ಜನರಲ್ ಇನ್ಶೂರೆನ್ಸ್ ಏಜೆಂಟ್ ಎಂದರೆ ಯಾರು?
ಇನ್ಶೂರೆನ್ಸ್ ಏಜೆಂಟ್ ಎಂದರೆ ನಿರ್ದಿಷ್ಟ ಇನ್ಶೂರೆನ್ಸ್ ಉತ್ಪನ್ನಗಳನ್ನು ಮಾರಾಟ ಮಾಡಲು ಇನ್ಶೂರೆನ್ಸ್ ಕಂಪನಿಯೊಂದಿಗೆ ಕೆಲಸ ಮಾಡುವ ವ್ಯಕ್ತಿ.
ಮನೆಯಿಂದ ಇನ್ಶೂರೆನ್ಸ್ ಏಜೆಂಟ್ ಆಗುವುದು ಹೇಗೆ ಅಥವಾ ಪಿ.ಒ.ಎಸ್.ಪಿ. ಅಥವಾ ಜನರಲ್ ಇನ್ಶೂರೆನ್ಸ್ ಏಜೆಂಟ್ ಆಗುವುದು ಹೇಗೆ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಉತ್ತರ ಇಲ್ಲಿದೆ. ಗ್ರಾಹಕರು ತಮ್ಮ ವೈಯಕ್ತಿಕ ಅವಶ್ಯಕತೆಗಳಿಗನುಗುಣವಾಗಿ ಸರಿಯಾದ ಪಾಲಿಸಿಯನ್ನು ಆಯ್ಕೆ ಮಾಡಲು ನೀವು ಸಹಾಯ ಮಾಡುತ್ತೀರಿ.
ಡಿಜಿಟ್ ನೊಂದಿಗೆ, ನೀವು ಹೆಲ್ತ್ ಇನ್ಶೂರೆನ್ಸ್, ಮೋಟಾರ್ (ಕಾರ್, ಬೈಕ್, ಕಮರ್ಷಿಯಲ್ ವಾಹನಗಳು) ಇನ್ಶೂರೆನ್ಸ್ , SFSP ಇನ್ಶೂರೆನ್ಸ್ ಮತ್ತು ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಮಾರಾಟ ಮಾಡಬಹುದು.
ಜನರಲ್ ಇನ್ಶೂರೆನ್ಸ್ ಎಂದರೇನು?
ಕಾರ್ ಇನ್ಶೂರೆನ್ಸ್ , ಬೈಕ್ ಇನ್ಶೂರೆನ್ಸ್ , ಟ್ರಾವೆಲ್ ಇನ್ಶೂರೆನ್ಸ್ , SFSP ಇನ್ಶೂರೆನ್ಸ್ ಮತ್ತು ಹೆಲ್ತ್ ಇನ್ಶೂರೆನ್ಸಿನಂತಹ ಎಲ್ಲ ನಾನ್-ಲೈಫ್ ಇನ್ಶೂರೆನ್ಸ್ ಪಾಲಿಸಿಗಳನ್ನು ಜನರಲ್ ಇನ್ಶೂರೆನ್ಸ್ ಒಳಗೊಂಡಿದೆ.
ಈ ಜನರಲ್ ಇನ್ಶೂರೆನ್ಸ್ ಪಾಲಿಸಿಗಳು, ಯಾವುದೇ ದುರದೃಷ್ಟಕರ ಘಟನೆಗಳು ಸಂಭವಿಸಿದಾಗ ಉಂಟಾಗುವ ನಷ್ಟದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನರಿಗೆ ಸಹಾಯ ಮಾಡುತ್ತದೆ.
ಉದಾಹರಣೆಗೆ, ಕಾರ್ ಇನ್ಶೂರೆನ್ಸ್, ಅಪಘಾತದ ಸಮಯದಲ್ಲಿ ಕಾರಿಗೆ ಉಂಟಾದ ನಷ್ಟಗಳು ಮತ್ತು ಹಾನಿಗಳಿಂದ ಮಾಲೀಕರನ್ನು ರಕ್ಷಿಸುತ್ತದೆ ಆದರೆ SFSP ಇನ್ಶೂರೆನ್ಸ್, ಕಳ್ಳತನ ಅಥವಾ ನೈಸರ್ಗಿಕ ವಿಪತ್ತಿನ ಸಂದರ್ಭಗಳಿಂದ ಉಂಟಾದ ಹಾನಿಗಳಿಗೆ ರಕ್ಷಣೆ ನೀಡುತ್ತದೆ.
ಭಾರತದ ನಗರ ಪ್ರದೇಶಗಳ ಜನರ ಜೀವನ ಮಟ್ಟದಲ್ಲಿನ ಏರಿಕೆ ಮತ್ತು ಮೋಟಾರ್ ವೆಹಿಕಲ್ಸ್ ಆಕ್ಟ್ ನಂತಹ ಕಾನೂನುಗಳನ್ನು ಗಮನಿಸಿದರೆ, ಹೆಚ್ಚಿನ ಸಂಖ್ಯೆಯ ಭಾರತೀಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
* ಡಿಸ್ ಕ್ಲೇಮರ್ - ಏಜೆಂಟ್‌ಗಳಿಗೆ ಯಾವುದೇ ನಿರ್ದಿಷ್ಟವಾದ ಕೆಟಗರಿಯಿಲ್ಲ. ನೀವು ಜನರಲ್ ಇನ್ಶೂರೆನ್ಸ್ ಏಜೆಂಟ್ ಆಗಲು ನೋಂದಾಯಿಸಿಕೊಂಡರೆ, ನೀವು ಎಲ್ಲ ಜನರಲ್ ಇನ್ಶೂರೆನ್ಸ್ ಉತ್ಪನ್ನಗಳನ್ನು ಮಾರಾಟ ಮಾಡಬಹುದು.
ಭಾರತದಲ್ಲಿ ಜನರಲ್ ಇನ್ಶೂರೆನ್ಸ್ ಉದ್ಯಮದ ಬಗ್ಗೆಯಿರುವ ಆಸಕ್ತಿದಾಯಕ ಸಂಗತಿಗಳು
ಭಾರತೀಯ ಜನರಲ್ ಇನ್ಶೂರೆನ್ಸ್ ಉದ್ಯಮವು ಕಳೆದ ವರ್ಷವೊಂದರಲ್ಲೇ 14.5% ರಷ್ಟು ಬೆಳೆದಿದೆ. (1)
2019 ರಲ್ಲಿ ಭಾರತದ ನಾನ್-ಲೈಫ್ ವಿಮಾದಾರರಿಂದ ಒಟ್ಟು ಪ್ರೀಮಿಯಂಗಳು INR 1.59 ಟ್ರಿಲಿಯನ್ ಆಗಿವೆ. (2)
ಭಾರತದಲ್ಲಿನ ಜನರಲ್ ಇನ್ಶೂರೆನ್ಸ್ ಮಾರುಕಟ್ಟೆಯು 2020 ರ ವೇಳೆಗೆ $40 USD ಶತಕೋಟಿ ದಾಟುವ ನಿರೀಕ್ಷೆಯಿದೆ. (3)
ಡಿಜಿಟ್ ನೊಂದಿಗೆ ಜನರಲ್ ಇನ್ಶೂರೆನ್ಸ್ ಏಜೆಂಟ್ ಏಕೆ ಆಗಬೇಕು?
ನೀವು ಜನರಲ್ ಇನ್ಶೂರೆನ್ಸ್ ಏಜೆಂಟ್ ಏಕೆ ಆಗಬೇಕು ಮತ್ತು ಡಿಜಿಟ್ ಅನ್ನು ಏಕೆ ನೀವು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
ನಮ್ಮ ಪಿ.ಒ.ಎಸ್.ಪಿ. ಪಾಲುದಾರರಾಗಿ, ನೀವು ನಮ್ಮೊಂದಿಗೆ ನೇರವಾಗಿ ಕೆಲಸ ಮಾಡುತ್ತೀರಿ. ಇದರಲ್ಲಿ ಬೇರೆ ಮಧ್ಯವರ್ತಿಗಳೂ ಭಾಗಿಯಾಗಿಲ್ಲ. ಡಿಜಿಟ್, ಇಂದು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಇನ್ಶೂರೆನ್ಸ್ ಕಂಪನಿಯಾಗಿದೆ. ಏಷ್ಯಾದ ಜನರಲ್ ಇನ್ಶೂರೆನ್ಸ್ ಕಂಪನಿ ಆಫ್ ದಿ ಇಯರ್ 2019, ಪ್ರಶಸ್ತಿಯನ್ನು ಪಡೆದಿರುವ ನಾವು ಪ್ರಸ್ತುತ ಕಿರಿವಯಸ್ಸಿನ ಕಂಪನಿಯಾಗಿದ್ದೇವೆ.
ನಾವು ವಿವಿಧ ರೀತಿಯ ಆಸ್ತಿಗಳನ್ನೊಳಗೊಂಡ ವಿಶಾಲ ಶ್ರೇಣಿಯ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುತ್ತೇವೆ. ಉದಾಹರಣೆಗೆ, ನಾವು ಹೆಲ್ತ್, ಮೋಟಾರ್ (ಕಾರ್ , ಟು-ವೀಲರ್, ಕಮರ್ಷಿಯಲ್ ವಾಹನಗಳು), ಟ್ರಾವೆಲ್, ಮನೆ, ಮತ್ತು ಇನ್ನೂ ಹೆಚ್ಚಿನವುಗಳನ್ನು ಕವರ್ ಮಾಡುತ್ತೇವೆ.
ಇನ್ಶೂರೆನ್ಸ್ ಅನ್ನು ಸರಳಗೊಳಿಸು ನಾವು ನಂಬುತ್ತೇವೆ, ಅದಕ್ಕಾಗಿಯೇ ನಮ್ಮ ಎಲ್ಲಾ ದಾಖಲೆಗಳು ತುಂಬಾ ಸರಳವಾಗಿದ್ದು, 15 ವರ್ಷ ವಯಸ್ಸಿನವರು ಸಹ ಅವುಗಳನ್ನು ಅರ್ಥಮಾಡಿಕೊಳ್ಳಬಹುದು.
ಟೆಕ್ನಾಲಜಿ ನಮ್ಮ ಮುಖ್ಯ ಆಧಾರ ಸ್ತಂಭವಾಗಿದೆ. ನಾವು ನಿಮಗೆ ಅರ್ಪಣಾ ಮನೋಭಾವದ ಸಪೋರ್ಟ್ ಟೀಮ್ ಅನ್ನು ನೀಡುತ್ತೇವೆ ಅಲ್ಲದೇ ಸುಧಾರಿತ ವೆಬ್ ಹಾಗೂ ಮೊಬೈಲ್ ಆಪ್ ಅನ್ನು ಒದಗಿಸುತ್ತೇವೆ. ಅದು ನಿಮ್ಮನ್ನು 24x7 ಮಾರಾಟ ಮಾಡಲು ಅನುಮತಿಸುತ್ತದೆ.
ನಮ್ಮ ಎಲ್ಲಾ ಪ್ರಕ್ರಿಯೆಗಳು ಆನ್‌ಲೈನ್‌ನಲ್ಲಿ ನಡೆಯುತ್ತವೆ, ಯಾವುದೇ ಪೇಪರ್‌ವರ್ಕನ್ನು ಒಳಗೊಂಡಿರುವುದಿಲ್ಲ. ಇದೊಂದು ವಿನ್-ವಿನ್ ಪರಿಸ್ಥಿತಿ; ಇದು ನಿಮಗೆ ಮತ್ತು ನಿಮ್ಮ ಸಮಯಕ್ಕೆ ಉತ್ತಮವಾದುದಾಗಿದೆ. ಮತ್ತು ಗ್ರಾಹಕರು ಸಹ ಇದನ್ನೇ ಬಯಸುತ್ತಾರೆ!
ದೀರ್ಘ ಕಾರ್ಯವಿಧಾನಗಳು ಅಥವಾ ಬೇಸರ ತರಿಸುವ ಪೇಪರ್‌ವರ್ಕ್ ಇಲ್ಲ. ನಾವು ಯಾವುದೇ ಅನಾನುಕೂಲತೆ ಇಲ್ಲದೆ ಆನ್‌ಲೈನ್‌ನಲ್ಲಿ ತಕ್ಷಣವೇ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುತ್ತೇವೆ.
ಚಿಂತಿಸಬೇಡಿ, ನಿಮ್ಮ ಹಿಂದೆ ನಾವಿದ್ದೇವೆ. ನಮ್ಮ ಎಲ್ಲಾ ಕಮಿಷನ್‌ಗಳು ತ್ವರಿತವಾಗಿ ಇತ್ಯರ್ಥವಾಗುತ್ತವೆ. ಇನ್ಶೂರೆನ್ಸ್ ಪಾಲಿಸಿ ನೀಡಿದ ಪ್ರತಿ 15 ದಿನಗಳಿಗೊಮ್ಮೆ ನಿಮ್ಮ ಕಮಿಷನ್ ಅನ್ನು, ನಿಮ್ಮ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ.
ಆನ್‌ಲೈನ್‌ನಲ್ಲಿ ಇನ್ಶೂರೆನ್ಸ್ ಏಜೆಂಟ್ ಆಗುವುದು ಹೇಗೆ?
ಇನ್ಶೂರೆನ್ಸ್ ಏಜೆಂಟ್ ಆಗಲು ಸುಲಭವಾದ ಮಾರ್ಗವೆಂದರೆ ನಿಮ್ಮ ಪಿ.ಒ.ಎಸ್.ಪಿ. ಪ್ರಮಾಣೀಕರಣವನ್ನು ಪೂರ್ಣಿಗೊಳಿಸುವುದು. ಪಿ.ಒ.ಎಸ್.ಪಿ. (ಪಾಯಿಂಟ್ ಆಫ್ ಸೇಲ್ಸ್ ಪರ್ಸನ್) ಎನ್ನುವುದು ನಿರ್ದಿಷ್ಟ ಇನ್ಶೂರೆನ್ಸ್ ಉತ್ಪನ್ನಗಳನ್ನು ಮಾರಾಟ ಮಾಡುವ ಇನ್ಶೂರೆನ್ಸ್ ಏಜೆಂಟರಿಗೆ ನೀಡಲಾಗುವ ಹೆಸರು.
ಪಿ.ಒ.ಎಸ್.ಪಿ. ಆಗಲು, ನೀವು IRDAI ಯಿಂದ ಅಗತ್ಯವಿರುವ ಕನಿಷ್ಠ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು ಮತ್ತು ನಮ್ಮಿಂದ ಒದಗಿಸಲಾದ ತರಬೇತಿ ಪಡೆಯಬೇಕು. ನಿಮ್ಮ ತರಬೇತಿ ಪ್ರಕ್ರಿಯೆಯನ್ನು ಡಿಜಿಟ್ ನೋಡಿಕೊಳ್ಳುತ್ತದೆ. ಚಿಂತಿಸಬೇಡಿ!
ಇನ್ಶೂರೆನ್ಸ್ ಏಜೆಂಟ್ ಆಗಲು ಬೇಕಿರುವ ಅಗತ್ಯತೆಗಳು ಮತ್ತು ಅರ್ಹತೆಗಳು ಯಾವುವು?
ನೀವು ಆನ್‌ಲೈನ್‌ನಲ್ಲಿ ಇನ್ಶೂರೆನ್ಸ್ ಏಜೆಂಟ್ ಆಗಲು ಅಗತ್ಯವಿರುವ ಅಂಶಗಳು ಇಲ್ಲಿವೆ :
ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು,
ನೀವು ಕನಿಷ್ಟ 10 ನೇ ತರಗತಿಯವರೆಗೆ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು,
ನೀವು ವ್ಯಾಲಿಡ್ ಆಗಿರುವ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಹೊಂದಿರಬೇಕು.
ನಂತರ, IRDAI ನಿರ್ದಿಷ್ಟಪಡಿಸಿದ ಖಡ್ಡಾಯ 15-ಗಂಟೆಗಳ ತರಬೇತಿಯನ್ನು ಪೂರ್ಣಗೊಳಿಸಲು ನಿಮ್ಮನ್ನು ಕೇಳಲಾಗುತ್ತದೆ.
ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಕಲಿಯಲು ನಾವು ನಿಮಗೆ ಸಹಾಯ ಮಾಡುವುದಾಗಿ ಭರವಸೆ ನೀಡುತ್ತೇವೆ!
ಯಾರು ಇನ್ಶೂರೆನ್ಸ್ ಏಜೆಂಟ್ ಆಗಬಹುದು?
ಇನ್ಶೂರೆನ್ಸ್ ಏಜೆಂಟ್ ಆಗಲು ಇರುವ ಏಕೈಕ ಅವಶ್ಯಕತೆಯೆಂದರೆ, ಅಭ್ಯರ್ಥಿಯು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ಆದ್ದರಿಂದ, ಮೂಲತಃ ಈ ಮಾನದಂಡಗಳನ್ನು ಪೂರೈಸುವ ಯಾರಾದರೂ ಇನ್ಶೂರೆನ್ಸ್ ಏಜೆಂಟ್ ಆಗಬಹುದು. ಇದು ಕಾಲೇಜು ವಿದ್ಯಾರ್ಥಿಗಳು, ಮನೆಯಲ್ಲಿಯೇ ಇರುವವರು, ನಿವೃತ್ತರು ಮತ್ತು ವ್ಯಾಪಾರಸ್ಥರು/ಮಹಿಳೆಯರನ್ನು ಒಳಗೊಂಡಿರುತ್ತದೆ.
ಡಿಜಿಟ್ ನೊಂದಿಗೆ ಇನ್ಶೂರೆನ್ಸ್ ಏಜೆಂಟ್ ಆಗುವುದು ಹೇಗೆ?
ಹಂತ 1
ಮೇಲೆ ನೀಡಲಾದ ನಮ್ಮ ಪಿ.ಒ.ಎಸ್.ಪಿ. ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಸೈನ್ ಅಪ್ ಮಾಡಿ. ಎಲ್ಲ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಹಂತ 2
ನಮ್ಮೊಂದಿಗೆ ನಿಮ್ಮ 15 - ಗಂಟೆಗಳ ತರಬೇತಿಯನ್ನು ಪೂರ್ಣಗೊಳಿಸಿ.
ಹಂತ 3
ಸೂಚಿಸಿರುವ ಪರೀಕ್ಷೆಯನ್ನು ಪೂರ್ಣಗೊಳಿಸಿ.
ಹಂತ 4
ನಮ್ಮೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿ, ಅಷ್ಟೇ! ಈಗ ನೀವು ಪ್ರಮಾಣಿಕೃತ ಪಿ.ಒ.ಎಸ್.ಪಿ. ಆಗುತ್ತೀರಿ.
ನಾನು ಏಕೆ ಜನರಲ್ ಇನ್ಶೂರೆನ್ಸ್ ಏಜೆಂಟ್ ಆಗಬೇಕು?
ಪಿ.ಒ.ಎಸ್.ಪಿ.ಯಾದರೆ ಆಗುವ ಮೊದಲ ಪ್ರಯೋಜನವೆಂದರೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡುವ ಸ್ವಾತಂತ್ರ್ಯ ನಿಮಗೆ ಸಿಗುತ್ತದೆ. ನೀವೀಗ ನಿಮ್ಮ ಸ್ವಂತ ಬಾಸ್ ಆಗಬಹುದು!
ನೀವು ಪೂರ್ಣ ಸಮಯ ಕೆಲಸ ಮಾಡಲು ಬಯಸುತ್ತೀರೋ, ಅಥವಾ ಅರೆಕಾಲಿಕ ಕೆಲಸ ಮಾಡಲು ಬಯಸುತ್ತೀರೋ ಎಂದು ನೀವೇ ನಿರ್ಧರಿಸಬಹುದು ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಸ್ವಂತ ಕೆಲಸದ ಸಮಯವನ್ನು ನೀವು ರಚಿಸಬಹುದು.
ಡಿಜಿಟ್ ಇನ್ಶೂರೆನ್ಸಿನಲ್ಲಿ ನಾವು ಪ್ರಾಥಮಿಕವಾಗಿ ಇನ್ಶೂರೆನ್ಸ್ ಪಾಲಿಸಿಗಳನ್ನು, ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತೇವೆ. ಇದರರ್ಥ, ನೀವು ಪಿ.ಒ.ಎಸ್.ಪಿ. ಯಾಗಿ ಮನೆಯಿಂದಲೇ ಕೆಲಸ ಮಾಡಬಹುದು. ಮತ್ತು ಪಾಲಿಸಿಗಳನ್ನು ಮಾರಾಟ ಮಾಡಲು ಹಾಗೂ ವಿತರಿಸಲು ನಮ್ಮ ಆನ್‌ಲೈನ್ ಪ್ರಕ್ರಿಯೆಗಳನ್ನು ಬಳಸಬಹುದು.
ಪಿ.ಒ.ಎಸ್.ಪಿ. ಎಂದು ದೃಢೀಕರಿಸಲು, IRDAI ನೀಡುವ 15-ಗಂಟೆಗಳ ಖಡ್ಡಾಯ ತರಬೇತಿಯನ್ನು ಪೂರ್ಣಗೊಳಿಸುವುದು, ಮುಖ್ಯ ಮಾನದಂಡಗಳಲ್ಲಿ ಒಂದಾಗಿದೆ; ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ದೊಡ್ಡದೇನಲ್ಲ! ನೀವು ಬೋರ್ಡ್‌ನಲ್ಲಿ ಬರಲು 15 ಗಂಟೆಗಳ ಸಮಯದ ಹೂಡಿಕೆಯನ್ನು ತೆಗೆದುಕೊಳ್ಳುತ್ತದೆ!
ನಿಮ್ಮ ಗಳಿಕೆಯು ಕೆಲಸ ಮಾಡಿದ ಗಂಟೆಗಳ ಸಂಖ್ಯೆಯನ್ನು ಅವಲಂಬಿಸಿರುವುದಿಲ್ಲ. ಬದಲಿಗೆ ಅದು ನೀವು ನೀಡುವ ಪಾಲಿಸಿಗಳ ಸಂಖ್ಯೆಯನ್ನು ಅವಲಂಬಿಸಿದೆ. ಇದನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳಲು, ಮೇಲಿನ ನಮ್ಮ ಇನ್ಕಮ್ ಕ್ಯಾಲ್ಕುಲೇಟರ್ ಅನ್ನು ನೋಡಿ ಮತ್ತು ಮಾರಾಟವಾದ ಪ್ರತಿ ಪಾಲಿಸಿಯಿಂದ ನೀವು ಎಷ್ಟು ಗಳಿಸಬಹುದು ಎಂಬುದನ್ನು ನೋಡಿ.
ಸ್ಮಾರ್ಟ್‌ಫೋನ್, ಉತ್ತಮ ಇಂಟರ್ನೆಟ್ ಸಂಪರ್ಕ ಮತ್ತು ಅಗತ್ಯವಿರುವ 15-ಗಂಟೆಗಳ ತರಬೇತಿಯನ್ನು ಹೊರತುಪಡಿಸಿ, ನೀವು ಪಿ.ಒ.ಎಸ್.ಪಿ. ಆಗಲು ಬೇರೇನೂ ಬೇಕಿಲ್ಲ. ಆದ್ದರಿಂದ, ನಿಮ್ಮ ಕಡೆಯಿಂದ ಯಾವುದೇ ಹಣಕಾಸಿನ ಹೂಡಿಕೆಯ ಅಗತ್ಯವಿಲ್ಲ, ಆದರೆ ನಿಮಗಿಲ್ಲಿ ಗಳಿಸುವ ಸಾಮರ್ಥ್ಯ, ಅವಕಾಶ ಅಧಿಕವಾಗಿರುತ್ತವೆ.
ಪದೇ ಪದೇ ಕೇಳಲಾದ ಪ್ರಶ್ನೆಗಳು
ಡಿಜಿಟ್ ನೊಂದಿಗೆ ಇನ್ಶೂರೆನ್ಸ್ ಏಜೆಂಟ್ (POSP) ಆಗಲು ಇರುವ ಅಗತ್ಯತೆಗಳು ಯಾವುವು?
ನೋಂದಣಿಯ ಸಮಯದಲ್ಲಿ ನೀವು ಸಲ್ಲಿಸಬೇಕಾದ ದಾಖಲೆಗಳೆಂದರೆ 10 ನೇ ತರಗತಿ ಅಥವಾ ಅದಕ್ಕಿಂತ ಉನ್ನತ ತರಗತಿಯ ಪಾಸ್ ಪ್ರಮಾಣಪತ್ರ, ನಿಮ್ಮ ಪ್ಯಾನ್ ಕಾರ್ಡ್‌ನ ನಕಲು, ಆಧಾರ್ ಕಾರ್ಡ್ (ಮುಂಭಾಗ ಮತ್ತು ಹಿಂದೆ), ಕ್ಯಾನ್ಸಲ್ಡ್ ಚೆಕ್ (ನಿಮ್ಮ ಹೆಸರಿನೊಂದಿಗೆ) ಮತ್ತು ಭಾವಚಿತ್ರ.
PAN ಕಾರ್ಡ್ ಹೊಂದಿರುವವರು ಮತ್ತು ಬ್ಯಾಂಕ್ ಖಾತೆದಾರರು ಒಂದೇ ಆಗಿರಬೇಕೇ?
ಹೌದು, ಪಾವತಿಸಿದ ಎಲ್ಲಾ ಕಮಿಷನ್'ಗಳು ಟಿಡಿಎಸ್ ಗೆ ಒಳಪಟ್ಟಿರುತ್ತವೆ. ನಿಮ್ಮ ಪ್ಯಾನ್ ಕಾರ್ಡ್‌ನ ಆಧಾರದ ಮೇಲೆ, ಆದಾಯ ತೆರಿಗೆ ಅಧಿಕಾರಿಗಳಿಗೆ ಟಿಡಿಎಸ್ ಅನ್ನು ಕ್ರೆಡಿಟ್ ಮಾಡಲಾಗುತ್ತದೆ.
ನಾನು ಯಾವಾಗ ಇನ್ಶೂರೆನ್ಸ್ ಅನ್ನು ಮಾರಾಟ ಮಾಡಲು ಪ್ರಾರಂಭಿಸಬಹುದು?
ನೀವು ನಮ್ಮೊಂದಿಗೆ ನೋಂದಾಯಿಸಿದ ತಕ್ಷಣ, ನೀವು ಪಿ.ಒ.ಎಸ್.ಪಿ ಪರೀಕ್ಷೆಗಾಗಿ ನಿಮ್ಮ ತರಬೇತಿಯನ್ನು ನೀವು ಪ್ರಾರಂಭಿಸಬಹುದು.
ಪರೀಕ್ಷೆಯನ್ನು ಬರೆದು ಮತ್ತು ಉತ್ತೀರ್ಣರಾದ ನಂತರ, ನೀವು ಇ-ಸರ್ಟಿಫಿಕೇಟ್ ಅನ್ನು ಸ್ವೀಕರಿಸುತ್ತೀರಿ. ಇದಾದ ನಂತರ, ನೀವು POSP ಏಜೆಂಟ್ ಆಗಿ ಇನ್ಶೂರೆನ್ಸ್ ಅನ್ನು ಮಾರಾಟ ಮಾಡಲು ಸಿದ್ಧರಾಗುತ್ತೀರಿ.
POS ವ್ಯಕ್ತಿಯೆಂದು ಪ್ರಮಾಣೀಕರಿಸಲು, ಯಾವುದೇ ತರಬೇತಿಯನ್ನು ಪಡೆಯುವುದು ಖಡ್ಡಾಯವೇ?
ಹೌದು, ನೀವು POSP ಆಗಲು ತರಬೇತಿಯನ್ನು ಪೂರ್ಣಗೊಳಿಸಲೇಬೇಕು. ಇದು ಇನ್ಶೂರೆನ್ಸಿನ ಮೂಲಭೂತ ವಿಷಯಗಳು, ಪಾಲಿಸಿ ಪ್ರಕಾರಗಳು, ವಿತರಣೆಗಳು,ಕ್ಲೇಮ್ ಪ್ರಕ್ರಿಯೆಗಳು, ನಿಯಮಗಳು ಮತ್ತು ನಿಬಂಧನೆಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
ನಾನು ಡಿಜಿಟ್ ಇನ್ಶೂರೆನ್ಸ್‌ನೊಂದಿಗೆ ಪಾಲುದಾರನಾದರೆ, ನಾನು ಯಾವ ಬೆಂಬಲ ಸೇವೆಗಳನ್ನು ಪಡೆಯುತ್ತೇನೆ?
ಎಲ್ಲಾ ಡಿಜಿಟ್‌ನ ಪಾಲುದಾರರಿಗೆ ಸಂಬಂಧ ನಿರ್ವಾಹಕರನ್ನು (Relationship Manager) ನಿಯೋಜಿಸಲಾಗಿರುತ್ತದೆ. ಅವರು ಮಾರ್ಗದರ್ಶನವನ್ನು ನೀಡುತ್ತಾರೆ ಅದರ ಜೊತೆಗೆ ಡಿಜಿಟ್ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟವಾದ ಪಾಲಿಸಿಗಳಿಗೆ ಸಂಬಂಧಿಸಿದಂತೆ, ಏಜೆಂಟ್‌ಗಳು ಹೊಂದಿರಬಹುದಾದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಏಜೆಂಟ್‌ಗಳು ಯಾವುದೇ ಸಹಾಯಕ್ಕಾಗಿ partner@godigit.com ನಲ್ಲಿ ಇಮೇಲ್ ಕಳಿಸುವ ಮೂಲಕ ನಮ್ಮ ಕಸ್ಟಮರ್ ಸಪೋರ್ಟ್ ಟೀಮ್ ಅನ್ನು ಸಹ ಸಂಪರ್ಕಿಸಬಹುದು.
ಪಿ.ಒ.ಎಸ್.ಪಿ ಪ್ರಮಾಣೀಕರಣವನ್ನು ಪೂರ್ಣಗೊಳಿಸಿದ ನಂತರ ನಾನು ನನ್ನ ಜ್ಞಾನವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು?
ಪ್ರಮಾಣೀಕರಣದ ನಂತರ, ನಮ್ಮ ಪಿ.ಒ.ಎಸ್.ಪಿ ಗಳಿಗಾಗಿ ನಾವು ಮತ್ತೊಂದು ವ್ಯಾಪಕವಾದ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತೇವೆ. ಅವರು ನಿಮ್ಮ ಇನ್ಶೂರೆನ್ಸ್ ಜ್ಞಾನವನ್ನು ಹೆಚ್ಚಿಸಲು ಹಾಗೂ ನಿಮ್ಮ ಮಾರಾಟ ಮತ್ತು ಸೇವಾ ಕೌಶಲ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತಾರೆ. ಈ ತರಬೇತಿ ಕಾರ್ಯಕ್ರಮಗಳು ಮತ್ತು ಇವೆಂಟ್'ಗಳು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ:
ಜಟಿಲವಾದ ಪ್ರಕರಣಗಳನ್ನು ನಿರ್ವಹಿಸಲು ಸುಧಾರಿತ ಇನ್ಶೂರೆನ್ಸ್ ಜ್ಞಾನ
ಇತ್ತೀಚಿನ ಇನ್ಶೂರೆನ್ಸ್ ಉತ್ಪನ್ನಗಳು ಮತ್ತು ಅವುಗಳನ್ನು ಹೇಗೆ ಪಿಚ್ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ
ನಿಮ್ಮ ಮಾರಾಟದ ಪ್ರಮಾಣವನ್ನು ಹೆಚ್ಚಿಸಲು ಸಹಾಯವಾಗುವಂತೆ, ವಿವಿಧ ಮಾರಾಟ ತಂತ್ರಗಳನ್ನು, ತಮಾಷೆಯಾಗಿ ಮತ್ತು ಆಸಕ್ತಿದಾಯಕ ಮಾರ್ಗಗಳ ಮೂಲಕ ಕಲಿಸಲಾಗುತ್ತದೆ