ಆರೋಗ್ಯ ಸಂಜೀವಿನಿ ಹೆಲ್ತ್ ಇನ್ಶೂರೆನ್ಸ್
High
Sum Insured
Affordable
Premium
24/7
Customer Support
High
Sum Insured
Affordable
Premium
24/7
Customer Support
ಆರೋಗ್ಯ ಸಂಜೀವಿನಿ ಪಾಲಿಸಿ ಎಂದರೇನು?
ಆರೋಗ್ಯ ಸಂಜೀವನಿ ಹೆಲ್ತ್ ಇನ್ಶೂರೆನ್ಸಿನ ಪ್ರಮಾಣಿತ ಹೆಲ್ತ್ ಇನ್ಶೂರೆನ್ಸಿನ ಯೋಜನೆಯಾಗಿದ್ದು, ಇದು 3 ಲಕ್ಷದಿಂದ 2 ಕೋಟಿವರೆಗಿನ ಇನ್ಶೂರೆನ್ಸ್ ಮೊತ್ತದೊಂದಿಗೆ ಆರೋಗ್ಯ ವೆಚ್ಚಗಳಿಗಾಗಿ ನಿಮಗೆ ಕವರ್ ನೀಡುತ್ತದೆ. ಈ ಕವರೇಜ್ ಆಸ್ಪತ್ರೆಯ ಪೂರ್ವ ಮತ್ತು ನಂತರದ ವೆಚ್ಚಗಳು, ಆಸ್ಪತ್ರೆಯ ಕೊಠಡಿ ಬಾಡಿಗೆ (ವಾಸ ಮತ್ತು ಹಾಸಿಗೆ ಶುಲ್ಕಗಳು), ಐಸಿಯು ಸೇವೆಗಳು ಮತ್ತು ಹೊಸ-ವಯಸ್ಸಿನ ಚಿಕಿತ್ಸೆಗಳನ್ನು ಒಳಗೊಂಡಿದೆ.
ಡಿಜಿಟ್ ನೀಡುವ ಆರೋಗ್ಯ ಸಂಜೀವನಿ ಹೆಲ್ತ್ ಇನ್ಶೂರೆನ್ಸ್ ನೊಂದಿಗೆ , ನೀವು ಮತ್ತು ನಿಮ್ಮ ಕುಟುಂಬಕ್ಕಾಗಿ ಫ್ಯಾಮಿಲಿ ಫ್ಲೋಟರ್ ಯೋಜನೆ ಅಥವಾ ವೈಯಕ್ತಿಕ ಪಾಲಿಸಿಯ ನಡುವೆ ಆಯ್ಕೆ ಮಾಡಬಹುದು.
ಆರೋಗ್ಯ ಸಂಜೀವಿನಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಮಹತ್ವವೇನು?
ಸಾಮಾನ್ಯವಾಗಿ ನಿಮಗೆ ಆಗಾಗ ತಳಮಳ ಉಂಟಾಗುತ್ತಿದ್ದರೆ, ಮತ್ತು ಆನ್ಲೈನ್ನಲ್ಲಿ ವಿವಿಧ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಯಾವುದನ್ನೂ ಆಯ್ದುಕೊಳ್ಳಬೇಕೆಂದು ಗೊಂದಲಕ್ಕೊಳಗಾಗಿದ್ದರೆ, ಚಿಂತಿಸಬೇಡಿ, ನೀವು ಒಬ್ಬಂಟಿಯಲ್ಲ, ನಿಮ್ಮೊಂದಿಗೆ ನಾವಿದ್ದೇವೆ. ಅದಕ್ಕಾಗಿಯೇ, ಆರೋಗ್ಯ ಸಂಜೀವನಿ ಹೆಲ್ತ್ ಇನ್ಶೂರೆನ್ಸ್ ಅನ್ನು IRDAI ಮೂಲಕ ಪ್ರಾರಂಭಿಸಲಾಗಿದೆ. ಅಂದರೆ ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ಒಂದೇ ರೀತಿಯ ಪ್ರಯೋಜನಗಳೊಂದಿಗೆ ನೀಡಲಾಗುವ ಬೇಸಿಕ್, ಸ್ಟ್ಯಾಂಡರ್ಡ್ ಪ್ಲ್ಯಾನ್ ಅನ್ನು ಒದಗಿಸುವ ಮೂಲಕ ಹೆಲ್ತ್ ಇನ್ಶೂರೆನ್ಸ್ ಅನ್ನು ಸರಳಗೊಳಿಸುವ ವಿಧಾನವಿದು.
ಖರೀದಿ ಮತ್ತು ಕ್ಲೇಮ್ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಹೆಲ್ತ್ ಇನ್ಶೂರೆನ್ಸ್ ಪೂರೈಕೆದಾರರು ನೀಡುವ ಸೇವೆ, ಪ್ರತಿ ಇನ್ಶೂರೆನ್ಸ್ ಸಂಸ್ಥೆಯ ನೆಟ್ವರ್ಕ್ನಲ್ಲಿ ಲಭ್ಯವಿರುವ ನಗದು ರಹಿತ ಆಸ್ಪತ್ರೆಗಳು, ಮತ್ತು ಆರೋಗ್ಯ ಸಂಜೀವಿನಿ ಪಾಲಿಸಿ ಪ್ರೀಮಿಯಂಗಳಲ್ಲಿ ಮಾತ್ರ ವ್ಯತ್ಯಾಸವಾಗಬಹುದು.
* ಡಿಸ್ ಕ್ಲೇಮರ್ - ₹640/ತಿಂಗಳ ಪ್ರೀಮಿಯಂ ಅನ್ನು 30 ವರ್ಷ ವಯಸ್ಸಿನವರಿಗೆ ಯಾವುದೇ ಆರೋಗ್ಯ ಅನಾರೋಗ್ಯಗಳಿಲ್ಲದೆ 1 ಕೋಟಿ ಇನ್ಶೂರೆನ್ಸ್ ಮೊತ್ತಕ್ಕೆ ಲೆಕ್ಕಹಾಕಲಾಗುತ್ತದೆ. ಈ ಪ್ರೀಮಿಯಂ ಮೊತ್ತದಲ್ಲಿ GST ಒಳಗೊಂಡಿಲ್ಲ.
ನೀವು ಆರೋಗ್ಯ ಸಂಜೀವಿನಿ ಪಾಲಿಸಿಯನ್ನು ಏಕೆ ಖರೀದಿಸಬೇಕು?
ಡಿಜಿಟ್ ನ ಆರೋಗ್ಯ ಸಂಜೀವಿನಿ ಪಾಲಿಸಿಯಲ್ಲಿ ಯಾವ ಅಂಶಗಳು ಉತ್ತಮವಾಗಿವೆ?
ಆರೋಗ್ಯ ಸಂಜೀವನಿ ಪಾಲಿಸಿ ಪ್ರೀಮಿಯಂನ ಚಾರ್ಟ್ ಮತ್ತು ಕ್ಯಾಲ್ಕುಲೇಟರ್
ಡಿಜಿಟ್ನ ಆರೋಗ್ಯ ಸಂಜೀವನಿ ಪಾಲಿಸಿಯು ₹ 3 ಲಕ್ಷದಿಂದ ₹ 50,000 ರ ಗುಣಕಗಳಲ್ಲಿ ₹ 2 ಕೋಟಿ ವರೆಗಿನ ಮೊತ್ತದ ಇನ್ಶೂರೆನ್ಸ್ ಆಯ್ಕೆಗಳನ್ನು ಹೊಂದಿದೆ. ಒಬ್ಬ ವ್ಯಕ್ತಿಗೆ ಕನಿಷ್ಠ ₹3 ಲಕ್ಷ ಮತ್ತು ಗರಿಷ್ಠ ₹2 ಕೋಟಿಗಳ ಇನ್ಶೂರೆನ್ಸ್ ಮೊತ್ತದ ಆರೋಗ್ಯ ಸಂಜೀವಿನಿ ಪಾಲಿಸಿ ಪ್ರೀಮಿಯಂ ಹೋಲಿಕೆ ಇಲ್ಲಿದೆ.*
ಏಜ್ ಗ್ರೂಪ್ |
ಆರೋಗ್ಯ ಸಂಜೀವಿನಿ ಪಾಲಿಸಿ ಪ್ರೀಮಿಯಂ (SI 3ಲಕ್ಷಗಳು) |
ಆರೋಗ್ಯ ಸಂಜೀವಿನಿ ಪಾಲಿಸಿ ಪ್ರೀಮಿಯಂ (SI 2 ಕೋಟಿಗಳು) |
18-25 |
₹2,414 |
₹9,642 |
26-30 |
₹2,503 |
₹9,999 |
31-35 |
₹2,803 |
₹11,197 |
36-40 |
₹3,702 |
₹13,333 |
41-45 |
₹4,698 |
₹18,764 |
46-50 |
₹6,208 |
₹24,799 |
51-55 |
₹8,420 |
₹33,633 |
56-60 |
₹11,569 |
₹46,211 |
ಆರೋಗ್ಯ ಸಂಜೀವಿನಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಒಳಗೊಂಡಿದೆ?
ಆರೋಗ್ಯ ಸಂಜೀವಿನಿ ಪಾಲಿಸಿಯಲ್ಲಿ ಕವರ್ ಆಗುವ ನ್ಯೂ-ಏಜ್ ಚಿಕಿತ್ಸೆಗಳ ಪಟ್ಟಿ
ವೈದ್ಯಕೀಯದಲ್ಲಿನ ತಾಂತ್ರಿಕ ಸುಧಾರಣೆಗಳ ಯಶಸ್ಸಿನ ಕಾರಣದಿಂದಾಗಿ, ಈ ಪಾಲಿಸಿಯ ಭಾಗವಾಗಿ, ಕೆಳಗಿನ "ನ್ಯೂ-ಏಜ್ " ಕಾರ್ಯವಿಧಾನಗಳನ್ನು ಒಳಗೊಂಡಿದೆ (ವಿಮಾ ಮೊತ್ತದ 50% ವರೆಗೆ)
ಗರ್ಭಾಶಯದ ಅಪಧಮನಿ ಎಂಬೋಲೈಸೇಶನ್ ಮತ್ತು HIFU (uterine Artery Embolization and HIFU-High Intensity Focused Ultrasound)
ಬಲೂನ್ ಸಿನುಪ್ಲಾಸ್ಟಿ
ಡೀಪ್ ಬ್ರೇನ್ ಸ್ಟಿಮುಲೇಷನ್
ಓರಲ್ ಕಿಮೊಥೆರಪಿ
ಇಮ್ಯುನೊಥೆರಪಿ - ಮೊನೊಕ್ಲೋನಲ್ ಆಂಟಿಬಾಡಿ ಅನ್ನು ಇಂಜೆಕ್ಷನ್ ಆಗಿ ನೀಡಲಾಗುತ್ತದೆ
ಇಂಟ್ರಾ ವಿಟ್ರಿಯಲ್ ಚುಚ್ಚುಮದ್ದು
ರೊಬೊಟಿಕ್ ಶಸ್ತ್ರಚಿಕಿತ್ಸೆಗಳು
ಸ್ಟೀರಿಯೋಟಾಕ್ಟಿಕ್ ರೇಡಿಯೋ ಶಸ್ತ್ರಚಿಕಿತ್ಸೆಗಳು
ಶ್ವಾಸನಾಳದ ಥರ್ಮೋಪ್ಲ್ಯಾಸ್ಟಿ
ಪ್ರಾಸ್ಟ್ರೇಟ್ ನ ಆವಿಯಾಗುವಿಕೆ - (ಹಸಿರು ಲೇಸರ್ ಚಿಕಿತ್ಸೆ ಅಥವಾ ಹೋಲ್ಮಿಯಂ ಲೇಸರ್ ಚಿಕಿತ್ಸೆ)
ಐ.ಓ.ಎನ್.ಎಮ್ IONM
ಸ್ಟೆಮ್ ಸೆಲ್ ಥೆರಪಿ: ಹೆಮಟೊಲಾಜಿಕಲ್ ಕಂಡೀಷನ್ ಇದ್ದರೆ, ಬೋನ್ ಮ್ಯಾರೋ ಕಸಿಗಾಗಿ ಹೆಮಟೊಪಯಟಿಕ್ ಸ್ಟೇಮ್ ಸೆಲ್'ಗಳನ್ನು ಕವರ್ ಮಾಡಲಾಗುತ್ತದೆ.
ಯಾವುದನ್ನು ಒಳಗೊಂಡಿಲ್ಲ?
- ನೀವು ಕ್ಲೇಮ್ ಮಾಡುವಾಗ ವೈದ್ಯಕೀಯ ಕ್ಲೇಮ್ಗೆ ಸಂಬಂಧಿಸದ ಯಾವುದೇ ಆಸ್ಪತ್ರೆಯ ವೆಚ್ಚಗಳನ್ನು ಅಥವಾ ಪೂರ್ವ-ಆಸ್ಪತ್ರೆ ವೆಚ್ಚಗಳನ್ನು ಒಳಗೊಂಡಿರುವುದಿಲ್ಲ.
- ಯಾವುದೇ ಸಹ-ಅಸ್ವಸ್ಥತೆಗಳಿಗೆ ಸಂಬಂಧಿಸದ ಸ್ಥೂಲಕಾಯತೆ ಅಥವಾ ತೂಕ ನಿಯಂತ್ರಣ ಸಂಬಂಧಿತ ಶಸ್ತ್ರಚಿಕಿತ್ಸೆಗಳನ್ನು ಪಾಲಿಸಿಯು ಒಳಗೊಂಡಿಲ್ಲ.
- ಲಿಂಗ ಬದಲಾವಣೆಯ ಚಿಕಿತ್ಸೆಗಳು ಈ ಪಾಲಿಸಿಯಲ್ಲಿ ಕವರ್ ಆಗುವುದಿಲ್ಲ.
- ಅಪಘಾತ, ಕ್ಯಾನ್ಸರ್ ನಂತರ ಪುನರ್ನಿರ್ಮಾಣಕ್ಕಾಗಿ ಅಥವಾ ನೇರ ಮತ್ತು ತಕ್ಷಣದ ಆರೋಗ್ಯದ ಅಪಾಯವನ್ನು ತೆಗೆದುಹಾಕಲು ಮಾಡಿಸಿಕೊಳ್ಳುವ ಕಾಸ್ಮೆಟಿಕ್ ಮತ್ತು ಸರ್ಜರಿಯನ್ನು ಕವರ್ ಮಾಡುವುದಿಲ್ಲ.
- ಆರೋಗ್ಯ ಸಂಜೀವಿನಿ ಪಾಲಿಸಿಯು ಮನೆಯಲ್ಲಿ ನೀಡುವ ಆರೈಕೆ ಅಥವಾ OPD ವೆಚ್ಚಗಳನ್ನು ಒಳಗೊಂಡಿರುವುದಿಲ್ಲ.
- ಕ್ರಿಮಿನಲ್ ಆಕ್ಟ್ ಮಾಡುವುದರಿಂದ ಅಥವಾ ಮಾಡಲು ಪ್ರಯತ್ನಿಸುವುದರಿಂದ ಉಂಟಾಗುವ ಕ್ಲೇಮ್ಗಳನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.
- ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ಚಿಕಿತ್ಸೆಗಳನ್ನು ಹೆಲ್ತ್ ಪಾಲಿಸಿಯು ಕವರ್ ಮಾಡುವುದಿಲ್ಲ.
- ಅಪಾಯಕಾರಿ ಅಥವಾ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವುವಿಕೆಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚಗಳನ್ನು ಈ ಪಾಲಿಸಿಯಿಂದ ಹೊರತುಪಡಿಸಲಾಗಿದೆ.
- ಹೆರಿಗೆ ಸಂಬಂಧಿತ ವೆಚ್ಚಗಳು ಈ ಪಾಲಿಸಿಯ ಭಾಗವಾಗಿರುವುದಿಲ್ಲ.
- ಸಂತಾನಹೀನತೆ ಮತ್ತು ಫಲವತ್ತತೆ ಚಿಕಿತ್ಸೆಗಳನ್ನು ಈ ಪಾಲಿಸಿಯು ಒಳಗೊಂಡಿರುವುದಿಲ್ಲ.
- ವೈದ್ಯರ ಶಿಫಾರಸಿಲ್ಲದೆ ಅಥವಾ ವೈದ್ಯಕೀಯವಾಗಿ ಅಗತ್ಯವಿಲ್ಲದ ಚಿಕಿತ್ಸೆಗಳನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.
ಕ್ಲೇಮ್ ಸಲ್ಲಿಸುವುದು ಹೇಗೆ ?
ಆರೋಗ್ಯ ಸಂಜೀವನಿ ಪಾಲಿಸಿಯ ಪ್ರಮುಖ ಲಕ್ಷಣಗಳು
ಇನ್ಶೂರೆನ್ಸ್ ಮೊತ್ತ |
3 ಲಕ್ಷದಿಂದ 2 ಕೋಟಿಗಳು |
ಸಹಪಾವತಿ |
5% ಖಡ್ಡಾಯ ಸಹಪಾವತಿ |
ಪ್ರೀಮಿಯಂ |
ವರ್ಷಕ್ಕೆ ₹2414 ರಿಂದ ಪ್ರಾರಂಭವಾಗುತ್ತದೆ* |
ಕೊಠಡಿ ಬಾಡಿಗೆಗೆ ಮಿತಿ |
ನಿಮ್ಮ ಇನ್ಶೂರೆನ್ಸ್ ಮೊತ್ತದ 2% (5000 ದವರೆಗೆ) |
ಸಂಚಿತ ಬೋನಸ್ |
ಪ್ರತಿ ಕ್ಲೇಮ್-ಫ್ರೀ ವರ್ಷಕ್ಕೆ ನಿಮ್ಮ ಇನ್ಶೂರೆನ್ಸ್ ಮೊತ್ತದಲ್ಲಿ ಹೆಚ್ಚುವರಿ 5% |
ಕ್ಲೇಮ್ ಪ್ರಕ್ರಿಯೆ |
ಡಿಜಿಟಲ್ ಫ್ರೆಂಡ್ಲಿ, ಹಾರ್ಡ್ ಕಾಪಿಗಳಿಲ್ಲ |
ಲಭ್ಯವಿರುವ ಆಯ್ಕೆಗಳು |
ಫ್ಯಾಮಿಲಿ ಫ್ಲೋಟರ್ ಮತ್ತು ವೈಯುಕ್ತಿಕ ಪಾಲಿಸಿ |
ಆರೋಗ್ಯ ಸಂಜೀವನಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಸ್ಟ್ಯಾಂಡರ್ಡ್ ಪ್ರಯೋಜನಗಳು
ಆರೋಗ್ಯ ಸಂಜೀವಿನಿ ಪಾಲಿಸಿಯನ್ನು ಯಾರು ಖರೀದಿಸಬೇಕು?
ಆರೋಗ್ಯ ಸಂಜೀವನಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನ್ನಲ್ಲಿ ಖರೀದಿಸುವುದು ಹೇಗೆ?
ಆನ್ಲೈನ್ನಲ್ಲಿ ಆರೋಗ್ಯ ಸಂಜೀವನಿ ಪಾಲಿಸಿಯನ್ನು ಖರೀದಿಸುವುದು 123 ರಂತೆ ತುಂಬಾ ಸರಳವಾದ ಪ್ರಕ್ರಿಯೆಯಾಗಿದೆ:
- ಹಂತ 1: ಡಿಜಿಟ್ ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ಗೆ ಭೇಟಿ ನೀಡಿ ಮತ್ತು ಆರೋಗ್ಯ ಸಂಜೀವನಿ ಪೇಜಿನಲ್ಲಿ, ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪಿನ್ ಕೋಡ್ ಅನ್ನು ನಮೂದಿಸಿ.
- ಹಂತ 2: ಪಾಲಿಸಿಯಲ್ಲಿ ಯಾರನ್ನು ಸೇರಿಸಲಾಗಿದೆ, ಜನ್ಮ ದಿನಾಂಕ, ಆದ್ಯತೆಯ ಇನ್ಶೂರೆನ್ಸ್ ಮೊತ್ತ, ಮೂಲ ವೈದ್ಯಕೀಯ ಮಾಹಿತಿ ಮತ್ತು ಸಂಪರ್ಕ ವಿವರಗಳಂತಹ ಕೆಲವು ವಿವರಗಳನ್ನು ನಮೂದಿಸಿ.
- ಹಂತ 3: ಈ ಮಾಹಿತಿಯನ್ನು ಹಂಚಿಕೊಂಡ ನಂತರ, ನೀವು ಅಂತಿಮ ಉಲ್ಲೇಖವೊಂದನ್ನು (quote) ಪಡೆಯುತ್ತೀರಿ ಮತ್ತು ನೀವು ಪೇಮೆಂಟ್ ಮಾಡುವುದರ ಮೂಲಕ ಮುಂದುವರಿಯಬಹುದು. ನಂತರ, ನಿಮ್ಮ ಇನ್ಬಾಕ್ಸ್ನಲ್ಲಿ ಕೆಲವೇ ನಿಮಿಷಗಳಲ್ಲಿ ನಿಮ್ಮ ಪಾಲಿಸಿಯನ್ನು ಪಡೆಯುತ್ತೀರಿ.
ನಿಮ್ಮ ಪಾಲಿಸಿಯನ್ನು ರಿನೀವ್ ಮಾಡುವುದು ಇನ್ನೂ ಸುಲಭ. ನೀವು ಮಾಡಬೇಕಾಗಿರುವುದು ಇಷ್ಟೇ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ (ಅಥವಾ ಪಾಲಿಸಿಯ ವಿವರಗಳೊಂದಿಗೆ) ಸೈನ್ ಇನ್ ಮಾಡಿ, ನಿಮ್ಮ ವಿವರಗಳನ್ನು ದೃಢೀಕರಿಸಿ ಮತ್ತು ಪಾವತಿಯನ್ನು ಮಾಡಿ. ಅಷ್ಟೆ!