ಹೆಲ್ತ್ ಇನ್ಶೂರೆನ್ಸ್ ಏಜೆಂಟ್ ಆಗಿ
Work
in spare time
Earn
side income
FREE
training by Digit
ಹೆಲ್ತ್ ಇನ್ಶೂರೆನ್ಸ್ ಏಜೆಂಟ್/ಪಿ.ಒ.ಎಸ್.ಪಿ. ಎಂದರೆ ಯಾರು?
ಭಾರತದಲ್ಲಿ ಹೆಲ್ತ್ ಇನ್ಶೂರೆನ್ಸ್ ಉದ್ಯಮದ ಬಗ್ಗೆ ಇರುವ ಆಸಕ್ತಿದಾಯಕ ಸಂಗತಿಗಳು
ಡಿಜಿಟ್ ನೊಂದಿಗೆ ಹೆಲ್ತ್ ಇನ್ಶೂರೆನ್ಸ್ ಏಜೆಂಟ್/POSP ಏಕೆ ಆಗಬೇಕು?
ನೀವು ಹೆಲ್ತ್ ಇನ್ಶೂರೆನ್ಸ್ ಏಜೆಂಟ್ ಏಕೆ ಆಗಬೇಕು ಮತ್ತು ಡಿಜಿಟ್ ಅನ್ನು ಏಕೆ ನೀವು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
ಹೆಲ್ತ್ ಇನ್ಶೂರೆನ್ಸ್ ಏಜೆಂಟ್/ಪಿ.ಒ.ಎಸ್.ಪಿ. ಆಗುವುದು ಹೇಗೆ?
ಇನ್ಶೂರೆನ್ಸ್ ಏಜೆಂಟ್ ಆಗಲು ಸುಲಭವಾದ ಮಾರ್ಗವೆಂದರೆ ನಿಮ್ಮ ಪಿ.ಒ.ಎಸ್.ಪಿ. ಪ್ರಮಾಣೀಕರಣವನ್ನು ಪೂರ್ಣಗೊಳಿಸುವುದು. ಪಿ.ಒ.ಎಸ್.ಪಿ. (ಪಾಯಿಂಟ್ ಆಫ್ ಸೇಲ್ಸ್ ಪರ್ಸನ್) ಎನ್ನುವುದು, ನಿರ್ದಿಷ್ಟ ಇನ್ಶೂರೆನ್ಸ್ ಉತ್ಪನ್ನಗಳನ್ನು ಮಾರಾಟ ಮಾಡುವ ಇನ್ಶೂರೆನ್ಸ್ ಏಜೆಂಟ್‌ರಿಗೆ ನೀಡಲಾದ ಹೆಸರು.ಪಿ.ಒ.ಎಸ್.ಪಿ. ಆಗಲು, ನೀವು IRDAI ಯಿಂದ ಅಗತ್ಯವಿರುವ ಕನಿಷ್ಠ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು ಮತ್ತು ನಮ್ಮಿಂದ ಒದಗಿಸಲಾದ ತರಬೇತಿ ಪಡೆಯಬೇಕು. ನಿಮ್ಮ ತರಬೇತಿ ಪ್ರಕ್ರಿಯೆಯನ್ನು ಡಿಜಿಟ್ ನೋಡಿಕೊಳ್ಳುತ್ತದೆ. ಚಿಂತಿಸಬೇಡಿ!
ಹೆಲ್ತ್ ಇನ್ಶೂರೆನ್ಸ್ ಏಜೆಂಟ್ ಆಗಲು ಬೇಕಿರುವ ಅವಶ್ಯಕತೆಗಳು ಮತ್ತು ಅರ್ಹತೆಗಳು ಯಾವುವು?
ನೀವು ಹೆಲ್ತ್ ಇನ್ಶೂರೆನ್ಸ್ ಏಜೆಂಟ್ ಆಗಲು ಬೇಕಾಗಿರುವುದು ಕೆಲ ಅಂಶಗಳು ಇಲ್ಲಿವೆ:
- ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
- ನೀವು ಕನಿಷ್ಟ 10 ನೇ ತರಗತಿಯವರೆಗೆ ಶಿಕ್ಷಣ ಪೂರ್ಣಗೊಳಿಸಿರಬೇಕು
- ನೀವು ವ್ಯಾಲಿಡ್ ಆಗಿರುವ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಹೊಂದಿರಬೇಕು.
- ನಂತರ IRDAI ನಿರ್ದಿಷ್ಟಪಡಿಸಿದ ಖಡ್ಡಾಯ 15-ಗಂಟೆಗಳ ತರಬೇತಿಯನ್ನು ಪೂರ್ಣಗೊಳಿಸಲು ನಿಮ್ಮನ್ನು ಕೇಳಲಾಗುತ್ತದೆ.
ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಕಲಿಯಲು, ನಾವು ನಿಮಗೆ ಸಹಾಯ ಮಾಡಲು ಭರವಸೆ ನೀಡುತ್ತೇವೆ!
ಯಾರು ಹೆಲ್ತ್ ಇನ್ಶೂರೆನ್ಸ್ ಏಜೆಂಟ್ ಆಗಬಹುದು?
ಇನ್ಶೂರೆನ್ಸ್ ಏಜೆಂಟ್ ಆಗಲು ಇರುವ ಏಕೈಕ ಅವಶ್ಯಕತೆಯೆಂದರೆ, ಅಭ್ಯರ್ಥಿಯು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ಆದ್ದರಿಂದ, ಮೂಲತಃ ಈ ಮಾನದಂಡಗಳನ್ನು ಪೂರೈಸುವ ಯಾರಾದರೂ ಇನ್ಶೂರೆನ್ಸ್ ಏಜೆಂಟ್ ಆಗಬಹುದು. ಇದು ಕಾಲೇಜು ವಿದ್ಯಾರ್ಥಿಗಳು, ಮನೆಯಲ್ಲಿಯೇ ಇರುವವರು, ನಿವೃತ್ತರು ಮತ್ತು ವ್ಯಾಪಾರಸ್ಥರು/ಮಹಿಳೆಯರನ್ನು ಒಳಗೊಂಡಿರುತ್ತದೆ
ಡಿಜಿಟ್ ನೊಂದಿಗೆ ಹೆಲ್ತ್ ಇನ್ಶೂರೆನ್ಸ್ ಏಜೆಂಟ್/ಪಿ.ಒ.ಎಸ್.ಪಿ. ಆಗುವುದು ಹೇಗೆ?
ಹಂತ 1
ಮೇಲೆ ನೀಡಲಾದ ನಮ್ಮ ಪಿ.ಒ.ಎಸ್.ಪಿ. ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಸೈನ್ ಅಪ್ ಮಾಡಿ. ಎಲ್ಲ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಹಂತ 2
ನಮ್ಮೊಂದಿಗೆ ನಿಮ್ಮ 15-ಗಂಟೆಗಳ ತರಬೇತಿಯನ್ನು ಪೂರ್ಣಗೊಳಿಸಿ.
ಹಂತ 3
ಸೂಚಿಸಿರುವ ಪರೀಕ್ಷೆಯನ್ನು ಪೂರ್ಣಗೊಳಿಸಿ
ಹಂತ 4
ನಮ್ಮೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿ, ಅಷ್ಟೆ! ಈಗ ನೀವು ಪ್ರಮಾಣೀಕೃತ ಪಿ.ಒ.ಎಸ್.ಪಿ. ಆಗುತ್ತೀರಿ.
ನೀವು ಎಷ್ಟು ಗಳಿಸಬಹುದು?
ಹೆಲ್ತ್ ಇನ್ಶೂರೆನ್ಸ್ ಏಜೆಂಟ್ ಆಗಿ ನಿಮ್ಮ ಆದಾಯವು, ನೀವು ಮಾರಾಟ ಮಾಡುವ ಪಾಲಿಸಿಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಹೆಲ್ತ್ ಇನ್ಶೂರೆನ್ಸ್ ಏಜೆಂಟ್, ಅಧಿಕ ಆದಾಯವನ್ನು ಗಳಿಸುವ ವಿಶಾಲ ವ್ಯಾಪ್ತಿಯನ್ನು ಹೊಂದಿದ್ದಾರೆ. ಏಕೆಂದರೆ ವೈದ್ಯಕೀಯ ಚಿಕಿತ್ಸೆಗಳ ವೆಚ್ಚವು ಕ್ರಮೇಣ ಹೆಚ್ಚುತ್ತಿದೆ.
ಇದರರ್ಥ, ಜನರು ಈಗ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗಿದೆ. ಆದ್ದರಿಂದ, ಅವರು ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ಅಂತಹ ಹೆಚ್ಚಿನ ವೆಚ್ಚಗಳಿಂದ ರಕ್ಷಿಸಿಕೊಳ್ಳಲು, ಹೆಲ್ತ್ ಇನ್ಶೂರೆನ್ಸ್ ಯೋಜನೆಗಳನ್ನು ಖರೀದಿಸಲು ಬಯಸುತ್ತಾರೆ.
ಇನ್ಶೂರೆನ್ಸ್ ಏಜೆಂಟ್ ಆಗಿ ನೀವು ಎಷ್ಟು ಗಳಿಸಬಹುದು ಎಂಬುದರ ಕುರಿತು ಐಡಿಯಾ ಪಡೆಯಲು, ಕೆಳಗಿನ ಕಮಿಷನ್ ರಚನೆಯನ್ನು ನೋಡೋಣ:
ತಿಂಗಳ ನಿವ್ವಳ ಪ್ರೀಮಿಯಂ |
ಕಮಿಷನ್ & *ರಿವಾರ್ಡ್, ನಿವ್ವಳ ಪ್ರೀಮಿಯಂನ % ದಂತೆ |
ಆರೋಗ್ಯ ಸಂಜೀವಿನಿ |
<25ಸಾವಿರ |
1 ವರ್ಷ - 25% | 2 ವರ್ಷ - 23% | 3 ವರ್ಷ - 22% |
15% |
>=25 ಸಾವಿರ & <50 ಸಾವಿರ |
1 ವರ್ಷ - 28% | 2 ವರ್ಷ - 26% | 3 ವರ್ಷ - 25% |
15% |
>50 ಸಾವಿರ & <1 ಲಕ್ಷ |
1 ವರ್ಷ - 30% | 2 ವರ್ಷ - 28% | 3 ವರ್ಷ - 26% |
15% |
>=1 ಲಕ್ಷ |
1 ವರ್ಷ - 35% | 2 ವರ್ಷ - 30% | 3 ವರ್ಷ - 28% |
15% |
ಷರತ್ತುಗಳು:
- ಪಾವತಿಯು ತಿಂಗಳಿಗೆ ಎರಡು ಬಾರಿ ನಡೆಯುತ್ತದೆ
- ತಿಂಗಳನ್ನು ನಿರ್ಧರಿಸಲು, ಪಾಲಿಸಿ ನೀಡುವ ದಿನಾಂಕವನ್ನು ಪರಿಗಣಿಸಲಾಗುತ್ತದೆ
- ಪಾವತಿಯನ್ನು, ಪ್ರತಿ ಸ್ಲ್ಯಾಬ್‌ಗೆ ಪ್ರತ್ಯೇಕವಾಗಿಯೇ ಪರಿಗಣಿಸಲಾಗುತ್ತದೆ.
- ಷರತ್ತು ಮತ್ತು ನಿಯಮಗಳು ಅನ್ವಯವಾಗುತ್ತದೆ. ನಿಯಮಾವಳಿಯಲ್ಲಿ ಸೂಚಿಸಿದಂತೆ, ಗರಿಷ್ಠ ಮಿತಿಗೆ ಒಳಪಟ್ಟಿರುತ್ತದೆ
- ನಿವ್ವಳ ಪ್ರೀಮಿಯಂ (net premium) ಎಂದರೆ ಜಿಎಸ್ಟಿ ಹೊರತುಪಡಿಸಿದ ಪ್ರೀಮಿಯಂ.
ನಾನು ಏಕೆ ಹೆಲ್ತ್ ಇನ್ಶೂರೆನ್ಸ್ ಏಜೆಂಟ್ ಆಗಬೇಕು?
ಪದೇ ಪದೇ ಕೇಳಲಾಗುವ ಪ್ರಶ್ನೆಗಳು