ಜನರಲ್ ಇನ್ಶೂರೆನ್ಸ್ ಏಜೆಂಟ್ ಆಗಿ
Work
in spare time
Earn
side income
FREE
training by Digit
ಜನರಲ್ ಇನ್ಶೂರೆನ್ಸ್ ಏಜೆಂಟ್ ಎಂದರೆ ಯಾರು?
ಜನರಲ್ ಇನ್ಶೂರೆನ್ಸ್ ಎಂದರೇನು?
ಕಾರ್ ಇನ್ಶೂರೆನ್ಸ್ , ಬೈಕ್ ಇನ್ಶೂರೆನ್ಸ್ , ಟ್ರಾವೆಲ್ ಇನ್ಶೂರೆನ್ಸ್ , SFSP ಇನ್ಶೂರೆನ್ಸ್ ಮತ್ತು ಹೆಲ್ತ್ ಇನ್ಶೂರೆನ್ಸಿನಂತಹ ಎಲ್ಲ ನಾನ್-ಲೈಫ್ ಇನ್ಶೂರೆನ್ಸ್ ಪಾಲಿಸಿಗಳನ್ನು ಜನರಲ್ ಇನ್ಶೂರೆನ್ಸ್ ಒಳಗೊಂಡಿದೆ.
ಈ ಜನರಲ್ ಇನ್ಶೂರೆನ್ಸ್ ಪಾಲಿಸಿಗಳು, ಯಾವುದೇ ದುರದೃಷ್ಟಕರ ಘಟನೆಗಳು ಸಂಭವಿಸಿದಾಗ ಉಂಟಾಗುವ ನಷ್ಟದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನರಿಗೆ ಸಹಾಯ ಮಾಡುತ್ತದೆ.
ಉದಾಹರಣೆಗೆ, ಕಾರ್ ಇನ್ಶೂರೆನ್ಸ್, ಅಪಘಾತದ ಸಮಯದಲ್ಲಿ ಕಾರಿಗೆ ಉಂಟಾದ ನಷ್ಟಗಳು ಮತ್ತು ಹಾನಿಗಳಿಂದ ಮಾಲೀಕರನ್ನು ರಕ್ಷಿಸುತ್ತದೆ ಆದರೆ SFSP ಇನ್ಶೂರೆನ್ಸ್, ಕಳ್ಳತನ ಅಥವಾ ನೈಸರ್ಗಿಕ ವಿಪತ್ತಿನ ಸಂದರ್ಭಗಳಿಂದ ಉಂಟಾದ ಹಾನಿಗಳಿಗೆ ರಕ್ಷಣೆ ನೀಡುತ್ತದೆ.
ಭಾರತದ ನಗರ ಪ್ರದೇಶಗಳ ಜನರ ಜೀವನ ಮಟ್ಟದಲ್ಲಿನ ಏರಿಕೆ ಮತ್ತು ಮೋಟಾರ್ ವೆಹಿಕಲ್ಸ್ ಆಕ್ಟ್ ನಂತಹ ಕಾನೂನುಗಳನ್ನು ಗಮನಿಸಿದರೆ, ಹೆಚ್ಚಿನ ಸಂಖ್ಯೆಯ ಭಾರತೀಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
* ಡಿಸ್ ಕ್ಲೇಮರ್ - ಏಜೆಂಟ್ಗಳಿಗೆ ಯಾವುದೇ ನಿರ್ದಿಷ್ಟವಾದ ಕೆಟಗರಿಯಿಲ್ಲ. ನೀವು ಜನರಲ್ ಇನ್ಶೂರೆನ್ಸ್ ಏಜೆಂಟ್ ಆಗಲು ನೋಂದಾಯಿಸಿಕೊಂಡರೆ, ನೀವು ಎಲ್ಲ ಜನರಲ್ ಇನ್ಶೂರೆನ್ಸ್ ಉತ್ಪನ್ನಗಳನ್ನು ಮಾರಾಟ ಮಾಡಬಹುದು.
ಭಾರತದಲ್ಲಿ ಜನರಲ್ ಇನ್ಶೂರೆನ್ಸ್ ಉದ್ಯಮದ ಬಗ್ಗೆಯಿರುವ ಆಸಕ್ತಿದಾಯಕ ಸಂಗತಿಗಳು
ಡಿಜಿಟ್ ನೊಂದಿಗೆ ಜನರಲ್ ಇನ್ಶೂರೆನ್ಸ್ ಏಜೆಂಟ್ ಏಕೆ ಆಗಬೇಕು?
ನೀವು ಜನರಲ್ ಇನ್ಶೂರೆನ್ಸ್ ಏಜೆಂಟ್ ಏಕೆ ಆಗಬೇಕು ಮತ್ತು ಡಿಜಿಟ್ ಅನ್ನು ಏಕೆ ನೀವು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
ಆನ್ಲೈನ್ನಲ್ಲಿ ಇನ್ಶೂರೆನ್ಸ್ ಏಜೆಂಟ್ ಆಗುವುದು ಹೇಗೆ?
ಇನ್ಶೂರೆನ್ಸ್ ಏಜೆಂಟ್ ಆಗಲು ಸುಲಭವಾದ ಮಾರ್ಗವೆಂದರೆ ನಿಮ್ಮ ಪಿ.ಒ.ಎಸ್.ಪಿ. ಪ್ರಮಾಣೀಕರಣವನ್ನು ಪೂರ್ಣಿಗೊಳಿಸುವುದು. ಪಿ.ಒ.ಎಸ್.ಪಿ. (ಪಾಯಿಂಟ್ ಆಫ್ ಸೇಲ್ಸ್ ಪರ್ಸನ್) ಎನ್ನುವುದು ನಿರ್ದಿಷ್ಟ ಇನ್ಶೂರೆನ್ಸ್ ಉತ್ಪನ್ನಗಳನ್ನು ಮಾರಾಟ ಮಾಡುವ ಇನ್ಶೂರೆನ್ಸ್ ಏಜೆಂಟರಿಗೆ ನೀಡಲಾಗುವ ಹೆಸರು.
ಪಿ.ಒ.ಎಸ್.ಪಿ. ಆಗಲು, ನೀವು IRDAI ಯಿಂದ ಅಗತ್ಯವಿರುವ ಕನಿಷ್ಠ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು ಮತ್ತು ನಮ್ಮಿಂದ ಒದಗಿಸಲಾದ ತರಬೇತಿ ಪಡೆಯಬೇಕು. ನಿಮ್ಮ ತರಬೇತಿ ಪ್ರಕ್ರಿಯೆಯನ್ನು ಡಿಜಿಟ್ ನೋಡಿಕೊಳ್ಳುತ್ತದೆ. ಚಿಂತಿಸಬೇಡಿ!
ಇನ್ಶೂರೆನ್ಸ್ ಏಜೆಂಟ್ ಆಗಲು ಬೇಕಿರುವ ಅಗತ್ಯತೆಗಳು ಮತ್ತು ಅರ್ಹತೆಗಳು ಯಾವುವು?
ನೀವು ಆನ್ಲೈನ್ನಲ್ಲಿ ಇನ್ಶೂರೆನ್ಸ್ ಏಜೆಂಟ್ ಆಗಲು ಅಗತ್ಯವಿರುವ ಅಂಶಗಳು ಇಲ್ಲಿವೆ :
ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು,
ನೀವು ಕನಿಷ್ಟ 10 ನೇ ತರಗತಿಯವರೆಗೆ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು,
ನೀವು ವ್ಯಾಲಿಡ್ ಆಗಿರುವ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಹೊಂದಿರಬೇಕು.
ನಂತರ, IRDAI ನಿರ್ದಿಷ್ಟಪಡಿಸಿದ ಖಡ್ಡಾಯ 15-ಗಂಟೆಗಳ ತರಬೇತಿಯನ್ನು ಪೂರ್ಣಗೊಳಿಸಲು ನಿಮ್ಮನ್ನು ಕೇಳಲಾಗುತ್ತದೆ.
ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಕಲಿಯಲು ನಾವು ನಿಮಗೆ ಸಹಾಯ ಮಾಡುವುದಾಗಿ ಭರವಸೆ ನೀಡುತ್ತೇವೆ!
ಯಾರು ಇನ್ಶೂರೆನ್ಸ್ ಏಜೆಂಟ್ ಆಗಬಹುದು?
ಇನ್ಶೂರೆನ್ಸ್ ಏಜೆಂಟ್ ಆಗಲು ಇರುವ ಏಕೈಕ ಅವಶ್ಯಕತೆಯೆಂದರೆ, ಅಭ್ಯರ್ಥಿಯು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ಆದ್ದರಿಂದ, ಮೂಲತಃ ಈ ಮಾನದಂಡಗಳನ್ನು ಪೂರೈಸುವ ಯಾರಾದರೂ ಇನ್ಶೂರೆನ್ಸ್ ಏಜೆಂಟ್ ಆಗಬಹುದು. ಇದು ಕಾಲೇಜು ವಿದ್ಯಾರ್ಥಿಗಳು, ಮನೆಯಲ್ಲಿಯೇ ಇರುವವರು, ನಿವೃತ್ತರು ಮತ್ತು ವ್ಯಾಪಾರಸ್ಥರು/ಮಹಿಳೆಯರನ್ನು ಒಳಗೊಂಡಿರುತ್ತದೆ.
ಡಿಜಿಟ್ ನೊಂದಿಗೆ ಇನ್ಶೂರೆನ್ಸ್ ಏಜೆಂಟ್ ಆಗುವುದು ಹೇಗೆ?
ಹಂತ 1
ಮೇಲೆ ನೀಡಲಾದ ನಮ್ಮ ಪಿ.ಒ.ಎಸ್.ಪಿ. ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಸೈನ್ ಅಪ್ ಮಾಡಿ. ಎಲ್ಲ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಹಂತ 2
ನಮ್ಮೊಂದಿಗೆ ನಿಮ್ಮ 15 - ಗಂಟೆಗಳ ತರಬೇತಿಯನ್ನು ಪೂರ್ಣಗೊಳಿಸಿ.
ಹಂತ 3
ಸೂಚಿಸಿರುವ ಪರೀಕ್ಷೆಯನ್ನು ಪೂರ್ಣಗೊಳಿಸಿ.
ಹಂತ 4
ನಮ್ಮೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿ, ಅಷ್ಟೇ! ಈಗ ನೀವು ಪ್ರಮಾಣಿಕೃತ ಪಿ.ಒ.ಎಸ್.ಪಿ. ಆಗುತ್ತೀರಿ.
ನಾನು ಏಕೆ ಜನರಲ್ ಇನ್ಶೂರೆನ್ಸ್ ಏಜೆಂಟ್ ಆಗಬೇಕು?
ಪದೇ ಪದೇ ಕೇಳಲಾದ ಪ್ರಶ್ನೆಗಳು