿನಿ ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ನಿಮ್ಮ ಇನ್ಶೂರೆನ್ಸ್ ಮೊತ್ತವನ್ನು 3 ಲಕ್ಷದಿಂದ 2 ಕೋಟಿಗಳವರೆಗೆ ಮಾತ್ರ ಆಯ್ಕೆ ಮಾಡಬಹುದು.
ನಾನು ಖಡ್ಡಾಯವಾಗಿ ಸಹಪಾವತಿಯನ್ನು ಪಾವತಿಸಬೇಕೇ?
ಹೌದು, ಆರೋಗ್ಯ ಸಂಜೀವಿನಿ ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕ್ಲೇಮ್‌ಗಳ ಸಮಯದಲ್ಲಿ ಪಾವತಿಸಬೇಕಾದ ಖಡ್ಡಾಯ ಸಹಪಾವತಿ 5% ರಷ್ಟು ಇದೆ.
ಡಿಜಿಟ್‌ನ ಆರೋಗ್ಯ ಸಂಜೀವಿನಿ ಪಾಲಿಸಿಯ 'ಪಾಲಿಸಿ ಅವಧಿ' ಎಷ್ಟು?
ಡಿಜಿಟ್‌ನ ಆರೋಗ್ಯ ಸಂಜೀವಿನಿ ಪಾಲಿಸಿಯ ಅವಧಿಯು 1 ವರ್ಷವಾಗಿದೆ. ಈ ಅವಧಿಯ ನಂತರ, ನಿಮ್ಮ ಕವರೇಜ್ ಮುಂದುವರೆಯಲು ನೀವು ಬಯಸಿದರೆ, ನಿಮ್ಮ ಪಾಲಿಸಿಯನ್ನು ನೀವು ರಿನೀವ್ ಮಾಡಿಸಬೇಕಾಗುತ್ತದೆ.
ಗೋ ಡಿಜಿಟ್ ನ ಆರೋಗ್ಯ ಸಂಜೀವಿನಿ ಪಾಲಿಸಿಗೆ ಇರುವ ವಯಸ್ಸಿನ ಮಿತಿ ಮತ್ತು ಅರ್ಹತೆಗಳು ಯಾವುವು?
ಹೌದು. ಈ ಪಾಲಿಸಿಯ ಅಡಿಯಲ್ಲಿ, ವಯಸ್ಕರಿಗೆ ಪ್ರವೇಶದ ವಯೋಮಿತಿಯು 18 ವರ್ಷದಿಂದ 60 ವರ್ಷಗಳು. ಫ್ಯಾಮಿಲಿ ಫ್ಲೋಟರ್ ಯೋಜನೆಯಡಿಯಲ್ಲಿ ಅವಲಂಬಿತ ಮಕ್ಕಳಿಗೆ, ಇದು 3 ತಿಂಗಳಿಂದ 25 ವರ್ಷಗಳವರೆಗೆ ಇರುತ್ತದೆ. ಆದಾಗ್ಯೂ, ರಿನೀವಲ್'ಗಳಿಗೆ ಯಾವುದೇ ವಯಸ್ಸಿನ ಮಿತಿಯಿಲ್ಲ.