
Zero
Documentation
Quick Claim
Process
Affordable
Premium
,
ಆನ್ಲೈನ್ನಲ್ಲಿ ಹೋಮ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ/ರಿನೀವ್ ಮಾಡಿ
ಹೋಮ್ ಇನ್ಶೂರೆನ್ಸ್ ಆನ್ಲೈನ್ನಲ್ಲಿ
ಹೋಮ್ ಇನ್ಶೂರೆನ್ಸ್ ಎನ್ನುವುದು, ನಿಮ್ಮ ಸ್ವಂತ ಮನೆ ಅಥವಾ ಬಾಡಿಗೆ ಅಪಾರ್ಟ್ಮೆಂಟ್ ಮತ್ತು ಅದರೊಳಗಿರುವ ನಿಮ್ಮ ವೈಯಕ್ತಿಕ ವಸ್ತುಗಳನ್ನು ಬೆಂಕಿ, ಪ್ರವಾಹಗಳು, ಬಿರುಗಾಳಿ ಮತ್ತು ಸ್ಫೋಟಗಳಂತಹ ಅನಿರೀಕ್ಷಿತ ಸಂದರ್ಭಗಳಿಂದ ರಕ್ಷಿಸಲು ನಿಮಗೆ ಸಹಾಯ ಮಾಡುವ ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿಯಾಗಿದೆ.
ಮನೆಯನ್ನು ಖರೀದಿಸುವುದು ಎಂದರೆ ಅದು ಪ್ರಮುಖ ಹೂಡಿಕೆಗಳಲ್ಲಿ ಒಂದಾಗಿದೆ. ಅದಕ್ಕಾಗಿ ಜನರು ತಮ್ಮ ಜೀವನದುದ್ದಕ್ಕೂ ಕೆಲಸ ಮಾಡುತ್ತಾರೆ. ಇನ್ನೂ ಅದೆಷ್ಟೋ ಜನ ತಮ್ಮ ಜೀವನದಲ್ಲಿ ಈ ಪ್ರಮುಖ ಹೂಡಿಕೆಯನ್ನು ಸುರಕ್ಷಿತವಾಗಿರಿಸಲು ಮತ್ತು ರಕ್ಷಿಸಲು ಮರೆಯುತ್ತಾರೆ. ನಿಮ್ಮ ಅತ್ಯಾಧುನಿಕ ಗ್ಯಾಜೆಟ್ಗಳು ಮತ್ತು ಸುಂದರವಾದ ಒಳಾಂಗಣದಿಂದ ಹಿಡಿದು ನಿಮ್ಮ ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳವರೆಗೆ; ನಿಮ್ಮ ಮನೆ ಕೇವಲ ಒಂದು ಫಿಸಿಕಲ್ ಪ್ರಾಪರ್ಟಿಯಾಗಿರದೆ, ಅದಕ್ಕಿಂತಲೂ ಹೆಚ್ಚಾಗಿರುತ್ತದೆ ಮತ್ತು ನೀವು ಊಹಿಸುವುದಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ.
ಅದಕ್ಕಾಗಿಯೇ, ನಿಮ್ಮ ಮನೆಯ ಯೋಗಕ್ಷೇಮ ಮತ್ತು ಸುರಕ್ಷತೆಗಾಗಿ ನೀವು ಮಾಡಬಹುದಾದ ಅತ್ಯಂತ ಅವಶ್ಯಕವಾದ ಒಂದು ವಿಷಯವೆಂದರೆ, ಕನಿಷ್ಠ ಹೋಮ್ ಇನ್ಶೂರೆನ್ಸ್ ಅನ್ನು ಪಡೆಯುವುದು. ಅದು ನೀವು ಸುರಕ್ಷಿತವಾಗಿರಲು ಕಳ್ಳತನ, ಪ್ರವಾಹಗಳಂತಹ ಅನಿಶ್ಚಿತ ಮತ್ತು ದುರದೃಷ್ಟಕರ ಸಂದರ್ಭಗಳಲ್ಲಿ ನಿಮಗೆ ರಕ್ಷಣೆ ನೀಡಲು ಅನುವು ಮಾಡಿಕೊಡುತ್ತದೆ. ಹಾಗೂ ಸಂಭವನೀಯವಾಗಿದ್ದರೂ ಅನಿರೀಕ್ಷಿತ ಸಂದರ್ಭಗಳಲ್ಲಿ ಎದುರಾಗುವ ಬೆಂಕಿ, ಮತ್ತು ಭೂಕಂಪಗಳಿಂದ ನಿಮ್ಮ ಮನೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಆಭರಣಗಳಂತಹ ಬೆಲೆಬಾಳುವ ವಸ್ತುಗಳ ಐಚ್ಛಿಕ ಆಡ್-ಆನ್ನೊಂದಿಗೆ ನಮ್ಮ ಗೋ ಡಿಜಿಟ್, ಭಾರತ್ ಗೃಹ ರಕ್ಷಾ ಪಾಲಿಸಿಯು ನಿಮ್ಮ ಮನೆ ಮತ್ತು ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ.
ನಿಮ್ಮ ಮನೆಯು ಕಳ್ಳತನಗಳ ವಿರುದ್ಧವೂ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು, ನೀವು ನಿಮ್ಮ ಗೃಹ ವಿಮಾ ಪಾಲಿಸಿಯೊಂದಿಗೆ ಡಿಜಿಟ್ ಕಳ್ಳತನದ ಇನ್ಶೂರೆನ್ಸ್ ಪಾಲಿಸಿಯನ್ನು (UIN - IRDAN158RP0019V01201920) ಕಂಬೈನ್ ಮಾಡಬಹುದು..
ಹೋಮ್ ಇನ್ಶೂರೆನ್ಸ್ ಎಂದರೇನು?
ಹೋಮ್ ಇನ್ಶೂರೆನ್ಸ್ ಅಗತ್ಯತೆಯ ಬಗ್ಗೆ ನೀವು ಇನ್ನೂ ಗೊಂದಲದಲ್ಲಿದ್ದರೆ,ಇದನ್ನು ಓದಿ…
ಡಿಜಿಟ್ನ ಹೋಮ್ ಇನ್ಶೂರೆನ್ಸ್ನ ಬಗ್ಗೆ ಯಾವ ಅಂಶ ಉತ್ತಮವಾಗಿವೆ?
ಡಿಜಿಟ್ನ ಹೋಮ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?
ಸೂಚನೆ : ಭಾರತದಲ್ಲಿ, ಕಳ್ಳತನಗಳು ಸಾಮಾನ್ಯವಾಗಿದೆ. ನಿಮ್ಮ ವಾಸಸ್ಥಳವನ್ನು ಕಳ್ಳತನಗಳ ವಿರುದ್ಧ ಸುರಕ್ಷಿತವಾಗಿರಿಸಲು ನೀವು ಡಿಜಿಟ್ ಕಳ್ಳತನ ಇನ್ಶೂರೆನ್ಸ್ ಪಾಲಿಸಿಯೊಂದಿಗೆ (UIN: IRDAN158RP0019V01201920) ಹೋಮ್ ಇನ್ಶೂರೆನ್ಸ್ ಪಾಲಿಸಿಯನ್ನು ಸಂಯೋಜಿಸಲು ಆಯ್ಕೆ ಮಾಡಬಹುದು.
ಏನನ್ನು ಕವರ್ ಮಾಡುವುದಿಲ್ಲ?
ಭಾರತ್ ಗೃಹ ರಕ್ಷಾ ಪಾಲಿಸಿಯು ಕೆಳಗೆ ತಿಳಿಸಲಾದ ಕಾರಣಗಳಿಂದ ಉಂಟಾಗುವ ಹಾನಿಯನ್ನು ಕವರ್ ಮಾಡುವುದಿಲ್ಲ:
ಉದ್ದೇಶಪೂರ್ವಕವಾಗಿ ಮನೆಗುಂಟಾದ ಡ್ಯಾಮೇಜ್.
ಯುದ್ಧ, ಆಕ್ರಮಣ ಮತ್ತು ಯುದ್ಧದ ಕಾರ್ಯಾಚರಣೆಗಳಂತಹ ಅಂಶಗಳಿಂದ ಉಂಟಾಗುವ ಡ್ಯಾಮೇಜ್.
ಮಾಲಿನ್ಯ ಅಥವಾ ಅಯಾನೀಕರಿಸುವ ವಿಕಿರಣದಿಂದ ಉಂಟಾಗುವ ನಷ್ಟಗಳು.
ಬೆಲೆಬಾಳುವ ವಸ್ತುಗಳು ಅಥವಾ ಬೆಲೆಬಾಳುವ ಸ್ಟೋನ್ಗಳು, ಕೈಬರಹದ ಪ್ರತಿಗಳು, ವೆಹಿಕಲ್ಗಳು ಮತ್ತು ಸ್ಫೋಟಕ ವಸ್ತುಗಳಿಗೆ ಉಂಟಾದ ಡ್ಯಾಮೇಜ್ ಅನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.
ಯಾವುದೇ ಕ್ಲೈಮ್ ಅನ್ನು ತಯಾರಿಸಲು ತಗಲುವ ಖರ್ಚು, ಶುಲ್ಕಗಳು ಅಥವಾ ವೆಚ್ಚಗಳು.
ಮನೆಗೆ ಯಾವುದೇ ಸೇರ್ಪಡೆ, ವಿಸ್ತರಣೆ ಅಥವಾ ಮನೆಯ ಬದಲಾವಣೆಗೆ ತಗಲುವ ವೆಚ್ಚಗಳು (ಕಮೆನ್ಸ್ಮೆಂಟ್ ದಿನಾಂಕ ಅಥವಾ ರಿನೀವಲ್ ದಿನಾಂಕದಂದು ಅಸ್ತಿತ್ವದಲ್ಲಿರುವ ಅದರ ಕಾರ್ಪೆಟ್ ಏರಿಯಾದ 10% ಕ್ಕಿಂತ ಹೆಚ್ಚು)
ಡಿಜಿಟ್ನಿಂದ ಹೋಮ್ ಇನ್ಶೂರೆನ್ಸ್ ಅನ್ನು ಹೇಗೆ ಖರೀದಿಸುವುದು?
ನೀವು ನಮ್ಮ ಮೊಬೈಲ್ ಆ್ಯಪ್ ಅಥವಾ ವೆಬ್ಸೈಟ್ನಿಂದ ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುತ್ತಿದ್ದರೂ, ನೀವು ಈ ಸುಲಭ ಹಂತಗಳನ್ನು ಫಾಲೋ ಮಾಡಬಹುದು ಮತ್ತು ನಿಮ್ಮ ಮನೆಯನ್ನು ಸುರಕ್ಷಿತಗೊಳಿಸಬಹುದು.
ಹಂತ 1: ಡಿಜಿಟ್ನ ಭಾರತ್ ಗೃಹ ರಕ್ಷಾ ಇನ್ಶೂರೆನ್ಸ್ ಪಾಲಿಸಿ ಪೇಜಿಗೆ ಭೇಟಿ ನೀಡಿ ಅಥವಾ ನಮ್ಮ ‘ಡಿಜಿಟ್ ಇನ್ಶೂರೆನ್ಸ್ ಆ್ಯಪ್’ ಅನ್ನು ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್ನಿಂದ ಡೌನ್ಲೋಡ್ ಮಾಡಿ.
ಹಂತ 2: 'ಪ್ರಾಪರ್ಟಿಯ ವಿಧ' ಅನ್ನು ಆಯ್ಕೆಮಾಡಿ ಮತ್ತು 'ಪಿನ್ ಕೋಡ್' ಮತ್ತು 'ಮೊಬೈಲ್ ನಂಬರ್' ನಂತಹ ನಿಮ್ಮ ವಿವರಗಳನ್ನು ನಮೂದಿಸಿ.
ಹಂತ 3: 'ಬೆಲೆಗಳನ್ನು ನೋಡಿ' ಮೇಲೆ ಕ್ಲಿಕ್ ಮಾಡಿ ಮತ್ತು ಪ್ಲ್ಯಾನ್ ವಿವರಗಳನ್ನು ನಮೂದಿಸಿ. ಹೋಮ್ ಬಿಲ್ಡಿಂಗ್ ವಿವರಗಳನ್ನು ನಮೂದಿಸಿ ಮತ್ತು ಕನ್ಫರ್ಮ್ ಮಾಡಿ. ಈಗ ನೀವು ಬಯಸಿದ ಪ್ಲ್ಯಾನ್ ವಿಧವನ್ನು ಆಯ್ಕೆ ಮಾಡಬಹುದು.
ಹಂತ 4: ನೀವು ಪ್ಲ್ಯಾನ್ ಬೆಲೆಗಳನ್ನು ನೋಡಿದ ನಂತರ, ನಿಮ್ಮ ಬಿಲ್ಡಿಂಗ್ನ ಕುರಿತಾದ ವಿವರಗಳು ಮತ್ತು 'ಪ್ರಾಪರ್ಟಿ ಓನರ್ನ ಹೆಸರು', 'ಮೊಬೈಲ್ ನಂಬರ್', 'ಇಮೇಲ್ ಐಡಿ' ಮತ್ತು 'ಪ್ಯಾನ್ ಕಾರ್ಡ್ ನಂಬರ್' ನಂತಹ ಇತರ ವಿವರಗಳನ್ನು ಭರ್ತಿ ಮಾಡಿ.
ಹಂತ 5: ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ, ವ್ಯಾಲೆಟ್ ಅಥವಾ ಇಎಮ್ಐ ಮೂಲಕ ಆನ್ಲೈನ್ನಲ್ಲಿ ಪೇಮೆಂಟ್ ಮಾಡಿ.
ಹಂತ 6: ಕೆವೈಸಿ ವೆರಿಫಿಕೇಶನ್ಗಾಗಿ ನಮಗೆ ಕೆಲವು ವಿವರಗಳ ಅಗತ್ಯವಿರುತ್ತದೆ. ಆದ್ದರಿಂದ ನಾವು ನಿಮ್ಮ ಪಾಲಿಸಿಯನ್ನು ತಕ್ಷಣವೇ ನೀಡಬಹುದು.
ಮತ್ತು ಅಲ್ಲಿಗೆ ಎಲ್ಲವೂ ಸರಿಯಾಗಿ ಮುಗಿಯುತ್ತದೆ! ಇಲ್ಲಿಗೆ ನೀವು ನಿಮ್ಮ ಮನೆಯನ್ನು ಸೆಕ್ಯೂರ್ಡ್ ಮಾಡಿದ್ದೀರಿ.
ಹೋಮ್ ಇನ್ಶೂರೆನ್ಸಿನ ವಿಧಗಳು
ಆಯ್ಕೆ 1 |
ಆಯ್ಕೆ 2 |
ಆಯ್ಕೆ 3 |
ನಿಮ್ಮ ಮನೆಯೊಳಗಿನ ಕಂಟೆಂಟ್ಗಳನ್ನು (ಅಂದರೆ ವೈಯಕ್ತಿಕ ವಸ್ತುಗಳು) ಮಾತ್ರ ಕವರ್ ಮಾಡುತ್ತದೆ. |
ನಿಮ್ಮ ಮನೆಯ ಕಟ್ಟಡ ಮತ್ತು ಕಂಟೆಂಟ್ಗಳು ಎರಡನ್ನೂ ಕವರ್ ಮಾಡುತ್ತದೆ. |
ನಿಮ್ಮ ಮನೆಯ ಆಸ್ತಿ ಹಾಗೂ ನಿಮ್ಮ ಮನೆಯ ಕಂಟೆಂಟ್ಗಳು ಮತ್ತು ಆಭರಣಗಳನ್ನು ಕವರ್ ಮಾಡುತ್ತದೆ. |
ಹೋಮ್ ಇನ್ಶೂರೆನ್ಸ್ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು
ಕಟ್ಟಡ/ರಚನೆ : ಹೋಮ್ ಇನ್ಶೂರೆನ್ಸ್ನಲ್ಲಿ, ಕಟ್ಟಡವು ನಿಮ್ಮ ಮನೆಯ ಫಿಸಿಕಲ್ ಅಂಶವನ್ನು ಸೂಚಿಸುತ್ತದೆ.
- ವಿಷಯ : ವಿಷಯ ಎನ್ನುವುದು ನಿಮ್ಮ ಮನೆಯಲ್ಲಿರುವ ವೈಯಕ್ತಿಕ ವಸ್ತುಗಳನ್ನು ಸೂಚಿಸುತ್ತದೆ. ಆದ್ದರಿಂದ, ಮನೆಯ ಪೀಠೋಪಕರಣಗಳಂತಹ ವಿಷಯಗಳು, ನಿಮ್ಮ ಹೋಮ್ ಇನ್ಶೂರೆನ್ಸ್ನಲ್ಲಿ ಕವರ್ ಆಗುತ್ತದೆ
ಕ್ಲೈಮ್ ಫೈಲ್ ಮಾಡುವುದು ಹೇಗೆ
ಡಿಜಿಟ್ನೊಂದಿಗೆ ಕ್ಲೈಮ್ ಫೈಲ್ ಮಾಡುವುದು ಒಂದು ತ್ವರಿತ, ಸರಳ ಮತ್ತು ತೊಂದರೆ-ಮುಕ್ತ ಪ್ರಕ್ರಿಯೆಯಾಗಿದೆ. ನಮ್ಮೊಂದಿಗೆ ಕ್ಲೈಮ್ ಫೈಲ್ ಮಾಡಲು ನೀವು ಏನು ಮಾಡಬಹುದು ಎಂಬುದನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ:
ಹಂತ 1
1800-258-5956 ನಲ್ಲಿ ನಮಗೆ ಕರೆ ಮಾಡಿ.ಕ್ಲೈಮ್ ಫೈಲ್ ಮಾಡಲು ಮತ್ತು ಅಗತ್ಯವಿರುವ ನಷ್ಟ ಅಥವಾ ಡ್ಯಾಮೇಜನ್ನು ತನಿಖೆ ಮಾಡಲು ನಾವು ನಿಮಗೆ ಸಹಾಯ ಮಾಡುತ್ತೇವೆ.
ಹಂತ 2
ಕಳುಹಿಸಿದ ಲಿಂಕ್ನಲ್ಲಿ ಅಗತ್ಯವಿರುವ ಡಾಕ್ಯುಮೆಂಟುಗಳನ್ನು ನಿಮ್ಮ ಬ್ಯಾಂಕ್ ಖಾತೆ ವಿವರಗಳಿಗೆ ಅಪ್ಲೋಡ್ ಮಾಡಿ.
ಹಂತ 3
ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ!
ಹೋಮ್ ಇನ್ಶೂರೆನ್ಸ್ನೊಂದಿಗೆ ನಿಮ್ಮ ಮನೆಯನ್ನು ರಕ್ಷಿಸಿಕೊಳ್ಳುವ ಪ್ರಯೋಜನಗಳು
ಹೋಮ್ ಇನ್ಶೂರೆನ್ಸ್ ಅನ್ನು ಯಾರು ಪಡೆಯಬೇಕು?
ಕವರ್ ಆಗುವ ಮನೆಗಳ ವಿಧಗಳು
ಸ್ವತಂತ್ರ ಒಡೆತನದ ಮನೆಗಳಿಂದ ಹಿಡಿದು ಬಾಡಿಗೆ ಅಪಾರ್ಟ್ಮೆಂಟ್ಗಳವರೆಗೆ; ಡಿಜಿಟ್ನಿಂದ ಹೋಮ್ ಇನ್ಶೂರೆನ್ಸ್ ಅನ್ನು ಎಲ್ಲಾ ರೀತಿಯ ಮನೆಗಳಿಗೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದೆ.
ನೀವು ಹೋಮ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು: ದಿಲೀಪ್ ಬಾಬಾ ನೀರೊಂತಿಯಿಲ್ ಅವರೊಂದಿಗೆ ಸಂವಾದದಲ್ಲಿ, ಹೆಡ್-ಅಂಡರ್ ರೈಟಿಂಗ್, ಡಿಜಿಟ್ ಇನ್ಶೂರೆನ್ಸ್

ಡಿಜಿಟ್ ಅನ್ನು ಏಕೆ ಆಯ್ಕೆ ಮಾಡಬೇಕು?
ಸುದ್ದಿಯಲ್ಲಿ ಡಿಜಿಟ್ ಹೋಮ್ ಇನ್ಶೂರೆನ್ಸ್
ಹೋಮ್ ಇನ್ಶೂರೆನ್ಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಎಲ್ಲವೂ
ಎಕ್ಸ್ಪರ್ಟ್ ವಿವೇಕ್ ಚತುರ್ವೇದಿ ಅವರಿಂದ ಹೋಮ್ ಇನ್ಶೂರೆನ್ಸ್ ಬಗ್ಗೆ ಎಲ್ಲವನ್ನೂ ತಿಳಿಯಲು ಈ ಸಂವಾದವನ್ನು ಪರಿಶೀಲಿಸಿ.

ಹೋಮ್ ಇನ್ಶೂರೆನ್ಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳು
ಹೋಮ್ ಇನ್ಶೂರೆನ್ಸ್ ಏಕೆ ಮುಖ್ಯ?
ನಿಮ್ಮ ಮನೆ ನಿಮ್ಮ ಜೀವನಕ್ಕೆ ಅತ್ಯಗತ್ಯ ಮಾತ್ರ ಆಗಿರದೇ ನಿಮ್ಮ ಜೀವನದ ದೊಡ್ಡ ಇನ್ವೆಸ್ಟ್ಮೆಂಟ್ಗಳಲ್ಲಿ ಒಂದಾಗಿದೆ. ಆದ್ದರಿಂದ, ನೀವು ಮಾಡಬಹುದಾದ ಸಣ್ಣ ಕೆಲಸವೇನೆಂದರೆ ನಿಮ್ಮ ಮನೆಯನ್ನು ಹೋಮ್ ಇನ್ಶೂರೆನ್ಸ್ನ ಮೂಲಕ ಸೆಕ್ಯೂರ್ ಮಾಡಿಕೊಳ್ಳುವುದು.
ಹೋಮ್ ಇನ್ಶೂರೆನ್ಸ್ ಪ್ಲ್ಯಾನ್ ಕಳ್ಳತನ, ಬೆಂಕಿ, ಪ್ರವಾಹ, ಚಂಡಮಾರುತಗಳು, ಭೂಕಂಪಗಳು ಮುಂತಾದ ಘಟನೆಗಳ ಸಮಯದಲ್ಲಿ ನಿಮ್ಮ ಮನೆಗೆ ಸಂಭವಿಸಬಹುದಾದ ಅನಿಶ್ಚಿತ ಮತ್ತು ಅನಿರೀಕ್ಷಿತ ನಷ್ಟಗಳು ಮತ್ತು ಡ್ಯಾಮೇಜುಗಳನ್ನು ಮ್ಯಾನೇಜ್ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ಹಣಕಾಸಿನ ನಷ್ಟವನ್ನು ಯಾವುದೇ ಸಮಯದಲ್ಲಿ ಮರುಪಡೆಯಲು ಸಹಾಯ ಮಾಡುತ್ತದೆ!
ನಾನು ಹೋಮ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆನ್ಲೈನ್ನಲ್ಲಿ ಏಕೆ ಖರೀದಿಸಬೇಕು?
ಆನ್ಲೈನ್ನಲ್ಲಿ ಏನನ್ನಾದರೂ ಖರೀದಿಸುವುದು ಎಂದರೆ ಅದು ನಿಸ್ಸಂದೇಹವಾಗಿ ಅನುಕೂಲಕರ ಮತ್ತು ವೇಗವಾಗಿರುತ್ತದೆ. ಹೋಮ್ ಇನ್ಶೂರೆನ್ಸ್ನಂತಹ ಮುಖ್ಯವಾದ ನಿರ್ಧಾರಗಳಿಗಾಗಿ, ಸಾಧ್ಯವಾದಷ್ಟು ಉತ್ತಮ ಆಯ್ಕೆಯನ್ನು ನಿರ್ಧರಿಸಲು, ಸಮಯ ಮತ್ತು ಮನಃಶಾಂತಿಯನ್ನು ಹೊಂದುವುದು ಯಾವಾಗಲೂ ಉತ್ತಮ. ಆನ್ಲೈನ್ನಲ್ಲಿ ಹೋಮ್ ಇನ್ಶೂರೆನ್ಸ್ ಅನ್ನು ಖರೀದಿಸಲು ಸರಿಯಾದ ನಿರ್ಧಾರವನ್ನು ಕೈಗೊಳ್ಳಲು, ಮಾರ್ಕೆಟ್ನಲ್ಲಿ ಲಭ್ಯವಿರುವ ವಿವಿಧ ಪ್ಲ್ಯಾನ್ಗಳನ್ನು ಮೌಲ್ಯಮಾಪನ ಮಾಡಲು ಮತ್ತು ಹೋಲಿಸಲು ನಿಮಗೆ ಸಮಯವನ್ನು ನೀಡುತ್ತದೆ. ಅದರೊಂದಿಗೆ, ಯಾವುದೇ ತೊಂದರೆಗಳಿಲ್ಲದೆ ಮತ್ತು ಅರ್ಥವಿಲ್ಲದ ಪೇಪರ್ವರ್ಕ್ಗಳಿಲ್ಲದೆ ನೀವು ನಿಮ್ಮ ಪ್ಲ್ಯಾನ್ ಅನ್ನು ಕಸ್ಟಮೈಸ್ ಮಾಡಬಹುದು ಮತ್ತು ಆನ್ಲೈನ್ನಲ್ಲಿ ಡಾಕ್ಯುಮೆಂಟೇಶನ್ ಅನ್ನು ಮ್ಯಾನೇಜ್ ಮಾಡಬಹುದು!
ನಿಮ್ಮ ಹೋಮ್ ಇನ್ಶೂರೆನ್ಸ್ ಪ್ರೀಮಿಯಂನ ಮೇಲೆ ಪರಿಣಾಮ ಬೀರುವ ಅಂಶಗಳು
ನಿಮ್ಮ ಹೋಮ್ ಇನ್ಶೂರೆನ್ಸ್ ಪ್ರೀಮಿಯಂನ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವ 7 ಅಂಶಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ:
ಮನೆಯ ಪ್ರಕಾರ - ನೀವು ನಿಮ್ಮ ಓನ್ ಪ್ರಾಪರ್ಟಿಯನ್ನು ಹೊಂದಿದ್ದರೆ, ಸ್ಥಳವನ್ನು ಬಾಡಿಗೆಗೆ ನೀಡುತ್ತಿದ್ದರೆ ಅಥವಾ ಅದು ಅಪಾರ್ಟ್ಮೆಂಟ್ ಅಥವಾ ಸ್ವತಂತ್ರ ಬಂಗಲೆಯಾಗಿದ್ದರೆ ಅಥವಾ ಫರ್ನಿಷಿಂಗ್ ವಿಧವು ನಿಮ್ಮ ಪ್ರೀಮಿಯಂ ದರದ ಮೇಲೆ ಪರಿಣಾಮ ಬೀರಿದರೆ, ಆಗ ನಿಮ್ಮ ಪ್ರೀಮಿಯಂ ಮೊತ್ತವು ಭಿನ್ನವಾಗಿರುತ್ತದೆ.
ಬಿಲ್ಡಿಂಗ್ನ ಲೊಕೇಶನ್ - ನಿಮ್ಮ ಮನೆಯು ಪ್ರವಾಹ, ಬೆಂಕಿಯಂತಹ ವಿಪತ್ತುಗಳಿಗೆ ಒಳಗಾಗುವ ವಲಯಗಳಲ್ಲಿದ್ದರೆ ಅಥವಾ ಅಪರಾಧ ಮತ್ತು ಕಳ್ಳತನಗಳು ಸಾಮಾನ್ಯವಾಗಿರುವ ಅಸುರಕ್ಷಿತ ಪ್ರದೇಶಗಳಲ್ಲಿ ಇದ್ದರೂ ಸಹ, ಅದು ನೀವು ಪಾವತಿಸಬೇಕಾದ ಪ್ರೀಮಿಯಂ ಮೊತ್ತದ ಮೇಲೆ ಪರಿಣಾಮ ಬೀರಬಹುದು. ಸುರಕ್ಷಿತ ಸಮಾಜದಲ್ಲಿರುವ ಮನೆಗಳು ಮಿತವ್ಯಯ ಪ್ರೀಮಿಯಂ ಮೊತ್ತವನ್ನು ಹೊಂದಿರುತ್ತವೆ.
ಮನೆಯ ವಯಸ್ಸು - ಯಾವುದೇ ಇತರ ಇನ್ಶೂರೆನ್ಸ್ ಪಾಲಿಸಿಯಂತೆ, ಪ್ರೀಮಿಯಂ ಬೆಲೆಗಳನ್ನು ನಿರ್ಧರಿಸುವಲ್ಲಿ ವಯಸ್ಸು ಪ್ರಮುಖ ಅಂಶವಾಗಿದೆ.
ಮನೆಯ ಸೈಜ್ - ನಿಮ್ಮ ಮನೆಯ ಚದರ ಅಡಿ ವಿಸ್ತೀರ್ಣವು ನಿಮ್ಮ ಹೋಮ್ ಇನ್ಶೂರೆನ್ಸ್ ಪ್ರೀಮಿಯಂನ ಮೇಲೆ ಹೆಚ್ಚಿನ ಮತ್ತು ನೇರ ಪರಿಣಾಮವನ್ನು ಬೀರುತ್ತದೆ.
ನಿಮ್ಮ ವಸ್ತುಗಳ ಮೌಲ್ಯ - ನಿಮ್ಮ ಮನೆಯಲ್ಲಿರುವ ನಿಮ್ಮ ವಸ್ತುಗಳ ಮೌಲ್ಯವು ನೀವು ಪಾವತಿಸಬೇಕಾದ ಪ್ರೀಮಿಯಂ ಮೊತ್ತದ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, ನೀವು ದುಬಾರಿ ಆಭರಣಗಳು, ಕಲಾಕೃತಿಗಳು, ದುಬಾರಿ ಗ್ಯಾಜೆಟ್ಗಳು ಇತ್ಯಾದಿಗಳನ್ನು ಹೊಂದಿದ್ದರೆ ಈ ವಸ್ತುಗಳಿಗೆ ಇನ್ಶೂರೆನ್ಸ್ ಖರೀದಿಸುವುದು ತುಂಬಾ ಮುಖ್ಯವಾಗುತ್ತದೆ. ಇದು ನಿಮ್ಮ ಪ್ರೀಮಿಯಂ ಮೊತ್ತದಲ್ಲೂ ನೇರವಾಗಿ ಕಾಣಿಸಿಕೊಳ್ಳುತ್ತದೆ.
ಮನೆಯ ಸುರಕ್ಷತಾ ಕ್ರಮಗಳು - ನಾವೆಲ್ಲರೂ ನಮ್ಮ ಮನೆಗಳನ್ನು ಸುರಕ್ಷತೆವಾಗಿಡುವ ಅಭ್ಯಾಸವನ್ನು ಹೊಂದಿದ್ದೇವೆ. ಆದ್ದರಿಂದ, ನಾವು ಮುಂದುವರಿಯುತ್ತೇವೆ ಮತ್ತು ನಮ್ಮ ಮನೆಗಳ ಸುರಕ್ಷತೆಗಾಗಿ ಸೆಕ್ಯೂರಿಟಿ ಸಿಸ್ಟಮ್ ಅನ್ನು ಸೇರಿಸುವಂತಹ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಇದು ನಿಮ್ಮ ಪ್ರೀಮಿಯಂನ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರಿ, ಅದನ್ನು ಕಡಿಮೆ ಮಾಡುತ್ತದೆ.
ಹೆಚ್ಚುವರಿ ಕವರೇಜ್ಗಳು - ಕೆಲವು ಹೋಮ್ ಇನ್ಶೂರೆನ್ಸ್ಗಳು, ಸ್ಟ್ಯಾಂಡರ್ಡ್ ಪ್ಲ್ಯಾನ್ ಅನ್ನು ಮೀರಿದ ವಿಷಯಗಳನ್ನು ಕವರ್ ಮಾಡಲು ಹೆಚ್ಚುವರಿ ಕವರ್ಗಳನ್ನು ನೀಡುತ್ತವೆ. ಇದು ವ್ಯಕ್ತಿಯೊಬ್ಬರ ಪ್ರೀಮಿಯಂನ ಮೇಲೆ ಪರಿಣಾಮ ಬೀರುತ್ತದೆ.
ನಿಮ್ಮ ಹೋಮ್ ಇನ್ಶೂರೆನ್ಸ್ಗೆ ಎಷ್ಟು ವೆಚ್ಚವಾಗುತ್ತದೆ ಎಂಬುದನ್ನು ತಿಳಿಯಲು, ನಿಮ್ಮ ಪ್ರೀಮಿಯಂ ಮೊತ್ತವನ್ನು ಚೆಕ್ ಮಾಡಲು ನಮ್ಮ ಹೋಮ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ನೀವು ಬಳಸಬಹುದು.
ಹೋಮ್ ಇನ್ಶೂರೆನ್ಸ್ ಪ್ಲ್ಯಾನ್ಗಳನ್ನು ಕಂಪೇರ್ ಮಾಡಲು ಸಲಹೆಗಳು
ನೀವು ಹೋಮ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ನಿರ್ಧಾರ ಮಾಡುವಾಗ, ನಿಮ್ಮ ಮನೆಗೆ ಸರಿಯಾದ ಪ್ಲ್ಯಾನ್ ಅನ್ನು ಆಯ್ಕೆ ಮಾಡಲು ನೀವು ಗಮನಿಸಬೇಕಾದ ಕೆಲವು ಪ್ರಮುಖ ಅಂಶಗಳು ಹೀಗಿವೆ:
ಕವರೇಜ್ ಪ್ರಯೋಜನಗಳು - ನಿಮ್ಮ ಹೋಮ್ ಇನ್ಶೂರೆನ್ಸ್ನ ಪ್ರಮುಖ ಭಾಗವೆಂದರೆ ನೀವು ಪಡೆಯುತ್ತಿರುವ ಕವರೇಜ್. ದುರದೃಷ್ಟಕರ ಘಟನೆಯ ಸಂದರ್ಭದಲ್ಲಿ ನೀವು ಏನನ್ನು ಕವರ್ ಮಾಡುತ್ತೀರಿ ಎಂಬುದನ್ನು ತಿಳಿದುಕೊಳ್ಳಬೇಕು. ಆದ್ದರಿಂದ, ಯಾವಾಗಲೂ ನಿಮಗೆ ಅತ್ಯಮೂಲ್ಯ ಪ್ಲ್ಯಾನ್ ಅನ್ನು ಸರಿಯಾಗಿ ಪರಿಶೀಲಿಸಲು ಸಹಾಯ ಮಾಡುವ ಯಾವುದನ್ನು ಒಳಗೊಂಡಿದೆ ಮತ್ತು ಯಾವುದನ್ನು ಒಳಗೊಂಡಿಲ್ಲ ಎಂಬುದನ್ನು ನೋಡಿ.
ಇನ್ಶೂರೆನ್ಸ್ ಮೊತ್ತ - ನಿಮ್ಮ ಹೋಮ್ ಇನ್ಶೂರೆನ್ಸ್ನಲ್ಲಿನ ನಿಮ್ಮ ಇನ್ಶೂರೆನ್ಸ್ ಮೊತ್ತವು, ನೀವು ಮಾಡುವ ಕ್ಲೈಮ್ನ ಸಂದರ್ಭದಲ್ಲಿ ನೀವು ಪಡೆಯಬಹುದಾದ ಒಟ್ಟು ಮೊತ್ತವನ್ನು ಸೂಚಿಸುತ್ತದೆ. ಆದ್ದರಿಂದ, ನೀವು ಪಾವತಿಸುವ ಮೊತ್ತದ ಬಗ್ಗೆ ಜಾಗರೂಕರಾಗಿರಿ. ಏಕೆಂದರೆ ಇದು ಕೇವಲ ನಿಮ್ಮ ಹೋಮ್ ಇನ್ಶೂರೆನ್ಸ್ ಪ್ರೀಮಿಯಂನ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲದೇ, ಹಾನಿಗಳು ಮತ್ತು ನಷ್ಟಗಳ ಸಂದರ್ಭದಲ್ಲಿ ನೀವು ಪಡೆಯುವ ಕ್ಲೈಮ್ ಮೊತ್ತದ ಮೇಲೂ ಪರಿಣಾಮ ಬೀರುತ್ತದೆ!
- ಆಡ್-ಆನ್ಗಳು ಲಭ್ಯವಿದೆ - ಕೆಲವೊಮ್ಮೆ, ನಿಮಗೆ ಕೇವಲ ಬೇಸಿಕ್ ಪ್ಲ್ಯಾನ್ನ ಪ್ರಯೋಜನಗಳನ್ನು ಮೀರಿದ ಕವರೇಜಿನ ಅಗತ್ಯವಿರುತ್ತದೆ. ಇಲ್ಲಿ ಆಡ್-ಆನ್ಗಳು ಬಳಕೆಗೆ ಬರುತ್ತವೆ. ವಿಭಿನ್ನ ಇನ್ಶೂರೆನ್ಸ್ ಪೂರೈಕೆದಾರರು, ಜನರಿಗೆ ಆಯ್ಕೆ ಮಾಡಿಕೊಳ್ಳಲು ವಿಭಿನ್ನ ಶ್ರೇಣಿಯ ಆಡ್-ಆನ್ಗಳನ್ನು ನೀಡುತ್ತಾರೆ. ಅಂತೆಯೇ, ನಾವು ಡಿಜಿಟ್ನಲ್ಲಿ ಹೋಮ್ ಇನ್ಶೂರೆನ್ಸ್ ಹೋಲ್ಡರ್ಗಾಗಿ ವಿಶಿಷ್ಟವಾದ ಆಭರಣ ರಕ್ಷಣೆಯ ಆಡ್-ಆನ್ ಅನ್ನು ನೀಡುತ್ತೇವೆ. ನಿಮಗಿರುವ ಆಯ್ಕೆಗಳನ್ನು ಹೋಲಿಕೆ ಮಾಡಿ ಮತ್ತು ನಿಮಗೆ ಯಾವುದು ಉತ್ತಮವೆನಿಸುತ್ತದೆ ಎನ್ನುವುದನ್ನು ನೀವೇ ನೋಡಿ!
ಸರಿಯಾದ ಸಮ್ ಇನ್ಶೂರ್ಡ್ ಅನ್ನು ಹೇಗೆ ಆಯ್ಕೆ ಮಾಡುವುದು?
ಇನ್ಶೂರೆನ್ಸ್ನಲ್ಲಿ, ಸಮ್ ಇನ್ಶೂರ್ಡ್, ನಷ್ಟದ ಸಂದರ್ಭದಲ್ಲಿ ನೀವು ಪಡೆಯುವ ಪರಿಹಾರದ ಗರಿಷ್ಠ ಮೌಲ್ಯವನ್ನು ಸೂಚಿಸುತ್ತದೆ. ಇದು ನಿಮ್ಮ ಇನ್ಶೂರ್ಡ್ ಮನೆಯ ಮೌಲ್ಯವನ್ನು ಸಹ ನಿರ್ಧರಿಸುತ್ತದೆ. ಆದ್ದರಿಂದ, ನೀವು ಆಯ್ಕೆ ಮಾಡಿದ ಸಮ್ ಇನ್ಶೂರ್ಡ್, ನಿಮ್ಮ ಮನೆಯ ನಿಜವಾದ ಮೌಲ್ಯವನ್ನು ತೋರಿಸುತ್ತದೆ ಎಂಬುದನ್ನು ನೀವು ಖಚಿತವಾಗಿ ತಿಳಿದಿರಬೇಕು. ಸರಿಯಾದ ಸಮ್ ಇನ್ಶೂರ್ಡ್ ಅನ್ನು ಆಯ್ಕೆ ಮಾಡಲು, ನಿಮ್ಮ ಒಟ್ಟು ಕಾರ್ಪೆಟ್ ಏರಿಯಾವನ್ನು ಸ್ಕ್ವೇರ್ ಮೀಟರ್ಗಳಲ್ಲಿ ಮತ್ತು ನಿಮ್ಮ ಮನೆಯಲ್ಲಿರುವ ವಸ್ತುಗಳ ಅಂದಾಜು ಮೌಲ್ಯವನ್ನು ನೀವು ಪರಿಗಣಿಸಬೇಕು.